ದಿನಾಂಕ :27/07/2020 ರ ಅಪರಾಧ ಪ್ರಕರಣಗಳು

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 60/2020 ಕಲಂ. 506,341,34,504,323,353 ಐ.ಪಿ.ಸಿ:-

          ದಿನಾಂಕ:27/07/2020 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರಾದ ಬಲವಂತಪ್ಪ ತಳವಾರ್ ,ಶಕ್ತಿ ಮಿತ್ರ (ಪವರ್ ಮ್ಯಾನ್)ಬೆಂ,ವಿ,ಕಂ,ಇರಗಂಪಲ್ಲಿ ಶಾಖೆ.ಮೊ ನಂ:9449877505.ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ವಿದ್ಯುತ್ ಕಂದಾಯ ವಸೂಲಾತಿಗೆ ಹೋದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕೈಗಳಿಂದ ಹೊಡೆದು ಬಟ್ಟೆ ಹರಿದು ಹಲ್ಲೆ ಮಾಡಿರುವ ಬಗ್ಗೆ ದೂರು. ಮೇಲ್ಕಂಡ ವಿಷಯದ್ವನಯ ಇದೆ ತಮ್ಮ ಠಾಣೆಯ ವ್ಯಾಪ್ತಿಗೆ ಬರುವ ಬೆಂ,ವಿ,ಕಂ,ಇರಗಂಪಲ್ಲಿ ಶಾಖೆಯಲ್ಲಿ ಪವರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಲವಂತಪ್ಪ ತಳವಾರ್ ಆದ ನಾನು ಎಂದಿನಂತೆ ದಿನಾಂಕ:26/07/2020 ರಂದು ಕರ್ತವ್ಯ ನಿಮಿತ್ತ ಮ್ಯಾಕಪೋತಪಲ್ಲಿ ಗ್ರಾಮಕ್ಕೆ ಹೋಗಿ ಕಂದಾಯ ವಸೂಲಿ ಮಾಡುತ್ತಿದ್ದಾಗ, ಬೆಳಿಗ್ಗೆ ಸುಮಾರು 09-30 ಗಂಟೆಯ ಸಮಯದಲ್ಲಿ ಅದೇ ಗ್ರಾಮದ ವಾಸಿ ಕಿಟ್ಟಣ್ಣ ಬಿನ್ ಲೇಟ್ ಕೊತ್ತೋಳ್ಳ ವೆಂಕಟರೆಡ್ಡಿ ಮತ್ತು ಆತನ ಸಹೋದರ ವೆಂಕಟರವಣಪ್ಪ ರವರುಗಳು ವಾಸವಿರುವ ಮನೆಯ ಸವರ್ೀಸ್ ನಂಬರ್ ಸಿ ಐ ಎಲ್- 1196 ವಿದ್ಯುತ್ ಕಂದಾಯ ಬಾಕಿಗಾಗಿ ಜನವರಿ 2018 ರಲ್ಲಿ ಡಿಸ್ ಕನೆಕ್ಷನ್ ಮಾಡಲಾಗಿತ್ತು. ಆದಾಗಿಯೂ ಅಕ್ರಮ ವಿದ್ಯುತ್ ಸಂಪರ್ಕ ಪಡೆದುಕೊಂಡು ಉಪಯೋಗಿಸುತ್ತಿದ್ದನ್ನು ನಾನು ಕಂಡು ಕಿಟ್ಟಣ್ಣ ರವರಿಗೆ ಕೇಳಿ ಅಕ್ರಮ  ಸಂಪರ್ಕವನ್ನು ಕಡಿತ ಗೊಳಿಸಲು ನಾನು ವಿದ್ಯುತ್ ಕಂಬವನ್ನು ಹತ್ತುತ್ತಿದ್ದಾಗ,   ಮೇಲ್ಕಂಡವರು ಏಕಾಏಕಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ ನನ್ನನ್ನು ವಿದ್ಯುತ್ ಕಂಬದಿಂದ  ಕೆಳಗೆ ಎಳೆದುಕೊಂಡು ನಿನ್ನಮ್ಮನೇ ಕೇಯ, ನಮ್ಮ ಮನೆಯ ಕರೆಂಟ್ ಮಾತ್ರವೇ ನಿನ್ನ ಕಣ್ಣಿಗೆ ಕಾಣಿಸುತ್ತಿದ್ದೀಯಾ, ಬೇರೆಯವರೆಲ್ಲ ನಿಮ್ಮನ್ನ ದೆಂಗಿ ಕರೆಂಟ್ ತೆಗೆದುಕೊಂಡಿದ್ದೀರಾ ಎಂದು ಅವಾಚ್ಯವಾಗಿ ನನ್ನನ್ನು ಬೈದು, ಕಿಟ್ಟಣ್ಣ ಕೈಗಳಿಂದ ನನ್ನ ಕೆನ್ನೆಗೆ ಹೊಡೆದು ಮೂಗೇಟುಂಟುಮಾಡಿದ, ಅವರ ಸಹೋದರ ವೆಂಕಟರವಣಪ್ಪ ನನ್ನ ಮೈಮೆಲಿನ ಶರ್ಟಿನ ಕತ್ತಿನ ಪಟ್ಟಿಯನ್ನು ಹಿಡಿದು ಎಳೆದು ಶರ್ಟಿ ನ್ನು ಹರಿದುಹಾಕಿರುತ್ತಾನೆ. ನಮ್ಮ ಮನೆಯ ಕರೆಂಟ್ ಕಟ್ ಮಾಡಿದರೆ ನಿನ್ನ ಕಥೆ ಮುಗಿಸುತ್ತೇವೆಂದು ಇಬ್ಬರು ನನಗೆ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಕರೋನ ಸಾಂಕ್ರಾಮಿಕ ಖಾಯಿಲೆ ಹರಡುತ್ತಿರುವ ಕ್ಲಿಷ್ಟ ಪರಿಸ್ಥಿಯಲ್ಲಿ ಅತ್ಯಗತ್ಯ ಸೇವೆಯಾದ ವಿದ್ಯುತ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನನ್ನನ್ನು ಅಡ್ಡಗಟ್ಟಿ ನನಗೆ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿ ನನ್ನ ಮೇಲೆ ಹಲ್ಲೆ ನಡೆಸಿ, ಕೈಗಳಿಂದ ಹೊಡೆದು, ನನ್ನ ಮೈಮೇಲಿನ ಶರ್ಟ ನ್ನು ಹರಿದುಹಾಕಿ, ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುವವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಹಾಗೂ ಈ ವಿಚಾರವನ್ನು ನನ್ನ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಅನುಮತಿ ಪಡೆದುಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

  1. ಚೇಳೂರು ಪೊಲೀಸ್ ಠಾಣೆ ಮೊ.ಸಂ. 46/2020 ಕಲಂ. 143,147,323,324,504,149 ಐ.ಪಿ.ಸಿ:-

          ದಿನಾಂಕ:26/07/2020 ರಂದು  ರಾತ್ರಿ 21:00 ಗಂಟೆಗೆ ಠಾಣಾ ಸಿಬ್ಬಂದಿಯವರಾದ ಮಹಮ್ಮದ್ ಶಫಿ ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ತಡವಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ  ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಬಾಲಾಜಿರೆಡ್ಡಿ ಬಿನ್ ಸುಬ್ಬಿರೆಡ್ಡಿ, 25 ವರ್ಷ, ವಕ್ಕಲಿಗರು, ಜಿರಾಯ್ತಿ ಕೆಲಸ, ನಿಮ್ಮಕಾಯಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ, ದಿನಾಂಕ:23/07/2020 ರಂದು ಬೆಳಗ್ಗೆ 11:00 ಗಂಟೆ ಸಮಯದಲ್ಲಿ ನಾನು ನಮ್ಮ ಜಮೀನಿನ ಬಳಿ ಯಿದ್ದಾಗ ನಮ್ಮ ಗ್ರಾಮದ ನಮ್ಮ ಜಮೀನಿನ ಪಕ್ಕದಲ್ಲಿರುವ ರವಿ ಕೆಎನ್  ಬಿನ್ ನಾರಾಯಣರೆಡ್ಡಿ ಮತ್ತು ಬೈರೆಡ್ಡಿ ಕುಟುಂಬದವರು ಜಮೀನಿನ ವಿಷಯದಲ್ಲಿ ಜಗಳ ಮಾಡಿಕೊಳ್ಳುತ್ತಿದ್ದರು ಆಗ ಮಧ್ಯ ಪ್ರವೇಶ ಮಾಡಿ ಯಾಕೆ ಗಲಾಟೆ ಮಾಡಿಕೊಳ್ಳುತ್ತಿದ್ದೀರಾ ? ಒಬ್ಬರ ಜಮೀನಿನ ಒಳಗೆ ಒಬ್ಬರು ಓಡಾಡಬೇಕು ಗಲಾಟೆ ಬೇಡ ಎಂದು ರವಿಯನ್ನು ಕರೆದುಕೊಂಡು ಹೋಗುವಾಗ ಆಗ ದೇವರಾಜ ಎಂಬುವರು ಬಂದು ನೀನು ಯಾರು ಹೇಳಕ್ಕೆ ಎಂದು ಕೈಗಳಿಂದ ಹೊಡೆದು ಬಟ್ಟೆಯನ್ನು ಹರಿದು ಹಾಕಿದನು ಆಗ ನಮ್ಮ ಗ್ರಾಮದ ಸುಬ್ಬಿರೆಡ್ಡಿ, ಕೃಷ್ಣಾರೆಡ್ಡಿ ರವರು ಬಂದು ಇಬ್ಬರಿಗೂ ಸಮಧಾನಪಡಿಸಿದರು ಆಗ ನಾನು ಮನೆಗೆ  ಹೊರಟು ಹೋದೆ , ನಂತರ ನಾನು ಹರಿದ ಬಟ್ಟೆಗಳನ್ನು ಬದಲಾಯಿಸಿಕೊಂಡು ನಾನು  ಒಬ್ಬನೇ ಜಮೀನುಬಳಿ ಹೋಗುತ್ತಿದ್ದಾಗ ದಾರಿ ಮಧ್ಯದಲ್ಲಿ  ದೇವರಾಜು, ಬೈರೆಡ್ಡಿ, ಶಿವಾರೆಡ್ಡಿ, ಮಂಜುನಾಥ, ಪ್ರಕಾಶ, ಚಂದ್ರಮ್ಮ , ಮಂಜುಳಮ್ಮ , ಪ್ರವೀಣ, ರವಿ, ಲಕ್ಷ್ಮಮ್ಮ ಎಂಬುವರು ಅಡ್ಡ ಬಂದು ಅವಾಚ್ಯ ಶಬ್ದಗಳಿಂದ ಬೈದು ದೇವರಾಜು , ಕುಡಗೋಲಿನಿಂದ ಹೊಡೆಯಲು ಬಂದಾಗ  ಬೈರೆಡ್ಡಿ ಕುಡಗೋಲಿನಿಂದ ಹೊಡೆಯುವುದು  ಬೇಡ ಎಂದು ಹೇಳಿ ಕೈಗಳಿಂದ ಎಲ್ಲರೂ ಸಿಕ್ಕಾಪಟ್ಟೆ ಹೊಡೆದು ಮೂಗೇಟುಗಳುಂಟು ಮಾಡಿರುತ್ತಾರೆ. ದೇವರಾಜನು ನನ್ನ ಬೆನ್ನಿನ ಮೇಲೆ ಕಚ್ಚಿ ಗಾಯಪಡಿಸಿದನು ಮತ್ತು ಕಲ್ಲಿನಿಂದ ಬಲ ಮೊಣಕಾಲಿಗೆ ಹೊಡೆದನು ಎಲ್ಲರೂ ಸೇರಿ ಹೊಡೆದು ಮೂಗೇಟು ಉಂಟುಮಾಡಿದರು ಮತ್ತು ಮೂಗಿನ ಬಳಿ ತರಚಿದ ಗಾಯಪಡಿಸಿದರು, ನಾನು ಅಲ್ಲಿಯೇ ಬಿದ್ದು ಬಿಟ್ಟೆನು, ಆಗ ರವಿ ನನ್ನನ್ನು ಚೇಳೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದೆನು ಅಲ್ಲಿ ಚಿಕಿತ್ಸೆ ಪಡೆದ ನಂತರ  ನಾನು ನನಗೆ ಮೈಕೈ ನೋವು ಜಾಸ್ತಿಯಾಗಿ  ದಿನಾಂಕ:25/07/2020 ರಂದು ಮದ್ಯಾಹ್ನ 2:00 ಗಂಟೆಗೆ ನನ್ನ ಸ್ನೇಹಿತ ರವಿ ನನ್ನನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸದನು, ಆದ್ದರಿಂದ ಮೇಲ್ಕಂಡವರ ವಿರುದ್ದ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ಪಡೆದು  ಠಾಣಾ ಮೊಸಂ:46/2020 ಕಲಂ 143,147,323,324,504 ರೆ/ವಿ 149 ಐ.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 101/2020 ಕಲಂ. 323,324,504,506,34 ಐ.ಪಿ.ಸಿ:-

          ದಿ:26.07.2020 ರಂದು ಸಂಜೆ 16-00 ಗಂಟೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಿನ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ ಅಂಗರೇಖನಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದ ಹೌಸ್ ಲಿಸ್ಟ್ ನಂಬರ್ 245 ರಲ್ಲಿನ 45*40 ನಿವೇಶನದ ವಿಚಾರದಲ್ಲಿ ತಮಗೂ ಮತ್ತು ತಮ್ಮ ಗ್ರಾಮದ ವೆಂಕಟೇಶಪ್ಪ , ರಾಜೇಶ್ , ರತೀಶ ಮತ್ತು ವೇಣುಗೋಪಾಲರವರಿಗೂ ತಕರಾರುಗಳಿದ್ದು, ದಿ:26.07.2020 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಗಾಯಾಳು ತನ್ನ ಸೈಟಿನ ಬಳಿ ಜೆ.ಸಿ.ಬಿ ಯಿಂದ ಸ್ವಚ್ಚಗೊಳಿಸುತ್ತಿದ್ದಾಗ ಮೇಲ್ಕಂಡವರು ಬಂದು ಯಾಕೋ ಬೋಳಿ ಮಗನೇ ಈ ಜಾಗ ನಮಗೆ ಸೇರಿದ್ದು ಎಂದು ಹೇಳಿದ್ದು, ಗಾಯಾಳು ನಿಮ್ಮದಾಗಿದ್ದರೆ ದಾಖಲಾತಿಗಳನ್ನು ತೆಗೆದುಕೊಂಡು ಬನ್ನಿ ಮಾತನಾಡೋಣ ಎನ್ನುವಷ್ಟರಲ್ಲಿ ವೆಂಕಟೇಶಪ್ಪರವರು ಕೈಯಲ್ಲಿ ದೊಣ್ಣೆಯನ್ನು ಹಿಡಿದುಕೊಂಡು ತನ್ನ ತಲೆಗೆ ಹೊಡೆದು ರಕ್ತ ಗಾಯಪಡಿಸಿದ್ದು, ತಾನು ಕೂಗಿಕೊಳ್ಳುವಷ್ಟರಲ್ಲಿ ತಮ್ಮ ಚಿಕ್ಕಪ್ಪ ಕೃಷ್ಣ ಮತ್ತು ದೊಡ್ಡಮ್ಮನ ಮಗ ಅನಿಲ್ ಕುಮಾರ್ ರವರು ಬಂದು  ಏಕೆ ಹೊಡೆದಿದ್ದು ಎಂದು ಕೇಳುವಷ್ಟರಲ್ಲಿ ರಾಜೇಶ್ ದೊಣ್ಣೆಯಿಂದ ಅನಿಲ್ ಕುಮಾರ್ ರವರ ಬೆನ್ನಿನ ಬಲಗಡೆ ಹೊಡೆದಿದ್ದು, ವೆಂಕಟೇಶಪ್ಪರವರು ದೊಣ್ಣೆಯಿಂದ ಕೃಷ್ಣರವರ ಬಲಕಿಬ್ಬೊಟ್ಟೆಗೆ ಹೊಡೆದು ಮೂಗೇಟು ಉಂಟು ಮಾಡಿದ್ದು, ರತೀಶ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಇದ್ದ ಕಲ್ಲಿನಿಂದ ಅನಿಲ್ ಕುಮಾರ್ ರವರಿಗೆ ಹಾಕಿದ್ದು ಅವರು ತಪ್ಪಿಸಿಕೊಂಡಿರುತ್ತಾರೆಂದು ವೆಂಕಟೇಶಪ್ಪರವರ ಕೈಯಲ್ಲಿದ್ದ ದೊಣ್ಣೆಯನ್ನು ವೇಣುಗೋಪಾಲರವರು ಕಿತ್ತುಕೊಂಡು ಕೃಷ್ಣರವರ ಬಲಕಾಲಿಗೆ ಹೊಡೆದು ಮೂಗೇಟುಗಳನ್ನುಂಟು ಮಾಡಿದ್ದು, ಅಷ್ಟರಲ್ಲಿ ಲೋಕೇಶರವರು ಬಂದು ಜಗಳ ಬಿಡಿಸಿರುತ್ತಾರೆಂದು ವೆಂಕಟೇಶಪ್ಪರವರು ಕೈಯಲ್ಲಿ ಮಚ್ಚನ್ನು ಹಿಡಿದುಕೊಂಡು ಈ ಜಾಗದ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸಿಬಿಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ಮೇಲ್ಕಂಡವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಈ ಪ್ರ ವ ವರಧಿ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 102/2020 ಕಲಂ. 323,324,504,506,34 ಐ.ಪಿ.ಸಿ:-

          ದಿ:27.07.2020 ರಂದು ಪಿರ್ಯಾದಿದಾರರಾದ ನೀಲಿಮಾ ಕೋಂ ರಾಜೇಶ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಮಶವೇನೆಂದರೆ ಕತ್ರಿಗುಪ್ಪೆ ಗ್ರಾಮದ ಸ ನಂ 149 ರಲ್ಲಿ ಗೋಮಾಳ ಜಮೀನು ಇದ್ದು, ಅದರಲ್ಲಿ ತಮ್ಮ ಮಾವ ವೆಂಕಟೇಶಪ್ಪರವರಿಗೆ 15 ಗುಂಟೆ ಜಮೀನು ಮಂಜೂರಾಗಿದ್ದು, ಸಾಗುವಳಿ ಚೀಟಿ ಸಹ ಬಂದಿದ್ದು, ತಮ್ಮ ಗ್ರಾಮದ ವಾಸಿ ಕೇಶವರವರು ಗ್ರಾಮ ಪಂಚಾಯ್ತಿಯಲ್ಲಿ ಹೌಸ್ ಲೀಸ್ಟ್ ಮಾಡಿಸಿಕೊಂಡಿದ್ದು, ದಿ:26.07.2020 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ತಮ್ಮ ಮಾವನವರಾದ ವೆಂಕಟೇಶಪ್ಪ ಬಿನ್ ಚಿಕ್ಕನಾರಾಯಣಪ್ಪ , ತಮ್ಮ ಬಾವನವರಾದ ವೇಣುಗೋಪಾಲ್ ಬಿನ್ ವೆಂಕಟೇಶಪ್ಪರವರುಗಳು ತಮ್ಮ ಬಾಬತ್ತು ಸ ನಂ 149 ರ ಜಮೀನಿನಲ್ಲಿದ್ದಾಗ ಕೇಶವರವರು ಜೆ.ಸಿ.ಬಿ ಯಂತ್ರವನ್ನು ತೆಗೆದುಕೊಂಡು ಸ್ವಚ್ಚಗೊಳಿಸಲು ಬಂದಿದ್ದು, ಅದಕ್ಕೆ ತಮ್ಮ ಮಾವ ವೆಂಕಟೇಶಪ್ಪರವರು ಏಕೆ ನಮ್ಮ ಜಮೀನಿನೊಳಗೆ ಜೆ.ಸಿ.ಬಿ ಯನ್ನು ತೆಗೆದುಕೊಂಡು ಬಂದಿದ್ದೀಯಾ ಎಂದು ಕೇಳುವಷ್ಟರಲ್ಲಿ ಕೇಶವ , ಕೃಷ್ಣ , ನಾಗರಾಜು , ಅನಿಲ್ ರವರುಗಳು ಏಕಾಏಕಿ ಕೈಗಳಲ್ಲಿ ಕಬ್ಬಿಣದ ರಾಡು ಮತ್ತು ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಆ ಪೈಕಿ ಕೇಶವ ದೊಣ್ಣೆಯಿಂದ  ತಮ್ಮ ಮಾವನವರ ಹೊಟ್ಟೆಯ ಬಲಗಡೆ ಹೊಡೆದು ಮೂಗೇಟು ಉಂಟು ಮಾಡಿದ್ದು, ಕೃಷ್ಣ ಕಬ್ಬಿಣದ ರಾಡಿನಿಂದ ತಮ್ಮ ಮಾವನವರ ಬಲಪಕ್ಕೆಲುಬಿನ ಬಳಿ ಹೊಡೆದು ತರಚಿದ ಗಾಯಪಡಿಸಿದ್ದು, ನಾಗರಾಜು ದೊಣ್ಣೆಯಿಂದ ತಮ್ಮ ಬಾವ  ವೇಣುಗೋಪಾಲ್ ರವರಿಗೆ ಎಡಕೈ ಗೆ ಹೊಡೆದಿದ್ದು ಊತದ ಗಾಯವಾಗಿರುತ್ತೆ. ಅನೀಲ್ ಬಿನ್ ನಾಗರಾಜುರವರು ನಿನ್ನಮ್ಮನಾ ಕ್ಯಾಯ ಲೋಫರ್ ನನ್ನ ಮಕ್ಕಳ ಎಂದು ಅವಾಛ್ಯ ಶಬ್ದಗಳಿಂದ ಬೈದು ಈ ಜಮೀನು ತಂಟೆಗೆ ಬಂದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾನೆಂದು. ಅಷ್ಟರಲ್ಲಿ ತಾನು ಮತ್ತು ತಮ್ಮ ಯಜಮಾನರಾದ ರಾಜೇಶ್ ಬಿನ್ ವೆಂಕಟೇಶರವರುಗಳು ಹೋಗಿ ಜಗಳ ಬಿಡಿಸಿದ್ದು, ತಮ್ಮ ಯಜಮಾನರು ತಮ್ಮ ಮಾವ ವೆಂಕಟೇಶಪ್ಪ ಮತ್ತು ಬಾವ ವೇಣುಗೋಪಾಲರವರನ್ನು ದ್ವಿ ಚಕ್ರ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು, ಈ ವಿಚಾರದಲ್ಲಿ ತಮ್ಮ ಗ್ರಾಮದಲ್ಲಿ ರಾಜಿ ಮಾಡುವುದಾಗಿ ತಿಳಿಸಿದ್ದು, ಯಾವುದೇ ರಾಜಿಗೆ ಬಾರದೇ ಇದ್ದುದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಮೇಲ್ಕಂಡವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 279/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ 27-07-2020 ರಂದು ಮದ್ಯಾಹ್ನ 15-00 ಗಂಟೆಗೆ ಬೈರಾರೆಡ್ಡಿ ಬಿನ್ ಲೇಟ್ ದೊಡ್ಡಮುನಿಸ್ವಾಮಿ, 51ವರ್ಷ, ವಕ್ಕಲಿಗರು, ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಕೆಲಸ, ನಂದಿಗಾನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ನಂದಿಗಾನಹಳ್ಳಿ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಬಿಲ್ ಕಲೇಕ್ಟರ್ ಕೆಲಸ ಮಾಡಿಕೊಂಡಿರುತ್ತೇನೆ. ತನ್ನ ಮಗನಾದ ಜೀವನ್ ಕುಮಾರ್, 26 ವರ್ಷ ಎಂಬುವರು ಬೆಂಗಳೂರಿನ ಹೆಚ್ ಅಂಡ್ ಎಂ ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಆಗ್ಗಾಗ್ಗೆ ಊರಿಗೆ ಬಂದು ಹೋಗುತ್ತಿರುತ್ತಾನೆ. ಹೀಗಿರುವಾಗ ತನ್ನ ಮಗನಾದ ಜೀವನ್ ಕುಮಾರ್ ರವರು ದಿನಾಂಕ:25-07-2020 ರಂದು ಮನೆಗೆ ಬಂದು ನಂತರ ದಿನಾಂಕ:26-07-2020 ರಂದು ರಾತ್ರಿ 8-00 ಗಂಟೆಗೆ ಕೆಲಸಕ್ಕೆ ಹೋಗುವ ಸಲುವಾಗಿ ತನ್ನ ಬಾಬತ್ತು ನೊಂದಣಿ ಸಂಖ್ಯೆ ಇಲ್ಲದ (ಇಂಜಿನ್ ನಂ:U3SF1LB229258 ಚಾರ್ಸಿ ನಂ: ME3U3S5F2LB863298) ಸಂಖ್ಯೆಯ ಬುಲೇಟ್ ದ್ವಿಚಕ್ರ ವಾಹನದಲ್ಲಿ ತಮ್ಮ ಗ್ರಾಮ ಬಿಟ್ಟು ಕೆಲಸಕ್ಕೆಂದು ಹೋಗಿರುತ್ತಾರೆ. ನಂತರ ಅದೇ ದಿನ ರಾತ್ರಿ 9-00 ಗಂಟೆ ಸಮಯದಲ್ಲಿ ಯಾರೋ ಸಾರ್ವಜನಿಕರು ತನಗೆ ಫೋನ್ ಮಾಡಿ ಕಡಪ-ಬೆಂಗಳೂರು ರಾಜ್ಯ ಹೆದ್ದಾರಿಯ ಮಾಡಿಕೆರೆ ಕ್ರಾಸ್ ಬಳಿ ಇರುವ ರೈಲ್ವೆ ಬ್ರಿಜ್ ಬಳಿ ನಿಮ್ಮ ಮಗನಾದ ಜೀವನ್ ಕುಮಾರ್ ರವರಿಗೆ ಅಪಘಾತವಾಗಿದೆ ಗಾಯಗೊಂಡಿದ್ದವನನ್ನು 108 ಆಂಬುಲೆನ್ಸ್ನಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದು ನಂತರ ತಾನು ಮತ್ತು ತನ್ನ ಅಣ್ಣನ ಮಗನಾದ ವೆಂಕಟಶಿವಾರೆಡ್ಡಿ ಬಿನ್ ನಾರಾಯಣಸ್ವಾಮಿ ತಮ್ಮ ಗ್ರಾಮದಿಂದ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ಅಪಘಾತದ ಬಗ್ಗೆ ಆಸ್ಪತ್ರೆಯಲ್ಲಿದ್ದ ತನ್ನ ಮಗನಾದ ಜೀವನ್ ಕುಮಾರ್ ರವರನ್ನು ವಿಚಾರ ಮಾಡಲಾಗಿ ತಾನು ದಿನಾಂಕ: 26-07-2020 ರಂದು ಕೆಲಸಕ್ಕೆಂದು ಮೇಲ್ಕಂಡ ತನ್ನ ಬಾಬತ್ತು ಬುಲೇಟ್ ದ್ವಿಚಕ್ರ ವಾಹನದಲ್ಲಿ ಕಡಪ-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ರಾತ್ರಿ 8-30 ಗಂಟೆ ಸಮಯದಲ್ಲಿ ಬೆಂಗಳೂರಿನ ಕಡೆಯಿಂದ ಬಂದ ಕೆಎ03 ಎಹೆಚ್-4408 ನೊಂದಣಿ ಸಂಖ್ಯೆಯ ಮಾರುತಿ ಸುಜುಕಿ ಸ್ವೀಫ್ಟ್ ಕಾರಿನ ಚಾಲಕ ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎದುರುಗಡೆಯಿಂದ ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾನು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋಗಿದ್ದು ತನಗೆ ಬಲ ಕಾಲಿನ ಮೊಣಕಾಲಿನ ಕೆಳಗೆ ರಕ್ತಗಾಯಗಳಾಗಿ ಮತ್ತು ಮೈ-ಕೈ ಮೇಲೆ ತರಚಿದ ಗಾಯಗಳಾಗಿರುವುದಾಗಿ ತಿಳಿಸಿರುತ್ತಾನೆ. ನಂತರ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಗಾಯಗೊಂಡಿದ್ದ ತನ್ನ ಮಗನಾದ ಜೀವನ್ ಕುಮಾರ್ ರವರನ್ನು ಅಂಬುಲೆನ್ಸ್ನಲ್ಲಿ ಕೋಲಾರದ ನರೇಂದ್ರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುತ್ತಾರೆ. ಗಾಯಗೊಂಡಿದ್ದರವರಿಗೆ ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಅಪಘಾತಪಡಿಸಿದ ಮೇಲ್ಕಂಡ ಕೆಎ-03 ಎಹೆಚ್-4408 ನೋಂದಣಿ ಸಂಖ್ಯೆಯ ಮಾರುತಿ ಸುಜುಕಿ ಸ್ವೀಫ್ಟ್ ಕಾರಿನ ಚಾಲಕ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 49/2020 ಕಲಂ. 279,337,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:26/07/2020 ರಂದು ರಾತ್ರಿ 9:30 ಗಂಟೆಗೆ ಪಿರ್ಯಾದಿದಾರರಾದ ಎಂ.ಆರ್ ಮಾಣಿಕ್ಯಚಾರಿ ಬಿನ್ ರಾಮಚಂದ್ರಚಾರಿ, 30 ವರ್ಷ, ವಿಶ್ವಕರ್ಮ ಜನಾಂಗ, ಗಾರೆ ಕೆಲಸ, ವಾಸ: ಮೈಲಪ್ಪನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆ, ತಾಯಿಗೆ ಓಟ್ಟು ಮೂರು ಮಕ್ಕಳಿದ್ದು 1 ನೇ ಮಾಣಿಕ್ಯಚಾರಿ ಆದ ನಾನು, 2 ನೇ ಮಹೇಂದ್ರಚಾರಿ, 3 ನೇ ಗಿರೀಶ್ ಚಾರಿ ಎಂಬ ಮಕ್ಕಳಿರುತ್ತೇವೆ. ನಮ್ಮ ತಂದೆ ರಾಮಚಂದ್ರಚಾರಿ ಯಾವುದೋ ಖಾಯಿಲೆಯಿಂದ 5 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ. ನಮ್ಮ ತಾಯಿ ಮನೆಯಲ್ಲಿ ಕೆಲಸ ಮಾಡಿರುತ್ತಾರೆ. ನಾನು ಮತ್ತು ಮಹೇಂದ್ರಚಾರಿ ರವರು ಗಾರೆ ಕೆಲಸ ಮಾಡಿಕೊಂಡಿರುತ್ತಾರೆ. ಗಿರೀಶ್ ಚಾರಿ ರವರು ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇವೆ. ಈ ದಿನ ದಿನಾಂಕ:26/07/2020 ರಂದು ಮದ್ಯಾಹ್ನ ಸುಮಾರು 3:15 ಗಂಟೆ ಸಮಯದಲ್ಲಿ ನನ್ನ ಪೋನ್ ನಂಬರಿಗೆ ಯಾರೋ ಪೋನ್ ಮಾಡಿ ಕಣಿವೆಬಸವಣ್ಣ ದೇವಾಲಯದಿಂದ ಮುಂದಕ್ಕೆ ಮೊಡುಕುಹೊಸಹಳ್ಳಿ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿ ನಿನ್ನ ತಮ್ಮ ಮಹೇಂದ್ರಚಾರಿ ಮತ್ತು ಶಿವಕುಮಾರ್ ರವರು ಹೋಗುತ್ತಿದ್ದ ದ್ವಿಚಕ್ರ ವಾಹನ ಅಪಘಾತವಾಗಿದೆ ಅವರನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಅಂಬ್ಯೂಲೇನ್ಸ್ನಲ್ಲಿ ಕರೆದುಕೊಂಡು ಬರುತ್ತಿದ್ದಾರೆ ನೀನು ಆಸ್ಪತ್ರೆಯ ಬಳಿ ಹೋಗು ಎಂದು ತಿಳಿಸಿದ. ಕೂಡಲೆ ನಾನು ಸರ್ಕಾರಿ ಆಸ್ಪತ್ರೆಗೆ ಹೋದ ಮೇಲೆ ಸ್ವಲ್ಪ ಸಮಯದ ನಂತರ ಅಂಬ್ಯೂಲೇನಲ್ಲಿ ಮಹೇಂದ್ರಚಾರಿ ಮತ್ತು ಶಿವಕುಮಾರ್ ರವರನ್ನು ಕರೆದುಕೊಂಡು ಬಂದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ನನ್ನ ತಮ್ಮ ಮಹೇಂದ್ರಚಾರಿ ರವರು ಜೋರಾಗಿ ಕಿರುಚಾಡುತ್ತಿದ್ದ ಶಿವಕುಮಾರ್ ರವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಮಹೇಂದ್ರಚಾರಿ ರವರಿಗೆ ಬಲಕಾಲು ಮುರಿದಿರುತ್ತೆ. ಶಿವಕುಮಾರ್ ರವರಿಗೆ ಬಲ ಮೊಣಕಾಲು ಮತ್ತು ತಲೆಗೆ ರಕ್ತಗಾಯಗಳಾಗಿರುತ್ತೆ. ನಂತರ ವೈದ್ಯರು ನೀಡಿದ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಗರದ ಬ್ಯಾಟರಾಯನಪುರದಲ್ಲಿರುವ ಪ್ರೋ ಲೈಪ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿದಾಗ ವೈದ್ಯರು ಪರಿಕ್ಷಿಸಿ ಮಹೇಂದ್ರಚಾರಿ ರವರು ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆ. ನಂತರ ಶಿವಕುಮಾರ್ ರವರನ್ನು ಚಿಕಿತ್ಸೆಗಾಗಿ ದಾಖಲಿಸಿ ಆತನನ್ನು ವಿಚಾರ ಮಾಡಿದಾಗ ತಾನು ಮತ್ತು ನಿನ್ನ ತಮ್ಮ ಮಹೇಂದ್ರಚಾರಿ ರವರು ದೊಡ್ಡಬಳ್ಳಾಪುರದ ಕಡೆ ಇರುವ ತಮ್ಮ ಸ್ನೇಹಿತನನ್ನು ಮಾತನಾಡಿಸಿಕೊಂಡು ಬರಲು ತನ್ನ ದ್ವಿಚಕ್ರ ವಾಹನ ಸಂಖ್ಯೆ: ಕೆ.ಎ-52 ಜೆ-5310 ಹೀರೋ ಸ್ಪ್ಲೇಂಡರ್ ದ್ವಿಚಕ್ರ ವಾಹನದಲ್ಲಿ ಮಹೇಂದ್ರಚಾರಿ ರವರೇ ಚಾಲನೆ ಮಾಡುತ್ತಿದ್ದು ತಾನು ಹಿಂಭಾಗದಲ್ಲಿ ಕುಳಿತುಕೊಂಡು ತಮ್ಮ ಗ್ರಾಮದಿಂದ ನಂದಿ ಗ್ರಾಮದ ಮಾರ್ಗವಾಗಿ ಕಣಿವೆಬಸವಣ್ಣ ದೇವಾಲಯ ಬಿಟ್ಟು ಮುಂದೆ ಮೊಡುಕುಹೊಸಹಳ್ಳಿ ಗ್ರಾಮದ ಕಡೆಗೆ ರಸ್ತೆಯಲ್ಲಿ ಮದ್ಯಾಹ್ನ ಸುಮಾರು 3:00 ಗಂಟೆಯಲ್ಲಿ ಹೋಗುತ್ತಿದ್ದಾಗ ಎದರು ದಿಕ್ಕಿನಿಂದ ಅಂದರೆ ಮೊಡುಕುಹೊಸಹಳ್ಳಿ ಗ್ರಾಮದ ಕಡೆಯಿಂದ ಯಾವುದೋ ಟಿಪ್ಪರ್ ವಾಹನವನ್ನು ಅದರ ಚಾಲಕ ಅತೀ ವೇಗವಾಗಿ ಚಾಲನೆ ಮಾಡಿಕೊಂಡು ನಾವು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಎದರು ದಿಕ್ಕಿನಿಂದ ಡಿಕ್ಕಿ ಹೊಡೆಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ ಪರಿಣಾಮ ನಾವಿಬ್ಬರು ದ್ವಿಚಕ್ರ ವಾಹನದಿಂದ ರಸ್ತೆಯ ಮೇಲೆ ಬಿದ್ದು ಮಹೇಂದ್ರಚಾರಿ ರವರಿಗೆ ಕಾಲುಗಳು, ನನಗೆ ಬಲಕಾಲು, ತಲೆಗೆ ರಕ್ತಗಾಯಗಳಾಗಿರುತ್ತೆ. ನಂತರ ನನಗೆ ಪ್ರಜ್ಞೆ ತಪ್ಪಿರುತ್ತೆಂದು ತಿಳಿಸಿರುತ್ತಾನೆ. ನಂತರ ಮೃತಪಟ್ಟಿದ್ದ ಮಹೇಂದ್ರಚಾರಿ ರವರ ಮೃತದೇಹವನ್ನು ವಾಪಸ್ಸು ಆಂಬ್ಯೂಲೇನ್ಸ್ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿಕೊಂಡು ಬಂದಿರುತ್ತೇವೆ. ಆದ್ದರಿಂದ ಅಪಘಾತಕ್ಕೆ ಕಾರಣನಾದ ಟಿಪ್ಪರ್ ಲಾರಿ ಚಾಲಕನನ್ನು ಪತ್ತೆ ಮಾಡಿ ಚಾಲಕನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.