ದಿನಾಂಕ : 28/03/2020 ರ ಅಪರಾಧ ಪ್ರಕರಣಗಳು

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 28/2020 ಕಲಂ.32,34 ಕೆ.ಇ ಆಕ್ಟ್:-
ದಿನಾಂಕ:-27/03/2020 ರಂದು ರಾತ್ರಿ 19-15 ಗಂಟೆಯಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪಿ,ಎಸ್,ಐ ಶ್ರೀ ಟಿ,ಎನ್ ಪಾಪಣ್ಣ ಆದ ನಾನು ಠಾಣೆಯ ಸಿಬ್ಬಂದಿ ಎ,ಎಸ್,ಐ ವೆಂಕಟರವಣಪ್ಪ, ಸಿ,ಹೆಚ್,ಸಿ 36 ವಿಜಯ್ ಕುಮಾರ್, ಜೀಪ್ ಚಾಲಕ ಎ,ಪಿ,ಸಿ-65 ವೆಂಕಟೇಶ್ ರವರನ್ನು ಜೊತೆಯಲ್ಲಿ ಕರೆದುಕೊಂಡು ಕರೋನ ಮಹಾಮಾರಿ ಖಾಯಿಲೆಯ ಜನತಾ ಕರ್ಪ್ಯೂ ಬಂದೋಬಸ್ತ್ ಕರ್ತವ್ಯದಲ್ಲಿ ಬಟ್ಲಹಳ್ಳಿ ಗ್ರಾಮದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ನನಗೆ ಬಟ್ಲಹಳ್ಳಿ ಗ್ರಾಮದ ಸುರೇಶ ಬಿನ್ ಕೃಷ್ಣಪ್ಪ, 29 ವರ್ಷ, ಗೊಲ್ಲರು ರವರು ಅವರ ಮನೆಯಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಖಚಿತ ಮಾಹಿತಿಯನ್ನು ತಿಳಿಸಿ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಬಟ್ಲಹಳ್ಳಿ ಗ್ರಾಮದ ಸುರೇಶ ಬಿನ್ ಕೃಷ್ಣಪ್ಪರವರ ಮನೆಯ ಬಳಿಗೆ ರಾತ್ರಿ 19-30 ಗಂಟೆಗೆ ಹೋಗಿ ಜೀಪನ್ನು ಮನೆಯ ಬಳಿ ನಿಲ್ಲಿಸಿ ನೋಡಿದಾಗ ಮನೆಯಲ್ಲಿ ಅಕ್ರಮವಾಗಿ ಗ್ರಾಹಕರಿಗೆ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು ತಕ್ಷಣ ಪಂಚರೊಂದಿಗೆ ಮನೆಯ ಬಳಿಗೆ ಹೋಗಲಾಗಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆಸಾಮಿಯು ಪೊಲೀಸರನ್ನು ಕಂಡ ಕೂಡಲೇ ಸದರಿ ಆಸಾಮಿಯು ಕತ್ತಲಿನಲ್ಲಿ ಪರಾರಿಯಾಗಿರುತ್ತಾನೆ. ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಸುರೇಶ ಬಿನ್ ಕೃಷ್ಣಪ್ಪ, 29 ವರ್ಷ ಗೊಲ್ಲರು ಸ್ನೇಹ ವೈನ್ಸ್ ಮಾಲಿಕರು ಬಟ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ ಸದರಿ ಮನೆಯನ್ನು ಪಂಚರ ಸಮಕ್ಷಮ ಶೋಧನೆ ಮಾಡಲಾಗಿ ಮನೆಯ ಓಳಗಡೆ ರೂಮಿನಲ್ಲಿ ಇಟ್ಟಿದ್ದ 2 ರಟ್ಟಿನ ಬಾಕ್ಸ್ ಗಳಲ್ಲಿ ಇದ್ದ ಮತ್ತು 1 ಗೋಣಿ ಚೀಲದಲ್ಲಿದ್ದ ಮಾಲುಗಳನ್ನು ಪರೀಶಿಲಿಸಲಾಗಿ 1) 375 ಎಂಎಲ್ ZOOM RED WINE 61 ಬಾಟೇಲ್ ಗಳಿದ್ದು ಒಂದರ ಬೆಲೆ 50.34 ರೂಗಳಾಗಿದ್ದು ಒಟ್ಟು 22 ಲೀಟರ್ 875 ಎಂ ಎಲ್ ಮದ್ಯವಿದ್ದು ಅದರ ಬೆಲೆ 3070.74 ರೂಗಳಾಗಿರುತ್ತೆ. 2) 375 ಎಂ ಎಲ್ ZOOM RED WINE 24 ಬಾಟೇಲ್ ಗಳಿದ್ದು ಒಂದರ ಬಲೆ 49.92 ರೂಗಳಗಿದ್ದು ಒಟ್ಟು 9 ಲೀಟರ್ ಮದ್ಯವಿದ್ದು ಅದರ ಬೆಲೆ 1198.08 ರೂಗಳಾಗಿರುತ್ತೆ ಮತ್ತು 3) 180 ಎಂ ಎಲ್ RICO SPIN RED WINE 6 ಬಾಟೇಲ್ ಗಳಿದ್ದು ಒಟ್ಟು 1 ಲೀಟರ್ 080 ಎಂ ಎಲ್ ಮದ್ಯವಿದ್ದು ಒಂದರ ಬೇಲೆ 30 ರೂಗಳಾಗಿರುತ್ತೆ ಒಟ್ಟು 180 ರೂಗಳಾಗಿರುತ್ತೆ ಒಟ್ಟು ಮದ್ಯ 32 ಲೀಟರ್ 955 ಎಂಎಲ್ ಆಗಿದ್ದು ಅದರ ಒಟ್ಟು ಬೆಲೆ 4448.82 ರೂಗಳ ಬೆಲೆ ಬಾಳುವುದಾಗಿರುತ್ತೆ. ಸದರಿ ಆಸಾಮಿಯು ಸರ್ಕಾರದಿಂದ ಯಾವುದೇ ಅದಿಕೃತ ಪರವಾನಗಿಯನ್ನು ಪಡೆಯದೆ ಮದ್ಯದ ಬಾಟೇಲ್ಗಳನ್ನು ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುತ್ತಾರೆ ನಂತರ ಇವುಗಳಲ್ಲಿ ತಲಾ ಒಂದೊಂದು ಮದ್ಯದ ಬಾಟೇಲ್ಗಳನ್ನು ಎಪ್,ಎಸ್,ಎಲ್ ತಜ್ಞರ ಪರೀಕ್ಷೆಗಾಗಿ ಕಳುಹಿಸಲು ಪ್ರತ್ಯೇಕವಾಗಿ ಬಿಳಿಯ ಚೀಲದಲ್ಲಿ ಹಾಕಿ ದಾರದಿಂದ ಹೋಲೆದು BTL ಎಂಬ ಆಂಗ್ಲ ಭಾಷೆಯ ಅಕ್ಷದಿಂದ ಸೀಲು ಮಾಡಿರುತ್ತೆ ನಂತರ ಮದ್ಯದ ಬಾಟೇಲ್ ಗಳನ್ನು ಪಂಚರ ಸಮಕ್ಷಮ ರಾತ್ರಿ 19-30 ಗಂಟೆಯಿಂದ 20.30 ಗಂಟೆಯ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ 21.00 ಗಂಟೆಗೆ ವಾಪಸ್ಸು ಬಂದು ಠಾಣಾ ಮೊ ಸಂಖ್ಯೆ 28/2020 ಕಲಂ 32 34 ಕೆಇ ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲು ಮಾಡಿರುತ್ತೇನೆ.
2. ಚೇಳೂರು ಪೊಲೀಸ್ ಠಾಣೆ ಮೊ.ಸಂ. 08/2020 ಕಲಂ.15(ಎ), 32(3) ಕೆ.ಇ ಆಕ್ಟ್:-
ದಿನಾಂಕ:27/03/2020 ರಂದು 15-00 ಗಂಟೆಗೆ ಘನ ನ್ಯಾಯಾಲಯ ಕರ್ತವ್ಯದ ಪೇದ ಸಿ.ಹೆಚ್.ಸಿ 20 ರವರು ಠಾಣೆಗೆ ಹಾಜರಾಗಿ ಘನ ನ್ಯಾಯಾಲಯದಿಂದ ತಂದು ಹಾಜರು ಪಡಿಸಿದ ಆದೇಶ ಪ್ರತಿಯ ಸಾರಾಂಶವೇನೆಂದರೆ, ದಿನಾಂಕ:26/03/2020 ರಂದು ಮದ್ಯಾಹ್ನ 12:00 ಗಂಟೆಗೆ ಪಿ.ಎಸ್.ಐ ರವರಾದ ಶ್ರೀಮತಿ ಚಂದ್ರಕಲಾ ಎನ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ಬೆಳಗ್ಗೆ 10:00 ಗಂಟೆಯಲ್ಲಿ ಪಿ.ಎಸ್.ಐ ಚಂದ್ರಕಲಾ, ಎನ್ ರವರು ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ 42 ಜಿ 61 ನಲ್ಲಿ ಠಾಣೆಯ ಸಿಬ್ಬಂದಿಯವರಾದ ಸಿ.ಹೆಚ್.ಸಿ 129 ರವಣಪ್ಪ, ಸಿ.ಪಿ.ಸಿ 519 ಚಂದ್ರಶೇಖರ್ ಹಾಗೂ ಮಹಿಳಾ ಹೆಚ್,ಜಿ ಜಯಲಕ್ಷ್ಮಿ ಮತ್ತು 11 ನೇ ಗ್ರಾಮ ಗಸ್ತು ಪೇದೆಗಳಾದ ಸಿ.ಹೆಚ್ ಸಿ 149 ಇನಾಯತ್, ಸಿ.ಪಿ.ಸಿ 113 ಲಿಂಗರಾಜು ಆರ್ ರವರೊಂದಿಗೆ ಠಾಣಾ ಸರಹದ್ದು ಆಚಗಾನಪಲ್ಲಿ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ ಇದೇ ಗ್ರಾಮದಲ್ಲಿ ರುಕ್ಮಿಣಿ ಕೊಂ ಮುನಿಯಪ್ಪ, ಎಂಬುವರು ತನ್ನ ಮನೆಯ ಮುಂಭಾಗ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶವನ್ನು ನೀಡಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ರುಕ್ಮಿಣಿ ರವರ ಮನೆಯ ಮುಂಭಾಗ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಇಬ್ಬರು ಆಸಾಮಿಗಳು ಮಧ್ಯಪಾನವನ್ನು ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಅಲ್ಲಿಂದ ಓಡಿ ಹೋಗಿರುತ್ತಾರೆ. ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳಿದ್ದು ಅಲ್ಲಿಯೇ ಇದ್ದ ರುಕ್ಮಣಿ ರವರನ್ನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು ಮತ್ತು ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಯಾವುದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಸದರಿಯವರು ನನ್ನ ಬಳಿ ಯಾವುದೇ ಪರವಾನಿಗೆ ಇಲ್ಲಾ ಎಂದು ಹೇಳಿದ್ದು ಸದರಿ ಆಸಾಮಿಯ ಹೆಸರು & ವಿಳಾಸ ಕೇಳಲಾಗಿ ತನ್ನ ಹೆಸರು ರುಕ್ಮಣಿ ಕೊಂ ಮುನಿಯಪ್ಪ, 31 ವರ್ಷ, ನಾಯಕರು, ಗೃಹಿಣಿ, ವಾಸ:ಆಚಗಾನಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ.ಎಲ್ ನ HAYWARRDS CHEERS WHISKY ಕಂಪನಿಯ 10 ಟೆಟ್ರಾ ಪ್ಯಾಕೇಟ್ಗಳಿದ್ದು ಇವುಗಳು ಒಟ್ಟು 900 ಎಂ.ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಬೆಲೆ 30.32 ಎಂದು ನಮೂದಿಸಿದ್ದು ಇವುಗಳು ಒಟ್ಟು 303.2 ರೂಗಳಾಗಿರುತ್ತೆ ಹಾಗೂ ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಬೆಳಗ್ಗೆ 10:30 ಗಂಟೆಯಿಂದ 11:30 ಗಂಟೆಯ ವರೆಗೆ ದಾಳಿ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯನ್ನು ಪಡೆದು ಠಾಣಾ ಎನ್ ಸಿ ಆರ್ 13/2020 ರೀತ್ಯ ಪ್ರಕರಣ ದಾಖಲಿಸಿ ಸದರಿ ಆಸಾಮಿಯ ಮೇಲೆ ಪ್ರಕರಣವನ್ನು ದಾಖಲಿಸಲು ಘನ ನ್ಯಾಯಾಲಯದ ಅನುಮತಿಯನ್ನು ನೀಡಲು ಕೋರಿ ಮನವಿಯನ್ನು ಸಲ್ಲಿಸಿಕೊಂಡಿದ್ದು ಈ ದಿನ ಘನ ನ್ಯಾಯಾಲಯದ ಅನುಮತಿಯನ್ನು ನೀಡಿದ್ದರ ಮೇರೆಗೆ ಠಾಣಾ ಮೊ.ಸಂಖ್ಯೆ:08/2020 ಕಲಂ:15(A),32(3) K,E ACT ರೀತ್ಯಾ ಪ್ರಕರಣ ದಾಖಲಿಸಿರುತ್ತೆ.
3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 149/2020 ಕಲಂ.279-304(ಎ) ಐ.ಪಿ.ಸಿ:-
ದಿನಾಂಕ: 27/03/2020 ರಂದು ರಾತ್ರಿ 8.30 ಗಂಟೆಗೆ ನಾಗರತ್ನ ಬಿನ್ ಕುಮಾರಪ್ಪ, 21 ವರ್ಷ, ವಿಶ್ವಕರ್ಮ ಜನಾಂಗ, ಮನೆಕೆಲಸ, ನ್ಯೂಪಬ್ಲಿಕ್ ಶಾಲೆಯ ಹಿಂಭಾಗ, ಕನ್ನಂಪಲ್ಲಿ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈಗ್ಗೆ ಸುಮಾರು ಒಂದು ತಿಂಗಳ ಹಿಂದೆ ತನ್ನ ತಂದೆಯಾದ ಕುಮಾರಪ್ಪ ರವರಿಗೆ ಚಿಂತಾಮಣಿ ನಗರದಲ್ಲಿ ದ್ವಿಚಕ್ರ ವಾಹನ ಅಪಘಾತಪಡಿಸಿದ್ದು, ಸದರಿ ಅಪಘಾತದಲ್ಲಿ ತನ್ನ ತಂದೆಯವರ ತಲೆಗೆ ರಕ್ತಗಾಯವಾಗಿದ್ದು, ತನ್ನ ತಂದೆಯವರಿಗೆ ಬೆಂಗಳೂರಿನ ನಿಮ್ಯಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು, ತನ್ನ ತಂದೆಯವರ ತಲೆಗೆ ಶಸ್ತ್ರ ಚಿಕಿತ್ಸೆ ಆಗಿರುತ್ತೆ. ತನ್ನ ತಂದೆಯವರನ್ನು ಈಗ್ಗೆ ಸುಮಾರು 20 ದಿನಗಳ ಹಿಂದೆ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದಿರುತ್ತಾರೆ. ತನ್ನ ತಂದೆಯವರು ಶಸ್ತ್ರ ಚಿಕಿತ್ಸೆಯ ನಂತರ ಸ್ವಲ್ವ ಸುಸ್ತಾಗಿದ್ದರು. ದಿನಾಂಕ 26/03/2020 ರಂದು ಮದ್ಯಾಹ್ನ 2.00 ಗಂಟೆ ಸಮಯದಲ್ಲಿ ತನ್ನ ತಂದೆಯಾದ ಕುಮಾರಪ್ಪ ರವರು ತಾನು ಕಿಶೋರ್ ರವರ ಚಿಲ್ಲರೆ ಅಂಗಡಿಯ ಬಳಿ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದು ಪುನಃ ಮನೆಗೆ ವಾಪಸ್ಸು ಬಂದಿರುವುದಿಲ್ಲ. ಕರೋನಾ ವೈರಸ್ ಪ್ರಯುಕ್ತ ತಾವು ವಾಸವಿರುವ ಪ್ರದೇಶದಲ್ಲಿ ಹುಡುಕಾಡಲಾಗಿ ತನ್ನ ತಂದೆಯವರು ಪತ್ತೆ ಆಗಿರುವುದಿಲ್ಲ. ಈ ದಿನ ದಿನಾಂಕ 27/03/2020 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಮೆಕ್ಯಾನಿಕ್ ಸ್ವಾಮಿ ಎಂಬುವರು ತನಗೆ ಪೋನ್ ಮಾಡಿ ನಿನ್ನ ತಂದೆಯಾದ ಕುಮಾರಪ್ಪ ರವರು ದಿನಾಂಕ 26/03/2020 ರಂದು ರಾತ್ರಿ 8.30 ಗಂಟೆ ಸಮಯದಲ್ಲಿ ಬೂರಗಮಾಕಲಹಳ್ಳಿ ಗ್ರಾಮದ ಚೊಕ್ಕರೆಡ್ಡಿ ರವರ ಮನೆಯ ಮುಂಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಚಿಂತಾಮಣಿ ಕಡೆಯಿಂದ ಹೋಗುತ್ತಿದ್ದ ಎಪಿ-03 ಬಿಜೆ-9971 ನೋಂದಣಿ ಸಂಖ್ಯೆಯ ಹೋಂಡಾ ಶೈನ್ ದ್ವಿಚಕ್ರ ವಾಹನವನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಿನ್ನ ತಂದೆಯವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರಿಂದ ನಿನ್ನ ತಂದೆಯವರ ತಲೆ, ಕೈ ಕಾಲುಗಳಿಗೆ ಗಾಯಗಳಾಗಿದ್ದು, ಆತನಿಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಎಸ್.ಎನ್.ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು, ನಿಮ್ಮ ಪೋನ್ ನಂಬರ್ ಇಲ್ಲದೆ ಇರುವುದರಿಂದ ಈ ದಿನ ನಿಮ್ಮ ಪೋನ್ ನಂಬರ್ ತಿಳಿದುಕೊಂಡು ವಿಚಾರವನ್ನು ತಿಳಿಸುತ್ತಿರುವುದಾಗಿ ತಿಳಿಸಿರುತ್ತಾರೆ. ನಂತರ ತಾನು ಮತ್ತು ತನ್ನ ತಾಯಿ ಅನಸೂಯಮ್ಮ ರವರು ಎಸ್.ಎನ್.ಆರ್ ಆಸ್ಪತ್ರೆಗೆ ಹೋಗಿ ನೋಡಲಾಗಿ ಸಂಗತಿ ನಿಜವಾಗಿದ್ದು, ತನ್ನ ತಂದೆಯವರ ಬಲಕಾಲಿಗೆ, ಎರಡೂ ಕೈಗಳಿಗೆ ಮತ್ತು ತಲೆಗೆ ರಕ್ತಗಾಯಗಳಾಗಿ, ಬಲಕಣ್ಣಿಗೆ ಸಹ ಗಾಯವಾಗಿರುತ್ತೆ. ತನ್ನ ತಂದೆಯವರಿಗೆ ಚಿಕಿತ್ಸೆ ಫಲಕಾರಿಯಾಗದೆ ಈ ದಿನ ಸಂಜೆ 7.00 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ. ತನ್ನ ತಂದೆಯವರ ಮೃತದೇಹವು ಎಸ್.ಎನ್.ಆರ್ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ. ತನ್ನ ತಂದೆಯವರಿಗೆ ಅಪಘಾತಪಡಿಸಿ ಆತನ ಸಾವಿಗೆ ಕಾರಣನಾದ ದ್ವಿಚಕ್ರ ವಾಹನದ ಸವಾರನನ್ನು ಪತ್ತೆ ಮಾಡಿ ಆತನ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.
4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 150/2020 ಕಲಂ.15(ಎ) ಕೆ.ಇ ಆಕ್ಟ್:-
ದಿನಾಂಕ: 27/03/2020 ರಂದು ರಾತ್ರಿ 9.00 ಗಂಟೆಗೆ ಶ್ರೀ ನರೇಶ್ ನಾಯ್ಕ್.ಎಸ್, ಪಿ.ಎಸ್.ಐ, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 27/03/2020 ರಂದು ತಾನು ಹಾಗೂ ಸಿಬ್ಬಂದಿಯಾದ ಸಿ.ಹೆಚ್.ಸಿ-41 ಜಗದೀಶ್ ಮತ್ತು ಸಿ.ಪಿ.ಸಿ-544 ವೆಂಕಟರವಣ ರವರೊಂದಿಗೆ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಿಕೊಂಡು ರಾತ್ರಿ 8-00 ಗಂಟೆಯ ಸಮಯದಲ್ಲಿ ದೊಡ್ಡ ಕೊಂಡ್ರಹಳ್ಳಿ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ವಾಸಿಯಾದ ಮಂಜುಳಾ ಕೋಂ ಲೇಟ್ ಮಂಜುನಾಥ ಎಂಬುವವರು ತನ್ನ ಮನೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಸದರಿ ಮನೆಯ ಮೇಲೆ ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಮಂಜುಳಾರವರ ಮನೆಯ ಬಳಿ ಹೋದಾಗ ಮನೆಯ ಮುಂಭಾಗ ಕುಳಿತು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಅಂಗಡಿಯಲ್ಲಿದ್ದ ಒಬ್ಬ ಮಹಿಳೆಯು ಓಡಿ ಹೋಗಿದ್ದು, ಮನೆಯ ಮುಂಭಾಗದಲ್ಲಿ ನೋಡಲಾಗಿ 180 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದವರ ಹೆಸರು ವಿಳಾಸ ಕೇಳಲಾಗಿ ಮಂಜುಳಾ ಕೋಂ ಲೇಟ್ ಮಂಜುನಾಥ, 45ವರ್ಷ, ಕುರುಬರು, ಜಿರಾಯ್ತಿ, ದೊಡ್ಡಕೊಂಡ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಮಹಿಳೆಯು ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿದು ಬಂದಿದ್ದರಿಂದ ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ರಾತ್ರಿ 8-15 ರಿಂದ 8-45 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಮನೆಯ ಬಳಿ ಸ್ಥಳಾವಕಾಶ ಮಾಡಿಕೊಟ್ಟಿರುವ ಮಂಜುಳಾ ಕೋಂ ಲೇಟ್ ಮಂಜುನಾಥರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ.
5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 151/2020 ಕಲಂ.279-337 ಐ.ಪಿ.ಸಿ & 134(ಎ&ಬಿ) ಐ.ಎಂ.ವಿ ಆಕ್ಟ್:-
ದಿನಾಂಕ: 27/03/2020 ರಂದು ರಾತ್ರಿ 9.30 ಗಂಟೆಗೆ ಚಿಂತಾಮಣಿ ನಗರದ ಇಂದಿರಾ ಆಸ್ಪತ್ರೆಗೆ ಹೋಗಿ ಗಾಯಾಳು ಶ್ರೀ ಚಂದ್ರಪ್ಪ ಬಿನ್ ಮುನಿಯಪ್ಪ, 50 ವರ್ಷ, CHC-165, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 10.15 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನಂದರೆ, ಈ ದಿನ ದಿನಾಂಕ: 27/03/2020 ರಂದು ಬೆಳಿಗ್ಗೆ 09.00 ಗಂಟೆ ಸಮಯದಲ್ಲಿ ಠಾಣಾಧಿಕಾರಿಗಳು ಕರೋನಾ-19 ಕಾಯಿಲೆ ಹಿನ್ನಲೆಯಲ್ಲಿ 144 ಸಿ.ಆರ್.ಪಿ.ಸಿ ಸೆಕ್ಷನ್ ಜಾರಿಯಲ್ಲಿರುವುದರಿಂದ ಸಿದ್ದಿಮಠ ಮತ್ತು ಕೊಡದವಾಡಿ ಗ್ರಾಮಗಳಲ್ಲಿನ ಮಸೀದಿಗಳ ಮುಖಂಡರಿಗೆ ಜನ ಸೇರದಂತೆ ಅರಿವು ಮೂಡಿಸಿ ಗಸ್ತು ಮಾಡಿಕೊಂಡು ಬರಲು ನೇಮಕ ಮಾಡಿ ಕಳುಹಿಸಿಕೊಟ್ಟಿದ್ದು, ಅದರಂತೆ ತಾನು ಸಮವಸ್ತ್ರದಲ್ಲಿ ನಂ KA-04 EU-1497 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಸಿದ್ದಿಮಠ ಮತ್ತು ಕೊಡದವಾಡಿ ಗ್ರಾಮಗಳಿಗೆ ಬೇಟಿ ನೀಡಿ, ಗಸ್ತು ಮಾಡಿಕೊಂಡು ಸಂಜೆ 7.00 ಗಂಟೆ ಸಮಯದಲ್ಲಿ ಅದೇ ದ್ವಿಚಕ್ರ ವಾಹನದಲ್ಲಿ ಠಾಣೆಗೆ ವಾಪಸ್ ಬರುಲು ಶ್ರೀನಿವಾಸಪುರ-ಚಿಂತಾಮಣಿ ರಸ್ತೆಯ ಬೂರಗಮಾಕಲಹಳ್ಳಿ ಗ್ರಾಮದ ಬಳಿ ಬರುತ್ತಿದ್ದಾಗ ಶ್ರೀನಿವಾಸಪುರ ಕಡೆಯಿಂದ ಬಂದ ಯಾವುದೋ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನದ ಹಿಂಬದಿಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿ ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗ ಪರಿಣಾಮ ತಾನು ದ್ವಿಚಕ್ರ ವಾಹನದ ಸಮೇತ ಕೆಳಗೆ ಬಿದ್ದು ಹೋಗಿ ತನ್ನ ಬಲ ಕಾಲಿನ ಮೊಣಕಾಲಿನ ಕೆಳಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಕತ್ತಲಲ್ಲಿ ಕಾರಿನ ನಂಬರ್ ನೋಡಲು ಸಾದ್ಯವಾಗಿರುವುದಿಲ್ಲ. ನಂತರ ಗಾಯಗೊಂಡಿದ್ದ ತನ್ನನ್ನು ರಸ್ತೆಯಲ್ಲಿ ಹೋಗುತ್ತಿದ್ದ ಯಾರೋ ಸಾರ್ವಜನಿಕರು ತನ್ನನ್ನು ಉಪಚರಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಅಪಘಾತವನ್ನುಂಟು ಮಾಡಿ, ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿರುವ ಕಾರನ್ನು ಪತ್ತೆ ಮಾಡಿ, ಸದರಿ ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.
6. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 58/2020 ಕಲಂ.87 ಕೆ.ಪಿ ಆಕ್ಟ್:-
ದಿನಾಂಕ 25/3/2020 ರಂದು ಬೆಳಿಗ್ಗೆ 9-30 ಗಂಟೆಗೆ ಅವಿನಾಶ್ ವಿ. ಪಿ.ಎಸ್.ಐ. ರವರು ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:25/03/2020 ರಂದು ಬೆಳಿಗ್ಗೆ 08:00 ಗಂಟೆಯಲ್ಲಿ ನಾನು ಠಾಣೆಯಲ್ಲಿರುವಾಗ್ಗೆ, ಗೌರಿಬಿದನೂರು ನಗರದ ಗುಂಡಾಪುರದ ಕೆರೆ ಅಂಗಳದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಕೂಡಲೇ ನಾನು ಠಾಣೆಗೆ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ನಮ್ಮ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ 235 ರವಿ ಕುಮಾರ್, ಪಿಸಿ-318 ದೇವರಾಜ, ಪಿ.ಸಿ 102 ಪ್ರತಾಪ್ ರವರನ್ನು ಕರೆದುಕೊಂಡು ಮಾಹಿತಿಯಂತೆ ಸರ್ಕಾರಿ ಜೀಪಿನಲ್ಲಿ ಗುಂಡಾಪುರದ ರೈಮಂಡ್ಸ್ ಫ್ಯಾಕ್ಡರಿ ಬಳಿ ಜೀಪನ್ನು ನಿಲ್ಲಿಸಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ಗುಂಡಾಪುರದ ಕೆರೆ ಅಂಗಳದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟವಾಡುತ್ತಿರುವುದು ಕಂಡುಬಂದಿದ್ದು, ಪಂಚರ ಸಮಕ್ಷಮ ಸಿಬ್ಬಂದಿ ಸಹಕಾರದಿಂದ ಇಸ್ಪೀಟ್ ಜೂಜಾಟದವಾಡುತ್ತಿದ್ದವರನ್ನು ಸುತ್ತುವರೆದು ಯಾರು ಓಡಿ ಹೋಗದಂತೆ ಸೂಚನೆಗಳನ್ನು ನೀಡಿ ಅವರನ್ನು ಹಿಡಿಯಲು ಹೋದಾಗ ಅಲ್ಲಿಂದ ಕೆಲವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿಹೋಗಿದ್ದು ಕೆಲವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ರಾಕೇಶ್ ಬಿನ್ ಲೇಟ್ ನರಸಿಂಹಪ್ಪ, 25 ವರ್ಷ, ಉಪ್ಪಾರ ಜನಾಂಗ, ಗಾರೇ ಕೆಲಸ, ಉಪ್ಪಾರ ಕಾಲೋನಿ ಗೌರಿಬಿದನೂರು ನಗರ, 2) ನಾಗೇಶ ಎನ್ ಬಿನ್ ನಾರಾಯಣಪ್ಪ, 24 ವರ್ಷ, ಉಪ್ಪಾರ ಜನಾಂಗ, ಉಪ್ಪಾರ ಕಾಲೋನಿ ಟೈಲ್ಸ್ ಕೆಲಸ, ಗೌರಿಬಿದನೂರು ನಗರ, 3) ದಿವಾಕರ ಬಿನ್ ಲೇಟ್ ಶ್ರೀನಿವಾಸ 25 ವರ್ಷ, ಭಜಂತ್ರಿ ಜನಾಂಗ, ಸನ್ ಡೈರೆಕ್ಟ್ ನಲ್ಲಿ ಕೆಲಸ, ಗುಂಡಾಪುರ, ಗೌರಿಬಿದನೂರು ನಗರ. 4) ನರಸಿಂಹಮೂರ್ತಿ ಬಿನ್ ಲೇಟ್ ಲಕ್ಷ್ಮೀನರಸಪ್ಪ, 37 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ಗುಂಡಾಪುರ, ಗೌರಿಬಿದನೂರು ನಗರ ಎಂದು ತಿಳಿಸಿದ್ದು ಸಿಬ್ಬಂದಿಯಿಂದ ಆಸಾಮಿಗಳ ಅಂಗಶೋಧನೆ ಮಾಡಿಸಲಾಗಿ 500 ರೂ ಗಳ 4 ನೋಟುಗಳು, 200 ರೂ ಗಳ 10 ನೋಟುಗಳು, 100 ರೂ ಗಳ 15 ನೋಟುಗಳು, 50 ರೂ ಗಳ 1 ನೋಟುಗಳು, 20 ರೂ ಗಳ 1 ನೋಟು ಹಾಗೂ 10 ರೂ ಗಳ 16 ನೋಟುಗಳು ಇದ್ದು ಒಟ್ಟು 5730/- ರೂ ನಗದು ಹಣ ಹಾಗೂ ಸ್ಥಳದಲ್ಲಿ 52 ಇಸ್ಪೀಟ್ ಎಲೆಗಳು ಇದ್ದವು. ಎಲ್ಲವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಬೆಳಿಗ್ಗೆ 8:30 ಗಂಟೆಯಿಂದ 9:15 ಗಂಟೆವರೆಗೆ ಠಾಣಾ ಲ್ಯಾಪ್ ನಲ್ಲಿ ಟೈಪ್ ಮಾಡಿದ ಪಂಚನಾಮೆಯ ಮೂಲಕ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 9:30 ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ನೀಡಿದ ವರದಿಯನ್ನು ಪಡೆದು ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೇನೆ.
7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 73/2020 ಕಲಂ.504-506(2) ಐ.ಪಿ.ಸಿ:-
ದಿನಾಂಕ:-27/03/2020 ಮದ್ಯಾಹ್ನ 2-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಗಂಗಿರೆಡ್ಡಿ ಬಿನ್ ಚಿಕ್ಕ ಮುನಿಯಪ್ಪ. 38 ವರ್ಷ, ನಾಯಕರು, ಜಿರಾಯ್ತಿ, ವಾಸ-ಹಿತ್ತಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 25/03/2020 ರಂದು ಮದ್ಯಾಹ್ನ ಸುಮಾರು 3-30 ಗಂಟೆ ಸಮಯದಲ್ಲಿ ತಾನು ಮತ್ತು ತಮ್ಮ ಗ್ರಾಮದ ಇತರೆ ಜನರು ದೂರ ದೂರವಾಗಿ ತಮ್ಮ ಗ್ರಾಮದ ಹಾಲಿನ ಡೈರಿಯ ಬಳಿ ಕುಳಿತುಕೊಂಡಿದ್ದಾಗ ಈ ಸಮಯದಲ್ಲಿ ತಮ್ಮ ಗ್ರಾಮದ ತಮ್ಮ ಜನಾಂಗದ ವಾಸಿ ಹರಿಪ್ರಸಾದ್ ಬಿನ್ ಬಡಿಗಪ್ಪ ಎಂಬಾತನು ಬಂದು ಕೆಮ್ಮುತ್ತಾ ನಿಂತಿದ್ದನು, ಆಗ ತಾನು ಹರಿಪ್ರಸಾದ್ ರವರಿಗೆ ಪ್ರಪಂಚವೆಲ್ಲಾ ಕರೋನಾ ರೋಗ ಬಂದು ಜನ ಒದ್ದಾಡುತ್ತಿದ್ದಾರೆ, ನೀನು ಕೆಮ್ಮುತ್ತಿದ್ದೀಯಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಸಿ ಕೋ ಎಂದು ಬುದ್ದಿವಾದ ಹೇಳಿರುತ್ತೇನೆ. ಆಗ ಹರಿಪ್ರಸಾದ್ ರವರು ತನ್ನ ಮನೆಗೆ ಹೋಗಿ ಮತ್ತೆ ತನ್ನ ಕೈಯಲ್ಲಿ ಮಚ್ಚನ್ನು ಹಿಡಿದುಕೊಂಡು ತನ್ನ ಬಳಿ ಬಂದು ಮಚ್ಚನ್ನು ತೋರಿಸಿ, ನನ್ನ ಮಗನೇ ನನಗೆ ರೋಗ ಇದೆ ಎಂದು ಹೇಳುತ್ತೀಯಾ ಧೈರ್ಯವಿದ್ದರೆ ಈಗ ಹೇಳೋ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ. ನಂತರ ತಾನು ಅಂದು ನಡೆದ ವಿಷಯವನ್ನು ತಮ್ಮ ಗ್ರಾಮದ ಹಿರಿಯರಾದ ಡೈರಿ ಅಧ್ಯಕ್ಷರಾದ ಗೋಪಾಲಪ್ಪ, ರಮೇಶ್ ಮತ್ತು ರಾಮಾಂಜಿನಪ್ಪ ರವರಿಗೆ ತಿಳಿಸಿದಾಗ ಅವರುಗಳು ದಿನಾಂಕ 26/03/2020 ರಂದು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ಹರಿಪ್ರಸಾದ್ ರವರ ತಂದೆಯವರಾದ ಬಡಿಗಪ್ಪ ರವರಿಗೆ ಡೈರಿ ಬಳಿ ಕರೆದು ನಿನ್ನ ಮಗನಿಗೆ ಬುದ್ದಿವಾದ ಹೇಳಿ ಭದ್ರಪಡಿಸಿಕೋ, ಊರಿನಲ್ಲಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಬುದ್ದಿವಾದ ಹೇಳಿದಾಗ ಆತನು ಹಿರಿಯರ ಮಾತಿಗೆ ಬೆಲೆ ಕೊಡದೇ ನಾನು ನಿಮ್ಮ ಮಾತು ಏನು ಕೇಳುವುದು, ಬೇಕಾದರೆ ನಿಮ್ಮ ತಲೆಗಳನ್ನು ಕುರಿಗಳ ತಲೆ ಕತ್ತರಿಸುವ ಹಾಗೇ ಕತ್ತರಿಸಿ ಬಿಡುತ್ತೇನೆಂದು ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾನೆ. ಈ ವಿಷಯವನ್ನು ತಾನು ತಮ್ಮ ಗ್ರಾಮದ ಹಿರಿಯರ ಜೊತೆ ಚರ್ಚಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರನ್ನು ಪಡೆದುಕೊಂಡು ಠಾಣಾ ಎನ್.ಸಿ.ಆರ್ ನಂಬರ್-77/2020 ರಂತೆ ದಾಖಲಿಸಿಕೊಂಡಿರುತ್ತೇನೆ. ಸದರಿ ಎನ್.ಸಿ.ಆರ್ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದು, ಪ್ರ ವ ವರದಿಯನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಪಿಸಿ-370 ರವರ ಮೂಲಕ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿದ್ದು, ಪಿಸಿ-370 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಸಂಜೆ 5-00 ಗಂಟೆಗೆ ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಅನುಮತಿ ಆದೇಶದ ಮೇರೆಗೆ ಪ್ರ ವ ವರದಿಯನ್ನು ದಾಖಲಿಸಿಕೊಂಡಿರುತ್ತೇನೆ.