ದಿನಾಂಕ :26/06/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.146/2020 ಕಲಂ. 457,380  ಐ.ಪಿ.ಸಿ :-

          ದಿ: 25-06-2020 ರಂದು  ಗಂಟೆಗೆ ಪಿರ್ಯಾಧಿದಾರರಾದ ಶ್ರೀನಿವಾಸ ನಾಯ್ಕ ಈ.- ಕ.ಸಾ.ಸೇ, 37 ವರ್ಷ, ಸಹಾಯಕ ನಿರ್ಧೇಶಕರು,  ಸಮಾಜ ಕಲ್ಯಾಣ ಇಲಾಖೆ, ಬಾಗೇಪಲ್ಲಿ ತಾಲ್ಲೂಕು, ರವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶ – ದಿ:25/06/2020 ರಂದು ಬೆಳಗಿನ ಜಾವ  ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಕಾಲೇಜಿನ ಹಿಂಬಾಗದಲ್ಲಿರುವ ಮೆಟ್ರಿಕ್ ನಂತರದ ಪರಿಶಿಷ್ಟ ವರ್ಗಗಳ ವಿಧ್ಯಾರ್ಥಿನಿಲಯದ ವಾರ್ಡನ್ ಗೋವಿಂದರಾಜು ಟಿ.ಎನ್  ರವರು ನನಗೆ ಪೋನ್ ಮಾಡಿ ಯಾರೋ ಕಳ್ಳರು ವಿದ್ಯಾರ್ಥಿನಿಲಯದ ಹೊಸದಾಗಿ ನಿರ್ಮಾಣವಾಗಿರುವ ಭೋಜನಾಲಯದ  ಕೊಠಡಿಯ ಬಾಗಿಲಿನ ಕಬ್ಬಿಣದ ಚಿಲಕವನ್ನು ಮುರಿದು ಬೋಜನಾಲಯದಲ್ಲಿ  ಇಟ್ಟಿದ್ದ VU LED TV, V-GUARD STABILIZER ಮತ್ತು TATA SKY setup box  ವಸ್ತುಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದರು. ನಾನು ಬೆಳಗಿನ ಜಾವ 5:00 ಗಂಟೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿತ್ತು. ಹೊರಸಂಪನ್ಮೂಲ ಸಿಬ್ಬಂದಿ ರಾತ್ರಿ ಕಾವಲುಗಾರ  ಶಿವಪ್ಪ ಎನ್. ರವರನ್ನು ವಿಚಾರ ಮಾಡಲಾಗಿ ಬೆಳಗಿನ ಜಾವ ಸುಮಾರು 2:30 ಗಂಟೆಯ ಸುಮಾರಿನಲ್ಲಿ ಭೋಜನಾಲಯದ ಕೊಠಡಿಯ ಬಾಗಿಲು ಹೊಡೆಯುವ ಶಬ್ದ ಕೇಳಿಸಿತು. ಆಗ ಹೊರಗಡೆ ಓಡಿ ಬಂದು ಹೊರಸಂಪನ್ಮೂಲ ಸಿಬ್ಬಂದಿ ವೆಂಕಟರವಣರವರ ಮನೆಯ ಬಳಿ ಹೋಗಿ ವಾರ್ಡನ್ ರವರಿಗೆ ಪೋನ್ ಮಾಡಿ ವಿಚಾರ ತಿಳಿಸಿರುವುದಾಗಿ ತಿಳಿಸಿದರು. ನಾನು ಮೇಲಾಧಿಕಾರಿಗಳಿಗೆ ವಿಚಾರವನ್ನು ತಿಳಿಸಿ ಈ ದಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಕರ್ತವ್ಯವನ್ನು ನಂತರ ಬಾಗೇಪಲ್ಲಿ ತಹಸೀಲ್ದಾರ್ ಕಛೇರಿಯಲ್ಲಿ ಮತ್ತು ಚಿಕ್ಕಬಳ್ಳಾಪುರದ  ಡಿ.ಸಿ. ಕಚೇರಿಯಲ್ಲಿ ಕೋವಿಡ್-19 ತುರ್ತು ಸಭೆಗಳನ್ನು ಮುಗಿಸಿಕೊಂಡು ಈಗ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ಸುಮಾರು 20,000/- ರೂ. ಬೆಲೆ ಬಾಳುವ Vu LED TV , STABLIZER , TATA   SKY SETUP BOX ಗಳನ್ನು  ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೊರಿಕೊಳ್ಳುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.147/2020 ಕಲಂ. 78(3) ಕೆ.ಪಿ ಆಕ್ಟ್:-

          ದಿ: 25-06-2020 ರಂದು ಪಿ.ಎಸ್.ಐ ಸಾಹೇಬರವರು ನೀಡಿದ ದೂರಿನ ಜ್ಞಾಪನದ ಸಾರಾಂಶ – ದಿನಾಂಕ:24.06.2020 ರಂದು ಸಂಜೆ 4.00 ಗಂಟೆಯ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ ಎಸ್.ಬಿ.ಎಂ ರಸ್ತೆಯ ಸಂತೆ ಮೈದಾನದ ಬಳಿ ಬಳಿ ಯಾರೋ ಇಬ್ಬರು ಆಸಾಮಿಗಳು  ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಮೇರೆಗೆ ನಾನು ಮತ್ತು ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸಿಹೆಚ್ ಸಿ-14 ಮುರಳಿ, ವಿನಯ್ ಕುಮಾರ್ ಯಾದವ್ ಸಿಪಿಸಿ 237 ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ ಕೆಎ-40-ಜಿ-537 ಜೀಫ್ನಲ್ಲಿ ಚಾಲಕ ಎ.ಹೆಚ್.ಸಿ.34 ಅಲ್ತಾಫ್ ಪಾಷಾ ರವರೊಂದಿಗೆ ಬಾಗೇಪಲ್ಲಿ ಪುರದ ತಾಲ್ಲೂಕು ಕಛೇರಿಯ ಬಳಿ ಹೋಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು  ಅವರಿಗೆ ಮಾಹಿತಿಯನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚಾಯ್ತಿದಾರರು ಸಂಜೆ 4.10 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಇಬ್ಬರು ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ  ವಿವಿಧ ಅಂಕಿಗಳಿಗೆ  ವಿವಿಧ ಮೊತ್ತ ಬರೆದು ಕೊಡುವುದು ಮತ್ತು ಸಾರ್ವಜನಿಕರನ್ನು ಕೂಗಿ 1 ರೂಗೆ 70 ರೂ ಕೊಡುವುದಾಗಿ  ಕೂಗುತ್ತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದನ್ನು  ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಆಸಾಮಿಗಳನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ  ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ  1 ಮಟ್ಕಾ ಚೀಟಿ,  ಒಂದು ಬಾಲ್ ಪೆನ್ ಹಾಗೂ ಅವರ ಬಳಿ ಇದ್ದ  3250/- ರೂ.ಗಳನ್ನು ವಶಕ್ಕೆ ಪಡೆದು,  ಅವರುಗಳ  ಹೆಸರು ಮತ್ತು  ವಿಳಾಸವನ್ನು ಕೇಳಲಾಗಿ  1) ಶ್ರೀನಿವಾಸ ಬಿನ್ ಗಂಗಪ್ಪ, 30 ವರ್ಷ, ಭೋವಿ ಜನಾಂಗ, ಆಟೋ ಚಾಲಕ, ವಾಸ ಕದಿರನ್ನಗಾರಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 2) ರಾಜಪ್ಪ ಬಿನ್ ಚಿನ್ನಗಂಗಪ್ಪ, 35 ವರ್ಷ, ಆದಿಕರ್ನಾಟಕ ಜನಾಂಗ, ಜಿರಾಯ್ತಿ, ವಾಸ ಮಲ್ಲಸಂದ್ರ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿಗಳನ್ನು ಬರೆಯಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಆಸಾಮಿಯು ತಮ್ಮ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾರೆ. ಸ್ಥಳದಲ್ಲಿ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಮೇಲ್ಕಂಡ ಮಾಲುಗಳನ್ನು, ಆಸಾಮಿಗಳನ್ನು ವಶಕ್ಕೆ ಪಡೆದು, ಅಸಲು ಧಾಳಿ ಪಂಚನಾಮೆ, ಮಾಲು ಮತ್ತು ಆರೋಪಿಗಳೊಂದಿಗೆ ಸಂಜೆ 5.10 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮದ ಜರುಗಿಸಲು ಸೂಚಿಸಿ, ಠಾಣಾಧಿಕಾರಿಗಳಿಗೆ ವರಧಿ ನೀಡಿರುತ್ತೇನೆ, ಎಂದು ನೀಡಿದ ಜ್ಞಾಪನವನ್ನು ಪಡೆದು ಎನ್.ಸಿ.ಆರ್ ದಾಖಲಿಸಿಕೊಂಡಿರುತ್ತೆ.  ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆರೋಪಿತರ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಳ್ಲಲು ಅನುಮತಿ ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 26-06-2020 ರಂದು ಘನ ನ್ಯಾಯಾಲಯದ ಅನುಮತಿ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.86/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ: 26/06/2020 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಹರೀಶ್ ಬಿನ್ ಲೇಟ್ ರಮಣಕುಮಾರ್, ಹುನೇಗಲ್ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19/06/2020 ರಂದು ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ನಾನು ಎನ್.ಹೆಚ್-07 ರಸ್ತೆಯ ಪಕ್ಕದಲ್ಲಿರುವ ನಮ್ಮ ಮನೆಯ ಮುಂದೆ ಕುಳಿತಿದ್ದೆನು. ನಮ್ಮ ತಾಯಿ ಶ್ರೀಮತಿ ಶುಭವತಿ ಕೋಂ ಲೇಟ್ ರಮಣಕುಮಾರ್, 46 ವರ್ಷ ರವರು ಮನೆಗೆ ಬೇಕಾದ ಸಾಮಾನು ತೆಗೆದುಕೊಂಡು ಬರಲು ಎನ್.ಹೆಚ್-07 ರಸ್ತೆಯ ಆ ಪಕ್ಕ ಇರುವ ಅಂಗಡಿಗೆ ಹೋಗಿ ಸಾಮಾನುಗಳನ್ನು ತೆಗೆದುಕೊಂಡು ವಾಪಸ್ಸು ಬರಲು ಎನ್.ಹೆಚ್-07 ರಸ್ತೆಯನ್ನು ದಾಟುತ್ತಿದ್ದಾಗ ಚಿಕ್ಕಬಳ್ಳಾಪುರದ ಕಡೆಯಿಂದ ಬರುತ್ತಿದ್ದ AP-39 AA-2511 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಮ್ಮ ತಾಯಿಗೆ ಡಿಕ್ಕಿ ಹೊಡೆಸಿದನು. ತಕ್ಷಣ ನಮ್ಮ ತಾಯಿಯವರು ಕಿರುಚಿಕೊಂಡು ರಸ್ತೆಯ ಮೇಲೆ ಬಿದ್ದು ಹೋದರು. ಆಗ ನಾನು ನನ್ನ ಸ್ನೇಹಿತ ಮಂಜುನಾಥ ಬಿನ್ ಆವುಲಪ್ಪ ಇಬ್ಬರೂ ಓಡಿ ಹೋಗಿ ನಮ್ಮ ತಾಯಿಯನ್ನು ಎತ್ತಿ ಉಪಚರಿಸಿ ನೋಡಲಾಗಿ ನಮ್ಮ ತಾಯಿಯವರ ಎಡಕಾಲಿಗೆ, ಎಡಕೈಗೆ ರಕ್ತಗಾಯಗಳಾಗಿದ್ದು, ಸೊಂಟಕ್ಕೆ, ಎಡತೊಡೆಗೆ ಮೂಗೇಟುಗಳಾಗಿದ್ದವು. ತಕ್ಷಣ ನಾನು ನಮ್ಮ ತಾಯಿಯನ್ನು ರಸ್ತೆಯಲ್ಲಿ ಬಂದ ಯಾವುದೇ ಕಾರಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆ ಕೊಡಿಸಿದೆನು. ಆಸ್ಪತ್ರೆಯಲ್ಲಿ ನಮ್ಮ ತಾಯಿಯವರಿಗೆ ಚಿಕಿತ್ಸೆ ನೀಡಿದ ವೈದ್ಯರು ನಮ್ಮ ತಾಯಿಯ ಎಡಕಾಲನ್ನು ಎಕ್ಸರೇ ಮಾಡಿಸಿದ್ದು, ನಮ್ಮ ತಾಯಿಯವರ ಎಡಕಾಲ ತೊಡೆಯ ಮೂಳೆ ಮುರಿದಿರುವುದಾಗಿ ತಿಳಿಸಿರುತ್ತಾರೆ. ಅಪಘಾತವನ್ನುಂಟು ಮಾಡಿದ AP-39 AA-2511 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ವಿಚಕ್ರ ವಾಹನದ ಸವಾರನ ಹೆಸರು ವಿಳಾಸ ತಿಳಿದಿರುವುದಿಲ್ಲ. ನಮ್ಮ ತಾಯಿಯವರನ್ನು ನೋಡಿಕೊಳ್ಳುವವರು ಯಾರೂ ಇಲ್ಲದೇ ಇದ್ದುದರಿಂದ ನಾನು ನಮ್ಮ ತಾಯಿಯವರೊಂದಿಗೆ ಇದ್ದು, ಈ ದಿನ ದಿನಾಂಕ: 26/06/2020 ರಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ನಮ್ಮ ತಾಯಿಯವರಿಗೆ ಅಪಘಾತವನ್ನುಂಡು ಮಾಡಿದ AP-39 AA-2511 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ವಿಚಕ್ರ ವಾಹನದ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

  1. ಚಿಂತಾಮಣಿ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.248/2020 ಕಲಂ. 454,457,380 ಐ.ಪಿ.ಸಿ:-

          ದಿನಾಂಕ: 25/06/2020 ರಂದು ಮದ್ಯಾಹ್ನ 12.00 ಗಂಟೆಗೆ ಡಾ.ಪೂರ್ಣಿಮಾ, 43 ವರ್ಷ, ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಕುರುಬೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು ಆರೂವರೆ ವರ್ಷಗಳಿಂದ ಕುರುಬೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ. ದಿನಾಂಕ 23/06/2020 ರಂದು ತಾನು ಮೇಲ್ಕಂಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ಮುಗಿಸಿಕೊಂಡು ಸಂಜೆ 4.30 ಗಂಟೆ ಸಮಯದಲ್ಲಿ ತಮ್ಮ ಆರೋಗ್ಯ ಕೇಂದ್ರದ ಕಬ್ಬಿಣದ ಡೋರ್ಗೆ ಬೀಗ ಹಾಕಿಕೊಂಡು ಚಿಂತಾಮಣಿಗೆ ಬಂದಿರುತ್ತೇನೆ. ದಿನಾಂಕ 24/06/2020 ರಂದು ಬೆಳಿಗ್ಗೆ 08.30 ಗಂಟೆ ಸಮಯದಲ್ಲಿ ತಮ್ಮ ಆರೋಗ್ಯ ಕೇಂದ್ರದಲ್ಲಿ ಗ್ರೂಪ್ ಡಿ ಆಗಿ ಕರ್ತವ್ಯ ನಿರ್ವಹಿಸಿಕೊಂಡಿರುವ ಬಾಬಾಜಾನ್ ಎಂಬುವರು ತನಗೆ ಪೋನ್ ಮಾಡಿ ತಾನು ಆಸ್ಪತ್ರೆಯ ಬಾಗಿಲು ತೆಗೆದು ಒಳಗೆ ಬಂದು ನೋಡಲಾಗಿ ಆಸ್ಪತ್ರೆಯ ಹಿಂಭಾಗದಲ್ಲಿರುವ ಕಿಟಿಕಿಯನ್ನು ಕೊಯ್ದು ಕಿತ್ತು ಹಾಕಲಾಗಿದ್ದು ಆಸ್ಪತ್ರೆಯಲ್ಲಿ ಪರಿಶೀಲಿಸಲಾಗಿ ಸಿಸಿ ಕ್ಯಾಮರಾ ಡಿವಿಆರ್, 4 ಯು.ಪಿ.ಎಸ್. ಬ್ಯಾಟರಿಗಳು ಮತ್ತು 2 ಸ್ಟ್ಯಾಂಡ್ ಪ್ಯಾನ್ ಗಳು ಕಳುವಾಗಿರುವುದಾಗಿ ತಿಳಿಸಿರುತ್ತಾರೆ. ತಕ್ಷಣ ತಾನು ಆಸ್ಪತ್ರೆಗೆ ಹೋಗಿ ನೋಡಲಾಗಿ ಸಂಗತಿ ನಿಜವಾಗಿದ್ದು, ಮೇಲ್ಕಂಡ ವಸ್ತುಗಳು ಕಳುವಾಗಿದ್ದು, ಯಾರೋ ಕಳ್ಳರು ದಿನಾಂಕ 23/06/2020 ರಂದು ಸಂಜೆ 4.30 ಗಂಟೆಯಿಂದ ದಿನಾಂಕ 24/06/2020 ರಂದು ಬೆಳಿಗ್ಗೆ 08.30 ಗಂಟೆ ಮಧ್ಯೆ ಆಸ್ಪತ್ರೆಯ ಹಿಂಭಾಗದಲ್ಲಿರುವ ಕಬ್ಬಿಣದ ಕಿಟಕಿಯನ್ನು ಯಾವುದೋ ಆಯುಧದಿಂದ ಕೊಯ್ದು ಮೀಟಿ ಕಿತ್ತು ತೆಗೆದು ಒಳಗೆ ಪ್ರವೇಶಿಸಿ ತನ್ನ ಕೊಠಡಿಯಲ್ಲಿದ್ದ ಸಿಸಿ ಕ್ಯಾಮರಾ ವೈರ್ ಕತ್ತರಿಸಿ ಡಿವಿಆರ್ ಹಾಗೂ ಕಛೇರಿಯಲ್ಲಿದ್ದ 4 ಯುಪಿಎಸ್ ಬ್ಯಾಟರಿಗಳು ಮತ್ತು ಔಷದಿಯ ಉಗ್ರಾಣದಲ್ಲಿದ್ದ 2 ಸ್ಟ್ಯಾಂಡ್ ಪ್ಯಾನ್ ಗಳು ಕಳುವಾಗಿರುತ್ತೆ. ಕಳುವಾಗಿರುವ ವಸ್ತುಗಳ ನಿಖರವಾದ ಬೆಲೆ ತಿಳಿಯಬೇಕಾಗಿರುತ್ತೆ. ತಾನು ಈ ವಿಚಾರವನ್ನು ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಈ ದಿನ ತಡವಾಗಿ ದೂರು ನೀಡುತ್ತಿದ್ದು, ಕಳುವಾಗಿರುವ ಮಾಲುಗಳನ್ನು ಪತ್ತೆ ಮಾಡಿ ಕಳ್ಳರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.159/2020 ಕಲಂ. 379,420 ಐ.ಪಿ.ಸಿ:-

          ದಿನಾಂಕ 26-06-2020 ರಂದು ಬೆಳಗಿನ ಜಾವ 03-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮೋಹನ್ .ಎನ್. ಪಿ.ಎಸ್.ಐ. ಗೌರಿಬಿದನೂರು ಗ್ರಾಮಾಂತರ ಠಾಣೆರವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 25-06-2020 ರಂದು  ರಾತ್ರಿ 11-00 ಗಂಟೆಯಿಂದ  ನಾನು ಮಾನ್ಯ ಪೊಲೀಸ್ ಉಪಾಧೀಕ್ಷಕರು, ಚಿಕ್ಕಬಳ್ಳಾಪುರ ಉಪವಿಭಾಗರವರ ನೇತೃತ್ವದಲ್ಲಿ ಮತ್ತು ಅವರ ಕಛೇರಿಯ ಸಿಬ್ಬಂದಿಯವರರಾದ ಹೆಚ್.ಸಿ. 68 ನಾರಾಯಣ ಸ್ವಾಮಿ, ಹೆಚ್.ಸಿ. 06 ಬಾಬು, ಗೌರಿಬಿದನೂರು ಗ್ರಾಮಾಂತರ ಠಾಣೆ ಹೆಚ್.ಸಿ. 166 ಸಂಪಂಗಿ ರಾಮಯ್ಯ, ಪಿ.ಸಿ. 518 ಆನಂದ ರವರೊಂದಿಗೆ ಗೌರಿಬಿದನೂರು ವೃತ್ತದ ರಾತ್ರಿ ಗಸ್ತು ಕರ್ತವ್ಯವನ್ನು ಮಾಡುತ್ತಿದ್ದಾಗ ದಿನಾಂಕ 26-06-2020 ರಂದು ಮಧ್ಯರಾತ್ರಿ 02-00 ಗಂಟೆಯಲ್ಲಿ ಬಂದ ಮಾಹಿತಿ ಏನೆಂದರೆ, ಕೆಲವು ವಾಹನದ ಚಾಲಕರುಗಳು ಬೆಂಗಳೂರಿನಿಂದ ಹಿಂದೂಪುರ ಚೆಕ್ ಪೋಸ್ಟ್ ನಲ್ಲಿರುವ  ಸ್ಟೀಲ್ ಫ್ಯಾಕ್ಟರಿಗಳಿಗೆ   ಹಳೆ ಕಬ್ಬಿಣದ ವಸ್ತುಗಳನ್ನು ವಾಹನಗಳಲ್ಲಿ ಲೋಡ್ ಮಾಡಿಕೊಂಡು ಸಾಗಿಸಿಕೊಂಡು ಹಿಂದೂಪುರಕ್ಕೆ  ಹೋಗುವ ಮಾರ್ಗದಲ್ಲಿಗೌರಿಬಿದನೂರು ತಾಲ್ಲೂಕು  ರಾಜ್ಯ ಹೆದ್ದಾರಿ 9 ರಲ್ಲಿ ರಸ್ತೆಯಿಂದ ಪೂರ್ವಕ್ಕೆ ಇರುವ ಬೊಂಬು ಡಾಬ ಬಳಿ ಇರುವ ಗುಜರಿ ಅಂಗಡಿಯ ಮಾಲೀಕ ಆರೀಫ್ ಎಂಬ ವ್ಯಕ್ತಿಯು  ಗುಜರಿ ಅಂಗಡಿ ನಡೆಸುವ ನೆಪದಲ್ಲಿ ಸದರಿ ಲಾರಿ ಚಾಲಕರುಗಳೊಂದಿಗೆ ಮಾತಾಡಿಕೊಂಡು ಲಾರಿಗಳಲ್ಲಿರುವ ಹಳೆ ಕಬ್ಬಿಣದ ವಸ್ತುಗಳಲ್ಲಿ  ಸ್ವಲ್ಪ ಪ್ರಮಾಣದ ಕಬ್ಬಿಣದ ವಸ್ತುಗಳನ್ನು ಖರೀದಿಸಿರುವ ಮಾಲೀಕನಿಗೆ ತಿಳಿಯದಂತೆ ಕಳ್ಳತನ ಮಾಡಿ ಅನ್ ಲೋಡ್ ಮಾಡಿ ಸ್ಟಾಕ್ ಮಾಡಿಸಿ ಅದನ್ನು ಬೇರೆಯವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ  ಅಕ್ರಮ ಲಾಭವನ್ನು ಪಡೆದು  ಮಾಲೀಕರಿಗೆ ಮೋಸ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಮಾನ್ಯ ಪೊಲೀಸ್ ಉಪಾಧೀಕ್ಷಕರು, ಚಿಕ್ಕಬಳ್ಳಾಪುರ ಉಪವಿಭಾಗರವರ ನೇತೃತ್ವದಲ್ಲಿ ಮತ್ತು ಅವರ ಕಛೇರಿಯ ಸಿಬ್ಬಂದಿಯವರರಾದ ಹೆಚ್.ಸಿ. 68 ನಾರಾಯಣಸ್ವಾಮಿ, ಹೆಚ್.ಸಿ. 06 ಬಾಬು, ಗೌರಿಬಿದನೂರು ಗ್ರಾಮಾಂತರ ಠಾಣೆ ಹೆಚ್.ಸಿ. 166 ಸಂಪಂಗಿ ರಾಮಯ್ಯ, ಪಿ.ಸಿ. 518 ಆನಂದರವರುಗಳೊಂದಿಗೆ ದಿನಾಂಕ 26-06-2020  ರಂದು ರಾತ್ರಿ 02-30  ಗಂಟೆಗೆ ಬೊಂಬು ಡಾಬ ಬಳಿ ಇರುವ ಆರೀಫ್ ರವರ ಗುಜರಿ ಅಂಗಡಿ ಬಳಿ ಮರೆಯಲ್ಲಿ ನಿಂತು ಗಮನಿಸಲಾಗಿ 1) ಕೆ.ಎ.-ಬಿ-1303 ಟಾಟಾ  ಕ್ಯಾಂಟರ್ , 2) ಕೆ.ಎ.20-ಎ-8802 ಅಶೋಕ್ ಲೈಲ್ಯಾಂಡ್ ಲಾರಿ, 3)ಕೆ.ಎ.10-3501 ಅಶೋಕ್ ಲೈಲ್ಯಾಂಡ್ ಲಾರಿ, 4)ಕೆ.ಎ.-01-ಡಿ-5927 ಅಶೊಕ್ ಲೈಲ್ಯಾಂಡ್ ಲಾರಿಗಳು ನಿಂತಿದ್ದು  4 ವಾಹನಗಳ ಚಾಲಕರುಗಳು ವಾಹನಗಳಲ್ಲಿದ್ದ ಕಬ್ಬಿಣದ ವಸ್ತುಗಳ ಪೈಕಿ ಸ್ವಲ್ಪ ವಸ್ತುಗಳನ್ನು ಇಳಿಸಿ ನೆಲದ ಮೇಲೆ ಹಾಕಿದ್ದರು. ನಂತರ ನಾವು ಅಲ್ಲಿಗೆ ಹೋಗಿ ವಿಚಾರಿಸಿದಾಗ 1) ಕೆ.ಎ.14-ಬಿ–1303 ಟಾಟಾ  ಕ್ಯಾಂಟರ್ ಚಾಲಕನ ಹೆಸರು ಮುಬಾರಕ್ ಬಿನ್ ಮಹಮದ್ ಆಲಿ, 25 ವರ್ಷ, ಮುಸ್ಲೀಂರು, ಚಾಲಕ ವೃತ್ತಿ, ವಾಸ ದರ್ಗಾ ಪಕ್ಕ, ಯಲಹಂಕ, ಬೆಂಗಳೂರು ಎಂತ ತಿಳಿಸಿದ, 2) ಕೆ.ಎ.20-ಎ-8802 ಅಶೋಕ್ ಲೈಲ್ಯಾಂಡ್ ಲಾರಿಯ ಚಾಲಕನ ಹೆಸರು ವಿಳಾಸ ಕೇಳಲಾಗಿ ಆಸೀಫ್ ಪಾಶ ಬಿನ್ ಖಾದರ್ ವಲೀ, 25 ವರ್ಷ, ಮುಸ್ಲೀಂರು, ಲಾರಿ ಚಾಲಕ, ವಾಸ ಕುರಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು 3)ಕೆ.ಎ.10-3501 ಅಶೋಕ್ ಲೈಲ್ಯಾಂಡ್.ಲಾರಿಯ ಚಾಲಕನ ಹೆಸರು ವಿಳಾಸ ಕೇಳಲಾಗಿ  ರಫೀಕ್ ಬಿನ್ ಷಫೀವುಲ್ಲಾ, 29 ವರ್ಷ, ಲಾರಿ ಚಾಲಕ, ವಾಸ ಚೆಂಗೆಹಳ್ಳಿ ಗ್ರಾಮ,  ತಾಯಲೂರು ಹೋಬಳಿ, ಮುಳಬಾಗಿಲು ತಾಲ್ಲೂಕು, 4) ಕೆ.ಎ.-01-ಡಿ-5927 ಅಶೊಕ್ ಲೈಲ್ಯಾಂಡ್ ಲಾರಿಯ ಚಾಲಕನ ಹೆಸರು ವಿಳಾಸ ಕೇಳಲಾಗಿ ಶಾಕೀರ್ ಬಿನ್ ಆಲೀಂ ಸಾಬ್, 32 ವರ್ಷ, ಮುಸ್ಲೀಂರು, ಲಾರಿ ವಾಲಕ, ವಾಸ ಕುರಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ಹೇಳಿದರು. ಚಾಲಕರುಗಳನ್ನು  ಕಬ್ಬಿಣದ ವಸ್ತುಗಳನ್ನು ಇಳಿಸಿರುವ ಬಗ್ಗೆ  ಪ್ರಶ್ನಿಸಿದಾಗ ಸ್ಟೀಲ್ ಕಂಪನಿಯವರು ಬೆಂಗಳೂರಿನ ಬೊಮ್ಮಸಂದ್ರ ಇಂಡಸ್ಟ್ರೀಯಲ್ ಏರಿಯಾ, ಪೀಣ್ಯಾ ಗಳಲ್ಲಿರುವ ಗುಜರಿ ಅಂಗಡಿಗಳಿಂದ 20 ರೂ 50 ಪೈಸೆಗೆ ಖರೀದಿಸಿರುತ್ತಾರೆ. ನಾವುಗಳು ಹೊಟ್ಟೆಪಾಡಿಗಾಗಿ ಯಾರಿಗೂ ಗೊತ್ತಿಲ್ಲದೇ ಬೆಂಗಳೂರಿನ ಬೊಮ್ಮ ಸಂದ್ರ ಇಂಡಸ್ಟ್ರಿಯಲ್ ಏರಿಯಾದಿಂದ ಹಳೆ ಕಬ್ಬಿಣದ ವಸ್ತುಗಳನ್ನು ಲಾರಿಗಳಲ್ಲಿ ಲೋಡ್ ಮಾಡಿಕೊಂಡು ಹಿಂದೂಪುರದ ತೂಮಕುಂಟೆ ಚೆಕ್ ಪೋಸ್ಟ್ ನಲ್ಲಿರುವ ಸ್ಟೀಲ್ ಫ್ಯಾಕ್ಟರಿಗಳಿಗೆ  ತೆಗೆದುಕೊಂಡು ಹೋಗುವಾಗ ಕಬ್ಬಿಣದ ವಸ್ತುಗಳ ಪೈಕಿ ಕೆಲವು ಪ್ರಮಾಣದ ಕಬ್ಬಿಣದ ವಸ್ತುಗಳನ್ನು ಗೌರಿಬಿದನೂರು ತಾಲ್ಲೂಕು  ರಾಜ್ಯ ಹೆದ್ದಾರಿ ಸಂಖ್ಯೆ 9 ರಲ್ಲಿ ರಸ್ತೆಯಿಂದ ಪೂರ್ವಕ್ಕೆ  ಬೊಂಬು ಡಾಬ ಬಳಿ ಇರುವ ಗುಜರಿ ಅಂಗಡಿಯ ಮಾಲೀಕ ಆರೀಫ್ ಗುಜರಿ ಅಂಗಡಿಯ ಬಳಿ ಕಳ್ಳತನವಾಗಿ ಇಳಿಸಿ ಆರೀಫ್ ರವರಿಗೆ 17 ರೂ 50 ಪೈಸೆಗೆ ಮಾರಾಟ ಮಾಡಿ ಅವರಿಂದ ಹಣ ಪಡೆದುಕೊಂಡು ಮಾಲೀಕರಿಗೆ  ಬಿಲ್ ನಲ್ಲಿರುವ ತೂಕಕ್ಕಿಂತ  ಕಡಿಮೆ ವಸ್ತುಗಳನ್ನು ನೀಡಿ ಮೋಸ ಮಾಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾರೆ. ರಾತ್ರಿಯಾದ ಕಾರಣ ಸದರಿ ವಾಹನಗಳಲ್ಲಿದ್ದ  ಮತ್ತು ನೆಲದ ಮೇಲಿದ್ದ  ಕಬ್ಬಿಣದ ವಸ್ತುಗಳನ್ನು ತೂಕ ಮಾಡಿಸಲು ವೇಯಿಂಗ್ ಬ್ರಿಡ್ಜ್ ಸೌಲಭ್ಯ ಇಲ್ಲದೇ ಇರುವುದರಿಂದ ಸ್ಥಳ ಮಹಜರ್ ಮಾಡಿ ಪರಿಶೀಲಿಸಲು ಅವೇಳೆಯಾದ್ದರಿಂದ 4 ವಾಹನಗಳನ್ನು ಅದರಲ್ಲಿರುವ ಹಳೇ ಕಬ್ಬಿಣದ ಮತ್ತು ಕೆಳಗೆ ಇಳಿಸಿರುವ ಕಬ್ಬಿಣದ ಹಳೇ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಭದ್ರತೆಗಾಗಿ ಗೌರಿಬಿದನೂರು ಗ್ರಾಮಾಂತರ ಠಾಣೆಯ ಸಿಬ್ಬಂದಿಯವರಾದ  ಹೆಚ್.ಸಿ-166 ಸಂಪಂಗಿರಾಮಯ್ಯ ,  ಪಿಸಿ-179 ಶಿವಶೇಖರ್ ರವರುಗಳನ್ನು ಕರೆಸಿ ಸೂಕ್ತ ಸೂಚನೆ ನೀಡಿ ಸೂಕ್ತ ಭದ್ರತೆಗಾಗಿ ನೇಮಿಸಿರುತ್ತೆ.  ಆರೋಪಿ ಚಾಲಕರುಗಳಾದ  ಮುಬಾರಕ್, ಆಸೀಫ್ ಪಾಶ, ರಫೀಕ್ ಮತ್ತು ಶಾಕೀರ್ ರವರುಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮೇಲೆ ತಿಳಿಸಿರುವ ಒಟ್ಟು 4 ಜನ ಆರೋಪಿಗಳನ್ನು ವಶಕ್ಕೆ ನೀಡುತ್ತಿದ್ದು, 4 ಜನ ಚಾಲಕರು ಮತ್ತು  ಗುಜರಿ ಅಂಗಡಿ ಮಾಲೀಕ  ಆರೀಫ್ ಗೌರಿಬಿದನೂರುರವರ ವಿರುದ್ದ ಪ್ರಕರಣ ದಾಖಲಿಸಲು ಸೂಚಿಸಿರುವುದು.

  1. ಗೌರಿಬಿದನೂರು ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.160/2020 ಕಲಂ. 302,201 ಐ.ಪಿ.ಸಿ:-

          ದಿನಾಂಕ 26/06/2020 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಕೃತ್ಯ ನಡೆದ ಸ್ಥಳದಲ್ಲಿ ಪಿರ್ಯಾದಿದಾರರಾದ ಶ್ರೀ. ಕೆ. ಅಶ್ವತ್ಥಪ್ಪ ಬಿನ್ ಲೇಟ್ ಕದಿರಪ್ಪ, 50 ವರ್ಷ,  ಆದಿ ಕರ್ನಾಟಕ, ಜಿರಾಯ್ತಿ, ವಾಸ ಹುಲಿಕುಂಟೆ ಗ್ರಾಮ, ಗೌರಿಬಿದನೂರು ತಾಲ್ಲುಕು ರವರು ದೂರು ನೀಡಿದ್ದು, ಠಾಣೆಗೆ ಬೆಳಿಗ್ಗೆ 9-15 ಗಂಟೆಗೆ ವಾಸಪಸ್ಸಾಗಿದ್ದು, ಪಿರ್ಯಾದಿದಾರರು ನೀಡಿದ   ದೂರಿನ ಸಾರಾಂಶವೇನೆಂದರೆ ದಿನಾಂಕ 26/06/2020 ರಂದು  ಬೆಳಿಗ್ಗೆ ಸುಮಾರು 7-00 ಗಂಟೆ ಸಮಯದಲ್ಲಿ ತಾನು ತಮ್ಮ  ಗ್ರಾಮದ ಅಶ್ವತ್ಥಕಟ್ಟೆ ಬಳಿ ಇರುವಾಗ ತಮ್ಮ ಗ್ರಾಮದ ವಾಸಿ ನರಸಿಂಹ ಮೂರ್ತಿ ಬಿನ್ ಗಂಗಪ್ಪ , ಗೊಲ್ಲ ಜನಾಂಗ ದವರು ಅಶ್ವತ್ಥಕಟ್ಟೆಯ ಬಳಿ ಬಂದು ತಮ್ಮ  ಜಮೀನಿನ ಮೇಲೆ ಇರುವ ಗೋದಿಕುಂಟೆ ಕೆರೆಯಲ್ಲಿ  ಯಾರೋ ಅಪರಿಚಿತ ಮಹಿಳೆಯ ಶವವಿದೆ ಎಂದು ಹೇಳಿದಾಗ ತಾನು ಮತ್ತು ತಮ್ಮ ಗ್ರಾಮದ ಗ್ರಾಮಸ್ಥರು ಕೆರೆಯ ತೂಬಿನ ಬಳಿ ಹೋಗಿ ನೋಡಿದಾಗ ಯಾರೋ ದುಷ್ಕರ್ಮಿಗಳು  ಯಾವುದೋ ಉದ್ದೇಶದಿಂದ ಈಗ್ಗೆ ಮೂರು ದಿನಗಳ  ಹಿಂದೆ  ಸುಮಾರು 22-25 ವರ್ಷದೊಳಗಿನ ಅಪರಿಚಿತ ಮಹಿಳೆಯನ್ನು ಕೊಲೆ ಮಾಡಿ ಸಾಕ್ಷಿ ಮರೆ ಮಾಚುವ ಉದ್ದೇಶದಿಂದ ಪ್ಲಾಸ್ಟಿಕ್  ಹಗ್ಗದಿಂದ  ಒಂದು  ಕಲ್ಲನ್ನು ಆಕೆಯ ಎದೆಗೆ ಕಟ್ಟಿ ಕೆರೆಯ ನೀರಿಗೆ ಬಿಸಾಕಿರುತ್ತಾರೆ. ಅಪರಿಚಿತ ಮಹಿಳೆಯ ದೇಹ ಊದಿಕೊಂಡಿದ್ದು ಕೊಳೆತು ವಾಸನೆ ಬರುತ್ತಿರುತ್ತೆ. ಅಪರಿಚಿತ ಮಹಿಳೆಯು ಕೆಂಪು, ಹಸಿರು, ಹಳದಿ ಡಿಸೇನ್ ಹೂಗಳಿರುವ ಚೂಡಿದಾರದ ಟಾಪ್ ಮತ್ತು ಕಪ್ಪು ಬಣ್ಣದ ಲೆಗಿಂನ್ಸ್ ಬಟ್ಟೆಗಳನ್ನು ಧರಿಸಿರುತ್ತಾರೆ. ಕೊಲೆಯಾಗಿರುವ ಅಪರಿಚಿತ  ಮಹಿಳೆಯ ವಾರಸುದಾರರನ್ನು ಮತ್ತು ಕೊಲೆ ಮಾಡಿರುವ ದುಷ್ಕರ್ಮಿಗಳನ್ನು ಪತ್ತೆ ಮಾಡಲು ಕೋರಿ ದೂರು.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.104/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ 25/06/2020 ರಂದು ಸಂಜೆ 5-50 ಗಂಟೆಗೆ ಪಿರ್ಯಾಧಿ ಚಿಕ್ಕಬಳ್ಳಾಪುರ ತಾಲ್ಲೂಕು ಹನುಮಂತಪುರ ಗ್ರಾಮದ ಕೃಷ್ಣಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತನ್ನ ಮಗ ದೇವರಾಜ ಬಿನ್ ಕೃಷ್ಣಪ್ಪ ರವರು ತಮ್ಮ ಬಾಬತ್ತು ಕೆಎ40-ಡಬ್ಲ್ಯೂ-9817 ರ ದ್ವಿಚಕ್ರವಾಹನದಲ್ಲಿ ಪೆರೇಸಂದ್ರ ಕ್ರಾಸ್ ನಿಂದ ತಮ್ಮ ಗ್ರಾಮಕ್ಕೆ ಬರಲು ದಿನಾಂಕ 24/06/2020 ರಂದು ರಾತ್ರಿ ಸುಮಾರು 7-15 ಗಂಟೆಯ ಸಮಯದಲ್ಲಿ ಮುತ್ತಗದಹಳ್ಳಿ ಗೇಟ್ ಹತ್ತಿರ  ಬರುತ್ತಿದ್ದಾಗ ದ್ವಿಚಕ್ರವಾಹನದ ಹಿಂದುಗಡೆಯಿಂದ ಬಂದ ಅಂದರೆ ಪೆರೇಸಂದ್ರ ಕ್ರಾಸ್ ಕಡೆಯಿಂದ ಬಂದ  ಕೆಎ 04-ಟಿಸಿ-273 ರ ಹೊಸ ಲಾರಿ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮಗ ದೇವರಾಜ ರವರು ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರವಾಹನದ ಹಿಂಭಾಗಕ್ಕೆ ಡಿಕ್ಕಿಹೊಡೆಸಿದ್ದರ ಪರಿಣಾಮ ಎರಡೂ ವಾಹನಗಳು ಜಕ್ಕಂಗೊಂಡು ತನ್ನ ಮಗನ ಬಲಕಾಲುಗೆ ರಕ್ತಗಾಯ, ಮುಖದ ಎಡಭಾಗಕ್ಕೆ ರಕ್ತಗಾಯ ಮತ್ತು ತಲೆಯ ಬಲಭಾಗದಲ್ಲಿ ರಕ್ತಗಾಯವಾಗಿದ್ದು,  ಚಿಕಿತ್ಸೆಗಾಗಿ 108 ಅಂಬ್ಯೂಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ  ಪಡೆದುಕೊಂಡು ಇಲ್ಲಿನ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತನ್ನ ಮಗನ್ನು ಬೆಂಗಳೂರು ಪ್ರೋ ಲೈಫ್  ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆಕೊಡಿಸಿ ಗಾಯಾಳುವಿನೊಂದಿಗೆ ಇದ್ದು, ಈ ದಿನ ಕೃತ್ಯ ನಡೆದ ಸ್ಥಳವನ್ನು ನೋಡಿ ತಡವಾಗಿ ಠಾಣೆಗೆ ಹಾಜರಾಗಿ ದೂರು ನೀಡುತ್ತಿದ್ದು, ರಸ್ತೆ ಅಪಘಾತ ಉಂಟುಪಡಿಸಿದ ಕೆಎ 04-ಟಿಸಿ-273 ರ ಹೊಸ ಲಾರಿ ಚಾಲಕ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.41/2020 ಕಲಂ. 323,324,504 ಐ.ಪಿ.ಸಿ:-

          ದಿನಾಂಕ:26/06/2020 ರಂದು ಮದ್ಯಾಹ್ನ 02-30 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಪಾಪಮ್ಮ ಕೋಂ ಮಂಜುನಾಥ ರವರ ಹೇಳಿಕೆಯನ್ನು ಠಾಣೆಯ ಹೆಚ್,ಸಿ 52 ರವರು ಪಡೆದು ತಂದು ಹಾಜರುಪಡಿಸಿದ್ದರ  ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ನಮ್ಮ ಗ್ರಾಮದ ಬಳಿ ಪಿತ್ರಾರ್ಜಿತ ಆಸ್ತಿಯಾದ 0.15 ಗುಂಟೆ ಜಮೀನು ನಮ್ಮ ಯಜಮಾನರ ಬಾಗಕ್ಕೆ ಬಂದಿದ್ದು ನಾವೇ ಅನುಬೋಗದಲ್ಲಿರುತ್ತೇವೆ, ನಮ್ಮ ಬಾವ ನಮ್ಮ ಯಜಮಾನನ ಅಣ್ಣನಾದ ನರಸಿಂಹರೆಡ್ಡಿ ರವರ ಜಮೀನು ಸಹ ನಮ್ಮ ಜಮೀನಿನ ಪಕ್ಕದಲ್ಲೆ ಇರುತ್ತೆ, ಈ ಎರಡು ಜಮೀನು ಜಂಟಿಯಾಗಿ ಒಂದೇ ಸರ್ವೇ ನಂಬರ್ ನಲ್ಲಿರುತ್ತೆ, ಹೀಗಿರುವಾಗ ಈ ದಿನ ದಿನಾಂಕ:26/06/2020 ರಂದು ಬೆಳಗ್ಗೆ ಸುಮಾರು 09-00 ಗಂಟೆ ಯಲ್ಲಿ ನಾನು ಜಮೀನಿನ ಬಳಿ ಬಂದಾಗ ನಮ್ಮ ಭಾವನಾದ ನರಸಿಂಹರೆಡ್ಡಿ ರವರ ಮಗನಾದ ಸುನೀಲ್ ಎಂಬುವವನು ನಮ್ಮ ಜಮೀನಿನಲ್ಲಿ ಬೋರ್ ನಿಂದ ನಮ್ಮ ಜಮೀನಿನ ಒಳಕ್ಕೆ ಡ್ರಿಪ್ ಪೈಪು ಹಾಕುತ್ತಿದ್ದು ಅದಕ್ಕೆ ನಾನು ಯಾಕೋ ನಮ್ಮ ಜಮೀನಿನಲ್ಲಿ ಪೈಪ್ ಹಾಕುತ್ತಿದ್ದೀಯಾ ಎಂದು ಸುನೀಲ್ ಗೆ ಕೇಳಿದ್ದಕ್ಕೆ ನೀನು ಯಾರು ಕೇಳುವುದಕ್ಕೆ ನಿಮ್ಮ ಅಪ್ಪನದು ಅಲ್ಲ ಲೋಪರ್ ಮುಂಡೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಪೈಪ್ ಕಟ್ ಮಾಡಲು ತಂದಿದ್ದ ಆಕ್ಸೆಲ್ ಬ್ಲೇಡಿನಿಂದ ನನ್ನ ಎಡ ಕಿವಿಗೆ ಹೊಡೆದ ಪರಿಣಾಮ ಕಿವಿಗೆ ರಕ್ತಗಾಯವಾಗಿ ಕಿವಿ ಸೀಳಿರುತ್ತೆ, ನಂತರ ತನ್ನ ಕೈಗಳಿಂದ ನನ್ನ ಬಲಕೈಗೆ ಸೊಂಟಕ್ಕೆ ಹೊಡೆದು ಮೂಗೇಟು ಉಂಟುಮಾಡಿರುತ್ತಾನೆ, ಪಕ್ಕದಲ್ಲೆ ನನ್ನ ತಮ್ಮನ ಜಮೀನಿನಲ್ಲೆ ಇದ್ದ ನನ್ನ ತಮ್ಮನಾದ ನಾಗರಾಜ ಎಂಬುವನು ಓಡಿ ಬಂದು ಗಲಾಟೆ ಬಿಡಿಸಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ನನ್ನ ತಮ್ಮ ನಾಗರಾಜ ಹಾಗೂ ಇನ್ನೊಬ್ಬ ತಮ್ಮ ನರೇಂದ್ರ ಯಾವುದೋ ಒಂದು ಆಟೋದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆಗಾಗಿ ದಾಖಲು ಮಾಡಿರುತ್ತಾರೆ ಆದ್ದರಿಂದ ಮೇಲ್ಕಂಡ ಸುನೀಲ್ ಎಂಬುವವನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ,ಸಂ 41/2020 ಕಲಂ 323.324,504, ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ,

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.42/2020 ಕಲಂ. 323,324,504 ರೆ/ವಿ 34 ಐ.ಪಿ.ಸಿ:-

          ದಿನಾಂಕ:26/06/2020 ರಂದು ಮದ್ಯಾಹ್ನ 02-30 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಪಾಪಮ್ಮ ಕೋಂ ಮಂಜುನಾಥ ರವರ ಹೇಳಿಕೆಯನ್ನು ಠಾಣೆಯ ಹೆಚ್,ಸಿ 52 ರವರು ಪಡೆದು ತಂದು ಹಾಜರುಪಡಿಸಿದ್ದರ  ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ನಮ್ಮ ಗ್ರಾಮದ ಬಳಿ ಪಿತ್ರಾರ್ಜಿತ ಆಸ್ತಿಯಾದ 0.15 ಗುಂಟೆ ಜಮೀನು ನಮ್ಮ ಯಜಮಾನರ ಬಾಗಕ್ಕೆ ಬಂದಿದ್ದು ನಾವೇ ಅನುಬೋಗದಲ್ಲಿರುತ್ತೇವೆ, ನಮ್ಮ ಬಾವ ನಮ್ಮ ಯಜಮಾನನ ಅಣ್ಣನಾದ ನರಸಿಂಹರೆಡ್ಡಿ ರವರ ಜಮೀನು ಸಹ ನಮ್ಮ ಜಮೀನಿನ ಪಕ್ಕದಲ್ಲೆ ಇರುತ್ತೆ, ಈ ಎರಡು ಜಮೀನು ಜಂಟಿಯಾಗಿ ಒಂದೇ ಸರ್ವೇ ನಂಬರ್ ನಲ್ಲಿರುತ್ತೆ, ಹೀಗಿರುವಾಗ ಈ ದಿನ ದಿನಾಂಕ:26/06/2020 ರಂದು ಬೆಳಗ್ಗೆ ಸುಮಾರು 09-00 ಗಂಟೆ ಯಲ್ಲಿ ನಾನು ಜಮೀನಿನ ಬಳಿ ಬಂದಾಗ ನಮ್ಮ ಭಾವನಾದ ನರಸಿಂಹರೆಡ್ಡಿ ರವರ ಮಗನಾದ ಸುನೀಲ್ ಎಂಬುವವನು ನಮ್ಮ ಜಮೀನಿನಲ್ಲಿ ಬೋರ್ ನಿಂದ ನಮ್ಮ ಜಮೀನಿನ ಒಳಕ್ಕೆ ಡ್ರಿಪ್ ಪೈಪು ಹಾಕುತ್ತಿದ್ದು ಅದಕ್ಕೆ ನಾನು ಯಾಕೋ ನಮ್ಮ ಜಮೀನಿನಲ್ಲಿ ಪೈಪ್ ಹಾಕುತ್ತಿದ್ದೀಯಾ ಎಂದು ಸುನೀಲ್ ಗೆ ಕೇಳಿದ್ದಕ್ಕೆ ನೀನು ಯಾರು ಕೇಳುವುದಕ್ಕೆ ನಿಮ್ಮ ಅಪ್ಪನದು ಅಲ್ಲ ಲೋಪರ್ ಮುಂಡೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಪೈಪ್ ಕಟ್ ಮಾಡಲು ತಂದಿದ್ದ ಆಕ್ಸೆಲ್ ಬ್ಲೇಡಿನಿಂದ ನನ್ನ ಎಡ ಕಿವಿಗೆ ಹೊಡೆದ ಪರಿಣಾಮ ಕಿವಿಗೆ ರಕ್ತಗಾಯವಾಗಿ ಕಿವಿ ಸೀಳಿರುತ್ತೆ, ನಂತರ ತನ್ನ ಕೈಗಳಿಂದ ನನ್ನ ಬಲಕೈಗೆ ಸೊಂಟಕ್ಕೆ ಹೊಡೆದು ಮೂಗೇಟು ಉಂಟುಮಾಡಿರುತ್ತಾನೆ, ಪಕ್ಕದಲ್ಲೆ ನನ್ನ ತಮ್ಮನ ಜಮೀನಿನಲ್ಲೆ ಇದ್ದ ನನ್ನ ತಮ್ಮನಾದ ನಾಗರಾಜ ಎಂಬುವನು ಓಡಿ ಬಂದು ಗಲಾಟೆ ಬಿಡಿಸಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ನನ್ನ ತಮ್ಮ ನಾಗರಾಜ ಹಾಗೂ ಇನ್ನೊಬ್ಬ ತಮ್ಮ ನರೇಂದ್ರ ಯಾವುದೋ ಒಂದು ಆಟೋದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆಗಾಗಿ ದಾಖಲು ಮಾಡಿರುತ್ತಾರೆ ಆದ್ದರಿಂದ ಮೇಲ್ಕಂಡ ಸುನೀಲ್ ಎಂಬುವವನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ,ಸಂ 41/2020 ಕಲಂ 323.324,504, ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ,