ದಿನಾಂಕ : 30/03/2020 ರ ಅಪರಾಧ ಪ್ರಕರಣಗಳು

1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 84/2020 ಕಲಂ.307-324-506 ಐ.ಪಿ.ಸಿ:-
ದಿನಾಂಕ: 30/03/2020 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿದಾರರಾದ ಮಮತಬಾಯಿ ಕೋಂ ರಾಣೋಜಿರಾವ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಮ್ಮ ತಂದೆಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು 1 ನೇ ಮಮತಬಾಯಿ 2 ನೇ ಯಶೋಧಬಾಯಿ, 3ನೇ ಭವಾನಿಬಾಯಿ, 4 ನೇ ಸಂಜನಾಬಾಯಿ ರವರಿದ್ದು ನಾನು ನಮ್ಮ ಗ್ರಾಮದಲ್ಲಿದ್ದು ರಾಣೋಜಿರಾವ್ ರವರನ್ನು ಮಧುವೆಯಾಗಿದ್ದು, ನಾನು ತಂದೆ ಮನೆಯಲ್ಲಿದ್ದು 3 ದಿನಗಳ ಹಿಂದೆ ನಮ್ಮ ಗ್ರಾಮದ ದೀಪುರಾವ್ ಬಿನ್ ರಾಮ್ ರಾವ್, 26 ವರ್ಷ, ಜಿರಾಯ್ತಿ ರವರು ನಮ್ಮ ಮನೆಗೆ ಬಂದು ನಮ್ಮ 2ನೇ ತಂಗಿಯಾದ ಯಶೋಧಬಾಯಿ ರವರನ್ನು ಮಧುವೆಯಾಗುವುದಾಗಿ ತಮ್ಮ ತಂದೆ ತಾಯಿಯವರನ್ನು ಕೇಳಿದ್ದು ನಮ್ಮ ತಂದೆ ತಾಯಿ ನಾವು 2 ವರ್ಷ ಮಧುವೆ ಮಾಡುವುದಿಲ್ಲ ನೀನು ನಮ್ಮ ಮನೆ ಬಳಿ ಬರಬೇಡ ಎಂದು ತಿಳಿಸಿದ ನಂತರ ಈ ದಿನ ದಿನಾಂಕ: 30/03/2020 ರಂದು ಬೆಳಿಗ್ಗೆ 5-30 ಗಂಟೆಗೆ ದೀಪುರಾವ್ ನಮ್ಮ ಬಳಿ ಬಂದು ನನ್ನ ತಂಗಿ ಯಶೋಧಬಾಯಿ ರವರು ನಮ್ಮ ಮನೆಯ ಮುಂದಿನ ಹರಳಿ ಮರದ ಕೆಳಗೆ ಧನಗಳನ್ನು ಕಟ್ಟುವ ಜಾಗದಲ್ಲಿ ಕಸವನ್ನು ಗುಡಿಸುತ್ತಿದ್ದಾಗ ನನ್ನ ತಂಗಿಯನ್ನು ನೀನು ಮಧುವೆಯಾಗದಿದ್ದರೇ ನಿನ್ನ ಇಲ್ಲಿಯೇ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿ ಜಗಳವನ್ನು ತೆಗೆದು ಜೋತೆಯಲ್ಲಿಯೇ ತಂದಿದ್ದ ಒಂದು ಮಚ್ಚಿನಿಂದ ನನ್ನ ತಂಗಿಯ ತಲೆಯ ಮೇಲೆ ಹೊಡೆದಾಗ ತಲೆಗೆ ಗಾಯವಾಗಿ ಕುಸಿದು ಬಿದ್ದಳು ನಾನು ನಮ್ಮ ತಂದೆ ನಮ್ಮ ದೊಡ್ಡಪ್ಪ ನಾರಾಯಣರಾವ್ ಬಿನ್ ರಾಣೊಜಿರಾವ್, 68 ವರ್ಷ ರವರು ದೀಪು ರವರನ್ನು ಹಿಡಿದುಕೊಳ್ಳಲು ಹೋಗುವಾಗ ಓಡಿ ಹೋಗಿದ್ದು ನಾವುಗಳು ಯಶೋಧಬಾಯಿಯನ್ನು ಉಪಚರಿಸಿ ಯಾವುದೋ ಒಂದು ಕಾರಿನಲ್ಲಿ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ನಮ್ಮ ದೊಡ್ಡಪ್ಪನ ಮಗ ಕುಮಾರ ಬಿನ್ ನಾರಾಯಣರಾವ್ ರವರು ಹೋಗಿದ್ದು ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ನನ್ನ ತಂಗಿಯನ್ನು ಕೊಲೆ ಮಾಡುವ ಉದ್ದೇಶದಿಂದ ಮಚ್ಚಿನಿಂದ ಹೊಡೆದು ಗಾಯಪಡಿಸಿದ ದೀಪುರಾವ್ ರವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ಪ್ರ.ವ.ವರದಿ.
2. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 77/2020 ಕಲಂ.15(ಎ),32(3) ಕೆ.ಇ ಆಕ್ಟ್:-
ದಿನಾಂಕ 29/03/2020 ರಂದು ರಾತ್ರಿ 8-00 ಗಂಟೆಗೆ ಸಿಪಿಸಿ-529 ಸಿದ್ದೇಶ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ 29/03/2020 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಪಿ.ಎಸ್.ಐ ರವರು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಅಬ್ಲೂಡು ಗ್ರಾಮದ ವಾಸಿ ನಂದಕುಮಾರ್ ಬಿನ್ ರಾಮಕೃಷ್ಣಪ್ಪ ಎಂಬಾತನು ತನ್ನ ಮನೆಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನಿಟ್ಟುಕೊಂಡು ಅಲ್ಲಿಯೇ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಪಿ.ಎಸ್.ಐ ರವರು ಪಿಸಿ-529 ಸಿದ್ದೇಶ ಆದ ನನ್ನನ್ನು ಠಾಣೆಗೆ ಒದಗಿಸಿರುವ ಜೀಪ್ ನಂಬರ್ ಕೆಎ-40-ಜಿ-357 ರಲ್ಲಿ ಅಬ್ಲೂಡು ಗ್ರಾಮಕ್ಕೆ ಹೋಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ವಿಷಯವನ್ನು ತಿಳಿಸಿ, ನಂತರ ಪಂಚರೊಂದಿಗೆ ನಂದಕುಮಾರ್ ಬಿನ್ ರಾಮಕೃಷ್ಣಪ್ಪ ಮನೆಯ ಸಮೀಪ ಹೋಗಿ ಜೀಪ್ ಅನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಮುಂಭಾಗ ಯಾರೋ ಇಬ್ಬರು ಆಸಾಮಿಗಳು ಮದ್ಯವನ್ನು ಸೇವನೆ ಮಾಡುತ್ತಿರುವುದು ಕಂಡು ಬಂದಿದ್ದು, ಪಂಚರ ಸಮಕ್ಷಮ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಮತ್ತು ಮದ್ಯವನ್ನು ಕುಡಿಯಲು ಪೂರೈಕೆ ಮಾಡುತ್ತಿದ್ದ ಆಸಾಮಿಯು ತನ್ನ ಬಳಿ ಇದ್ದ ಒಂದು ಕಪ್ಪು ಬಣ್ಣದ ಕವರ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಸದರಿ ಕವರ್ ಅನ್ನು ತೆಗೆದು ಪರಿಶೀಲಿಸಲಾಗಿ ಅದರಲ್ಲಿ HAYWARDS CHEERS WHISKY ಯ 5 ಟೆಟ್ರಾ ಪಾಕೇಟ್ ಗಳಿದ್ದು ಪ್ರತಿಯೊಂದು ಟೆಟ್ರಾ ಪಾಕೇಟ್ ಮೇಲೆ 30.32 ಎಂದು ಬೆಲೆ ನಮೂದಾಗಿದ್ದು, ಇವುಗಳ ಒಟ್ಟು ಬೆಲೆ 151.60 ಆಗಿರುತ್ತದೆ. ಸ್ಥಳದಲ್ಲಿಯೇ HAYWARDS CHEERS WHISKY ಯ 5 ಖಾಲಿ ಟೆಟ್ರಾ ಪಾಕೇಟ್ ಗಳು, 5 ಖಾಲಿ ನೀರಿನ ವಾಟರ್ ಪಾಕೇಟ್ ಗಳು ಮತ್ತು 5 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು ಬಿದ್ದಿದ್ದು, ನಂತರ ಸ್ಥಳಕ್ಕೆ ಬಂದ ಸಾರ್ವಜನಿಕರನ್ನು ಮನೆಯ ಮಾಲೀಕನ ಹೆಸರು ವಿಳಾಸವನ್ನು ಕೇಳಲಾಗಿ ನಂದಕುಮಾರ್ ಬಿನ್ ರಾಮಕೃಷ್ಣಪ್ಪ, 35 ವರ್ಷ, ಬಲಜಿಗರು, ಹೋಟೆಲ್ ವ್ಯಾಪಾರಿ, ವಾಸ-ಅಬ್ಲೂಡು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಯು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಕುಡಿಯಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದರಿಂದ ಸಂಜೆ 6.30 ಗಂಟೆಯಿಂದ 7.30 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡು ಪಿ.ಎಸ್.ಐ ರವರು ಪಂಚನಾಮೆ ಮತ್ತು ಮಾಲನ್ನು ನನ್ನ ವಶಕ್ಕೆ ನೀಡಿ, ಠಾಣೆಯಲ್ಲಿ ಹಾಜರು ಪಡಿಸಿ, ಆರೋಪಿಯ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಲು ಸೂಚಿಸಿ, ದಾಳಿ ಸ್ಥಳದಿಂದ ಠಾಣಾ ಸರಹದ್ದಿನ ಗಸ್ತಿಗೆ ಹೊರಟಿದ್ದು, ಪಂಚನಾಮೆ ಮತ್ತು ಮಾಲನ್ನು ತಮ್ಮ ವಶಕ್ಕೆ ನೀಡುತ್ತಿರುವುದನ್ನು ಪಡೆದುಕೊಂಡು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರಿನ ಸಾರಾಂಶವಾಗಿರುತ್ತದೆ.
3. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 78/2020 ಕಲಂ.394 ಐ.ಪಿ.ಸಿ:-
ದಿನಾಂಕ 29/03/2020 ರಂದು ರಾತ್ರಿ 9-30 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ಲಕ್ಷ್ಮೀ ಕೋಂ ನಾಗರಾಜ್, 35 ವರ್ಷ, ತಿಗಳರು, ಕೂಲಿ ಕೆಲಸ, ವಾಸ-ಯಣ್ಣೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ಈ ದಿನ ದಿನಾಂಕ 29/03/2020 ರಂದು ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ ತಾನು ಹಾಲನ್ನು ಹಿಂಡಿಕೊಂಡು ಮನೆಯೊಳಗೆ ಹೋದಾಗ ಈ ಸಮಯದಲ್ಲಿ ತಮ್ಮ ಗ್ರಾಮದ ವಾಸಿ ವಕ್ಕಲಿಗ ಜನಾಂಗಕ್ಕೆ ಸೇರಿದ ಶ್ರೀನಿವಾಸ ಬಿನ್ ಬಚ್ಚಪ್ಪ ಎಂಬಾತನು ತಮ್ಮ ಮನೆಯೊಳಗೆ ಬಂದು ತನ್ನ ಕೈಯಲ್ಲಿದ್ದ ಕಬ್ಬಿಣದ ಕಂಬಿಯಿಂದ ತನ್ನ ಕಿವಿಗೆ ಮತ್ತು ತಲೆಯ ಹಿಂಭಾಗ ಹೊಡೆದು ರಕ್ತಗಾಯ ಪಡಿಸಿದಾಗ ತಾನು ಕೆಳಗೆ ಬಿದ್ದು ಹೋದಾಗ ಶ್ರೀನಿವಾಸ ತನ್ನ ಕತ್ತಿನಲ್ಲಿದ್ದ ಒಂದು ಬೊಟ್ಟು, 2 ಲಕ್ಷ್ಮೀ ಕಾಸು, 15 ಬಂಗಾರದ ಗುಂಡುಗಳಿದ್ದ ಕರಿ ಮಣಿ ಸರವನ್ನು ಕಿತ್ತುಕೊಂಡು ಹೊರಟು ಹೋಗಿರುತ್ತಾನೆ. ಸ್ವಲ್ಪ ಸಮಯದ ನಂತರ ಹಾಲಿನ ಡೈರಿಯ ಬಳಿಯಿಂದ ಮನೆಗೆ ಬಂದ ತನ್ನ ಮಗಳಾದ ಶಾಂತ ರವರು ತನ್ನ ಗಂಡನಿಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ಕೂಲಿ ಕೆಲಸದಿಂದ ಮನೆಗೆ ಬಂದ ತನ್ನ ಗಂಡ ತನ್ನನ್ನು ದ್ವಿ ಚಕ್ರ ವಾಹನದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಮೇಲ್ಕಂಡ ಶ್ರೀನಿವಾಸ ರವರು ತನಗೆ ಪರಿಚಯ ಇದ್ದು, ಈತನು ಆಗಾಗ್ಗೆ ತಮ್ಮ ಮನೆಗೆ ಬಂದು ಹೋಗುತ್ತಿದ್ದನು. ತನ್ನ ಕತ್ತಿನಲ್ಲಿದ್ದ ಬಂಗಾರದ ಒಂದು ಬೊಟ್ಟು, 2 ಲಕ್ಷ್ಮೀ ಕಾಸು, 15 ಗುಂಡುಗಳು ಸುಮಾರು 5-6 ಗ್ರಾಂ ತೂಕ ಇದ್ದು ಇದು ಸುಮಾರು 15.000-00 ರೂ ಬೆಲೆ ಬಾಳುವುದ್ದಾಗಿರುತ್ತದೆ. ಆದ ಕಾರಣ ಮೇಲ್ಕಂಡ ಶ್ರೀನಿವಾಸ ರವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ಹೇಳಿಕೆ.
4. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 35/2020 ಕಲಂ.87 ಕೆ.ಪಿ ಆಕ್ಟ್:-
ದಿನಾಂಕ.29.03.2020 ರಂದು ಸಂಜೆ 6.15 ಗಂಟೆಗೆ ಶ್ರೀ. ಲಿಯಾಕತ್ ಉಲ್ಲಾ ಪ್ರಬಾರ ಪಿ.ಎಸ್.ಐ, ಶಿಡ್ಲಘಟ್ಟ ನಗರ ಠಾಣೆ ರವರು ಠಾಣೆಗೆ ಆರೋಪಿಗಳು ಮತ್ತು ಮಾಲು ಸಮೇತ ಹಾಜರುಪಡಿಸಿದ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ.29.03.2020 ರಂದು ಸಂಜೆ 4.00 ಗಂಟೆಗೆ ತಾನು ಸಿಬ್ಬಂದಿಯವರೊಂದಿಗೆ ಕೊರೊನ ಸಾಂಕ್ರಮಿಕ ರೋಗ ತಡೆಗಟ್ಟುವ ಬಗ್ಗೆ ಭಾರತ್ ಲಾಕ್ ಡೌನ್ ಪ್ರಯುಕ್ತ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ಆಶೋಕ ರಸ್ತೆಯ ಶ್ರೀ. ಬಸವೇರ್ಶವರ ದೇವಾಲಯದ ಪಕ್ಕದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪಂಚಾಯ್ತಿದಾರರು ಮತ್ತು ಶಿಡ್ಲಘಟ್ಟ ನಗರ ಠಾಣೆಯ ಸಿಬ್ಬಂದಿಯವರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಸಂಜೆ 5-00 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ 03 ಜನ ಆಸಾಮಿಗಳು ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಹಿಂಬಾಲಿಸಿ 03 ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಎಸ್.ವಿ ನಾಗರಾಜ ಬಿನ್ ವೆಂಕಟರಾಯಪ್ಪ, ವಾಟರ್ ಮ್ಯಾನ್ ಕೆಲಸ, ಉಲ್ಲೂರುಪೇಟೆ, 2] ಭರತ್ ಬಿನ್ ನಾಗರಾಜ, ಡೆಕೋರೆಷನ್ ಕೆಲಸ, ದೇಶದಪೇಟೆ, ಮತ್ತು 3] ರಾಜೇಶ್ ಬಿನ್ ವೆಂಕಟೇಶ್, ಸಿ.ಆರ್.ಲೇಔಟ್, ಎಲ್ಲರೂ ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು, ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು 3,050/-ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು ಇವುಗಳನ್ನು ಸಂಜೆ 5-10 ಗಂಟೆಯಿಂದ 5-45 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿದ್ದು, 3ಜನ ಆಸಾಮಿಗಳು ಮತ್ತು ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ.35/2020 ಕಲಂ.87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.