ದಿನಾಂಕ :26/05/2020 ರ ಅಪರಾಧ ಪ್ರಕರಣಗಳು

  1. ಚೇಳೂರು ಪೊಲೀಸ್ ಠಾಣೆ ಮೊ.ಸಂ.25/2020 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ:25/05/2020 ರಂದು ಸಂಜೆ 16-00 ಗಂಟೆಗೆ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಸಿ.ಪಿ.ಸಿ 445 ರಮೇಶ್ ರವರು  ಘನ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದು ಸದರಿ ಆದೇಶ ಪತ್ರಿಯನ್ನು ತಂದು ಠಾಣೆಯಲ್ಲಿ ಹಾಜರು ಪಡಿಸಿದ್ದರ ಸಾರಾಂಶವೆನೇಂದರೆ, ದಿನಾಂಕ:24/05/2020 ರಂದು ಮಧ್ಯಾಹ್ನ 3-00 ಗಂಟೆಯ  ಸಮಯದಲ್ಲಿ ಚೇಳೂರು ಪೊಲೀಸ್ ಠಾಣೆಯ ಪಿಎಸ್ ಐ ರವರಾದ ಶ್ರೀಮತಿ ಚಂದ್ರಕಲಾ ಎನ್ ರವರು  ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಚೇಳೂರು ಹೋಬಳಿಯ ವಡ್ಡಿವಾಂಡ್ಲಪಲ್ಲಿ ಗ್ರಾಮದ ರವಿ ಜಮೀನಿನ ಬಳಿ ರಾಜಕಾಲುವೆಯಲ್ಲಿ ಹೊಂಗೆ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಸಿ.ಹೆಚ್.ಸಿ 202 ಸುಧಾಕರ್, ಸಿ.ಪಿ.ಸಿ-519 ಚಂದ್ರ ಶೇಖರ್, ಸಿ.ಪಿ.ಸಿ 113 ಲಿಂಗರಾಜು , ಸಿ.ಪಿ.ಸಿ 09 ನಾರಾಯಣಸ್ವಾಮಿ, ಸಿ.ಪಿ.ಸಿ 96 ಹರೀಶ್ ರವರೊಂದಿಗೆ  ವಡ್ಡಿವಾಂಡ್ಲಪಲ್ಲಿ ಗ್ರಾಮದ  ಬಳಿ ಹೋಗಿ ಮುಖ್ಯ ರಸ್ತೆಯಲ್ಲಿ ಪಂಚರನ್ನು ಸರ್ಕಾರಿ ಜೀಪ್ ಸಂಖ್ಯೆ ಕೆಎ 42 ಜಿ-61 ವಾಹನದ ಬಳಿ ಬರಮಾಡಿಕೊಂಡು  ಪಂಚರಿಗೆ  ವಡ್ಡಿವಾಂಡ್ಲಪಲ್ಲಿ ಗ್ರಾಮದ ರವಿ ಜಮೀನಿನ ಬಳಿ ರಾಜಕಾಲುವೆಯಲ್ಲಿ ಬಳಿ ಹೊಂಗೆ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಗುಂಪಾಗಿ ಕುಳಿತುಕೊಂಡು ಅಂದರ್ ಬಾಹರ್ ಜೂಜಾಟ ವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ದಾಳಿ ಮಾಡಲು ಪಂಚರಾಗಿ ಬರಬೇಕೆಂದು ಕೋರಿದ್ದು  ಸದರಿಯವರುಗಳು ಒಪ್ಪಿಕೊಂಡಿದ್ದು ನಂತರ  ನಾವು  &  ಪಂಚರು ವಡ್ಡಿವಾಂಡ್ಲಪಲ್ಲಿ ಗ್ರಾಮದ ಮುಖ್ಯರಸ್ತೆಯಿಂದ ರವಿ ಜಮೀನಿನ ಬಳಿ ರಾಜಕಾಲುವೆಯಲ್ಲಿ ಬಳಿ ನಡೆದುಕೊಂಡು ಹೋಗಿ ಗಿಡಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಹೊಂಗೆ ಮರದ ಕೆಳಗೆ ಗುಂಪಾಗಿ ಕುಳಿತುಕೊಂಡು ಪ್ಲಾಸ್ಟಿಕ್ ಪೇಪರ್ ಮೇಲೆ ಇಸ್ಫೇಟ್ ಎಲೆಗಳನ್ನು ಹಾಕಿಕೊಂಡು ಅಂದರ್ 50 ಬಾಹರ್ 50 ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು ಸದರಿಯವರನ್ನು ಪೊಲೀಸರು ಸುತ್ತುವರೆದು ಹಿಡಿದು ಕೊಂಡು ವಶಕ್ಕೆ ಪಡೆದು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  01) ವೆಂಕಟರವಣ ಬಿನ್ ಲೇಟ್ ಗಂಗುಲಪ್ಪ, 41 ವರ್ಷ, ಬೋವಿ ಜನಾಂಗ, ಗಾರೆ ಕೆಲಸ, ವಾಸ: ವಡ್ಡಿವಾಂಡ್ಲಪಲ್ಲಿ ಗ್ರಾಮ , ಬಾಗೇಪಲ್ಲಿ ತಾಲ್ಲೂಕು ರವರ ಮುಂದೆ 250 ರೂ ಇದ್ದು ಆತನ ಪಕ್ಕದಲ್ಲಿದ್ದ  02) ವೆಂಕಟೇಶ್ ಚಾರಿ ಬಿನ್ ವೆಂಕಟರಮಣಾಚಾರಿ, 21 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ವಾಸ: ವಡ್ಡಿವಾಂಡ್ಲಪಲ್ಲಿ ಗ್ರಾಮ , ಬಾಗೇಪಲ್ಲಿ ತಾಲ್ಲೂಕು ಆತನ ಮುಂದೆ 340 ರೂ ಇದ್ದು ನಂತರ ಆತನ ಪಕ್ಕದಲ್ಲಿ ಕುಳಿತ್ತಿದ್ದ ವ್ಯೆಕ್ತಿಯ ಹೆಸರು ವಿಳಾಸ ಕೇಳಲಾಗಿ 3) ನರಸಿಂಹಪ್ಪ ಬಿನ್ ಲೇಟ್ ನರಸಿಂಹಪ್ಪ, 52 ವರ್ಷ, ಬೋವಿ ಜನಾಂಗ, ಗಾರೆ ಕೆಲಸ, ವಾಸ:ವಡ್ಡಿವಾಂಡ್ಲಪಲ್ಲಿ ಗ್ರಾಮ,ಬಾಗೇಪಲ್ಲಿ ತಾಲ್ಲೂಕು ಆತನ ಮುಂದೆ 250 ರೂ ಇದ್ದು ನಂತರ ಆತನ ಮುಂಭಾಗದಲ್ಲಿದ್ದ ವ್ಯೆಕ್ತಿಯ ಹೆಸರು ವಿಳಾಸ ಕೇಳಾಗಿ 04) ಅಂಜಿನಪ್ಪ ಬಿನ್ ಲಕ್ಷಣ್ಣ, 35 ವರ್ಷ, ಬೋವಿ ಜನಾಂಗ, ಗಾರೆ ಕೆಲಸ, ವಾಸ: ವಡ್ಡಿವಾಂಡ್ಲಪಲ್ಲಿ ಗ್ರಾಮ , ಬಾಗೇಪಲ್ಲಿ ತಾಲ್ಲೂಕು  ಆತನ ಮುಂದೆ 250 ರೂ ಇರುತ್ತೆ. ಸದರಿಯವರ ಬಳಿ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು ನಗದು ಹಣ 1090/-(ಸಾವಿರದ ತೊಂಬತ್ತು ರೂ ಗಳು ಮಾತ್ರ) ಮತ್ತು ಒಂದು ಹಳೆಯ ಪ್ಲಾಸ್ಟಿಕ್ ಪೇಪರ್ ಮತ್ತು  52 ಇಸ್ಪೀಟ್ ಎಲೆಗಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮುಖಾಂತರ ಅಮಾನತ್ತು ಪಡಿಸಿಕೊಂಡು ನಂತರ  ಮಾಲು & ಪಂಚನಾಮೆ ಹಾಗೂ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ವರದಿಯನ್ನು  ಪಡೆದುಕೊಂಡು ಠಾಣಾ ಎನ್.ಸಿ.ಆರ್ ನಂಬರ್ :31/2020ರಂತೆ ದಾಖಲಿಸಿದ್ದು ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣಾ ಮೊಸಂ:25/2020 ಕಲಂ 87 ಕೆಪಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.118/2020 ಕಲಂ. 379 ಐ.ಪಿ.ಸಿ :-

          ದಿನಾಂಕ 26-05-2020 ರಂದು ಬೆಳೀಗ್ಗೆ 09-30 ಗಂಟೆಗೆ  ಪಿರ್ಯಾದಿದಾರರಾದ  ಶ್ರೀರಾಮಯ್ಯ ಬಿನ್ ಲೇಟ್ ನರಸೀಯಪ್ಪ, 70 ವರ್ಷ. ಹಿಂದೂ ಸಾದರ ಜನಾಂಗ, ವ್ಯವಸಾಯ, ವಾಸ ಕುಂದಿಹಳ್ಳಿ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ  ತಾನು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿದ್ದು ಜೀವನೋಪಾಯಕ್ಕಾಗಿ  2 ಸೀಮೆ ಹಸುಗಳನ್ನು ಸಾಕಿಕೊಂಡಿರುತ್ತೇನೆ.  ದಿನಾಂಕ 06-05-2020 ರಂದು ರಾತ್ರಿ ಮನೆಯ ಮುಂಭಾಗ ಕಟ್ಟಿಹಾಕಿದ್ದು ಮಾರನೇ ದಿನ ಬೆಳಿಗ್ಗೆ 06-00 ಗಂಟೆಗೆ ಎದ್ದು ನೋಡಲಾಗಿ ಮನೆಯ ಮುಂಭಾಗದಲ್ಲಿ ಕಟ್ಟಿಹಾಕಿದ್ದ ಜೆರ್ಸಿ ಮತ್ತು ಹೆಚ್.ಎಫ್. 2 ಹಸುಗಳು ಇರಲಿಲ್ಲ .. ಅಕ್ಕಪಕ್ಕದ ಹೊಲಗಳಲ್ಲಿ, ಮತ್ತು ಹಳ್ಳಿಗಳಲ್ಲಿ ಹುಡುಕಾಡಿದರೂ ಸಿಗಲಿಲ್ಲ. ಸದರಿ ಹಸುಗಳನ್ನು  ಯಾರೋ ಕಳ್ಳರು ಕಳುವು ಮಾಡಿಕೊಮಡು ಹೋಗಿರುತ್ತಾರೆ. ಸದರಿ ಹಸುಗಳ ಬೆಲೆ  49,000/- ರೂ.ಗಳಾಗಿರುತ್ತದೆ. ಲಾಕ್ ಡೌನ್ ಇದ್ದ ಕಾರಣ ದೂರು ನೀಡಲು ತಡವಾಗಿರುತ್ತೆ. ಕಳುವಾಗಿರುವ  2 ಹಸುಗಳನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಾಗಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.80/2020 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ;26/05/2020 ರಂದು ಮದ್ಯಾಹ್ನ 2-30 ಗಂಟೆಯಲ್ಲಿ ನ್ಯಾಯಾಲಯದ ಕರ್ತವ್ಯದ ಪಿಸಿ-89 ಮಂಜುನಾಥ ರವರು ಠಾಣಾ ಎನ್,ಸಿ,ಆರ್;182/2020 ರಲ್ಲಿ ಕ್ರಮಿನಲ್ ಪ್ರಕರನವನ್ನು ದಾಖಲಿಸಲು ಅನುಮತಿಯ ಆಧೇಶವನ್ನು  ಪಡೆದು ತಮದು ಹಾಜರುಪಡಿಸಿದರ ಸಾರಾಂಶವೇನೆಂದರೆ ದಿನಾಂಕ:24/05/2020 ರಂದು ರಾತ್ರಿ 8.30 ಗಂಟೆಗೆ ಠಾಣೆಯ ಪಿ,ಐ ಸಾಹೇಬರು, ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ ಎಮ್,ಎನ್ ಆದ ತಾನು ಈ ದಿನ ದಿನಾಂಕ:24-05-2020 ರಂದು ಸಂಜೆ 4-45 ಗಂಟೆಯಲ್ಲಿ ಪೆರೇಸಂದ್ರ ಹೊರ ಪೊಲೀಸ್ ಠಾಣೆಯಲ್ಲಿದ್ದಾಗ ಸಾರ್ವಜನಿಕರು ತನಗೆ ಪೋನ್ ಮಾಡಿ ಗುಡಿಬಂಡೆ ತಾಲೂಕಿನ ತಿಮ್ಮಯ್ಯಗಾರಹಳ್ಳಿ ಗ್ರಾಮದ ಚಿತ್ರಾವತಿ ಸರ್ಕಾರಿ ಕಾಲುವೆಯ ಹೊಂಗೆ ಮರದ ಕೆಳಗೆ ಕೆಲವರು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ತನಗೆ ಮಾಹಿತಿ ನೀಡಿದರ ಮೇರೆಗೆ, ಸಂಜೆ 5.30 ಗಂಟೆಗೆ ಪೆರೇಸಂದ್ರ ಹೊರ ಪೊಲೀಸ್ ಠಾಣೆಯ ಬಳಿ ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-188 ಪರಸಪ್ಪ ರಥೋಡ್, ಸಿ.ಪಿ.ಸಿ,-198 ನಾಗೇಶ, ಸಿ,ಪಿ,ಸಿ-277 ಸಂತೋಷ, ಸಿ,ಎಚ್,ಸಿ-102 ಆನಂದ ರವರನ್ನು ಕರೆಯಿಸಿಕೊಂಡು ಸಿಬ್ಬಂದಿಯವರಿಗೆ ಮಾಹಿತಿಯನ್ನು ತಿಳಿಸಿ ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಎಚ್,ಸಿ-43 ವೆಂಕಟಾಚಲ ರವರೊಂದಿಗೆ ಸಂಜೆ 5-35 ಗಂಟೆಗೆ ಪೆರೇಸಂದ್ರ ಹೊರ ಪೊಲೀಸ್ ಠಾಣೆಯಿಂದ ಬಿಟ್ಟು ಸಂಜೆ 5.50 ಗಂಟೆಗೆ ತಿಮ್ಮಯ್ಯಗಾರಹಳ್ಳಿ ಗ್ರಾಮಕ್ಕೆ ಹೋಗಿ, ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ತಿಮ್ಮಯ್ಯಗಾರಹಳ್ಳಿ ಗ್ರಾಮದ ಪಕ್ಕದಲ್ಲಿರುವ ಚಿತ್ರಾವತಿ ಸರ್ಕಾರಿ ಕಾಲುವೆಯ ಸ್ವಲ್ಪ ದೂರದಲ್ಲಿ ಜೀಪ್ ನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ, ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-500 ಬಾಹರ್-500 ಎಂದು ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಸಂಜೆ 6.10 ಗಂಟೆಗೆ ದಾಳಿ ಮಾಡಿದಾಗ, ಜೂಜಾಟವನ್ನು ಆಡುತ್ತಿದ್ದವರು ಓಡಿ ಹೋಗಿದ್ದು ಓಡಿ ಹೋದವರ  ಪೈಕಿ ಕೆಲವರನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ಶಬ್ಬೀರ್ ಬಿನ್ ಮೆಹಬೂಬ್ ಸಾಬ್ 35 ವರ್ಷ, ಚಾಲಕ ವಾಸ: ಸೊಮೇಶ್ವರ ಗ್ರಾಮ, ಗುಡಿಬಂಡೆ ತಾಲೂಕು, 2)ವೆಂಕಟೇಶ ಬಿನ್ ಮುನಿಕೃಷ್ಣಪ್ಪ 35 ವರ್ಷ, ಮುಂಡಾಳ ಜನಾಂಗ, ಚಾಲಕ ವಾಸ:ತಿಮ್ಮಯ್ಯಗಾರಹಳ್ಳಿ ಗ್ರಾಮ, ಗುಡಿಬಂಡೆ ತಾಲೂಕು 3) ವೇಣು ಬಿನ್ ಮುನಿಕೃಷ್ಣಪ್ಪ, 32 ವರ್ಷ, ಬಲಜಿಗರು, ಜಿರಾಯ್ತಿ ವಾಸ:ಸೋಮೇಶ್ವರ ಗ್ರಾಮ, ಗುಡಿಬಂಡೆ ತಾಲೂಕು ಎಂದು ತಿಳಿಸಿರುತ್ತಾರೆ. ಸದರಿಯವರನ್ನು ಪರಿಶೀಲನೆ ಮಾಡಲಾಗಿ ಶಬ್ಬೀರ್ ರವರ ಬಳಿ 24500 ರೂ ಗಳಿದ್ದು, ವೆಂಕಟೇಶ್ ರವರ ಬಳಿ 490 ರೂ ಗಳಿದ್ದು, ವೇಣು ರವರ ಬಳಿ 2360 ರೂ ಗಳಿದ್ದು ಸ್ಥಳದಲ್ಲಿ 52 ಇಸ್ಪೀಟ್ ಎಲೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಂತರ ಓಡಿ ಹೋದವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  1) ರಿಯಾಜ್ ಬಿನ್ ಫಕೃದ್ದೀನ್ ಸಾಬ್ 33 ವರ್ಷ, ಮುಸ್ಲಿಂ ಜನಾಂಗ, ಕೂಲಿ ಕೆಲಸ ವಾಸ: :ಸೋಮೇಶ್ವರ ಗ್ರಾಮ, ಗುಡಿಬಂಡೆ ತಾಲೂಕು 2) ಆದಿರೆಡ್ಡಿ 34 ವರ್ಷ, ವಾಸ: ಚಿಂತಕಾಯಲಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು 3) ಇಮಾಮ್ ಸಾಬ್ 28 ವರ್ಷ, ಹಾಸಿಗೆ ಹೊಲಿಯುವ ಕೆಲಸ ವಾಸ: ಸೋಮೇಶ್ವರ ಗ್ರಾಮ, ಗುಡಿಬಂಡೆ ತಾಲೂಕು ಹಾಗೂ ಹೆಸರು ಗೊತ್ತಿಲ್ಲದ ಇತರರು ಎಂದು ತಿಳಿಸಿರುತ್ತಾರೆ. ನಂತರ ಜೂಜಾಟಕ್ಕೆ ಪಣಕ್ಕೆ ಇಟ್ಟಿದ್ದ 27,350 ಹಣ & 52 ಇಸ್ಪೀಟ್ ಎಲೆಗಳನ್ನು ಹಾಗೂ ಸ್ಥಳದಲ್ಲಿದ್ದ ಕೃತ್ಯಕ್ಕೆ ಬಳಿಸಿದ 1) ಕೆ,ಎ 05 ಕೆ,ಎಲ್ 9317 ನೊಂದಣಿ ಸಂಖ್ಯೆಯ ರಾಯಲ್ ಎನ್ ಪೀಲ್ಡ್ 2) ಕೆ,ಎ 40 ಇಎ-5637 ನೊಂದಣಿ ಸಂಖ್ಯೆಯ ಹೊಂಡಾ ಆಕ್ಟೀವಾ 3) ಕೆ,ಎ-40 ಇಸಿ-3827 ನೊಂದಣಿ ಸಂಖ್ಯೆಯ ಹಿರೋ ಪ್ಯಾಶನ್ ಪ್ರೋ 4) ಕೆ,ಎ 40 ಆರ್-7984 ನೊಂದಣಿ ಸಂಖ್ಯೆಯ ಹಿರೋ ಸ್ಪ್ಲೆಂಡರ್ 5) ಕೆ,ಎ 40 ಯು-6618 ಹಿರೋ ಪ್ಯಾಶನ್ ಪ್ರೋ 6) ಕೆ,ಎ 53 ಡ್ಬ್ಲೂ-5996 ಹಿರೋ ಪ್ಯಾಶನ್ ಪ್ರೋ 7)ಕೆ,ಎ 40 ಇ,ಸಿ 0467 ನೊಂದಣಿ ಸಂಖ್ಯೆಯ ಹಿರೋ ಸ್ಪ್ಲೆಂಡರ್ 8) ನೊಂದಣಿ ಸಂಖ್ಯೆ ಇಲ್ಲದ ಹಿರೋ ಕಂಪನಿಯ ಡೆಸ್ಟಾನಿ ಮಾದರಿಯ ದ್ವಿಚಕ್ರವಾಹನಗಳನ್ನು ಪಂಚರ ಸಮಕ್ಷಮ ಸಂಜೆ 6-30 ಗಂಟೆಯಿಂದ ಸಂಜೆ 7-30 ಗಂಟೆಯವರೆಗೆ ಎಮರ್ಜನ್ಸಿ ಟಾರ್ಚ್ ಬೆಳಕಿನಲ್ಲಿ ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ರಾತ್ರಿ 8-00 ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ರಾತ್ರಿ 8-30 ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ದೂರಾಗಿರುತ್ತೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.48/2020 ಕಲಂ. 323,324,504 ರೆ/ವಿ 34 ಐ.ಪಿ.ಸಿ:-

          ದಿನಾಂಕ 25-05-2020 ರಂದು ಹೆಚ್.ಸಿ-110 ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ವೆಂಕಟರವಣಪ್ಪ ಬಿನ್ ಲೇಟ್ ವೆಂಕಟರಾಯಪ್ಪ, 43 ವರ್ಷ,ಆದಿ ಕರ್ನಾಟಕ, ಕೂಲಿ ಕೆಲಸ, ವಾಸ ತುಳುವನೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ಸಂಜೆ 04.00 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸಿದ ಸಾರಾಂಶವೇನೆಂದರೆ, ದಿನಾಂಕ 24-05-2020 ರಂದು ಸಂಜೆ ಸುಮಾರು 04.00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದಲ್ಲಿ ಪಂಚಾಯ್ತಿ ಕಡೆಯಿಂದ ನೀರಿನ ಪೈಪುಗಳನ್ನು ಹಾಕುತ್ತಿದ್ದಾಗ ಗಂಗುಲಪ್ಪ ರವರ ಮನೆ ಮುಂದೆ ನೀರಿನ ಪೈಪು ಹಾಕಿ ಅದರ ಮೇಲೆ ಸಿಮೆಂಟ್  ಹಾಕುತ್ತಿದ್ದಾಗ ಗಂಗುಲಪ್ಪ ರವರ ಮಗನಾದ ಉಪದೇಶಪ್ಪ ರವರು ಬಂದು ನೀನು ಹಾಕುತ್ತಿರುವ ಸಿಮೆಂಟ್ ಸರಿಯಿಲ್ಲ ನೀವು ಹಾಕಬೇಡಿ ಪೈಪುಗಳನ್ನು ಕಿತ್ತುಹಾಕಿ ಎಂದು ಅವಾಚ್ಯವಾಗಿ ಬೈದು ಗಲಾಟೆ ಮಾಡುತ್ತಿದ್ದಾಗ ತಾನು ಏಕೆ ಈ ರೀತಿ ಗಲಾಟೆ ಮಾಡುತ್ತಿದ್ದೀಯಾ ಎಂದು ಕೇಳಿದಾಗ ರತ್ನಮಪ್ಪನ ಮಗನಾದ ಅಂಜಿ ಮತ್ತು ಶಿವರಾಜು ರವರುಗಳು ಏಕಾಏಕಿ ಬಂದು ಏನು ರೋಪ್ ಹಾಕುತ್ತಿದ್ದೀಯಾ ಎಂದು ಕೈಗಳಿಂದ ಹೊಡೆದು ಕೆಳಗೆ ಬೀಳಿಸಿ ಕೋಲಿನಿಂದ ಎಡಭುಜ ಮತ್ತು ಬೆನ್ನಿಗೆ ಹೊಡೆದು ಮೂಗೇಟು ಉಂಟು ಮಾಡಿರುತ್ತಾರೆ. ಆಗ ತಾನು ಕೂಗಿಕೊಂಡಾಗ ತಮ್ಮ ಗ್ರಾಮದ ರಾಮಾಂಜಿ, ನರಸಿಂಹಪ್ಪ ರವರುಗಳ ಬಂದು ಜಗಳ ಬಿಡಿಸಿ ತನ್ನನ್ನು ಉಪಚರಿಸಿ ಯಾವುದೋ ಕಾರಿನಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ತನ್ನ ಮೇಲೆ ಹಲ್ಲೆ ಮಾಡಿದ ಈ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಹೇಳಿಕೆಯ ಸಾರಾಂಶವಾಗಿರುತ್ತೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.49/2020 ಕಲಂ. 323,324,504 ರೆ/ವಿ 34 ಐ.ಪಿ.ಸಿ:-

          ದಿನಾಂಕ 26-05-2020 ರಂದು ಹೆಚ್.ಸಿ-215 ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಶ್ರೀ ಅಂಜನೇಯ ಬಿನ್ ರತ್ನಮಪ್ಪ, 25 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ವಾಸ ತುಳುವನೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆ ಪಡೆದು ಬೆಳಗ್ಗೆ 10.30 ಗಂಟೆಗೆ ಠಾಣೆಗೆ ಹಾಜರುಪಡಿಸಿದ ಸಾರಾಂಶವೇನೆಂದರೆ, ದಿನಾಂಕ 24-05-2020 ರಂದು ತಮ್ಮ ಗ್ರಾಮದ ವೆಂಕಟರವಣಪ್ಪ ರವರು  ಬೀದಿಗೆ ಹಾಕಬೇಕಾಗಿದ್ದ ನೀರಿನ ಪೈಪ್ ಗಳನ್ನು ತಮ್ಮ ಮನೆ ಬಳಿ ಹಾಕಿಕೊಂಡು ನಮಗೆ ನೀರು ಬಿಡದೇ ಇದ್ದಿದ್ದರಿಂದ ಕೇಳಿದ್ದಕ್ಕೆ ಸಂಜೆ 05.00 ಗಂಟೆ ಸಮಯದಲ್ಲಿ ಸದರಿ ವೆಂಕಟರವಣಪ್ಪ ಬಿನ್ ಸೀಮ ವೆಂಕಟರಾಯಪ್ಪ, ವೆಂಕಟೇಶ್ ಬಿನ್ ವೆಂಕಟರವಣಪ್ಪ, ನರಸಿಂಹ ಬಿನ್ ಗಂಗುಲಪ್ಪ, ನರಸಮ್ಮ ಕೋಂ ವೆಂಕಟರವಣಪ್ಪ ರವರು ಏಕಾಏಕಿ ಬಂದು ತನ್ನ ಮೇಲೆ ಜಗಳ ತೆಗೆದು “ಲೋಫರ್ ನನ್ನ ಮಗನೇ, ಸೂಳೆ ನನ್ನ ಮಗನೇ” ಎಂದು ಅವಾಚ್ಯವಾಗಿ ಬೈದು ವೆಂಕಟರವಣಪ್ಪ ದೊಣ್ಣೆಯಿಂದ ಬಲಗೈಗೆ ಹೊಡೆದು ಮೂಗೇಟು ಉಂಟುಮಾಡಿದ್ದು, ವೆಂಕಟೇಶ ಕಲ್ಲಿನಿಂದ ಎದೆಗೆ ಗುದ್ದಿ ಮೂಗೇಟು ಉಂಟುಮಾಡಿದನು, ನರಸಿಂಹ ಮತ್ತು ನರಸಮ್ಮ ಮೈಮೇಲೆ ಹೊಡೆದು ಮೂಗೇಟು ಉಂಟುಮಾಡಿದರು. ಆಗ ತನ್ನ ಚಿಕ್ಕಪ್ಪನ ಮಗನಾದ ಶಿವರಾಜ್ ರವರು ಅಡ್ಡ ಬರಲಾಗಿ ಆತನಿಗೆ ಎಲ್ಲರೂ ಸೇರಿ ಕೈಗಳಿಂದ ಹೊಡೆದು ಮೂಗೇಟು ಉಂಟುಮಾಡಿದರು. ಆಗ ಮಂಜುನಾಥ ಬಿನ್ ವೆಂಕಟರವಣಪ್ಪ, ಮತ್ತು ನರಸಿಂಹ ಬಿನ್ ಶ್ರೀರಾಮಪ್ಪ ರವರು ಬಂದು ಜಗಳ ಬಿಡಿಸಿದರು. ಮೂಗೇಟುಗಳಾಗಿದ್ದರಿಂದ ದಿನಾಂಕ 25-05-2020ರಂದು ತಡವಾಗಿ ಆಸ್ವತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ತಮ್ಮ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಹೇಳಿಕೆಯ ಸಾರಾಂಶವಾಗಿರುತ್ತೆ.