ದಿನಾಂಕ :26/10/2020 ರ ಅಪರಾಧ ಪ್ರಕರಣಗಳು

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.104/2020 ಕಲಂ: 32,34 ಕೆ.ಇ ಆಕ್ಟ್:-

          ದಿನಾಂಕ:-25/10/2020 ರಂದು 14-30 ಗಂಟೆಯಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪಿ,ಎಸ್,ಐ ಶ್ರೀ ಟಿ,ಎನ್ ಪಾಪಣ್ಣ ಆದ ನಾನು ಠಾಣೆಯ ಸಿಬ್ಬಂದಿ ಸಿ,ಹೆಚ್,ಸಿ – 176 ಮುನಿರಾಜು ಸಿಪಿಸಿ-02 ಅರುಣ್ ಮಹಿಳಾ ಪಿಸಿ 249 ಮಮತಾರವರನ್ನು ಹಾಗೂ  ಜೀಪ್ ಚಾಲಕ ಎಪಿಸಿ – 65 ವೆಂಕಟೇಶ್  ರವರುಗಳನ್ನು ಜೊತೆಯಲ್ಲಿ ಕರೆದುಕೊಂಡು ಠಾಣೆಯ ಸರಹದ್ದಿನ ಗ್ರಾಮಗಳಲ್ಲಿ  ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮತ್ತು ದಾಳಿ ಸಲುವಾಗಿ ಠಾಣಾ ಸರಹದ್ದಿನ ಯಸಗಲಹಳ್ಳಿ, ಮಾದಮಂಗಲ, ವೈ ಗೊಲ್ಲಹಳ್ಳಿ, ಗ್ರಾಮಗಳಲ್ಲಿ ಗಸ್ತುಮಾಡಿಕೊಂಡು ಮದ್ಯಾಹ್ನ 15-00 ಗಂಟೆಯ ಸಮಯದಲ್ಲಿ ಬ್ರಾಹ್ಮಣರಹಳ್ಳಿ ಗ್ರಾಮಕ್ಕೆ ಹೋದಾಗ  ನರಸಿಂಹಪ್ಪ ಬಿನ್ ಲೇಟ್ ಕೋನಪ್ಪ ರವರು ಆತನ ಅಂಗಡಿಯಲ್ಲಿ ಗ್ರಾಹಕರಿಗೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಸದರಿ ಸ್ಥಳದ ಮೇಲೆ ದಾಳಿ ಮಾಡಲು ಬ್ರಾಹ್ಮಣರಹಳ್ಳಿ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಖಚಿತ ಮಾಹಿತಿಯನ್ನು ತಿಳಿಸಿ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಬ್ರಾಹ್ಮಣರಹಳ್ಳಿ ಗ್ರಾಮದಲ್ಲಿ  ನರಸಿಂಹಪ್ಪ ಬಿನ್ ಲೇಟ್ ಕೋನಪ್ಪ, ರವರ ಅಂಗಡಿಯಿಂದ ಸ್ವಲ್ಪ ದೂರದಲ್ಲಿ  ರಸ್ತೆಯಲ್ಲಿ ಜೀಪ್ ನಿಲ್ಲಿಸಿ  ಮದ್ಯಾಹ್ನ 15-15 ಗಂಟೆಯಲ್ಲಿ ಅಂಗಡಿಯ ಬಳಿಗೆ ಹೋಗಿ ನೋಡಲಾಗಿ ಅಕ್ರಮವಾಗಿ ಗ್ರಾಹಕರಿಗೆ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಸಮವಸ್ತ್ರದಲ್ಲಿದ್ದ ಗ್ರಾಹಕರು ನಮ್ಮನ್ನು ನೋಡಿ ಓಡಿ ಹೋಗಿದ್ದು, ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ನರಸಿಂಹಪ್ಪ ಬಿನ್ ಲೇಟ್ ಕೋನಪ್ಪ, 65 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಬ್ರಾಹ್ಮಣರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. ಎಂದು ತಿಳಿಸಿರುತ್ತಾರೆ. ಆಸಾಮಿಯನ್ನು ಮದ್ಯದ ಬಗ್ಗೆ ಕೇಳಲಾಗಿ ಆಸಾಮಿಯು ನಮ್ಮನ್ನು ಅವರ  ಅಂಗಡಿಯ  ಹಿಂಬಾಗದ ಗೋಡನ್ ಒಳಗೆ ಕರೆದುಕೊಂಡು ಹೋಗಿ ಮದ್ಯದ ಬಾಕ್ಸ್ ಗಳನ್ನು ತೋರಿಸಿದ್ದು,  ಪಂಚರ ಸಮಕ್ಷಮ ಪರೀಶಿಲಿಸಲಾಗಿ  1) 650 ಎಂ ಎಲ್ ನ  ಕಿಂಗ್ ಪಿಷರ್  ಬೀರ್ ನ 7 ಬಾಟೆಲ್ ಗಳಿದ್ದು,  ಒಂದರ ಬೆಲೆ 150 ರೂಗಳಾಗಿರುತ್ತೆ. 2) 330  ಎಂ ಎಲ್  ಕಿಂಗ್ ಪಿಷರ್  ಬೀರ್ ನ 18 ಬಾಟೆಲ್ ಗಳಿದ್ದು ಒಂದರ ಬೆಲೆ 85 ರೂಗಳಾಗಿರುತ್ತೆ. 3) 180  ಎಂ ಎಲ್  ನ ಇಂಪೀರಿಯಲ್ ಬ್ಲೂ ವಿಸ್ಕೀ 11 ಬಾಟೆಲ್ ಗಳಿದ್ದು  ಒಂದರ ಬೆಲೆ 98.21  ರೂಗಳಾಗಿರುತ್ತೆ 4) 180 ಎಂ ಎಲ್ ಓಲ್ಡ್ ಟವರೇನ್ ವಿಸ್ಕೀ  9  ಪಾಕೆಟ್ ಗಳಿದ್ದು, ಒಂದರ ಬೆಲೆ 86.75  ರೂಗಳಾಗಿರುತ್ತೆ  5) 90 ಎಂ ಎಲ್ ಹೈವಾಡರ್ಸ್ ವಿಸ್ಕೀ  96  ಪಾಕೆಟ್ ಗಳಿರುತ್ತೆ.  ಒಂದರ ಬೆಲೆ 35.13 ರೂಗಳಾಗಿರುತ್ತೆ  ಒಟ್ಟು 22 ಲೀಟರ್ 730 ಎಂ.ಎಲ್ ಮದ್ಯವಿದ್ದು, ಇವುಗಳ ಒಟ್ಟು ಬೆಲೆ 8913/-  ರೂಗಳ ಬೆಲೆ ಬಾಳುವುದಾಗಿರುತ್ತೆ. ಸದರಿ ಆಸಾಮಿಯು ಸರ್ಕಾರದಿಂದ ಯಾವುದೇ ಅದಿಕೃತ ಪರವಾನಗಿಯನ್ನು ಪಡೆಯದೆ ಮದ್ಯದ ಪಾಕೆಟ್ ಗಳನ್ನು ಮತ್ತು ಬಾಟೆಲ್ ಗಳನ್ನು ಅಕ್ರಮವಾಗಿ ಗೋಡನ್ ನಲ್ಲಿ ದಾಸ್ತಾನು ಮಾಡಿಕೋಂಡು ಅಂಗಡಿಯಲ್ಲಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುತ್ತಾರೆ. ನಂತರ ಇವುಗಳಲ್ಲಿ ತಲಾ ಒಂದೊಂದು ಮದ್ಯದ ಪಾಕೆಟ್  ಹಾಗೂ ಬಾಟೆಲ್ ಗಳನ್ನು ಎಪ್,ಎಸ್,ಎಲ್ ತಜ್ಞರ ಪರೀಕ್ಷೆಗಾಗಿ ಕಳುಹಿಸಲು ಪ್ರತ್ಯೇಕವಾಗಿ ಬಿಳಿಯ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಕಟ್ಟಿ BTL ಎಂಬ ಆಂಗ್ಲ ಭಾಷೆಯ ಅಕ್ಷದಿಂದ ಸೀಲು ಮಾಡಿರುತ್ತೆ ನಂತರ ಮದ್ಯದ ಪಾಕೆಟ್ಗಳನ್ನು ಮತ್ತು ಬಾಟೆಲ್ ಗಳನ್ನು ಪಂಚರ ಸಮಕ್ಷಮ ಮದ್ಯಾಹ್ನ 15-15 ಗಂಟೆಯಿಂದ 16-15 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ 16-45 ಗಂಟೆಗೆ ವಾಪಸ್ಸು ಬಂದು ಠಾಣಾ ಮೊ ಸಂಖ್ಯೆ :104/2020 ಕಲಂ:32, 34 , ಕೆ ಇ ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.115/2020 ಕಲಂ: 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ 25/10/2020 ರಂದು ಮದ್ಯಾಹ್ನ 2.30 ಗಂಟೆಗೆ ಪಿರ್ಯಾಧಿ ಶ್ರೀಮತಿ ಲಕ್ಷ್ಮಮ್ಮ ಕೊಂ ಮೂರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪಿಂಗ್ ಮಾಡಿಸಿ ತಂದು ನೀಡಿದ ದೂರಿನ ಸಾರಾಂಶವೆನೆಂದರೆ ತಮಗೆ 1ನೇ ಶಾಮಣ್ಣ, 2ನೇ ವರ್ಧನ್ ಎಂಬ ಇಬ್ಬರು ಗಂಡು ಮಕ್ಕಳಿರುತ್ತಾರೆ. ತಮ್ಮ ಒಂದನೆ ಮಗನಾದ ಶಾಮಣ್ಣ ಚಿಕ್ಕತೇಕಹಳ್ಳಿ ಗ್ರಾಮದ ಬಾಬು ಬಿನ್ ರಾಮಪ್ಪರವರ ತರಕಾರಿ ಮಂಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 23/10/2020 ರಂದು ಬೆಳಿಗ್ಗೆ ತನ್ನ ಮಗ ಶಾಮಣ್ಣ ಟಿ.ಪೆದ್ದನಹಳ್ಳಿ ಗ್ರಾಮದ ತಮ್ಮ ಸಂಬಂದಿಕರ ಮದುವೆಗೆ ಟಿ.ಪೆದ್ದನಹಳ್ಳಿ ಗ್ರಾಮಕ್ಕೆ ಹೋಗಿ ಮದುವೆಯನ್ನು ಮುಗಿಸಿಕೊಂಡು ನಂತರ  ತಮಗೆ ಪೋನ್ ಮಾಡಿ ಚಿಕ್ಕತೇಕಹಳ್ಳಿ ಗ್ರಾಮದ ಬಾಬು ರವರ ಕೆಲಸಕ್ಕೆ ಚಿಕ್ಕಬಳ್ಳಾಪುರಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸಿ ಹೋಗಿದ್ದು, ನಂತರ ಇದೇ ದಿನ ಮದ್ಯಾಹ್ನ ಸುಮಾರು 2.00 ಗಂಟೆಯಲ್ಲಿ ತಮ್ಮ ಗ್ರಾಮದ ಡಿ.ಸಿ ಮಂಜುನಾಥ ಬಿನ್ ಚಿಕ್ಕಪ್ಪಯ್ಯ ರವರು ತಮ್ಮ ಮನೆಯ ಬಳಿಗೆ ಬಂದು ನಿಮ್ಮ ಮಗ ಶಾಮಣ್ಣನಿಗೆ ದೊಡ್ಡತೇಕಹಳ್ಳಿಯಿಂದ ಟಿ ಪೆದ್ದನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅಂದರೆ ಜಾಲದ ಕೆಂಪರೆಡ್ಡಿರವರ ಮಾವಿನ ತೋಪಿನ ಪಕ್ಕದಲ್ಲಿರುವ ರಸ್ತೆಯಲ್ಲಿ ಅಪಘಾತವಾಗಿರುತ್ತದೆಂದು ತಿಳಿಸಿದರು. ಆಗ ಕೂಡಲೇ ತಾನು, ತಮ್ಮ ಪಕ್ಕದ ಮನೆಯ ರವಿ ಬಿನ್ ಮಾರಪ್ಪರವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರವು ನಿಜವಾಗಿದ್ದು, ತನ್ನ ಮಗನ ತಲೆಗೆ, ಹಣೆಯ ಮೇಲೆ ರಕ್ತ ಗಾಯವಾಗಿದ್ದು, ಕೈಗಳ ಮೇಲೆ,  ಭುಜಗಳ ಮೇಲೆ ಹಾಗೂ ಮೊಣಕಾಲುಗಳ ಮೇಲೆ ತರಚು ಗಾಯಗಳಾಗಿ ತನ್ನ ಮಗನಿಗೆ ಪ್ರಜ್ಞೆ ತಪ್ಪಿರುತ್ತೆ. ಸ್ಥಳದಲ್ಲಿದ್ದವರನ್ನು ವಿಚಾರ ಮಾಡಲಾಗಿ ತನ್ನ ಮಗ ಮನೆಗೆ ಬರಲು ಬಾಬು ರವರ ಬಾಬತ್ತು ನೋಂದಣಿ ಸಂಖ್ಯೆ ಇಲ್ಲದ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಮದ್ಯಾಹ್ನ ಸುಮಾರು 1.30 ಗಂಟೆ ಸಮಯದಲ್ಲಿ ಬರುತ್ತಿದ್ದಾಗ ಯಾವುದೋ ವಾಹನದ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮಗ ಬರುತ್ತಿದ್ದ ಪಲ್ಸರ್ ದ್ವಿಚಕ್ರ ವಾಹನಕ್ಕೆ  ಡಿಕ್ಕಿ ಹೊಡೆಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೋರಟು ಹೋಗಿರುವುದಾಗಿ ತಿಳಿಯಿತು. ನಂತರ ಗಾಯಗೊಂಡ ತನ್ನ ಮಗನನ್ನು ತಾನು ಮತ್ತು ಸ್ಥಳದಲ್ಲಿದ್ದ ತಮ್ಮ ಸಂಬಂದಿಕರಾದ ಟಿ.ಪೆದ್ದನಹಳ್ಳಿ ಗ್ರಾಮದ ರವಿ ಬಿನ್ ನಾರಾಯಣಪ್ಪ ರವರು ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತೇವೆ. ಅಲ್ಲಿ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬ್ಯುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಹೋಗಿರುತ್ತೇವೆ. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಆಂಬ್ಯುಲೆನ್ಸ್ ನಲ್ಲಿ ತನ್ನ ಗಂಡ ಮೂರ್ತಿ ಬಿನ್ ಚಿಕ್ಕಪ್ಪಯ್ಯರವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಯಲಹಂಕದ ಕೆ ಕೆ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತಾನೆ. ತನ್ನ ಮಗನಿಗೆ ಇದುವರೆವಿಗೂ ಸಹ ಪ್ರಜ್ಞೆ ಬಾರದೇ ಇದ್ದು ತಾವು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ಹೋಗಿದ್ದರಿಂದ ದೂರನ್ನು ನೀಡಲು ಸಾದ್ಯವಾಗದೇ ಈ ದಿನ ಠಾಣೆಗೆ ಬಂದು ತಡವಾಗಿ ದೂರನ್ನು ನೀಡುತ್ತಿರುತ್ತೇನೆ. ಆದ್ದರಿಂದ ತನ್ನ ಮಗನಿಗೆ ಅಪಘಾತ ಪಡಿಸಿದ ವಾಹನ ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.174/2020 ಕಲಂ: 15(A),32(3) ಕೆ.ಇ ಆಕ್ಟ್:-

          ದಿನಾಂಕ;26/10/2020 ರಂದು ಬೆಳಿಗ್ಗೆ 11-15 ಗಂಟೆಗೆ ಪಿ ಎಸ್ ಐ ಶ್ರೀ ಪಸನ್ನ ಕುಮಾರ್ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ದಿನಾಂಕ:26/10/2020 ರಂದು ಬೆಳಿಗ್ಗೆ 10:00 ಗಂಟೆಯಲ್ಲಿ ತಾನು ಗೌರಿಬಿದನೂರು ನಗರದಲ್ಲಿ ಗಸ್ತಿನಲ್ಲಿ ಇದ್ದಾಗ ಸಾರ್ವಜನಿಕರು ಪೋನ್ ಮಾಡಿ ಗೌರಿಬಿದನೂರು ನಗರದ  ನದಿಗಡ್ಡೆ ಬ್ರಡ್ಜ್ ನ ಬಳಿ  ಯಾರೋ ಆಸಾಮಿ ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯೆ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದರು .ಕೂಡಲೇ ತಾನು ಠಾಣೆಗೆ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ತಮ್ಮ ಠಾಣಾ ಸಿಬ್ಬಂದಿಯವರಾದ ಪಿ.ಸಿ-201 ಸುರೇಶ್ ರವರನ್ನು ಕರೆದುಕೊಂಡು ಮಾಹಿತಿಯಂತೆ ಸರ್ಕಾರಿ ಜೀಪಿನಲ್ಲಿ  ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಜೀಪನ್ನು ನಿಲ್ಲಿಸಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ನದಿಗಡ್ಡೆ ಬ್ರಡ್ಜ್ ನ ಬಳಿ ಸಾರ್ವಜನಿಕ ಸ್ಥಳದಲ್ಲಿ ಮದ್ಯೆ ಸೇವನೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಮದ್ಯೆ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ಕಂಡು ಮದ್ಯೆ ಸೇವನೆ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು ಮಾಹಿತಿಯಂತೆ ಮದ್ಯೆ ಸರಬರಾಜು ಮಾಡುತ್ತಿದ್ದ ಆಸಾಮಿಯಮನ್ನು ಸುತ್ತುವರೆದು ಹೆಸರು ಮತ್ತು ವಿಳಾಸ ಕೇಳಲಾಗಿ ಶ್ರೀನಾಥ ಬಿನ್ ಸಿದ್ದರಾಮಪ್ಪ,25 ವರ್ಷ.ನಾಯಕ ಕೂಲಿ ಕೆಲಸ ವಾಸ;ಗಂಗಸಂದ್ರ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದನು ಸದರಿ ಆಸಾಯನ್ನು ತಾವುಗಳು ಸಾರ್ವಜನಿಕರಿಗೆ ಮದ್ಯೆ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ  ಯಾವುದದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ರೀತಿ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ1) 90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 16 ಟೆಟ್ರಾ ಪಾಕೆಟ್ ಗಳು 2)  90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 04 ಖಾಲಿ ಟೆಟ್ರಾ ಪಾಕೆಟ್ ಗಳು 3) 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ಗಳು 4)ಎರಡು ಲೀಟರ್ ಸಾಮರ್ಥ್ಯದ ಒಂದು ಖಾಲಿ ಪ್ಲಾಸ್ಟಿಕ್  ವಾಟರ್ ಬಾಟಲ್ ಇರುತ್ತೆ ಮದ್ಯೆವಿರುವ ಪಾಕೆಟ್ಗಗಳ ಮೇಲೆ ಇರುವ ಬೆಲೆಯನ್ನು ನೋಡಲಾಗಿ 35.13 ರೂಪಾಯಿಗಳೆಂತ ಇರುತ್ತೆ ಇದರ ಒಟ್ಟು ಬೆಲೆ 562.08 ರೂ ಗಳಾಗಿರುತ್ತೆ  ಮತ್ತು ಇದರ ಒಟ್ಟು ದ್ರವ್ಯ ಪ್ರಮಾಣ ಒಂದು ಲೀಟರ್ ನಾಲ್ಕು ನೂರು ನಲವತ್ತು ಎಮ್ ಎಲ್ ಆಗಿರುತ್ತೆ .ಮೇಲ್ಕಂಡ ಅಸಾಮಿಯನ್ನು ಮತ್ತು ಮಾಲುಗಳನ್ನು ಪಂಚನಾಮೆಯ ಮೂಲಕ ಬೆಳಿಗ್ಗೆ 10-30 ಗಂಟೆಯಿಂದ 11-00 ಗಂಟೆಯ ವರೆಗೆ  ಠಾಣಾ ಲ್ಯಾಪ್ ನಲ್ಲಿ ಟೈಪ್ ಮಾಡಿದ ಪಂಚನಾಮೆಯ ಮೂಲಕ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 11-15 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ಠಾಣಾಧಿಕಾರಿಗಳಿಗೆ ನೀಡಿದ ವರದಿಯನ್ನು ಪ್ರಕರಣ ದಾಖಲಿಸಿರುತ್ತೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.175/2020 ಕಲಂ: 15(A),32(3) ಕೆ.ಇ ಆಕ್ಟ್:-

          ದಿನಾಂಕ;26/10/2020 ರಂದು ಮಧ್ಯಾಹ್ನ 2-00 ಗಂಟೆಯಲ್ಲಿ ಪಿ,ಎಸ್,ಐ  ಸಾಹೇಬರಾದ ಶ್ರೀ ಪ್ರಸನ್ನ ಕುಮಾರ್ ರವರು ನೀಡಿದ ವರಧಿಯ ಸಾರಾಂಶವೇನೆಂದರೆ ತಾನು ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ ಆಗಿ ಕರ್ತವ್ಯ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿನಾಂಕ:26/10/2020 ಮಧ್ಯಾಹ್ನ 1;00 ಗಂಟೆಯಲ್ಲಿ  ತಾನು ಗೌರಿಬಿದನೂರು ನಗರದಲ್ಲಿ ಗಸ್ತಿನಲ್ಲಿ ಇದ್ದಾಗ ಸಾರ್ವಜನಿಕರು ಪೋನ್ ಮಾಡಿ ಗೌರಿಬಿದನೂರು ನಗರದ  ಆಚಾರ್ಯ ಕಾಲೇಜು  ಬಳಿಯ ಅಂಡರ್ ಪಾಸ್ ನ ಬಳಿ   ಯಾರೋ ಆಸಾಮಿ ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯೆ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದರು .ಕೂಡಲೇ ತಾನು ಠಾಣೆಗೆ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ನಮ್ಮ ಠಾಣಾ ಸಿಬ್ಬಂದಿಯವರಾದ ಪಿ.ಸಿ-201 ಸುರೇಶ್ ರವರನ್ನು ಕರೆದುಕೊಂಡು ಮಾಹಿತಿಯಂತೆ ಸರ್ಕಾರಿ ಜೀಪಿನಲ್ಲಿ  ಆಚಾರ್ಯ ಕಾಲೇಜು  ಬಳಿ ಜೀಪನ್ನು ಮರೆಯಲ್ಲಿ  ನಿಲ್ಲಿಸಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ಆಚಾರ್ಯ ಕಾಲೇಜು  ಬಳಿಯ ಅಂಡರ್ ಪಾಸ್ ನ ಬಳಿ   ಸಾರ್ವಜನಿಕ ಸ್ಥಳದಲ್ಲಿ ಮದ್ಯೆ ಸೇವನೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಮದ್ಯೆ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ಕಂಡು ಮದ್ಯೆ ಸೇವನೆ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು ಮಾಹಿತಿಯಂತೆ ಮದ್ಯೆ ಸರಬರಾಜು ಮಾಡುತ್ತಿದ್ದ ಆಸಾಮಿಯಮನ್ನು ಸುತ್ತುವರೆದು ಹೆಸರು ಮತ್ತು ವಿಳಾಸ ಕೇಳಲಾಗಿ ಗಂಗಪ್ಪ ಬಿನ್ ಲೇಟ್ ಕುಂಟಿ ಗಂಗಪ್ಪ,68 ವರ್ಷ,ಆದಿ ಕರ್ನಾಟಕ, ವ್ಯವಸಾಯ ,ವಾಸ:ಕಾದಲವೇಣಿ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದನು ಸದರಿ ಆಸಾಮಿಯನ್ನು ತಾವುಗಳು ಸಾರ್ವಜನಿಕರಿಗೆ ಮದ್ಯೆ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ  ಯಾವುದದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ರೀತಿ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ1) 90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 12 ಟೆಟ್ರಾ ಪಾಕೆಟ್ ಗಳು 2)  90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ಗಳು 4) ಒಂದು ಲೀಟರ್ ಸಾಮರ್ಥ್ಯದ ಒಂದು ಖಾಲಿ ಪ್ಲಾಸ್ಟಿಕ್  ವಾಟರ್ ಬಾಟಲ್ ಇರುತ್ತೆ .ಮದ್ಯೆವಿರುವ ಪಾಕೆಟ್ಗಗಳ ಮೇಲೆ ಇರುವ ಬೆಲೆಯನ್ನು ನೋಡಲಾಗಿ 35.13 ರೂಪಾಯಿಗಳೆಂತ ಇರುತ್ತೆ ಇದರ ಒಟ್ಟು ಬೆಲೆ 421  ರೂ ಗಳಾಗಿರುತ್ತೆ  ಮತ್ತು ಇದರ ಒಟ್ಟು ದ್ರವ್ಯ ಪ್ರಮಾಣ ಒಂದು ಲೀಟರ್ ಎಂಭತ್ತು  ಎಮ್. ಎಲ್. ಆಗಿರುತ್ತೆ .ಮೇಲ್ಕಂಡ ಅಸಾಮಿಯನ್ನು ಮತ್ತು ಮಾಲುಗಳನ್ನು ಪಂಚನಾಮೆಯ ಮೂಲಕ ಮದ್ಯಾಹ್ನ 01-15 ಗಂಟೆಯಿಂದ 01-45 ಗಂಟೆಯ ವರೆಗೆ  ಠಾಣಾ ಲ್ಯಾಪ್ ಟ್ಯಾಪ್ ನಲ್ಲಿ ಟೈಪ್ ಮಾಡಿದ ಪಂಚನಾಮೆಯ ಮೂಲಕ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಮಧ್ಯಾಹ್ನ 2-00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ನೀಡಿದ ವರಧಿಯನ್ನು ಪಡೆದು ಪ್ರಕಣ ದಾಖಲಿಸಿರುತ್ತೆ .

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.176/2020 ಕಲಂ: 420,323,504,506 ಐ.ಪಿ.ಸಿ & 66 INFORMATION TECHNOLOGY ACT 2000 :-

          ದಿನಾಂಕ 26/10/2020 ರಂದು ಮದ್ಯಾಹ್ನ 2:20 ಗಂಟೆಯಲ್ಲಿ ಪಿರ್ಯಾದಿ ಠಾಣೆಗೆ ಹಾಜರಾಗಿ ಕೊಟ್ಟ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ತಾನು ರಾಯಚೂರಿನಲ್ಲಿ ತಮ್ಮ ತಂದೆಯೊಂದಿಗೆ ವಾಸವಿದ್ದು ಅಲ್ಲಿಯೇ ದಂದ ವೈದ್ಯಕೀಯ ಪದವಿಯನ್ನು ಪಡೆದು 2006 ನೇ ಸಾಲಿನಲ್ಲಿ ಪಣಿ ಪಾಟೀಲ್ ಎಂಬುವರೊಂದಿಗೆ ಮದುವೆ ಮಾಡಿಕೊಂಡಿದ್ದು ನಂತರ 2007 ನೇ ಸಾಲಿನಲ್ಲಿ ನಮಗೆ ಒಂದು ಗಂಡು ಮಗುವಾಗಿದ್ದು ತದನಂತರದಲ್ಲಿ ತಮ್ಮ ತಂದೆಯು ಮೃತಪಟ್ಟ ನಂತರ ಗಂಡ ಮತ್ತು ಅವರ ಮನೆಯವರೊಂದಿಗೆ ಹೊಂದಾಣಿಕೆ ಬಾರದ ಕಾರಣ ತಾನು 2014 ನೇ ಸಾಲಿನಲ್ಲಿ ಗಂಡನಿಂದ ವಿಚ್ಛೇದನವನ್ನು ಪಡೆದುಕೊಂಡಿರುತ್ತೇನೆ. ತಾನು ರಾಯಚೂರಿನ ಗಾಂಧಿಚೌಕ್ ಕೆನರಾ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು ಈ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ AS ಬಾಬು @ A ಸುರೇಶ್ ಬಾಬು ಎಂಬುವರು ತನ್ನ ಮೊಬೈಲ್ ನಂಬರ್ ನ್ನು ಬ್ಯಾಂಕ್ ನಲ್ಲಿ ಪಡೆದುಕೊಂಡು ತನಗೆ ಕರೆ ಮಾಡಿ ಪರಿಚಯಿಸಿಕೊಂಡು ಸಾಂತ್ವನ ಮಾಡುವ ನೆಪದಲ್ಲಿ ತನ್ನನ್ನು ಲೈಂಗಿಕವಾಗಿ ಉಪಯೋಗಿಸಿಕೊಂಡು ತನ್ನ ಮಗನಿಮದ ತನ್ನನ್ನು ಬೇರೆ ಮಾಡಿ ರಾಯಚೂರಿನ ಸ್ವಾತಿ ಪಿ.ಜಿ ಹಾಸ್ಟೆಲ್ ನಲ್ಲಿ ಇರಿಸಿಕೊಂಡು ತನ್ನೊಂದಿಗೆ ತನ್ನ ಬಯಕೆಗಳನ್ನು ತೀರಿಸಿಕೊಳ್ಳುತ್ತಿದ್ದ. ಹಾಗೂ ತನ್ನ ಹೆಸರಿನಲ್ಲಿದ್ದ ರಾಯಚೂರಿನಲ್ಲಿನ ನಿವೇಶನ ಹಿಂದೂಪುರದಲ್ಲಿನ ನಿವೇಶನಗಳನ್ನು ಮಾರಾಟ ಮಾಡಿಸಿ ತನ್ನ ಬಳಿ ಇದ್ದ ಬಂಗಾರದ ಒಡವೆಗಳನ್ನೆಲ್ಲಾ ಮಾರಾಟ ಮಾಡಿಸಿ ಸದರಿ ಹಣವನ್ನು ಪಡೆದುಕೊಂಡು ಅವರ ಸ್ವಂತ ಊರಾದ ರಾಯಚೂರು ಬಳಿ ಇರುವ ಅರಿಕೆರೆಯಲ್ಲಿ 2 ಕೋಟಿ ಮೌಲ್ಯದ ಮನೆಯನ್ನು ಕಟ್ಟಿಸಿಕೊಂಡಿರುವುದಲ್ಲದೆ ಆತನು ಬೆಂಗಳೂರಿನ ಕಂಟೋನ್ ಮೆಂಟ್ ಶಾಖೆಗೆ ವರ್ಗಾವಣೆಯಾದಾಗ ತನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ವಿಜಯನಗರ ಹಾಗೂ ದಾಸರಹಳ್ಳಿಯಲ್ಲಿ ಬಾಡಿಗೆ ಮನೆಗಳನ್ನು ಮಾಡಿಕೊಂಡು ಗಂಡ ಹೆಂಡತಿಯಂತೆ ಜೀವನ ನಡೆಸುತ್ತಿದ್ದೆವು. ಈ ಸಮಯದಲ್ಲಿ ತಾನು ಕೆಲಸ ಮಾಡಿ ಸಂಪಾದನೆ ಮಾಡಿದ ಸಂಬಳದ ಹಣವನ್ನು ಸಹ ಸುರೇಶ್ ಬಾಬು ರವರೆ ಪಡೆದುಕೊಳ್ಳುತ್ತಿದ್ದುಲ್ಲದೆ ತಮ್ಮ ತಾಯಿಯಿಂದಲೂ ಸಹ 2,50,000 ರೂಪಾಯಿ ಹಣವನ್ನು ಪಡೆದುಕೊಂಡು ತನ್ನನ್ನು ಮದುವೆ ಮಾಡಿಕೊಳ್ಳುತ್ತೇನೆಂದು ವಂಚಿಸಿರುತ್ತಾನೆ. ಆದರೆ AS ಬಾಬು ರವರಿಗೆ ಈಗಾಗಲೇ ಮದುವೆಯಾಗಿರುವ ವಿಷಯವನ್ನು ಮುಚ್ಚಿಟ್ಟು ತನಗೆ ಬಾಳು ಕೊಡುವುದಾಗಿ ನಂಬಿಸಿ ತನ್ನ ಬಳಿ ಇದ್ದ ಆಸ್ತಿ ಹಣವನ್ನೆಲ್ಲಾ ಪಡೆದುಕೊಮಡಿದ್ದಲ್ಲದೆ ತನ್ನ ಮೇಲೆ ಹರಿಕೆರೆಯಲ್ಲಿ ಹಲ್ಲೆ ನಡೆಸಿ ಪ್ರಾಣಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತನಗೆ ಮೋಸ ಮಾಡಿರುವುದರಿಂದ ಈತನು ತನ್ನಿಂದ ಪಡೆದಿರುವ ನಿವೇಶನಗಳು ಬಂಗಾರದ ಆಭರಣಗಳನ್ನು ಮಾರಾಟ ಮಾಡಿ ನೀಡಿರುವ ಹಣ ಹಾಗೂ ನಗದಾಗಿ ಪಡೆದಿರುವ ಹಣವನ್ನು ವಾಪಸ್ಸು ಕೊಡಿಸಿ ಈತನ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ತಾನು ಪ್ರಾಣ ಬೆದರಿಕೆಯಿಂದ ರಾತ್ರಿ ಸಮಯದಲ್ಲಿ ಮನೆಯಿಂದ ಹೊರಗೆ ಬಂದ ನಂತರ ಫೋನ್ ನ SMS ಹಾಗೂ ವಾಟ್ಸಪ್ ಗಳ ಮೂಲಕ ಬೆದರಿಕೆಯ ಸಂದೇಶಗಳನ್ನು ಹಾಕಿ ತನಗೆ ತೊಂದರೆ ಮಾಡುತ್ತಿರುವುದರಿಂದ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.69/2020 ಕಲಂ: 279,304(ಎ) ಐ.ಪಿ.ಸಿ :-

          ದಿನಾಂಕ;26-10-2020 ರಂದು ಬೆಳಗ್ಗೆ 04-00 ಗಂಟೆಗೆ ಪಿರ್ಯಾದುದಾರರಾದ ವಿಶ್ವಪ್ರಸಾದ್ ಬಿನ ಕಲ್ಲು ವಿಜಯ್ಕುಮಾರ್ ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ನಮ್ಮ ತಂದೆ ತಾಯಿಗೆ ಒಟ್ಟು 5 ಜನ ಮಕ್ಕಳು 1 ನೇ ಸೌಜನ್ಯ 2 ನೆ ನಾನು 3 ನೆ ಸೌಬಾಗ್ಯ 4 ನೆ ಶ್ಯಾಮ್ ಪ್ರಸಾದ್ 5 ಸ್ವಪ್ನ  ಎಂಬ ಮಕ್ಕಳಿದ್ದು ಮೊದಲನೆ ಅಕ್ಕನಿಗೆ ಮಾತ್ರ ಮದುವೆಯಾಗಿದ್ದು ಉಳಿದ ಯಾರಿಗೂ ಮದುವೆ ಆಗಿರುವುದಿಲ್ಲಾ, ನಾನು ಈಗ್ಗೆ 10 ವರ್ಷದ ಹಿಂದೆ ನಮ್ಮ ಗ್ರಾಮದಿಂದ ಬೆಂಗಳೂರಿಗೆ ಬಂದು ಬಜಾಜ್ ಹೌಸಿಂಗ್ ಪೈನಾನ್ಸ್ ಲಿಮಿಟೆಡ್ನಲ್ಲಿ ಕೆಲಸ ಮಾಡಿಕೊಂಡು ಮಾರತಹಳ್ಳಿಯಲ್ಲಿ ವಾಸವಿರುತ್ತೇನೆ, ನಮ್ಮ ತಮ್ಮ ಶ್ಯಾಮ್ ಪ್ರಸಾದ್ ರವರು ಸಹಃ ಈಗ್ಗೆ 2 ವರ್ಷದ ಹಿಂದೆ ಬೆಂಗಳೂರಿಗೆ ಬಂದು ಪ್ಲಿಪ್ ಕಾರ್ಟಿನಲ್ಲಿ ಡಿಲೆವರಿ ಬಾಯ್ ಆಗಿ ಕೆಲಸ ಮಾಡಿಕೊಂಡು ನನ್ನ ಜೊತೆಯಲ್ಲಿಯೆ ಮಾರತಹಳ್ಳಿಯೇ ವಾಸವಾಗಿರುತ್ತಾನೆ, ನನ್ನ ತಮ್ಮನ ಜೊತೆಯಲ್ಲಿ ರಾಯಚೂರಿನ ಮಲಿಂಗರಾಯನೂ ಸಹಃ ಅದೇ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ 25-10-2020 ರಂದು ಬೆಳಗ್ಗೆ ವಿಜಯಪುರದಲ್ಲಿ ಅವನ ಸ್ನೇಹಿತನ ಮದುವೆ ಇದ್ದ ಕಾರಣ ಮದುವೆಗೆ ಮಲಿಂಗರಾಯನ ಜೊತೆಯಲ್ಲಿ ಹೋಗಿ ಬರುವುದಾಗಿ ನನಗೆ ಹೇಳಿ ಅವನ ಬಾಬತ್ತು ದ್ವಿಚಕ್ರ ವಾಹನ ಸಂಖ್ಯೆ ಕೆಎ-53-ವೈ-4195  ನೊಂದಣಿಯ  ಪಲ್ಸರ್ ದ್ವಿಚಕ್ರ ವಾಹನದಲ್ಲಿ ಹೋದನು. ನಾನು ನನ್ನ ಕೆಲಸವನ್ನು ಮಾಡಿಕೊಂಡು ಮನೆಯಲ್ಲಿದ್ದಾಗ  ಸಂಜೆ ಸುಮಾರು 5-40 ಗಂಟೆಯ ಸಮಯದಲ್ಲಿ ನಾನು ನನ್ನ ತಮ್ಮನ ಪೋನಿಗೆ ಪೋನ್ ಮಾಡಿದಾಗ ಮನೋಜ್ ಕುಮಾರ್ ಎಂಬುವರು ಪೋನ್ ರಿಸೀವ್ ಮಾಡಿ ನನಗೆ ತಿಳಿಸಿದ ವಿಚಾರವೇನೆಂದರೆ ಬೆಳಗ್ಗೆ ವಿಜಯಪುರದಲ್ಲಿ ಮದುವೆಯನ್ನು ಮುಗಿಸಿಕೊಂಡು ಅಲ್ಲಿಂದ ಶ್ರೀನಿವಾಸ ಸಾಗರ ಜಲಾಶಯಕ್ಕೆ  ಹೋಗಿ ನೋಡಿಕೊಂಡು ಪುನಃ ವೈಟ್ ಪೀಲ್ಡಿಗೆ ಬರುವಾಗ  ಸಂಜೆ ಸುಮಾರು 5-20 ಗಂಟೆಯ ಸಮಯದಲ್ಲಿ ಚಿಕ್ಕಮರಳಿ ಗೇಟಿನಲ್ಲಿ ನಾನು ಹಿಂದೆ ಶ್ಯಾಂಪ್ರಸಾದ್ ಮುಂದೆ ಹೋಗುತ್ತಿದ್ದಾಗ ನಮ್ಮ ಹಿಂದಿನಿಂದ ಅಂದರೆ ಹೈದರಾಬಾದ್ ಕಡೆಯಿಂದ ಬಂದಂತಹ RJ-11-GB-4746 ನೊಂದಣಿಯ ಲಾರಿಯ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ  ಮಾಡಿಕೊಂಡು ಬಂದು ಶ್ಯಾಮ್ ಪ್ರಸಾದ್ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆಯಿಸಿದ ಪರಿಣಾಮ ಶ್ಯಾಮ್ ಪ್ರಸಾದ್ ಮತ್ತು  ಮಲಿಂಗರಾಯನು  ರಸ್ತೆಯ ಮೇಲೆ ಬಿದ್ದು ಹೋದಾಗ ಲಾರಿಯು ಅವರ ಮೇಲೆ ಹತ್ತಿದ ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ವಿಚಾರ ತಿಳಿಸಿದನು, ನಾನು ತಕ್ಷಣ ಚಿಕ್ಕಬಳ್ಳಾಪುರಕ್ಕೆ ಬಂದಾಗ  ವಿಚಾರ ನಿಜವಾಗಿತ್ತು, ಅಪಘಾತದ ವಿಚಾರವನ್ನು  ನಮ್ಮ ತಂದೆ ತಾಯಿಗೆ ತಿಳಿಸಿ ಅವರು ಬಂದ ನಂತರ ತಡವಾಗಿ ಬಂದು ದೂರನ್ನು ನೀಡುತ್ತಿದ್ದು  ನನ್ನ ತಮ್ಮನ ದ್ವಿಚಕ್ರ ವಾಹನ ಸಂಖ್ಯೆ KA-53-Y-4195 ನೊಂದಣಿಯ ಪಲ್ಸರ್ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿ ಶ್ಯಾಮ್ ಪ್ರಸಾದ್ ಮತ್ತು ಮಲಿಂಗರಾಯನ ಸಾವಿಗೆ ಕಾರಣನನಾದ RJ-11-GB-4746 ನೊಂದಣಿಯ ಲಾರಿಯ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರವವರದಿ.