ದಿನಾಂಕ :26/07/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 175/2020 ಕಲಂ. 279,337,304(A) ಐ.ಪಿ.ಸಿ:-

          ದಿ: 25-07-2020 ರಂದು ಪಿರ್ಯಾಧಿದಾರರಾದ ಸಾಕಲಿ ರಾಮಲಕ್ಷ್ಮೀ ಕೋಂ ಸಾಕಲಿ ಶ್ರೀರಾಮುಲು, 59 ವರ್ಷ, ದೋಬಿ ಜನಾಂಗ, ಕುಲಕಸುಬು, #6/103, ಚಿತ್ರಾವತಿ ರೋಡ್, ಪುಟ್ಟಪರ್ತಿ ಟೌನ್, ಅನಂತಪುರ ಜಿಲ್ಲೆ, ಆಂದ್ರಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ನನ್ನ ಕೊನೆಯ ಮಗನಾದ ಸಿ.ಚಂದ್ರಶೇಖರ್ ನು[ 27 ವರ್ಷ] ಕಾರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು.  ಇವನು ಈಗ್ಗೆ 6 ವರ್ಷಗಳ ಹಿಂದೆ ನಮ್ಮ ಬೀಧಿಯಲ್ಲಿಯೇ ವಾಸವಿದ್ದ ಮಹಬೂಬ್ ಭೀ ರವರ ಮಗಳಾದ ಷಾಹಿನಾ @ ಸಾಯಿಪ್ರಿಯಾ ರವರನ್ನು ಪ್ರೀತಿಸಿ ವಿಚಾಹ ಮಾಡಿಕೊಂಡಿರುತ್ತಾನೆ.  ಇವರಿಗೆ ಜೈ ಈಶ್ವರ್ ಎಂಬ 5 ವರ್ಷದ ಮಗನಿದ್ದು, ಈಗ ನನ್ನ ಸೊಸೆ ಗರ್ಬಿಣಿಯಾಗಿರುತ್ತಾಳೆ.  ದಿ: 22-07-2020 ರಂದು ಮದ್ಯಾಹ್ನ 1:00 ಗಂಟೆಯಲ್ಲಿ ವಾಲಿಬಾಲ್ ಆಡಲು ಹೋಗುವುದಾಗಿ ಹೇಳಿ ಹೋದನು.  ನಂತರ ಸಂಜೆ ಸುಮಾರು 5:30 ಗಂಟೆಯಲ್ಲಿ ನನ್ನ ಮಗ ಚಂದ್ರಶೇಖರನ ಸ್ನೇಹಿತನಾದ ಸತೀಶ್ ರವರು ನನಗೆ ಫೋನ್ ಮಾಡಿ ಮದ್ಯಾಹ್ನ ನಾನು ಹಾಗೂ ಚಂದ್ರೇಶೇಖರ್ ಇಬ್ಬರೂ ಬಾಗೇಪಲ್ಲಿಗೆ ಹೋಗಲು ಮಹಮದ್ ರಫೀ ರವರ ಬಾಬತ್ತು AP-02-BB-8441 ಬಜಾಜ್ ಪಲ್ಸರ್ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಬಾಗೇಪಲ್ಲಿಗೆ ಕೆಲಸದ ನಿಮಿತ್ತ ಬರುವಾಗ, ಮದ್ಯಾಹ್ನ ಸುಮಾರು 3:30 ಗಂಟೆ ಸಮಯದಲ್ಲಿ ಬರುತ್ತಿದ್ದಾಗ, ಬಾಗೇಪಲ್ಲಿ ತಾಲ್ಲೂಕು ಆರ್.ಟಿ.ಓ ಕಛೇರಿಯ ಸಮೀಪ NH-44 ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಚಂದ್ರಶೇಖರ್ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ NH ರಸ್ತೆಯ ಪೂರ್ವದ ಕಡೆಯಲ್ಲಿ ರಸ್ತೆಯ ಮದ್ಯದ ಡಿವೈಡರ್ ಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ಚಂದ್ರಶೇಖರ್ ರವರ ತಲೆಗೆ ರಕ್ತಗಾಯವಾಗಿ ತನಗೆ ಎಡಕಾಲಿಗೆ ರಕ್ತಗಾಯವಾಗಿದ್ದು, ಚಂದ್ರಶೇಖರ್ ಗೆ ಹೊಟ್ಟೆಗೆ ತರಚಿತ ಗಾಯಗಳಾಗಿರುವುದಾಗಿ ತಿಳಿಸಿದನು.  ನಂತರ ಸಾರ್ವಜನಿಕರು ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದರು. ನನ್ನ ಮಗ ಚಂದ್ರಶೇಖರರ ಸ್ನೇಹಿತ ನವೀನ್ ರವರು ತಲೆಗೆ ಗಾಯವಾಗಿದ್ದ ನನ್ನ ಮಗನನ್ನು ಬೆಂಗಳೂರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ನಂತರ ಮಹಮದ್ ರಫೀಕ್ ರವರು ಅನಂತಪುರದ ಸವೇರಾ ಆಸ್ಪತ್ರೆಗೆ ಅಲ್ಲಿಂದ ಕರ್ನೂಲು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿರುತ್ತಾರೆ.  ನಾನು ನಮ್ಮ ಸೊಸೆ ಷಾಹಿಣಾ @ ಸಾಯಿ ಪ್ರಿಯಾ ರವರುಗಳು ನನ್ನ ಮಗನಿಗೆ ಚಿಕಿತ್ಸೆಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ದಿ: 25-07-2020 ರಂದು ಬೆಳಗಿನ ಜಾವ 1:30 ಗಂಟೆಗೆ ಮೃತಪಟ್ಟಿರುತ್ತಾನೆ.  ನನ್ನ ಮಗ ಚಂದ್ರಶೇಖರನು AP-02-BB-8441 ಬಜಾಜ್ ಪಲ್ಸರ್ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತವನ್ನುಂಟು ಮಾಡಿದ ಪರಿಣಾಮವಾಗಿ ಆದ ಗಾಯಗಳ ದೆಸೆಯಿಂದ ಮೃತಪಟ್ಟಿರುತ್ತಾನೆ.  ಮೃತನ ಸಾವಿನಲ್ಲಿ ಯಾವುದೇ ಅನುಮಾನವಿರುವುದಿಲ್ಲ.  ಖಾವಂದಿರು ಮುಂದಿನ ಕ್ರಮ ಜರುಗಿಸಲು ಕೋರುತ್ತೇನೆ, ಎಂದು ನೀಡಿದ ದೂರು.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 176/2020 ಕಲಂ. 143,147,148,332,353,436 ರೆ/ವಿ 149 ಐ.ಪಿ.ಸಿ:-

          ದಿ: 25-07-2020 ರಂದು ಮದ್ಯಾಹ್ನ 3:30 ಗಂಟೆಗೆ ಪಿ.ಸಿ 01 ನರಸಿಂಹಪ್ಪ ರವರು ಠಾಣೆಗೆ ಹಾಜರಾಗಿ ಪಿ.ಎಸ್.ಐ ಸಾಹೇಬರವರು ನೀಡಿದ ದೂರನ್ನು ಹಾಜರುಪಡಿಸಿದನ್ನು ಸ್ವೀಕರಿಸಿದ್ದರ ಸಾರಾಂಶ – ದಿ: 24-07-2020 ರಂದು ರಾತ್ರಿ ಸುಮಾರು 10:00 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಠಾಣಾ ಸರಹದ್ದು ಯಗವಮದ್ದಲಖಾನ ಗ್ರಾಮದ ವಾಸಿಯಾದ ಹರೀಶ ಬಿನ್ ನಾಗರಾಜ ರವರು ಗೂಳೂರುನಿಂದ ಯಗವಮದ್ದಲಖಾನ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಅದೇ ಗ್ರಾಮದ  ವೆಂಕಟೇಶಪ್ಪ ಬಿನ್ ನಾರಾಯಣಪ್ಪ ಮತ್ತು ಗಣೇಶ ಬಿನ್ ಗಂಗುಲಪ್ಪ ರವರು, ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಹರೀಶ ರವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿ ಯಾವುದೋ ಆಯುಧದಿಂದ ತಲೆಗೆ ಹೊಡೆದು ಕೆಳಕ್ಕೆ ಬೀಳಿಸಿ ಚಾಕುವಿನಿಂದ ಹೊಟ್ಟೆಯ ಮೇಲ್ಭಾಗದಿಂದ ಕತ್ತಿನವರೆಗೆ ಸುಮಾರು 19 ಕಡೆ ತಿವಿದು ತೀರ್ವ ಸ್ವರೂಪದ ರಕ್ತಗಾಯಗಳನ್ನುಂಟು ಮಾಡಿ ಕೊಲೆ ಮಾಡಿದ್ದಾಗಿ ನಾಗರಾಜ ರವರು ದೂರು ನೀಡಿದ್ದು, ದೂರಿನ ಆಧಾರದ ಮೇರೆಗೆ ಬಾಗೇಪಲ್ಲಿ ಠಾಣಾ ಮೊ.ಸಂ: 174/2020 ಕಲಂ: 302, ರೆ/ವಿ 34 ಐ.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ. ಈ ಸಂಬಂಧ ಹರೀಶ್ ರವರ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಯ ಬಗ್ಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ,  ತನಿಖಾಧಿಕಾರಿಯಾದ ಸಿ.ಪಿ.ಐ ಬಾಗೇಪಲ್ಲಿ ಸಾಹೇಬರವರಿಗೆ ವರಧಿ ಮಾಡಿರುತ್ತೆ.  ಮೃತ ಮತ್ತು ಆರೋಪಿತ ಕುಟುಂಬದವರು ಒಂದೇ ಗ್ರಾಮದವರಾಗಿರುವುದರಿಂದ ಇಬ್ಬರ ಕುಟುಂಬ ಮತ್ತು ಸಂಬಂಧಿಕರು ಮತ್ತು ಬೆಂಬಲಿಗರ ನಡುವೆ ಗಲಾಟೆಯಾಗದಂತೆ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡಲು ಬೆಳಿಗ್ಗೆ ಠಾಣೆಯ ಸಿಬ್ಬಂಧಿಯವರಾದ ಹೆಚ್.ಸಿ 103 ಶಂಕರರೆಡ್ಡಿ, ಮ.ಹೆಚ್.ಸಿ 238  ಪದ್ಮಮ್ಮ, ಪಿ.ಸಿ 76 ಸುರೇಶ, ಪಿ.ಸಿ 83 ಮಂಜುನಾಥ, ಪಿ.ಸಿ 82 ದೇವರಾಜ, ಮ.ಹೆಚ್.ಸಿ 164 ಮಮತಮ್ಮ, ಹೆಚ್.ಸಿ 212 ಶ್ರೀನಾಥ, ಪಿ.ಸಿ 527 ಮಧುಸೂದನ, ಸಿ.ಹೆಚ್.ಸಿ 178 ಶ್ರೀಪತಿ, ಪಿ.ಸಿ 01 ನರಸಿಂಹಪ್ಪ, ಎ.ಎಸ್.ಐ ನಾರಾಯಣಸ್ವಾಮಿ, ಎ.ಎಸ್.ಐ ರಾಮಚಂದ್ರಪ್ಪ ರವರನ್ನು ಮೃತ ಮತ್ತು ಆರೋಪಿತರ  ಮನೆಯ ಬಳಿ ಬೆಳಗ್ಗೆ 7:00 ಗಂಟೆಗೆ ನೇಮಿಸಿ ನಾನು ಸಹ ಬೆಳಗ್ಗೆ 8:00 ಗಂಟೆಗೆ ಯಗವ ಮದ್ದಲಖಾನ ಗ್ರಾಮದಲ್ಲಿಯೇ ಮೊಕ್ಕಾಂ ಮಾಡಿರುತ್ತೇನೆ.  ಸಮಯ ಸುಮಾರು ಮದ್ಯಾಹ್ನ 1:00 ಗಂಟೆಗೆ ಮೃತ ಹರೀಶನ ಸಂಬಂಧಿಕರು ಮತ್ತು ಅವರ ಬೆಂಬಲಿಗರಾದ 1] ರಮೇಶ ಬಿನ್ ಚಿನ್ನನರಸಪ್ಪ, ಜೋಗಿರೆಡ್ಡಿಪಲ್ಲಿ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು 2] ಗಂಗುಲಪ್ಪ ಬಿನ್ ನರಸಿಂಹಪ್ಪ, ಯಗವಮದ್ದಲಖಾನ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 3] ಶಂಕರ ಬಿನ್ ನರಸಿಂಹಪ್ಪ, ಯಗವಮದ್ದಲಖಾನ, ಬಾಗೇಪಲ್ಲಿ ತಾಲ್ಲೂಕು 4] ರಂಗಮ್ಮ ಕೋಂ ರಾಮಪ್ಪ, ಸದ್ದುಪಲ್ಲಿ ಗ್ರಾಮ, ಬಾಗೇಪಲ್ಲಿ 5] ಅಮೃತಾ ಬಿನ್ ನಾಗರಾಜು, ಯಗವಮದ್ದಲಖಾನ, ಬಾಗೇಪಲ್ಲಿ ತಾಲ್ಲೂಕು 6] ನರಸಿಂಹಪ್ಪ ಬಿನ್ ಬೋಡಪ್ಪ, ಪುಟ್ಟಪರ್ತಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 7] ಸಾಯಿಕುಮಾರ್ ಬಿನ್ ಆದಿನಾರಾಯಣಪ್ಪ, ಯಗವಮದ್ದಲಖಾನ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 8] ಚಂದ್ರಪ್ಪ ಬಿನ್ ಈರಪ್ಪ, ಯಗವಮದ್ದಲಖಾನ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 9] ಲಕ್ಷ್ಮೀನರಸಿಂಹಪ್ಪ ಬಿನ್ ಪೆದ್ದನರಸಿಂಹಪ್ಪ, ಯಗವಮದ್ದಲಖಾನ, ಬಾಗೇಪಲ್ಲಿ ತಾಲ್ಲೂಕು 10] ಅಂಬರೀಶ ಬಿನ್ ನರಸಿಂಹಪ್ಪ, ಯಗವಮದ್ದಲಖಾನ, ಬಾಗೇಪಲ್ಲಿ ತಾಲ್ಲೂಕು 11] ನರಸಿಂಹಪ್ಪ ಬಿನ್ ಲೇಟ್ ಮುತ್ತಪ್ಪ, ಯಗವಮದ್ದಲಖಾನ, ಬಾಗೇಪಲ್ಲಿ ತಾಲ್ಲೂಕು 12] ನಾಗರಾಜ ಬಿನ್ ಲೇಟ್ ನಾರಾಯಣಪ್ಪ, ಯಗವಮದ್ದಲಖಾನ, ಬಾಗೇಪಲ್ಲಿ ತಾಲ್ಲೂಕು 13] ಲಕ್ಷ್ಮೀನರಸಿಂಹಪ್ಪ ಬಿನ್ ಪೆದ್ದ ನರಸಿಂಹಪ್ಪ, ಯಗವಮದ್ದಲಖಾನ, ಬಾಗೇಪಲ್ಲಿ ತಾಲ್ಲೂಕು 14] ಮುತ್ತಪ್ಪ ಬಿನ್ ಗಂಗಪ್ಪ ಯಗವಮದ್ದಲಖಾನ, ಬಾಗೇಪಲ್ಲಿ ತಾಲ್ಲೂಕು 15]ನರಸಿಂಹಪ್ಪ ಬಿನ್ ಗಂಗಪ್ಪ, ಯಗವಮದ್ದಲಖಾನ, ಬಾಗೇಪಲ್ಲಿ ತಾಲ್ಲೂಕು 16] ರಾಮಚಂದ್ರ ಬಿನ್ ಗಂಗುಲಪ್ಪ, ಯಗವಮದ್ದಲಖಾನ, ಬಾಗೇಪಲ್ಲಿ ತಾಲ್ಲೂಕು  17] ನಂಜಮ್ಮ ಕೋಂ ಲೇಟ್ ಈರಪ್ಪ, ಸದ್ದುಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 18] ನರಸಿಂಹಪ್ಪ ಬಿನ್ ಕದಿರಪ್ಪ, ಪಾಕಮಾಕಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 19] ನಾಗಲಕ್ಷ್ಮಮ್ಮ ಕೋಂ ಗಂಗುಲಪ್ಪ, ಯಗವಮದ್ದಲಖಾನ, ಬಾಗೇಪಲ್ಲಿ ತಾಲ್ಲೂಕು 20] ಅಲುವೇಲಮ್ಮ ಕೋಂ ನರಸಿಂಹಪ್ಪ, ಯಗವಮದ್ದಲಖಾನ, ಬಾಗೇಪಲ್ಲಿ ತಾಲ್ಲೂಕು 21] ಗಂಗರಾಜು ಬಿನ್ ನಾಗಪ್ಪ, ಯಗವಮದ್ದಲಖಾನ, ಬಾಗೇಪಲ್ಲಿ ತಾಲ್ಲೂಕು 22] ಚಂದ್ರು ಬಿನ್ ಶ್ರೀರಾಮಪ್ಪ, ಚಿಲಮತ್ತೂರು ಗ್ರಾಮ, ಹಿಂದೂಪುರಂ ತಾಲ್ಲೂಕು, ಆಂದ್ರಪ್ರದೇಶ 23] ಪುಷ್ಪಾ ಬಿನ್ ಗಂಗಾಧರಪ್ಪ, ಯಗವಮದ್ದಲಖಾನ, ಬಾಗೇಪಲ್ಲಿ ತಾಲ್ಲೂಕು 24] ಹರೀಶ ಬಿನ್ ಕೃಷ್ಣಪ್ಪ, ಜೋಗಿರೆಡ್ಡಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 25] ಚಂದು ಬಿನ್ ಶ್ರೀರಾಮಪ್ಪ, ಯಗವಮದ್ದಲಖಾನ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಹಾಗೂ ಇತರೆ ಸುಮಾರು 20 ಜನರು ಗಂಡಸರು ಮತ್ತು ಹೆಂಗಸರು ಸೇರಿ ಏಕಾಏಕಿ ಒಂದನೇ ಆರೋಪಿ ವೆಂಕಟೇಶಪ್ಪ ರವರ ಮನೆಯ ಮುಂದೆ ಜಮಾಯಿಸಿ ಅನಾವಶ್ಯಕವಾಗಿ ಕೂಗಾಟ ಮಾಡುತ್ತಾ, ವೆಂಕಟೇಶ್ ಮತ್ತು ಅವರ ಕುಟುಂಬದವರನ್ನು ಇವತ್ತು ಬಿಡಬಾರದು, ಲೋಫರ್ ಗಳು ನಮ್ಮ ಹರೀಶನ ಜೀವ ತೆಗೆದಿದ್ದಾರೆ, ಮನೆಗೆ ನುಗ್ಗಿ ಸುಟ್ಟುಹಾಕಿ, ಬೂದಿ ಮಾಡಿ, ಅವರ ಜೀವ ಸಮೇತ ಸುಟ್ಟುಹಾಕಬೇಕು ಎಂದು ಹೇಳುತ್ತಾ ಗಲಾಟೆ ಮಾಡುತ್ತಿದ್ದರು.  ನಾನು ಮತ್ತು ಸದರಿ ಸಿಬ್ಬಂಧಿಯವರು ಪರಿಸ್ಥಿತಿಯನ್ನು ಅರಿತು ಮನೆಯ ಮುಂಭಾಗ ಸಾಲಾಗಿ ನಿಂತುಕೊಂಡು ಅವರುಗಳನ್ನು ಉದ್ದೇಶಿಸಿ ಯಾವುದೇ ಕಾರಣಕ್ಕೂ ಗಲಾಟೆ ಮಾಡಬಾರದು ಈಗಾಗಲೇ ವೆಂಕಟೇಶಪ್ಪ ಮತ್ತು ಗಣೇಶ ರವರ ವಿರುದ್ದ ಪ್ರಕರಣ ದಾಖಲಿಸಿ ವಶಕ್ಕೆ ಪಡೆದು ತನಿಖೆಯನ್ನು ನಡೆಸುತ್ತಿದ್ದೀವಿ, ಕಾನೂನು ಪ್ರಕಾರ ನ್ಯಾಯ ದೊರಕಿಸಿಕೊಡುತ್ತೇವೆ, ನೀವುಗಳು ಸಮಾಧಾನದಿಂದ ಇದ್ದು ಶಾಂತಿ ಕಾಪಾಡಬೇಕು ಎಂದು ತಿಳುವಳಿಕೆ ಮತ್ತು ಸೂಚನೆ ನೀಡಿದೆವು.  ಅದೇ ಗ್ರಾಮದವರಾದ ಕುರುಬರಪಲ್ಲಿ ನಾಗರಾಜಪ್ಪ ಬಿನ್ ಲೇಟ್ ವೆಂಕಟರಾಮಪ್ಪ, 45 ವರ್ಷ, ನಾಯಕರು, ವ್ಯವಸಾಯ, ಯವಗಮದ್ದಲಖಾನ ಗ್ರಾಮ, ಆದಿನಾರಾಯಣಪ್ಪ ಬಿನ್ ಲೇಟ್ ವೆಂಕಟರಾಯಪ್ಪ, 50 ವರ್ಷ, ವ್ಯವಸಾಯ, ನಾಯಕರು, ಯಗವಮದ್ದಲಖಾನ ಗ್ರಾಮ, ಮತ್ತು ಆನಂದಪ್ಪ ಬಿನ್ ಲೇಟ್ ಚಿನ್ನನರಸಪ್ಪ, 50 ವರ್ಷ, ನಾಯಕರು, ವ್ಯವಸಾಯ, ಯಗವಮದ್ದಲಖಾನ ಗ್ರಾಮ ರವರುಗಳೂ ಸಹಾ ಅಕ್ರಮ ಕೂಟದಲ್ಲಿದ್ದವರಿಗೆ  ತಿಳುವಳಿಕೆ ನೀಡಿದರೂ, ಅವರ ಮಾತನ್ನು ಸಹ ಕೇಳಲಿಲ್ಲ.  ಸಮಯ ಸುಮಾರು ಮದ್ಯಾಹ್ನ 1:15  ಗಂಟೆಗೆ ಏಕಾಏಕಿ ಪುನಃ ಇನ್ನೂ ಹೆಚ್ಚು ಜನರು ಅವರೊಂದಿಗೆ ಸೇರಿಕೊಂಡು ಅಕ್ರಮ ಗುಂಪು ಕಟ್ಟಿಕೊಂಡು ಎಲ್ಲರೂ ಸೇರಿ ಏಕಾಏಕಿ ಮನೆಗೆ ನುಗ್ಗಲು ಪ್ರಯತ್ನಿಸಿದರು.  ನಾವುಗಳು ಅವರನ್ನು ತಡೆದು ಮುಂದಕ್ಕೆ ಹೋಗದಂತೆ ತಡೆದವು. ನಂತರ ಅದು ಸಾಧ್ಯವಾಗದೇ ಇದ್ದಾಗ, ಕನಿಷ್ಠ ಬಲಪ್ರಯೋಗವನ್ನೂ ಮಾಡಿ ಜನರನ್ನು ಚದುರಿಸಲು ಪ್ರಯತ್ನಿಸಿದೆವು. ಆದರೆ  ಅಕ್ರಮ ಕೂಟದಲ್ಲಿದ್ದವರ ಸಂಖ್ಯೆ ಹೆಚ್ಚಾಗಿದ್ದು, ನಮ್ಮ ಪ್ರಯೋಗಕ್ಕಿಂತ ಅವರ ಬಲಪ್ರಯೋಗವೇ ಹೆಚ್ಚಾಗಿದ್ದರಿಂದ ನಮ್ಮಗಳನ್ನು ಕೈಗಳಿಂದ ತಳ್ಳಿ, ಮನೆಯ ಗೇಟನ್ನು ಬಲವಂತವಾಗಿ ತಳ್ಳಿ ಮುರಿದು, ನಂತರ ಮನೆಯ ಬಾಗಿಲನ್ನು ತಳ್ಳಿ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ವಸ್ತುಗಳನ್ನು ಜಖಂಗೊಳಿಸಿದರು. ಆ ಗುಂಪಿನಲ್ಲಿ ಚಂದು ಮತ್ತು ಗಂಗರಾಜು ರವರು ತಮ್ಮ ಕೈಯಲ್ಲಿ ಸುಮಾರು 05  ಲೀಟರ್ ನಷ್ಟು ಕ್ಯಾನ್ ನಲ್ಲಿ ಯಾವುದೋ ಪೆಟ್ರೋಲಿಯಂ ದ್ರವವನ್ನು ಇಟ್ಟಿಕೊಂಡಿದ್ದು, ಕೂಡಲೇ ಮನೆಯ ಒಳಗೆ ಚೆಲ್ಲಿದರು.  ಅಷ್ಟರಲ್ಲಿ ಗಂಗರಾಜ ಎಂಬುವವನು ತನ್ನ ಜೇಬಿನಲ್ಲಿದ್ದ ಬೆಂಕಿ ಕಡ್ಡಿಯನ್ನು ಗೀರಿ ಬೆಂಕಿ ಹಚ್ಚಿದನು.  ಅದರಿಂದ ಮನೆ ವಸ್ತುಗಳು ಮತ್ತು ಮನೆಯ ಒಳಕಟ್ಟಡ ಬೆಂಕಿಯಿಂದ ಸುಟ್ಟು ಕರಕಲಾಯಿತು.  ನಮ್ಮ ಸಿಬ್ಬಂಧಿಯವರಾದ ಶ್ರೀನಾಥ, ಪದ್ಮ ರವರಿಗೆ ಗುಂಪಿನಲ್ಲಿದ್ದವರು ಕರ್ತವ್ಯಕ್ಕೆ ಅಡ್ಡಿಪಡಿಸುತ್ತಾ ತಳ್ಳಿ, ಗುದ್ದಿದ್ದರಿಂದ ಸಿ.ಹೆಚ್.ಸಿ 212 ಶ್ರೀನಾಥ ರವರಿಗೆ ಎದೆಯ ಭಾಗಕ್ಕೆ ಮತ್ತು ಮ.ಹೆಚ್.ಸಿ 238 ಪದ್ಮ ರವರಿಗೆ ಕುತ್ತಿಗೆ ಭಾಗಕ್ಕೆ ಗಾಯವಾಗಿರುತ್ತದೆ.  ಮನೆಯ ಒಳಗೆ ಪ್ರವೇಶಿಸಿ ಬೆಂಕಿ ಹಚ್ಚಿದ ಗಂಗರಾಜ ಮತ್ತು ಚಂದು ರವರ ದೇಹಕ್ಕೆ ಬೆಂಕಿ ತಾಗಿ ಸುಟ್ಟ ಗಾಯಗಳಾಗಿದ್ದು, ಅವರು ಬೊಬ್ಬೆ ಹಾಕಿಕೊಂಡು ಹೊರಗಡೆ ಓಡಿಬಂದರು, ಅದನ್ನು ನೋಡಿ ಅಲ್ಲಿದ್ದ ಆರೋಪಿಗಳು ಗಾಬರಿಯಾಗಿ ಮನೆಯಿಂದ ಹೊರಗಡೆಗೆ ಬಂದರು.  ಆ ಸಮಯ ನೋಡಿ ಅವರನ್ನು ಮನೆಯ ಬಳಿಯಿಂದ ದೂರ ಓಡಿಸಿದೆವು.  ಸದರಿ ಆರೋಪಿಗಳು ವೆಂಕಟೇಶಪ್ಪ ರವರಿಗೆ ಸೇರಿದ ಆರ್.ಸಿ.ಸಿ ಸುಸಜ್ಜಿತ ವಾಸದ ಮನೆಯನ್ನು ಸುಟ್ಟು ನಷ್ಟಪಡಿಸಿದ್ದರಿಂದ ಸುಮಾರು 25 ರಿಂದ 30 ಲಕ್ಷ ನಷ್ಟವನ್ನುಂಟು ಮಾಡಿರುತ್ತಾರೆ.  ನಾನು ಕೂಡಲೇ ಅಗ್ನಿಶಾಮಕ ಧಳಕ್ಕೆ ಕರೆಕೊಟ್ಟು ಸ್ಥಳಕ್ಕೆ ಬರಲು ತಿಳಿಸಿದೆ. ಅಗ್ನಿಶಾಮಕ ಸಿಬ್ಬಂಧಿಯವರು ಬಂದು ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದರು. ನಂತರ ಮೇಲಾಧಿಕಾರಿಗಳಿಗೆ ವಿಷಯವನ್ನು ತಿಳಿಸಿ ಹೆಚ್ಚಿನ ಅಧಿಕಾರಿ ಮತ್ತು ಸಿಬ್ಬಂಧಿಯವರನ್ನು ಹಾಗೂ ಡಿ.ಎ.ಆರ್ ತುಕಡಿಗಳನ್ನು ಬರಮಾಡಿಕೊಂಡಿದ್ದು, ಪರಸ್ಥಿತಿ ಹತೋಟಿಗೆ ತಂದಿರುತ್ತೇವೆ,   ಅಕ್ರಮ ಕೂಟದಲ್ಲಿ ನಡೆದ ಘಟನಾವಳಿಗಳನ್ನು ಸಿಬ್ಬಂದಿಯಿಂದ ಠಾಣೆಯ ಕೆಮರಾದಲ್ಲಿ ಚಿತ್ರೀಕರಣ ಮಾಡಿರುತ್ತೆ. ಮೇಲ್ಕಂಡ ಆರೋಪಿಗಳು ಅಕ್ರಮ ಗುಂಪು ಕಟ್ಟಿಕೊಂಡು, ಸಮಾನ ಉದ್ದೇಶದಿಂದ ಮನೆಯ ಒಳಗೆ ನುಗ್ಗುತ್ತಾ, ಕರ್ತವ್ಯದಲ್ಲಿದ್ದ ನಮ್ಮ ಸೂಚನೆಯನ್ನು ಸಹ ಪಾಲಿಸದೆ, ನಮ್ಮನ್ನು ತಳ್ಳಾಡಿ ಗುದ್ದಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿರುತ್ತಾರೆ ಮತ್ತು ಮನೆಯ ಒಳಗೆ ಅಕ್ರಮವಾಗಿ ಪ್ರವೇಶಿಸಿ  ಮನೆಯನ್ನು ಮತ್ತು ಮನೆಯಲ್ಲಿದ್ದ ವಸ್ತುಗಳನ್ನು ಬೆಂಕಿ ಹಾಕಿ ಸುಟ್ಟು ನಾಶಪಡಿಸಿರುವ ಇವರ ಮೇಲೆ ಪ್ರಕರಣ ದಾಖಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದೆ. ನಾನು ಸದರಿ ಗ್ರಾಮದಲ್ಲಿಯೇ ಮೊಕ್ಕಾಂ ಮಾಡಿರುವುದರಿಂದ ಸಿಬ್ಬಂಧಿಯವರಾದ ಪಿ.ಸಿ 01, ನರಸಿಂಹಪ್ಪ  ರವರ ಮುಖಾಂತರ ದೂರನ್ನು ಕಳುಹಿಸುತ್ತಿದ್ದೇನೆ, ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲು ಮಾಡಿರುವುದಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 277/2020 ಕಲಂ. 15(A) ಕೆ.ಇ ಆಕ್ಟ್:-

          ದಿನಾಂಕ: 25/07/2020 ರಂದು ಸಂಜೆ 6-15 ಗಂಟಗೆ DCB/CEN ಪೊಲೀಸ್ ಠಾಣೆಗೆ CHC-239  ಮಲ್ಲಿಕಾರ್ಜುನ ರವರು ಆರೋಪಿ, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 25/07/2020 ರಂದು ಚಿಕ್ಕಬಳ್ಳಾಪುರ DCB/CEN ಪೊಲೀಸ್ ಠಾಣೆಯ PI  ಶ್ರೀ ರಾಜಣ್ಣ ರವರು ತನಗೆ ಹಾಗೂ CHC-198  ಮಂಜುನಾಥ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು ಅದರಂತೆ ತಾವು ಈ ದಿನ ಸಂಜೆ 4-45  ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕಿನ ಚೊಕ್ಕರೆಡ್ಡಿಹಳ್ಳಿ ಗ್ರಾಮದಲ್ಲಿದ್ದಾಗ ಗ್ರಾಮದ  ದೇವರೆಡ್ಡಿ ಬಿನ್ ಬೈರೆಡ್ಡಿ ರವರ ಚಿಲ್ಲರೆ ಅಂಗಡಿ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳದಲ್ಲಿ ದಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಓಡಿ ಹೋಗಿದ್ದು ಸ್ಥಳದಲ್ಲಿ 1) OLD TAVERN WHISKY  ಯ 180 ML ನ ಮದ್ಯ ತುಂಬಿದ 12 ಟೆಟ್ರಾ ಪಾಕೇಟ್ ಗಳು 2) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು, 3) ಒಂದು ಲೀಟರ್ ನ ಒಂದು ಖಾಲಿ ವಾಟರ್ ಬಾಟೆಲ್ 4) HAYWARDS CHEERS WHISKY ಯ 90 ML ನ ಎರಡು ಖಾಲಿ ಟೆಟ್ರಾ ಪಾಕೇಟ್ ಗಳಿದ್ದು ಸದರಿಯವುಗಳನ್ನು  ಸಂಜೆ 5-00 ಗಂಟೆಯಿಂದ ಸಂಜೆ 5-45 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು, ಸ್ಥಳದಲ್ಲಿದ್ದ ಆರೋಪಿ ದೇವರೆಡ್ಡಿ ಬಿನ್ ಬೈರೆಡ್ಡಿ, 38ವರ್ಷ, ವ್ಯಾಪಾರ, ವಕ್ಕಲಿಗರು, ಚೊಕ್ಕರೆಡ್ಡಿಹಳ್ಳಿ ಗ್ರಾಮ ರವರನ್ನು ವಶಕ್ಕೆ ಪಡೆದು ಠಾಣೆಗೆ ಬಂದು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ದೇವರೆಡ್ಡಿ ಬಿನ್ ಬೈರೆಡ್ಡಿ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಸಾರಾಂಶವಾಗಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 72/2020 ಕಲಂ. 323,447,427,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ 25/07/2020 ರಂದು ಮದ್ಯಾಹ್ನ 1.45 ಗಂಟೆಗೆ ಹೆಚ್.ಸಿ 143 ರವರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿರ್ಯಾದಿದಾರರಾದ ಶ್ರೀ ಗೋವಿಂದಪ್ಪ ಬಿನ್ ವೆಂಕಟೇಶಪ್ಪ ರವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ಹಾಜರುಪಡಿಸಿದ್ದರ ಹೇಳಿಕೆಯ ದೂರಿನ ಸಾರಾಂಶವೆನೆಂದರೆ ತಾವು ಮೂರು ಜನ ಅಣ್ಣತಮ್ಮಂದಿರಿದ್ದು, ತಮ್ಮಗಳ ಜಂಟಿ ಹೆಸರಿನಲ್ಲಿ ತಮ್ಮ ಪಕ್ಕದ ಗ್ರಾಮವಾದ ಭಿನ್ನಮಂಗಲ ಗ್ರಾಮಕ್ಕೆ ಸೇರಿದ ಸರ್ವೇ ನಂ 9/1 ರಲ್ಲಿ 1.00 ಎಕರೆ ಜಮೀನಿದ್ದು, ಈ ಜಮೀನಿನಲ್ಲಿ ತಾವುಗಳು ಈಗ್ಗೆ ಸುಮಾರು 15 ವರ್ಷಗಳಿಂದ ಅನುಭವದಲ್ಲಿದ್ದು ಬೆಳೆಗಳನ್ನು ಬೆಳೆದುಕೊಂಡಿರುತ್ತೇವೆ. ತಮ್ಮ ಜಮೀನಿನ ಪಕ್ಕದಲ್ಲಿ ಬೈರಗಾನಹಳ್ಳಿ ಗ್ರಾಮದ ಸರ್ವೇ ನಂ 20 ರಲ್ಲಿ ಸುಬ್ಬರಾಯಪ್ಪರವರು 2.00 ಎಕರೆ 20 ಗುಂಟೆ ಸರ್ಕಾರಿ ಜಮೀನನ್ನು ಉಳುಮೆ ಮಾಡಿಕೊಂಡು ಬೆಳೆಗಳನ್ನು ಇಟ್ಟುಕೊಂಡಿರುತ್ತಾರೆ. ತಾನು ಈಗ್ಗೆ 15 ದಿನಗಳ ಹಿಂದೆ ತನ್ನ ಬಾಬತ್ತು 1.00 ಎಕರೆ ಜಮೀನಿನಲ್ಲಿ ಜೋಳ ಮತ್ತು ಹುರುಳಿಕಾಳನ್ನು ಬಿತ್ತನೆ ಮಾಡಿದ್ದು ಸುಮಾರು 2 ಇಂಚಿನಷ್ಟು ಬೆಳೆಯನ್ನು ಬೆಳೆದಿದ್ದು ಸದರಿ ಬೆಳೆಯನ್ನು ದಿನಾಂಕ 22/07/2020 ರಂದು ಬೆಳಿಗ್ಗೆ 9.00 ಗಂಟೆ ಸಮಯದಲ್ಲಿ ಬಿನ್ನಮಂಗಲ ಗ್ರಾಮದ ವಾಸಿಗಳಾದ ಮಂಜುನಾಥ ಬಿನ್ ನಾಗಪ್ಪ ಮತ್ತು ದೇವರಾಜ ಬಿನ್ ನಾಗಪ್ಪ ರವರು ಅವರ ಟ್ರಾಕ್ಟರನ್ನು ತೆಗೆದುಕೊಂಡು ಹೋಗಿ ತನ್ನ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಟ್ರಾಕ್ಟರ್ ನಿಂದ ತಾನು ಬಿತ್ತನೆ ಮಾಡಿರುವ ಬೆಳೆಯನ್ನು ಉಳುಮೆ ಮಾಡಿ ನಾಶ ಪಡಿಸಿರುತ್ತಾನೆ. ಆಗ ತಾನು ಜಮೀನಿನ ಬಳಿ ಹೋಗಿ ಮಂಜುನಾಥ ಮತ್ತು ದೇವರಾಜರವರನ್ನು ಏಕೆ ಜಮೀನಿನಲ್ಲಿ ಬಂದು ಉಳುಮೆ ಮಾಡುತ್ತಿದ್ದಿರಾ ಎಂದು ಕೇಳಿದ್ದಕ್ಕೆ ಮಂಜುನಾಥ ತನ್ನನ್ನು ಕೈಗಳಿಂದ ಹೋಡೆದು ಈ ಜಮೀನು ನಮ್ಮದು ಈ ಜಮೀನಿನಲ್ಲಿ ಬರಬಾರದೆಂತ ಬೆದರಿಕೆ ಹಾಕಿರುತ್ತಾನೆ. ದೇವರಾಜ ಅವಾಚ್ಯ ಶಬ್ದಗಳಿಂದ ಬೈದು ಇಬ್ಬರು ಅಲ್ಲಿಂದ ಹೊರಟು ಹೋಗಿರುತ್ತಾರೆ. ತಾನು ಈ ಬಗ್ಗೆ ಗ್ರಾಮದ ಹಿರಿಯರಿಗೆ ಹೇಳೋಣವೆಂತ ಸುಮ್ಮನಾಗಿರುತ್ತೇನೆ, ದಿನಾಂಕ 24/07/2020 ರಂದು ಸಂಜೆ 5.00 ಗಂಟೆ ಸಮಯದಲ್ಲಿ ತಾನು ತನ್ನ ಜಮೀನಿನ ಬಳಿ ಕೆಲಸ ಮಾಡಿಕೊಂಡಿದ್ದಾಗ ಅಲ್ಲಿಗೆ ಬಂದು ಮಂಜುನಾಥ ಮತ್ತು ದೇವರಾಜ ರವರು ಯಾಕೆ ಮತ್ತೆ ಈ ಜಮೀನಿನಲ್ಲಿ ಬಂದಿರುತ್ತೀಯಾ ಎಂತ ತನ್ನ ಮೇಲೆ ಜಗಳ ತೆಗೆದು ಮಂಜುನಾಥ ತನ್ನನ್ನು ಕೆಳಕ್ಕೆ ತಳ್ಳಿ ಕೈಗಳಿಂದ ಹೊಡೆಯಲು ಬಂದಿದ್ದು ದೇವರಾಜ ಪದೇ ಪದೇ ಈ ಜಮೀನಿನಲ್ಲಿ ಬಂದರೆ ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಸಾಯಿಸುತ್ತೇವೆಂತ ಪ್ರಾಣ ಬೆದರಿಕೆ ಹಾಕಿರುತ್ತಾನೆ. ಹಾಗೂ ನೀನು ಕಳ್ಳ ರಾತ್ರಿ ಹೊತ್ತಿನಲ್ಲಿ ಜಮೀನನ್ನು ಉಳುಮೆ ಮಾಡಿ ಬಿತ್ತನೆ ಮಾಡುತ್ತೀಯಾ ನೀನು ಇನ್ನು ಮುಂದೆ ಎಲ್ಲಿಯೂ ಓಡಾಡುವುದಕ್ಕೆ ಬಿಡುವುದಿಲ್ಲವೆಂತ ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಬಂದ ತನ್ನ ಮಗನಾದ ವಿಕ್ರಮ್ ಹಾಗೂ ತಮ್ಮ ಗ್ರಾಮದ ದೇವರಾಜ ಬಿನ್ ರಾಮಪ್ಪ ರವರು ಬಂದು ಅವರಿಗೆ ಬುದ್ದಿವಾದ ಹೇಳಿ ಕಳುಹಿಸಿರುತ್ತಾರೆ. ಮಂಜುನಾಥ ಮತ್ತು ದೇವರಾಜರವರು ತನ್ನ ಜಮೀನಿನಲ್ಲಿ ಉಳುಮೆ ಮಾಡಿ ಬೆಳೆ ನಾಶ ಪಡಿಸಿ ತನಗೆ ಬೆದರಿಕೆ ಹಾಕಿ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರಿಂದ ತಾನು ಮನನೊಂದು ಇದೆ ದಿನ ರಾತ್ರಿ 10.00 ಗಂಟೆ ಸಮಯದಲ್ಲಿ ಜಿರಳೆ ಚಾಕ್ ಪೀಸ್ ನ್ನು ನೀರಿನಲ್ಲಿ ಬೆರೆಸಿಕೊಂಡು ಕುಡಿದಿದ್ದು ಅಸ್ವಸ್ಥಗೊಂಡ ತನ್ನನ್ನು ತನ್ನ ಮಗ ಮತ್ತು ಹೆಂಡತಿಯಾದ ವರಲಕ್ಷ್ಮೀ ರವರು ಯಾವುದೋ ವಾಹನದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರ ಸಲಹೆ ಮೇರೆಗೆ ನಂತರ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ಆದ್ದರಿಂದ ತನಗೆ ತೊಂದರೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಾಗಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 171/2020 ಕಲಂ. 143,147,148,323,324,504, ರೆ/ವಿ 149 ಐ.ಪಿ.ಸಿ:-

          ದಿನಾಂಕ: 25/07/2020 ರಂದು ಬೆಳಿಗ್ಗೆ 9-30 ಗಂಟೆಗೆ ಗಾಯಾಳು ವೆಂಕಟಶಾಮಪ್ಪ ಬಿನ್ ಲೇಟ್ ಸುಬ್ಬಣ್ಣ, 61 ವರ್ಷ, ಕುರುಬರು, ಜಿರಾಯ್ತಿ, ಭೂಮನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರ ಹೇಳಿಕೆಯನ್ನು ಗೌರಿಬಿದನೂರ ಸರ್ಕಾರಿ ಆಸ್ಪತ್ರೆಯಿಂದ ಹೆಚ್.ಸಿ 137 ಮಂಜುನಾಥ್ ರವರು ಪಡೆದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ಈ ಹಿಂದೆ ಹನುಂತರಾಯಪ್ಪ ರವರಿಂದ ನಮ್ಮ ತಾಯಿ ಹೆಸರಿಗೆ ನಿವೇಶನ ಖರೀದಿ ಮಾಡಿದ್ದು ತದ ನಂತರ ನನ್ನ ಹೆಸರಿಗೆ ವರ್ಗವಣೆ ಮಾಡಿರುತ್ತದೆ, ಸದರಿ ನಿವೇಶನದಲ್ಲಿ ಸುತ್ತಲೂ ತಡೆ ಬೇಲಿಯನ್ನು ಹಾಕಿದ್ದು ನಮ್ಮ ಗ್ರಾಮದ ನಮ್ಮ ಜನಾಂಗದ ರಾಮಾಂಜಿ ನವರ ನಿವೇಶನ ಸಹ ಇರುತ್ತೆ, ಸದರಿಯವರ ಆಗಾಗ್ಗೆ ಜನಾಂಗದ ವಿಚಾರವಾಗಿ ಗಲಾಟೆ ಮಾಡಿರುತ್ತಾರೆ ಈ ದಿನ ದಿನಾಂಕ: 25/07/2020 ರಂದು ಬೆಳಿಗ್ಗೆ 7-00 ಗಂಟೆ ಸಮಯದಲ್ಲಿ ರಾಮಾಂಜಿ ರವರು ಬೇಲಿಯನ್ನು ಕಿತ್ತು ಹಾಕಿರುತ್ತಾನೆ, ಅದನ್ನು ನೋಡಿದ ನಾನು ಬೇಲಿ ಯಾಕೆ ಕೀಳುತ್ತಿದ್ದೀಯಾ ಎಂತ ಕೇಳಿದಕ್ಕೆ ಏಕಾ ಏಕಿ ನನ್ನ ಮೇಲೆ ಸ್ಥಳದಲ್ಲಿ ಬಿದ್ದಿದ್ದ ಒಂದು ದೊಣ್ಣೆ ತೆಗೆದುಕೊಂಡು ಹೊಡೆದಿದ್ದು ಆಗ ನಾನು ತಪ್ಪಿಸಿಕೊಂಡು ಜಾರಿ ಕೆಳಕ್ಕೆ ಬಿದ್ದಾಗ ನನ್ನ ಎಡಗೈಗೆ ಮೂಳೆ ಮುರಿತದ ಗಾಯವಾಯಿತು. ಅಷ್ಟರಲ್ಲಿ ಅವರ ಮನೆಯವರಾದ ಕೆಂಪಣ್ಣ ಬಿನ್ ಲೇಟ್ ಆದಣ್ಣ, ಲಕ್ಷ್ಮೀನಾರಾಯಣ, ಶ್ರೀನಿವಾಸ, ಶಶಿಕುಮಾರ, ಕಾಂತಮ್ಮ, ಲಕ್ಷ್ಮೀ ಮತ್ತು ಇತರರು ಸ್ಥಳಕ್ಕೆ ಬಂದು ಏಕಾಏಕಿ ಅವಾಚ್ಯ ಶಬ್ದಗಳಿಂದ ನನ್ನನ್ನು ಬೈದು ಕೈಗಳಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾರೆ ಅಷ್ಟರಲ್ಲಿ ನಮ್ಮ ಗ್ರಾಮಸ್ಥರು ಮತ್ತು ನನ್ನ ಮಕ್ಕಳು ಸ್ಥಳಕ್ಕೆ ಬಂದು ಜಗಳ ಬಿಡಿಸಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟರು, ನಮ್ಮ ಮೇಲೆ ವಿನಾಕಾರಣ ನಿವೇಶನಕ್ಕಾಗಿ ಜಗಳ ತೆಗೆದು ಆಗಾಗ್ಗೆ ಗಲಾಟೆ ಮಾಡುತ್ತಿರುವ ಈ ಮೇಲ್ಕಂಡ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಪ್ರ.ವ.ವರದಿ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 172/2020 ಕಲಂ. 143,147,148,323,324,504,506 ರೆ/ವಿ 149 ಐ.ಪಿ.ಸಿ:-

          ದಿನಾಂಕ: 25/07/2020 ರಂದು   ಗಂಟೆಗೆ ಪಿರ್ಯಾದಿದಾರರಾದ ರಾಮಾಂಜಿನಪ್ಪ ಬಿ ಜಿ ಬಿನ್ ಲೇಟ್ ಗಂಗಪ್ಪ, 45 ವರ್ಷ, ಕುರುಬ ಜನಾಂಗ, ಭೂಮೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ: 25/07/2020 ರಂದು ಬೆಳಿಗ್ಗೆ 7-00 ಗಂಟೆ ಸಮಯದಲ್ಲಿ ನಾನು ನಮ್ಮ ಚಿಕ್ಕಪ್ಪನ ಮನೆಯ ಬಳಿ ದಾರಿಗೆ ಅಡ್ಡಲಾಗಿ ಮರಗಳನ್ನು ಹಾಕಿದ್ದು ನಾನು ಓಡಾಡಲು ತೊಂದರೆಯಾಗುತ್ತೆ ಎಂದು ಮರಗಳನ್ನು ತೆಗೆಯುತ್ತಿದ್ದಾಗ ಮಂಜುನಾಥ ಬಿನ್ ಗಂಗಾಧರ, 22 ವರ್ಷ, ರಾಧಮ್ಮ ಕೋಂ ಗಂಗಾಧರಪ್ಪ, ರುಕ್ಮಿಣಿ ಕೋಂ ಗಂಗರಾಜು ರವರುಗಳು ಇದು ನಮ್ಮ ಜಾಗ ನೀವು ಇಲ್ಲಿ ಓಡಾಡಲು ಬಿಡುವುದಿಲ್ಲವೆಂದು ಹೇಳಿ ಗಲಾಟೆ ಮಾಡಿದಾಗ ಗಲಾಟೆ ಶಬ್ದ ಕೇಳಿ ನನ್ನ ತಮ್ಮ ಶ್ರೀನಿವಾಸ ಬಿನ್ ಲೇಟ್ ಗಂಗಪ್ಪ,ನನ್ನ ಹೆಂಡತಿಯಾದ ಕಾಂತಮ್ಮ ನಮ್ಮ ಚಿಕ್ಕಪ್ಪ ಕೆಂಪಣ್ಣ ಬಿನ್ ಲೇಟ್ ಆದೆಪ್ಪ, ನಮ್ಮ ಸಂಬಂಧಿ ಅಶ್ವತ್ಥಮ್ಮ ಕೊಂ ರಾಮಕೃಷ್ಣಪ್ಪ ರವರು ಬಂದು ಏಕೆ ಪ್ರತಿ ದಿನ ದಾರಿ ವಿಚಾರದಲ್ಲಿ ಗಲಾಟೆ ಮಾಡುವುದು ಎಂದು ಹೇಳುತ್ತಿರುವಾಗ ನೀವುಗಳು ಯಾರು ಕೇಳುವುದಕ್ಕೆ ನಾವು ದಾರಿ ಬಿಡುವುದಿಲ್ಲ ಎಂದು ಮಂಜುನಾಥ ಒಂದು ದೊಣ್ಣೆಯಿಂದ ನನ್ನ ಎಡಗೈ ಬೆರಳಿಗೆ ಮತ್ತು ತಲೆಗೆ ಹೊಡೆದ ಬಿಡಿಸಲು ಬಂದ ನನ್ನ ತಮ್ಮನಾದ ಶ್ರೀನಿವಾಸ ರವರಿಗೆ ಗಂಗಾಧರಪ್ಪ ಒಂದು ದೊಣ್ಣೆಯಿಂದ ಕೈಗಳಿಗೆ ಮತ್ತು ಬೆನ್ನಿಗೆ ಹೊಡೆದು ಬೈದು ಅಡ್ಡಬಂದ ನನ್ನ ಹೆಂಡತಿಗೆ ರಾಧಮ್ಮ ದೊಣ್ಣೆಯಿಂದ ತಲೆಗೆ ಹೊಡೆದಿರುತ್ತಾರೆ. ಉಳಿದವರು ಕೈಗಳಿಂದ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾರೆ. ನಂತರ ಅಲ್ಲಿಗೆ ಬಂದ ನಾಗರಾಝು ಬಿನ್ ವೆಂಕಟರಮಣಪ್ಪ ರವರು ನಮಗೆ ಯಾವಾಗಲು ತೊಂದರೆಯನ್ನು ನೀಡುತ್ತಿರುತ್ತಾರೆ ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿ ಬೈದು ನನ್ನನ್ನು ಕೈಗಳಿಂದ ಹೊಡೆದು ಮೂಗೇಟುಗಳನ್ನು ಉಂಟು ಮಾಡಿರುತ್ತಾನೆ. ಗಲಾಟೆಯನ್ನು ನೋಡಿ ನಮ್ಮ ಗ್ರಾಮದ ಶಶಿಕುಮಾರ್ ಬಿನ್ ಲೇಟ್ ವೆಂಕಟರಮಣಪ್ಪ ಮತ್ತು ಪ್ರವೀಣ್ ಕುಮಾರ್ ಬಿನ್ ಅಶ್ವತ್ಥಪ್ಪ ರವರು ಬಂದು ಗಲಾಟೆಯನ್ನು ಬಿಡಿಸಿದ್ದು, ಗಾಯಾಳುಗಳಾದ ನಾವು ಯಾವುದೋ ಒಂದು ಆಟೋದಲ್ಲಿ ಮಂಚೇನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿದ್ದು, ನಮ್ಮ ಮೇಲೆ ಗಲಾಟೆ ಮಾಡಿದವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.