ದಿನಾಂಕ : 28/01/2020 ರ ಅಪರಾಧ ಪ್ರಕರಣಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 15/2020 ಕಲಂ. 323,504,506 ಐಪಿಸಿ :-
ದಿನಾಂಕ: 22-01-2020 ರಂದು ಮದ್ಯಾಹ್ನ 12.30 ಗಂಟೆಗೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಗಾಯಾಳು ಶ್ರೀ ವೆಂಕಟನಾರಾಯಣರೆಡ್ಡಿ ಬಿನ್ ವೆಂಕಟಶಿವಾರೆಡ್ಡಿ, 65 ವರ್ಷ, ರೆಡ್ಡಿ ಜನಾಂಗ, ಜಿರಾಯ್ತಿ, ವಾಸ ನರಾವಲಪಲ್ಲಿ ಗ್ರಾಮ,, ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆ ಪಡೆದು ಠಾಣೆಗೆ ವಾಪಸ್ ಬಂದು ಗಾಯಾಳು ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ನರಾವಲಪಲ್ಲಿ ಗ್ರಾಮದ ಸರ್ವೆ ನಂಬರ್ 5-1 ರಲ್ಲಿನ 3 ಎಕರೆ 32 ಗುಂಟೆ ಜಮೀನು ನಮ್ಮ ಪಿತ್ರಾರ್ಜಿತ ಸ್ವತ್ತಾಗಿದ್ದು, ಸದರಿ ಜಮೀನಿನಲ್ಲಿ ಅಂದಿನಿಂದ ಇಲ್ಲಿಯವರೆಗೆ ನಾವೇ ಸ್ವಾಧಿನಾನುಭವದಲ್ಲಿದ್ದು, ಸದರಿ ಸ್ವತ್ತನ್ನು ನಮ್ಮ ತಂದೆಯವರ ಪವತಿ ವಾರಸಿನಂತೆ ನಮ್ಮ ಅಣ್ಣನಾದ ನಂಜಿರೆಡ್ಡಿ ರವರ ಕಡೆಯಿಂದ ಅಕ್ರಮವಾಗಿ ಸದರಿ ಜಮೀನನ್ನು ವೇಣುಗೋಪಾಲರೆಡ್ಡಿ ಹೆಸರಿಗೆ ಮಾಡಿಸಿಕೊಂಡಿದ್ದು, ದಿನಾಂಕ: 22-01-2020 ರಂದು ಸುಮಾರು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ನನ್ನ ಮಗನಾದ ಮಧುಸೂದನರೆಡ್ಡಿ ಮತ್ತು ನಮ್ಮ ಗ್ರಾಮದ ಆಂಜನೇಯಲು ಬಿನ್ ನಂಜುಂಡಪ್ಪರವರು ವೇಣುಗೋಪಾಲರೆಡ್ಡಿರವರ ಮನೆಯ ಬಳಿಯಿರುವ ರಸ್ತೆಯಲ್ಲಿ ನಿಂತುಕೊಂಡು ಮೇಲ್ಕಂಡ ಜಮೀನಿನ ಬಗ್ಗೆ ನನ್ನ ಹೆಂಡತಿ ಈಶ್ವರಮ್ಮ ಹಾಗೂ ನನ್ನ ಸೊಸೆ ಅಮಲಾರವರು ಜಮೀನಿನ ವಿಚಾರ ಮಾತನಾಡುತ್ತಿದ್ದಾಗ ವೇಣುಗೋಪಾಲರೆಡ್ಡಿರವರು ನನ್ನ ಹೆಂಡತಿ ಈಶ್ವರಮ್ಮ ಹಾಗೂ ನನ್ನ ಸೊಸೆ ಅಮಲಾರವನ್ನು ಕೈಗಳಿಂದ ಹೊಡೆಯುತ್ತಿದ್ದಾಗ, ನಾನು ಜಗಳ ಬಿಡಿಸಲು ಹೋದಾಗ ನನ್ನನ್ನು ಆರೋಪಿ ಕಾಲಿನಿಂದ ಒದ್ದು, ಮನೆಯ ಬಳಿ ಇದ್ದ ಖಾಲಿ ನೀರಿನ ಸಂಪಿಗೆ ತಳ್ಳಿದಾಗ ಎರಡೂ ಕಾಲುಗಳಿಗೆ ಗಾಯವಾಗಿರುತ್ತೆ. ನಂತರ ನಮ್ಮನ್ನು ಕುರಿತು ಅವಾಚ್ಯವಾಗಿ ಬೈದು ಈ ಜಮೀನಿನ ತಂಟೆಗೆ ಬಂದರೆ ಜೀವಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾನೆಂದು ಸದರಿಯವರನ್ನು ಠಾಣೆಗೆ ಕರೆಯಿಸಿ ನಮ್ಮ ತಂಟೆಗೆ ಬಾರದಂತೆ ಸೂಕ್ತ ರೀತಿಯ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿಕೊಡುವಂತೆ ಕೋರಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂಬರ್ 50/2020 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ. ಪ್ರಕರಣವು ಅಸಂಜ್ಞೆಯ ಪ್ರಕರಣವಾದ್ದರಿಂದ ಮೇಲ್ಕಂಡ ಆರೋಪಿಯ ವಿರುದ್ದ ಕಲಂ 323,504,506 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೋಳ್ಳಲು ಅನುಮತಿಯನ್ನು ನೀಡಲು ಘನ ನ್ಯಾಯಾಲಯಕ್ಕೆ ಕೋರಿಕೆಯನ್ನು ಸಲ್ಲಿಸಿಕೊಂಡಿದ್ದು, ದಿನಾಂಕ:27.01.2020 ರಂದು ಸಂಜೆ 5.00 ಗಂಟೆಗೆ ಘನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಬಾಗೇಪಲ್ಲಿ ರವರಿಂದ ಎಂ.ಟಿ. ನಂಬರ್ 99/2020 ರಂತೆ ಅನುಮತಿಯನ್ನು ಪಡೆದುಕೊಂಡು ಠಾಣಾ ಮೊ.ಸಂ 15/2020 ಕಲಂ 323,504,506 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತೆ.
2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 16/2020 ಕಲಂ. 323,504,506 ರೆ/ವಿ 34 ಐಪಿಸಿ :-
ದಿನಾಂಕ: 22-01-2020 ರಂದು ಮದ್ಯಾಹ್ನ 12.30 ಗಂಟೆಗೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಗಾಯಾಳು ಶ್ರೀ ವೇಣುಗೋಪಾಲರೆಡ್ಡಿ ಬಿನ್ ನಂಜಿರೆಡ್ಡಿ, 39 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ ನರಾವಲಪಲ್ಲಿ ಗ್ರಾಮ,, ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆ ಪಡೆದು ಠಾಣೆಗೆ ವಾಪಸ್ ಬಂದು ಗಾಯಾಳು ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ: 22-01-2020 ರಂದು ಸುಮಾರು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯ ಬಳಿ ಇದ್ದಾಗ ಮೇಲ್ಕಂಡ ಆರೋಪಿಗಳು ನನ್ನನ್ನು ನಿಮ್ಮಮ್ಮನ್, ನಿನ್ನಕ್ಕನ್ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಹೊಡೆದು, ಕಾಲುಗಳಿಂದ ಒದ್ದು, ಪ್ರಾಣಬೆದರಿಕೆ ಹಾಕಿರುವವರನ್ನು ಠಾಣೆಗೆ ಕರೆಯಿಸಿ ನಮ್ಮ ತಂಟೆಗೆ ಬಾರದಂತೆ ಸೂಕ್ತ ರೀತಿಯ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿಕೊಡುವಂತೆ ಕೋರಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂಬರ್ 51/2020 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ. ಪ್ರಕರಣವು ಅಸಂಜ್ಞೆಯ ಪ್ರಕರಣವಾದ್ದರಿಂದ ಮೇಲ್ಕಂಡ ಆರೋಪಿಗಳ ವಿರುದ್ದ ಕಲಂ 323,504,506 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಲು ಘನ ನ್ಯಾಯಾಲಯಕ್ಕೆ ಕೋರಿಕೆಯನ್ನು ಸಲ್ಲಿಸಿಕೊಂಡಿದ್ದು, ದಿನಾಂಕ:27.01.2020 ರಂದು ಸಂಜೆ 5.30 ಗಂಟೆಗೆ ಘನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಬಾಗೇಪಲ್ಲಿ ರವರಿಂದ ಎಂ.ಟಿ. 98/2020 ರಂತೆ ಅನುಮತಿಯನ್ನು ಪಡೆದುಕೊಂಡು ಠಾಣಾ ಮೊ.ಸಂ 16/2020 ಕಲಂ 323,504,506 ರೆ /ವಿ 34 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತೆ.
3. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 17/2020 ಕಲಂ. 15(ಎ) ಕರ್ನಾಟಕ ಅಬಕಾರಿ ಕಾಯ್ದೆ :-
ದಿನಾಂಕ; 28.01.2020 ರಂದು ಬೆಳಿಗ್ಗೆ 09-30 ಗಂಟೆಗೆ ಪಿ.ಎಸ್.ಐ. ಸಾಹೇಬರು ಠಾಣೆಯಲ್ಲಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ ದಿನಾಂಕ:28.01.2020 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ ರಾಮಸ್ವಾಮಿಪಲ್ಲಿ ಸಮೀಪ ಇರುವ ಪುರಸಭೆಗೆ ಸೇರಿದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಕುಳಿತುಕೊಂಡು ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಪಿ.ಎಸ್.ಐ ಸಾಹೇಬರು, ಹೆಚ್.ಸಿ. 14 ,ಮುರಳಿ, ಪಿಸಿ-387 ಮೋಹನ್ ಕುಮಾರ್ ಹಾಗೂ ಜೀಫ್ ಚಾಲಕ ಎ.ಹೆಚ್.ಸಿ-34 ಅಲ್ತಾಫ್ ಪಾಷಾ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ-ಕೆಎ-40,ಜಿ-537 ವಾಹನದಲ್ಲಿ ಹೋಗಿ ಬಾಗೇಪಲ್ಲಿ ಪುರದ ಗೂಳೂರು ವೃತ್ತದ ಬಳಿ ಇದ್ದ ಪಂಚರನ್ನು ಕರೆದು ವಿಚಾರವನ್ನು ತಿಳಿಸಿ ಮೇಲ್ಕಂಡ ಸ್ಥಳದಲ್ಲಿ ದಾಳಿಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ಅದರಂತೆ ನಾವುಗಳು ಮತ್ತು ಪಂಚರು ಸ್ಥಳಕ್ಕೆ ಬೆಳಿಗ್ಗೆ 08-15 ಗಂಟೆಗೆ ಹೋಗಿ ನೋಡಲಾಗಿ ಯಾರೋ ಕೆಲವರು ಗುಂಪಾಗಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದು ಅವರುಗಳ ಪೈಕಿ ಒಬ್ಬ ಆಸಾಮಿಯನ್ನು ಪೋಲಿಸರು ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಅಂಜಿ ಬಿನ್ ನಂಜಪ್ಪ, 45 ವರ್ಷ, ನಾಯಕರು, ಕೂಲಿಕೆಲಸ, ವಾಸ ಜಿಲ್ಲಾಜಿರ್ಲಾ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು ಉಳಿದವರು ಸ್ಥಳದಿಂದ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋದರು. ನಂತರ ಪಂಚರ ಸಮಕ್ಷಮ ನಾವುಗಳು ಸದರಿ ಸ್ಥಳದಲ್ಲಿ 90 ಎಂ.ಎಲ್. ನ Haywards Cheers Whisky ಯ 02 ಖಾಲಿ ಟೆಟ್ರಾ ಪ್ಯಾಕೇಟ್ ಗಳು ಮತ್ತು ಒಂದು ಲೀಟರ್ ನ 2 ಖಾಲಿ ವಾಟರ್ ಬಾಟಲ್ ಗಳು ಮತ್ತು ಮದ್ಯಸೇವನೆ ಮಾಡಿರುವ 02 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 90 ಎಂ.ಎಲ್. ನ Haywards Cheers Whisky 06 ಟೆಟ್ರಾ ಪ್ಯಾಕೇಟ್ ಗಳು ಇದ್ದು, ಒಟ್ಟು 0.540 ಲೀಟರ್ ಮದ್ಯವಿದ್ದು ಸದರಿ ಮದ್ಯದ ಅಂದಾಜು ಮೌಲ್ಯ 180/- ರೂಪಾಯಿಗಳಾಗಿರುತ್ತದೆ. ಸದರಿ ಆಸಾಮಿಯನ್ನು ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಯಾವುದಾದರು ಪರವಾನಿಗೆ ಇದೇಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಬೆಳಿಗ್ಗೆ 09-30 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ವರಧಿಯನ್ನು ನೀಡಿರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.
4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 09/2020 ಕಲಂ. 279 ಐಪಿಸಿ :-
ದಿ:27.01.2020 ರಂದು ಪಿರ್ಯಾದಿದಾರರಾದ ಅಶ್ವತ್ಥರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಕೆಎ 50 ಜೆಡ್ 8881 ನೊಂದಣಿ ಸಂಖ್ಯೆಯ ಮಾರುತಿ ಸುಜುಕಿ ಬಲೇನೋ ಕಾರನ್ನು ಹೊಂದಿದ್ದು, ದಿ:25.01.2020 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರದಿಂದ ಕೆಲಸದ ನಿಮಿತ್ತ ತಾನು ಮತ್ತು ತಮ್ಮ ಸಂಬಂಧಿಕರಾದ ಆರ್ ಸುರೇಶ್ ಬಿನ್ ಲೇಟ್ ರಾಮಕೃಷ್ಣಪ್ಪ ಕಾಮಂಡಹಳ್ಳಿ ಕೋಲಾರ ತಾಲ್ಲೂಕು & ಜಿಲ್ಲೆ ರವರು ತಿಪ್ಪೇನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದಾಗ ತಮ್ಮ ಕಾರನ್ನು ಆರ್ ಸುರೇಶ್ ರವರು ಚಾಲನೆ ಮಾಡುತ್ತಿದ್ದು, ಕಣಜೇನಹಳ್ಳಿ ಕ್ರಾಸ್ ಸಮೀಪ ಹೋಗುವಷ್ಟರಲ್ಲಿ ಕಣಜೇನಹಳ್ಳಿ ಗ್ರಾಮದ ಕಡೆಯಿಂದ ಯಾವುದೋ ಒಂದು ಹಸು ಜೋರಾಗಿ ಓಡಿ ಬಂದಿದ್ದು, ತಮ್ಮ ಕಾರನ್ನು ಚಾಲನೆ ಮಾಡುತ್ತಿದ್ದ ಆರ್ ಸುರೇಶ್ ರವರು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ ರಸ್ತೆಯ ಬಲಕ್ಕೆ ತಿರುಗಿಸಿದಾಗ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಮರದ ದಿಮ್ಮೆಗೆ ತಗುಲಿ ನಂತರ ಕಲ್ಲು ಕೂಚಕ್ಕೆ ತಗುಲಿ ಪಲ್ಟಿ ಹೊಡೆದ ಪರಿಣಾಮ ತಮ್ಮ ಕಾರಿನ ಮುಂಭಾಗ ಇಂಜನ್ , ಚಾಸಿಸ್ , ಬ್ಯಾನೆಟ್ , ರೇಡಿಯೇಟರ್ , ಮುಂಭಾಗದ ಎಡಗಡೆ ಚಕ್ರ , ಮುಂಭಾಗ & ಹಿಂಭಾಗದ ಗ್ಲಾಸ್ , ಬಾಡಿ ಮತ್ತು ಇತರೆ ಕಡೆಗಳಲ್ಲಿ ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ತನಗೆ ತರಚಿದ ಗಾಯಗಳಾಗಿದ್ದು, ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ. ಕಾರನ್ನು ಚಾಲನೆ ಮಾಡುತ್ತಿದ್ದ ಆರ್ ಸುರೇಶ್ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ತನಗೆ ತುರ್ತು ಕೆಲಸ ಇದ್ದುದರಿಂದ ಬೆಂಗಳೂರಿಗೆ ಹೋಗಿ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣನಾದ ತಮ್ಮ ಕಾರನ್ನು ಚಾಲನೆ ಮಾಡುತ್ತಿದ್ದ ಆರ್ ಸುರೇಶ್ ರವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.
5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 10/2020 ಕಲಂ. 279,337 ಐಪಿಸಿ :-
ದಿನಾಂಕ: 28/01/2020 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಎಂ.ಎನ್.ನಂಜೇಗೌಡ ಬಿನ್ ಲೇಟ್ ನಾರಾಯಣಪ್ಪ, 42 ವರ್ಷ, ವಕ್ಕಲಿಗರು, ಜಿರಾಯ್ತಿ, ಮೈಲಪ್ಪನಹಳ್ಳಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ: 24/01/2020 ರಂದು ರಾತ್ರಿ ಸುಮಾರು 8-20 ಗಂಟೆ ಸಮಯದಲ್ಲಿ ನಮ್ಮ ತಾಯಿಯವರಾದ ಶ್ರೀಮತಿ ರಾಮಕ್ಕ ಕೋಂ ಲೇಟ್ ನಾರಾಯಣಪ್ಪ, 65 ವರ್ಷ, ಗೃಹಿಣಿ ರವರು ನಮ್ಮ ಮನೆಯ ಮುಂದೆ ಇರುವ ಚಿಕ್ಕಬಳ್ಳಾಪುರ-ಮುದ್ದೇನಹಳ್ಳಿ ರಸ್ತೆಯನ್ನು ದಾಟುತ್ತಿದ್ದಾಗ ಕಳವಾರ ಗ್ರಾಮದ ಕಡೆಯಿಂದ ಬರುತ್ತಿದ್ದ KA-01, HS-9124 TVS STAR CITY PLUS ದ್ವಿಚಕ್ರ ವಾಹನವನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಮ್ಮ ತಾಯಿ ಶ್ರೀಮತಿ ರಾಮಕ್ಕರವರಿಗೆ ಡಿಕ್ಕಿ ಹೊಡೆಸಿದ್ದು, ನಮ್ಮ ತಾಯಿ ಜೋರಾಗಿ ಕಿರುಚಿಕೊಂಡು ರಸ್ತೆಯ ಮೇಲೆ ಬಿದ್ದು ಹೋಗಿದ್ದು, ಶಬ್ದ ಕೇಳಿ ನಮ್ಮ ಮನೆಯ ಹತ್ತಿರ ಇದ್ದ ನಮ್ಮ ಅಣ್ಣ ಮುನಿನಾರಾಯಣಪ್ಪ ಬಿನ್ ಲೇಟ್ ನಾರಾಯಣಪ್ಪ ಮತ್ತು ಮಂಜುನಾಥರವರು ಸ್ಥಳಕ್ಕೆ ಹೋಗಿ ನೋಡಿ ನಮ್ಮ ತಾಯಿಯವರನ್ನು ತಕ್ಷಣ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ನನಗೆ ವಿಚಾರ ತಿಳಿಸಿದರು. ನಾನು ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆ ಬಳಿ ಬಂದು ನೋಡಿದಾಗ ನಮ್ಮ ತಾಯಿಯವರ ತಲೆಗೆ ಮತ್ತು ಎಡಮೊಣಕಾಲಿಗೆ ಮೂಗೇಟಾಗಿದ್ದು, ಅಲ್ಲಿಗೆ ಅಪಘಾತವನ್ನುಂಟು ಮಾಡಿದ KA-01, HS-9124 TVS STAR CITY PLUS ದ್ವಿಚಕ್ರ ವಾಹನ ಸವಾರ ಸಹಾ ಬಂದಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ಸುಶಾಂತ್ ಬಿನ್ ಮುನೇಗೌಡ, ತೌಡನಹಳ್ಳಿ, ಬೆಂಗಳೂರು ಎಂದೂ ಅಪಘಾತದ ವಿಚಾರದಲ್ಲಿ ರಾಜಿ ಮಾಡಿಕೊಳ್ಳೋಣ ಎಂದು ತಿಳಿಸಿದನು. ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ನಮ್ಮ ತಾಯಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾವು ನಮ್ಮ ತಾಯಿಯವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದೆವು. ಅಲ್ಲಿನ ವೈದ್ಯರು ನಮ್ಮ ತಾಯಿಯವರನ್ನು ಪರೀಕ್ಷಿಸಿ ಎಡಮೊಣಕಾಲು ಕೆಳಗೆ ಮೂಳೆ ಮುರಿದಿದ್ದು, ತಲೆಯ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರಯತ್ತದೆಂದು ತಿಳಿಸಿದರು. ಸದರಿ ಆಸ್ಪತ್ರೆಯಲ್ಲಿ ಮೂಳೆ ಮುರಿತದ ಶಸ್ತ್ರ ಚಿಕಿತ್ಸೆ ಮಾಡುವ ಸೌಲಭ್ಯವಿಲ್ಲದ ಕಾರಣ ನಮ್ಮ ತಾಯಿಯವನ್ನು ಅಲ್ಲಿಂದ ಆನಂದ್ ಸರ್ಕಲ್ ಬಳಿ ಇರುವ ಮಲ್ಲಿಗೆ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದು, ಅಲ್ಲಿ ನಮ್ಮ ತಾಯಿಗೆ ಎಡಮೊಣಕಾಲಿನ ಶಸ್ತ್ರ ಚಿಕಿತ್ಸೆ ಸಹಾ ಮಾಡಿರುತ್ತಾರೆ. ರಾಜಿ ಮಾಡಿಕೊಳ್ಳೋಣ ಎಂದು ತಿಳಿಸಿದ್ದ ಅಪಘಾತಮಾಡಿದ ದ್ವಿಚಕ್ರ ವಾಹನ ಸವಾರ ರಾಜಿಗೂ ಬಾರದೇ ಇದ್ದು, ನಮ್ಮ ತಾಯಿಯವರನ್ನು ಆರೈಕೆ ಮಾಡಿಕೊಂಡಿದ್ದರಿಂದ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು, ನಮ್ಮ ತಾಯಿಗೆ ಅಪಘಾತವನ್ನುಂಟು ಮಾಡಿದ KA-01, HS-9124 TVS STAR CITY PLUS ದ್ವಿಚಕ್ರ ವಾಹನ ಸವಾರ ಸುಶಾಂತ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.
6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 58/2020 ಕಲಂ. 323,504 ಐಪಿಸಿ :-
ದಿನಾಂಕ 27-01-2020 ರಂದು ಸಂಜೆ 5-45 ಗಂಟೆಗೆ ಠಾಣೆಯ ನ್ಯಾಯಾಲಯ ಕರ್ತವ್ಯದ ಮಪಿಸಿ 03 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂದರೆ ದಿನಾಂಕ:14/01/2020 ರಂದು ವಾಸಿಯಾದ ಶ್ರೀ ಮಲ್ಲಯ್ಯ ಬಿನ್ ಮುದ್ದವೀರಯ್ಯ, 46 ವರ್ಷ, ಲಿಂಗಾಯುತರು, ವೈಜಕೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ:13/01/2020 ರಂದು ಮದ್ಯಾಹ್ನ ಸುಮಾರು 2.00 ಗಂಟೆ ಸಮಯದಲ್ಲಿ ತಮ್ಮ ಮನೆಯ ಮುಂದೆ ಇರುವ ಚರಂಡಿಯಲ್ಲಿ ಬಿದ್ದಿದ್ದ ಕಲ್ಲುಗಳನ್ನು ಎತ್ತಿ ಹಾಕುತ್ತಿದ್ದಾಗ ತಮ್ಮ ಗ್ರಾಮದ ಚಂದ್ರಪ್ಪ ಬಿನ್ ಪಿಳ್ಳಮುನಿಯಪ್ಪರವರು ಬಂದು ಯಾಕೆ ಚರಂಡಿಯಲ್ಲಿ ಕಲ್ಲುಗಳನ್ನು ಎತ್ತಿ ಹಾಕುತ್ತಿರುವುದು ಎಂದು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮೈಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಆದ್ದರಿಂದ ಸದರಿ ಮೇಲ್ಕಂಡ ಚಂದ್ರಪ್ಪರವರನ್ನು ಠಾಣೆಗೆ ಕರೆಸಿ ತಮ್ಮ ತಂಟೆಗೆ ಬಾರದಂತೆ ಸೂಕ್ತ ಬಂದೋಬಸ್ತ್ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಮೇಲ್ಕಂಡಂತೆ ಎನ್.ಸಿ.ಆರ್ ದಾಖಲಿಸಿಕೊಂಡಿರುತ್ತೆ. ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದು, ಕಲಂ:323-504 ಐ.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಬೇಕಾಗಿ ಘನ ನ್ಯಾಯಾಲಯದಲ್ಲಿ ಕೋರಿರುತ್ತೆ.
7. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 59/2020 ಕಲಂ. 279,337 ಐಪಿಸಿ :-
ದಿನಾಂಕ 27-01-2020 ರಂದು ಸಂಜೆ 6-15 ಗಂಟೆಗೆ ಜರೀನ್ ತಾಜ್ ಕೋಂ ಮೌಲಾಖಾನ್, 45ವರ್ಷ, ಮುಸ್ಲಿಂಜನಾಂಗ, ಮನೆಗೆಲಸ, 15ನೇ ವಾರ್ಡ್, ವಿನಾಯಕನಗರ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ದಿನಾಂಕ:24-01-2020 ರಂದು ತಾನು ಮತ್ತು ತನ್ನ ಗಂಡನಾದ ಮೌಲಾಖಾನ್ ಬಿನ್ ದಸ್ತಗೀರ್ ಖಾನ್, 50ವರ್ಷರವರು ತಮ್ಮ ಸಂಬಂದಿಕರೊಬ್ಬರು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಅವರನ್ನು ನೋಡಿಕೊಂಡು ಬರಲು ತಮ್ಮ ಬಾಬತ್ತು ಕೆಎ-40 ಎಲ್-103 ನೋಂದಣಿ ಸಂಖ್ಯೆಯ ಪ್ಯಾಶನ್ ಪ್ಲಸ್ ದ್ವಿಚಕ್ರವಾಹನದಲ್ಲಿ ಹೋಗಿ ಅವರನ್ನು ಮಾತನಾಡಿಸಿಕೊಂಡು ವಾಪಸ್ಸು ಕೋಲಾರ ಚಿಂತಾಮಣಿ ರಸ್ತೆಯಲ್ಲಿ ಚಿಂತಾಮಣಿಗೆ ಬರುತ್ತಿದ್ದಾಗ ಅದೇ ದಿನ ಸಂಜೆ 7-30 ಗಂಟೆಯ ಸಮಯದಲ್ಲಿ ಗಡದಾಸನಹಳ್ಳಿ ಮತ್ತು ಕುರುಬೂರು ಫಾರಂ ನಡುವೆ ಎದುರುಗಡೆಯಿಂದ ಅಂದರೆ ಚಿಂತಾಮಣಿ ಕಡೆಯಿಂದ ಬಂದ ಕೆಎ-53 ಡಬ್ಲ್ಯೂ-5972 ನೋಂದಣಿ ಸಂಖ್ಯೆಯ ಬಜಾಜ್ ಡಿಸ್ಕವರ್ ದ್ವಿಚಕ್ರವಾಹನದ ಸವಾರನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ತಮ್ಮ ದಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ್ದು, ಅದರ ಪರಿಣಾಮ ತಮ್ಮ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ತನ್ನ ಗಂಡ ಮೌಲಾಖಾನ್ ಮತ್ತು ತಾನು ದ್ವಿಚಕ್ರವಾಹನ ಸಮೇತ ಕೆಳಗೆ ಬಿದ್ದು ಹೋಗಿ ತನ್ನ ಗಂಡನಿಗೆ ಬಲಗೈಗೆ ಮೂಳೆ ಮುರಿತದ ರಕ್ತಗಾಯಗಳು, ಬಲಗಾಲಿನ ಪಾದಕ್ಕೆ, ಬಲಮೊಣಕಾಲಿಗೆ ರಕ್ತಗಾಯ ಹಾಗೂ ಮೈಮೇಲೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿರುತ್ತವೆ. ದ್ವಿಚಕ್ರವಾಹನದ ಹಿಂಬದಿಯಲ್ಲಿ ಕುಳಿತಿದ್ದ ತನಗೆ ಬಲಗಾಲು ಮತ್ತು ಬಲಗೈಗೆ ಮೂಗೇಟುಗಳಾಗಿರುತ್ತವೆ. ಅಪಘಾತಪಡಿಸಿದ ದ್ವಿಚಕ್ರವಾಹನದ ಸವಾರನಿಗೂ ಸಹಾ ಬಲಗೈಗೆ ರಕ್ತಗಾಯ, ಬೆನ್ನಿಗೆ ಮೂಗೇಟುಗಳಾಗಿರುತ್ತವೆ. ನಂತರ ಗಾಯಗೊಂಡಿದ್ದ ತನ್ನನ್ನು ಮತ್ತು ತನ್ನ ಗಂಡನನ್ನು ಯಾರೋ ಸಾರ್ವಜನಿಕರು ಉಪಚರಿಸಿ ಯಾವುದೋ ಆಟೋದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ತಾನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತೇನೆ. ತನ್ನ ಗಂಡನಿಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿದ್ದು, ನಂತರ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತನ್ನ ಗಂಡನನ್ನು ಆಂಬುಲೆನ್ಸ್ನಲ್ಲಿ ತಾನು ಮತ್ತು ತನ್ನ ಮೈದ ಮಾಪೀರ್ ಖಾನ್ ಬಿನ್ ದಸ್ತಗೀರ್ ಖಾನ್ ಮತ್ತು ಮೈಲಾಂಡ್ಲಹಳ್ಳಿ ಗ್ರಾಮದ ಶಬ್ಬೀರ್ ಬೇಗ್ ಬಿನ್ ಹಾಜಿ ಬೇಗ್ರವರು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸುತ್ತಿರುತ್ತೇವೆ. ಅಪಘಾತಪಡಿಸಿದ ದ್ವಿಚಕ್ರವಾಹನದ ಸವಾರನು ಚಿಂತಾಮಣಿ ತಾಲ್ಲೂಕು ಜೀಡರಹಳ್ಳಿ ಗ್ರಾಮದ ಮುನಿರೆಡ್ಡಿ ಬಿನ್ ನಾರಾಯಣಪ್ಪ ಎಂಬುದಾಗಿ ತಿಳಿಯಿತು. ತನ್ನ ಗಂಡನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಅಪಘಾತಪಡಿಸಿದ ಮೇಲ್ಕಂಡ ಕೆಎ-53 ಡಬ್ಲ್ಯೂ-5972 ನೋಂದಣಿ ಸಂಖ್ಯೆಯ ಬಜಾಜ್ ಡಿಸ್ಕವರ್ ದ್ವಿಚಕ್ರವಾಹನದ ಸವಾರನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.
8. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 60/2020 ಕಲಂ. 279,337 ಐಪಿಸಿ ರೆ/ವಿ 134 (ಎ&ಬಿ) ಐಎಂವಿ ಆಕ್ಟ್ :-
ದಿನಾಂಕ 27-01-2020 ರಂದು ಸಂಜೆ 6-45 ಗಂಟೆಗೆ ಎನ್.ಶೇಖರ್ ಬಿನ್ ಪಿ.ನರಸಪ್ಪ, 46ವರ್ಷ, ಬಲಜಿಗರು, ವ್ಯವಸಾಯ, ವೈಜುಕೂರು ಗ್ರಾಮ, ಚಿಂತಾಮಣಿ ತಾಲ್ಲೂಕ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನಿನ್ನೆ ದಿನಾಂಕ: 26-01-2020 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ತಾನು ತನ್ನ ಮಗನಾದ ಎಸ್.ಕೇಶವ, 21ವರ್ಷ ರವರನ್ನು ಚಿಂತಾಮಣಿಗೆ ಬಸ್ಸಿಗೆ ಬಿಡುವ ಸಲುವಾಗಿ ನಮ್ಮ ಬಾಬತ್ತು ಕೆಎ-05 ಇಕ್ಯೂ-5201 ನೋಂದಣಿ ಸಂಖ್ಯೆಯ ಟಿವಿಎಸ್ ಫಿಯರೋ ಎಫ್-2 ದ್ವಿಚಕ್ರವಾಹನದಲ್ಲಿ ಚಿಂತಾಮಣಿ-ಬೆಂಗಳೂರು ರಸ್ತೆಯಲ್ಲಿರುವ ವೈಜುಕೂರು ಕ್ರಾಸ್ನ ಶ್ರೀ ಆಂಜನೇಯಸ್ವಾಮಿ ದೇವಾಲಯದ ಮುಂದೆ ಬಂದು ಪುಟ್ಪಾತ್ನಲ್ಲಿ ದ್ವಿಚಕ್ರವಾಹನವನ್ನು ನಿಲ್ಲಿಸುತ್ತಿದ್ದಂತೆ ಬೆಂಗಳೂರು ಕಡೆಯಿಂದ ಬಂದ ಎಪಿ-28 ಡಿ.ಎನ್-4166 ನೋಂದಣಿ ಸಂಖ್ಯೆಯ ಹೋಂಡಾ ಯೂನಿಕಾರ್ನ್ ದ್ವಿಚಕ್ರವಾಹನದ ಸವಾರನು ತನ್ನ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ದ್ವಿಚಕ್ರವಾಹನದ ಹಿಂಬದಿಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ್ದು, ಅದರ ಪರಿಣಾಮ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ತಾನು ಮತ್ತು ಹಿಂಬದಿಯಲ್ಲಿ ಕುಳಿತಿದ್ದ ತನ್ನ ಮಗ ಕೇಶವರವರು ದ್ವಿಚಕ್ರವಾಹನ ಸಮೇತ ಕೆಳಗೆ ಬಿದ್ದು ಹೋಗಿದ್ದು, ತನ್ನ ಮಗನಿಗೆ ಎರಡೂ ಕಾಲುಗಳ ತೊಡೆಗಳ ನಡುವೆ ರಕ್ತಗಾಯವಾಗಿರುತ್ತದೆ ಹಾಗೂ ಬಲಗಾಲಿನ ಹಿಮ್ಮಡಿಗೆ ತರಚಿದ ಗಾಯಗಳಾಗಿರುತ್ತವೆ. ತನಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಅಪಘಾತಪಡಿಸಿದ ದ್ವಿಚಕ್ರವಾಹನದ ಸವಾರನಿಗೂ ಸಹಾ ಮೈಮೇಲೆ ಮೂಗೇಟುಗಳಾಗಿರುತ್ತವೆ. ತನ್ನ ದ್ವಿಚಕ್ರವಾಹನ ಜಖಂಗೊಡಿರುತ್ತದೆ. ಅಪಘಾತಪಡಿಸಿದ ದ್ವಿಚಕ್ರವಾಹನದ ಸವಾರನು ಸ್ಥಳದಲ್ಲಿ ನಿಲ್ಲಸದೇ ಹೊರಟು ಹೋಗಿರುತ್ತಾನೆ. ನಂತರ ಗಾಯಗೊಂಡಿದ್ದ ತನ್ನ ಮಗನನ್ನು ತಾನು ಮತ್ತು ತನ್ನ ಅಣ್ಣನ ಮಗನಾದ ಮುರಳಿ ಮೋಹನ್ರವರು ಉಪಚರಿಸಿ ಯಾವುದೋ ಕಾರಿನಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ತನ್ನ ಮಗನಿಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿದ್ದು, ನಂತರ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿ ನಗರದಲ್ಲಿರುವ ರಾಮಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸುತ್ತಿರುತ್ತೇವೆ. ತನ್ನ ಮಗನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಅಪಘಾತಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ಮೇಲ್ಕಂಡ ಎಪಿ-28 ಡಿ.ಎನ್-4166 ನೋಂದಣಿ ಸಂಖ್ಯೆಯ ಹೋಂಡಾ ಯೂನಿಕಾರ್ನ್ ದ್ವಿಚಕ್ರವಾಹನದ ಸವಾರನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.
9. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 24/2020 ಕಲಂ. 420,511 ಐಪಿಸಿ ಮತ್ತು ಸೆಕ್ಷನ್ 9,39,51 WILD ANIMAL PROTECTION ACT, 1972 :-
ದಿನಾಂಕ 27/01/2020 ರಂದು ಶ್ರೀ ಮೋಹನ್, ಪಿ.ಎಸ್.ಐ, ಗೌರಿಬಿದನೂರು ಗ್ರಾಮಾಂತರ ಠಾಣೆ. ರವರು ಠಾಣೆಗೆ ಹಾಜರಾಗಿ ವರದಿಯ ಮೂಲಕ ಸೂಚಿಸಿದ್ದೇನೆಂದರೇ, ದಿನಾಂಕ: 27/1/2020 ರಂದು ಸಂಜೆ 5-00 ಗಂಟೆ ಸಮಯದಲ್ಲಿ ನಾನು ಗಸ್ತಿನಲ್ಲಿದ್ದಾಗ, ನನಗೆ ಬಂದ ಮಾಹಿತಿಯೇನೆಂದರೆ, ನನ್ನ ಠಾಣಾ ಸರಹದ್ದಿನ ಇಡಗೂರು ಗ್ರಾಮದ ಕೊರಚರ ಮಠದ ಬಳಿ ಯಾರೋ ಮೂರು ಜನ ವ್ಯಕ್ತಿಗಳು ಅರಣ್ಯ ಸಂಪತ್ತಾದ ಎರಡು ತಲೆ ಹಾವನ್ನು ಇಟ್ಟುಕೊಂಡು, ಸಾರ್ವಜನಿಕರಿಗೆ ಈ ಹಾವನ್ನು ಖರೀದಿಸಿ, ಮನೆಯಲ್ಲಿಟ್ಟುಕೊಂಡರೆ ಶ್ರೀಮಂತರಾಗುತ್ತಾರೆಂದು ನಂಬಿಸಿ, ಜನರಿಗೆ ಮೋಸ ಮಾಡಿ, ಮಾರಾಟ ಮಾಡಿ, ಅಕ್ರಮವಾಗಿ ಹಣ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿ ಪಂಚ ಸಾಕ್ಷಿಗಳನ್ನು ಕರೆದುಕೊಂಡು, ಇಡಗೂರು ಗ್ರಾಮದ ಬಳಿ ಕೊರಚರ ಮಠದ ಬಳಿ ಮರೆಯಲ್ಲಿ ನಿಂತು ನೋಡಲಾಗಿ, ಮೂರು ಜನ ವ್ಯಕ್ತಿಗಳು ಒಂದು ಹಾವನ್ನು ಬಿಂದಿಗೆಯಲ್ಲಿ ಇಟ್ಟು ಕೊಂಡು, ಜನರಿಗೆ ಮೋಸ ಮಾಡುವ ಉದ್ದೇಶದಿಂದ ಕಾಯುತ್ತಿರುವುದು ಕಂಡು ಬಂದು, ನಾನು ಸಿಬ್ಬಂದಿಯೊಂದಿಗೆ ಅವರನ್ನು ಸುತ್ತುವರೆದು ಹಿಡಿದುಕೊಂಡು ಅವರ ಹೆಸರು ವಿಳಾಸವನ್ನು ಕೇಳಲಾಗಿ, ಅವರು 1) ನರಸಿಂಹ ಬಿನ್ ಗಂಗಾಧರಪ್ಪ, 19 ವರ್ಷ, ಪ.ಜಾತಿ, ಹೆಚ್. ನಾಗಸಂದ್ರ ಗ್ರಾಮ, 2) ಅನಿಲ್ ಬಿನ್ ಅಶ್ವತ್ಥಪ್ಪ 22 ವರ್ಷ, ಪ.ಜಾತಿ, ಸೋಮಸುಂದರಪಾಳ್ಯ, ಹೆಚ್.ಎಸ್.ಆರ್. ಬಡಾವಣೆ, ಬೆಂಗಳೂರು, ಸ್ವಂತ ಸ್ಥಳ, ಮಂಚೇನಹಳ್ಳಿ ಗ್ರಾಮ, ಹಾಗು 3) ಹರೀಶ್ ಕುಮಾರ್ ಬಿನ್ ಕದಿರಪ್ಪ, 38 ವರ್ಷ, ಪ.ಜಾತಿ, ಗಂಗಸಂದ್ರ ಗ್ರಾಮ, ಗೌರೀಬಿದನೂರು ತಾಲ್ಲೂಕು, ಎಂದು ತಿಳಿಸಿದ್ದು, ಇವರು ಅಫಕ್ರಮವಾಗಿ, ಅರಣ್ಯದಲ್ಲಿ ವಾಸಿಸುವ ಎರಡು ತಲೆಯ ಮಣ್ಣು ಮುಕ್ಕ ಹಾವನ್ನು ಹಿಡಿದುಕೊಂಡು ಬಂದು, ಯಾವುದೇ ಪರವಾನಗಿ ಇಲ್ಲದೇ ಜನರಿಗೆ ಮೋಸ ಮಾಡುವ ಉದ್ದೇಶದಿಂದ ಈ ಹಾವನ್ನು ಮನೆಯಲ್ಲಿಟ್ಟುಕೊಂಡು ಪೂಜೆ ಮಾಡಿದರೆ, ಶ್ರೀಮಂತರಾಗುತ್ತಾರೆಂದು ಜನರಿಗೆ ನಂಬಿಸಿ, ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದ್ದು, ಆರೋಪಿಗಳನ್ನು ಮತ್ತು ಅವರ ಬಳಿ ಇದ್ದ ಒಂದು ಎರಡು ತಲೆ ಮಣ್ಣು ಮುಕ್ಕ ಹಾವನ್ನು ಮಹಜರ್ ಮೂಲಕ ವಶಕ್ಕೆ ಪಡೆದುಕೊಂಡಿರುತ್ತೆ. ಸದರಿ ಆರೋಪಿಗಳು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಅರಣ್ಯ ಸಂಪತ್ತಾದ ಎರಡು ತಲೆಯ ಮಣ್ಣು ಮುಕ್ಕ ಹಾವನ್ನು ಮಾರಾಟ ಮಾಡಲು ಪ್ರಯತ್ನಿಸಿರುವುದರಿಂದ ಇವರ ಮೇಲೆ ಕಲಂ: 420,511 IPC R/W ಕಲಂ: 9,39,51 WILD ANIMAL PROTECTION ACT 1972 ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.
10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 16/2020 ಕಲಂ. 279,304 ಐಪಿಸಿ :-
ದಿನಾಂಕ 27/01/2020 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವೆಂಕಟೇಶಪ್ಪ ಬಿನ್ ದೊಡ್ಡ ರಾಮಯ್ಯ, 55 ವರ್ಷ, ನಾಯಕರು, ಜಿರಾಯ್ತಿ, ವಾಸ-ವಲಸೇನಹಳ್ಳಿ ಗ್ರಾಮ, ಬಾಶೆಟ್ಟಿಹಳ್ಳಿ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ 3 ಜನ ಮಕ್ಕಳಿದ್ದು 1 ನೇ ಹರೀಶ, 2 ನೇ ಭಾರ್ಗವಿ, 3 ನೇ ಚಂದ್ರರವರಾಗಿರುತ್ತಾರೆ. ತಾನು ದೇವನಹಳ್ಳಿ ತಾಲ್ಲೂಕು ಚಂದೇನಹಳ್ಳಿ ಗ್ರಾಮದ ಕಲಾವತಿ ರವರನ್ನು ಮದುವೆ ಆಗಿರುತ್ತೇನೆ. ಹೀಗಿರುವಲ್ಲಿ ದಿನಾಂಕ 27/01/2020 ರಂದು ತನ್ನ ಮಗನಾದ ಹರೀಶ್ ರವರು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಚಂದೇನಹಳ್ಳಿಗೆ ಹೋಗಿ ಬರುವುದಾಗಿ ಹೇಳಿ ಕೆಎ-43-ಜೆ-7417 ಹಿರೋಹೊಂಡಾ ದ್ವಿ ಚಕ್ರ ವಾಹನದಲ್ಲಿ ಹೋಗಿರುತ್ತಾನೆ. ನಂತರ ಇದೇ ದಿನ ಮದ್ಯಾಹ್ನ 2-15 ಗಂಟೆಯಲ್ಲಿ ಚಂದೇನಹಳ್ಳಿ ಗ್ರಾಮದ ತನ್ನ ಬಾಮೈದ ಮುನೀಂದ್ರ ರವರು ತನಗೆ ದೂರವಾಣಿ ಕರೆ ಮಾಡಿ ಹರೀಶ್ ನಿಗೆ ಅಂಕತಟ್ಟಿ ಗೇಟ್ ಬಳಿ ಅಪಘಾತವಾಗಿರುವುದಾಗಿ ಅಲ್ಲಿದ್ದವರು ಹರೀಶ್ ನ ಪೋನಿನಿಂದ ಪೋನ್ ಮಾಡಿ ತಿಳಿಸಿರುತ್ತಾರೆ. ತಾನು ಬರುತ್ತಿದ್ದೇನೆ ನೀನು ಬಾ ಎಂದು ತಿಳಿಸಿದ್ದು, ಆಗ ತಾನು ಸ್ಥಳಕ್ಕೆ ಬಂದು ನೋಡಲಾಗಿ ತನ್ನ ಮಗ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ವಿಚಾರ ತಿಳಿದುಕೊಳ್ಳಲಾಗಿ ತನ್ನ ಮಗ ಹರೀಶ ಚಂದೇನಹಳ್ಳಿಗೆ ಹೋಗಲು ಕೆಎ-43-ಜೆ-7417 ಹಿರೋಹೊಂಡಾ ದ್ವಿ ಚಕ್ರ ವಾಹನದಲ್ಲಿ ಶಿಡ್ಲಘಟ್ಟ-ವಿಜಯಪುರ ರಸ್ತೆಯ ಅಂಕತಟ್ಟಿ ಗ್ರಾಮದ ವೆಂಕಟೇಶಪ್ಪ ಬಿನ್ ಲೇಟ್ ದೊಡ್ಡ ಬಚ್ಚಪ್ಪ ರವರ ಜಮೀನಿನ ಮುಂಭಾಗದ ರಸ್ತೆಯಲ್ಲಿ ದ್ವಿ ಚಕ್ರ ವಾಹನದಲ್ಲಿ ಪೆಟ್ರೋಲ್ ಖಾಲಿ ಆಗಿದ್ದರಿಂದ ಮದ್ಯಾಹ್ನ 2-00 ಗಂಟೆಯಲ್ಲಿ ರಸ್ತೆಯಲ್ಲಿ ತಳ್ಳಿಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಹಿಂಬದಿಯಿಂದ ಕೆಎ-40-ಇಎ-4481 ಪಲ್ಸರ್ ದ್ವಿ ಚಕ್ರ ವಾಹನದ ಸವಾರ ತಾನು ಮದ್ಯಪಾನ ಮಾಡಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕೊಂಡು ಬಂದು ತನ್ನ ಮಗ ತಳ್ಳಿಕೊಂಡು ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಮತ್ತು ತನ್ನ ಮಗನಿಗೆ ಡಿಕ್ಕಿ ಹೊಡೆಸಿದ ಪರಿಣಾಮದಿಂದ ತನ್ನ ಮಗನಿಗೆ ತಲೆಗೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ತನ್ನ ಮಗನ ಮೃತ ದೇಹವನ್ನು ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು ಬಂದು ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ಇಟ್ಟಿರುತ್ತೇವೆ. ಕೆಎ-40-ಇಎ-4481 ಪಲ್ಸರ್ ದ್ವಿ ಚಕ್ರ ವಾಹನದ ಸವಾರನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೊಟ್ಟ ದೂರು.
11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 17/2020 ಕಲಂ. 323,324,504,506 ರೆ/ವಿ 34 ಐಪಿಸಿ :-
ದಿನಾಂಕ 28/01/2020 ರಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ಶ್ರೀಮತಿ ಆಶಾ ಕೋಂ ಮಂಜುನಾಥ, 26 ವರ್ಷ, ಕುರುಬರು, ಜಿರಾಯ್ತಿ, ವಾಸ-ಪೈಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ತನ್ನ ಮಾವನಾದ ಪಿಳ್ಳ ಮುನಿಯಪ್ಪ ರವರಿಗೆ 1 ನೇ ಪಿಳ್ಳಮ್ಮ, 2 ನೇ ಚನ್ನಮ್ಮ ಎಂಬ ಹೆಂಡತಿಯರಿದ್ದು, ತನ್ನ ಮಾವ ಪಿಳ್ಳ ಮುನಿಯಪ್ಪ ರವರು ತನ್ನ ಅತ್ತೆ ಲೇಟ್ ಚನ್ನಮ್ಮ ರವರಿಗೆ ವಾಸವಿರಲು ಮನೆಯನ್ನು ಕೊಟ್ಟಿದ್ದು, ಸದರಿ ಮನೆಯಲ್ಲಿ ತಾನು, ತನ್ನ ಗಂಡನಾದ ಮಂಜುನಾಥ ರವರು ವಾಸವಿದ್ದು, ಈಗ್ಗೆ 8 ವರ್ಷಗಳ ಹಿಂದೆ ತನ್ನ ಅತ್ತೆ ಚನ್ನಮ್ಮ ರವರು ಮೃತಪಟ್ಟಿರುತ್ತಾರೆ. ಹೀಗಿರುವಾಗ ಈ ದಿನ ದಿನಾಂಕ 28/01/2020 ರಂದು ಬೆಳಿಗ್ಗೆ 7-00 ಗಂಟೆ ಸಮಯದಲ್ಲಿ ತನ್ನ ಮಾವ ಪಿಳ್ಳ ಮುನಿಯಪ್ಪ, ಈತನ ಹೆಂಡತಿ ಪಿಳ್ಳಮ್ಮ ಹಾಗು ಇವರ ಮಗನಾದ ಮಲ್ಲೇಶ್ ರವರು ತಮ್ಮ ಮನೆಯ ಬಳಿ ಬಂದು ತಾವು ವಾಸವಿರುವ ಮನೆಯನ್ನು ಖಾಲಿ ಮಾಡುವಂತೆ ತನ್ನ ಗಂಡನಾದ ಮಂಜುನಾಥ ರವರ ಮೇಲೆ ಜಗಳ ತೆಗೆದಿದ್ದು, ಆಗ ತನ್ನ ಗಂಡ ತಾನು ಮನೆ ಖಾಲಿ ಮಾಡುವುದಿಲ್ಲ ಎಂದು ಹೇಳುತ್ತಿದ್ದಂತೆ ಮೇಲ್ಕಂಡ 3 ಜನರು ತನ್ನ ಗಂಡನಿಗೆ ಲೋಫರ್ ನನ್ನ ಮಗನೇ, ಸೂಳೇ ನನ್ನ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿ ಜಗಳ ಮಾಡುತ್ತಿದ್ದಾಗ ಜಗಳ ಬಿಡಿಸಲು ತಾನು ಅಡ್ಡ ಹೋದಾಗ ತನ್ನ ಅತ್ತೆ ಪಿಳ್ಳಮ್ಮ ರವರು ತನಗೆ ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದಾಗ ತನ್ನ ಮೈದುನ ಮಲ್ಲೇಶ್ ರವರು ಮನೆಯ ಬಳಿ ಬಿದ್ದಿದ್ದ ದೊಣ್ಣೆಯನ್ನು ತೆಗೆದುಕೊಂಡು ಬಲ ಮೊಣ ಕೈಗೆ ಹೊಡೆದು ನೋವುಂಟು ಮಾಡಿ ಜಗಳ ಮಾಡುತ್ತಿದ್ದಾಗ ತನ್ನ ಪಕ್ಕದ ಮನೆಯವರಾದ ಮುನಿವೆಂಕಟರವಣಪ್ಪ ಬಿನ್ ದೊಡ್ಡ ಮರಿಯಪ್ಪ. ಮುನಿನಾರಾಯಣಪ್ಪ ಬಿನ್ ಸಂದಪ್ಪ ಹಾಗು ಇತರರು ಅಡ್ಡ ಬಂದು ಜಗಳ ಬಿಡಿಸಿದಾಗ ಮೇಲ್ಕಂಡವರು ತನ್ನನ್ನು ಮತ್ತು ತನ್ನ ಗಂಡನನ್ನು ಕುರಿತು ನೀವು ಮನೆಯನ್ನು ಖಾಲಿ ಮಾಡದಿದ್ದರೆ ನಿಮಗೆ ಒಂದು ಗತಿ ಕಾಣಿಸುವುದಾಗಿ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ, ನಂತರ ತನ್ನ ಗಂಡ ತನ್ನನ್ನು ದ್ವಿ ಚಕ್ರ ವಾಹನದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾನೆ. ಆದ ಕಾರಣ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ಹೇಳಿಕೆ.