ದಿನಾಂಕ :30/11/2020 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ  ಪೊಲೀಸ್ ಠಾಣೆ ಮೊ.ಸಂ.286/2020 ಕಲಂ:457,380 ಐ.ಪಿ.ಸಿ:-

          ದಿನಾಂಕ:30/11/2020ರಂದು ಸಂಜೆ 06:30 ಗಂಟೆಗೆ ಪಿರ್ಯಾದುದಾರರಾದ ಶಿವಾರೆಡ್ಡಿ ಬಿನ್ ಲೇಟ್ ಮಲ್ಲಿರೆಡ್ಡಿ, 53 ವರ್ಷ, ವಕ್ಕಲಿಗ ಜನಾಂಗ, ಜಿರಾಯ್ತಿ, ವಾಸ ಮದ್ದಲಖಾನೆ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ -ದಿನಾಂಕ 20/11/2020 ರಂದು ನಾನು ಚೇಳೂರು ಸಂತೆಯಲ್ಲಿ 24  ಕುರಿ ಮರಿಗಳನ್ನು ಖರೀದಿ ಮಾಡಿಕೊಂಡು ಬಂದು ನಮ್ಮ ಗ್ರಾಮದಲ್ಲಿ ನಮ್ಮ ಮನೆಯ ಬಳಿ ಇರುವ  ಕುರಿ ಶೇಡ್ ನಲ್ಲಿ ಸಾಕಾಣಿಕೆ ಮಾಡುತ್ತಿದ್ದೇನು. ದಿನಾಂಕ 26/11/2020 ರಂದು 24 ಕುರಿಗಳು ಶೆಡ್ ನಲ್ಲಿ ಇದ್ದವು ಅವುಗಳಿಗೆ ರಾತ್ರಿ 9-00 ಗಂಟೆಗೆ ಮೇವನ್ನು ಹಾಕಿ ಶೆಡ್ ಬಾಗಿಲಿಗೆ ಬೀಗವನ್ನು ಹಾಕಿದ್ದು ಮಳೆ ಬರುತ್ತಿದ್ದ ಕಾರಣ ನಾನು ಮನೆಯಲ್ಲಿ  ಮಲಗಿರುತ್ತೇನೆ.  ನಂತರ ದಿನಾಂಕ 27/11/2020 ರಂದು ಬೆಳಗಿನ ಜಾವ 3-45 ಗಂಟೆ ಎಂದು ಶೆಡ್ ಬಳಿ ಹೋಗಿ ನೋಡಲಾಗಿ ಕುರಿಗಳ ಶೆಡ್ಡಿನ ಬೀಗ ಮುರಿದಿದ್ದು, ಒಳಗೆ ಹೋಗಿ ನೋಡಲಾಗಿ 6 ಕುರಿಗಳು ಕಡಿಮೆ ಇದ್ದವು. ದಿನಾಂಕ 26/11/2020 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು 6 ಕುರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  6 ಕುರಿಗಳ ಬೆಲೆ ಸುಮಾರು 23 ಸಾವಿರ ಬೆಲೆ ಬಾಳುವುದ್ದಾಗಿರುತ್ತದೆ.  ಆದ್ದರಿಂದ ನನ್ನ ಬಾಬತ್ತು 6 ಕುರಿ ಮರಿಗಳನ್ನು ಪತ್ತೆ ಮಾಡಿ ಹಾಗೂ ಕಳ್ಳತನ ಮಾಡಿಕೊಂಡು  ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕಾಗಿ ಕೋರುತ್ತೆನೆ. ನಾನು ಕುರಿಗಳನ್ನು ಎಲ್ಲಾ ಕಡೆ ಹುಡುಕಾಡಿ ಈ ದಿನ ತಡವಾಗಿ ದೂರನ್ನು ನೀಡುತ್ತಿರುತ್ತೇನೆ,ಎಂದು ನೀಡಿದ ದೂರು.

2) ಚಿಂತಾಮಣಿ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.428/2020 ಕಲಂ: 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ: 30/11/2020 ರಂದು ಸಂಜೆ 7.00 ಗಂಟೆಗೆ ಶ್ರೀಮತಿ ಪುಷ್ಪವತಿ ಸಿ.ಎಂ ಕೋಂ ಸೋಮಶೇಖರ್, 34 ವರ್ಷ, ಬೋವಿ ಜನಾಂಗ, ಗೃಹಿಣಿ, ಹಾಲಿವಾಸ: ನಂ:2, 5ನೇ ಮುಖ್ಯ ರಸ್ತೆ, ಅಯ್ಯಪ್ಪ ನಗರ, ಕೆ.ಆರ್.ಪುರಂ, ಬೆಂಗಳೂರು, ಸ್ವಂತ ವಿಳಾಸ: ಚಂದ್ರಶೇಖರಪುರ, ವೇಮಗಲ್ ಹೋಬಳಿ, ಕೋಲಾರ ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತವರು ಊರು ಕೋಲಾರ ತಾಲ್ಲೂಕು ಚಂದ್ರಶೇಖರಪುರ ಗ್ರಾಮವಾಗಿದ್ದು, ತನಗೆ ತಮ್ಮ ತಂದೆ-ತಾಯಿ ಈಗ್ಗೆ 15 ವರ್ಷಗಳ ಹಿಂದೆ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರಿ ತಾಲ್ಲೂಕಿನ ಗಂದರವಾರಿಪಲ್ಲಿ ಗ್ರಾಮದ ಸೋಮಶೇಖರ್ ಬಿನ್ ನಾಗರಾಜು, 38 ವರ್ಷ, ಎಂಬುವವರಿಗೆ ಕೊಟ್ಟು ಸಂಪ್ರದಾಯದಂತೆ ಮದುವೆ ಮಾಡಿರುತ್ತಾರೆ. ತಮಗೆ ಇಬ್ಬರು ಹೆಣ್ಣು ಮಕ್ಕಳಿದ್ದು, 1ನೇ ಸಿಂಧು, 2ನೇ ಶಿರೀಷ ಎಂಬುವವರಾಗಿರುತ್ತಾರೆ. ತನ್ನ ಗಂಡ ಟೈಲರ್ ಕೆಲಸ ಮಾಡಿಕೊಂಡಿದ್ದು ತಾವು ಸುಮಾರು 14 ವರ್ಷಗಳಿಂದ ಸಂಸಾರ ಸಮೇತ ಅಯ್ಯಪ್ಪ ನಗರ, ಕೆ.ಆರ್.ಪುರಂ ಬೆಂಗಳೂರು ನಗರದಲ್ಲಿ ವಾಸವಾಗಿರುತ್ತೇವೆ, ಹೀಗಿರುವಾಗ ತಮ್ಮ ಸ್ವಂತ ಊರಾದ ಗಂಧರವಾರಿಪಲ್ಲಿ ಗ್ರಾಮದಲ್ಲಿ ದಿನಾಂಕ:25/11/2020 ರಂದು ತಮ್ಮ ಸಂಬಂಧಿಕರ ಮನೆಯ ಗೃಹಪ್ರವೇಶ ಕಾರ್ಯಕ್ರಮ ಇದ್ದ ಕಾರಣ ದಿನಾಂಕ:24/11/2020 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ತಾನು ತನ್ನ ಗಂಡ ಸೋಮಶೇಖರ್ ರವರೊಂದಿಗೆ ಮನೆಯನ್ನು ಬಿಟ್ಟು ತಮ್ಮ ಬಾಬತ್ತು ಕೆಎ-03 ಕೆಬಿ-9293 ನೊಂದಣಿ ಸಂಖ್ಯೆಯ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದು, ತನ್ನ ಗಂಡ ದ್ವಿಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದರು. ತಾನು ಹಿಂಬದಿಯಲ್ಲಿ ಕುಳಿಕೊಂಡಿದ್ದೆ, ತಾವು ಅದೇ ದಿನ ಮದ್ಯಾಹ್ನ ಸುಮಾರು 12.30 ಗಂಟೆಯ ಸಮಯದಲ್ಲಿ ಕಡಪ-ಬೆಂಗಳೂರು ಮಾರ್ಗದ ರಸ್ತೆಯಲ್ಲಿ ಚಿನ್ನಸಂದ್ರ ಗ್ರಾಮದ ಬಳಿ ಬರುತ್ತಿದ್ದಾಗ ಅದೇ ಸಮಯಕ್ಕೆ ತಮ್ಮ ಹಿಂಬದಿಯಿಂದ  ಹೆಚ್.ಕ್ರಾಸ್ ಕಡೆಯಿಂದ ಬಂದ ಯಾವುದೋ ಕಾರಿನ ಚಾಲಕ ತಮ್ಮ ದ್ವಿಚಕ್ರ ವಾಹನವನ್ನು ಓವರ್ ಟೇಕ್ ಮಾಡುವ ಉದ್ದೇಶದಿಂದ ಆತನ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಆಗ ದ್ವಿಚಕ್ರ ವಾಹನದಲ್ಲಿದ್ದ ತಾನು ಮತ್ತು ತನ್ನ ಗಂಡ ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋಗಿ ಈ ಅಪಘಾತದಿಂದ ತನ್ನ ಗಂಡನಿಗೆ ತಲೆಗೆ ರಕ್ತಗಾಯಗಳಾಗಿ ಮೈ ಕೈ ಮೇಲೆ ತರಚಿದ ಗಾಯಗಳಾಗಿರುತ್ತೆ, ತನಗೆ ತಲೆಗೆ ರಕ್ತಗಾಯವಾಗಿ, ಎರಡೂ ಕೈಗಳ ಮೇಲೆ ಮತ್ತು ಎಡಕಾಲಿಗೆ ತರಚಿದ ಗಾಯಗಳಾಗಿರುತ್ತದೆ, ತನ್ನ ಗಂಡ ಪ್ರಜ್ಞೆ ತಪ್ಪಿ ಹೋಗಿದ್ದು, ತಮಗೆ ಅಪಘಾತಪಡಿಸಿದ ಕಾರನ್ನು ತಾನು ನೋಡಲಾಗಿ ಅದು ಸ್ವಿಪ್ಟ್ ಡಿಸೈರ್ ಕಾರಾಗಿದ್ದು ಅದರ ಹಿಂಬದಿಯಲ್ಲಿ ಕೆಎ-53 ಸಿ-1398 ವುಳ್ಳಾ ನಂಬರ್ ಪ್ಲೇಟ್ ಇರುತ್ತದೆ. ಕಾರನ್ನು ಅದರ ಚಾಲಕ ತಮಗೆ ಅಪಘಾತಪಡಿಸಿದ ನಂತರ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ. ನಂತರ ಅಲ್ಲಿದ್ದ ತಮಗೆ ಪರಿಚಯವಿರುವ ಕಟಮಾಚನಹಳ್ಳಿ ಗ್ರಾಮದ ವಾಸಿ ವೆಂಕಟರೆಡ್ಡಿ ಬಿನ್ ಲೇಟ್ ನಾರಾಯಣಪ್ಪ ಹಾಗೂ ಅಲ್ಲಿದ್ದ ಯಾರೋ ಸಾರ್ವಜನಿಕರು ಗಾಯಗಳಾಗಿದ್ದ ತಮ್ಮನ್ನು ಯಾವುದೋ ಒಂದು ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ತಮಗೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ಅಂಬ್ಯೂಲೆನ್ಸ್ ವಾಹನದಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟಿರುತ್ತಾರೆ. ನಾನು ದಿನಾಂಕ:25/11/2020 ರವರೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ನಂತರ ಡಿಸ್ಚಾರ್ಜ್ ಆಗಿ ಇದುವರೆಗೂ ಆಸ್ಪತ್ರೆಯಲ್ಲಿ ತನ್ನ ಗಂಡನ ಅರೈಕೆಯನ್ನು ನೋಡಿಕೊಂಡಿದ್ದರಿಂದ ಪೊಲೀಸ್ ಠಾಣೆಯಲ್ಲಿ ಇದುವರೆಗೂ ಕಂಪ್ಲೆಂಟ್ ನೀಡಲು ಸಾಧ್ಯವಾಗಿರುವುದಿಲ್ಲ. ನಾವು ನನ್ನ ಗಂಡ ಸೋಮಶೇಖರ್ ರವರು ಇನ್ನು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳತ್ತಿರುತ್ತಾರೆ. ತಾನು ದಿನಾಂಕ:24/11/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ತಮಗಾದ ಗಾಯಗಳ ದೆಸೆಯಲ್ಲಿ ಮತ್ತು ಗಾಬರಿಯಲ್ಲಿ ತಾನು, ತನ್ನ ಗಂಡ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿರುವುದಾಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳಲ್ಲಿ ತಿಳಿಸಿರುವುದಾಗಿರುತ್ತೆ. ತಮಗೆ ಅಪಘಾತಪಡಿಸಿದ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ಮೇಲ್ಕಂಡ ಕೆಎ-53 ಸಿ-1398 ನೋಂದಣಿ ಸಂಖ್ಯೆಯ ಸ್ವಿಪ್ಟ್ ಡಿಸೈರ್ ಕಾರು ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

3) ಕೆಂಚಾರ್ಲಹಳ್ಳಿ  ಪೊಲೀಸ್ ಠಾಣೆ ಮೊ.ಸಂ.131/2020 ಕಲಂ: 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ 29-11-2020 ರಂದು ಸಂಜೆ 06.00 ಗಂಟೆಗೆ ಪಿರ್ಯಾಧಿದಾರರಾದ ಆದಿ ಲಕ್ಷಮ್ಮ ಕೋಂ ನೀಲಕಂಠಚಾರಿ  55 ವರ್ಷ, ವಿಶ್ವಕರ್ಮ ಜನಾಂಗ, ಜಿರಾಯ್ತಿ, ವಾಸ ಸುನ್ನಪ್ಪಗುಟ್ಟ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ 28/11/2020 ರಂದು ತನ್ನ ಮಗಳಾದ ಬಾಲಮಣಿ ಬೆಂಗಳೂರಿನಿಂದ ಚಿಂತಾಮಣಿಗೆ ಬಂದಿದ್ದು ಕಾರ್ತಿಕ ಸೋಮವಾರದ ಹಬ್ಬಕ್ಕೆಂದು ಮಗಳನ್ನು ಕರೆದುಕೊಂಡು ಬರಲು ತಮ್ಮ ಟಿ.ವಿ.ಎಸ್ ಎಕ್ಸ್ ಎಲ್-100 ಹೆವಿಡ್ಯೂಟಿ ದ್ವಿಚಕ್ರವಾಹನದ ಸಂಖ್ಯೆ ಕೆ.ಎ-67-ಇ-9501 ರಲ್ಲಿ ಚಿಂತಾಮಣಿಗೆ ಹೋಗಿ  ತಮ್ಮ ಗ್ರಾಮಕ್ಕೆ ಕರೆದುಕೊಂಡು ಬರಲು ಹೋಗಿದ್ದು  ತನ್ನ ಮಗಳಾದ ಬಾಲಾಮಣಿ ಯನ್ನು ದ್ವಿಚಕ್ರ ವಾಹನದಲ್ಲಿ ಕುಳಿರಿಸಿಕೊಂಡು  ಇನ್ನೊಂದು ಸ್ಕೂಟಿ ದ್ವಿಚಕ್ರವಾಹನದಲ್ಲಿ ತನ್ನ ಅಳಿಯ ಶಿವರಾಜ ಮತ್ತು 2 ನೇ ಮಗಳಾದ ಮಮತ ಹಾಗೂ ಮೊಮ್ಮಗಳಾದ ದೀಕ್ಷ ರವರೊಂದಿಗೆ ಹಿಂದು ಮುಂದಾಗಿ  ಚಿಂತಾಮಣಿ ಬಟ್ಲಹಳ್ಳಿ ಮುಖ್ಯ ರಸ್ತೆಯಲ್ಲಿ ತಮ್ಮ ಗ್ರಾಮಕ್ಕೆ  ಬರುತ್ತಿದ್ದಾಗ ಬಂಡಕೋಟೆ ಕ್ರಾಸ್ ಬಳಿ ರಾತ್ರಿ ಸುಮಾರು 7-00 ಗಂಟೆ ಸಮಯದಲ್ಲಿ ತಮ್ಮ ಗ್ರಾಮಕ್ಕೆ ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಕೆ.ಎ-07-6133 ರ 407 ಟೆಂಪೋ ಚಾಲಕ ತನ್ನ ಟೆಂಪೋವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಗಂಡನ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ ಪರಿಣಾಮ ದ್ವಿಚಕ್ರವಾಹನ ಜಖಂ ಆಗಿ  ತನ್ನ ಗಂಡನ ಬಲಕಾಲು ಬಲಭುಜ ಬಲಕೈನ ಬೆರಳುಗಳು ಹಾಗೂ ತನ್ನ ಮಗಳಾದ ಬಾಲಮಣಿ ಯ ಬಲಕೈ ತಲೆ ಬಲಭುಜ  ಬಲಮೊಣಕೈ ಗಳಿಗೆ ರಕ್ತಗಾಯಗಳಾಗಿದ್ದು ಹಿಂದೆ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ತನ್ನ ಅಳಿಯ ಶಿವರಾಜ ತನ್ನ ಎರಡನೇ ಮಗಳಾದ ಮಮತ ಹಾಗೂ ತಮ್ಮ ಗ್ರಾಮದ ವಾಸಿ ಶ್ರೀನಿವಾಸರೆಡ್ಡಿ ರವರು ತನ್ನ ಗಂಡ ಮತ್ತು ಮಗಳನ್ನು 108 ಅಂಬ್ಯೂಲೇನ್ಸ್ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಹೋಗಿ ಅಲ್ಲಿಂದ ಕೋಲಾರಕ್ಕೆ ಕರೆದುಕೊಂಡು ಹೋಗಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಜಯನಗರ ಆಸ್ವತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿರುತ್ತಾರೆ. ಅಪಘಾತ ಪಡಿಸಿ ನಿಲ್ಲಿಸದೇ ಹೋದ  ಕೆ.ಎ-07-6133 ರ 407 ಟೆಂಪೋ ಮತ್ತು ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

4) ಕೆಂಚಾರ್ಲಹಳ್ಳಿ  ಪೊಲೀಸ್ ಠಾಣೆ ಮೊ.ಸಂ.132/2020 ಕಲಂ: 15(A),32(3) ಕೆ.ಇ ಆಕ್ಟ್:-

          ದಿನಾಂಕ 30-11-2020 ರಂದು ಸಂಜೆ 06.30 ಗಂಟೆಗೆ ಚಿಕ್ಕಬಳ್ಳಾಪುರ ಡಿ.ಸಿ.ಬಿ/ಸಿ.ಇ.ಎನ್ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಶರತ್ ಕುಮಾರ್ ರವರು ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಸಬ್ಇನ್ಸ್ ಪೆಕ್ಟರ್ ರವರಾದ ಶರತ್ ಕುಮಾರ್ ಆದ ತಾನು ಮತ್ತು ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: KA-40-G-270 ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಚಿಂತಾಮಣಿ ತಾಲ್ಲೂಕು ಕಡೆ ಗಸ್ತು ಮಾಡಿಕೊಂಡು ಸಂಜೆ 4-30 ಗಂಟೆ ಸಮಯದಲ್ಲಿ ಏನಿಗದಲೆ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ನಡುಂಪಲ್ಲಿ ಗ್ರಾಮದ ವಾಸಿಯಾದ ಶ್ರೀಮತಿ ಮೀನಾಕ್ಷಿ ಕೋಂ ಶ್ರೀನಿವಾಸರೆಡ್ಡಿ, 35 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ನಡುಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ತಮ್ಮ ಬಾಬತ್ತು ಚಿಲ್ಲರೆ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಈ ಸಂಬಂದ ದಾಳಿ ಮಾಡಿ ಸ್ಥಳದಲ್ಲಿದ್ದ 2 ಲೀಟರ್ 160 ಎಂ.ಎಲ್ ಮದ್ಯವನ್ನು ಪಂಚರ ಸಮಕ್ಷಮ ಅಜಮಾಯಿಷಿ ಮಹಜರ್ ಮೂಲಕ ವಶಕ್ಕೆ ಪಡೆದುಕೊಂಡಿರುತ್ತೆ. ಸದರಿ ಸ್ಥಳದಲ್ಲಿರುವ ಅಂಗಡಿಯಲ್ಲಿ ಒಬ್ಬ ಹೆಂಗಸು ಇದ್ದು, ಸದರಿಯವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶ್ರೀಮತಿ ಮೀನಾಕ್ಷಿ ಕೋಂ ಶ್ರೀನಿವಾಸರೆಡ್ಡಿ, 35 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ನಡುಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿರುತ್ತಾರೆ. ಜೊತೆಯಲ್ಲಿ ಮಹಿಳಾ ಸಿಬ್ಬಂದಿ ಇಲ್ಲದೇ ಇದ್ದುದ್ದರಿಂದ ಸದರಿ ಮಹಿಳೆಯನ್ನು ಸ್ಥಳದಲ್ಲಿಯೇ ಬಿಟ್ಟಿರುತ್ತೆ. ನಂತರ ಪಂಚರ ಸಮಕ್ಷಮ  ಮೇಲ್ಕಂಡ ಮಾಲನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ವಶಪಡಿಸಿಕೊಂಡ ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಬಾಹಿರವಾಗಿ ತಮ್ಮ ಬಾಬತ್ತು ಚಿಲ್ಲರೆ ಅಂಗಡಿಯ ಮುಂಭಾಗದ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಆರೋಪಿ ಶ್ರೀಮತಿ ಮೀನಾಕ್ಷಿ ಕೋಂ ಶ್ರೀನಿವಾಸರೆಡ್ಡಿ ರವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿ ನೀಡಿದ ವರದಿಯ ಸಾರಾಂಶವಾಗಿರುತ್ತೆ.

5) ಮಂಚೇನಹಳ್ಳಿ  ಪೊಲೀಸ್ ಠಾಣೆ ಮೊ.ಸಂ.259/2020 ಕಲಂ: 323,448,504,506 ಐ.ಪಿ.ಸಿ:-

          ದಿನಾಂಕ:27/11/2020 ರಂದು ಪಿರ್ಯಾದಿದಾರರಾದ ಶ್ರೀ.ಟಿ.ಎನ್.ಪ್ರಭುಕುಮಾರ್ ಬಿನ್ ಲೇಟ್ ನೇಮಿರಾಜಯ್ಯ, ತೊಂಡೇಬಾವಿ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:06/11/2020 ರಂದು ಸಂಜೆ ಸುಮಾರು 7-00 ಗಂಟೆಯ ಸಮಯದಲ್ಲಿ ನಮ್ಮ ಗ್ರಾಮದ ಹನುಮಂತಪ್ಪ ಬಿನ್ ಪೂಜಾರಿ ಕೃಷ್ಣಪ್ಪ ರವರು ಕುಡಿದು ನಮ್ಮ ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈದುಕೊಂಡು ನಿಂತಿದ್ದು, ನಾನು ಮನೆಯ ಒಳಗಡೆಯಿಂದ ಹೊರಗೆ ಬಂದಾಗ ಏಕಾಏಕಿ ಮನೆಯ ಕಾಂಪೌಂಡ್ ಒಳಗೆ ನುಗ್ಗಿ ಕಟಿಂಗ್ ಪ್ಲೇಯರ್ ನಿಂದ ತಲೆಗೆ ಹಾಕಲು ಬಂದಾಗ ಜಾರಿ ಭುಜಕ್ಕೆ ಏಟು ಬಿದ್ದಿರುತ್ತದೆ. ಕೂಡಲೇ ಇದೇ ಗ್ರಾಮದ ಶಿವಶಂಕರ್ ರವರು ಕಟಿಂಗ್ ಪ್ಲೇಯರ್ ಕಿತ್ತುಕೊಂಡು ಬಿಡಿಸಲು ಬಂದಾಗ ಅವಾಚ್ಯ ಶಬ್ದಗಳಿಂದ ಬೈದು ತನಗೆ ಕೊಲೆ ಮಾಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ. ನಂತರ ದಿನಾಂಕ:07/11/2020 ರಂದು ನಾನು ಬೆಂಗಳೂರಿಗೆ ಹೋದಾಗ ನಮ್ಮ ಮನೆಯೊಳಗೆ ನುಗ್ಗಿ ನಮ್ಮ ತಾಯಿಯವರ ಬಳಿ ನಿನ್ನ ಮಗನನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಹೋಗಿದ್ದು, ಅದರಿಂದ ಸದರಿಯವರನ್ನು ಠಾಣೆಗೆ ಕರೆಯಿಸಿ ಸೂಕ್ತ ಬಂದೋಬಸ್ತ್ ಮಾಡಲು ಕೋರಿ ಕೊಟ್ಟ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ನಂಬರ್ 461/2020 ರಂತೆ ದಾಖಲಿಸಿಕೊಂಡಿದ್ದು, ಎನ್.ಸಿ.ಆರ್ ಪ್ರರಕಣ ದಾಖಲಿಸಿಕೊಂಡಿರುವ ಕಾರಣ ಮೇಲ್ಕಂಡವರ ವಿರುದ್ದ ಕಲಂ 323, 448, 504, 506 ಐಪಿಸಿ ರೀತ್ಯ ಪ್ರಕರಣ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಈ ದಿನ ದಿನಾಂಕ:30/11/2020 ರಂದು ಸಂಜೆ 4-00 ಗಂಟೆಗೆ ಮೇಲ್ಕಂಡ ಕಲಂ ರೀತ್ಯ ಪ್ರರಕಣ ದಾಖಲಿಸಿರುತ್ತದೆ.

6) ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.309/2020 ಕಲಂ: 15(A),32(3) ಕೆ.ಇ ಆಕ್ಟ್:-

          ದಿನಾಂಕ:29.11.2020 ರಂದು ಸಂಜೆ 4.30 ಗಂಟೆಗೆ ಮಲ್ಲಿಕಾರ್ಜುನ್ ಸಿ.ಹೆಚ್.ಸಿ 239 ಡಿಸಿಬಿ/ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ಠಾಣೆ ರವರು ಠಾಣೆಗೆ ಹಾಜರಾಗಿ ಹಾಜರುಪಡಿಸಿದ ಅರೋಪಿ, ಮಾಲು, ಮಹಜರ್ ಮತ್ತು ವರದಿಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಪಿಐ ರಾಜಣ್ಣ ರವರ ಆದೇಶದಂತೆ ಸಿ.ಹೆಚ್.ಸಿ 239 ಮಲ್ಲಿಕಾರ್ಜುನ್ ಹಾಗೂ ಸಿ.ಹೆಚ್.ಸಿ 198 ಮಂಜುನಾಥ ರವರುಗಳಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಪತ್ತೆ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ಈ ದಿನ ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರ, ಮೇಲೂರು ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ ಸುಮಾರು 2.00 ಗಂಟೆ ಸಮಯದಲ್ಲಿ ಕಂಬದಹಳ್ಳಿ ಗ್ರಾಮದಲ್ಲಿದ್ದಾಗ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪಂಚರೊಂದಿಗೆ ಕಂಬದಹಳ್ಳಿ ಗ್ರಾಮದ ಕೆ.ಬಿ ಜನಾರ್ಧನ ಬಿನ್ ಬಚ್ಚೇಗೌಡ ರವರ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತಿದ್ದ ಜಾಗದಲ್ಲಿ ದಾಳಿ ಮಾಡಲಾಗಿ ಸ್ಥಳದಲ್ಲಿದ್ದಂತಹ ಜನರು ಓಡಿ ಹೋಗಿದ್ದು ಸ್ಥಳದಲ್ಲಿ ಪರಿಶೀಲಿಸಲಾಗಿ 1) ಬೆಂಗಳೂರು ವಿಸ್ಕಿಯ ಮದ್ಯ ತುಂಬಿದ 90 ಎಂ.ಎಲ್ ನ 7 ಟೆಟ್ರಾ ಪ್ಯಾಕೇಟುಗಳು, 2) ರಾಜ ವಿಸ್ಕಿಯ ಮದ್ಯ ತುಂಬಿದ 90 ಎಂ.ಎಲ್ ನ 6 ಟೆಟ್ರಾ ಪಾಕೇಟುಗಳು 3) ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ ಮದ್ಯ ತುಂಬಿದ 90 ಎಂ.ಎಲ್ ನ 4 ಟೆಟ್ರಾ ಪ್ಯಾಕೇಟುಗಳು 4) ಬ್ಯಾಗ್ ಪೈಪರ್ ಡೀಲಕ್ಸ್ ವಿಸ್ಕಿಯ ಮದ್ಯ ತುಂಬಿದ 180 ಎಂ.ಎಲ್ ನ ಒಂದು ಟೆಟ್ರಾ ಪಾಕೇಟು, 5) ಓಲ್ಡ್ ಟವರೆನ್ ವಿಸ್ಕಿಯ ಮದ್ಯ ತುಂಬಿದ 180 ಎಂ.ಎಲ್ ನ ಒಂದು ಟೆಟ್ರಾ ಪಾಕೇಟು, 6) ಹೈವಾರ್ಡ್ಸ್ ಚೀಯರ್ಸ್ ವಿಸ್ಕಿಯ 90 ಎಂ.ಎಲ್ ನ 2 ಖಾಲಿ ಟೆಟ್ರಾ ಪಾಕೇಟುಗಳು, 7) ಎರಡು ಪ್ಲಾಸ್ಟಿಕ್ ಗ್ಲಾಸುಗಳು, 8) ಒಂದು ಲೀಟರ್ ನೀರಿನ ಖಾಲಿ ವಾಟರ್ ಬಾಟಲ್ ಇರುತ್ತೆ. ವಶಪಡಿಸಿಕೊಂಡ ಮದ್ಯವು ಒಟ್ಟು 1,890 ಎಂ.ಎಲ್ ಇದ್ದು ಒಟ್ಟು ಬೆಲೆ 740 ರೂಗಳಾಗಿರುತ್ತೆ. ಮಾಲನ್ನು ಪಂಚರ ಸಮಕ್ಷಮ ನಮ್ಮ ವಶಕ್ಕೆ ಪಡೆದುಕೊಂಡು ಸ್ಥಳದಲ್ಲಿದ್ದ ಅಸಾಮಿ ಕೆ.ಬಿ ಜಾನರ್ಧನ ಬಿನ್ ಬಚ್ಚೇಗೌಡ, 39 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಕಂಬದಹಳ್ಳಿ, ಶಿಡ್ಲಘಟ್ಟ ತಾಲ್ಲೂಕು ರವರನ್ನು ವಶಕ್ಕೆ ಪಡೆದುಕೊಂಡು ವಶಕ್ಕೆಪಡೆದುಕೊಂಡ ಮಾಲನ್ನು ಮತ್ತು ಅರೋಪಿಯನ್ನು ವಶಕ್ಕೆ ನೀಡುತಿದ್ದು ಮುಂದಿನ ಕಾನೂನು ರೀತ್ಯಾ ಕ್ರಮಕೈಗೊಳ್ಳಬೆಕೆಂದು ನೀಡಿದ ವರದಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

7) ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.310/2020 ಕಲಂ: 279,337 ಐ.ಪಿ.ಸಿ:-

          ದಿನಾಂಕ:-30/11/2020 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕೃಷ್ಣಪ್ಪ ಬಿನ್ ಲೇಟ್ ನರಸಿಂಹಯ್ಯ, 60 ವರ್ಷ, ನಾಯಕರು, ಕೂಲಿ ಕೆಲಸ, ವಾಸ-ಚಿಂತಡಪಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ನರಸಿಂಹಯ್ಯ ಮತ್ತು ಅಶೋಕ ಗಂಡು ಮಕ್ಕಳಿದ್ದು, ತನ್ನ 2 ನೇ ಮಗನಾದ ಅಶೋಕ್ (35 ವರ್ಷ) ರವರು ಚಿಕ್ಕಬಳ್ಳಾಪುರ ತಾಲ್ಲೂಕು ದಿಬ್ಬೂರು ಗ್ರಾಮದ ವಾಸಿ ರಶ್ಮಿ ರವರೊಂದಿಗೆ ಮದುವೆಯಾಗಿದ್ದು, ತನ್ನ ಸೊಸೆಯಾದ ರಶ್ಮಿ ರವರು ಹೆರಿಗೆಗಾಗಿ ತನ್ನ ತವರು ಮನೆಗೆ ಹೋಗಿದ್ದು, ಈ ದಿನ ದಿನಾಂಕ 30/11/2020 ರಂದು 1-15 ಗಂಟೆ ಸಮಯದಲ್ಲಿ ತನ್ನ ಮಗನಾದ ಅಶೋಕ್ ರವರು ತನ್ನ ಹೆಂಡತಿ ಮಕ್ಕಳನ್ನು ನೋಡಿಕೊಂಡು ಬರುತ್ತೇನೆಂದು ತಮ್ಮ ಗ್ರಾಮದಿಂದ ಕೆಎ-08-ಜೆ-2146 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ ಬಂದಿದ್ದು ಇದೇ ದಿನ ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ತಿಪ್ಪೇನಹಳ್ಳಿ-ಆನೂರು ಗ್ರಾಮದ ಮದ್ಯೆ ಇರುವ ಸುರೇಂದ್ರ ಗೌಡ ರವರ ಜಮೀನಿನ ಮುಂಭಾಗದ ರಸ್ತೆಯಲ್ಲಿ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಆ ಸಮಯದಲ್ಲಿ ತನ್ನ ಮುಂಬದಿಯಿಂದ ಅಂದರೆ ಆನೂರು ಕಡೆಯಿಂದ ಬಂದ ಕೆಎ-40-ಇಡಿ-0846 ನೊಂದಣಿ ಸಂಖ್ಯೆಯ ಎಫ್,ಜಡ್ ದ್ವಿ ಚಕ್ರ ವಾಹನವನ್ನು ಅದರ ಸವಾರನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮಗನ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ತನ್ನ ಮಗನ ಬಲ ಕಣ್ಣಿಗೆ, ತಲೆಗೆ, ಎಡ ಕಾಲಿಗೆ ಮತ್ತು ಕೈಗಳಿಗೆ ರಕ್ತಗಾಯಗಳಾಗಿದ್ದು, ಅಪಘಾತವನ್ನುಂಟು ಮಾಡಿದ ಸವಾರನಿಗೂ ಗಾಯಗಳಾಗಿದ್ದು ಆ ಸಮಯದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಯಾರೋ ಸಾರ್ವಜನಿಕರು ಗಾಯಾಳುಗಳನ್ನು ಉಪಚರಿಸಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಟ್ಟಿದ್ದು, ನಂತರ ಯಾರೋ ತಮ್ಮ ಮನೆಯ ಬಳಿ ಬಂದು ತನಗೆ ವಿಷಯವನ್ನು ತಿಳಿಸಿದ್ದು, ಕೂಡಲೇ ತಾನು ಮತ್ತು ತನ್ನ ದೊಡ್ಡ ಮಗನಾದ ನರಸಿಂಹಯ್ಯ ರವರು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಬಳಿ ಬಂದು ನೋಡಲಾಗಿ ವಿಷಯ ನಿಜವಾಗಿರುತ್ತದೆ. ನಂತರ ಇಲ್ಲಿನ ವೈದ್ಯರ ಸಲಹೆಯ ಮೇರೆಗೆ ಗಾಯಾಳುವಾಗಿರುವ ತನ್ನ ಮಗ ಅಶೋಕ್ ರವರನ್ನು ಇನ್ನು ಹೆಚ್ಚಿನ ಚಿಕಿತ್ಸೆಗೆ ತನ್ನ ಮಗ ನರಸಿಂಹಯ್ಯ ರವರು ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾನೆ. ಆದ ಕಾರಣ ಸದರಿ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕೆಎ-40-ಇಡಿ-0846 ನೊಂದಣಿ ಸಂಖ್ಯೆಯ ಎಫ್,ಜಡ್ ದ್ವಿ ಚಕ್ರ ವಾಹನದ ಚಾಲಕನ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

8) ಶಿಡ್ಲಘಟ್ಟ ಪುರ  ಪೊಲೀಸ್ ಠಾಣೆ ಮೊ.ಸಂ.130/2020 ಕಲಂ: 379  ಐ.ಪಿ.ಸಿ & 41(D),102 ಸಿ.ಆರ್.ಪಿ.ಸಿ:-

          ಶಿಡ್ಲಘಟ್ಟ ಘನ ಹಿರಿಯ ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ. ಪದ್ಮಾವತಮ್ಮ ಪಿ.ಎಸ್.ಐ (ಅಪರಾದ ವಿಭಾಗ) ಆದ ನಾನು ದಿನಾಂಕ:30.11.2020 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ನಾನು ಅಪರಾದ ಸಿಬ್ಬಂದಿಯವರಾದ ಹೆಚ್.ಸಿ.61 ಶ್ರೀನಿವಾಸ ಮತ್ತು ಪಿ.ಸಿ.209 ಶಶಿಕುಮಾರ್ ರವರೊಂದಿಗೆ ಠಾಣೆಯಲ್ಲಿ ವರದಿಯಾದ ಅಪರಾದ ಕಳುವು ಪ್ರಕರಣಗಳ ಪತ್ತೆ ಬಗ್ಗೆ ಠಾಣೆಯಿಂದ ಹೊರಟು ಶಿಡ್ಲಘಟ್ಟ ನಗರದ ಟಿ.ಬಿ ರಸ್ತೆ, ಅಶೋಕ ರಸ್ತೆ ಕಡೆಗಳಲ್ಲಿ ಗಸ್ತು ಮಾಡಿಕೊಂಡು ದಿಬ್ಬೂರಹಳ್ಳಿ ರಸ್ತೆಯಲ್ಲಿ ಸಂತೋಷನಗರ ಕಡೆ ಹೋಗುತ್ತಿದ್ದಾಗ ಬೆಳಿಗ್ಗೆ ಸುಮಾರು 11.30 ಗಂಟೆಯಲ್ಲಿ ದಿಬ್ಬೂರಹಳ್ಳಿ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಯಾರೋ ಒಬ್ಬ ಆಸಾಮಿ ನಂಬರ್ ಪ್ಲೇಟ್ ಇಲ್ಲದ ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನ ರಾಜೀವ್ ಗಾಂಧಿ ಲೇಔಟ್ ಕಡೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದು, ಸದರಿ ಆಸಾಮಿಯನ್ನು ತಡೆದು ನಿಲ್ಲಿಸಿ ವಾಹನದ ದಾಖಲೆಗಳನ್ನು ಕೇಳಲಾಗಿ ತನ್ನ ಬಳಿ ಯಾವುದೇ ದಾಖಲೆಗಳಿಲ್ಲವೆಂದು ತಿಳಿಸಿರುತ್ತಾನೆ. ನಂತರ ಆತನ ಹೆಸರು ವಿಳಾಸ ಕೇಳಲಾಗಿ ಎ.ಹಸೇನ್ @ ಸದ್ದಾಂ ಬಿನ್ ಅಕ್ರಂಪಾಷ, ಸುಮಾರು 19 ವರ್ಷ, ಮುಸ್ಲಿಂ, ಕೂಲಿ ಕೆಲಸ, ಅನ್ಸಾರಿಯಾ ಮೊಹಲ್ಲಾ, ರಹಮತ್ ನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾನೆ. ನಂತರ ದ್ವಿಚಕ್ರ ವಾಹನದ ಬಗ್ಗೆ ಸದರಿ ವಾಹನ ಯಾರದು ಎಲ್ಲಿಂದ ತಂದಿರುವುದೆಂತ ವಿಚಾರ ಮಾಡಲಾಗಿ ಸದರಿ ದ್ವಿಚಕ್ರ ವಾಹನವನ್ನು ತಾನು ಮತ್ತು ತನ್ನ ಸ್ನೇಹಿತರಾದ ವಾಸಿಂ, ಸಲ್ಮಾನ್ ಮತ್ತು ಮಹಮದ್ @ ಕೂನ್ ಶಿಡ್ಲಘಟ್ಟ ಟೌನ್ ರವರೊಂದಿಗೆ 3-4 ತಿಂಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಕಳುವು ಮಾಡಿಕೊಂಡು ಬಂದಿರುವುದಾಗಿ ಮತ್ತೊಂದು ಬಾರಿ ತನ್ನ ಸ್ನೇಹಿತರಾದ ವಾಸಿಂ ಮತ್ತು ಮಹಮದ್ ಕೂನ್ ಎಂಬುವರು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದ್ದು, ಸಮಂಜಸ ಉತ್ತರ ನೀಡಿರುವುದಿಲ್ಲ. ಸದರಿ ದ್ವಿಚಕ್ರ ವಾಹನವನ್ನು ಇವರು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದು ಯಾವುದೇ ದಾಖಲೆಗಳು ಇಲ್ಲದೆ ನಂಬರ್ ಪ್ಲೇಟ್ ಕಿತ್ತುಹಾಕಿ ಚಾಲನೆ ಮಾಡುತ್ತಿರುವುದಾಗಿ ಅನುಮಾನ ಕಂಡು ಬಂದಿದ್ದರಿಂದ ಸದರಿ ಆಸಾಮಿಯನ್ನು ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಮಹಜರ್ ಮಾಡಿ ಅಮಾನತ್ತು ಪಡಿಸಿಕೊಂಡಿರುತ್ತೆ. ಆರೋಪಿ ವಶದಲ್ಲಿರುವ ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನ ನಂಬರ್ ಇಲ್ಲದೆ ಇದ್ದು ಇದರ ಇಂಜಿನ್ ನಂಬರ್ JF50E-T-5804290   ಆಗಿದ್ದು ಇದರ ಬೆಲೆ ಸುಮಾರು 80,000/-ರೂ ಬೆಲೆ ಬಾಳುವುದಾಗಿರುತ್ತೆ.  ದ್ವಿಚಕ್ರ ವಾಹನ ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 13.00 ಗಂಟೆಗೆ ಠಾಣೆಗೆ ಕರೆತಂದು ಮುಂದಿನ ಕ್ರಮದ ಬಗ್ಗೆ ಠಾಣಾ ಮೊ.ಸಂ.130/2020 ಕಲಂ.41 ಕ್ಲಾಸ್ (ಡಿ) 102 ಸಿ.ಆರ್.ಪಿ.ಸಿ ಮತ್ತು 379 ಐಪಿಸಿ ರೀತ್ಯಾ ಸ್ವತಃ ಪ್ರಕರಣ ದಾಖಲಿಸಿರುತ್ತೇನೆ.