ದಿನಾಂಕ :28/10/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.264/2020 ಕಲಂ: 87 ಕೆ.ಪಿ ಆಕ್ಟ್:-

          ದಿನಾಂಕ:27/10/2020 ರಂದು ಸಂಜೆ 6:00 ಗಂಟೆಗೆ ಪಿ.ಎಸ್.ಐ ರವರು ಮಾಲು, ಆರೋಪಿಗಳು, ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,   ದಿನಾಂಕ: 27/10/2020 ರಂದು ಸಂಜೆ 3-45 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಬಾಗೇಪಲ್ಲಿ ತಾಲ್ಲೂಕು ದೇವರಗುಡಿಪಲ್ಲಿ ಗ್ರಾಮದಿಂದ ಗುಂಡ್ಲಪಲ್ಲಿ ಗ್ರಾಮಕ್ಕೆ ಹೋಗುವ ದಾರಿಯಲ್ಲಿರುವ ಕೆರೆಕಟ್ಟೆಯ ಬಳಿ ಯಾರೂ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಭಾತ್ಮಿಯ ಮೇರೆಗೆ ಠಾಣಾ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40-ಜಿ-537 ರ ಜೀಪ್ ನಲ್ಲಿ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ-14 ಮುರಳಿ, ಪಿಸಿ-18 ಅರುಣ್, ಪಿಸಿ-76, ಸುರೇಶ್, ಪಿಸಿ-214 ಅಶೋಕ, ಪಿಸಿ-423 ಬಸವರಾಜು, ಪಿಸಿ-81 ಆನಂದ ರವರೊಂದಿಗೆ ಹೊರಟು ಗೂಳೂರು ಸರ್ಕಲ್ ಬಳಿ  ಇದ್ದ ಪಂಚರನ್ನು ಬರಮಾಡಿಕೊಂಡು ಅಂದರ್ ಬಾಹರ್ ಇಸ್ಪೀಟು ಜೂಜಾಟದ ಮೇಲೆ ದಾಳಿ ಮಾಡಲು ಸಹಕರಿಸುವಂತೆ ತಿಳಿಸಿ, ದೇವರಗುಡಿಪಲ್ಲಿಯಿಂದ ಗುಂಡ್ಲಪಲ್ಲಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಕೆರೆಯ ಬಳಿ ಹೋಗಿ ಜೀಪನ್ನು ನಿಲ್ಲಿಸಿ ನಾವು ಮತ್ತು ಪಂಚರ ಮರೆಯಲ್ಲಿ ನೋಡಲಾಗಿ ಯಾರೊ ಆಸಾಮಿಗಳು  ಅಂದರ್ 200/- ರೂ  ಬಾಹರ್ 200/- ರೂ  ಎಂದು ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ನಾಲ್ಕು ಜನರು ಇದ್ದು ನಾನು ಸ್ಥಳದಿಂದ ಯಾರೂ ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ನಾವುಗಳು ಸುತ್ತುವರಿದು ಅವರುಗಳ ಹೆಸರು ಮತ್ತು ವಿಳಾಸಗಳನ್ನು ಕೇಳಲಾಗಿ 1) ನರಸಿಂಹಪ್ಪ ಬಿನ್ ನಂಜಪ್ಪ, 50 ವರ್ಷ, ಬಲಜಿಗ ಜನಾಂಗ, ಕೊಲಿಕೆಲಸ, ವಾಸ ಯಲ್ಲಂಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. ಮೊ ನಂ-8088154303     2) ನಾಗರಾಜ ಬಿನ್ ಲೇಟ್ ಶ್ರೀರಂಗಪ್ಪ, 55 ವರ್ಷ, ಬಲಜಿಗ ಜನಾಂಗ, ಬೇಲ್ದಾರ್ ಕೆಲಸ, ವಾಸ ದೇವರಗುಡಿ ಪಲ್ಲಿ (ಗಡಿದಂ) ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಮೊ.ಸಂ. 9686377031,  3) ಅಂಜಿನಪ್ಪ ಬಿನ್ ಲೇಟ್ ಸುಬ್ಬನ್ನ, 50 ವರ್ಷ, ನಾಯಕ ಜನಾಂಗ, ಕೊಲಿಕೆಲಸ, ವಾಸ ದೇವರಗುಡಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು,            4) ಮುನಿಯಪ್ಪ ಬಿನ್ ಲೇಟ್ ನಾಗಪ್ಪ, 40 ವರ್ಷ, ಕುರುಬ ಜನಾಂಗ, ಕೊಲಿಕೆಲಸ, ವಾಸ ಕಾರಕೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು. ಎಂದು ತಿಳಿಸಿರುತ್ತಾರೆ.   ಇವರುಗಳು ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣವನ್ನು ಪರಿಶೀಲನೆ ಮಾಡಲಾಗಿ 4030/- ರೂ ಇರುತ್ತದೆ. ಮತ್ತು ಅವರು ಅಂದರ್ ಬಾಹರ್ ಜೂಜಾಟವಾಡಲು ಬಳಸಿದ್ದ 52 ಇಸ್ಪೀಟು ಎಲೆಗಳನ್ನು , ಒಂದು ದಿನ ಪತ್ರಿಕೆಯನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ. ಮೇಲ್ಕಂಡ 4 ಜನ ಆಸಾಮಿಗಳನ್ನು, 4030/- ರೂ ನಗದುಹಣ,  52 ಇಸ್ಪೀಟು ಎಲೆಗಳು ಮತ್ತು ಒಂದು ದಿನಪತ್ರಿಕೆಯನ್ನು  ಮುಂದಿನ ಕ್ರಮಕ್ಕಾಗಿ ಪಂಚನಾಮೆಯೊಂದಿಗೆ ನಿಮ್ಮ ವಶಕ್ಕೆ ನೀಡುತ್ತಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಠಾಣಾ ಎನ್.ಸಿ.ಆರ್ ಉಲ್ಲೇಖ ಸಂಖ್ಯೆ 628/2020 ರಂತೆ ದಾಖಲಿಸಿಕೊಂಡಿರುತ್ತೆ.  ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಆರೋಪಿತರ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಳ್ಳುವ ಸಲುವಾಗಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 28-10-2020 ರಂದು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.183/2020 ಕಲಂ: 337 ಐ.ಪಿ.ಸಿ:-

          ದಿನಾಂಕ:28/10/2020 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿಾರರಾದ ವಿಜಯಲಕ್ಷ್ಮಿ ಕೊಂ ಚಿನ್ನತಂಬಿ, 30 ವರ್ಷ, ಕ್ರಿಶ್ಚಿಯನ್ ಜನಾಂಗ, ಗೃಹಿಣಿ, ವಾಸ:# 236 ಶಂಕರಪ್ಪ, ಬಿಲ್ಡಿಂಗ್, ಗುಡ್ಡದಹಳ್ಳಿ, ಹೆಬ್ಬಾಳ, ಬೆಂಗಳೂರು ಪೊನ್: 8296787256 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತನ್ನ ಗಂಡ ಚಿನ್ನತಂಬಿ ಬಿನ್ ಕೃಷ್ಣನ್, 37 ವರ್ಷ ರವರು ಚಾಲಕರಾಗಿರುತ್ತಾರೆ. ತನ್ನ ಗಂಡ ಚಿನ್ನತಂಬಿ ರವರು ಈಗ್ಗೆ ಸುಮಾರು 2 ತಿಂಗಳಿಂದ ಮುನೀಂದ್ರ ಬಿನ್ ಅಪ್ಪಯ್ಯಣ್ಣ ಕಾಡಗಾನಹಳ್ಳಿ, ಬೆಂಗಳೂರು ರವರ ಲಾರಿಗೆ ಚಾಲಕನಾಗಿ ಕೆಲಸಕ್ಕೆ ಹೋಗುತ್ತಿದ್ದರು. ದಿನಾಂಕ 01/10/2020 ರಂದು ಬೆಳಿಗ್ಗೆ ಸುಮಾರು 6-30 ಗಂಟೆ ಕೆಲಸಕ್ಕೆ ಹೋಗುತ್ತೇನೆಂದ ಮನೆಯಲ್ಲಿ ಹೇಳಿ ಬಂದರು. ಹೀಗಿರುವಲ್ಲಿ ಅದೇ ದಿನ ದಿನಾಂಕ 01/10/2020 ರಂದು ಸಂಜೆ  ಸುಮಾರು 6-30 ಗಂಟೆಯ ಸಮಯದಲ್ಲಿ ತಾನು ತಮ್ಮ ಮನೆಯಲ್ಲಿರುವಾಗ ತನ್ನ ಗಂಡ ಚಿಕ್ಕಬಳ್ಳಾಪುರ ತಾಲ್ಲೂಕು ಯಲಗಲಹಳ್ಳಿ ಗ್ರಾಮದ ಹತ್ತಿರ ಇರುವ ಎಸ್.ಎಂ. ಸ್ಟೋನ್ ಕ್ರಸರ್ ಬಳಿ ಲಾರಿಯನ್ನು ಹತ್ತುವಾಗ ಕೆಳಕ್ಕೆ ಬಿದ್ದು, ತಲೆಗೆ ರಕ್ತಗಾಯವಾಗಿ ಬೆನ್ನಿಗೆ ಮತ್ತು ಕುತ್ತಿಗೆ ಬಳಿ ಮೂಗೇಟುಗಳು ಆಗಿರುತ್ತವೆಂದು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಬೆಂಗಳೂರುನ ವೇಗಾಸ್ ಆಸ್ಪತ್ರೆಗೆ ಕರೆದುಕೊಂಡು ಬರುವುದಾಗಿ ಎಂತ ಲಾರಿಯ ಮಾಲಿಕರು ತಿಳಿಸಿದರು ಅದರಂತೆ ತಾನು ಸದರಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ತನ್ನ ಗಂಡನನ್ನ ಆಸ್ಪತ್ರೆಗೆ ಕರೆದುಕೊಂಡು ಬಂದರು ತನ್ನ ಗಂಡನನ್ನು ನೋಡಲಾಗಿ ಮೇಲ್ಕಂಡಂತೆ ಗಾಯಗಳು ಆಗಿದ್ದವು. ವಿಚಾರಣೆ ಮಾಡಲಾಗಿ ದಿನಾಂಕ 01/10/2020 ರಂದು ಸಂಜೆ  ಸುಮಾರು 5-30 ಗಂಟೆಯ ಸಮಯದಲ್ಲಿ ಮೇಲ್ಕಂಡ ಸ್ಥಳದಲ್ಲಿ ತನ್ನ ಗಂಡ ಚಿನ್ನತಂಬಿ ರವರು ನಿಂತಿದ ಕೆಎ50-ಎ-8213 ರ ಲಾರಿಯನ್ನು ತನ್ನ ನಿರ್ಲಕ್ಷತೆಯಿಂದ ದುಡಿಕಿಂದ ಹತ್ತುವಾಗ ಕೆಳಕ್ಕೆ ಬಿದ್ದ ಪರಿಣಾಮ ಮೇಲ್ಕಂಡಂತೆ ಗಾಯಗಳು ಆಗಿದ್ದು, ಆಗ ಅಲ್ಲಿದ್ದ ನಾರಾಯಣ ಬಿನ್ ರಾಮಣ್ಣ, 30 ವರ್ಷ, ವಕ್ಕಲಿಗರು ಎಸ್.ಎಂ. ಸ್ಟೋನ್ ಕ್ರಸರ್ ನಲ್ಲಿ ರೈಟರ್, ಸಣ್ಣಪ್ಪನಹಳ್ಳಿ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲ, ಮತ್ತು ಎಚ್ಚರಪ್ಪ ಬಿನ್ ಯಲ್ಲಪ್ಪ 23 ವರ್ಷ, ಲಿಂಗಾಯ್ತ ಜನಾಂಗ, ಎಸ್.ಎಂ. ಸ್ಟೋನ್ ಕ್ರಸರ್ ನಲ್ಲಿ ರೈಟರ್ ಹೊಳೆ ಆಲೂರು ಗ್ರಾಮ, ರೋಣಾ ತಾಲ್ಲೂಕು ಗದಗ ಜಿಲ್ಲೆ ರವರು ಸ್ಥಳದಲ್ಲಿ ಉಪಚರಿಸಿ ಚಿಕಿತ್ಸೆಗಾಗಿ ನಾರಾಯಣ ಬಿನ್ ರಾಮಣ್ಣ, ರವರು ಯಾವುದೋ ಕಾರಿನಲ್ಲಿ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ಕರೆದುಕೊಂಡು ಬಂದಿರುವ ವಿಚಾರ ತಿಳಿಯಿತು. ತನ್ನ ಗಂಡ ವೇಗಾಸ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ದಿನಾಂಕ 02/10/2020 ರಂದು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಿ ಪುನಃ ಅಲ್ಲಿಂದ ದಿನಾಂಕ 08/10/2020 ರಂದು ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಂಡಿಸುತ್ತಿದ್ದು, ಈಗಲೂ ಚಿಕಿತ್ಸೆ ಪಡೆದುಕೊಳ್ಳುತ್ತಿರುತ್ತಾರೆ. ತಾನು ಗಾಯಾಳುವಿನೊಂದಿಗೆ ಇದ್ದು, ಈ ದಿನ ತಡವಾಗಿ ದೂರು ನೀಡುತ್ತಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಿಕೊಡಬೇಕೆಂದು ಕೋರಿ ನೀಡಿದ ದೂರನ್ನು ಪಡೆದುಕೊಂಡ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.