ದಿನಾಂಕ :26/01/2021 ರ ಅಪರಾಧ ಪ್ರಕರಣಗಳು

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 10/2021 ಕಲಂ. 323, 324,504,506 ಐಪಿಸಿ :-

ದಿನಾಂಕ:25.01.2021 ರಂದು ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಗಾಯಾಳುವಾದ ಶ್ರೀಮತಿ ಸ್ವಪ್ನ.ಜಿ ಕೋಂ ಗಜರಾಜ್ ಸಿಂಗ್, 33 ವರ್ಷ, ರಜಪೂತ್ ಜನಾಂಗ, ಗೃಹಿಣಿ, ವಾಸ: 06 ನೇ ಕ್ರಾಸ್, ಸೊಣ್ಣಶೆಟ್ಟಿಹಳ್ಳಿ ಚಿಂತಾಮಣಿ ನಗರ ರವರು ನೀಡಿರುವ ಹೇಳಿಕೆ ಸಾರಾಂಶವೆನೆಂದರೆ ನಾನು ಗೃಹಿಣಿಯಾಗಿ ಕೆಲಸ ಮಾಡಿಕೊಂಡಿದ್ದು ನನ್ನ ಗಂಡ ಕೆ ಎಸ್ ಆರ್ ಟಿ ಸಿ ಇಲಾಖೆಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾರೆ. ನಾನು ಸುಮಾರು 11 ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಅರಸೀಕೆರೆ ವಾಸಿಯಾದ ನರೇಂದ್ರ ಸಿಂಗ್ ರವರ ಮಗನಾದ ಗಜರಾಜ್ ಸಿಂಗ್ ರವರನ್ನು ಹಿರಿಯರ ನಿಶ್ಚಯದಂತೆ ವಿವಾಹ ಮಾಡಿಕೊಂಡಿರುತ್ತೆನೆ. ನಂತರ ಸಂಸಾರದಲ್ಲಿ ಒಡಕುಉಂಟಾಗಿದ್ದು ನಾನು ಚಿಂತಾಮಣಿ ನಗರದ ನ್ಯಾಯಾಲಯದಲ್ಲಿ ಮೈನ್ ಟೆನೆಸ್ಸ್ ಕೇಸು ದಾಖಲಿಸಿರುತ್ತೆನೆ ಈ ಕೇಸಿನ ವಿಚಾರಣೆಗೆ ದಿನಾಂಕ: 25.01.2021 ರಂದು ನನ್ನ ಗಂಡ ಗಜರಾಜ್ ಸಿಂಗ್ ರವರು ಬಂದಿದ್ದು ನಂತರ 11: 00 ಗಂಟೆ ಸಮಯದಲ್ಲಿ ನಮ್ಮ ಮನೆಗೆ ಬಂದು ಏಕಾಏಕಿ ಏ ಲೋಪರ್ ಮುಂಡೆ, ನೀನು ನನ್ನ ಮೇಲೆ ಮೈನ್ ಟೆನೆಸ್ಸ್ ಕೇಸು ದಾಖಲಿಸುತ್ತಿಯಾ ಎಂದು ಏಕಾಏಕಿ ಕೈಗಳಿಂದ ನನ್ನ ಬೆನ್ನಿಗೆ, ಹೊಟ್ಟೆಗೆ ಗುದ್ದಿ ಕೆಳಗೆ ತಳ್ಳಿರುತ್ತಾರೆ ನಂತರ ಅಲ್ಲೆ ಇದ್ದ ಕಬ್ಬಿಣ ರಾಡ್ ನಿಂದ ತಲೆಗೆ ಮತ್ತು ಬಲಕೈಗೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ, ನೀನು ಬದುಕಿದ್ದರೆ ನನಗೆ ತುಂಬಾ ಕಷ್ಟ ಎಂದು ನಿನ್ನನ್ನು ಸಾಯಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ ನಂತರ ನಾನು ಕೀರುಚಾಡಿಕೊಂಡಿದ್ದನ್ನು ಕೇಳಿಸಿಕೊಂಡು ನಮ್ಮ ಪಕ್ಕದ ಮನೆಯ ವಾಸಿಗಳಾದ ನರೇಂದ್ರ ಬಿನ್ ಲಕ್ಷ್ಮೀನಾರಾಯಣ, ಜಬೀನಾ ಹಾಗೂ ನಮ್ಮ ತಾಯಿಯಾದ ಸಾವಿತ್ರಿಬಾಯಿ ರವರು ಬಂದು ಜಗಳ ಬಿಡಿಸಿರುತ್ತಾರೆ ನಂತರ ನನ್ನನ್ನು ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ  ನನ್ನನ್ನು ನನ್ನ ತಾಯಿಯಾದ ಸಾವಿತ್ರಿ ಬಾಯಿ ರವರು ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ, ಆದ್ದರಿಂದ ವಿನಾಕಾರಣ ನನ್ನ ಮೇಲೆ ಹಲ್ಲೆ ಮಾಡಿರುವ ನನ್ನ ಗಂಡನ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ಹೇಳಿಕೆಯಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 22/2021 ಕಲಂ. 279,304(ಎ) ಐಪಿಸಿ :-

ದಿನಾಂಕ 25/01/2021 ರಂದು ರಾತ್ರಿ 9-45 ಗಂಟೆಗೆ ಪಿರ್ಯಾದಿ ತಿಮ್ಮರಾಯಪ್ಪ ಬಿನ್ ಚಿಕ್ಕಯಲ್ಲಪ್ಪ, 50 ವರ್ಷ, ಬೋವಿ ಜನಾಂಗ, ವ್ಯವಸಾಯ, ಎಂ ಜಾಲಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ರವರ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ದಿನಾಂಕ 25/01/2021 ರಂದು ಸುಮಾರು 7-00 ಗಂಟೆ ಸಮಯದಲ್ಲಿ ತನ್ನ ತಮ್ಮ ರಾಘವೇಂದ್ರ ಬಿನ್ ಚಿಕ್ಕಯಲ್ಲಪ್ಪ, 36 ವರ್ಷ, ಎಂ ಜಾಲಹಳ್ಳಿ ಗ್ರಾಮ ರವರು ದ್ವಿಚಕ್ರ ವಾಹನ KA 50 Q 8373 ರಲ್ಲಿ ರಾಘವೇಂದ್ರ ಮತ್ತು ಪಾಪಣ್ಣ ಬಿನ್ ವೆಂಕಟೇಶಪ್ಪ ಎಂಬುವರು ಮರಳೂರು ಗ್ರಾಮಕ್ಕೆ ಕೆಲಸದ ನಿಮಿತ್ತ ಹೋಗಿ ಮನೆಗೆ ವಾಪಸ್ಸ್ ಬರುವಾಗ ಮಾರ್ಗ ಮದ್ಯ ಮೂತ್ರ ವಿಸರ್ಜನೆ ಮಾಡಲು ರಸ್ತೆ ಎಡಭಾಗದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿರುವಾಗ ಹಿಂದೆಯಿಂದ ಬಂದ ಟ್ರಾಕ್ಟರ್ KA 36 TA 6742 ಚಾಲಕ ಮಹೇಶ್ ಬಿನ್ ಲಿಂಗೇಶಪ್ಪ,ಕುರುಬ ಜನಾಂಗ ಮರಳೂರು ಗ್ರಾಮ ರವರು ತನ್ನ ಟ್ರಾಕ್ಟರನ್ನು  ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ತನ್ನ ತಮ್ಮ ನೆಲಕ್ಕೆ ಬಿದ್ದು ತಲೆಯ ಹಿಂಭಾಗ ಮತ್ತು ಬಲಭಾಗ, ಮೂಗಿಗೆ ಬಲವಾದ ಪೆಟ್ಟು ಬಿದ್ದು ರಕ್ತಗಾಯವಾಗಿರುತ್ತದೆ ಅಲ್ಲಿಯೋ ಇದ್ದ ತಾನು ಮತ್ತು ತಿಮ್ಮರಾಜು ಬಿನ್ ಲಕ್ಷಯ್ಯ, ಪಾಪಣ್ಣ ಬಿನ್ ವೆಂಕಟೇಶಪ್ಪ ರವರು ಉಪಚರಿಸಿ ಆಂಬುಲೆನ್ಸ್ ಗೆ ಕರೆ ಮಾಡಿ ಆಂಬುಲೆನ್ಸ್ ನಲ್ಲಿ ಕರೆತಂದು ಗೌರಿಬಿದನೂರಿನ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗಲು ತಿಳಿಸಿದ ಕಾರಣ ತನ್ನ ತಮ್ಮನನ್ನು ನಿಮಾನ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಎಂದು ಅಲ್ಲಿಗೆ ಜೊತೆಯಲ್ಲಿ ಹೋಗಿದ್ದ ತನ್ನ ಮತ್ತೋಬ್ಬ ತಮ್ಮ ನಾರಾಯಣಪ್ಪ ಬಿನ್ ಚಿಕ್ಕಯಲ್ಲಪ್ಪ ರವರಿಂದ ಪೋನ್ ಮುಖಾಂತರ ವಿಚಾರ ತಿಳಿಯಿತು ತನ್ನ ತಮ್ಮನಿಗೆ ಆಪಘಾತ ಮಾಡಿದ ಚಾಲಕ ಮಹೇಶ್ ಮತ್ತು ವಾಹನದ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೂರು.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 15/2021 ಕಲಂ. 41 ಕ್ಲಾಸ್ (ಡಿ) ಸಿಆರ್‍.ಪಿ.ಸಿ. ರೆ/ವಿ 379 ಐಪಿಸಿ:-

ದಿನಾಂಕ:26/01/2021 ರಂದು  ನಡೆಯಲಿರುವ ಗಣರಾಜ್ಯೋತ್ಸವದ ಕಾರ್ಯಕ್ರಮದ ಹಿನ್ನೆಲೆ ಯಲ್ಲಿ ಕೇಂದ್ರ ಸರ್ಕಾರದ ಕೃಷಿ ನೀತಿಯನ್ನು ವಿರೋಧಿಸಿ ರೈತ ಸಂಘದ ವತಿಯಿಂದ  ಬೆಂಗಳೂರಿನಲ್ಲಿ ಟ್ರಾಕ್ಟರ್ ಪೆರೇಡ್ ನ್ನು ನಡೆಸಲು ಹಮ್ಮಿಕೊಂಡಿದ್ದ ಟ್ರಾಕ್ಟರ್ ಪೆರೇಡ್ ಗೆ ಹೋಗುವ ರೈತರು ಮತ್ತು ಟ್ರಾಕ್ಟರ್ ಗಳನ್ನು ಬೆಂಗಳೂರಿಗೆ ತೆರಳದಂತೆ ಗೌರಿಬಿದನೂರು  ನಗರದಲ್ಲಿ ತಡೆಯುವ ಸಲುವಾಗಿ ನನ್ನನ್ನು ಬೆಳಗಿನ ಜಾವ 4-00 ಗಂಟೆಗೆ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದರು. ಅದರಂತೆ ನಾನು  ಸಿಬ್ಬಂದಿಯಾದ ಹೆಚ್.ಸಿ 244 ಗೋಪಾಲ ಮತ್ತು ಪಿಸಿ 201 ಸುರೇಶ ರವರೊಂದಿಗೆ ಗೌರಿಬಿದನೂರು ನಗರದಲ್ಲಿ ಗಸ್ತು ನಿರ್ವಹಿಸುತ್ತಾ ಈ ದಿನ ಬೆಳಗಿನ ಜಾವ 04-15 ಗಂಟೆ ಸಮಯದಲ್ಲಿ ನಾಗಪ್ಪ ಬ್ಲಾಕ್ ನಲ್ಲಿ ಇದ್ದಾಗ ಒಬ್ಬ  ವ್ಯಕ್ತಿಯು ಒಂದು ನೊಂದಣಿ ಸಂಖ್ಯೆ ಇಲ್ಲದ ಹಿರೋ ಸ್ಪ್ಲೆಂಡರ್  ದ್ವಿಚಕ್ರ ವಾಹನದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಕುಳ್ಳರಿಸಿಕೊಂಡು ಗೌರಿಬಿದನೂರು ನಗರದಿಂದ ಹಿಂದೂಪುರ ರಸ್ತೆಯಲ್ಲಿ ಬರುತ್ತಿದ್ದು, ಅಲ್ಲಿದ್ದ ನಮ್ಮನ್ನು ಕಂಡು ಗಾಬರಿಯಿಂದ ದ್ವಿಚಕ್ರ ವಾಹನದೊಂದಿಗೆ ಪರಾರಿಯಾಗಲು ಪ್ರಯತ್ನಿಸಿದರು. ಈ ಸಮಯದಲ್ಲಿ ನಾನು ಮತ್ತು ಸಿಬ್ಬಂದಿ ವಾಹನದೊಂದಿಗೆ ಬೆನ್ನಟ್ಟಿ ಅವರನ್ನು ಹಿಡಿದುಕೊಂಡು ಅವರು ನಡೆಸುತ್ತಿದ್ದ ದ್ವಿಚಕ್ರವಾಹನದ ದಾಖಲೆಗಳನ್ನು ಕೇಳಲಾಗಿ ಈ ದ್ವಿಚಕ್ರವಾಹನದ ದಾಖಲೆಗಳು ತನ್ನ ಬಳಿ ಇರುವುದಿಲ್ಲವೆಂದು ಅನುಮಾನಸ್ಪದವಾಗಿ ತಡವರಿಸುತ್ತಾ  ಉತ್ತರಿಸಿದ್ದರು. ಇದರಿಂದ ಅವರ ಮೇಲೆ ಅನುಮಾನ ಉಂಟಾಗಿ ಅವರ ಹೆಸರು ವಿಳಾಸವನ್ನು ಕೇಳಲಾಗಿ ಒಬ್ಬ ವ್ಯಕ್ತಿಯು ತನ್ನ ಹೆಸರು ಎನ್ ಮಂಜುನಾಥ ಬಿನ್ ನರಸಿಂಹಪ್ಪ, 26 ವರ್ಷ, ನಾಯಕರು, ಗಾರೆ ಕೆಲಸ, ವಾಸ:ಇಂದಿರಾನಗರ, ಗುಡಿಬಂಡೆ ಟೌನ್ ಎಂತಲೂ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಯ ಹೆಸರು ವಿಳಾಸವನ್ನು ಕೇಳಲಾಗಿ E ಶ್ರೀನಿವಾಸ ಬಿನ್ ಲೇಟ್ ಆದೆಪ್ಪ, 48 ವರ್ಷ, ಈಡಿಗರು, ಡ್ರೈವರ್ ಕೆಲಸ, ಸೊಪ್ಪಿನ ಪೇಟೆ, ಗುಂಡಿಬಂಡೆ ಟೌನ್ ಸ್ವಂತ ಸ್ಥಳ: ಸೋಮೇನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂದು ತಿಳಿಸಿದರು. ಇವರು ನಡೆಸುತ್ತಿರುವ ದ್ವಿಚಕ್ರವಾಹನಕ್ಕೆ ಯಾವುದೇ ದಾಖಲೆಗಳು ಇಲ್ಲದೇ ಅವೇಳೆ ಹೊತ್ತಿನಲ್ಲಿ ದ್ವಿಚಕ್ರವಾಹನದಲ್ಲಿ ಅನುಮಾನಸ್ಪದವಾಗಿ ಹೋಗುತ್ತಿದ್ದ ಕಾರಣ ಇಬ್ಬರನ್ನು ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ಮಾಡಲಾಗಿ ಇವರು ಈ ಹಿಂದೆ ಗುಡಿಬಂಡೆಯ ಇಂದಿರಾ ನಗರದ ವಾಸಿ ಉಮೇಶ್ ಎಂಬುವನೊಂದಿಗೆ ಸೇರಿಕೊಂಡು ಗೌರಿಬಿದನೂರು ನಗರದ ಲಕ್ಷ್ಮಿ ಲಾಡ್ಜ್ ಸಮೀಪ  ಒಂದು  ಪ್ಲಾಟಿನಮ್ ದ್ವಿಚಕ್ರವಾಹನ, ಹಾಗೂ ನಾಗಪ್ಪ ಬ್ಲಾಕ್ ನಲ್ಲಿ ಒಂದು ಹೆವಿ ಡ್ಯೂಟಿ ದ್ವಿಚಕ್ರವಾಹನ, ಕೋಲಾರದ ಬಳಿ ಒಂದು ಸ್ಟಾರ್ ಸಿಟಿ ದ್ವಿಚಕ್ರವಾಹನ ಹಾಗೂ ಚಿಕ್ಕಬಳ್ಳಾಪುರದ ಬಾರ್ ಸಮೀಪ ಒಂದು ಬಜಾರ್ ಡಿಸ್ಕವರ್ ದ್ವಿಚಕ್ರವಾಹನಗಳನ್ನು ಕಳವು ಮಾಡಿ ಅವುಗಳ ನಂಬರ್ ಪ್ಲೇಟ್ ಗಳ ಮೇಲಿದ್ದ ಮೂಲ ನೊಂದಣಿ ಸಂಖ್ಯೆಗಳನ್ನು ತೆಗೆದುಹಾಕಿ ಬೇರೆ ನೊಂದಣಿ ಸಂಖ್ಯೆಗಳನ್ನು ಹಾಕಿಸಿ ಅವುಗಳನ್ನು  ಜೋಳಶೆಟ್ಟಿಹಳ್ಳಿ ಮತ್ತಿತ್ತರೆ ಕಡೆ ಮಾರಾಟ ಮಾಡಿರುವುದಾಗಿಯೂ  ಹಾಗೂ ಇತ್ತೀಚಿಗೆ  ಗೌರಿಬಿದನೂರು ನಗರದ ಅಯ್ಯಪ್ಪ ದೇವಸ್ಥಾನದ ಬಳಿ ಒಂದು ಸ್ಪ್ಲೆಂಡರ್  ದ್ವಿಚಕ್ರವಾಹನವನ್ನು ಕಳವು ಮಾಡಿ ಅದರ ನೊಂದಣಿ ಸಂಖ್ಯೆಯನ್ನು ಸಹ ಬದಲಾವಣೆ ಮಾಡಿ ಈ ವಾಹನದಲ್ಲಿ ಬೇರೆ ವಾಹನಗಳನ್ನು ಕಳವು ಮಾಡಲು ಸುತ್ತಾಡುತ್ತಿರುವುದಾಗಿ ತಿಳಿಸಿರುತ್ತಾರೆ.  ಆದ್ದರಿಂದ ಈ ಶಂಕಿತ ವ್ಯಕ್ತಿಗಳು ಅವೇಳೆ ಹೊತ್ತಿನಲ್ಲಿ ಸುತ್ತಾಡುತ್ತಾ ಬೇರೆಯವರ ವಾಹನಗಳನ್ನು ಕಳವು ಮಾಡಿ ಮಾರಾಟ ಮಾಡಿರುವುದರಿಂದ ಈ ವ್ಯಕ್ತಿಗಳ ವಿರುದ್ದ ಸ್ವತ: ನಾನು ಬೆಳಗಿನ ಜಾವ 05-00 ಗಂಟೆಗೆ ಠಾಣಾ ಮೊ.ಸಂ. 15/2021 ಕಲಂ 41 ಕ್ಲಾಸ್ (D) ಸಿ.ಆರ್.ಪಿ.ಸಿ. ರೆ/ವಿ 379 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 16/2021 ಕಲಂ. 279,337 ಐಪಿಸಿ :-

ದಿನಾಂಕ:25/01/2021 ರಂದು ಸಂಜೆ:07-00 ಗಂಟೆಯಲ್ಲಿ ಪಿರ್ಯಾದಿದಾರರಾದ ಪ್ರದೀಪ್ ಎಲ್. ಬಿನ್ ಲಕ್ಷ್ಮಯ್ಯ, 28 ವರ್ಷ, ಚಾಲಕ, ವಾಸ: ಆವುಲನಾಗೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದುರಿನ ಸಾರಾಂಶವೆನೆಂದರೆ ತಾನು ವಿಕೆ ಟ್ರಾವೆಲ್ಸ್ ನಲ್ಲಿ ಕೆಲಸವನ್ನು ನಿರ್ವಹಿಸುತ್ತೀದ್ದು, ದಿನಾಂಕ:22/01/2021 ರಂದು ಸಂಜೆ ಸುಮಾರು 7-30 ಗಂಟೆ ಸಮಯದಲ್ಲಿ ಪೆರೇಸಂದ್ರದ ಕಡೆಯಿಂದ ಗುಡಿಬಂಡೆ ಕಡೆ ಸಮಯದಲ್ಲಿ ತನ್ನ ವಾಹನದ ಸಂಖ್ಯೆ KA-53 AA- 1384 ಕಾರಿನಲ್ಲಿ ತಾನೂ ಚಾಲನೆ ಮಾಡಿಕೊಂಡು ಅಪ್ಪಿರೆಡ್ಡಿಹಳ್ಳಿ ಕ್ರಾಸ್ ಬಳಿ ಬರುತ್ತೀದ್ದಾಗ ಗುಡಿಬಂಡೆ ಕಡೆಯಿಂದ ಬರುತ್ತಿರುವಂತಹ ಟ್ರಾಕ್ಟರ್ KA-40 TA-3427 ಟ್ರಾಕ್ಟರ್ ಚಾಲಕ ತನ್ನ ವಾಹವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನ ಮುಂಭಾಗಗ ಬಲಭಾಗ ಜಕಂ ಗೊಂಡಿರುತ್ತೆದೆ, ಮತ್ತು ತನಗೆ ಬಲಕಾಳಿನ ಮೊಣಕಾಲಿಗೆ ಹಾಗೂ ತುಟಿಯ ಮೇಲ್ಭಾಗ ಗಾಯವಾಗಿರುತ್ತೆ. ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಬಮದು ಈ ದಿನ ತಡವಾಗಿ ದೂರನ್ನು ನೀಡಿರುತ್ತಾರೆ. ಆದ್ದರಿಂದ ತನಗೆ ಅಪಘಾತ ಪಡಿಸಿದ ಟ್ರಾಕ್ಟರ್ ಚಾಲಕ ಮಂಜುನಾಥ ಬಿನ್ ಲಕ್ಷ್ಮಯ್ಯ, ಆದಿಕರ್ನಾಟಕ ಜನಾಂಗ, ಚಾಲಕ ಮತ್ತು ವಾಹನದ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಕಲು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 08/2021 ಕಲಂ. 279,304(ಎ) ಐಪಿಸಿ :-

ದಿನಾಂಕ 25-01-2021 ರಂದು ರಾತ್ರಿ 07.00 ಗಂಟೆಗೆ ಪಿರ್ಯಾರ್ಧಿದಾರರಾದ ಜಿ.ಕೆ ರಾಮಕೃಷ್ಣ ಬಿನ್ ಕ್ರಿಷ್ಣಪ್ಪ, 36 ವರ್ಷ, ಭೋವಿ ಜನಾಂಗ, ಜಿರಾಯ್ತಿ, ವಾಸ ಗುಡಿಸಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆಗೆ 5 ಜನ ಮಕ್ಕಳು, ಎಲ್ಲರೂ ಬೇರೆ ಬೇರೆ ವಾಸವಾಗಿರುತ್ತಾರೆ. ತನ್ನ ಅಣ್ಣ ಚಂದ್ರಪ್ಪ 38 ವರ್ಷ,   ಇನ್ನೊಬ್ಬ ಅಣ್ಣ ಶ್ರೀನಿವಾಸ ರವರ ಬಳಿ ಜಿರಾಯ್ತಿ ಕೂಲಿಕೆಲಸ ಮಾಡಿಕೊಂಡಿದ್ದನು. ದಿನಾಂಕ: 25-01-2021 ರಂದು ಸಂಜೆ 5-10 ಗಂಟೆ ಸಮಯದಲ್ಲಿ ತಮ್ಮೂರಿನ ಕ್ರಿಷ್ಣಾರೆಡ್ಡಿ ರವರು ತನಗೆ ಪೋನ್ ಮಾಡಿ ತನ್ನ ಅಣ್ಣ ಚಂದ್ರಪ್ಪ ರವರು ಶ್ರೀನಿವಾಸ ರವರ ಬಾಬತ್ತು ಗುಡಿಸಲಹಳ್ಳಿ ಬಳಿ ಇರುವ ಗದ್ದೆಯಲ್ಲಿ ಭತ್ತದ ಪೈರನ್ನು ನೆಡಲು ಶ್ರೀನಿವಾಸ ರವರ ಟ್ರಾಕ್ಟರ್ ಸಂಖ್ಯೆ ಕೆ.ಎ-40-ಟಿಎ-2791 ನಲ್ಲಿ  ಗದ್ದೆಯಲ್ಲಿ ಸದರ ಮಾಡುತ್ತಿದ್ದಾಗ ಚಾಲಕ ಚಂದ್ರಪ್ಪ ರವರು ಟ್ರಾಕ್ಟರ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಗನಿಮೆಯ ಮೇಲೆ ಹತ್ತಿಸಿದ ಪರಿಣಾಮ ಟ್ರಾಕ್ಟರ್ ಪಲ್ಟಿ ಹೊಡೆದು ಟ್ರಾಕ್ಟರ್ ಕೆಳಗೆ ಸಿಕ್ಕಿಕೊಂಡಿದ್ದಾನೆ ಬೇಗ ಬರಲು ತಿಳಿಸಿದನು, ತಾನು ಮತ್ತು ತಮ್ಮವರೆಲ್ಲರೂ  ತಮ್ಮ ಗದ್ದೆಯ ಬಳಿ ಹೋಗಿ ಟ್ರಾಕ್ಟರ್ ಅನ್ನು ಎಲ್ಲರೂ ಸೇರಿ ಜೆ.ಸಿ.ಬಿ ಯಲ್ಲಿ ಪಕ್ಕಕ್ಕೆ ತೆಗೆದು ನೋಡಲಾಗಿ ತಮ್ಮ ಅಣ್ಣ ಚಂದ್ರಪ್ಪರವರಿಗೆ ಕತ್ತಿನ ಭಾಗದಲ್ಲಿ, ಎದೆಯ ಮೇಲೆ ಒತ್ತಿದ ಗಾಯಗಳಾಗಿ ಕಿವಿಯಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ವಿಚಾರ ಮಾಡಲಾಗಿ  ಈ ದಿನ ದಿನಾಂಕ: 25-01-2021  ರಂದು ಸಂಜೆ 5-00 ಗಂಟೆಯಲ್ಲಿ ತನ್ನ ಅಣ್ಣ ಚಂದ್ರಪ್ಪ ರವರು ಮೇಲ್ಕಂಡ ಟ್ರಾಕ್ಟರ್ ಸದರ ಮಾಡುತ್ತಿದ್ದಾಗ ಈ ಅಪಘಾತ ನಡೆಯಿತ್ತೆಂತ ಗೊತ್ತಾಯಿತು. ನಂತರ ಮೃತದೇಹವನ್ನು ಒಂದು ಟಾಟಾ ಎಸಿಇ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದೆವು, ಆದ್ದರಿಂದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 08/2021 ಕಲಂ. 143,323,324,341,504,506,120B ರೆ/ವಿ 149 ಐಪಿಸಿ :-

ದಿನಾಂಕ.25-01-2021 ರಂದು 5-00 ಗಂಟೆಗೆ ನ್ಯಾಯಾಲಯದ ಪಿ.ಸಿ.20 ಪ್ರಶಾಂತ್ ರವರ ಮೂಲಕ ಶಿಡ್ಲಘಟ್ಟ ಘನ ನ್ಯಾಯಾಲಯದ ಪಿ.ಸಿ.ಆರ್.ನಂ.02/2021 ರ ದೂರನ್ನು ಪಡೆದಿದ್ದರ ಸಾರಾಂಶವೇನೆಂದರೆ, ಈ ಕೇಸಿನ ಪಿರ್ಯಾದಿ ಮೆಹಬೂಬ್ ಪಾಷ ಬಿನ್ ನಜೀರ್ ಅಹ್ಮದ್, ಮುಸ್ಲಿಂ ಜನಾಂಗ, ಖಾಸಿಂ ಪಾಳ್ಯ, ಶಿಡ್ಲಘಟ್ಟ ಟೌನ್ ರವರು ದಿನಾಂಕ:01-08-2019 ರಂದು ಸಂಜೆ ಸುಮಾರು 6-00 ಗಂಟೆಯಲ್ಲಿ ತಾನು ಐ.ಬಿ ಬಳಿಯಿಂದ ನಮ್ಮ ಮನೆಯಲ್ಲಿದ್ದ ಮೇಕೆಗಳಿಗೆ ಮೇವನ್ನು ತೆಗೆದುಕೊಂಡು ಬಂದಾಗ ಪಕ್ಕದ ಮನೆಯ ವಾಸಿಗಳಾದ 1) ಅಯೂಬ್ ಖಾನ್ ಬಿನ್ ರಸೂಲ್ 2) ಸಯದ್ ಪಾಷ ಬಿನ್ ಅಯೂಬ್ ಖಾನ್ 3) ಜಬೀನಾ ಕೋಂ ಅಯೂಬ್ ಪಾಷ 4) ತಮೀಮ್ ಪಾಷ ಬಿನ್ ಬಾಬಾ 5) ಸಾಹಿದಾ ಕೋಂ ತಮೀಮ್ ಪಾಷ ಮತ್ತು 6) ಕುಮಾರಿ ಆಯಿಷಾ ಬಿನ್ ಆಯೂಬ್ ಖಾನ್ ರವರುಗಳು ಸಂಚು ರೂಪಿಸಿಕೊಂಡು ಒಟ್ಟಾಗಿ ಗುಂಪು ಸೇರಿ ತನ್ನನ್ನು ತಮ್ಮ ಮನೆಯ ಮುಂದೆ ಇರುವ ರಸ್ತೆಯಲ್ಲಿ ಓಡಾಡದಂತೆ ತಡೆದು  ಜಗಳ ಮಾಡಿ, ಬಾಯಿಗೆ ಬಂದಂತೆ ಬೈದು ಕೈಗಳಿಂದ ಮೈ ಮೇಲೆ ಹೊಡೆದು, ಕಾಲುಗಳಿಂದ ಒದ್ದು ನೋವನ್ನುಂಟು ಮಾಡಿ ಬೆದರಿಕೆ ಹಾಕಿರುವುದಾಗಿ  ಮೇಲ್ಕಂಡವರು ಕಲಂ: 143, 323, 324, 341, 504, 506, 120(ಬಿ) ರೆ.ವಿ 149  ಐಪಿಸಿ ರೀತ್ಯ ಅಪರಾಧ ಮಾಡಿರುತ್ತಾರೆಂತ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನ್ಯಾಯಾಲಯದ ಮೂಲಕ ಸಲ್ಲಿಸಿಕೊಂಡಿರುವ ದೂರಿನ ಸಾರಾಂಶದ ಮೇರೆಗೆ ಠಾಣಾ ಮೊ.ಸಂ.07/2021  ಕಲಂ: 143, 323, 324, 341, 504, 506, 120(ಬಿ) ರೆ.ವಿ 149   ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.