ದಿನಾಂಕ :29/05/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.107/2020 ಕಲಂ. 323,324,504 ರೆ/ವಿ 34 ಐ.ಪಿ.ಸಿ:-

          ದಿ: 28-05-2020 ರಂದು ರಾತ್ರಿ 8:00 ಗಂಟೆಗೆ ಸರ್ಕಾರಿ ಆಸ್ಪತ್ರೆಯ ಮೆಮೋ ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ಶ್ರೀಮತಿ ಶಿಲ್ಪ.ಎಂ.ಟಿ ಕೋಂ ರಾಜು.ಕೆ, 28 ವರ್ಷ, ಬಲಜಿಗರು, ಗೃಹಿಣಿ, ಹಿರಯಣ್ಣನಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶ – ನನ್ನ ತವರೂರು ಬಾಗೇಪಲ್ಲಿ ತಾಲ್ಲೂಕು ಮಿಟ್ಟೇಮರಿ ಗ್ರಾಮವಾಗಿರುತ್ತದೆ.  ನಾನು ನನ್ನ 2 ನೇ ಮಗನ ಹೆರಿಗೆಗಾಗಿ ಈಗ್ಗೆ ಒಂದೂವರೆ ವರ್ಷದ ಹಿಂದ ನನ್ನ ತವರು ಮನೆಗೆ ಬಂದಿರುತ್ತೇನೆ.  ನಮ್ಮ ತಂದೆಯ ಸ್ವಂತ ತಮ್ಮನಾದ ನರಸಿಂಹಯ್ಯ ಮತ್ತು ನಮ್ಮ ತಂದೆಯ ದೊಡ್ಡಪ್ಪ ಮುನಿಶಾಮಪ್ಪ[ಲೇಟ್] ರವರ ಮಗನಾದ ಶ್ರೀನಿವಾಸ ಮತ್ತು ಲೇಟ್ ವೆಂಕಟೇಶ ರವರ ಮಕ್ಕಳಾದ ರವಿ, ಪ್ರಕಾಶ್ ರವರು ಜಮೀನು ವಿಭಾಗ ಮಾಡಿಕೊಳ್ಳುವ ವಿಚಾರದಲ್ಲಿ ಬೆಳಗ್ಗೆ 10:30 ಗಂಟೆಗೆ ನಮ್ಮ ಮನೆಯ ಬಳಿ ಬಂದಿದ್ದರು. ಜಮೀನು ಇನ್ನೂ ನಮಗೆ ಭಾಗ ಬರಬೇಕೆಂದು ನಮ್ಮ ತಂದೆಯ ದೊಡ್ಡಪ್ಪ ಮುನಿಶಾಮಪ್ಪನ ಮಗನಾದ ಶ್ರೀನಿವಾಸ ರವರ ಇಬ್ಬರ ಮಕ್ಕಳಾದ ಸಂತೋಷ ಮತ್ತು ಮುರಳಿ ರವರು ನಮ್ಮ ತಂದೆಯನ್ನು ನಿನ್ನಮ್ಮನ್ ಏನು ಕಿತ್ತುಕೊಳ್ಳುತ್ತಿಯೋ ನೀನು ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದರು.  ನಾನು ನಮ್ಮ ತಂದೆಯನ್ನು ಬೈಯ್ಯುವುದು ಏಕೆ ಮನೆಯೊಳಗೆ ಹೋಗಿ ಕುಳಿತುಕೊಂಡು ಮಾತನಾಡಿ ಎಂದು ನಾನು ಸಂತೋಷ್ ಮತ್ತು ಮುರಳಿಗೆ ಹೇಳಿದೆನು.  ಜಮೀನಿನ ಮಾತುಕತೆಯನ್ನು ಆಡುತ್ತಿದ್ದು, ಆಗ ಸಮಯ ಸುಮಾರು 4:00 ಗಂಟೆ ಆಗಿತ್ತು, ಆಗ ಮುರಳಿ ನನಗೆ ಕಾಲಿನಿಂದ ಹೊಟ್ಟೆಗೆ ಒದ್ದನು.  ನಾನು ಕೆಳಗೆ ಬಿದ್ದು ಹೋದೆನು.  ಆಗ ಮುರಳಿಯ ತಂದೆ ಶ್ರೀನಿವಾಸ ತಾಯಿ ಸುನಂದಮ್ಮ ರವರು ಬಂದು ಎಡಕೈ ಬೆರಳುಗಳನ್ನು ಸುನಂದಮ್ಮ ತಿರುಚಿದರು.   ಶ್ರೀನಿವಾಸ ರವರು ಕೈಗಳಿಂದ ಬಲಕೈಗೆ ಹೊಡೆದರು.  ಬಿಡಿಸಲು ಅಡ್ಡ ಬಂದ ನನ್ನ ತಂದೆಯನ್ನು ಸಂತೋಷನು ಕೋಲಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿದನು.  ನಾನು ಮುರಳಿಯ ಕಾಲುಗಳನ್ನು ಹಿಡಿದುಕೊಂಡು ನಮ್ಮ ತಂದೆಯನ್ನು ಬಿಟ್ಟುಬಿಡಿ ಎಂದು ಕೇಳಿಕೊಂಡರೂ ಬಿಡಲಿಲ್ಲ.  ಆಗ ನಮ್ಮ ಗ್ರಾಮಸ್ಥರು ಬಂದು ಜಗಳನ್ನು ಬಿಡಿಸಿದರು.  ನಮ್ಮ ಸೋದರ ಮಾವ ಗೋವಿಂದರಾಜು ರವರು ಬಂದು ಕಾರಿನಲ್ಲಿ ನಮ್ಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದರು.  ನನಗೆ ಮತ್ತು ನನ್ನ ತಂದೆಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಕಾಲಿನಿಂದ ಒದ್ದು, ನನ್ನ ತಂದೆಗೆ ಕೋಲಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿರುವ ಸಂತೋಷ, ಆತನ ತಮ್ಮ ಮುರಳಿ ಮತ್ತು ಅವರ ತಂದೆ ಶ್ರೀನಿವಾಸ ತಾಯಿ ಸುನಂದಮ್ಮ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ, ಎಂದು ದೂರು.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.108/2020 ಕಲಂ. 143,147,323,324,504 ರೆ/ವಿ 149 ಐ.ಪಿ.ಸಿ:-

          ದಿನಾಂಕ: 29/05/2020 ರಂದು ಬೆಳಗ್ಗೆ 07:30 ಗಂಟೆಗೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೊವನ್ನು ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ಶ್ರೀಮತಿ ಸುನಂದಮ್ಮ ಕೋಂ ಶ್ರೀನಿವಾಸ್ , 48 ವರ್ಷ, ಬಲಜಿಗರು, ಮನೆ ಕೆಲಸ ಮತ್ತು ಜಿರಾಯ್ತಿ ಮಿಟ್ಟೇಮರಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ. ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಮನೆಕೆಲಸ ಮತ್ತು ಜಿರಾಯ್ತಿ ಕೆಲಸ ಮಾಡಿಕೊಂಡು ಜೀವಾನ ಸಾಗಿಸುತ್ತಿರುತ್ತೆನೆ ನಮ್ಮ ಗ್ರಾಮದಲ್ಲಿ ನಮ್ಮಗು ಮತ್ತು ನನ್ನ ಗಂಡ ನ  ಚಿಕ್ಕಪ್ಪನ ಮಗನಾದ  ತಿಮ್ಮಪ್ಪ  ರವರಿಗೂ ಜಮೀನುಗಳ ವಿವಾದವಿದ್ದು ಈ ದಿನ ದಿನಾಂಕ 28/05/2020 ರಂದು ಮದ್ಯಾಹ್ನ 2-00 ಗಂಟೆಯಲ್ಲಿ ನಮ್ಮ ಗಳ ಮನೆಯ ಮುಂದೆ ನಾವು  ಮತ್ತು ತಿಮ್ಮಪ್ಪ್ನ ಕಡೆಯವರು  ಜಗಳ ಮಾಡಿಕೊಂಡು ಕೈ ಕೈ ಮಿಲಾಯಿಸಿಕೊಂಡಿದ್ದು  ಊರಿನ ಹಿರಿಯರು  ಜಮೀನುಗಳ ವಿಚಾರವಾಗಿ ಸಂದಾನ ಮಾಡುವುದಾಗಿ ಹೇಳಿದ್ದು ಇದ್ದೆ ದಿನ ನಾವು ಮನೆಯಲ್ಲಿಯೆ ಮಲಗಿರುವಾಗ  ರಾತ್ರಿ 11-00 ಗಂಟೆ ಸಮಯದಲ್ಲಿ 1)ತಿಮ್ಮಪ್ಪ ಬಿನ್ ಲೇಟ್ ವೆಂಕಟರಾಯಪ್ಪ 2)ದೇವಮ್ಮ ಕೋಂ ತಿಮ್ಮ ಪ್ಪ 3)  ಗೋವಿಂದರಾಜು ತಿಮ್ಮಪ್ಪನ ದೊಡ್ಡ  ಅಳಿಯ  4)ತಿಮ್ಮಪ್ಪನ 2ನೇ ಅಳಿಯ ರಾಜು  ರವರು ನಮ್ಮ ಮನೆಯ ಬಳಿ ಬಂದು ಹೊರಗಡೆ ಕರೆದು  ನಮ್ಮ ಮೇಲೆ ಜಗಳ ತೆಗೆದು ಅವಾಚ್ಯಾ ಶಬ್ದಗಳಿಂದ ಬ್ಯೆದ್ದು ಗೋಂವಿದರಾಜು  ರವರು ತನ್ನ  ಕೈಯ್ಯಲ್ಲಿದ್ದ  ಕಲ್ಲಿನಿಂದ ನನ್ನ 1 ನೇ ಮಗನಾದ ಸಂತೋಷ ರವರ ಎಡಮೊಣಕಾಲಿಗೆ ಹೊಡೆದು, ಮೂಗೇಟು ಉಂಟು ಮಾಡಿದ್ದು, ರಾಜು ಎಂಬುವವರು  ತನ್ನ ಕೈಗಳಿಂದ ನನ್ನ  ಚಿಕ್ಕಮಗ  ಮುರಳಿಗೆ  ಮೈ ಮೇಲೆ ಮತ್ತು ಮುಖದ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ.  ನನ್ನ ಮಕ್ಕಳನ್ನು ಬಿಡಿಸಲು ಹೋದ ನನಗೆ ದೇವಮ್ಮರವರು ನನ್ನ ಬಟ್ಟೆಗಳನ್ನು ಹಿಡಿದು ಎಳೆದಾಡಿ ಕೆಳಗೆ ತಳ್ಳಿದರಿಂದ ನಾನು ಅಯಾ ತಪ್ಪಿ ಕೆಳಗೆ ಬಿದ್ದ ಪರಿಣಾಮ ನನ್ನ ಎದೆಗೆ ಮೂಗೇಟು  ಆಗಿರುತ್ತದೆ. ನಂತರ 5) ತಿಮ್ಮಪ್ಪ ನ ಮೂರನೇ ಅಳಿಯ ಶ್ರೀನಿವಾಸ 6)ನಾಲ್ಕನೇ ಅಳಿಯ ಶ್ರೀನಿವಾಸರವರು ಬಂದು ನನ್ನ ಗಂಡ ಶ್ರೀನಿವಾಸಗೆ  ಅವರ ಕೈ ಗಳಿಂದ ಹೊಡೆದು ನೋವುಂಟು ಮಾಡಿರುತ್ತಾರೆ.  ನಂತರ ಅಲ್ಲಿಯೇ   ಇದ್ದ  ಸೀನಪ್ಪ ಬಿನ್ ಪೆದ್ದ ರಂಗ, ವೆಂಕಟೇಶ ಬಿನ್ ನಾರಾಯಣಪ್ಪ ರವರು  ಅಡ್ಡ ಬಂದು  ಜಗಳ ಬಿಡಿಸಿದರು. ನಂತರ  ನಾನು ಮತ್ತು ನನ್ನ ಮಗ ಸಂತೋಷ ರವರು  ಬಾಗೇಪಲ್ಲಿ  ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ   ದಾಖಲಾಗಿರುತ್ತೇವೆ. ಆದರಿಂದ ಮೇಲ್ಕಂಡ ರವರ ಮೇಲೆ ಕ್ರಮ ಜರುಗಿಸ ಬೇಕಾಗಿ ತಮ್ಮಲ್ಲಿ  ಕೋರುತ್ತೆನೆಂದು ನೀಡಿದ ದೂರನ್ನು ಪಡೆದು ಬೆಳಿಗ್ಗೆ 8:30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಪ್ರಕರಣವನ್ನು ದಾಖಲಿಸಿರುವುದಾಗಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.54/2020 ಕಲಂ. 279,304(A) ಐ.ಪಿ.ಸಿ:-

          ದಿನಾಂಕ: 28/05/2020 ರಂದು 20.30 ಗಂಟೆಗೆ ಶ್ರೀಮತಿ. ಮಂಜುಳ ಕೋಂ ವೆಂಕಟೇಶ, 31 ವರ್ಷ, ಆದಿ ಕರ್ನಾಟಕ  ಜನಾಂಗ, ಕೂಲಿ ಕೆಲಸ, ವಾಸ ವಾರ್ಡ್. ನಂ 13, ಅಂಬೇಡ್ಕರ್ ನಗರ, ಬಾಗೇಪಲ್ಲಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತನಗೆ ಈಗ್ಗೆ 13 ವರ್ಷಗಳ ಹಿಂದೆ ಬಿ.ಆರ್. ವೆಂಕಟೇಶ ಬಿನ್ ಲೇಟ್ ರಾಮಯ್ಯ, 35 ವರ್ಷ ರವರೊಂದಿಗೆ ವಿವಾಹವಾಗಿದ್ದು ನಮಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿರುತ್ತಾರೆ. ತಾನು ಮತ್ತು ತನ್ನ ಗಂಡ ಕೂಲಿ ಕೆಲಸ ಮಾಡಿಕೊಂಡಿರುತ್ತೇವೆ. ದಿನಾಂಕ: 28/05/2020 ರಂದು ತಾವು ಕೂಲಿ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು  ಬೆಳಿಗ್ಗೆ 9.00 ಗಂಟೆ ಸಮಯದಲ್ಲಿ ತನ್ನ ಗಂಡ ತನಗೆ ಟೌನ್ ನಲ್ಲಿ ಕೆಲಸ ಇದೆ ಎಂತ ಹೇಳಿ ಮನೆಯಿಂದ ಹೋಗಿರುತ್ತಾರೆ. ನಂತರ ಮಧ್ಯಾಹ್ನ ಸುಮಾರು 3.00 ಗಂಟೆಯ ಸಮಯದಲ್ಲಿ ತಾನು ಮನೆಯಲ್ಲಿದ್ದಾಗ ತಮ್ಮ ಪಕ್ಕದ ಮನೆಯ ವಾಸಿ ವೆಂಕಟೇಶ ಬಿನ್ ತಿಪ್ಪಣ್ಣ  ರವರು ಮನೆಯ ಬಳಿ ಬಂದು ವೆಂಕಟೇಶನಿಗೆ ಶಿಡ್ಲಘಟ್ಟ ತಾಲ್ಲೂಕು ಸೊಣ್ಣಗಾನಹಳ್ಳಿ ಗ್ರಾಮದ ಬಳಿ ಅಫಘಾತವಾಗಿ ಅಂಬುಲೆನ್ಸ್ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಮೃತನಾಗಿರುತ್ತಾನೆಂತ ತಿಳಿಸಿದ್ದು ಕೂಡಲೇ ತಾನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿರುತ್ತೆ. ಅಫಘಾತದ ಬಗ್ಗೆ ವೆಂಕಟೇಶರವರ ಜೊತೆಯಲ್ಲಿದ್ದ ಬಾಬು ಬಿನ್ ನಾರಾಯಣಸ್ವಾಮಿ, ಸಾದಲಿ ಗ್ರಾಮರವರನ್ನು ವಿಚಾರ ಮಾಡಲಾಗಿ  ತನ್ನ ಗಂಡ ದಿನಾಂಕ: 28/05/2020 ರಂದು ಮಧ್ಯಾಹ್ನ ಸುಮಾರು 1.00 ಗಂಟೆಯ ಸಮಯದಲ್ಲಿ ಚಿಂತಾಮಣಿ ಕಡೆಗೆ ಹೋಗಲು ಯಾರದೋ ದ್ವಿಚಕ್ರ ವಾಹನ ಸಂಖ್ಯೆ ಕೆಎ-40-ಕೆ-6068 ಡಿಸ್ಕವರ್ ವಾಹನವನ್ನು ತೆಗೆದುಕೊಂಡು ದ್ವಿಚಕ್ರವಾಹನವನ್ನು ಆತನೇ ಚಾಲನೆ ಮಾಡಿಕೊಂಡು ಸೊಣ್ಣಗಾನಹಳ್ಳಿ ಗ್ರಾಮ ಬಿಟ್ಟು ಚಿಂತಾಮಣಿ ಕಡೆಗೆ ಹೋಗುವ ಕೆರೆ ಕಟ್ಟೆಯ ರಸ್ತೆಯ ತಿರುವಿನಲ್ಲಿ ದ್ವಿ ಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬಲಭಾಗದಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆಸಿ ದ್ವಿಚಕ್ರ ವಾಹನದ ಸಮೇತ ಕೆರೆಯ ಕಟ್ಟೆಯ ಕೆಳಗೆ ಬಿದ್ದುಹೋಗಿದ್ದು ತನ್ನ ಗಂಡನ ಮುಖ, ತಲೆ ಕೈಕಾಲುಗಳಿಗೆ ರಕ್ತಗಾಯಗಳಾಗಿ ಪ್ರಜ್ಙಾ ಹೀನನಾಗಿದ್ದು  ವೆಂಕಟೇಶನನ್ನು 108 ಅಂಬುಲೆನ್ಸ್ ವಾಹನದಲ್ಲಿ ತಾನೇ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಾಗಿ ಆಸ್ಪತ್ರೆಯಲ್ಲಿ ಸುಮಾರು 2.45 ಗಂಟೆ ಸಮಯದಲ್ಲಿ ತನ್ನ ಗಂಡ ಮೃತರಾಗಿರುವುದಾಗಿ ತಿಳಿಸಿರುತ್ತಾರೆ.  ತನ್ನ ಗಂಡನ ಮೃತ ದೇಹವು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿರುವುದಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.119/2020 ಕಲಂ. 379 ಐ.ಪಿ.ಸಿ:-

          ದಿನಾಂಕ 29-05-2020 ರಂದು ಬೆಳಿಗಿನ ಜಾವ 4-30 ಗಂಟೆಸಮಯದಲ್ಲಿ  ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಮೋಹನ್ .ಎನ್.   ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ   ಈ ದಿನ ದಿನಾಂಕ 29-05-2020 ರಂದು ರಾತ್ರಿ 2-30 ಗಂಟೆ  ಸಮಯದಲ್ಲಿ  ಗೌರೀಬಿದನೂರು ತಾಲ್ಲೂಕು, ವೀರ್ಲಗೊಲ್ಲಹಳ್ಳಿ  ಗ್ರಾಮದ ಬಳಿ ಇರುವ ಉತ್ತರಪಿನಾಕಿನಿ ನದಿಯ  ಅಂಗಳದಲ್ಲಿ ಯಾರೋ ಅಕ್ರಮವಾಗಿ ಲಗೇಜ್ ಆಟೋದಲ್ಲಿ ಮರಳು ಕಳ್ಳತನವಾಗಿ ತುಂಬುತ್ತಿರುವ  ಬಗ್ಗೆ ಮಾಹಿತಿ ಬಂದ  ಮೇರೆಗೆ ತಾನು ಮತ್ತು  ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂಧಿಯಾದ ಪಿ.ಸಿ-518  ಆನಂದ    ಹಾಗು  ಪಿ.ಸಿ-179 ಶಿವಶೇಖರ್   ಹಾಗೂ ವೀರ್ಲಗೊಲ್ಲಹಳ್ಳಿ ಗ್ರಾಮದ ಬಳಿ ಇದ್ದ ಪಂಚರನ್ನು ಕರೆದುಕೊಂಡು   ವೀರ್ಲಗೊಲ್ಲಹಳ್ಳಿ  ಗ್ರಾಮದ ಬಳಿ ಇರುವ ಉತ್ತರಪಿನಾಕಿನಿ ನದಿಯ  ಅಂಗಳಕ್ಕೆ  ಹೋದಾಗ, ಯಾರೋ  ಲಗೇಜ್ ಆಟೋದಲ್ಲಿ ಮರಳನ್ನು ತುಂಬಿಸುತ್ತಿದ್ದು, ತಮ್ಮನ್ನು ಮತ್ತು ಪೊಲೀಸ್ ಜೀಪನ್ನು ದೂರದಿಂದಲೇ ನೋಡಿ, ಮರಳು ತುಂಬಿರುವ ಲಗೇಜ್ ಆಟೋವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುತ್ತಾರೆ. ನಂತರ ಲಗೇಜ್ ಆಟೋ ಬಳಿ ಹೋಗಿ ಪರಿಶೀಲಿಸಿ ನೋಡಲಾಗಿ ಅದು BAJAJ MAXIMA ಕಂಪನಿಯ ನೀಲಿ ಬಣ್ಣದ ಲಗೇಜ್ ಆಟೋ ಆಗಿರುತ್ತೆ.    ಲಗೇಜ್ ಆಟೋವಿಗೆ  ನೊಂದಣಿ ಸಂಖ್ಯೆ  ಇರುವುದಿಲ್ಲ. ಲಗೇಜ್ ಆಟೋವಿ ನ  ಇಂಜಿನ್ BB103334  ಮತ್ತು ಚಾಸಿ ನಂ. XMD2A98AY1JWK28787X ಆಗಿರುತ್ತೆ.. ಲಗೇಜ್ ಆಟೋವಿಗೆ ಬಾಡಿ ಲೆವೆಲ್ ಗೆ ಮರಳು ತುಂಬಿರುತ್ತೆ.  ಮರಳು ತೆಗೆದು ಸಾಗಾಣಿಕೆಯನ್ನು  ಮಾಡಲು  ಸರ್ಕಾರ ನಿಷೇದಿಸಿದ್ದರೂ ಸಹಾ  ಮೇಲ್ಕಂಡ ಲಗೇಜ್ ಆಟೋದಲ್ಲಿ  ಅದರ ಮಾಲೀಕ ಹಾಗು ಚಾಲಕ ಯಾವುದೇ ಪರವಾನಗಿ ಇಲ್ಲದೇ ಕಳ್ಳತನವಾಗಿ ಖನಿಜ ಸಂಪತ್ತಾದ ಮರಳನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ  ಅಕ್ರಮವಾಗಿ ಮರಳು ಕಳವು  ಮಾಡಿರುತ್ತಾರೆ. ಮರಳು ತುಂಬಿದ  ಲಗೇಜ್ ಆಟೋವನ್ನು ರಾತ್ರಿ 3-00 ರಿಂದ 4-00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು,  ಠಾಣೆಗೆ ಬೆಳಿಗಿನ ಜಾವ 4-30 ಗಂಟೆಗೆ  ಠಾಣೆಗೆ ವಾಪಸ್ಸು ಬಂದು, ಮೇಲ್ಕಂಡ ಲಗೇಜ್ ಆಟೋವಿನ  ಮಾಲೀಕನ ಮತ್ತು ಚಾಲಕ ಮೇಲೆ ಕಲಂ: 379 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ  ಕೇಸು ದಾಖಲಿಸಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.143/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:28.05.2020 ರಂದು ಸಂಜೆ 5.30 ಗಂಟೆಗೆ ಪಿರ್ಯಾದಿದಾರರಾದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿಸಿ 14 ಗೋವಿಂದಪ್ಪ ರವರು ಠಾಣೆಗೆ ಹಾಜರಾಗಿ ಹಾಜರುಪಡಿಸಿದ ಮಾಲು ಅರೋಪಿ ಮತ್ತು ವರದಿಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಈ ದಿನ ದಿನಾಂಕ 28.05.2020 ರಂದು  ಪಿಸಿ 14 ಗೋವಿಂದಪ್ಪ ಆದ ನನ್ನನ್ನು ಗುಪ್ತ ಮಾಹಿತಿ ಸಂಗ್ರ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಠಾಣಾ ಸರಹದ್ದಿನ ಗ್ರಾಮಗಳಾದ ಆನೂರು, ಡಬರಗಾನಹಳ್ಳಿ, ಜಪ್ತಿಹೊಸಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ ಸುಮಾರು 5.00 ಗಂಟೆ ಸಮಯದಲ್ಲಿ ಚಿಕ್ಕದಾಸರಹಳ್ಳಿ ಗ್ರಾಮದಲ್ಲಿ ಮಾಹಿತಿ ಸಂಗ್ರಹದಲ್ಲಿದ್ದಾಗ ಗ್ರಾಮದ ಬಾತ್ಮೀದಾರರಿಂದ ಚಿಕ್ಕದಾಸರಹಳ್ಳಿ ಗ್ರಾಮದ ವಾಸಿ ಚಿಕ್ಕಪ್ಪಯ್ಯ ಬಿನ್ ವೆಂಕಟರಮಣಪ್ಪ ಎಂಬಾತನು ತನ್ನ ವಾಸದ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ನಾನು ಚಿಕ್ಕಪ್ಪಯ್ಯ ಬಿನ್ ವೆಂಕಟರಾಮಪ್ಪ ರವರ ಮನೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಮುಂಭಾಗ ಯಾರೋ ಇಬ್ಬರು ಆಸಾಮಿಗಳು ಮದ್ಯವನ್ನು ಸೇವನೆ ಮಾಡುತ್ತಾ ಕುಳಿತಿದ್ದ ಒಬ್ಬ ಆಸಾಮಿಯು ತನ್ನ ಬಳಿ ಇದ್ದ ಒಂದು ಕಪ್ಪು ಬಣ್ಣದ ಕವರ್ ನಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯದ ಪಾಕೇಟ್ ಗಳನ್ನು ಮಾರಾಟ ಮಾಡುತ್ತಾ ಕುಡಿಯಲು ಅನುವು ಮಾಡಿಕೊಟ್ಟಿರುವುದು ಖಚಿತವಾದ ಮೇಲೆ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ನನ್ನನ್ನು ಕಂಡು ಓಡಿ ಹೋಗಿದ್ದು, ಮದ್ಯವನ್ನು ಹಿಡಿದುಕೊಂಡು ಕುಳಿತಿದ್ದ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಚಿಕ್ಕಪ್ಪಯ್ಯ ಬಿನ್ ವೆಂಕಟರಮಣಪ್ಪ, 34 ವರ್ಷ ಆದಿಕರ್ನಾಟಕ, ಕೂಲಿ ಕೆಲಸ, ಚಿಕ್ಕದಾಸರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸದರಿ ಆಸಾಮಿಯ ಬಳಿ ಇದ್ದ ಕವರ್ ನಲ್ಲಿ ಪರಿಶೀಲಿಸಲಾಗಿ ಅದರಲ್ಲಿ ರಾಜ ವಿಸ್ಕಿ 20 ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಮೇಲೆ 35.13 ರೂ ಎಂದು ಇದ್ದು ಇವುಗಳ ಒಟ್ಟು ಬೆಲೆ 702.6 ರೂ.ಗಳಾಗಿರುತ್ತೆ, ಸ್ಥಳದಲ್ಲಿ 5 ಪ್ಲಾಸ್ಟಿಕ್ ಗ್ಲಾಸುಗಳು, 5 ಖಾಲಿ ನೀರಿನ ಪಾಕೇಟುಗಳು ಹಾಗು 90 ಎಂ.ಎಲ್ ನ ರಾಜ ವಿಸ್ಕಿಯ 5 ಖಾಲಿ ಟೆಟ್ರಾ ಪಾಕೇಟ್ ಗಳಿದ್ದು, ಮೇಲ್ಕಂಡ ಆಸಾಮಿ ಚಿಕ್ಕಪ್ಪಯ್ಯ ಬಿನ್ ವೆಂಕಟರಮಣಪ್ಪ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಮಾಲು ಮತ್ತು ಅರೋಪಿಯನ್ನು ವಶಕ್ಕೆ ಪಡೆದುಕೊಂಡು ತಮ್ಮ ವಶಕ್ಕೆ ನೀಡುತ್ತಿರುವುದನ್ನು ಪಡೆದುಕೊಂಡು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಸಿರುತ್ತೆ.