ದಿನಾಂಕ :29/11/2020 ರ ಅಪರಾಧ ಪ್ರಕರಣಗಳು

1) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.426/2020 ಕಲಂ:15(ಎ) ಕೆ.ಇ ಆಕ್ಟ್:-

     ದಿನಾಂಕ:28/11/2020 ರಂದು ಸಂಜೆ 4.00 ಗಂಟೆಗೆ ಠಾಣೆಯ ಸಿ.ಹೆಚ್.ಸಿ-167 ಶ್ರೀ ವಿಜಯಕುಮಾರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:28/11/2020 ರಂದು ಠಾಣಾಧಿಕಾರಿಗಳು ತನಗೆ 24 ನೇ ಗ್ರಾಮ ಗಸ್ತಿಗೆ ನೇಮಿಸಿದ್ದು, ಅದರಂತೆ ತಾನು ಸದರಿ ಗಸ್ತಿನಲ್ಲಿ ಗಸ್ತು ಮಾಡಿಕೊಂಡು ಚಿಕ್ಕಮುನಿಮಂಗಲ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ವಾಸಿ ದ್ಯಾವಮ್ಮ ಕೋಂ ವೆಂಕಟರವಣಪ್ಪ ಎಂಬುವವರು ತನ್ನ ವಾಸದ ಮನೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತನಗೆ ಖಚಿತ ಮಾಹಿತಿ ದೊರೆತಿದ್ದು, ಸದರಿ ಮನೆಯ ಬಳಿ ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ದ್ಯಾವಮ್ಮ ಕೋಂ ವೆಂಕಟರವಣಪ್ಪ ರವರ ಮನೆಯ ಮುಂಭಾಗದ ಬಳಿ ಹೋಗುವಷ್ಟರಲ್ಲಿ ಸದರಿ ಅಂಗಡಿಯ ಮುಂದೆ ಕುಳಿತಿದ್ದ ವ್ಯಕ್ತಿಗಳು ಮತ್ತು ಮನೆಯ ಮುಂದೆ ಇದ್ದ ಆಸಾಮಿಯು ಓಡಿ ಹೋಗಿದ್ದು, ಮನೆಯ ಮುಂಭಾಗದಲ್ಲಿ ನೋಡಲಾಗಿ 1).90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 15 ಟೆಟ್ರಾ ಪಾಕೆಟ್ ಗಳು, 2).ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು 3).ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, 90 ಎಂ ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಒಟ್ಟು 15 ಮದ್ಯದ ಟೆಟ್ರಾ ಪಾಕೆಟ್  ಗಳ ಪೈಕಿ 2 ಟೆಟ್ರಾ ಪಾಕೇಟ್ ಗಳು ಓಪನ್ ಆಗಿದ್ದು ಆವುಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ಎರಡು ನೀರಿನ ಬಾಟಲ್ ಗಳು ಓಪನ್ ಆಗಿದ್ದು ಆವುಗಳಲ್ಲಿ ಸ್ವಲ್ಪ ಭಾಗದ ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶಮಾಡಿಕೊಟ್ಟಿರುವ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ದ್ಯಾವಮ್ಮ ಕೋಂ ವೆಂಕಟರವಣಪ್ಪ, 45 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಚಿಕ್ಕಮುನಿಮಂಗಲ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು, ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 2.00 ಗಂಟೆಯಿಂದ ಮದ್ಯಾಹ್ನ 3.00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ಎಲ್ಲಾ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲುಗಳು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ವರದಿಯನ್ನು ನೀಡುತ್ತಿದ್ದು, ಅಕ್ರಮವಾಗಿ ತನ್ನ ವಾಸದ ಮನೆಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ದ್ಯಾವಮ್ಮ ಕೋಂ ವೆಂಕಟರವಣಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

2) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.427/2020 ಕಲಂ:15(ಎ) ಕೆ.ಇ ಆಕ್ಟ್:-

     ದಿನಾಂಕ: 28/11/2020 ರಂದು ಸಂಜೆ 5.00 ಗಂಟೆಗೆ ಚಿಕ್ಕಬಳ್ಳಾಪುರ ಡಿ.ಸಿ.ಬಿ/ಸಿ.ಇ.ಎನ್ ಪೊಲೀಸ್ ಠಾಣೆಯ ಸಿ.ಪಿ.ಸಿ-198 ಶ್ರೀ ಮಂಜುನಾಥ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:28/11/2020 ರಂದು ಚಿಕ್ಕಬಳ್ಳಾಪುರ DCB/CEN ಪೊಲೀಸ್ ಠಾಣೆಯ PI  ಶ್ರೀ ರಾಜಣ್ಣ ರವರು ತನಗೆ ಹಾಗೂ ಸಿ.ಪಿ.ಸಿ-142 ಶ್ರೀ.ಅಶೋಕ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು ಅದರಂತೆ ತಾವು ಈ ದಿನ ಮದ್ಯಾಹ್ನ 3.00 ಗಂಟೆಯ ಸಮಯದಲ್ಲಿ ಚಿಂತಾಮಣಿ ತಾಲ್ಲೂಕಿನ ಚಿಕ್ಕಮುನಿಮಂಗಲ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಅದೇ ಗ್ರಾಮದ ವಾಸಿ ಶ್ರೀಮತಿ ಲಕ್ಷ್ಮೀದೇವಮ್ಮ ಕೋಂ ಆಂಜಪ್ಪ ರವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳದಲ್ಲಿ ದಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ಶ್ರೀಮತಿ ಲಕ್ಷ್ಮೀದೇವಮ್ಮ ಕೋಂ ಆಂಜಪ್ಪ, 42 ವರ್ಷ, ಆದಿಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ, ವಾಸ ಚಿಕ್ಕಮುನಿಮಂಗಲ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1).ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 90 ML ನ ಮದ್ಯ ತುಂಬಿದ 25 ಟೆಟ್ರಾ ಪಾಕೇಟ್ ಗಳು, 2) ಒಂದು ಖಾಲಿ ಪ್ಲಾಸ್ಟಿಕ್ ಬಾಟಲ್ 3).ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 90 ML ನ 02 ಖಾಲಿ ಟೆಟ್ರಾ ಪಾಕೆಟ್ ಗಳು, 4).02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು ಸದರಿಯವುಗಳನ್ನು ಮದ್ಯಾಹ್ನ 3.15 ಗಂಟೆಯಿಂದ ಸಂಜೆ 4.15 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೇವೆ. ಆದ್ದರಿಂದ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಶ್ರೀಮತಿ ಲಕ್ಷ್ಮೀದೇವಮ್ಮ ಕೋಂ ಆಂಜಪ್ಪ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

3) ಗೌರಿಬಿದನೂರು  ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.303/2020 ಕಲಂ:279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ 28/11/2020 ರಂದು ಸಂಜೆ  17-30 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ವತ್ರೆಗೆ ಬೇಟಿ ನೀಡಿ ಗಾಯಾಳುವಿನ ಹೇಳಿಕೆ ಸಾರಾಂಶವೆನೇಂದರೆ ದಿನಾಂಕ 27/11/2020 ರಂದು ಮದ್ಯಹ್ನ ಸುಮಾರು 3-45 ರಿಂದ 4-00 ಗಂಟೆ ಸಮಯದಲ್ಲಿ ತಾನು ಮತ್ತು ನಮ್ಮ ಗ್ರಾಮದ ಶ್ರೀಧರ ಬಿನ್ ಗಂಗಪ್ಪ 36 ವರ್ಷ, ವಕ್ಕಲಿಗರು, ನಾವುಗಳು ಶ್ರೀಧರ ರವರ ಬಾಬತ್ತು ದ್ವಿಚಕ್ರ ವಾಹನ ಸಂಖ್ಯೆ KA 40 K 2150 ಹಿರೊ ಹೊಂಡಾ ಪ್ಲೆಂಡರ್ ಪ್ಲಸ್ ವಾಹನದಲ್ಲಿ ಇಡಗೂರು ಗ್ರಾಮದಿಂದ ಗೌರಿಬಿದನೂರು ಕಡೆಗೆ ಬರುತ್ತಿದ್ದಾಗ ಇಡಗೂರು ರಸ್ತೆಯಲ್ಲಿರುವ ಮರಳೂರು ಕ್ರಾಸ್ ಬಳಿ ಬರುತ್ತಿದ್ದಾಗ ಗೌರಿಬಿದನೂರು ಕಡೆಯಿಂದ ಇಡಗೂರು ಕಡೆ ಬರುತ್ತಿದ್ದ ದ್ವಿಚಕ್ರ ವಾಹನ ಸಾವರ ತನ್ನ ವಾಹನವನ್ನು ಅತಿವೇಗ ಮತ್ತು ಆಜಾಗರು ಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿದ್ದ ತಮ್ಮಗೆ ಡಿಕ್ಕಿ ಹೊಡೆಸಿದ ಪರಿಣಾಮ ತಾವು ತಮ್ಮ ವಾಹನದಿಂದ ಕೆಲಗೆ ಬಿದ್ದು ತಮ್ಮ ದ್ವಿಚಕ್ರ ವಾಹನ  ಚಾಲನೆ ಮಾಡುತ್ತಿದ್ದ ಶ್ರೀಧರ ರವರ ಬಲಕಾಲಿನ ಪದಕ್ಕೆ  ಪಾದದ ಬೆರಳುಗಳಿಗೆ ಎಡ ಭಾಗದ ಬುಜಕ್ಕೆ ರಕ್ತ ಗಾಯಗಳಾಗಿರುತ್ತೆ ಹಾಗೂ ತಲೆಯ ಎಡಭಾಗಕ್ಕೆ ರಕ್ತಗಾಯವಾಗಿರುತ್ತೆ ಹಾಗೂ ತನಗೆ ಬಲ ಪಾದಕ್ಕೆ ರಕ್ತ ಗಾಯವಾಗಿರುತ್ತೆ ಮತ್ತು ತನ್ನ ಮೊಣಕಾಲುಗಳಿಗೆ ಮೊಣ ಕೈಗಳಿಗೆ ತರಚಿದ ಗಾಯಗಳಾಗಿರುತ್ತೆ ತಮಗೆ ಡಿಕ್ಕಿ ಹೊಡೆಸಿದ ವಾಹನ ಸಂಖ್ಯೆ ನೋಡಲಾಗಿ KA 04 EQ 2146 ದ್ವಿಚಕ್ರ ವಾಹನ ವಾಗಿರುತ್ತೆ ಸದರಿ ವಾಹನದ ಚಾಲಕ ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿರುತ್ತಾನೆ ಆ ಸಮಯದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಮರಳೂರು ಗ್ರಾಮದ ರಂಗನಾಥ ರವರು ನಮ್ಮನ್ನು ಯಾವುದೋ ಒಂದು  ಆಟೋದಲ್ಲಿ ನಮ್ಮನ್ನು ಗೌರಿಬಿದನೂರು ಸರ್ಕಾರಿ ಆಸ್ವತ್ರೆಗೆ  ಕಳುಹಿಸಿರುತ್ತಾರೆ ಚಿಕಿತ್ಸೆ ಪಡೆಯುತ್ತಿದ್ದರಿಂದ ಈ  ದಿನ ದಿನಾಂಕ 28/11/2020 ರಂದು  ತಡವಾಗಿ ದೂರು ನೀಡಿರುತ್ತೆನೆ ನಮಗೆ ಡಿಕ್ಕಿ ಹೊಡಡೆಸಿದ ದ್ವಿಚಕ್ರ ವಾಹನ ಸವಾರನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

4) ಗುಡಿಬಂಡೆ  ಪೊಲೀಸ್ ಠಾಣೆ ಮೊ.ಸಂ.192/2020 ಕಲಂ: 36 (1) (B),32,34 ಕೆ.ಇ ಆಕ್ಟ್:-

     ದಿನಾಂಕ: 28-11-2020 ರಂದು ರಾತ್ರಿ 10-15 ಗಂಟೆಗೆ ಪಿರ್ಯಾಧಿ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರಾದ ಶ್ರೀ ಎನ್. ರಾಜಣ್ಣ ರರವರು ಠಾಣೆಗೆ ಹಾಜರಾಗಿ ಅಸಲು ಪಂಚನಾಮೆ, ಮಾಲು, ಮತ್ತು ಇಬ್ಬರು ಆರೋಪಿತರೊಂದಿಗೆ ನೀಡಿದ ವರಧಿಯ ಸಾರಾಂಶವೇನೆಂದರೆ, ತಾನು ಮತ್ತು ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: KA-40-G-270 ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಗುಡಿಬಂಡೆ ತಾಲ್ಲೂಕಿನ ರೇಣುಮಾಕಲಹಳ್ಳಿ, ಮಂಡಿಕಲ್ ಇತ್ಯಾದಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ರಾತ್ರಿ ಸುಮಾರು 7-15 ಗಂಟೆ ಸಮಯದಲ್ಲಿ ಪೆರೇಸಂದ್ರ ಸರ್ಕಲಿಗೆ ಬಂದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಎನ್.ಹೆಚ್-44 ರಸ್ತೆಗೆ ಹೊಂದಿಕೊಂಡಿರುವ ಸ್ವಾಗತ್ ಮಲ್ಟಿ ಕ್ಯೂಷೈನ್ ರೆಸ್ಟೋರೆಂಟಿನಲ್ಲಿ ಕಾನೂನು ಬಾಹಿರವಾಗಿ ಮದ್ಯವನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿರುತ್ತದೆ. ಅದರಂತೆ ನಾವುಗಳು ರಾತ್ರಿ ಸುಮಾರು 7-30 ಗಂಟೆ ಸಮಯದಲ್ಲಿ ಎನ್.ಹೆಚ್-44 ರಸ್ತೆಗೆ ಹೊಂದಿಕೊಂಡಿರುವ ಸ್ವಾಗತ್ ಮಲ್ಟಿ ಕ್ಯೂಷನ್ ರೆಸ್ಟೋರೆಂಟ್ ಬಳಿಗೆ ಬಂದು ಇಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಬಂದ ಮಾಹಿತಿ ತಿಳಿಸಿ ನಂತರ ನಾನು, ಸಿಬ್ಬಂದಿ ಮತ್ತು ಪಂಚರು ಕಾಲ್ನಡಿಗೆಯಲ್ಲಿ ನಡೆದುಕೊಂಡು ಸದರಿ ರೆಸ್ಟೋರೆಂಟಿನ ಅಡುಗೆ ಕೋಣೆಯ ಉತ್ತರಕ್ಕೆ ಇರುವ ಬಾಗಿಲು ತೆರೆದಿರುವ ಕ್ಯಾಬಿನ್ ನಲ್ಲಿ ಪರಿಶೀಲನೆ ಮಾಡಲಾಗಿ 61 ಲೀಟರ್ 160 ಎಂ.ಎಲ್ ನ ಮದ್ಯ ತುಂಬಿದ ವಿವಿಧ ಬಗೆಯ ಮದ್ಯಗಳನ್ನು ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದುದ್ದು, ಕಂಡುಬಂದು ಅವುಗಳನ್ನು ಪಂಚರ ಸಮಕ್ಷಮ ಅಜಮಾಯಿಷಿ ಮಹಜರ್ ಮೂಲಕ ವಶಕ್ಕೆ ಪಡೆದುಕೊಂಡಿರುತ್ತೆ. ಈ ಬಗ್ಗೆ ಸದರಿ ಹೊಟೇಲಿನ ದಾಳಿ ನಡೆಸಿದ ಕೋಣೆಯಲ್ಲಿ ಹಾಜರಿದ್ದ ಇಬ್ಬರು ಆಸಾಮಿಗಳ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಶಿವಕುಮಾರ್ @ ಶಿವ ಬಿನ್ ಅಂದಾನಪ್ಪ, 30 ವರ್ಷ, ಸ್ಟೋರ್ ಕೀಪರ್ ಕೆಲಸ ಸ್ವಾಗತ್ ಹೊಟೇಲ್, ಸ್ವಂತಸ್ಥಳ ಸಾಮಸೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು 2) ವಿತೋ ಜ್ಮೊಮಿ ಬಿನ್ ತೋನ್ವಿ ಜ್ಮೊಮಿ, 29 ವರ್ಷ, ವಾಸ ಸ್ವಾಗತ್ ಹೊಟೇಲ್, ಅರೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಸ್ವಂತಸ್ಥಳ: ದನಸಿರಿಪರ್ ಗ್ರಾಮ, ಧೀಮಾಪುರ್ ಜಿಲ್ಲೆ, ನಾಗಲ್ಯಾಂಡ್ ರಾಜ್ಯ, ಪಿನ್-797112, ಮೊಬೈಲ್ ಸಂಖ್ಯೆ: 7676474542 ಎಂತ ತಿಳಿಸಿರುತ್ತಾನೆ. ಅವರುಗಳನ್ನು ಅಕ್ರಮವಾಗಿ ಮದ್ಯವನ್ನು ದಾಸ್ತಾನು ಇರಿಸಿ ಮಾರಾಟ ಮಾಡುವ ಬಗ್ಗೆ ಯಾವುದಾದರೂ ಪರವಾನಗಿ, ಲೈಸೆನ್ಸ್, ಅನುಮತಿ ಇರುವ ಬಗ್ಗೆ ಪ್ರಶ್ನಿಸಲಾಗಿ ತಮ್ಮ ಬಳಿ ಯಾವುದೇ ಪರವಾನಗಿ, ಲೈಸೆನ್ಸ್, ಅನುಮತಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಮುಂದುವರೆದು ಮೇಲ್ಕಂಡ ಮದ್ಯಗಳನ್ನು ಎಲ್ಲಿಂದ ತೆಗೆದುಕೊಂಡು ಬಂದಿದ್ದು, ಎಂದು ಕೇಳಲಾಗಿ ಪೆರೇಸಂದ್ರ ಗ್ರಾಮದ ಜಯಲಕ್ಷ್ಮೀ ವೈನ್ಸ್ ನಿಂದ ದಿನಾಂಕ: 27-11-2020 ರಂದು ತೆಗೆದುಕೊಂಡು ಬಂದಿದ್ದು, ಸದರಿ ವೈನ್ಸಿನ ಕ್ಯಾಷಿಯರ್ ನೀಡಿರುವುದಾಗಿ ತಿಳಿಸಿರುತ್ತಾರೆ. ನಂತರ ಪಂಚರ ಸಮಕ್ಷಮ ಮೇಲ್ಕಂಡ ಮಾಲನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮವಾಗಿ ಮಾರಾಟ ಮಾಡಲು ಮದ್ಯವನ್ನು ದಾಸ್ತಾನು ಮಾಡಿದ್ದ ಮೇಲ್ಕಂಡ ಆರೋಪಿಗಳು ಹಾಗೂ ದಿನಾಂಕ: 27-11-2020 ರಂದು ಜಯಲಕ್ಷ್ಮೀ ವೈನ್ಸಿನಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಷಿಯರ್ ಈ ಅಕ್ರಮ ವ್ಯವಹಾರಕ್ಕೆ ಸಹಕರಿಸಿದ್ದು, ಆತನ ಮೇಲೆಯೂ ಸಹ ಕರ್ನಾಟಕ ಅಬಕಾರಿ ಕಾಯ್ದೆಯಡಿಯಲ್ಲಿ ಕ್ರಮಕೈಗೊಳ್ಳಲು ಆರೋಪಿಗಳು, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮಜರುಗಿಸಲು ಸೂಚಿಸಿ ನೀಡಿದ ವರಧಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

5) ಕೆಂಚಾರ್ಲಹಳ್ಳಿ  ಪೊಲೀಸ್ ಠಾಣೆ ಮೊ.ಸಂ.129/2020 ಕಲಂ: 302, 34 ಐ.ಪಿ.ಸಿ:-

     ದಿನಾಂಕ 28-11-2020 ರಂದು ಬೆಳಗ್ಗೆ 11.00 ಗಂಟೆಗೆ ಪಿರ್ಯಾಧಿದಾರರಾದ ರಾಮಾಂಜಿನೇಯಪ್ಪ ಬಿನ್ ಲೇಟ್ ವೆಂಕಟರವಣಪ್ಪ, 27 ವರ್ಷ, ಆದಿ ದ್ರಾವಿಡ ಜನಾಂಗ, ಜಿರಾಯ್ತಿ ವಾಸ ಕೆಂಚೇಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಗಣಕಯಂತ್ರದ ಮುದ್ರಿತ ದೂರಿನ ಸಾರಾಂಶವೇನೆಂದರೆ, ಕೆಂಚೇಪಲ್ಲಿ ಗ್ರಾಮದ  ಕೆರೆ ಕಟ್ಟೆಯ ಕೆಳಗೆ ಇರುವ ಶ್ರೀ ಅಂಜನೇಯಸ್ವಾಮಿ ದೇವಸ್ಥಾನದ ಬಳಿಗೆ ಚಿಂದಿ ಆಯ್ದು ಜೀವನ ಮಾಡುವ ಅಲೆಮಾರಿ ಜನಾಂಗದವರಾದ ಸುಮಾರು 04 ರಿಂದ 05 ಜನ ಬಂದು ಇಲ್ಲಿಯೇ ಇದ್ದುಕೊಂಡು ಚಿಂದಿ ಆಯುವ ಕೆಲಸ ಮಾಡಿಕೊಂಡು ತಮ್ಮ ಗ್ರಾಮ ಮತ್ತು ಅಕ್ಕಪಕ್ಕದ ಗ್ರಾಮಗಳಲ್ಲಿ ಪ್ಲಾಸ್ಟಿಕ್, ಪೇಪರ್ ವಸ್ತುಗಳನ್ನು ಅಯ್ದು ಮಾರಾಟ ಮಾಡಿಕೊಂಡು ಆಗಾಗ ಗ್ರಾಮದಲ್ಲಿ ಊಟವನ್ನು ಮನೆಗಳ ಬಳಿ ಕೇಳಿ ಪಡೆದುಕೊಂಡು ವಾರ ಹದಿನೈದು ದಿನ ಇದ್ದು ಹೊರಟು ಹೋಗುತ್ತಿದ್ದರು. ಅದರಂತೆ ಸದರಿಯವರು 03-04 ದಿನಗಳ ಹಿಂದೆ ಬಂದಿದ್ದರು. ಅವರು ಬಂದಾಗಿನಿಂದ ಆಗಾಗ ರಾತ್ರಿ ವೇಳೆಯಲ್ಲಿ ದೇವಸ್ಥಾನದ ಹತ್ತಿರ ಗಲಾಟೆ ಮಾಡಿಕೊಳ್ಳುವ ಕೂಗುಗಳು ಕೇಳಿಸುತ್ತಿತ್ತು. ದಿನಾಂಕ 27/11/2020 ರಂದು ರಾತ್ರಿ ಸುಮಾರು 11-00 ಗಂಟೆ ಸಮಯದಲ್ಲಿ ಜೋರಾಗಿ ದೇವಸ್ಥಾನದ ಬಳಿ ಕಿರುಚಾಟ, ಕೂಗಾಟ ಶಬ್ದ ಬಂದಿದ್ದರಿಂದ ತಾನು ಮತ್ತು ಗ್ರಾಮಸ್ಥರು ಹೋಗಿ ನೋಡಲಾಗಿ ಅಲ್ಲಿದ್ದವರು ತಮ್ಮನ್ನು ನೋಡಿ ಓಡಿಹೋಗಿರುತ್ತಾರೆ. ಅ ಪೈಕಿ ಒಬ್ಬಾತನಿಗೆ  ತಲೆಗೆ ಗಾಯವಾಗಿ ಹೆಚ್ಚಿಗೆ ರಕ್ತ ಬಂದು ಪ್ರಜ್ಞಾ ಹೀನಸ್ಥಿತಿಯಲ್ಲಿ ಬಿದ್ದಿದ್ದನು. ತಕ್ಷಣ ತಾನು 108 ವಾಹನಕ್ಕೆ ಕರೆ ಮಾಡಿದ್ದು, ವಾಹನವು ಬಾರದ ಕಾರಣ ತನ್ನ ಪರಿಚಯಸ್ಥರ ಕಾರಿನಲ್ಲಿ ಗಾಯಾಳುವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತೇನೆ. ಈತನ ಹೆಸರು ತಿಳಿಯಲಾಗಿ ಶ್ರೀರಾಮುಲು 50 ವರ್ಷ, ಗಂಧೋಡೊಲ್ಲಪಲ್ಲಿ ಗ್ರಾಮ, ಆಂಧ್ರಪ್ರದೇಶ ಎಂದು ತಿಳಿಯಿತು. ಗಾಯಾಳುವಿನ ತಲೆಗೆ  ಹೆಚ್ಚಿಗೆ ಪೆಟ್ಟು ಬಿದ್ದು ರಕ್ತಬರುತ್ತಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ 108 ಅಂಬ್ಯೂಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ದಿನಾಂಕ 28/11/2020 ರಂದು ಮುಂಜಾನೆ ಸುಮಾರು 3-00 ಗಂಟೆಗೆ  ಮೃತಪಟ್ಟಿರುವುದಾಗಿ ತಿಳಿಯಿತು. ದೇವಸ್ಥಾನದ ಬಳಿ 03-04 ದಿನಗಳಿಂದ ವಾಸವಾಗಿದ್ದ ಅಲೆಮಾರಿಗಳು ಗಲಾಟೆ ಮಾಡಿಕೊಂಡು ಆ ಪೈಕಿ ಯಾರೋ ಯಾವುದೋ ಕಾರಣಕ್ಕೆ ಕಲ್ಲಿನಿಂದ ಹೊಡೆದು ಕೊಲೆಮಾಡಿರುತ್ತಾರೆ. ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

6) ಕೆಂಚಾರ್ಲಹಳ್ಳಿ  ಪೊಲೀಸ್ ಠಾಣೆ ಮೊ.ಸಂ.130/2020 ಕಲಂ: 323,324,504,506,34 ಐ.ಪಿ.ಸಿ:-

     ದಿನಾಂಕ 28-11-2020 ರಂದು ಹೆಚ್.ಸಿ-200 ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಶ್ರೀನಿವಾಸರೆಡ್ಡಿ ಬಿನ್ ಬಚ್ಚಪ್ಪ, 46 ವರ್ಷ, ವಕ್ಕಲಿಗರು, ಕ್ಯಾಂಟರ್ ಚಾಲಕ, ವಾಸ ಗೋಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ಠಾಣೆಗೆ ಮದ್ಯಾಹ್ನ 01.30 ಗಂಟೆಗೆ ತಂದು ಹಾಜರುಪಸಿದ್ದರ ಸಾರಾಂಶವೇನೆಂದರೆ, ದಿನಾಂಕ 27-11-2020 ರಂದು ಸಂಜೆ ಸುಮಾರು 04.00 ಗಂಟೆ ಸಮಯದಲ್ಲಿ ತಮ್ಮ ಸ್ವಂತ ಗ್ರಾಮದಲ್ಲಿನ ಮನೆಯಲ್ಲಿ ಅಕ್ಕಿ ಮೂಟೆಯನ್ನು ಹಾಕಿಕೊಂಡು ಹೋಗಲು ತನ್ನ ಕ್ಯಾಂಟರ್ ವಾಹನವನ್ನು ತಂದು ಗ್ರಾಮದ ತಮ್ಮ ಮನೆಯ ಬಳಿ ತಿರುಗಿಸಿಕೊಳ್ಳಲು ರಿವರ್ಸ್ ಹಾಕುತ್ತಿದ್ದಾಗ ತಮ್ಮ ಗ್ರಾಮದ ಪಕ್ಕದ ಮನೆಯ ವಾಸಿ ಮುನಿಶಾಮಿರೆಡ್ಡಿ  ಮತ್ತು ಅವರ ತಂದೆಯಾದ ನಾರಾಯಣಸ್ವಾಮಿ ರವರು ತಮ್ಮ ಮನೆಗೆ ತಗುಲುತ್ತೆ ಇಲ್ಲಿ ವಾಹನ ರಿವರ್ಸ್ ಹಾಕಬಾರದೆಂತ ಜಗಳ ತೆಗೆದು ಕೆಟ್ಟ ಮಾತುಗಳಿಮದ ಬೈದು ಕೈಗಳಿಂದ ತನ್ನ ಮೈಮೇಲೆ ಹೊಡೆದು ಕೆಳಕ್ಕೆ ತಳ್ಳಿರುತ್ತಾರೆ. ಮುನಿಶಾಮಿರೆಡ್ಡಿ ದೊಣ್ಣೆಯಿಂದ ತನ್ನ ಬಲಕಾಲು ತೊಡೆಗೆ, ಎಡಕೈಗೆ ಹೊಡೆದು ಗಾಯಪಡಿಸಿ ಎಡಕೈ ಮೂಳೆ ಮುರಿದಿರುತ್ತಾರೆ. ಇಲ್ಲಿಂದ ವಾಪಸ್ಸು ಹೋಗದೇ ಇದ್ದರೆ ಇಲ್ಲಿಯೇ ನಿನ್ನನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಅಷ್ಠರಲ್ಲಿ ತಮ್ಮ ಗ್ರಾಮದ ಶ್ರೀನಿವಾಸರೆಡ್ಡಿ, ಮಂಜುಳಮ್ಮ ಮತ್ತಿತರು ಬಂದು ಜಗಳ ಬಿಡಿಸಿರುತ್ತಾರೆ. ತನಗೆ ಎಡಕೈ ಊತ ಜಾಸ್ತಿಯಾಗಿ ನೋವುಂಟಾಗಿದ್ದರಿಂದ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗೆ ತಮ್ಮ ಗ್ರಾಮದ ಶ್ರೀನಿವಾಸರೆಡ್ಡಿ ರವರೊಂದಿಗೆ ಬಂದು ದಾಖಲಾಗಿರುತ್ತೇನೆ.  ಈ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಹೇಳಿಕೆಯ ಸಾರಾಂಶವಾಗಿರುತ್ತೆ.

7) ಶಿಡ್ಲಘಟ್ಟ ಪುರ  ಪೊಲೀಸ್ ಠಾಣೆ ಮೊ.ಸಂ.129/2020 ಕಲಂ: 324,504 ಐ.ಪಿ.ಸಿ:-

     ದಿನಾಂಕ: 28/11/2020 ರಂದು ರಾತ್ರಿ 8-00 ಗಂಟೆಯಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಬಾಬಾಜಾನ್ ರವರ ಹೇಳಿಕೆಯನ್ನು ಪಡೆದಿದ್ದರ ಸಾರಾಂಶವೇನೆಂದರೆ, ದಿನಾಂಕ:28-11-2020 ರಂದು ಸಂಜೆ ಸುಮಾರು 4-00 ಗಂಟೆಯಲ್ಲಿ ತನ್ನ ತಮ್ಮನಾದ ಷಫೀವುಲ್ಲಾ ರವರನ್ನು ತನ್ನ ಬಾಬತ್ತು ಮಾರಾಟ ಮಾಡಿರುವ ಮನೆಯ ಹಣವನ್ನು ಕೇಳಿದ್ದಕ್ಕೆ ಲೋಪರ್ ನನ್ನ ಮಗನೇ, ನಿನಗೆ ನಾನು ಯಾವುದೇ ಹಣ ಬಾಕಿ ಇರುವುದಿಲ್ಲವೆಂದು ಬೈದು, ಗಲಾಟೆ ಮಾಡಿ ಅಲ್ಲಿಯೇ ಇದ್ದ ಸಿಮೆಂಟ್ ಇಟ್ಟಿಗೆಯಿಂದ ನನ್ನ ತಲೆಗೆ ಹೊಡೆದು ರಕ್ತ ಗಾಯಪಡಿಸಿ ನಂತರ ಮತ್ತೊಂದು ಕಲ್ಲಿನಿಂದ ಎಡ ಮುಂಗೈಗೆ ಹೊಡೆದು ಗಾಯಪಡಿಸಿದ್ದು ಆಗ ನಮ್ಮ ತಂದೆ ಮೆಹಬೂಬ್ ಸಾಬ್ ಮತ್ತಿತರರು ಗಲಾಟೆ ಬಿಡಿಸಿ ಗಾಯಗೊಂಡಿದ್ದ ತನ್ನನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಪಿ.ವಿ.ಆರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪುನ: ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ವಾಪಸ್ಸು ಬಂದು ತನ್ನ ಮೇಲೆ ಗಲಾಟೆ ಮಾಡಿದ ಷಫಿವುಲ್ಲಾ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಹೇಳಿಕೆ ಮೇರೆಗೆ ಮೊ.ಸಂ-129/2020 ಕಲಂ 324,504 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.