ದಿನಾಂಕ :28/05/2020 ರ ಅಪರಾಧ ಪ್ರಕರಣಗಳು

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.45/2020 ಕಲಂ. 323,324,447,504,506 ರೆ/ವಿ 34 ಐ.ಪಿ.ಸಿ:-

          ಈ ದಿನ ದಿನಾಂಕ 28/05/2020 ರಂದು ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಗಾಯಾಳು ರವಿಂದ್ರ ಬಿನ್ ವೆಂಕಟಸ್ವಾಮಿ ರವರ ಹೇಳಿಕೆಯನ್ನು ಠಾಣೆಯ ಹೆಚ್.ಸಿ 176 ರವರು ಪಡೆದುಕೊಂಡು ಬಂದು ಹಾಜರುಪಡಿಸಿದರ ಸಾರಂಶವೇನೆಂದರೆ ಗಾಯಾಳು ರವಿಂದ್ರ ರವರು ತಮ್ಮ ಬಾಬತ್ತು ತಮ್ಮ ಗ್ರಾಮದಲ್ಲಿ ಇರುವ ಖಾಲಿ ನಿವೇಶನದಲ್ಲಿ ತಾವು ಸುಮಾರು 50 ವರ್ಷಗಳಿಂದ  ಅನುಭೋಗದಲ್ಲಿ ಇದ್ದು ಸದರಿ ಖಾಲಿ ಜಾಗದಲ್ಲಿ ತಾವು ಮನೆಯನ್ನು ಕಟ್ಟಲು ಪಾಯವನ್ನು ಹಾಕಿದ್ದು ಹೀಗಿರುವಲ್ಲಿ ನಿನ್ನೆ ದಿನ ದಿನಾಂಕ 27/05/2020 ರಂದು ತಮ್ಮ ಗ್ರಾಮದ ವಾಸಿಯಾದ ನಾರಾಯಣಸ್ವಾಮಿ ಬಿನ್ ಮುನಿಶಾಮಿ ರವರು ತಮ್ಮ ಬಾಬತ್ತು ಹೊಸದಾಗಿ ನಿರ್ಮಿಸಿರುವ ಪಾಯದ ಬಳಿ ತಮ್ಮ ಜಾಗದಲ್ಲಿ ಚಪ್ಪಡಿ ಕಲ್ಲುಗಳನ್ನು ಹಾಕಿ ಚಪ್ಪರವನ್ನು ನಿರ್ಮಿಸಿದ್ದು ಈ ವಿಚಾರದಲ್ಲಿ ತಾನು ನಾರಾಯಣಸ್ವಾಮಿ ರವರನ್ನು ಏಕೆ ನಮ್ಮ ಬಾಬತ್ತು ಜಾಗದಲ್ಲಿ ಚಪ್ಪಡಿ ಕಲ್ಲುಗಳನ್ನು ಹಾಕಿರುವುದು ಎಂದು ನಿನ್ನೆ ಸಂಜೆ 6-00 ಗಂಟೆ ಸಮಯದಲ್ಲಿ ತಾನು ಕೇಳಿದ್ದಕ್ಕೆ ನಾರಾಯಣಸ್ವಾಮಿ ಏನೂ ಮಾತನಾಡದೆ ಹೊರಟು ಹೋಗಿದ್ದು ನಂತರ ನಿನ್ನೆ ದಿನ ದಿನಾಂಕ 27/05/2020 ರಂದು ತಾನು ತಮ್ಮ ಮನೆಯ ಮುಂದೆ ಕುಳಿತುಕೊಂಡಿದ್ದಾಗ ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ನರೇಶ ಬಿನ್ ನಾರಾಯಣಸ್ವಾಮಿ ಮತ್ತು ನರಸಿಂಹಪ್ಪ ಬಿನ್ ನಾರಾಯಣಸ್ವಾಮಿ ರವರು ತಮ್ಮ ಮನೆಯ ಬಳಿಗೆ ಬಂದು ನರೇಶ ರವರು ಏಕಾಏಕಿ ತನ್ನನ್ನು ಕುರಿತು ಏನೋ ಲೋಪರ್ ನನ್ನ ಮಗನೆ ನಾವು ನಮ್ಮ ಜಾಗದಲ್ಲಿ ಚಪ್ಪಡಿಗಳನ್ನು ಹಾಕಿದರೆ ನಿನಗೇನು ಎಂದು ಅವಾಚ್ಯವಾಗಿ ಬೈದು ತನ್ನ ಗಲ್ಲಾಪಟ್ಟಿಯನ್ನು ಹಿಡಿದು ಎಳೆದಾಡಿ ತನ್ನನ್ನು ಕೈಗಳಿಂದ ಹೊಡೆದಿದ್ದು ನರಸಿಂಹಪ್ಪ ರವರು ಅಲ್ಲಿಯೇ ಇದ್ದ ಒಂದು ಕಲ್ಲನ್ನು ತೆಗೆದುಕೊಂಡು ತನ್ನ ಹಣೆಯ ಬಲ ಭಾಗದಲ್ಲಿ ಹೊಡೆದು ರಕ್ತಗಾಯವನ್ನು ಉಂಟುಮಾಡಿದ್ದು ಆಗ ಗಲಾಟೆಯ ಶಬ್ದವನ್ನು ಕೇಳಿಸಿಕೊಂಡು ನಾರಾಯಣಸ್ವಾಮಿಯು ಅಲ್ಲಿಗೆ ಬಂದು ಅಲ್ಲಿಯೇ ಬಿದ್ದಿದ್ದ ಒಂದು ಕೋಲನ್ನು ತೆಗೆದುಕೊಂಡು ತನ್ನ ಎಡ ಮುಂಗಾಲಿನ ಮೇಲೆ ಮೈ ಕೈ ಮೇಲೆ ಹೊಡೆದು ನಂತರ ಮೂರು ಜನರು ಸೇರಿ ತನ್ನನ್ನು ಕುರಿತು ಜಾಗದ ವಿಚಾರದಲ್ಲಿ ಏನಾದರು ತಗಾದೆಮಾಡಿದರೆ ನಿನ್ನನ್ನು ಸಾಯಿಸಿಬಿಡುತ್ತೇವೆ ಎಂದು ಪ್ರಾಣ ಬೆದರಿಕೆಯನ್ನು ಹಾಕಿರುವುದಾಗಿ ನೀಡಿರುವ ಹೇಳಿಕೆಯಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.219/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ: 27/05/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಬಿ.ನಾಗರಾಜು ಬಿನ್ ಲೇಟ್ ಬೊಮ್ಮಪ್ಪ, 58 ವರ್ಷ, ಗೊಲ್ಲರು, ಜಿರಾಯ್ತಿ, ಬಂದಾರ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 9.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 27/05/2020 ರಂದು ಸಂಜೆ 5.30 ಗಂಟೆ ಸಮಯದಲ್ಲಿ ತಮ್ಮ ತಂದೆಯವರು ತನಗೆ ನೀಡಿರುವ ಜಮೀನಿನಲ್ಲಿ ತನ್ನ ತಮ್ಮನಾದ ನಾರಾಯಣಸ್ವಾಮಿ ಮತ್ತು ಆತನ ಹೆಂಡತಿಯಾದ ಮಂಗಳಗೌರಮ್ಮ ರವರು ನೀಲಗಿರಿ ಮರಗಳನ್ನು ಕಟಾವು ಮಾಡುತ್ತಿದ್ದಾಗ ತಾನು ಮತ್ತು ತನ್ನ ಹೆಂಡತಿಯಾದ ಪಾರ್ವತಮ್ಮ ರವರು ಸ್ಥಳಕ್ಕೆ ಹೋಗಿ ಏಕೆ ಜಮೀನಿನಲ್ಲಿ ಮರಗಳನ್ನು ಕಟಾವು ಮಾಡುತ್ತಿರುವುದು ಎಂದು ಕೇಳಿದ್ದಕ್ಕೆ ನಾರಾಯಣಸ್ವಾಮಿ ಮತ್ತು ಆತನ ಹೆಂಡತಿ ಮಂಗಳಗೌರಮ್ಮ ರವರು ತಮ್ಮ ಮೇಲೆ ಜಗಳ ತೆಗೆದು, ಅವಾಚ್ಯವಾಗಿ ಬೈದು, ಆ ಪೈಕಿ ನಾರಾಯಣಸ್ವಾಮಿ ರವರು ಸ್ಥಳದಲ್ಲಿ ಬಿದ್ದಿದ್ದ ನೀಲಗಿರಿ ದೊಣ್ಣೆಯಿಂದ ತನ್ನ ಕೈ ಕಾಲುಗಳಿಗೆ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾನೆ. ಅದೇ ದೊಣ್ಣೆಯಿಂದ ತನ್ನ ಹೆಂಡತಿಯ ಮುಖಕ್ಕೆ ಹೊಡೆದಾಗ ತನ್ನ ಹೆಂಡತಿಯ ಬಾಯಿಯಲ್ಲಿನ ಹಲ್ಲಿಗೆ ಗಾಯವಾಗಿ ರಕ್ತ ಬಂದಿರುತ್ತೆ. ಅವರಿಬ್ಬರೂ ಕೈಗಳಿಂದ ತಮ್ಮನ್ನು ಎಳೆದಾಡಿ, ಕೈಗಳಿಂದ ಮೈ ಮೇಲೆ ಹೊಡೆದು, ಮೈ ಕೈ ನೋವನ್ನುಂಟು ಮಾಡಿರುತ್ತಾರೆ. ಹಾಗೂ ಸದರಿ ಜಮೀನಿನ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸಿ ಬಿಡುವುದಾಗಿ ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದ ನಾಣ್ಯವತಿ ಹಾಗೂ ವಿಜಯಮ್ಮ ರವರು ಬಂದು ಮೇಲ್ಕಂಡವರಿಂದ ತಮ್ಮನ್ನು ಬಿಡಿಸಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.