ದಿನಾಂಕ :30/06/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.150/2020 ಕಲಂ. 279,337 ಐ.ಪಿ.ಸಿ :-

          ದಿ:29-06-2020 ರಂದು ಸಂಜೆ 4:30 ಗಂಟೆಗೆ ಪಿರ್ಯಾಧಿದಾರರಾದ  ಶಂಕರರೆಡ್ಡಿ ಜಿ ಬಿನ್ ಲೇಟ್ ಚೌಡರೆಡ್ಡಿ, 44 ವರ್ಷ, ವಕ್ಕಲಿಗರು, ಜಿರಾಯ್ತಿ, ಚೆರುವುಮುಂದರಪಲ್ಲಿ ಗ್ರಾಮ, ಚಿಲಮತ್ತೂರು ಮಂಡಲಂ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ, ಆಂದ್ರಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ನಮ್ಮ ಅಣ್ಣ ಶ್ರೀನಿವಾಸರೆಡ್ಡಿ ರವರ  ಮಗಳಾದ ಸುಮಲತ ರವರನ್ನು ಬಾಗೇಪಲ್ಲಿ ಪುರದ ವಾಸಿ ಶ್ರೀನಿವಾಸರೆಡ್ಡಿ ರವರಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ದಿನಾಂಕ:27/06/2020 ರಂದು ನಾನು ಬಾಗೇಪಲ್ಲಿ ಪುರದ 17ನೇ ವಾರ್ಡಿನಲ್ಲಿರುವ ನನ್ನ ಅಣ್ಣನ ಮಗಳಾದ ಸುಮಲತ ರವರನ್ನು ನೋಡಿಕೊಂಡು ಬರಲು ನನ್ನ ಬಾಬತ್ತು K.A-41 E.G-1631 ಯಮಹಾ RX ಸೆಲ್ಯೂಟ್  ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿಗೆ ಬಂದಿರುತ್ತೇನೆ. ನನ್ನ ಅಣ್ಣನ ಮಗಳನ್ನು ನೋಡಿಕೊಂಡು ವಾಪಸ್ಸು ನಮ್ಮ ಗ್ರಾಮಕ್ಕೆವಾಪಸ್ಸು ಹೋಗುತ್ತಿದ್ದಾಗ, ಸಂಜೆ ಸುಮಾರು 4:30 ಗಂಟೆಯಲ್ಲಿ ಪೊತೇಪಲ್ಲಿ ಕ್ರಾಸ್ ನಲ್ಲಿ ಗೂಳೂರು ಕಡೆಯಿಂದ ಬಂದ KA-40 8849 ಟಾಟಾ ಎಸಿ ಪ್ಯಾಸೆಂಜರ್ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ದ್ವಿಚಕ್ರ ವಾಹನದ ಮುಂಬಾಗ ಡಿಕ್ಕಿ ಹೊಡೆಸಿದ ಪರಿಣಾಮವಾಗಿ ನಾನು ದ್ವಿಚಕ್ರ ವಾಹನದ ಸಮೇತ ಕೆಳಕ್ಕೆ ಬಿದ್ದು ಹೋಗಿದ್ದು, ನನ್ನ ದ್ವಿಚಕ್ರ ವಾಹನ ಜಖಂಗೊಂಡು, ನನ್ನ ಎಡಕೈ, ಎಡಭುಜಕ್ಕೆ ಮೂಗೇಟಾಯಿತು. ಎರಡೂ ಕಾಲುಗಳಿಗೆ ಮತ್ತು ಗದ್ದದ ಬಳಿ ರಕ್ತಗಾಯವಾಯಿತು. ತಕ್ಷಣ ಅಪಘಾತವನ್ನುಂಟು ಮಾಡಿದ ಟಾಟಾ ಎಸಿ ವಾಹನದ ಚಾಲಕನೇ ಅದೇ ವಾಹನದಲ್ಲಿ ನನ್ನನ್ನ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದನು. ನಂತರ ವೈದ್ಯರ ಸಲಹೆಯಂತೆ ನನ್ನನ್ನು ನನ್ನ ಅಳಿಯನಾದ ಶ್ರೀನಿವಾಸ ರೆಡ್ಡಿ ರವರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ನನಗೆ ಅಪಘಾತವನ್ನುಂಟು ಮಾಡಿದ ಕೆ.ಎ-40 8849 ಟಾಟಾ ಎಸಿ ವಾಹನದ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.151/2020 ಕಲಂ. 269,271 ಐ.ಪಿ.ಸಿ :-

          ದಿನಾಂಕ: 29-06-2020 ರಂದು ರಾತ್ರಿ 8:30 ಗಂಟೆಗೆ ಪಿ.ಸಿ 19 ರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯನ್ನು ಪಡೆದುಕೊಂಡಿದ್ದರ ಸಾರಾಂಶ –  ಈ ಮೂಲಕ  ಮಣಿಕಂಠ ಪಿ.ಸಿ 19 ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ, ನಾನು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ  19/01/2020 ರಿಂದ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತೇನೆ. ನಾನು ಮೇಲಾಧಿಕಾರಿಗಳ ಆದೇಶದಂತೆ ಪರಿಷ್ಕತ ಬೀಟ್  ಪದ್ದತಿ 1017 ಪ್ರಕಾರ  ಬಾಗೇಪಲ್ಲಿ ಪೊಲೀಸ್ ಠಾಣೆಯ 27 ನೇ ಬೀಟ್  ಅನ್ನು ನಿರ್ವಹಿಸುತ್ತಿರುತ್ತೇನೆ. ನನ್ನ ಬೀಟಿನಲ್ಲಿ ನರಾವಲಪಲ್ಲಿ, ಸದ್ದುಪಲ್ಲಿ, ಸದ್ದುಪಲ್ಲಿ ತಾಂಡ, ದೋರಣಾಲಪಲ್ಲಿ ಗ್ರಾಮಗಳು ಇರುತ್ತವೆ. ದಿನಾಂಕ:29/06/2020 ರಂದು ಮದ್ಯಾಹ್ನ ನಾನು  ಬೀಟ್ ಗೆ ತೆರಳಿದ್ದು, ಬೀಟಿನಲ್ಲಿ ಬರುವ  ದೋರಣಾಲಪಲ್ಲಿ. ನರಾವಲಪಲ್ಲಿ, ಸದ್ದುಪಲ್ಲಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಾರ್ವಜನಿಕರಲ್ಲಿ ಕೋವಿಡ್ -19 ಬಗ್ಗೆ ಜಾಗೃತಿಯನ್ನು ಮೂಡಿಸಿಕೊಂಡು ಪ್ರತಿಯೊಬ್ಬರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು, ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವಂತೆ, ಆಗಾಗ ಸ್ಯಾನಿಟೈಸರ್ ಅನ್ನು ಬಳಸುವಂತೆ  ತಿಳುವಳಿಕೆಯನ್ನು ನೀಡಿ,  ಸಂಜೆ 7:30 ಗಂಟೆಯ ಸುಮಾರಿನಲ್ಲಿ ಸದ್ದುಪಲ್ಲಿ ತಾಂಡಾ ಗ್ರಾಮಕ್ಕೆ ಹೋಗಲಾಗಿ ಗಂಗಮ್ಮ  ಗುಡಿ ದೇವಸ್ಥಾನದ ಮುಂಬಾಗ ಯಾರೋ ಮೂವರು ಆಸಾಮಿಗಳು  ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ,  ಮಾಸ್ಕ್ ಅನ್ನು ಧರಿಸದೆ, ಕುಳಿತುಕೊಂಡಿದ್ದರು.  ಸದರಿಯವರ ಕೈಗೆ ಕೋವಿಡ್-19 ಗೆ ಸಂಬಂದಿಸಿದ ಸೀಲ್ ಹಾಕಿರುತ್ತಾರೆ. ನಾನು ಸದರಿ ಆಸಾಮಿಗಳ ಹೆಸರು ವಿಳಾಸವನ್ನು ಕೇಳಲಾಗಿ 1) ಮುನ್ನಾ ನಾಯ್ಕ  ಬಿನ್ ವೆಂಕಟರಾಮ ನಾಯಕ್, 20 ವರ್ಷ, ಲಂಬಾಣಿ ಜನಾಂಗ, ಮನೆಕೆಲಸ, ಸದ್ದುಪಲ್ಲಿ ತಾಂಡ, ಬಾಗೇಪಲ್ಲಿ ತಾಲ್ಲೂಕು, ಮೊ:8861827292 2) ರವಿ ನಾಯಕ್, ಬಿನ್ ಜಯರಾಮನಾಯ್ಕ, 40 ವರ್ಷ. ಲಂಬಾಣಿ ಜನಾಂಗ, ಡ್ರೈವರ್, ಸದ್ದುಪಲ್ಲಿ ತಾಂಡ, ಬಾಗೇಪಲ್ಲಿ ತಾಲ್ಲೂಕು, ಮೊ:9082785021 3) ಕೃಷ್ಣಾ ನಾಯ್ಕ ಬಿನ್ ಜಯರಾಮ ನಾಯಕ್, 35 ವರ್ಷ, ಮನೆಕೆಲಸ, ಸದ್ದುಪಲ್ಲಿ ತಾಂಡ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಮೊ:9967392561 ಎಂದು ತಿಳಿಸಿರುತ್ತಾರೆ. ಅವರನ್ನು ವಿಚಾರ ಮಾಡಲಾಗಿ ನಾವು ಬಾಂಬೆಯಲ್ಲಿ ಕೆಲಸಗಳನ್ನು ಮಾಡಿಕೊಂಡಿದ್ದು, ಲಾಕ್ ಡೌನ್ ಇದ್ದುದರಿಂದ ಕರ್ನಾಟಕಕ್ಕೆ ವಾಪಸ್ಸಾಗಿರುವುದಾಗಿಯೂ, ಆರೋಗ್ಯ ಇಲಾಖೆಯವರು ನಾವು ಹೊಂ ಕ್ವಾರೆಂಟೈನಲ್ಲಿರುವಂತೆ ಸೂಚಿಸಿ, ನಮ್ಮ ಕೈಗಳಿಗೆ ಸೀಲ್ ಹಾಕಿರುತ್ತಾರೆಂದು ತಿಳಿಸಿದರು. ನಾನು ನಿಮ್ಮ ಕೈಗಳಿಗೆ ಸೀಲ್ ಹಾಕಿದ್ದರೂ ಹೋಂ ಕ್ವಾರೆಂಟೈನ್ ನಲ್ಲಿರುವಂತೆ ತಿಳಿಸಿದ್ದರೂ, ಏಕೆ  ಈ ರೀತಿ ರಸ್ತೆಯಲ್ಲಿ ಓಡಾಡುತ್ತಿರುವುದೆಂದು ಕೇಳಿದಾಗ, ಮನೆಯಲ್ಲಿ ಇದ್ದು ಬೇಸರವಾಗಿರುವುದರಿಂದ ಮನೆಯಿಂದ ಹೊರಗಡೆ ಬಂದಿರುವುದಾಗಿ ತಿಳಿಸಿರುತ್ತಾರೆ. ಕೋವಿಡ್-19 ಬಗ್ಗೆ ಸದರಿಯವರಿಗೆ ಈಗಾಗಲೇ ಮಾಹಿತಿ ನೀಡಿ ಹೋಂ ಕ್ವಾರೆಮಟೈನ್ ಸೀಲ್ ಹಾಕಿದ್ದರೂ ಸಹಾ ಸಾಂಕ್ರಾಮಿಕ ರೋಗ ಹರುಡುವುದೆಂದು ತಿಳಿದರೂ, ನಿರ್ಲಕ್ಷಿಸಿ ಸಾರ್ವಜನಿಕರು ಸೇರುವ ದೇವಸ್ಥಾನದ ಮುಂಬಾಗದಲ್ಲಿ ಕುಳಿತುಕೊಂಡಿರುತ್ತಾರೆ.  ಸಾಂಕ್ರಾಮಿಕ ರೋಗದ ಬಗ್ಗೆ ನಿರ್ಲಕ್ಷತೆ ಮಾಡಿ ಹೊಂ ಕ್ವಾರೆಂಟೈನ್ ನಿಯಮವನ್ನು ಉಲ್ಲಂಘಿಸಿರುವ ಸದರಿ ಆಸಾಮಿಗಳ ವಿರುದ್ದ ಮುಂದಿನ ಕ್ರಮಕ್ಕಾಗಿ ವರದಿಯನ್ನು ನೀಡಿರುತ್ತೇನೆ, ಎಂದು ನೀಡಿದ ವರಧಿಯನ್ನು ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.89/2020 ಕಲಂ. 279,337 ಐ.ಪಿ.ಸಿ :-

          ದಿ:29.06.2020 ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದಿದಾರರಾದ ಸುಮಂತ್ ಎಂ ಎ ಬಿನ್ ಲೇಟ್ ಆದಿನಾರಾಯಣರೆಡ್ಡಿರವರು ಠಾಣೆಗೆ ಹಾಜರಾಗಿ ನಿಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ: 29.06.2020 ರಂದು ಬೆಳಿಗ್ಗೆ 10-00 ಗಂಟೆಗೆ ತನ್ನ ಬಾಬತ್ತು ಕೆಎ 40 ಎಂ 6377 ನೊಂದಣಿ ಸಂಖ್ಯೆಯ ನಿಸಾನ್ ಟೆರಾನ ಕಾರಿನಲ್ಲಿ ಬಾಗೇಪಲ್ಲಿಯನ್ನು ಬಿಟ್ಟು ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಬಂದು ಬೆಳಿಗ್ಗೆ 11-55 ಗಂಟೆಗೆ ವಾಪಸ್ಸು ಬಾಗೇಪಲ್ಲಿಗೆ ಹೋಗಲು ಎನ್ ಹೆಚ್ 7 ರಸ್ತೆಯ ಸೆಟ್ ದಿನ್ನೆ ಸಮೀಪ ಹೋಗಿ ಚಿಕ್ಕಬಳ್ಳಾಪುರ – ಬಾಗೇಪಲ್ಲಿ ರಸ್ತೆಯಲ್ಲಿ ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿ ಅಂಗಡಿಯಲ್ಲಿ ನೀರಿನ ಬಾಟಲನ್ನು ತೆಗೆದುಕೊಂಡು ಬರಲು ಹೋಗಿ ಬರುವಷ್ಟರಲ್ಲಿ ಕೆಎ 07 ಕ್ಯೂ 1296 ನೊಂದಣಿ ಸಂಖ್ಯೆಯ ಟಿವಿಎಸ್ ಸ್ಟಾರ್ ಸಿಟಿ ದ್ವಿ ಚಕ್ರ ವಾಹನ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಕಾರಿನ ಹಿಂಭಾಗದ ಬಲಭಾಗ ಡಿಕ್ಕಿ ಹೊಡೆಸಿ ಕೆಳಗೆ ಬಿದ್ದು, ಹೋಗಿದ್ದು, ತಮ್ಮ ಕಾರಿನ ಹಿಂಭಾಗದ ಬಲಭಾಗ ಮತ್ತು ದ್ವಿ ಚಕ್ರ ವಾಹನದ ಮುಂಭಾಗ ಜಖಂಗೊಂಡಿದ್ದು, ದ್ವಿ ಚಕ್ರ ವಾಹನ ಸವಾರನಿಗೆ ಎಡಕಾಲಿನ ಬಳಿ ರಕ್ತ ಗಾಯವಾಗಿರುತ್ತದೆ. ನಂತರ ಗಾಯಾಳುವನ್ನು 108 ಅಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇನೆಂದು  ಈ ಅಪಘಾತಕ್ಕೆ ಕಾರಣನಾದ ಕೆಎ 07 ಕ್ಯೂ 1296 ನೊಂದಣಿ ಸಂಖ್ಯೆಯ ಟಿವಿಎಸ್ ಸ್ಟಾರ್ ಸಿಟಿ ದ್ವಿ ಚಕ್ರ ವಾಹನ ಸವಾರನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ  ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.90/2020 ಕಲಂ. 269,270  ಐ.ಪಿ.ಸಿ :-

          ದಿನಾಂಕ:29-06-2020 ರಂದು ರಾತ್ರಿ 9.30 ಗಂಟೆಯಲ್ಲಿ ಶ್ರೀ. ಎನ್.ಮಂಜುನಾಥ ಹೆಚ್.ಸಿ-150 ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:29-06-2020 ರಂದು  ಬೆಳಿಗ್ಗೆ ಹಾಜರಾತಿಯಲ್ಲಿ ಪಿ.ಎಸ್.ಐ ರವರು ತನಗೆ ರಾತ್ರಿ ಗಸ್ತು ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದು  ಅದರಂತೆ ತಾನು  ರಾತ್ರಿ 8.30  ಗಂಟೆಯಲ್ಲಿ ಸಬ್ಬೇನಹಳ್ಳಿ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ತನಗೆ ಬಂದ ಮಾಹಿತಿಯ ಮೇರೆಗೆ ಸಬ್ಬೇನಹಳ್ಳಿ ಗ್ರಾಮದ ವಾಸಿ  ವಿಶ್ವನಾಥ ಬಿನ್ ಮಂಜುನಾಥ, 25ವರ್ಷ , ಪ.ಜಾತಿ ರವರು ದಿನಾಂಕ:19-12-2019 ರಂದು ದ್ರಾಕ್ಷಿ ಕಟ್ಟಿಂಗ್ ಕೆಲಸಕ್ಕೆ  ಮಹಾರಾಷ್ಟ್ರದ ಸೋಲಾಫುರಕ್ಕೆ ಹೋಗಿದ್ದವನು ದಿನಾಂಕ:12-06-2020 ರಂದು ರೈಲಿನಲ್ಲಿ ತುಮಕೂರಿಗೆ ವಾಪಸ್ಸು ಬಂದಿರುತ್ತಾನೆಂದು ದಿನಾಂಕ:12-06-2020 ರಂದು ವಿಶ್ವನಾಥ ಬಿನ್ ಮಂಜುನಾಥ ರವರನ್ನು ಮಾನ್ಯ ಜಿಲ್ಲಾಧಿಕಾರಿಗಳು  ದಿನಾಂಕ: 19-06-2020 ರವರಿಗೆ ಚದಲಪುರ ಗ್ರಾಮದ ಬಳಿ ಇರುವ  ಆರೋಗ್ಯ ಕೇಂದ್ರದಲ್ಲಿ ಪ್ರತ್ಯಕಗೊಳಿಸುವಿಕೆ (Quarantine) ಇರಲು ಆದೇಶ ಮಾಡಿರುತ್ತಾರೆ. ನಂತರ ಮಾನ್ಯ ಜಿಲ್ಲಾಧಿಕಾರಿಗಳು  ದಿನಾಂಕ:19-06-2020 ರಿಂದ 14  ದಿನಗಳ  ಕಾಲ(Home Quarantine)  ನಿವಾಸದಲ್ಲಿ ಇರಲು ಸೂಚನೆಗಳನ್ನು ನೀಡಿ ಹೋಮ್ ಕ್ವಾರಂಟೈನ್ ಬಗ್ಗೆ ಕೈಗೆ ಸೀಲ್  ಮಾಡಿ ಪ್ರತ್ಯಕಗೊಳಿಸುವಿಕೆ (Home Quarantine)ನಿಗಾವಣೆಯಲ್ಲಿರಲು ಆದೇಶ ಮಾಡಿ ಕಳುಹಿಸಿಕೊಟ್ಟಿರುತ್ತಾರೆ. ದಿನಾಂಕ:22-06-2020 ರಂದು  ವಿಶ್ವನಾಥ ಬಿನ್ ಮಂಜುನಾಥ ರವರು ತನ್ನ ಅಣ್ಣನ ಮಗಳು ವಿಜೇತ್ ರವರ ಜನ್ಮ ದಿನಾಂಕದ ಸಲುವಾಗಿ ಚಿಕ್ಕಬಳ್ಳಾಪುರ ನಗರಕ್ಕೆ ಬಂದು  ಎ.ಟಿ,ಎಂ ನಲ್ಲಿ ಹಣವನ್ನು ಡ್ರಾ ಮಾಡಿಕೊಂಡು ನಂತರ   ಬೇಕರಿಯಲ್ಲಿ ಕೇಕ್ ಅನ್ನು ತೆಗೆದುಕೊಂಡು  ಹೋಗಿರುತ್ತಾನೆ ಹಾಗು ಸದರಿ ವ್ಯಕ್ತಿಯ ಮೊಬೈಲ್ ದೂರವಾಣಿ ಸಂಖ್ಯೆ 9980134765  ಎಂಬುದಾಗಿ  ತಿಳಿದು ಬಂದಿರುತ್ತೆ. ವಿಶ್ವನಾಥ ಬಿನ್ ಮಂಜುನಾಥ ರವರು ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್ -19 ಸಾಂಕ್ರಾಮಿಕ ರೋಗ ಸೋಂಕು ಹರಡುವ ಸಂಭವವಿದೆ ಎಂದು ತಿಳಿದು ಸಹ   ಉದ್ದೇಶ ಪೂರ್ವಕವಾಗಿ  ಸಾರ್ವಜನಿಕರಿಗೆ ಭಯವನ್ನು ಉಂಟು ಮಾಡುವ  ರೀತಿ ಕಾರಣನಾಗಿ ಮತ್ತು (Home Quarantine)ಸರ್ಕಾರದ ಆದೇಶ ವನ್ನು ಉಲ್ಲಂಘಿಸಿರುತ್ತಾರೆಂದು ತಿಳಿದು ಬಂದಿವುದಾಗಿ  ಸದರಿ ವ್ಯಕ್ತಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ  ಕೋರಿದ್ದರ  ಮೇರೆಗೆ ಎಪ್.ಐ,.ಆರ್

 1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.24/2020 ಕಲಂ. 279,337  ಐ.ಪಿ.ಸಿ :-

          ದಿನಾಂಕ:-30/06/2020 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ.ಶಿವಪ್ರಸಾದ್ ರೆಡ್ಡಿ ಬಿನ್ ಹರಿನಾಥ ರೆಡ್ಡಿ 21 ವರ್ಷ, ರೆಡ್ಡಿ ಜನಾಂಗ, ಚಾಲಕ ವೃತ್ತಿ, ದಿಗುವಪಲ್ಲಿ ಗ್ರಾಮ, ಲಿಂಗಾಲ ಮಂಡಲಂ, ಪುಲಿವೆಂದಲ ತಾಲ್ಲೂಕು, ಕಡಪ ಜಿಲ್ಲೆ, ಆಂದ್ರಪ್ರದೇಶ ರವರಿಂದ ಪಡೆದ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ;-29/06/2020 ರಂದು ಸಂಜೆ 6-00 ಗಂಟೆಯ ಸಮಯದಲ್ಲಿ ತಮ್ಮ ತಂದೆಯ ಬಾಬತ್ತು AP-04-TW-0971 ರ ಬೊಲೇರೋ ಪಿಕಪ್ ವಾಹನದಲ್ಲಿ ತಮ್ಮ ಗ್ರಾಮದಿಂದ ಬಾಳೆಕಾಯಿಯನ್ನು ಲೋಡ್ ಮಾಡಿಕೊಂಡು ತಮ್ಮ ಗ್ರಾಮದ ಹರೀಶ್ ರೆಡ್ಡಿ ಬಿನ್ ರಾಮಚಂದ್ರ ರೆಡ್ಡಿ 19 ವರ್ಷ, ರೆಡ್ಡಿ ಜನಾಂಗ ರವರೊಂದಿಗೆ ಬೆಂಗಳೂರಿಗೆ ಹೋಗಲು ದಿನಾಂಕ:-30/06/2020 ರಂದು ಮಧ್ಯರಾತ್ರಿ 01-30 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ – ಬೆಂಗಳೂರು ಎನ್.ಎಚ್-44 ಹೈವೇ ರಸ್ತೆಯ ಬನ್ನಿಕುಪ್ಪೆ ಬ್ರಿಡ್ಜ್ ಬಳಿ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ NL-01-AC-8251 ರ ಬಲ್ಕರ್ ಲಾರಿ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಯಾವುದೇ ಸೂಚನೆಯನ್ನು ನೀಡದೇ ಏಕಾ-ಏಕಿ ನಿಲ್ಲಿಸಿದ್ದರಿಂದ ತಮ್ಮ ಬೊಲೇರೋ ವಾಹನ ಬಲ್ಕರ್ ಲಾರಿಯ ಹಿಂಭಾಗಕ್ಕೆ ತಗುಲಿಸಿದ ಪರಿಣಾಮ ಎರಡೂ ವಾಹನಗಳು ಜಕಂಗೊಂಡು ಚಾಲನೆ ಮಾಡುತ್ತಿದ್ದ ಶಿವ ಪ್ರಸಾದ್ ರೆಡ್ಡಿ ರವರಿಗೆ ಎಡ ಕಣ್ಣಿನ ಮೇಲೆ, ಬಲ ಕೈಗೆ, ಬಲ ತೊಡೆಗೆ ಹಾಗೂ ಎಡ ಕಾಲಿಗೆ ರಕ್ತ ಗಾಯಗಳಾಗಿದ್ದು, ಹಾಗೂ ಪಕ್ಕದಲ್ಲಿ ಕುಳಿತಿದ್ದ ಸಹಪ್ರಯಾಣಿಕ ಹರೀಶ್ ರೆಡ್ಡಿ ರವರಿಗೆ ಎಡ ಕೈಗೆ, ಹಣೆಗೆ, ಗದ್ದಕ್ಕೆ, ಎಡ ತೊಡೆಗೆ ಹಾಗೂ ಎಡ ಪಾದಕ್ಕೆ ರಕ್ತಗಾಯಗಳಾಗಿದ್ದು ಅಲ್ಲಿನ ಸ್ಥಳಿಯರು ತಮ್ಮಗಳನ್ನು ಉಪಚರಿಸಿ ಅಲ್ಲಿಗೆ ಬಂದ 108 ಆಂಬ್ಯೂಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಸದರಿ ಅಪಘಾತಕ್ಕೆ ಕಾರಣನಾದ ಬಲ್ಕರ್ ಲಾರಿಯ ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಸುರೇಶ ಕೆ ಎಂ ಬಿನ್ ಮಧ್ಧಯ್ಯ 34 ವರ್ಷ, ಕೊಪ್ಪಕಾಟಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂತ ತಿಳಿಸಿದ್ದು, ಸದರಿ ಬಲ್ಕರ್ ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ತೆಲುಗಿನಲ್ಲಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಕನ್ನಡದಲ್ಲಿ ತರ್ಜುಮೆ ಮಾಡಿ ಈ ದಿನ ದಿನಾಂಕ:-30/06/2020 ರಂದು ಬೆಳಿಗ್ಗೆ 08-30 ಗಂಟೆಯ ಸಮಯದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.254/2020 ಕಲಂ. 15(ಎ) ಕೆ.ಇ ಆಕ್ಟ್ :-

          ದಿನಾಂಕ: 29/06/2020 ರಂದು ಸಂಜೆ 4.00 ಗಂಟಗೆ ಶ್ರೀ.ವೆಂಕಟರವಣಪ್ಪ ಸಿ.ಹೆಚ್.ಸಿ-54 ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮಾಲು ಮತ್ತು ಮಾಲು ಅಮಾನತ್ತು ಪಂಚನಾಮೆಯೊಂದಿಗೆ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:29/06/2020 ರಂದು ಬೆಳಿಗ್ಗೆ ತಾನು ತನಗೆ ನಿಯೋಜಿಸಿರುವ ಠಾಣೆಯ 29ನೇ ಬೀಟ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಗುಪ್ತವಾಗಿ ಬಾತ್ಮೀದಾರರಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾಗ, ಇದೇ ಬೀಟ್ ವ್ಯಾಪ್ತಿಯ ಉಲ್ಲಪ್ಪನಹಳ್ಳಿ ಗ್ರಾಮದ ಆಂಜಪ್ಪ ಬಿನ್ ಲೇಟ್ ಮುನಿಶಾಮಪ್ಪ ರವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಯಾರೋ ಮದ್ಯಪಾನ ಮಾಡುತ್ತಿರುವುದಾಗಿ ತನಗೆ ಈ ದಿನ ಮದ್ಯಾಹ್ನ 1.00 ಗಂಟೆಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಸದರಿ ಸ್ಥಳಕ್ಕೆ ಧಾಳಿ ಮಾಡಲಾಗಿ ಮದ್ಯಪಾನ ಮಾಡುತ್ತಿದ್ದವರು ತಮ್ಮನ್ನು ಕಂಡು ಓಡಿ ಹೋಗಿದ್ದು, ಚಿಲ್ಲರೆ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಮಾಹಿತಿ ಪಡೆಯಲಾಗಿ ಆಂಜಪ್ಪ ಬಿನ್ ಲೇಟ್ ಮುನಿಶಾಮಪ್ಪ, 43 ವರ್ಷ, ನಾಯಕ ಜನಾಂಗ, ವಾಸ ಉಲ್ಲಪ್ಪನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿದು ಬಂದಿರುತ್ತೆ. ಸದರಿ ಆಸಾಮಿಯು ಸಹ ಸ್ಥಳದಲ್ಲಿಲ್ಲದೆ ಓಡಿ ಹೋಗಿದ್ದು, ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) HAYWARDS CHEERS WHISKY 90 ML ನ ಮದ್ಯ ತುಂಬಿದ 12 ಟೆಟ್ರಾ ಪ್ಯಾಕೆಟ್ ಗಳು, 2) 02 ಪ್ಲಾಸ್ಟಿಕ್ ಗ್ಲಾಸುಗಳು, 3) 01 ಲೀಟರ್ ನ ಒಂದು ಖಾಲಿ ವಾಟರ್ ಬಾಟೆಲ್ ಮತ್ತು 4) HAYWARDS CHEERS WHISKY 90 ML ನ 02 ಖಾಲಿ  ಟೆಟ್ರಾ ಪ್ಯಾಕೆಟ್ ಗಳು ಇದ್ದು, ಇವುಗಳನ್ನು ಪಂಚರ ಸಮಕ್ಷಮ ಈ ದಿನ ಮದ್ಯಾಹ್ನ 2.00 ಗಂಟೆಯಿಂದ ಮದ್ಯಾಹ್ನ 3.00 ಗಂಟೆಯವರೆಗೆ ಪಂಚನಾಮೆಯನ್ನು ಕೈಗೊಳ್ಳುವ ಮುಖಾಂತರ ಅಮಾನತ್ತು ಪಡಿಸಿಕೊಂಡಿರುತ್ತೆ. ಮೇಲ್ಕಂಡ ಆಂಜಪ್ಪ ರವರು ಯಾವುದೇ ಪರವಾನಿಗೆಯನ್ನು ಪಡೆಯದೇ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ತಿಳಿದುಬಂದಿರುವುದರಿಂದ ಸದರಿಯವರ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.65/2020 ಕಲಂ. 269,271 ಐ.ಪಿ.ಸಿ :-

          ದಿನಾಂಕ:30-06-2020 ರಂದು ಬೆಳಿಗ್ಗೆ 8.30 ಗಂಟೆಗೆ  ಶ್ರೀ. ವಿ.ನಾರಾಯಣಪ್ಪ. ಹೆಚ್.ಸಿ-43 ದಿಬ್ಬೂರಹಳ್ಳಿ ಪೊಲೀಸ್ ಠಾಣೆ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 30/06/2020 ರಂದು ಬೆಳಿಗ್ಗೆ ಪಿ.ಎಸ್.ಐ ರವರು ತನಗೆ  ಠಾಣಾ ಸರಹದ್ದಿನಲ್ಲಿ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಕ ಮಾಡಿರುತ್ತಾರೆ. ಅದರಂತೆ ತಾನು ದಿಬ್ಬೂರಹಳ್ಳಿ, ಇರಗಪ್ಪನಹಳ್ಳಿ, ಸಾದಲಿ, ನಿಲುವರಾತಹಳ್ಳಿ, ಎಸ್. ಕುರುಬರಹಳ್ಳಿ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಮಾಹಿತಿಯನ್ನು ಸಂಗ್ರಹಿಸಲಾಗಿ ತನಗೆ ಬಂದ ಮಾಹಿತಿಯ ಮೇರೆಗೆ ಠಾಣಾ ಸರಹದ್ದಿನ ಎಸ್. ಕುರುಬರಹಳ್ಳಿ ಗ್ರಾಮದ ವಾಸಿಯಾದ ಚಂದ್ರಶೇಖರ ಬಿನ್ ನರಸಿಂಹಪ್ಪ, 29 ವರ್ಷ,  ಉಪ್ಪಾರ ಜನಾಂಗ, ರವರು  2019 ನೇ ಸಾಲಿನ ಡಿಸೆಂಬರ್ ಮಾಹೆಯಲ್ಲಿ ಮಹಾರಾಷ್ಟ್ರ ರಾಜ್ಯದ ಮೀರಜ್ ಗೆ  ದ್ರಾಕ್ಷಿ ಕಟಿಂಗ್ ಕೆಲಸಕ್ಕೆ ಹೋಗಿದ್ದು ದಿನಾಂಕ:12-06-2020 ರಂದು ರೈಲಿನಲ್ಲಿ ತುಮಕೂರಿಗೆ ಬಂದು ಅಲ್ಲಿಂದ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ವಾಪಸ್ಸು ಬಂದಿದ್ದು ಇದೇ ದಿನ  ಚಂದ್ರಶೇಖರ ಬಿನ್ ನರಸಿಂಹಪ್ಪರವರನ್ನು ಮಾನ್ಯ ಜಿಲ್ಲಾಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲೆ ರವರು ದಿನಾಂಕ: 12-06-2020  ರಿಂದ  ದಿನಾಂಕ: 18-06-2020 ರವರಿಗೆ ಶಿಡ್ಲಘಟ್ಟ ತಾಲ್ಲೂಕಿನ  ಹನುಮಂತಪುರ ಗ್ರಾಮದ ಬಳಿ ಇರುವ    ಪ್ರತ್ಯಕಗೊಳಿಸುವಿಕೆಯಲ್ಲಿ (Quarantine) ಇರಲು ಆದೇಶ ಮಾಡಿರುತ್ತಾರೆ. ನಂತರ ಅಧಿಕಾರಿಗಳು ದಿನಾಂಕ:18-06-2020 ರಿಂದ 14  ದಿನಗಳ  ಕಾಲ(Home Quarantine)  ನಿವಾಸದಲ್ಲಿ ಇರಲು ಸೂಚನೆಗಳನ್ನು ನೀಡಿ ಹೋಮ್ ಕ್ವಾರಂಟೈನ್ ಬಗ್ಗೆ ಕೈಗೆ ಸೀಲ್ ಮಾಡಿ ಪ್ರತ್ಯಕಗೊಳಿಸುವಿಕೆ (Home Quarantine)ನಿಗಾವಣೆಯಲ್ಲಿರಲು ಆದೇಶ ಮಾಡಿ ಎಸ್. ಕುರುಬರಹಳ್ಳಿ ಗ್ರಾಮಕ್ಕೆ ಕಳುಹಿಸಿಕೊಟ್ಟಿರುತ್ತಾರೆ. ದಿನಾಂಕ:19-06-2020 ರಿಂದ  ಚಂದ್ರಶೇಖರ ರವರು ತನ್ನ ಸ್ನೇಹಿತರೊಂದಿಗೆ ಸಾದಲಿ, ಎಸ್ ದೇವಗಾನಹಳ್ಳಿ ಹಾಗು ತಮ್ಮ ಸ್ವಂತ ಗ್ರಾಮದಲ್ಲಿ ಓಡಾಡಿರುವುದಾಗಿ ತಿಳಿದು ಬಂದಿರುತ್ತೆ. ಸದರಿ ವ್ಯಕ್ತಿಯ ಮೊಬೈಲ್ ದೂರವಾಣಿ ಸಂಖ್ಯೆ 9663629847  ಎಂಬುದಾಗಿ  ತಿಳಿದು ಬಂದಿರುತ್ತೆ. ಚಂದ್ರಶೇಖರ ಬಿನ್ ನರಸಿಂಹಪ್ಪವರು  ರವರು ಮನುಷ್ಯರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್ -19 ಸಾಂಕ್ರಾಮಿಕ ರೋಗದ ಸೋಂಕು ಹರಡುವ ಸಂಭವವಿದೆ ಎಂದು ತಿಳಿದೂ ಸಹ ನಿರ್ಲಕ್ಷ್ಯತನದಿಂದ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿರುತ್ತಾನೆ ಮತ್ತು ಸರ್ಕಾರದ ಆದೇಶ ವನ್ನು (Home Quarantine) ಉಲ್ಲಂಘಿಸಿರುತ್ತಾರೆಂದು ತಿಳಿದು ಬಂದಿದ್ದು  ಸದರಿ ವ್ಯಕ್ತಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ  ಕೋರಿದ್ದರ  ಮೇರೆಗೆ ಪ್ರಕರಣ ದಾಖಲಿಸಿರುವುದಾಗಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.66/2020 ಕಲಂ. 323,447,427,504,506 ರೆ/ವಿ 34 ಐ.ಪಿ.ಸಿ :-

          ದಿನಾಂಕ:30-06-2020 ರಂದು ಸಂಜೆ 04-00 ಗಂಟೆಗೆ ಪಿರ್ಯಾಧಿಯಾದ ಕಾಂತಮ್ಮ ಕೊಂ ಬೈರಾರೆಡ್ಡಿ, 40 ವರ್ಷ, ವಕ್ಕಲಿಗರು, ಜಿರಾಯ್ತಿ, ಗಂಜಿಗುಂಟೆ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಬಾಬತ್ತು ಗಂಜಿಗುಂಟೆ ಗ್ರಾಮಕ್ಕೆ ಸೇರಿದ ಸರ್ವೆ ನಂ:371 ರಲ್ಲಿ 0-13 ಗುಂಟೆ ಜಮೀನು ತನ್ನ ಹೆಸರಿಗೆ ಖಾತೆ,ಪಹಣಿ ಹಾಗೂ ಅನುಭವದಲ್ಲಿರುವ ಜಮೀನಿನಲ್ಲಿ ತಾನು ಬೇವಿನ ಮರ ಒಂದು, ಅತ್ತಿಮರ ಒಂದು ಇವುಗಳನ್ನು ಇದೇ ಗ್ರಾಮದ ವಾಸಿಗಳಾದ ನಾರಾಯಣಸ್ವಾಮಿ ಬಿನ್ ಬೈರಪ್ಪ, ಮಂಜುನಾಥ ಬಿನ್ ನಾರಾಯಣಸ್ವಾಮಿ ಹಾಗೂ ರುಕ್ಮುಣಿ ಕೊಂ ನಾರಾಯಣಸ್ವಾಮಿ ರವರುಗಳು ತಾನು ಬೆಳೆಸಿರುವ ಮರಗಳಿಗೆ ದಿನಾಂಕ:28-06-2020 ರಂದು ಬೆಳಗ್ಗೆ 11-30 ಗಂಟೆ ಸಮಯದಲ್ಲಿ ಬೆಂಕಿಯನ್ನು ಹಾಕಿ ಸುಟ್ಟಿರುತ್ತಾರೆ. ಆಗ ತಾನು ಈ ವಿಷಯಗೋತ್ತಾಯಿತು.ಅದಕ್ಕೆ ತಾನು ಹೊಲದ ಹತ್ತಿರಕ್ಕೆ ಹೋಗಿ ಯಾಕಪ್ಪ ತಾನು ಬೆಳೆಸಿರುವ ಮರಗಳನ್ನು ಸುಡುತ್ತಾ ಇದ್ದೀರಾ ಎಂದು ಕೇಳಿದ್ದಕ್ಕೆ , ನಾರಾಯಣಸ್ವಾಮಿ ಎಂಬುವರು ತನ್ನನ್ನು ಹಿಡಿದುಕೊಂಡು ಹೊಡೆದು ಕೆಳಕ್ಕೆ ದಬ್ಬಿ ಕಾಲುಗಳಿಂದ ಹೊದ್ದಿರುತ್ತಾರೆ. ಹಾಗೂ ಮಂಜುನಾಥ ಎಂಬುವನು ತನ್ನ ಜುಟ್ಟು, ಕೂದಲು ಹಿಡಿದುಕೊಂಡು ಹೊಲದಿಂದ ಆಚೆಗೆ ಎಳೆದಾಡಿರುತ್ತಾನೆ. ಹಾಗೂ ಮಾನ ಹೀನವಾದ ಮಾತುಗಳನ್ನು ಬೈದಿರುತ್ತಾರೆ. ಅಲ್ಲಿಗೂ ತಾನು ಸುಮ್ಮನೆ ನಿಂತುಕೊಂಡಿದ್ದರೆ ಅಲ್ಲಿಗೂ ಇವರು ತನ್ನ ಜಮೀನಿನಲ್ಲಿ ಅತಿಕ್ರಮವಾಗಿ ದೌರ್ಜನ್ಯದಿಂದ ಪ್ರವೇಶ ಮಾಡಿರುತ್ತಾರೆ. ಅದನ್ನು ಕೇಳಿದ್ದಕ್ಕೆ ರುಕ್ಮುಣಿ ಎಂಬುವರು ನನ್ನ ಸವತಿಮುಂಡೇ ಈ ಜಮೀನಿನಲ್ಲಿ ಕಾಲು ಇಟ್ಟರೆ ನಿನ್ನ ಕಾಲು ಮುರಿದು ಹಾಕುತ್ತೇವೆಂದು ತನ್ನ ಜಮೀನಿನಿಂದ ಆಚೆಗೆ ತಳ್ಳಿರುತ್ತಾರೆ. ಆದ್ದರಿಂದ ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿರುವ ದೂರಾಗಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.81/2020 ಕಲಂ. 78(3) ಕೆ.ಇ ಆಕ್ಟ್ :-

          ದಿನಾಂಕ: 29/06/2020 ರಂದು ನ್ಯಾಯಾಲಯದ ಪಿ.ಸಿ-546 ರಂಗನಾಥ ರವರು ಹಾಜರುಪಡಿಸಿದ ನ್ಯಾಯಾಲಯದ ಅನುಮತಿಯ ಪತ್ರದ ಸಾರಾಂಶವೇನೆಂದರೆ, ದಿನಾಂಕ: 27-06-2020 ರಂದು  ಸಂಜೆ 5:00 ಗಂಟೆಯಲ್ಲಿ ನಗರದ ಎಂ.ಜಿ ವೃತ್ತದಲ್ಲಿ ಇರುವಾಗ ತನಗೆ ನಗರದ ಬಜಾರ್ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಗಳು ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ಹೆಚ್.ಸಿ 214 ಲೋಕೇಶ್ ರವರು ಪಿ.ಎಸ್.ಐ ರವರಿಗೆ ಮಾಹಿತಿ ನೀಡಿ ಅನುಮತಿಯನ್ನು ಪಡೆದು ಎಂ.ಜಿ ವೃತ್ತದಲ್ಲಿದ್ದ ಹೆಚ್.ಸಿ 12 ಶಿವಶಂಕರಪ್ಪ ರವರ ಜೊತೆ ಬಜಾರ್ ರಸ್ತೆಗೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿ ಬಜಾರ್ ರಸ್ತೆಯ  ಮುನಿಸಿಪಲ್ ಶಾಲೆಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ  1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಕೂಗಾಡುತ್ತಿರುವುದು ಕಂಡುಬಂದಿತು. ತಾನು ಮತ್ತು  ಹೆಚ್.ಸಿ 12 ರವರು ಪಂಚರ ಸಮ್ಮುಖದಲ್ಲಿ ಸುತ್ತುವರಿದು ಹಿಡಿದುಕೊಂಡು, ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಗಂಗಾಧರ ಬಿನ್ ದಾಸಪ್ಪ, 36 ವರ್ಷ, ಪರಿಶಿಷ್ಟ ಜಾತಿ, ಹಣ್ಣಿನ ವ್ಯಾಪಾರ, ಹಿರೇಬಿದನೂರು ಗೌರಿಬಿದನೂರು ನಗರ ಫೋ: 9740802126 ಎಂದು ತಿಳಿಸಿದ್ದು, ಅವನಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವನ ಬಳಿ ಯಾವುದೆ ಪರವಾನಗಿ ಇಲ್ಲವೆಂದು ತಿಳಿಸಿದನು ಆ ಸಮಯದಲ್ಲಿ ಆ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ  ಒಂದು ಮಟ್ಕಾಚೀಟಿ ಬರೆಯುವ ಪುಸ್ತಕ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 590/- ರೂಪಾಯಿಗಳು  ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದನು ನಂತರ ಆರೋಪಿಯನ್ನು ವಶಕ್ಕೆ ಪಡೆದು ಪಂಚನಾಮೆ ಜರುಗಿಸಿ ಆರೋಪಿ ಹಾಗೂ ಮಾಲಿನೊಂದಿಗೆ ಸಂಜೆ 6:15 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಕ್ರಮ ಕೈಗೊಳ್ಳುವುದಕ್ಕಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ದಾಖಲಿಸಿರುತ್ತೇನೆ. ನಂತರ ಈ ದಿನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೇನೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.82/2020 ಕಲಂ. 269,271 ಐ.ಪಿ.ಸಿ :-

          ದಿನಾಂಕ 29/06/2020 ರಂದು ರಾತ್ರಿ 9:00 ಗಂಟೆಯಲ್ಲಿ ಪಿ.ಸಿ 17 ಲಕ್ಷ್ಮೀನಾರಾಯಣ ನಗರ ಪೊಲೀಸ್ ಠಾಣೆ ರವರು ನೀಡಿದ ನಿವೇದನೆಯ ಸಾರಾಂಶವೇನೆಂದರೆ, ದಿನಾಂಕ:13/06/2020 ರಂದು ಶ್ರೀ ಅಜೀಜ್ಹುಲ್ಲಾ ಗಜಿ ಬಿನ್ ಹೀರಾಅಲಿ 35 ವರ್ಷ, ಮುಸ್ಲಿಂ ಜನಾಂಗ, ಮಾದನಹಳ್ಳಿ, ಗೌರಿಬಿದನೂರು ನಗರ, ಮೊಸಂ.9353704625 ರವರು ಸೇವಾಸಿಂಧು ಅಡಿಯಲ್ಲಿ ಕೋವಿಡ್-19 ಕಾಯಿಲೆ ಇರುವ ಸ್ಥಳವಾದ ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾ ನಗರದಿಂದ ದುರಂತ್ ಎಕ್ಸ್ಪ್ರೆಸ್ ರೈಲಿನಲ್ಲಿ ಗೌರಿಬಿದನೂರು ನಗರಕ್ಕೆ ಬಂದಿದ್ದು, ಹೊರ ರಾಜ್ಯದಿಂದ ಬಂದ ಇವರನ್ನು ದಿನಾಂಕ:13/06/2020 ರಂದು ಕೋವಿಡ್ 19 ಪರೀಕ್ಷೆಗೆ ಒಳಪಡಿಸಿ 14 ದಿನಗಳ ಕಾಲ ನಿಗಾವಹಿಸಲು ಸರ್ಕಾರದ ಆದೇಶದಂತೆ ಹೋಂ ಕ್ವಾರೆಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದ್ದು ಅದರಂತೆ ಸದರಿ ವ್ಯಕ್ತಿಯು ಹೋಂ ಕ್ವಾರೆಂಟೈನ್ ನಲ್ಲಿ ಇರದೇ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಮಾರಣಾಂತಿಕ ಕಾಯಿಲೆಯಾದ ಕೋವಿಡ್-19 ಸೋಂಕು ಹರಡುತ್ತದೆ ಎಂದು ಗೊತ್ತಿದ್ದರೂ ಸಹ  ದಿನಾಂಕ:24/06/2020 ರಂದು ಮನೆಯಿಂದ ಬೇರೆ ಕಡೆ ಎಲ್ಲಿಯೋ ಹೊರಟು ಹೋಗಿರುತ್ತಾರೆ, ಹೊರ ರಾಜ್ಯದಿಂದ ಬಂದ ವ್ಯಕ್ತಿಯು ಸರ್ಕಾರದ ಆದೇಶದಂತೆ 14 ದಿನಗಳ ಕಾಲ ಹೋಂ ಕ್ವಾರೆಂಟೈನ್ ನಲ್ಲಿ ಇರಬೇಕಾದ ಅವಶ್ಯಕತೆ ಇರುತ್ತದೆ, ಆದರೆ ಇವರು ಸರ್ಕಾರದ ಆದೇಶವನ್ನು ಉಲ್ಲಂಘನೆಮಾಡಿರುವುದರಿಂದ ಇವರಿಂದ ಕೋವಿಡ್-19 ಮಾರಣಾಂತಿಕ ಖಾಯಿಲೆಯು ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇವರ ಮೇಲೆ ಸರ್ಕಾರದ ಆದೇಶದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆಂದು ನೀಡಿದ ವರದಿಯ ಮೇರೆಗೆ ಕಲಂ 269, 271 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.107/2020 ಕಲಂ. 34,504,323,324 ಐ.ಪಿ.ಸಿ :-

          ದಿನಾಂಕ:29/06/2020 ರಂದು ಬೆಳಿಗ್ಗೆ 11.320 ಗಂಟೆ ಸಮಯದಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಲಕ್ಷ್ಮಣ ಬಿನ್ ಲೇಟ್ ಕೊಂಡಪ್ಪ ರವರ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ದಿನಾಂಕ:29/06/2020 ರಂದು ಬೆಳಿಗ್ಗೆ 9.15 ಗಂಟೆಯ ಸಮಯದಲ್ಲಿ ತನಗೆ ಸೇರಿದ ಜೀಗಾನಹಳ್ಳಿ ಸರ್ವೆ ನಂ 118 ರ ಜಮೀನಿನಲ್ಲಿ ಜೋಳವನ್ನು ಬಿತ್ತನೆ ಮಾಡಲು ಹೋದಾಗ ನವಿಲುಗುರ್ಕಿ ಗ್ರಾಮದ ವಾಸಿಗಳಾದ 1.ಅಶ್ವತ್ಥಮ್ಮ ಕೊಂ ನಾರಾಯಣಸ್ವಾಮಿ 2.ನವೀನ ಬಿನ್ ನಾರಾಯಣಸ್ವಾಮಿ 3. ಪವಿತ್ರ ಬಿನ್ ನಾರಾಯಣಸ್ವಾಮಿ ರವರು ತನ್ನ ಮೇಲೆ ಮತ್ತು ತನ್ನ ಹೆಂಡತಿ ಲಕ್ಷ್ಮೀ ರವರನ್ನು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ನವೀನ ಎಂಬುವನು ತನ್ನ ಕೈಯಲ್ಲಿದ್ದ ಮಚ್ಚಿನಿಂದ ಹೊಡೆಯಲು ಬಂದಾಗ ತಾನು ತಪ್ಪಿಸಿಕೊಂಡಾಗ ತನ್ನ ಎಡ ಕಣ್ಣಿನ ಹುಬ್ಬಿನ ಬಳಿ ಮಚ್ಚಿನಿಂದ ಹೊಡೆದು ರಕ್ತಗಾಯಪಡಿಸಿದನು ನಂತರ ನಾನು ಕಿರುಚಿಕೊಂಡಾಗ ಎಲ್ಲರೂ ಹೊರಟು ಹೋಗಿದ್ದು ನವೀನನು ಆಗಾಗ ನಮ್ಮ ಮೇಲೆ ತನ್ನ ಮೇಲೆ ಗಲಾಟೆಗೆ ಬರುತ್ತಿದ್ದನು ಆದ್ದರಿಂದ ತನ್ನ ಹೊಡೆದವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಹೇಳಿಕೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.108/2020 ಕಲಂ. 34,504,323,324 ಐ.ಪಿ.ಸಿ :-

          ದಿನಾಂಕ:29/06/2020 ರಂದು ಮದ್ಯಾಹ್ನ:12.00 ಗಂಟೆ ಸಮಯದಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಪವಿತ್ರ ಬಿನ್ ನಾರಾಯಣಸ್ವಾಮಿ ರವರು ನೀಡಿದ ದೂರಿನ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ:26/06/2020 ರಂದು ಬೆಳಿಗ್ಗೆ 9.00 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಜೊತೆಯಲ್ಲಿ ತನ್ನ ತಾಯಿ ಅಶ್ವತ್ಥಮ್ಮ ತಮ್ಮ ಅಣ್ಣ ನವೀನ ಕುಮಾರ ರವರು ತಮಗೆ ಸೇರಿದ ಜಮೀನಿನಲ್ಲಿ ಗಿಡಗಳನ್ನು ಕತ್ತರಿಸಿ ಜಮೀನನನ್ನು ಕ್ಲೀನು ಮಾಡುತ್ತಿದ್ದಾಗ ತಮ್ಮ ಗ್ರಾಮದ ವಾಸಿಯಾದ 1.ಲಕ್ಷ್ಮಣ ಬಿನ್ ಲೇಟ್ ಕೊಂಡಪ್ಪ, ಆತನ ಹೆಂಡತಿ 2. ಲಕ್ಷ್ಮೀದೇವಿ ರವರು ತಮ್ಮ ಜಮೀನಿನ ಬಳಿ ಬಂದು  ಸದರಿ ಜಮೀನು ತಮಗೆ ಸೇರಿದ್ದು ಎಂದು ಗಲಾಟೆಯನ್ನು ಮಾಡಿ ಕೈಗಳಿಂದ ತಮಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಲಕ್ಷ್ಣಣ ರವರು ತಮ್ಮ ತಾಯಿಗೆ ಕಲ್ಲಿನಿಂದ ಹೊಡೆಯಲು ಬಂದಾಗ ತಾನು ಅಡ್ಡ ಹೋದಾಗ  ತನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು  ತಮ್ಮನ್ನು ಹೊಡೆದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.109/2020 ಕಲಂ. 279,304(ಎ)  ಐ.ಪಿ.ಸಿ :-

          ದಿನಾಂಕ:29-06-2020 ರಂದು ರಾತ್ರಿ  9-45  ಗಂಟೆಗೆ ಗುರುಮೂರ್ತಿ ಬಿನ್ ಗುರ್ರಪ್ಪ  35 ವರ್ಷ  ಬೋವಿ ಜನಾಂಗ ಗಾರೆ ಕೆಲಸ  ವಾಸ ಗುಂತಪ್ಪನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಪೊ:9632794226 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ: ತನ್ನ ಒಬ್ಬ ಅಕ್ಕನನ್ನು ಮತ್ತು ಒಬ್ಬ ತಂಗಿಯನ್ನು  ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಹೋಬಳಿ ಗೊಂದಿಗಾನಹುಡ್ಯ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದು ತಾನು ಮತ್ತು ತನ್ನ ತಮ್ಮ ಕೃಷ್ಣಪ್ಪ  ರವರು ಚಿಕ್ಕಬಳ್ಳಾಪುರ ತಾಲ್ಲೂಕು ಗುಂತಪ್ಪನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದು ತನ್ನ ತಂದೆಯಾದ ಗುರ್ರಪ್ಪ ಬಿನ್ ಲೇಟ್ ತಿಮ್ಮಯ್ಯ ಸುಮಾರು 60 ವರ್ಷ ರವರು ಈಗ್ಗೆ ಸುಮಾರು 10 ವರ್ಷಗಳಿಂದ ಚಿಕ್ಕಬಳ್ಳಾಪುರ ತಾಲ್ಲೂಕು ಗೊಂದಿಗಾನಹುಡ್ಯ ಗ್ರಾಮದಲ್ಲಿ ತನ್ನ ಅಕ್ಕ ಮತ್ತು ತನ್ನ ತಂಗಿಯವರ ಮನೆಯಲ್ಲಿ ಇದ್ದುಕೊಂಡು ಕೂಲಿ ಕೆಲಸ ಮಾಡಿಕೊಂಡಿದ್ದನು ಹೀಗಿರುವಾಗ ಈ ದಿನ ದಿನಾಂಕ:29-06-2020 ರಂದು ಸಂಜೆ ಸುಮಾರು 6-30 ಗಂಟೆಯಲ್ಲಿ ತನ್ನ ತಂಗಿಯ ಗಂಡನಾದ ಗೊಂದಿಗಾನಹುಡ್ಯ ಗ್ರಾಮದ ಆಂಜಿನಪ್ಪ ರವರು ತನಗೆ ದೂರವಾಣಿ ಕರೆ ಮಾಡಿ ನಿನ್ನ ತಂದೆಯಾದ ಗುರ್ರಪ್ಪ ರವರು ಈ ದಿನ ದಿನಾಂಕ:29-06-2020 ರಂದು ಸಂಜೆ ಸುಮಾರು 6-00 ಗಂಟೆಯಲ್ಲಿ ಗುಡಿಬಂಡೆ ತಾಲ್ಲೂಕು ಷಾ-ಶಿಬ್ ಕಾಲೇಜ್ ಕಡೆಯಿಂದ ಗೊಂದಿಗಾನಹುಡ್ಯ ಗ್ರಾಮಕ್ಕೆ ಕೆ.ಎ-40 ಜೆ-7092 ನೊಂದಣಿ ಸಂಖ್ಯೆಯ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರವಾಹನದಲ್ಲಿ ಆತನೇ ಚಾಲನೆ ಮಾಡಿಕೊಂಡು ಗುಡಿಬಂಡೆ ತಾಲ್ಲೂಕು ಭತ್ತಲಹಳ್ಳಿ ಗ್ರಾಮದ ಕ್ರಾಸ್ ಹತ್ತಿರ ಬೆಂಗಳೂರು ಕಡೆ ಹೋಗುವ ಎನ್.ಹೆಚ್-7 ರಸ್ತೆಯಲ್ಲಿ ಬರುತ್ತಿದ್ದಾಗ ಅದೇ ರಸ್ತೆಯಲ್ಲಿ ಬಾಗೇಪಲ್ಲಿ ಕಡೆಯಿಂದ ಕೆ.ಎ-03 ಎ.ಜಿ-2654 ಟೋಯಟ್ ಇಟಿಯಾಸ್ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗುರ್ರಪ್ಪ ರವರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಮೇಲ್ಕಂಡ ದ್ವಿ ಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ ಪರಿಣಾಮ ದ್ವಿ ಚಕ್ರವಾಹನ ಜಖಂಗೊಂಡು ಗುರ್ರಪ್ಪ ರವರಿಗೆ ತಲೆಗೆ. ಕೈ ಮತ್ತು ಕಾಲುಗಳಿಗೆ ತೀವ್ರವಾದ ರಕ್ತಗಾಯಗಳಾಗಿರವುದಾಗಿ ಅಪಘಾತವನ್ನು ನೋಡಿರುವ ಗೊಂದಿಗಾನಹುಡ್ಯ ಗ್ರಾಮದ ವಾಸಿಯಾದ ಸುರೇಶ್ ಬಿನ್ ಚಿಕ್ಕವೆಂಕಟೇಶಪ್ಪ ರವರು ನನಗೆ  ತಿಳಿಸಿದ್ದು ನಂತರ ನಾನು ಅಪಘಾತವಾಗಿರುವ ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ನಂತರ ಗಾಯಗೊಂಡಿದ್ದ ಗುರ್ರಪ್ಪ ರವರನ್ನು  ಚಿಕತ್ಸೆಗಾಗಿ ಅಂಬ್ಯೂಲೇನ್ಸ್ ವಾಹನದಲ್ಲಿ ಬಾಗೇಪಲ್ಲಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಸಂಜೆ ಸುಮಾರು 6-50 ಗಂಟೆಯಲ್ಲಿ ಮೇಲ್ಕಂಡ ಅಪಘಾತದಲ್ಲಿ ಆದ ಗಾಯಗಳ ದೆಸೆಯಿಂದ ಗುರ್ರಪ್ಪ ರವರು  ಗುಡಿಬಂಡೆ ತಾಲ್ಲೂಕು ಚೆಂಡೂರು  ಕ್ರಾಸ್ ಹತ್ತಿರ ಮಾರ್ಗಮದ್ಯ ಮೃತಪಟ್ಟಿರವುದಾಗಿ ನಂತರ ಮೃತದೇಹವನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿರವುದಾಗಿ ತಿಳಿಸಿದ್ದು ನಂತರ ತಾನು ತಮ್ಮ ಗ್ರಾಮದಿಂದ ಬಂದು ಅಪಘಾತ ನಡೆದ ಸ್ಥಳವನ್ನು ನೋಡಿಕೊಂಡು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ತನ್ನ ತಂದೆ ಗುರ್ರಪ್ಪ ಬಿನ್ ಲೇಟ್ ತಿಮ್ಮಯ್ಯ ಸುಮಾರು 60 ವರ್ಷ ಬೋವಿ ಜನಾಂಗ ಕೂಲಿ ಕೆಲಸ ವಾಸ ಗೊಂದಿಗಾನಹುಡ್ಯ ಗ್ರಾಮ ಮಂಡಿಕಲ್ಲು  ಹೋಬಳಿ ಚಿಕ್ಕಬಳ್ಳಾಪುರ ತಾಲ್ಲೂಕು ರವರಿಗೆ ಅಪಘಾತಪಡಿಸಿದ ಮೇಲ್ಕಂಡ ಕೆ.ಎ-03 ಎ.ಜಿ-2654 ಟೋಯಟ್ ಇಟಿಯಾಸ್ ಕಾರಿನ ಚಾಲಕನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.110/2020 ಕಲಂ. 269,271  ಐ.ಪಿ.ಸಿ :-

          ದಿನಾಂಕ 29/06/2020 ರಂದು ರಾತ್ರಿ 10-30 ಗಂಟೆಗೆ ಪಿರ್ಯಾಧಿ  ಗುಡಿಬಂಡೆ ಪೊಲೀಸ್ ಠಾಣೆಯ ಹೆಚ್.ಸಿ. 102 ಆನಂದ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ತನಗೆ ಠಾಣಾಧಿಕಾರಿಗಳು ಗುಪ್ತ ಮಾಹಿತಿ ಸಂಗ್ರಹಣೆ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಈಗ ದೇಶಾದ್ಯಾಂತ ಕೋವಿಡ್-19 ಸಂಕ್ರಾಮಿಕ ರೋಗದಿಂದ ತತ್ತರಿಸುತ್ತಿದ್ದು, ಹೀಗಿರುವಲ್ಲಿ ರಾಜೇಶ್ ನಾಯ್ಕ ಪೊನ್ ನಂ 9004761423 ರವರು ಅನ್ಯರಾಜ್ಯದಿಂದ ಗುಡಿಬಂಡೆ ಪೊಲೀಸ್ ಠಾಣೆ ಸರಹದ್ದಿನ ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಹೋಬಳಿ ಪೆರೆಸಂದ್ರ ಗ್ರಾಮಕ್ಕೆ ಬಂದಿದ್ದು, ಅನ್ಯ ರಾಜ್ಯದಿಂದ ಬಂದವರಿಗೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಿ ಇವರನ್ನು ನಿಗಧಿತ ಅವಧಿಯವರೆಗೆ ನಿಗಾವಣೆಗಾಗಿ ಸರ್ಕಾರದ ಆದೇಶದಂತೆ ಕ್ವಾರಂಟೈನ್ ನಲ್ಲಿ ಇರಿಸಿದ್ದು, ಆದರೆ ಸದರಿ ಆಸಾಮಿ ಕ್ವಾರಂಟೈನ್ ನಲ್ಲಿ ಇರದೆ ಆದೇಶವನ್ನು ಉಲ್ಲಂಘಿಸಿ ತನ್ನ ನಿರ್ಲಕ್ಷತೆಯಿಂದ ದಿನಾಂಕ 24/06/2020 ರಂದು ಬೇರೆ ಸ್ಥಳಕ್ಕೆ ಹೋಗಿದ್ದು, ಇದರಿಂದ ಸಾರ್ವಜನಿಕರಿಗೆ ಕೋವಿಡ್-19 ಸಂಕ್ರಾಮಿಕ ರೋಗವು ಹರಡುವ ಸಂಭವಗಳಿರುತ್ತೆ. ಆದ್ದರಿಂದ ಸದರಿ ಆಸಾಮಿಯ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ ದೂರು ಆಗಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.147/2020 ಕಲಂ. 279,337  ಐ.ಪಿ.ಸಿ :-

          ದಿನಾಂಕ: 29/06/2020 ರಂದು ರಾತ್ರಿ 7-30 ಗಂಟೆಗೆ ಪಿರ್ಯಾದಿದಾರರಾದ ನಂದೀಶ ಬಿನ್ ಚಿಕ್ಕನರಸಿಂಹಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಮ್ಮ ತಂದೆಯವರಾದ ಚಿಕ್ಕನರಸಿಂಹಪ್ಪ ಬಿನ್ ಲೇಟ್ ಚಿಕ್ಕ ಆಂಜಿನಪ್ಪ ರವರು ಸೂರ್ಯನಾಯಕನಹಳ್ಳಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು ನಮ್ಮ ತಂದೆಯವರಾದ ಚಿಕ್ಕನರಸಿಂಹಪ್ಪ ರವರು ದಿನಾಂಕ: 28/06/2020 ರಂದು ಭಾನುವಾರ ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಡಿಪಾಳ್ಯ ಗ್ರಾಮದಲ್ಲಿ ಹಾಲಿನ ಡೀರಿಯ ಕಾರ್ಯದರ್ಶಿಯನ್ನು ಮಾತನಾಡುವ ಸಲುವಾಗಿ ಸೂರ್ಯನಾಯಕನಹಳ್ಳಿ ಗ್ರಾಮದಿಂದ ತನ್ನ ದ್ವಿ ಚಕ್ರ ವಾಹನವಾದ KA40-ED-9188 TVS ಸೂಪರ್ ಎಕ್ಸಲ್ ವಾಹನದಲ್ಲಿ ಡಿಪಾಳ್ಯ ಗ್ರಾಮದ ಹತ್ತಿರದ ದಾರಿಯ ಮಧ್ಯದಲ್ಲಿ ಡಿಪಾಳ್ಯ ಗ್ರಾಮದ ಬೈರೂನ್ ಬಿ ಕೋಂ ಅಮೀರ್ ಸಾವ್, ಕೆಳಗಿನ ಪೇಟೆ, ಹಾಲಿನ ಡೈರಿಯ ಪಕ್ಕ, ಡಿಪಾಳ್ಯ ಗ್ರಾಮದವರು ದಾರಿಯ ಮಧ್ಯದಿಂದ ಮನೆಗೆ ಹೋಗಲು ಸಹಾಯವನ್ನು ಕೇಳಿದ್ದು ಅದರಂತೆ ಸದರಿ ರವರನ್ನು ವಾಹನದಲ್ಲಿ ಕೂರಿಸಿಕೊಂಡು ಡಿಪಾಳ್ಯ ಗ್ರಾಮದ ಹಾಲಿನ ಡೈರಿಯ ಎಡಭಾಗದಲ್ಲಿ ಸದರಿ ಮಹಿಳೆಯನ್ನು ಇಳಿಸಲು ನಿಲ್ಲಿಸಿದಾಗ ಆಕೆ ಇಳಿಯುವಷ್ಟರಲ್ಲಿ ನಮ್ಮ ಹಿಂದೆಯಿಂದ ಬಂದ ದ್ವಿ ಚಕ್ರವಾಹನವಾದ ಹಿರೋ ಸ್ಪ್ಲೆಂಡರ್ ಪ್ಲಸ್ ವಾಹನ ಸಂಖ್ಯೆ KA40-EC-4258 ವಾಹನದ ಸವಾರನು ದ್ವಿ ಚಕ್ರ ವಾಹನದಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುತ್ತಾ ಬಂದು ಏಕಾಏಕಿ ಬಂದು ನಮ್ಮ ತಂದೆಯವರಿಗೆ ವಾಹನದಲ್ಲಿ ಗುದಿದ್ದು ನಮ್ಮ ತಂದೆಯವರಿಗೆ ಬಲಕಾಲಿಗೆ ತೀವ್ರತರ ಗಾಯವಾಗಿ ಮೂಳೆ ಮುರಿದು ರಕ್ತಸ್ರಾವ ಟಾಗಿ ಬಲಗಾಲಿನ ಪಾದ ಮತ್ತು ಮೂರು ಕಡೆ ಮುರಿದಿದ್ದು ನಂತರ ನಮ್ಮ ತಂದೆಯವರೆ ನನಗೆ ಸ್ವತಃ ಪೋನ್ ಮಾಡಿ ಅಪಘಾತವಾದ ಘಟನೆಯನ್ನು ತಿಳಿಸಿದ್ದು ತದನಂತರ ಊರಿನವರಿಗೆ ಪೋನ್ ಮೂಲಕ ತಿಳಿಸಿ ಊರಿನವರಾದ ನಾಗಾರ್ಜುನಾ ನಮ್ಮ ಮಾವನಾದ ಲಕ್ಷ್ಮೀನಾರಾಯಣ ರವರು ಆಟೋದಲ್ಲಿ ಚಿಕಿತ್ಸೆಗಾಗಿ ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಅರ್ಥೋ ಡಾಕ್ಟರ್ ಇರದ ಕಾರಣ ಗೌರಿಬಿದನೂರಿನ ಸೋಮೇಶ್ವರ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿರುತ್ತೇವೆ ತದ ನಂತರ ಆಸ್ಪತ್ರೆಯಲ್ಲಿನ ವೈದ್ಯರು ನಮ್ಮ ತಂದೆಯವರಿಗೆ ಬಲಕಾಲಿನ ಪಾದ ಮತ್ತು ಮೊಣಕಾಲಿನ ನಡೆವಿನ ಮಧ್ಯದಲ್ಲಿ ಮೂರು ಕಡೆ ಮೂಳೆ ಮುರಿದಿದ್ದು ಕಾಲಿನ ಪಾದದ ಮಧ್ಯೆ ತೂತು ಬಿದ್ದು ರಕ್ತಸ್ರಾವ ಉಂಟಾಗಿರುತ್ತದೆ, ವೈದ್ಯರು ಅಪರೇಷನ್ ಮಾಡಬೇಕೆಂದು ತಿಳಿಸಿರುತ್ತಾರೆ, ತದ ನಂತರ ಅಪಘಾತಮಾಡಿದ ವಾಹನ ಚಾಲಕನನ್ನು ವಿಚಾರಿಸಿದಾಗ ವಾಹನ ನಡೆಸುತ್ತಿದ್ದವರು ಬಾಲಪ್ಪ ಬಿನ್ ನರಸಿಂಹಪ್ಪ, ಎಸ್.ಸಿ ಜನಾಂಗ, ಬೊಮ್ಮಸಂದ್ರ ಗ್ರಾಮ, ಡಿಪಾಳ್ಯ ಹೋಬಳಿ ಎಂದು ತಿಳಿಸಿದ್ದು ವಾಹನದ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ಪ್ರ.ವ.ವರದಿ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.148/2020 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ:29/06/2020 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ರಾಜಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:29/06/2020 ರಂದು ನಾನು ಮತ್ತು ಸಿಬ್ಬಂದಿಯವರು ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನು ಬಾಹೀರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಕರ್ತವ್ಯದಲ್ಲಿದ್ದಾಗ ಮದ್ಯಾಹ್ನ 3,30 ಗಂಟೆ ಸಮಯದಲ್ಲಿ  ತಾಲ್ಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ದೊಡ್ಡ ಹನುಮೇನಹಳ್ಳಿ ಗ್ರಾಮದ ಬಳಿ ಇರುವ ಸರ್ಕಾರಿ ಹಳ್ಳದಲ್ಲಿ ಯಾರೋ ಕೆಲವರು ಕಾನೂನು ಬಾಹೀರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಸದರಿ ಜೂಜಾಟದ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿಯಲ್ಲಿ 3 ಜನ ಆರೋಪಿತರು ಸಿಕ್ಕಿಬಿದ್ದಿರುತ್ತಾರೆ, ಹಾಗೂ ಸ್ಥಳದಿಂದ ಒಬ್ಬ ಆರೋಪಿ ಪರಾರಿಯಾಗಿರುತ್ತಾನೆ, ನಂತರ ಸ್ಥಳದಲ್ಲಿ ಜೂಜಾಟಕ್ಕೆ ಬಳಸಿದ್ದ 1) 52 ಇಸ್ಪೀಟು ಎಲೆಗಳು 2)ಒಂದು ಹಳೆ ನ್ಯೂಸ್ ಪೇಪರ್ 3) ಹಾಗೂ ಪಣಕ್ಕೆ ಹಾಕಿದ್ದ 4,200/-ರೂಪಾಯಿಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ, ಜೂಜಾಟದ ಸ್ಥಳದಲ್ಲಿ ಸಿಕ್ಕಿಬಿದ್ದ ಆರೋಪಿತರನ್ನು ಮತ್ತು ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು  ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.171/2020 ಕಲಂ. 188,269,270 ಐ.ಪಿ.ಸಿ:-

          ದಿನಾಂಕ:30/06/2020 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ವರದಿಯನೇಂದರೆ  ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೃಥ್ವಿರಾಜ್.ಜಿ, ಸಿಪಿಸಿ-195 ಆದ ನಾನು ನಿವೇಧಿಸಿಕೊಳ್ಳುವುದೇನೆಂದರೆ, ನನಗೆ ದಿನಾಂಕ:30-06-2020 ರಂದು ಬೆಳಿಗ್ಗೆ ಠಾಣಾಧಿಕಾರಿಗಳು ನನಗೆ ಬೀಟ್ ಕರ್ತವ್ಯಕ್ಕೆ ನೇಮಕ ಮಾಡಿರುತ್ತಾರೆ. ಅದರಂತೆ ನಾನು ಜಂಗಮಕೋಟೆ, ತೊಟ್ಟಿಬಾವಿ, ಸುಂಡ್ರಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಗಸ್ತು ಮಾಡಿಕೊಂಡು ಮಾಹಿತಿಯನ್ನು ಸಂಗ್ರಹಿಸಲಾಗಿ ನನಗೆ ಬಂದ ಮಾಹಿತಿಯ ಮೇರೆಗೆ ಠಾಣಾ ಸರಹದ್ದಿನ ಸುಂಡ್ರಹಳ್ಳಿ ಗ್ರಾಮದ ಬಳಿ ಇರುವ ಐ.ಟಿ.ಬಿ.ಪಿ (ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್) ಆರ್ಮಿ ಕ್ಯಾಂಪಸ್ ನಲ್ಲಿದ್ದ ಸೋಮನಾಥ ದರ್ಮಾಜಿ ಮಹಾನ್ಗಡೆ ಬಿನ್ ದರ್ಮಾಜಿ ಮಹಾನ್ಗಡೆ, ಮೊಬೈಲ್ ನಂ:7709235570, ಸ್ವಂತ ಸ್ಥಳ:ಕೊಲ್ಲಾನ್ ಗ್ರಾಮ, ಪೋರ್ಚುರನ್ ಅಂಚೆ, ತಸ್ಲಿಯಾ ತಾಲ್ಲೂಕು, ಸತಾರ ಜಿಲ್ಲೆ, ಮಹಾರಾಷ್ಟ್ರ ರಾಜ್ಯ ರವರು ದಿನಾಂಕ:07.03.2020 ರಂದು ರಜೆ ಮೇಲೆ ಅವರ ಸ್ವಂತ ಗ್ರಾಮಕ್ಕೆ ತೆರಳಿದ್ದು, ಸದರಿಯವರು ಅವರ ಸ್ವಂತ ಗ್ರಾಮದಿಂದ ಪೂನಾ ನಗರಕ್ಕೆ ಬಂದು ಅಲ್ಲಿಂದ ದಿನಾಂಕ:11.06.2020 ರಂದು ಪೂನಾ ನಗರದಿಂದ ಯಶವಂತಪುರ, ಬೆಂಗಳೂರು ನಗರಕ್ಕೆ ರೈಲಿನಲ್ಲಿ ಬಂದಿದ್ದು, ದಿನಾಂಕ:12.06.2020 ರಂದು ಸುಂಡ್ರಹಳ್ಳಿ ಆರ್ಮಿ ಕ್ಯಾಂಪಸ್ ಗೆ ಬಂದಿರುತ್ತಾರೆ. ದಿನಾಂಕ:13.06.2020 ರಂದು ಸೋಮನಾಥ ದರ್ಮಾಜಿ ಮಹಾನ್ಗಡೆ ಬಿನ್ ದರ್ಮಾಜಿ ಮಹಾನ್ಗಡೆ ರವರನ್ನು ಮಾನ್ಯ ಜಿಲ್ಲಾಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲೆ ರವರ ಆದೇಶದಂತೆ ಶಿಡ್ಲಘಟ್ಟ ತಾಲ್ಲೂಕು ಆರೋಗ್ಯಾಧಿಕಾರಿಗಳು ದಿನಾಂಕ:13-06-2020 ರಿಂದ ದಿನಾಂಕ:19-06-2020 ರವರಿಗೆ ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರ ಗ್ರಾಮದ ಬಳಿ ಇರುವ ಹಾಸ್ಟೆಲ್ ನಲ್ಲಿ ಇನ್ಸಿಟ್ಯೂಷನ್ ಕ್ವಾರೆಂಟೈನ್ ಇರಲು ಆದೇಶ ಮಾಡಿರುತ್ತಾರೆ. ನಂತರ ಅಧಿಕಾರಿಗಳು ದಿನಾಂಕ:19-06-2020 ರಿಂದ ದಿನಾಂಕ:26.06.2020 ರವರೆವಿಗೂ (Home Quarantine) ನಿವಾಸದಲ್ಲಿ (ಆರ್ಮಿ ಕ್ಯಾಂಪಸ್ ನಲ್ಲಿ) ಇರಲು ಸೂಚನೆಗಳನ್ನು ನೀಡಿ ಹೋಮ್ ಕ್ವಾರಂಟೈನ್ ಬಗ್ಗೆ ಕೈಗೆ ಸೀಲ್ ಮಾಡಿ ಪ್ರತ್ಯಕಗೊಳಿಸುವಿಕೆ (Home Quarantine) ನಿಗಾವಣೆಯಲ್ಲಿರಲು ಆದೇಶ ಮಾಡಿ ಸುಂಡ್ರಹಳ್ಳಿ ಗ್ರಾಮದ ಬಳಿ ಇರುವ ಆರ್ಮಿ ಕ್ಯಾಂಪಸ್ ಗೆ ಕಳುಹಿಸಿಕೊಟ್ಟಿರುತ್ತಾರೆ. ಸೋಮನಾಥ ದರ್ಮಾಜಿ ಮಹಾನ್ಗಡೆ ರವರು ದಿನಾಂಕ:24-06-2020 ರಂದು ತಮಿಳುನಾಡು ರಾಜ್ಯದ ಶಿವಗಂಗೆ ಕ್ಯಾಂಪ್ ಗೆ ಹೋಗಿರುವುದಾಗಿ ತಿಳಿದು ಬಂದಿರುತ್ತೆ. ಸೋಮನಾಥ ದರ್ಮಾಜಿ ಮಹಾನ್ಗಡೆ ಬಿನ್ ದರ್ಮಾಜಿ ರವರು ಮನುಷ್ಯರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್ -19 ಸಾಂಕ್ರಾಮಿಕ ರೋಗದ ಸೋಂಕು ಹರಡುವ ಸಂಭವವಿದೆ ಎಂದು ತಿಳಿದೂ ಸಹ ನಿರ್ಲಕ್ಷ್ಯತನದಿಂದ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿರುತ್ತಾನೆ ಮತ್ತು (Home Quarantine) ಸರ್ಕಾರದ ಆದೇಶವನ್ನು ಉಲ್ಲಂಘಿಸಿರುತ್ತಾರೆಂದು ತಿಳಿದು ಬಂದಿರುತ್ತೆ. ಆದ್ದರಿಂದ ಸದರಿ ವ್ಯಕ್ತಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೋರುತ್ತೇನೆ.