ದಿನಾಂಕ :28/07/2020 ರ ಅಪರಾಧ ಪ್ರಕರಣಗಳು

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 62/2020 ಕಲಂ. 143,144,147,148,323,324,506,504 ರೆ/ವಿ 149 ಐಪಿಸಿ :-

     ದಿನಾಂಕ: 28/07/2020 ರಂದು ಬೆಳಿಗ್ಗೆ 9-15 ಗಂಟೆಯ ಸಮಯದಲ್ಲಿ  ಹೆಚ್ ಸಿ 176 ಮುನಿರಾಜು ರವರು ಚಿಂತಾಮಣಿ  ಸರ್ಕಾರಿ  ಆಸ್ಪತ್ರೆಯಲ್ಲಿ ಗಾಯಾಳು  ನಾರಾಯಣಪ್ಪ ಬಿನ್ ಲೇಟ್ ಗಂಗುಲಪ್ಪ  48 ವರ್ಷ,  ಬೋವಿ ಜನಾಂಗ,  ಜಿರಾಯ್ತಿ,   ವೇಗಲಹಳ್ಳಿ   ಗ್ರಾಮ, ಚಿಂತಾಮಣಿ ತಾಲ್ಲೂಕು  ಮೊ ನಂ: 7996531290 ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು  ಬಂದು ಹಾಜರುಪಡಿಸಿದರ ಹೇಳಿಕೆಯ ಸಾರಾಂಶವೇನೆಂದರೆ  ನಾನು ಮೇಲ್ಕಂಡ ವಿಳಾಸದಾರನಾಗಿದ್ದು ಜಿರಾಯ್ತಿಯಿಂದ ಜೀವನಮಾಡಿಕೊಂಡಿರುತ್ತೇನೆ.  ನೆನ್ನೆ  ದಿನಾಂಕ: 27/07/2020  ರಂದು ಸಂಜೆ ಸುಮಾರು 5-30 ಗಂಟೆಯ ಸಮಯದಲ್ಲಿ  ನಾನು ಮತ್ತು ನನ್ನ  ಹೆಂಡತಿಯಾದ ವೆಂಕಟರವಣಮ್ಮ ರವರು  ನಮ್ಮ ಬಾಬತ್ತು ಜಮೀನಿನಲ್ಲಿ  ಕೆಲಸಮಾಡುತ್ತಿದ್ದಾಗ  ನಮ್ಮ ಗ್ರಾಮದ ವಾಸಿಯಾದ  ಆಂಜಿನಪ್ಪ ಬಿನ್ ಸುಬ್ಬರಾಯಪ್ಪ ರವರು  ನಮ್ಮ ಬಾಬತ್ತು  ಜಮೀನಿ ಬದುವಿನ ಬಳಿ  ಕುರಿಗಳನ್ನು ಮೇಯಿಸುತ್ತಿದ್ದಾಗ  ನಾನು  ಆಂಜಿನಪ್ಪ ರವರನ್ನು ಕುರಿತು  ಕುರಿಗಳನ್ನು ದೂರ ಹೊಡೆದುಕೊಳ್ಳುವುಂತೆ  ಹೇಳಿದಕ್ಕೆ    ಆಂಜಪ್ಪ ರವರು  ನನ್ನನ್ನು ಕುರಿತು  ಲೋಪರ್ ನನ್ನ ಮಗನೆ,   ನಿನ್ನ ತಾಯಿನೆ  ಕೇಯ, ಯಾವುದು ನಿನ್ನ ಜಮೀನಿನು   ನಿನ್ನ ಜಮೀನಿನಲ್ಲಿ  ಬಂದಾಗ ನೀನು ಕೇಳ ಬೇಕು  ಎಂದು  ಅವಾಚ್ಯ ವಾಗಿ ಬೈದು ಆತನ ಕೈಯಲ್ಲಿದ್ದ  ಕೋಲಿನಿಂದ  ನನ್ನ ಮೈ ಕೈ ಮೇಲೆ ಹೊಡೆದನು.  ಆಗ ಅಲ್ಲಿಯೇ ಇದ್ದ ನನ್ನ ಹೆಂಡತಿಯಾದ  ವೆಂಕಟರವಣಮ್ಮ ಮತ್ತು ಅಲ್ಲಿಯೇ ಪಕ್ಕದಲ್ಲಿ  ಕುರಿಗಳನ್ನು ಮೇಯಿಸುತ್ತಿದ್ದ  ನನ್ನ ಮಗ  ಶ್ರೀನಾಥ ರವರು  ಅಡ್ಡ ಬಂದಿದ್ದಕ್ಕೆ  ಗಲಾಟೆ ಶಬ್ದವನ್ನು ಕೇಳಿಸಿಕೊಂಡು ಆಂಜಿನಪ್ಪ ರವರ ತಮ್ಮನಾದ ನಾರಾಯಣಸ್ವಾಮಿ.  ,ನಾರಾಯಣಸ್ವಾಮಿ ರವರ ಮಗ ಸಂತೋಷ,  ಆಂಜಪ್ಪನ ಮಗ ಗೋವಿಂದ ನಮ್ಮ ಗ್ರಾಮದ ವೆಂಕಟರವಣಪ್ಪ  ಬಿನ್ ಸುಬ್ಬರಾಯಪ್ಪ  ರವರುಗಳು  ಆಂಜಿನಪ್ಪ ರವರೊಂದಿಗೆ ಸೇರಿಕೊಂಡು  ಅಕ್ರಮ ಗುಂಪು ಕಟ್ಟಿಕೊಂಡು  ನನ್ನ ಬಳಿಗೆ ಬಂದು ನಾರಾಯಣಸ್ವಾಮಿ ಬಿನ್ ಸುಬ್ಬರಾಯಪ್ಪ  ರವರು  ನನ್ನನ್ನು ಕೈಗಳಿಂದ ಹೊಡೆದು  ನನ್ನ ಬಟ್ಟೆಗಳನ್ನು ಹರಿದು ಹಾಕಿದನು  ಸಂತೋಷರವರು  ನನ್ನನ್ನು ಕಾಲುಗಳಿಂದ  ಒದ್ದು  ಕೆಳಕ್ಕೆ ತಳ್ಳಿದನು  ಗೋವಿಂದ ರವರು ಅಲ್ಲಿಯೇ ಬಿದ್ದಿದ  1ಕಲ್ಲುನ್ನು ತೆಗೆದುಕೊಂಡು  ನನ್ನ ಮಗ ಶ್ರೀನಾಥ ರವರ ತಲೆಯ  ಬಲ ಭಾಗದಲ್ಲಿ ಹೊಡೆದು  ರಕ್ತ ಗಾಯಉಂಟು ಮಾಡಿದನು.  ವೆಂಕಟರವಣಪ್ಪ ಬಿನ್  ಸುಬ್ಬರಾಯಪ್ಪ  ರವರು ನನ್ನ ಮಗನನ್ನು  ಕಾಲಿನಿಂದ  ಒದ್ದು  ಅಲ್ಲಿಯೇ ಬಿದ್ದಿದ  ಕೋಲನ್ನು ತೆಗೆದುಕೊಂಡು  ನನ್ನ ಮಗನ ಮೈ ಕೈ ಮೇಲೆ ಹೊಡೆದನು.   ಶಿವರಾಜ ಬಿನ್ ವೆಂಕಟರವಣಪ್ಪ ರವರು ಅಲ್ಲಿಯೇ ಬಿದ್ದಿದ್ದ  1 ಕೋಲನ್ನು ತೆಗೆದುಕೊಂಡು ನನ್ನ ಬೆನ್ನಿನ ಮೇಲೆ  ಹೊಡೆದು  ಊತ ಗಾಯವನ್ನು ಉಂಟುಮಾಡಿದನು.  ನಂತರ ಎಲ್ಲರೂ ಸೇರಿಸಿಕೊಂಡು  ನನ್ನನ್ನು  ಮತ್ತು ನನ್ನ ಮಗನನ್ನು   ಕುರಿತು ಲೋಪರ್ ನನ್ನಮಕ್ಕಳೆ  ನೀವು ಹೆಚ್ಚಿಗೆ ಮಾತನಾಡಿದರೆ  ನಿಮ್ಮನ್ನು  ಸಾಯಿಸಿಬಿಡುತ್ತೇವೆಂದು  ಪ್ರಾಣ ಬೆದರಿಕೆಯನ್ನು ಹಾಕಿದರು.  ಆಗ ಅಲ್ಲಿಯೇ ಇದ್ದ  ನನ್ನ ಹೆಂಡತಿ  ವೆಂಕಟರವಣಮ್ಮ  ಮತ್ತು  ನಮ್ಮ ಗ್ರಾಮದ  ರಾಮಾಂಜಿ  ಬಿನ್ ಚೌಡಪ್ಪ ರವರು ಅಡ್ಡ ಬಂದು ಜಗಳ ಬಿಡಿಸಿದರು.  ನಂತರ  ಗಾಯಾಗೊಂಡಿದ್ದ ನಾನು ಮತ್ತು  ನನ್ನ ಮಗ ಶ್ರೀನಾಥ ರವರು ನನ್ನ ಹೆಂಡತಿ ವೆಂಕಟರವಣಮ್ಮ  ಮತ್ತು  ನಮ್ಮ ಅತ್ತೆ ಗುರ್ರಮ್ಮರವರೊಂದಿಗೆ  108 ಅಂಬುಲೆನ್ಸ್ ನಲ್ಲಿ  ಚಿಂತಾಮಣಿ ಸರ್ಕಾರಿ   ಆಸ್ಪತ್ರೆಗೆ  ಬಂದು  ಚಿಕಿತ್ಸೆಗೆ ದಾಖಲಾಗಿರುತ್ತೇವೆ.  ಮೇಲ್ಕಂಡವರ ಮೇಲೆ ಕಾನೂನು ರೀತ್ಯ  ಕ್ರಮಜರುಗಿಸುವಂತೆ  ಕೊಟ್ಟ ಹೇಳಿಕೆಯ ಸಾರಾಂಶವಾಗಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 103/2020 ಕಲಂ. 279,337 ಐಪಿಸಿ :-

     ದಿನಾಂಕ:28.07.2020 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರಾದ ಪ್ರಕಾಶ್ ಬಿನ್ ಹನುಮಂತುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿ:27.07.2020 ರಂದು ಮದ್ಯಾಹ್ನ ಸುಮಾರು 2-00 ಗಂಟೆ ಸಮಯದಲ್ಲಿ ತಮ್ಮ ಅಣ್ಣನವರಾದ ಎ.ಹೆಚ್. ಕೃಷ್ಣಮೂರ್ತಿ ಬಿನ್ ಹನುಮಂತರೆಡ್ಡಿ 57 ವರ್ಷ ವಕ್ಕಲಿಗರು , ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಡಶಾಲೆ ಪೆರೇಸಂದ್ರರವರು ತಮ್ಮ ಬಾಬತ್ತು ಕೆಎ 40 ಹೆಚ್ 6500 ನೊಂದಣಿ ಸಂಖ್ಯೆಯ ಹೀರೋ ಹೋಂಡ ಪ್ಯಾಷನ್ ದ್ವಿ ಚಕ್ರ ವಾಹನದಲ್ಲಿ ಕಛೇರಿ ಕೆಲಸದ ನಿಮಿತ್ತ ಜಿಲ್ಲಾಖಜಾನೆಗೆ ಬಂದು ಕೆಲಸ ಮುಗಿಸಿಕೊಂಡು ವಾಪಸಂದ್ರದಲ್ಲಿರುವ ತಮ್ಮ ಮನೆಗೆ ಬಂದಿದ್ದು, ಸಂಜೆ 6-30 ಗಂಟೆ ಸಮಯದಲ್ಲಿ ಅರೂರು ಗ್ರಾಮಕ್ಕೆ ಹೋಗಲು ಕೆಎ 40 ಹೆಚ್ 6500 ನೊಂದಣಿ ಸಂಖ್ಯೆಯ ಹೀರೋ ಹೋಂಡ ಪ್ಯಾಷನ್ ದ್ವಿ ಚಕ್ರ ವಾಹನದಲ್ಲಿ ಎನ್ ಹೆಚ್ 7 ರಸ್ತೆಯ ರೆಡ್ಡಿಗೊಲ್ಲವಾರಹಳ್ಳಿ ಕ್ರಾಸ್ ನ ಸಮೀಪ ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡದ ಮುಂಭಾಗದ ಎನ್ ಹೆಚ್ 7 ರಸ್ತೆಯ ಎಡಗಡೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಂಜೆ 7-00 ಗಂಟೆ ಸಮಯದಲ್ಲಿ ಎದುರುಗಡೆಯಿಂದ  ವಿರುದ್ದ ದಿಕ್ಕಿನಲ್ಲಿ ಕೆಎ 07 ಎಸ್ 6178 ನೊಂದಣಿ ಸಂಖ್ಯೆಯ ಹೀರೋಹೋಂಡಾ ಪ್ಯಾಷನ್ ದ್ವಿ ಚಕ್ರ ವಾಹನ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಅಣ್ಣನವರು ಹೋಗುತ್ತಿದ್ದ ದ್ವಿ ಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತಮ್ಮ ಅಣ್ಣನವರು ದ್ವಿ ಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋಗಿದ್ದು, ಎರಡೂ ದ್ವಿ ಚಕ್ರ ವಾಹನಗಳು ಜಖಂಗೊಂಡಿದ್ದು, ತಮ್ಮ ಅಣ್ಣ ಕೃಷ್ಣಮೂರ್ತಿರವರಿಗೆ ಎಡ ಮುಂಗೈ ಗೆ ಮೂಳೆ ಮುರಿತದ ಗಾಯವಾಗಿದ್ದು, ಎಡದವಡೆ ಮತ್ತು ಬಲದವಡೆಗೆ ರಕ್ತ ಗಾಯವಾಗಿರುತ್ತೆಂದು ತಕ್ಷಣ ಹಿಂದುಗಡೆ ಕಾರಿನಲ್ಲಿ ಹೋಗುತ್ತಿದ್ದ ತಾನು ಮತ್ತು ತಮ್ಮ ಗ್ರಾಮದ ಮಂಜುನಾಥ ಬಿನ್ ಲೇಟ್ ಹನುಮಂತಪ್ಪ , ಎ.ರಮೆಶ ಬಿನ್ ಆವುಲಪ್ಪ ಆದೇಗಾರಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕುರವರು ತಮ್ಮ ಅಣ್ಣನನ್ನು ಉಪಚರಿಸಿ ತಮ್ಮದೇ ಕಾರಿನಲ್ಲಿ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ  ಕೊಡಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಈ ಅಪಘಾತಕ್ಕೆ ಕಾರಣನಾದ ಕೆಎ 07 ಎಸ್ 6178 ನೊಂದಣಿ ಸಂಖ್ಯೆಯ ಹೀರೋಹೋಂಡಾ ಪ್ಯಾಷನ್ ದ್ವಿ ಚಕ್ರ ವಾಹನ ಸವಾರನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 280/2020 ಕಲಂ. 379,447 ರೆ/ವಿ 34 ಐಪಿಸಿ :-

     ದಿನಾಂಕ: 28/07/2020 ರಂದು ಮದ್ಯಾಹ್ನ 1.00 ಗಂಟೆಗೆ ದೀಪಕ್ ರಾವ್ ಬಿನ್ ಪುರುಷೋತ್ತಮ್ ರಾವ್, 46 ವರ್ಷ, ಬ್ರಾಹ್ಮಣರು, ವ್ಯಾಪಾರ, ಅಂಜನಿ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಕೈವಾರ ಹೋಬಳಿ ಸಂತೇಕಲ್ಲಹಳ್ಳಿ ಗ್ರಾಮದ ಬಳಿ ದೀಪಕ್ ಟ್ರೇಡಿಂಗ್ ಕಂಪನಿ ಎಂಬ ಕ್ವಾರಿ ಇರುತ್ತೆ. ಸದರಿ ಕ್ವಾರಿಯು ಸರ್ವೇ ನಂ.218 ರಲ್ಲಿ ಇದ್ದು, ವಿಸ್ತೀರ್ಣ 6 ಎಕರೆ ಇದ್ದು ಲೀಸ್ ನಂಬರ್ 702 ಆಗಿರುತ್ತೆ. ದಿನಾಂಕ 25/06/2020 ರಂದು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ತಾನು ಕೆಲಸದ ನಿಮಿತ್ತ ನಮ್ಮ ಕ್ವಾರಿಯಿಂದ ಚಿಂತಾಮಣಿಗೆ ಬಂದಿದ್ದು, ತಮ್ಮ ಕ್ವಾರಿಯಲ್ಲಿ ಕೆಲಸ ಮಾಡುವ ಸಂತೇಕಲ್ಲಹಳ್ಳಿ ಗ್ರಾಮದ ನಾಗರಾಜ ಬಿನ್ ಕೃಷ್ಣಪ್ಪ ರವರು ಕ್ವಾರಿಯಲ್ಲಿ ಇದ್ದರು. ಅದೇ ದಿನ ಸಂಜೆ 4.00 ಗಂಟೆಗೆ ತಾನು ಕ್ವಾರಿಗೆ ಹೋಗಿ ನೋಡಲಾಗಿ ತಮ್ಮ ಕ್ವಾರಿಯ ಬಳಿ ಇದ್ದ 5 ಟ್ರ್ಯಾಕ್ಟರ್ ಲೋಡ್ ನಷ್ಟು ಚಪ್ಪಡಿ ಕಲ್ಲು ಹಾಗೂ 8 ಟ್ರ್ಯಾಕ್ಟರ್ ಲೋಡ್ ನಷ್ಟು ಬೌಲ್ಡರ್ಸ್ ಇಲ್ಲದೆ ಕಳುವಾಗಿರುತ್ತೆ. ನಂತರ ತಾನು ಕ್ವಾರಿಯಲ್ಲಿ ಕೆಲಸ ಮಾಡುವ ನಾಗರಾಜ ರವರನ್ನು ವಿಚಾರಿಸಲಾಗಿ ತಾನು ಊರಿಗೆ ಹೋಗಿದ್ದಾಗ ಮೇಲ್ಕಂಡ ಕಳ್ಳತನ ಆಗಿರುವುದಾಗಿ ತಿಳಿಸಿರುತ್ತಾರೆ. ನಂತರ ವಿಚಾರ ತಿಳಿಯಲಾಗಿ ಸಂತೇಕಲ್ಲಹಳ್ಳಿ ಗ್ರಾಮದ ವಾಸಿಗಳಾದ ಪಿಳ್ಳಪ್ಪ ಬಿನ್ ಲೇಟ್ ಮುನಿಯಪ್ಪ, ನಾಗರಾಜ ಬಿನ್ ಪಿಳ್ಳಪ್ಪ ಮತ್ತು ವೆಂಕಟೇಶ ಬಿನ್ ಪಿಳ್ಳಪ್ಪ ರವರು ಕ್ವಾರಿಯಲ್ಲಿ ಯಾರೂ ಇಲ್ಲದೆ ಇರುವುದನ್ನು ನೋಡಿ ತಮ್ಮ ಕ್ವಾರಿಗೆ ಅಕ್ರಮ ಪ್ರವೇಶ ಮಾಡಿ ಅದೇ ದಿನ ಬೆಳಿಗ್ಗೆ 11.00 ಗಂಟೆಗೆ ಯಾವುದೋ ಟ್ರ್ಯಾಕ್ಟರ್ ತೆಗೆದುಕೊಂಡು ಬಂದು ಚಪ್ಪಡಿ ಕಲ್ಲು ಹಾಗೂ ಬೌಲ್ಡರ್ಸ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ತಿಳಿದು ಬಂದಿರುತ್ತೆ. ಕಳುವಾಗಿರುವ ಮಾಲಿನ ಬೆಲೆ ಸ್ವಷ್ವವಾಗಿ ಗೊತ್ತಿರುವುದಿಲ್ಲ. ಸದರಿ ವಿಚಾರದಲ್ಲಿ ಗ್ರಾಮದ ಹಿರಿಯರು ನ್ಯಾಯಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು ಇದುವರೆಗೂ ಅವರು ನ್ಯಾಯಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿದ್ದು ಮೇಲ್ಕಂಡವರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 281/2020 ಕಲಂ. 279,337 ಐಪಿಸಿ ರೆ/ವಿ 187 ಐಎಂವಿ ಆಕ್ಟ್ :-

     ದಿನಾಂಕ: 28/07/2020 ರಂದು ಮದ್ಯಾಹ್ನ 2.15 ಗಂಟೆಗೆ ಗಂಗುಲು ಬಿನ್ ನಚ್ಚಯ್ಯ, 48 ವರ್ಷ, ಯಾದವ ಜನಾಂಗ, ಕೂಲಿಕೆಲಸ, ಕೊಮರಾಡ ಗ್ರಾಮ, ವಿಜಯನಗರಂ ಜಿಲ್ಲೆ, ಆಂದ್ರಪ್ರದೇಶ. ಹಾಲಿವಾಸ ತಿಮ್ಮಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈಗ್ಗೆ ಸುಮಾರು 4 ವರ್ಷಗಳ ಹಿಂದೆ ತಾನು, ತಮ್ಮ ಜಿಲ್ಲೆಯ ಪುಲಿಗೂಡ ಗ್ರಾಮದ ಬಿಡ್ಡಿಕ ನೀಲಾಂಬರು ಬಿನ್ ಬಿಡ್ಡಿಕ ಮಚ್ಚಯ್ಯ, 30 ವರ್ಷ ಹಾಗೂ ಇನ್ನೂ ಇತರೆ 10 ಜನರು ಚಿಂತಾಮಣಿ ತಾಲ್ಲೂಕು ತಿಮ್ಮಸಂದ್ರ ಗ್ರಾಮದ ಶಿವಣ್ಣ ಬಿನ್ ಲೇಟ್ ಮುನಿಶಾಮಪ್ಪ ರವರ ಇಟ್ಟಿಗೆ ಪ್ಯಾಕ್ಟರಿ ಕೆಲಸಕ್ಕೆ ಬಂದು ಇಲ್ಲೇ ವಾಸವಾಗಿರುತ್ತೇವೆ. ದಿನಾಂಕ 20/07/2020 ರಂದು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ತಾನು ಮತ್ತು ಬಿಡ್ಡಿಕ ನೀಲಾಂಬರು ರವರು ತಿಮ್ಮಸಂದ್ರ ಗ್ರಾಮದಲ್ಲಿ ತರಕಾರಿ ಕೊಂಡುಕೊಂಡು ಇಟ್ಟಿಗೆ ಪ್ಯಾಕ್ಟರಿಗೆ ಹೋಗಲು ನಡೆದುಕೊಂಡು ತಿಮ್ಮಸಂದ್ರ ಗ್ರಾಮದ ಕಂತಪಲ್ಲಿ ರಾಮಣ್ಣ ರವರ ಅಂಗಡಿಯ ಮುಂಭಾಗದ ರಸ್ತೆಯಲ್ಲಿ ಹೋಗುತ್ತಿದ್ದಾಗ, ಉಪ್ಪರಪೇಟೆ ಕಡೆಯಿಂದ ಬರುತ್ತಿದ್ದ ಒಂದು ದ್ವಿಚಕ್ರ ವಾಹನವನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಬಿಡ್ಡಿಕ ನೀಲಾಂಬರು ರವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ಆತನು ರಸ್ತೆಯ ಮೇಲೆ ಬಿದ್ದು ಹೋಗಿದ್ದರಿಂದ ಆತನ ತಲೆಯ ಹಿಂಭಾಗದಲ್ಲಿ ರಕ್ತಗಾಯವಾಗಿ ಕಾಲುಗಳಿಗೆ ತರಚಿದ ಗಾಯಗಳಾಗಿರುತ್ತೆ. ನಂತರ ತಿಮ್ಮಸಂದ್ರ ಗ್ರಾಮದ ಮಂಜುನಾಥ ಬಿನ್ ಮರಿಯಪ್ಪನವರ ನಾರಾಯಣಪ್ಪ ಮತ್ತು ಹರಿ ಬಿನ್ ನಾಗರಾಜ ರವರು ಬಂದಿದ್ದು, ತಾವು ಬಿಡ್ಡಿಕ ನೀಲಾಂಬರು ರವರನ್ನು ಉಪಚರಿಸುತ್ತಿದ್ದಾಗ ವಾಹನದ ಸವಾರ ವಾಹನದ ಸಮೇತ ಪರಾರಿಯಾಗಿರುತ್ತಾನೆ. ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಗೊತ್ತಿರುವುದಿಲ್ಲ. ನಂತರ ತಾನು ಗಾಯಗೊಂಡಿದ್ದ ಬಿಡ್ಡಿಕ ನೀಲಾಂಬರು ರವರನ್ನು ಚಿಂತಾಮಣಿ ನಗರದಲ್ಲಿರುವ ಸುಮ ನಸರ್ಿಂಗ್ ಹೋಂಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತೇವೆ. ನಂತರ ವೈದ್ಯರ ಸಲಹೆಯ ಮೇರೆಗೆ ಗಾಯಾಳುವನ್ನು ದಿನಾಂಕ 27/07/2020 ರಂದು ಸಂಜೆ ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತೇನೆ. ನಂತರ ವಿಚಾರ ಮಾಡಲಾಗಿ ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರನ ಹೆಸರು ರೆಹಮಾನ್, ಉಪ್ಪರಪೇಟೆ ಗ್ರಾಮದ ವಾಸಿ ಎಂದು ತಿಳಿದು ಬಂದಿರುತ್ತೆ. ತಾವು ಆಂದ್ರಪ್ರದೇಶದವರಾಗಿದ್ದು ಸದರಿ ಅಪಘಾತದ ವಿಚಾರದಲ್ಲಿ ದೂರು ನೀಡಬೇಕೆಂದು ತಮಗೆ ತಿಳಿಯದೆ ಇರುವುದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಅಪಘಾತಪಡಿಸಿ ವಾಹನದೊಂದಿಗೆ ಪರಾರಿಯಾಗಿರುವ ರೆಹಮಾನ್ ರವರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 101/2020 ಕಲಂ. 379 ಐಪಿಸಿ :-

     ದಿನಾಂಕ:24/07/2020 ರಂದು ಮದ್ಯಾಹ್ನ 13.30 ಗಂಟೆಯಲ್ಲಿ ಪಿರ್ಯಾದಿದಾರರಾದ ರಾಜು ಜಿ.ಎಸ್ ಬಿನ್ ಶ್ರೀನಿವಾಸ್ ಮೂರ್ತಿ .ಜಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ,ಅರ್ಜಿದಾರರು ಅರ್ಜಿದಾರರ ಬಾಬತ್ತು, APACHE RTR.160  KA 06 EU 6817 CHASIS NO MD634KE46F2H91622 ENGINE.NO: 0E4HF2826026, COLOUR-P-WHITE, ವಾಹನದ ಅಂದಾಜು ಬೆಲೆ: 15.000/- ರೂಗಳು ಸದರಿ ವಾಹನದೊಂದಿಗೆ ರಾತ್ರಿ 1:10 ಗಂಟೆಯ ಸಮಯದಲ್ಲಿ ನಮ್ಮ ಮನೆಯ ಮುಂದಿನ ಕಾಂಪೌಂಡ್ ಮುಂಭಾಗದಲ್ಲಿ ನಿಲ್ಲಿಸಿರುತ್ತೇನೆ ನಂತರ ಬೆಳಗಿನಜಾವ ಸುಮಾರು 04:30 ಗಂಟೆ ಸಮಯದಲ್ಲಿ ನಾನು ಹೊರಗೆ ಬಂದು ನೋಡಿದಾಗ ನನ್ನ ವಾಹನವು ಕಂಡು ಬರಲಿಲ್ಲ, ನಂತರ ನಾನು ಮತ್ತು ನಮ್ಮ ತಂದೆಯೊಂದಿಗೆ ಗೌರಿಬಿದನೂರು ನಗರದಲ್ಲಿ ಇದುವರೆವಿಗೂ ಪತ್ತೆ ಮಾಡಿ ನೋಡಲಾಗಿ ಎಲ್ಲಿಯೂ ಸಹ ವಾಹನವು ಪತ್ತೆಯಾಗಿರುವುದಿಲ್ಲ. ಆದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು ಕಳವಾಗಿರುವ ನನ್ನ ದ್ವಿಚಕ್ರ ವಾಹನ ಸಂಖ್ಯೆ KA-06 EU 6817 APACHE RTR 160 ರ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರನ್ನು ಪಡೆದು  ಠಾಣಾ ಮೊ.ಸಂ:101/2020 ಕಲಂ 379 ಐಪಿಸಿ ರೀತ್ಯಾ ಪ್ರಕರಣವನ್ನು  ದಾಖಲಿಸಿರುತ್ತೇನೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 79/2020 ಕಲಂ. 427,447 ರೆ/ವಿ 34 ಐಪಿಸಿ :-

     ದಿನಾಂಕ 27-07-2020 ರಂದು ಪಿರ್ಯಾಧಿದಾರರಾದ ಬಿ.ನಾರಾಯಣರೆಡ್ಡಿ ಬಿನ್ ಲೇಟ್ ಬಿ. ಬೈಯ್ಯಾರೆಡ್ಡಿ, 52 ವರ್ಷ, ವಕ್ಕಲಿಗರು, ಜಿರಾಯ್ತಿ, ಉಲಿಬೆಲೆ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆಯವರ ಬಾಬತ್ತು ಜಮೀನು ಸರ್ವೆ ನಂ 87/2 ರಲ್ಲಿ 1 ಎಕರೆ 14 ಗುಂಟೆ ಜಮೀನಿದ್ದು, ತಮ್ಮ ತಂದೆಯವರ ಕಾಲದಿಂದಲೂ ಸದರಿ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇವೆ. ಸದರಿ ಜಮೀನಿನಲ್ಲಿ ಹುರುಳಿ ಭೀಜ ಬಿತ್ತನೆ ಹಾಗೂ ಜೋಳ ಬಿತ್ತನೆಯನ್ನು ಮಾಡಿ ಸುಮಾರು 15 ದಿನಗಳಾಗಿರುತ್ತೆ. ಈಗೀರುವಾಗ ತಮ್ಮ ಗ್ರಾಮದ ವಾಸಿಗಳಾದ ರೆಡ್ಡಪ್ಪ ಬಿನ್ ಲೇಟ್ ಬುಡ್ಡರೆಡ್ಡಿ ಹಾಗೂ ಇತನ ತಮ್ಮನಾದ ವೆಂಕಟರೆಡ್ಡಿ ರವರುಗಳು ತಾನು ಇಲ್ಲದ ಸಮಯದಲ್ಲಿ ದಿನಾಂಕ 26-07-2020 ರಂದು ಮದ್ಯಾಹ್ನ ಸುಮಾರು 12.00 ಗಂಟೆ ಸಮಯದಲ್ಲಿ ಕೆ.ಎ-40 ಟಿ-9538 ನೊಂದಣಿ ಸಂಖ್ಯೆಯ ಟ್ರಾಕ್ಟರ್ ನ್ನು ಕರೆಯಿಸಿಕೊಂಡು ತನ್ನ ಬಾಬತ್ತು ಜಮೀನಿನೊಳಗೆ ಅಕ್ರಮ ಪ್ರವೇಶ ಮಾಡಿ ತಾನು ಭಿತ್ತನೆ ಮಾಡಿದ್ದ ಜೋಳದ ಬೆಳೆ, ಹುರುಳಿ ಭೀಜದ ಭೀತ್ತನೆಯನ್ನು ಮಾಡಿದ್ದ ಜಮೀನನ್ನು ಉಳುಮೆ ಮಾಡಿ ತನಗೆ 12,000/- ರೂ ನಷ್ಟ ಉಂಟುಮಾಡಿರುತ್ತಾರೆ. ಅದುದರಿಂದ  ಈ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 194/2020 ಕಲಂ. 143,323,324,504,506 ರೆ/ವಿ 149 ಐಪಿಸಿ :-

     ದಿನಾಂಕ:27/07/2020 ರಂದು ಸಂಜೆ 4.00 ಗಂಟೆಯಲ್ಲಿ ಪಿರ್ಯಾದಿದಾರರಾದ ವಾಸುದೇವ ಬಿನ್ ನಾಗಣ್ಣ ಕನ್ನಮಂಗಲ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ:27.07.2020 ರಂದು ಸುಮಾರು 11.30 ಗಂಟೆ ಸಮಯದಲ್ಲಿ ಇದೇ ಕನ್ನಮಂಗಲ ಗ್ರಾಮಕ್ಕೆ ಸೇರಿದ ತಮ್ಮ ತೋಟದಲ್ಲಿ ಇರುವಂತಹ ಸಮಯದಲ್ಲಿ ಇದೇ ಕನ್ನಮಂಗಲ ಗ್ರಾಮದ ವಾಸಿಗಳಾದ ಸುಶೀಲಮ್ಮ ಕೋಂ ಮುನಿರೆಡ್ಡಿ, ಅನಿತ ಬಿನ್ ಮುನಿರೆಡ್ಡಿ ರವರುಗಳು ಕುರಿಗಳನ್ನು ತಮ್ಮ ತೋಟದಲ್ಲಿ ಶುಂಠಿ ಮತ್ತು ಸೀಮೆಹುಲ್ಲು ಇದ್ದು ಇದರಲ್ಲಿ ಸುಮಾರು 20 ರಿಂದ 25 ಕುರಿಗಳನ್ನು ಬಿಟ್ಟು ಮೇಯಿಸುತಿದ್ದರು ಆಗ ತಾನು ಹೋಗಿ ತಮ್ಮ ಜಮೀನಿನಲ್ಲಿ ಏಕೆ ನಿಮ್ಮ ಕುರಿಗಳನ್ನು ಬಿಟ್ಟು ಮೇಯಿಸುತಿದ್ದೀರಿ ಅಚೆ ಹೊಡೆದುಕೊಳ್ಳಿ ಎಂದು ಕೇಳಲಾಗಿ ತನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ಬಾಸುಂಡೆಗಳು ಬರುವಂತೆ ಕೋಲಿನಿಂದ ಹೊಡೆದಿರುತ್ತಾರೆ. ಜಗಳವಾಡುತಿರುವ ಸಮಯದಲ್ಲಿ ಇದೇ ಗ್ರಾಮದ ವಾಸಿಗಳಾದ ನಾಗರಾಜ ಬಿನ್ ಚಿಕ್ಕನರಸಿಂಹಪ್ಪ ಎಂಬುವವರು ಬಂದು ಜಗಳವನ್ನು ಬಿಡಿಸಿ ಕಳುಹಿಸಿದರು ಇವರು ಕುರಿಗಳನ್ನು ತಮ್ಮ ತೋಟದಲ್ಲಿ ಬಿಟ್ಟಿರುವುದರಿಂದ ತಮ್ಮ ಬೆಳೆಯು ಹಾನಿಯಾಗಿರುತ್ತೆ. ನಂತರ ಇದೇ ದಿನ ಸುಮಾರು 12.30 ಗಂಟೆಯಲ್ಲಿ ನಮ್ಮ ಮನೆಯ ಹತ್ತಿರ ಮುನಿರೆಡ್ಡಿ ಬಿನ್ ನಾರಾಯಣಸ್ವಾಮಿ, ಮೋಹನ್ ಬಿನ್ ಮುನಿರೆಡ್ಡಿ, ಮಹೇಶ ಬಿನ್ ಮುನಿರೆಡ್ಡಿ, ಸುಶೀಲಮ್ಮ ಕೋಂ ಮುನಿರೆಡ್ಡಿ, ಸವಿತ ಬಿನ್ ಮುನಿರೆಡ್ಡಿ, ಅನಿತ ಬಿನ್ ಮುನಿರೆಡ್ಡಿ ಇವರ ಕುಟುಂಬದವರು ದೌರ್ಜನ್ಯವಾಗಿ ತಮ್ಮ ಮನೆಯ ಹತ್ತಿರ ಗಲಾಟೆಗೆ ಬಂದು ತನ್ನನ್ನು ಮತ್ತು ತನ್ನ ಕುಟಂಬದವರನ್ನು ಹೊಡೆದು ಅವಾಚ್ಯ ಶಬ್ದಗಳಿಂದ ಬೈಯ್ದು ನೀನು ಮತ್ತು ನಿಮ್ಮ ಕುಟುಂಬದವರು ಯಾರಾದರೂ ದಾರಿಯಲ್ಲಿ ಸಿಕ್ಕರೆ ನಿಮ್ಮನ್ನು ಸಾಯಿಸಿ ಹಾಕುತ್ತೇವೆ ಎಂಬುದಾಗಿ ತನಗೆ ಮತ್ತು ನಮ್ಮ ಕುಟುಂಬದವರಿಗೆ ಕೊಲೆ ಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಇನ್ನು ಮುಂದೆ ಇವರು ತಮ್ಮ ತೋಟಗಳಲ್ಲಿ ಕುರಿಗಳನ್ನು ಬಿಡದಂತೆ ತಡೆಗಟ್ಟಿ, ತನ್ನ ಮೇಲೆ ಮತ್ತು ನಮ್ಮ ಕುಟುಂಬದವರ ಮೇಲೆ ದೌರ್ಜನ್ಯವಾಗಿ ನಮ್ಮ ಮನೆಯ ಹತ್ತಿರ ಬಂದು ಗಲಾಟೆ ಮಾಡಿ ತನಗೆ ಮತ್ತು ತನ್ನ ಕುಟುಂಬಕ್ಕೆ ಕೊಲೆ ಬೆದರಿಕೆಯನ್ನು ಹಾಕಿರುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 195/2020 ಕಲಂ. 143,147,148,323,324,504,506 ರೆ/ವಿ 149 ಐಪಿಸಿ :-

     ದಿನಾಂಕ:27.07.2020 ರಂದು ಸಂಜೆ 6.00 ಗಂಟೆಯಲ್ಲಿ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದುಕೊಂಡು ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಗೆ ಹೋಗಿ ಗಾಯಾಳು ಅನಿತ ಕೋಂ ಮಂಜುನಾಥ, 25 ವರ್ಷ, ವಕ್ಕಲಿಗರು, ಗೃಹಿಣಿ, ಕನ್ನಮಂಗಲ ಗ್ರಾಮ ರವರ ಹೇಳಿಕೆಯನ್ನು ಪಡೆದುಕೊಂಡಿದ್ದ ಸಾರಾಂಶವೆನೆಂದರೆ,  ತನ್ನನ್ನು ಈಗ್ಗೆ 4 ವರ್ಷಗಳ ಹಿಂದೆ ಬೆಂಗಳೂರಿನ ವಾಸಿ ಮಂಜುನಾಥ ಬಿನ್ ರಂಗೇಗೌಡ ರವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ನಾವುಗಳು ಬೆಂಗಳೂರಿನಲ್ಲಿಯೇ ವಾಸವಾಗಿರುತ್ತೇವೆ. ಬೆಂಗಳೂರಿನಲ್ಲಿ ಕಾರೋನಾ ಕಾಯಿಲೆ ಹೆಚ್ಚಾದ ಕಾರಣ 3 ತಿಂಗಳಿನಿಂದ ತಾನು ತನ್ನ ತವರು ಮನೆಯಾದ ಕನ್ನಮಂಗಲ ಗ್ರಾಮಕ್ಕೆ ಬಂದಿರುತ್ತೇನೆ. ನಮ್ಮ ಮನೆಯಲ್ಲಿ ಕುರಿಗಳು ಇದ್ದು ಪ್ರತಿ ದಿನ ಕುರಿಗಳನ್ನು ಮೇಯಿಸಲು ತಮ್ಮ ತಾಯಿ ಸುಶೀಲಮ್ಮ ರವರು ಹೋಗುತಿದ್ದು ತಾನು ಕುರಿಗಳನ್ನು ಊರಿನಿಂದ ಆಚೆ ದಾಟಿಸುವವರಿಗೂ ಜೊತೆಯಲ್ಲಿ ಹೋಗಿ ಕುರಿಗಳನ್ನು ಊರಿನಿಂದ ಆಚೆ ದಾಟಿಸಿ ನಂತರ ಮನೆಗೆ ವಾಪಸ್ಸು ಬರುತಿರುತ್ತೇನೆ. ಎಂದಿನಂತೆ ದಿನಾಂಕ:27.07.2020 ರಂದು ಕುರಿಗಳನ್ನು ಊರಿನಿಂದ ಹೊರಗಡೆ ದಾಟಿಸಿ ಪಾಪಸ್ಸು ಮನೆಗೆ ಬರಲು ಮದ್ಯಾಹ್ನ 12.00 ಗಂಟೆಯಲ್ಲಿ ತಮ್ಮ ಗ್ರಾಮದ ಮೋರಿ ಬಳಿ ಬರುತಿದ್ದಾಗ ತಮ್ಮ ಗ್ರಾಮದ ವಾಸಿಗಳಾದ ವಾಸುದೇವ ಬಿನ್ ನಾಗಣ್ಣ, ಮುನೇಗೌಡ ಬಿನ್ ನಗಣ್ಣ, ಗೋಪಾಲ ಬಿನ್ ನಾಗಣ್ಣ, ಪಿಳ್ಳಮುನಿಯಮ್ಮ ಕೋಂ ನಾಗಣ್ಣ, ನಾಗಣ್ಣ ಮತ್ತು ಅವರ ಇಬ್ಬರು ಸೊಸೆಯಂದಿರು ಬಂದು ತನ್ನನ್ನು ಕುರಿತು ನಿಮ್ಮ ತಂದೆ ಮುನಿರೆಡ್ಡಿ ರವರದ್ದು ಜಮೀನಿನ ವಿಚಾರದಲ್ಲಿ ಜಾಸ್ತಿ ಆಯ್ತು ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ತಾನು ಏಕೆ ತನ್ನನ್ನು ಬಯ್ಯುತ್ತೀರಿ ತಮ್ಮ ತಂದೆಯವರಿಗೆ ಹೋಗಿ ಕೇಳಿ ಎಂದಾಗ ತಮಗೆ ಅಡ್ಡ ಹೇಳುತ್ತಿಯಾ ಎಂದು ಪಿಳ್ಳಮುನಿಯಮ್ಮ ರವರು ಅಲ್ಲಿಯೇ ಬಿದ್ದಿದ್ದ ಒಂದು ದೊಣ್ಣೆಯನ್ನು ತೆಗೆದುಕೊಂಡು ತನ್ನ ತಲೆಗೆ ಎಡಕೈಗೆ ಹೊಡೆದಿದ್ದು, ಅವರ ಇಬ್ಬರು ಸೊಸೆಯಂದಿರು ಅದೇ ದೊಣ್ಣೆಯನ್ನು ಕಿತ್ತುಕೊಂಡು ತನ್ನ ಎಡಕಾಲಿಗೆ ಮತ್ತು ಬೆನ್ನಿನ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ನಂತರ ಪಿಳ್ಳಮುನಿಯಮ್ಮ ರವರು ತನ್ನ ಮೈ ಮೇಲೆ ತನ್ನ ಕೈಗಳಿಂದ ಹೊಡೆದು ಕಾಲುಗಳಿಂದ ಹೊದ್ದು ನೋವುಂಟು ಮಾಡಿರುತ್ತಾಳೆ. ನಂತರ ಮೇಲ್ಕಂಡವರೆಲ್ಲರೂ ಲೋಪರ್ ಮುಂಡೆ, ಬೋಳಿ ಮುಂಡೆ ಎಂದು ಅವಾಚ್ಯ ಶಬ್ದಗಳಿಂದ ಬೈದು ನಿನ್ನ ತಂದೆ ಜಮೀನಿನ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ನಂತರ ಅಲ್ಲಿಗೆ ಬಂದ ನಮ್ಮ ಗ್ರಾಮದ ವಾಸಿಗಳಾದ ನಾಗರಾಜ ಬಿನ್ ಚಿಕ್ಕನರಸಿಂಹಯ್ಯ, ಮುನಿರಾಜು ಬಿನ್ ನಾರಾಯಣಪ್ಪ ರವರುಗಳು ಬಂದು ಜಗಳ ಬಿಡಿಸಿರುತ್ತಾರೆ. ನಂತರ ವಿಷಯ ತಿಳಿದು ಅಲ್ಲಿಗೆ ಬಂದ ತನ್ನ ತಮ್ಮ ಮಹೇಶ ರವರು ನನ್ನನ್ನು ಯಾವುದೋ ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿರುತ್ತಾರೆ. ಆದ್ದರಿಂದ ಮೇಲ್ಕಂಡವರುಗಳ ಮೇಲೆ ಕಾನೂನಿ ರೀತಿಯ ಕ್ರಮಕೈಗೊಳ್ಳಬೇಕಾಗಿ ನೀಡಿದ ಹೇಳಿಕೆಯನ್ನು ಪೆದುಕೊಂಡು ಸಂಜೆ 7.00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿರುತ್ತೆ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 84/2020 ಕಲಂ. 279,338 ಐಪಿಸಿ ರೆ/ವಿ 187 ಐಎಂವಿ ಆಕ್ಟ್ :-

     ದಿನಾಂಕ.28.07.2020 ರಂದು ಬೆಳಿಗ್ಗೆ 11.45 ಗಂಟೆಗೆ ಪಿರ್ಯಾದಿ ಸೈಯದ್ ಅಕ್ಬರ್ ಸಿದ್ದಾರ್ಥನಗರ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ.10.07.2020 ರಂದು ರಾತ್ರಿ ಸುಮಾರು 8.00 ಗಂಟೆಯಲ್ಲಿ ಬೈಪಾಸ್ ರಸ್ತೆಯಿಂದ ನಮ್ಮ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಪೂಜಮ್ಮ ದೇವಾಲಯ ಸಮೀಪ ಎದುರುಗೆ ಬರುತ್ತಿದ್ದ AP.16.BR.6255 ಸ್ಕಾರ್ಪಿಯೋ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನಗೆ ಡಿಕ್ಕಿ ಹೊಡೆದ ಪರಿಣಾಮ ಎಡಮೊಣಕಾಲುಗೆ ತೀವ್ರವಾದ ಗಾಯವಾಗಿ ಕೆಳಗೆ ಬಿದ್ದು ಹೋಗಿರುತ್ತೇನೆ. ಆ ಸಮಯದಲ್ಲಿ ವಾಹನವನ್ನು ಅದರ ಚಾಲಕ ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿರುತ್ತಾನೆ. ನಂತರ ರಸ್ತೆಯಲ್ಲಿ ಬರುತ್ತಿದ್ದ ಜನರು ತನಗೆ ಉಪಚರಿಸಿ ನಮ್ಮ ತಮ್ಮ ಸುರೇಶ್ ರವರು ಸ್ಥಳಕ್ಕೆ ಬಂದು ಗಾಯಗೊಂಡಿದ್ದ ನನ್ನನ್ನು ಯಾವುದೋ ಆಟೋದಲ್ಲಿ ಚಿಕಿತ್ಸೆ ಬಗ್ಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ನನಗೆ ಪ್ರಥಮ ಚಿಕಿತ್ಸೆ ನೀಡಿ ಕಾಲು ಮುರಿದು ಹೋಗಿದ್ದೆ ಬೇರೇ ಆಸ್ಪತ್ರೆಗೆ ಹೋಗಲು ತಿಳಿಸಿದ್ದರಿಂದ ನಾನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ದೊಡ್ಡಬಳ್ಳಾಪುರದಲ್ಲಿ ನಾಟಿ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಮಡು ಬಂದಿರುತ್ತೇನೆ. ಆದ್ದರಿಂದ ನನಗೆ ಅಪಘಟಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ಮೇಲ್ಕಂಡ ಎ.ಪಿ.16 ಬಿ ಆರ್ 6255 ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಸಲು ಕೋರಿರುತ್ತೆ. ನಾನು ಚಿಕ್ಕಬಳ್ಳಾಪುರ ಮತ್ತು ದೊಒಡ್ಡಬಳ್ಳಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ದೂರು ತಡವಾಗಿರುತ್ತೆ ಎಂತ ನೀಡಿದ ದೂರನ್ನು ಪಡೆದು ಠಾಣಾ ಮೊ.ಸಂ. 84/2020 ಕಲಂ: 279,338 ಐಪಿಸಿ ಮತ್ತು 187 ಐಎಂವಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.