ದಿನಾಂಕ :29/06/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.148/2020 ಕಲಂ. 78(3) ಕೆ.ಪಿ ಆಕ್ಟ್ :-

          ದಿ: 28-06-2020 ರಂದು ಬೆಳಗ್ಗೆ 10:15 ಗಂಟೆಗೆ ಪಿ.ಎಸ್.ಐ ರವರು ಮಾಲು, ಮಹಜರ್, ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶ – ದಿನಾಂಕ:28-06-2020 ರಂದು ಬೆಳಿಗ್ಗೆ 9-00 ಗಂಟೆಗೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಟಿಬಿ ಕ್ರಾಸ್ ಬಳಿಯ ಪ್ಲೈ ಓವರಿನ ರಸ್ತೆಯ ಬಳಿಯಿರುವ ಆಟೋ ನಿಲ್ದಾಣದ ಬಳಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಶ್ರೀಪತಿ ಸಿ.ಹೆಚ್.ಸಿ-178, ಶ್ರೀ ಮಧು.ಹೆಚ್.ಕೆ. ಸಿಪಿಸಿ-527 ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ ಕೆಎ-40-ಜಿ-537 ರಲ್ಲಿ ಚಾಲಕ ಎಹೆಚ್.ಸಿ-34 ಅಲ್ತಾಫ್ ಪಾಷಾ ರವರೊಂದಿಗೆ ಜೀಫ್ನಲ್ಲಿ ಮೇಲ್ಕಂಡ ಸ್ಥಳಕ್ಕೆ ಬಂದಿದ್ದು, ಅಲ್ಲಿಯೇ ಇದ್ದ ಪಂಚರುಗಳನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವುಗಳು ಮತ್ತು ಪಂಚರು ಬೆಳಿಗ್ಗೆ 9-15 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿ, ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದುಕೊಡುವುದು ಮತ್ತು ಸಾರ್ವಜನಿಕರನ್ನು ಕೂಗಿ 1 ರೂ ಗೆ 70 ರೂ ಕೊಡುವುದಾಗಿ ಕೂಗುತ್ತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದನ್ನು ನಾವುಗಳು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ವಶಕ್ಕೆ ಪಡೆದು ಅವರ ಬಳಿ ಇದ್ದ ವಿವಿಧ ನಂಬರ್ ಗಳಿಗೆ ವಿವಿಧ ಮೊತ್ತ ಬರೆದಿರುವ ವಿವಿಧ ಅಂಕಿಗಳ 1 ಮಟ್ಕಾ ಚೀಟಿ, ಒಂದು ಬಾಲ್ ಪೆನ್ ಹಾಗೂ ಆತನ ಬಳಿ ಇದ್ದ 500/- ರೂಗಳನ್ನು ವಶಕ್ಕೆ ಪಡೆದು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಶ್ರೀನಿವಾಸ ಬಿನ್ ಆದಿನಾರಾಯಣಪ್ಪ, 49 ವರ್ಷ, ಬಲಜಿಗರು, ವ್ಯವಸಾಯ, ಹಂಪಸಂದ್ರ ಗ್ರಾಮ, ಗುಡಿಬಂಡೆ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಎಂದು ತಿಳಿಸಿದ್ದು, ಸದರಿಯವರಿಗೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿಗಳನ್ನು ಬರೆಯಲು ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾರೆ. ಪಂಚರ ಸಮಕ್ಷಮ ಮೇಲ್ಕಂಡ ಮಾಲುಗಳನ್ನು ಪಂಚನಾಮೆ ಮೂಲಕ ವಶಕ್ಕೆ ಪಡೆದು ಮಾಲು ಮತ್ತು ಆರೋಪಿಯೊಂದಿಗೆ ಬೆಳಿಗ್ಗೆ 10-15 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮದ ಜರುಗಿಸಲು ಸೂಚಿಸಿ, ಠಾಣಾಧಿಕಾರಿಗಳಿಗೆ ವರಧಿ ನೀಡಿರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆರೋಪಿತರ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳುವ ಸಲುವಾಗಿ ಘನ ನ್ಯಾಯಾಲಯದ ಅನುಮತಿ ನೀಡಲು ಕೋರಿ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 28-06-2020 ರಂದು ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.149/2020 ಕಲಂ. 447,504 ಐ.ಪಿ.ಸಿ:-

          ದಿ: 29-06-2020 ರಂದು ಮದ್ಯಾಹ್ನ 1:30 ಗಂಟೆಗೆ ಪಿರ್ಯಾಧಿದಾರರಾದ ಎನ್.ಜಯರಾಮರೆಡ್ಡಿ ಬಿನ್ ಲೇಟ್ ನಂಜಿರೆಡ್ಡಿ ಉರುಫ್ ನಂಜಪ್ಪ, 45 ವರ್ಷ, ವಕ್ಕಲಿಗರು, ಜಿರಾಯ್ತಿ, ಆಚೇಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ಬಾಗೇಪಲ್ಲಿ ತಾಲ್ಲೂಕು ಆಚೇಪಲ್ಲಿ ಗ್ರಾಮದ ಸರ್ವೇ ನಂಬರ್ ಗಳಾದ  2/1 ರಲ್ಲಿ 19 ಗುಂಟೆ, 93/1 ರಲ್ಲಿ 2 ಗುಂಟೆ, 93/2 ರಲ್ಲಿ 2 ಗುಂಟೆ  ಜಮೀನು ನಮ್ಮ ತಾಯಿ ಮದ್ದಕ್ಕ ರವರ ಹೆಸರಿನಲ್ಲಿರುತ್ತೆ. ಸರ್ವೇ ನಂಬರ್ 92 ರಲ್ಲಿ 2 ಗುಂಟೆ ಜಮೀನು ನನ್ನ ಹೆಸರಿನಲ್ಲಿರುತ್ತೆ. ಸರ್ವೇ ನಂಬರ್ 109/6 ರಲ್ಲಿ 24 ಗುಂಟೆ ಜಮೀನು ನಮ್ಮ ದೊಡ್ಡಪ್ಪ  ಲೇಟ್ ಸುಬ್ಬನ್ನ ಹಾಗೂ ನಮ್ಮ ಹೆಸರಿನಲ್ಲಿ ಜಂಟಿಯಾಗಿರುತ್ತೆ. 16/2 ರಲ್ಲಿ 26 ಗುಂಟೆ ಜಮೀನು ನಮ್ಮ ದೊಡ್ಡಪ್ಪ ಲೇಟ್ ವೆಂಕಟರಾಯಪ್ಪ ರವರ ಹೆಸರಿನಲ್ಲಿರುತ್ತೆ. ಜಮೀನಿನ ಅನುಭವದಲ್ಲಿ ನಾವೇ ಇರುತ್ತೇವೆ.

    ಈ ಜಮೀನಿನ ವಿಚಾರವಾಗಿ 1994  ನೇ ಸಾಲಿನಲ್ಲಿ ನಮ್ಮ ತಂದೆ ನಂಜಿರೆಡ್ಡಿ ಉರುಫ್ ನಂಜಪ್ಪ ರವರು ವರದಯ್ಯಗಾರಿಪಲ್ಲಿ ಗ್ರಾಮದ ಗಂಗಮ್ಮ ರವರಿಗೆ ಅಗ್ರಿಮೆಂಟ್ ಹಾಕಿಕೊಟ್ಟಿದ್ದಾರೆಂದು ನಮ್ಮ ವಿರುದ್ದ ಚಿಕ್ಕಬಳ್ಳಾಪುರದ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ದಿನಾಂಕ:06/12/2007 ರಂದು ಇವರ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತ್ತು. ನಂತರ ಗಂಗಮ್ಮ ರವರು ಎರಡನೇ ಬಾರಿ ಅಫೀಲ್ ಹೋಗಿದ್ದು, ದಿನಾಂಕ:01/03/2019 ರಂದು ಘನ ನ್ಯಾಯಾಲಯವು ಇವರ ಅರ್ಜಿಯನ್ನು ವಜಾಗೊಳಿಸಿ ನಮ್ಮ ಪರವಾಗಿ ತೀರ್ಪನ್ನು ನೀಡಿರುತ್ತದೆ. ಹೀಗಿರುವಾಗ್ಗೆ ದಿನಾಂಕ:28/06/2020 ರಂದು ಬೆಳಿಗ್ಗೆ 10:30 ಗಂಟೆಯ ಸುಮಾರಿನಲ್ಲಿ ನಾನು ನಮ್ಮ ಜಮೀನಿನ ಬಳಿ ಹೋದಾಗ, ವರದಯ್ಯಗಾರಿಪಲ್ಲಿ ಗ್ರಾಮದ ಗಂಗಮ್ಮನ ಮಕ್ಕಳಾದ ಶಿವಪ್ಪ ಬಿನ್ ಲೇಟ್ ಪಿಲ್ಲವೆಂಕಟರಾಯಪ್ಪ, ವಯಸ್ಸು ಸುಮಾರು 45 ವರ್ಷ, ವಕ್ಕಲಿಗರು, ಜಿರಾಯ್ತಿ, ಮತ್ತು ಈತನ ತಮ್ಮನಾದ ಬೈಯ್ಯಾರೆಡ್ಡಿ ಬಿನ್ ಲೇಟ್ ಪಿಲ್ಲವೆಂಕಟರಾಯಪ್ಪ, ಸುಮಾರು 40 ವರ್ಷ ರವರುಗಳು ನಮ್ಮ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಜಮೀನನ್ನು ಉಳುಮೆ ಮಾಡುತ್ತಿದ್ದರು. ನಾನು ಏಕೆ ನಮ್ಮ ಜಮೀನನ್ನು ಉಳುಮೆ ಮಾಡುತ್ತಿರುವುದು ಎಂದು ಕೇಳಿದಾಗ, ಶಿವಪ್ಪ ಮತ್ತು ಬೈಯ್ಯಾರೆಡ್ಡಿ ರವರುಗಳು ನಿನ್ನಮ್ಮನ್ ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆಯಲು ಬಂದರು. ನಾನು ಮನೆಗೆ ವಾಪಸ್ಸಾಗಿ ನಮ್ಮ ಮನೆಯಲ್ಲಿ ವಿಚಾರವನ್ನು ತಿಳಿಸಿ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ನಮ್ಮ ಜಮೀನಿನ ಪಹಣಿಗಳೊಂದಿಗೆ ದೂರನ್ನು ನೀಡುತ್ತಿದ್ದು, ನಮ್ಮ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ, ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದಿರುವ ಶಿವಪ್ಪ ಮತ್ತು ಬೈಯ್ಯಾರೆಡ್ಡಿ ರವರುಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿಕೊಳ್ಳುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.64/2020 ಕಲಂ. 447,427,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ:28-06-2020 ರಂದು ಸಂಜೆ 06-00 ಗಂಟೆಗೆ ಪಿರ್ಯಾಧಿಯಾದ ನಾರಾಯಣಸ್ವಾಮಿ ಬಿನ್ ಬೈರಪ್ಪ, 65 ವರ್ಷ, ವಕ್ಕಲಿಗರು, ಜಿರಾಯ್ತಿ , ಗಂಜಿಗುಂಟೆ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ತಮ್ಮ ಬಾಬತ್ತು ಗಂಜಿಗುಂಟೆ ಗ್ರಾಮದ ಸರ್ವೆ ನಂ:243 ರಲ್ಲಿ 13 ಗುಂಟೆ ಮತ್ತು ಹೊಸ ಸರ್ವೆ ನಂ:243 ರಲ್ಲಿ16 ಗುಂಟೆ ಹಾಗೂ ಸರ್ವೆ ನಂ:369 ರಲ್ಲಿ ಗುಂಟೆ ಜಮೀನಿನಲ್ಲಿ ತಾನು ಸ್ವಂತ ಸ್ವಾಧೀನ ಅನುಭವದಲ್ಲಿರುತ್ತೇನೆ. ಇದೇ ಗ್ರಾಮದ ಅಂಜಿನಪ್ಪ ಬಿನ್ ರೆಡ್ಡಿಪ್ಪ, ಎಂಬುವರು ಈ ಮೇಲ್ಕಂಡ ಸರ್ವೆ  ನಂಬರ್ ಗಳಲ್ಲಿ ತನ್ನ ವಿರುದ್ದ ಶಿಡ್ಲಘಟ್ಟ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿ ಓ.ಎಸ್.ನಂ :222/1997 ರಂತೆ ನ್ಯಾಯಾಲಯದಲ್ಲಿಪ್ರಕರಣ ನಡೆದು ದಿನಾಂಕ:01-07-2005 ರಂದು ಮೇಲ್ಕಂಡ ಅಂಜಿನಪ್ಪನವರು ಹೂಡಲಾಗಿದ್ದ ದಾವೆಯನ್ನು ಘನ ನ್ಯಾಯಾಧೀಶರು ಪ್ರಕರಣವನ್ನು ವಜಾ ಮಾಡಿ ತನ್ನ ಪರವಾಗಿ ಆದೇಶ ಮಾಡಿರುತ್ತಾರೆ. ಈಗಿರುವಾಗ ದಿನಾಂಕ:20-06-2020 ರಂದು ಸುಮಾರು ಬೆಳಗ್ಗೆ 06-00 ಗಂಟೆ ಸಮಯದಲ್ಲಿ ತಮ್ಮ ಜಮೀನಿನಲ್ಲಿ ಹಕ್ಕಪಕ್ಕದ ಜಮೀನಿನನರಾದ ತಾಜ್ ಪೀರ್ ಬಿನ್ ಹೈದರ್ ಸಾಭಿ ಮತ್ತು ಹಜುಮಂತಪ್ಪ ಬಿನ್ ಸಿದ್ದಪ್ಪ ಎಂಬುವವರು ತಮ್ಮ ಮನೆಯ ಹತ್ತಿರ ಬಂದು ನಿಮ್ಮ ಜಮೀನಿನಲ್ಲಿರುವ ಮರಗಳಿಗೆ ಬೈರಡ್ಡಿ ಬಿನ್ ರೆಡ್ಡಿಪ್ಪ, ಆಂಜಿನಪ್ಪ ಬಿನ್ ರೆಡ್ಡಿಪ್ಪ, ವೆಂಕಟರೆಡ್ಡಿ ಬಿನ್ ಬೈರೆಡ್ಡಿ ಎಂಬುವವರು ಗಂಪು ಕಟ್ಟಿಕೊಂಡು ನಿಮ್ಮ ಜಮೀನಿನಲ್ಲಿರುವ ಓಣಗಿರುವ ಮತ್ತು ಹಸಿ ಮರಗಳಿಗೆ ಬೆಂಕಿಯಿಟ್ಟು ಉರಿಯುತ್ತಿರುವುದಾಗಿ ತನಗೆ ಹೇಳಿದಾಗ ತಾವು ಹೋಗಿ ನೋಡಿದಾಗ ತಮ್ಮ ಜಮೀನಿನಲ್ಲಿದ್ದ ಹೊಂಗೆ, ಬೇವು, ಒಣಗಿರುವ ಸೌದೆಯು ಸಹ ಉರಿಯುತ್ತಿದ್ದು, ಅಲ್ಲಿಯೇ ನಿಂತಿದ್ದ ಬೈರೆಡ್ಡಿ ಈ ಮೇಲ್ಕಂಡ ರವರನ್ನು ಏಕೆ ಈ ರೀತಿಯಾಗಿ ತಮಗೆ ತೊಂದರೆ ನೀಡುತ್ತಾ ತಮ್ಮ ಮರಗಳನ್ನು ನಾಶ ಪಡಿಸುತ್ತಿದ್ದೀರಾ ಎಂದು ಕೇಳಿದಾಗ ನಿನ್ನ ಕೈಯಲ್ಲಿ ಏನಾಗುತ್ತೋ ಅದು ಮಾಡಿಕೋ ಎಂದು ತನ್ನ ಮೇಲೆ ಅವಾಚ್ಯ ಶಬ್ದಗಳಿಂದ ಬೈಯ್ದು ತನ್ನನ್ನು ಇದೇ ಬೆಂಕಿಯಲ್ಲಿಯೇ ಹಾಕಿ ಬೀವ ಸಹಿತ ಸುಡುವುದಾಗಿ ಬೆದರಿಕೆಯನ್ನು ಹಾಕಿರುತ್ತಾರೆ. ಈಗಿರುವಾಗ ದಿನಾಂಕ:28-06-2020  ರಂದು ಸುಮಾರು 02-00 ಗಂಟೆ ಸಮಯದಲ್ಲಿ ತನ್ನ ಜಮೀನಿನಲ್ಲಿ ಸೊಪ್ಪು ಹಾಕಿದ್ದು ಈ ಸೊಪ್ಪಿಗೆ ಬೇಕೆಂತಲೇ ಮೇಕೆಗಳನ್ನು ಬಿಟ್ಟಿರುತ್ತಾರೆ. ತಾನು ಹೋಗಿ ನೋಡಿ ಕೇಳಿದಾಗ ಸದರಿ ಮೇಲ್ಕಂಡವರು ಅಕ್ರಮ ಗುಂಪು ಕಟ್ಟಿಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಸದರಿ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿರುವ ದೂರಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.161/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ 28/06/2020 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ. ರಾಮು ಬಿನ್ ಅಶ್ವತ್ಥಪ್ಪ, 32 ವರ್ಷ,  ನಾಯಕ ಜನಾಂಗ, ಹೋಟೆಲ್ ಕೆಲಸ, ವಾಸ ಏಟಿಗಡ್ಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಸವೇನೆಂದರೆ ದಿನಾಂಕ 27/06/2020 ರಂದು ತಾನು ತನ್ನ ತಾಯಿಯಾದ ನರಸಮ್ಮ ರವರು ದೇವಸ್ಥಾನಕ್ಕೆಂದು ಗೌರಿಬಿದನೂರು ತಾಲ್ಲೂಕು ರಾಮಚಂದ್ರಪುರಕ್ಕೆ ಬರುತ್ತಿದ್ದಾಗ ಹಾಗೇ ಹುದಗೂರಿನಲ್ಲಿ ತನ್ನ ಅಕ್ಕ ಸುಜಾತ ರವರನ್ನು ತನ್ನ ಬಾಬತ್ತು  ಕೆ.ಎ-02ಹೆಚ್.ಎ-4252 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಮದ್ಯಾಹ್ನ ಸುಮಾರು 2-00 ಗಂಟೆ ಸಮಯದಲ್ಲಿ ಬೈಚಾಪುರ  ಕ್ರಾಸ್  ನಲ್ಲಿ ಬರುತ್ತಿದ್ದಾಗ ತನ್ನ ಹಿಂಬಾಗದಿಂದ ಬಂದ ಕೆ.ಎ-42-ಎಲ್- 3819 ಪಲ್ಸರ್ ದ್ವಿಚಕ್ರ ವಾಹನದ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು  ಬಂದು ಡಿಕ್ಕಿ ಹೊಡಯಿಸಿದ ಪರಿಣಾಮ   ಹಿಂಬದಿಯಲ್ಲಿ ಕುಳಿತಿದ್ದ  ತನ್ನ  ತಾಯಿ ನರಸಮ್ಮ ಕೊಂ ಅಶ್ವತ್ಥಪ್ಪ, 60 ವರ್ಷ ರವರಿಗೆ ತಲೆಗೆ ರಕ್ತಗಾಯವಾಗಿದ್ದು, ಕೈಗೆ ರಕ್ತಗಾಯವಾಗಿರುತ್ತದೆ. ತನ್ನ ಅಕ್ಕ ಸುಜಾತ ರವರಿಗೆ ತಲೆಯ ಬಲಭಾಗಕ್ಕೆ ರಕ್ತಗಾಯವಾಗಿರುತ್ತದೆ. ಮತ್ತು ಬೆನ್ನಿಗೆ ತರಚಿದ  ಗಾಯವಾಗಿರುತ್ತದೆ. ತನಗೆ ಸಣ್ಣಪುಟ್ಟ  ತರಚಿದ  ಗಾಯಗಳಾಗಿರುತ್ತದೆ.  ಹಿಂಬದಿಯಲ್ಲಿ ಬಂದ ಕೆಲ ಸಾರ್ವಜನಿಕರು ಸ್ಥಳದಲ್ಲಿ ತಮ್ಮನ್ನು ಉಪಚರಿಸಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿರುತ್ತಾರೆ.  ತನ್ನ ತಾಯಿಯನ್ನು  ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕೆ.ಕೆ. ಆಸ್ಪತ್ರೆಗೆ  ಕಳುಹಿಸಿರುತ್ತಾರೆ. ತನ್ನ ತಾಯಿಯನ್ನು ಬೆಂಗಳೂರಿನ  ಆಸ್ಪತ್ರೆಗೆ ಸೇರಿಸಿ ದೂರು ನೀಡಲು ತಡವಾಗಿದ್ದು ಕೆ.ಎ-42-ಎಲ್- 3819 ಪಲ್ಸರ್ ದ್ವಿಚಕ್ರ ವಾಹನದ ಸವಾರ ವಿರುದ್ದ ಕಾನೂನು ರೀತ್ಯಾ ಕ್ರಮ  ಜರುಗಿಸಲು ಕೋರಿ ದೂರು.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.106/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ 28/06/2020 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾಧಿ ಬಾಗೇಪಲ್ಲಿ ಪಟ್ಟಣವಾಸಿ ಭಾಗ್ಯಲಕ್ಷ್ಮಿ ಬಿನ್ ವೆಂಕಟಶ್ಯಾಮಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತಂಗಿಯ ಗಂಡನಾದ ರವಿ ರವರು ಕೆಎ52-ಹೆಚ್-6099 ರ ದ್ವಿಚಕ್ರವಾಹನದಲ್ಲಿ ದಿನಾಂಕ 27/06/2020 ರಂದು ರಾತ್ರಿ ಸುಮಾರು 8-00 ಗಂಟೆಯ ಸಮಯದಲ್ಲಿ ಗುಡಿಬಂಡೆಯಿಂದ ಪೆರೆಸಂದ್ರ ಗೆ ಹೋಗಲು ಬೊಮ್ಮಗಾನಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಇವರ ಎದರುಗಡೆಯಿಂದ ಬಂದ ಕೆಎ 51-ಡಬ್ಲ್ಯೂ-9782 ರ ದ್ವಿಚಕ್ರವಾಹನದ ಸವಾರ ಗುಡಿಬಂಡೆ ಟೌನ್ ವಾಸಿ ಸೊಪ್ಪಿನಪೇಟೆಯ ನಾಗರಾಜ ಬಿನ್ ವೆಂಕಟೇಶಪ್ಪ ಎಂಬುವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರವಿ ರವರು ಹೋಗುತ್ತಿದ್ದ ಮೇಲ್ಜಕಂಡ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ರವರಿ ರವರಿಗೆ ಬಲಗಾಲಿಗೆ ರಕ್ತಗಾಯವಾಗಿದ್ದು, ರಸ್ತೆಅಪಘಾತ ಉಂಟುಪಡಿಸಿದ ನಾಗರಾಜ ಬಿನ್ ವೆಂಕಟೇಶಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.146/2020 ಕಲಂ. 78(1)(A)(iv)(vi) ಕೆ.ಪಿ ಆಕ್ಟ್:-

          ದಿನಾಂಕ:29/06/2020 ರಂದು ಠಾಣಾ ಹೆಚ್.ಸಿ. 137 ಮಂಜುನಾಥ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಹಾಜರುಪಡಿಸಿದ್ದೇನೆಂದರೆ ದಿನಾಂಕ:26/06/2020 ರಂದು ಮಾನ್ಯ ಪೊಲೀಸ್ ಉಪಾಧೀಕ್ಷಕರು ಚಿಕ್ಕಬಳ್ಳಾಪುರ ಉಪ ವಿಭಾಗ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ: 26-06-2020 ರಂದು ನಾನು ಮತ್ತು ನನ್ನ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ರಮೇಶ್.ಸಿ.ಹೆಚ್.ಸಿ-205 ಮತ್ತು ಶ್ರೀನಾಥ.ವಿ, ಸಿ.ಹೆಚ್.ಸಿ-17 ರವರೊಂದಿಗೆ ಗಸ್ತಿನಲ್ಲಿದ್ದಾಗ ಸಂಜೆ ಸುಮಾರು 4: 00 ಗಂಟೆ ಸಮಯದಲ್ಲಿ ಮಂಚೇನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಇದ್ದಾಗ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ತೇರಿನ ಬೀದಿಯಲ್ಲಿ ಯಾರೋ ಒಬ್ಬ ಆಸಾಮಿ ಹಣವನ್ನು ಕಟ್ಟಿಸಿಕೊಂಡು  ಮಟ್ಕಾ ಜೂಜಾಟದ ಅಂಕಿಗಳನ್ನು ಬರೆಯುತ್ತಿರುವುದಾಗಿ ಸದರಿ ಜೂಜಾಟದ ಮೇಲೆ ದಾಳಿ ಮಾಡಲು ನಾವುಗಳು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಸರ್ಕಾರಿ ಜೀಪ್. ಸಂಖ್ಯೆ: ಕೆ.ಎ.-40-ಜಿ-1555 ರಲ್ಲಿ ಹೋಗಿ ತೇರಿನ ಬೀದಿಯ ಸ್ವಲ್ಪ ದೂರದಲ್ಲಿ ಮರೆಯಲ್ಲಿ ವಾಹನವನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ಬೀದಿಯಲ್ಲಿ ನೋಡಲಾಗಿ ಶ್ರೀ ವಿಶ್ವನಾಥಯ್ಯಶೆಟ್ಟಿ ರವರ ಚಿಲ್ಲರೆ ಅಂಗಡಿಯ ಮುಂಭಾಗ ಯಾರೋ ಒಬ್ಬ ಆಸಾಮಿ ಕೈಯಲ್ಲಿ ಒಂದು ಪೆನ್ ಪೇಪರ್ ಹಿಡಿದುಕೊಂಡು ಬನ್ನಿ, ಬನ್ನಿ ಮಟ್ಕಾ ಚೀಟಿಗಳನ್ನು ಬರೆಯಿಸಿ ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿಗಳು ಎಂದು ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ ಎಂದು ಮಟ್ಕಾ ಅಂಕಿಗಳನ್ನು ಬರೆಯುತ್ತಿರುವುದನ್ನು ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಮಟ್ಕಾ ಬರೆಯುತ್ತಿದ್ದ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು ಪಂಚರ ಸಮಕ್ಷಮ ಆತನನ್ನು ಹಿಡಿದು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಸಿದ್ದೀಕ್ ಬಿನ್ ಲೇಟ್ ಅಬ್ದುಲ್ಲ, 29 ವರ್ಷ, ಮುಸ್ಲೀಂ ಜನಾಂಗ, ಪೈಂಟಿಂಗ್ ಕೆಲಸ, ವಾಸ ತೇರಿನ ಬೀದಿ, ಮಂಚೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿರುತ್ತಾನೆ. ಆತನ ಕೈಯಲ್ಲಿ ಒಂದು ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ ಒಂದು ಮಟ್ಕಾ ಚೀಟಿ, ಆತನ ಕೈಯಲ್ಲಿದ್ದ ಒಂದು ಬಾಲ್ ಪಾಯಿಂಟ್ ಪೆನ್ನನ್ನು ಹಾಗೂ ಆತನ ಶರ್ಟ್ ಜೇಬಿನಲ್ಲಿದ್ದ ವಿವಿಧ ಮುಖ ಬೆಲೆಯ 6300/- ರೂಪಾಯಿಗಳಿದ್ದು ಸದರಿ ಹಣವನ್ನು ಸಾರ್ವಜನಿಕರಿಂದ ಮಟ್ಕಾ ಅಂಕಿಗಳನ್ನು ಬರೆದು ಅದರಿಂದ ಬಂದಿರುವ ಮಟ್ಕಾ ಜೂಜಾಟದ ಹಣವೆಂತ ತಿಳಿಸಿರುತ್ತಾನೆ  ಆತನಿಗೆ ಮಟ್ಕಾ ಅಂಕಿಗಳನ್ನು ಬರೆಯಲು ತನ್ನ ಬಳಿ ಯಾವುದೇ ಪರವಾನಿಗೆ ಇದೆಯೇ ಎಂತ  ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂತ ತಿಳಿಸಿರುತ್ತಾನೆ, ಮಟ್ಕಾ ಜೂಜಾಟದ ಅಂಕಿಗಳನ್ನು ಬರೆಯುವುದು ಕಾನೂನು ಬಾಹಿರವಾಗಿರವಾಗಿರುವುದರಿಂದ ಆತನನ್ನು ಜೂಜಾಟಕ್ಕೆ ಬಳಸಿದ್ದ ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದುಕೊಂಡಿರುತ್ತೆ. ಸದರಿ ಆಸಾಮಿಯು ತಾನು ಮಟ್ಕಾ ಅಂಕಿಗಳ ಪಟ್ಟಿಯನ್ನು ನಮ್ಮದೇ ಗ್ರಾಮದ ನಾಗರಾಜ.ವಿ. @ ನಾಗ ಬಿನ್ ವೆಂಕಟರವಣಪ್ಪ, 29 ವರ್ಷ, ತಳವಾರಪೇಟೆ, ಮಂಚೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಮೊ.ಸಂ 8546845787   ರವರಿಗೆ ಕೊಡುತ್ತಿರುವುದಾಗಿ ಆತನು ನನಗೆ 10%  ಕಮೀಷನ್ ಕೊಡುವುದಾಗಿ ತಿಳಿಸಿರುತ್ತಾನೆ. ಆದ್ದರಿಂದ ಮೇಲ್ಕಂಡ ಆಸಾಮಿಯನ್ನು,  ಮತ್ತು ಆತನಿಂದ ವಶಕ್ಕೆ ಪಡೆದುಕೊಂಡ ಮಾಲುಗಳನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಈ ಬಗ್ಗೆ ಮತ್ತು ಈತನಿಂದ ಪಟ್ಟಿಯನ್ನು ತೆಗೆದುಕೊಳ್ಳುತ್ತಿದ್ದ ನಾಗರಾಜ @ ನಾಗ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿ ನೀಡಿದ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ನಂಬರ್ 306/2020 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.