ದಿನಾಂಕ : 31/03/2020 ರ ಅಪರಾಧ ಪ್ರಕರಣಗಳು

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 44/2020 ಕಲಂ.279-337-304(ಎ) ಐ.ಪಿ.ಸಿ:-
ದಿ:31.03.2020 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಪೂರ್ಣಿಮ ಆರ್ ಕೋಂ ಸುಬ್ರಮಣಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ತಂದೆ ತಾಯಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, 1 ನೇ ತಾನು ಮತ್ತು 2 ನೇ ಶಾರದ ಮಣಿ . ಆರ್ ಆಗಿದ್ದು, ತಮ್ಮ ತಂದೆಯವರಾದ ರಾಮಾಂಜನೇಯ ಬಿ ಎನ್ ಬಿನ್ ಲೇಟ್ ನಂಜುಂಡಪ್ಪ 54 ವರ್ಷ , ಬಲಿಜಿಗ ಜಿರಾಯ್ತಿ 16 ನೇ ವಾರ್ಡ್ ಎ.ಡಿ.ಎ.ಟಿ.ಎಸ್ ಕಛೇರಿ ಹತ್ತಿರ , ಬಾಗೇಪಲ್ಲಿ ಟೌನ್ ರವರು ಮತ್ತು ಅವರ ಸ್ನೇಹಿತರಾದ ಚಂದ್ರಶೇಖರ್ ಬಿನ್ ಲೇಟ್ ಆಂಜಿನಪ್ಪ 21 ನೇ ವಾರ್ಡ್ ಬಾಗೇಪಲ್ಲಿ ಟೌನ್ , ರಮೇಶ್ ಎ ಬಿನ್ ಲೇಟ್ ಆದಿನಾರಾಯಣಪ್ಪ 10 ನೇ ವಾರ್ಡ್ ಬಾಗೇಪಲ್ಲಿ ಟೌನ್ ರವರುಗಳು ತಮ್ಮ ಬಾಬತ್ತು ಕೆಎ 07 ಎಂ 0757 ನೊಂದಣಿ ಸಂಖ್ಯೆಯ ಮಾರುತಿ ಓಮಿನಿ ವಾಹನದಲ್ಲಿ ದಿ:17.03.2020 ರಂದು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಹೋಗಿ ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ವಾಪಸ್ಸು ಬಾಗೇಪಲ್ಲಿಗೆ ಬರಲು ಎನ್ ಹೆಚ್ 7 ರಸ್ತೆಯಲ್ಲಿ ಬರುತ್ತಿದ್ದಾಗ ತಮ್ಮ ತಂದೆಯವರಿಗೆ ಬಲಕಾಲಿನ 2 ನೇ ಬೆರಳು ಗ್ಯಾಂಗರಿನ್ ಆಗಿದ್ದರಿಂದ ತೆಗೆದು ಹಾಕಿದ್ದು, ಎ ಚಂದ್ರಶೇಖರ್ ರವರನ್ನು ಎಲ್ಲಿಗೆ ಹೋದರು ಓಮಿನಿ ವಾಹನವನ್ನು ಚಾಲನೆ ಮಾಡಲು ಕರೆದುಕೊಂಡು ಹೋಗುತ್ತಿದ್ದು, ಅದೇ ರೀತಿ ದಿ:17.03.2020 ರಂದೂ ಸಹ ಎ ಚಂದ್ರಶೇಖರ್ ರವರನ್ನು ಓಮಿನಿ ಚಾಲನೆ ಮಾಡಲು ಜೊತೆಗೆ ಕರೆದುಕೊಂಡು ಹೋಗಿದ್ದು, ಚಿಕ್ಕಬಳ್ಳಾಪುರ ತಾಲ್ಲೂಕು ಮರಸನಹಳ್ಳಿ ಗೇಟ್ ಸಮೀಪ ಬರುತ್ತಿದ್ದಾಗ ಯಾವುದೋ ನಾಯಿ ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಚಾಲಕ ಚಂದ್ರಶೇಖರ್ ರವರು ರಸ್ತೆಯ ಬಲಕ್ಕೆ ತಿರುಗಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಮದ್ಯದ ಡಿವೈಡರ್ ಗೆ ತಗುಲಿ ಪಲ್ಟಿ ಹೊಡೆದ ಪರಿಣಾಮ ತಮ್ಮ ತಂದೆಯವರಾದ ರಾಮಾಂಜನೇಯರವರಿಗೆ ಕತ್ತಿನ ಹಿಂಭಾಗ , ಎರಡೂ ಕಡೆ ಪಕ್ಕೆಲುಬುಗಳಿಗೆ , ಬಲಕೈಗೆ ,ಎಡಗೈ ಹೆಬ್ಬೆರಳಿಗೆ ಮತ್ತು ಹಣೆಯ ಮೇಲೆ ರಕ್ತ ಗಾಯಗಳಾಗಿದ್ದು, ರಮೇಶ್ ರವರಿಗೆ ಬೆನ್ನಿನ ಹಿಂಭಾಗ ಬಲಗಡೆ ಪಕ್ಕೆಲುಬಿಗೆ , ಹಣೆಗೆ ಗಾಯಗಳಾಗಿರುತ್ತೆ. ತಕ್ಷಣ 108 ಅಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ತಮ್ಮ ತಂದೆಯವರ ಮೊಬೈಲ್ ನಿಂದ ಚಂದ್ರಶೇಖರ್ ರವರು ತನಗೆ ಫೋನ್ ಮಾಡಿ ನಿಮ್ಮ ತಂದೆಯವರಿಗೆ ಅಪಘಾತವಾಗಿದ್ದು, ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿರುತ್ತಾರೆಂದು ತಿಳಿಸಿದ್ದು, ತಕ್ಷಣ ತಾನು ತಮ್ಮ ತಾಯಿ ಕಲ್ಪನ ಎಸ್ , ತಮ್ಮ ಯಜಮಾನರಾದ ಸುಬ್ರಮಣಿರವರುಗಳು ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ನಂತರ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಹೋಗಿ ಅಲ್ಲಿಂದ ದಿ:18.03.2020 ರಂದು ಬೆಳಿಗ್ಗೆ ಅಗಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿ:31.03.2020 ರಂದು ಬೆಳಿಗ್ಗೆ 6-45 ಗಂಟೆಗೆ ಮೃತಪಟ್ಟಿರುತ್ತಾರೆ. ತನ್ನ ತಂದೆಯವರ ಮೃತದೇಹವು ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿರುವ ಅಗಡಿ ಆಸ್ಪತ್ರೆಯ ಶವಾಗಾರದಲ್ಲಿದ್ದು, ಈ ಬಗ್ಗೆ ಮುಂದಿನ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ .
2. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 57/2020 ಕಲಂ.324-447-504-506 ರೆ/ವಿ 34 ಐ.ಪಿ.ಸಿ & 3(1)(f),3(1)(r),3(1)(s) ) SC AND THE ST (PREVENTION OF ATTROCITIES) ACT:-
ದಿನಾಂಕ:30/03/2020 ರಂದು ಸಂಜೆ 6.30 ಗಂಟೆಗೆ ಪಿರ್ಯಾದಿದಾರರಾದ ವೆಂಕಟೇಶ್ ಬಿನ್ ನರಸಿಂಹಪ್ಪ, ಕೊರಚ ಜನಾಂಗ, ವಾಸ:ಆವುಲ ನಾಗೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಅರೂರು ಗ್ರಾಮದ ಸರ್ವೆ ನಂ 318 ರಲ್ಲಿ 3 ಎಕರೆ 29 ಗುಂಟೆ ಜಮೀನಿಗೆ ಚಿಕ್ಕಬಳ್ಳಾಪುರ ಎ,ಸಿ ನ್ಯಾಯಾಲಯದಲ್ಲಿ ಪಿ.ಟಿ.ಸಿ.ಎ.ಲ್ ಕಾಯ್ದೆಯಡಿಯಲ್ಲಿ ದಾವೆ ಹಾಕಿದ್ದು, ಪ್ರಕರಣ ಸಂಖ್ಯೆ ಪಿಟಿಸಿಎಲ್ (ಚಿಕ್ಕ)23/2015-16 ದಿನಾಂಕ:09/03/2016 ರಂತೆ ಗೆರಿಗಿವೆಂಕಟರೆಡ್ಡಿ ಮತ್ತು ತನಗೆ ಕೇಸು ನಡೆದು ಕೇಸಿನಲ್ಲಿ ಸರ್ವೆ ನಂಬರ್ 318 ರ ಜಮೀನು ತನ್ನ ಪರವಾಗಿ ಆದೇಶವಾಗಿದ್ದು, ಸದರಿ ಆದೇಶದ ವಿರುದ್ದ ಗೆರಿಗಿವೆಂಕಟರೆಡ್ಡಿ ರವರು ಜಿಲ್ಲಾಧಿಕಾರಿಯವರ ನ್ಯಾಯಾಲಯದಲ್ಲಿ ಅಫೀಲು ಮಾಡಲಾಗಿ ಅದರಿ ನ್ಯಾಯಾಲಯದಲ್ಲಿ ತಮ್ಮ ಪರವಾಗಿ ಖಾತೆ ಪಹಣೆ ಮುಂದುವರಿಸಿಲು ಆದೇಶಿಸಿರುತ್ತಾರೆ. ಇದರಂತೆ ರಾಜಿ ಸಂದಾನ ಮಾಡಿ ಗೆರಿಗಿವೆಂಕಟರೆಡ್ಡಿ ರವರಿಗೆ 4 ಲಕ್ಷ 50 ಸಾವಿರ ಹಣ ನೀಡಿ ಜಮೀನಿನ ಸ್ವಾದೀನತೆಯನ್ನು ಪಡೆದಿದ್ದು. ಸ್ವಾದೀನತೆ ನೀಡಿದಂತೆ ನೀಡಿ ತಾನು ಖಾತೆ ಪಹಣಿಯಂತೆ ಸ್ವಾದೀನಕ್ಕೆ ಹೋದಾಗ ಗೆರಿಗೆವೆಂಕಟರೆಡ್ಡಿ ಮತ್ತು ಇತನ ಮಗ ಚಿಕ್ಕಮಂಜುನಾಥ ಹೊಡೆಯಲು ಬಂದು ಗಲಾಟೆ ಮಾಡಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು. ಇವರು ಬಲಾಡ್ಯರು ಹಾಗೂ ಸಾಹುಕಾರರಾದ್ದರಿಂದ ತಾನು ಏನು ಮಾಡಲು ತೋಚದೆ ಸುಮ್ಮನೆ ಇದ್ದೆ, ಅನಂತರ ತಹಶೀಲ್ದಾರ್ ರವರು ಸ್ವಾದೀನತೆ ನೀಡಿಸಿರುತ್ತಾರೆ. ಈಗಿರುವಾಗ ದಿನಾಂಕ: 19/03/2020 ರಂದು ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ಗೆರಿಗಿವೆಂಕಟರೆಡ್ಡಿ ಮತ್ತು ಚಿಕ್ಕಮಂಜುನಾಥ ಬಿನ್ ಗೆರಿಗಿವೆಂಕಟರೆಡ್ಡಿ ರವರು ತನ್ನ ಸರ್ವೆ ನಂಬರ್ 318ರ 03 ಎಕರೆ 29 ಗುಂಟೆ ಜಮೀನಿನಲ್ಲಿ 02 ಜೆ,ಸಿ,ಬಿ ಯಂತ್ರಗಳನ್ನು ಕರೆತಂದು ತನ್ನ ಜಮೀನಿಗೆ ಅಕ್ರಮವಾಗಿ /ಅತಿಕ್ರಮವಾಗಿ ಪ್ರವೇಶಿಸಿ ತನ್ನ ಜಮೀನಿನಲ್ಲಿ ಗ್ರಾನೇಟ್ ಪ್ಯಾಕ್ಟರಿಯಿಂದ ಹೊರ ಬಂದ ಕಲ್ಲು ಬಂಡೆಗಳನ್ನು ಜಮೀನಿನಲ್ಲಿ ತಳ್ಳಿಸಿಕೊಂಡು ತೊಂದರೆ ಮಾಡುತ್ತಿದ್ದು ಈ ಕುರಿತು ತಾನು ಜೆ,ಸಿ,ಬಿ ಯಂತ್ರಗಳನ್ನು ಅಡ್ಡ ಪಡಿಸಿ ತಡೆಯಲು ಪ್ರಯತ್ನಿಸಿದಾಗ ಮೇಲ್ಕಂಡ ವ್ಯಕ್ತಿಗಳು ಏಕಾಏಕಿ ಬಂದು ಏ ಕೊರಚ ನಾ ಕೊಡುಕಾ ಎಂದು ಜಾತಿ ನಿಂದನೆ ಮಾಡಿ ನಿಯಮ್ಮನೇದೆಂಗಾ ಈ ಜಮೀನು ಮಾದಿರಾ ನೀಕಿ ಕೊರ್ಟುಲಾ ಅಯಿಪೆಯತವುಟಕೇ ಆಯಿಪೋಯಿಂದಿ ಅನುಕೊವುಂಡಾವಾ ನೀಕಿ ಈರಾನಿಪನಿ ಇಯಾಲ್ಲಾ ಅನಿ ನೀತಾವು (4.50) ನಾಲಗುನ್ನರ ಲಕ್ಷ ದುಡ್ಡು ತೀಸುಕೋನಿ ಮೀಯಮ್ಮಕಿ ಸೋಬನಮು ಚೇಸ್ತಾಮು ನುವ್ವು ಇಂಗಾ ಈಡೆ ಉಂಟೆ ನಿಯಮ್ಮ ಜಿ.ಸಿ.ಬಿ ಕಿಂದಕಿ ಏಸಿ ತೊಕ್ಕಪಿಚ್ಚೇಸಿ ನುವ್ವು ಇಚ್ಚಿಂಡೆ ದುಡ್ಡು ನೀಕೆ ಕೇಸ್ ಲಕಿ ಕರ್ಚೇಸ್ತಾಮು ಅಂತ ತನ್ನನ್ನು ದೊಣ್ಣೆಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಭಯಪಡಿಸಿ ಜಮೀನಿನಿಂದ ಆಚೆಗೆ ಗೆರಿಗಿವೆಂಕಟರೆಡ್ಡಿ ಮತ್ತು ಚಿಕ್ಕಮಂಜುನಾಥ ರಸ್ತೆವರೆಗೂ ತಳ್ಳಿದ್ದು ಆಗ ತನ್ನ ಹೆಂಡತಿ ಸರಸ್ವತಿ ತನ್ನನ್ನು ಹೊಡೆಯದಂತೆ ಅಡ್ಡಬಂದಿದ್ದಕ್ಕೆ ಆಕೆಯನ್ನು ಸಹ ಕೈಗಳಿಂದ ಹಿಡೆದು ಎಳೆದು ರಸ್ತೆಗೆ ಕಳುಹಿಸಿರುತ್ತಾರೆ. ಈ ಘಟನೆಯನ್ನು ತಮ್ಮ ಗ್ರಾಮದ ರಾಮಾಂಜನೇಯಲು ನೋಡಿದ್ದು ಅವರು ಬಲಾಡ್ಯರು ಹಾಗೂ ಸಾಹುಕಾರರು ಅವರ ತಂಟೆಗೆ ಹೋಗಬೇಡ ಎಂದು ತನ್ನನ್ನು ಗ್ರಾಮಕ್ಕೆ ಕಳುಹಿಸಿದ್ದು. ತಾನು ಭಯಬಿದ್ದು ದೂರನ್ನು ನೀಡದೆ ಬೆಂಗಳೂರಿಗೆ ಹೊರಟು ಹೋಗಿ ತನ್ನ ಸ್ನೇಹಿತರಿಗೆ ನಡೆದ ಘಟನೆಯ ಬಗ್ಗೆ ತಿಳಿಸಿದಾಗ ದೈರ್ಯ ಹೇಳಿ ಪ್ರಾಣ ರಕ್ಷಣೆ ಮತ್ತು ಜಮೀನು ರಕ್ಷಣೆಗಾಗಿ ನಡೆದ ಘಟನೆಯ ಬಗ್ಗೆ ದೂರು ನೀಡಲು ತಿಳಿಸಿದ್ದರಿಂದ ನಂತರ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.
3. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 19/2020 ಕಲಂ.15(ಎ), 32(3) ಕೆ.ಇ ಆಕ್ಟ್:-
ದಿನಾಂಕ:30-03-2020 ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ನಕ್ಕಲಪಲ್ಲಿ ಗ್ರಾಮದ ಬಳಿ ಗಸ್ತಿನಲ್ಲಿ ಇದ್ದಾಗ ನಕ್ಕಲಪಲ್ಲಿ ಗ್ರಾಮದಲ್ಲಿ ಮನೆಯ ಮುಂಭಾಗದಲ್ಲಿ ಖಾಲಿ ಜಾಗದಲ್ಲಿ ಯಾರೋ ಅಸಾಮಿ ಆಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ನ ಸಂಖ್ಯೆ ಕೆ.ಎ-40 ಜಿ-92 ರಲ್ಲಿ ನಕ್ಕಲಪಲ್ಲಿ ಗ್ರಾಮದ ಮನೆಯ ಮುಂಭಾಗದ ಖಾಲಿ ಜಾಗದ ಬಳಿಗೆ ಹೋಗಲಾಗಿ ನಾವು ಹೋಗಿದ್ದ ಜೀಪ್ ಅನ್ನು ನೋಡಿ ಮನೆಯ ಮುಂಭಾಗದ ಬಳಿ ಖಾಲಿ ಜಾಗದಲ್ಲಿ ಇದ್ದ ಯಾರೋ ಒಬ್ಬರು ಓಡಿ ಹೋಗಿದ್ದು ಮನೆಯ ಬಳಿ ಖಾಲಿ ಜಾಗದಲ್ಲಿ ಒಬ್ಬ ಅಸಾಮಿ ಇದ್ದು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಅಪ್ಪಿರೆಡ್ಡಿ ಬಿನ್ ವೆಂಕಟರೆಡ್ಡಿ,56 ವರ್ಷ, ವಕ್ಕಲಿಗ ಜನಾಂಗ ವ್ಯಾಪಾರ ನಕ್ಕಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್ 18 ಹೈವಾಡ್ಸ್ ವೀಸ್ಕೀ ಮದ್ಯದ ಟೇಟ್ರಾ ಪ್ಯಾಕೇಟುಗಳು (ಸುಮಾರು 540 ರೂ ಬೆಲೆ ಬಾಳುವುದಾಗಿರುತ್ತದೆ ) ಮತ್ತು 01 ಲೀಟರ್ ನ ಒಂದು ನೀರಿನ ಖಾಲಿ ಬಾಟಲ್ ಮತ್ತು ಒಂದು ಪ್ಲಾಸ್ಟೀಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ 90 .ಎಂ,ಎಲ್ ನ 01 ಹೈವಾಡ್ಸ್ ವೀಸ್ಕೀ ಟೆಟ್ರಾ ಪ್ಯಾಕೇಟ್ ಇದ್ದು ಸ್ಥಳದಲ್ಲಿ ಇದ್ದ ಮೇಲ್ಕಂಡ ಅಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಳ್ಳಲು ಪರವಾನಿಗೆಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ಯಾವುದೇ ಪರವಾನಿಗೆಯನ್ನು ಪಡೆದಿರುವುದಿಲ್ಲವೆಂದು ತಿಳಿಸಿರುತ್ತಾನೆ. ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿ ಮೇಲ್ಕಂಡ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂಬರ್ 31/2020 ರಿತ್ಯಾ ದಾಖಲಿಸಿ ಘನ ನ್ಯಾಯಾಲಯದಲ್ಲಿ ಅನುಮತಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಸಿಲಿಕೊಂಡು ತನಿಖೆಯನ್ನು ಮುಂದುವರಿಸಿರುತ್ತದೆ.
4. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 79/2020 ಕಲಂ.87 ಕೆ.ಪಿ ಆಕ್ಟ್:-
ದಿನಾಂಕ 30/03/2020 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಪಿ.ಎಸ್.ಐ ರವರು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಶೀಗೇಹಳ್ಳಿ ಗ್ರಾಮದ ಸರ್ಕಾರಿ ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು ಗುಂಪು ಕಟ್ಟಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಾತ್ಮೀ ಬಂದಿದ್ದು, ಸದರಿ ಆಸಾಮಿಗಳ ವಿರುದ್ದ ಪ್ರ ವ ವರದಿಯನ್ನು ದಾಖಲಿಸಿಕೊಂಡು, ಸದರಿ ಸ್ಥಳದ ಮೇಲೆ ದಾಳಿ ಕೈಗೊಳ್ಳಲು ಅನುಮತಿ ನೀಡ ಬೇಕಾಗಿ ಘನ ನ್ಯಾಯಾಲಯದಲ್ಲಿ ಪ್ರಾರ್ಥಿಸಿ ಘನ ನ್ಯಾಯಾಲಯಕ್ಕೆ ಪಿಸಿ-27 ರವರ ಮೂಲಕ ಮನವಿಯನ್ನು ಸಲ್ಲಿಸಿಕೊಂಡಿದ್ದು, ಪಿಸಿ-27 ರವರು ಸಂಜೆ 7-00 ಗಂಟೆಗೆ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಸಂಜೆ 7-15 ಗಂಟೆಗೆ ಠಾಣೆಗೆ ಬಂದು ಹಾಜರು ಪಡಿಸಿದ ಅನುಮತಿ ಆದೇಶದ ಮನವಿಯ ಮೇರೆಗೆ ಪ್ರ ವ ವರದಿಯನ್ನು ದಾಖಲಿಸಿಕೊಂಡಿರುತ್ತೆ.