ದಿನಾಂಕ :27/05/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.106/2020 ಕಲಂ. 324,504,114 ರೆ/ವಿ 34 ಐ.ಪಿ.ಸಿ & 3(1)(r),3(1)(s) SC AND THE ST  (PREVENTION OF ATTROCITIES) ACT:-

          ದಿ: 26-05-2020 ರಂದು 20:00 ಗಂಟೆ ಸಮಯದಲ್ಲಿ ಹೆಚ್.ಸಿ 242 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಾಬು ಬಿನ್ ನಂಜುಂಡಪ್ಪ, 30 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಗೌನಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ರವರ ಹೇಳಿಕೆ ದೂರನ್ನು ಪಡೆದು ಹಾಜುರಪಡಿಸಿದ್ದನ್ನು ಸ್ವೀಕರಿಸಿದ್ದರ ಸಾರಾಂಶ –ದಿ: 26-05-2020 ರಂದು ಬೆಳಗ್ಗೆ 10:00 ಗಂಟೆಯಲ್ಲಿ ನಾನು ನಮ್ಮ ಹೊಲದ ಬಳಿ ಹೋಗಲು ಹೋಗುತ್ತಿದ್ದಾಗ, ಮಾರ್ಗ ಮದ್ಯದ ಕೆರೆಯಲ್ಲಿ ನಮ್ಮ ಗ್ರಾಮದ ಗಂಗಮ್ಮ ಕೋಂ ವೆಂಕಟೇಶ, 35 ವರ್ಷ, ಆದಿ ಕರ್ನಾಟಕ ಜನಾಂಗ ರವರು ಕುರಿಗಳ ಸಾಕಾಣಿಕೆಗೆ ಕಟ್ಟಿದ್ದ ರಪ್ಪದ ಬಳಿ ಕಡಲೇಕಾಯಿ ಸುಲಿಯುತ್ತಿದ್ದರು.  ಆನು ಕಡಲೇಕಾಯಿ ತಿಂದುಕೊಂಡು ಅಲ್ಲಿ ಕುಳಿತುಕೊಂಡೆನು.  ಆನು ನನ್ನ ತಮ್ಮ ಗಣೇಶ ಮತ್ತು ಗಂಗಮ್ಮ, ಆಕೆಯ ತಂಗಿ ಚೌಡಮ್ಮ ರವರು ಕಡಲೇಕಾಯಿ ಸುಲಿದುಕೊಂಡು ಕುಳಿತುಕೊಂಡಿದ್ದೆವು.  ಆಗ ನಮ್ಮ ಗ್ರಾಮದ ಮಹೇಶ ಬಿನ್ ಲೇಟ್ ನರಸಿಂಹಪ್ಪ, ಗೊಲ್ಲರು, ಡ್ರೈವರ್ ಮತ್ತು ಪ್ರತಾಪ ಬಿನ್ ಅಪ್ಪನ್ನ, ಗೊಲ್ಲರು, ಡ್ರೈವರ್ ಕೆಲಸ ಹಾಗೂ ನಾಗರಾಜ ಬಿನ್ ಬಾವನ್ನ, ಆದಿ ಕರ್ನಾಟಕ ಜನಾಂಗ, ಡ್ರೈವರ್ ರವರ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಬಂದರು.  ನಮ್ಮಿಂದ ಸ್ವಲ್ಪ ದೂರದಲ್ಲಿಯೇ ಕುಳಿತು ಮದ್ಯಪಾನ ಮಾಡುತ್ತಿದ್ದರು.  ನಾನು ನಮ್ಮ ಹೊಲದ ಬಳಿ ಹೋಗೋಣ ಎಂದು ಹೋಗುತ್ತಿದ್ದಾಗ, ಪ್ರತಾಪ ಮತ್ತು ಮಹೇಶ ನನ್ನನ್ನು ಕೂಗಿದರು.  ನಾನು ಮದ್ಯಪಾನ ಮಾಡಿದವರ ಬಳಿ ಏಕೆ ನಾನು ಹೋಗಬಾರದೆಂದು ಹೊಲದ ಬಳಿ ಹೋಗುತ್ತಿದ್ದಾಗ, ದ್ವಿಚಕ್ರ ವಾಹನದಲ್ಲಿ ಹಿಂಬಂಧಿಯಿಂದ ಬಂದು ನಮ್ಮ ಮೊಬೈಲ್ ಅನ್ನು ತೆಗೆದುಕೊಂಡು ಹೋಗುತ್ತಿದ್ದೀಯಾ ನಾವು ಕರೆದರೂ ಬರಲಿಲ್ಲ ಏಕೆ ? ಎಂದು ಮಾದಿಗ ನನ್ನ ಮಗನೇ ಎಂದು ಮಹೇಶ ಮತ್ತು ಪ್ರತಾಪ ರವರು ನನಗೆ ಜಾತಿ ನಿಂಧನೆ ಮಾಡಿ ಮಹೇಶನು ಉದ್ದದ ಕಟ್ಟಿಗೆಯಿಂದ ನನ್ನ ಎಡಕೈಗೆ ಹೊಡೆದನು.   ಆ ಕಟ್ಟಿಗೆ ಎರಡು ಪೀಸಾದ ಮೇಲೆ ಪ್ರತಾಪ ಇನ್ನೊಂದು ಪೀಸ್ ಕಟ್ಟಿಗೆಯಿಂದ ಬೆನ್ನಿನ ಹಿಂಭಾಗ ಹೊಡೆದನು.  ಇವರು ನನಗೆ ಹೊಡೆಯುತ್ತಿದ್ದರೆ,  ನಾಗರಾಜನು ಸುಮ್ಮನೆ ನೋಡುತ್ತಿದ್ದನು.  ಮಹೇಶ ಮತ್ತು ಪ್ರತಾಪ ರವರು ಇನ್ನೂ ನನಗೆ ನಿನ್ನಮ್ಮನ್ ಇತ್ಯಾಧಿಯಾದಿ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆಯುತ್ತಿದ್ದಾಗ, ಸಮಯ ಸುಮಾರು 12:30 ಗಂಟೆ ಆಗಿತ್ತು.   ಜೋರಾಗಿ ನಾನು ಕಿರುಚಿಕೊಂಡಾಗ, ಗಂಗಮ್ಮ ಮತ್ತೆ ಆಕೆಯ ಮಗ ಗಂಗರಾಜ ಜಗಳವನ್ನು ಬಿಡಿಸಿ ಯಾವುದೋ ದ್ವಿಚಕ್ರ ವಾಹನದಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.  ಮೊಬೈಲ್ ತೆಗೆದುಕೊಂಡಿರುವುದಾಗಿ ಹೇಳಿ ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಜಾತಿನಿಂಧನೆ ಮಾಡಿ, ಕಟ್ಟಿಗೆಯಿಂದ ಹೊಡೆದಿರುವ ನಮ್ಮ ಗ್ರಾಮದ ಮಹೇಶ, ಪ್ರತಾಪ ರವರ ಮೇಲೆ ಮತ್ತು ಇದಕ್ಕೆ ಪ್ರಚೋಧಿಸಿದ ನಾಗರಾಜ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ, ಎಂದು ದೂರು.

  1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.22/2020 ಕಲಂ. 279,337  ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:-26/05/2020 ರಂದು ಚಿಕ್ಕಬಳ್ಳಾಪುರ ನಗರದ ಜೀವನ್ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ ಮಂಜುನಾಥ ಕೆ ಬಿನ್ ಕೃಷ್ಣಪ್ಪ 38 ವರ್ಷ, ಗೌಡ ಜನಾಂಗ, ಜಿರಾಯ್ತಿ, ಮುಸ್ಟೂರು ಗ್ರಾಮ, ಕಸಭಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರಿಂದ ಪಡೆದ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ;-25/05/2020 ರಂದು ತನ್ನ ಹೆಂಡತಿ ಸಬ್ಬೇನಹಳ್ಳಿ ಬಳಿ ಕೂಲಿ ಕೆಲಸಕ್ಕೆಂದು ಹೋಗಿದ್ದು, ಇದೇ ದಿನ ಅವರನ್ನು ವಾಪಸ್ಸು ತಮ್ಮ ಗ್ರಾಮಕ್ಕೆ ಕರೆದುಕೊಂಡು ಬರಲು ತನ್ನ KA43E6949 ರ ದ್ವಿಚಕ್ರವಾಹನದಲ್ಲಿ ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಳಿ ಹೋಗುತ್ತಿದ್ದಾಗ ತನ್ನ ದ್ವಿಚಕ್ರವಾಹನದ ಪೆಟ್ರೋಲ್ ಖಾಲಿಯಾಗಿದ್ದು, ಪೆಟ್ರೋಲ್ ಹಾಕಿಸಲು ಹೊನ್ನೇನಹಳ್ಳಿ ಗೇಟ್ ಬಳಿ ಇರುವ ಸಿ.ಎಸ್.ಎನ್ ಹೆಚ್.ಪಿ ಪೆಟ್ರೋಲ್ ಬಂಕ್ ಗೆ ಹೋಗಲು ಬಾಗೇಪಲ್ಲಿ – ಬೆಂಗಳೂರು ಎನ್.ಹೆಚ್-44 ಹೈವೇ ಏಕ ಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ತನ್ನ ದ್ವಿಚಕ್ರವಾಹನವನ್ನು ತಳ್ಳಿಕೊಂಡು ಸಂಜೆ 5-00 ಗಂಟೆಯ ಸಮಯದಲ್ಲಿ ಸಿ.ಎಸ್.ಎನ್ ಹೆಚ್.ಪಿ ಪೆಟ್ರೋಲ್ ಬಂಕ್ ಬಳಿ ಹೋಗುತ್ತಿದ್ದಾಗ ಬಾಗೇಪಲ್ಲಿ ಕಡೆಯಿಂದ ಬಂದ ಬಿಳಿ ಬಣ್ಣದ ಯಾವುದೋ ಇಂಡಿಕಾ ಕಾರಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ದ್ವಿಚಕ್ರವಾಹನವನ್ನು ತಳ್ಳಿಕೊಂಡು ಹೋಗುತ್ತಿದ್ದ ತನಗೆ ಡಿಕ್ಕಿ ಹೊಡೆಸಿದ ಪರಿಣಾಮ ಠಾರ್ ರಸ್ತೆಯಲ್ಲಿ ಬಿದ್ದಾಗ ತಲೆಗೆ, ಎಡಪಾದ, ಬಲ ಹಿಮ್ಮಡಿ, ಭುಜಕ್ಕೆ, ಕೈಗಳಿಗೆ ಹಾಗೂ ಸೊಂಟಕ್ಕೆ ಗಾಯಗಳಾಗಿದ್ದು, ಸದರಿ ಅಪಘಾತ ಪಡಿಸಿದ ಯಾವುದೋ ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿಯೇ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ನಗರದ ಜೀವನ್ ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ಕಾರಿನ ಸಮೇತ ಚಾಲಕ ಪರಾರಿಯಾಗಿದ್ದು, ಸದರಿ ಅಪಘಾತಪಡಿಸಿ ತನ್ನ ಗಾಯಗಳಿಗೆ ಕಾರಣನಾದ ಬಿಳಿ ಬಣ್ಣದ ಯಾವುದೋ ಇಂಡಿಕಾ ಕಾರಿನ ಚಾಲಕನನ್ನು ಹಾಗೂ ಕಾರನ್ನು ಪತ್ತೇ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಈ ದಿನ ದಿನಾಂಕ:-26/05/2020 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.215/2020 ಕಲಂ. 143,147,148,323,324,307,504,149 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act:-

          ದಿನಾಂಕ:26-05-2020 ರಂದು ರಾತ್ರಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ರಾಮಚಂದ್ರಪ್ಪ ಬಿನ್ ನಾರಾಯಣಸ್ವಾಮಿ, 42 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ಮುಂತಕದಿರೇನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ರಾತ್ರಿ 10-30 ಗಂಟೆಗೆ ವಾಪಸ್ಸು ಬಂದಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ, 2016 ರಲ್ಲಿ ತಮಗೂ ಮತ್ತು ತಮ್ಮ ಗ್ರಾಮದ ಗೊಲ್ಲರ ಜನಾಂಗದ ವಿಜಯ್ ಕುಮಾರ್ ಬಿನ್ ರಮಣಾ ರೆಡ್ಡಿ ಮತ್ತು ಅವರ ಕಡೆಯವರಿಗೂ ಗಲಾಟೆಯಾಗಿ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿರುತ್ತೆ. ಇತ್ತೀಚೆಗೆ ಸದರಿ ಕೇಸನ್ನು ರಾಜಿ ಮಾಡಿಕೊಳ್ಳುವಂತೆ ಮೇಲ್ಕಂಡ ವಿಜಯ್ ಕುಮಾರ್ ಮತು ಅವರ ಕಡೆಯವರು ತಮ್ಮನ್ನು ಒತ್ತಾಯಿಸುತ್ತಿದ್ದರು. ಆದರೆ ತಾನು ಅದಕ್ಕೆ ಒಪ್ಪಿರುವುದಿಲ್ಲ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಈ ದಿನ ದಿನಾಂಕ 26-05-2020 ರಂದು ರಾತ್ರಿ 8-50 ಗಂಟೆ ಸಮಯದಲ್ಲಿ  ತಾನು ತಮ್ಮ ಮನೆಯ ಬಳಿ ಇದ್ದಾಗ  ತನ್ನ ತಮ್ಮನಾದ ಅಂದರೆ ದೊಡ್ಡಪ್ಪನ ಮಗನಾದ ಪೆದ್ದಪ್ಪಲ್ಲ ಬಿನ್ ಹನುಮಪ್ಪ ರವರಿಗೆ ವಿಜಯ್ ಕುಮಾರ್ ಕಡೆಯವರು ಚಾಕುವಿನಿಂದ ಹೊಡೆದು ಗಾಯಗೊಳಿಸಿರುವುದಾಗಿ ವಿಷಯ ತಿಳಿದು ತಾನು, ತನ್ನ ಮಗ ಶ್ರೀಕಂಠ ರವರು ಕೂಡಲೇ ಗಲಾಟೆಯಾಗುತ್ತಿದ್ದ ತಮ್ಮ ಸಂಬಂದಿ ಪ್ರಕಾಶ್ ಬಿನ್ ಹನುಮಪ್ಪ ರವರ ಮನೆಯ ಮುಂದೆ ಹೋಗುವಷ್ಟರಲ್ಲಿ ಅಲ್ಲೀಯೇ ಇದ್ದ ವಿಜಯ್ ಕುಮಾರ್ ಬಿನ್ ರಮಣಾರೆಡ್ಡಿ, ಲಕ್ಷ್ಮಣರೆಡ್ಡಿ ಬಿನ್ ನಲ್ಲಪ್ಪರೆಡ್ಡಿ, ಅನಿಲ್ ಬಿನ್ ಸೀನಪ್ಪ, ವೇಣು ಬಿನ್ ನಾಗರಾಜ, ನವೀನ್ ಕುಮಾರ್ ಬಿನ್ ನರಸಿಂಹರೆಡ್ಡಿ, ಕುಮಾರ್ ಬಿನ್ ನಾಗರಾಜ, ಗೌರಮ್ಮ, ನಾಗರಾಜಪ್ಪ, ಶ್ರೀನಾಥ ಎಂಬುವವರು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಚಾಕು, ದೊಣ್ಣೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಕೆಟ್ಟ ಮಾತುಗಳಿಂದ ಬೈಯುತ್ತಾ ಪೆದ್ದಪ್ಪಲ್ಲ ರವರನ್ನು ಕುರಿತು ನೀಯಮ್ಮ ವಡ್ಡಿ ಪೂಕನೆ ದೆಂಗ ಎಂದು ತಮ್ಮ ಜಾತಿಯ ಬಗ್ಗೆ ಬೈದು ಜಾತಿ ನಿಂದನೆ ಮಾಡುತ್ತಿದ್ದು, ಪೆದ್ದಪ್ಪಲ್ಲಗೆ ಹೊಟ್ಟೆ ಬಳಿ ರಕ್ತಗಾಯವಾಗಿದ್ದು ರಕ್ತ ಸ್ರಾವವಾಗುತ್ತಿತ್ತು. ಕೂಡಲೇ ತಾನು, ತನ್ನ ಮಗ ಶ್ರೀಕಂಠ ಮತ್ತು ಪ್ರಕಾಶ್ ರವರು ಜಗಳ ಬಿಡಿಸಲು ಮುಂದಾದಾಗ ಲಕ್ಷ್ಮಣರೆಡ್ಡಿ ಮತ್ತು ನಾಗರಾಜ ರವರು ದೊಣ್ಣೆಗಳಿಂದ ತನ್ನ ತಲೆಗೆ ಹಾಗೂ ಬೆನ್ನಿಗೆ ಹೊಡೆದು ಗಾಯಪಡಿಸಿದರು. ಶ್ರೀಕಂಠ ರವರಿಗೆ ವಿಜಯ್ ಕುಮಾರ್ ಮತ್ತು ಅನಿಲ್ ರವರು ಕಲ್ಲುಗಳಿಂದ ಹೊಡೆದರು. ವೇಣು, ನವೀನ್ ಕುಮಾರ್ ಮತ್ತು ಗೌರಮ್ಮ ರವರು ಕಲ್ಲುಗಳಿಂದ ಪ್ರಕಾಶ್ ಗೆ ಹೊಡೆದು ಗಾಯಪಡಿಸಿದರು. ಗೌರಮ್ಮ ರವರು ಖಾರದ ಪುಡಿ ಎರಚಿರುತ್ತಾರೆ. ಆ ಸಮಯದಲ್ಲಿ ಸ್ಥಳದಲ್ಲಿದ್ದ ತಮ್ಮ ಗ್ರಾಮದ ವೆಂಕಟಾಚಲಪತಿ ಬಿನ್ ನಾರಾಯಣಸ್ವಾಮಿ, ರವಿ ಬಿನ್ ಮುನಿಶಾಮಪ್ಪ, ಅಂಬರೀಷ ಬಿನ್ ವೆಂಕಟರವಣಪ್ಪ ಹಾಗೂ ಇತರರು ಬಂದು ಜಗಳ ಬಿಡಿಸಿದರು. ಪೆದ್ದಪ್ಪಲ್ಲ ರವರಿಗೆ ವೇಣು ಎಂಬುವವನು ಚಾಕುವಿನಿಂದ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿರುತ್ತಾನೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.216/2020 ಕಲಂ. 143,147,148,323,324,504,506,149 ಐ.ಪಿ.ಸಿ:-

          ದಿನಾಂಕ 26-05-2020 ರಂದು ರಾತ್ರಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ವೆಂಕಟೇಶಪ್ಪ ಬಿನ್ ನರಸಿಂಹಪ್ಪ, 65 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಚಾಂಡ್ರಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ರಾತ್ರಿ 11-00 ಗಂಟೆಗೆ ವಾಪಸ್ಸಾಗಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಬಳಿ ಇರುವ ಸೈಟ್ ವಿಚಾರದಲ್ಲಿ ತಮಗೂ ಮತ್ತು ತಮ್ಮ ಜನಾಂಗದ ಆಂಜಪ್ಪ ಬಿನ್ ನರಸಿಂಹಪ್ಪ ರವರಿಗೆ ತಕರಾರು ಇರುತ್ತೆ ಈ ದಿನ ದಿನಾಂಕ:-26-05-2020 ರಂದು ರಾತ್ರಿ ಸುಮಾರು 08.00 ಗಂಟೆ ಸಮಯದಲ್ಲಿ ತಾನು ತಮ್ಮ ಮನೆ ಬಳಿ ಇದ್ದಾಗ ಮೇಲ್ಕಂಡ ಆಂಜಪ್ಪ ಬಿನ್ ನರಸಿಂಹಪ್ಪ, ವೆಂಕಟೇಶಪ್ಪ ಬಿನ್ ನರಸಿಂಹಪ್ಪ ,ನರಸಿಂಹಪ್ಪ ಬಿನ್ ನರಸಿಂಹಪ್ಪ, ನವೀನ ಬಿನ್ ಆಂಜನಪ್ಪ, ಭಾರತಮ್ಮ ಕೊಂ ಆಂಜಪ್ಪ ರವರು ಆಕ್ರಮ ಗುಂಪು ಕಟ್ಟಿಕೊಂಡು ಬಂದು ತನ್ನ ಮೇಲೆ ಜಗಳ ತೆಗೆದು ಲೇ ಲೋಪರ್ ನನ್ನ ಮಗನೇ ಎಂದು ಅವಾಶ್ಚ ಶಬ್ದಗಳಿಂದ ಬೈದು ಕೈಗಳಿಂದ ತನ್ನನ್ನು ಎಳೆದಾಡಿ ಮೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಆ ಪೈಕಿ ಆಂಜಪ್ಪ ರವರು ತನ್ನ ಕೈಯಲ್ಲಿದ್ದ ಕಬ್ಬಿಣದ ಕಂಬಿಯಿಂದ ತನ್ನ ಹಣೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ. ಗಲಾಟೆ ಬಿಡಿಸಲು ಬಂದ ತಮ್ಮ ಕಡೆಯವರಾದ ತನ್ನ ಮಗಳು ಸುಮಿತ್ರ ರವರಿಗೆ ವೆಂಕಟೇಶಪ್ಪ ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತಲೆಗೆ ಮತ್ತು ಎಡ ಕೈಗೆ ಹೊಡೆದು ರಕ್ತ ಗಾಯವನ್ನುಂಟು ಮಾಡಿರುತ್ತಾನೆ. ತನ್ನ ಮಗ ನಾಗೇಶ್ ರವರಿಗೆ ಆಂಜಪ್ಪ ರವರು ಕಬ್ಬಿಣದ ಕಂಬಿಯಿಂದ ಹೊಡೆದು ರಕ್ತ ಗಾಯವನ್ನುಂಟು ಮಾಡಿರುತ್ತಾನೆ. ತನ್ನ ಇನ್ನೊಬ್ಬ ಮಗ ಶ್ರೀನಾಥ್ ರವರಿಗೆ ನರಸಿಂಹಪ್ಪ ಮತ್ತು ನವೀನ್ ರವರು ಕೈಗಳಿಂದ ಎಳೆದಾಡಿ ಮೈಕೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಭಾರತಮ್ಮ ರವರು ತನ್ನ ಮಗಳನ್ನು ಕೈಗಳಿಂದ ಮೈ ಮೇಲೆ ಹೊಡೆದು ಮೈ ಕೈ ನೋವುಂಟು ಮಾಡಿರುತ್ತಾರೆ. ಅಷ್ಠರಲ್ಲಿ ತಮ್ಮ ಗ್ರಾಮದ ಸುಧಾಕರ್ ಬಿನ್ ಮುತ್ತುಸ್ವಾಮಿ ಮತ್ತು ನಾಗರಾಜ್ ಬಿನ್ ಈರಪ್ಪರವರು ಬಂದು ಮೇಲ್ಕಂಡವರಿಂದ ತಮ್ಮನ್ನು ಬಿಡಿಸಿರುತ್ತಾರೆ. ಮೇಲ್ಕಂಡ ಆಸಾಮಿಗಳು ಸ್ಥಳದಿಂದ ಹೋಗುವಾಗ ಸದರಿ ಜಾಗದ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸಿ ಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.ನಂತರ ಗಾಯಗೊಂಡಿದ್ದ ತಾವು ನಾಲ್ಕು ಜನರು ಯಾವುದೋ ವಾಹನಗಳಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.217/2020 ಕಲಂ. 143,147,148,323,324,504,506,149 ಐ.ಪಿ.ಸಿ:-

          ದಿನಾಂಕ 26-05-2020 ರಂದು ರಾತ್ರಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು  ಆಂಜಪ್ಪ ಸಿ.ಎನ್ ಬಿನ್ ನರಸಿಂಹಪ್ಪ 55 ವರ್ಷ ಆದಿ ಕರ್ನಾಟಕ , ಜಿರಾಯ್ತಿ ವಾಸ ಚಾಂಡ್ರಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ರಾತ್ರಿ 11-30 ಗಂಟೆಗೆ ವಾಪಸ್ಸಾಗಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತಾರೆ. ತಮ್ಮ ಗ್ರಾಮದ ಬಳಿ ಇರುವ ಗಂಗಮ್ಮ ದೇವಾಲಯದ ಜಾಗದ ವಿಚಾರದಲ್ಲಿ ತಮಗೂ ಮತ್ತು ತಮ್ಮ ಗ್ರಾಮದ ವೆಂಕಟೇಶಪ್ಪ ರವರಿಗೂ ತಕರಾರು ಇರುತ್ತೆ. ಈ ದಿನ ದಿನಾಂಕ:26-05-2020 ರಂದು ರಾತ್ರಿ 8.00 ಗಂಟೆ ಸಮಯದಲ್ಲಿ  ತಾನು ಮತ್ತು ತನ್ನ ತಮ್ಮ ವೆಂಕಟೇಶಪ್ಪ ರವರು ತಮ್ಮ ಮನೆ ಬಳಿ ಇದ್ದಾಗ ಮೇಲ್ಕಂಡ ವೆಂಕಟೇಶಪ್ಪ ಬಿನ್ ನರಸಿಂಹಪ್ಪ, ತಿರುಮಲೇಶ್, ನಾಗರಾಜು, ಶ್ರೀನಾಥ ರವರು ಸಮಾನ ಉದ್ದೇಶದಿಂದ ಆಕ್ರಮ ಗುಂಪು ಕಟ್ಟಿ ಕೊಂಡು ತಮ್ಮ ಬಳಿ ಬಂದು ತನ್ನ ತಮ್ಮನನ್ನು ಕುರಿತು ಲೇ ಲೋಪರ್ ನನ್ನ ಮಗನೇ, ಸೂಳೆ ನನ್ನ ಮಗನೇ ತಮ್ಮ ಮೇಲೆ ಪೊಲೀಸ್ ದೂರನ್ನು ನೀಡುತ್ತೀಯಾ ಎಂದು ಆವಾಶ್ಚ ಶಬ್ದಗಳಿಂದ ಬೈದು ಜಗಳ ಮಾಡುತ್ತಿದ್ದಾಗ ತಾನು ಜಗಳ ಬಿಡಿಸಲು ಹೋದಾಗ ಆ ಪೈಕಿ ತಿರುಮಲೇಶ್ ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಹಣೆಗೆ ಹೊಡೆದು ಮೂಗೇಟು ಉಂಟು ಮಾಡಿದನು. ನಾಗರಾಜು ರವರು ತನ್ನ ಬಲ ಮುಂಗೈಗೆ, ಎಡ ಮೊಣಕಾಲಿಗೆ ಕಬ್ಬಿಣದ ಕಂಬಿಯಿಂದ ಹೊಡೆದು ಗಾಯವನ್ನುಂಟು ಮಾಡಿರುತ್ತಾನೆ. ತನ್ನ ತಮ್ಮ ವೆಂಕಟೇಶ್ ರವರಿಗೆ ತಿರುಮಲೇಶ್ ರವರು ದೊಣ್ಣೆಯಿಂದ ಬಲ ಮುಂಗೈಗೆ ಹೊಡೆದು ಮೂಗೇಟು ಉಂಟು ಮಾಡಿರುತ್ತಾನೆ. ಗಲಾಟೆ ಬಿಡಿಸಲು ಬಂದ ನರಸಿಂಹಪ್ಪ ರವರಿಗೆ ನಾಗರಾಜ ರವರು ಕಬ್ಬಿಣದ ಕಂಬಿಯಿಂದ ಬಲ ಮುಂಗೈಗೆ ಹೊಡೆದು ಊತದ ಗಾಯವನ್ನು ಉಂಟು ಮಾಡಿರುತ್ತಾನೆ. ತಮ್ಮ ಅಕ್ಕ ಯರ್ರಮ್ಮ ರವರಿಗೆ  ನಾರಾಯಣಮ್ಮ ಮತ್ತು ಸುಮಿತ್ರಮ್ಮ ರವರು ಕೈಗಳಿಂದ ಮೈಮೇಲೆ ಹೊಡೆದು ಮೈಕೈ ನೋವುಂಟು ಮಾಡಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದ ಮನೋಹರ್ ಬಿನ್ ಮುತ್ತುಸ್ವಾಮಿ, ಆಂಜಪ್ಪ ಬಿನ್ ಕಾಮಣ್ಣ ರವರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ಗಾಯಗೊಂಡಿದ್ದ ತಾವು ಮೂರು ಜನರು ಯಾವುದೋ ವಾಹನಗಳಲ್ಲಿ ಚಿಕಿತ್ಸೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇವೆ. ಮೇಲ್ಕಂಡ ಆಸಾಮಿಗಳು ಸ್ಥಳದಿಂದ ಹೋಗುವಾಗ ಸದರಿ ಜಾಗದ ತಂಟೆಗೆ ಬಂದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಹೊರಟು ಹೋದರು. ಆದ್ದರಿಂದ ಮೇಲ್ಕಂಡ ಆಸಾಮಿಗಳ ವಿರುದ್ದ  ಕಾನೂನು ರೀತ್ಯಾ ಪ್ರಕರಣ ದಾಖಲಿಸಲು ಕೋರಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.52/2020 ಕಲಂ. 143,147,323,324,504,506,149 ಐ.ಪಿ.ಸಿ:-

          ದಿನಾಂಕ:26-05-2020 ರಂದು ಮದ್ಯಾಹ್ನ 14-30  ಗಂಟೆಗೆ ಠಾಣಾ ಸಿಬ್ಬಂಧಿ ಹೆಚ್.ಸಿ 43 ರವರು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಳಾದ ಶ್ರೀಮತಿ ಲಕ್ಷ್ಮೀ ಕೊಂ ಮುನಿರಾಜು,25ವರ್ಷ, ಭೋವಿ ಜನಾಂಗ ,ಟೈಲರಿಂಗ್ ಕೆಲಸ ,ಪೂಸಗಾನದೊಡ್ಡಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆ ಪಡೆದುಕೊಂಡು ಠಾಣೆಗೆ ಬಂದು ಹಾಜರುಪಡಿಸಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:25-05-2020 ರಂದು ಸಂಜೆ ಸುಮಾರು 06-30 ಗಂಟೆಯಲ್ಲಿ ನರಸಪ್ಪನ ಸೋಸೆ ಹಾರಿಕಾ ಪಾತ್ರೆಗಳನ್ನು ತೊಳೆದು ಆ ಗಲೀಜು ನೀರನ್ನು ತಮ್ಮ ಮನೆಯ ಮುಂದೆ ಬಿಟ್ಟಿರುತ್ತಾಳೆ ಆಗ ತಾನು ಹಾರಿಕಾಳನ್ನು ಕುರಿತು ಏಕೆ ಈ ರೀತಿ ಗಲೀಜು ನೀರನ್ನು ಬಿಡುತ್ತಿರಾ ನಮಗೆ ಏನಾದರೂ ಕಾಯಿಲೆ ಬಂದರೆ ಏನು ಗತಿ ,ಒಂದು ಪೈಪು ಹಾಕಿ ಗಲೀಜು ನೀರನ್ನು ಚರಂಡಿಗೆ ಬಿಡಬಾರದ ಎಂದು ಹೇಳಿದ್ದಕ್ಕೆ ಹಾರಿಕಾ ತನ್ನನ್ನು ಕೆಟ್ಟಕೆಟ್ಟ ಮಾತುಗಳಿಂದ ಬೈದು ಗಲಾಟೆಗೆ ಬಂದಿರುತ್ತಾಳೆ. ಆಗ ಗಲಾಟೆಯ ಶಬ್ದವನ್ನು ಕೇಳಿಸಿಕೋಂಡು ಹಾರಿಕಾಳ ಗಂಡ ಸತೀಶ ,ಸತೀಶನ ಚಿಕ್ಕಪ್ಪ ವೆಂಕಟರವಣಪ್ಪ,ಸತೀಶನ ಅಣ್ಣ ದೇವರಾಜ ,ದೇವರಾಜ ಹೆಂಡತಿ ಶಿಲ್ಪಾ,ರವರುಗಳು ಬಂದು ತನ್ನನ್ನು ಕುರಿತು ಈ ಸೊಳೆ ಮುಂಡೆಯದು ಜಾಸ್ತಿಯಾಯಿತು ಪ್ರತಿದಿನಾಲೂ ಏನಾದರೂ ಕಾರಣ ಇಟ್ಟುಕೋಂಡು ತಮ್ಮ ಮೇಲೆ ಜಗಳಕ್ಕೆ ಬರುತ್ತಾಳೆಂದು ಕೆಟ್ಟಕೆಟ್ಟಾಗಿ ಬೈಯುತ್ತಾ ಮೇಲ್ಕಂಡವರ ಪೈಕಿ ಸತೀಶಾ ದೊಣ್ಣೆಯಿಂದ ತನ್ನ ಎಡಗೈಗೆ ಹೊಡೆದಿರುತ್ತಾನೆ.ಆಗ ತನ್ನ ಎಡಗೈನ ಬಳೆಗಳಿಗೆ ದೊಣ್ಣೆ ತಗುಲಿ ಕೈನಲ್ಲಿದ್ದ ಬಳೆಗಳು ಹೊಡೆದು ಹೋಗಿ ಕೈಗೆ ಚುಚ್ಚಿಕೊಂಡು ಗಾಯವಾಗಿರುತ್ತದೆ.ನಂತರ ಅದೇ ದೊಣ್ಣೆಯಿಂದ ನ್ನನ್ನ ಬಲಗೈ ಭುಜಕ್ಕೆ ಸಹ ಹೊಡೆದು ನೋವುಂಟು ಮಾಡಿರುತ್ತಾನೆ.ಹಾರಿಕಾ ತನ್ನ ಎದೆಗೆ ಹೊಟ್ಟೆಗೆ ಗುದ್ದಿ ನೋವುಂಟು ಮಾಡಿರತ್ತಾಳೆ .ಉಳಿದವರೆಲ್ಲರು ಕೈಗಳಿಂದ ನ್ನನ್ನ ಮೈಮೆಲೆ ಹೊಡಿದುರುತ್ತಾರೆ.ಎಲ್ಲರೂ ಸೇರಿಕೋಂಡು ಮತ್ತೇನಾದರೂ ನಮ್ಮ ಮೇಲೆ ಜಗಳಕ್ಕೆ ಬಂದರೆ ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.ಆಗ ನಮ್ಮ ಪಕ್ಕದ ಮನೆಯ ವೆಂಕಟನರಸಮ್ಮ ಕೊಂ ನಾಗರಾಜುರವರು ಬಂದು ಗಲಾಟೆಯನ್ನು ಬಿಡಿಸಿರುತ್ತಾರೆ.ನನಗೆ ನನಗೆ ಮೈಕೈ ನೋವು ತಮ್ಮಗಳಿಗೆ ಮೈ ಕೈ ನೋವುಗಳು ಜಾಸ್ತಿಯಾದ್ದರಿಮದ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ವತ್ರೆಗೆ ಬಂದು ದಾಖಲಾಗಿರುತ್ತೇನೆ.ಆದ್ದರಿಂದ ತಮ್ಮ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರಿಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.81/2020 ಕಲಂ. 143,447,188,269,270,506,149 ಐ.ಪಿ.ಸಿ:-

          ದಿನಾಂಕ 26/05/2020 ರಂದು 8-15 ಗಂಟೆಗೆ ಪಿಸಿ 198 ನಾಗೇಶ ರವರು ಠಾಣೆಗೆ ಹಾಜರಾಗಿ ಪಿ.ಐ ಸಾಹೇಬರು ಪಿರ್ಯಾಧಿ ಅರೂರು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಮುದ್ದರೆಡ್ಡಿ ರವರು ಅರೂರು ಗ್ರಾಮ ಪಂಚಾಯ್ತಿ ಬಳಿ ರಾತ್ರಿ 7-45 ಗಂಟೆಗೆ ನೀಡಿದ ದೂರನ್ನು ಪಡೆದಿದ್ದನ್ನು ಹಾಜರು ಪಡಿಸಿದ ದೂರಿನ ಸಾರಾಂಶವೇನೆಂದರೆ, ಅರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅರೂರು ಗ್ರಾಮ ಹೌಸ್ ಲೀಸ್ಟ್ ನಂಬರ್ 28/1ರ ಈ ಸ್ವತ್ತು ಸಂಖ್ಯೆ 23/1 ರ ಸ್ವತ್ತು ಅರೂರು ಗ್ರಾಮದ ಶ್ರೀಮತಿ ಶಿಲ್ಪ ಕೊಂ ಶ್ರೀನಾಥ ರವರ ಸ್ವತ್ತು ಆಗಿದ್ದು, ಈ ಸ್ವತ್ತಿಗೆ ಅರೂರು ಗ್ರಾಮದ ಗೆರಿಗಿ ವೆಂಕಟರೆಡ್ಡಿ ರವರು ಈ ಸ್ವತ್ತು ನನಗೆ ಸೇರಬೇಕು, ತನಗೆ ಖಾತೆ ಮಾಡಿಸಿಕೊಡಬೇಕೆಂದು ಅನಗತ್ಯವಾಗಿ ವಿವಾದ ಉಂಟು ಮಾಡುತ್ತಿದ್ದರು, ಸದರಿ ಸ್ವತ್ತಿಗೆ ಹದ್ದುಬಸ್ತು ಮಾಡಿಕೊಡಬೇಕೆಂದು  ಶ್ರೀಮತಿ ಶಿಲ್ಪ ಕೊಂ ಶ್ರೀನಾಥ ರವರು ಅಜರ್ಿ ಹಾಕಿದ್ದು, ಅದರಂತೆ ದಿನಾಂಕ 22/05/2020 ರಂದು ಸ್ವತ್ತನ್ನು ಹದ್ದುಬಸ್ತು ಮಾಡಿರುತ್ತೆ. ಸದರಿ ಗೆರಿಗಿ ವೆಂಕಟರೆಡ್ಡಿ ರವರು ಈ ಸ್ವತ್ತು ನನಗೆ ಸೇರಬೇಕು, ಸದರಿ ಸ್ವತ್ತನ್ನು  ಈ ಹಿಂದೆ   ಅರೂರು ಗ್ರಾಮ ಪಂಚಾಯ್ತಿ ರವರು ಶ್ರೀಮತಿ ಶಿಲ್ಪ ಕೊಂ ಶ್ರೀನಾಥ ರವರು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವುದಾಗಿ ಸದರಿ ಸ್ವತ್ತು ತಮಗೆ ಸೇರಬೇಕೆಂದು ಬೇಟಿಕೆ ಇಟ್ಟುಕೊಂಡು ದಿನಾಂಖ 26/05/2020 ರಂದು ಬೆಳಿಗ್ಗೆ 11-00 ಗಂಟೆಗೆ ಸಕರ್ಾರದ ಯಾವುದೇ ಪರವಾನಿಗೆ ಪಡೆಯದೆಮತ್ತು ಕೋವಿಡ್-19 ಸಂಕ್ರಾಮಿಕ ಖಾಯಿಲೆಗೆ ಸಂಬಂಧಿಸಿದಂತೆ ನಿಷೇದಾಜ್ಞೆ ಇದ್ದರೂ ಸಹ ಸಕರ್ಾರಿ ಕಛೇರಿಯಾದ ಅರೂರು ಗ್ರಾಮ ಪಂಚಾಯ್ತಿ ಮುಂಭಾಗ ಮಂಜುನಾಥ.ಎ. ಬಿನ್ ಆವುಲಕೊಂಡಪ್ಪ, ಗೆರಿಗಿ ವೆಂಕಟರೆಡ್ಡಿ ಬಿನ್ ಲೇಟ್ ಭೈರಪ್ಪ, ಆರೂರು ಗ್ರಾಮ, ಮಂಜುನಾಥ ಬಿನ್ ಗೆರಿಗಿ ವೆಂಕಟರೆಡ್ಡಿ ಆರೂರು ಗ್ರಾಮ, ಚಿಕ್ಕ ಮಂಜುನಾಥ ಬಿನ್ ಗೆರಿಗಿ ವೆಂಕಟರೆಡ್ಡಿ ಆರೂರು ಗ್ರಾಮ, ಭೈರಾರೆಡ್ಡಿ ಬಿನ್ ಗೆರಿಗಿ ವೆಂಕಟರೆಡ್ಡಿ ಆರೂರು ಗ್ರಾಮ, ಆನಂದ ಬಿನ್ ಮುನಿಯಪ್ಪ, ಆರೂರು ಗ್ರಾಮ, ಮಂಜುನಾಥ ಬಿನ್ ಲೇಟ್ ಆಂಜಿನಪ್ಪ ಆರೂರು ಗ್ರಾಮ, ಎಂ.ಎನ್. ಶ್ರೀನಿವಾಸ ಬಿನ್ ನಾರಾಯಣ ರೆಡ್ಡಿ ಮಾಚಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು, ವೆಂಕಟರಮಣಪ್ಪ ಬಿನ್ ಲೇಟ್ ಗಂಗಪ್ಪ ಗರಡಾಚಾರಲಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು, ಅಶ್ವತ್ಥರೆಡ್ಡಿ ಬಿನ್ ಚಿಕ್ಕನಾರಾಯಣರೆಡ್ಡಿ, ಬುಳ್ಳಸಂದ್ರ ಗ್ರಾಮ  ಗುಡಿಬಂಡೆ ತಾಲ್ಲೂಕು, ಹರೀಶ ಬಿನ್ ನಾರಾಯಣಪ್ಪ, ಕೊಂಡರೆಡ್ಡಿಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು,  ಲಕ್ಷ್ಮಮ್ಮ ಕೊಂ  ವೆಂಕಟರೆಡ್ಡಿ ಆರೂರು ಗ್ರಾಮ, ಅನಿತಾ ಕೊಂ ಮಂಜುನಾಥ ಆರೂರು ಗ್ರಾಮ, ಭಾಗ್ಯಮ್ಮ ಕೊಂ  ವೆಂಕಟರೆಡ್ಡಿ ಆರೂರು ಗ್ರಾಮ, ರವರುಗಳು ಅಕ್ರಮ ಕೂಟ ಕಟ್ಟಿಕೊಂಡು ಗ್ರಾಮ ಪಂಚಾಯ್ತಿ ಆವರಣಕ್ಕೆ ಅಕ್ರಮವಾಗಿ  ಪ್ರವೇಶ ಮಾಡಿ ಮೇಲ್ಕಂಡ ಸ್ವತ್ತು ಗೆರಿಗಿ ವೆಂಕಟರೆಡ್ಡಿ ರವರ ಹೆಸರಿಗೆ ಬರೆದುಕೊಡಬೇಕೆಂದು ಒತ್ತಾಯಿಸುತ್ತಾ ಏರುದ್ವನಿಯಲ್ಲಿ ಗಲಾಟೆ ಮಾಡುತ್ತಾ ನತಮಗೆ ಬೆದರಿಕೆ ಹಾಕುತ್ತಿದ್ದರು. ಇವರ ಗಲಾಟೆಯಿಂದ ಗ್ರಾಮದಲ್ಲಿ ಅಶಾಂತಿ ವಾತವರಣ ಉಂಟುಮಾಡಿದ್ದು. ಕಛೇರಿಯಲ್ಲಿದ್ದ ತಾನು ಈ ವಿಚಾರವನ್ನು ಮೇಲಾಧಿಕಾರಿ ತಾಲ್ಲೂಕು ಪಂಚಾಯ್ತಿ ನಿವರ್ಾಹಣ ಅಧಿಕಾರಿ ಶ್ರೀ ಹರ್ಷವರ್ಧನ್ ರವರಿಗೆ ಮಾಹಿತಿ ತಿಳಿಸಿದ್ದು, ಅದರಂತೆ ಮಾನ್ಯರು ಸಂಜೆ 6-00 ಗಂಟೆಗೆ ಸ್ಥಳಕ್ಕೆ ಬಂದು ಮೇಲ್ಕಂಡ ರವರಿಗೆ ತಿಳುವಳಿಕೆ ನೀಡಿ ಆದೇಶ ಪಾಲನೆ ಮಾಡಲು ಮೌಖಿಕವಾಗಿ ಸೂಚನೆ ನೀಡಿದ್ದರೂ ಸಹ ರಾತ್ರಿ 7-00 ಗಂಟೆ ಆದರೂ ಸಹ ಮೇಲ್ಕಂಡರವರು ಸ್ಥಳದಿಂದ ಹೋಗದೇ ಆದೇಶವನ್ನು ಉಲ್ಲಂಘಿಸಿದ್ದು, ಸದರಿ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಾಗಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.140/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 26/05/2020 ರಂದು ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ಪಿ.ಎಸ್.ಐ ರವರು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ತಾತಹಳ್ಳಿ ಗ್ರಾಮದ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಯಾರೋ ಆಸಾಮಿಗಳು ಗುಂಪು ಕಟ್ಟಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಾತ್ಮೀ ಬಂದಿದ್ದು, ಸದರಿ ಆಸಾಮಿಗಳ ವಿರುದ್ದ ಪ್ರ ವ ವರದಿಯನ್ನು ದಾಖಲಿಸಿಕೊಂಡು, ಸದರಿ ಸ್ಥಳದ ಮೇಲೆ ದಾಳಿ ಕೈಗೊಳ್ಳಲು ಅನುಮತಿ ನೀಡ ಬೇಕಾಗಿ ಘನ ನ್ಯಾಯಾಲಯದಲ್ಲಿ ಪಿಸಿ-90 ರವರ ಮೂಲಕ ಮನವಿಯನ್ನು ಸಲ್ಲಿಸಿಕೊಂಡು ಪಿಸಿ-90 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಮದ್ಯಾಹ್ನ 3-15 ಗಂಟೆಗೆ ಠಾಣೆಗೆ ವಾಪಸ್ಸಾಗಿ ಹಾಜರು ಪಡಿಸಿದ ಅನುಮತಿ ಆದೇಶದ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.141/2020 ಕಲಂ.143,147,148,323,324,504,506,149 ಐ.ಪಿ.ಸಿ:-

          ದಿನಾಂಕ:-27/05/2020 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಅರುಣ ಕೋಂ ಮಂಜುನಾಥ, 27 ವರ್ಷ, ನಾಯಕರು, ಕೂಲಿ ಕೆಲಸ, ವಾಸ-ಡಬರಗಾನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಅಕ್ಕ ಪಿಳ್ಳ ಆಂಜಿನಮ್ಮ ರವರು ಜಪ್ತಿಹೊಸಹಳ್ಳಿ ಗ್ರಾಮದ ವಾಸಿ ನಾರಾಯಣಸ್ವಾಮಿ ರವರ ಗೋಡಂಬಿ ತೋಟವನ್ನು ಕೊಂಡಿದ್ದು, ಸದರಿ ತೋಟದಲ್ಲಿ ಗೋಡಂಬಿ ಬೀಜಗಳ ಪಸಲು ಬಂದಿರುತ್ತದೆ. ತಾನು ಮತ್ತು ತನ್ನ ಅಕ್ಕ ಪ್ರತಿ ದಿನ ಗೋಡಂಬಿ ತೋಟದಲ್ಲಿ ಕಾವಲು ಇದ್ದರೂ ಸಹ ಅಲ್ಲಲ್ಲಿ ಮರಗಳಲ್ಲಿ ಯಾರೋ ಗೋಡಂಬಿ ಬೀಜಗಳನ್ನು ಕಿತ್ತುಕೊಂಡು ಹೋಗಿರುವುದು ಕಂಡು ಬರುತ್ತಿತ್ತು. ಹೀಗಿರುವಾಗ ದಿನಾಂಕ 20/05/2020 ರಂದು ರಾತ್ರಿ ತಾನು ಮತ್ತು ತನ್ನ ಅಕ್ಕ ಗೋಡಂಬಿ ತೋಟದಲ್ಲಿ ಕಾವಲು ಇದ್ದಾಗ ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ಯಾರೋ ಒಬ್ಬರು ಆಸಾಮಿಗಳು ತಮ್ಮ ತೋಟದಲ್ಲಿ ಗೋಡಂಬಿ ಬೀಜಗಳನ್ನು ಕೀಳುತ್ತಿರುವುದನ್ನು ಕಂಡು ತಾವಿಬ್ಬರು ಅವರ ಬಳಿ ಹೋಗುವಷ್ಟರಲ್ಲಿ ಒಬ್ಬನು ಓಡಿ ಹೋಗಿದ್ದು ಮತ್ತೋಬ್ಬನು ಅಲ್ಲಿಯೇ ಇದ್ದು ಆತನ ತಮ್ಮ ಗ್ರಾಮದ ವಾಸಿ ರಾಮಪ್ಪ ರವರ ಮಗನಾದ ಶ್ರೀಕಂಠ ಎಂಬುವನಾಗಿದ್ದು, ಆತನ ಜೊತೆಯಲ್ಲಿ ಬಂದಿದ್ದವನು ನರಸಿಂಹಮೂರ್ತಿ ಎಂಬುದಾಗಿ ಆತನು ತಿಳಿಸಿರುತ್ತಾನೆ. ನಂತರ ಮಾರನೇ ದಿನ ದಿನಾಂಕ 21/05/2020 ರಂದು ಬೆಳಿಗ್ಗೆ ಸುಮಾರು 11-00 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಅಕ್ಕ ಪಿಳ್ಳ ಆಂಜಿನಮ್ಮ ರವರು ನರಸಿಂಹಮೂರ್ತಿ ರವರ ಮನೆಯ ಬಳಿ ಹೋಗಿ ತನ್ನ ಅಕ್ಕ ಆಂಜಿನಮ್ಮ ರವರು ನರಸಿಂಹಮೂರ್ತಿ ರವರ ಅತ್ತೆ ನರಸಮ್ಮ ರವರಿಗೆ ನಿಮ್ಮ ಹುಡುಗ ನಿನ್ನೆ ದಿನ ರಾತ್ರಿ ತಮ್ಮ ತೋಟದಲ್ಲಿ ಗೋಡಂಬಿ ಬೀಜಗಳನ್ನು ಕೀಳಲು ಬಂದಿದ್ದ ಎಂದು ಹೇಳುತ್ತಿದ್ದಂತೆ ನರಸಮ್ಮ ಕೋಂ ಆಂಜಿನಪ್ಪ, ಅಂಬರೀಶ ಬಿನ್ ಆಂಜಿನಪ್ಪ, ಸುಕನ್ಯಾ ಕೋಂ ನರಸಿಂಹಮೂರ್ತಿ, ಲಕ್ಷ್ಮಮ್ಮ ಕೋಂ ನರಸಿಂಹಪ್ಪ, ನರಸಿಂಹಪ್ಪ ಬಿನ್ ಗಂಗುಲಪ್ಪ ರವರುಗಳು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಮನೆಯ ಬಳಿ ಬಿದ್ದಿದ್ದ ದೊಣ್ಣೆಗಳನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ತನ್ನ ಅಕ್ಕ ಪಿಳ್ಳ ಆಂಜಿನಮ್ಮ ರವರನ್ನು ಕುರಿತು ಬೇವರ್ಸಿ ಮುಂಡೆ, ಸೂಳೆ ಮುಂಡೆ ನಮ್ಮ ಹುಡುಗನನ್ನು ಕಳ್ಳ ಎಂದು ಹೇಳುತ್ತೀಯಾ ಎಂದು ಆಕೆಗೆ ಕೆಟ್ಟ ಮಾತುಗಳಿಂದ ಬೈದು ಅಂಬರೀಶ ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಅಕ್ಕಗೆ ಹೊಡೆದಾಗ ನರಸಮ್ಮ ರವರು ಕೈಗಳಿಂದ ಮೈ ಮೇಲೆ ಹೊಡೆದು, ಕೆಳಗೆ ದಬ್ಬಿ ಕಾಲುಗಳಿಂದ ಒದ್ದಿರುತ್ತಾಳೆ. ಆಗ ತಾನು ಜಗಳ ಬಿಡಿಸಲು ಅಡ್ಡ ಹೋದಾಗ ಸುಕನ್ಯಾ ರವರು ಕೈಗಳಿಂದ ಮೈ ಮೇಲೆ ಹೊಡೆದಾಗ ನರಸಿಂಹಪ್ಪ ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ನನಗೂ ಹೊಡೆದು ನೋವುಂಟು ಮಾಡಿ ಮೇಲ್ಕಂಡವರು ತಮ್ಮನ್ನು ಕುರಿತು ನೀವು ಇಲ್ಲಿಯೇ ಇದ್ದರೆ ನಿಮ್ಮನ್ನು ಸಾಯಿಸಿ ಬಿಡುತ್ತೇವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ ತಮ್ಮ ಗ್ರಾಮದ ವಾಸಿಗಳಾದ ಮಂಜುನಾಥ ಬಿನ್ ಲೇಟ್ ಮುನಿಆವುಲಪ್ಪ, ಆವುಲಪ್ಪ ಬಿನ್ ಅಕ್ಕಲಪ್ಪ ರವರು ಅಡ್ಡ ಬಂದು ಜಗಳವನ್ನು ಬಿಡಿಸಿರುತ್ತಾರೆ. ಈ ವಿಷಯವನ್ನು ತಾವು ತಮ್ಮ ಗ್ರಾಮದ ಹಿರಿಯರಿಗೆ ತಿಳಿಸಿದಾಗ ಅವರು ನ್ಯಾಯ ಪಂಚಾಯ್ತಿ ಮಾಡುವುದಾಗಿ ಹೇಳಿ ಮೇಲ್ಕಂಡವರು ಇದುವರೆವಿಗೂ ನ್ಯಾಯ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.