ದಿನಾಂಕ :27/10/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.263/2020 ಕಲಂ: 279,337 ಐ.ಪಿ.ಸಿ:-

          ದಿ: 26-10-2020 ರಂದು ಪಿ.ಸಿ 237 ವಿನಯ್ ಕುಮಾರ್ ರವರು ಯಲಹಂಕ ಕೆ.ಕೆ ಆಸ್ಪತ್ರೆಯಲ್ಲಿ ಗಾಯಾಳು ಸಯ್ಯದ್ ಇಜಾಜ್ ಬಿನ್ ಕರೀಂ ಸಾಹೇಬ್, 55 ವರ್ಷ, ಮುಸ್ಲಿಂ ಜನಾಂಗ, ಟೀ ಅಂಗಡಿ ವ್ಯಾಪಾರ, ವಾಸ: #29-31/6, ಭಗತ್ ಸಿಂಗ್ ಕಾಲೋನಿ, ಪುಂಗನೂರು, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ ರವರ  ಹೇಳಿಕೆ ದೂರನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದನ್ನುಪಡೆದುಕೊಂಡಿದ್ದರ ಸಾರಾಂಶ –ಪಿರ್ಯಾಧಿದಾರರು ದಿ:23-10-2020 ರಂದು TN04V8963 BOXER ದ್ವಿಚಕ್ರ ವಾಹನದಲ್ಲಿ ಪುಂಗನೂರಿನಿಂದ ಪೆನುಗೊಂಡ ದರ್ಗಾಗೆ ತಮ್ಮ ಹೆಂಡತಿ ಸಯ್ಯದ್ ದಿಲ್ ಶಾದ್ ರವರೊಂದಿಗೆ ಬಂದಿದ್ದು, ದಿ:24-10-2020 ರಂದು  ಪುಂಗನೂರಿಗೆ ಹೋಗಲು ಬಾಗೇಪಲ್ಲಿ ತಾಲ್ಲೂಕು ಮಿಟ್ಟೇಮರಿ ಗ್ರಾಮದ ಕೆರೆ ಕಟ್ಟೆ ಮೇಲೆ ರಸ್ತೆಯಲ್ಲಿ ಎಡಭಾಗದಲ್ಲಿ ಮದ್ಯಾಹ್ನ 1:00 ಗಂಟೆಯ ಸಮಯದಲ್ಲಿ ಹೋಗುತ್ತಿದ್ದಾಗ, ಎದುರುಗಡೆಯಿಂದ ಅಂದರೆ, ಚಿಂತಾಮಣಿ ಕಡೆಯಿಂದ KA-40-U-7951 ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ, ಪಿರ್ಯಾಧಿಯ ದ್ವಚಿಕ್ರ ವಾಹನ ಜಖಂಗೊಂಡು ಪಿರ್ಯಾಧಿಗೆ ಮತ್ತು ಪಿರ್ಯಾಧಿಯ ಹೆಂಡತಿಗೆ ಗಾಯಗಳಾಗಿದ್ದು, ಡಿಕ್ಕಿ ಹೊಡೆಸಿದ ವಾಹನದ ಸವಾರ ಮತ್ತು ಹಿಂಬಂಧಿಯ ಸವಾರನಿಗೂ ಗಾಯಗಳಾಗಿರುತ್ತದೆ. ಪಿರ್ಯಾಧಿ ಮತ್ತು ಪಿರ್ಯಾಧಿಯ ಹೆಂಡತಿಯನ್ನು ಬಾಗೇಪಲ್ಲಿಯ ಮುನ್ನಾ ಮತ್ತು ರೇಷ್ಮಾ ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಿ ದಾಖಲಿಸಿದ್ದು, ವೈದ್ಯರ ಸಲಹೆಯಂತೆ  ಹೆಚ್ಚಿನ ಚಿಕಿತ್ಸೆಗಾಗಿ ಪಿರ್ಯಾಧಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ನಂತರ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಹಾಗೂ ಯಲಹಂಕದ ಕೆ.ಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು,  ಈ ಅಪಘಾತವನ್ನುಂಟು ಮಾಡಿದ ಮೇಲ್ಕಂಡ ದ್ವಿಚಕ್ರ ವಾಹನದ ಸವಾರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

 1. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.23/2020 ಕಲಂ: 419,420 ಐ.ಪಿ.ಸಿ & 66(ಡಿ) INFORMATION TECHNOLOGY ACT 2000:-

          ದಿನಾಂಕ:27/10/2020 ರಂದು ಪಿರ್ಯಾದಿ ರೆಡ್ಡಪ್ಪ.ಬಿ.ಆರ್ ಬಿನ್ ಬಿ.ಎಸ್.ರಾಮಪ್ಪ ಲೇಟ್,42ವರ್ಷ, ವಕ್ಕಲಿಗರು, ವ್ಯಾಪಾರ, ವಾಸ ಬಿಲ್ಲಾಂಡ್ಲಹಳ್ಳಿ ಗ್ರಾಮ, ಮುಂಗಾನಹಳ್ಳಿ ಹೋಬಳಿ, ಚಿಂತಾಮಣಿ ತಾಲ್ಲೂಕು, ಹಾಲಿ ವಾಸ ಚೇಳೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.ಮೊ.ಸಂಖ್ಯೆ: 9900143666 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಹಾಲಿ ಚೇಳೂರು ಗ್ರಾಮದಲ್ಲಿ ವಾಸವಿದ್ದು ಮತ್ತು ಇದೇ ಗ್ರಾಮದಲ್ಲಿ ಹೋಂ ಅಪ್ಲೇಯನ್ಸ್ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತಾನು ತನ್ನ ವ್ಯವಹಾರದ ಉದ್ದೇಶಕ್ಕಾಗಿ ಚಿಂತಾಮಣಿ ಕನರ್ಾಟಕ ಬ್ಯಾಂಕ್ನಲ್ಲಿ ಖಾತೆ ಸಂಖ್ಯೆ:1422500104152501 ರಂತೆ ಉಳಿತಾಯ ಖಾತೆಯನ್ನು ಹೊಂದಿರುತ್ತೇನೆ. ಹಾಗೂ ನನ್ನ ಬಳಿ ರೆಡ್ ಮಿ ಆಂಡ್ರಾಯ್ಡ್ ಮೊಬೈಲ್ ಇರುತ್ತದೆ. ಅದಕ್ಕೆ ಏರ್ಟೆಲ್ ಕಂಪನಿಯ ಸಿಮ್ ಸಂಖ್ಯೆ:9900143666 ಅನ್ನು ಅಳವಡಿಸಿರುತ್ತೇನೆ ಹಾಗೂ ಇದರಲ್ಲೆ ಇಂಟರ್ನೆಟ್ ಬಳಸುತ್ತಾ ಆಗಾಗ ಗೂಗಲ್ ನಲ್ಲಿ ಮಾಹಿತಿಯನ್ನು ನೋಡುತ್ತಿರುತ್ತೇನೆ. ಹೀಗಿರುವಾಗ ದಿನಾಂಕ:07/10/2020 ರಂದು ಸಂಜೆ ಸುಮಾರು 7-00 ಗಂಟೆಗೆ ನಾನು ನನ್ನ ಮೊಬೈಲ್ ನಲ್ಲಿ ಫೇಸ್ ಬುಕ್ ನ್ನು ನೋಡುತ್ತಿದ್ದಾಗ ಖಊಖಖಂಒ ಉಡಿಠಣಠಿ ಕಡೆಯಿಂದ ಸಾಲ ಕೊಡಿಸುವುದಾಗಿ ಇದ್ದು ನೋಡಲಾಗಿ ಅದರಲ್ಲಿ ಮೊ.ನಂ. 9899972576 ಗೆ ಕರೆ ಮಾಡಿ ಎಂತ ನಂಬರ್ ನೀಡಿದ್ದು ಅದಕ್ಕೆ ಸಂಪರ್ಕ ಮಾಡಿ 5 ಲಕ್ಷ ಸಾಲ ಕೊಡುವಂತೆ ವಿಚಾರಿಸಿದಾಗ ಸದರಿ ನಂಬರಿನ ವ್ಯಕ್ತಿ ನಾವು ಕಂಪನಿಯ ಏಜಂಟ್ ಆಗಿದ್ದು ಲೋನ್ ಕೊಡಿಸುವುದಾಗಿ ತಿಳಿಸಿ ನಂತರ ಮೊ.ನಂ.9873944874 ಗೆ ನಿಮ್ಮ ದಾಖಲೆಗಳನ್ನು ವಾಟ್ಸಪ್ ಕಳುಹಿಸಿ ಎಂತ ತಿಳಿಸಿ ನಂಬರ್ ಕೊಟ್ಟಿರುತ್ತಾನೆ. ನಂತರ ??ನು ದಿನಾಂಕ:08/10/2020 ರಂದು ನನ್ನ ಮೊಬೈಲ್ ನಿಂದ  ಮೊ.ನಂ.9873944874 ಗೆ ಪಾನ್ ಕಾರ್ಡ, ಆಧಾರ್ ಕಾರ್ಡ, ಜಿ.ಎಸ್.ಟಿ ನಂ. ಒಂದು ಪಾಸ್ ಪೋಟರ್್ ಸೈಜ್ ಫೋಟೋ, ಐಟಿ ರಿಟನ್ಸರ್್ ಕಾಪಿಯನ್ನು ಕಳುಹಿಸಿಕೊಟ್ಟಿರುತ್ತೇನೆ. ನಂತರ ದಿನಾಂಕ:09/10/2020 ರಂದು ಲೋನ್ ಅಪ್ರೋವಲ್ ಆಗಿದೆ ಎಂತ ಅಪ್ರೋವಲ್ ಲೆಟರ್ ಅನ್ನು ವಾಟ್ಸಪ್ ಮೂಲಕ ಕಳುಹಿಸಿಕೊಟ್ಟಿರುತ್ತಾರೆ. ಸದರಿ ಅಪ್ರೋವಲ್ ಲೆಟರ್ ಗೆ ಡಾಕ್ಯುಮೆಂಟ್ ಚಾರ್ಜಸ್ ಎಂತ ಹೇಳಿ 4130/- ರೂಪಾಯಿ ಹಣವನ್ನು ಅವರ ಪೋನ್ ಪೇ ವಾಲೆಟ್ ಸಂಖ್ಯೆ:8601861524 ಗೆ ಕಳುಹಿಸಲು ತಿಳಿಸಿದ್ದು ಅದರಂತೆ ನನ್ನ ಬ್ಯಾಂಕ್ ಖಾತೆಗೆ ಅಳವಡಿಸಿಕೊಂಡಿರುವ ನನ್ನ ಮೊ.ನಂ. 9900143666 ಪೋನ್ ಪೇ ನಿಂದ ಕಳುಹಿಸಿಕೊಟ್ಟಿರುತ್ತೇನೆ. ನಂತರ ನನ್ನ ಖಾತೆಗೆ 2,50,000/- ಹಾಕಿರುವುದಾಗಿ ವಾಟ್ಸಪ್ ಮೆಸೇಜ್ ಕಳಹಿಸಿ ಅದಕ್ಕೆ 14,560/- ಕಳುಹಿಸುವುಂತೆ ತಿಳಿಸಿದ್ದು ಅದರಂತೆ ನಾನು 14,560/- ರೂಗಳನ್ನು ಅವರ ಪೋನ್ ಪೇ ವಾಲೆಟ್ ಸಂಖ್ಯೆ: 8601861524 ಗೆ ಕಳುಹಿಸಿಕೊಟ್ಟಿರುತ್ತೇನೆ. ನಂತರ 5 ಲಕ್ಷಗಳಿಗೆ ಇನ್ಸೂರೆನ್ಸ್ ಪಾಲಸಿ ಚಾರ್ಜಸ್ ಎಂತ ಹೇಳಿ 19,830/- ರೂಪಾಯಿಗಳನ್ನು ಅವರ ಪೋನ್ ಪೇ ವಾಲೆಟ್ ಸಂಖ್ಯೆ: 8601861524 ಗೆ ಕಳುಹಿಸಿಕೊಟ್ಟಿರುತ್ತೇನೆ. ನಂತರ ದಿನಾಂಕ:20/10/2020 ರಂದು 2 ತಿಂಗಳ ಮುಂಗಡ ಇಎಂಐ ಎಂತ 22,656/- ರೂಗಳನ್ನು ಅವರ ಪೋನ್ ಪೇ ವಾಲೆಟ್ ಸಂಖ್ಯೆ: 8601861524 ಗೆ ಕಳುಹಿಸಿಕೊಟ್ಟಿರುತ್ತೇನೆ. ನಂತರ ವಾಲ್ಯುಏಷನ್ ರಿಪೋರ್ಟ್ ಕಳುಹಿಸಿಕೊಟ್ಟರು ಆಗ ನಾನು ನನ್ನ ಖಾತೆಗೆ ಇನ್ನೂ ಹಣ ಬಂದಿಲ್ಲವೆಂತ ಕೇಳಿದ್ದಕ್ಕೆ ಲೋನ್ ಅಗ್ರಿಮೆಂಟ್ ಪೇಪರ್ ನ್ನು ಕಳುಹಿಸಿಕೊಟ್ಟಿರುತ್ತಾರೆ. ನಂತರ ಅವರ ಸೀನಿಯರ್ ಎಂತ ಹೇಳಿ ಮೊ.ನಂ.9599438923 ಗೆ ಮಾತನಾಡಲು ತಿಳಿಸಿದ್ದು ಅದರಂತೆ ನಾನು ಸಂಪಕರ್ಿಸಿ ಮಾತನಾಡಲಾಗಿ ಹಣ ಕಳುಹಿಸಿಕೊಡುವುದಾಗಿ ತಿಳಿಸಿದರು. ನಂತರ ನಾನು ಇಲ್ಲಿಯವರೆಗೂ ಶ್ರೀರಾಮ್ ಚಿಟ್ಸ್ ಮತ್ತು ಫೈನಾನ್ಸ್ ನಲ್ಲಿ ಹಲವು ಕಡೆ ವಿಚಾರಿಸಲಾಗಿ ಮೇಲ್ಕಂಡ ವ್ಯವಹಾರದಲ್ಲಿ ?ನಗೆ ಮೇಲ್ಕಂಡ ಮೊಬೈಲ್ ಸಂಖ್ಯೆಗಳ ವ್ಯಕ್ತಿಗಳು ಮೋಸ ಮಾಡಿ, ?ನ್ನಿಂದ ಹಣವನ್ನು ಪಡೆಕೊಡಿರುವುದಾಗಿ ಅರಿವಾಯಿತು. ನಂತರ ಸದರಿಯವರಿಗೆ ಪೋನ್ ಮಾಡಲಾಗಿ ಉತ್ತರಿಸದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ನನಗೆ ಸಾಲ ಕೊಡುವುದಾಗಿ ನನ್ನಿಂದ 61,170/- ರೂಗಳನ್ನು ಪಡೆದುಕೊಂಡು ಹಣವನ್ನು ವಾಪಸ್ಸು ಕೊಡದೇ ಸಾಲವನ್ನೂ ಕೊಡದೇ ಮೋಸ ಮಾಡಿ ಹಣವನ್ನು ಪಡೆದ ಮೇಲ್ಕಂಡ ಮೊಬೈಲ್ ಬಳಕೆದಾರರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಿ ತನ್ನ ಹಣವನ್ನು ತನಗೆ ವಾಪಸ್ಸು ಕೊಡಿಸಿಕೊಡಬೇಕಾಗಿ ಕೋರಿ ನೀಡಿದ ದೂರು.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.155/2020 ಕಲಂ: 15(A),32(3) ಕೆ.ಇ ಆಕ್ಟ್:-

          ದಿನಾಂಕ: 27/10/2020 ರಂದು ಬೆಳಿಗ್ಗೆ 11-10 ಗಂಟೆ ಸಮಯದಲ್ಲಿ ಪಿ.ಎಸ್.ಐ ಸಾಹೇಬರವರು ನೀಡಿದ ದೂರನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ಈ ದಿನ ದಿನಾಂಕ: 27/10/2020 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದಿಗೆ ಸೇರಿದ ಚಿಕ್ಕಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ದಿಬ್ಬೂರು ಗ್ರಾಮದಲ್ಲಿ ಆರ್.ಎಸ್.ವಿಜೇಂದ್ರ ಬಿನ್ ಸಿದ್ದರಾಜು, 20 ವರ್ಷ, ವಕ್ಕಲಿಗರು, ನಂದಿನಿ ವೈನ್ಸ್ ನಲ್ಲಿ ಕೆಲಸ ಎಂಬುವವರು ತನ್ನ ವಾಸದ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತೆ. ಈ ಬಗ್ಗೆ ಆರ್.ಎಸ್. ವಿಜೇಂದ್ರ ರವರ ವಿರುದ್ದ ಕಲಂ: 15[ಎ], 32[3] ಕೆ.ಇ.ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರ.ವ.ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.156/2020 ಕಲಂ: 279,337 ಐ.ಪಿ.ಸಿ:-

          ದಿನಾಂಕ: 27/10/2020 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದುದಾರರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ; 14/10/2020 ರಂದು ಚಿಕ್ಕಬಳ್ಳಾಪುರ ತಾಲ್ಲೂಕು ಬೋಗಪರ್ತಿ ಗ್ರಾಮದ ತಾವು ಸಂಬಂದಿಕರ ಮಗುವಿನ ನಾಮಕರಣ ಕಾರ್ಯಕ್ರಮ ಇದ್ದುದರಿಂದ ದಿನಾಂಕ: 13/10/2020 ರಂದು ಮದ್ಯಾಹ್ನ ತಾನು ತನ್ನ ಹೆಂಡತಿ ಶ್ರೀಮತಿ ಸುಮ ಇಬ್ಬರೂ ತನ್ನ ಹೆಂಡತಿಯ ತವರು ಮನೆಯಾದ ಚಿಕ್ಕಬಳ್ಳಾಪುರ ತಾಲ್ಲೂಕು ಕೋರೇನಹಳ್ಳಿ ಗ್ರಾಮದಲ್ಲಿ ಬಿಟ್ಟು ತಾನು ತನ್ನ ಸ್ನೇಹಿತರನ್ನು ನೋಡಲು ಬಾಗೇಪಲ್ಲಿಗೆ ಹೋಗಿದ್ದೆನು. ಸಾಯಂಕಾಲ ಸುಮಾರು 5-15 ಗಂಟೆ ಸಮಯದಲ್ಲಿ ತನ್ನ  ಹೆಂಡತಿ ಸುಮರವರು ತನಗೆ ಪೋನ ಮಾಡಿ ತಾನು ತನ್ನ ತಮ್ಮ ನವೀನ್ ಮತ್ತು ಅಕ್ಕನ ಮಗು ಮೋನಿಕಾಳೊಂದಿಗೆ ಕೊರೇನಹಳ್ಳಿಯಿಂದ ಬೋಗಪರ್ತಿ ಗ್ರಾಮಕ್ಕೆ ಹೋಗಲು KA-40 W-8439 ಹೀರೋ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಎನ.ಹೆಚ್-44 ರಸ್ತೆಯಿಂದ ಶೆಟ್ಟಿಗೆರೆ ಕ್ರಾಸ್ ಮುಖಾಂತರ ಶೆಟ್ಟಿಗೆರೆ ಗ್ರಾಮದ ಬಳಿ ಟಾರು ರಸ್ತೆಯಲ್ಲಿ ನವೀನ್ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಸಾಯಂಕಾಲ ಸುಮಾರು 5-00 ಗಂಟೆಯಲ್ಲಿ ಎದುರುಗಡೆಯಿಂದ ಬರುತ್ತಿದ್ದ KA-40 ED-4863 ಹೀರೋ ಪ್ಯಾಷನ್ ಪ್ರೋ ದ್ವಿಚಕ್ರ ವಾಹನ ಸವಾರ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಗಾಡಿಗೆ ಡಿಕ್ಕಿ ಹೊಡೆಸಿದ್ದು, ತನಗೆ ಗಾಯಗಳಾಗಿದ್ದು, ತಕ್ಷಣ ಬರುವಂತೆ ತಿಳಿಸಿದರು. ಆಗ ತಾನು, ತನ್ನ ಸ್ನೇಹಿತ ಸುರೇಂದ್ರ ರೆಡ್ಡಿ ಬಿನ್ ಬೈಯ್ಯಪ್ಪರೆಡ್ಡಿ ಇಬ್ಬರೂ ಸ್ಥಳಕ್ಕೆ ಬಂದು ನೋಡಲಾಗಿ ತನ್ನ ಹೆಂಡತಿ ಸುಮ ರವರಿಗೆ ಎಡಮೊಣಕೈ, ಎಡಕಾಲಿಗೆ ಊತಗಾಯಗಳಾಗಿದ್ದು, ಎಡಮೊಣಕಾಲಿಗೆ ರಕ್ತಗಾಯವಾಗಿತ್ತು. ನವೀನ್ ರವರಿಗೆ ಎಡಕೈನ ಮದ್ಯದ ಬೆರಳು ಕಟ್ಟಾಗಿ ರಕ್ತ ಸೋರುತ್ತಿದ್ದು, ಎಡಕಾಲ ಪಾದ ಸೀಳಿದ್ದು, ರಕ್ತ ಸೋರುತ್ತಿತ್ತು. ಮೋನಿಕಾಗೆ ಎಡಕಾಲ ತೊಡೆಗೆ ರಕ್ತಗಾಯವಾಗಿತ್ತು. ತಕ್ಷಣ ತಾನು ತಮ್ಮ ಕಾರಿನಲ್ಲಿ ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಮೂರು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ತಾನು ಮೂರು ಜನರನ್ನು ಬೆಂಗಳೂರಿನ ಆಸ್ಟರ್ ಸಿ.ಎಂ.ಐ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿದೆನು. ತನ್ನ ಹೆಂಡತಿ ಸುಮ ರವರಿಗೆ ಎಡಕೈನ ಮೂಳೆ ಮತ್ತು ಎಡಕಾಲಿನ ಮೂಳೆ ಮುರಿದಿದ್ದು, ಮೋನಿಕಾಗೆ ಎಡಕಾಲ ತೊಡೆಯ ಮೂಳೆ ಮುರಿದಿದ್ದು, ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿರುತ್ತಾರೆ. ಮೂರು ಜನ ಗಾಯಾಳುಗಳು ಆಸ್ಪತ್ರೆಯಿಂದ ಡಿಸ್ ಚಾರ್ಜ ಆಗಿದ್ದು, ತಮ್ಮ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಗಾಯಾಳುಗಳನ್ನು ನೋಡಿಕೊಳ್ಳುವವರು ಯಾರೂ ಇಲ್ಲದೇ ಇದ್ದುದರಿಂದ ತಾನು ಅವರೊಂದಿಗೆ ಇದ್ದು, ಈ ದಿನ ತಡವಾಗಿ ಠಾಣೆಗೆ ಬಂದು ತನ್ನ ಹೆಂಡತಿ, ಬಾಮೈದ ಮತ್ತು ಮಗುವಿಗೆ ಅಪಘಾತವನ್ನುಂಟು ಮಾಡಿದ ಮೇಲ್ಕಂಡ KA-40 ED-4863 ಹೀರೋ ಪ್ಯಾಷನ್ ಪ್ರೋ ದ್ವಿಚಕ್ರ ವಾಹನ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ,ವ,ವರದಿ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.146/2020 ಕಲಂ: 341,323,504,506,427 ರೆ/ವಿ 34 ಐ.ಪಿ.ಸಿ:-

          ದಿನಾಂಕ: 26/10/2020 ರಂದು ಮದ್ಯಾಹ್ನ 15:00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಾವು ಈರುಳ್ಳಿ ವ್ಯಾಪಾರದಿಂದ ಜೀವನ ಮಾಡಿಕೊಂಡಿರುತ್ತೇವೆ. ತಾವು ತಮ್ಮ ಮನೆಯ ಪಕ್ಕದಲ್ಲಿ ರುವ ಖಾಲಿ ಜಾಗದಲ್ಲಿ ಈರುಳ್ಳಿಯನ್ನು ಹಾಕಿರುತ್ತೇವೆ.  ಹೀಗಿರುವಾಗ ದಿನಾಂಕ: 25/10/2020 ರಂದು ರಾತ್ರಿಯ ವೇಳ ನಮ್ಮ ಏರಿಯಾದ ವಾಸಿ ನಾವಾಜ್ ಪಾಷ ಬಿನ್ ಇಬ್ರಾಹಿಂ ಸಾಬ್  ರವರು ತನ್ನ ಬಾಬತ್ತು  ಕೆ.ಎ-67-0140 ಲಾರಿಯಿಂದ ತಾವು ಹಾಕಿದ್ದ ಈರುಳ್ಳಿ ಮೇಲೆ ಹತ್ತಿಸಿ ನುಜ್ಜುನುಜ್ಜಾಗಿ ಮಾಡಿ ತಮಗೆ ನಷ್ಠವನ್ನುಂಟು  ಮಾಡಿರುತ್ತಾರೆ. ಈ ವಿಚಾರವಾಗಿ ದಿನಾಂಕ 26/10/2020 ರಂದು ಬೆಳಿಗ್ಗೆ 8-30 ಗಂಟೆಗೆ ತಾನು ಹಾಗೂ ತನ್ನ ಗಂಡ ಅಮೀರ್ ಜಾನ್ ರವರು ಎ.ಪಿ.ಎಂ.ಸಿ ಮಾರುಟ್ಟೆಯಲ್ಲಿದ್ದ ನವಾಜ್ ಪಾಷ ಬಿನ್ ಇಬ್ರಾಹಿಂ ಸಾಬ್ ಹಾಗೂ ಆತನ ಅಣ್ಣನಾದ ಅಬೀಬ್ ಪಾಷ  ರವರ ಬಳಿ ಹೋಗಿ ಏಕೆ ನೀವು ತಮ್ಮ ಈರುಳ್ಳಿ ಮೇಲೆ ನಿಮ್ಮ ಲಾರಿಯನ್ನು  ಹತ್ತಿಸಿ ತಮಗೆ ನಷ್ಟವನ್ನುಂಟು ಮಾಡಿರುತ್ತೀರಿ ಎಂದು ಕೇಳುವಷ್ಟರಲ್ಲಿ ನಾವಾಜ್ ಪಾಷ,  ಅಬೀಬ್ ಪಾಷ  ಮತ್ತು ಅವರ ಜೊತೆ ಇತರೆ ಇಬ್ಬರು ತಮ್ಮನ್ನು ಏ ಲೋಪರ್ ನನ್ನ ಮಕ್ಕಳೇ ಎಂದು ಅವಾಚ್ಯ ಶಬ್ದಗಳಿಂದ ಬೈದು ತಮ್ಮನ್ನು ಅಡ್ಡಗಟ್ಟಿ  ಆ ಪೈಕಿ ನವಾಜ್ ಪಾಷ ರವರು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ಮೂಗೇಟುಂಟು ಮಾಡಿರುತ್ತಾರೆ. ಹಾಗೂ ಅಬೀಬ್ ಪಾಷ ಮತ್ತು ಆತನ ಜೊತೆಯಲ್ಲಿದ್ದ ಇತರೇ ಇಬ್ಬರು ತನ್ನ ಗಂಡನನ್ನು ಕೈಗಳಿಂದ ಹೊಡೆದು ಇನ್ನೋಂದು ಸಾರಿ ನಮ್ಮ ಬಳಿ ಬಂದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ.  ಸದರಿ ಗಲಾಟೆಯಲ್ಲಿ ತನ್ನ ಕತ್ತಿನಲ್ಲಿದ್ದ ಬಂಗಾರದ ಚೈನ್ ಕೆಳಕ್ಕೆ ಬಿದ್ದು ಹೋಗಿರುತ್ತೆ. ಅಷ್ಟರಲ್ಲಿ ಅಲ್ಲಿಯೇ ಇದ್ದ ವೆಂಕಟಗಿಕೋಟೆಯ ಕಾಲೋನಿಯ ವಾಸಿ ದೇವಮ್ಮ ಕೋಂ ಲೇಟ್ ನಾರಾಯಣಸ್ವಾಮಿ ಹಾಗೂ  ಟಿಪ್ಪು ನಗರದ ವಾಸಿ ಬಾಬು ಬಿನ್ ಅಮೀರ್ ಸಾಬ್ ರವರು ಜಗಳ ಬಿಡಿಸಿ  ಕಳುಹಿಸಿರುತ್ತಾರೆ.   ತಮ್ಮ ಹಿರಿಯರು ರಾಜಿ ಪಂಚಾಯ್ತಿ ಮಾಡುವುದಾಗಿ  ತಿಳಿಸಿದ್ದು ಇದುವರೆಗೂ ಪಂಚಾಯ್ತಿಗೆ ಬಾರದೇ ಇದ್ದುದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿರುತ್ತೇನೆ. ಆದ್ದರಿಂದ ತಮ್ಮ ಬಾಬತ್ತು ಈರುಳ್ಳಿ ಮೇಲೆ ಲಾರಿ ಹತ್ತಿಸಿ ತಮಗೆ ನಷ್ಟವನ್ನುಂಟು ಮಾಡಿ  ಕೇಳಲು ಹೋದಾಗ  ತಮ್ಮ ಮೇಲೆ ಜಗಳ ತೆಗೆದು ಅಡ್ಡಗಟ್ಟಿ ಕೈಗಳಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡ ನಾವಾಜ್ ಪಾಷ ಬಿನ್ ಇಬ್ರಾಹಿಂ ಸಾಬ್ ಹಾಗೂ ಆತನ ಅಣ್ಣನಾದ ಅಬೀಬ್ ಪಾಷ ಹಾಗೂ ಇತರೇ ಇಬ್ಬರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.279/2020 ಕಲಂ506,504,323,324 ಐ.ಪಿ.ಸಿ:-

          ದಿನಾಂಕ 26/10/2020 ರಂದು ಮದ್ಯಾಹ್ನ 3-00  ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ  ಶ್ರೀಮತಿ ಕಳಾವತಿ ಕೋಂ ಗೋಪಾಶಲಪ್ಪ,  35 ವರ್ಷ, ಕುರುಬರು, ಬಾದಿಮರಳೂರು ಗ್ರಾಮ, ಗೌರಿಬಿದನಬೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ  ಸಾರಾಂಶವೇನೆಂದರೆ   ತನಗೆ  ಈಗ್ಗೆ ಸುಮಾರು 17 ವರ್ಷಗಳ ಹಿಂದೆ ಬಾದಮರಳೂರು ಗ್ರಾಮದ ವಾಸಿ ಗೋಪಾಲಪ್ಪ ಬಿನ್ ಹನುಮಂತಪ್ಪ, 39 ವರ್ಷ, ಕುರುಬರು, ಜಿರಾಯ್ತಿ ರವರೊಂದಿಗೆ ಮದುವೆಯಾಗಿದ್ದು, ತಮಗೆ ಇಬ್ಬರು ಮಕ್ಕಳಿರುತ್ತಾರೆ. 1ನೇ ನರೇಶ, 2ನೇ ನಂದಿನಿ ಆಗಿರುತ್ತಾರೆ. ತಮ್ಮ ಗ್ರಾಮದ ವಾಸಿ ಆನಂದ ಬಿನ್ ನರಸಿಂಹಪ್ಪ, 42 ವರ್ಷ, ಆದಿ ಕರ್ನಾಟಕ,  ರವರು ತಮ್ಮ ಮನೆಯ ಮುಂದೆ ಪದೇ ಪದೇ ಓಡಾಡುತ್ತಿದದ್ದರಿಂದ ತನ್ನ ಗಂಡ ಏಕೆ ತಮ್ಮ ಮನೆಯ ಕಡೆ ಓಡಾಡುತ್ತಿದ್ದೀಯ ಎಂದು ಇತ್ತೀಚೆಗೆ ಆನಂದನಿಗೆ ಕೇಳಿದಾಗ ಆನಂದ ಏನು ಮಾತನಾಡದೆ ಹೊರಟು ಹೋಗಿದ್ದ, ದಿನಾಂಕ:25/10/2020 ರಂದು ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಗಂಡ ಮನೆಯ ಮುಂದೆ ಇದ್ದಾಗ ಮತ್ತೆ ಆನಂದ ತಮ್ಮ ಮನೆಯ ಮುಂದೆ ಓಡಾಡುತ್ತಿದ್ದನು ಆಗ ತನ್ನ ಗಂಡ ಏಕೆ ತಮ್ಮ ಮನೆಯ ಬಳಿ ಓಡಾಡುತ್ತೀದ್ದೀಯ ಎಂದು ಕೇಳಿದ್ದಕ್ಕೆ, ಮನೆಯ ಹತ್ತಿರ ಬಂದು ತನ್ನ ಗಂಡನಿಗೆ ಲೋಫರ್ ತನ್ನ ಮಗನೆ ನೀನು ಯಾರೋ ತನಗೆ ಕೇಳುವುದಕ್ಕೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಬಿದ್ದಿದ್ದ ಒಂದು ದೊಣ್ಣೆಯಿಂದ ತನ್ನ ಗಂಡನ ತಲೆಯ ಮೇಲೆ ಮತ್ತು ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಕೈಯಿಂದ ತನ್ನ ಗಂಡನ ಎಡ ಕಣ್ಣಿನ ಮೇಲೆ ಗುದ್ದಿ ಊತದ ಗಾಯವನ್ನು ಮಾಡಿದನು. ನಿಮ್ಮನ್ನು ಒಂದು ವಾರದೊಳಗೆ ಮುಗಿಸುತ್ತೇನೆಂದು ಪ್ರಾಣಬೆದರಿಕೆ ಹಾಕಿದನು. ಜಗಳವನ್ನು ತಾನು ಮತ್ತು ತಮ್ಮ ಗ್ರಾಮದ ಹರಿ ಬಿನ್ ಮುಕುಂದಪ್ಪ, ಮತ್ತು ಅಶ್ವತ್ಥಪ್ಪ ಬಿನ್ ಹನುಮಂತಪ್ಪ ರವರು ಬಿಡಿಸಿ, ಗಾಯಗೊಂಡಿದ್ದ ತನ್ನ ಗಂಡ ಗೋಪಾಲಪ್ಪನನ್ನು ತಾನು ಮತ್ತು ತಮ್ಮ ಗ್ರಾಮದ ಅಶ್ವತ್ಥಪ್ಪ ರವರು ಯಾವುದೋ ಒಂದು ವಾಹನದಲ್ಲಿ ಕರೆದುಕೊಂಡು ಬಂದು ಗೌರೀಬಿದನೂರು ಸರ್ಕಾರಿ  ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದೆವು. ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ಗಂಡನನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸಿರುತ್ತೇನೆ. ವಿನಾಕಾರಣ ತನ್ನ ಗಂಡನ ಮೇಲೆ ಹಲ್ಲೇ ಮಾಡಿ ತನಗೆ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ  ಹಾಕಿರುವ ಆನಂದ ಬಿನ್ ನರಸಿಂಹಪ್ಪ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ. ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ತಡವಾಗಿ ನೀಡಿದ  ದೂರು .

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.280/2020 ಕಲಂ. 279,304(A) ಐ.ಪಿ.ಸಿ:-

          ದಿನಾಂಕ:26/10/2020 ರಂದು ರಾತ್ರಿ 20-45 ಗಂಟೆಗೆ ಪಿರ್ಯಾದಿದಾರರಾದ ಶ್ರೀನಿವಾಸ ಬಿನ್ ಅಂಜಿನಪ್ಪ, 46 ವರ್ಷ, ಕುರುಬ ಜನಾಂಗ, ವ್ಯವಸಾಯ, ಶ್ರೀರಾಮನಹಳ್ಳಿ ಗ್ರಾಮ, ಹೆಸರುಘಟ್ಟ ಹೋಬಳಿ ಬೆಂಗಳೂರು ಉತ್ತರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ತನ್ನ ತಂಗಿ ಅರುಣಕುಮಾರಿ ಮಗನಾದ ಬಿ.ಎಸ್.ಹೇಮಂತ್ ಕುಮಾರ್ ಬಿನ್ ಸಂಜೀವಪ್ಪ, 23 ವರ್ಷ ವಯಸ್ಸು, ಕುರುಬ ಜನಾಂಗ,  ವಾಸ ಬಳಗಾರನಹಳ್ಳಿ, ಆನೇಕಲ್ ತಾಲ್ಲೂಕು,  ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು  ಗೋದ್ರೇಜ್ ಟೈಸನ್ ಫುಡ್ಸ್ ಲಿಮಿಟೆಡ್ ಕಂಪನಿ, ಹೊಸಕೋಟೆ ಬ್ರಾಂಚ್ ನಲ್ಲಿ  ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದು, ಇವರು ಪ್ರತೀ ದಿನ  ಇವರ ಬ್ರಾಂಚ್ ಗೆ ಸೇರಿದ ಕೋಳಿ ಫಾರಂಗಳಿಗೆ  ಭೇಟಿ ನೀಡಿ,  ಕೋಳಿ ಫಾರಂಗಳಲ್ಲಿ ಇರುವ ಕೋಳಿಗಳ ಹಾಗು ಕೋಳಿ ಮೊಟ್ಟೆಗಳ ಬೆಳವಣಿಗೆ ಹಾಗು ಇತರೇ ಮಾಹಿತಿಗಳನ್ನು ಸಂಗ್ರಹಿಸಿ, ಹೊಸಕೋಟೆ ಕಚೇರಿಗೆ ಆನ್ ಲೈನ್ ನಲ್ಲಿ ಕಳುಹಿಸಿಕೊಡುವ ಕೆಲಸ ಮಾಡುತ್ತಿದ್ದು.   ಈ ದಿನ ದಿನಾಂಕ:26/10/2020 ರಂದು ಸಂಜೆ ಸುಮಾರು  6-15 ಗಂಟೆಯಲ್ಲಿ ತಾನು ಮನೆಯಲ್ಲಿದ್ದಾಗ, ಬಿ.ಎಸ್. ಹೇಮಂತ್ ಕುಮಾರ್, ಅಪಘಾತವಾಗಿ ಮೃತಪಟ್ಟಿರುವುದಾಗಿ, ಮೃತದೇಹವು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿರುವ ವಿಚಾರ ತಿಳಿದು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ಬಂದು ನೋಡಲಾಗಿ ವಿಚಾರ ನಿಜವಾಗಿತ್ತು.  ವಿಚಾರ ಮಾಡಲಾಗಿ, ಈ ದಿನ ದಿನಾಂಕ: 26/10/2020 ರಂದು  ಬೆಳಿಗ್ಗೆ ಎಂದಿನಂತೆ ಬಿ.ಎಸ್. ಹೇಮಂತ್ ಕುಮಾರ್, ಕೆಲಸದ ಮೇಲೆ ಗುಡಿಬಂಡೆಗೆ ಬಂದಿದ್ದು, ಅಲ್ಲಿಂದ  ಸಾಗಾನಹಳ್ಳಿ ಬಳಿ ಇರುವ  ಕೋಳಿ ಫಾರಂ ಗೆ ಬೇಟಿ ನೀಡಲು ತನ್ನ ಬಾಬತ್ತು KA.51-HM-8310 C.T.100 ದ್ವಿಚಕ್ರ ವಾಹನದಲ್ಲಿ ಗುಡಿಬಂಡೆಯಿಂದ ಡಿ.ಪಾಳ್ಯ ಮಾರ್ಗವಾಗಿ, ಗೌರೀಬಿದನೂರು ತಾಲ್ಲೂಕು ಸಾಗಾನಹಳ್ಳಿ  ಕಡೆಗೆ ಬರುತ್ತಿದ್ದಾಗ ಸಂಜೆ ಸುಮಾರು   4-00 ಗಂಟೆ ಸಮಯದಲ್ಲಿ  ಸಾಗಾನಹಳ್ಳಿ ಸಮೀಪ  ಎದುರಾಗಿ  ಗೌರೀಬಿದನೂರು ಕಡೆಯಿಂದ  ಬಂದ KA.03-MH.9414 HYUNDAI  i10 ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ತನ್ನ ಅಳಿಯ ಚಾಲನೆ  ಮಾಡಿಕೊಂಡು ಬರುತ್ತಿದ್ದ KA.51-HM-8310 C.T.100 ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ, ತಲೆಗೆ ಹಾಗು ಮೈಮೇಲೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಬಲಕಾಲು ಮುರಿದಿದ್ದು, ಇವರನ್ನು ಕೂಡಲೇ ಸ್ಥಳೀಯರು  108 ಆಂಬುಲೆನ್ಸ್ ನಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಟ್ಟಿದ್ದು, ನಂತರ  ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ, ಸಂಜೆ ಸುಮಾರು  5-45 ಗಂಟೆಗೆ ದೊಡ್ಡಬಳ್ಳಾಪುರ ಸಮೀಪ ಬರುತ್ತಿದ್ದಂತೆ ಮಾರ್ಗಮಧ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿಯಿತು. ಮೃತ ದೇಹವನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದು KA.03-MH.9414 HYUNDAI  i10 ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ, ಎದುರಿಗೆ ಹೇಮಂತ್ ಕುಮಾರ್ ಬರುತ್ತಿದ್ದ  KA.51-HM-8310 C.T.100 ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವ್ರಗಾಯಗಳಾಗಿ ಹೇಮಂತ್ ಕುಮಾರ್ ಮೃತಪಟ್ಟಿರುತ್ತಾನೆ. ಅಪಘಾತ ಮಾಡಿದ ಕಾರಿನ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಮೃತ ಬಿ.ಎಸ್.ಹೇಮಂತ್ ಕುಮಾರ್ ರವರ ಸಾವಿನ ವಿಚಾರ ತಿಳಿದು, ಆತನ ತಂದೆ ತಾಯಿ ಆಘಾತವಾಗಿ ಅನಾರೋಗ್ಯಕ್ಕೊಳಗಾಗಿದ್ದು, ಇವರು ದೂರು ಕೊಡಲು ಬರಲು ಸಾಧ್ಯವಾಗದ ಕಾರಣ ತಾನು ಠಾಣೆಗೆ ಬಂದು ದೂರನ್ನು ನೀಡಿರುತ್ತೇನೆ. ಈ ಅಪಘಾತಕ್ಕೆ ಕಾರಣವಾದ KA.03-MH.9414 HYUNDAI  i10  ಕಾರಿನ  ಚಾಲಕನ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ದೂರು.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.177/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ;26/10/2020 ರಂದು ಸಂಜೆ 5-00 ಗಂಟೆಗೆ ಠಾಣಾ ಹೆಚ್ ಸಿ -214 ರವರು ನೀಡಿದ ವರಧೀಯ ಸಾರಾಂಶವೇನೆಂದರೆ ತಾನು ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಗುಪ್ತ ಮಾಹಿತಿ ಸಂಗ್ರಹಣೆ  ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿನಾಂಕ:26/10/2020 ರಂದು ಸಂಜೆ 4-00  ಗಂಟೆಯಲ್ಲಿ ತಾನು ಗೌರಿಬಿದನೂರು ನಗರದಲ್ಲಿ ನ್ಯಾಷನಲ್ ಕಾಲೇಜು ಬಳಿ  ಗಸ್ತಿನಲ್ಲಿ ಇದ್ದಾಗ ಸಾರ್ವಜನಿಕರು ಪೋನ್ ಮಾಡಿ ಗೌರಿಬಿದನೂರು ನಗರದ  ಕರೇಕಲ್ಲಹಳ್ಳಿ ರೈಲ್ವೇ ಗೇಟ್ ಬಳಿ ಯಾರೋ ಆಸಾಮಿ ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯೆ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದರು .ಕೂಡಲೇ ಪಿ.ಎಸ್. ಐ ಸಾಹೇಬರಿಗೆ ಮಾಹಿತಿಯನ್ನು ತಿಳಿಸಿ ಅನುಮತಿಯನ್ನು ಪಡೆದು  ವೀರಂಡಹಳ್ಳಿ ಬಳಿ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ತಮ್ಮ ಠಾಣಾ ಸಿಬ್ಬಂದಿಯವರಾದ ಪಿ.ಸಿ 201 ಸುರೇಶ್ ರವರನ್ನು ಕರೆದುಕೊಂಡು ಮಾಹಿತಿಯಂತೆ ರೈಲ್ವೇ ಗೇಟ್  ಬಳಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ಕರೇಕಲ್ಲಹಳ್ಳಿ ರೈಲ್ವೇ ಗೇಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮದ್ಯೆ ಸೇವನೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಮದ್ಯೆ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿ ಇದ್ದ ತಮ್ಮನ್ನು ಕಂಡು ಮದ್ಯೆ ಸೇವನೆ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು ಮಾಹಿತಿಯಂತೆ ಮದ್ಯೆ ಸರಬರಾಜು ಮಾಡುತ್ತಿದ್ದ ಆಸಾಮಿಯಮನ್ನು ಸುತ್ತುವರೆದು ಹೆಸರು ಮತ್ತು ವಿಳಾಸ ಕೇಳಲಾಗಿ ಅಭಿಲಾಷ್ ಬಿನ್ ಲೇಟ್ ಎಮ್ ಸಿ ರಾಮಯ್ಯ.22 ವರ್ಷ.ಲಿಂಗಾಯಿತರು.ವಾಸ; ಚಂದನದೂರು ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದನು ಸದರಿ ಆಸಾಯನ್ನು ನಾವುಗಳು ಸಾರ್ವಜನಿಕರಿಗೆ ಮದ್ಯೆ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ  ಯಾವುದದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ರೀತಿ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ1) 90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 10 ಟೆಟ್ರಾ ಪಾಕೆಟ್ ಗಳು 2)  90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 02 ಖಾಲಿ ಟೆಟ್ರಾ ಪಾಕೆಟ್ ಗಳು 3) 02 ಖಾಲಿ ಪ್ಲಾಸ್ಟಿಕ್ ಗ್ಲಾಸ್ಗಳು 4) ಒಂದು ಲೀಟರ್ ಸಾಮರ್ಥ್ಯದ ಒಂದು ಖಾಲಿ ಪ್ಲಾಸ್ಟಿಕ್  ವಾಟರ್ ಬಾಟಲ್ ಇರುತ್ತೆ ಮದ್ಯೆವಿರುವ ಪಾಕೆಟ್ಗಗಳ ಮೇಲೆ ಇರುವ ಬೆಲೆಯನ್ನು ನೋಡಲಾಗಿ 35.13 ರೂಪಾಯಿಗಳೆಂತ ಇರುತ್ತೆ ಇದರ ಒಟ್ಟು ಬೆಲೆ 351 ರೂ ಗಳಾಗಿರುತ್ತೆ  ಮತ್ತು ಇದರ ಒಟ್ಟು ದ್ರವ್ಯ ಪ್ರಮಾಣ ತ್ತೊಂಬತ್ತು ನೂರು ಎಮ್ ಎಲ್ ಆಗಿರುತ್ತೆ .ಮೇಲ್ಕಂಡ ಅಸಾಮಿಯನ್ನು ಮತ್ತು ಮಾಲುಗಳನ್ನು ಪಂಚನಾಮೆಯ ಮೂಲಕ ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಲು ಕೋರಿ ಸಂಜೆ 5-00 ಗಂಟಗೆ  ಠಾಣಾದಿಕಾರಿಗಳಿಗೆ ವರಧಿಯನ್ನು ನೀಡಿದ ವರಧಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.181/2020 ಕಲಂ. 279,304(ಎ) ಐ.ಪಿ.ಸಿ:-

          ದಿನಾಂಕ:26/10/2020 ರಂದು ರಾತ್ರಿ 09-30 ಗಂಟೆಗೆ ಪಿರ್ಯಾದಿದಾರರಾದ ತಾವರೇ ನಾಯ್ಕ್ ಬಿನ್ ಲೇಟ್ ನಾಮೇ ನಾಯ್ಕ್, 65 ವರ್ಷ, ಲಂಬಾಣಿ ಜನಾಂಗ, ಕೂಲಿ ಕೆಲಸ, ವಾಸ: ಮೂಗಿರೆಡ್ಡಿಪಲ್ಲಿ ತಾಂಡ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆ್ಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ತನ್ನ ಮಗನಾದ ರಾಮಮೂರ್ತಿ ನಾಯ್ಕ್ ರವರು ಈಗ್ಗೆ ಸುಮಾರು 20 ವರ್ಷಗಳ ಹಿಂದೆ ಗುಡಿಬಂಡೆಯ ಸಂತೆಯಲ್ಲಿರುವ ಚರ್ಚನಲ್ಲಿ ಪಾದರ್ ಆಗಿ ಕೆಲಸ ಮಾಡಿಕೊಂಡಿದ್ದು ತನ್ನ ಮಗನಾದ ರಾಮಮೂರ್ತಿ ನಾಯ್ಕ ರವರು ಶೋಬಾರಾಣಿ ಎಂಬುವರನ್ನು ಮದುವೆ ಮಾಡಿಕೊಂಡಿದ್ದು ಅವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದ್ದು ತನ್ನ ಮಗ ರಾಮಮೂರ್ತಿ ನಾಯ್ಕ್  ರವರು ಅಂದಿನಿಂದ ಗುಡಿಬಂಡೆ ಚರ್ಚ ನಲ್ಲಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಇಲ್ಲಿಯ ವಾಸವಾಗಿದ್ದರು.    ದಿನಾಂಕ:18-10-2020 ರಂದು ರಾತ್ರಿ ಸುಮಾರು 8-00 ಗಂಟೆಯಲ್ಲಿ ತನ್ನ ಸೊಸೆಯಾದ ಶೋಭರಾಣಿ ರವರು ತಮಗೆ ಪೋನ್ ತಮ್ಮಗಳಿಗೆ ತಿಳಿಸಿದ್ದನೆಂದರೆ ರಾಮಮೂರ್ತಿ ನಾಯ್ಕ್  ರವರು ದಿನಾಂಕ:18-10-2020 ರಂದು ಸಂಜೆ ಸುಮಾರು 7-00 ಗಂಟೆಯಲ್ಲಿ ಆತನ ಬಾಬ್ತು ಕೆ.ಎ-40 ಡಬ್ಲ್ಯೂ-9913 ಹೀರೋ ಪ್ಯಾಷನ್ ಪ್ರೋ ದ್ವಿ ಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಪೆರೇಸಂದ್ರದಿಂದ ಗುಡಿಬಂಡೆಗೆ ಬರುತ್ತಿದ್ದಾಗ ಮೇಲ್ಕಂಡ ದ್ವಿ ಚಕ್ರವಾಹನವನ್ನು ರಾಮಮೂರ್ತಿ ನಾಯ್ಕ್  ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ ಕ್ರಾಸ್ ಹತ್ತಿರ ಪೆರೇಸಂದ್ರ-ಗುಡಿಬಂಡೆ ರಸ್ತೆಯ ಪಕ್ಕದಲ್ಲಿರವ ಮರಕ್ಕೆ ಡಿಕ್ಕಿ ಹೊಡೆಯಿಸಿ ಅಪಾತಪಡಿಸಿದ ಪರಿಣಾಮ ರಾಮಮೂರ್ತಿ ನಾಯ್ಕ್ ನ ಹಣೆಗೆ, ತಲೆಗೆ ಕಾಲುಗಳಿಗೆ, ಕೈಗಳಿಗೆ. ರಕ್ತಗಾಯಗಳಾಗಿರವುದಾಗಿ ವಿಚಾರವನ್ನು ತಿಳಿದುಕೊಂಡು ಪೆರೇಸಂದ್ರದ ಚರ್ಚನಲ್ಲಿ ಕೆಲಸ ಮಾಡುತ್ತಿದ್ದ ಪಾಸ್ಟರ್ ನರಸಿಂಹಮೂರ್ತಿ ಗೌರಿಬಿದನೂರು ರವರು ಅಪಘಾತ ನಡೆದ ಸ್ಥಳಕ್ಕೆ ಹೋಗಿ ಗಾಯಗೊಂಡ ರಾಮಮೂರ್ತಿ ನಾಯ್ಕ ರವರನ್ನು ಯಾವುದೋ ಆಟೋದಲ್ಲಿ ಕರೆದುಕೊಂಡು ಪೆರೇಸಂದ್ರಕ್ಕೆ ಹೋಗಿ ಅಲ್ಲಿಂದ ನರಸಿಂಹಮೂರ್ತಿ ರವರು 108 ಅಂಬುಲೇನ್ಸ್ ನಲ್ಲಿ ರಾಮಮೂರ್ತಿ ನಾಯ್ಕ್  ರವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕತ್ಸೆಯನ್ನು ನೀಡಿಸಿ ಅಲ್ಲಿನ ವೈದ್ಯರ ಸಲಹೆ ಮೇರಿಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ ಆಸ್ಪತ್ರೆಗೆ ಹೋಗಿ ಚಿಕತ್ಸೆಗೆ ದಾಖಲಿಸಿರುವ ವಿಚಾರವನ್ನು ತಿಳಿದುಕೊಂಡು ತನ್ನ ಸೊಸೆ ಶೋಭರಾಣಿ ರವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಹೋಗಿರವುದಾಗಿ ತಿಳಿಸಿದ್ದು ತಾನು ಸಹ ಬೆಂಗಳೂರಿನ ನಿಮ್ಹಾನ್ಸ್ ಅಸ್ಪತ್ರೆಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿರುತ್ತೆ. ತನ್ನ ಮಗ ರಾಮಮೂರ್ತಿ ನಾಯ್ಕ ರವರು ದಿನಾಂಕ:18-10-2020 ರಿಂದ ನಿಮ್ಹಾನ್ಸ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಮೇಲ್ಕಂಡ ಅಪಘಾತದಲ್ಲಿ ಆದ ಗಾಯಗಳ ದೆಸೆಯಿಂದ ತನ್ನ ಮಗನಾದ ರಾಮಮೂರ್ತಿ ನಾಯ್ಕ್  ರವರು ಈ ದಿನ ದಿನಾಂಕ:26-10-2020 ರಂದು ಮದ್ಯಾಹ್ನ ಸುಮಾರು 1-30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತನ್ನ ಸೊಸೆ ಶೋಭಾರಾಣಿ ರವರು ತನಗೆ ತಿಳಿಸಿದ್ದು ತನ್ನ ಮಗನಿಗೆ ಚಿಕತ್ಸೆಯನ್ನು ನೀಡಿಸುತ್ತಿದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು ತನ್ನ ಮಗನಾದ ರಾಮಮೂರ್ತಿ ನಾಯ್ಕ್ 38 ವರ್ಷ ಲಂಬಾಣಿ ಜನಾಂಗ ವಾಸ ಸಂತೆ ಬೀದಿ ಗುಡಿಬಂಡೆ ಟೌನ್ ರವರ ಮೃತದೇಹವು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಸಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.240/2020 ಕಲಂ. 279,337,304(A) ಐ.ಪಿ.ಸಿ:-

          ದಿನಾಂಕ:26/10/2020 ರಂದು 20-30 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಶಿವಪ್ಪ ಬಿನ್ ಲೇಟ್ ಕೃಷ್ಣಪ್ಪ, 36 ವರ್ಷ, CCTV ಸಲ್ಯೂಷನ್ ಕಂಪೆನಿಯಲ್ಲಿ ಕೆಲಸ , ವಾಸ ಕಡಗತ್ತೂರು ಗ್ರಾಮ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೆನೆಂದರೆ, ನಾನು ಮತ್ತು ನಮ್ಮ ಚಿಕ್ಕಪ್ಪನ ಮಗನಾದ ಶ್ರೀಕಾಂತ ಬಿನ್ ಕೆಎಲ್ ಜಗನಾಥ, 26 ವರ್ಷ, ಕಡಗತ್ತೂರು ಗ್ರಾಮ ರವರು ಬೆಂಗಳೂರಿನ CCTV ಸಲ್ಯೂಷನ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಸುಮಾರು 15 ದಿನಗಳಿಂದ ಕೆಲಸ ಮಾಡಿಕೊಂಡಿದ್ದೆವು. ಈ ದಿನ ದಿನಾಂಕ: 26/10/2020 ರಂದು ವಿಜಯದಶಮಿ ಹಬ್ಬದ ಪ್ರಯುಕ್ತ ನಾವುಗಳು ನಮ್ಮ ಗ್ರಾಮಕ್ಕೆ ಹೋಗಲು ಶ್ರೀಕಾಂತನ ದ್ವಿ ಚಕ್ರ ವಾಹನದ ಸಂಖ್ಯೆ KA-50-X-3817 ಡಿಯೋ ವಾಹನದಲ್ಲಿ ಬೆಂಗಳೂರಿನಿಂದ ಸುಮಾರು ಮದ್ಯಾಹ್ನ 12-30 ಗಂಟೆಗೆ ಬಿಟ್ಟು ನಂತರ ತಿಂಡ್ಲು (ವಿದ್ಯಾರಣ್ಯಪುರ) ದಲ್ಲಿರುವ ನಮ್ಮ ಬಾಡಿಗೆ ಮನೆಗೆ ಹೋಗಿ ನಂತರ ಸುಮಾರು 2-30 ಗಂಟೆಗೆ ಮದ್ಯಾಹ್ನ ಮನೆ ಬಿಟ್ಟು ನಮ್ಮ ಸ್ವಂತ ಗ್ರಾಮವಾದ ಕಡಗತ್ತೂರು ಗ್ರಾಮಕ್ಕೆ ಹೋಗಲು ದೊಡ್ಡಬಳ್ಳಾಪುರ ಮಾರ್ಗವಾಗಿ ಬಂದು ಸಂಜೆ 4-30 ಗಂಟೆ ಸುಮಾರಿಗೆ ತೊಂಡೆಬಾವಿಯಿಂದ ಸ್ವಲ್ಪ ದೂರ (ತೊಂಡೆಬಾವಿ-ಕಮಲಾಪುರ) ಮಧ್ಯೆ ನಾವುಗಳು KA-50-X-3817 ದ್ವಿ ಚಕ್ರ ವಾಹನದಲ್ಲಿ ಬರುತ್ತಿದ್ದಾಗ ಶ್ರೀಕಾಂತ ಚಾಲನೆ ಮಾಡುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಗೌರಿಬಿದನೂರು ಕಡೆಯಿಂದ ಎದುರಿಗೆ ಬಂದ ಓಮಿನಿ ಕಾರ್ ನಂಬರ್ KA-04-MW-3978 ರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂಚ ಚಾಲನೆ ಮಾಡಿಕೊಂಡು ಬಂದು ನಾವು ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾವುಗಳು ಅಲ್ಲಿಯೇ ಕೆಳಗೆ ಬಿದ್ದೆವು ನನಗೆ ಬಲಕೈಗೆ, ಬೆರಳುಗಳಿಗೆ ತರಚಿದ ಗಾಯಗಳಾಗಿರುತ್ತೆ, ಬಲ ಮೊಣಕಾಲಿಗೆ ಮತ್ತು ನಾಲಿಗೆಗೆ ಗಾಯಗಳಾಗಿರುತ್ತದೆ ಹಾಗೂ ಎದೆಗೆ ಒತ್ತಡದ ಮೂಗೇಟು ಉಂಟಾಗಿರುತ್ತೆ. ವಾಹನ ಚಾಲನೆ ಮಾಡುತ್ತಿದ್ದ ಶ್ರೀಕಾಂತ್ ಗೆ ತಲೆಗೆ ಮುಖಕ್ಕೆ, ಕೈಗಳಿಗೆ, ತೀವ್ರ ರಕ್ತಗಾಯಗಳಾಗಿದ್ದು ಬಾಯಿಯಿಂದ ರಕ್ತ ಸೋರುತ್ತಿತ್ತು ನಮ್ಮ ದ್ವಿ ಚಕ್ರ ವಾಹನ ಸಂಪೂರ್ಣ ಜಖಂ ಆಗಿರುತ್ತೆ, ಸ್ಥಳದಲ್ಲಿ ಬಿದ್ದಿದ್ದ ನಮ್ಮಗಳನ್ನು ಯಾರೋ ಸ್ಥಳೀಯರು ಉಪಚರಿಸಿದರು ನಾನು ನೋಡಿದಾಗ ಓಮ್ನಿಯ ಚಾಲಕನು ಮೇಲ್ನೋಟಕ್ಕೆ ಮಧ್ಯಪಾನ ಮಾಡಿದಂತೆ ಕಂಡು ಬರುತ್ತಿತ್ತು ಅಷ್ಟರಲ್ಲಿ ಸ್ಥಳೀಯರು ಅಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಗೌರಿಬಿದನೂರು ಆಸ್ಪತ್ರೆಗೆ ದಾಖಲಿಸಿದರು. ನಾನು ಚಿಕಿತ್ಸೆಯನ್ನು ಪಡೆಯುತ್ತಿದ್ದು ನನ್ನ ಜೋತೆ ಗಾಯಗಳಾಗಿದ್ದ ಶ್ರೀಕಾಂತ್ ಗೆ ಹೆಚ್ಚು ಗಾಯಗಳಾಗಿದ್ದರಿಂದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟರು, ನಾನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ರಾತ್ರಿ ಸುಮಾರು 7-00 ಗಂಟೆ ಸಮಯದಲ್ಲಿ ನಮ್ಮ ಚಿಕ್ಕಪ್ಪನಾದ ಶ್ರೀನಿವಾಸ್ ರವರು ಆಸ್ಪತ್ರೆಗೆ ಬಂದು ಶ್ರೀಕಾಂತ್ ಬಿನ್ ಕೆ ಎಲ್ ಜಗನಾಥ್ ರವರು ಬೆಂಗಳೂರಿಗೆ ಆಸ್ಪತ್ರೆಗೆ ಹೋಗುವಾಗ ಮಾರ್ಗ ಮಧ್ಯೆ ಯಲಹಂಕದ ಬಳಿ ಹೋಗುತ್ತಿದ್ದಾಗ ಅಂಬುಲೆನ್ಸ್ ನಲ್ಲಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆದ್ದರಿಂದ ನಮ್ಮ ದ್ವಿ ಚಕ್ರ ವಾಹನದಕ್ಕೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಡಿಕ್ಕಿ ಹೊಡೆದ KA-04-MW-3978 ಓಮ್ನಿ ಕಾರ್ ಚಾಲಕನ ನಿರ್ಲಕ್ಷತೆಯಿಂದ ನಮ್ಮ ಶ್ರೀಕಾಂತ ಮೃತಪಟ್ಟಿರುತ್ತಾರೆ ಆದ್ದರಿಂದ ನಮಗೆ ಡಿಕ್ಕಿ ಹೊಡೆದು ಶ್ರೀಕಾಂತನ ಮರಣಕ್ಕೆ ಕಾರಣವಾದ ಸದರಿ ಓಮ್ನಿ ಕಾರ್ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ಪ್ರ.ವ.ವರದಿ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.295/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:-26.10.2020 ರಂದು ಸಂಜೆ 5.45  ಗಂಟೆಗೆ ಪಿಸಿ-14 ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ವರದಿಯ ಸಾರಾಂಶವೇನೆಂದರೆ, ದಿನಾಂಕ 26.10.2020 ರಂದು ಪಿಸಿ 14 ಗೋವಿಂದಪ್ಪ ಆದ ನನ್ನನ್ನು ಗುಪ್ತ ಮಾಹಿತಿ ಸಂಗ್ರ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಠಾಣಾ ಸರಹದ್ದಿನ ಗ್ರಾಮಗಳಾದ ಹಿತ್ತಲಹಳ್ಳಿ, ಬೆಳ್ಳುಟ್ಟಿ, ಭಕ್ತರಹಳ್ಳಿ ಮಳಮಾಚನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ 5.00 ಗಂಟೆ ಸಮಯದಲ್ಲಿ ಬೋದಗೂರು ಗ್ರಾಮದಲ್ಲಿ ಮಾಹಿತಿ ಸಂಗ್ರಹದಲ್ಲಿದ್ದಾಗ ಗ್ರಾಮದ ಬಾತ್ಮೀದಾರರಿಂದ ಬೋದಗೂರು ಗ್ರಾಮದ ವಾಸಿಯಾದ ಚಂದ್ರಪ್ಪ ಬಿನ್ ಮುನಿಯಪ್ಪ ರವರು ಅವರ ವಾಸದ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ನಾನು ಚಂದ್ರಪ್ಪ ಬಿನ್ ಮುನಿಯಪ್ಪ ರವರ ಮನೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಮುಂಭಾಗ ಯಾರೋ ಮೂರು ಜನ ಆಸಾಮಿಗಳು ಮದ್ಯವನ್ನು ಸೇವನೆ ಮಾಡುತ್ತಾ ಕುಳಿತಿದ್ದು ಒಬ್ಬ ಅಸಾಮಿ ತನ್ನ ಬಳಿ ಇದ್ದ ಒಂದು ಕಪ್ಪು ಬಣ್ಣದ ಕವರ್ ನಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯದ ಪಾಕೇಟ್ ಗಳನ್ನು ಮಾರಾಟ ಮಾಡುತ್ತಾ ಕುಡಿಯಲು ಅನುವು ಮಾಡಿಕೊಟ್ಟಿರುವುದು ಖಚಿತವಾದ ಮೇಲೆ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಓಡಿ ಹೋಗಿದ್ದು, ಮದ್ಯವನ್ನು ಹಿಡಿದುಕೊಂಡು ಕುಳಿತಿದ್ದ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಆವರ ಹೆಸರು ವಿಳಾಸ ಕೇಳಲಾಗಿ ಚಂದ್ರಪ್ಪ ಬಿನ್ ಮುನಿಯಪ್ಪ, 55 ವರ್ಷ, ನಾಯಕ, ಕೂಲಿ ಕೆಲಸ, ಬೋದಗೂರು ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸದರಿ ಆಸಾಮಿ ಬಳಿ ಇದ್ದ ಕವರ್ ನಲ್ಲಿ ಪರಿಶೀಲಿಸಲಾಗಿ ಅದರಲ್ಲಿ ORIGINAL CHOICE DELUXE WHISKY ಯ 10 ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಬೆಲೆ 35.13 ರೂ ಎಂದು ಇದ್ದು ಇವುಗಳ ಒಟ್ಟು ಬೆಲೆ 351.3 ರೂ.ಗಳಾಗಿರುತ್ತೆ, ಸ್ಥಳದಲ್ಲಿ 4 ಪ್ಲಾಸ್ಟಿಕ್ ಗ್ಲಾಸುಗಳು, 3 ಖಾಲಿ ನೀರಿನ ಪಾಕೇಟುಗಳು ಹಾಗು 90 ಎಂ.ಎಲ್ ನ ORIGINAL CHOICE DELUXE WHISKY 4 ಖಾಲಿ ಟೆಟ್ರಾ ಪಾಕೇಟ್ ಗಳಿದ್ದು, ಮೇಲ್ಕಂಡ ಆಸಾಮಿ ಚಂದ್ರಪ್ಪ ಬಿನ್ ಮುನಿಯಪ್ಪ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಮಾಲು ಮತ್ತು ಅರೋಪಿಯನ್ನು ವಶಕ್ಕೆ ಪಡೆದುಕೊಂಡು ಬಂದು ತಮ್ಮ ವಶಕ್ಕೆ ನೀಡುತ್ತಿರುವುದನ್ನು ಪಡೆದುಕೊಂಡು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ನೀಡಿದ ವರದಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.117/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:26/10/2020 ರಂದು ಸಂಜೆ 6.30 ಗಂಟೆಯಲ್ಲಿ ಹೆಚ್.ಸಿ.95 ಪ್ರಕಾಶ್ ರವರು ಅಮಾನತ್ತು ಪಡಿಸಿದ ಮಾಲುಗಳು ಮತ್ತು ಆರೋಪಿಯನ್ನು ಠಾಣೆಗೆ ಹಾಜರುಡಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ಠಾಣಾಧಿಕಾರಿಗಳು ಈ ದಿನ ಬೆಳಗಿನ ಹಾಜರಾತಿಯಲ್ಲಿ ಹೆಚ್.ಸಿ.95 ಪ್ರಕಾಶ್ ಮತ್ತು ಪಿ.ಸಿ.506 ಶಶಿಕುಮಾರ್ ರವರಿಗೆ ಶಿಡ್ಲಘಟ್ಟ ನಗರದಲ್ಲಿ ಹಗಲು ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದೇಶದಂತೆ ನಾನು ಪಿ.ಸಿ.506 ರವರೊಂದಿಗೆ ಸಂಜೆ 5-00 ಗಂಟೆಯಲ್ಲಿ ಅಶೋಕ ರಸ್ತೆ ಮತ್ತು ಟಿ.ಬಿ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ಸಿದ್ದಾರ್ಥನಗರದ ಅಂಬೇಡ್ಕರ್ ಭವನ ಬಳಿ ಹಳೆ ಬಸ್ ನಿಲ್ದಾಣ ಬಳಿ ಮರದ ಕೆಳಗೆ ಸಿದ್ದಾರ್ಥನಗರದ ಸುರೇಶ್ ಬಿನ್ ನಾರಾಯಣಸ್ವಾಮಿ ಎಂಬುವರು ಸಾರ್ವಜನಿಕರ ಸ್ಥಳದಲ್ಲಿ ಯಾರೋ ಸಾರ್ವಜನಿಕರಿಗೆ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ನಾವು ಮೇಲ್ಕಂಡ ಸ್ಥಳಕ್ಕೆ ಸಂಜೆ 5-15 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ಇಬ್ಬರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು  ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವ ಆಸಾಮಿಯನ್ನು ವಶಕ್ಕೆ ಈತನ ಹೆಸರು ವಿಳಾಸ ಕೇಳಲಾಗಿ ಸುರೇಶ್ ಬಿನ್ ನಾರಾಯಣಸ್ವಾಮಿ, 33 ವರ್ಷ, ಪ.ಜಾತಿ, ಕೂಲಿ ಕೆಲಸ, ಸಿದ್ದಾರ್ಥನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾನೆ. ಇವರು ಒಂದು ಪ್ಲಾಸ್ಟೀಕ್ ಚೀಲ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು ಸದರಿ ಬ್ಯಾಗಿನಲ್ಲಿ ಪರಿಶೀಲಿಸಲಾಗಿ Original Choice 90 ML ನ 2 ಮದ್ಯದ ಪಾಕೆಟ್ ಗಳಿದ್ದು ಒಂದರ ಬೆಲೆ 35.13 ರೂಗಳಾಗಿದ್ದು, 2 ರ ಬೆಲೆ ಒಟ್ಟು 70-00 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ 2 ಖಾಲಿ Original Choice 90 ML ನ 2 ಮದ್ಯದ ಪಾಕೆಟ್ ಗಳಿರುತ್ತೆ. ಹಾಗೂ 2 ಖಾಲಿ ಪ್ಲಾಸ್ಟೀಕ್ ಗ್ಲಾಸ್ ಗಳು ಇರುತ್ತೆ. ಇವುಗಳನ್ನು ಸ್ಥಳದಲ್ಲಿ ಪಂಚರ ಸಮಕ್ಷಮ ಮಹಜರ್ ಮಾಡಿ ಮುಂದಿನ ತನಿಖೆ ಬಗ್ಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಅಮಾನತ್ತು ಪಡಿಸಿದ ಮಾಲುಗಳು ಮತ್ತು ಸುರೇಶ್ ರವರನ್ನು ವಶಕ್ಕೆ ಪಡೆದು ಠಾಣೆಗೆ ಹಾಜರುಪಡಿಸುತ್ತಿದ್ದು, ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಸುರೇಶ್ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.