ದಿನಾಂಕ : 30/09/2019ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 308/2019 ಕಲಂ. 15(ಎ), 32(3) ಕೆ.ಇ  ಆಕ್ಟ್:-

     ದಿನಾಂಕ: 29-09-2019 ರಂದು ರಾತ್ರಿ 8-15 ಗಂಟೆಗೆ ಪಿ.ಎಸ್.ಐ ಸಾಹೇಬರವರು ಮಾಲು ಮತ್ತು ಆರೋಪಿಯನ್ನು ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 29-09-2019 ರಂದು ಸಂಜೆ 7-00 ಗಂಟೆಯಲ್ಲಿ ಠಾಣೆಯಲ್ಲಿರುವಾಗ, ಬಾಗೇಪಲ್ಲಿ ತಾಲ್ಲೂಕು, ಕಾಪುಚಿನ್ನೇಪಲ್ಲಿ ಗ್ರಾಮದ ನಂಜುಂಡಪ್ಪ ಬಿನ್ ಚಿಕ್ಕನಾರಾಯಣಪ್ಪ ರವರ ಬಾಬತ್ತು ಚಿಲ್ಲರೆ ಅಂಗಡಿಯ ಬಳಿ ಯಾರೋ ಕೆಲವರು ಕಾನೂನು ಬಾಹಿರವಾಗಿ ಮಧ್ಯಪಾನ ಮಾಡುತ್ತಿರುವುದಾಗಿ  ತಮಗೆ ಬಂದ ಮಾಹಿತಿಯ ಮೇರೆಗೆ ಸಿಬ್ಬಂದಿಗಳಾದ ಪಿ.ಸಿ 33 ಕೃಷ್ಣಪ್ಪ, ಪಿ.ಸಿ 71 ಆನಂದ್ ಮತ್ತು ಜೀಪ್ ಚಾಲಕ ಅಲ್ತಾಫ್ ಪಾಷ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ-ಕೆಎ-40,ಜಿ-537 ವಾಹನದಲ್ಲಿ ಬಾಗೇಪಲ್ಲಿ ಪುರದ ಡಿ.ವಿ.ಜಿ ರಸ್ತೆಯಲ್ಲಿದ್ದ ನಮ್ಮನ್ನು ಕರೆದು ವಿಚಾರವನ್ನು ತಿಳಿಸಿ ಮೇಲ್ಕಂಡ ಸ್ಥಳದಲ್ಲಿ ದಾಳಿಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ನಾವುಗಳು ಒಪ್ಪಿಕೊಂಡೆವು. ಅದರಂತೆ ಪಂಚರಾದ ನಾವುಗಳು ಮತ್ತು ಪೊಲೀಸರು ಮೇಲ್ಕಂಡ ಸ್ಥಳಕ್ಕೆ ಸಂಜೆ ಸಂಜೆ 7:15 ಗಂಟೆಗೆ ಹೋಗಿ ನೋಡಲಾಗಿ ನಂಜುಂಡಪ್ಪ ಬಿನ್ ಚಿಕ್ಕನಾರಾಯಣಪ್ಪ ರವರ ಬಾಬತ್ತು ಚಿಲ್ಲರೆ ಅಂಗಡಿಯ ಬಳಿ ಯಾರೋ ಕೆಲವು ಜನರು ಮಧ್ಯಪಾನ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿ ಹೋದರು. ಪೊಲೀಸರು ಪಂಚರಾದ ನಮ್ಮಗಳ ಸಮಕ್ಷಮ ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್. ನ Haywards cheers whisky’s  ಯ 04  ಖಾಲಿ ಟೆಟ್ರಾ ಪ್ಯಾಕೇಟ್ ಗಳು, ಒಂದು ಲೀಟರ್ ನ 2 ಖಾಲಿ ವಾಟರ್ ಬಾಟಲ್ ಗಳು ಮತ್ತು ಮದ್ಯಸೇವನೆ ಮಾಡಿರುವ 04 ಖಾಲಿ  ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 90 ಎಂ.ಎಲ್. ನ Haywards cheers whisky’s 11 ಟೆಟ್ರಾ ಪ್ಯಾಕೇಟ್ ಗಳು ಇದ್ದು, ಒಟ್ಟು 0.990 ಲೀಟರ್ ಮದ್ಯವಿದ್ದು ಸದರಿ ಮದ್ಯದ ಅಂದಾಜು ಮೌಲ್ಯ 333/- ರೂಪಾಯಿಗಳಾಗಿರುತ್ತದೆ. ಸದರಿ ಸ್ಥಳದ ಮಾಲೀಕನ ಹೆಸರು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ನಂಜುಂಡಪ್ಪ ಬಿನ್ ಚಿಕ್ಕನಾರಾಯಣಪ್ಪ 60 ವರ್ಷ, ಒಕ್ಕಲಿಗರು, ಅಂಗಡಿ ವ್ಯಾಪಾರ, ಕಾಪುಚಿನ್ನೇಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ವ್ಯಕ್ತಿಗೆ ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ನೀಡಿರುವುದಕ್ಕೆ ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ, ತನಗೆ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿರುತ್ತಾನೆ. ಸ್ಥಳದಲ್ಲಿದ್ದ 90 ಎಂ.ಎಲ್. ನ Haywards cheers whisky’s ಯ 04 ಖಾಲಿ ಟೆಟ್ರಾ ಪ್ಯಾಕೇಟ್ ಮತ್ತು ಒಂದು ಲೀಟರ್ ನ 2 ಖಾಲಿ ವಾಟರ್ ಬಾಟಲ್ ಗಳು ಮತ್ತು ಮದ್ಯಸೇವನೆ ಮಾಡಿರುವ 04 ಖಾಲಿ  ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 90 ಎಂ.ಎಲ್. ನ Haywards cheers whisky’s 11 ಟೆಟ್ರಾ ಪ್ಯಾಕೇಟ್ಗಳನ್ನು ಪಂಚಾಯ್ತಿದಾರರಾದ ನಮ್ಮಗಳ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ರಾತ್ರಿ 8-15 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ  ಠಾಣಾಧಿಕಾರಿಗಳಿಗೆ  ವರಧಿಯನ್ನು  ನೀಡಿರುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 309/2019 ಕಲಂ. 143-147-323-341-332-353-504-506 ರೆ/ವಿ 149 ಐ.ಪಿ.ಸಿ:-

     ದಿನಾಂಕ:  ರಂದು ಪಿರ್ಯಾದಿದಾರರಾದ ಶ್ರೀ ರಾಮಚಂದ್ರಪ್ಪ, ಎ.ಎಸ್.ಐ, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಠಾಣೆಗೆ  ಹಾಜರಾಗಿ ನೀಡಿದ ಕಂಪ್ಯೂಟರ್ ಟೈಪ್ ಮಾಡಿರುವ ದೂರಿನ ಸಾರಾಂಶವೇನೆಂದರೆ, ದಿನಾಂಕ:29-09-2019 ರಂದು ಮೇಲಾಧಿಕಾರಿಗಳ ಸೂಚನೆ ಮೇರೆಗೆ ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಪುರದ ಡಿವಿಜಿ ರಸ್ತೆಯ ಎಸ್.ಬಿ.ಎಂ ವೃತ್ತದಲ್ಲಿ ನಾನು ಮತ್ತು ಗೃಹರಕ್ಷಕ ಸಿಬ್ಬಂದಿಯಾದ ಸುರೇಶ್ ರವರೊಂದಿಗೆ ಐ.ಎಂ.ವಿ ಪ್ರಕರಣಗಳನ್ನು ದಾಖಲು ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾಗ ಗೂಳೂರು ವೃತ್ತದ ಕಡೆಯಿಂದ ಬಂದ ಕೆ.ಎ-50-ಎನ್-3317 ರ ಕಾರಿನ ಚಾಲಕ ಸೀಟ್ ಬೆಲ್ಟ್ ಹಾಕದೇ ಬರುತ್ತಿದ್ದು, ಕೂಡಲೇ ನಾನು ಕಾರನ್ನು ನಿಲ್ಲಿಸಿ ನೀವು ಸೀಟ್ ಬೆಲ್ಟ್ ಹಾಕಿಲ್ಲ 500/-ರೂ ದಂಡದ ಮೊತ್ತವನ್ನು ಹಾಕಿದ್ದು, ಸದರಿ ಆಸಾಮಿ 200/- ರೂ ಕೊಡಲು ಬಂದಿದ್ದು, ತಾನು ದಂಡದ ಮೊತ್ತ 500/-ರೂ ಎಂತ ಹೇಳಿದ್ದಕ್ಕೆ ಬಿಲ್ಲನ್ನು ಹಾಕುವಂತೆ ಹೇಳಿದ್ದು, ಅದರಂತೆ ತಾನು ಬಿಲ್ಲನ್ನು ಹಾಕಿದಾಗ ಕಾರಿನ ಚಾಲಕ ಮತ್ತು ಕಾರಿನಲ್ಲಿದ್ದ ಮುನಿರೆಡ್ಡಿ ಎಂಬುವವನು ಇದ್ದಕ್ಕಿದ್ದಂತೆ “ನೀನು ನೇಮ್ ಪ್ಲೇಟ್ ಹಾಕದೇ ಏಕೆ ನನಗೆ ದಂಡ ಹಾಕಿದೆ? ನೀನು ಯಾವ ಸಾಚಾ ನನ್ನ ಮಗಾ, ಬೋಳಿ ನನ್ನ ಮಗಾ ಎಂದು ಅವಾಚ್ಯ ಶಬ್ದಗಳಿಂದ ಬೈದನು. ಆಗ ನಾನು ನನ್ನ ನೇಮ್ ಪ್ಲೇಟ್ ಕಿತ್ತು ಹೋಗಿದೆ ಜೇಬಿನಲ್ಲಿ ಇದೆ ನೋಡಿ ಎಂದು ಹೇಳಿದಾಗ ಮೇಲ್ಕಂಡವರು ಉದ್ದೇಶಪೂರ್ವಕವಾಗಿ ನನ್ನ ಮೇಲೆ ಗಲಾಟೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ನನ್ನನ್ನು ಕೈಗಳಿಂದ ಹಿಡಿದು ಎಳೆದಾಡಿದರು. ಆಗ ಮೇಲ್ಕಂಡವರೊಂದಿಗೆ ಇತರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂತ ಪ್ರಾಣ ಬೆದರಿಕೆಯನ್ನು ಹಾಕಿರುವುದಾಗಿ ನೀಡಿದ ದೂರಾಗಿರುತ್ತೆ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 183/2019 ಕಲಂ. 323-324-504-506 ರೆ/ವಿ 34 ಐ.ಪಿ.ಸಿ:-

     ಈ ದಿನ ಬೆಳಿಗ್ಗೆ 8.45 ಗಂಟೆಗೆ ಜಿಲ್ಲಾ ಸರ್ಕಾರಿ ಆಸ್ವತ್ರೆಯಿಂದ ಬಂದ ಮೇಮೋವನ್ನು ಪಡೆದು, ಗಾಯಾಳು ವೆಂಕಟರಮಣ ರವರ ಹೇಳಿಕೆಯನ್ನು ಪಡೆದಿದ್ದರ ಸಾರಾಂಶವೇನೆಂದರೆ, ದಿನಾಂಕ: 28.09.2019 ರಂದು    ಪಿರ್ಯಾದಿ ವೆಂಕಟರಮಣ ಬಿನ್ ಮುನಿವೆಂಕಟಪ್ಪ ಉನಕಲಿ ಗ್ರಾಮ, ಶ್ರೀನಿವಾಸಪುರ ನಗರ, ಕೋಲಾರ ಜಿಲ್ಲೆ ರವರು ತನ್ನ ಹೆಂಡತಿಯಾದ ಶ್ರೀಮತಿ ರೆಡ್ಡಮ್ಮ ರವರೊಂದಿಗೆ ತನ್ನ ಮಗಳನ್ನು ನೋಡಲು ಚಿಕ್ಕಬಳ್ಳಾಪುರಕ್ಕೆ ಬಂದಿದ್ದು,  ದಿನಾಂಕ: 29.09.2019 ರಂದು  ಬೆಳಿಗ್ಗೆ 7.15 ಗಂಟೆಯಲ್ಲಿ ನಗರದ ಬುದ್ಧ ಸರ್ಕಲ್ ನಲ್ಲಿ ನ್ಯೂಟನ್ ಸ್ಕೂಲ್ ಮುಂದೆ ತನ್ನ ಮಗಳ ಮನೆಗೆ ಬಿಸ್ಕೆಟ್ ಮತ್ತು ಹಾಲು ತೆಗೆದುಕೊಂಡು ಬರುತ್ತಿದ್ದಾಗ ಶ್ರೀನಿವಾಸ ಪುರ ನಗರದ ವಾಸಿಗಳಾದ ಚಲಪತಿ ಯಶೋಧ ಎಂಬುವವರು KA-40, W-2419  ದ್ವಿ ಚಕ್ರ ವಾಹನದಲ್ಲಿ ಮತ್ತು ವೆಂಕಟರಮಣ ಹಾಗೂ ಸೋಮು ಎಂಬುವವರು KA 01, 7230 ನಂಬರಿನ ಆಟೋದಲ್ಲಿ ಈ ಹಿಂದೆ ಶ್ರೀನಿವಾಸಪುರ ನಗರದಲ್ಲಿ ನಡೆದ ಚುನಾವಣೆಯ ಹಿನ್ನೆಲೆಯಲ್ಲಿ  ಹಿಂಬಾಲಿಸಿಕೊಂಡು ಬಂದು ಪಿರ್ಯಾದಿ ವೆಂಕಟರಮಣ ಮತ್ತು ಆತನ ಹೆಂಡತಿಯನ್ನು ನಿಲ್ಲಿಸಿ ಅವಾಚ್ಯ ಶಬ್ಧಗಳಿಂದ ಬೈದು, ಚಲಪತಿ ಹಾಗೂ ಯಶೋಧ ರವರು ವೆಂಕಟರವರಣ ರವರಿಗೆ ಹಿಡಿದುಕೊಂಡು ಹೊಡೆದು, ನಾವು ಹೊಂಚುಹಾಕುತ್ತಿದ್ದರೆ ತಪ್ಪಿಸಿಕೊಂಡು ತಿರುಗಾಡುತ್ತಿದ್ದೀರಾ, ನೀವು ಇಲ್ಲಿಗೆ ಬಂದಿರುವುದನ್ನು ತಿಳಿದು, ಹಿಂಬಾಲಿಸಿಕೊಂಡು ಬಂದು ಹೊಂಚುಹಾಕುತ್ತೀದ್ದೀವಿ ಎಂದು ಹೇಳಿ ವೆಂಕಟರಮಣ ಎಂಬುವವನು ಆಟೋದಲ್ಲಿದ್ದ ರಾಡ್ ನ್ನು ಎತ್ತಿಕೊಂಡು ಕೆನ್ನೆಗೆ ಹೊಡೆದು, ಸೋಮು ಎಂಬುವವನು ರಾಡ್ ನ್ನು ಕಿತ್ತುಕೊಂಡು ತನ್ನ ಬಲಗೈಕೆ ಹೊಡೆದು ಮೂಳೆಗೆ ಗಾಯ ಮಾಡಿದ ಅಷ್ಟರಲ್ಲಿ ಚಿಕ್ಕಬಳ್ಳಾಪುರ ನಗರದ ಮುನ್ಸಿಪಲ್ ಕಾಲೇಜು ಹಿಂಭಾಗದ ವಾಸಿಗಳಾದ ರಾಜಣ್ಣ ಮತ್ತು ನಾಗಪ್ಪ ರವರು ಬಂದು ಜಗಳ ಬಿಡಿಸಿರುತ್ತಾರೆ. ತನ್ನ ಕೈಗೆ ಏಟಾಗಿದ್ದರಿಂದ ನೋವಿಗೆ ನಾನು ನನ್ನ ಹೆಂಡತಿ ಸರ್ಕಾರಿ ಆಸ್ವತ್ರೆಗೆ ದಾಖಲಾಗಿರುತ್ತೇವೆ. ನಮ್ಮನ್ನು ಹಿಂಬಾಲಿಸಿಕೊಂಡು ಬಂದು ನನ್ನನ್ನು ಬೈದು ಹೊಡೆದು ಪ್ರಾಣಬೆದರಿಕೆ ಹಾಕಿರುವ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಬೆಳಿಗ್ಗೆ 11.15 ಗಂಟೆಗೆ ಠಾಣೆಗೆ ಬಂದು ಪ್ರಕರಣವನ್ನು ದಾಖಲಿಸಿರುತ್ತೇನೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.366/2019 ಕಲಂ. 323-324 ರೆ/ವಿ 34 ಐ.ಪಿ.ಸಿ:-

     ಈ ದಿನ ದಿನಾಂಕ:29.09.2019 ರಂದು ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಸಯ್ಯದ್ ದಸ್ತಗಿರಿ @ಲಿಲ್ಲು ಬಿನ್ ಸಯ್ಯದ್  ಚಾಂದ್ ಪಾಷಾ, ವಿನಾಯಕ ನಗರ  ಬೆಂಗಳುರು ರವರಿಂದ ಸಂಜೆ 06-45 ಗಂಟೆಯಲ್ಲಿ ಠಾಣೆಗೆ ಪಡೆದುಕೊಂಡು ಬಂದ ಹೇಳಿಕೆಯ ಸಾರಾಂಶವನೆಂದರೆ,ತಾನು ಬೆಂಗಳೂರಿನ ವಿನಾಯಕ ನಗರದ ವಾಸಿಯಾಗಿದ್ದು ಆಟೋ ಮೆಕಾನಿಕ್ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ:27.09.2019 ರಂದು ರಾತ್ರಿ ತನ್ನ ಬಳಿ ಇದ್ದ ಕೆ.ಎ.01-ಹೆಚ್.ಎಪ್.1345 ನೋಂದಣಿ ಸಂಖ್ಯೆಯ ಸುಜುಕಿ ಆಕ್ಸೀಸ್ ದ್ವೀ ಚಕ್ರ ವಾಹನದಲ್ಲಿಬೆಂಗಳೂರಿನಿಂದ ಮುರುಗಮಲ್ಲಾ ದರ್ಗಾಗೆ ಬಂದು ಶನಿವಾರ ಮುರುಗಮಲ್ಲಾ ದರ್ಗಾದಲ್ಲಿಯೇ ಇದ್ದು ಈ ದಿನ 29.09.2019 ರಂದು ಬೆಳಗ್ಗೆ 06.00 ಗಂಟೆ ಸಮಯದಲ್ಲಿ ಬೆಂಗಳೂರಿಗೆ ಹೋಗುವ ಸಲುವಾಗಿ ತಾನು ಹೋಗುತ್ತಿದ್ದಾಗ ಕಾಗತಿ ಗ್ರಾಮದ ಗೇಟ್ ನಲ್ಲಿ ತನ್ನ ದ್ವೀ ಚಕ್ರವಾಹನವನ್ನು ನಿಲ್ಲಿಸಿ ರಸ್ತೆಯ ಪಕ್ಕದಲ್ಲಿದ್ದ ಒಂದು ಮನೆಯ ಮುಂದೆ ಒಬ್ಬ ಮಹಿಳೆಯು ಕಸ ಗುಡಿಸುತ್ತಿದ್ದು ತಾನು ಆಕೆಯ ಬಳಿ ಹೋಗಿ ಏಕಾಏಕಿ ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತುಕೊಳ್ಳಲು ಹೋದಾಗ ಆಕೆಯು ಪ್ರತಿಭಟಿಸಿದ್ದು ತಾನು ಆಕೆಯನ್ನು ಬೆದರಿಸಿ ಸದರಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ದ್ವಿಚಕ್ರವಾಹನವನ್ನು ಸ್ಟಾರ್ಟ್ ಮಾಡಿಕೊಂಡು ಹೋಗುತ್ತಿದ್ದಾಗ, ಆಕೆಯು ಜೋರಾಗಿ ಕಿರುಚಿಕೊಂಡಿದ್ದು ಆತುರದಲ್ಲಿ ತನ್ನ ದ್ವಿ ಚಕ್ರವಾಹನ ಸ್ಕಿಡ್ ಆಗಿ ತಾನು ದ್ವಿ ಚಕ್ರವಾಹನ ಸಮೇತಾ ಕೆಳಗೆ ಬಿದ್ದು ಹೋಗಿ ತನ್ನ ಬಲ ಬಾಗದ ಕಣ್ಣಿನ ಹುಬ್ಬಿನ ಮೇಲೆ ರಕ್ತ ಗಾಯ ಮತ್ತು ಎಡಕೈಗೆ ತರಚಿದ ಗಾಯಆಗಿರುತ್ತೆ,ಅಷ್ಟರಲ್ಲಿ ಯಾರೋ ಸಾರ್ವಜನಿಕರು ಓಡಿ ಹೋಗುತ್ತಿದ್ದ ತನ್ನನ್ನು ಹಿಡಿದುಕೊಂಡು ಕೈಗಳಿಂದ ತನ್ನ ಮೈಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ.ಅಲ್ಲಿಯೇ ಬಿದಿದ್ದ ಕಲ್ಲಿನಿಂದ ತನ್ನ ಬಲ ಭುಜಕ್ಕೆ ಹೊಡೆದು ತರಚಿದ ಗಾಯವನ್ನುಂಟು ಮಾಡಿರುತ್ತಾರೆ.ನಂತರ ಗಾಯಗೊಂಡಿದ್ದ ತನ್ನನ್ನು ಯಾರೋ ಸಾರ್ವಜನಿಕರು ಯಾವುದೋ ಆಟೋದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ತನ್ನ ಮೇಲೆ ಹಲ್ಲೆ ಮಾಡಿದ ಯಾರೋ ಸಾರ್ವಜನಿಕರನ್ನು ಪತ್ತೆ ಮಾಡಿ ಸೂಕ್ತ ಕಾನೂನು ರೀತ್ಯಾಕ್ರಮ ಜರುಗಿಸಲು ಕೊಟ್ಟ ದೂರಾಗಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.265/2019 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ: 30/09/2019 ರಂದು ಮದ್ಯಾಹ್ನ 12-30 ಗಂಟೆಗೆ ನ್ಯಾಯಾಲಯದ ಪಿಸಿ 509 ರವರು ಘನ ನ್ಯಾಯಾಲಯದ ಅನುಮತಿ ಪ್ರತಿಯನ್ನು ತಂದು ಹಾಜರುಪಡಿಸಿದ್ದನ್ನು  ಪಡೆದು  ಸಾರಾಂಶವೇನೆಂದರೆ ದಿನಾಂಕ:28-09-2019 ರಂದು  ಪಿರ್ಯಾದಿದಾರರಾದ ಶ್ರೀ ನಾರಾಯಣಸ್ವಾಮಿ ಜಿ.ಸಿ , ಪೊಲೀಸ್ ಇನ್ಸ್ ಪೆಕ್ಟರ್ ,ಚಿಂತಾಮಣಿ ನಗರ ರವರು  ಸಂಜೆ 4-00 ಗಂಟೆಯಲ್ಲಿ ತಾನು ಸಿಬ್ಬಂದಿಯವರಾದ ಸಿ.ಪಿ.ಸಿ 524, ಸಿ.ಪಿ.ಸಿ 190 ವೇಣು ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ : ಕೆ.ಎ 40 ಜಿ 356  ವಾಹನದಲ್ಲಿ ಗಜಾನನ ವೃತ್ತ, ಪ್ಲವರ್ ಸರ್ಕಲ್ ಕಡೆಗಳಲ್ಲಿ ನಗರಗಸ್ತಿನಲ್ಲಿದ್ದಾಗ, ನಗರದ ಎ.ಪಿ.ಎಂ.ಸಿ ಮಾರುಕಟ್ಟೆಯ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಅದರಂತೆ ಪಂಚರನ್ನು ಹಾಗು ಸಿಬ್ಬಂದಿಯೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯೆಕ್ತಿಯು ರಸ್ತೆಯ ಬದಿಯಲ್ಲಿ ನಿಂತುಕೊಂಡು ಜನರನ್ನು ಗುಂಪು ಸೇರಿಸಿಕೊಂಡು 1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಹಣ ಕಟ್ಟುವಂತೆ ಪ್ರೇರೆಪಿಸುತ್ತಾ, ಮಟ್ಕಾ ಚೀಟಿ ಬರೆಯುತ್ತಿದ್ದನು. ತಾವು ಪಂಚರೊಂದಿಗೆ ಸುತ್ತುವರೆದು, ದಾಳಿ ಮಾಡುವಷ್ಟರಲ್ಲಿ ಅಲ್ಲಿದ್ದ ಜನರೆಲ್ಲಾ ಓಡಿ ಹೋಗಿದ್ದು, ಮಟಕಾ ಚೀಟಿ ಬರೆಯುತ್ತಿದ್ದ  ವ್ಯಕ್ತಿಯನ್ನು ಹಿಡಿದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ರವಿ ಬಿನ್ ಲೇಟ್ ನಾರಾಯಣಸ್ವಾಮಿ, 35 ವರ್ಷ, ಪೈಟಿಂಗ್ ಕೆಲಸ, ವೆಂಕಟಗಿರಿ ಕೋಟೆ,ಚಿಂತಾಮಣಿ ಟೌನ್ ಎಂದು ತಿಳಿಸಿದ್ದು, ಆತನನ್ನು ಅಂಗ ಶೋಧನೆ ಮಾಡಲಾಗಿ  520 ರೂ ನಗದು ಹಣ ಇದ್ದು, ಸದರಿ ಹಣದ ಬಗ್ಗೆ ಕೇಳಲಾಗಿ ಇದು ಸಾರ್ವಜನಿಕರಿಂದ ಮಟ್ಕಾ ಆಡಿ ಸಂಪಾದಿಸಿರುವ ಹಣವೆಂತ ತಿಳಿಸಿದ್ದು, ನಗದು ಹಣ, ಒಂದು ಪೆನ್ನು, ಮಟಕಾ ಚೀಟಿಯನ್ನು ಸಂಜೆ 4-15 ಗಂಟೆಯಿಂದ 4-45 ಗಂಟೆಯವರೆಗೆ ಪಂಚನಾಮೆಯೊಂದಿಗೆ ಅಮಾನತ್ತು ಪಡಿಸಿಕೊಂಡು, ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ದೂರನ್ನು ಪಡೆದು ಠಾಣೆಯ ಎನ್.ಸಿ.ಆರ್ ಸಂಖ್ಯೆ 221/2019 ರಂತೆ ದಾಖಲಿಸಿಕೊಂಡು, ಇದು ಅಸಂಜ್ಞೆಯ ಅಪರಾಧವಾಗಿರುವುದರಿಂದ ಘನ ನ್ಯಾಯಾಲಯಾದ ಅನುಮತಿ ಪಡೆದುಕೊಂಡು ಠಾಣಾ ಮೊ.ಸಂ 265/2019 ಕಲಂ 78(3) ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.266/2019 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ: 30/09/2019 ರಂದು ಮದ್ಯಾಹ್ನ 1-00 ಗಂಟೆಗೆ ನ್ಯಾಯಾಲಯದ ಪಿಸಿ 509 ರವರು ಘನ ನ್ಯಾಯಾಲಯದ ಅನುಮತಿ ಪ್ರತಿಯನ್ನು ತಂದು ಹಾಜರುಪಡಿಸಿದ್ದನ್ನು  ಪಡೆದು  ಸಾರಾಂಶವೇನೆಂದರೆ ದಿನಾಂಕ:28-09-2019 ರಂದು ಸಂಜೆ 6-00 ಗಂಟೆಯಲ್ಲಿ ಪಿರ್ಯಾದಿದಾರರಾದ  ಶ್ರೀ ನಾರಾಯಣಸ್ವಾಮಿ ಜಿ.ಸಿ ಪೊಲೀಸ್ ಇನ್ಸ್ ಪೆಕ್ಟರ್ ರವರು ತಾನು ಮತ್ತು  ಸಿಬ್ಬಂದಿಯವರಾದ ಸಿ.ಪಿ.ಸಿ 539 ರವೀಂದ್ರ  ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ : ಕೆ.ಎ 40 ಜಿ 356  ವಾಹನದಲ್ಲಿ ನಗರಗಸ್ತಿನಲ್ಲಿದ್ದಾಗ, ನಗರದ ವೆಂಕಟಗಿರಿ ಕೋಟೆ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ನಾವು ಗಜಾನನ ವೃತ್ತಕ್ಕೆ ಹೋಗಿ ಅಲ್ಲಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ, ಅವರನ್ನು ಜೀಪಿನಲ್ಲಿ ಕರೆದುಕೊಂಡು ವೆಂಕಟಗಿರಿ ಕೋಟೆ ಬಳಿಗೆ ಹೋಗಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಪಂಚರನ್ನು ಮತ್ತು ಸಿಬ್ಬಂದಿಯವರನ್ನು  ಕಾಲ್ನಡಿಗೆಯಲ್ಲಿ ಕರೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ರಸ್ತೆಯ ಬದಿಯಲ್ಲಿ ನಿಂತುಕೊಂಡು ಜನರನ್ನು ಗುಂಪು ಸೇರಿಸಿಕೊಂಡು 1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಹಣ ಕಟ್ಟುವಂತೆ ಪ್ರೇರೆಪಿಸುತ್ತಾ, ಮಟ್ಕಾ ಚೀಟಿ ಬರೆಯುತ್ತಿದ್ದನು. ತಾವು ಪಂಚರೊಂದಿಗೆ ಸುತ್ತುವರೆದು, ದಾಳಿ ಮಾಡುವಷ್ಟರಲ್ಲಿ ಅಲ್ಲಿದ್ದ ಜನರೆಲ್ಲಾ ಓಡಿ ಹೋಗಿದ್ದು, ಮಟಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಮುನ್ನಾ ಬಿನ್ ಅನ್ವರ್ ಸಾಬ್, 44 ವರ್ಷ, ವಾಸ ರಾಯಲ್ ಶಾಲೆ, ಚಿಂತಾಮಣಿ ಟೌನ್ ಎಂದು ತಿಳಿಸಿದ್ದು, ಆತನನ್ನು ಅಂಗ ಶೋಧನೆ ಮಾಡಲಾಗಿ  560 ರೂ ನಗದು ಹಣ ಇದ್ದು, ಸದರಿ ಹಣದ ಬಗ್ಗೆ ಕೇಳಲಾಗಿ ಇದು ಸಾರ್ವಜನಿಕರಿಂದ ಮಟ್ಕಾ ಆಡಿ ಸಂಪಾದಿಸಿರುವ ಹಣವೆಂತ ತಿಳಿಸಿದ್ದು, ನಗದು ಹಣ, ಒಂದು ಪೆನ್ನು, ಮಟಕಾ ಚೀಟಿಯನ್ನು ಸಂಜೆ 6-15 ಗಂಟೆಯಿಂದ 6-45 ಗಂಟೆಯವರೆಗೆ ಪಂಚನಾಮೆಯೊಂದಿಗೆ ಅಮಾನತ್ತು ಪಡಿಸಿಕೊಂಡು, ಮಾಲು, ಆಸಾಮಿ, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ದೂರನ್ನು ಪಡೆದು ಠಾಣೆಯ ಎನ್.ಸಿ.ಆರ್ ಸಂಖ್ಯೆ 222/2019 ರಂತೆ ದಾಖಲಿಸಿಕೊಂಡು, ಇದು ಅಸಂಜ್ಞೆಯ ಅಪರಾಧವಾಗಿರುವುದರಿಂದ ಘನ ನ್ಯಾಯಾಲಯಾದ ಅನುಮತಿ ಪಡೆದುಕೊಂಡು ಠಾಣಾ ಮೊ.ಸಂ 266/2019 ಕಲಂ 78(3) ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.186/2019 ಕಲಂ. 15(ಎ), 32(3) ಕೆ.ಇ  ಆಕ್ಟ್:-

     ದಿನಾಂಕ: 29/09/2019 ರಂದು ಮದ್ಯಾಹ್ನ 1:00  ಗಂಟೆಗೆ ಪಿಸಿ 17 ಲಕ್ಷ್ಮೀನಾರಾಯಣ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ.   ಲಕ್ಷ್ಮೀನಾರಾಯಣ ಪಿಸಿ 17 ಆದ ನಾನು ಗೌರಿಬಿದನೂರು ಪುರ ಪೊಲೀಸ್ ಠಾಣೆಯಲ್ಲಿ ಎರಡು ವರ್ಷ ಆರು ತಿಂಗಳಿಂದ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿನಾಂಕ 29/09/2019 ರಂದು ಠಾಣಾಧಿಕಾರಿಗಳು ನನಗೂ ಮತ್ತು ಪಿಸಿ 546 ರಂಗನಾಥ ರವರಿಗೆ  ಪುರ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು, ನೇಮಕದಂತೆ ನಾನು ಮತ್ತು ಪಿಸಿ 546 ರಂಗನಾಥ ರವರು ಪುರಗಸ್ತಿನಲ್ಲಿದ್ದಾಗ ಬೆಳಗ್ಗೆ 11:30 ಗಂಟೆ ಸಮಯದಲ್ಲಿ ಗೌರಿಬಿದನೂರು ಪುರದ  ನ್ಯಾಷನಲ್ ಕಾಲೇಜು ಮುಂಭಾಗ ಇಡಗೂರು ಗ್ರಾಮಕ್ಕೆ ಹೋಗುವ ತಿರುವಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕಾಗಿ ಸ್ಥಳಾವಕಾಶ ಮಾಡಿಕೊಟ್ಟು ಮದ್ಯವನ್ನು ಮಾರಾಟ ಮಾಡುತ್ತಿರುತ್ತಾರೆಂದು ಮಾಹಿತಿ ಬಂದಿದ್ದು, ಕೂಡಲೇ ನಾನು ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ಅವರ ಅನುಮತಿ ಪಡೆದು ಪಂಚಾಯ್ತಿದಾರರನ್ನು ಕರೆಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ನಾನು ಮತ್ತು ನಮ್ಮ ಠಾಣಾ ಪಿಸಿ 546 ರಂಗನಾಥ ರವರೊಂದಿಗೆ ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿಯಂತೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಒಬ್ಬ ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಮಾರಾಟ ಮಾಡಿಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕಾಗಿ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು.ಆಲ್ಲಿಗೆ ಹೋಗಿ ಅತನಿಗೆ ಮದ್ಯವನ್ನು ಮಾರಾಟ ಮಾಡುವುದಕ್ಕೆ ನಿನ್ನಲ್ಲಿ ಪರವಾನಗಿ ಇದೇಯೇ ಎಂದು ಕೇಳಿದಾಗ ಅತನು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದು , ಅತನನ್ನು ವಶಕ್ಕೆ ತೆಗೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಆತನು ತನ್ನ ಹೆಸರು ಎನ್ ನಾಗರಾಜು ಬಿನ್ ಲೇಟ್ ನರಸಿಂಹಪ್ಪ, 35ವರ್ಷ, ಆಧಿ ಕರ್ನಾಟಕ ಜನಾಂಗ, ಜಿರಾಯ್ತಿ, ವಾಸ ಕುಡಮಲಕುಂಟೆ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿರುತ್ತಾನೆ. ಸ್ಥಳದಲ್ಲಿ 1) BAGPIPER DELUXE  WHISKY ಎಂದು ನಮೂದಿಸಿರುವ 180 ಎಂ.ಎಲ್ ನ 12 ಟೆಟ್ರಾ ಪಾಕೆಟ್ ಗಳು ಇದ್ದು, ಅವುಗಳಲ್ಲಿ 03 ಖಾಲಿಯಾಗಿದ್ದು, ಸ್ಥಳದಲ್ಲಿ 3 ಪೇಪರ್ ಲೋಟಗಳು ಇದ್ದವು. ಒಂದೊಂದು ಟೆಟ್ರಾ ಪಾಕೆಟ್ ನ ಬೆಲೆ 90.21/-ರೂಪಾಯಿಗಳು ಆಗಿದ್ದು, ಮೇಲ್ಕಂಡ ಟೆಟ್ರಾ ಪಾಕೆಟ್ ಗಳ ಒಟ್ಟು ಬೆಲೆ  811/- ರೂಪಾಯಿಗಳು ಆಗಿರುತ್ತೆ.ಅವುಗಳೆಲ್ಲವನ್ನು ಪಂಚರ ಸಮಕ್ಷಮ  ಬೆಳಗ್ಗೆ 11:45 ಗಂಟೆಯಿಂದ 12:45 ಗಂಟೆಯವರೆಗೆ ಲ್ಯಾಪ್ ಟಾಪ್ ನಲ್ಲಿ ಟೈಪ್ ಮಾಡಿದ ಪಂಚನಾಮೆಯ ಮೂಲಕ ವಶಕ್ಕೆ ತೆಗೆದುಕೊಂಡು ಆರೋಪಿ ಹಾಗೂ ಮಾಲಿನೊಂದಿಗೆ ಠಾಣೆಗೆ ಮದ್ಯಾಹ್ನ 1:00 ಗಂಟೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರಧಿಯ ಮೇರೆಗೆ ಠಾಣಾ ಮೊ ಸಂ 186/2019 ಕಲಂ 15(ಎ),32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.187/2019 ಕಲಂ. 78(3) ಕೆ.ಪಿ  ಆಕ್ಟ್:-

     ದಿನಾಂಕ:28.09.2019 ರಂದು ಸಂಜೆ 7.00 ಗಂಟೆಗೆ ಪಿರ್ಯಾದಿದಾರರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಅವಿನಾಶ್ ಆದ ನಾನು ಗೌರಿಬಿದನೂರು ಪುರ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿನಾಂಕ 28.09.2019 ರಂದು ಸಂಜೆ 5.30 ಗಂಟೆಯಲ್ಲಿ ಠಾಣೆಯಲ್ಲಿರುವಾಗ್ಗೆ ಬಂದ ಖಚಿತ ಮಾಹಿತಿಯಂತೆ ಗೌರಿಬಿದನೂರು ಪುರದ ಎಂ.ಜಿ ವೃತ್ತದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ, ಕೂಡಲೇ ತಾನು ಠಾಣೆಗೆ ಪಂಚರನ್ನು ಕರೆಯಿಸಿಕೊಂಡು ಅವರಿಗೆ ವಿಚಾರವನ್ನು ತಿಳಿಸಿದ್ದು, ಅವರು ಒಪ್ಪಿಕೊಂಡ ನಂತರ ಪಂಚರು ಹಾಗೂ ಠಾಣಾ ಸಿಬ್ಬಂದಿಯವರಾದ ಪಿಸಿ 387 ಮೋಹನ್ ಕುಮಾರ್ ಮತ್ತು ಹೆಚ್ ಸಿ 244 ಗೋಪಾಲ್ ರವರೊಂದಿಗೆ ನಡೆದುಕೊಂಡು ಎಂ.ಜಿ ವೃತ್ತಕ್ಕೆ ಹೋಗಿ ಸ್ವಲ್ಫ ದೂರದಲ್ಲಿ ಮರೆಯಲ್ಲಿ ನಿಂತು ನೋಡಿದಾಗ ಎಂ.ಜಿ ವೃತ್ತದ ಬಜಾರ್ ರಸ್ತೆಗೆ ಹೋಗುವ ತಿರುವಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿರುವುದು ಕಂಡುಬಂದಿದ್ದು. ತಾವು ಪಂಚರ ಸಮ್ಮುಖದಲ್ಲಿ ಅವನನ್ನು ಸಿಬ್ಬಂದಿ ಮುಖಾಂತರ ಹಿಡಿದುಕೊಂಡಿದ್ದು, ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಲಕ್ಷ್ಮೀಪತಿ ಬಿನ್ ಹನುಮಂತಪ್ಪ, 39ವರ್ಷ, ನಾಯಕ ಜನಾಂಗ, ಆಟೋಚಾಲಕ ವೃತ್ತ, ಹೊಸೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವರಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವರ ಬಳಿ ಯಾವುದೆ ಪರವಾನಗಿ ಇಲ್ಲದೇ ಇದ್ದು, ಆರೋಪಿತನ ಬಳಿ ಒಂದು ಮಟ್ಕಾಚೀಟಿ ಹಾಗೂ ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 630/- ರೂಪಾಯಿಗಳು ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದ್ದು, ಸಂಜೆ 5.45 ಗಂಟೆಯಿಂದ 6.45 ಗಂಟೆಯವರೆಗೆ ಪಂಚನಾಮೆಯನ್ನು ಸ್ಥಳದಲ್ಲಿಯೆ ಠಾಣೆಗೆ ಒದಗಿಸಿರುವ ಲ್ಯಾಪ್ ಟ್ಯಾಪ್ ನಲ್ಲಿ ಟೈಪ್ ಮಾಡಿ ಆರೋಪಿ ಹಾಗೂ ಮಾಲಿನೊಂದಿಗೆ ಸಂಜೆ 7.00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಮುಂದಿನ ಕ್ರಮಕ್ಕಾಗಿ ವರದಿಯನ್ನು ನೀಡಿದ್ದರ ಮೇರೆಗೆ ಎನ್.ಸಿ.ಆರ್ ನಂ 485/2019 ರಂತೆ ಪ್ರಕರಣ ದಾಖಲಿಸಿ ದಿನಾಂಕ:29.09.2019 ರಂದು ಸಂಜೆ 5.00 ಗಂಟೆಗೆ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣಾ ಮೊ.ಸಂ.187/2019 ಕಲಂ:78 ಕ್ಲಾಸ್ 3 ರಂತೆ ಪ್ರಕರಣ ದಾಖಲಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.314/2019 ಕಲಂ. 279-337 ಐ.ಪಿ.ಸಿ:-

     ದಿನಾಂಕ:29/09/2019 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಅಣ್ಣನಾದ ವೆಂಕಟರಮಣಪ್ಪ ರವರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ವಾರಕ್ಕೆವೊಮ್ಮೆ ತಮ್ಮ ಗ್ರಾಮವಾದ ಆಂದ್ರಪ್ರದೇಶದ ಇದ್ದೆವಂಡಲಪಲ್ಲಿ ಗ್ರಾಮಕ್ಕೆ ಬರುತ್ತಿದ್ದನು ಈ ದಿನ ದಿನಾಂಕ:29/09/2019 ರಂದು ಬೆಳ್ಳಿಗೆ ಸುಮಾರು 9.15 ಗಂಟೆ ಸಮಯದಲ್ಲಿ ತಮ್ಮ  ಅಣ್ಣ ತನ್ನ ಬಾಬತ್ತು KA 50 X-4170 ಹೊಂಡಾ ಶೈನ್ ದ್ವಿಚಕ್ರ ವಾಹನದಲ್ಲಿ ಯಲಹಂಕದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರಲು ವಾಪಸ್ಸು ಬರುತ್ತಿದ್ದಾಗ ವರ್ಲಕೊಂಡ ಗ್ರಾಮದ ಎನ್.ಎಚ್-7 ರಸ್ತೆಯ ಬ್ರಿಡ್ಜ್ ಹತ್ತಿರ ಹಿಂದೆಯಿಂದ ಬರುತ್ತಿದ್ದ AP 39 AV-6799 ನೋದಣಿಯ ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಮುಂದೆ ತಮ್ಮ ಅಣ್ಣ ಚಾಲನೆ ಮಾಡಿಕೊಂಡು ಹೋಗುತ್ತಿದ್ದ KA 50 X-4170 ಹೊಂಡಾ ಶೈನ್ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ  ಡಿಕ್ಕಿ ಹೊಡೆದು ರಸ್ತೆ ಅಪಘಾತ ಪಡಿಸಿದ ಪರಿಣಾಮ ದ್ವಿಚಕ್ರ ವಾಹನ ಜಖಂಗೊಂಡಿದ್ದು ತಮ್ಮ ಅಣ್ಣ ವೆಂಕಟರಮಣಪ್ಪ ರವರು ಕೆಳಗೆ ಬಿದ್ದು ತಲೆಗೆ, ಬಲ ಕೈಗೆ ಹಾಗೂ ಬಲಕಾಲಿಗೆ ರಕ್ತದ ಗಾಯವಾಗಿದ್ದು ನಂತರ ಸಾರ್ವಜನಿಕರು ಅಂಬುಲೈನ್ಸ್ ನಲ್ಲಿ ಸರ್ಕಾರಿ ಆಸ್ಪತ್ರೆ ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗಿ ದಾಖಲಿಸಿ ತನಗೆ ತಮ್ಮ ಅಣ್ಣನ ಮೊಬೈಲ್ ನಂಬರ್ ನಿಂದ ಸಾರ್ವಜನಿಕರು ಕರೆ ಮಾಡಿ ಮೇಲ್ಕಂಡಂತೆ ತಮ್ಮ ಅಣ್ಣನಿಗೆ ಅಪಘಾತವಾಗಿರುವ ಬಗ್ಗೆ ತಿಳಿಸಿದ್ದು ನಂತರ ತಾನು ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ನಂತರ ವೈದ್ಯಾದಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಯಲಹಂಕದ ಕೆ ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತೆ  ಮೇಲ್ಕಂಡಂತೆ ತಮ್ಮ ಅಣ್ಣನ KA 50 X-4170 ಹೊಂಡಾ ಶೈನ್ ದ್ವಿಚಕ್ರ ವಾಹನಕ್ಕೆ  AP 39 AV-6799 ನೋದಣಿಯ ಕಾರಿನ ಚಾಲಕನು ಅತೀ ವೇಗ ಮತ್ತು ಅಜಾಗರುಕತೆಯಿಂದ .ಚಾಲನೆ ಮಾಡಿಕೊಂಡು ರಸ್ತೆ ಅಪಘಾತ ಪಡಿಸಿದ  ಕಾರಿನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.315/2019 ಕಲಂ. 379 ಐ.ಪಿ.ಸಿ:-

     ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪರಸಪ್ಪ ರಾಥೋಡ್ ಸಿಪಿಸಿ 188 ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ ದಿನಾಂಕ: 29/09/2019 ರಂದು ಬೆಳಗ್ಗೆ ಠಾಣೆಯ ಹಾಜರಾತಿಯಲ್ಲಿ ತನಗೆ ಅಪರಾದ ವಿಭಾಗದ ಕರ್ತವ್ಯಕ್ಕೆ ನೇಮಕ ಮಾಡಿದ್ದು ನೇಮಕದಂತೆ ತಾನು ಗುಡಿಬಂಡೆ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಗಸ್ತಿನಲ್ಲಿದ್ದಾಗ ಮದ್ಯಹ್ನ 2-45 ಗಂಟೆಯ ಸಮಯದಲ್ಲಿ ಸಾರ್ವಜನಿಕರು ತನಗೆ ಕರೆ ಮಾಡಿ ಗುಡಿಬಂಡೆ ಠಾಣಾ ಸರಹದ್ದಿನ ವರ್ಲಕೊಂಡ ಗ್ರಾಮದ ಕೆರೆಯಲ್ಲಿ ಎ.ಪಿ 04 ಯು.ಬಿ 1395 ನೊಂದಣಿ ಸಂಖ್ಯೆಯ ಬಲ್ಕರ್ ಸಿಮೇಂಟ್ ಲಾರಿಯನ್ನು ಮೇಲ್ಕಂಡ ಸ್ಥಳದಲ್ಲಿ ನಿಲ್ಲಿಸಿಕೊಂಡು ಲಾರಿಯಿಂದ ಸಿಮೇಂಟ್ ನ್ನು ಯಾರೋ ಕೂಲಿಯವರ ಸಹಾಯದಿಂದ ಬಲ್ಕರ್ ಟ್ಯಾಂಕರ್ ನಲ್ಲಿದ್ದ ಸಿಮೇಂಟ್ ನ್ನು ಚೀಲಗಳಲ್ಲಿ ತುಂಬಿಸಿರುವುದಾಗಿ ಮಾಹಿತಿ ನೀಡಿದ್ದು ಸದರಿ ಮಾಹಿತಿಯನ್ನು ಮೇಲಾಧಿಕರಿಗಳಿಗೆ ತಿಳಿಸಿ ತಾನು ಮತ್ತು ಎಚ್.ಜಿ 631 ನರಸಿಂಹಮೂರ್ತಿ ರವರು ಮೇಲ್ಕಂಡ ಸ್ಥಳಕ್ಕೆ ಮದ್ಯಹ್ನ 3.30 ಗಂಟೆಗೆ ಹೋಗಿ ನೋಡಲಾಗಿ ಎ.ಪಿ 04 ಯು.ಬಿ 1395 ನೊಂದಣಿ ಸಂಖ್ಯೆಯ ಬಲ್ಕರ್ ಸಿಮೇಂಟ್ ಲಾರಿಯಲ್ಲಿದ್ದ ಸಿಮೇಂಟ್ ನ್ನು ಕೂಲಿಯವರ ಸಹಾಯದಿಂದ ಚೀಲಗಳಲ್ಲಿ ತುಂಬಿ ಕಳ್ಳತನ ಮಾಡುತ್ತಿದ್ದು ತಾನು ಮತ್ತು ಎಚ್.ಜಿ 631 ನರಸಿಂಹಮೂರ್ತಿ ರವರು ಲಾರಿಯ ಬಳಿ ಹೋಗುತ್ತಿದ್ದಂತೆ ಮೇಲ್ಕಂಡ ಲಾರಿಯ ಚಾಲಕ ಲಾರಿಯನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಕೂಲಿಯವರು ಸಹ ಅಲ್ಲಿಂದ ಹೋರಟು ಹೊಗಿದ್ದು, ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ಸುಮಾರು 30 ಸಿಮೇಂಟ್ ಚೀಲಗಳಲ್ಲಿ ಮೇಲ್ಕಂಡ ಬಲ್ಕರ್ ಲಾರಿಯಲ್ಲಿದ್ದ ಸಿಮೇಂಟ್ ನ್ನು ತುಂಬಿಸಿ ಕಳ್ಳತನ ಮಾಡಿರುವುದು ಕಂಡು ಬಂದಿದ್ದು, ಕಳ್ಳತನ ಮಾಡಿರುವ ಸಿಮೇಂಟ್ ನ ಅಂದಾಜು ಬೆಲೆ ಸುಮಾರು 10,800 ರೂಪಾಯಿಗಳು ಆಗಿದ್ದು, ನಂತರ ಮೇಲ್ಕಂಡ ನೊಂದಣಿ ಸಂಖ್ಯೆಯ ಬಲ್ಕರ್ ಲಾರಿಯನ್ನು ಬೇರೆ ಚಾಲಕನ ಸಹಾಯದಿಂದ ಪೆರೆಸಂದ್ರ ಹೊರ ಠಾಣೆಯ ಆವರಣದಲ್ಲಿ ನಿಲ್ಲಿಸಿ ಮೇಲ್ಕಂಡಂತೆ ಕಳ್ಳತನ ಮಾಡಿರುವ ಬಲ್ಕರ್ ಲಾರಿಯ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ವರದಿ ನೀಡಿರುತ್ತೇನೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.316/2019 ಕಲಂ. 457,380 ಐ.ಪಿ.ಸಿ:-

     ದಿನಾಂಕ:30/09/2019 ರಂದು ಮದ್ಯಾನ್ಹ:2-15 ಘಂಟೆಯಲ್ಲಿ ಪಿರ್ಯಾದಿದಾರರಾದ ಮುನಿರಾಜು .ಬಿ.ಎಲ್.  ಡಿ.ಇ.ಓ. ಎಂ.ಎಸ್.ಐ.ಎಲ್. ಪೆರೇಸಂದ್ರ ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ: ಸರ್ಕಾರಿ  ಸಂಸ್ಥೆಯಾದ ಎಂ.ಎಸ್.ಐ.ಎಲ್. ಮದ್ಯದ ಮಳಿಗೆ ಪೆರೇಸಂದ್ರದಲ್ಲಿ ತಾನು ಡಿ.ಇ,ಓ.ಆಗಿ ಕಾರ್ಯ ನಿರ್ವಹಸುತ್ತಿದ್ದು  ತನ್ನ ಜೊತೆಗೆ ಕೃಷ್ಣರೆಡ್ಡಿ  ಮತ್ತು ಗಂಗಾಧರ ರವರು ಎ.ಡಿ.ಇ,ಓ.ಗಳಾಗಿ ಕಾರ್ಯನಿರ್ವಹಿಸುತ್ತಿದ್ದು  ದಿನಾಂಕ:29/09/2019 ರಂದು ಮದ್ಯದ ಮಳಿಗೆ ವ್ಯವಹಾರ ಮುಗಿಸಿಕೊಂಡು ದಿನಾಂಕ:29/09/2019 ರ ಮದ್ಯ ಮಾರಾಟದ ನಗದು ಹಣವನ್ನು ಗಾಡ್ರೇಜ್ ಬಾಕ್ಸನಲ್ಲಿ ಇಟ್ಟು ರಾತ್ರಿ 10-00 ಘಂಟೆಯಲ್ಲಿ ಮಳಿಗೆ ಶೆಟರ್ ಬೀಗಗಳನ್ನು ಹಾಕಿಕೊಂಡು ತೆರಳಿದ್ದು ಮೇಲ್ಕಂಡ ಮದ್ಯದ ಮಳಿಗೆಯ ಶೆಟರ್ ಮುರಿದು ಕಳ್ಳತನ ಆಗಿದೆ  ಎಂದು ಈ ದಿನ ದಿನಾಂಕ:30/09/2019 ರಂದು ಬೆಳಗ್ಗೆ 1-30 ಘಂಟೆಗೆ ಮೇಲ್ಕಂಡ ಮದ್ಯದ ಮಳಿಗೆ ಬಳಿ ಪೊಲೀಸ್ ಗಸ್ತು ತಿರುಗುತ್ತಿದ್ದ  ಪೊಲೀಸರು ತನಗೆ ತಿಳಿಸಿದ್ದು ನಂತರ ತಾನು ಹೋಗಿ ನೋಡಲಾಗಿ ಯಾರೋ ಕಳ್ಳರು ಮೇಲ್ಕಂಡ ಮದ್ಯದ ಮಳಿಗೆಯಲ್ಲಿದ್ದ ಗಾಡ್ರೇಜ್ ಲಾಕರ್ ನ್ನು ಮುರಿದು ಅದರಲ್ಲಿದ್ದ ರೂ:46910/- ರೂಪಾಯಿ ನಗದು ಹಣವನ್ನು ಮತ್ತು ಅಂದಾಜು 23000/- ರೂಪಾಯಿ ಬೆಲೆ ಬಾಳುವ ಒಂದು ಟಿ.ಸಿ.ಜಡ್. ಲ್ಯೂಮಿನಿಯರ್ಸ್ ಡಿ.ವಿ.ಆರ್.ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನ ಮಾಡಿರವರನ್ನು ಪತ್ತೆ ಮಾಡಿ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.172/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 29-09-2019 ರಂದು ರಾತ್ರಿ 20-05 ಗಂಟೆಗೆ  ಡಿಸಿಬಿ ಸಿಇಎಸ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವರಾದ ಶ್ರೀ ಮುನಿಕೃಷ್ಣ ರವರು ಠಾಣೆಗೆ ಹಾಜರಾಗಿ ನೀಡಿದ ಆರೋಫಿ  ಮಾಲು ಪಂಚನಾಮೆಯೊಂದಿಗೆ ನೀಡಿದ  ದೂರು  ಎನೆಂದರೆ   ತಾನು ಮತ್ತು  ತಮ್ಮ ಠಾಣೆಯ ಸಿಬ್ಬಂದಿಯಾದ ಗಿರೀಶ ರಾಜಗೋಪಾಲ ನರಸಿಂಹ ರವರೊಂದಿಗೆ  ಸಂಜೆ 6-30 ಗಂಟೆಯ ಸಮಯದಲ್ಲಿ  ಸರ್ಕಾರಿ ಜೀಪು ಸಂಖ್ಯೆ  ಕೆಎ-40-ಜಿ-270 ರಲ್ಲಿ ಚಾಲಕನೊಂದಿಗೆ  ಅಕ್ರಮ ಚಟುವಟಿಕೆಗಳ ಬಗ್ಗೆ  ಮಾಹಿತಿಯನ್ನು ಸಂಗ್ರಹಿಸಲು ಚದಲಪುರ ಗ್ರಾಮದ ಬಳಿ  ಗಸ್ತಿನಲ್ಲಿದ್ದಾಗ  ಬಾತ್ಮೀದಾರರಿಂದ ಅವರಿಗೆ  ಬಂದ ಖಚಿತವಾದ ಮಾಹಿತಿ ಏನೆಂದರೆ   ಕಣಿತಹಳ್ಳಿಯ  ಹಳ್ಳಿಮನೆ ಮಿಲಿಟರಿ ಹೋಟಲ್  ಮಾಲೀಕ ಯಾವುದೇ ಪರವಾನಗಿ ಇಲ್ಲದೆ  ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಮಾಹಿತಿಯಂತೆ ದಾಳಿ ನಡೆಸಲು ಪಂಚರನ್ನು ಬರಮಾಡಿಕೊಂಡು ಅವರ ಸಮಕ್ಷಮದಲ್ಲಿ ದಾಳಿ ನಡೆಯಿಸಿದಾಗ  ಹಳ್ಳಿ ಮನೆ  ಮಿಲಿಟರಿ ಹೋಟಲಿನ  ಮಾಲೀಕ ಯಾವುದೆ ಅನುಮತಿಯನ್ನು ಪಡೆಯದೇ  ಹೋಟಲಿನ ಮುಂಬಾಗ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಕಾಶ ಮಾಡಿ ಕೊಟ್ಟಿರುವುದು ಕಂಡು ಬಂದಿರುತ್ತೆ,   ಹೋಟಲಿನ ಮುಂದೆ  1) 90 ML  ಸಾಮರ್ಥ್ಯದ  HAYWARDS CHEERS WHISKYಯ 6 ಟೆಟ್ರಾ ಪ್ಯಾಕೇಟುಗಳು ಇದ್ದು ಒಟ್ಟು ಮದ್ಯವು 540 ಮಿಲಿ  ಆಗಿದ್ದು  ಇದರ ಬೆಲೆಯು 182  ರುಪಾಯಿ ಆಗಿರುತ್ತೆ, 2) ಖಾಲಿ 90 ಎಂ ಎಲ್ ಸಾಮರ್ಥ್ಯದ 2 ಖಾಲಿ ಟೆಟ್ರಾ ಪ್ಯಾಕೇಟುಗಳು 3) 1 ಲೀಟರ್ ಬಾಟಲಿನ ಖಾಲಿ ಪ್ಲಾಸ್ಟಿಕ್ ಬಾಟಲ್ 4) ಎರಡು ಖಾಲಿ ಗ್ಲಾಸುಗಳು ಇರುತ್ತವೆ, ಡಾಬಾ ಅಂಗಡಿಯ ಮಾಲೀಕನ ಹೆಸರು ವಿಳಾಸವನ್ನು ಕೇಳಲಾಗಿ ದಿನೇಶ್ ಬಿನ್ ನಾರಾಯಣಸ್ವಾಮಿ 29 ವರ್ಷ ವಕ್ಕಲಿಗರು  ಹಳ್ಳೀಮನೆ ಮಿಲಿಟರಿ ಹೋಟಲಿನ  ಮಾಲೀಕ ನಕ್ಕನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂತಾ ತಿಳಿಸಿದನು, ಯಾವುಧೇ ಪರವಾನಗಿಯನ್ನು ಪಡೆಯದೇ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿದ್ದ  ಮಿಲಿಟರಿ ಹೋಟಲಿನ  ಮಾಲೀಕನನ್ನು  ಮತ್ತು ಸಿಕ್ಕ ಮಾಲುಗಳನ್ನು ಮುಂದಿನ ತನಿಖೆಯ ಬಗ್ಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ನಿಮ್ಮ ವಶಕ್ಕೆ ನೀಡುತ್ತಿದ್ದು  ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲು ಕೋರಿದ ದೂರಿನ ಮೇರೆಗೆ ಈ ಪ್ರವವರದಿ.

 1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.89/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:29/09/2019 ರಂದು ಮದ್ಯಾಹ್ನ 03-15 ಗಂಟೆಗೆ ಬಾಗೇಪಲ್ಲಿ ವೃತ್ತ ನಿರೀಕ್ಷಕರಾದ ಶ್ರೀ ನಯಾಜ್ ಬೇಗ್ ರವರು ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ:29/09/2019 ರಂದು ಮದ್ಯಾಹ್ನ ಸುಮಾರು 01-40 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ಪಾತಕೋಟ ಗ್ರಾಮದ ಬಳಿ ಗಸ್ತಿನಲ್ಲಿದ್ದಾಗ ಗೊಂದಿಪಲ್ಲಿ ಗ್ರಾಮದಲ್ಲಿ ಪೆಟ್ಟಿಗೆ ಅಂಗಡಿಯ ಮುಂಬಾಗದ ಖಾಲಿ ಜಾಗದಲ್ಲಿ ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-40 ಜಿ-1777 ರಲ್ಲಿ ಪಾತಕೋಟ ಗ್ರಾಮದ ನರಸಿಂಹಪ್ಪ ಬಿನ್ ಲೇಟ್ ಪಾಪನ್ನ ರವರ ಪೆಟ್ಟಿಗೆ ಅಂಗಡಿಯ ಮುಂಬಾಗದ ಖಾಲಿ ಜಾಗದ ಬಳಿಗೆ ಹೋಗಲಾಗಿ ನಾವು ಹೋಗಿದ್ದ  ಜೀಪನ್ನು ನೋಡಿ ಪೆಟ್ಟಿಗೆ ಅಂಗಡಿಯ ಮುಂಬಾಗದ  ಖಾಲಿ ಜಾಗದಲ್ಲಿದ್ದವರು  ಓಡಿ ಹೋಗಿದ್ದು.  ಪೆಟ್ಟಿಗೆ ಅಂಗಡಿಯ  ಮಾಲೀಕನ ಹೆಸರು ವಿಳಾಸ ತಿಳಿಯಲಾಗಿ   ನರಸಿಂಹಪ್ಪ ಬಿನ್  ಲೇಟ್ ಪಾಪನ್ನ. 50 ವರ್ಷ, ನಾಯಕ ಜನಾಂಗ, ವ್ಯಾಪಾರ ಗೊಂದಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ.  ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ  06  ಹೈ ವಾರ್ಡ್ಸ್   ವಿಸ್ಕಿ ಮದ್ಯದ ಟೆಟ್ರಾ ಪಾಕಟೆ ಗಳು (ಸುಮಾರು  180/- ರೂ ಬೆಲೆ ಬಾಳುವುದಾಗಿರುತ್ತೆ,) ಮತ್ತು 01 ಲೀಟರ್ ನ 01 ನೀರಿನ ಖಾಲಿ ಬಾಟಲ್ ಮತ್ತು 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ ಖಾಲಿ 90 ಮಿ,ಲೀಟರ್ ನ  01  ಹೈ ವಾರ್ಡ್ಸ್ ವಿಸ್ಕಿ ಟೆಟ್ರಾ ಪಾಕೆಟ್ ಇದ್ದು  ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿಯನ್ನು ಪಡೆದಿರುವುದಿಲ್ಲ.  ಮೇಲ್ಕಂಡ ವಸ್ತುಗಳನ್ನು  ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವನ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ,ಸಂ 89/2019 ಕಲಂ 15 (ಎ) 32(3) KE ACT ರೀತ್ಯಾ ಪ್ರಕರಣ ದಾಖಲಿಸಿರುತ್ತೆ,

 1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.90/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:29/09/2019 ರಂದು ಸಂಜೆ 05-30 ಗಂಟೆಗೆ ಬಾಗೇಪಲ್ಲಿ ವೃತ್ತ ನಿರೀಕ್ಷಕರಾದ ಶ್ರೀ ನಯಾಜ್ ಬೇಗ್ ರವರು ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ:29/09/2019 ರಂದು ಮದ್ಯಾಹ್ನ ಸುಮಾರು 04-00 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ಜೂಲಪಾಳ್ಯ ಗ್ರಾಮದ ಬಳಿ ಗಸ್ತಿನಲ್ಲಿದ್ದಾಗ ನೀರಗಂಟಪಲ್ಲಿ ಗ್ರಾಮದಲ್ಲಿ ಮನೆಯ ಮುಂಬಾಗದ ಖಾಲಿ ಜಾಗದಲ್ಲಿ ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-40 ಜಿ-1777 ರಲ್ಲಿ ನೀರಗಂಟಪಲ್ಲಿ ಗ್ರಾಮದ ಗಂಗಾರಾಜ ಬಿನ್ ಗಂಗಾಧರಪ್ಪ ರವರ ಮನೆಯ ಮುಂಬಾಗದ ಖಾಲಿ ಜಾಗದ ಬಳಿಗೆ ಹೋಗಲಾಗಿ ನಾವು ಹೋಗಿದ್ದ  ಜೀಪನ್ನು ನೋಡಿ ಮನೆಯ ಮುಂಬಾಗದ  ಖಾಲಿ ಜಾಗದಲ್ಲಿದ್ದವರು  ಓಡಿ ಹೋಗಿದ್ದು.  ಮನೆಯ  ಮಾಲೀಕನ ಹೆಸರು ವಿಳಾಸ ತಿಳಿಯಲಾಗಿ ಗಂಗಾರಾಜ ಬಿನ್ ಗಂಗಾಧರಪ್ಪ. 45 ವರ್ಷ, ಪೂಸಲ ಜನಾಂಗ, ವ್ಯಾಪಾರ ನೀರಗಂಟಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ.  ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ  08  ಹೈ ವಾರ್ಡ್ಸ್   ವಿಸ್ಕಿ ಮದ್ಯದ ಟೆಟ್ರಾ ಪಾಕಟೆ ಗಳು (ಸುಮಾರು  240/- ರೂ ಬೆಲೆ ಬಾಳುವುದಾಗಿರುತ್ತೆ,) ಮತ್ತು 01 ಲೀಟರ್ ನ 01 ನೀರಿನ ಖಾಲಿ ಬಾಟಲ್ ಮತ್ತು 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ ಖಾಲಿ 90 ಮಿ,ಲೀಟರ್ ನ  02  ಹೈ ವಾರ್ಡ್ಸ್ ವಿಸ್ಕಿ ಟೆಟ್ರಾ ಪಾಕೆಟ್ ಗಳು ಇದ್ದು  ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿಯನ್ನು ಪಡೆದಿರುವುದಿಲ್ಲ.  ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವನ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ,ಸಂ 90/2019 ಕಲಂ 15 (ಎ) 32(3) KE ACT ರೀತ್ಯಾ ಪ್ರಕರಣ ದಾಖಲಿಸಿರುತ್ತೆ,

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.330/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

          ದಿನಾಂಕ.29.08.2019 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಚಿಕ್ಕದಾಸರಹಳ್ಳಿ ಗ್ರಾಮದಲ್ಲಿ ವೀಣಾ ಕೋಂ ಕೃಷ್ಣಮೂರ್ತಿ, ರವರು ಅವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಲ್ಲು ಜಗುಲಿಯ ಮೇಲೆ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಪಿಸಿ 14 ಗೋವಿಂದಪ್ಪ, ಮಪಿಸಿ 252 ಮಹಾನಂದ, ರವರ ಜೊತೆಯಲ್ಲಿ ಚಿಕ್ಕದಾಸರಹಳ್ಳಿ ಗ್ರಾಮಕ್ಕೆ ಹೋಗಿ ಪಿಸಿ 14 ಗೋವಿಂದಪ್ಪ ರವರಿಗೆ ಇಬ್ಬರು ಪಂಚಾಯ್ತಿದಾರರನ್ನು ಕರೆದುಕೊಂಡು ಬಂದು ನನ್ನ ಮುಂದೆ ಹಾಜರುಪಡಿಸುವಂತೆ ಸೂಚಿಸಿದ್ದು ಅದರಂತೆ ಪಿಸಿ 14 ಗೋವಿಂದಪ್ಪ ರವರು ಇಬ್ಬರು ಪಂಚರನ್ನು ಹಾಜರುಪಡಿಸಿದ್ದು ಅವರಿಗೆ ದಾಳಿಯ ಬಗ್ಗೆ ಮಾಹಿತಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣಾ ಜೀಪು ಸಂಖ್ಯೆ ಕೆಎ.40.ಜಿ.357 ಜೀಪಿನಲ್ಲಿ ಮದ್ಯಾಹ್ನ 12.00 ಗಂಟೆಗೆ ವೀಣಾ ಕೋಂ ಕೃಷ್ಣಮೂತರ್ಿ ರವರ ಚಿಲ್ಲರೆ ಅಂಗಡಿಯ ಬಳಿ ಸ್ವಲ್ಪ ದೂರದಲ್ಲಿ ಜೀಪು ನಿಲ್ಲಿಸಿ ಮರೆಯಲ್ಲಿ ವಾಚ್ ಮಾಡಲಾಗಿ ಒಬ್ಬ ಮಹಿಳೆ ಚಿಲ್ಲರೆ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಒಂದು ಕಲ್ಲು ಜುಗಲಿಯ ಮೇಲೆ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನು ಇಟ್ಟುಕೊಂಡು ಕೂತುಕೊಂಡಿದ್ದು, ಇಬ್ಬರು ಸಾರ್ವಜನಿಕರು ಮಧ್ಯವನ್ನು ಕುಡಿಯುತ್ತಿದ್ದರು. ಖಾತ್ರಿ ಪಡಿಸಿಕೊಂಡು ದಾಳಿಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಮಧ್ಯವನ್ನು ಹಿಡಿದು ಕುಳಿತುಕೊಂಡಿದ್ದ ಮಹಿಳೆ ಓಡಿ ಹೋಗಿದ್ದು ನಂತರ ಮದ್ಯವನ್ನು ಹಿಡಿದು ಕುಳಿತಿದ್ದ ಮಹಿಳೆಯ ಹೆಸರು ಮತ್ತು ವಿಳಾಸ ತಿಳಿಯಲಾಗಿ ವೀಣಾ ಕೋಂ ಕೃಷ್ಣಮೂರ್ತಿ, 30 ವರ್ಷ, ಆದಿ ಕನರ್ಾಟಕ, ಅಂಗಡಿ ವ್ಯಾಪಾರ, ಚಿಕ್ಕದಾಸರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿದಿದ್ದು ಅಲ್ಲಿಯೇ ಇದ್ದ ಒಂದು ಬ್ಯಾಗಿನಲ್ಲಿ ನೋಡಲಾಗಿ ಮಧ್ಯದ ಪಾಕೇಟುಗಳಿದ್ದು, ಪರಿಶೀಲಿಸಲಾಗಿ ಹೈವಾರ್ಡ್ಸ್ ಚೀಯರ್ ವಿಸ್ಕಿ 90 ಎಂ.ಎಲ್. ನ 8 ಪಾಕೇಟುಗಳಿದ್ದು, ಒಂದರ ಬೆಲೆ 30.32 ರೂ.ಗಳಾಗಿದ್ದು, ಒಟ್ಟು ಬೆಲೆ 242.56 ರೂ.ಗಳಾಗಿರುತ್ತೆ. ಪಕ್ಕದಲ್ಲಿ ಹೈವಾರ್ಡ್ಸ್ ಚೀಯರ್ ವಿಸ್ಕಿ 90 ಎಂ.ಎಲ್. ನ 3 ಖಾಲಿ ಪಾಕೇಟುಗಳು, 3 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಅರ್ದ ನೀರು ತುಂಬಿದ ಒಂದು ಲೀಟರ್ ನೀರಿನ ಬಾಟಲ್ ಇರುತ್ತೆ. ಸದರಿ ವೀಣಾ ಕೋಂ ಕೃಷ್ಣಮೂರ್ತಿ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಹಾಗೂ ಕುಡಿಯಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದರಿಂದ ಮದ್ಯದ ಪಾಕೇಟ್ ಗಳನ್ನು, ಖಾಲಿ ಮದ್ಯದ ಪಾಕೇಟುಗಳನ್ನು, ವಾಟರ್ ಬಾಟಲ್, ಗ್ಲಾಸುಗಳನ್ನು ಮದ್ಯಾಹ್ನ 12.00 ಗಂಟೆಯಿಂದ 1.00 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡು ಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ಮದ್ಯಾಹ್ನ 1.30 ಗಂಟೆಗೆ ಠಾಣೆಗೆ ಬಂದು ಠಾಣಾ ಮೊ.ಸಂ. 330/2019 ಕಲಂ 15(ಎ)32(3) ಕೆಇ ಆಕ್ಟ್ ರೀತ್ಯಾ ಸ್ವತಃ ಕೇಸು ದಾಖಲಿಸಿರುತ್ತೇನೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.331/2019 ಕಲಂ. 279-337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ 29/09/2019 ರಂದು ಮದ್ಯಾಹ್ನ 3-15 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ಶ್ರೀಕಾಂತ ಬಿನ್ ಶಿವಪ್ಪ, 28 ವರ್ಷ, ನಾಯಕ, ಕೂಲಿ ಕೆಲಸ, ವಾಸ-ಕುಂದಲಗುರ್ಕಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ತಮ್ಮ ಗ್ರಾಮದ ನಾರಾಯಣಪ್ಪ ಬಿನ್ ಹನುಮಂತಪ್ಪ ರವರ ಮಗನಾದ ಗಣೇಶ ರವರು ಚೌಡಸಂದ್ರ ಗ್ರಾಮದಲ್ಲಿ ವಿವಾಹವಾಗಿದ್ದು, ಇತ್ತೀಚೆಗೆ ಗಣೇಶ ರವರ ಹೆಂಡತಿ ಸಂಸಾರದ ವಿಷಯದಲ್ಲಿ ಗಲಾಟೆಯನ್ನು ಮಾಡಿಕೊಂಡು ತನ್ನ ತವರು ಮನೆಯಾದ ಚೌಡಸಂದ್ರ ಗ್ರಾಮಕ್ಕೆ ಹೊರಟು ಹೋಗಿದ್ದು ಆಕೆಗೆ ಬುದ್ದಿವಾದ ಹೇಳಿ ಕರೆ ತರಲು ತಾನು ಮತ್ತು ನಾರಾಯಣಪ್ಪ ರವರು ದಿನಾಂಕ 29/09/2019 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ತಮ್ಮ ಬಾಬತ್ತು ಕೆಎ-07-ಎಲ್-8658 ದ್ವಿ ಚಕ್ರ ವಾಹನದಲ್ಲಿ ಚೌಡಸಂದ್ರ ಗ್ರಾಮಕ್ಕೆ ಹೋಗಿ ಅಲ್ಲಿ ನಾರಾಯಣಪ್ಪ ರವರ ಸೊಸೆಗೆ ಬುದ್ದಿವಾದ ಹೇಳಿ ತಾವುಗಳು ವಾಪಸ್ಸು ಕುಂದಲಗುರ್ಕಿ ಗ್ರಾಮಕ್ಕೆ ಹೋಗಲು ಮದ್ಯಾಹ್ನ 1-45 ಗಂಟೆ ಸಮಯದಲ್ಲಿ ವೀರಾಪುರ ಗ್ರಾಮದ ಬಳಿ ಹೋಗುತ್ತಿದ್ದಾಗ ಎದುರುಗಡೆಯಿಂದ ಅಂದರೆ ಚಿಂತಾಮಣಿ ಕಡೆಯಿಂದ ಶಿಡ್ಲಘಟ್ಟ ಕಡೆಗೆ ಬರುತ್ತಿದ್ದ ಯಾವುದೋ ಒಂದು ಕಾರಿನ ಚಾಲಕ ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕೆಎ-07-ಎಲ್-8658 ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಪಡೆಸಿದ ಪರಿಣಾಮ ತಾನು ಮತ್ತು ನಾರಾಯಣಪ್ಪ ರವರು ದ್ವಿ ಚಕ್ರ ವಾಹನದ ಸಮೇತವಾಗಿ ಬಿದ್ದು ಹೋಗಿ ತನಗೆ ಮತ್ತು ನಾರಾಯಣಪ್ಪ ರವರಿಗೆ ರಕ್ತಗಾಯಗಳಾಗಿದ್ದು ಅಪಘಾತವನ್ನುಂಟು ಮಾಡಿದ ಕಾರಿನ ಚಾಲಕ ತನ್ನ ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ನಂತರ ಅಲ್ಲಿಗೆ ಬಂದ ಸಾರ್ವಜನಿಕರು ತಮ್ಮನ್ನು ಉಪಚರಿಸಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆದ್ದರಿಂದ ಅಪಘಾತವನ್ನುಂಟು ಮಾಡಿ ಹೊರಟು ಹೋಗಿರುವ ಕಾರಿನ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲು ಕೊಟ್ಟ ಹೇಳಿಕೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.332/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ.29.08.2019 ರಂದು ಮದ್ಯಾಹ್ನ 2.30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಮಳಮಾಚನಹಳ್ಳಿ ಗ್ರಾಮದಲ್ಲಿ ನಾರಾಯಣಮ್ಮ ಕೋಂ ಸೊಣ್ಣಪ್ಪ, ರವರು ಅವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಲ್ಲು ಜಗುಲಿಯ ಮೇಲೆ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಪಿಸಿ 14 ಗೋವಿಂದಪ್ಪ, ಮಪಿಸಿ 252 ಮಹಾನಂದ, ರವರ ಜೊತೆಯಲ್ಲಿ ಮಳಮಾಚನಹಳ್ಳಿ ಗ್ರಾಮಕ್ಕೆ ಹೋಗಿ ಪಿಸಿ 14 ಗೋವಿಂದಪ್ಪ ರವರಿಗೆ ಇಬ್ಬರು ಪಂಚಾಯ್ತಿದಾರರನ್ನು ಕರೆದುಕೊಂಡು ಬಂದು ನನ್ನ ಮುಂದೆ ಹಾಜರುಪಡಿಸುವಂತೆ ಸೂಚಿಸಿದ್ದು ಅದರಂತೆ ಪಿಸಿ 14 ಗೋವಿಂದಪ್ಪ ರವರು ಇಬ್ಬರು ಪಂಚರನ್ನು ಹಾಜರುಪಡಿಸಿದ್ದು ಅವರಿಗೆ ದಾಳಿಯ ಬಗ್ಗೆ ಮಾಹಿತಿ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣಾ ಜೀಪು ಸಂಖ್ಯೆ ಕೆಎ.40.ಜಿ.357 ಜೀಪಿನಲ್ಲಿ ಮದ್ಯಾಹ್ನ 3.00 ಗಂಟೆಗೆ ನಾರಾಯಣಮ್ಮ ಕೋಂ ಸೊಣ್ಣಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಸ್ವಲ್ಪ ದೂರದಲ್ಲಿ ಜೀಪು ನಿಲ್ಲಿಸಿ ಮರೆಯಲ್ಲಿ ವಾಚ್ ಮಾಡಲಾಗಿ ಒಬ್ಬ ಮಹಿಳೆ ಚಿಲ್ಲರೆ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಒಂದು ಕಲ್ಲು ಜುಗಲಿಯ ಮೇಲೆ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನು ಇಟ್ಟುಕೊಂಡು ಕೂತುಕೊಂಡಿದ್ದು, ಇಬ್ಬರು ಸಾರ್ವಜನಿಕರು ಮಧ್ಯವನ್ನು ಕುಡಿಯುತ್ತಿದ್ದರು. ಖಾತ್ರಿ ಪಡಿಸಿಕೊಂಡು ದಾಳಿಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು, ಮಧ್ಯವನ್ನು ಹಿಡಿದು ಕುಳಿತುಕೊಂಡಿದ್ದ ಮಹಿಳೆ ಓಡಿ ಹೋಗಿದ್ದು ನಂತರ ಮದ್ಯವನ್ನು ಹಿಡಿದು ಕುಳಿತಿದ್ದ ಮಹಿಳೆಯ ಹೆಸರು ಮತ್ತು ವಿಳಾಸ ತಿಳಿಯಲಾಗಿ ನಾರಾಯಣಮ್ಮ ಕೋಂ ಸೊಣ್ಣಪ್ಪ, 48 ವರ್ಷ, ನಾಯಕರು, ಅಂಗಡಿ ವ್ಯಾಪಾರ, ಮಳಮಾಚನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿದಿದ್ದು ಅಲ್ಲಿಯೇ ಇದ್ದ ಒಂದು ಬ್ಯಾಗಿನಲ್ಲಿ ನೋಡಲಾಗಿ ಮಧ್ಯದ ಪಾಕೇಟುಗಳಿದ್ದು, ಪರಿಶೀಲಿಸಲಾಗಿ 90 ML HAYWARDS CHEERS WHISKY 9 ಟೆಟ್ರಾ ಪಾಕೇಟುಗಳಿದ್ದು ಒಂದರ ಬೆಲೆ 30.32 ರೂ ಆಗಿದ್ದು ಒಟ್ಟು ಬೆಲೆ 272.88 ರೂ.ಗಳಾಗಿರುತ್ತೆ. ಪಕ್ಕದಲ್ಲಿ ಹೈವಾರ್ಡ್ಸ್ ಚೀಯರ್ ವಿಸ್ಕಿ 90 ಎಂ.ಎಲ್. ನ 4 ಖಾಲಿ ಪಾಕೇಟುಗಳು, 5 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಅರ್ದ ನೀರು ತುಂಬಿದ ಒಂದು ಲೀಟರ್ ನೀರಿನ ಬಾಟಲ್ ಇರುತ್ತೆ. ಸದರಿ ನಾರಾಯಣಮ್ಮ ಕೋಂ ಸೊಣ್ಣಪ್ಪ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಹಾಗೂ ಕುಡಿಯಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದರಿಂದ ಮದ್ಯದ ಪಾಕೇಟ್ ಗಳನ್ನು, ಖಾಲಿ ಮದ್ಯದ ಪಾಕೇಟುಗಳನ್ನು, ವಾಟರ್ ಬಾಟಲ್, ಗ್ಲಾಸುಗಳನ್ನು ಮದ್ಯಾಹ್ನ 3.00 ಗಂಟೆಯಿಂದ 4.00 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡು ಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ಸಂಜೆ 4.30 ಗಂಟೆಗೆ ಠಾಣೆಗೆ ಬಂದು ಠಾಣಾ ಮೊ.ಸಂ. 332/2019 ಕಲಂ 15(ಎ)32(3) ಕೆಇ ಆಕ್ಟ್ ರೀತ್ಯಾ ಸ್ವತಃ ಕೇಸು ದಾಖಲಿಸಿರುತ್ತೇನೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.333/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 30/09/2019 ರಂದು ಮದ್ಯಾಹ್ನ 12-15 ಗಂಟೆಗೆ ಶಿಡ್ಲಘಟ್ಟ ವೃತ್ತ ನಿರೀಕ್ಷಕರಾದ ಜೆ.ಎನ್ ಆನಂದ ಕುಮಾರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ.30.09.2019 ರಂದು ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ನಾನು ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹೆಚ್.ಕ್ರಾಸ್ ಗ್ರಾಮದಲ್ಲಿ ಸದರಿ ಗ್ರಾಮದ ವಾಸಿ ರವಿ ಬಿನ್ ಮುನಿಯಪ್ಪ ಎಂಬಾತನು ತನ್ನ ಮಿಲ್ಟ್ರಿ ಹೋಟೆಲ್ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನಿಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿರುವುದಾಗಿ ಬಾತ್ಮೀದಾರರಿಂದ ಮಾಹಿತಿ ಬಂದಿದ್ದು ನಂತರ ನಾನು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿಸಿ-14 ಗೋವಿಂದಪ್ಪ ಹಾಗು ಜೀಪ್ ಚಾಲಕನಾದ ಎ.ಹೆಚ್.ಸಿ-03 ನಾಗೇಶ್ ರವರೊಂದಿಗೆ ಕೆಎ-40-ಜಿ-1666 ರಲ್ಲಿ ಹೆಚ್ ಕ್ರಾಸ್ ಗೆ ಹೋಗಿ ಪಿಸಿ-14 ರವರ ಮೂಲಕ ಇಬ್ಬರು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ದಾಳಿ ಬಗ್ಗೆ ವಿಷಯವನ್ನು ತಿಳಿಸಿ ನಂತರ ಪಂಚರೊಂದಿಗೆ ಹೆಚ್ ಕ್ರಾಸ್ ನಿಂದ ಕೋಲಾರದ ರಸ್ತೆಯ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ರವಿ ಬಿನ್ ಮುನಿಯಪ್ಪ ಎಂಬಾತನ ಮಿಲ್ಟ್ರಿ ಹೋಟೆಲ್ ಸಮೀಪ ಮದ್ಯಾಹ್ನ 12-40 ಗಂಟೆಗೆ ಹೋಗಿ ಜೀಪ್ ಅನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿಯು ಮಿಲ್ಟ್ರಿ ಹೋಟೆಲ್ ನ ಮುಂಭಾಗದಲ್ಲಿ ಒಂದು ಟೇಬಲ್ ಅನ್ನು ಮಡಗಿದ್ದು ಅದರ ಮೇಲೆ ಯಾರೋ ಒಬ್ಬರು ಸಾರ್ವಜನಿಕರಿಗೆ ಹೋಟೆಲ್ ನಲ್ಲಿ ಇದ್ದ ಒಬ್ಬ ಆಸಾಮಿಯು ತನ್ನ ಅಂಗಡಿಯಲ್ಲಿದ್ದ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಮತ್ತು ಮಾಂಸವನ್ನು ನೀಡುತ್ತಾ ಅವರಿಗೆ ಕುಡಿಯಲು ಅನುವು ಮಾಡಿಕೊಟ್ಟಿರುವುದು ಖಾತ್ರಿಯಾದ ಮೇಲೆ ನಾವು ಪಂಚಾಯ್ತಿದಾರರ ಸಮಕ್ಷಮ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಕುಡಿಯಲು ಬಂದಿದ್ದ ಸಾರ್ವಜನಿಕರು ಮತ್ತು ಕುಡಿಯಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಓಡಿ ಹೋಗಿದ್ದು, ನಂತರ ಸ್ಥಳಕ್ಕೆ ಬಂದ ಸಾರ್ವಜನಿಕರನ್ನು ಓಡಿ ಹೋದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ರವಿ ಬಿನ್ ಮುನಿಯಪ್ಪ, 43 ವರ್ಷ, ಈಡಿಗ ಜನಾಂಗ, ಮಿಲ್ಟ್ರೀ ಹೋಟೆಲ್ ಮಾಲೀಕ ವಾಸ-ಹೆಚ್ ಕ್ರಾಸ್, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು ಸದರಿ ಆಸಾಮಿಯು ಅಂಗಡಿಯಟ್ಟಿದ್ದ ಒಂದು ಕಪ್ಪು ಬಣ್ಣದ ಕವರ್ ಅನ್ನು ಪರಿಶೀಲಿಸಲಾಗಿ ಅದರಲ್ಲಿ 1] 90 ಎಂ ಎಲ್ ಸಾಮರ್ಥ್ಯದ Haywards Cheers Whisky ನ 6 ಟೆಟ್ರಾ ಪಾಕೆಟ್ ಗಳಿದ್ದು, ಪ್ರತಿಯೊಂದು ಟೆಟ್ರಾ ಪಾಕೆಟ್ ಮೇಲೆ 30.32 ಎಂದು ಬೆಲೆ ಇದ್ದು, ಇವುಗಳ ಒಟ್ಟು ಬೆಲೆ 181.92 ರೂಗಳಾಗಿರುತ್ತದೆ. ಹಾಗೂ ಸ್ಥಳದಲ್ಲಿದ್ದ 3 ಪ್ಲಾಸ್ಟಿಕ್ ಲೋಟ, 3 ಖಾಲಿ ವಾಟರ್ ಪ್ಯಾಕೇಟ್ ಗಳು ಹಾಗೂ Haywards Cheers Whisky ಯ 3 ಖಾಲಿ  ಟೆಟ್ರಾಪಾಕೇಟ್ ಗಳಿದ್ದು, ಸದರಿ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನಿಟ್ಟುಕೊಂಡು ಸಾರ್ವಜನಿಕರಿಕೆ ಕುಡಿಯಲು ಅನುವು ಮಾಡಿಕೊಟ್ಟ ಕಾರಣ ಮೇಲ್ಕಂಡ ಮಾಲುಗಳನ್ನು ಮದ್ಯಾಹ್ನ 12-45 ಗಂಟೆಯಿಂದ 1-30 ಗಂಟೆಯವರೆಗೆ ಪಂಚರ ಸಮಕ್ಷಮ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಪಂಚನಾಮೆ ಮತ್ತು ಮಾಲುಗಳ ಸಮೇತ ಠಾಣೆಗೆ ಮದ್ಯಾಹ್ನ 2-15 ಗಂಟೆಗೆ ಬಂದು ಮುಂದಿನ ಕ್ರಮದ ಬಗ್ಗೆ ನೀಡಿದ ವರದಿಯ ಸಾರಾಂಶವಾಗಿರುತ್ತದೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.137/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ.29.09.2019 ರಂದು ಸಂಜೆ 6.45 ಗಂಟೆಗೆ ಮಾನ್ಯ ಸಿಪಿಐ ರವರು ಅಮಾನತ್ತು ಪಡಿಸಿದ ಪಂಚನಾಮೆ ಮತ್ತು ಆರೋಪಿಯನ್ನು ಸಿಬ್ಬಂದಿಯವರೊಂದಿಗೆ ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ.29/09/2019 ರಂದು ಸಂಜೆ 5.30 ಗಂಟೆಯಲ್ಲಿ ಚಿಕ್ಕಬಳ್ಳಾಪುರದಿಂದ ಬಂದೋ ಬಸ್ತು ಕರ್ತವ್ಯ ಮುಗಿಸಿಕೊಂಡು ವಾಪಸ್ಸು ಬರುವಾಗ ಯಾರೋ ಬಾತ್ಮಿದಾರರಿಂದ ಶಿಡ್ಲಘಟ್ಟ ನಗರದ ಬೈಪಾಸ್ ರಸ್ತೆ ಸಮೀಪ ಮಲ್ಲಿಗೆ ಡಾಬಾ ಪಕ್ಕದಲ್ಲಿ ಯಾರೋ ಒಬ್ಬ ಅಸಾಮಿ ಸಾರ್ವಜನಿಕರ ಸ್ಥಳದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಮಾಹಿತಿ ಬಂದಿದ್ದು, ಕೂಡಲೇ ನಗರ ಠಾಣೆಯ ಸಿಬ್ಬಂದಿಯವರಾದ ಪಿ.ಸಿ.134 ಧನಂಜಯ್, ಪಿ.ಸಿ.129 ರಾಮಚಂದ್ರ ರವರನ್ನು ಕರೆದುಕೊಂಡು ಪಂಚಾಯ್ತಿದಾರರೊಂದಿಗೆ ಸಂಜೆ 5-45 ಗಂಟೆಗೆ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿದಾಗ ಯಾರೋ ಸಾರ್ವಜನಿಕರು ಮದ್ಯಪಾನ ಸೇವನೆ ಮಾಡುತ್ತಿದ್ದು, ಪೊಲೀಸರನ್ನು ಕಂಡು ಮದ್ಯಪಾನ ಮಾಡುತ್ತಿದ್ದ 5 ಜನರು ಓಡಿ ಹೋಗಿದ್ದು, ಸದರಿ ಸ್ಥಳದಲ್ಲಿದ್ದ ವ್ಯಾಪಾರ ಮಾಡುತ್ತಿದ್ದ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ ಸದರಿ ಸ್ಥಳದಲ್ಲಿದ್ದ ವ್ಯಾಪಾರ ಮಾಡುತ್ತಿದ್ದ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ ಚಂದ್ರ ಬಿನ್ ಪೆಮ್ಮಣ್ಣ, 35 ವರ್ಷ, ವಕ್ಕಲಿಗರು, ಹೋಟೆಲ್ ವ್ಯಾಪಾರ, ಹಂಡಿಗನಾಳ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿರುತ್ತಾನೆ. ಸದರಿ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಿ ಬಿಸಾಡಿದ್ದ 90 ಎಂ.ಎಲ್ ನ ರಾಜಾ ವಿಸ್ಕೀ ಲೇಬಲ್ ಇರುವ 05 ಖಾಲಿ ಮದ್ಯದ ಪಾಕೇಟ್ ಗಳಿದ್ದು, ಇದರ ಪಕ್ಕದಲ್ಲಿ 90 ಎಂ.ಎಲ್ ನ ರಾಜಾ ವಿಸ್ಕೀ 10 ಮದ್ಯದ ಪಾಕೇಟ್ ಗಳು  ಇದ್ದು ಇವುಗಳ ಬೆಲೆ 303-00 ರೂಗಳಾಗಿರುತ್ತೆ. ಹಾಗೂ ಮದ್ಯಪಾನ ಸೇವನೆ ಮಾಡಿರುವ 4-ಖಾಲಿ ಪ್ಲಾಸ್ಟೀಕ್ ಪೇಪರ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ಬಿಸಲರಿ ಖಾಲಿ ಬಾಟಲ್ ಇರುತ್ತೆ.  ಮುಂದಿನ ಕ್ರಮದ ಬಗ್ಗೆ ಸಂಜೆ 5-50 ರಿಂದ 6-20 ಗಂಟೆಯವರೆಗೆ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಮಾಲು ಮುಂದಿನ ಕ್ರಮಕ್ಕಾಗಿ ಠಾಣೆಗೆ ಹಾಜರುಪಡಿಸಿದ್ದು ಸದರಿ ಆರೋಪಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.