ದಿನಾಂಕ :25/11/2020 ರ ಅಪರಾಧ ಪ್ರಕರಣಗಳು

1) ಬಟ್ಲಹಳ್ಳಿ  ಪೊಲೀಸ್ ಠಾಣೆ ಮೊ.ಸಂ.114/2020 ಕಲಂ:20(b) NARCOTIC DRUGS & PSYCHOTROPIC SUBSTANCES ACT, 1985:-

     ದಿನಾಂಕ: 25/11/2020 ರಂದು ಬೆಳಿಗ್ಗೆ 10-30 ಗಂಟೆಗೆ ಎ,ಎಸ್,ಐ ವೆಂಕಟರವಣಪ್ಪ ಬಟ್ಲಹಳ್ಳಿ  ಸಾಹೇಬರು  ಹೆಚ್.ಸಿ 36 ರವರ ಮುಖಾಂತರ ಕಳುಹಿಸಿಕೊಟ್ಟು ದೂರಿನ ಸಾರಾಂಶವೇನೆಂದರೆ, ದಿನಾಂಕ:25/11/2020 ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿ ಠಾಣಾ ಪ್ರಭಾರದಲ್ಲಿದ್ದಾಗ ಠಾಣಾ ವ್ಯಾಪ್ತಿಯ ಕೋನಕುಂಟ್ಲ ದೇವಾಲಯದ ಬಳಿ ರಾಮಕೋಟಿ ನಡೆಯುವ ಕಟ್ಟಡದ ಮುಂದೆ ಇರುವ ಥಾರ್ ರಸ್ತೆಯ ಬದಿಯಲ್ಲಿ ಯಾರೋ ಒಬ್ಬ ಆಸಾಮಿಯು ದ್ವಿಚಕ್ರವಾಹನವನ್ನು ನಿಲ್ಲಿಸಿಕೊಂಡು ಅಕ್ರಮವಾಗಿ ಗ್ರಾಹಕರಿಗೆ ಗಾಂಜಾವನ್ನು ಮಾರಾಟಮಾಡಲು ಬಂದಿರುತ್ತಾನೆ ಎಂತ ಮಾಹಿತಿ ತಿಳಿದು ಬಂದಿದ್ದು, ಸದರಿ ಮಾಹಿತಿಯನ್ನು ನಾನು ಠಾಣೆಯ ದಿನಚರಿಯಲ್ಲಿ ನಮೂದು ಮಾಡಿ ನಂತರ ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿ ಠಾಣೆಯಲ್ಲಿದ್ದ ಸಿಬ್ಬಂದಿಯವರಾದ ಹೆಚ್.ಸಿ 36 ಶ್ರೀ.ವಿಜಯ್ ಕುಮಾರ್ ಬಿ. ಮತ್ತು ಪಿಸಿ 416 ಸಚಿನ್ ಕುಮಾರ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ 40 ಜಿ 62 ರಲ್ಲಿ ಬೆಳಿಗ್ಗೆ 10-40 ಗಂಟೆಗೆ ಠಾಣೆಯನ್ನು ಬಿಟ್ಟು ಕೋನಕುಂಟ್ಲ ದೇವಾಲಯದ ಬಳಿ ರಾಮಕೋಟಿ ನಡೆಯುವ ಕಟ್ಟಡದ ಮುಂದೆ ಇರುವ ಥಾರ್ ರಸ್ತೆಯ ಬಳಿಗೆ ಬೆಳಿಗ್ಗೆ 11-00 ಗಂಟೆಗೆ ಹೋಗುವಷ್ಟರಲ್ಲಿ ಅಲ್ಲಿ ಇದ್ದ ಯಾರೋ ಒಬ್ಬ ಆಸಾಮಿಯು ಪೊಲೀಸ್ ಜೀಪ್ ಅನ್ನು ನೋಡಿ ಆತನ ಕೈಯಲ್ಲಿದ್ದ ಯಾವುದೋ ಒಂದು ಸಣ್ಣ ಕವರ್ ನೊಂದಿಗೆ ದ್ವಿಚಕ್ರ್ರವಾಹನದಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದು ಆಗ ನನ್ನ ಜೊತೆಯಲ್ಲಿದ್ದ ಸಿಬ್ಬಂದಿಯವರ ಸಹಾಯದಿಂದ ಸದರಿ ವ್ಯಕ್ತಿಯನ್ನು ಹಿಂಬಾಲಿಸಿ ಹಿಡಿದುಕೊಂಡು ಸದರಿ ವ್ಯಕ್ತಿಯ ಹೆಸರು ವಿಳಾಸವನ್ನು ವಿಚಾರಿಸಲಾಗಿ ತನ್ನ ಹೆಸರು ಬಿ.ಕೆ ವೆಂಕಟರವಣ @ ನಲ್ಲ ವೆಂಕಟರವಣ ಬಿನ್ ಲೇಟ್ ಕೋನಪ್ಪ, 38 ವರ್ಷ, ಆದಿ ಕರ್ನಾಟಕ ಜನಾಂಗ , ವ್ಯವಸಾಯ, ವಾಸ: ಬೋಡಂಪಲ್ಲಿ  ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ ನಂ:9632377768 ಎಂದು ತಿಳಿಸಿದ್ದು ಸದರಿ ಆಸಾಮಿಯನ್ನು ಕುರಿತು ಪೋಲೀಸ್ ಜೀಪ್ ಅನ್ನು ನೋಡಿ ಪರಾರಿಯಾಗಲು ಪ್ರಯತ್ನಿಸಿದ್ದು  ಯಾಕೆ ಎಂದು ಪ್ರಶ್ನಿಸಲಾಗಿ ಸದರಿ ಆಸಾಮಿಯು ನಾನು ಗಾಂಜಾವನ್ನು ಗ್ರಾಹಕರಿಗೆ ಮಾರಾಟಮಾಡಲು ಬಂದಿದ್ದರಿಂದ ಪರಾರಿಯಾಗಲು ಪ್ರಯತ್ನಿಸಿರುತ್ತೇನೆಂದು ತಿಳಿಸಿದ್ದು,  ನಂತರ ಗಾಂಜಾ ಬಗ್ಗೆ ಮಾಹಿತಿ ಕೇಳಲಾಗಿ ನನಗೆ ಈಗ್ಗೆ 2 ದಿನಗಳ ಹಿಂದೆ ತೆಲುಗು ಬಾಷೆಯಲ್ಲಿ ಮಾತನಾಡುತ್ತಿದ್ದ ಆಂದ್ರಪ್ರದೇಶದ ಹೆಸರು ಮತ್ತು ವಿಳಾಸ ತಿಳಿಯದ ಯಾರೋ ಆಸಾಮಿಯೊಬ್ಬ ಇದೇ ಕೋನಕುಂಟ್ಲ ಬಳಿ ಗಾಂಜಾವನ್ನು ನನಗೆ ಮಾರಾಟ ಮಾಡಿದ್ದು, ಅದನ್ನು ನಾನು ಈ ದಿನ ಗ್ರಾಹಕರಿಗೆ ಮಾರಾಟಮಾಡಿ ಹೆಚ್ಚಿನ ಹಣ ಸಂಪಾದನೆ ಮಾಡಲು  ಇಲ್ಲಿಗೆ ಬಂದಿದ್ದಾಗ ಪೊಲೀಸ್ ಜೀಪು ಬಂದಿದ್ದನ್ನು ನೋಡಿ ನಾನು ದ್ವಿಚಕ್ರವಾಹನದಲ್ಲಿ ಪರಾರಿಯಾಗಲು ಪ್ರಯತ್ನಿಸಿರುವುದಾಗಿ ಹಾಗೂ ಆತನ ಬಳಿ ಪ್ಲಾಸ್ಟಿಕ್ ಕವರ್ ನಲ್ಲಿ ಸುಮಾರು 200 ಗ್ರಾಂ ತೂಕದ ಗಾಂಜಾ ಇರುವುದಾಗಿ ತಿಳಿಸಿದ್ದು, ಸದರಿ ಆರೋಪಿಯನ್ನು ಮತ್ತು ಆತನ ಗಾಂಜಾ ಮಾರಾಟ ಮಾಡಲು ಹಾಕಿಕೊಂಡು ಬಂದಿದ್ದ ಕೆಎ 53 ಡಬ್ಲ್ಯೂ 4739 ನೊಂದಣಿ ಸಂಖ್ಯೆಯ ಕೆಂಪು ಮತ್ತು ಕಪ್ಪು  ಬಣ್ಣದ ಹೀರೋ ಹೊಂಡಾ ಪ್ಯಾಷನ್ ಪ್ರೋ ಕಂಪನಿಯ ದ್ವಿಚಕ್ರವಾಹನವನ್ನು ಹಾಗೂ ಆಸಾಮಿಯ ಬಳಿಯಿದ್ದ ಗಾಂಜಾ ಮಾಲನ್ನು ನಾನು ನನ್ನ ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ವಶಕ್ಕೆ ಪಡೆದುಕೊಂಡಿದ್ದು ಈ ಬಗ್ಗೆ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ಈ ದೂರನ್ನು ಠಾಣೆಯ ಹೆಚ್.ಸಿ 36 ರವರ ಜೊತೆಯಲ್ಲಿ ಕಳುಹಿಸಿದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ಸೂಚಿಸಿ ಕಳುಹಿಸಿದ್ದ ದೂರಿನ ಸಾರಾಂಶವಾಗಿರುತ್ತದೆ.

2) ಡಿ.ಸಿ.ಬಿ/ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.26/2020 ಕಲಂ: 419,420 ಐ.ಪಿ.ಸಿ & 66(D) (INFORMATION TECHNOLOGY  ACT 2000:-

     ದಿನಾಂಕ:25-11-2020 ರಂದು ದೂರುದಾರರಾದ ಶ್ರೀ ವೆಂಕಟೇಶ್ ಬಾಬು ಬಿನ್ ಲೇಟ್ ಎನ್.ವಿ ಪಾಪಯ್ಯ ಶೆಟ್ಟಿ ಜಂಗಮಾರಪ್ಪನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, ಮೊಬೈಲ್ ನಂಬರ್-9741956211 ರವರು ಠಾಣೆಗೆ ಹಾಜರಾಗಿ ನೀಡಿದ ಮದ್ರಿತ ದೂರಿನ ಸಾರಾಶವೇನೆಂದರೆ ದಿನಾಂಕ:28-09-2020 ರಂದು ಜ್ಯೋತಿಸಿಂಗ್ ಬಿನ್ ಅವದನ್ ಸಿಂಗ್, ದ್ವಾಯ್ನೆ ಪೌಂಡೇಷನ್,  ಮೊಬೈಲ್ ನಂಬರ್-7604060698 ರವರು ನನಗೆ ಪೋನ್ ಮಾಡಿ ನಿಮಗೆ $17400 ಡಾಲರ್ ಲಾಟರಿ ಬಂದಿದೆ ಎಂತ ನಂಬಿಸಿ ನನಗೆ ಜಿ.ಎಸ್.ಟಿ, ಇನ್ ಕಂ ಟ್ಯಾಕ್ಸ್ ,ಸೆಂಟ್ರಲ್ ಟ್ಯಾಕ್ಸ್,  ಕರೆಂಟ್ ಅಕೌಂಟ್ ಶುಲ್ಕ ಹಾಗೂ ಇತರೇ ಶುಲ್ಕ ಎಂತ ಹೇಳಿ ನನ್ನಿಂದ ಒಟ್ಟು4,37200/ರೂಪಾಯಿಗಳನ್ನು ನಾನು ನಮಗೆ ಗೊತ್ತಿರುವ ಸೋಮಶೇಖರ್ ಎಂಬುವವರ ಪೋನ್ ಪೇ ನಂಬರ್-9901389200 ಸಂಖ್ಯೆಯಿಂದ ಹಾಗೂ ಬಿಬಿ ರಸ್ತೆಯಲ್ಲಿರುವ ಎಸ್.ಬಿ.ಐ ಬ್ಯಾಂಕಿನ ಕೆಳಗಡೆ ಇರುವ ಮನಿ ಟ್ರಾನ್ಸ್ ಫರ್ ಅಂಗಡಿಯಿಂದ ಅವರು ನೀಡಿದ್ದ ಪೋನ್ ಪೇ ನಂಬರ್-9135120937, ಹಾಗೂ 8116526551, ಹಾಗೂ ಎಸ್,ಬಿ,ಐ ಬ್ಯಾಂಕ್ ಖಾತೆ ಸಂಖ್ಯೆ 33465189764, IFSC-SBIN0000300 ಗೆ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ಸಂಖ್ಯೆ 1260000100259071, IFSC CODE-PUNB0126000 ಗೆ ಹಣ ವರ್ಗಾವಣೆ ಮಾಡಿರುತ್ತೇನೆ, ಅವರು ಹೇಳಿದಷ್ಟು ಹಣ ವರ್ಗಾವಣೆ ಮಾಡಿದ್ದರೂ ಇದೂವರೆವಿಗೂ ನನಗೆ ಯಾವುದೇ ರೀತಿಯ ಹಣ ನೀಡದೇ ಇರುವುದರಿಂದ  ಈದಿನ ಠಾಣೆಗೆ ಹಾಜರಾಗಿ ದೂರು ನೀಡುತ್ತಿದ್ದು ತಾವುಗಳು ನನಗೆ ಲಾಟರಿಯಲ್ಲಿ $17400 ಡಾಲರ್ ಬಂದಿದೆ ಎಂತ ನಂಬಿಸಿ ನನ್ನಿಂದಒಟ್ಟು4,37200/ರೂಪಾಯಿಗಳನ್ನು ನನ್ನಿಂದ ಹಣ ವರ್ಗಾವಣೆ ಮಾಡಿಸಿಕೊಂಡಿರುವವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಂಡು ನನ್ನ ಹಣ ನನಗೆ ವಾಪಸ್ಸು ಕೊಡಿಸಬೇಕೆಂದು ಕೋರಿ ನೀಡಿರುವ ದೂರಾಗಿರುತ್ತದೆ.

3) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.169/2020 ಕಲಂ: 324,504 ಐ.ಪಿ.ಸಿ :-

     ದಿ:24.11.2020 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿದಾರರಾದ ನರಸಿಂಹಪ್ಪರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನಗೆ 1 ನೇ ಮಗ ರಂಜಿತ್ ಕುಮಾರ್ ಮತ್ತು 2 ನೇ ಮಗಳು ಲಾವಣ್ಯ ಆಗಿದ್ದು, ತನ್ನ ಮಗಳಾದ ಲಾವಣ್ಯರವರನ್ನು ಈಗ್ಗೆ 3 ತಿಂಗಳ ಹಿಂದೆ ದೊಡ್ಡಬಳ್ಳಾಪುರ ತಾಲ್ಲೂಕು ಭೂಮೇನಹಳ್ಳಿ ಗ್ರಾಮದ ವಾಸಿ ಕದಿರಪ್ಪರವರ 2 ನೇ ಮಗನಾದ ಮುನಿರಾಜುರವರಿಗೆ ಕೊಟ್ಟು ಮದುವೆ ಮಾಡಿದ್ದು , ಅವರು ಬೆಂಗಳೂರಿನ ವೆಂಕಟಾಲ ಬಳಿ ಬಾಡಿಗೆ ಮನೆಯನ್ನು ಮಾಡಿಕೊಂಡು ವಾಸವಾಗಿದ್ದು, ದಿ:21.11.2020 ರಂದು ತನ್ನ ಮಗಳಾದ ಲಾವಣ್ಯರವರನ್ನು ತಮ್ಮ ಮನೆಗೆ ಕರೆದುಕೊಂಡು ಬಂದಿದ್ದು, ದಿ:22.11.2020 ರಂದು ಸಂಜೆ 7-00 ಗಂಟೆ ಸಮಯದಲ್ಲಿ ತಮ್ಮ ಅಳಿಯ ಮುನಿರಾಜು ತಮ್ಮ ಮನೆಯ ಬಳಿ ಬಂದಿದ್ದು, ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ತನ್ನ ಮೇಲೆ ವಿನಾ ಕಾರಣ ಜಗಳ ತೆಗೆದು ಲೊಫರ್ ನನ್ನ ಮಗನೇ ನನ್ನ ಹೆಂಡತಿಯನ್ನು ಕರೆದುಕೊಂಡು ಬರಲು ನೀನ್ಯಾರೋ ನಿನ್ನಮ್ಮ ನಾ ಕ್ಯಾಯ ಎಂದು ಅವಾಛ್ಯ ಶಬ್ದಗಳಿಂದ ಬೈದು ಇಟ್ಟಿಗೆಯಿಂದ ತನ್ನ ಹೊಟ್ಟೆಯ ಬಲಗಡೆ ಹೊಡೆದಿದ್ದು, ತಾನು ಕೆಳಗಿ ಬಿದ್ದು ಹೋಗಿರುತ್ತೇನೆ ಅಷ್ಟರಲ್ಲಿ ತನ್ನ ಕೈಯಲ್ಲಿದ್ದ ಚಾಕುವಿನಿಂದ ತನ್ನ ಬೆನ್ನಿನ ಮದ್ಯಭಾಗ ಮತ್ತು ಹೊಟ್ಟೆಯ ಎಡಗಡೆ ಚುಚ್ಚಿ ರಕ್ತ ಗಾಯ ಪಡಿಸಿರುತ್ತಾನೆ. ಅಷ್ಟರಲ್ಲಿ ತಮ್ಮ ಗ್ರಾಮದ ಸುಬ್ಬನ್ನ ಬಿನ್ ನಾಗಪ್ಪ , ರವಿಕುಮಾರ್ ಬಿನ್ ನಾರಾಯಣಪ್ಪರವರುಗಳು ಬಂದು ಗಲಾಟೆಯನ್ನು ಬಿಡಿಸಿ ತನ್ನನ್ನು ಯಾವುದೋ ಆಟೋದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೋಗಲು ತಿಳಿಸಿದ್ದು, ಅದರಂತೆ ಬೆಂಗಳೂರಿನ ಬ್ಯಾಟರಾಯನಪುರದ ಬಳಿ ಇರುವ ಪ್ರೋ ಲೈಫ್ ಆಸ್ಪತ್ರೆಗೆ  ಹೋಗಿ ಚಿಕಿತ್ಸೆ ಪಡೆದುಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ತನಗೆ ಚಾಕುವಿನಿಂದ ಚುಚ್ಚಿ ಇಟ್ಟಿಗೆಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿರುವ ತಮ್ಮ ಅಳಿಯ ಮುನಿರಾಜುರವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

4) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.82/2020 ಕಲಂ: ಮನುಷ್ಯ ಕಾಣೆ :-

     ದಿನಾಂಕ:24-11-2020 ರಂದು  ಸಂಜೆ 4-00 ಗಂಟೆಯಲ್ಲಿ ಈ ಕೇಸಿನ ಪಿರ್ಯಾಧಿ ಶ್ರೀಮತಿ ಲಕ್ಷ್ಮಿ ಕೋಂ ಅರ್ ರಮೇಶ್ ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ  ತಮ್ಮ ಸ್ವಂತ ಊರು ಕನಕಪುರ ಬಳಿ ಹತ್ತಿಹಳ್ಳಿ ಗ್ರಾಮವಾಗಿದ್ದು ನನ್ನ ಗಂಡ ಅರ್.ರಮೇಶ್ ರವರು ಸಹ ಪಕ್ಕದ ಹೊಸದೊಡ್ಡಿ ಗ್ರಾಮದವರಾಗಿದ್ದು  ನನ್ನಗಂಡ ನಮಗೆ ಮದುವೇಗಿಂತ ಮುಂಚಿನಿಂದ  ಚಿಕ್ಕಬಳ್ಳಾಪುರದಲ್ಲಿ ವಾಸವಾಗಿದ್ದು ನಮಗೆ ಈಗ್ಗೆ 16 ವರ್ಷಗಳ ಹಿಂದೆ ಮದುವೇಯಾಗಿದ್ದು ನಾವು  ಚಿಕ್ಕಬಳ್ಳಾಪುರದಲ್ಲಿ ವಾಸವಾಗಿರುತ್ತೇವೆ. ನಮಗೆ  ಒಂದು ಗಂಡು ಹಾಗೂ ಒಂದು ಹೆಣ್ಣು ಮಗಳಿರುತ್ತಾಳೆ. ನನ್ನ ಗಂಡ ಅರ್.ರಮೇಶ್ ರವರು ಚಿಕ್ಕಬಳ್ಳಾಪುರ ನಗರದ ಹಳೆ ಬಸ್ ನಿಲ್ದಾಣದ ಬಳಿ ಟೀ ಡಬ್ಬಾ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾರೆ,  ದಿನಾಂಕ:11-11-2020 ರಂದು ತಾನು ತನ್ನ ಗಂಡ ಇಬ್ಬರೂ ಸಹ  ಬಸ್ ನಿಲ್ದಾಣದಲ್ಲಿ  ಟೀ ಅಂಗಡಿ ಇಟ್ಟು ಸಂಜೆ ಮನೆಗೆ ಹೋಗಿರುತ್ತೇವೆ. ಮರುದಿನ ಬೆಳಗಿನ ಜಾವ 5-30 ಗಂಟೆಗೆ ಟೀ ಅಂಗಡಿ  ತೆಗೆಯುತ್ತಿದ್ದು  ಅಂಗಡಿಗೆ ಹೋಗಿರಬಹುದೆಂದು ತಿಳಿದುಕೊಂಡಿದ್ದು  ಅದರೆ ಅವರು 10-00 ಗಂಟೆಯಾದರೂ ಟೀ ಅಂಗಡಿ ತೆಗೆದಿಲ್ಲವೆಂದು ತಿಳಿದು ಬಂದಿದ್ದರಿಂದ  ತನ್ನ ಗಂಡನ ಪೋನ್ ನಂ:8711022272 ಕ್ಕೆ ಪೋನ್ ಮಾಡಿದರೂ ತೆಗೆಯಲಿಲ್ಲ ಸ್ವಿಚ್ ಅಪ್ ಎಂದು ಬರುತ್ತಿದ್ದು  ಎಲ್ಲಿಯೋ ಹೋಗಿರ ಬಹುದೆಂದು ತಿಳಿದುಕೊಂಡಿದ್ದು ಅನೇಕ ಬಾರಿ ಪೋನ್ ಮಾಡಿದರೂ ಸಹ ಸ್ವಿಚ್ ಅಪ್ ಎಂದು ಬರುತ್ತಿದ್ದು.  ನಂತರ ದಿನಾಂಕ: 15-11-2020 ರಂದು ಸಂಜೆ ಪೋನ್ ಮಾಡಿದಾಗ ತನ್ನ ಗಂಡ ಪೋನ್ ತೆಗೆದು ಮಾತನಾಡಿದ್ದು ತಾನು ಮೇಲುಕೋಟೆಯಲ್ಲಿದ್ದು ಮನೆ ದೇವರ ದೇವಸ್ಥಾನಕ್ಕೆ ಬಂದಿದ್ದು ತನಗೆ ಮನಸ್ಸಿಗೆ ತೊಂದರೆಯಾಗಿದ್ದರಿಂದ  ಯಾರಿಗೂ ಹೇಳದೆ ಬಂದಿದ್ದಾಗಿ  ತನ್ನ ಬಳಿ ಈಗ ಹಣವಿಲ್ಲ ಬೇಗವಾಪಸ್ಸು ಬರುವುದಾಗಿ ಪೋನ್ ಸ್ವಿಚ್ ಅಪ್ ಮಾಡಿಕೊಂಡಿರುತ್ತಾರೆ. ತನ್ನ ಗಂಡ  ಚಿಕ್ಕಬಳ್ಳಾಪುರ ನಗರದಲ್ಲಿ ಕೆಲವು ಕಡೆ ಕೈಸಾಲಗಳು ಮಾಡಿಕೊಂಡಿದ್ದು ಸಾಲವನ್ನು ಅವರಿಗೆ ವಾಪಸ್ಸು ಮಾಡಿರುವುದಿಲ್ಲ ಇದರಿಂದ  ಅವರು ಯಾರಿಗೂ ಹೇಳದೆ ಹೊರಟು ಹೋಗಿರುತ್ತಾರೆ.ತಾನು  ತನ್ನ ಗಂಡ ಈಗ ಬರಬಹುದು ನಾಳೆ ಬರಬಹುದು ಎಂದು ಕಾದಿದ್ದು  ತಮ್ಮ ನೆಂಟರು ಸಂಬಂದಿಕರ  ಬಳಿ ಹೇಳಿಕೊಂಡಿದ್ದೆವು  ಈ ದಿನದ ವರೆಗೆ ವಾಪಸ್ಸು ಬಂದಿರುವುದಿಲ್ಲ. ಅದ್ದರಿಂದ  ಈ ದಿನ ತಡವಾಗಿ ದೂರನ್ನು  ನೀಡುತ್ತಿದ್ದು ನನ್ನ ಗಂಡನನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯ ಕೈಗೊಂಡಿರುತ್ತೆ.

5) ಚಿಂತಾಮಣಿ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.422/2020 ಕಲಂ: 279,304(A) ಐ.ಪಿ.ಸಿ:-

     ದಿನಾಂಕ: 24/11/2020 ರಂದು ಸಂಜೆ 6.30 ಗಂಟೆಗೆ ರಮೇಶ್ ಬಿನ್ ಲೇಟ್ ನಾರಾಯಣರೆಡ್ಡಿ, 40 ವರ್ಷ, ವಕ್ಕಲಿಗರು, ಜಿರಾಯ್ತಿ, ದೊಡ್ಡಗಂಜೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:22/11/2020 ರಂದು ಬೆಳಗ್ಗೆ ತಾನು ಸ್ವಂತ ಕೆಲಸದ ನಿಮಿತ್ತ ತಮ್ಮ ಗ್ರಾಮದಿಂದ ಹೆಚ್.ಕ್ರಾಸ್ ಗೆ ಹೋಗಿ ಬರಲೆಂದು ತನ್ನ ಬಾಬತ್ತು ದ್ವಿಚಕ್ರ ವಾಹನದಲ್ಲಿ ಬೆಂಗಳೂರು-ಕಡಪ ಮಾರ್ಗದ ರಸ್ತೆಯಲ್ಲಿ ಬೆಳಿಗ್ಗೆ ಸುಮಾರು 6.30 ಗಂಟೆ ಸಮಯದಲ್ಲಿ ಮುನಗನಹಳ್ಳಿ ಗೇಟ್ ಬಳಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಹೆಚ್ ಕ್ರಾಸ್ ಕಡೆಯಿಂದ ಯಾವುದೋ ದ್ವಿಚಕ್ರ ವಾಹನದ ಸವಾರ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡ ಭಾಗದಲ್ಲಿನ ಮೋರಿ ಒಂದಕ್ಕೆ ದ್ವಿಚಕ್ರ ವಾಹನವನ್ನು ಡಿಕ್ಕಿ ಹೊಡೆಯಿಸಿ ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋದ. ಕೂಡಲೇ ತಾನು ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಅಲ್ಲಿಗೆ ಹೋಗಿ ನೋಡಲಾಗಿ ಸದರಿ ವ್ಯಕ್ತಿಗೆ ಎಡಕಾಲಿಗೆ ತೀವ್ರಸ್ವರೂಪದ ರಕ್ತಗಾಯವಾಗಿದ್ದು, ಆತನ ಬಾಬತ್ತು ನೊಂದಣಿ ಸಂಖ್ಯೆ ಕೆಎ-53 ಇಯು-2001 ಯಮಹಾ ದ್ವಿಚಕ್ರ ಸಹ ಮುಂಬಾಗ ಜಖಂಗೊಡಿತ್ತು, ಕೂಡಲೇ ತಾನು 108 ಆಂಬ್ಯೂಲೆನ್ಸ್ ಗೆ ಪೋನ್ ಮಾಡಿ  ಆಂಬ್ಯೂಲೆನ್ಸ್ ವಾಹನ ಸ್ಥಳಕ್ಕೆ ಬಂದ ನಂತರ ಗಾಯಾಳುವನ್ನು ಸದರಿ ಆಂಬ್ಯೂಲೆನ್ಸ್ ನಲ್ಲಿ ಹಾಕಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟೆ, ಗಾಯಾಳು ವ್ಯಕ್ತಿಯ ಬಳಿ ಒಂದು ಕಾಲೇಜು ಬ್ಯಾಗ್ ಇದ್ದು ಸದರಿ ಬ್ಯಾಗ್ ನಲ್ಲಿ ಇದ್ದ ದಾಖಲೆಗಳನ್ನು ಪರಿಶೀಲಿಸಲಾಗಿ ಸದರಿ ಗಾಯಾಳು ವ್ಯಕ್ತಿಯ ಹೆಸರು ಮತ್ತು ವಿಳಾಸ ದುರ್ಗ ತುಡು ಬಿನ್ ಕರಣ್ ತುಡು, 28 ವರ್ಷ, ಪಾತರಘರ್ ಗ್ರಾಮ, ಮಯೂರ್ ಬಂಜ್ ಜಿಲ್ಲೆ, ಒಡಿಸ್ಸಾ ರಾಜ್ಯ, ಎಂತ ಆತನ ಬಳಿ ಇದ್ದ ದಾಖಲೆಗಳ ಪರಿಶೀಲನೆಯಿಂದ ತಿಳಿದು ಬಂದಿರುತ್ತದೆ. ಸದರಿ ವ್ಯಕ್ತಿಯು ಅಪರಿಚಿತ ವ್ಯಕ್ತಿ ಆಗಿದ್ದು ಆತನ ಪರಿಚಯ ತನಗೆ ಇರುವುದಿಲ್ಲ. ನಂತರ ಗಾಯಾಳುವಿಗೆ ಸಂಬಂಧಪಟ್ಟ ದಾಖಲೆಗಳಿದ್ದ ಕಾಲೇಜು ಬ್ಯಾಗ್ ನಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ ಸದರಿ ದಾಖಲೆಗಳಲ್ಲಿ ಯಾವುದೋ ಪೋನ್ ನಂಬರ್ ಇದ್ದು ಸದರಿ ಪೋನ್ ನಂಬರ್ ಗೆ ತಾನು ಸಂಪರ್ಕಿಸಿದಾಗ ಅದು ಗಾಯಾಳುವಿನ ಸಂಬಂದಿಕರಿಗೆ ಸಂಬಂಧಪಟ್ಟ ಪೋನ್ ನಂಬರ್ ಆಗಿದ್ದು, ಈ ಅಪಘಾತದ ವಿಚಾರವನ್ನು ತಾನು ಗಾಯಾಳು ದುರ್ಗ ತುಡು ರವರ ಅಣ್ಣನಾದ ಗೋಪಿನಾಥತುಡು ರವರಿಗೆ ತಿಳಿಸಿದಾಗ ಅವರು ಮರು ದಿನ ದಿನಾಂಕ:23/11/2020 ರಂದು ಸಂಜೆ ಒಳಗಾಗಿ ಚಿಂತಾಮಣಿಗೆ ಬಂದು ತಾವೇ ಕಂಪ್ಲೆಂಟ್ ನೀಡುವುದಾಗಿಯೂ ಅಲ್ಲಿಯವರೆಗೂ ದುರ್ಗತುಡು ರವರಿಗೆ ಸಂಬಂಧಪಟ್ಟ ಬ್ಯಾಗ್ ನ್ನು ತನ್ನ ಬಳಿಯೇ ಇಟ್ಟು ಕೊಳ್ಳಿ ಎಂತ ತಿಳಿಸಿದ್ದರಿಂದ ತಾನು ಗಾಯಾಳು ದುರ್ಗತುಡು ರವರಿಗೆ ಸಂಬಂಧಪಟ್ಟ ಬ್ಯಾಗ್ ನ್ನು ತನ್ನ ಬಳಿಯೇ ಇಟ್ಟುಕೊಂಡೆ. ಆದರೇ ಗಾಯಾಳು ದುರ್ಗತುಡರವರ ಸಂಬಂದಿಕರು ದಿನಾಂಕ:23/11/2020 ರಂದು ರಾತ್ರಿಯಾದರೂ ಚಿಂತಾಮಣಿಗೆ ಬಾರದ ಕಾರಣ ತಾನು ಮತ್ತೆ ಅವರಿಗೆ ಫೋನ್ ಮಾಡಿ ವಿಚಾರ ಮಾಡದಾಗ ಅವರು ತಾವು ಈ ದಿನ ದಿನಾಂಕ:24/11/2020 ರಂದು ಸಂಜೆ ಒಳಗಾಗಿ ಬಂದು ಕಂಪ್ಲೆಂಟ್ ನೀಡುವುದಾಗಿ ತಿಳಿಸಿರುತ್ತಾರೆ. ತಾನು ದಿನಾಂಕ:22/11/2020 ರಿಂದ 24/11/2020 ರವರೆಗೆ ಗಾಯಾಳುವಿನ ಸಂಬಂದಿಕರಿಗೆ ಕಾದು ಅವರು ಇದುವರೆಗೂ ಚಿಂತಾಮಣಿಗೆ ಬಂದು ಗಾಯಾಳು ದುರ್ಗತುಡು ರವರ ಅಪಘಾತದ ಘಟನೆಯ ವಿಚಾರವಾಗಿ ಪೊಲೀಸ್ ಠಾಣೆಗೆ ಯಾವುದೇ ದೂರನ್ನು ನೀಡದ ಕಾರಣ ತಾನು ಈ ದಿನ ಸಂಜೆ ಠಾಣೆಗೆ ಹಾಜರಾಗಿ ನಡೆದ ಅಪಘಾತದ ಘಟನೆಯ ಬಗ್ಗೆ ದೂರನ್ನು ನೀಡಿರುತ್ತೇನೆ. ಗಾಯಾಳು ದುರ್ಗತುಡುರವರು ದಿನಾಂಕ:22/11/2020 ರಂದು ಸಂಜೆ ಚಿಂತಾಮಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದರಿಂದ ತಾನು ಸದರಿ ಆಸ್ಪತ್ರೆಗೆ ಬೇಟಿ ಕೊಟ್ಟು ವಿಚಾರ ಮಾಡಲಾಗಿ ಸಂಗತಿ ನಿಜವಾಗಿದ್ದು ದುರ್ಗತುಡುರವರ ಮೃತ ದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತಾರೆ. ಈ ಅಪಘಾತಕ್ಕೆ ಮೃತ ದುರ್ಗತುಡುರವರ ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಆದ್ದರಿಂದ ತಾವುಗಳು ಈ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕಾಗಿ ಕೋರಿರುವುದಾಗಿರುತ್ತೆ.

6) ಗೌರಿಬಿದನೂರು ಪುರ  ಪೊಲೀಸ್ ಠಾಣೆ ಮೊ.ಸಂ.194/2020 ಕಲಂ: 379  ಐ.ಪಿ.ಸಿ:-

     ದಿನಾಂಕ;24/11/2020 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಗೌರಿಬಿದನೂರು ತಾಲ್ಲೂಕು ಕೃಷಿ ಇಲಾಖೆಯಲ್ಲಿ ಆತ್ಮ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಜಯಣ್ಣ ಎನ್,ಬಿನ್ ಲೇಟ್ ನರಸಿಂಹಯ್ಯ 51 ವರ್ಷ ಆದ ತಾನು ಇದೇ ಬೆಂಗಳೂರು ಸರ್ಕಲ್ ಅರುಣ ಅಸ್ಪತ್ರೆಯ ಮುಂಭಾಗ ದಿನಾಂಕ;24/11/2020 ರಂದು ಸಂಜೆ 6-00  ತನ್ನ ದ್ವಿಚಕ್ರ ವಾಹನವನ್ನು ಸಂಖ್ಯೆ ಕೆ.ಎ-06 ಇಜೆ 7053 ಹಿರೋ ಹೊಂಡಾ  ನಿಲ್ಲಿಸಿರುತ್ತೇನೆ ತನ್ನ ಸ್ನೇಹಿತನಾದ ವಿಶ್ವನಾಥ ಬಿನ್ ವೆಂಕಟರವಣಪ್ಪ ರವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ವೈದ್ಯರ ಬಳಿ ತೋರಿಸಿ ಮತ್ತೆ ಬಂದು ಸಂಜೆ 6-30 ಗಂಟೆಗೆ  ನೋಡಿದರೆ ಮತ್ತೆ ತನ್ನ ದ್ವಿಚಕ್ರ  ವಾಹನ ಸಂಖ್ಯೆ ಕೆ.ಎ-06 ಇಜೆ 7053 ಹಿರೋ ಹೊಂಡಾ  ಸಂಖ್ಯೆ ಕಾಣೆಯಾಗಿರುತ್ತೆ ನಂತರ ನಾವುಗಳು ಎಲ್ಲಾ ಕಡೆ ಹುಡುಕಾಡಿದರು ಸಹ  ನಮಗೆ ವಾಹನ ಸಿಕ್ಕಿರುವುದಿಲ್ಲಾ ಆದ್ದರಿಂದ  ತಾವುಗಳು ಕಳುವು ಆದ ತನ್ನ ಬಾಬತ್ತು ದ್ವಿಚಕ್ರವಾಹನ ವನ್ನು ಹುಡಿಕಿ ಕೊಡಲು ಈದಿನ ತಡವಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸರುತ್ತೇನೆ.

7) ಗುಡಿಬಂಡೆ  ಪೊಲೀಸ್ ಠಾಣೆ ಮೊ.ಸಂ.190/2020 ಕಲಂ: 279,304(A)   ಐ.ಪಿ.ಸಿ & 187 INDIAN MOTOR VEHICLES ACT:-

     ದಿನಾಂಕ:24/11/2020 ರಂದು ಮದ್ಯಹ್ನ 12-00 ಗಂಟೆಗೆ  ಪಿರ್ಯಾದಿದಾರರಾದ ಲಕ್ಷ್ಮಮ್ಮ ಕೋಂ ಲೇಟ್ ದೊಡ್ಡಣ್ಣ, 45 ವರ್ಷ, ಕುರುಬ ಜನಾಂಗ, ಕೂಲಿ ಕೆಲಸ, ವಾಸ: ಕಾಡಚಿಕ್ಕನಹಳ್ಳಿ ಗ್ರಾಮ, ಗೌರಿದಿನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತನಗೆ 1 ನೇ ಮನೋಜಮ್ಮ, 2 ನೇ ಮುನಿಕೃಷ್ಣ, 3 ನೇ ರವಿಚಂದ್ರ ಎಂಬ ಮಕ್ಕಳಿರುತ್ತಾರೆ. ತನ್ನ 2 ನೇ ಮಗ ಮುನಿಕೃಷ್ಣ ರವರು ಸುಮಾರು 2 ತಿಂಗಳಿಂದ ಅರೂರು ಗ್ರಾಮದ ರಂಗರಾಮ್ ಮೂರ್ತಿ ರವರ ಬಳಿ ಜೆ,ಸಿ,ಬಿ ವಾಹನಕ್ಕೆ ಆಪರೇಟರ್ ಕೆಲಸಕ್ಕೆ ಹೋಗುತ್ತಿದ್ದು ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದನು ದೀಪಾವಳಿ ಹಬ್ಬಕ್ಕೆ ಮನೆಗೆ ಬಂದು ಮನೆಯಲ್ಲಿಯೇ ಇದ್ದು ದಿನಾಂಕ:17/10/2020 ರಂದು ಬೆಳಿಗ್ಗೆ 10-00 ಗಂಟೆಗೆ ಮನೆಯಿಂದ ಕೆಲಸಕ್ಕ ಹೋಗುತ್ತೇನೆಂದು ಹೇಳಿ ಅರೂರು ಗ್ರಾಮಕ್ಕೆ ಹೋದನು ನಂತರ ದಿನಾಂಕ:24/10/2020 ರಂದು ಬೆಳಿಗ್ಗೆ 8-00 ಗಂಟೆಯಲ್ಲಿ ತಮ್ಮ ಪಕ್ಕದ ಮೈಲಗಾನಹಳ್ಳಿ ಗ್ರಾಮದ ಅಶ್ವತ್ಥ ನಾರಾಯಣ ಎಮ್,ಎನ್ ಬಿನ್ ನಾಗರಾಜಪ್ಪ ರವರು ಕರೆ ಮಾಡಿ ತನ್ನ ಮಗ ಮುನಿಕೃಷ್ಣ ರವರು ದಿನಾಂಕ:23/10/2020 ರಂದು ರಾತ್ರಿ ಸುಮಾರು 11-45 ಗಂಟೆ ಸಮಯದಲ್ಲಿ ಅರೂರು ಕ್ರಾಸ್ ನಿಂದು ಸುಮಾರು 150 ಮೀಟರ್ ಹೈದರಾಬಾದ್ ನಿಂದ ಬೆಂಗಳೂರಿಗೆ ಹೋಗುವ ಎನ್,ಎಚ್-43 ರಸ್ತೆಯಲ್ಲಿ ಅಮ್ ಅಪರಂಜಿ ಗ್ರಾನೇಟ್ ಪಾಕ್ಟರಿ ಕಡೆಯಿಂದ ರಸ್ತೆಯನ್ನು ದಾಟುತ್ತಿರುವಾಗ ಯಾವುದೋ  ವಾಹನದ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತ ಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೋರಟು ಹೋಗಿದ್ದು ಅಪಘಾತದಲ್ಲಿ ತನ್ನ ಮಗ ಮುನಿಕೃಷ್ಣ ರವರು ಮೃತ ಪಟ್ಟಿರುವುದಾಗಿ ತಿಳಿಸಿದರು ನಂತರ ತಾನು ಮತ್ತು ತನ್ನ ತಮ್ಮ ಎಮ್,ಜಿ ಶಿವಶಂಕರಪ್ಪ ರವರು ಈ ದಿನ ಬೆಳಿಗ್ಗೆ 9-30 ಗಂಟೆ ಸಮಯಕ್ಕೆ ಸ್ಥಳಕ್ಕೆ ಬಂದು ನೋಡಲಾಗಿ ಅಪಘಾತವು ನಿಜವಾಗಿದ್ದು ಅಪಘಾತದಲ್ಲಿ ತನ್ನ ಮಗನಾದ ಮುನಿಕೃಷ್ಣ ರವರಿಗೆ ತಲೆಯ ಹಿಂಭಾಗ ರಕ್ತಗಾಯವಾಗಿ ಬಲ ಕಣ್ಣಿನ ಬಳಿ ಹಾಗೂ ಪಕ್ಕ ಎಲುಬಿನ ಬಳಿ ತರಚಿತಗಾಯಗಳಾಗಿ ಗಾಯಗಳ ದೆಸೆಯಿಂದ ತನ್ನ ಮಗ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ತನ್ನ ಮಗನ ಮೃತ ದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿದ್ದು ತನ್ನ ಮಗ ಮುನಿಕೃಷ್ಣ ರವರಿಗೆ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತ ಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ ವಾಹನವನ್ನು ಮತ್ತು ಚಾಲಕನನ್ನು ಪತ್ತೆ ಮಾಡಿ ಮುಂದಿನ ಕಾನೂನಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

8) ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.82/2020 ಕಲಂ: 279,337   ಐ.ಪಿ.ಸಿ :-

     ಈ ದಿನ ದಿನಾಂಕ: 24-11-2020 ರಂದು ಸಂಜೆ: 7.00 ಗಂಟೆ ಸಮಯದಲ್ಲಿ ಪಿರ್ಯಾದಿದಾರ ವೆಂಕಟಸುಬ್ಬಾರೆಡ್ಡಿ T A  ಬಿನ್ ಲೆಟ್ ಆದಿರೆಡ್ಡಿ ಸುಬ್ಬರಾಯನ ಹಳ್ಳಿ ಗ್ರಾ, ತಿಮ್ಮಸಂದ್ರ ಅಂಚೆ ಶಿಡ್ಲಘಟ್ಟ ತಾರವರು  ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ನನ್ನ ಮಗನಾದ ವಿ ಪ್ರಶಾಂತ್ 30 ವರ್ಷ ಬಿ ಇ ವ್ಯಾಸಾಂಗ ಮಾಡುತ್ತಿರುತ್ತಾನೆ, ನನ್ನ ತಮ್ಮ ನಾರಾಯಣಸ್ವಾಮಿರವರ ಮಗನಾದ ಅಶೋಕ್       30 ವರ್ಷ ಎಂ ಎಸ್ಸಿ ವ್ಯಾಸಾಂಗ ಮಾಡುತ್ತಿದ್ದು. ಬೆಂಗಳೂರಿನ ಹಿಮಾಲಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ, ಈಗ್ಗೆ ಸುಮಾರು ವಾರದ ಹಿಂದೆ ನನ್ನ ತಮ್ಮನ ಹೆಂಡತಿಯಾದ ನಾಗತ್ನಮ್ಮ ಎಂಬುವವರು ಅನಾರೋಗ್ಯದ ಹಿನ್ನಲೆಯಲ್ಲಿ ತೀರಿಕೊಂಡಿದ್ದು. ದಿ: 26-11-2020 ರಂದು ವೈಕುಂಠ ಸಮಾರಾಧನೆ ಕಾರ್ಯಕ್ರಮವಿದ್ದು. ಸದರಿ ಕಾರ್ಯಕ್ರಮಕ್ಕೆ ಪತ್ರಿಕೆ ನೀಡುವ ಸಲುವಾಗಿ ದಿ: 23-11-2020 ರಂದು ಬೆಳೀಗ್ಗೆ : 9.30 ಗಂಟೆಯ ಸಮಯದಲ್ಲಿ ನನ್ನ ಮಗ ಪ್ರಶಾಂತ್ ಮತ್ತು ಅಶೋಕ್ ರವರು     ಕೆಎ-40 ಇಎಫ್-2471 ನೊಂದಣೀ ಸಂಖ್ಯೆಯ ಟಿ,ವಿ,ಎಸ್ ಅಪಾಚಿ ದ್ವಿ ಚಕ್ರವಾಹನದಲ್ಲಿ ಪಾತಪಾಳ್ಯ ಕಡೆಗೆ ಬಂದಿರುತ್ತಾರೆ.ಅದೇ ದಿನ ಮದ್ಯಾಹ್ನ: 12.00 ಗಂಟೆ ಸಮಯದಲ್ಲಿ ಯಾರೋ ಸಾರ್ವಜನಿಕರು ನನಗೆ ಪೋನ್ ಮಾಡಿ ಬಾಗೇಪಲ್ಲಿ ತಾ. ಗುಟ್ಟಮೀದಪಲ್ಲಿ ಗ್ರಾಮದ ಬಳಿ  ಪ್ರಶಾಂತ್ ಮತ್ತು ಅಶೋಕ್ ರವರಿಗೆ ರಸ್ತೆ ಅಪಘಾತವಾಗಿದ್ದು. ಗಾಯಗೊಂಡಿದ್ದವರನ್ನು ಯಾವುದೋ ಕಾರಿನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ  ತಿಳೀಸಿದ್ದು. ಅದರಂತೆ ನಾನು ನನ್ನ ತಮ್ಮ ನಾರಾಯಣಸ್ವಾಮಿ ಮತ್ತು ನಮ್ಮ ಗ್ರಾಮದ ಶಿವಾರೆಡ್ಡಿ ಬಿನ್ ಲೇಟ್ ಚಿಕ್ಕ ಆದಿರೆಡ್ಡಿ ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು. ಗಾಯಗೊಂಡಿದ್ದ ಅಶೋಕ  ಮತ್ತು ಪ್ರಶಾಂತ್ ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲ  ನಂತರ ಬಾಗೇಪಲ್ಲಿ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ,ಎಂ,ಎಸ್ ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದು. ಅಪಘಾತದ ಬಗ್ಗೆ ಅಶೋಕ್ ರವರನ್ನು ವಿಚಾರ ಮಾಡಲಾಗಿ ನಿನ್ನೆ ದಿ: 23-11-2020 ರಂದು ತಾನು ಮತ್ತು ಪ್ರಶಾಂತ್ ಕೆ,ಎ -40 ಇ,ಎಫ್,-2471 ನೊಂದಣೀ ಸಂಖ್ಯೆಯ ಟಿ,ವಿ,ಎಸ್ ಅಪಾಚಿ ದ್ವಿ ಚಕ್ರ ವಾಹನದಲ್ಲಿ ಬಾಗೇಪಲ್ಲಿ ತಾ ಬುರಗಮಡುಗು ಗ್ರಾಮದಲ್ಲಿ ವೈಕುಂಠ ಸಮಾರಾಧನೆಯ ಪತ್ರಿಕೆ ನೀಡಿ ಶೀಗಲಪಲ್ಲಿ ಗ್ರಾಮದಲ್ಲಿರುವ  ಸಂಬಂದಿಕರಿಗೆ ನೀಡಿರುವ ಸಲುವಾಗಿ ಬಾಗೇಪಲ್ಲಿ-ಚೇಳೂರು ರಸ್ತೆಯಲ್ಲಿ ಹೋಗುತ್ತಿರುವಾಗ ಬೆಳೀಗ್ಗೆ  ಸುಮಾರು 11.30 ಗಂಟೆಯ ಸಮಯದಲ್ಲಿ ಗುಟ್ಟಮೀದಪಲ್ಲಿ ಗ್ರಾಮದ ಬಳೀ ಎದುರುಗಡೆಯಿಂದ ಬಂದ ನೊಂದಣಿ ಸಂಖ್ಯೆಯಿಲ್ಲದ  ಮಸ್ಸೆ ಪರ್ಗ್ಯೂಸನ್ ಟ್ರಾಕ್ಟರ್/ ಟ್ರೈಲರ್ ನ ಚಾಲಕ ಟ್ರಾಕ್ಟರ್ ನ್ನು ಅತಿವೇಗ ಮತ್ತು ಅಜಾಗರೂ ಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ್ದು. ಅದರ ಪರಿಣಾಮ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದ ಪ್ರಶಾಂತ್ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ತಾನು ಕೆಳಗೆ ಬಿದ್ದು ಹೋಗಿದ್ದು ಪ್ರಶಾಂತ್ ರವರಿಗೆ ಬಲ ಮೊಣಗಾಲಿನ ಕೆಳಗೆ ಮೂಳೆ ಮುರಿತದ ಗಾಯ , ಹಣೆಗೆ ರಕ್ತ ಗಾಯ ಮತ್ತು ಬಲಗೈ ಹಾಗೂ ಹೊಟ್ಟೆಯ ಬಳಿ ತರಚಿದ ಗಾಯಗಳು ಮತ್ತು ತನಗೆ ಬಲ ಮೊಣಕಾಲಿನ ಕೆಳಗೆ ಮೂಳೆ ಮುರಿತದ ಗಾಯ , ಬಲಗಣ್ಣಿನ ಉಬ್ಬಿನ ಬಳಿ ರಕ್ತ ಗಾಯಗಳಾಗಿರುವುದಾಗಿ ತಿಳಿಸಿರುತ್ತಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿರುವುದರಿಂದ  ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಅಫಘಾತ ಪಡಿಸಿದ ಟ್ರಾಕ್ಟರ್ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಠಾಣಾ ಮೊ ಸಂ: 82/2020   ಕಲಂ: 279,337 ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಿರುತ್ತೆ.