ದಿನಾಂಕ :30/07/2020 ರ ಅಪರಾಧ ಪ್ರಕರಣಗಳು

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 63/2020 ಕಲಂ. 380,454 ಐ.ಪಿ.ಸಿ:-

          ದಿನಾಂಕ:29/07/2020 ರಂದು ಸಂಜೆ 18-30 ಗಂಟೆಗೆ ಫಿರ್ಯಾಧಿದಾರರಾದ ಮೊಹಮದ್ ರಫೀ ಬಿ  ಬಿನ್ ಪಿ. ಬಾಬು.20 ವರ್ಷ, ಚನ್ನೈ ನಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ ವ್ಯಾಸಂಗ,ವಾಸ: ಯನುಮಲಪಾಡಿ ಗ್ರಾಮ, ಚಿಂತಾಮಣಿ ತಾಲ್ಲೂಕು.ಮೊ ನಂ:6360147667 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೆನೆ. ನಮ್ಮ ತಂದೆ ಬಾಬು ಮತ್ತು ತಾಯಿ ಶಕೀಲಾರವರಿಗೆ ಒಟ್ಟು ಇಬ್ಬರು ಮಕ್ಕಳಿದ್ದು, 1 ನೇ ನಾನು ಮೊಹಮದ್ ರಫೀ. ಬಿ. 2 ನೇ ಮುಭಾರಕ್ ರವರಾಗಿರುತ್ತೇವೆ. ನಮ್ಮ ತಂದೆ ಬಾಬು ರವರು ಯನುಮಲಪಾಡಿ ಗ್ರಾಮದಲ್ಲಿ ಬಿಸ್ಮಿಲಾ ಹೋಟೆಲ್ ಇಟ್ಟುಕೊಂಡು ನಮ್ಮ ಕುಟುಂಬ ಪೋಷಣೆ ಮಾಡುತ್ತಿರುತ್ತಾರೆ. ದಿನಾಂಕ:29/07/2020 ರಂದು ಬೆಳಿಗ್ಗೆ 6-00 ಗಂಟೆಯ ಸಮಯದಲ್ಲಿ ನನ್ನ ತಂದೆ ಬಾಬು ಮತ್ತು ತಾಯಿ ಶಕೀಲಾ ರವರು ಹೋಟೆಲ್ ಗೆ ಹೋಗಿದ್ದು, ನಾನು ಮತ್ತು ನನ್ನ ತಮ್ಮ ಮನೆಯಲ್ಲಿದ್ದೆವು. ಬೆಳಿಗ್ಗೆ 09-30 ಗಂಟೆಯ ಸಮಯದಲ್ಲಿ ನಾನು ಮತ್ತು ನನ್ನ ತಮ್ಮ ಬಕ್ರೀದ್ ಹಬ್ಬಕ್ಕೆ ಹೊಸ ಬಟ್ಟೆಗಳನ್ನು ತರಲು ನಮ್ಮ ವಾಸದ ಮನೆಗೆ ಬೀಗವನ್ನು ಹಾಕಿಕೊಂಡು ಬೀಗದ ಕೀಯನ್ನು ನಮ್ಮದೇ ಬಾಬತ್ತು ಹೊಸ ಮನೆಯಲ್ಲಿರುವ ಮಂಚದ ಮೇಲಿನ ಹಾಸಿಗೆಯ ಕೆಳಗೆ ಇಟ್ಟು ನಂತರ ನಾವಿಬ್ಬರು ಬಿ ಕೊತ್ತಕೋಟಕ್ಕೆ ದ್ವಿಚಕ್ರವಾಹನದಲ್ಲಿ ಹೋಗಿ ಬಟ್ಟೆಗಳನ್ನು ಖರೀದಿಸಿಕೊಂಡು ಮದ್ಯಾಹ್ನ 2-30 ಗಂಟೆಗೆ ಯನುಮಲಪಾಡಿಯಲ್ಲಿರುವ  ನಮ್ಮ ಹೋಟೆಲ್ ಗೆ ವಾಪಸ್ಸು ಬಂದು ಊಟ ಮಾಡಿ ನಂತರ ಮದ್ಯಾಹ್ನ ಸುಮಾರು 3-00 ಗಂಟೆಗೆ ಹೊಸ ಮನೆಗೆ ಹೋಗಿ ಸ್ನಾನ ಮಾಡಿಕೊಂಡು ನಂತರ ಬೀಗದ ಕೀಯನ್ನು ಎತ್ತಿಕೊಂಡು ನಮ್ಮ ವಾಸದ ಮನೆಯ ಬಾಗಿಲನ್ನು ತೆರೆದು ಮನೆಯೊಳಗೆ ಹೋಗಿ ಬೀರುವಿನಲ್ಲಿದ್ದ ಬಟ್ಟೆಗಳನ್ನು ಹಾಕಿಕೊಳ್ಳಲು ಬೀರುವನ್ನು ತೆರೆದು ನೋಡಲಾಗಿ ಬೀರುವಿನ ಒಳಗಿರುವ ಎಡ ಭಾಗದ ಸೀಕ್ರೇಟ್ ಲಾಕರ್ ಕಿತ್ತಿರುವುದು ಕಂಡು ಬಂದಿದ್ದು, ನನಗೆ ಗಾಬರಿಯಾಗಿ ಸೀಕ್ರೇಟ್ ಲಾಕರ್ ನೊಳಗೆ ಇಟ್ಟಿದ್ದ 1.25.000/- ರೂಗಳ ನಗದು ಹಣವನ್ನು ನೋಡಲಾಗಿ ಹಣ ಇರಲಿಲ್ಲ. ನಂತರ ವಿಚಾರವನ್ನು ನಮ್ಮ ತಂದೆಗೆ ಪೋನ್ ಮಾಡಿ ತಿಳಿಸಿರುತ್ತೇನೆ.  ದಿನಾಂಕ:29/07/2020 ರಂದು  ಬೆಳಿಗ್ಗೆ 09-30 ಗಂಟೆಯಿಂದ ಮದ್ಯಾಹ್ನ 3-00 ಗಂಟೆಯ ಮದ್ಯೆ ನಾವು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ನಾವು ನಮ್ಮ ಹೊಸ ಮನೆಯಲ್ಲಿಟ್ಟಿದ್ದ  ಬೀಗದ ಕೀಯನ್ನು ಎತ್ತಿಕೊಂಡು ಹೋಗಿ ನಮ್ಮ ವಾಸದ ಮನೆಯ ಬೀಗವನ್ನು ತೆಗೆದು ಮನೆಯೊಳಗೆ ಹೋಗಿ ಮನೆಯ ಹಾಲ್ ನಲ್ಲಿದ್ದ ಗಾಡ್ರೇಜ್ ಬೀರುವಿನಲ್ಲಿದ್ದ ಬೀಗದ ಕೀಯಿಂದ ಬೀರುವನ್ನು ತೆರೆದು ಬೀರುವಿನಲ್ಲಿರುವ ಎಡ ಭಾಗದ ಸೀಕ್ರೇಟ್ ಲಾಕರ್ ನ್ನು ಯಾವುದೋ ಆಯುಧದಿಂದ ಮೀಟಿ ಕಿತ್ತು ಸೀಕ್ರೇಟ್ ಲಾಕರ್ ನಲ್ಲಿಟ್ಟಿದ್ದ 1.25.000/- ರೂಗಳ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ನಮ್ಮ ಮನೆಯಲ್ಲಿ ನಗದು ಹಣವನ್ನು ಕಳ್ಳತನ ಮಾಡಿರುವ ಕಳ್ಳರನ್ನು ಮತ್ತು ನಗದು ಹಣವನ್ನು ಪತ್ತೇ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೊಟ್ಟ ದೂರಿನ ಸಾರಾಂಶವಾಗಿರುತ್ತದೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 104/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ: 30/07/2020 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ನರಸಿಂಹಮೂರ್ತಿ ರವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ಚಿಂತಾಮಣಿ ತಾಲ್ಲೂಕು ಕೇತನಾಯಕನಹಳ್ಳಿ ಗ್ರಾಮದಲ್ಲಿ ನಮ್ಮ ಚಿಕ್ಕಪ್ಪರವರು ಮರಣ ಹೊಂದಿದ್ದು, ಈ ದಿನ ದಿನಾಂಕ:30/07/2020 ರಂದು ನಾನು ನಮ್ಮ ತಂದೆ ನರಸಿಂಹಪ್ಪರವರು ಕಾಮರೆಡ್ಡಿಹಳ್ಳಿ ಗ್ರಾಮದ ನನ್ನ ಸ್ನೇಹಿತರಾದ ರಾಮಾಂಜಿನಪ್ಪರವರ ಬಾಬತ್ತು KA-40, EE-5015 ದ್ವಿಚಕ್ರ ವಾಹನದಲ್ಲಿ ನಮ್ಮ ತಂದೆಯವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ನಮ್ಮ ಚಿಕ್ಕಪ್ಪರವರ ಸಾವಿಗೆ ಹೋಗಲು ಬೆಳಿಗ್ಗೆ ಸುಮಾರು 7-00 ಗಂಟೆಗೆ ಮನೆಯನ್ನು ಬಿಟ್ಟು ನಾನು ದ್ವಿಚಕ್ರ ವಾಹನ ಚಾಲಾಯಿಸಿಕೊಂಡು ಚಿಕ್ಕಬಳ್ಳಾಪುರ ವೀರದಿಮ್ಮಮ್ಮನ ಕಣಿವೆಯಲ್ಲಿ NH-234 ರಸ್ತೆಯ ಎಡಭಾಗದಲ್ಲಿ ಬರುತ್ತಿದ್ದಾಗ ಬೆಳಿಗ್ಗೆ ಸುಮಾರು 8-00 ಗಂಟೆಯಲ್ಲಿ ನನ್ನ ಎದುರುಗಡೆಯಿಂದ ಯಾವುದೋ ಒಂದು ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನಾನು ಮತ್ತು ನಮ್ಮ ತಂದೆ ನರಸಿಂಹಪ್ಪರವರು ಕೆಳಕ್ಕೆ ಬಿದ್ದು, ಹೋದೆವು. ನನಗೆ ತಲೆಯ ಹಿಂಭಾಗ ರಕ್ತಗಾಯ ಮತ್ತು ಎಡಕಾಲ ಹಿಮ್ಮಡಿ, ಎಡಕೈ ಭುಜದ ಮೇಲೆ, ಬಲಮೊಣಕಾಲ ಬಳಿ ತರಚಿದ ಗಾಯಗಳಾಗಿರುತ್ತೆ. ನಮ್ಮ ತಂದೆಯವರನ್ನು ಎತ್ತಿ ಕುಳ್ಳರಿಸುವಷ್ಟರಲ್ಲಿ ಕಾರಿನ ಚಾಲಕ ಬಂದು ನಮ್ಮನ್ನು ಉಪಚರಿಸಿದ್ದು, ನಮ್ಮ ತಂದೆಯವರಿಗೆ ಬಲ ಮೊಣಕಾಲಿನ ಬಳಿ ಬಾರಿ ರಕ್ತಗಾಯವಾಗಿದ್ದು, ಬಲಕಿಬ್ಬೊಟ್ಟೆಯಬಳಿ ತರಚಿದ ರಕ್ತಗಾಯಗಳಾಗಿದ್ದವು. ನಾನು ಅಲ್ಲಿಯೇ ಇದ್ದ ಕಾರಿನ ನಂಬರ್ ನೋಡಲಾಗಿ KA-08, 9890 ಬಿಳಿ ಬಣ್ಣದ ಸ್ವಪ್ಟ್ ಡಿಸೈರ್ ಕಾರಾಗಿರುತ್ತೆ. ನನ್ನನ್ನು ಮತ್ತು ನಮ್ಮ ತಂದೆಯವರನ್ನು ಕಾರಿನ ಚಾಲಕ ರಸ್ತೆಯಲ್ಲಿ ಬಂದ ಯಾವುದೋ ಒಂದು ಆಟೋದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿರುತ್ತಾರೆ. ನಮಗೆ ಅಪಘಾತ ಮಾಡಿದ KA-08, 9890 ನೊಂದಣಿ ಸಂಖ್ಯೆಯ ಸ್ವಪ್ಟ್ ಡಿಸೈರ್ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 105/2020 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ 30/07/2020 ರಂದು ಮಧ್ಯಾಹ್ನ 13 ಗಂಟೆಗೆ ಪಿಎಸ್ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಕೆಎ-40 ಇಇ-7251 ನೊಂದಣಿ ಸಂಖ್ಯೆಯ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಚಿಕ್ಕಬಳ್ಳಾಪುರ ನಗರದಿಂದ ಗೌರೀಬಿದನೂರು ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ಅಕ್ರಮವಾಗಿ ಟೆಟ್ರಾ ಪಾಕೇಟುಗಳನ್ನು ಸಾಗಿಸುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಕೆಎ-40 ಜಿ-567 ಸರ್ಕಾರಿ ಜೀಪಿನಲ್ಲಿ ಸಿಬ್ಬಂದಿಯಾದ ಹೆಚ್ ಸಿ 38 ಪಿಸಿ 264 ನರಸಿಂಹಮೂರ್ತಿ ಮತ್ತು ಜೀಪ್ ಚಾಲಕ ಎ ಹೆಚ್ ಸಿ 23 ಮಂಜುನಾಥ ರವರೊಡನೆ ಮೊಟ್ಲೂರು ಕ್ರಾಸ್ ಸಮೀಪ್ ಬೆಳಿಗ್ಗೆ 11.15 ಗಂಟೆಗೆ ಹೋಗಿ ಪಂಚರನ್ನು ಕರೆದು ವಿಚಾರವನ್ನು ತಿಳಿಸಿದ್ದು ನಾನು ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಮೊಟ್ಲೂರು ಕ್ರಾಸ್ ಸಮೀಪ ಜೀಪನ್ನು  ಮರೆಯಲ್ಲಿ ನಿಲ್ಲಿಸಿ ಕಾಯುತ್ತಿದ್ದಾಗ ಬೆಳಿಗ್ಗೆ  11.30 ಗಂಟೆಗೆ ಕೆಎ-40 ಇಇ-7251 ದ್ವಿಚಕ್ರ ವಾಹನ ಬಂದಿದ್ದು  ಪಂಚರ ಸಮಕ್ಷಮ ಪೊಲೀಸರು ದ್ವಿಚಕ್ರ ವಾಹನವನ್ನು ತಡೆಯುವಷ್ಟರಲ್ಲಿ ದ್ವಿಚಕ್ರ ವಾಹನ ಸವಾರ ವಾಹನವನ್ನು ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದ್ದು ನಾನು ಮತ್ತು ಸಿಬ್ಬಂಧಿಯವರು ಅತನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀನಾಥ ಬಿನ್ ಶ್ರೀರಾಮಪ್ಪ, 30 ವರ್ಷ, ಈಡಿಗರು ಶ್ರೀ ಬಾಲಾಜಿ ವೈನ್ಸ್ ನಲ್ಲಿ ಕ್ಯಾಷಿಯರ್ ಕೆಲಸ ವಾಸ ಕನಗಾನಕೊಪ್ಪ ಗ್ರಾಮ ಮಂಚೇನಹಳ್ಳಿ  ಹೋಬಳಿ ಗೌರಿಬಿದನೂರು ತಾಲ್ಲೂಕು ದ್ವಿಚಕ್ರ ವಾಹನದಲ್ಲಿದ್ದ ಬಿಳಿ ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಲಾಗಿ ಹೈವಾರ್ಡ ಚೀರ್ಸ್ ವಿಸ್ಕಿ 90 ಎಂ ಎಲ್ ನ 5 ಕೇಸುಗಳಿದ್ದು  ಪ್ರತಿಯೊಂದು ಕೇಸನ್ನು ಪರಿಶೀಲಿಸಲಾಗಿ 96 ಟೆಟ್ರಾ ಪಾಕೇಟುಗಳಿದ್ದು ಒಟ್ಟು  480 ಪಾಕೇಟುಗಳಿದ್ದು ಒಟ್ಟು 43 ಲೀಟರ್ 200 ಎಂ ಎಲ್ ಮಧ್ಯ ಇದ್ದು ಅವುಗಳ ಮೊತ್ತ 16,862.40 ರೂಪಾಯಿಗಳಾಗಿದ್ದು ಸದರಿ ಮಧ್ಯದ ಬಗ್ಗೆ ಶ್ರೀನಾಥರವರನ್ನು ವಿಚಾರಿಸಲಾಗಿ ತಾನು ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಶ್ರೀ ಬಾಲಾಜಿ ವೈನ್ಸ್ ನಲ್ಲಿ ಕ್ಯಾಷಿಯರ್ ಕೆಲಸ ಮಾಡಿಕೊಂಡಿದ್ದು ಸದರಿ ಬಾಲಾಜಿ ವೈನ್ಸ್ ನ ಮಾಲೀಕರಾದ ಜೆ,ಜಿ ರಮೇಶ್ ರವರು ಪ್ರತೀ ನಿತ್ಯ ಗ್ರಾಮಗಳಲ್ಲಿ ಮಧ್ಯ ಮಾರಾಟ ಮಾಡಲು ಸೂಚಿಸಿದ್ದು ಅದರಂತೆ ಪ್ರತೀ ನಿತ್ಯ 5 ಕೇಸುಗಳನ್ನು ಚಿಕ್ಕಬಳ್ಳಾಪುರ ಬೊಮ್ಮೇನಹಳ್ಳಿ, ಸಾದೇನಹಳ್ಳಿ, ಎ ಕೊತ್ತೂರು ಗ್ರಾಮಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು ಸದರಿ ಮಧ್ಯವನ್ನು ದ್ವಿಚಕ್ರ ವಾಹನದಲ್ಲಿ ಸಾಗಾಣಿಕೆ ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುಧೇ ಪರವಾನಗಿ ಇರುವುದಿಲ್ಲ ತಮ್ಮ ಮಾಲಿಕರ ಆದೇಶದ ಮೇರೆಗೆ ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿಸಿದ್ದರ ಮೇರೆಗೆ ಶ್ರೀನಾಥ ನನ್ನು ವಶಕ್ಕೆ ಪಡೆದು ಸ್ಥಳದಲ್ಲಿ ದೊರೆತ 90 ಎಂ ಎಲ್ ನ ಹೈವಾಡ್ಸ್ ನ ಚೀರ್ಸ್ ವಿಸ್ಕಿ 480 ಟೆಟ್ರಾ ಪಾಕೆಟ್ ಗಳನ್ನು ಅಮಾನತ್ತು ಪಡಿಸಿಕೊಂಡು ಪ್ರತಿಯೊಂದು ಕೇಸಿನಿಂದ ಒಂದೊಂದು 90 ಎಂ ಎಲ್ ನ ಟೆಟ್ರಾ ಪಾಕೇಟ್ ಗಳನ್ನು ಮಾದರಿಗಾಗಿ ಎಫ್ ಎಸ್ ಎಲ್ ಗೆ ಕಳುಹಿಸುವ ಸಲುವಾಗಿ ಪ್ರತ್ಯೇಕವಾಗಿ ತೆಗೆದು ಬಿಳಿ ಬಣ್ಣದ ಬಟ್ಟೆಯ ಚೀಲದಲ್ಲಿ ಇಟ್ಟು ದಾರದಿಂದ ಮೂತಿಯನ್ನು ಕಟ್ಟಿ ಮೊಹರು ಮಾಡಿ ಕೆ ಎಂಬ ಇಂಗ್ಲೀಷ್ ಅಕ್ಷರದಿಂದ ಮೊಹರು ಮಾಡಿರುತ್ತೆ ಉಳಿದ 90 ಎಂ ಎಲ್ ನ 475 ಟೆಟ್ರಾ ಪಾಕೆಟ್ ಗಳನ್ನು ಮತ್ತು ಸದರಿ ಮಧ್ಯವನ್ನು ಸಾಗಾಣಿಕೆ ಮಾಡಲು ಉಪಯೋಗಿಸಿದ್ದ ಕೆಎ-40 ಇಇ-7251 ನೊಂದಣಿ ದ್ವಿಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಂಡು ಆರೋಪಿ ಮಾಲು ಮತ್ತು ಪಂಚಾನೆಮೆಯೊಂದಿಗೆ ಠಾಣೆಗೆ ಬಂದು ಆರೋಪಿಗಳ ವಿರುದ್ದ ಕಲಂ 32,34 ಕೆ ಇ ಆಕ್ಟ ರೀತ್ಯ ಪ್ರಕರಣವನ್ನು ದಾಖಲಿಸಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 282/2020 ಕಲಂ. 87  ಕೆ.ಪಿ  ಆಕ್ಟ್:-

          ದಿನಾಂಕ: 29/07/2020 ರಂದು ರಾತ್ರಿ 9.30 ಗಂಟೆಗೆ ಮಾನ್ಯ ನ್ಯಾಯಾಧೀಶರು ಇ-ಮೇಲ್ ಮುಖಾಂತರ ನೀಡಿದ ಅನುಮತಿಯನ್ನು ಪಡೆದು ದಾಖಲಿಸಿಕೊಂಡ ಪ್ರಕರಣದ ಸಾರಾಂಶವೇನೆಂದರೆ, ಈ ದಿನ ದಿನಾಂಕ:29-07-2020 ರಂದು ಸಂಜೆ 4-00 ಗಂಟೆಯ ಸಮಯದಲ್ಲಿ ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ, ಠಾಣಾ ಸರಹದ್ದಿಗೆ ಸೇರಿದ ಭಕ್ತರಹಳ್ಳಿ ಗ್ರಾಮದ ಕೆರೆಯಂಗಳದಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ದೊರೆತಿದ್ದು, ಸದರಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಠಾಣೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಹೆಚ್.ಸಿ-249 ಶ್ರೀ.ಸಂದೀಪ್ ಕುಮಾರ್, ಹೆಚ್.ಸಿ-41 ಜಗದೀಶ, ಸಿಪಿಸಿ-516 ಶ್ರೀ.ವಿಶ್ವನಾಥ, ಸಿಪಿಸಿ-504 ಶ್ರೀ.ಸತೀಶ ಹಾಗೂ ಚಾಲಕ ಎ.ಹೆಚ್.ಸಿ-38 ಶ್ರೀ.ಮುಖೇಶ್ ಮತ್ತು ಪಂಚರೊಂದಿಗೆ KA-40-G-326 ನಂಬರಿನ ಠಾಣೆಯ ಇಲಾಖಾ ಜೀಪಿನಲ್ಲಿ ಭಕ್ತರಹಳ್ಳಿ ಗ್ರಾಮದ ಕೆರೆಯಂಗಳಕ್ಕೆ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ನೋಡಲಾಗಿ ಅಲ್ಲಿ ಹುಣಸೇ ಮರವೊಂದರ ಕೆಳಗೆ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದು ಸದರಿಯವರನ್ನು ಸುತ್ತುವರಿದು ಓಡಿಹೋಗದಂತೆ ಎಚ್ಚರಿಕೆ ನೀಡಿದರೂ ಸಹ ಆ ಪೈಕಿ ಕೆಲವರು ಓಡಿ ಹೋಗಿದ್ದು, ಉಳಿದಂತೆ ಸ್ಥಳದಲ್ಲಿದ್ದ 03 ಜನ ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರುಗಳ ಹೆಸರು, ವಿಳಾಸ ಕೇಳಲಾಗಿ 1) ಕೃಷ್ಣಪ್ಪ ಬಿನ್ ಲೇಟ್ ನಾರಾಯಣಪ್ಪ, 50 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಕತ್ತರಿಗುಪ್ಪೆ ಗ್ರಾಮ ಮತ್ತು ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು, 2) ರಾಮಾಂಜಿನಪ್ಪ ಬಿನ್ ನಾರಾಯಣಪ್ಪ, 45 ವರ್ಷ, ಆದಿಕರ್ನಾಟಕ ಜನಾಂಗ, ಜಿರಾಯ್ತಿ, ವಾಸ ಕತ್ತರಿಗುಪ್ಪೆ ಗ್ರಾಮ ಮತ್ತು ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು, 3) ಫಿಲೀಫ್ ಬಿನ್ ರಾಯಪ್ಪ, 40 ವರ್ಷ, ಕ್ರಿಶ್ಚಿಯನ್ ಜನಾಂಗ, ಟಾಟಾ ಎಸಿಇ ಚಾಲಕ, ವಾಸ ಕಡಿಶಾನಹಳ್ಳಿ ಗ್ರಾಮ, ಕತ್ತರಿಗುಪ್ಪೆ ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ನಂತರ ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ 1) 52 ಇಸ್ಪೀಟ್ ಕಾರ್ಡುಗಳು, 2) 2350/- ರೂ ನಗದು ಹಣ ದೊರೆತಿದ್ದು, ಸದರಿ ಮಾಲುಗಳನ್ನು ಸಂಜೆ 5-00 ರಿಂದ ಸಂಜೆ 6-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯನ್ನು ಕೈಗೊಳ್ಳುವುದರ ಮೂಲಕ ಅಮಾನತ್ತುಪಡಿಸಿಕೊಂಡಿದ್ದು, ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಜೂಜಾಟವಾಡುತ್ತಿದ್ದ ಮೇಲ್ಕಂಡ 03 ಜನ ವ್ಯಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದರ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ನಂತರ ಪ್ರಕರಣವನ್ನು ದಾಖಲು ಮಾಡಲು ಇ-ಮೇಲ್ ಮುಖಾಂತರ ಘನ ನ್ಯಾಯಾಲಯದ ಅನುಮತಿಗಾಗಿ ನಿವೇದಿಸಿಕೊಂಡಿದ್ದು, ಘನ ನ್ಯಾಯಾಲಯವು ನಿವೇದನೆಯನ್ನು ಪುರಸ್ಕರಿಸಿ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 122/2020 ಕಲಂ. 454,457,380 ಐ.ಪಿ.ಸಿ:-

          ದಿನಾಂಕ:29/07/2020 ರಂದು  ಮದ್ಯಾಹ್ನ1.30 ಗಂಟೆಯಲ್ಲಿ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ  ಸಾರಾಂಶವೇನೆಂದರೆ:ತಾನು ಸುಮಾರು 4 ವರ್ಷಗಳಿಂದ  ಗುಡಿಬಂಡೆ ಪಟ್ಟಣದ 10ನೇ ವಾರ್ಡ್ ಬಾಪೂಜಿ ನಗರದಲ್ಲಿ ವಾಸವಾಗಿರುತ್ತೇನೆ.ತಾನು ಸುಮಾರು ಒಂದು ವರ್ಷದ ಹಿಂದೆ ತನ್ನ ಮಗಳ  ಹುಟ್ಟು ಹಬ್ಬಕ್ಕೆ ಸ್ನೇಹಿತರು ಹಾಗೂ ಸಂಬಂದಿಕರು ಉಂಗುರಗಳನ್ನು ಕೊಟ್ಟಿರುತ್ತಾರೆ. ಈ ಉಂಗುರಗಳನ್ನು ತಾನು ತಮ್ಮ ಮನೆಯ ಬೀರುವಿನಲ್ಲಿ ಇಟ್ಟಿದ್ದು, ತಾನು ನಾಲ್ಕು ದಿನದಿಂದ  ನಮ್ಮ ವಾರ್ಡ್ ನಲ್ಲಿ ಕೊವಿಡ್ -19 ಪ್ರಕರಣಗಳು ಜಾಸ್ತಿಯಾದುದ್ದರಿಂದ ತಮ್ಮ ಅತ್ತೆಯ ಮನೆಯಾದ  ರಾಮಪಟ್ಟಣಕ್ಕೆ ಹೋಗಿ ಬರುತ್ತಿದ್ದೆ. ದಿನಾಂಕ:29/07/2020 ರಂದು ಬೆಳ್ಳಿಗೆ 8.30 ರಿಂದ 9.00 ಗಂಟೆಯ ಸಮಯದಲ್ಲಿ  ತಮ್ಮ ಮನೆಯ ಮಾಲೀಕರು ತನಗೆ ಪೋನ್ ಮಾಡಿ  ತಮ್ಮ ಮನೆಗೆ ದಿನಾಂಕ:28/07/2020ರಂದು ರಾತ್ರಿ ಯಾರೋ ಕಳ್ಳರು ಬೀಗ ಹಾಕಿ ನಿಮ್ಮ ಮನೆಯ ಬಾಗಿಲು ತೆರೆದಿದ್ದಾರೆ ಎಂದು ಹೇಳಿದರು. ನಂತರ  ತಾನು  ರಾಮಪಟ್ಟಣದಿಂದ ತಮ್ಮ ಮನೆಗೆ ಬಂದು ವಿಚಾರ ತಿಳಿಯಲಾಗಿ ವಿಚಾರವು ನಿಜವಾಗಿದ್ದು  ನಂತರ ತಾನು ತನ್ನ ಹೆಂಡತಿಯನ್ನು ಕರೆದುಕೊಂಡು ಬಂದು ಮನೆಯ ಒಳಕ್ಕೆ ಹೋಗಿ ನೊಡಿದಾಗ ಬೀರುವಿನ ಬಾಗಿಲು ತೆರೆದು ಬೀರುವಿನಲ್ಲಿದ್ದ ಬಟ್ಟೆಗಳನ್ನು ಕಿತ್ತು ಹಾಕಿ ಬೀರುವಿನಲ್ಲಿದ್ದ  ಉಂಗುರಗಳು ಬ್ರಾಸ್ಲೈಟ್  ಹಾಗೂ ಲ್ಯಾಪ್ ಟಾಪ್ ನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಮೇಲ್ಕಂಡ ಒಡವೆಗಳ  ತೂಕ ಹಾಗೂ ಮೌಲ್ಯ ಹಾಗೂ ಲ್ಯಾಪ್ ಟಾಪ್ ಬೆಲೆಯನ್ನು ತಿಳಿಯ ಬೇಕಾಗಿರುತ್ತೆ. ನಂತರ ತಮ್ಮ ವಾರ್ಡ್ನ  ತಮ್ಮ ಮನೆಯ ಹತ್ತಿರ ಇರುವ ಬಾಬಾಜಾನ್ ಬಿನ್ ಅಲೀ ಅಕ್ಬರ್ ರವರು ಸಹ ಸುಮಾರು 2 ವರ್ಷಗಳಿಂದ  ತಮ್ಮ ವಾರ್ಡ್ನಲ್ಲಿಯೇ ಇದ್ದು ಅವರು ತಮ್ಮ ಅತ್ತೆಯ ಮನೆಗೆ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗಿದ್ದರು.ಅವರು ಸಹ ಬಂದು ನೋಡಿದಾಗ ಅವರ  ಮನೆಯಲ್ಲಿಯೂ ಬೀರುವನ್ನು ಹೊಡೆದು  ಬೀರುವಿನಲ್ಲಿದ್ದ ಒಂದು ನಕಲೇಸ್, ಒಂದು ಲಾಂಗ್ ಚೈನು, ಒಂದು ಬ್ರಾಸ್ ಲೈಟ್, ಒಂದು ಕಿವಿ ಸೇಟ್, ಉಂಗುರುಗಳು,  ಹಾಗೂ  ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮೇಲ್ಕಂಡ ಒಡವೆಗಳ  ತೂಕ ಹಾಗೂ ಮೌಲ್ಯ  ತಿಳಿಯ ಬೇಕಾಗಿರುತ್ತೆ. ಆದ್ದರಿಂದ ಈ ಮೇಲ್ಕಂಡ ಒಡವೆಗಳನ್ನು  ಹಾಗೂ ಲ್ಯಾಪ್ ಟಾಪ್ ನ್ನು ಕಳವು ಮಾಡಿಕೊಂಡು ಹೋಗಿರುವ  ಆರೋಪಿಗಳನ್ನು ಪತ್ತೆಮಾಡಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು  ಪ್ರಕರಣ ದಾಖಲಿಸಿರುತ್ತೆ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.85/2020 ಕಲಂ. 279,338 ಐ.ಪಿ.ಸಿ:-

          ದಿನಾಂಕ.29.07.2020 ರಂದು ಮದ್ಯಾಹ್ನ 3.00 ಗಂಟೆಗೆ ಪಿರ್ಯಾದಿ ಆರ್.ಪ್ರಕಾಶ್ ಬಾಬು, ಜೋಗುಪೇಟೆ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ನನ್ನ ಮಗನಾದ ಆರ್.ಪಿ.ಮಿಥುನ್ ಕುಮಾರ್ ರವರು ಸರಸ್ವತಿ ಕಾನ್ವೇಂಟ್ ಶಾಲೆಯಲ್ಲಿ ಕ್ಲರ್ಕು ಕೆಲಸ ಮಾಡಿಕೊಂಡಿದ್ದು, ದಿನಾಂಕ.29.07.2020 ರಂದು ಮದ್ಯಾಹ್ನ ಸುಮಾರು 1.00 ಗಂಟೆಯಲ್ಲಿ  ಮನೆಯಲ್ಲಿದ್ದಾಗ ನನ್ನ ಮಗ ಪೋನ್ ಮಾಡಿ ಈಗ ಶಿಡ್ಲಘಟ್ಟ ತಾಲ್ಲೂಕು ಕಚೇರಿ ಕಡೆಯಿಂದ ಮನೆ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುವಾಗ ಜಾಮೀಯಾ ಮಸೀದಿ ಸಮೀಪ ನಾಯಿ ಅಡ್ಡ ಬಂದು ತಾನು ಬಿದ್ದು ಹೋಗಿ ಬಲಕೈಗೆ ಪೆಟ್ಟಾಗಿದೆ ಗಾಡಿ ಓಡಿಸಲು ಆಗುವುದಿಲ್ಲ ಆಸ್ಪತ್ರೆಗೆ ಹೋಗಬೇಕು ಬಾ ಎಂದು ತಿಳಿಸಿದಾಗ ಕೂಡಲೇ ನಾನು ನಮ್ಮ ಸಂಬಂದಿ ಮಂಜುನಾಥ ರವರು ಸ್ಥಳಕ್ಕೆ ಬಂದು ನೊಡಿದಾಗ ನನ್ನ ಮಗನ ಬಲಮೊಬಕೈ ಕೆಳಭಾಗ ಮುರಿದ ಗಾಯಗಾಗಿದ್ದು, ಮೂಗು, ಗಡ್ಡದ ಕೆಳಗೆ ತರಚಿದ ರಕ್ತಗಾಯಗಳಾಗಿರುತ್ತೆ. ನನ್ನ ಮಗ ಚಾಲನೆ ಮಾಡುತ್ತಿದ್ದ KA.40.EA.0102 ದ್ವಿಚಕ್ರ ವಾಹನ ರಸ್ತೆಯಲ್ಲಿ ಬಿದ್ದು ಜಖಂಗೊಂಡಿರುತ್ತೆ. ನಂತರ ಗಾಯಗೊಂಡಿದ್ದ ನನ್ನ ಮಗನನ್ನು ಚಿಕಿತ್ಸೆ ಬಗ್ಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತೆ. ಈ ಅಪಘಾತಕ್ಕೆ ನನ್ನ ಮಗ ಆತನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿ ನಾಯಿಯನ್ನು ತಪ್ಪಿಸಲು ಹೋಗಿ ಸ್ವತಃ ಬಿದ್ದು ಗಾಯಗೊಂಡಿದ್ದು, ತನ್ನ ಮಗನ ಮೇಲೆ ಕಾನೂನು ಕ್ರಮ ಜರುಗಸಲು ಕೊಟ್ಟ ದೂರಿನ ಮೇರೆಗೆ ಠಾಣಾ ಮೊ.ಸಂ.85/2020 ಕಲಂ: 279, 338 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.