ದಿನಾಂಕ : 27/01/2020 ರ ಅಪರಾಧ ಪ್ರಕರಣಗಳು

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 57/2020 ಕಲಂ. 279-337 ಐ.ಪಿ.ಸಿ :-
ದಿನಾಂಕ 27-01-2020 ರಂದು ಬೆಳಗ್ಗೆ 10 : 15 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ನಾಗೇಶ್ ಬಿನ್ ಬಸಪ್ಪ, 28 ವರ್ಷ, ಬಲಜಿಗರು, ಚಾಲಕ ವೃತ್ತಿ, ಮನೆ ನಂ 1/177/2, ನಕ್ಕಲದಿನ್ನೆ, ಮದನಪಲ್ಲಿ ಟೌನ್, ಚಿತ್ತೂರು ಜಿಲ್ಲೆ, ಎಪಿ ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಬಂದಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ 26-01-2020 ರಂದು ತನ್ನ ಬಾಬತ್ತು ಕೆಎ 05 ಜಡ್ 7892 ನೊಂದಣಿ ಸಂಖ್ಯೆಯ ಟಾಟಾ ಸುಮೋ ವಾಹನದಲ್ಲಿ ತಾನು, ತನ್ನ ಸ್ನೇಹಿತರಾದ ಪ್ರಸಾದ್ ಬಿನ್ ಲಕ್ಷ್ಮಣ, ಶಿವ@ ವೆಂಕಟಶಿವ ಬಿನ್ ಸುಧಾಕರ, ರೆಡ್ಡಿ ಶೇಖರ್ ಬಿನ್ ನರಸಿಂಹರೆಡ್ಡಿ ಮತ್ತು ಮಹೇಶ್ ಬಿನ್ ರಾಮಚಂದ್ರ ರವರು ಮದನಪಲ್ಲಿಯಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಸಂಜೆ 4-30 ಗಂಟೆ ಸಮಯದಲ್ಲಿ ಮದನಪಲ್ಲಿ-ಬೆಂಗಳೂರು ರಸ್ತೆಯಲ್ಲಿ ಚಿನ್ನಸಂದ್ರ ಮತ್ತು ಕೆಂದನಹಳ್ಳಿ ನಡುವೆ ಎದರುಗಡೆಯಿಂದ ಅಂದರೆ ಬೆಂಗಳೂರು ಕಡೆಯಿಂದ ಬಂದ ಕೆಎ 03 ಎಂಜೆ 2946 ( KA 03 MJ 2946 ) ನೊಂದಣಿ ಸಂಖ್ಯೆಯ ಓಮ್ನಿ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಟಾಟಾ ಸುಮೋ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ್ದು ಟಾಟಾ ಸುಮೋ ವಾಹನವನ್ನು ಚಾಲನೆ ಮಾಡುತ್ತಿದ್ದ ತನಗೆ ಬಲಭಾಗದ ಕೆನ್ನೆಗೆ ರಕ್ತಗಾಯ, ಬಲಭುಜಕ್ಕೆ ಮತ್ತು ಎದೆಗೆ ಮೂಗೇಟು ಆಗಿರುತ್ತೆ. ಟಾಟಾ ಸುಮೋ ವಾಹನದಲ್ಲಿದ್ದ ಪ್ರಸಾದ್ ರವರಿಗೆ ಮೈ ಮೇಲೆ ತರಚಿದ ಗಾಯಗಳಾಗಿರುತ್ತೆ. ಟಾಟಾ ಸುಮೋ ವಾಹನದಲ್ಲಿದ್ದ ಉಳಿದವರರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಸುಮೋ ಮತ್ತು ಓಮ್ನಿ ಎರಡೂ ಕಾರುಗಳು ಸಹ ಜಖಂ ಗೊಂಡಿರುತ್ತೆ. ನಂತರ ತನ್ನ ಸ್ನೇಹಿತರು ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ದಾಖಲಿಸಿ ನಂತರ ಅಲ್ಲಿದ್ದ ಬೆಂಗಳೂರಿನ ಎಂ.ವಿ.ಜೆ ಆಸ್ವತ್ರೆಗೆ ದಾಖಲಿಸಿ ನಂತರ ವಾಪಸ್ಸು ಈ ದಿನ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ದಾಖಲಾಗಿರುತ್ತೇನೆ. ತಾನು ಸದರಿ ಅಪಘಾತದ ಬಗ್ಗೆ ತಮ್ಮ ಹಿರಿಯರಿಗೆ ತಿಳಿಸಿ ಈ ದಿನ ತಡವಾಗಿ ಪೋಲಿಸರಿಗೆ ಹೇಳಿಕೆಯನ್ನು ನೀಡಿರುತ್ತೇನೆ. ಆದ್ದರಿಂದ ಮೇಲ್ಕಂಡ ಕೆಎ03 ಎಂಜೆ 2946 ನೊಂದಣಿ ಸಂಖ್ಯೆಯ ಓಮ್ನಿ ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.
2. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 22/2020 ಕಲಂ. 435-504-506 ಐ.ಪಿ.ಸಿ :-
ದಿನಾಂಕ 27/01/2020 ರಂದು ಪಿರ್ಯಾದಿದಾರರಾದ ತಿಮ್ಮಯ್ಯ ಬಿನ್ ಧರ್ಮಯ್ಯ, ಮೇಲಿನ ಧಿಮ್ಮಘಟ್ಟನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ನನಗೆ ಹಾಗೂ ನಮ್ಮ ಗ್ರಾಮದ ನಿಂಗರಾಜು ಬಿನ್ ಗಂಗಯ್ಯ ರವರಿಗೆ ಮೊದಲಿನಿಂದಲೂ ಹಳೇ ವೈಷಮ್ಯಗಳಿದ್ದು, ಈ ವಿಚಾರದಲ್ಲಿ ನಮಗೂ ನಿಂಗರಾಜುಗೆ ಆಗಾಗ್ಗೆ ಸಣ್ಣ ಪುಟ್ಟ ಗಲಾಟೆಗಳು ನಡೆಯುತ್ತಿರುತ್ತವೆ, ದಿನಾಂಕ 26/01/2020 ರಂದು ರಾತ್ರಿ ಸುಮಾರು 10-00 ಗಂಟೆಯ ಸಮಯದಲ್ಲಿ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಜಗಳ ತೆಗೆದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿ ನಂತರ ನಮ್ಮ ಬಾಬತ್ತು ಹೊಲದಲ್ಲಿರುವ ಹುಲ್ಲಿನ ಬಣವೆಗೆ ಬೆಂಕಿಯನ್ನು ಹಚ್ಚಿರುತ್ತಾನೆ ಆದ್ದರಿಂದ ಕಾನೂನು ಕ್ರಮ ಜರುಗಿಸಲು ಕೋರಿ.
3. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 23/2020 ಕಲಂ. 143-147-148-323-324 ರೆ/ವಿ 149 ಐ.ಪಿ.ಸಿ :-
ದಿನಾಂಕ 27/01/2020 ರಂದು ಗಾಯಾಳು ನಿಂಗರಾಜು ಬಿನ್ ಲೇಟ್ ಗಂಗಪ್ಪ, ಮೇಲಿನ ಧಿಮ್ಮಘಟ್ಟನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು. ರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೇ, ನನಗೆ ಹಾಗೂ ನಮ್ಮ ಗ್ರಾಮದ ರಾಮಕೃಷ್ಣ ಬಿನ್ ತಿಮ್ಮಣ್ಣ ರವರಿಗೆ ಮೊದಲಿನಿಂದಲೂ ಹಳೇ ವೈಷಮ್ಯಗಳಿದ್ದು, ಈ ವಿಚಾರದಲ್ಲಿ ನಾನು ದಿನಾಂಕ 26/01/2020 ರಂದು ರಾತ್ರಿ 10-30 ಗಂಟೆಯ ಸಮಯದಲ್ಲಿ ಮನೆಯ ಬಳಿ ಕುಳಿತುಕೊಂಡು ಬೈದಾಡುತ್ತಿದ್ದೆ. ನಮ್ಮ ಪಕ್ಕದ ಮನೆಯ ಭಾಗ್ಯಮ್ಮ ರವರು ಅಲಲ್ಇಗೆ ಬಂದು ಯಾಕೇ ಈ ರೀತಿ ಕೂಗುಗಳು ಹಾಕುತ್ತೀದ್ದೀಯಾ ಮನೆಯಲ್ಲಿ ಹೋಗಿ ಮಲಗು ಎಂತ ಹೇಳಿದಳು ಹಾಗೂ ನನಗೂ ಮತ್ತು ಭಾಗ್ಯಮ್ಮಳಿಗೂ ಮಾತಿನ ಚಕಮಕಿ ನಡೆಯಿತು, ಆಗ ಅಲ್ಲಿಯೆ ಇದ್ದ 1.ಧರ್ಮಯ್ಯ, 2.ಸಿದ್ದಲಿಂಗಪ್ಪ, 3.ಜಗದೀಶ, 4.ರಾಮಕೃಷ್ಣ, 5.ಸುನೀಲ್, 6.ಗೋಪಾಲ, & 7.ಸಿದ್ದೇಶ ರವರು ಅಕ್ರಮ ಗುಂಪುಕಟ್ಟಿಕೊಂಡು ಬಂದು ಜಗಳ ತೆಗೆದು ಧರ್ಮಯ್ಯ ತನ್ನ ಬಳಿ ಇದ್ದ ಕಟ್ಟಿಗೆಯಿಂದ ತಲೆಗೆ ಹೊಡೆದ, ಸಿದ್ದೇಶ ಕಟ್ಟಿಗೆಯಿಮದ ಕೈಗೆ ಹೊಡೆದ, ಜಗದೀಶ ಕಟ್ಟಿಗೆಯಿಂದ ತನ್ನ ಬೆನ್ನಿಗೆ ಹೊಡೆದ, ಉಳಿದವರು ಕಾಲುಗಳಿಂದ ಒದ್ದು, ಕೈಗಳಿಂದ ಹೊಡೆದರು ನಂತರ ನಾನು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿರುತ್ತೇನೆ ಆದ್ದರಿಂದ ನನ್ನನ್ನು ಹೊಡೆದವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ.
4. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 32/2020 ಕಲಂ. 279-337 ಐ.ಪಿ.ಸಿ :-
ದಿನಾಂಕ:22-01-2020 ರಂದು ಮದ್ಯಾಹ್ನ 15-00 ಗಂಟೆಯ ಸಮಯದಲ್ಲಿ ಈ ಕೇಸಿನ ಪಿರ್ಯಾಧಿದಾರರಾದ ಅಶ್ವತ್ಥನಾರಾಯಣಪ್ಪ ಬಿನ್ ಯಲ್ಲಪ್ಪ ದೊಡ್ಡಹುಸೇನ್ ಪುರ ತೊಂಡೇಬಾವಿ ಹೋಬಳಿ ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಅಣ್ಣ ಹನುಮಂತರಾಯಪ್ಪ ಬಿನ್ ಯಲ್ಲಪ್ಪ ರವರು ದಿನಾಂಕ:25-01-2020 ರಂದು ರಾತ್ರಿ 7-00 ಗಂಟೆಯ ಸಮಯದಲ್ಲಿ ಗೌರೀಬಿದನೂರು ಕಡೆಯಿಂದ ದೊಡ್ಡಹುಸೇನ್ ಪುರಕ್ಕೆ ಬರಲು TN-34-F-0918 ರ ಖಾಸಗಿ ಬಸ್ಸಿನಲ್ಲಿ ಬರ್ಜಾನುಕುಂಟೆ ಮತ್ತು ಆಲಕಾಪುರ ಕ್ರಾಸ್ ಮದ್ಯ ಜಲ್ಲಿ ಪ್ಯಾಕ್ಟರಿ ಮದ್ಯ ಬಸ್ಸಿನಲ್ಲಿ ಬರುತ್ತಿರುವಾಗ ಬಸ್ಸಿನ ಚಾಲಕ ನಿರ್ಲಕ್ಷತನದಿಂದ ವಾಹನವನ್ನು ಚಾಲನೆ ಮಾಡಿದ್ದರಿಂದ ತನ್ನ ಅಣ್ಣ ಹನುಮಂತರಾಯಪ್ಪ ಬಸ್ಸಿನಿಂದ ಕೆಳಗೆ ಬಿದ್ದು. ತಲೆ ಮತ್ತು ಮೂಗು ಮತ್ತು ಕಿವಿಯಲ್ಲಿ ರಕ್ತವನ್ನು ಬಂದು ಒದ್ದಾಡುತ್ತಿದ್ದಾಗ ಸ್ಥಳಿಯರು ನೋಡಿ ವಿಷಯವನ್ನು ತನಗೆ ತಿಳಿದು ಅಲ್ಲಿನ ಸ್ಥಳೀಯರ ಸಹಾಯದಿಂದ ಗೌರೀಬಿದನೂರು ಸರ್ಕಾರಿ ಆಸ್ವತ್ರೆಗೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಆಸ್ವತ್ರೆಗೆ ಸೇರಿಸಿ ನಂತರ ವಿಕ್ಟೋರಿಯಾ ಆಸ್ವತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದು. ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಬಸ್ಸನ್ನು ನಿರ್ಲಕ್ಷತನದಿಂದ ಚಾಲನೆ ಮಾಡಿದ TN-34-F-0918 ರ ಖಾಸಗಿ ಬಸ್ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.