ದಿನಾಂಕ :28/06/2020 ರ ಅಪರಾಧ ಪ್ರಕರಣಗಳು

  1. ಚೇಳೂರು ಪೊಲೀಸ್ ಠಾಣೆ ಮೊ.ಸಂ.39/2020 ಕಲಂ. 143,147,323,324,506 ರೆ/ವಿ 149 ಐ.ಪಿ.ಸಿ :-

          ದಿನಾಂಕ:27/06/2020 ರಂದು ಸಂಜೆ 6:00 ಗಂಟೆಗೆ ಪಿರ್ಯಾಧಿದಾರರಾದ  ನಾಗರಾಜ ಬಿನ್ ನರಸಿಂಹಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ: ಪಿರ್ಯಾಧಿದಾರರು ಬಾಗೇಪಲ್ಲಿ ತಾಲ್ಲೂಕು ಗಡ್ಡಂಪಲ್ಲಿ ಗ್ರಾಮದ ವಾಸಿಯಾಗಿದ್ದು ಸರ್ವೇ ನಂ 75 ರಲ್ಲಿ ಜಮೀನಿದ್ದು , ಈ ಜಮೀನಿನಿಂದ ಸ್ವಲ್ಪ ದೂರದಲ್ಲಿ  ಅದೇ ಗ್ರಾಮದ ವಾಸಿಯಾದ ಗೌರಮ್ಮ ಕೊಂ ಸುಬ್ಬನ್ನ ರವರ ಜಮೀನಿದ್ದು ಸದರಿ ಜಮೀನನ್ನು ಆಂಧ್ರದ ಅಮಡಗೂರು ಗ್ರಾಮದ ವಾಸಿಯಾದ ಹೈದರ್ ವಲಿ @ ಕಪ್ಪಲಾಯಪ್ಪ ರವರಿಗೆ ಮೂರು ಲಕ್ಷಕ್ಕೆ  ಭೋಗ್ಯಕ್ಕೆ ಕೊಟ್ಟಿರುತ್ತಾರೆ , ಈಗಿರುವಲ್ಲಿ ದಿನಾಂಕ:26/06/2020 ರಂದು ಸಂಜೆ 6:00 ಗಂಟೆ ಸಮಯದಲ್ಲಿ ಹೈದರ್ ವಲಿ ರವರು ನನ್ನ ತಮ್ಮನಾದ ನಾಗೇಂದ್ರ ನಿಗೆ  ಗೌರಮ್ಮ ರವರ ಜಮೀನಿಗೆ ಹೋಗಲು ನಿಮ್ಮ ಜಮೀನಿನಲ್ಲಿ ರಸ್ತೆ ಬಿಡಬೇಕೆಂದು  ತಗಾದೆ ತೆಗೆದು ಹೋಗಿದ್ದು, ನಂತರ ನಾವುಗಳು ಮನೆಯಲ್ಲಿದ್ದಾಗ  1) ಗೌರಮ್ಮ ಕೊಂ ಲೇಟ್  ಸುಬ್ಬನ್ನ ,2) ರಮೇಶ ಬಿನ್ ಲೇಟ್ ಸುಬ್ಬನ್ನ, 3)ಅನಿತಮ್ಮ ಕೊಂ ರಮೇಶ, 4) ತಿರುಪಾಲ ಬಿನ್ ರಾಮಪ್ಪ ,5) ಸುಭದ್ರ ಕೊಂ ತಿರುಪಾಲ ರವರುಗಳು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಬಂದು  ದೊಣ್ಣೆ, ಮಚ್ಚು ತೆಗೆದುಕೊಂಡು ಬಂದು  ಈ ಪೈಕಿ ರಮೇಶ್ ರವರು    ನನಗೆ ದೊಣ್ಣೆಯಿಂದ ತಲೆಗೆ  ಹೊಡೆದಿರುತ್ತಾರೆ.  ಅನಿತಮ್ಮ ರವರು ಮಚ್ಚು ಎತ್ತಿಕೊಂಡು ರಮೇಶ್ ರವರಿಗೆ ನೀಡಿ ನನಗೆ ಸಾಯಿಸಲು ಹೇಳಿರುತ್ತಾರೆ.  ಮೇಲ್ಕಂಡ ವರೆಲ್ಲರೂ ಸೇರಿಕೊಂಡು ನನಗೆ ಮತ್ತು ನನ್ನ ತಮ್ಮನಾದ  ನಾಗೇಂದ್ರನಿಗೆ ಕೈಗಳಿಂದ ಹೊಡೆದು ಮೂಗೇಟುಗಳುಂಟು ಮಾಡಿರುತ್ತಾರೆ. ಹಾಗೂ ಹೈದರ್ ವಲಿ ರವರು ಇವರಲ್ಲಿ ಯಾರಾದರೂ ಒಬ್ಬರನ್ನು   ಸಾಯಿಸಿ ನಾನು ಜೈಲಿನಿಂದ ಬಿಡಿಸಿಕೊಂಡು ಬರುತ್ತೇನೆಂದು  ಪ್ರಾಣ ಬೆದರಿಕೆ  ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಅಕ್ರಮವಾಗಿ ಗುಂಪು ಕಟ್ಟಿಕೊಂಡು  ಜಮೀನಿನಲ್ಲಿ ರಸ್ತೆ ಬಿಡಬೇಕೆಂದು ದೌರ್ಜನ್ಯದಿಂದ ವರ್ತಿಸಿ ನಮ್ಮಗಳನ್ನು  ಕೈಗಳಿಂದ ದೊಣ್ಣೆಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುವ  ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ: 39/2020 ಕಲಂ 143,147,323,324,506 ರೆ/ವಿ 149 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.253/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ :-

          ದಿನಾಂಕ: 27/06/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ವೆಂಕಟರವಣಪ್ಪ ಬಿನ್ ವೆಂಕಟೇಶಪ್ಪ, 35 ವರ್ಷ, ಭೋವಿ ಜನಾಂಗ, ಕೂಲಿಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 1.45 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ಗ್ರಾಮದ ತಮ್ಮ ಮನೆಯ ಪಕ್ಕದಲ್ಲಿ ಖಾಲಿ ಜಾಗ ಇದ್ದು, ಸದರಿ ಜಾಗದಲ್ಲಿ ತನ್ನ ತಾಯಿಯವರು ಕಲ್ಲುಗಳನ್ನು ಹಾಕಿರುತ್ತಾರೆ. ನಿನ್ನೆ ದಿನ ದಿನಾಂಕ: 26/06/2020 ರಂದು ಬಳಿಗ್ಗೆ 11.00 ಗಂಟೆ ಸಮಯದಲ್ಲಿ ತನ್ನ ಅಣ್ಣನ ಹೆಂಡತಿಯಾದ ಶ್ಯಾಮಲಮ್ಮ ಕೋಂ ಲೇಟ್ ರಾಜಣ್ಣ ರವರು ಸದರಿ ಕಲ್ಲುಗಳನ್ನು ತಳ್ಳಿ ಹಾಕುತ್ತಿದ್ದಾಗ ತನ್ನ ತಾಯಿಯವರು ಸ್ಥಳಕ್ಕೆ ಹೋಗಿ ಏಕೆ ಕಲ್ಲುಗಳನ್ನು ತಳ್ಳಿ ಹಾಕುತ್ತಿರುವುದು ಎಂದು ಕೇಳಿದ್ದಕ್ಕೆ ಮೇಲ್ಕಂಡ ಶ್ಯಾಮಲ, ಲಕ್ಷ್ಮಮ್ಮ ಕೋಂ ಗಡ್ಡಂ ವೆಂಕಟೇಶಪ್ಪ ಮತ್ತು ಗಡ್ಡಂ ವೆಂಕಟೇಶಪ್ಪ ರವರು ತನ್ನ ತಾಯಿಯ ಮೇಲೆ ಜಗಳ ತೆಗೆದು, ಅವಾಚ್ಯಶಬ್ದಗಳಿಂದ ಬೈಯ್ಯುತ್ತಿದ್ದಾಗ, ಮನೆ ಮುಂದೆ ಇದ್ದ ತಾನು ಸ್ಥಳಕ್ಕೆ ಹೋಗಿ ಏಕೆ ನಮ್ಮ ತಾಯಿಯ ಮೇಲೆ ಗಲಾಟೆ ಮಾಡುತ್ತಿರುವುದು ಎಂದು ಕೇಳಿದ್ದಕ್ಕೆ ಗಡ್ಡಂ ವೆಂಕಟೇಶಪ್ಪ ರವರು ದೊಣ್ಣೆಯಿಂದ ತನ್ನ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಶ್ಯಾಮಲ ಮತ್ತು ಲಕ್ಷ್ಮಮ್ಮ ರವರು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದ ವೆಂಕಟಸ್ವಾಮಿ ಹಾಗೂ ಮುನಿಯಪ್ಪ ರವರು ಅಡ್ಡ ಬಂದು ಜಗಳವನ್ನು ಬಿಡಿಸಿರುತ್ತಾರೆ. ನಂತರ ಮೇಲ್ಕಂಡವರು ಸ್ಥಳದಿಂದ ಹೋಗುವಾಗ ತನ್ನನ್ನು ಕುರಿತು ಇನ್ನೊಂದು ಸಲ ಈ ಜಾಗದ ತಂಟೆಗೆ ಬಂದರೆ ನಿನ್ನನ್ನು ಮುಗಿಸಿ ಬಿಡುತ್ತೇವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ತನ್ನ ಮೇಲೆ ಗಲಾಟೆ ಮಾಡಿದವರನ್ನು ಕರೆಸಿ ನ್ಯಾಯ ಪಂಚಾಯ್ತಿ ಮಾಡೋಣವೆಂದು ಗ್ರಾಮಸ್ಥರು ತಿಳಿಸಿದ್ದರಿಂದ ತಾನು ದೂರನ್ನು ನೀಡದೆ ಇದ್ದು, ಮೇಲ್ಕಂಡವರು ಪಂಚಾಯ್ತಿಗೆ ಬಾರದ ಕಾರಣ ಹಾಗೂ ತನಗೆ ಈ ದಿನ ಮೈಯಲ್ಲಿ ನೋವು ಜಾಸ್ತಿಯಾದ ಕಾರಣ ಈ ದಿನ ಚಿಕಿತ್ಸೆಗಾಗಿ ದಾಖಲಾಗಿ ತನ್ನ ಹೇಳಿಕೆಯನ್ನು ನೀಡುತ್ತಿದ್ದು, ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೆಳಿಕೆಯ ದೂರಾಗಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.105/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 27/06/2020 ರಂದು ಮದ್ಯಾಹ್ನ 2-15 ಗಂಟೆಗೆ ಘನ ನ್ಯಾಯಾಲಯದ ಕರ್ತವ್ಯ ಪಿಸಿ 89 ರವರು ಠಾಣೆಗೆ ಹಾಜರಾಗಿ ಪ್ರಕಣವನ್ನು ದಾಖಲಿಸಿಕೊಳ್ಳಲು ಅನುಮತಿಯನ್ನು ಘನ ನ್ಯಾಯಾಲಯವು ನೀಡಿದ್ದನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ದಿನಾಂಕ 25/06/2020 ರಂದು ಸಂಜೆ 4-15 ಗಂಟೆಗೆ ಪಿರ್ಯಾಧಿದಾರರು ಡಿಸಿಬಿ-ಸಿಇಎನ್ ಪೊಲೀಸ್ ಠಾಣೆ ಹೆಚ್.ಸಿ 85 ರವರು ಠಾಣೆಗೆ ಹಾಜರಾಗಿ ಆರೋಪಿತ, ಮಾಲನ್ನು ಅಸಲು ಮಹಜರ್ ನೊಂದಿಗೆ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಮ್ಮ ಠಾಣೆಯ ಇನ್ಸ್ ಪೆಕ್ಟರ್ ರವರ ಆದೇಶದಂತೆ ತಾನು ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಡಿಬಂಡೆ ಠಾಣಾ ಸರಹದ್ದಿನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾಗ ಈ ದಿನ ದಿನಾಂಕ 25/06/2020 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯಂತೆ ಕೆರೇನಹಳ್ಳಿ ಗ್ರಾಮದ ಸೀನಪ್ಪ ಬಿನ್ ತಿಮ್ಮಣ್ಣ ಎಂಬುವರು ಅವರ ಚಿಲ್ಲರೆ ಅಂಗಡಿಯ ಮುಂದೆ Bagpiper deluxe Whisky  180 ML ಸಾಮರ್ಥ್ಯದ 12 ಟೆಟ್ರಾ ಪ್ಯಾಕೇಟ್ ಗಳನ್ನು ಒಟ್ಟು 2 ಲೀಟರ್ 160 ಎಂಎಲ್ ಮದ್ಯವನ್ನು ಇಟ್ಟುಕೊಂಡು ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದಾಗ ಪಂಚಾಯ್ತಿದಾರರ ಸಮಕ್ಷಮ ದಾಳಿ ಮಾಡಿದ್ದು, ಸದರಿ ಮದ್ಯವನ್ನು ಮತ್ತು Bagpiper deluxe Whisky  180 ML ಸಾಮರ್ಥ್ಯದ 2 ಖಾಲಿ  ಟೆಟ್ರಾ ಪ್ಯಾಕೇಟ್, 2 ಪ್ಲಾಸ್ಟಿಕ್ ಗ್ಲಾಸ್, ಒಂದು ಲೀಟರ್ ಸಾಮರ್ಥ್ಯದ ಖಾಲಿ ನೀರಿನ ಬಾಟಲ್ ಗಳನ್ನು ಅಮಾನತ್ತು ಪಡಿಸಿಕೊಂಡಿದ್ದು, ಆರೋಪಿತನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ ದೂರು ಆಗಿರುತ್ತೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.66/2020 ಕಲಂ. 279,337,304(ಎ) ಐ.ಪಿ.ಸಿ:-

          ದಿನಾಂಕ 27-06-2020 ರಂದು ಬೆಳಗ್ಗೆ 06.00 ಗಂಟೆಗೆ ಶ್ರೀ ಎಂ.ನರಸಿಂಹಪ್ಪ ಬಿನ್ ವೆಂಕಟರಾಯಪ್ಪ, 50 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ವಾಸ ಬೂರ್ಲಪಲ್ಲಿ ಗ್ರಾಮ, ಪಿ.ಟಿ.ಎಂ ಮಂಡಲಂ, ತಂಬಾಳ್ಳಾಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ, ಆಂದ್ರಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈಗ್ಗೆ ಮೂರು ದಿನಗಳ ಹಿಂದೆ ತಾನು, ತನ್ನ ಹೆಂಡತಿಯಾದ ವೆಂಕಟಲಕ್ಷ್ಮೀ, ಮಕ್ಕಳಾದ ಭಾವನಾ, ಭುವನೇಶ್ವರಿ ರವರು ತನ್ನ ಹೆಂಡತಿಯ ಸೋದರ ಮಾವನಾದ ಚಿಂತಾಮಣಿ ತಾಲ್ಲೂಕು ದಿಗವ ಬಸಾಪುರ ಗ್ರಾಮದ ವೆಂಕಟರವಣಪ್ಪ ರವರ ಮನೆಗೆ ಬಂದಿದ್ದು, ದಿನಾಂಕ 26-06-2020 ರಂದು ಬೆಳಗ್ಗೆ ನಾವುಗಳು ತಮ್ಮ ಊರಿಗೆ ಹೋಗಲು ತಯಾರಾದಾಗ ವೆಂಕಟರವಣಪ್ಪ ತನ್ನ ಬಾಬತ್ತು ಕೆ.ಎ-40 ಎ-2380 ನೊಂದಣಿ ಸಂಖ್ಯೆಯ ಆಪೇ ಆಟೋದಲ್ಲಿ ಬಿಡುವುದಾಗಿ ತಿಳಿಸಿದ್ದರಿಂದ ನಾವು ಆಟೋದಲ್ಲಿ ಕುಳಿತುಕೊಂಡಿದ್ದು, ಮುಂದಿನ ಸೀಟ್ ನಲ್ಲಿ ವೆಂಕಟರವಣಪ್ಪ ಮತ್ತು ತನ್ನ ಹಿರಿಯ ಮಗಳಾದ 17 ವರ್ಷ ವಯಸ್ಸಿನ ಭಾವನ ಕುಳಿತುಕೊಂಡಿದ್ದು ವೆಂಕಟರವಣಪ್ಪ ಆಟೋ ಚಾಲನೆ ಮಾಡುತ್ತಿದ್ದನು. ಎಲ್ಲರೂ ಆಟೋದಲ್ಲಿ ಚಿಂತಾಮಣಿ-ಚೇಳೂರು ರಸ್ತೆಯ ಹೊಸಹುಡ್ಯ ಕ್ರಾಸ್ ನ ಕುಶಾವತಿ ಕಾಲುವೆ ಬಳಿ ಬೆಳಗ್ಗೆ 11.00 ಗಂಟೆ ಸಮಯದಲ್ಲಿ ಹೋಗುತ್ತಿದ್ದಾಗ ವೆಂಕಟರವಣಪ್ಪ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವಾಗ ಮುಂದೆ ಕುಳಿತಿದ್ದ ತನ್ನ ಮಗಳು ಭಾವನಾ ತಾನು ವಾಹನ ಚಲಾಯಿಸುವುದಾಗಿ ಏಕಾಏಕಿ ಹ್ಯಾಂಡಲ್ ಹಿಡಿದಿದ್ದರಿಂದ ಆಟೋ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿಬಿದ್ದ ಪರಿಣಾಮ ಆಟೋ ಮುಂಬಾಗದ ಗ್ಲಾಸ್ ಒಡೆದು ಜಖಂಗೊಂಡು ಭಾವನಾಳಿಗೆ ಎಡಕಾಲು ಮುರಿದು ತಲೆಗೆ ಗಾಯವಾಗಿ ಮೈಮೇಲೆ ಮೂಗೇಟು ಆಗಿದ್ದು ತನಗೆ ಎಡಭಾಗದ ಹಣೆಗೆ ಗಾಯವಾಗಿರುತ್ತದೆ. ತನ್ನ ಹೆಂಡತಿ ವೆಂಕಟಲಕ್ಷ್ಮೀಗೆ ಎಡಕಾಲಿಗೆ ಗಾಯವಾಗಿದ್ದು ಆಟೋ ಚಾಲನೆ ಮಾಡುತ್ತಿದ್ದ ವೆಂಕಟರವಣಪ್ಪನಿಗೆ ಎಡ ಮೊಣಕಾಲಿಗೆ ಗಾಯವಾಗಿರುತ್ತದೆ. ಆದರೆ ತನ್ನ ಕಿರಿಯ ಮಗಳಾದ ಭುವೇಶ್ವರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲಾ. ಕೂಡಲೇ ಅಲ್ಲಿಗೆ ಬಂದ ಬುರುಡಗುಂಟೆ ಗ್ರಾಮದ ವೆಂಕಟರವಣಪ್ಪ, ನಾಗರಾಜು ಹಾಗೂ ದಿಗವಾ ಬಸಾಪುರ ಗ್ರಾಮದ ವಲೀ ರವರು ಉಪಚರಿಸಿದ್ದು, ಎಲ್ಲರೂ 108 ಅಂಬ್ಯೂಲೇನ್ಸ್ ವಾಹನದಲ್ಲಿ ಚಿಂತಾಮಣಿ ಆಸ್ವತ್ರೆಗೆ ಬಂದು ಅಲ್ಲಿಂದ ಕೋಲಾರದ ಆರ್.ಎಲ್. ಜಾಲಪ್ಪ ಆಸ್ವತ್ರೆಗೆ ದಾಖಲಾಗಿರುತ್ತೇವೆ. ಆದರೆ ಸಂಜೆ 04.30 ಗಂಟೆ ಸಮಯದಲ್ಲಿ ಭಾವನಾ ಆಸ್ವತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ. ತಾನು ಮತ್ತು ತಮ್ಮ ಕಡೆಯವರು ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರು ನೀಡುತ್ತಿದ್ದು, ಅಪಘಾತಪಡಿಸಿದ ಆಟೋ ಚಾಲಕ ವೆಂಕಟರವಣಪ್ಪ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.144/2020 ಕಲಂ. 279 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:27/06/2020 ರಂದು ಪಿರ್ಯಾದಿದಾರರಾದ ರವಿಶಂಕರ್ ಬಿನ್ ನಂಜುಂಡಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ದಿನಾಂಕ: 27/06/2020 ರಂದು ಮದ್ಯಾಹ್ನ 3:50 ಗಂಟೆಯ ಸಮಯದಲ್ಲಿ ಕೆಎ-50, ಜಡ್-0811 ಮಾರುತಿ ಸ್ವಿಪ್ಟ್ ಕಾರಿನಲ್ಲಿ ಅಲ್ಲೀಪುರದಿಂದ ತೊಂಡೇಬಾವಿಗೆ ಹೋಗುವಾಗ ಇಂದಿರನಗರದಲ್ಲಿ ಕೆಎ-03 ಎಡಿ- 3930 ಟಾಟಾ ಇಂಡಿಕಾ ಕಾರಿನ ಚಾಲಕ ಜೋರಾಗಿ ಬಂದು ನನ್ನ ಕಾರಿಗೆ  ಡಿಕ್ಕಿ ಹೊಡೆಸಿದ ಪರಿಣಾಮ ಕಾರಿನ ಬಲ ಭಾಗದ ಡೊರ್ ಪುಲ್ ಡ್ಯಾಮೆಜ್ ಆಗಿದ್ದು ಅದನ್ನು ನೋಡಿಯು ಇಂಡಿಕಾ ಕಾರಿನವರು ಕಾರನ್ನು ನಿಲ್ಲಿಸದೆ ಹೋಗುತ್ತಿದ್ದಾಗ ನಾನು ಬೇವಿನಹಳ್ಳಿಯ ನನ್ನ ಸ್ನೇಹಿತರಿಗೆ ಹೇಳಿದಾಗ ಅವರು ಕಾರನ್ನು ತಡೆದು ನಿಲ್ಲಿಸಿದ್ದು ಆದ್ದರಿಂದ ಮೇಲ್ಕಂಡ ಕಾರಿನ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.145/2020 ಕಲಂ. 379 ಐ.ಪಿ.ಸಿ:-

          ದಿನಾಂಕ:27/06/2020 ರಂದು ಪಿ.ಎಸ್.ಐ ಶ್ರೀ ಲಕ್ಷ್ಮಿನಾರಾಯಣ ರವರು ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ 27/06/2020 ರಂದು ಮದ್ಯಾಹ್ನ 3-15 ಗಂಟೆಯಲ್ಲಿ ನಾನು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ವೆಂಕಟಾಪುರ ಗ್ರಾಮದ ಸರ್ಕಾರಿ ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು ಟ್ರಾಕ್ಟರನ್ನು ನಿಲ್ಲಿಸಿಕೊಂಡು  ಕೆರೆಯ ಅಂಗಳವನ್ನು ಅಗೆದು ವಿರೂಪಗೊಳಿಸಿ ಸರ್ಕಾರಿ ಖನಿಜ ಸಂಪತ್ತಾದ ಮರಳನ್ನು ಕಳ್ಳತನ ಮಾಡಿ ಟ್ರಾಕ್ಟರಿನ ಟ್ರಾಲಿಗೆ ತುಂಬಿಸುತ್ತಿರುವುದಾಗಿ ಬಾತ್ಮಿದಾರರಿಂದ ಮಾಹಿತಿ ಬಂದಿದ್ದರ ಮೇರೆಗೆ ಕೂಡಲೇ ಠಾಣೆಯಲ್ಲಿದ್ದ ಪಿಸಿ 537, ಆನಂದ್ ಕುಮಾರ್, ಪಿಸಿ 175 ನವೀನ್ ಕುಮಾರ್, ಪಿಸಿ 238 ದಿಲೀಪ್ ಕುಮಾರ್ ರವರನ್ನು ಹಾಗೂ ಜೀಪ್ ಚಾಲಕ ಎಪಿಸಿ 120, ನಟೇಶ್ ರವರನ್ನು ಮತ್ತು ಪಂಚರನ್ನು ಕರೆದುಕೊಂಡು ಸರ್ಕಾರಿ ಜೀಪ್ ಸಂಖ್ಯೆ ಕೆಎ40-ಜಿ-395 ರಲ್ಲಿ  ವೆಂಕಟಾಪುರ ಗ್ರಾಮದ ಸರ್ಕಾರಿ ಕೆರೆಯ ಅಂಗಳಕ್ಕೆ ಹೋಗುವಷ್ಟರಲ್ಲಿ ಅಲ್ಲಿದ್ದವರು ಸ್ವಲ್ಪ ದೂರದಿಂದಲೇ ಪೊಲೀಸ್ ಜೀಪ್ ನಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಮರಳು ತುಂಬುತ್ತಿದ್ದ ಟ್ರಾಕ್ಟರ್ ಮತ್ತು ಟ್ರಾಲಿಯನ್ನು ಕೆರೆಯ ಅಂಗಳದಲ್ಲೇ ಬಿಟ್ಟು ಮರಳು ತುಂಬಲು ತಂದಿದ್ದ ಪರಿಕರಗಳೊಂದಿಗೆ ಓಡಿ ಪರಾರಿಯಾದರು. ನಾವು ಪಂಚರು ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ HMT 3522 ಟ್ರ್ಯಾಕ್ಟರ್ ಇಂಜಿನ್ ಆಗಿದ್ದು ಆರ್.ಟಿ.ಓ ನೊಂದಣಿ ಸಂಖ್ಯೆ ಇರುವುದಿಲ್ಲ ಇಂಜಿನ್ ಹಳದಿ ಮತ್ತು ಕೇಸರಿ ಬಣ್ಣದಿಂದ ಕೂಡಿದ್ದು.ಇಂಜಿನ್ ನಂ: 12457 ಆಗಿದ್ದು ಚಾರ್ಸಿ ನಂ:  PKWM 13119 ಆಗಿರುತ್ತದೆ. ಇದರ ಟ್ರಾಲೀಯನ್ನು ಪರಿಶೀಲಿಸಲಾಗಿ ನೀಲಿ ಬಣ್ಣದ ಟ್ರಾಲೀಯಾಗಿದ್ದು ಇದರ ಮೇಲೆ ಆರ್.ಟಿ.ಓ ನೊಂದಣಿ ಸಂಖ್ಯೆ ಇರುವುದಿಲ್ಲ. ಸದರಿ ಟ್ರಾಕ್ಟರಿನ ಟ್ರಾಲಿಯ ತುಂಬ ಮರಳು ತುಂಬಿದ್ದು ಅಕ್ರಮ ಮರಳು ಸಾಗಾಣಿಕೆಯಾದ್ದರಿಂದ ಮಾಲೀಕ ಟ್ರ್ಯಾಕ್ಟರ್ ನ್ನು ಬಿಟ್ಟು ಪರಾರಿಯಾಗಿರುತ್ತಾರೆ. ಸದರಿ ಟ್ರ್ಯಾಕ್ಟರಿನ ಚಾಲಕ ಮತ್ತು ಮಾಲೀಕ ಯಾವುದೇ ಪರವಾನಗಿ ಇಲ್ಲದೇ ಸರ್ಕಾರಿ ಖನಿಜ ಸಂಪತ್ತಾದ ಮರಳನ್ನು ಕಳ್ಳತನವಾಗಿ ಸಾಗಿಸಲು ಟ್ರ್ಯಾಕ್ಟರ್ ಟ್ರಾಲೀಗೆ ತುಂಬುತ್ತಿದ್ದರಿಂದ ಸದರಿ ಮೇಲ್ಕಂಡ ಟ್ರ್ಯಾಕ್ಟರ್ ಮತ್ತು ಟ್ರಾಲೀಯನ್ನು ಪಂಚರ ಸಮಕ್ಷಮದಲ್ಲಿ ಸಂಜೆ 4-00 ಗಂಟೆಯಿಂದ 5-00 ಗಂಟೆಯವರೆಗೆ ಮಹಜರು ಮಾಡಿ ಮರಳು ತುಂಬಿದ್ದ ಮೇಲ್ಕಂಡ ಟ್ರಾಕ್ಟರ್ ಮತ್ತು ಟ್ರಾಲಿಯನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು ಮಂಚೇನಹಳ್ಳಿ ಪೊಲೀಸ್ ಠಾಣೆಯ ಬಳಿ ತಂದು ನಿಲ್ಲಿಸಿದ್ದು ಸದರಿ ಟ್ರಾಕ್ಟರ್ ಮತ್ತು ಟ್ರಾಲಿಯ ಚಾಲಕ ಮತ್ತು ಮಾಲೀಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರು.