ದಿನಾಂಕ :28/11/2020 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.285/2020 ಕಲಂ:279,337 ಐ.ಪಿ.ಸಿ:-

      ದಿ: 27-11-2020 ರಂದು ರಾತ್ರಿ 7:45 ಗಂಟೆಗೆ ಪಿರ್ಯಾಧಿದಾರರಾದ ಸುರೇಶ ಬಿನ್ ಲಕ್ಷ್ಮಯ್ಯ, 32 ವರ್ಷ, ಬೋವಿ ಜನಾಂಗ, ಕೊಲಿಕೆಲಸ, ವಾಸ ಐವಾರಪಲ್ಲಿ  ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –  ದಿನಾಂಕ 27/11/2020 ರಂದು ಸಂಜೆ 6-15 ಗಂಟೆಯಲ್ಲಿ ನಾನು ಗ್ರಾಮದಲ್ಲಿರುವಾಗ ನನ್ನ ಬಾವಮೈದಾನಾದ ರಮೇಶ್ ಬಿನ್ ಚಲಪತಿ, 32 ವರ್ಷ, ಟ್ರಾಕ್ಟರ್ ಚಾಲಕ, ವಾಸ ಐವಾರಪಲ್ಲಿ ಮತ್ತು ನನ್ನ ತಂದೆಯವರಾದ ಲಕ್ಷ್ಮಯ್ಯ ಬಿನ್ ಲೇಟ್ ಅಪ್ಪಯ್ಯಪ್ಪ, 60 ವರ್ಷ ಇಬ್ಬರು, ರಮೇಶನ ಬಾಬತ್ತು ಕೆ.ಎ-40-ವೈ-1624 ಹೀರೋ ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಂಡು ಬರುತ್ತೇನೆಂದು ತಿಳಿಸಿ ಗೂಳೂರು ಕಡೆಗೆ ಹೋಗಿರುತ್ತಾರೆ. ನಂತರ ಸಂಜೆ ಸುಮಾರು 6-30 ಗಂಟೆಗೆ ಗೂಳೂರು ಪೆಟ್ರೋಲ್ ಬಂಕನಲ್ಲಿ ಕೆಲಸ ಮಾಡುವ ಪ್ರಭು ಎಂಬುವವರು ನನಗೆ ಪೋನ್ ಮಾಡಿ ನಿಮ್ಮ ಬಾವಮೈದಾನಾದ ರಮೇಶನಿಗೆ ಪೆಟ್ರೋಲ್ ಬಂಕ್ ಮುಂಭಾಗ ರಸ್ತೆಯಲ್ಲಿ ಅಪಘಾತವಾಗಿರುತ್ತದೆ ಎಂದು ತಿಳಿಸಿದ್ದು, ತಕ್ಷಣ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಬಾವಮೈದಾನಾದ ರಮೇಶನಿಗೆ ಬಲಕಾಲಿನ ಮೊಣಕಾಲಿನ ಕೆಳಗೆ ಮೂಳೆ ಮುರಿದು ರಕ್ತವಾಗಿರುತ್ತದೆ. ಹಾಗೂ ನನ್ನ ತಂದೆಗೆ ಮೂಗೇಟಾಗಿರುತ್ತದೆ. ನಂತರ ಗಾಯಳು ರಮೇಶನನ್ನು ನನ್ನ ಬಾಬತ್ತು ಕಾರಿನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ, ಚಿಕಿತ್ಸೆ ಕೊಡಿಸಿ  ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟಿರುತ್ತೇನೆ.  ನಂತರ ವಿಚಾರ ಮಾಡಿ ತಿಳಿಯಲಾಗಿ ನನ್ನ ಬಾವಮೈದನಾದ ರಮೇಶ ಬಿನ್ ಚಲಪತಿ ರವರು ತನ್ನ ಬಾಬತ್ತು ಕೆ.ಎ-40-ವೈ-1624 ದ್ವಿ ಚಕ್ರ ವಾಹನಕ್ಕೆ ಗೂಳೂರು ಪೆಟ್ರೋಲ್ ಬಂಕನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ವಾಪಸ್ ಮನೆಗೆ ಬರಲು ಪೆಟ್ರೋಲ್ ಬಂಕ್ ಮುಂಭಾಗ ಗೂಳೂರು ನಿಂದ  ಬಿಳ್ಳೂರು ಕಡೆಗೆ ಹೋಗುವ ರಸ್ತೆಯಲ್ಲಿ ದ್ವಿ ಚಕ್ರ ವಾಹನದಲ್ಲಿ ರಸ್ತೆ ದಾಟುತ್ತಿದ್ದಾಗ ಬಿಳ್ಳೂರು ಕಡೆಯಿಂದ ಬಂದ ಕೆ.ಎ-18-ಸಿ-1443 ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆ.ಎ-40-ವೈ-1624  ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಬಾವಮೈದನಾದ ರಮೇಶನಿಗೆ ಬಲಕಾಲಿನ ಮೊಣಕಾಲಿನ ಕೆಳಗೆ ಮೂಳೆ ಮುರಿದು ರಕ್ತ ಗಾಯವಾಗಿರುತ್ತದೆ, ನನ್ನ ತಂದೆ ಲಕ್ಷ್ಮಯ್ಯರವರು ರಸ್ತೆ ಮೇಲೆ ಬಿದ್ದಿದ್ದು ಬಲ ಕಾಲು ಮತ್ತು ಬಲಕೈಗೆ  ಮೂಗೇಟಾಗಿರುತ್ತದೆ. ಆದ್ದರಿಂದ ಕೆ.ಎ-18-ಸಿ-1443 ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ನನ್ನ ಭಾವಮೈದ ರಮೇಶ ಚಾಲನೆ ಮಾಡುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಕೋರತ್ತೇನೆ. ಕಾರಿನ ಚಾಲಕನ ಹೆಸರು ವಿಳಾಸ ತಿಳಿದಿರುವುದಿಲ್ಲ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

2) ಗೌರಿಬಿದನೂರು ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.302/2020 ಕಲಂ: 279,304(A) ಐ.ಪಿ.ಸಿ:-

     ದಿನಾಂಕ:27/11/2020 ರಂದು ಮದ್ಯಾಹ್ನ14-30  ಗಂಟೆಗೆ ಪಿರ್ಯಾದಿದಾರರಾದ ವೆಂಕಟೇಶ್ ಬಿನ್ ಸಂಜೀವರಾಯಪ್ಪ, 45ವರ್ಷ, ನಾಯಕ ಜನಾಂಗ, ಕೆ.ಈ.ಬಿಯಲ್ಲಿ ಕೆಲಸ, ವಾಸ ಸೇವಾಮಂದಿರಗ್ರಾಮ,ಹಿಂದೂಪುರ ತಾಲ್ಲೂಕು,ಆಂಧ್ರಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾಂಶವೇನೆಂದರೆ, ಪಿರ್ಯಾದಿದಾರರ ತಾಯಿ ಮೃತ ಚನ್ನಮ್ಮ ಕೋಂ ಸಂಜೀವರಾಯಪ್ಪ, 65 ವರ್ಷ, ನಾಯಕರು, ಸೇವಾ ಮಂದಿರ ಗ್ರಾಮ, ಹಿಂದೂಪುರ ತಾಲ್ಲೂಕು, ಅಂದ್ರಪ್ರಧೇಶ ರವರು ಈ ದಿನ ಬೆಳಿಗ್ಗೆ ಸುಮಾರು 7-00 ಗಂಟೆ ಸಮಯದಲ್ಲಿ ಗೌರೀಬಿದನೂರು ತಾಲ್ಲೂಕಿನ ಚಿಕ್ಕಕುರುಗೋಡು ಗ್ರಾಮದಲ್ಲಿ ವಾಸವಾಗಿರುವ ಪಿರ್ಯಾದಿದಾರರ ಸಂಬಂಧಿ ಅಶ್ವತ್ಥಮ್ಮ ರವರನ್ನು ನೋಡಿಕೊಂಡು ಬರಲು ಹೋಗಿದ್ದು, ಇದೇ ದಿನ ಮದ್ಯಾಹ್ನ ಸುಮಾರು     12-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರ ಸಂಬಂಧಿ ನರಸಿಂಹಮೂರ್ತಿ ರವರು ಪಿರ್ಯಾದಿದಾರರಿಗೆ ಪೋನ್ ಮಾಡಿ ನಿಮ್ಮ ತಾಯಿಗೆ ನಮ್ಮ ಗ್ರಾಮದ ಬಸ್ ನಿಲ್ದಾಣದ ಬಳಿ ಅಪಘಾತವಾಗಿರುವುದಾಗಿ ತಿಳಿಸಿದಾಗ ಪಿರ್ಯಾದಿದಾರರು ಮದ್ಯಾಹ್ನ 1-15 ಗಂಟೆಗೆ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು,  ಪಿರ್ಯಾದಿದಾರರ ತಾಯಿ ಚನ್ನಮ್ಮ ರವರು ಬೆಳಿಗ್ಗೆ ಸುಮಾರು 11-50 ಗಂಟೆ ಸಮಯದಲ್ಲಿ ಚಿಕ್ಕಕುರುಗೋಡು ಗ್ರಾಮದ ಗ್ರಾಮ ಪಂಚಾಯ್ತಿ ರಸ್ತೆ ಕಡೆಯಿಂದ ಗೌರೀಬಿದನೂರಿಗೆ ಹೋಗಲು ಚಿಕ್ಕಕುರುಗೋಡು ಬಸ್ ನಿಲ್ದಾಣದ ಬಳಿ ರಾಜ್ಯ ಹೆದ್ದಾರಿ-9 ಅನ್ನು ದಾಟುತ್ತಿದ್ದಾಗ ಹಿಂದೂಪುರ ಕಡೆಯಿಂದ ಗೌರೀಬಿದನೂರು ಕಡೆಗೆ ದ್ವಿ ಚಕ್ರ ವಾಹನ ಸವಾರ ತನ್ನ KA-04, JK-7342 MAESTRO EDGE ದ್ವಿ ಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ತಾಯಿ ಚನ್ನಮ್ಮ ರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ, ಪಿರ್ಯಾದಿದಾರರ ತಾಯಿಯ ತಲೆಗೆ ತೀವ್ರ ಸ್ವರೂಪದ ರಕ್ತಗಾಯ, ಎಡ ಕಣ್ಣಿನ ಬಳಿ, ಮೊಣಕೈ ಬಳಿ ತರಚಿದ ಗಾಯ, ಕಿವಿ ಮತ್ತು ಮೂಗಿನಲ್ಲಿ ರಕ್ತ ಬಂದಿದ್ದು ಪಿರ್ಯಾದಿದಾರರ ತಾಯಿಯನ್ನು ಸಂಬಂಧಿಗಳಾದ ಅಶ್ವತ್ಥಮ್ಮ ಹಾಗೂ ನರಸಮ್ಮ ರವರು 108 ಆಂಬುಲೆನ್ಸ್ ವಾಹನದಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದು, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದು ಮೃತ ದೇಹವು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿರುವುದಾಗಿ ಹಾಗೂ ಅಪಘಾತ ಮಾಡಿದ  ಕೆಎ-04, ಜೆ.ಕೆ-7342 ದ್ವಿ ಚಕ್ರವಾಹನ  ಮತ್ತು ದ್ವಿ ಚಕ್ರ ವಾಹನ ಸವಾರನ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ದೂರು.