ದಿನಾಂಕ :27/11/2020 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.283/2020 ಕಲಂ:78(3) ಕೆ.ಪಿ ಆಕ್ಟ್:-

          ದಿ: 25-11-2020 ರಂದು ಮದ್ಯಾಹ್ನ 1:30 ಗಂಟೆಗೆ ಚಿಕ್ಕಬಳ್ಳಾಪುರ ಡಿ.ಸಿ.ಬಿ ಪೊಲೀಸ್ ಠಾಣೆಯ ಕೃಷ್ಣಪ್ಪ ಹೆಚ್.ಸಿ 80 ರವರು ಠಾಣೆಗೆ ಮಾಲು, ಮಹಜರ್ ಮತ್ತು ಆಸಾಮಿಯೊಂದಿಗೆ ಹಾಜರಾಗಿ ನೀಡಿದ ವರಧಿಯನ್ನು ಪಡೆದುಕೊಂಡಿದ್ದರ ಸಾರಾಂಶ – ದಿ: 25-11-2020 ರಂದು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ನೇಮಿಸಿದ್ದು, ಅದರಂತೆ ಬಾಗೇಪಲ್ಲಿ ಪುರದ ಟಿ.ಬಿ ಕ್ರಾಸ್, ಗಂಗಮ್ಮ ಗುಡಿ ರಸ್ತೆ, ಬಸ್ ನಿಲ್ದಾಣ, ಕಡೆಗಳಲ್ಲಿ ಓಡಾಡಿ ಬಾತ್ಮಿಯನ್ನು ಸಂಗ್ರಹಿಸುತ್ತಿದ್ದು, ಮದ್ಯಾಹ್ನ 1:00 ಗಂಟೆಯಲ್ಲಿ ಬಸ್ ನಿಲ್ದಾಣ ಬಳಿ ಇರುವಾಗ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಮಾಹಿತಿ ಬಂದ ಸ್ಥಳವಾದ ಬಾಗೇಪಲ್ಲಿ ಟೌನ್ ಡಿ.ವಿ.ಜಿ ರಸ್ತೆಯಲ್ಲಿ ಮುನ್ಸಿಪಲ್ ಕಾಂಪ್ಲೆಕ್ಸ್ ಮುಂಭಾಗ ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿ ಎಂದು ಕೂಗುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಮಟ್ಕಾ ಅಂಕಿಗಳನ್ನು ಬರೆಯುತ್ತಿದ್ದ ಆಸಾಮಿಯನ್ನು ಪಂಚರ ಸಮಕ್ಷಮ ಸುತ್ತುವರೆದು ಹಿಡಿದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಎಂ.ಜಿ ಆ`ನಂದ ಬಿನ್ ಗೋವಿಂದಪ್ಪ, 52 ವರ್ಷ, ಬಲಜಿಗ ಜನಾಂಗ, ವಾಸ ಕೊಂಡಂವಾರಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾರೆ.  ನಂತರ ಆಸಾಮಿಯ ಬಳಿ ಪರಿಶೀಲಿಸಲಾಗಿ 1] ವಿವಿಧ ಅಂಕಿಗಳಿಗೆ, ವಿವಿಧ ಮೊತ್ತ ಬರೆದಿರುವ ಒಂದು ಮಟ್ಕಾ ಚೀಟಿ 2] ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು 2840/- ರೂ ನಗದು ಹಣವಿದ್ದು, ಪಂಚರ ಸಮಕ್ಷಮ ಸದರಿಯವರುಗಳನ್ನು ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ.  ನಂತರ ಮಟ್ಕಾ ಚೀಟಿಯನ್ನು ಬರೆಯುತ್ತಿದ್ದ ಆಸಾಮಿಯನ್ನು ಮೇಲ್ಕಂಡ ಮಾಲು ಹಾಗೂ ಅಸಲು ಪಂಚನಾಮೆಯೊಂದಿಗೆ ಮುಂದಿನ ಕಾನೂನು ಕ್ರಮಕ್ಕಾಗಿ ಠಾಣಾಧಿಕಾರಿಗಳಾದ ತಮ್ಮ ಮುಂದೆ ಹಾಜರುಪಡಿಸಿರುತ್ತೇನೆ, ಎಂದು ಇದ್ದ ದೂರಿನ ಮೇರೆಗೆ ಠಾಣೆಯಲ್ಲಿ ಎನ್.ಸಿ.ಆರ್ 687/2020 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ.  ದಿ: 26-11-2020 ರಂದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ.

2) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.284/2020 ಕಲಂ:78(3) ಕೆ.ಪಿ ಆಕ್ಟ್:-

          ದಿ: 25-11-2020 ರಂದು ರಾತ್ರಿ 9:30 ಗಂಟೆಗೆ ಡಿ.ಸಿ.ಬಿ ಸಿ.ಇ.ಎನ್ ಪೊಲೀಸ್ ಠಾಣೆಯ ಹೆಚ್.ಸಿ 80 ಕೃಷ್ಣಪ್ಪ ರವರು ಮಾಲು, ಮಹಜರ್, ಮತ್ತು ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶ – ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ/ಸಿ.ಇ.ಎನ್ ಪೊಲೀಸ್ ಠಾಣೆಯ ಹೆಚ್.ಸಿ 80 ಕೃಷ್ಣಪ್ಪ ಆದ ನನಗೆ ಮತ್ತು ಪಿಸಿ-142 ಅಶೋಕ, ಪಿಸಿ-152 ಜಯಣ್ಣ ರವರಿಗೆ ನಮ್ಮ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ ಎನ್.ರಾಜಣ್ಣ ರವರು ಈ ದಿನ ದಿನಾಂಕ 25/11/2020 ರಂದು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ನೇಮಿಸಿದ್ದ ಅದರಂತೆ   ಬಾಗೇಪಲ್ಲಿ ತಾಲ್ಲೂಕು ವಡ್ಡರಪಾಳ್ಯ, ಹೊಸಕೋಟೆ, ಪೂಲವಾರಪಲ್ಲಿ   ಕಡೆಗಳಲ್ಲಿ ಓಡಾಡಿ ಬಾತ್ಮಿಯನ್ನು ಸಂಗ್ರಹಿಸುತ್ತಿದ್ದು, ಸಂಜೆ 6-45 ಗಂಟೆಯಲ್ಲಿ ಪೂಲವಾರಪಲ್ಲಿ  ಗ್ರಾಮದಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಯಾರೋ ಒಬ್ಬ ಆಸಾಮಿಯು ಪರಗೋಡು ಗ್ರಾಮದ ಬಸ್ ನಿಲ್ದಾಣದ ಬಳಿ ಕಾನೂನು ಭಾಹಿರವಾಗಿ ಮಟ್ಕ ಅಂಕಿಗಳನ್ನು ಬರೆಯುತ್ತಿರುವುದಾಗಿ ಮಾಹಿತಿ ಬಂದಿದ್ದು ಪಂಚರೊಂದಿಗೆ ಮಾಹಿತಿ ಬಂದ ಸ್ಥಳವಾದ ಪರಗೋಡು ಗ್ರಾಮದ ಬಸ್ ನಿಲ್ದಾಣದ ಬಳಿ ಹೋಗಿ ನಾವು ಮರೆಯಲ್ಲಿ ನಿಂತು ನೋಡಲಾಗಿ  ಯಾರೋ ಒಬ್ಬ ಆಸಾಮಿಯು ಬಸ್ ನಿಲ್ದಾಣದಲ್ಲಿ    ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿ ಎಂದು ಕೂಗುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಕಾನೂನು ಭಾಹಿರವಾಗಿ ಮಟ್ಕಾ ಅಂಕಿಗಳನ್ನು ಬರೆಯುತ್ತಿದ್ದ ಆಸಾಮಿಯನ್ನು ಪಂಚರ ಸಮಕ್ಷಮ ಸುತ್ತುವರೆದು ಹಿಡಿದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಬಾಬು ಬಿನ್ ನರಸಿಂಹಪ್ಪ, 36 ವರ್ಷ, ಪ.ಜಾತಿ, ವಾಸ ಪರಗೋಡು ಗ್ರಾಮ, ಬಾಗೇಪಲ್ಲಿ ತಾಲ್ಲುಕು ಎಂತ ತಿಳಿಸಿರುತ್ತಾರೆ. ನಂತರ ಆಸಾಮಿಯ ಬಳಿ ಪರಿಶೀಲಿಸಲಾಗಿ 1] ವಿವಿಧ  ಅಂಕಿಗಳಿಗೆ, ವಿವಿಧ ಮೊತ್ತ ಬರೆದಿರುವ ಒಂದು ಮಟ್ಕಾಚೀಟಿ, 2] ಒಂದು ಬಾಲ್ ಪಾಯಿಂಟ್ ಪೆನ್ನು, ಮತ್ತು 1120 /- ರೂ ನಗದು ಹಣವಿದ್ದು, ಹಣ ಮತ್ತು ಮಟ್ಕ ಚೀಟಿಗಳನ್ನು ಬಾಗೇಪಲ್ಲಿ ಪುರದ ಘಂಟಂವಾರಿಪಲ್ಲಿ ಗ್ರಾಮದ ಶ್ರೀನಿವಾಸ @ ಟೈಲರ್ ಸೀನಾ ಬಿನ್ ನಂಜಪ್ಪ, ಸುಮಾರು 48 ವರ್ಷ  ರವರಿಗೆ ನೀಡುತ್ತಿರುತ್ತೆನೆಂದು ತಿಳಿಸಿರುತ್ತಾನೆ. ನಂತರ   ಪಂಚರ ಸಮಕ್ಷಮ ಸದರಿ ಮಾಲುಗಳನ್ನು  ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ನಂತರ ಮಟ್ಕಾ ಚೀಟಿಯನ್ನು ಬರೆಯುತ್ತಿದ್ದ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು,  ಮೇಲ್ಕಂಡ ಆರೋಪಿ ಬಾಬು ಬಿನ್ ನರಸಿಂಹಪ್ಪ, ಮಾಲು  ಹಾಗೂ ಅಸಲು ಪಂಚನಾಮೆಯೊಂದಿಗೆ ಮುಂದಿನ ಕಾನೂನು ಕ್ರಮಕ್ಕಾಗಿ ಠಾಣಾಧಿಕಾರಿಗಳಾದ ತಮ್ಮ ಮುಂದೆ ಹಾಜರುಪಡಿಸಿರುತ್ತೇನೆ, ಎಂದು ನೀಡಿದ ವರಧಿಯ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 26-11-2020 ರಂದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ.

3) ಡಿ.ಸಿ.ಬಿ/ಸಿ.ಇ.ಎನ್  ಪೊಲೀಸ್ ಠಾಣೆ ಮೊ.ಸಂ.27/2020 ಕಲಂ: 419,420 ಐ.ಪಿ.ಸಿ & 66(D) INFORMATION TECHNOLOGY  ACT 2000:-

          ಈ ದಿನ ದಿನಾಂಕ:27/11/2020 ರಂದು ಮದ್ಯಾಹ್ನ 01-30 ಗಂಟೆಗೆ ಪಿರ್ಯಾದಿದಾರರಾದ ವಿಜಯಕುಮಾರ್ .ಎನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಹಣದ ವ್ಯವಹಾರಕ್ಕಾಗಿ ಸಾದಲಿಯ ಎಸ್.ಬಿ.ಐ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಸಂಖ್ಯೆ:64165889540 ರಂತೆ ಖಾತೆಯನ್ನು ತೆರೆದು ವ್ಯವಹಾರ ಮಾಡಿಕೊಂಡಿರುತ್ತೇನೆ. ಸದರಿ ಖಾತೆಗೆ ನನ್ನ ಮೊಬೈಲ್ ಸಂಖ್ಯೆ 9900774476 ಯನ್ನು ಜೋಡಿಸಿರುತ್ತೇನೆ. ಹಾಗೂ ನಾನು ಒಂದು ಎಂ.ಐ ಆಂಡ್ರಾಯ್ಡ್ ಪೋನನ್ನು ಹೊಂದಿದ್ದು ಸದರಿ ಸಿಮ್ ಅನ್ನು ಅದಕ್ಕೆ ಅಳವಡಿಸಿಕೊಂಡಿರುತ್ತೇನೆ. ಹಾಗಯೇ ನಾನು ನನ್ನ ಪೋನಿನಲ್ಲಿ ಹಣದ ಆನ್ಲೈನ್ ವ್ಯವಹಾರಕ್ಕಾಗಿ ಪೋನ್ ಪೇ ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಂಡು ವ್ಯವಹಾರ ಮಾಡುತ್ತಿರುತ್ತೇನೆ. ಹೀಗಿರುವಲ್ಲಿ ದಿನಾಂಕ:20/10/2020 ರಂದು ಮತ್ತು ದಿನಾಂಕ:23/10/2020 ರಂದು 2 ಬಾರಿ ನನ್ನ ಮೊಬೈಲ್ ಗೆ BR-SMSWAY ಎಂಬ ಶೀ಼ರ್ಷಿಕೆಯಿಂದ Advance 60 Lakh, Baadige 50000 prati tingalu. Tower nimma jameenu mahadi mele haaksi call-9647770698 ಎಂತ ಮೆಸೇಜ್ ಬಂದಿದ್ದು ನಾನು ಸದರಿ ನಂಬರಿಗೆ ಪೋನ್ ಮಾಡಿ ಕೇಳಲಾಗಿ ಪಹಣಿ, ಓಟರ್ ಐಡಿ, ಪಾಸ್ ಪೋರ್ಟ್ ಸೈಜ್ ಪೋಟೋ ವನ್ನು ಕಳುಹಿಸಲು ತಿಳಿಸಿದ್ದು ಅದರಂತೆ ನಾನು  ಅವರು ಕೇಳಿದ ದಾಖಲೆಗಳನ್ನು ಅವರ ಮೊ.ನಂ.9647770698 ಗೆ ವಾಟ್ಸಪ್ ಮುಖೇನ ಕಳುಹಿಸಿಕೊಟ್ಟಿರುತ್ತೇನೆ. ನಂತರ ಸುಮಾರು 15 ದಿನಗಳ ನಂತರ ಅಂಚೆ ಮುಖೇನ ಟವರ್ ಗೆ ಸಂಭಂದಿಸಿದ ಕೆಲವು ದಾಖಲೆಗಳನ್ನು ಕಳುಹಿಸಿಕೊಟ್ಟಿರುತ್ತಾರೆ. ಇಷ್ಟೊತ್ತಿಗಾಗಲೇ ಸುಮಾರು ಸಲಿ ಅವರು ನನಗೆ ದೂರವಾಣಿ ಕರೆ ಮಾಡಿ ದಾಖಲೆಗಳು ತಲುಪಿದವಾ ಎಂತ ಕೇಳುತ್ತಿದ್ದರು. ಅದಕ್ಕಾಗಿ ನಾನೇ ಸದರಿಯವರಿಗೆ ದಾಖಲೆಗಳು ಬಂದಿರುವುದಾಗಿ ಅವರು ನೀಡಿದ ಮೊ.ನಂ. 7797872967 ಗೆ ಕರೆ ಮಾಡಿ ತಿಳಿಸಿದೆ. ನಂತರ ದಿನಾಂಕ:19/11/2020 ರಂದು ಪೋನ್ ಮಾಡಿ ಎನ್.ಓ.ಸಿ ಚಾರ್ಜ್ 24200/- ರೂಗಳನ್ನು ಪೇ ಮಾಡಲು ತಿಳಿಸಿದ್ದು ಅದರಂತೆ ನಾನು ನನ್ನ ಪೋನ್ ಪೇ ಖಾತೆ ನಂ.9900774476 ಯಿಂದ ಅವರ Canara Bank A/c. No.3550101002925 ಖಾತೆಗೆ ಸದರಿ ಮೊತ್ತವನ್ನು ಜಮಾ ಮಾಡಿದೆ. ನಂತರ ದಿನಾಂಕ:20/11/2020 ರಂದು ಪುನಃ ಮೊ.ನಂ.7797872967 ರಿಂದ ಪೋನ್ ಮಾಡಿ ಡೆಮೋ ಪೇಪರ್ ನಲ್ಲಿರುವಂತೆ 76000/- ರೂಪಾಯಿಗಳನ್ನು ಕಳುಹಿಸಲು ತಿಳಿಸಿ ನಂತರ ಅದರಲ್ಲಿ 2000/- ರೂಪಾಯಿಗಳನ್ನು ಪಡೆದು  ಪುನಃ ವಾಪಸ್ಸು ಕಳುಹಿಸುವುದಾಗಿ ತಿಳಿಸಿದ್ದು  ಅದರಂತೆ ನಾನು ನನ್ನ ಮೇಲ್ಕಂಡ ಪೋನ್ ಪೇ ಖಾತೆಯಿಂದ ಅವರ Canara Bank A/c. No.3550101002925 ಖಾತೆಗೆ ಜಮಾ ಮಾಡಿದೆ. ನಂತರ ದಿನಾಂಕ:21/11/2020 ರಂದು ಪುನಃ 1,20,000/-ರೂಗಳನ್ನು ಜಿ.ಎಸ್.ಟಿ ಕಟ್ಟಬೇಕು ಎಂತ ತಿಳಿಸಿ ಜಮಾ ಮಾಡಲು ತಿಳಿಸಿದ್ದು ಅದರಂತೆ ನನ್ನ ಮೇಲ್ಕಂಡ ಪೋನ್ ಪೇ ಯಿಂದ 50,000/- ರೂಗಳು ಮತ್ತು ನಮ್ಮ ಚಿಕ್ಕಮ್ಮ ರವರ ಪೋನ್ ಪೇ ಖಾತೆ ಸಂಖ್ಯೆ;9741103263 ರಿಂದ 70,000/- ರೂಪಾಯಿಗಳನ್ನುಸದರಿಯವರ A/c. No.3550101002925 ಖಾತೆಗೆ ಜಮಾ ಮಾಡಿರುತ್ತೇನೆ.  ನಂತರ ಪುನಃ ದಿನಾಂಕ:23/11/2020 ರಂದು ಮೊ.ನಂ. 7251026360 ರಿಂದ ಪೋನ್ ಮಾಡಿ ಬಿ.ಟಿ.ಸಿ [ಬ್ಯಾಂಕ್ ಟ್ರಾನ್ಸಾಕ್ಸನ್ ಚಾರ್ಜ್] ಎಂತ ಹೇಳಿ 1,50,000/ ರೂಪಾಯಿಗಳನ್ನು ಕಳುಹಿಸಲು ತಿಳಿಸಿದ್ದು ಅದರಂತೆ ನಾನು ನನ್ನ ಪೋನ್ ಪೇ ಯಿಂದ 60,000/- ರೂಪಾಯಿಗಳನ್ನು ಕಳುಹಿಸಿಕೊಟ್ಟಿರುತ್ತೇನೆ. ಹಾಗೂ ನನ್ನ ಚಿಕ್ಕಮ್ಮ ರವರ ಪೋನ್ ಪೇ ಯಿಂದ 70,000/- ರೂಪಾಯಿಗಳನ್ನು ಕಳುಹಿಸಿಕೊಟ್ಟಿರುತ್ತೇನೆ. ನಂತರ ದಿನಾಂಕ: 25/11/2020 ರಂದು ಪುನಃ ಪೋನ್ ಮಾಡಿ ಕಮೀಷನ್ ಮೊತ್ತ 1,10,000/- ಕಳುಹಿಸಲು ತಿಳಿಸಿದ್ದು ಅದರಂತೆ ನಾನು ಸದರಿ ಮೊತ್ತವನ್ನು ಸಾದಲಿ ಎಸ್.ಬಿ.ಐ ಯಿಂದ ಅವರ Canara Bank A/c. No.3550101002925 ಖಾತೆಗೆ ನೆಫ್ಟ್ ಮಾಡಿರುತ್ತೇನೆ. ನಂತರ ಸದರಿ ಬ್ಯಾಂಕಿ ಮ್ಯಾನೆಜರ್ ರವರು ನನ್ನ ವ್ಯವಹಾರವನ್ನು ಗಮನಿಸಿ ವಿವರಗಳನ್ನು ಪಡೆದು ನೀವು ಮೋಸ ಹೋಗಿದ್ದೀರಾ ಅವರು ಆನ್ಲೈನ್ ನಲ್ಲಿ ಹಣ ಪಡೆದು ಮೋಸ ಮಾಡುವವರು ಯಾವುದೇ ಟವರ್ ಹಾಕುವುದಿಲ್ಲವೆಂತ ತಿಳಿಸಿದ್ದರಿಂದ ನಾವು ಮೋಸ ಹೋದ ಬಗ್ಗೆ ತಿಳಿಯಿತು. ಮಳೆ ಬರುತ್ತಿದ್ದುದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ನಮ್ಮ ಜಮೀನಿನಲ್ಲಿ ಟವರ್ ಹಾಕುವುದಾಗಿ ತಿಳಿಸಿ ನಮ್ಮಿಂದ ವಿವಿಧ ಶುಲ್ಕಗಳಿಗೆಂತ ರೂ 460200/- ಗಳನ್ನು ಪಡೆದು ಟವರ್ ಹಾಕದೇ ಹಣವನ್ನು ವಾಪಸ್ಸು ನೀಡದೇ ಮೋಸ ಮಾಡಿರುವ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಕೈಗೊಂಡು ನಮ್ಮ ಹಣವನ್ನು ನಮಗೆ ವಾಪಸ್ಸು ಕೊಡಿಸಬೇಕೆಂತ ಕೋಋಈ ನೀಡಿದ ದೂರಾಗಿರುತ್ತೆ.

4) ಚಿಕ್ಕಬಳ್ಳಾಪುರ  ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.171/2020 ಕಲಂ: 279,337 ಐ.ಪಿ.ಸಿ :-

          ದಿನಾಂಕ:27.11.2020 ರಂದು ಬೆಳ್ಳಗ್ಗೆ 11:00  ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೆನೆಂದರೆ ದಿನಾಂಕ:25-11-2020 ರಂದು  ಬುದುವಾರದಂದು  ರಾತ್ರಿ 10.30 ಗಂಟೆಯಲ್ಲಿ ತಾನು ಮತ್ತು ತನ್ನ ಅಣ್ಣನ ಮಗನಾದ ಶ್ರೀ.ಹರ್ಷವರ್ಧನ ಬಿನ್ ಬಿ. ಚೌಡಪ್ಪ ರವರು  ಕರ್ನಾಟಕದ  ಬೆಂಗಳೂರು ಗ್ರಾಮಾಂತರ  ಜಿಲ್ಲೆ ನೆಲಮಂಗಲ ಟೌನ್ ನಿಂದ ಆಂದ್ರಪ್ರದೇಶದ ಧರ್ಮವರಂ ಮೂಲಕ  ಗುಂತಲ್ ಗೆ  ಹೋಗಲು  ತಮ್ಮ ಬಾಬತ್ತು ಅಂದರೆ ತನ್ನ ಹೆಂಡತಿಯಾದ ಶ್ರೀಮತಿ. ಬಿ. ಮಾದವಿ ರವರ ಹೆಸರಿನಲ್ಲಿ ಇರುವ KIA  ಕಂಪನಿಯ SELTOS ಕಾರ್ ನಂಬರ್ AP-39-CH-0468 ರಲ್ಲಿ ಚಾಲಕ ವಿ. ಚಲಪತಿನಾಯಕ್ ಬಿನ್ ವಿ.ತಿರುಪಾಲ್ ನಾಯಕ್, ಎಮ್. ತಾಂಡ ಗುಂತಕಲ್ ಮಂಡಲಂ ಅನಂತಪುರ ಜಿಲ್ಲೆ ರವರೊಂದಿಗೆ  ಹೊರಟು ಬೆಂಗಳೂರು-ಬಾಗೇಪಲ್ಲಿ ಎನ್.ಹೆಚ್.-44 ರಸ್ತೆ  ಮಾರ್ಗವಾಗಿ  ಪಶ್ಚಿಮದ ರಸ್ತೆಯಲ್ಲಿ ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ಕಡೆಗೆ ಹಾರೋಬಂಡೆ ಗೇಟ್ ನಿಂದ ಶ್ರೀ.ಸಾಯಿಬಾಬ ದೇವಸ್ಥಾನ ಮುಂದೆ ನಾವು ಪ್ರಯಾಣಿಸುತ್ತಿದ್ದಾಗ  ಆ ದಿನ ರಾತ್ರಿ ಸುಮಾರು 12.15 ಗಂಟೆ ಸಮಯದಲ್ಲಿ ತಮ್ಮ ಕಾರಿನ ಚಾಲಕ ವಿ. ಚಲಪತಿನಾಯಕ್ ರವರು    ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುಂದೆ ಹೋಗುತ್ತಿದ್ದ ಟ್ರಾಕ್ಟರ್ ಗೆ ತಪ್ಪಿಸಲು ಹೋಗಿ ರಸ್ತೆಯ ಡಿವೈಡರ್ ಗೆ  ಡಿಕ್ಕಿ ಹೊಡೆಯಿಸಿ ಅಪಘಾತ ಮಾಡಿರುತ್ತಾನೆ. ಅಪಘಾತದಲ್ಲಿ ಕಾರಿನ ಮುಂಭಾಗ ಚಾಲಕನ ಪಕ್ಕದಲ್ಲಿ ಕುಳಿತ್ತಿದ್ದ ಶ್ರೀ.ಹರ್ಷವರ್ಧನ ಬಿನ್ ಬಿ. ಚೌಡಪ್ಪ ರವರಿಗೆ ತಲೆಗೆ ರಕ್ತಗಾಯವಾಯಿತು. ಹಿಂದೆ ಕುಳಿತ್ತಿದ್ದ ತನಗೆ ಎಡ ಭುಜ, ಎದೆ ಮತ್ತು  ಬೆನ್ನಿಗೆ ರಕ್ತಗಾಯವಾಯಿತು. ಅಪಘಾತದಲ್ಲಿ ಕಾರಿನ ಎಡ ಭಾಗ ಮತ್ತು ಮುಂಭಾಗ ಜಖಂ ಆಗಿರುತ್ತೆ. ಆ ಸಮಯದಲ್ಲಿ ಸ್ಥಳಕ್ಕೆ ಬಂದ 108 ಅಂಬುಲನ್ಸ ವಾಹನದವರು ಅಪಘಾತದಲ್ಲಿ ಗಾಯಗೊಂಡ ತಮ್ಮನ್ನು ಉಪಚರಿಸಿದ್ದು ನಂತರ ಅದೇ ಅಂಬುಲನ್ಸವಾಹನದಲ್ಲಿ ಬೆಂಗಳೂರಿನ ಯಲಹಂಕಯಲ್ಲಿರುವ ಕೆ.ಕೆ. ಆಸ್ಪತ್ರೆಯಲ್ಲಿ  ಚಿಕಿತ್ಸೆಗಾಗಿ ದಾಖಲಿಸಿದರು. ತಾನು ಮತ್ತು ಶ್ರೀ.ಹರ್ಷವರ್ಧನ ಅಪಘಾತದಲ್ಲಿ ಆದ ಗಾಯಗಳ ದೆಸೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ತಾನು ಚಿಕಿತ್ಸೆಯನ್ನು ಪಡೆದು ಈ ದಿನ ತಡವಾಗಿ ಬಂದು ದೂರನ್ನು ನೀಡಿರುತ್ತೇನೆ. ಅಪಘಾತ ಮಾಡಿದ AP-39-CH-0468 ನೋಂದಣಿ ಸಂಖ್ಯೆಯ ಕಾರಿನ ಚಾಲಕ  ವಿ. ಚಲಪತಿನಾಯಕ್ ಬಿನ್ ವಿ.ತಿರುಪಾಲ್ ನಾಯಕ್, ಎಮ್ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿದ್ದು ಈ ದೂರನ್ನು ತಾನು ಚಿಕ್ಕಬಳ್ಳಾಪುರ   ತಾಲ್ಲೂಕು ಕಛೇರಿ ಬಳಿ ತೆಲಗು ಭಾಷೆಯಲ್ಲಿ ಹೇಳಿ ಅದನ್ನು ಕನ್ನಡ ಭಾಷೆಯಲ್ಲಿ ಬೆರಳಚ್ಚು ಮಾಡಿಸಿಕೊಂಡು ಬಂದು ದೂರಿನ ಮೇರೆಗೆ ಈ ಪ್ರ,ವ,ವರದಿ.

5) ಚಿಂತಾಮಣಿ  ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.423/2020 ಕಲಂ: 454,457,380 ಐ.ಪಿ.ಸಿ :-

          ದಿನಾಂಕ 26-11-2020 ರಂದು ಬೆಳಗ್ಗೆ 10-30 ಗಮಟೆಗೆ ಶ್ರೀಮತಿ ರಾಜಮ್ಮ ಕೋಂ ಆಂಜನೇಯರೆಡ್ಡಿ, 48 ವರ್ಷ, ವಕ್ಕಲಿಗರು, ಜಿರಾಯ್ತಿ ಕೆಲಸ, ವಾಸ ನೆಲಮಾಚನಹಳ್ಳಿ ಗ್ರಾಮ, ಶೆಟ್ಟಿಹಳ್ಳಿ ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮಗೆ ರಾಜೇಶ ಎಂಬ ಹೆಸರಿನ ಒಬ್ಬ ಮಗ ಮತ್ತು ವರ್ಷ ಎಂಬ ಹೆಸರಿನ ಒಬ್ಬಳು ಮಗಳು ಇರುತ್ತಾರೆ. ತಾವು ಪ್ರಸಕ್ತ ಸಾಲಿನ ಜೂನ್ ಮಾಹೆಯಲ್ಲಿ ತಮ್ಮ ಮಗಳಾದ ವರ್ಷ ರವರಿಗೆ ಕೆ.ಜಿ.ಎಫ್ ಬಳಿ ಇರುವ ಕಲ್ಲಿಕುಪ್ಪ ಎಂಬ ಗ್ರಾಮದ ವಾಸಿ ಹರೀಶ ಎಂಬುವರೊಂದಿಗೆ ಕೊಟ್ಟು ಸಂಪ್ರದಾಯದಂತೆ ಮದುವೆ ಮಾಡಿರುತ್ತೇವೆ. ಈ ಸಮಯದಲ್ಲಿ ತಾವು ತಮ್ಮ ಮಗಳ ಮದುವೆಗೆಂದು 25 ಗ್ರಾಂ ತೂಕದ ಬಂಗಾರದ ಒಂದು ನೆಕ್ಲೇಸ್, 40 ಗ್ರಾಂ ತೂಕದ ಬಂಗಾರದ ಒಂದು ಹಾರ, 15 ಗ್ರಾಂ ತೂಕದ ಒಂದು ಜೊತೆ ಓಲೆ ಮತ್ತು ತಮ್ಮ ಅಳಿಯನಿಗೆಂದು 12 ಗ್ರಾಂ ತೂಕದ ಒಂದು ಕತ್ತಿನ ಚೈನ್ ಮಾಡಿಸಿದ್ದೆವು. ಇವುಗಳ ಈಗಿನ ಮಾರುಕಟ್ಟೆಯ ಬೆಲೆ ಒಟ್ಟು ಸು.4,60,000/- ರೂ ಆಗಿರುತ್ತೆ. ತಮ್ಮ ಮಗಳು ವರ್ಷ ಬೆಂಗಳೂರಿನ ಖಾಸಗೀ ಕಂಪನಿಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದು, ತಮ್ಮ ಅಳಿಯ ಸಹ ಬೆಂಗಳೂರಿನಲ್ಲಿಯೇ ಯಾವುದೋ ಬ್ಯುಜಿನೆಸ್ ಮಾಡುತ್ತಿದ್ದುದರಿಂದ ಇಬ್ಬರು ಬೆಂಗಳೂರಿನಲ್ಲಿಯೇ ವಾಸಕ್ಕಾಗಿ ಬಾಡಿಗೆ ಮನೆಯೊಂದನ್ನು ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದರು. ಇದರಿಂದ ನಮ್ಮ ಮಗಳು ನಾವು ಮದುವೆಯ ಸಮಯದಲ್ಲಿ ಇಟ್ಟಿದ್ದ ಒಡವೆಗಳನ್ನು ನಮ್ಮ ಮನೆಯಲ್ಲಿಯೇ ಇಟ್ಟು ಹೋಗಿದ್ದರು. ಹೀಗಿರುವಾಗ ದಿನಾಂಕ:25/11/2020 ರಂದು ರಾತ್ರಿ ಇದೇ ಚಿಂತಾಮಣಿ ತಾಲ್ಲೂಕಿನ ಕಡದಲಮರಿ ಗ್ರಾಮದಲ್ಲಿ ನಮ್ಮ ಮೈದ ಮುದ್ದರೆಡ್ಡಿ ರವರ ಮಗಳಾದ ಸುಷ್ಮ ಎಂಬುವರ ಮದುವೆಯ ಅರತಕ್ಷತೆ ಕಾರ್ಯಕ್ರಮ ಹಾಗೂ ಈ ದಿನ ದಿನಾಂಕ:26/11/2020 ರಂದು ಬೆಳಿಗ್ಗೆ ಮದುವೆಯ ಮುಹೂರ್ತ ಕಾರ್ಯಕ್ರಮ ಇದ್ದುದರಿಂದ ನಾವು ನಮ್ಮ ಕುಟುಂಬಸ್ಥರೆಲ್ಲರೂ ಸದರಿ ಮದುವೆ ಕಾರ್ಯಕ್ರಮಕ್ಕೆ ಹೋಗಲೆಂದು ನಿನ್ನೆಯ ದಿನ ದಿನಾಂಕ:25/11/2020 ರಂದು ಸಂಜೆ ರೆಡಿಯಾದಾಗ ನಮ್ಮ ಪಕ್ಕದ ಮನೆಯ ವಾಸಿ ಬೋವಿ ಜನಾಂಗದ ಶ್ರೀಮತಿ ಗಾಯಿತ್ರಮ್ಮ ಕೋಂ ಅಶೋಕ ರವರು ನಮ್ಮ ಮನೆಗೆ ಬಂದು ನಮ್ಮ ಮಗಳಿಗೆ ಸೀರೆಯನ್ನು ಉಡಿಸಿದಳು. ಈ ಸಮಯದಲ್ಲಿ ನಮ್ಮ ಮಗಳು ನಮ್ಮ ಮನೆಯ ಬೀರುವಿನಲ್ಲಿಟ್ಟಿದ್ದ ನಕಲು ಒಡವೆಗಳನ್ನು ಹಾಕಿಕೊಂಡು ಬಂಗಾರದ ಒಡವೆಗಳನ್ನು ಬೀರುವಿನಲ್ಲಿಡಲು ನನಗೆ ತಿಳಿಸಿದ್ದನ್ನು ಗಾಯಿತ್ರಮ್ಮ ಕೇಳಿಸಿಕೊಂಡಿದ್ದಳು. ನಮ್ಮ ವಾಸದ ಮನೆಗೆ 02 ಬೀಗದ ಕೀಲಿಕೈ ಇದ್ದು, ಈ ಪೈಕಿ ಒಂದು ಮಾಸ್ಟರ್ ಕೀಲಿಕೈಯನ್ನು ನಾನು ನಮ್ಮ ರೇಷ್ಮೆ ಹುಳು ಮನೆಯ ಕಿಟಕಿ ಮೇಲ್ಭಾಗದಲ್ಲಿ ಇಡುತ್ತಿದ್ದೆ. ಮತ್ತೊಂದು ಕೀಲಿಕೈಯನ್ನು ನಮ್ಮ ಬಳಿ ಇಟ್ಟುಕೊಳ್ಳುತ್ತಿದ್ದೆವು. ಮೇಲ್ಕಂಡ ಗಾಯಿತ್ರಮ್ಮ ರವರು ನಮ್ಮ ಮನೆಗೆ ಆಗಾಗ ಬರುತ್ತಾ ನಮ್ಮೊಂದಿಗೆ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದರಿಂದ ಈ ವಿಚಾರವೆಲ್ಲಾ ಆಕೆಗೆ ತಿಳಿದಿರುತ್ತೆ. ದಿನಾಂಕ:25/11/2020 ರಂದು ಸಂಜೆ ಸು.7-00 ಗಂಟೆಗೆ ನಾವು ಎಲ್ಲರೂ ನಮ್ಮ ವಾಸದ ಮನೆಗೆ ಬೀಗ ಹಾಕಿಕೊಂಡು ಕಾರಿನಲ್ಲಿ ಕಡದಲಮರಿ ಗ್ರಾಮಕ್ಕೆ ಹೋದೆವು. ಸದರಿ ಬೀಗದ ಕೀಲಿಕೈಯನ್ನು ನಾನು ನನ್ನ ಬಳಿ ಇಟ್ಟುಕೊಂಡೆ, ಮತ್ತೊಂದು ಮಾಸ್ಟರ್ ಕೀಲಿಕೈ ನಮ್ಮ ರೇಷ್ಮೆ ಹುಳು ಮನೆಯ ಕಿಟಕಿಯ ಮೇಲೆಯೇ ಇತ್ತು. ನಮ್ಮ ಮಗಳು ವರ್ಷ ಮದುವೆಗೆ ನಾವು ಮಾಡಿಸಿದ್ದ ಒಡವೆಗಳನ್ನು ಹಾಕಿಕೊಳ್ಳದೇ ಬೇರೆ ನಕಲಿ ಒಡವೆಗಳನ್ನು ಹಾಕಿಕೊಂಡಿದ್ದಳು. ಇದರಿಂದ ನಾವು ಮೇಲ್ಕಂಡ ಬಂಗಾರದ ಒಡವೆಗಳನ್ನು ಹಾಗೂ ಮನೆಯಲ್ಲಿ ಮನೆಯ ಖಚರ್ು-ವೆಚ್ಚಗಳಿಗೆಂದು ಸ್ವಲ್ಪ ಭಾಗದ ನಗದು ಹಣವನ್ನು ನಮ್ಮ ಮನೆಯಲ್ಲಿನ ಬೀರುವಿನಲ್ಲಿ ಇಟ್ಟು ಹೋಗಿದ್ದೆವು. ಬೀರುವಿನಲ್ಲಿ ಎಷ್ಟು ಹಣ ಇಟ್ಟಿದ್ದೆವೆಂತ ನಮಗೆ ನಿಖರವಾಗಿ ಗೊತ್ತಿಲ್ಲ. ದಿನಾಂಕ:25/11/2020 ರಂದು ರಾತ್ರಿ ನನ್ನ ಗಂಡ, ನಮ್ಮ ಮಗಳು ಮತ್ತು ಅಳಿಯ ಕಡದಲಮರಿ ಗ್ರಾಮದಲ್ಲಿ ಮದುವೆಯ ಅರತಕ್ಷತೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಅದೇ ದಿನ ರಾತ್ರಿ ಸು.11-00 ಗಂಟೆಗೆ ನಮ್ಮ ಮನೆಗೆ ವಾಪಸ್ಸಾಗಿ ಮನೆಯಲ್ಲಿ ಮಲಗಿಕೊಂಡಿರುತ್ತಾರೆ. ನಾನು, ನನ್ನ ಮಗ ಮದುವೆಯ ಮನೆಯಲ್ಲಿಯೇ ಉಳಿದುಕೊಂಡಿದ್ದೆವು. ಈ ದಿನ ದಿನಾಂಕ:26/11/2020 ರಂದು ಬೆಳಿಗ್ಗೆ 07-15 ಗಂಟೆಗೆ ನಾನು ಮದುವೆ ಕಾರ್ಯಕ್ರಮದ ಸ್ಥಳದಲ್ಲಿದ್ದಾಗ, ನಮ್ಮ ಮಗಳು ವರ್ಷ ನನಗೆ ಪೋನ್ ಮಾಡಿ, ನಮ್ಮ ಮನೆಯ ರೂಂನಲ್ಲಿದ್ದ ಬೀರುವಿನ ಬಾಗಿಲು ಓಪನ್ ಆಗಿದ್ದು, ಬೀರುವಿನಲ್ಲಿಟ್ಟಿದ್ದ ಒಡವೆಗಳು ಕಾಣುತ್ತಿಲ್ಲವೆಂದು ನನಗೆ ತಿಳಿಸಿದಳು. ಆಗ ನಾನು ಆಕೆಗೆ ಸರಿಯಾಗಿ ಇನ್ನೊಮ್ಮೆ ನೋಡು ಎಂದು ಹೇಳಿದಾಗ ಆಕೆ ಮತ್ತೊಮ್ಮೆ ನೋಡಿ ಬೀರುವಿನಲ್ಲಿ ಒಡವೆಗಳು ಇಲ್ಲ, ಆದರೆ ಬೀರು ಓಪನ್ ಆಗಿದೆ ಎಂದು ತಿಳಿಸಿದಳು. ನಂತರ ನಾನು, ನನ್ನ ಮಗ ನಮ್ಮ ಗ್ರಾಮಕ್ಕೆ ವಾಪಸ್ಸು ಬಂದು ನಮ್ಮ ಮನೆಯಲ್ಲಿ ನೋಡಲಾಗಿ ಸಂಗತಿ ನಿಜವಾಗಿರುತ್ತೆ. ನಾನು ನಮ್ಮ ಮಗಳು, ಅಳಿಯ ಮತ್ತು ನನ್ನ ಗಂಡನನ್ನು ವಿಚಾರ ಮಾಡಿದಾಗ, ತಾವು ನಿನ್ನೆಯ ದಿನ ರಾತ್ರಿ ಮನೆಗೆ ವಾಪಸ್ಸು ಬಂದಾಗ ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಹಾಕಿದಂತೆಯೇ ಇದ್ದುದರಿಂದ ತಮಗೆ ಮನೆಯಲ್ಲಿನ ಒಡವೆಗಳು ಕಳ್ಳತನವಾದ ಬಗ್ಗೆ ತಿಳಿಯಲಿಲ್ಲ, ಆದರೆ ಈ ದಿನ ಬೆಳಿಗ್ಗೆ ಎದ್ದು ನೋಡಿದಾಗ ಕಳ್ಳತನವಾಗಿರುವ ಬಗ್ಗೆ ಬೆಳಕಿಗೆ ಬಂದಿರುತ್ತೆಂತ ವಿಚಾರ ತಿಳಿಸಿದರು. ನಮ್ಮ ಮನೆಗೆ ಆಗಾಗ ನಮ್ಮ ಪಕ್ಕದ ಮನೆಯ ವಾಸಿ ಬೋವಿ ಜನಾಂಗದ ಶ್ರೀಮತಿ ಗಾಯಿತ್ರಮ್ಮ ಕೋಂ ಅಶೋಕ, 22 ವರ್ಷ ರವರು ಬಂದು ಹೋಗುತ್ತಿದ್ದು, ನಾವು ಎಲ್ಲಿಗಾದರೂ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗುವಾಗ ಮನೆಯ ಒಂದು ಬೀಗದ ಕೀಲಿಕೈಯನ್ನು ನನ್ನ ಬಳಿ ಇಟ್ಟುಕೊಳ್ಳುತ್ತಿದ್ದ ವಿಚಾರ ಹಾಗೂ ನಮ್ಮ ಮನೆಯ ಮತ್ತೊಂದು ಮಾಸ್ಟರ್ ಕೀಲಿಕೈಯನ್ನು ನಾವು ನಮ್ಮ ರೇಷ್ಮೆ ಹುಳು ಮನೆಯ ಕಿಟಕಿಯ ಮೇಲೆ ಇಟ್ಟಿದ್ದ ವಿಚಾರ ಆಕೆಗೆ ಗೊತ್ತಿತ್ತು. ಮೇಲ್ಕಂಡ ಗಾಯಿತ್ರಮ್ಮ ರವರು ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಸಮಯದಲ್ಲಿ ನಾವು ನಮ್ಮ ಮನೆಯಲ್ಲಿ ಇಟ್ಟಿದ್ದ ಬಂಗಾರದ ಒಡವೆಗಳು, ನಗದು ಹಣ, ರೇಷ್ಮೆ ಹುಳು ಮನೆಯಲ್ಲಿ ಇಟ್ಟಿದ್ದ ಮನೆಯ ಮಾಸ್ಟರ್ ಬೀಗದ ಕೀಲಿಕೈಯನ್ನು ಇಟ್ಟ ಸ್ಥಳಗಳನ್ನು ನೋಡಿಕೊಂಡಿದ್ದು, ನಾವು ಮದುವೆಗೆ ಹೋದ ಸಮಯವನ್ನು ನೋಡಿಕೊಂಡು ಇದೇ ಸರಿಯಾದ ಸಮಯವೆಂತ ಆಕೆಯೇ ದಿನಾಂಕ:25/11/2020 ರಂದು ಸಂಜೆ ಸು.7-00 ಗಂಟೆಯಿಂದ ರಾತ್ರಿ 11-00 ಗಂಟೆಯ ನಡುವಿನ ಸಮಯದಲ್ಲಿ ನಮ್ಮ ರೇಷ್ಮೆ ಹುಳು ಮನೆಯಲ್ಲಿ ನಾವು ಇಟ್ಟಿದ್ದ ನಮ್ಮ ಮನೆಯ ಮಾಸ್ಟರ್ ಬೀಗದ ಕೀಲಿಕೈಯನ್ನು ಎತ್ತಿಕೊಂಡು ನಮ್ಮ ಮನೆಯ ಬಾಗಿಲನ್ನು ತೆರೆದು ನಮ್ಮ ಮನೆಯ ರೂಂನಲ್ಲಿನ ಬೀರುವಿನಲ್ಲಿಟ್ಟಿದ್ದ ಒಟ್ಟು 92 ಗ್ರಾಂ ತೂಕದ ಸು.4,60,000/- ರೂ ಬೆಲೆ ಬಾಳುವ ಬಂಗಾರದ ಒಡವೆಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿರಬಹುದೆಂತ ನಮಗೆ ಸಂಶಯ ಇರುತ್ತೆ. ಆದ್ದರಿಂದ ಮೇಲ್ಕಂಡ ತಮ್ಮ ಪಕ್ಕದ ಮನೆಯ ವಾಸಿ ಶ್ರೀಮತಿ ಗಾಯಿತ್ರಮ್ಮರವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿ, ಕಳುವಾಗಿರುವ ನಮ್ಮ ಮಾಲನ್ನು ಪತ್ತೆ ಮಾಡಿ, ಈ ಬಗ್ಗೆ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಕೋರಿರುತ್ತೆ.

6) ಚಿಂತಾಮಣಿ  ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.424/2020 ಕಲಂ: 323,324,448,504,506,34 ಐ.ಪಿ.ಸಿ :-

          ದಿನಾಂಕ 27-11-2020 ರಂದು ಬೆಳಗ್ಗೆ 10-30 ಗಂಟೆಗೆ ದೊಡ್ಡಪ್ಪ ಬಿನ್ ಲೇಟ್ ನಾರಾಯಣಪ್ಪ, 65 ವರ್ಷ, ನಾಯಕರು, ಜಿರಾಯ್ತಿ, ವಾಸ ಟಿ.ಹೊಸೂರು ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನಗೆ ಒಟ್ಟು 8 ಜನ ಹೆಣ್ಣು ಮಕ್ಕಳಿದ್ದು ಈ ಪೈಕಿ 6 ಜನರಿಗೆ ಮದುವೆಯಾಗಿದ್ದು, ಇನ್ನೂ ಉಳಿದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾನು ಮತ್ತು ತನ್ನ ಹೆಂಡತಿ ಗಂಗಮ್ಮ ರವರು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇವೆ. ತಮಗೂ ಮತ್ತು ತಮ್ಮ ಸಂಬಂದಿಕರಾದ ಗೋವಿಂದಪ್ಪ ರವರಿಗೆ ಮನೆಯ ಪಕ್ಕದಲ್ಲಿರುವ ಸಂದಿಯ ವಿಚಾರದಲ್ಲಿ ಸುಮಾರು 25 ವರ್ಷಗಳ ಹಿಂದಿನಿಂದಲೂ ತಕರಾರುಗಳಿರುತ್ತವೆ. ಈ ಬಗ್ಗೆ ಹಲವಾರು ಸಾರಿ ಗಲಾಟೆ ನಡೆದಿತ್ತು. ಈಗಿರುವಲ್ಲಿ ದಿನಾಂಕ:-25-11-2020 ರಂದು ಸಂಜೆ ಸುಮಾರು 6-00 ಗಂಟೆಯಲ್ಲಿ ನಾವುಗಳು ಮನೆಯಲ್ಲಿದ್ದೆವು. ನಾವು ಹೊರಗಡೆ ಕಟ್ಟಿಹಾಕಿದ್ದ ಕೋಳಿಯ ಹುಂಜದ ಬಳಿ ಗೋವಿಂದಪ್ಪರವರ ಹುಂಜ ಇದ್ದುದನ್ನು ಕಂಡ ಗೋವಿಂದಪ್ಪನವರ ಮಗ ವೆಂಕಟೇಶ್ ವಿನಾಕಾರಣ ನೀವು ಕೋಳಿಗಳನ್ನು  ಕಟ್ಟಿಹಾಕಿಕೊಂಡು ಅಲ್ಲಿಗೆ ಬಂದ ನಮ್ಮ ಕೋಳಿಗಳನ್ನು ತಿಂದು ಹಾಕುತ್ತೀರಿ ಎಂದು ಮನೆಯ ಸಂದಿಯ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮೊಂದಿಗೆ ಜಗಳ ತೆಗೆದನು. ನಾವು ಏನೂ ಮಾತನಾಡದೆ ಮನೆಯಲ್ಲಿ ಸುಮ್ಮನೆ ಇದ್ದರೂ ಸಹ ವೆಂಕಟೇಶನು ಜೋರಾಗಿ ಮಾತನಾಡುತ್ತಿದ್ದನ್ನು ಕೇಳಿಸಿಕೊಂಡ ಅವರ ತಂದೆ ಗೋವಿಂದಪ್ಪ, ತಾಯಿ ಗೌರಮ್ಮ, ಅಕ್ಕ ರೋಜಾ ರವರು  ಅಲ್ಲಿಗೆ ಬಂದರು. ನಂತರ ಎಲ್ಲರೂ  ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆ, ಕಲ್ಲು ಗಳನ್ನು ಹಿಡಿದುಕೊಂಡು ನಮ್ಮ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ನಿನಗೆ ಎಲ್ಲಾ ಹೆಣ್ಣು ಮಕ್ಕಳು ನಿಮ್ಮ ಕೈಯಲ್ಲಿ ಏನಾಗುತ್ತೊ ಲೋಪರ್ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಜಗಳ ತೆಗೆದು ಆ ಪೈಕಿ ವೆಂಕಟೇಶ್ ರವರು ಕಲ್ಲಿನಿಂದ ನಮ್ಮ ಹೆಂಡತಿಯ ಬಾಯಿಗೆ ಹೊಡೆದು ರಕ್ತಗಾಯವನ್ನುಂಟುಮಾಡಿದ್ದು, ಕೆಳ ಭಾಗದ ಹಲ್ಲುಗಳು ಅಲುಗಾಡುತ್ತಿರುತ್ತವೆ. ಇದರಿದ ಕೆಳಭಾಗದ ತುಟಿಯು ತೆರೆದುಕೊಂಡಂತೆ ರಕ್ತಗಾಯವಾಗಿರುತ್ತೆ. ಗೋವಿಂದಪ್ಪ ರವರು ಕಲ್ಲಿನಿಂದ ನನ್ನ ಹೆಂಡತಿಯ ಎಡ ಭಾಗದ ಹೊಟ್ಟೆಗೆ ಹೊಡೆದು ಮೂಗೇಟು ಮಾಡಿಸಿದನು. ಉಳಿದವರು ನನಗೆ ಹಾಗೂ ನನ್ನ ಮಕ್ಕಳಿಗೆ ಕೈಗಳಿಂದ ಹೊಡೆದು ಮೂಗೇಟು  ಮಾಡಿದರು. ಮೇಲ್ಕಂಡವರೆಲ್ಲರೂ ನೀವು ಇನ್ನೊಂದು ಸಾರಿ ಈ ಸಂದಿಯಲ್ಲಿ ಓಡಾಡಿದರೆ ಸಾಯಿಸದೆ ಬಿಡುವುದಿಲ್ಲವೆಂದು ಎಂದು ಪ್ರಾಣಬೆದರಿಕೆ ಹಾಕಿದರು. ಅಷ್ಟರಲ್ಲಿ ಅಲ್ಲಿಗೆ ಬಂದ ವೆಂಕಟರವಣಪ್ಪ ಬಿನ್ ಸೊಣ್ಣಪ್ಪ, ಮುನಿಯಮ್ಮ ಕೊಂ ನಾರಾಯಣಪ್ಪ ರವರು ಜಗಳವನ್ನು ಬಿಡಿಸಿದರು. ಗಾಯಗೊಂಡಿದ್ದ ನನ್ನ ಹೆಂಡತಿ ಗಂಗಮ್ಮಳನ್ನು ಚಿಕಿತ್ಸೆಗಾಗಿ ಕೈವಾರಕ್ಕೆ ಕರೆದುಕೊಂಡು ಹೋದೆವು. ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಹಾಲಿ ತನ್ನ ಹೆಂಡತಿಯು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ತಮಗೆ ಮೂಗೇಟುಗಳಾದ ಕಾರಣ ನಾನು ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳಾದ ದೀಪಿಕಾ ಮತ್ತು ಶಾಲಿನಿ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಸಿಕೊಂಡಿರುವುದಿಲ್ಲ. ತನ್ನ ಹೆಂಡತಿಯ ಆರೋಗ್ಯವನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ. ಮೇಲ್ಕಂಡ 4 ಜನರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದೆ.

7) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.191/2020 ಕಲಂ: 353,332 ಐ.ಪಿ.ಸಿ :-

          ದಿನಾಂಕ:26/11/2020 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಹೆಚ್.ಸಿ.208 ಗಿರೀಶ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:26/11/2020 ರಂದು ಠಾಣಾ ಹಾಜರಾತಿಯಲ್ಲಿ ತನಗೆ ಮತ್ತು ಹೆಚ್.ಸಿ 71 ಸುಬ್ರಮಣಿ, ಹಾಗೂ ಪಿಸಿ-535 ಶ್ರೀನಿವಾಸ ರವರಿಗೆ ಗುಡಿಬಂಡೆ ತಾಲ್ಲೂಕು ಸರಹದ್ದನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಕರ್ತವ್ಯಕ್ಕೆ ನೇಮಿಸಿ ಕಳುಹಿಸಿದ್ದು ಅದರಂತೆ ನಾವುಗಳು ಈ ದಿನ ಪೆರೇಸಂದ್ರ, ಬೀಚಗಾನಹಳ್ಳಿ, ವರ್ಲಕೊಂಡ ಇತ್ಯಾದಿ ಗ್ರಾಮಗಳ ಕಡೆ ಗಸ್ತುಮಾಡಿಕೊಂಡು ಸಂಜೆ 6-00 ಗಂಟೆಗೆ ರೇಣುಮಾಕಲಹಳ್ಳಿ ಕ್ರಾಸ್ ಕಡೆ ಗಸ್ತಿನಲ್ಲಿದ್ದಾಗ ಗುಡಿಬಂಡೆ ನಗರದ ಪೋಸ್ಟ್ ಆಫೀಸ್ ಪಕ್ಕದ ರಸ್ತೆಯಲ್ಲಿ ರಾಜೇಶ್ ಬಿನ್ ನಾಗರಾಜು ಎಂಬುವವರು ಮಟ್ಕಾ ಜೂಜಾಟ ಆಡುತ್ತಿರುವುದಾಗಿ ಭಾತ್ಮಿದಾರರಿಂದ ಮಾಹಿತಿ ಬಂದಿದ್ದು ಅದನ್ನು ಖಚಿತ ಪಡಿಸಿಕೊಳ್ಳಲು ನಾವುಗಳು ಮೇಲ್ಕಂಡ ಪೋಸ್ಟ್ ಆಫೀಸ್ ರಸ್ತೆಗೆ ರಾತ್ರಿ 6-45 ಗಂಟೆಗೆ  ಹೋಗಿ ರಾಜೇಶ್ ರವರ ಮನೆಯ ವಿಳಾಸ ಕೇಳಿಕೊಂಡು ಅವರ ಮನೆಯ ಬಳಿ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ಇದ್ದು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ರಾಜೇಶ್ ಬಿನ್ ನಾಗರಾಜು, 25ವರ್ಷ, ನಾಯಕರು, ಟೀ ಅಂಗಡಿ ವ್ಯಾಪಾರಿ, ವಾಸ ಇಂದಿರಾನಗರ, ವಾಪಸಂದ್ರ ರಸ್ತೆ ಎಂತ ತಿಳಿಸಿರುತ್ತಾನೆ. ನಂತರ ನಾವುಗಳು ನಮ್ಮ ಗುರುತಿನ ಕಾರ್ಡನ್ನು ತೋರಿಸಿ ನಾವುಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಪೊಲೀಸರು ಎಂತ ತಿಳಿಸಿ ಆತನನ್ನು ಮಟ್ಕಾ ಜೂಜಾಟದ ಬಗ್ಗೆ ವಿಚಾರ ಮಾಡಲಾಗಿ ಆತನು ನಾನು ಮಟ್ಕಾ ಜೂಜಾಟ ಆಡಿಸುತ್ತೇನೆಂತ ಯಾರು ಹೇಳಿದ್ದು ? ಎಂತ ಏಕಾ ಏಕಿ ತಮ್ಮ ಮೇಲೆ ಗಲಾಟೆ ತೆಗೆದು ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ನಂತರ ತಾವುಗಳು ಆತನಿಗೆ ಸಮಾಧಾನದಿಂದ ನೋಡಪ್ಪಾ ನಿನಗೆ ನಾವು ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ. ಮಟ್ಕಾ ಜೂಜಾಟದ ಬಗ್ಗೆ ಮಾತ್ರ ವಿಚಾರ ಮಾಡುತ್ತೇವೆಂತ ಹೇಳಿದ್ದು ಇದರಿಂದ ಆತ ಕೋಪಗೊಂಡು ಏಕಾ ಏಕಿ ತನಗೆ ಕೈಗಳಿಂದ ತಲೆಗೆ, ಬಲ ಕಿರುಬೆರಳಿಗೆ ಹೊಡೆದು ನಂತರ ತನ್ನ ಎಡಕೈಗೆ ಹಲ್ಲಿನಿಂದ ಕಚ್ಚಿ ರಕ್ತಗಾಯಪಡಿಸಿರುತ್ತಾನೆ. ಅದೇ ಸಮಯಕ್ಕೆ ಜೊತೆಯಲ್ಲಿದ್ದ ಹೆಚ್.ಸಿ 71 ಸುಬ್ರಮಣಿ ರವರು ಗಲಾಟೆ ಬಿಡಿಸಲು ಬಂದಿದ್ದು ಅವರಿಗೆ ರಾಜೇಶ್ ನು ಕೈಗಳಿಂದ ಎರಡೂ ಕಿವಿಗಳಿಗೆ ಕೈಗಳಿಂದ ಗುದ್ದಿ ಮೂಗೇಟು ಉಂಟುಮಾಡಿರುತ್ತಾನೆ. ನಂತರ ಪಿಸಿ- 535 ಶ್ರೀನಿವಾಸ ರವರು ಅವನನ್ನು ಹಿಡಿದುಕೊಳ್ಳಲು ಬಂದಾಗ ಆತನನ್ನು ಪಕ್ಕಕ್ಕೆ ತಳ್ಳಿ ಸ್ಥಳದಿಂದ ಪರಾರಿಯಾಗಿದ್ದು. ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೈಗಳಿಂದ ಹೊಡೆದು, ಹಲ್ಲಿನಿಂದ ಕಚ್ಚಿ ರಕ್ತಗಾಯ ಪಡಿಸಿರುವ ಮೇಲ್ಕಂಡ ರಾಜೇಶ್ ಬಿನ್ ನಾಗರಾಜ ರವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು.

8) ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.308/2020 ಕಲಂ: 279,337 ಐ.ಪಿ.ಸಿ :-

          ದಿನಾಂಕ:-26/11/2020 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾರರಾದ ದೇವರಾಜ ಬಿನ್ ನಾರಾಯಣಸ್ವಾಮಿ 32 ವರ್ಷ, ಪ ಜಾತಿ, ಗಾರೆ ಕೆಲಸ, ವಾಸ-ಎ.ಗುಟ್ಟಹಳ್ಳಿ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 23/11/2020 ರಂದು ಬೆಳಿಗ್ಗೆ ತನ್ನ ತಂದೆಯವರಾದ ನಾರಾಯಣಸ್ವಾಮಿ ಬಿನ್ ಲೇಟ್ ತಿಮ್ಮಯ್ಯ (55 ವರ್ಷ) ರವರು ಹೊಸಕೋಟೆ ತಾಲ್ಲೂಕು ನಂದಗುಡಿ ಗ್ರಾಮದಲ್ಲಿ ವಾಸವಾಗಿರುವ ತನ್ನ ತಂಗಿಯವರಾದ ಮೀನಾ ಮತ್ತು ಆಶಾ ರವರ ಮನೆಗೆ ಹೋಗಿ ಬರುವುದಾಗಿ ಹೇಳಿ ತಮ್ಮ ಬಾಬತ್ತು ಕೆಎ-53-ಯು-8589 ನೊಂದಣಿ ಸಂಖ್ಯೆಯ ಟಿವಿಎಸ್ ಹೆವಿ ಡ್ಯೂಟಿ ದ್ವಿ ಚಕ್ರ ವಾಹನದಲ್ಲಿ ತನ್ನ ತಂಗಿಯವರ ಮನೆಗೆ ಹೋಗಿ ಅವರನ್ನು ಮಾತನಾಡಿಸಿಕೊಂಡು ಪುನಃ ತಮ್ಮ ಗ್ರಾಮಕ್ಕೆ ವಾಪಸ್ಸು ಬರಲು ಅದೇ ದಿನ ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ಹೆಚ್ ಕ್ರಾಸ್ ಗ್ರಾಮದಲ್ಲಿರುವ ಸಿಂಚನ ಪ್ಯಾಲೇಸ್ ಮುಂಭಾಗದ ಚಿಂತಾಮಣಿ-ಬೆಂಗಳೂರು ಮುಖ್ಯ ರಸ್ತೆ ತನ್ನ ತಂದೆಯವರು ತಮ್ಮ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ತನ್ನ ತಂದೆಯವರ ಮುಂಬದಿಯಲ್ಲಿ ಓನ್ ವೇ ನಲ್ಲಿ ಕೆಎ-08-ಟಿ-2824 ನೊಂದಣಿ ಸಂಖ್ಯೆಯ ಟ್ರಾಕ್ಟರ್ ಅನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ತಂದೆಯವರ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ತನ್ನ ತಂದೆಯವರು ದ್ವಿ ಚಕ್ರ ವಾಹನದ ಸಮೇತವಾಗಿ ಕೆಳಗೆ ಬಿದ್ದು ಹೋಗಿ ಬಾಯಿಗೆ, ಗಡ್ಡದ ಭಾಗದಲ್ಲಿ, ತಲೆಗೆ, ಬಲ ಮೊಣ ಕಾಲು ಮತ್ತು ಪಾದದ ಬಳಿ ರಕ್ತಗಾಯಗಳಾಗಿದ್ದು, ಆ ಸಮಯದಲ್ಲಿ ಯಾರೋ ಸಾರ್ವಜನಿಕರು ತನ್ನ ತಂದೆಯವರನ್ನು ಉಪಚರಿಸಿ ಆಂಬುನಲ್ಸ್ ನಲ್ಲಿ ನಂದಗುಡಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ, ತನ್ನ ತಂದೆಯವರ ಪೋನ್ ನಿಂದ ತನಗೆ ಪೋನ್ ಮಾಡಿ ವಿಷಯ ತಿಳಿಸಿದ್ದು, ಕೂಡಲೇ ತಾನು ನಂದಗುಡಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿರುತ್ತದೆ. ನಂತರ ತಾನು ತನ್ನ ತಂದೆಯವರನ್ನು ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಇನ್ನು ಹೆಚ್ಚಿನ ಚಿಕಿತ್ಸೆಗೆ ಹೊಸಕೋಟೆಯ ಶ್ರೀನಿವಾಸ ನರ್ಸಿಂಗ್ ಹೋಂ ಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿರುತ್ತೇನೆ. ತನ್ನ ತಂದೆಯವರು ಇನ್ನು ಒಳರೋಗಿಯಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ತಾನು ಅವರ ಆರೈಕೆಯಲ್ಲಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಅಪಘಾತಕ್ಕೆ ಕಾರಣ ಮೇಲ್ಕಂಡ ಕೆಎ-08-ಟಿ-2824 ನೊಂದಣಿ ಸಂಖ್ಯೆಯ ಟ್ರಾಕ್ಟರ್ ನ ಚಾಲಕನ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.