ದಿನಾಂಕ :26/11/2020 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.282/2020 ಕಲಂ:279,337 ಐ.ಪಿ.ಸಿ:-

          ದಿ: 25-11-2020 ರಂದು ಬೆಳಗಿನ ಜಾವ 6:15 ಗಂಟೆಗೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶ – ದಿ: 24-11-2020 ರಂದು ಸಂಜೆ 6;30 ಗಂಟೆಯ ಸಮಯದಲ್ಲಿ ಕೂಲಿ ಕೆಲಸ ಮಾಡಿಕೊಂಡು ಮನೆಗೆ ಹೋಗೋಣವೆಂದು ಗೂಳೂರು ಸರ್ಕಲ್ ನಿಂದ ನಡೆದುಕೊಂಡು ಬಸ್ ಸ್ಟ್ಯಾಂಡ್ ಗೆ ಬರುತ್ತಿರುವಾಗ, ಯಾವುದೋ ಒಂದು ದ್ವಿಚಕ್ರ ವಾಹನ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದು ನನಗೆ ಹೊಡೆದು ನಾನು ಕೆಳಕ್ಕೆ ಬಿದ್ದು ಪ್ರಜ್ಞಾಹೀನನಾಗಿರುತ್ತೇನೆ.  ಆಗ ದಾರಿಯಲ್ಲಿ ಬರುತ್ತಿದ್ದ ಲಾಯರ್ ನಾಗಭೂಷಣ್ ನಮ್ಮನ್ನು ಯಾವುದೋ ಒಂದು ಆಟೋದಲ್ಲಿ ತಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿರುತ್ತಾರೆ.  ನನಗೆ ತಲೆಗೆ ಹಾಗೂ ಎಡಕಾಲು ಬೆರಳಿಗೆ ರಕ್ತಗಾಯವಾಗಿರುತ್ತದೆ.  ಆದ ಕಾರಣ ನನಗೆ ಹಿಂದಿನಿಂದ ಬಂದು ಹೊಡೆದ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ,  ನನಗೆ ಅಪಘಾತವನ್ನುಂಟು ಮಾಡಿದ ವಾಹನ KA-40-R-4361 TVS XL HEAVY DUTY ಎಂದು ತಿಳಿದಿರುತ್ತದೆ, ಅದರ ಸವಾರನಿಗೂ ಗಾಯಗಳಾಗಿರುತ್ತದೆ, ಎಂದು ಇದ್ದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

2) ಚಿಕ್ಕಬಳ್ಳಾಪುರ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.170/2020 ಕಲಂ:279 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿ:26.11.2020 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಹಮದ್ ಜಾವೀದ್ ರಬ್ಬಾನಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿ:26.11.2020 ರಂದು ಬೆಳಿಗ್ಗೆ ಸುಮಾರು 6-30 ಗಂಟೆಗೆ ತಾನು ತಮ್ಮ ಮನೆಯನ್ನು ಬಿಟ್ಟು ತನ್ನ ಸ್ನೇಹಿತನ ಮಗನ ಮದುವೆ ಪ್ರಯುಕ್ತ ಆಂದ್ರಪ್ರದೇಶದ ಆದೋನಿಗೆ ಹೋಗಲು ತನ್ನ ತಮ್ಮ ಫಕೃದ್ದೀನ್ ಪಿ ಎಂ ರವರ ಬಾಬತ್ತು ಕೆಎ 04  ಎಂ ಕೆ 2291 ನೊಂದಣಿ ಸಂಖ್ಯೆಯ ಹುಂಡೈ ಐ 20 ಕಾರಿನಲ್ಲಿ ಬೆಂಗಳೂರು- ಹೈದರಾಬಾದ್ ರಸ್ತೆಯ ಮುಖಾಂತರ ಹೋಗಲು ತಾನು ತಮ್ಮ ಚಾಲಕ ರಾಜೇಂದ್ರ ಬಿನ್ ಮುನಿಯಪ್ಪ ನಂ 49 ಜನತಾ ಕಾಲೋನಿ , 8 ನೇ ಬ್ಲಾಕ್ ನಾಗರಭಾವಿ 2 ನೇ ಹಂತ ಬೆಂಗಳೂರುರವರೊಂದಿಗೆ ಹೋಗುತ್ತಿದ್ದಾಗ ಚಿಕ್ಕಬಳ್ಳಾಪುರ ತಾಲ್ಲೂಕು ದೊಡ್ಡಪೈಯಲಗುರ್ಕಿ ಗೇಟ್ ಸಮೀಪ ಹಂಪ್ಸ್ ಬಳಿ ಬೆಳಿಗ್ಗೆ ಸುಮಾರು 7-20 ಗಂಟೆ ಸಮಯದಲ್ಲಿ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಲಾರಿ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯಲ್ಲಿ ಅಡ್ಡದಿಡ್ಡಿ ಚಾಲನೆ ಮಾಡಿ ಇದ್ದಕ್ಕಿದ್ದಂತೆ ರಸ್ತೆಯ ಮದ್ಯದಲ್ಲಿ ಬ್ರೇಕ್ ಹಾಕಿ ನಿಲ್ಲಿಸಿದ್ದು, ತಮ್ಮ ಕಾರಿನ ಚಾಲಕ ಬ್ರೇಕ್ ಹಾಕಿದ್ದು, ನಿಯಂತ್ರಣ ತಪ್ಪಿ ಲಾರಿಯ ಹಿಂಭಾಗ ಡಿಕ್ಕಿ ಹೊಡೆಸಿದ್ದರ ಪರಿಣಾಮ ತಮ್ಮ ಕಾರಿನ ಮುಂಭಾಗ ಪೂರ್ತಿ ಜಖಂಗೊಂಡಿದ್ದು, ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಕಾರಿನಲ್ಲಿದ್ದ ತನಗಾಗಲಿ ತಮ್ಮ ಚಾಲಕನಿಗಾಗಲಿ ಯಾವುದೇ ಗಾಯಗಳಾಗಿರುವುದಿಲ್ಲ.  ಈ ಅಪಘಾತಕ್ಕೆ ಕಾರಣನಾದ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ಲಾರಿಯನ್ನು ಪತ್ತೆ ಮಾಡಿ ಲಾರಿ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

3) ಚಿಕ್ಕಬಳ್ಳಾಪುರ ಸಂಚಾರಿ  ಪೊಲೀಸ್ ಠಾಣೆ ಮೊ.ಸಂ.53/2020 ಕಲಂ: 279,337,304(A),427 ಐ.ಪಿ.ಸಿ & 134 ಐ.ಎಂ.ವಿ ಆಕ್ಟ್:-

          ದಿನಾಂಕ:26-11-2020 ರಂದು ಬೆಳಗ್ಗೆ 10:00 ಗಂಟೆ ಸಮಯದಲ್ಲಿ ನಾನು ನನ್ನ ಸ್ವಂತ ಗ್ರಾಮವಾದ ಗವಿಗಾನಹಳ್ಳಿ ಯಿಂದ ಚದಲುಪುರ ಗ್ರಾಮಕ್ಕೆ ಹೋಗಲು ಚದಲುಪುರ ಬೈಪಾಸ್ ಕ್ರಾಸ್ ಬಳಿ ರಸ್ತೆ ದಾಟಲು ನಿಂತಿದ್ದೆನು. ಆಗ ಅದೇ ಸಮಯದಲ್ಲಿ ನಮ್ಮ ಗ್ರಾಮದ ವಾಸಿ ಜಿ.ಹೆಚ್ ಮುನಿಯಪ್ಪ ಬಿನ್ ಹನುಮಂತಬೋವಿ, 60 ವರ್ಷ ರವರು ತನ್ನ ಬಾಬತ್ತು ಏಂ-40-ಒ-7976 ಸಂಖ್ಯೆಯ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಬಂದಿದ್ದು, ಕಾರಿನಲ್ಲಿ ನಮ್ಮ ಗ್ರಾಮದ ಶ್ರೀ.ಎ.ಆರ್.ಯಮನಾಚಾರ್ಯ ಬಿನ್ ರಾಜಗೋಪಾಲ್ ಚಾರ್, 50 ವರ್ಷ, ವಕೀಲರು, ಶ್ರೀ. ಜಿ.ಪಿ.ವೆಂಕಟೇಶ್ ಬಿನ್ ಪೂಜಪ್ಪ, 48 ವರ್ಷ, ಬೋವಿ ಜನಾಂಗ, ರವರೊಂದಿಗೆ ಗವಿಗಾನಹಳ್ಳಿ ಕಡೆಯಿಂದ ಚಿಕ್ಕಬಳ್ಳಾಪುರಕ್ಕೆ ಹೋಗಲು ಚದಲುಪುರ ಬೈಪಾಸ್ ನಲ್ಲಿ ಕ್ರಾಸ್ ಮಾಡುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಕಂಟೈನರ್ ಒಂದು ಅದರ ಚಾಲಕನು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಸೈರ್ ಕಾರಿಗೆ ಡಿಕ್ಕಿ ಹೊಡೆಸಿ ಅಪಘಾತವುಂಟು ಮಾಡಿ ಅದೇ ಕಾರನ್ನು ಮುಂದಕ್ಕೆ ತಳ್ಳಿಕೊಂಡು ಹೋಗಿದ್ದು, ಮುಂದೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಇನ್ನೊಂದು ಏಂ-04-ಒಙ-2616  ಕೆಂಪುಬಣ್ಣದ ಕಾರಿಗೆ ಡಿಕ್ಕಿ ಹೊಡೆಸಿ ಮುಂದೆ ನಿಂತಿದ್ದ ಮತ್ತೊಂದು ಏಂ-40-ಖ-7728 ರ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿಕೊಂಡು ಹಾಗೇಯೇ ರಸ್ತೆಯ ಪಕ್ಕದಲ್ಲಿದ್ದ ಕಾಂಡಿಮೆಂಟ್ಸ್ ಮತ್ತು ನಂದಿನಿ ಮಿಲ್ಕ್ ಪಾರ್ಲರ್ ಅಂಗಡಿಗಳ ಮುಂದೆ  ಟೀ-ಕಾಫಿ ಕುಡಿಯಲು ನಿಂತಿದ್ದ ಸಾರ್ವಜನಿಕರಿಗೆ ಡಿಕ್ಕಿ ಹೊಡೆಸಿಕೊಂಡು ಕಾಂಡಿಮೆಂಟ್ಸ್ ಮತ್ತು ಮಿಲ್ಕ್ ಪಾರ್ಲರ್ ಗೆ ಡಿಕ್ಕಿ ಹೊಡೆಸಿ ಅಪಘಾತವುಂಟು ಮಾಡಿದನು. ನಾನು ಸ್ಥಳಕ್ಕೆ ಹೋಗುವಷ್ಟರಲ್ಲಿ ಅಪಘಾತವುಂಟು ಮಾಡಿದ ಲಾರಿ ಊಖ-38-ಚ-4532 ಕಂಟೈನರ್ ಲಾರಿ ಆಗಿದ್ದು, ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮೃತಪಟ್ಟಿದ್ದು, ಆತನ ಹೆಸರು ಮತ್ತು ವಿಳಾಸವನ್ನು ವಿಚಾರಿಸಿದಾಗ ಕಲಾನಿಜಯ ತಮಿಳುನಾಡು ವಾಸಿ ಎಂದು ತಿಳಿಯಿತು. ನಂತರ ಸ್ವಿಪ್ಟ್ ಕಾರಿನಲ್ಲಿದ್ದ ನಮ್ಮ ಊರಿನ ವಾಸಿಗಳಾದ ಯಮುನಾಚಾರ್ಯ ಮತ್ತು ಮುನಿಯಪ್ಪ ಹಾಗೂ ವೆಂಕಟೇಶ್ ರವರು ಗಾಯಗೊಂಡಿದ್ದರು. ಹಾಗೂ ಕಾಂಡಿಮೆಂಟ್ಸ್ ಮುಂಭಾಗ ಹಾಗೂ ನಂದಿನಿ ಮಿಲ್ಕ್ ಪಾರ್ಲರ್ ಮುಂಭಾಗದಲ್ಲಿ ಕಾಫಿ-ಟೀ ಕುಡಿಯುತ್ತಿದ್ದವರಲ್ಲಿ ನಿತೀಶ್ಗೌಡ, ಲಿಂಗಾಪುರ ಗ್ರಾಮ, ಕಾತರ್ಿಕೇಯನ್ ಕೃಷ್ಣಗಿರಿ, ತಮಿಳುನಾಡು, ರಂಗಪ್ಪ, ಗಾರೆಕೆಲಸ, ರಾಜು ವಿಜಯಪುರ, ವೆಂಕಟರೆಡ್ಡಿ, ಕೊತ್ತನೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, ಅವಿನಾಶ್ ವಿಜಯಪುರ ರವರುಗಳು ಗಾಯಗೊಂಡಿದ್ದು, ಗಾಯಗೊಂಡವರನ್ನು ಸ್ಥಳಕ್ಕೆ ಬಂದ ಯಾರದೋ ಕಾರಿನಲ್ಲಿ ಹಾಗೂ ಅಂಬ್ಯುಲೆನ್ಸ್ ವಾಹನದಲ್ಲಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟೆನು. ಕಾಂಡಿಮೆಂಟ್ಸ್ ಮತ್ತು ಮಿಲ್ಕ್ ಪಾರ್ಲರ್ ಜಖಂಗೊಂಡಿದ್ದು, ಕಂಟೈನರ್ ಲಾರಿಯ ಚಾಲಕನು ಲಾರಿಯಿಂದ ಇಳಿದು ಸ್ವಲ್ಪ ದೂರಕ್ಕೆ ಹೊರಟು ಹೋಗಿದ್ದನು.  ನಂತರ ನಾನು ಆಸ್ಪತ್ರೆಯ ಬಳಿಗೆ ಬಂದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿಕೊಂಡು ಬರುತ್ತಿದ್ದಾಗ ನಮ್ಮ ಗ್ರಾಮದ ಯಮುನಾಚಾರ್ಯ ಹಾಗೂ ವೆಂಕಟೇಶ್ ಮತ್ತು ನಿತೇಶ್ ಗೌಡ ಎಂಬುವವರು ಮೃತಪಟ್ಟಿರುತ್ತಾರೆಂದು ಗಾಯಾಳುಗಳಲ್ಲಿ ಮುನಿಯಪ್ಪ ಮತ್ತು ರಂಗಪ್ಪ ರವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಿಕೊಟ್ಟಿರುವುದಾಗಿ ಹಾಗೂ ಉಳಿದವರು ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮತ್ತೊಬ್ಬ ಗಾಯಾಳು ವೆಂಕಟರೆಡ್ಡಿ ಎಂಬುವವರು ಜೀವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ತಿಳಿಯಿತು. ಲಾರಿಯ ಚಾಲಕನ ಹೆಸರು ಸಫರ್ು ಬಿನ್ ಇಷಾ, ಹರಿಯಾಣ ರಾಜ್ಯ ದವನು ಎಂದು ಗೊತ್ತಾಯಿತು.      ಈ ಅಪಘಾತಕ್ಕೆ ಊಖ-38-ಚ-4532 ಕಂಟೈನರ್ ಲಾರಿಯ ಚಾಲಕ ಸಫರ್ು ರವರೇ ಕಾರಣನಾಗಿದ್ದು, ಕಾಂಡಿಮೆಂಟ್ಸ್ ಮತ್ತು ನಂದಿನಿ ಮಿಲ್ಕ್ ಪಾರ್ಲರ್ ಜಖಂ ಗೊಳಿಸಿ ನಾಲ್ಕು ಜನರ ಸಾವಿಗೆ ಕಾರಣನಾಗಿ ಗಾಯಗಳುಂಟು ಮಾಡಿರುವ ಕಂಟೈನರ್ ಲಾರಿಯ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ.

4) ಗೌರಿಬಿದನೂರು ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.300/2020 ಕಲಂ: 279,337 ಐ.ಪಿ.ಸಿ :-

          ದಿನಾಂಕ:26/11/2020 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ ಅಬ್ದುಲ್  ಸುಭಾನ್ ಬಿನ್ ಲೇಟ್ ಅಬ್ದುಲ್ ಅಜೀಜ್ ಸಾಬ್, ಅಲಕಾಪುರಗ್ರಾಮ, ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರ ಅಣ್ಣ ಮಹಮದ್ ಭಾಷಾ ಬಿನ್ ಲೇಟ್ ಅಬ್ದುಲ್ ಅಜೀಜ್ ಸಾಬ್, 45 ವರ್ಷ, ಪ್ರಾಥಮಿಕ ಶಿಕ್ಷಕರು, ವಾಸ ಕೆ.ಇ.ಬಿ, ಮುನೇಶ್ವರ ಬಡಾವಣೆ ಗೌರೀಬಿದನೂರು ಟೌನ್. ರವರು  ಡೀಪಾಳ್ಯ ಕ್ಲಸ್ಟರ್ನಲ್ಲಿ ಬಿ.ಆರ್.ಸಿ ಕೋ ಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದು,  ದಿನಾಂಕ:12/11/2020 ರಂದು ಬೆಳಿಗ್ಗೆ 9-45 ಗಂಟೆ ಸಮಯದಲ್ಲಿ ಪಿರ್ಯಾದಿದಾರರ ಅಣ್ಣ ಎಂದಿನಂತೆ ಕರ್ತವ್ಯಕ್ಕೆ ಹೋಗಿದ್ದಾಗ ಬೆಳಿಗ್ಗೆ 11- 00 ಗಂಟೆಗೆ ಪಿರ್ಯಾದಿದಾರರಿಗೆ ಜಗದೀಶ ಬಿ.ಆರ್.ಸಿ ಮುಖ್ಯಸ್ಥರು ಪೋನ್ ಮಾಡಿ ನಿಮ್ಮ ಅಣ್ಣನಿಗೆ ಅಪಘಾತವಾಗಿದೆ ನಿಮ್ಮ ಅಣ್ಣನನ್ನು  ಆಂಬುಲೆನ್ಸ್ ವಾಹನದಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುವುದಾಗಿ ತಿಳಿಸಿದಾಗ ಪಿರ್ಯಾದಿದಾರರು ಬೆಳಿಗ್ಗೆ  ಸುಮಾರು 11-30  ಗಂಟೆಗೆ ಸಾರ್ವಜನಿಕ  ಆಸ್ಪತ್ರೆಗೆ ಭೇಟಿ ನೀಡಿ ನೋಡಲಾಗಿ ವಿಚಾರ ನಿಜವಾಗಿದ್ದು ವಿಷಯ ತಿಳಿಯಲಾಗಿ ಪಿರ್ಯಾದಿದಾರರ ಅಣ್ಣ ಮಹಮದ್ ಭಾಷಾ ಬೆಳಿಗ್ಗೆ ಸುಮಾರು 10-30 ಗಂಟೆ ಸಮಯದಲ್ಲಿ ಕೆಎ-40, ಇಬಿ-8859 ಸುಜುಕಿ ಆಕ್ಸಿಸ್ 125 ಸ್ಟೂಟಿ ದ್ವಿ ಚಕ್ರವಾಹನದಲ್ಲಿ  ಕರ್ತವ್ಯಕ್ಕೆ ಡಿಪಾಳ್ಯ ಗ್ರಾಮಕ್ಕೆ ಹೋಗುತ್ತಿದ್ದಾಗ ಸಾಗಾನಹಳ್ಳಿ-ಡಿಪಾಳ್ಯ ರಸ್ತೆಯ ಮದ್ಯ ಹುದುಗೂರು ಕಡೆಯಿಂದ ಬರುವ ಮಣ್ಣಿನ ಅಡ್ಡ ರಸ್ತೆಯಿಂದ  ಕೆಎ-40, ಕ್ಯೂ-3524 ಹೀರೋ ಸ್ಪ್ಲೆಂಡರ್ ಪ್ರೋ ದ್ವಿ ಚಕ್ರವಾಹನ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿದಾರರ ಅಣ್ಣ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿದಾರರ ಅಣ್ಣನ ಎಡ ಕೈ ಮುರಿದಿದ್ದು, ಮುಖದ ಬಳಿ  ಹಾಗೂ ತಲೆಗೆ ರಕ್ತಗಾಯವಾಗಿರುತ್ತದೆ. ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಪಿರ್ಯಾದಿದಾರರು ಅಣ್ಣನನ್ನು ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ದೂರನ್ನು ತಡವಾಗಿ ನೀಡುತ್ತಿದ್ದು  ಈ ಅಪಘಾತಕ್ಕೆ ಕಾರಣವಾದ ಕೆಎ-40, ಕ್ಯೂ-3524 ಹೀರೋ ಸ್ಪ್ಲೆಂಡರ್  ಪ್ರೋ ದ್ವಿ ಚಕ್ರವಾಹ ಮತ್ತು ದ್ವಿ ಚಕ್ರ ವಾಹನ ಸವಾರನ ವಿರುದ್ಧ   ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ದೂರು.

5) ಗೌರಿಬಿದನೂರು ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.301/2020 ಕಲಂ: 279,337 ಐ.ಪಿ.ಸಿ :-

          ದಿನಾಂಕ 26/11/2020 ರಂದು  ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಮೆಮೋ ಪಡೆದು ಆಸ್ಪತ್ರೆಗೆ ಬೇಟಿ ನೀಡಿ ಚಿಕಿತ್ಸೆಗೆ ದಾಖಲಾಗಿದ್ದ ಗಾಯಾಳು ಮಲ್ಲಪ್ಪ ರವರ ಹೆಳಿಕೆ ಪಡೆದಿದ್ದರ ಸಾರಾಂಶವೇನೆಂದರೆ, ಪಿರ್ಯಾಧಿದಾರರಾದ ಮಲ್ಲಪ್ಪ ಬಿನ್ ಮುತ್ತುರಾಯಪ್ಪ , 74 ವರ್ಷ, ವ್ಯವಸಾಯ ,ಕುರುಬರು, ವಾಸ ಮೇಲಿನ ದಿಮ್ಮಘಟ್ಟನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ದಿನಾಂಕ:26/11/2020 ರಂದು  ಸ್ವಂತ ಕೆಲಸದ ಮೇಲೆ KA-40, EB-7477 ದ್ವಿ ಚಕ್ರವಾಹನದಲ್ಲಿ ಗೌರಿಬಿದನೂರು ನಗರಕ್ಕೆ ಬಂದು ಕೆಲಸ ಮುಗಿಸಿಕೊಂಡು ಬಂಬೂಡಾಬ ಮುಂದೆ ಗೌರಿಬಿದನೂರು ರಸ್ತೆಯಲ್ಲಿ ಗ್ರಾಮಕ್ಕೆ ತಿರುಗಿಸಿಕೊಂಡು ಹೋಗುತ್ತಿದ್ದಾಗ ಬೆಳಿಗ್ಗೆ ಸುಮಾರು 11-30 ಗಂಟೆಗೆ ಸಮಯದಲ್ಲಿ ತನ್ನ ದ್ವಿಚಕ್ರವಾಹನ KA 40 –EB 7477 ರಲ್ಲಿ ರಸ್ತೆಯಿಂದ ಬಲಗಡೆಗೆ ಹೊಗುತ್ತಿರುವಾಗ ಬೆಂಗಳೂರಿನ ಕಡೆಯಿಂದ TATA AC ವಾಹನವು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಸ್ಥಳದಲ್ಲಿ ಪಿರ್ಯಾದಿದಾರರು ಕೆಳಕ್ಕೆ ಬಿದ್ದಿದ್ದು ಪಿರ್ಯಾದಿದಾರರ ತಲೆಯ ಮುಂದೆ ಹಣೆಯ ಮೇಲೆ ರಕ್ತಗಾಯ ಹಾಗೂ ಬಾಯಿಗೆ, ಬಲಕಾಲಿನ ಮಂಡಿ ಮತ್ತು  ಎಡಕಾಲಿನ ಮಂಡಿಗೆ  ಬಲವಾದ ಗಾಯಗಳಾಗಿದ್ದು,  ಸ್ಥಳಕ್ಕೆ ಯಾರೋ ಬಂದು ಪಿರ್ಯಾದಿದಾರರನ್ನು ಚಿಕಿತ್ಸೆಗಾಗಿ ಯಾವುದೋ ಆಟೋದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ವತ್ರೆಗೆ ಸೇರಿಸಿರುತ್ತಾರೆಂದು ಪಿರ್ಯಾದಿದಾರರಿಗೆ ಅಪಘಾತ ಉಂಟುಮಾಡಿದ KA-40 , A-7352 ಟಾಟಾಎಸ್, ವಾಹನದ ಮೇಲೆ ಹಾಗೂ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಅಪಘಾತ ಮಾಡಿದ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ದೂರು.

6) ಗೌರಿಬಿದನೂರು ಪುರ  ಪೊಲೀಸ್ ಠಾಣೆ ಮೊ.ಸಂ.195/2020 ಕಲಂ: 15(A),32(3) ಕೆ.ಇ ಆಕ್ಟ್:-

          ದಿನಾಂಕ;25/11/2020 ರಂದು ಸಂಜೆ 5-15 ಗಂಟೆಗೆ ಠಾಣಾ ಹೆಚ್,ಸಿ-214 ಲೋಕೇಶ್ ರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂಧರೆ ಹೆಚ್.ಸಿ.-214 ಲೋಕೇಶ್ ಆದ ತಾನು ಗೌರಿಬಿದನೂರು ನಗರ ಠಾಣೆಯಲ್ಲಿ ಗುಪ್ತ ಮಾಹಿತಿ ಸಂಗ್ರಹಣೆ  ಕರ್ತವ್ಯ ನಿರ್ವಹಿಸುತ್ತಿದ್ದು. ಈ ದಿನ ದಿನಾಂಕ:25/11/2020 ರಂದು ಸಂಜೆ 4-00 ಗಂಟೆಯಲ್ಲಿ ಗೌರಿಬಿದನೂರು ನಗರದ ಎಮ್,ಜಿ,ವೃತ್ತದ  ಬಳಿ ಇದ್ದಾಗ ಗೌರಿಬಿದನೂರು ನಗರದ ಎನ್.ಆರ್.ವೃತ್ತದ ಬಳಿ  ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕಾಗಿ ಸ್ಥಳಾವಕಾಶ ಮಾಡಿಕೊಟ್ಟು ಮದ್ಯವನ್ನು ಮಾರಾಟ ಮಾಡುತ್ತಿರುತ್ತಾರೆಂದು ಮಾಹಿತಿ ಬಂದಿದ್ದು, ಕೂಡಲೇ ಬಂದ ಮಾಹಿತಿಯನ್ನು ಪಿ,ಎಸ್,ಐ ಮೇಡಂ ರವರಿಗೆ ಮಾಹಿತಿ ತಿಳಿಸಿ ಅನುಮತಿಯನ್ನು ಪಡೆದುಕೊಂಡು.ತಾನು ಮತ್ತು ಪಿಸಿ-34 ಮಂಜುನಾಥ ರವರುಗಳು ಎಮ್.ಜಿ.ವೃತ್ತದ ಬಳಿ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿರಿಗೆ ಮದ್ಯೆ ಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟು ಮಧ್ಯೆ ಪೂರೈಕೆ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡ.ಪಂಚರೊಂದಿಗೆ ಸದರಿ ಆಸಾಮಿಯನ್ನು ಸುತ್ತುವರೆದು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ರಾಜಶೇಖರ್ ರೆಡ್ಡಿ ಬಿನ್ ಲೇಟ್ ಸುಬ್ಬಾರೆಡ್ಡಿ 45 ವರ್ಷ,ಅಂಗಡಿ ವ್ಯಾಪಾರ, ಉಚ್ಚೋದನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ಪೋನ್;9741684655 ಎಂದು ತಿಳಿಸಿದ ನಂತರ ತಾವುಗಳು ಆತನಿಗೆ ಮದ್ಯವನ್ನು ಮಾರಾಟ ಮಾಡುವುದಕ್ಕೆ ಯಾವುದಾದರೂ ಪರವಾನಗಿ ಇದೇಯೇ ಎಂದು ಕೇಳಿದಾಗ ಆತನು ತನ್ನ ಬಳಿ ಪರವಾನಗಿ ಇಲ್ಲವೆಂದು ತಿಳಿಸಿದ್ದು,ಪಂಚರ ಸಮಕ್ಷಮ   ಸ್ಥಳವನ್ನು ಪರಿಶೀಲಿಸಲಾಗಿ  1)HAYWARDS CHEERS WHISKY ಎಂದು ನಮೂಧಿಸಿರುವ 90 ಎಂ.ಎಲ್. ನ  ಮದ್ಯೆವಿರುವ 15 ಟೆಟ್ರಾ ಪಾಕೆಟ್ ಗಳು ಇದ್ದು, ಅವುಗಳಲ್ಲಿ 04 ಖಾಲಿಯಾಗಿದ್ದು, ಸ್ಥಳದಲ್ಲಿ 4 ಪ್ಲಾಸ್ಟಿಕ್ ಗ್ಲಾಸುಗಳು  ಇದ್ದವು. ಒಂದೊಂದು ಟೆಟ್ರಾ ಪಾಕೆಟ್ ನ ಬೆಲೆ 35.13/- ರೂಪಾಯಿಗಳು ಆಗಿದ್ದು, ಮೇಲ್ಕಂಡ ಟೆಟ್ರಾ ಪಾಕೆಟ್ ಗಳ ಒಟ್ಟು ಬೆಲೆ 386.43/- ರೂಪಾಯಿಗಳು ಆಗಿರುತ್ತವೆ. ಮತ್ತು ಮಧ್ಯೆವಿರುವ ಟೆಟ್ರಾಪಾಕೆಟ್ ಗಳ ಒಟ್ಟು ಮದ್ಯೆ ಪ್ರಮಾಣ 990/ ಎಮ್ ಎಲ್ ಆಗಿರುತ್ತೆ .ಪಂಚರ ಸಮ್ಮುಖದಲ್ಲಿ ಠಾಣಾ ಲ್ಯಾಪ್ ಟ್ಯಾಪ್ ನಲ್ಲಿ ಸಂಜೆ 4-15 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ಪಂಚನಾಮೆಯ ಜರುಗಿಸಿ ಮುಂದಿನ ಕ್ರಮಕ್ಕಾಗಿ  ಮೇಲ್ಕಂಡ ಮಾಲು ಮತ್ತು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಆರೋಪಿ ಹಾಗೂ ಮಾಲಿನೊಂದಿಗೆ ಸಂಜೆ 5-15  ಗಂಟೆಗೆ ಠಾಣೆಗೆ  ವಾಪಸ್ಸಾಗಿ, ಮುಂದಿನ ಕ್ರಮ ಕೈಗೊಳ್ಳಬೇಕಾಗಿ ಠಾಣಾಧಿಕಾರಿಗಳಿಗೆ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ,

7) ಕೆಂಚಾರ್ಲಹಳ್ಳಿ  ಪೊಲೀಸ್ ಠಾಣೆ ಮೊ.ಸಂ.128/2020 ಕಲಂ: 279,337 ಐ.ಪಿ.ಸಿ:-

          ದಿನಾಂಕ 25-11-2020 ರಂದು ಸಂಜೆ 04.00 ಗಂಟೆಗೆ ಪಿರ್ಯಾಧಿದಾರರಾದ ಸೀತಮ್ಮ ಕೋಂ ಲೇಟ್ ನಾರಾಯಣಪ್ಪ, 60 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಉಪ್ಪರವಾಂಡ್ಲಪಲ್ಲಿ ಗ್ರಾಮ, ಪಿ.ಟಿ.ಎಂ ಮಂಡಲಂ, ತಂಬಾಲ್ಲಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಇಬ್ಬರು ಗಂಡುಮಕ್ಕಳಿದ್ದು ಹಿರಿಯ ಮಗನಾದ 46 ವರ್ಷ ವಯಸ್ಸಿನ ಜಿ.ಶ್ರೀನಿವಾಸಲು ರವರು ದಿನಾಂಕ 24-11-2020 ರಂದು ಟಮೋಟೋವನ್ನು ಚಿಂತಾಮಣಿ ಮಾರುಕಟ್ಟೆಗೆ ಸಾಗಿಸಿ ಮಾರುಕಟ್ಟೆಯಿಂದ ಎ.ಪಿ-03-ಬಿ.ಸಿ-4857 ಹಿರೋ ಪ್ಯಾಷನ್ ಪ್ರೋ ದ್ವಿಚಕ್ರವಾಹನದಲ್ಲಿ ತಮ್ಮ ಗ್ರಾಮಕ್ಕೆ ವಾಪಸ್ಸು ಬರಲು ಬರುತ್ತಿದ್ದಾಗ ಮದ್ಯಾಹ್ನ 02.00 ಗಂಟೆ ಸಮಯದಲ್ಲಿ ಬೆಂಗಳೂರು-ಕಡಪಾ ಮುಖ್ಯ ರಸ್ತೆಯ ಜೋಗ್ಯಾನಹಳ್ಳಿ ಕ್ರಾಸ್ ಬಳಿ ಟಾರ್ ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದಾಗ ತನ್ನ ಮಗನ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಕೆ.ಎ-55-ಎಂ-3009 ನೊಂದಣಿ ಸಂಖ್ಯೆಯ ಬಿಳಿ ಬಣ್ಣದ FORD FIGO ಕಾರು ಚಾಲಕ ದ್ವಿಚಕ್ರ ವಾಹನದ ಮದ್ಯಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ದ್ವಿಚಕ್ರ ವಾಹನದ ಮುಂದಿನ ಚಕ್ರ ಮುರಿದು ತನ್ನ ಮಗನಾದ ಜಿ. ಶ್ರೀನಿವಾಸಲು ಕೆಳಗೆ ಬಿದ್ದು ಆತನ ಬಲಗಾಲು ಮುರಿದು ಎಡಭಾಗದ ಕೆನ್ನೆ ಹಾಗೂ ಗಡ್ಡದ ಕೆಳಗೆ ತೀವ್ರ ಗಾಯಗಳಾಗಿರುತ್ತದೆ. ಆಗ ಸ್ಥಳದಲ್ಲಿದ್ದ ಬಂಡಪಲ್ಲಿ ಗ್ರಾಮದ ಪ್ರಕಾಶ, ಕರಿಯಪ್ಪರೆಡ್ಡಿ ಹಾಗೂ ನಾಗರಾಜು ರವರು ಉಪಚರಿಸಿ 108 ಅಂಬ್ಯೂಲೇನ್ಸ್ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ದಾಖಲಿಸಿರುತ್ತಾರೆ. ವಿಚಾರ ತಿಳಿದ ತಾನು ಬಂದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಹಾಸ್ ಮಾಟ್ ಆಸ್ವತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿರುತ್ತಾರೆ. ಅಪಘಾತ ಪಡಿಸಿದ ಕಾರು ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

8) ಮಂಚೇನಹಳ್ಳಿ  ಪೊಲೀಸ್ ಠಾಣೆ ಮೊ.ಸಂ.256/2020 ಕಲಂ: 279,337,304(ಎ)  ಐ.ಪಿ.ಸಿ:-

          ದಿನಾಂಕ:26/11/2020 ರಂದು ಬೆಳಿಗ್ಗೆ 07-10 ಗಂಟೆಗೆ ಠಾಣಾ ಹೆಚ್.ಸಿ.137 ರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ಶ್ರೀಧರ ಬಿನ್ ಲೇಟ್ ಪಾಪಣ್ಣ ರವರಿಂದ ಹೇಳಿಕೆಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ದಿನಾಂಕ:25/11/2020 ರಂದು ನಾನು ಮತ್ತು ನನ್ನ ಜೊತೆಯಲ್ಲಿ ಕೆಲಸ ಮಾಡುವ ಬಸವಾಪುರ ಗ್ರಾಮದ ಗುರುಪ್ರಸಾದ್ ರವರು ದೊಡ್ಡಬಳ್ಳಾಪುರದಲ್ಲಿ ಪ್ಲಂಬಿಂಗ್ ಕೆಲಸ ಮುಗಿಸಿಕೊಂಡು ಗುರು ಪ್ರಸಾದ್ ರವರ ಸ್ವಗ್ರಾಮ ಬಸವಾಪುರಕ್ಕೆ ಹೋಗಿ ನಂತರ ಇದೇ ದಿನ ದಿನಾಂಕ:25/11/2020 ರಂದು ರಾತ್ರಿ ಸುಮಾರು 7-30 ಗಂಟೆಯ ಸಮಯಕ್ಕೆ ನನ್ನ ಬಾಬತ್ತು ದ್ವಿಚಕ್ರ ವಾಹನ ಸಂಖ್ಯೆ KA-53, HB-015 ರಲ್ಲಿ ಗುರುಪ್ರಸಾದ್ ಚಾಲನೆ ಮಾಡಿಕೊಂಡು ನಾನು ಹಿಂಬದಿಯಲ್ಲಿ ಕುಳಿತುಕೊಂಡು ತೊಂಡೇಬಾವಿಯ ಅವರ ಮಾವನ ಮನೆಗೆ ಹೋಗಿ ಬರೋಣವೆಂದು ಎಸ್.ಹೆಚ್-9 ಬೆಂಗಳೂರು-ಗೌರಿಬಿದನೂರು ರಸ್ತೆಯ ಅಲ್ಲೀಪುರ ಕ್ರಾಸ್ ನಿಂದ ಸ್ವಲ್ಪ ಮುಂದೆ ಹೆಚ್.ಪಿ. ಪೆಟ್ರೋಲ್ ಬಂಕ್ ಹತ್ತಿರ ಬರುವಷ್ಟರಲ್ಲಿ ಪೆಟ್ರೋಲ್ ಬಂಕ್ ಕಡೆಯಿಂದ ಬಂದ ಲಾರಿ ಸಂಖ್ಯೆ AP-02, Y-3776 ಅನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಏಕಾಏಕಿ ರಸ್ತೆಗೆ ಬಂದು ನಾವು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಮ್ಮ ದ್ವಿಚಕ್ರ ವಾಹನದ ಮೇಲೆ ಲಾರಿಯ ಚಕ್ರ ಹರಿದು ದ್ವಿಚಕ್ರ ವಾಹನ ಜಖಂಗೊಂಡು ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಗುರು ಪ್ರಸಾದ್ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಯಿತು ನಂತರ ನೋಡಲಾಗಿ ಗುರುಪ್ರಸಾದ್ ತೀವ್ರ ಸ್ವರೂಪದ ರಕ್ತಗಾಯದಿಂದ ಸ್ಥಳದಲ್ಲಿಯೇ ಮೃತಪಟ್ಟನು ನನಗೂ ಸಹ ಮೂಗಿಗೆ ಎಡ ಕಾಲಿಗೆ ರಕ್ತಗಾಯವಾಯಿತು ನಂತರ ಅಲ್ಲಿದ್ದ ಸ್ಥಳಿಯರು ನಮಗೆ ಉಪಚರಿಸಿ 108 ಅಂಬ್ಯೂಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ನಮಗೆ ಅಪಘಾತ ಪಡಿಸಿದ AP-02, Y-3776 ನೊಂದಣಿ ಸಂಖ್ಯೆಯ ಲಾರಿ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ಹೇಳಿಕೆ ದೂರು.

9) ಮಂಚೇನಹಳ್ಳಿ  ಪೊಲೀಸ್ ಠಾಣೆ ಮೊ.ಸಂ.257/2020 ಕಲಂ: 15(A),32(3) ಕೆ.ಇ ಆಕ್ಟ್:-

          ದಿನಾಂಕ: 26/11/2020 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿದಾರರಾದ ಚಿಕ್ಕಬಳ್ಳಾಪುರ ಡಿಸಿಬಿ / ಸಿಇಎನ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರವರಾದ ಸರಸ್ವತಮ್ಮ ರವರು ಮಾಲು, ಮಹಜರ್ ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ದೂರಿನ ಸಾರಾಂಶವೆನೆಂದರೆ ನಾನು ಈ ದಿನ ದಿನಾಂಕ: 26/11/2020 ರಂದು ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ನಮ್ಮ ಠಾಣೆಯ ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ40-ಜಿ-270 ರಲ್ಲಿ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ, ಬುದ್ದಿವಂತನಹಳ್ಳಿ, ಇತ್ಯಾದಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ 1-30 ಗಂಟೆಗೆ ಮಿಣಕನಗುರ್ಕಿ ಗ್ರಾಮದ ಬಳಿ ಹೋದಾಗ ಬಾತ್ಮಿದಾರರಿಂದ ಎಕೆ ಗೊಲ್ಲಹಳ್ಳಿ ಗ್ರಾಮದ ಸತೀಶ ಎಂಬುವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ಸದರಿ ಗ್ರಾಮಕ್ಕೆ ಹೋಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಸದರಿ ಸ್ಥಳದ ಹತ್ತಿರಕ್ಕೆ ಹೋದಾಗ ಯಾರೋ ಇಬ್ಬರು ಅಸಾಮಿಗಳು ಚಿಲ್ಲರೆ ಅಂಗಡಿಯ ಮುಂಭಾಗ ಮಧ್ಯಪಾನ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಓಡಿ ಹೋದರು. ನಂತರ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಹೈವಾರ್ಡ್ ಚಿಯರ್ಸ್ ವಿಸ್ಕಿಯ 90 ಎಂ ಎಲ್ ನ 2 ಖಾಲಿ ಟೆಟ್ರಾ ಪ್ಯಾಕೆಟ್ ಗಳು ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟೆಲ್ ಮತ್ತು ಎರಡು ಪ್ಲಾಸ್ಟಿಕ್ ಗ್ಲಾಸ್ ಗಳಿರುತ್ತದೆ ಅದರ ಪಕ್ಕದಲ್ಲಿ ಸುಮಾರು 2 ಅಡಿ ದೂರದಲ್ಲಿ ಚಿಲ್ಲರೆ ಅಂಗಡಿಯ ಹತ್ತಿರ ಒಂದು ಪ್ಲಾಸ್ಟಿಕ್ ಚೀಲವಿದ್ದು ಪರಿಶೀಲಿಸಲಾಗಿ ಮಧ್ಯ ತುಂಬಿದ 24 ಹೈವಾರ್ಡ್ ಚಿಯರ್ಸ್ ವಿಸ್ಕಿಯ 90 ಎಂ ಎಲ್ ನ ಟೆಟ್ರಾ ಪ್ಯಾಕೆಟ್ ಗಳಿರುತ್ತವೆ. ಸದರಿ ಚಿಲ್ಲರೆ ಅಂಗಡಿಯಲ್ಲಿ ಒಬ್ಬ ಅಸಾಮಿ ಇದ್ದು ಹೆಸರು ಮತ್ತು ವಿಳಾಸ ಕೇಳಲಾಗಿ ಸತೀಶ ಬಿನ್ ಲೇಟ್ ಸರಸ್ವತಪ್ಪ, 30 ವರ್ಷ, ಪ.ಜಾತಿ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಎಕೆ ಗೊಲ್ಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದರು. ನಂತರ ಸದರಿ ಅಸಾಮಿಯನ್ನು ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶವನ್ನು ಮಾಡಿಕೊಟ್ಟಿರುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಕ್ಕೆ ಇಲ್ಲವೆಂದು ತಿಳಿಸಿದ್ದರ ಮೇರೆಗೆ ಪಂಚರ ಸಮಕ್ಷಮ ಮದ್ಯಾಹ್ನ 1-40 ಗಂಟೆಯಿಂದ  2-30 ಗಂಟೆಯವರೆಗೆ ಮಾಲನ್ನು ಅಮಾನತ್ತುಪಡಿಸಿಕೊಂಡು ಅಸಾಮಿಯನ್ನು ವಶಕ್ಕೆ ಪಡೆದುಕೊಂಡಿರುತ್ತದೆ. ನಂತರ ಠಾಣೆಗೆ ಬಂದು ಅಸಾಮಿ ಮತ್ತು ಮಾಲಿನೊಂದಿಗೆ ವರದಿ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ಪ್ರ.ವ.ವರದಿ.