ದಿನಾಂಕ :27/06/2020 ರ ಅಪರಾಧ ಪ್ರಕರಣಗಳು

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.87/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 26/06/2020 ರಂದು ಸಂಜೆ 05.20 ಗಂಟೆಗೆ ಮಾನ್ಯ ಪಿ ಎಸ್ ಐ ರವರು ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ 26/06/2020 ರಂದು ಸಂಜೆ 05.00 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಚಿಕ್ಕಬಳ್ಳಾಪುರ ತಾಲ್ಲೂಕು ನ್ಯಾಸ್ತಿಮ್ಮನಹಳ್ಳಿ  ಗ್ರಾಮದ ಮುನಿಯಪ್ಪ ಬಿನ್ ಮುನಿಹನುಮಪ್ಪ, 82 ವರ್ಷ, ಆದಿ ದ್ರಾವಿಡ ಜನಾಂಗ, ಕೂಲಿ ಕೆಲಸ ಸೂಲಿಕುಂಟೆ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ರವರು, ಅವರ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ, ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.88/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 26/06/2020 ರಂದು ಸಂಜೆ 06.40 ಗಂಟೆಗೆ ಮಾನ್ಯ ಪಿ ಎಸ್ ಐ ರವರು ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ 26/06/2020 ರಂದು ಸಂಜೆ 06.30 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಚಿಕ್ಕಬಳ್ಳಾಪುರ ತಾಲ್ಲೂಕು ನ್ಯಾಸ್ತಿಮ್ಮನಹಳ್ಳಿ  ಗ್ರಾಮದ ನರಸಿಂಹಯ್ಯ ಬಿನ್ ಲೇಟ್ ಚಿಕ್ಕಗಂಗಪ್ಪ, 60 ವರ್ಷ, ಪ ಜಾತಿ, ಚಿಲ್ಲರೆ ಅಂಗಡಿ ವ್ಯಾಪಾರ ಗುರುಕುಲನಾಗೇನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ರವರು, ಅವರ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ, ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

  1. ಚಿಂತಾಮಣಿ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.250/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ: 26/06/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಶ್ಯಾಮಲ ಕೋಂ ಲೇಟ್ ರಾಜಣ್ಣ, 34 ವರ್ಷ, ಭೋವಿ ಜನಾಂಗ, ಗೃಹಣಿ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಸಂಜೆ 7.00 ಗಂಟೆಗೆ ಠಾಣೆಗೆ ವಾಪಸ್ಸಾಗಿದ್ದು, ಸದರಿ ಹೇಳಿಕೆಯ ಸಾರಾಂಶವೇನೆಂದರೆ, ಈಗ್ಗೆ ಸುಮಾರು 10 ವರ್ಷಗಳ ಹಿಂದ ತನ್ನ ಗಂಡನಾದ ರಾಜಣ್ಣ ರವರು ಅಪಘಾತದಲ್ಲಿ ತೀರಿಕೊಂಡಿದ್ದು, ತನ್ನ ಗಂಡ ತೀರಿಕೊಂಡ ನಂತರ ತಾನು ತನ್ನ ಮೈದುನರಾದ ವೆಂಕಟರವಣಪ್ಪ ಮತ್ತು ಸೀನಪ್ಪ ರವರಿಂದ ಬೇರೆಯಾಗಿ ಬೇರೆ ಮನೆಯಲ್ಲಿ ವಾಸವಾಗಿರುತ್ತೇನೆ. ತಮ್ಮ ಆಸ್ತಿಯನ್ನು ಇನ್ನೂ ಭಾಗ ಮಾಡಿರುವುದಿಲ್ಲ. ತನ್ನ ಮೈದುನ ವೆಂಕಟರವಣಪ್ಪ ರವರು ಆಗಾಗ ತನ್ನನ್ನು ಕುರಿತು ತನಗೆ ಭಾಗ ಕೊಡುವಂತೆ ಗಲಾಟೆ ಮಾಡುತ್ತಿರುತ್ತಾನೆ. ಹೀಗಿರುವಾಗ ಈ ದಿನ ದಿನಾಂಕ: 26/06/2020 ರಂದು ಮದ್ಯಾಹ್ನ 12.30 ಗಂಟೆ ಸಮಯದಲ್ಲಿ ತಾನು ತನ್ನ ಮಗನಾದ ಮಾರಪ್ಪನಿಗೆ ತಮ್ಮ ಜಮೀನಿನ ಬಳಿ ಇರುವ ಮರವೊಂದರಲ್ಲಿ ಕರುವಿಗೆ ಚಿಗುರೆ ಎಲೆಗಳನ್ನು ಕಿತ್ತುಕೊಂಡು ಬಾ ಎಂದು ತಿಳಿಸಿದ್ದು, ಆಗ ಅಲ್ಲಿಯೇ ಇದ್ದ ತನ್ನ ಮೈದುನ ವೆಂಕಟರವಣಪ್ಪ ಅದನ್ನು ಕೇಳಿಸಿಕೊಂಡು ತನ್ನ ಬಳಿ ಬಂದು ಏಕಾಏಕೀ ಕೈಗಳಿಂದ ತನಗೆ ಹೊಡೆದು, ಲೋಫರ್ ಮುಂಡೆ ಮರ ನಿನ್ನಪ್ಪನದಾ ಎಂದು ಅವಾಚ್ಯಶಬ್ದಗಳಿಂದ ಬೈದನು. ಅಷ್ಟರಲ್ಲಿ ಅಲ್ಲಿದ್ದ ಆತನ ಹೆಂಡತಿ ಸುನಂದಮ್ಮ ರವರು ಕೈಗಳಿಂದ ತನ್ನ ತಲೆ ಕೂದಲನ್ನು ಹಿಡಿದು ಎಳೆದಾಡಿದಳು. ವೆಂಕಟರವಣಪ್ಪ ಒಂದು ದೊಣ್ಣೆಯಿಂದ ತನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿದ ಹಾಗೂ ಅದೇ ದೊಣ್ಣೆಯಿಂದ ತನ್ನ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾನೆ. ನಂತರ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಪ್ರಾಣಬೆದರಿಕೆಯನ್ನು ಹಾಕಿ ಹೊರಟು ಹೋಗಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.251/2020 ಕಲಂ. 15(ಎ) ಕೆ.ಇ ಆಕ್ಟ್:-

          ದಿನಾಂಕ:26/06/2020 ರಂದು ರಾತ್ರಿ 8.30 ಗಂಟಗೆ DCB/CEN ಪೊಲೀಸ್ ಠಾಣೆಗೆ CHC-38 ಮಂಜುನಾಥ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:26/06/2020 ರಂದು ಚಿಕ್ಕಬಳ್ಳಾಪುರ DCB/CEN ಪೊಲೀಸ್ ಠಾಣೆಯ PI  ಶ್ರೀ ರಾಜಣ್ಣ ರವರು ತನಗೆ ಹಾಗೂ CHC-198 ಮಂಜುನಾಥ.ವಿ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು ಅದರಂತೆ ತಾವು ಈ ದಿನ ಸಂಜೆ 5.00 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕಿನ ವೈಜಕೂರು ಗ್ರಾಮದಲ್ಲಿದ್ದಾಗ ಗ್ರಾಮದ ಸಾವಿತ್ರಮ್ಮ ಕೋಂ ರಾಮಚಂದ್ರಪ್ಪ ರವರ ಮನೆಯ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳದಲ್ಲಿ ದಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ಸಾವಿತ್ರಮ್ಮ ಕೋಂ ರಾಮಚಂದ್ರಪ್ಪ, 52 ವರ್ಷ, ಎಸ್.ಸಿ ಜನಾಂಗ, ಕೂಲಿಕೆಲಸ, ವೈಜಕೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) BAGPIPER DELUXE WHISKY ಯ 180 ML ನ ಮದ್ಯ ತುಂಬಿದ 03 ಟೆಟ್ರಾ ಪಾಕೇಟ್ ಗಳು, 2) HAYWARDS CHEERS WHISKY ಯ 90 ML ನ ಮದ್ಯ ತುಂಬಿದ 10 ಟೆಟ್ರಾ ಪಾಕೇಟ್ ಗಳು, 3) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು, 4) ಒಂದು ಲೀಟರ್ ನ ಒಂದು ಖಾಲಿ ವಾಟರ್ ಬಾಟೆಲ್, 5) HAYWARDS CHEERS WHISKY ಯ 90 ML ನ ಎರಡು ಖಾಲಿ ಟೆಟ್ರಾ ಪಾಕೇಟ್ ಗಳಿದ್ದು ಸದರಿಯವುಗಳನ್ನು ಸಂಜೆ 5.15 ಗಂಟೆಯಿಂದ ಸಂಜೆ 6.15 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಸಾವಿತ್ರಮ್ಮ ಕೋಂ ರಾಮಚಂದ್ರಪ್ಪ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಸಾರಾಂಶವಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.252/2020 ಕಲಂ. 15(ಎ) ಕೆ.ಇ ಆಕ್ಟ್:-

          ದಿನಾಂಕ:26/06/2020 ರಂದು ರಾತ್ರಿ 9.00 ಗಂಟಗೆ DCB/CEN ಪೊಲೀಸ್ ಠಾಣೆಗೆ CHC-38 ಮಂಜುನಾಥ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:26/06/2020 ರಂದು ಚಿಕ್ಕಬಳ್ಳಾಪುರ DCB/CEN ಪೊಲೀಸ್ ಠಾಣೆಯ PI  ಶ್ರೀ ರಾಜಣ್ಣ ರವರು ತನಗೆ ಹಾಗೂ CHC-198 ಮಂಜುನಾಥ.ವಿ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು ಅದರಂತೆ ತಾವು ಈ ದಿನ ಸಂಜೆ 6.45 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕಿನ ಸಂತೆಕಲ್ಲಹಳ್ಳಿ ಗ್ರಾಮದ ಗೇಟ್ ನಲ್ಲಿ ಇದ್ದಾಗ  ಸದರಿ ಗೇಟ್ ನಲ್ಲಿ ಸುರೇಶ್ ಬಿನ್ ಕೃಷ್ಣಪ್ಪ ರವರ ಅಂಗಡಿ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳದಲ್ಲಿ ದಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ಸುರೇಶ್ ಬಿನ್ ಕೃಷ್ಣಪ್ಪ, 38 ವರ್ಷ, ವಕ್ಕಲಿಗರು, ಚಾಲಕ ವೃತ್ತಿ, ಸಂತೇಕಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) BAGPIPER DELUXE WHISKY ಯ 180 ML ನ ಮದ್ಯ ತುಂಬಿದ 04 ಟೆಟ್ರಾ ಪಾಕೇಟ್ ಗಳು, 2) OLD TAVERN WHISKY ಯ 180 ML ನ ಮದ್ಯ ತುಂಬಿದ 09 ಟೆಟ್ರಾ ಪಾಕೇಟ್ ಗಳು, 3) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು, 4) ಒಂದು ಲೀಟರ್ ನ ಒಂದು ಖಾಲಿ ವಾಟರ್ ಬಾಟೆಲ್, 5) BAGPIPER DELUXE WHISKY ಯ 180 ML ನ ಎರಡು ಖಾಲಿ ಟೆಟ್ರಾ ಪಾಕೇಟ್ ಗಳಿದ್ದು ಸದರಿಯವುಗಳನ್ನು ಸಂಜೆ 6.55 ಗಂಟೆಯಿಂದ ಸಂಜೆ 7.45 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಸುರೇಶ ಬಿನ್ ಕೃಷ್ಣಪ್ಪ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಸಾರಾಂಶವಾಗಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.63/2020 ಕಲಂ. 457,380 ಐ.ಪಿ.ಸಿ:-

          ದಿನಾಂಕ;-26-06-2020 ರಂದು ಶ್ರೀ ಪಿಳ್ಳವೆಂಕಟರಾಯಪ್ಪ ಬಿನ್ ನರಸಿಂಹಪ್ಪ 60 ವರ್ಷ ಆದಿಕರ್ನಾಟಕ ಎಸ್. ಗೊಲ್ಲಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಢಿದ ದೂರಿನ ಸರಾಂಶವೆನೇಂದರೆ ದಿನಾಂಕ;-24-06-2020 ರಂದು ಸಂಜೆ 7-00 ಗಂಟೆ ತಮ್ಮ ಕುರಿಗಳ ದೊಡ್ಡಿಯಲ್ಲಿ ಕುರಿಗಳನ್ನು ಬಿಟ್ಟು ಬೀಗವನ್ನು ಹಾಕಿ ಮನೆಗೆ ಹೋಗಿದ್ದು, ದಿನಾಂಕ;-25-06-2020 ರಂದು ಬೆಳಿಗ್ಗೆ 5-30 ಗಂಟೆ ಸಮಯಕ್ಕೆ ಕುರಿದೊಡ್ಡಿಯಲ್ಲಿ ಕಸ ಗುಡಿಸಲು ಹೋದಾಗ ಕುರಿದೊಡ್ಡಿಯ ಬೀಗವನ್ನು ಕಿತ್ತುಹಾಕಿದ್ದು ತಾನು ಗಾಬರಿಗೊಂಢು ದೊಡ್ಡಿಯಲ್ಲಿನ ಕುರಿಗಳನ್ನು ಎಣಿಕೆ ಮಾಡಿದಾಗ ಹತ್ತು ಕುರಿಗಳು ಇಲ್ಲದೇ ಇದ್ದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ದೊಡ್ಡಿಯ ಬೀಗವನ್ನು ಕಿತ್ತುಹಾಕಿ 10 ಕುರಿಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಹುಡುಕಾಡಿ ಪತ್ತೆಯಾಗದೇ ಇದ್ದುದರಿಂದ  ಈ ದಿನ ತಡವಾಗಿ ದೂರು ನೀಡುತ್ತಿದ್ದು ಕುರಿಗಳನ್ನು ಪತ್ತೇ ಮಾಡಿಕೊಡಲು ಕೋರಿ ನೀಡಿರುವ ದೂರಾಗಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.170/2020 ಕಲಂ. 143,147,148,323,324,504,506 ರೆ/ವಿ 149 ಐ.ಪಿ.ಸಿ:-

          ದಿನಾಂಕ:-26/06/2020 ರಂದು ಸಂಜೆ 7-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಆಂಜಿನಮ್ಮ ಕೋಂ ದೊಡ್ಡ ಕೃಷ್ಣಪ್ಪ, 45 ವರ್ಷ, ನಾಯಕರು, ಕೂಲಿ ಕೆಲಸ, ವಾಸ-ಕುರುಬಚ್ಚನಪಡೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 23/06/2020 ರಂದು ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಾಸಿಗಳಾದ ದ್ವಾವಮ್ಮ, ನವ್ಯಶ್ರೀ, ಚನ್ನರಾಯಪ್ಪ, ಮಂಜಮ್ಮ ರವರು ನೀರಿನ ವಿಚಾರದಲ್ಲಿ ಗಲಾಟೆಯನ್ನು ಮಾಡಿಕೊಳ್ಳುತ್ತಿದ್ದು ಆಗ ತಾನು, ತನ್ನ ಗಂಡನಾದ ದೊಡ್ಡಕೃಷ್ಣಪ್ಪ, ತನ್ನ ಮಗನಾದ ಶ್ರೀನಿವಾಸ್ ಹಾಗು ತಮ್ಮ ಮನೆಯವರು ಅಡ್ಡ ಹೋಗಿ ಜಗಳವನ್ನು ಬಿಡಿಸಿದಾಗ ಅದೇ ಸಮಯದಲ್ಲಿ ತಮ್ಮ ಗ್ರಾಮದ ವಾಸಿಗಳಾದ ಶ್ರೀನಾಥ, ಈತನ ಅಣ್ಣ ವೆಂಕಟೇಶ್ ಹಾಗು ಇವರ ದೊಡ್ಡಪ್ಪನ ಮಗನಾದ ರಾಮಕೃಷ್ಣ ರವರು ಸಹ ಅಲ್ಲಿಗೆ ಬಂದು ತಮ್ಮನ್ನು ಕುರಿತು ನಿನ್ನ ಮಗ ಊರಿನಲ್ಲಿ ಸರಿಯಾಗಿ ನೀರನ್ನು ಬಿಟ್ಟರೆ ಈ ಗಲಾಟೆಗಳು ಯಾಕೇ ಆಗುತ್ತದೆ ಎಂದು ತಮ್ಮ ಮೇಲೆ ಜಗಳ ಮಾಡಿದಾಗ ತಮ್ಮ ಮತ್ತು ಅವರ ಮದ್ಯೆ ಬಾಯಿ ಮಾತಿನಲ್ಲಿ ಜಗಳವಾಗಿ ಕೈ-ಕೈ ಮಿಲಾಯಿಸಿಕೊಂಡಿರುತ್ತೇವೆ. ಹೀಗಿರುವಾಗ ಈ ದಿನ ದಿನಾಂಕ 26/06/2020 ರಂದು ಬೆಳಿಗ್ಗೆ ಸುಮಾರು 7-00 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಗಂಡನಾದ ದೊಡ್ಡಕೃಷ್ಣಪ್ಪ ರವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ ಈ ಸಮಯದಲ್ಲಿ ತಮ್ಮ ಗ್ರಾಮದ ವಾಸಿಗಳಾದ 1) ಶ್ರೀನಾಥ ಬಿನ್ ರಾಮಪ್ಪ, 2) ವೆಂಕಟೇಶ್ ಬಿನ್ ರಾಮಪ್ಪ, 3) ರಾಮಕೃಷ್ಣ ಬಿನ್ ಆಂಜಿನಪ್ಪ, 4) ವಸಂತ ಬಿನ್ ಹನುಮಂತಪ್ಪ, 5) ಅಂಬರೀಶ ಬಿನ್ ಆಂಜಿನಪ್ಪ, 6) ಲೋಕೇಶ ಬಿನ್ ಮಾರಪ್ಪ ರವರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ತಮ್ಮ ಬಳಿ ಬಂದು ಮೊನ್ನೆ ನಡೆದ ಗಲಾಟೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಆ ಪೈಕಿ ಶ್ರೀನಾಥ ಎಂಬುವನು ದೊಣ್ಣೆಯಿಂದ ತನ್ನ ಬಲ ಕೈಗೆ ಹೊಡೆದು ರಕ್ತಗಾಯ ಪಡಿಸಿದಾಗ ಉಳಿದವರು ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದಾಗ ಜಗಳ ಬಿಡಿಸಲು ಅಡ್ಡ ಹೋದ ತನಗೆ ಮೇಲ್ಕಂಡವರು ತನಗೂ ಸಹ ಕೆಟ್ಟ ಮಾತುಗಳಿಂದ ಬೈದು, ತಮ್ಮನ್ನು ಕುರಿತು ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮಗೆ ಒಂದು ಗತಿ ಕಾಣಿಸುವುದಾಗಿ ಪ್ರಾಣ ಬೆದರಿಕೆಯನ್ನು ಹಾಕಿ ತಮ್ಮ ಕೈಯಲ್ಲಿ ದೊಣ್ಣೆಯನ್ನು ಅಲ್ಲಿಯೇ ಬಿಸಾಡಿ ಹೊರಟು ಹೋಗಿರುತ್ತಾರೆ. ನಂತರ ತಾನು ಗಾಯಾಳುವಾಗಿದ್ದ ತನ್ನ ಗಂಡನನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಪಡೆಸಿರುತ್ತೇನೆ. ಆದ ಕಾರಣ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.72/2020 ಕಲಂ. 457,380  ಐ.ಪಿ.ಸಿ:-

          ದಿನಾಂಕ: 27/06/2020 ರಂದು ಬೆಳಿಗ್ಗೆ 9-15 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ತಾನು ಶಿಡ್ಲಘಟ್ಟ ನಗರದ ಅಂಜನಿ ಬಡಾವಣೆಯಲ್ಲಿ ವಾಸವಾಗಿದ್ದು, ಹೆಚ್.ಕ್ರಾಸ್, ಗುರುಕೃಪ ವೈನ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಪ್ರತಿದಿನ ಶಿಡ್ಲಘಟ್ಟದಿಂದ ಹೆಚ್.ಕ್ರಾಸ್ ಹೋಗಿ ಬರುತ್ತಿದ್ದು, ದಿನಾಂಕ: 26/06/2020 ರಂದು ಬೆಳಿಗ್ಗೆ ಕೆಲಕ್ಕೆ ಹೋಗಿ ಸಂಜೆ 4-00 ಗಂಟೆಗೆ ಮನೆಗೆ ಬಂದು ಮನೆಯಲ್ಲಿ ಇದ್ದು, ನನ್ನ ಹೆಂಡತಿ ಮತ್ತು ಮಕ್ಕಳು ಮದ್ಯಾಹ್ನ 1-00 ಗಂಟೆಯಲ್ಲಿ ಅಪ್ಪೇಗೌಡನಹಳ್ಳಿ ಗ್ರಾಮಕ್ಕೆ ಹೋಗಿದ್ದರಿಂದ ನಾನು ರಾತ್ರಿ 8-15 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಅಪ್ಪೇಗೌಡನಹಳ್ಳಿಗೆ ಹೋದೆ ರಾತ್ರಿ ಅಲ್ಲೇ ಇದ್ದು ದಿನಾಂಕ 27/06/2020 ಬೆಳಿಗ್ಗೆ ಸುಮಾರು 7-30 ಗಂಟೆಗೆ ನಾನು ನನ್ನ ಹೆಂಡತಿ ಮನೆಗೆ ವಾಪಸ್ಸು ಬಂದಾಗ ಮನೆಯ  ಕಾಂಪೌಂಡ್ ಗ್ರೀಲ್ಸ್ ಡೋರ್ ಬೀಗ ಹಾಕದಂತೆ ಇದ್ದು. ಬೀಗ ತೆಗೆಯಲಿದ್ದಾಗ ಕಳುವದಾಗ ಮುಂಬಾಗ ಬಾಗಿಲು ಸ್ವಲ್ಪ ತೆಗೆದಂತಿತ್ತು, ಬಲವಂತವಾಗಿ ಬಾಗಿಲನ್ನು ಯಾರೋ ತೆಗೆದಂತೆ ಕಾಣುತ್ತಿತ್ತು, ನಾವು ಗಾಬರಿಯಿಂದ ಅಕ್ಕಪಕ್ಕದ ಮನೆಯವರಿಗೆ ತಿಳಿಸಿ ಮನೆಯಲ್ಲಿ ಕಳ್ಳತನ ಆಗಿರಬಹುದೆಂದು ತಿಳಿಸಿ, ತಾನು ಮತ್ತು ತನ್ನ ಹೆಂಡತಿ ಎಂ. ಮಂಜುಳಮ್ಮ ಒಳಗಡೆ ಹೋಗಿ ನೋಡಿದಾಗ ರೂಂ ನಲ್ಲಿ ಕಬೋರ್ಡ್ ಕಿತ್ತು ಹಾಕಿ ಯಾರೋ ಕಳ್ಳರು ಕಬೋರ್ಡ್ ನಲ್ಲಿ ಇಟ್ಟಿದ್ದ 1) ಬಂಗಾರದ ಹಾರ 1 , 2) ಕರಿಮಣಿ ಸರ-1, 3) ನಕ್ಲೇಸ್-1 ,4) ಬಂಗಾರದ ಬಳೆ -2 ಜೊತೆ, 5) ಓಲೆ-15 ಜೊತೆ, 6) ಕತ್ತು ಚೈನ್ -1, 7) ಉಂಗುರುಗಳು-7, 8) ಚಿಕ್ಕ ಬ್ರಾಸ್ ಲೈಟ್-2 ಇವುಗಳ ಬೆಲೆ ಸುಮಾರು 1,80,000 ಅಥವಾ ಅದಕ್ಕಿಂತ ಹೆಚ್ಚು ಮೌಲ್ಯ ಆಗಿರುತ್ತೆ. ಹಾಗೂ ಬೆಳ್ಳಿ ಒಡವೆಗಳಾದ 1) ದೊಡ್ಡ ದೀಪ ಒಂದು ಜೊತೆ, 2) 3 ತಟ್ಟೆಗಳು, 3) ಕುಂಕುಮ ಬಟ್ಟಲುಗಳು ಇವುಗಳ ಬೆಲೆ ಸುಮಾರು 25,000 ರೂ ಅಥವಾ ಅದಕ್ಕಿಂದ ಹೆಚ್ಚು ಮೌಲ್ಯ ಆಗಿರುತ್ತೆ. ಹಾಗೂ ತನ್ನ ಮತ್ತು ತನ್ನ ಹೆಂಡತಿಯ 35 ಸಾವಿರ ನಗದು ಹಣವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತಾನು ಮನೆಗೆ ಬೀಗ ಹಾಕಿ ಅಪ್ಪೇಗೌಡನಹಳ್ಳಿ ಗ್ರಾಮಕ್ಕೆ ಹೋಗಿದ್ದಾಗ ದಿನಾಂಕ: 26/06/2020 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಹತ್ತಿ ಮೆಟ್ಟಿಲು ಮುಂಖಾಂತರ ಮನೆ ಮೇಲಕ್ಕೆ ಹೋಗಿ ಮನೆಯ ಮೇಲಿಂದ ಪಕ್ಕದ ಸಂದಿಯಲ್ಲಿ ಬಂದು ಒಳಗೆ ಪ್ರವೇಶ ಮಾಡಿ ಕಳ್ಳತನ ಮಾಡಿರುತ್ತಾರೆ. ಅದ್ದರಿಂದ ನಮ್ಮ ಮನೆಯಲ್ಲಿ ಕಳ್ಳತನ ಮಾಡಿರುವ ಕಳ್ಳರನ್ನು  ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.