ದಿನಾಂಕ :31/07/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 178/2020 ಕಲಂ. 279,337,304(A)  ಐ.ಪಿ.ಸಿ:-

          ದಿ: 31-07-2020 ರಂದು ಬೆಳಗ್ಗೆ 10:30 ಗಂಟೆಗೆ ಪಿರ್ಯಾಧಿದಾರರಾದ ನಂಜಪ್ಪ ಬಿನ್ ಲೇ ಗಂಗಪ್ಪ, 63 ವರ್ಷ, ನಾಯಕರು, ಕೂಲಿ ಕೆಲಸ, ಮಾರ್ಗಾನುಕುಂಟೆ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ನನ್ನ ಮಗನಾದ ಸೋಮು ಆಟೋ ಚಾಲಕ ವೃತ್ತಿಯಿಂದ ಜೀವನ ಮಾಡಿಕೊಂಡಿರುತ್ತಾನೆ.  ದಿ:31-07-2020 ರಂದು ಬೆಳಗ್ಗೆ ಸುಮಾರು 9:00 ಗಂಟೆಯ ಸಮಯದಲ್ಲಿ ನನಗೆ ನಮ್ಮ ಗ್ರಾಮದ ಸಾಲಪ್ಪ ಬಿನ್ ಲೇ ವೆಂಕರವಣಪ್ಪ ರವರು ನನಗೆ ಫೋನ್ ಮಾಡಿ ನಿಮ್ಮ ಮಗನ ಆಟೋಗೆ ಚಿನ್ನೇಪಲ್ಲಿ ಕ್ರಾಸ್ ಸಮೀಪ ಅಪಘಾತವಾಗಿ ಮೃತಪಟ್ಟಿರುವುದಾಗಿ ತಿಳಿಸಿದನು.  ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ KA-40-A-0412 ಆಟೋವನ್ನು ನನ್ನ ಮಗ ರಸ್ತೆ ಬದಿಯೆ ಮರಕ್ಕೆ ಡಿಕ್ಕಿ ಹೊಡೆಸಿದ್ದು, ನನ್ನ ಮಗನಿಗೆ ಮೂಗಿನಲ್ಲಿ ರಕ್ತ ಬಂದಿದ್ದು, ಕತ್ತಿನ ಹಿಂಭಾಗ ರಕ್ತಗಾಯವಾಗಿ ಎದೆಗೆ ಮತ್ತು ಬಾಯಿಗೆ ಗಾಯಗಳಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದನು.  ಆಟೋದಲ್ಲಿದ್ದ ಅಕ್ಕುಲಪ್ಪ ಬಿನ್ ರಾಮಪ್ಪ, 73 ವರ್ಷ, ಗೊಲ್ಲರು, ಜಿರಾಯ್ತಿ, ಹಂಪಸಂದ್ರ ಗ್ರಾಮ, ಗುಡಿಬಂಡೆ ತಾಲ್ಲೂಕು ರವರಿಗೆ ಎಡಗಾಲಿಗೆ ಬಲಗಾಲಿಗೆ ರಕ್ತಗಾಯಗಳಾಗಿದ್ದು, ಬಲಕೈಗೆ ಮತ್ತು ಎರಡು ಭುಜಗಳಿಗೆ ಪೆಟ್ಟಾಗಿರುತ್ತೆ.  ಸಾಲೆಪ್ಪರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಸಾಲೆಪ್ಪ ರವರನ್ನು ವಿಚಾರ ಮಾಡಲಾಗಿ ಬಾಗೇಪಲ್ಲಿಯಿಂದ ಮಾರ್ಗಾನುಕುಂಟೆಗೆ KA-40-A-0412 ಆಟೋದಲ್ಲಿ ಹೋಗುತ್ತಿದ್ದಾಗ, ಆಟೋವನ್ನು ಚಾಲನೆ ಮಾಡುತ್ತಿದ್ದ ಸೋಮು ಬೆಳಗ್ಗೆ ಸುಮಾರು 9:00 ಗಂಟೆಯಲ್ಲಿ ಗೂಳೂರು ರಸ್ತೆಯ ಚಿನ್ನೇಪಲ್ಲಿ ಕ್ರಾಸ್ ಸಮೀಪ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಬದಿಯ ಮರಕ್ಕೆ ಆಟೋವನ್ನು ಡಿಕ್ಕಿ ಹೊಡೆಸಿ ಅಪಘಾತವನ್ನು ಉಂಟು ಮಾಡಿದ ಪರಿಣಾಮ, ಸೋಮು ಮೃತಪಟ್ಟಿರುವುದಾಗಿ ತಿಳಿಸಿದನು.   ಹೆಣವನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿರುತ್ತೇವೆ. ದಿ: 31-07-2020 ರಂದು ನನ್ನ ಮಗ ಸೋಮು KA-40-A-0412 ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಅಪಘಾತವನ್ನು ಉಂಟು ಮಾಡಿದ ಪರಿಣಾಮ ನನ್ನ ಮಗ ಸೋಮು ಮೃತಪಟ್ಟಿರುತ್ತಾನೆ.  ಇದರಲ್ಲಿ ಯಾವುದೇ ಅನುಮಾನವಿರುವುದಿಲ್ಲ, ತಾವುಗಳು ಮುಂದಿನ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ. ಎಂದು ನೀಡಿದ ದೂರು.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 106/2020 ಕಲಂ. 269,271  ಐ.ಪಿ.ಸಿ:-

          ದಿನಾಂಕ 31/07/2020 ರಂದು ಬೆಳಿಗ್ಗೆ 11.30 ಗಂಟೆಗೆ ಪಿ ಎಸ್ ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 31/07/2020 ರಂದು ಬೆಳಿಗ್ಗೆ 11 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಂದ ಮಾಹಿತಿಯಂತೆ ಚೀಡಚಿಕ್ಕನಹಳ್ಳಿ ಗ್ರಾಮದ ವಾಸಿ ಹಾಲಿ ಡಿವೈನ್ ಸಿಟಿಯಲ್ಲಿ ವಾಸವಾಗಿರುವ ಶ್ರೀನಿವಾಸಪ್ಪ ಬಿನ್ ಸುಬ್ಬರಾಯಪ್ಪ, 43 ವರ್ಷ, ಆದಿ ದ್ರಾವಿಡ ಜನಾಂಗ ಜಿರಾಯ್ತಿ ಮತ್ತು ವ್ಯಾಪಾರ ರವರು ದಿನಾಂಕ 23/07/2020 ರಂದು ದೆಹಲಿಗೆ ಹೋಗಿದ್ದು ದಿನಾಂಕ 24/07/2020 ರಂದು ವಾಪಸ್ಸು ಬರುವಾಗ ಬೆಂಗಳೂರಿನ ಏರ್ ಪೋರ್ಟನಲ್ಲಿ ಶ್ರೀನಿವಾಸಪ್ಪ ರವರಿಗೆ ದಿನಾಂಕ 07/08/2020 ರವರೆಗೆ 14 ದಿನಗಳ ಕಾಲ (ಹೋಮ್ ಕ್ವಾರೆಂಟೈನ್) ಮನೆಯಲ್ಲಿ ಇರಲು ಸೂಚನೆಗಳನ್ನು ನೀಡಿ ಹೋಂ ಕ್ವಾರಂಟೈನ್ ಬಗ್ಗೆ ಕೈ ಮೇಲೆ ಸೀಲು ಮಾಡಿ ಕಳುಹಿಸಿರುತ್ತಾರೆ ಆದರೆ ಶ್ರೀನಿವಾಸಪ್ಪ ರವರು ದಿನಾಂಕ 27/07/2020 ರಂದು ವಿಜಯಪುರ ಮತ್ತು ಇತರೆ ಕಡೆಗಳಲ್ಲಿ ಓಡಾಡಿರುತ್ತಾರೆ, ಸದರಿಯವರ ಮೊಬೈಲ್ ಸಂಖ್ಯೆ 9901647280 ಎಂಬುದಾಗಿ ತಿಳಿದು ಬಂದಿರುತ್ತದೆ ಶ್ರೀನಿವಾಸಪ್ಪರವರು ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್ 19 ಸಾಂಕ್ರಾಮಿಕ ರೋಗ ಸೋಂಕು ಹರಡುವ ಸಂಭವವಿದೆ ಎಂದು ತಿಳಿದೂ ಸಹಾ ಉದ್ದೇಶ ಪೂರ್ವಕವಾಗಿ ಸಾರ್ವಜನಿಕರಿಗೆ ಭಯವನ್ನುಂಟು ಮಾಡುವ ರೀತಿ ಕಾರಣನಾಗಿ ಮತ್ತು (ಹೋಮ್ ಕ್ವಾರೆಂಟೈನ್) ಸರ್ಕಾರದ ಆದೇಶವನ್ನು ಉಲ್ಲಂಘಿಸಿರುತ್ತಾರೆಂದು ತಿಳಿದು ಬಂದಿರುತ್ತೆ, ಸದರಿ ವ್ಯಕ್ತಿಯ ವಿರುದ್ದ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲು ಸೂಚಿಸಿದ  ಮೇರೆಗೆ ಈ ಪ್ರ ವ ವರದಿ.

  1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 30/2020 ಕಲಂ. 279  ಐ.ಪಿ.ಸಿ:-

          ದಿನಾಂಕ: 31-07-2020 ರಂದು  ಈ ಕೇಸಿನ ಪಿರ್ಯಾಧಿಯಾದ ಶ್ರೀ ಪ್ರಕಾಶ್ ರೆಡ್ಡಿ ಎಎಸ್ಐ ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶದಂತೆ ದಿನಾಂಕ:30-07-2020 ರಂದು ರಾತ್ರಿ ರಾಷ್ಟ್ರೀಯಾ ಹೆದ್ದಾರಿ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ಗಸ್ತು ಮಾಡುತ್ತಿದ್ದಾಗ  ರಾತ್ರಿ 9-30 ಗಂಟೆಯಲ್ಲಿ ನಿಶ್ತಂತು ಕೊಠಡಿಯಿಂದ ಬಂದ ಮಾಹಿತಿಯಂತೆ  ಬೆಂಗಳೂರು- ಹೈದ್ರಾಬಾದ್ ಕಡೆ ಹೋಗುವ ಎನ್ ಹೆಚ್-7 ಹೆದ್ದಾರಿಯ ಅಗಲಗುರ್ಕಿ ಗ್ರಾಮದ ಬಳಿ  ಯುಜಿಡಿ ಸ್ಟೋರೇಜ್ ಬಳಿ  ಗ್ಯಾಸ್ ಟ್ಯಾಂಕರ್  ಅಪಘಾತವಾಗಿರುವುದಾಗಿ  ತಿಳಿದು ಬಂದಿದ್ದು ಅದರಂತೆ ಸ್ಥಳಕ್ಕೆ ಬೇಟಿಮಾಡಿ ಪರಿಶೀಲಿಸಲಾಗಿ  ನಂ: AP-31-TH-7592. ಭಾರತ್ ಗ್ಯಾಸ್ ಟ್ಯಾಂಕರ್ ವಾಹನ ರಸ್ತೆಯ ಎಡಬಾಗದ ಹಳ್ಳಕ್ಕೆ ಬಿದ್ದಿದ್ದು  ಈ ಅಪಘಾತಕ್ಕೆ  ಸದರಿ ಲಾರಿಯ ಚಾಲಕ  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ವಾಹನವನ್ನು ಹಳ್ಳಕ್ಕೆ ಬೀಳಿಸಿರುವುದು ಕಾರಣವಾಗಿದ್ದು ಸದರಿ  ಚಾಲಕನ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ  ಮನೋಜ್ ಕುಮಾರ್ ಯಾದವ್ ಬಿನ್ ಕೃಷ್ಣಯ್ಯ  ಯಾದವ್ , 50 ವರ್ಷ,  ಯಾದವ ಜನಾಂಗ, ಚಾಲಕ ವೃತ್ತಿ , ಪಂಡಿತಟೂರ್ ಗ್ರಾಮ ಚಪರ ಜಿಲ್ಲೆ ಬಿಹಾರ ರಾಜ್ಯ  ಎಂದು ತಿಳಿದು ಬಂದಿರುತ್ತದೆ ಅದ್ದರಿಂದ ಸದರಿ  ಅರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿರುವ ದೂರಾಗಿರುತ್ತದೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 283/2020 ಕಲಂ. 143,147,148,323,324,504,506 ರೆ/ವಿ 149  ಐ.ಪಿ.ಸಿ:-

          ದಿನಾಂಕ: 30/07/2020 ರಂದು ಸಂಜೆ 6.45 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ದೇವರಾಜ ಬಿನ್ ನಾರಾಯಣಪ್ಪ, 45 ವರ್ಷ, ಗೊಲ್ಲರು, ಜಿರಾಯ್ತಿ, ನೆರ್ನಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 8.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ: 30/07/2020 ರಂದು ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ತಾನು ತೋಟದಿಂದ ಮನೆಗೆ ಬಂದಾಗ ಗ್ರಾಮದ ಚಿಕ್ಕ ಮುನಿಯಪ್ಪ ರವರ ಮನೆಯ ಮುಂದೆ ತನ್ನ ಹೆಂಡತಿ ಸುನಂದಮ್ಮ ರವರ ಮೇಲೆ ತಮ್ಮ ಗ್ರಾಮದ ಚಂದ್ರಶೇಖರ್, ಬ್ಯಾಲಹಳ್ಳಿ ಗ್ರಾಮದ ಶ್ರೀನಿವಾಸ್, ದಿವಾಕರ್, ಮೋಹನ್ ಬಾಬು, ಮನೋಜ್, ಜಯಂತ್, ಸುಶೀಲಮ್ಮ, ಮಾದೇವಿ ಮತ್ತು ಕೃಷ್ಣಪ್ಪ ರವರು ಅಕ್ರಮ ಗುಂಪು ಕಟ್ಟಿಕೊಂಡು ತನ್ನ ಹೆಂಡತಿಯ ಮೇಲೆ ಗಲಾಟೆ ಮಾಡುತ್ತಿದ್ದು, ತಾನು ಸ್ಥಳಕ್ಕೆ ಹೋಗಿ ಏಕೆ ನನ್ನ ಹೆಂಡತಿಯ ಮೇಲೆ ಗಲಾಟೆ ಮಾಡುತ್ತಿರುವುದು ಎಂದು ಕೇಳಿದ್ದಕ್ಕೆ ಚಂದ್ರಶೇಖರ್ ರವರು ತನ್ನ ಕೈಯಲ್ಲಿದ್ದ ಇಟ್ಟಿಗೆಯಿಂದ ತನ್ನ ತಲೆಗೆ ಹೊಡೆದು ರಕ್ತ ಗಾಯವನ್ನುಂಟು ಮಾಡಿರುತ್ತಾನೆ. ಆಗ ಗಲಾಟೆ ಬಿಡಿಸಲು ಬಂದ ಅನಿಲ್ ಕುಮಾರ್ ರವರಿಗೆ ಮೋಹನ್ ಬಾಬು ದೊಣ್ಣೆಯಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಉಳಿದವರು ತನ್ನ ಹೆಂಡತಿ ಸುನಂದಮ್ಮ, ಶಿವರಾಜಮ್ಮ, ರಾಮಾಂಜಿನಪ್ಪ ರವರನ್ನು ಕೈಗಳಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ನಂತರ ಸದರಿಯವರು ಸ್ಥಳದಿಂದ ಹೋಗುವಾಗ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸಿ ಬಿಡುವುದಾಗಿ ಪ್ರಾಣಬೆದರಿಕೆಯನ್ನು ಹಾಕಿ, ತಮ್ಮ ಮೈ ಮೇಲೆ ಕಾರದ ಪುಡಿಯನ್ನು ಎರಚಿ, ಕೆಟ್ಟ ಮಾತುಗಳಿಂದ ಬೈದಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 284/2020 ಕಲಂ. 143,147,148,323,324,504,506 ರೆ/ವಿ 149  ಐ.ಪಿ.ಸಿ:-

          ದಿನಾಂಕ: 30/07/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಕೃಷ್ಣಪ್ಪ ಬಿನ್ ವೆಂಕಟರಾಯಪ್ಪ, 52 ವರ್ಷ, ಗೊಲ್ಲರು, ಜಿರಾಯ್ತಿ, ನೆರ್ನಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 8.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ: 30/07/2020 ರಂದು ಮದ್ಯಾಹ್ನ 2.00 ಗಂಟೆ ಸಮಯದಲ್ಲಿ ತಮಗೂ ಹಾಗೂ ತಮ್ಮ ಗ್ರಾಮದ ದೊಡ್ಡನಾರಾಯಣಸ್ವಾಮಿ ರವರಿಗೂ ತಕರಾರಿರುವ ಜಮೀನನ್ನು ದೊಡ್ಡ ನಾರಾಯಣಸ್ವಾಮಿ ರವರು ಟ್ರ್ಯಾಕ್ಟರ್ ನಲ್ಲಿ ಉಳುಮೆ ಮಾಡುತ್ತಿದ್ದು, ತಾನು ಮತ್ತು ತನ್ನ ಅಣ್ಣನ ಹೆಂಡತಿ ಸುಶೀಲಮ್ಮ ರವರು ಜಮೀನಿನ ಬಳಿ ಹೋಗಿ ದೊಡ್ಡ ನಾರಾಯಣಸ್ವಾಮಿ ರವರನ್ನು ಕುರಿತು ತಕರಾರಿರುವ ಜಮೀನನ್ನು ಏಕೆ ಉಳುಮೆ ಮಾಡುತ್ತಿರುವುದು ಎಂದು ಕೇಳಿದ್ದಕ್ಕೆ ದೊಡ್ಡ ನಾರಾಯಣಸ್ವಾಮಿ, ಅನಿಲ್ ಕುಮಾರ್, ಸುಗುಣ, ಶಿವರಾಜಮ್ಮ, ರಾಮಾಂಜಿನಪ್ಪ ಮತ್ತು ಗಗನ ರವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಆ ಪೈಕಿ ಅನಿಲ್ ಕುಮಾರ್ ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ದೊಡ್ಡ ನಾರಾಯಣಸ್ವಾಮಿ ರವರು ಕಾರದ ಪುಡಿಯನ್ನು ಎರಚಿರುತ್ತಾರೆ. ಉಳಿದವರು ಸುಶೀಲಮ್ಮ ರವರನ್ನು ಕೈಗಳಿಂದ ಮೈ ಮೇಲೆ ಹೊಡೆದು ಮೈ ಕೈ ನೋವನ್ನುಂಟು ಮಾಡಿ, ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ನಂತರ ಮೇಲ್ಕಂಡವರು ಸ್ಥಳದಿಂದ ಹೋಗುವಾಗ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಮುಗಿಸಿ ಬಿಡುವುದಾಗಿ ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 103/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 30/07/2020 ರಂದು ಸಂಜೆ 4:30 ಗಂಟೆಯಲ್ಲಿ ನ್ಯಾಯಾಲಯದ ಪಿ.ಸಿ ಹಾಜರುಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ 27/7/2020 ರಂದು ಮದ್ಯಾಹ್ನ 2:00 ಗಂಟೆಗೆ ಹೆಚ್.ಸಿ 214 ಲೋಕೇಶ್ ರವರು ತಾನು ಕರ್ತವ್ಯದಲ್ಲಿರುವಾಗ ಗುಂಡಾಪುರದ ಸರ್ಕಾರಿ ಶಾಲೆಯ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಇಸ್ಪೀಟ್ ಜೂಜಾಟದವಾಡುತ್ತಿದ್ದವರನ್ನು ಸುತ್ತುವರೆದು ಯಾರು ಓಡಿ ಹೋಗದಂತೆ ಸೂಚನೆಗಳನ್ನು ನೀಡಿ ಅವರನ್ನು ಹಿಡಿಯಲು ಹೋದಾಗ ಅಲ್ಲಿಂದ ಕೆಲವರು ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಓಡಿಹೋಗಿದ್ದು ಕೆಲವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ವಜೀರ್ ಬಿನ್ ಹಯಾತ್ ಸಾಬ್, 2)ಅಶ್ವತ್ಥ್ ಬಿನ್ ದೊಡ್ಡಪ್ಪ, 3)ಮನೋಹರ್ ಬಿನ್ ನರಸಿಂಹಮೂರ್ತಿ, ಎಂದು ತಿಳಿಸಿದ್ದು ಸಿಬ್ಬಂದಿಯಿಂದ ಆಸಾಮಿಗಳ ಅಂಗಶೋಧನೆ ಮಾಡಿಸಲಾಗಿ 10 ರೂ ನೋಟುಗಳ 7 ನೋಟುಗಳು, 50 ರೂ ಗಳ 6 ನೋಟುಗಳು ಹಾಗೂ 100 ರೂ ಗಳ  ನೋಟುಗಳು 6 ನೋಟುಗಳು  ಇದ್ದು ಒಟ್ಟು 970/- ರೂ ನಗದು ಹಣ  ಹಾಗೂ ಸ್ಥಳದಲ್ಲಿ 52 ಇಸ್ಪೀಟ್ ಎಲೆಗಳು ಇದ್ದವು. ಎಲ್ಲವನ್ನು ಪಂಚರ ಸಮಕ್ಷಮ ಪಂಚನಾಮೆಯ ವಶಕ್ಕೆ ಪಡೆದುಕೊಂಡು ಮದ್ಯಾಹ್ನ 2:00  ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ದಾಖಲಿಸಿ ಈ ದಿನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 104/2020 ಕಲಂ. 379 ಐ.ಪಿ.ಸಿ:-

          ದಿನಾಂಕ 31/07/2020 ರಂದು ಬೆಳಿಗ್ಗೆ 11:00 ಗಂಟೆ ಸಮಯದಲ್ಲಿ ಪಿರ್ಯಾದಿ ಮಂಜುನಾಥ T M ಬಿನ್ ಮುದ್ದುಕೃಷ್ಣಪ್ಪ, 26 ವರ್ಷ, ಬಲಜಿಗರು, HDFC ಬ್ಯಾಂಕ್ ನಲ್ಲಿ ಕೆಲಸ, ಗೌರಿಬಿದನೂರು ಶಾಖೆ ರವರು ಠಾಣೆಗೆ ಹಾಜರಾಗಿ ಣಿಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 21/07/2020 ರಂದು ಮದ್ಯಾಹ್ನ 1:00 ಗಂಟೆಯಲ್ಲಿ ತಾನು ಗೌರಿಬಿದನೂರು ನಗರದ ತಾನು ಕೆಲಸ ಮಾಡುವ ಬ್ಯಾಂಕಿನ ಪಕ್ಕದಲ್ಲಿ ತನ್ನ ದ್ವಿಚಕ್ರ ವಾಹನ ಸಂಖ್ಯೆ KA 43 Q 0043 Hero Passion Pro ಕಪ್ಪು ಬಣ್ಣದ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಕೆಲಸ ಮುಗಿಸಿಕೊಂಡು ಸಂಜೆ 5:00 ಗಂಟೆಯಲ್ಲಿ ಬಂದು ನೋಡೊದಾಗ ತಾನು ನಿಲ್ಲಿಸಿದ್ದ ಸ್ಥಳದಲ್ಲಿ ತನ್ನ ದ್ವಿಚಕ್ರ ವಾಹನ ಪತ್ತೆಯಾಗಿರುವುದಿಲ್ಲ. ಇದುವರೆಗೆ ತಾನು ಹಲವಾರು ಕಡೆ ಹುಡುಕಾಡಿ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 123/2020 ಕಲಂ. 420 ಐ.ಪಿ.ಸಿ:-

          ದಿನಾಂಕ:30/07/2020 ರಂದು ಮದ್ಯಾಹ್ನ 2-30 ಗಂಟೆ ಪಿರ್ಯಾದಿದಾರರಾದ ಆರ್ ಶ್ರೀನಿವಾಸ ಬಿನ್ ಪಿ.ವಿ. ರತ್ನಪ್ಪ, 55 ವರ್ಷ, ಕೊರಚರು, ಜಿರಾಯ್ತಿ, ವಾಸ: ಹಳೇಪೆರೇಸಮದ್ರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗ ಹಾಜರಾಗಿ ನೀಡಿದ ದುರಿನ ಸಾರಾಮಶವೆನೆಂದರೆ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಈಗ್ಗೆ ಸುಮಾರು 5 ವರ್ಷಗಳ ಹಿಂದೆ ತಾನು ತಮ್ಮ ಬಾಬತ್ತು ಜಮೀನನಲ್ಲಿ ಉಳುಮೆ ಮಾಡುತ್ತಿದ್ದಾಗ ತನಗೆ ಬಣ್ಣ ಬಣ್ಣದ 04 ಚಿಕ್ಕದಾದ ಕಲ್ಲುಗಳು ಸಿಕ್ಕಿದ್ದು, ಸದರಿ ಕಲ್ಲುಗಳು ಬಿಸಿಲಿಗೆ ಇಟ್ಟಾಗ ಹೊಳೆಯುತ್ತಿದ್ದವು. ಸದರಿ ಕಲ್ಲುಗಳನ್ನು ನೀರಿನಲ್ಲಿ ತೊಳೆದು ತಮ್ಮ ಮನೆಯಲ್ಲಿ ದೇವರ ಫೋಟೊಗಳ ಬಳಿ ಇಟ್ಟು ಪೂಜೆ ಮಾಡುತ್ತಿದ್ದೆವು. ಈಗಿರುವಲ್ಲಿ ಇತ್ತೀಚಿಗೆ ಸುಮಾರು 5 ತಿಂಗಳ ಹಿಂದೆ ತನ್ನ ಸ್ನೇಹಿತನಾದ ಬಾಗೇಪಲ್ಲಿಯ ಅಕ್ಕುಲಪ್ಪ ಎಂಬವರು ತಮ್ಮ ಮನೆಯೊಳಗೆ ಬಂದಿದ್ದು, ಸದರಿ ಕಲ್ಲುಗಳನ್ನು ನೋಡಿ ಏಕೆ ಈ ಕಲ್ಲುಗಳನ್ನು ಇಟ್ಟುಕೊಂಡಿದಿಯಾ ಸದರಿ ಕಲ್ಲುಗಳು ತುಂಬಾ ಬೆಲೆ ಬಾಳುವಂತಹವುಗಳಾಗಿದ್ದು, ಸದರಿ ಕಲ್ಲುಗಳನ್ನು ಯಾರಿಗಾದರೂ ಮಾರಾಟ ಮಾಡಿದರೆ ಹೆಚ್ಚಿಗೆ ಹಣ ಬರುತ್ತದೆಂದು ತಿಳಿಸಿದ್ದರು. ನಂತರ ತನಗೆ ಅಕ್ಕುಲಪ್ಪ ರವರು ಒಂದು ದಿನ ಚಿಕ್ಕಬಳ್ಳಾಪುರದಲ್ಲಿ ಶಿಡ್ಲಘಟ್ಟದ ತೇಜೆಂದ್ರ ಎಂಬವರನ್ನು ತೋರಿಸಿ ಸದರಿ ಕಲ್ಲುಗಳನ್ನು ತೇಜೆಂದ್ರ ರವರಿಗೆ ಕೊಟ್ಟರೆ ಮಾರಾಟ ಮಾಡಿ ತಮಗೆ ಹಣವನ್ನು ಕೊಡುತ್ತಾನೆಂದು ಪರಿಚಯ ಮಾಡಿಕೊಟ್ಟಿರುತ್ತಾರೆ. ಅದರಂತೆ ತೇಜೇಂದ್ರ ರವರು ತನ್ನ ಸ್ನೇಹಿತರೊಂದಿಗೆ ತಮ್ಮ ಮನೆಗೆ ಬಂದು ಸದರಿ ಕಲ್ಲುಗಳನ್ನು ನೋಡಿ ಆಯ್ತು 3 ದಿನಗಳ ಒಳಗೆ ಬಂದು ಸದರಿ ಕಲ್ಲುಗಳನ್ನು ತೆಗೆದುಕೊಂಡು ಹೋಗಿ ನಿಮಗೆ 10 ಲಕ್ಷ ರೂಪಾಯಿಗಳನ್ನು ಕೊಡುತ್ತೇವೆಂದು ತಿಳಿಸಿದ್ದರು. ಹೀಗಿರುವಲ್ಲಿ ದಿನಾಂಕ:27-07-2020 ರಂದು ಮದ್ಯಾಹ್ನ ತೇಜೇಂದ್ರ ರವರು ತನಗೆ ಫೋನ್ ಮಾಡಿ ಎಲ್ಲಿದಿಯ ಎಂದು ಕೇಳಿದಾಗ ತಾನು ಗೂಳೂರು ಹೊಬಳಿ ಮಲಕಚೆರುವಪಲ್ಲಿ ಗ್ರಾಮಕ್ಕೆ ಹೋಗಿರುವುದಾಗಿ ತಿಳಿಸಿರುತ್ತೇನೆ. ನಂತರ ಇದೇ ದಿನ ಪುನಃ ಮದ್ಯಾಹ್ನ ಸುಮಾರು 3.30 ಗಂಟೆ ಸಮಯಲ್ಲಿ ತನಗೆ ತೇಜೇಂದ್ರ ರವರು ಪೋನ್ ಮಾಡಿ ನಾವು ತಮ್ಮ ಮನೆಯ ಬಳಿಗೆ 10 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಬಂದಿದ್ದು, ಸದರಿ ಕಲ್ಲುಗಳನ್ನು ಕೊಟ್ಟರೆ ತಮಗೆ ಹಣವನ್ನು ಕೊಟ್ಟು ಹೋಗುವುದಾಗಿ ತಿಳಿಸಿರುತ್ತಾರೆ. ತಾನು ಮನೆಯ ಬಳಿ ಬರುವಷ್ಟರಲ್ಲಿ ತೇಜೆಂದ್ರ ರವರೊಂದಿಗೆ ಬಂದಿದ್ದ ಇತರೆ 06 ಜನರು ತಮ್ಮ ಮನೆಯೊಳಗೆ ಹೋಗಿ ತಮ್ಮ ತಂದೆಯವರನ್ನು ಮಾತನಾಡಿ ನೀವು ದೇವರ ಪೋಟೋಗಳ ಬಳಿ ಇಟ್ಟು ಪೂಜೆ ಮಾಡುತ್ತಿದ್ದ  ಬಣ್ಣ ಬಣ್ಣದ ಕಲ್ಲುಗಳನ್ನು ಕೊಡಿ ತಮಗೆ ಹಣವನ್ನು ಕೊಡುತ್ತೇವೆಂದು ಹೇಳಿ  ಹಣವನ್ನು ಕೊಡದೆ ವಂಚನೆ ಮಾಡಿ ಸದರಿ ಕಲ್ಲುಗಳನ್ನು ತೆಗೆದುಕೊಂಡು ಹೊರಟುಹೋಗಿರುತ್ತಾರೆ. ಆ ಸಮಯದಲ್ಲಿ ಗಾಬರಿಯಲ್ಲಿ ಒಂದು ಸ್ಕ್ರೀನ್ಟೆಚ್ ಪೋನ್ ತಮ್ಮ ಮನೆಯಲ್ಲಿ ಬಿಟ್ಟು ಹೋಗಿರುತ್ತಾರೆ. ಅದ್ದರಿಂದ ತಾವುಗಳು ದಯಮಾಡಿ ನಮಗೆ 10 ಲಕ್ಷ ರೂಪಾಯಿಗಳ ಹಣವನ್ನು ಕೊಡುವುದಾಗಿ ಹೇಳಿ ಹಣವನ್ನು ಕೊಡದೆ ಮೋಸ ಮಾಡಿ ತಮ್ಮ ಮನೆಯಲ್ಲಿದ್ದ ಕಲ್ಲುಗಳನ್ನು ತೆಗೆದುಕೊಂಡು ಹೋಗಿರುವ ತೇಜೇಂದ್ರ ಹಾಗೂ ಅವರೊಂದಿಗೆ ಬಂದಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 200/2020 ಕಲಂ. 341,323,427,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ:-30/07/2020 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹೆಚ್.ಡಿ ಶಿವಕುಮಾರ್ ಬಿನ್ ದೊಡ್ಡೇಗೌಡ, 43 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಈ.ಹೊಸಹಳ್ಳಿ ಗ್ರಾಮ, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಇದೇ ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಹೋಬಳಿ ಕಲ್ಯಾಪುರ ಗ್ರಾಮಕ್ಕೆ ಸೇರಿದ ಸರ್ವೇ ನಂಬರ್ 49 ರಲ್ಲಿ ಒಂದು ಎಕರೆ ಹನ್ನೆರಡುವರೆ ಗುಂಟೆ ಜಮೀನು ತನ್ನ ತಂದೆಯವರಾದ ದೊಡ್ಡೇಗೌಡ ರವರ ಹೆಸರಿನಲ್ಲಿ ಇರುತ್ತದೆ. ತಾವು ತಮ್ಮ ಜಮೀನಿನಲ್ಲಿ ಕೊಳವೆ ಬಾವಿಯನ್ನು ಕೊರೆಯಿಸಿದ್ದು, ತಮ್ಮ ಜಮೀನಿನ ಪಕ್ಕದಲ್ಲಿ ತಮ್ಮ ಗ್ರಾಮದ ವಾಸಿ ಚಿಕ್ಕನಂಜುಂಡಪ್ಪ ಬಿನ್ ಮುನಿಸೊಣ್ಣಪ್ಪ ರವರ ಜಮೀನು ಇದ್ದು, ಇವರ ಜಮೀನಿನ ಪಕ್ಕದಲ್ಲಿಯೇ ತಮ್ಮ ಮತ್ತೊಂದು ಜಮೀನು ಇದ್ದು, ಆ ಜಮೀನಿಗೆ ಬೆಳೆಗಳಿಗೆ ನೀರನ್ನು ಹಾಯಿಸಲು ಚಿಕ್ಕನಂಜುಂಡಪ್ಪ ರವರ ಚಿಕ್ಕಪ್ಪನ ಮಗನಾದ ರಾಜಣ್ಣ ಬಿನ್ನ ಗುಳ್ಳಪ್ಪ ರವರಿಗೆ ಕೇಳಿ ಈಗ್ಗೆ 4 ತಿಂಗಳ ಹಿಂದೆ ಅವರ ಜಮೀನಿನ ಮುಖಾಂತರ ತಮ್ಮ ಜಮೀನಿಗೆ ನೀರಿನ ಪೈಪ್ ಗಳನ್ನು ಹಾಕಿಕೊಂಡಿರುತ್ತೇವೆ. ಹೀಗಿರುವಾಗ ತನಗೂ ಮತ್ತು ಚಿಕ್ಕನಂಜುಂಡಪ್ಪ ರವರಿಗೂ ತಮ್ಮ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಿಚಾರದಲ್ಲಿ ಮನಸ್ತಾಪಗಳಿದ್ದು, ಇದರಿಂದ ಚಿಕ್ಕನಂಜುಂಡಪ್ಪ ರವರು ದಿನಾಂಕ 20/07/2020 ರಂದು ಆತನ ಜಮೀನಿನಲ್ಲಿರುವ ತಮ್ಮ ನೀರಿನ ಪೈಪ್ ಗಳನ್ನು ಹೊಡೆದು ಹಾಕಿರುತ್ತಾನೆ. ಇದರಿಂದ ತನ್ನ ಜಮೀನಿನಲ್ಲಿ ಇಟ್ಟಿದ್ದ ಕೊತ್ತಂಬರಿ ಬೆಳೆಗೆ ನೀರು ಇಲ್ಲದೆ ಬೆಳೆ ಒಣಗಿ ಹೋಗಿ ತನಗೆ ಸುಮಾರು 2 ಲಕ್ಷ ರೂಗಳವರೆಗೆ ನಷ್ಟವಾಗಿರುತ್ತದೆ. ಈ ವಿಚಾರದಲ್ಲಿ ತಾನು ದಿನಾಂಕ 27/07/2020 ರಂದು ಠಾಣೆಗೆ ಬಂದು ಆತನ ಮೇಲೆ ದೂರನ್ನು ನೀಡಿರುತ್ತೇನೆ. ಹೀಗಿರುವಾಗ ಈ ದಿನ ದಿನಾಂಕ 30/07/2020 ರಂದು ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ತಾನು ತಮ್ಮ ಜಮೀನಿನಲ್ಲಿ ಬಳಿ ಹೋಗುತ್ತಿದ್ದಾಗ ಮೇಲ್ಕಂಡ ಚಿಕ್ಕನಂಜುಂಡಪ್ಪ ಹಾಗು ರಾಜಣ್ಣ ರವರು ತನ್ನನ್ನು ಅಡ್ಡಗಟ್ಟಿ ಚಿಕ್ಕನಂಜುಂಡಪ್ಪ ರವರು ತನ್ನನ್ನು ಕುರಿತು ನೀನು ನನ್ನ ಮೇಲೆ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಟ್ಟಿದ್ದೀಯಾ ಲೋಫರ್ ನನ್ನ ಮಗನೇ, ಸೂಳೆ ನನ್ನ ಮಗನೇ ಎಂದು ಇತ್ಯಾದಿಯಾಗಿ ಬೈದು ಇಬ್ಬರು ಸೇರಿಕೊಂಡು ತನ್ನ ಮೇಲೆ ಜಗಳವನ್ನು ತೆಗೆದು ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿ ಇನ್ನೊಂದು ಸಲ ನಮ್ಮ ಸುದ್ದಿಗೆ ಬಂದರೆ ನಿನಗೆ ಸಾಯಿಸಿ ಬಿಡುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಅಷ್ಟರಲ್ಲಿ ತಮ್ಮ ಜಮೀನಿನ ಪಕ್ಕದ ಜಮೀನಿನವರಾದ ರಮೇಶ್ ಬಿನ್ ಮಾರಪ್ಪ, ವೆಂಕಟೇಶ್ ಬಿನ್ ತಿಮ್ಮರಾಯಪ್ಪ ರವರು ಅಡ್ಡ ಬಂದು ಜಗಳವನ್ನು ಬಿಡಿಸಿರುತ್ತಾರೆ. ಆದ ಕಾರಣ ತನ್ನ ನೀರಿನ ಪೈಪ್ ಗಳನ್ನು ಹೊಡೆದು ಹಾಕಿ, ತನ್ನನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿ, ಹಲ್ಲೆ ಮಾಡಿರುವ ಮೇಲ್ಕಂಡ ಚಿಕ್ಕನಂಜುಂಡಪ್ಪ ಬಿನ್ ಮುನಿಸೊಣ್ಣಪ್ಪ ಹಾಗು ರಾಜಣ್ಣ ಬಿನ್ ಗುಳ್ಳಪ್ಪ ರವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 201/2020 ಕಲಂ. 447,427,323,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ:-31/07/2020 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಚಿಕ್ಕ ನಂಜುಂಡಪ್ಪ ಬಿನ್ ಮುನಿಸೊಣ್ಣಪ್ಪ, 60 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಈ.ಹೊಸಹಳ್ಳಿ ಗ್ರಾಮ, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಇದೇ ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಹೋಬಳಿ ಕಲ್ಯಾಪುರ ಗ್ರಾಮಕ್ಕೆ ಸೇರಿದ ಸರ್ವೇ ನಂಬರ್ 48 ರಲ್ಲಿ 2 ಎಕರೆ 14 ಗುಂಟೆ ಜಮೀನು ತನ್ನ ಹೆಸರಿನಲ್ಲಿದ್ದು ಸದರಿ ಜಮೀನಿನಲ್ಲಿ ತಾನು ಜಿರಾಯ್ತಿ ಮಾಡಿಕೊಂಡಿರುತ್ತೇನೆ. ಹೀಗಿರುವಾಗ ಇತ್ತೀಚೆಗೆ ತಾನು ತನ್ನ ಜಮೀನಿನಲ್ಲಿ ಬೆಳೆಯನ್ನು ಇಡಲು ಉಳುಮೆ ಮಾಡಿ ಗೊಬ್ಬರವನ್ನು ಚೆಲ್ಲಿರುತ್ತೇನೆ. ಹೀಗಿರುವಾಗ ದಿನಾಂಕ 19/07/2020 ರಂದು ರಾತ್ರಿ ತಮ್ಮ ಪಕ್ಕದ ಜಮೀನಿನವರು ಹಾಗು ತಮ್ಮ ಗ್ರಾಮದ ವಾಸಿಗಳಾದ ಹೆಚ್.ಡಿ ಶಿವಕುಮಾರ್ ಬಿನ್ ದೊಡ್ಡೇಗೌಡ, ಈತನ ತಮ್ಮನಾದ ಹೆಚ್.ಡಿ ಶ್ರೀಧರ್, ಇವರ ದೊಡ್ಡಪ್ಪನ ಮಗನಾದ ಹೆಚ್.ಎಂ ರಮೇಶ್ ಬಿನ್ ಮಾರಪ್ಪ ಎಂಬುವರು ತನ್ನ ಬಾಬತ್ತು ಮೇಲ್ಕಂಡ ಜಮೀನಿನಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ತನ್ನನ್ನು ಕೇಳದೆ ತನ್ನ ಜಮೀನಿನಲ್ಲಿ ಹಳ್ಳಗಳನ್ನು ತೋಡಿ ನೀರಿನ ಪೈಪ್ ಗಳನ್ನು ಅಳವಡಿಸಿಕೊಂಡಿರುತ್ತಾನೆ. ನಂತರ ತಾನು ಮಾರನೇ ದಿನ ದಿನಾಂಕ 20/07/2020 ರಂದು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ತನ್ನ ಜಮೀನಿನ ಬಳಿ ಹೋಗಿ ನೋಡಲಾಗಿ ಮೇಲ್ಕಂಡವರು ತಮ್ಮ ಜಮೀನಿನಲ್ಲಿ ನೀರಿನ ಪೈಪ್ ಗಳನ್ನು ತೊಡಲು ಹಳ್ಳವನ್ನು ಅಗೆಗಿದ್ದರಿಂದ ತಾನು ಬೆಳೆ ಇಡಲು ಚೆಲ್ಲಿದ್ದ ಸುಮಾರು 10.000-00 ರೂ ಬೆಲೆ ಬಾಳುವ ಗೊಬ್ಬರ ಮತ್ತೆ ಹಳ್ಳವನ್ನು ಮುಚ್ಚಿದಾಗ ಮಣ್ಣಿನಲ್ಲಿ ಮುಚ್ಚಿಹೋಗಿ ತನಗೆ ನಷ್ಟವಾಗಿರುತ್ತದೆ. ನಂತರ ತಾನು ಪಕ್ಕದ ಜಮೀನಿನಲ್ಲಿಯೇ ಇದ್ದ ಮೇಲ್ಕಂಡ ಶಿವಕುಮಾರ್, ಹೆಚ್.ಡಿ ಶ್ರೀಧರ್ ಮತ್ತು ಹೆಚ್.ಎಂ ರಮೇಶ್ ರವರನ್ನು ಕೇಳಲಾಗಿ ಮೂರು ಜನರು ತನಗೆ ಅವಾಚ್ಯ ಶಬ್ದಗಳಿಂದ ಬೈದು, ತನ್ನ ಮೇಲೆ ಜಗಳ ತೆಗೆದು ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿ, ನಾವು ನಿನ್ನ ಜಮೀನಿನ ಪೈಪ್ ಗಳನ್ನು ಹಾಕಿಕೊಂಡಿದ್ದೇವೆ ನಿನ್ನ ಕೈಯಲ್ಲಿ ಏನಾಗುತ್ತೋ ಮಾಡಿಕೋ, ನನಗೆ ರಾಜಕೀಯ ವ್ಯಕ್ತಿಗಳು, ಪೊಲೀಸರು ಚೆನ್ನಾಗಿ ಗೊತ್ತು ನಿನ್ನ ಕೈಯಲ್ಲಿ ಏನು ಮಾಡಲು ಆಗುವುದಿಲ್ಲ, ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿನಗೆ ಸಾಯಿಸುವುದಾಗಿ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಬೆಳ್ಳೂಟಿ ಗ್ರಾಮದ ವಾಸಿ ನಾಗೇಶ್ ಗೌಡ @ ನಾಗೇಶ್ ಬಿನ್ ಕೆಂಪರಾಜು ರವರು ಶಿವಕುಮಾರ್ ರವರ ಪರ ವಹಿಸಿಕೊಂಡು ತನಗೆ ಕೆಟ್ಟ ಮಾತುಗಳಿಂದ ಬೈದು, ಪ್ರಾಣ ಬೆದರಿಕೆಯನ್ನು ಹಾಕಿರುತ್ತಾನೆ. ಆಗ ತಮ್ಮ ಪಕ್ಕದ ಜಮೀನಿನವರಾದ ಮುನಿರಾಜು ಬಿನ್ ಮುನಿಯಪ್ಪ, ಈತನ ಅಣ್ಣ ಆಂಜಿನಪ್ಪ ರವರು ಅಡ್ಡ ಬಂದು ಜಗಳವನ್ನು ಬಿಡಿಸಿರುತ್ತಾರೆ. ನಂತರ ತಾನು ವಿಷಯವನ್ನು ತಮ್ಮ ಹಿರಿಯರಿಗೆ ತಿಳಿಸಿದಾಗ ಅವರು ನ್ಯಾಯ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು, ಮೇಲ್ಕಂಡವರು ಇದುವರೆವಿಗೂ ಯಾವುದೇ ನ್ಯಾಯ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.