ದಿನಾಂಕ :29/07/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 177/2020 ಕಲಂ. 78(I),78(3) ಕೆ.ಪಿ ಆಕ್ಟ್:-

          ದಿ: 25-07-2020 ರಂದು ಮದ್ಯಾಹ್ನ 3:45 ಗಂಟೆಗೆ ಮಾನ್ಯ ಡಿವೈ.ಎಸ್.ಪಿ ಸಾಹೇಬರವರು ಆರೋಪಿ, ಮಹಜರ್ ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –  ಈ ದಿನ ದಿ: 25-07-2020 ರಂದು ನಾನು ಮತ್ತು ನನ್ನ ಕಛೇರಿಯ ಸಿಬ್ಬಂಧಿಯಾದ ಹೆಚ್.ಸಿ 205 ರಮೇಶ ಮತ್ತು ಪಿ.ಸಿ 286 ಗೌತಮ್ ರಾಜ್ ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆ.ಎ-40-ಜಿ-1555 ರಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಕಡೆ ಗಸ್ತಿನಲ್ಲಿ ಇದ್ದಾಗ, ಮದ್ಯಾಹ್ನ ಸುಮಾರು 2:00 ಗಂಟೆಯಲ್ಲಿ ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಉರ್ಧುಶಾಲೆ ಸಮೀಪದಲ್ಲಿ ಇದ್ದಾಗ, ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಅಲ್ಲಿಯೇ ಇದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು ನಾವು ಮತ್ತು ಪಂಚಾಯ್ತಿದಾರರು ಬಾಗೇಪಲ್ಲಿ ಪಟ್ಟಣದ ಉರ್ಧುಶಾಲೆ ಮುಂಭಾಗ, ಇರುವ ನಂಜಿರೆಡ್ಡಿ ಬಿನ್ ಲೇಟ್ ನಾರಾಯಣರೆಡ್ಡಿ, 35 ವರ್ಷ, ಒಕ್ಕಲಿಗರು, ಪಾನ್ ಬೀಡಾ ಅಂಗಡಿ ವಾಸ ಎಗವಬಂಡ್ಲಕೆರೆ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ ಅಂಗಡಿಯಲ್ಲಿ [ಪಾನ್ ಬೀಡಾ] ಸಾರ್ವಜನಿಕರಿಂದ ಹಣವನ್ನು ಪಡೆದು ನಿಷೇಧಿತ ಅಕ್ರಮ ಮಟ್ಕಾ ಜೂಜಾಟದ ಅಂಕಿಗಳನ್ನು ಬರೆಯುತ್ತಿದ್ದ, ಮೇಲ್ಕಂಡ ಆಸಾಮಿ ಮತ್ತು ಜೂಜಾಟಕ್ಕೆ ಬಳಸಿದ್ದ 1] ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ ಮಟ್ಕಾ ಅಂಕಿಗಳ ಚೀಟಿ 2] ಒಂದು ಬಾಲ್ ಪಾಯಿಂಟ್ ಪೆನ್ನು 3] ಮಟ್ಕಾ ಅಂಕಿಗಳನ್ನು ಬರೆದಿರುವುದರಿಂದ ಬಂದಂತಹ ಒಟ್ಟು 5250/- [ ಐದು ಸಾವಿರ ಇನ್ನೂರ ಐವತ್ತು ರೂಗಳು] ಗಳನ್ನು ಕೇಸಿನ ಮುಂದಿನ ಕ್ರಮಕ್ಕಾಗಿ ಅಮಾನತ್ತುಪಡಿಸಿಕೊಂಡಿರುತ್ತೆ.  ಸದರಿ ಮಾಲುಗಳನ್ನು ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ.  ಸದರಿ ಮಾಲುಗಳನ್ನು ಮತ್ತು ಆರೋಪಿತನನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ, ಎಂದು ನೀಡಿದ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ಉಲ್ಲೇಖ ಸಂಖ್ಯೆ: 447/2020 ರೀತ್ಯ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆರೋಪಿತನ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳುವ ಸಲುವಾಗಿ ಘನ ನ್ಯಾಯಾಲಯದ ಅನುಮತಿ ನೀಡಲು ಕೋರಿ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ.  ದಿ: 28-07-2020 ರಂದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 73/2020 ಕಲಂ. 408,409,420,468,471 ಐ.ಪಿ.ಸಿ:-

          ದಿನಾಂಕ: 28/07/2020 ರಂದು ಶಿಡ್ಲಘಟ್ಟ ತಾಲ್ಲೂಕು, ಈ.ತಿಮ್ಮಸಂದ್ರ ಬ್ಯಾಂಕ್ ನ  ಶಾಖಾಧಿಕಾರಿಯಾದ ಶ್ರೀ. ಬಿ. ಚಂದ್ರಶೇಖರ ಬಿನ್ ಬಿ.ರಾಮಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ತಾನು 02/01/2020 ರಿಂದ  ಈ.ತಿಮ್ಮಸಂದ್ರ ಕೆನರಾ ಬ್ಯಾಂಕಿನಲ್ಲಿ ಶಾಖಾಧಿಕಾರಿಯಾಗಿ ಕೆಲಸ ಮಾಡಿಕೊಂಡಿರುತ್ತೇನೆ. ಇದೇ ಬ್ಯಾಂಕಿನಲ್ಲಿ  ಕಾರ್ಯ ನಿರ್ವಹಿಸುತ್ತಿದ್ದ ಶಾಖಾ ವ್ಯವಸ್ಥಾಪಕರಾದ ಶ್ರೀ. ಕೆ. ಶ್ರೀನಿವಾಸರೆಡ್ಡಿ  ಬಿನ್  ವೆಂಕಟರೆಡ್ಡಿ, ಬಿ.ವಿ.ಆರ್ ಕಾಂಪ್ಲೆಕ್ಸ್, ದಿಬ್ಬೂರಹಳ್ಳಿ ಮುಖ್ಯ ರಸ್ತೆ ರವರು ಬ್ಯಾಂಕಿನಲ್ಲಿ ಓ.ಡಿ ಖಾತೆಗಳನ್ನು ಹೊಂದಿರುವ ವೆಂಕಿ ಮೊಬೈಲ್ಸ್ ರವರ ಖಾತೆ ನಂ 4441261000016 , ಮಧು ಎಲೆಕ್ಟ್ರಾನಿಕ್ಸ್ ಖಾತೆ ಸಂ. 4441261000003 ಮತ್ತು ಕೆ.ಎಂ. ವೆಂಕಟರೆಡ್ಡಿ ಓಡಿ.ಖಾತೆ ನಂ 4441261000020 ಈ ಮೂರೂ ಖಾತೆಗಳಲ್ಲಿನ ಗ್ರಾಹಕರ ಓ.ಡಿ .ಮಿತಿಯನ್ನು ಸದರೀ ಗ್ರಾಹಕರ ಗಮನಕ್ಕೆ ಬಾರದಂತೆ ಏರಿಕೆ ಮಾಡಿ ಸದರೀ ಗ್ರಾಹಕರ ಒಪ್ಪಿಗೆಯಿಲ್ಲದೇ ಅವರ ಓ.ಡಿ ಖಾತೆಗಳಿಂದ ದಿನಾಂಕ:17/10/2019 ರಿಂದ ದಿನಾಂಕ06/06/2020 ರವರೆಗೆ ಒಟ್ಟು 9,15,000/= ರೂಗಳನ್ನು ಅಕ್ರಮವಾಗಿ ಪಡೆದು ದುರುಪಯೋಗಪಡಿಸಿಕೊಂಡಿದ್ದು ಈ ಬಗ್ಗೆ ಗ್ರಾಹಕರು ಶಾಖೆಗೆ ದೂರನ್ನು ನೀಡಿದ್ದು ಸದರೀ ಖಾತೆಗಳನ್ನು ಪರಿಶೀಲನೆ ಮಾಡಿದಾಗ ಅಕ್ರಮಗಳು ಪತ್ತೆಯಾಗಿದ್ದು ಬ್ಯಾಂಕಿನ ಉನ್ನತಾಧಿಕಾರಿಗಳು ಕೆ. ಶ್ರೀನಿವಾಸರೆಡ್ಡಿರವರನ್ನು ದಿನಾಂಕ: 09/06/2020 ರಂದು ಸೇವೆಯಿಂದ ಅಮಾನತ್ತು ಮಾಡಿರುತ್ತಾರೆ. ಮೇಲ್ಕಂಡ ಖಾತೆದಾರರ ಖಾತೆಗಳಿಂದ ಅಕ್ರಮವಾಗಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಚೆಕ್ , ಡೆಬಿಟ್ ಸ್ಲಿಪ್ ಮತ್ತು ಮಿಸ್ಲೇನಿಯಸ್ ಟ್ರಾನ್ಸ್ ಫರ್ ಮೂಲಕ 9,15,000 /=  ರೂಪಾಯಿಗಳ ಹಣ ಅವ್ಯವಹಾರ ಮಾಡಿದ್ದು ಶಾಖಾ ವ್ಯವಸ್ಥಾಪಕರಾದ ಕೆ.ಶ್ರೀನಿವಾಸರೆಡ್ಡಿ ಬಿನ್ ವೆಂಕಟರೆಡ್ಡಿ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 74/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ 29/07/2020 ರಂದು ಬೆಳಿಗ್ಗೆ 9.00 ಗಂಟೆಗೆ ಪಿರ್ಯಧಿದಾರರಾದ ಶ್ರೀ ಬಿ.ಎಸ್ ನಾರಾಯಣಸ್ವಾಮಿ ಬಿನ್ ಸುಬ್ಬಣ್ಣ, 59 ವರ್ಷ, ವಕ್ಕಲಿಗರು, ಜಿರಾಯ್ತಿ, ಬಚ್ಚನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ತನ್ನ ತಂಗಿಯಾದ ಬೈರಮ್ಮರವರನ್ನು ಮುಮ್ಮನಹಳ್ಳಿ ಗ್ರಾಮದ ವಾಸಿ ಚೌಡರೆಡ್ಡಿರವರಿಗೆ ಕೊಟ್ಟು ಮದುವೆ ಮಾಡಿದ್ದು ಇವರಿಗೆ ಮೂರು ಜನ ಗಂಡು ಮಕ್ಕಳಿರುತ್ತಾರೆ. ಇವರ ಹಿರಿಯ ಮಗನಾದ ಮಹೇಶ. ಎಂ.ಸಿ ಬಿನ್ ಚೌಡರೆಡ್ಡಿ, 32 ವರ್ಷ ರವರು ಜಿರಾಯ್ತಿ ಮಾಡಿಕೊಂಡಿದ್ದು ಆತನ ಕುಟುಂಬದೊಂದಿಗೆ ಮುಮ್ಮನಹಳ್ಳಿ ಗ್ರಾಮದಲ್ಲಿಯೇ ವಾಸವಾಗಿರುತ್ತಾನೆ. ದಿನಾಂಕ: 28/07/2020 ರಂದು ತಾನು ದಿಬ್ಬೂರಹಳ್ಳಿ ವೃತ್ತದಲ್ಲಿದ್ದಾಗ ಮಹೇಶರವರಿಗೆ ದಿಬ್ಬೂರಹಳ್ಳಿ – ಕುದಪಕುಂಟೆ ಗ್ರಾಮಗಳ ಮಧ್ಯೆ ಇರುವ ಮೋರಿಯ ಬಳಿ ಅಫಘಾತವಾಗಿರುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದು ಕೂಡಲೇ ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ಕಾರು ಮತ್ತು ದ್ವಿಚಕ್ರವಾಹನಕ್ಕೆ ಅಫಘಾತವಾಗಿದ್ದು ಮಹೇಶನ ಬಲಕಾಲಿಗೆ ತೀವ್ರ ತರವಾದ ರಕ್ತಗಾಯ  ಹಾಗು ಎಡಕಾಲಿನ ಬೆರಳಿಗೆ ರಕ್ತಗಾಯಗಳಾಗಿ ರಸ್ತೆಯಲ್ಲಿ ಬಿದ್ದು ಹೋಗಿದ್ದನು. ತಾನು  ಈ ಬಗ್ಗೆ ಮಹೇಶರವರನ್ನು ವಿಚಾರ ಮಾಡಲಾಗಿ ತಾನು ಕೆಲಸದ ನಿಮಿತ್ತ ದಿಬ್ಬೂರಹಳ್ಳಿಗೆ ಬರಲು ತನ್ನ ಬಾಬತ್ತು KA-40-Y9360 ಸೂಪರ್ ಸ್ಪ್ಲೆಂಡರ್ ದ್ವಿಚಕ್ರ ವಾಹನದಲ್ಲಿ ನಮ್ಮ ಗ್ರಾಮದಿಂದ ಸುಮಾರು 9.40 ಗಂಟೆ ಸಮಯದಲ್ಲಿ ಕುದಪಕುಂಟೆ ಬಿಟ್ಟು ಬರುತ್ತಿದ್ದಾಗ ದಿಬ್ಬೂರಹಳ್ಳಿ ಕಡೆಯಿಂದ ಬಂದ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಗಾಯಪಡಿಸಿರುತ್ತಾನೆಂತ ತಿಳಿಸಿರುತ್ತಾನೆ. ಕಾರು ಮತ್ತು ದ್ವಿಚಕ್ರ ವಾಹನಗಳು ರಸ್ತೆಯ ಪಶ್ಚಿಮ ದಿಕ್ಕಿಗೆ ರಸ್ತೆಯ ಪಕ್ಕದ ಗಿಡಗಳಲ್ಲಿ ಬಿದ್ದಿದ್ದು ಎರಡೂ ಜಖಂಗೊಂಡಿರುತ್ತೆ. ಕಾರಿನ ನಂಬರ್ ನೋಡಲಾಗಿ KA-05-MZ-6547 ಆಗಿರುತ್ತೆ ಅಫಘಾತ ಪಡಿಸಿದ ಚಾಲಕನ ಹೆಸರು ವಿಳಾಸ ಗೊತ್ತಿರುವುದಿಲ್ಲ. ಗಾಯಗೊಂಡಿದ್ದ ಮಹೇಶರವರನ್ನು ತಾನು ಮತ್ತು ಚೌಡರೆಡ್ಡಿಹಳ್ಳಿ ಗ್ರಾಮದ ವಾಸಿ ಮುನಿರಾಜು ಬಿನ್ ಚಿಕ್ಕಸುಬ್ಬಾರೆಡ್ಡಿರವರು ಉಪಚರಿಸಿದ್ದು ನಂತರ ತಾನು ಮಹೇಶರವರನ್ನು 108 ಅಂಬ್ಯುಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡಿಸಿದ್ದು ನಂತರ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲುಪಡಿಸಿರುತ್ತೇವೆ. ಮಹೇಶರವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಬಂದು ಠಾಣೆಗೆ ದೂರನ್ನು ನೀಡುತ್ತಿದ್ದು ಮಹೇಶರವರಿಗೆ ಅಫಘಾತಪಡಿಸಿ ಗಾಯಗೊಳಿಸಿದ KA-05-MZ-6547 ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 101/2020 ಕಲಂ. 379 ಐ.ಪಿ.ಸಿ:-

          ದಿನಾಂಕ:24/07/2020 ರಂದು ಮದ್ಯಾಹ್ನ 13.30 ಗಂಟೆಯಲ್ಲಿ ಪಿರ್ಯಾದಿದಾರರಾದ ರಾಜು ಜಿ.ಎಸ್ ಬಿನ್ ಶ್ರೀನಿವಾಸ್ ಮೂರ್ತಿ .ಜಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ,ಅರ್ಜಿದಾರರು ಅರ್ಜಿದಾರರ ಬಾಬತ್ತು, APACHE RTR.160  KA 06 EU 6817 CHASIS NO MD634KE46F2H91622 ENGINE.NO: 0E4HF2826026, COLOUR-P-WHITE, ವಾಹನದ ಅಂದಾಜು ಬೆಲೆ: 15.000/- ರೂಗಳು ಸದರಿ ವಾಹನದೊಂದಿಗೆ ರಾತ್ರಿ 1:10 ಗಂಟೆಯ ಸಮಯದಲ್ಲಿ ನಮ್ಮ ಮನೆಯ ಮುಂದಿನ ಕಾಂಪೌಂಡ್ ಮುಂಭಾಗದಲ್ಲಿ ನಿಲ್ಲಿಸಿರುತ್ತೇನೆ ನಂತರ ಬೆಳಗಿನಜಾವ ಸುಮಾರು 04:30 ಗಂಟೆ ಸಮಯದಲ್ಲಿ ನಾನು ಹೊರಗೆ ಬಂದು ನೋಡಿದಾಗ ನನ್ನ ವಾಹನವು ಕಂಡು ಬರಲಿಲ್ಲ, ನಂತರ ನಾನು ಮತ್ತು ನಮ್ಮ ತಂದೆಯೊಂದಿಗೆ ಗೌರಿಬಿದನೂರು ನಗರದಲ್ಲಿ ಇದುವರೆವಿಗೂ ಪತ್ತೆ ಮಾಡಿ ನೋಡಲಾಗಿ ಎಲ್ಲಿಯೂ ಸಹ ವಾಹನವು ಪತ್ತೆಯಾಗಿರುವುದಿಲ್ಲ. ಆದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು ಕಳವಾಗಿರುವ ನನ್ನ ದ್ವಿಚಕ್ರ ವಾಹನ ಸಂಖ್ಯೆ KA-06 EU 6817 APACHE RTR 160 ರ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರನ್ನು ಪಡೆದು  ಠಾಣಾ ಮೊ.ಸಂ:101/2020 ಕಲಂ 379 ಐಪಿಸಿ ರೀತ್ಯಾ ಪ್ರಕರಣವನ್ನು  ದಾಖಲಿಸಿರುತ್ತೇನೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 102/2020 ಕಲಂ. 78(III) ಕೆ.ಪಿ ಆಕ್ಟ್:-

          ದಿನಾಂಕ: 28/07/2020 ರಂದು ನ್ಯಾಯಾಲಯದ ಪಿ.ಸಿ-318 ದೇವರಾಜ್ ರವರು ಹಾಜರುಪಡಿಸಿದ ನ್ಯಾಯಾಲಯದ ಅನುಮತಿಯ ಪತ್ರದ ಸಾರಾಂಶವೇನೆಂದರೆ, ದಿನಾಂಕ 22/07/2020 ರಂದು ಮದ್ಯಾಹ್ನ 1:15 ಗಂಟೆಯಲ್ಲಿ ಲಕ್ಷ್ಮೀನಾರಾಯಣ ಪಿ.ಸಿ-17 ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 22-07-2020 ರಂದು  ಮದ್ಯಾಹ್ನ 12:00 ಗಂಟೆಯಲ್ಲಿ ನಗರದ ಎಂ.ಜಿ ವೃತ್ತದಲ್ಲಿ ಇರುವಾಗ ತನಗೆ ನಗರದ ಕೃಷ್ಣಭವನ್ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ತಾನು ಪಿ.ಎಸ್.ಐ ರವರಿಗೆ ಮಾಹಿತಿ ನೀಡಿ ಅನುಮತಿಯನ್ನು ಪಡೆದು ಎಂ.ಜಿ ವೃತ್ತದಲ್ಲಿದ್ದ ಪಿ.ಸಿ 17 ದೇವರಾಜ ರವರ ಜೊತೆ ಪಂಚಾಯ್ತಿದಾರರನ್ನು ಕರೆದುಕೊಂಡು ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿ ಕೃಷ್ಣ ಭವನ್ ರಸ್ತೆಯ ದುರ್ಗಾಫೋಟೊ ವರ್ಕ್ಸ್ ಮುಂಭಾಗ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಕೂಗಾಡುತ್ತಿರುವುದು ಕಂಡುಬಂದಿತು. ತಾನು ಮತ್ತು  ಪಿ.ಸಿ 17 ರವರು ಪಂಚರ ಸಮ್ಮುಖದಲ್ಲಿ ಸುತ್ತುವರಿದು ಹಿಡಿದುಕೊಂಡು, ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ವಿಜಿ ಕುಮಾರ್ ಬಿನ್ ಲೇಟ್ ದುರ್ಗಪ್ಪ, 42 ವರ್ಷ, ಕೂಲಿ ಕೆಲಸ, ಪ್ರಶಾಂತ್ ನಗರ ಗೌರಿಬಿದನೂರು ನಗರ ಫೋ: 9741929288 ಎಂದು ತಿಳಿಸಿದ್ದು, ಅವನಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವನ ಬಳಿ ಯಾವುದೆ ಪರವಾನಗಿ ಇಲ್ಲವೆಂದು ತಿಳಿಸಿದನು ಆ ಸಮಯದಲ್ಲಿ ಆ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ  ಒಂದು ಮಟ್ಕಾಚೀಟಿ ಬರೆಯುವ ಪುಸ್ತಕ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 1200/- ರೂಪಾಯಿಗಳು  ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದನು ನಂತರ ಆರೋಪಿಯನ್ನು ವಶಕ್ಕೆ ಪಡೆದು ಪಂಚನಾಮೆ ಜರುಗಿಸಿ ಆರೋಪಿ ಹಾಗೂ ಮಾಲಿನೊಂದಿಗೆ ಮದ್ಯಾಹ್ನ 1:00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಕ್ರಮ ಕೈಗೊಳ್ಳುವುದಕ್ಕಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ದಾಖಲಿಸಿರುತ್ತೇನೆ.ನಂತರ ಈ ದಿನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೇನೆ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 50/2020 ಕಲಂ. 279,338 ಐ.ಪಿ.ಸಿ:-

          ದಿನಾಂಕ:27/07/2020 ರಂದು ಮದ್ಯಾಹ್ನ 14:00 ಗಂಟೆಗೆ ಪಿರ್ಯಾದಿದರರಾದ ಶ್ರೀಮತಿ ಚಂದ್ರಕಲಾ ಕೋಂ ಲೇಟ್ ನಾರಾಯಣಪ್ಪ, ಪ.ಜಾತಿ, ಜಂಗಮಾರನಹಳ್ಳಿ ಗ್ರಾಮ, ಕೇತೆನಹಳ್ಳಿ ಪೋಸ್ಟ್, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಗಂಡ ನಾರಾಯಣಪ್ಪ ರವರು ಈಗ್ಗೆ 14 ವರ್ಷಗಳ ಹಿಂದೆ ತಿರಿಕೊಂಡಿರುತ್ತಾರೆ. ತಾನು ಜೀವನಕ್ಕಾಗಿ ಹೋಟೆಲ್ನಲ್ಲಿ ಕ್ಲಿನ್ ಮಾಡುವ ಕೆಲಸ ಮಾಡಿಕೊಂಡಿರುತ್ತೇನೆ. ತನಗೆ ಇಬ್ಬರು ಗಂಡು ಮಕ್ಕಳಿದ್ದು ಮೊದಲನೇ ಮಗ ಪವನ್, 20 ವರ್ಷ, 2 ನೇ ಮಗ ರವಿಂದ್ರ, 17 ವರ್ಷ ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾರೆ. ದಿನಾಂಕ:24/07/2020 ರಂದು ಬೆಳಿಗ್ಗೆ 09:00 ಗಂಟೆಗೆ ಪವನ್ ಕುಮಾರ್ ರವರನ್ನು ಅವನ ಸ್ನೇಹಿತರಾದ ಗುರುಕಿರಣ್, ಸತೀಶ್ ಮತ್ತು ರಾಜೇಶ್ ಎಂಬುವರು ತಮ್ಮ ಮನೆಯ ಬಳಿಗೆ ಬಂದು 2 ದ್ವಿಚಕ್ರ ವಾಹನಗಳಲ್ಲಿ ಕರೆದುಕೊಂಡು ಹೋಗಿರುತ್ತಾರೆ. ಹೋಗುವ ಸಮಯದಲ್ಲಿ ಎಲ್ಲಿಗೆ ಹೋಗುತ್ತಿರುವಿರಿ ಎಂದು ತಾನು ಕೇಳಿದಕ್ಕೆ ಶಾರ್ಟ್ ಮೂವಿಯ ಚಿತ್ರಿಕರಣಕ್ಕೆಂದು, ಚಿತ್ರೀಕರಣ ಮುಗಿಸಿ ಮದ್ಯಾಹ್ನ ಮನೆಗೆ ವಾಪಸ್ಸು ಬರುತ್ತೇವೆಂದು ಹೇಳಿರುತ್ತಾರೆ. ಅದೇ ದಿನ ಸಂಜೆ 5:00 ಗಂಟೆ ಸಮಯದಲ್ಲಿ ಗುರುಕಿರಣ್ ಎಂಬುವನು ತನ್ನ ಮಗನ ಪೋನ್ನಿಂದ ಕರೆ ಮಾಡಿ ನಿಮ್ಮ ಮಗನಿಗೆ ಅಪಘಾತವಾಗಿದೆ ಕೂಡಲೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಬನ್ನಿ ಎಂದಾಗ ತನಗೆ ಗಾಭರಿಯಾಗಿ ಆಸ್ಪತ್ರೆಗೆ ಬಂದು ನೋಡಿದಾಗ ತೀವ್ರತರನಾದ ತಲೆಗೆ ಪೆಟ್ಟಾಗಿ ರಕ್ತಸಕ್ತವಾಗಿದ್ದನು ಹಾಗೂ ಮಾತನಾಡದ ಸ್ಥಿತಿಯಲ್ಲಿ ಇದ್ದನು. ಚಿಕಿತ್ಸೆ ನೀಡಿದ ವೈದ್ಯರು ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದರ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಯಲಹಂಕದ ಖಾಸಗಿ ಆಸ್ಪತ್ರೆಯಾದ ಅಪೂರ್ವ ಆಸ್ಪತ್ರೆಗೆ ದಾಖಲು ಮಾಡಿದ್ದು ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿದ್ದು ಇಂದಿಗೆ 2 ಬಾರಿ ಆಪರೇಷನ್ ವೈದ್ಯರು ಮಾಡಿರುತ್ತಾರೆ. ತಮ್ಮ ಜೊತೆಯಲ್ಲಿಯೇ ಇದ್ದ ತನ್ನ ಮಗನ ಸ್ನೇಹಿತರಾದ ಗುರುಕಿರಣ್ ಮತ್ತು ರಾಜೇಶ್ ರವರನ್ನು ಘಟನೆ ಹೇಗಾಯಿತು ಎಂದು ಪ್ರಶ್ನಿಸಿದಾಗ ನಂದಿ ಬೆಟ್ಟದ ಬಳಿ ಸಾರ್ಟ ಮೂವಿಯ ಚಿತ್ರಕರಣ ಮುಗಿಸಿಕೊಂಡು ಕುಡುವತಿ ಗ್ರಾಮಕ್ಕೆ ತೆರಳುವ ಸಲುವಾಗಿ ಕುಡುವತಿ ಗ್ರಾಮದ ಸ್ನೇಹಿತನಾದ ಪ್ರದೀಪ್ನನ್ನು ನೋಡಲು ಸತೀಶ್ ಮತ್ತು ಪವನ್ ರವರು KA-40 EA-0770 YAMAHA FZ. ದ್ವಿಚಕ್ರ ವಾಹನದಲ್ಲಿ ಮತ್ತೊಂದು ದ್ವಿಚಕ್ರವಾದ KA-40 U-1087 ಎಂಬ ನೊಂದಣಿ ಸಂಖ್ಯೆಯ ಡಿಸ್ಕವರಿ-125 ಎಂಬ ದ್ವಿಚಕ್ರ ವಾಹನದಲ್ಲಿ ಗುರುಕಿರಣ್ ಮತ್ತು ರಾಜೇಶ್ ರವರು ತೆರಳುತ್ತಿದ್ದು ನಾವು ಸ್ವಲ್ಪ ಬೇಗ ಡಿಸ್ಕವರಿ ವಾಹನವನ್ನು ಚಾಲಾಯಿಸಿಕೊಂಡು ಬಂದು ಕುಡುವತಿ ಗೇಟ್(ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಮುಖ್ಯ ರಸ್ತೆ) ಬಳಿ ರಸ್ತೆ ಬದಿಯಲ್ಲಿ KA-40 U-1087 ದ್ವಿಚಕ್ರ ವಾಹನದಲ್ಲಿ ನಿಲ್ಲಿಸಿಕೊಂಡು ಮತ್ತೊಂದು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸತೀಶ್ ಮತ್ತು ಹಿಂಭದಿಯಲ್ಲಿ ಕುಳಿತಿದ್ದ ಪವನ್ ರವರಿಗಾಗಿ ಕಾಯುತ್ತಿದ್ದಾಗ ಅತೀ ವೇಗವಾಗಿ ಈಚ ವಾಹನವನ್ನು ಚಾಲಾಯಿಸುತ್ತಿದ್ದ ಸತೀಶ್ ನಮ್ಮ ದ್ವಿಚಕ್ರ ವಾಹನಕ್ಕೆ ಮದ್ಯಾಹ್ನ 3:10 ಗಂಟೆಗೆ ಡಿಕ್ಕಿಯನ್ನು ಹೊಡೆದು ಗಾಯಗೊಂಡಿರುತ್ತಾರೆಂದು ತಿಳಿಸಿರುತ್ತಾರೆ. ಗಾಯಗೊಂಡಿದ್ದ ಪವನ್ ರವರಿಗೆ ಪ್ರಥಮ ಚಿಕಿತ್ಸೆಯನ್ನ ನೀಡಿ ಆಸ್ಪತ್ರೆಗೆ ಆ ಬೈಕಿನಲ್ಲಿಯೇ ಕರೆದುಕೊಂಡು ಬಂದಿದ್ದಾಗಿ ತಿಳಿಸಿರುತ್ತಾರೆ. ಆದ್ದರಿಂದ ತನ್ನ ಮಗನಿಗೆ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿ ಇಂದಿಗೆ 2 ಬಾರಿ ಆಪರೇಷನ್ ಮಾಡಿದ ಕಾರಣ ತಡವಾಗಿ ಈ ದೂರನ್ನು ನೀಡಿದ್ದು ದ್ವಿಚಕ್ರ ವಾಹನದ ಚಾಲಕನಾದ ಸತೀಶ್ ಮತ್ತು KA-40 EA-0770 YAMAHA FZ ದ್ವಿಚಕ್ರ ವಾಹನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 51/2020 ಕಲಂ. 279,337,304(A) ಐ.ಪಿ.ಸಿ:-

          ದಿನಾಂಕ:28/07/2020 ರಂದು ಸಂಜೆ 16:30 ಗಂಟೆಗೆ ಪಿರ್ಯಾದಿದರರಾದ ಬಿ.ಎಸ್ ಶಿವರಾಜ್ ಬಿನ್ ಸುಬ್ಬನಾರಾಯಣಪ್ಪ, 44 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ: ಬಂಡಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:28/07/2020 ರಂದು ತಾನು ಮತ್ತು ತನ್ನ 2 ನೇ ಮಗಳಾದ ವರ್ಷ, 18 ವರ್ಷ, ಪ್ಯಾರಾಮೆಡಿಕಲ್ ವಿದ್ಯಾರ್ಥಿ, ಇಬ್ಬರು ತನ್ನ ಬಾಬತ್ತು KA-40 EC-5985 ACTIVE ಸ್ಕೂಟರಿನಲ್ಲಿ ಹೊಲದ ಕಡೆಗೆ ಹೋಗಿ ಬದನೆ ಗಿಡಕ್ಕೆ ಕೀಟನಾಶಕವನ್ನು ಸಿಂಪಡಣೆ ಮಾಡಿ ಅದೇ ದ್ವಿಚಕ್ರ ವಾಹನದಲ್ಲಿ ಊಟಕ್ಕೆ ಮನೆಗೆ ತಿರ್ನಹಳ್ಳಿ-ಮುದ್ದೇನಹಳ್ಳಿ ರಸ್ತೆಯಲ್ಲಿ ಬರುತ್ತಿದ್ದಾಗ ಮದ್ಯಾಹ್ನ 2:30 ಗಂಟೆ ಸಮಯದಲ್ಲಿ ಬಂಡಹಳ್ಳಿ ಕ್ರಾಸ್ ಬಳಿ ತಿರ್ನಹಳ್ಳಿ ಕಡೆಯಿಂದ KA-43-9906 ಖಾಲಿ ಟಿಪ್ಪರ್ ವಾಹನವನ್ನು ಅದರ ಚಾಲಕ ಹಿಂಬದಿಯಿಂದ  ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಓಡಿಸಿಕೊಂಡು ಬಂದು ತಮ್ಮ ಸ್ಕೂಟರಿಗೆ ಡಿಕ್ಕಿ ಹೊಡೆಸಿ ಅಪಘಾತಮಾಡಿದ ಪರಿಣಾಮ ತಾನು ಚರಂಡಿಗೆ ಜಿಗಿದಿದ್ದು ತನ್ನ ಮಗಳಾದ ವರ್ಷ ಬಿ.ಎಸ್ ಡಾಂಬರು ರಸ್ತೆಯ ಮೇಲೆ ಬಿದ್ದು ಎಡ ಭಾಗದ ಶರೀರ, ಬೆನ್ನು, ತಲೆಗೆ ರಕ್ತಗಾಯಗಳಾಗಿ, ಕಾಲುಗಳಿಗೆ ತರಚಿದ ಗಾಯಗಳಾಗಿ ಸೊಂಟ ಮತ್ತು ಹೊಟ್ಟೆಯ ಬಳಿ ತೀವ್ರ ಗಾಯಗಳಾಗಿದ್ದಾಗ ಅಲ್ಲಿಯೇ ಕುರಿಗಳನ್ನು ಮೇಯಿಸುತ್ತಿದ್ದ ಗೋಪಮ್ಮ, ವೆಂಕಟರವಣಪ್ಪ ರವರುಗಳು ಅಪಘಾತವನ್ನು ನೋಡಿ ಕಿರುಚಿಕೊಂಡಾಗ ತಮ್ಮೂರಿನ ಬಲಜಿಗರ ಮುನಿಯಪ್ಪ, ತನ್ನ ಅಣ್ಣ ಕೃಷ್ಣಾರೆಡ್ಡಿ ಓಡಿ ಬರುವಷ್ಟರಲ್ಲಿ ಟಿಪ್ಪರ್ ಚಾಲಕನು ರಸ್ತೆ ಮದ್ಯೆ ನಿಲ್ಲಿಸಿ ಟ್ಟಿಪ್ಪರ್ ಲಾರಿಯಿಂದ ದುಮುಕಿಕೊಂಡು ಹೊಲಗಳಲ್ಲಿ ಓಡಿ ಪರಾರಿಯಾದನು. ತನಗೆ ಮೂಗೇಟುಗಳಾಗಿರುತ್ತೆ. ತಾವೆಲ್ಲರು ತನ್ನ ಮಗಳನ್ನು ಉಪಚರಿಸಿದ್ದು ಜ್ಞಾನ ತಪ್ಪಿದ್ದು ತಕ್ಷಣ ಯಾವುದೋ ಆಟೋದಲ್ಲಿ ತಾನು ಮತ್ತು ತನ್ನ ಪತ್ನಿ ಶೋಭಾ ರವರು ಚಿಕ್ಕಬಳ್ಳಾಪುರದ ಅನನ್ಯ ಆಸ್ಪತ್ರೆಗೆ ಸಾಗಿಸಿ ತಂದಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದರು. ಈ ಅಪಘಾತಕ್ಕೆ KA-43-9906 ಟಿಪ್ಪರ್ ಚಾಲಕನ ಅತೀ ವೇಗ  ಮತ್ತು ಅಜಾಗರೂಕತೆಯ ಚಾಲನೆಯು ಕಾರಣವಾಗಿದ್ದು ಆತನ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಲಿಲ್ಲ. ತನ್ನ ಮಗಳ ಸಾವಿಗೆ ಮೇಲ್ಕಂಡ ಟಿಪ್ಪರ್ ಚಾಲಕನೇ ಕಾರಣವಾಗಿದ್ದು ಮಗಳ ಹೆಣವು ಚಿಕ್ಕಬಳ್ಳಾಪುರದ ಅನನ್ಯ ಖಾಸಗಿ ಆಸ್ಪತ್ರೆಯಲ್ಲಿ ಇರುತ್ತದೆ. ತಾನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತೇನೆ. ಆದ್ದರಿಂದ ತಾವುಗಳು ತನ್ನ ಮಗಳ ಸಾವಿಗೆ ಕಾರಣನಾದ KA-43-9906 ಟಿಪ್ಪರ್ ಚಾಲಕನನ್ನು ಪತ್ತೆ ಮಾಡಿ ಆತನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 196/2020 ಕಲಂ. 143,147,148,323,324,506,149 ಐ.ಪಿ.ಸಿ:-

          ದಿನಾಂಕ:28.07.2020 ರಂದು ಸಂಜೆ 6.30 ಗಂಟೆಗೆ ಪಿರ್ಯಾದಿದಾರರಾದ ವೆಂಕಟೇಶಬಾಬು ಸಿ ಬಿನ್ ಚಿಕ್ಕಕಾಮರೆಡ್ಡಿ ಅಪ್ಪೇಗೌಡನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಮ್ಮ ಬಾಬತ್ತು ಶಿಡ್ಲಘಟ್ಟ ತಾಲ್ಲೂಕು ಕಸಬಾ ಹೋಬಳಿ ಚೌಡಸಂದ್ರ ಗ್ರಾಮದ ಸವರ್ೆ ನಂ ನಂಬರ್ 236 ನೇ ಮಾನ್ಯ ತಹಸೀಲ್ದಾರ್ ರವರ ಆದೇಶನ್ವಯ ಮಾನ್ಯ ಭೂಮಾಪಕರು ದಿನಾಂಕ:28.07.2020 ರಂದು ಸ್ಥಳಕ್ಕೆ ಅಳತೆಗೆ ಬಂದಿದ್ದರು ಅಳತೆ ಕಾರ್ಯ ಪೂರ್ಣಗೊಂಡ ನಂತರ ಅಂದರೆ ಸಮಯ ಸಮಾರು 12.45 ಗಂಟೆ ಸಮಯದಲ್ಲಿ ಅಪ್ಪೇಗೌಡನಹಳ್ಳಿ ಗ್ರಾಮದ ವಾಸಿಯಾದ ದೊಡ್ಡಕಾಮರೆಡ್ಡಿ ಬಿನ್ ಲೇಟ್ ಪಿಳ್ಳಪ್ಪ ಇವರ ಪತ್ನಿಯರಾದ ರತ್ನಮ್ಮ, ನಾಗರತ್ನಮ್ಮ ಮತ್ತು ಇವರ ಮಕ್ಕಳಾದ 1ನೇ ಮುನಿರಾಜು@ರಾಜಣ್ಣ, 2ನೇ ಪ್ರಭಾಕರ್, 3ನೇ ಚೇತನ್ ಕುಮಾರ್, ಇವರುಗಳು ಏಕಾಏಕಿ ಗುಂಪು ಕಟ್ಟಿಕೊಂಡು ಬಂದು ನನ್ನ ಮೇಲೆ ಗಲಾಟೆಗೆ ಬಂದು ಗಲಾಟೆ ಮಾಡಿ ಇವರುಗಳು ನನ್ನನ್ನು ಚೆನ್ನಾಗಿದ ಹೊಡೆದು ಗಾಯಪಡಿಸಿರುತ್ತಾರೆ. ಹಗೂ ಕಾಲುಗಳಿಂದ ಹೊಡೆದಿರುತ್ತಾರೆ. ಇವರುಗಳು ನನ್ನನ್ನು ಗುಂಪು ಕಟ್ಟಿಕೊಂಡು ಬಂದು ಹೊಡೆದಾಗ ನಾನು ನೆಲಕ್ಕೆ ಬಿದ್ದಿರುತ್ತೇನೆ ಹಾಗೂ ಪ್ರಭಾಕರ್ ರವರು ಕಲ್ಲು ತೆಗೆದುಕೊಂಡು ಹೊಡೆಯಲು ಬಂದಿರುತ್ತಾನೆ. ಹಾಗೂ ಸದರಿ ಕಲ್ಲಿಗೆ ನನ್ನ ಕೈಯನ್ನು ಅಡ್ಡ ಇಡಲಾಗಿ ನನ್ನ ಎಡ ಕೈ ಕೈನ ಬೆರಳುಗಳಿಗೆ ಗಾಯವಾಗಿ ರಕ್ತ ಬಂದಿರುತ್ತದೆ ಈ ಕೂಡಲೇ ಸ್ಥಳದಲ್ಲಿದ್ದ ನನ್ನ ತಂದೆಯವರು ಜಗಳನ್ನು ಬಿಡಿಸಲು ಬಂದರೆ ನನ್ನ ತಂದೆಯವರ ಮೇಲೆಯು ಸಹ ಹಲ್ಲೆ ಮಾಡಿರುತ್ತಾರೆ ಹಾಗೂ ಸದರಿ ನಿಮ್ಮನ್ನು ಸಾಯಿಸುತ್ತೇವೆ ಎಂದು ಪ್ರಾಣ ಬೆದರಿಕೆಯನ್ನು ಸಹಾ ಹಾಕಿರುತ್ತಾರೆ ಆದ ಕಾರಣ ಮುಂದಿನ ಕ್ರಮ ಕೈಗೊಳ್ಳಬೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 197/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ 28/07/2020 ರಂದು ರಾತ್ರಿ 8-30 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ದೊಡ್ಡ ಕಾಮ ರೆಡ್ಡಿ ಬಿನ್ ಪಿಳ್ಳಪ್ಪ, 62 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಅಪ್ಪೇಗೌಡನಹಳ್ಳಿ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ಇದೇ ಶಿಡ್ಲಘಟ್ಟ ತಾಲ್ಲೂಕು ಚೌಡಸಂದ್ರ ಗ್ರಾಮದ ಸರ್ವೇ ನಂಬರ್ 267 ರಲ್ಲಿ ಒಂದು ಎಕರೆ 33 ಗುಂಟೆ ಜಮೀನನ್ನು 1981-82 ರಲ್ಲಿ ಜಲ್ಲಪ್ಪ ಎಂಬುವರಿಂದ ಖರೀದಿ ಮಾಡಿದ್ದು, ಈ ಜಮೀನು ತನ್ನ ಮತ್ತು ತನ್ನ ತಮ್ಮನಾದ ಚಿಕ್ಕಕಾಮರೆಡ್ಡಿ ರವರ ಹೆಸರಿನಲ್ಲಿ ಜಂಟಿಯಾಗಿದ್ದು, ಅಂದಿನಿಂದಲೂ ಈ ಜಮೀನಿನಲ್ಲಿ ತಾನೇ ಸ್ವಾಧೀನ ಅನುಭೋಗದಲ್ಲಿದ್ದು ದ್ರಾಕ್ಷಿ ಬೆಳೆ ಬೆಳೆದುಕೊಂಡಿದ್ದು, ಚೌಡಸಂದ್ರ ಗ್ರಾಮದ ಸರ್ವೇ ನಂಬರ್ 268 ರಲ್ಲಿ ಒಟ್ಟು ಎರಡುವರೆ ಎಕರೆ ಜಮೀನಿನ ಬಗ್ಗೆ ತನ್ನ ತಮ್ಮ ಚಿಕ್ಕ ಕಾಮರೆಡ್ಡಿ ಹಾಗು ತನ್ನ ಗ್ರಾಮದ ಮುನಿಅಜ್ಜಪ್ಪ ರವರಿಗೂ ತಕರಾರು ಇದ್ದು ಮುನಿಅಜ್ಜಪ್ಪ ರವರು ಘನ ಎ.ಸಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿರುತ್ತಾರೆ. ಹೀಗಿರುವಾಗ ತನ್ನ ತಮ್ಮನಾದ ಚಿಕ್ಕಕಾಮರೆಡ್ಡಿ ರವರು ತನ್ನ ಅನುಭೋಗದ ಸರ್ವೇ ನಂಬರ್ 267 ರ ಜಮೀನು ಹಾಗು ಸರ್ವೇ ನಂಬರ್ 268 ರಲ್ಲಿನ ಜಮೀನುಗಳ ಬಗ್ಗೆ ತನ್ನ ಹೆಂಡತಿಯಾದ 1 ನೇ ಲೀಲಾವತಿ, 2 ನೇ ಸಂದ್ಯಾವತಿ ರವರ ಹೆಸರಿಗೆ ಸಾಗುವಳಿ ಚೀಟಿಯನ್ನು ಮಾಡಿಸಿಕೊಂಡು ಖಾತೆಗಾಗಿ ಅರ್ಜಿಯನ್ನು ಸಲ್ಲಿಸಿಕೊಂಡಿದ್ದು, ಈ ವಿವಾರ ತನಗೆ ತಿಳಿದು ದಿನಾಂಕ 17/12/2018 ರಂದು ಮತ್ತು ದಿನಾಂಕ 07/11/2019 ರಂದು ಮಾನ್ಯ ತಹಶೀಲ್ದಾರ್ ರವರಿಗೆ ತಕರಾರು ಅರ್ಜಿಯನ್ನು ಸಲ್ಲಿಸಿಕೊಂಡಿದ್ದು, ಈ ದಿನ ದಿನಾಂಕ 28/07/2020 ರಂದು ಮಾನ್ಯ ತಹಶೀಲ್ದಾರ್ ರವರು ಸ್ಥಳ ಪರಿಶೀಲನೆ ಮಾಡಿ ದಾಖಲಾತಿಗಳಂತೆ ಸರ್ವೇ ಯನ್ನು ಮಾಡಲು ಸೂಚಿಸಿದ ಮೇರೆಗೆ ಸರ್ವೇ ಅಧಿಕಾರಿಗಳು ಸರ್ವೇಯನ್ನು ಮಾಡುತ್ತಿದ್ದಾಗ ಮದ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ತನ್ನ ತಮ್ಮನಾದ ಚಿಕ್ಕಕಾಮರೆಡ್ಡಿ ಹಾಗು ಈತನ ಮಗನಾದ ವೆಂಕಟೇಶ್ ಬಾಬು ರವರು ತನ್ನ ಮೇಲೆ ಜಮೀನಿನ ವಿಚಾರದಲ್ಲಿ ಗಲಾಟೆ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಇಬ್ಬರು ಕೈಗಳಿಂದ ಮೈ ಮೇಲೆ ಹೊಡೆದು ತನ್ನ ತಮ್ಮ ಜಮೀನಿನಲ್ಲಿ ಬಿದ್ದಿದ್ದ ದೊಣ್ಣೆಯನ್ನು ತೆಗೆದುಕೊಂಡು ತನ್ನ ಮೈ ಮೇಲೆ ಹೊಡೆದು ನೋವುಂಟು ಮಾಡಿದಾಗ ಆತನ ತನ್ನ ಮಗ ಪ್ರಭಾಕರ್ ರವರು ಜಗಳ ಬಿಡಿಸಲು ಅಡ್ಡ ಬಂದಾಗ ವೆಂಕಟೇಶ್ ಬಾಬು ತನ್ನ ಮಗನಿಗೆ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ಇಬ್ಬರು ಸೇರಿ ತಮಗೆ ಪ್ರಾಣ ಬೆದರಿಕೆ ಹಾಕಿದ್ದು, ಆಗ ಅಲ್ಲಿಯೇ ಇದ್ದ ತಮ್ಮ ಗ್ರಾಮಸ್ಥರು ಅಡ್ಡ ಬಂದು ಜಗಳ ಬಿಡಿಸಿರುತ್ತಾರೆ. ನಂತರ ತನ್ನ ಮಗ ತನ್ನನ್ನು ಕರೆದುಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿರುತ್ತಾನೆ. ಆದ ಕಾರಣ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ಹೇಳಿಕೆ.