ದಿನಾಂಕ :25/10/2020 ರ ಅಪರಾಧ ಪ್ರಕರಣಗಳು

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.154/2020 ಕಲಂ: 380,457 ಐ.ಪಿಸಿ:-

     ದಿ:25.10.2020 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಬೈರಾರೆಡ್ಡಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಾನು ಈಗ್ಗೆ ಸುಮಾರು 8 ತಿಂಗಳಿಂದ ಎಂ.ಎಸ್.ಐ.ಎಲ್ ಮದ್ಯ ಮಾರಾಟ ಮಳಿಗೆಯನ್ನು ತಮ್ಮ ಬಾಬತ್ತು ಅಂಗಡಿ ಮಳಿಗೆಯಲ್ಲಿ ಪ್ರಾರಂಭಿಸಿದ್ದು, ತಾನು ಕ್ಯಾಷಿಯರ್ ಆಗಿ ಕೆಲಸ ಮಾಡಿಕೊಂಡಿದ್ದು, ತಾನು ಪ್ರತಿನಿತ್ಯ ಬೆಳಿಗ್ಗೆ 11-00 ಗಂಟೆಗೆ ಬಾರಿನ ಬಾಗಿಲನ್ನು ತೆಗೆದು ವ್ಯಾಪಾರ ಮಾಡಿ ರಾತ್ರಿ 10-00 ಗಂಟೆಗೆ ಬಾಗಿಲನ್ನು ಬೀಗ ಹಾಕಿಕೊಂಡು ಮನೆಗೆ ಹೋಗುತ್ತಿರುತ್ತೇನೆಂದು ಅದೇ ರೀತಿ ದಿನಾಂಕ:24.10.2020 ರಂದು ಬೆಳಿಗ್ಗೆ 11-00 ಗಂಟೆಗೆ ಎಂ.ಎಸ್.ಐ.ಎಲ್ ನ ಬೀಗ ತೆಗೆದು ವ್ಯಾಪಾರ ಮಾಡಿ ರಾತ್ರಿ 10-00 ಗಂಟೆಗೆ ಸದರಿ ಬಾರಿನ ರೋಲಿಂಗ್ ಶೆಟ್ಟರಿನ ಬೀಗಗಳನ್ನು ಮತ್ತು ಕೊಲಪ್ಸಿಯಲ್ ಗೇಟಿನ ಬೀಗಗಳನ್ನು ಹಾಕಿಕೊಂಡು ಮನೆಗೆ ಬಂದಿದ್ದು, ಈ ದಿನ ಬೆಳಿಗ್ಗೆ 8-00 ಗಂಟೆಗೆ ತಮ್ಮ ಎಂ.ಎಸ್.ಐ.ಎಲ್ ಅಂಗಡಿ ಮಳಿಗೆಯ ಮುಂಭಾಗ ಇರುವ ಕೆಂಪಣ್ಣ ಬಿನ್ ವೆಂಕಟರಾಯಪ್ಪರವರು ತನಗೆ ಫೋನ್ ಮಾಡಿ ನಿಮ್ಮ ಮದ್ಯದ ಅಂಗಡಿಯ ಬೀಗಗಳನ್ನು ಯಾರೋ ಹೊಡೆದು ಕಳ್ಳತನ ಮಾಡಿರುತ್ತಾರೆಂದು ತಿಳಿಸಿದ್ದು,  ತಕ್ಷಣ ತಾನು ಸ್ಥಳಕ್ಕೆ ಹೋಗಿ ನೊಡಲಾಗಿ ಯಾರೋ ಕಳ್ಳರು ತಮ್ಮ ಎಂ.ಎಸ್.ಐ.ಎಲ್ ಮದ್ಯ ಮಾರಾಟ ಮಳಿಗೆಯ ಕೊಲಪ್ಸಿಯಲ್ ಗೇಟಿನ  ಬೀಗಗಳನ್ನು ಮತ್ತು ರೋಲಿಂಗ್ ಶೆಟ್ಟರಿನ ಬೀಗಗಳನ್ನು ಕಿತ್ತು ಹಾಕಿ ಒಳಗೆ ಪ್ರವೇಶಿಸಿ ಎರಡು ದಿನಗಳಿಂದ ವ್ಯಾಪಾರ ಮಾಡಿರುವ 90,000/- ನಗದು ಹಣ ಮತ್ತು ಸುಮಾರು 40,000/- ಬೆಲೆ ಬಾಳುವ ವಿವಿಧ ಕಂಪನಿಯ ಮದ್ಯದ ಬಾಟಲ್ ಗಳನ್ನು ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದ್ದು, ನಂತರ ಲೆಡ್ಜರ್ ಪುಸ್ತಕವನ್ನು ಮತ್ತು ಅಬಕಾರಿ ಇಲಾಖೆಯವರೊಂದಿಗೆ ಚರ್ಚಿಸಿ ಒಟ್ಟು ಎಷ್ಟು ನಗದು ಹಣ ಮತ್ತು ಮಾಲು ಕಳುವಾಗಿರುತ್ತದೆಂದು ನಂತರ ತಿಳಿಸಲಾಗುವುದೆಂದು ಈ ಬಗ್ಗೆ ತಾವು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಕಳುವಾದ ಮಾಲನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

  1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.74/2020 ಕಲಂ: 78(3) ಕೆ.ಪಿ ಆಕ್ಟ್:-

     ದಿನಾಂಕ: 24-10-2020 ರಂದು ಮದ್ಯಾಹ್ನ 3-20 ಗಂಟೆಯಲ್ಲಿ ಪಿಎಸ್ಐ ಶ್ರೀ ಎಂ.ಪಿ. ಹೊನ್ನೇಗೌಡ ರವರು  ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ: 24-10-2020 ರಂದು ಮದ್ಯಾಹ್ನ  1-00 ಗಂಟೆಯಲ್ಲಿ  ನಾನು ಸಿಬ್ಬಂಧಿಯೊಂದಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ನನಗೆ ಬಂದ ಮಾಹಿತಿಯಂತೆ   ಯಾರೋ ಅಸಾಮಿಗಳು ಚಿಕ್ಕಬಳ್ಳಾಪುರ ನಗರದ ವಾಣಿ ಟಾಕೀಸ್ ಬಳಿ  ಈ ದಿನ ಸಂಜೆ ನಡೆಯುವ  ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ಸ್ ಮಧ್ಯೆ ನಡೆಯು ಐಪಿಎಲ್ ಪಂದ್ಯಕ್ಕೆ  ಸಾರ್ವಜನಿಕರಿಂದ  ಹಣವನ್ನು  ಪಣವಾಗಿ ಕಟ್ಟಿಸಿಕೊಂಡು  ಕ್ರಿಕೇಟ್ ಬೆಟ್ಟಿಂಗ್ ಜೂಜಾಡುತ್ತಿರುವುದಾಗಿ  ಮಾಹಿತಿ ಬಂದಿದ್ದು  ಅದರಂತೆ  ಸ್ಥಳಕ್ಕೆ  ಪಂಚಾಯ್ತಿಧಾರರನ್ನು  ಬರಮಾಡಿಕೊಂಡು ಅವರಿಗೆ  ವಿಚಾರವನ್ನು  ತಿಳಿಸಿ ಪೊಲೀಸ್ ನೋಟೀಸ್ ಜಾರಿ ಸಿಬ್ಬಂಧಿಯವರಾದ ಶ್ರೀ ಎಲ್ ಎಂ. ಅಶ್ವತ್ತರಾಜು ಹೆಚ್ ಸಿ-131,  ಶ್ರೀ ಗಂಗಾಧರ ಪಿಸಿ-541, ಶ್ರೀ ವಿ. ಮುರಳಿ ಪಿಸಿ-138 ಹಾಗೂ ಜೀಪ್ ಚಾಲಕ ನಂಧೀಶ ಎಪಿಸಿ-140 ರವರೊಂದಿಗೆ  ಕಛೇರಿ ಜೀಪ್ ಸಂ: KA-40-G-296 ವಾಹನದಲ್ಲಿ  ಮದ್ಯಾಹ್ನ  2-00 ಗಂಟೆಗೆ  ಠಾಣೆಯನ್ನು ಬಿಟ್ಟು ಎಂಜಿ ರಸ್ತೆ, ಗಂಗಮ್ಮಗುಡಿ ರಸ್ತೆ ಮಾರ್ಗವಾಗಿ ಎಲೆ ಪೇಟೆ ಮೂಲಕ  ಚಂದ್ರು ಮಿಲ್ಟ್ರಿ ಹೋಟಲ್ ಬಳಿ  ಬಂದು ಜೀಪನ್ನು ನಿಲ್ಲಿಸಿ  ಪಂಚರೊಂದಿಗೆ ನಡೆದುಕೊಂಡು ವಾಣಿ ಟಾಕೀಸ್ ಬಳಿ  ಹೋದಾಗ  ಸ್ವಲ್ಪ ಕೆಲವರು ಗುಂಪು ಸೇರಿಕೊಂಡು ಏನೋ ಮಾತನಾಡುತ್ತಿದ್ದರು ಮಪ್ತಿಯಲ್ಲಿದ್ದ ನಾನು  ಮತ್ತು ಸಿಬ್ಬಂಧಿ ನಿಧಾನವಾಗಿ ನಡೆದುಕೊಂಡು ಗುಂಪಿನ ಬಳಿ ಹೋದಾಗ ಇಬ್ಬರು ವ್ಯಕ್ತಿಯು ಈ ದಿನ ನಡೆಯುವ ಐಪಿಎಲ್ ಕ್ರಿಕೇಟ್  ಮ್ಯಾಚ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುತ್ತೆ ಯಾರಾದ್ರೂ ಪಂದ್ಯ ಕಟ್ಟುತ್ತಿರಾ, 500/- ರೂ 1000/- ಕೊಡುತ್ತೇನೆ. ಕೊಲ್ಕತ್ತಾ ನೈಟ್ ರೈಡರ್ಸ್ ಗೆಲ್ಲುತ್ತೆ ಅಂದರೆ 500/-ರೂಗೆ 2000/- ಕೊಡುತ್ತೇನೆ ಬನ್ನಿ ಎಂದು ಸಾರ್ವಜನಿಕಗೆ ನಂಬಿಸಿ ಮೋಸದಿಂದ ಹಣವನ್ನು ಪಣಕ್ಕೆ ಕಟ್ಟಿಸಿಕೊಳ್ಳುತ್ತಿದ್ದರು ಕೂಡಲೆ ಪಂಚರ ಸಮಕ್ಷಮ ಸಿಬ್ಬಂಧಿಯ ಸಹಾಯದಿಂದ ಅವನನ್ನು  ಹಿಡಿದುಕೊಳ್ಳುಲು ಪ್ರಯತ್ನಿಸುತ್ತಿದ್ದಂತೆ ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದ ವ್ಯಕ್ತಿಗಳಲ್ಲಿ ಒಬ್ಬ ಸಿಕ್ಕಿದ್ದು ಇನ್ನೊಬ್ಬ ವ್ಯಕ್ತಿ ಓಡಿ ಹೋಗಿರುತ್ತಾನೆ.   ಸಿಕ್ಕ ವ್ಯಕ್ತಿಯನ್ನು ವಿಚಾರ ಮಾಡಲಾಗಿ ಆತನು ತನ್ನ ಹೆಸರನ್ನು ಕೆ.ಅರ್. ಹರೀಶ್ @ ಅಕ್ಕಲಿ ಬಿನ್ ರಾಮಾಂಜನಪ್ಪ, 28 ವರ್ಷ, ವಕ್ಕಲಿಗರು, ಬಂಡೆ ಕೆಲಸ, ಕವರನಹಳ್ಳಿ ಗ್ರಾಮ, ಕಸಬಾ ಹೋಬಳಿ ಚಿಕ್ಕಬಳ್ಳಾಪುರ ತಾ||   ಎಂದು ತಿಳಿಸಿದ್ದು  ಓಡಿ ಹೋದವನ ಬಗ್ಗೆ ವಿಚಾರಿಸಲಾಗಿ ಕಂದವಾರದ ಸ್ವಾಮಿ ಎಂಬುವವನೆಂದು ಇಬ್ಬರೂ ಐಪಿಎಲ್ ಕ್ರಿಕೇಟ್ BETCHIPS ಅಪ್ ಮುಖಾಂತರ ಕ್ರಿಕೇಟ್ ಬೆಟ್ಟಿಂಗ್  ಆಡುತ್ತಿದ್ದುದಾಗಿ ಹಾಗೂ ಸಾರ್ವಜನಿಕರಿಂದ  ಹಣವನ್ನು ಸಂಗ್ರಹಿಸುತ್ತಿದ್ದುದಾಗಿ  ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಅತನ ಅಂಗಶೋಧನೆ ಮಾಡಲಾಗಿ  ಸಾರ್ವಜನಿಕರಿಂದ  ಕ್ರಿಕೇಟ್  ಬೆಟ್ಟಿಂಗ್ ಗಾಗಿ ಸಂಗ್ರಹಿಸಿದ್ದ ರೂ 7500/-(ಏಳು ಸಾವಿರದ ಐದುನೂರು) ರೂ ನಗದು ಹಾಗೂ  ಕ್ರಿಕೇಟ್ ಬೆಟ್ಟಿಂಗ್ ಗಾಗಿ ಉಪಯೋಗಿಸಿದ್ದOPPO ಕಂಪನಿಯ ಟಚ್ ಸ್ಕ್ರೀನ್ ಮೊಬೈಲ್ ಪೋನ್  ಇದ್ದು ಸದರಿ ಹಣ ಮತ್ತು ಮೊಬೈಲ್ ಪೋನ್ನ್ನು  ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿದ್ದು ಪಂಚನಾಮೆಯನ್ನು  ಮದ್ಯಾಹ್ನ 2-15 ಗಂಟೆಯಿಂದ 3-00 ಗಂಟೆಯ ವರೆಗೆ ಕೈಗೊಂಡು ಸದರಿ ಅರೋಪಿ ಕೆ.ಅರ್. ಹರೀಶ್ @ ಅಕ್ಕಲಿ, ಅಮಾನತ್ತು ಪಡಿಸಿಕೊಂಡ  ಮಾಲು, ಪಂಚನಾಮೆ ಹಾಗೂ ವರಧಿಯೊಂದಿಗೆ ಮದ್ಯಾಹ್ನ 3-20 ಗಂಟೆಗೆ  ನೀಡುತ್ತಿದ್ದು  ಅರೋಪಿಗಳ ವಿರುದ್ದ  ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು  ಸೂಚಿಸಿದ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು  ಕೈಗೊಂಡಿರುತ್ತೇ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.145/2020 ಕಲಂ: 380  ಐ.ಪಿ.ಸಿ:-

     ದಿನಾಂಕ: 24.10.2020 ರಂದು ಪಿರ್ಯಾದಿದಾರರಾದ ಶ್ರೀಮತಿ ಸರಸ್ವತಮ್ಮ ಕೋಂ ಗೋವಿಂದಪ್ಪ, 48 ವರ್ಷ, ಬಟ್ಟೆ ವ್ಯಾಪಾರ, ಬುಡಗ ಜಂಗಮ ಜನಾಂಗ, ವಾಸ: ಅಂಜನಿ ಬಡಾವಣೆ ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡದ ದೂರಿನ ಸಾರಾಂಶವೆನೆಂದರೆ  ನಾನು ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೆನೆ. ನನ್ನ ಪತಿಯವರು ಚಿಂತಾಮಣಿ ನಗರದಲ್ಲಿ ಏಳನೀರು ವ್ಯಾಪಾರ ಮಾಡಿಕೊಂಡಿರುತ್ತಾರೆ. ನನಗೆ 02 ಮಕ್ಕಳಿದ್ದು 01 ನೇ ರಮೇಶ್, 27 ವರ್ಷ, 02ನೇ ಮಂಜುನಾಥ್ ರವರಾಗಿರುತ್ತಾರೆ. ನನ್ನ ಮೊದಲನೆ ಮಗನಾದ ರಮೇಶ್ ರವರಿಗೆ ಹೊಸಕೋಟೆ ತಾಲ್ಲೂಕಿನ ಕರಬೇಹೊಸಹಳ್ಳಿ ಗ್ರಾಮದ ವಾಸಿಯಾದ ಕೃಷ್ಣಪ್ಪ ರವರ ಮಗಳಾದ ಸುಧಾ ರವರನ್ನು  ಹಿರಿಯರ ಸಮ್ಮುಖದಲ್ಲಿ ಸುಮಾರು 04 ವರ್ಷಗಳ ಹಿಂದೆ ಮದುವೆ ಮಾಡಿರುತ್ತೆನೆ. ಹೀಗಿರುವಾಗ ನನ್ನ ಮಗ ರಮೇಶ್ ರವರು ಮದುವೆಯಾದಾಗಿನಿಂದಲೂ ಪ್ರತ್ಯೇಕವಾಗಿ ವಾಸವಾಗಿರುತ್ತಾರೆ. ಹೀಗಿರುವಾಗ ದಿನಾಂಕ: 27/07/2020 ರಂದು ರಾತ್ರಿ 12:00 ಗಂಟೆಯಲ್ಲಿ ನಾನು ಮತ್ತು ನನ್ನ ಎರಡನೇ ಮಗನಾದ ಮಂಜುನಾಥ್ ರವರು ನನ್ನ ಗಂಡನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಚಿಂತಾಮಣಿ ನಗರದ ಗುರುಕೃಪ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು ನಾನು ಮತ್ತು ನನ್ನ ಮಗ ಮಂಜುನಾಥ್ ರವರು ಆ ದಿನ ರಾತ್ರಿ ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿರುತ್ತೆವೆ. ನಂತರ ದಿನಾಂಕ: 28/07/2020 ರಂದು ಬೆಳಿಗ್ಗೆ 7:30 ಗಂಟೆಯಲ್ಲಿ ನಾನು ಮನೆಯ ಬಳಿ ಹೋದಾಗ ಮನೆ ಬಾಗಿಲು ತೆರೆದಿದ್ದು ನನ್ನ ಮಗ ರಮೇಶ್ ರವರು ನನ್ನನ್ನು ನೋಡಿ ಮನೆಯಿಂದ ಹೊರಟು ಹೋಗಿರುತ್ತಾರೆ. ನಂತರ ಮನೆಯ ಓಳಗೆ ಹೋಗಿ ಬೀರುವನ್ನು ನೋಡಿದಾಗ ಬೀರುವಿನ ಲಾಕರ್ ಹೊಡೆದು ಹಾಕಿದ್ದು ಅದರಲ್ಲಿದ್ದ 04 ಬಂಗಾರದ ಉಂಗುರ 35 ಗ್ರಾಂ, ಬಂಗಾರದ ಬ್ರಾಸ್ ಲೈಟ್ 45 ಗ್ರಾಂ. ಡಾಲರ್ ಇದ್ದ ಬಂಗಾರದ ಕತ್ತಿರ ಸರ 37 ಗ್ರಾಂ, ಒಟ್ಟು 117 ಗ್ರಾಂ ಒಟ್ಟು ಬೆಲೆ 4,00,140 ರೂ ಗಳಾಗಿರುತ್ತೆ ಹಾಗೂ 01 ರಾ್ಡೋ ಕೈ ವಾಚ್ ಇದರ ಬೆಲೆ 45,000 ರೂಗಳು ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿ ನಾವು ಮನೆಯ ಬೀಗ ಕೀ ಇಡುತ್ತಿದ್ದ ಜಾಗ ನನ್ನ ಮಗ ರಮೇಶ್ ರವರಿಗೆ ತಿಳಿದಿದ್ದು ಆ ಬೀಗದ ಕೀಯನ್ನು ತೆಗೆದುಕೊಂಡು ಮನೆಯ ಬಾಗಿಲು ತೆರೆದು ರಮೇಶ್ ರವರು ಮನೆಯ ಒಳಗಿನ ಬೀರುವಿನಲ್ಲಿದ್ದ ಬಂಗಾರದ ಒಡವೆಗಳು ಮತ್ತು ರಾ್ಡೋ ವಾಚ್ ನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುತ್ತಾನೆ.  ನಂತರ ನನ್ನ ಮಗ ರಮೇಶ್ ರವರನ್ನು  ಸಂಭಂಧಿಕರ ಮನೆಗಳಲ್ಲಿ ಹಾಗೂ ಪರಿಚಯಸ್ಥರ ಮನೆಗಳಲ್ಲಿ  ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ.  ನನ್ನ ಮಗನ ಹೆಂಡತಿ ಸುಧಾ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟುಹೋಗಿದ್ದು ಅವರನ್ನಾದರೂ ನೋಡಲು ಬರುತ್ತಾನೆಂದು ತಿಳಿದು ಪೊಲೀಸ್ ಠಾಣೆಗೆ ದೂರು ನೀಡುವುದನ್ನು ತಡ ಮಾಡಿರುತ್ತೆನೆ. ಇಷ್ಟು ದಿನ ವಾದರೂ ನನ್ನ ಮಗ ಮನೆಗೆ ಬಾರದ ಕಾರಣ ಆವನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.278/2020 ಕಲಂ: 32,34 ಕೆ.ಇ ಆಕ್ಟ್:-

     ದಿನಾಂಕ: 24/10/2020 ರಂದು ಸಂಜೆ 5-00 ಗಂಟೆ ಸಮಯದಲ್ಲಿ,  ಶ್ರೀ.ಎನ್..ರಾಜಣ್ಣ, ಪಿಐ, ಚಿಕ್ಕಬಳ್ಳಾಪುರ ಡಿ.ಸಿ.ಬಿ. ಸಿ.ಇ.ಎನ್. ಪಿ.ಎಸ್. ರವರು  ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೇನೆಂದರೆ,  ತಾನು, ತನ್ನ ಪೊಲೀಸ್ ಸಿಬ್ಬಂದಿಯೊಂದಿಗೆಎ  ಸರ್ಕಾರಿ ಜೀಪ್ ನಂ. KA.40-G.270 ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳ  ಮಾಹಿತಿ ಸಂಗ್ರಹಣೆಗಾಗಿ  ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ನಾಮಗೊಂಡ್ಲು ಡಿ.ಪಾಳ್ಯ, ಡಿ.ಪಾಳ್ಯ, ಕ್ರಾಸ್, ಹುದುಗೂರು, ಬೈಚಾಪುರ ಕ್ರಾಸ್ ಕಡೆಗಳಲ್ಲಿ ಗಸ್ತು ಮಾಡಿಕೊಂಡಿದ್ದಾಗ,  ಮಧ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿ  ಏನೆಂದರೆ, ಗೌರೀಬಿದನೂರು ತಾಲ್ಲೂಕಿನ ಚಿಟ್ಟಾವಲಹಳ್ಳಿ  ಗ್ರಾಮದ ಶಾಂತರಾಜು ಎಂಬುವವರು ತನ್ನ ಮನೆಯ ಮುಂಭಾಗದಲ್ಲಿ  ಮನೆಯ ವಟಾರದಲ್ಲಿ ಕಾನೂನು ಬಾಹಿರವಾಗಿ  ಮಧ್ಯವನ್ನು ದಾಸ್ತಾನು ಮಾಡಿಕೊಂಡು, ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಅದರಂತೆ ತಾನು ಮತ್ತು ಸಿಬ್ಬಂದಿಯವರು ಚಿಟ್ಟಾವಲಹಳ್ಳಿ ಗ್ರಾಮಕ್ಕೆ ಹೋಗಿ, ಅಲ್ಲಿ ಪಂಚರನ್ನು ಕರೆದುಕೊಂಡು, ಜೀಪನ್ನು ಬಿಟ್ಟು, ಕಾಲ್ನಡಿಗೆಯಲ್ಲಿ  ಶಾಂತರಾಜು ಎಂಬುವವರ ಮನೆಯ ಬಳಿ ಇರುವ ಚಿಲ್ಲರೆ ಅಂಗಡಿ ಬಳಿ ಹೋದಾಗ, ಸಮವಸ್ತ್ರದಲ್ಲಿದ್ದ  ನಮ್ಮಗಳನ್ನು ನೋಡಿ, ಪಕ್ಕದ ಮನೆಯಿಂದ ಯಾರೋ ಒಬ್ಬ ಆಸಾಮಿ ಏಕಾಏಕಿ ಓಡಿ ಹೋಗಿದ್ದು, ನಂತರ ಅಲ್ಲೇ  ನಿಂತಿದ್ದ ಒಬ್ಬ ಹೆಂಗಸು ಹಾಗು ಹುಡುಗನನ್ನು ಓಡಿಹೋದ ವ್ಯಕ್ತಿಯ ಬಗ್ಗೆ ಕೇಳಲಾಗಿ, ಓಡಿ ಹೋದ ವ್ಯಕ್ತಿ ಶಾಂತರಾಜು ಬಿನ್ ಲೇಟ್ ಅಪ್ಪಣ್ಣ 48 ವರ್ಷ,  ಜಿರಾಯ್ತಿ ಮತ್ತು ವ್ಯಾಪಾರ  ಸಾದರು ಜನಾಂಗ  ವಾಸ ಚಿಟ್ಟಾವಲಹಳ್ಳಿ ಗ್ರಾಮ , ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ನಂತರ ಪಂಚರೊಂದಿಗೆ ಶಾಂತರಾಜು ರವರ ಮನೆಯ ಮುಂಭಾಗದಲ್ಲಿರವ ವಠಾರವನ್ನು ಪರಿಶೀಲಿಸಲಾಗಿ, ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವಿದ್ದು,  ಸದರಿ ಚೀಲವನ್ನು  ಪರಿಶೀಲನೆ ಮಾಡಲಾಗಿ,  ತೆರೆದ ಚೀಲದಲ್ಲಿ  ವಿವಿದ ಬಗೆಯ ಮಧ್ಯದ ಟೆಟ್ರಾ ಪಾಕೆಟ್ ಗಳು , ಅದರ ಪಕ್ಕದಲ್ಲಿ ಎರಡು ರಟ್ಟಿನ ಬಾಕ್ಸ್ ಗಳು ಇದ್ದು, ಅದರ ಪಕ್ಕದಲ್ಲಿ ಕಪ್ಪುಬಣ್ಣದ  ಎರಡು ಪ್ಲಾಸ್ಟಿಕ್ ಕವರ್ ಗಳು ಇದ್ದು, ಸದರಿಯವುಗಳನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲನೆ ಮಾಡಿದಾಗ ಬಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ  1). 8 PM, 180 MLನ 14 ಟೆಟ್ರಾ ಪಾಕೆಟ್ ಗಳು ಇದ್ದು, ಇದರ ಒಟ್ಟು ಪ್ರಮಾಣ 2 ಲೀಟರ್ 520 ಎಂ.ಎಲ್. ಆಗಿದ್ದು, ಇವುಗಳ ಪ್ರತಿಯೊಂದರ ಬೆಲೆ  85.73/- ರೂಗಳಾಗಿದ್ದು, ಒಟ್ಟು ಬೆಲೆ 1,372-00 ರೂಗಳಾಗಿರುತ್ತೆ. 2) BAGPIPER WHISKY 180 MLನ 14 ಟೆಟ್ರಾ ಪಾಕೆಟ್ ಗಳು ಇದ್ದು, ಇದರ ಒಟ್ಟು ಪ್ರಮಾಣ 2 ಲೀಟರ್ 520 ಎಂ.ಎಲ್. ಆಗಿದ್ದು,  ಇವುಗಳ ಪ್ರತಿಯೊಂದರ ಬೆಲೆ  106.23/- ರೂಗಳಾಗಿದ್ದು, ಒಟ್ಟು ಬೆಲೆ 1,487-00 ರೂಗಳಾಗಿರುತ್ತೆ. 3) OLD TAVERN WHISKY 180 MLನ 75 ಟೆಟ್ರಾ ಪಾಕೆಟ್ ಗಳು ಇದ್ದು, ಇದರ ಒಟ್ಟು ಪ್ರಮಾಣ 13 ಲೀಟರ್ 500 ಎಂ.ಎಲ್. ಆಗಿದ್ದು,  ಇವುಗಳ ಪ್ರತಿಯೊಂದರ ಬೆಲೆ  86.75/- ರೂಗಳಾಗಿದ್ದು, ಒಟ್ಟು ಬೆಲೆ 6,506-00 ರೂಗಳಾಗಿರುತ್ತೆ 4) HAYWARDS CHEERS WHISKY 90 MLನ 55 ಟೆಟ್ರಾ ಪಾಕೆಟ್ ಗಳು ಇದ್ದು, ಇದರ ಒಟ್ಟು ಪ್ರಮಾಣ 4 ಲೀಟರ್ 950 ಎಂ.ಎಲ್. ಆಗಿದ್ದು,  ಇವುಗಳ ಪ್ರತಿಯೊಂದರ ಬೆಲೆ  35.13/- ರೂಗಳಾಗಿದ್ದು, ಒಟ್ಟು ಬೆಲೆ 1,297/- ರೂ ಗಳಾಗಿರುತ್ತೆ 5) ORIGINAL CHOICE  90 ML ನ 24 ಟೆಟ್ರಾ ಪಾಕೆಟ್ ಗಳು ಇದ್ದು, ಇದರ ಒಟ್ಟು ಪ್ರಮಾಣ 1 ಲೀಟರ್ 160 ಎಂ.ಎಲ್. ಆಗಿದ್ದು,  ಇವುಗಳ ಪ್ರತಿಯೊಂದರ ಬೆಲೆ  35.13/- ರೂಗಳಾಗಿದ್ದು, ಒಟ್ಟು ಬೆಲೆ  843/- ರೂ ಗಳಾಗಿರುತ್ತೆ. 2 ರಟ್ಟಿನ ಬಾಕ್ಸ್ ಗಳನ್ನು ಪರಿಶೀಲನೆ ಮಾಡಲಾಗಿ,  ಪ್ರತಿಯೊಂದು ಬಾಕ್ಸ್ ನಲ್ಲಿ 6)  KING FISHER STRONG, ಕಂಪನಿಯ  650 ML ನ 12 ಬಿಯರ್ ಬಾಟೆಲ್ ಗಳಂತೆ ಒಟ್ಟು 24 ಬಾಟೆಲ್ ಗಳು ಇದ್ದು,  ಇದರ ಟ್ಟು ಪ್ರಮಾಣ 15 ಲೀಟರ್  600 ಎಂ.ಎಲ್. ಆಗಿದ್ದು, ಇವುಗಳ ಪ್ರತಿಯೊಂದರ ಬೆಲೆ 150/- ರೂಗಳಾಗಿದ್ದು ಒಟ್ಟು ಇದರ ಬೆಲೆ 3,600/- ರೂಗಳಾಗಿರುತ್ತೆ.   ನಂತರ ಇದರ ಪಕ್ಕದಲ್ಲಿ ಎರಡು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಗಳಿದ್ದು,  ಅವುಗಳನ್ನು ಪರಿಶೀಲನೆ ಮಾಡಲಾಗಿ, 7) KING FISHER ಕಂಪನಿಯ 500 ML ನ 11 ಟಿನ್ ಬಿಯರ್  ಇದ್ದು ಇದರ ಒಟ್ಟು  ಪ್ರಮಾಣ  5 ಲೀಟರ್ 500 ಎಂ.ಎಲ್.ಆಗಿದ್ದು,  ಇವುಗಳ ಪ್ರತಿಒಂದರ ಬೆಲೆ 120/-ರೂಗಳಾಗಿದ್ದು,  ಒಟ್ಟು ಇದರ ಬೆಲೆ 1,320/- ರೂಗಳಾಗಿರುತ್ತೆ. 8) KING FISHER ಕಂಪನಿಯ 330 ML ನ 12 ಟಿನ್ ಬಿಯರ್  ಇದ್ದು ಇದರ ಒಟ್ಟು  ಪ್ರಮಾಣ  3 ಲೀಟರ್ 960 ಎಂ.ಎಲ್.ಆಗಿದ್ದು,  ಇವುಗಳ ಪ್ರತಿಯೊಂದರ ಬೆಲೆ 85/- ರೂಗಳಾಗಿದ್ದು,  ಒಟ್ಟು ಇದರ ಬೆಲೆ 1,020/- ರೂಗಳಾಗಿರುತ್ತೆ. ನಂತರ ಸ್ಥಳದಲ್ಲಿದ್ದ ಮಹಿಳೆಯನ್ನು ಈ ಮಧ್ಯದ ಬಗ್ಗೆ ವಿಚಾರ ಮಾಡಲಾಗಿ, ತನ್ನ ಗಂಡನಾದ ಶಾಂತರಾಜು ರವರು ಗೌರೀಬಿದನೂರು ಪಟ್ಟಣದಲ್ಲಿರುವ  ರಾಘವೇಂದ್ರ  ವೈನ್ಸ್ ನಲ್ಲಿ ತಂದು ನಮ್ಮ ಮನೆಯ ಮುಂಭಾಗದಲ್ಲಿರುವ  ಮನೆಯ ವಟಾರದಲ್ಲಿಟ್ಟುಕೊಂಡು  ಮಾರಾಟಮಾಡುತ್ತಿರುವುದಾಗಿ ತಿಳಿಸಿದಳು.  ನಂತರ ಸದರಿ ಮಹಿಳೆಗೆ ಅಕ್ರಮವಾಗಿ ಮಧ್ಯವನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡಲು ಯಾವುದಾದರೂ ಪರವಾನಗಿ ಇದೆಯೇ ? ಎಂದು ಕೇಳಿದಾಗ, ತಮ್ಮ ಬಲಿ ಯಾವುದೇ ಪರವಾನಗಿ ಇಲ್ಲವೆಂದು ತಿಳಸಿದಳು. ನಂತರ ಸದರಿ ಮಾಲುಗಳನ್ನು ಪಂಚರ ಸಮಕ್ಷಮದಲ್ಲಿ ಮುಂದಿನ ಕ್ರಮಕ್ಕಾಗಿ   ಅಮಾನತ್ತುಪಡಿಸಿಕೊಂಡಿರುತ್ತೆ.  ಅಮಾನತ್ತುಪಡಿಸಿಕೊಂಡಿರುವ  ಮೇಲ್ಕಂಡ  ಮದ್ಯದ ಒಟ್ಟು ಪ್ರಮಾಣವು 51 ಲೀಟರ್ 70 ಎಂ.ಎಲ್.ಆಗಿರುತ್ತೆ. ಇದರ ಒಟ್ಟು ಮೌಲ್ಯ 18,040-00 ರೂಗಳಾಗಿರುತ್ತೆ. ಅಮಾನತ್ತುಪಡಿಸಿಕೊಂಡಿರ4ವ  ವಿವಿಧ ಬಗೆಯ ಮಾಲಿನ ಪೈಕಿ ಪ್ರತಿಯೊಂದು ಮಾಲಿನಲ್ಲಿ ವಿದಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ  1) 8 PM, 180 MLನ 03ಟೆಟ್ರಾ ಪಾಕೆಟ್ ಗಳು , 2) BAGPIPER WHISKY 180 MLನ 03 ಟೆಟ್ರಾ ಪಾಕೆಟ್ ಗಳು 3) OLD TAVERN WHISKY 180 MLನ 03    4) HAYWARDS CHEERS WHISKY 90 MLನ 03 ಟೆಟ್ರಾ ಪಾಕೆಟ್  5) ORIGINAL CHOICE  90 ML ನ 03  ಟೆಟ್ರಾ ಪಾಕೆಟ್ ಗಳು  6)  KING FISHER STRONG, ಕಂಪನಿಯ  650 ML ನ  01  ಬಿಯರ್ ಬಾಟೆಲ್   7).KING FISHER ಕಂಪನಿಯ 500 ML ನ 01 ಟಿನ್ ಬಿಯರ್  8) KING FISHER ಕಂಪನಿಯ 330 ML ನ 01 ಟಿನ್ ಬಿಯರ್  ಗಳನ್ನು ಪ್ರತ್ಯೇಕವಾಗಿ ಬಿಳಿ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು, N ಅಕ್ಷರದಿಂದ ಸೀಲ್ ಮಾಡಿರುತ್ತೆ.  ನಂತರ ಮೇಲ್ಕಂಡ ಮಾಲುಗಳನ್ನು ವಶಕ್ಕೆ ತೆಗೆದುಕೊಂಡು  ಅಸಲು ಪಂಚನಾಮೆ  ವರದಿಯೊಂದಿಯೊಂದಿಗೆ  ಕಾನಾನು ಬಾಹಿರವಾಗಿ ಮಧ್ಯವನ್ನು ಸಂಗ್ರಹಣೆ ಮಾಡಿ ಮಾರಾಟ ಮಾಡುತ್ತಿದ್ದ  ಆಸಾಮಿ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಕೋರಿ  ನೀಡಿದ ದೂರಿನ ಸಾರಾಂಶವಾಗಿರುತ್ತೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.120/2020 ಕಲಂ: 78(1)(a)(vi) ಕೆ.ಪಿ ಆಕ್ಟ್:-

     ದಿನಾಂಕ 24-10-2020 ರಂದು ರಾತ್ರಿ 09.15 ಗಂಟೆಗೆ ಪಿ.ಎಸ್.ಐ ಶ್ರೀ ರಂಜನ್ ಕುಮಾರ್ ರವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಆರೋಪಿಗಳು, ಮಾಲು, ಪಂಚಾನಾಮೆಯೊಂದಿಗೆ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:24-10-2020 ರಂದು ಕ್ರಿಕೆಟ್ ಬೆಟ್ಟಿಂಗ್ ಹಾಗೂ ಇತರೆ ಚಟುವಟಿಕೆಗಳ ವಿಚಾರವಾಗಿ ಮಾಹಿತಿ ಸಂಗ್ರಹಿಸಲು ರಾತ್ರಿ ಸುಮಾರು 07-15 ಗಂಟೆಯ ಸಮಯದಲ್ಲಿ ತಾನು,  ಮತ್ತು ಸಿಬ್ಬಂದಿಯಾದ ಹೆಚ್.ಸಿ. 56 ಅಶ್ವತ್ಥಪ್ಪ ಹಾಗೂ ಹೆಚ್.ಸಿ. 161 ಕೃಷ್ಣಪ್ಪ ರವರೊಂದಿಗೆ ಕೆ.ಎ.40-ಜಿ-539 ಸರ್ಕಾರಿ ಜೀಪಿನಲ್ಲಿ ಚಿಲಕಲನೇರ್ಪು, ಏನಿಗದಲೆ, ನಡಂಪಲ್ಲಿ, ಚೊಕ್ಕನಹಳ್ಳಿ  ಮುಂತಾದ ಗ್ರಾಮಗಳ ಬಳಿ ಗಸ್ತು ಮಾಡುತ್ತಿದ್ದಾಗ ಭಾತ್ಮಿದಾರರಿಂದ ಮೋಟಮಾಕಲಹಳ್ಳಿ ಕ್ರಾಸ್ ಬಳಿ ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕದ ಕಲ್ಲು ಜಗಲಿ ಮೇಲೆ ಯಾರೋ ಮೂರು ಜನರು ಸೇರಿಕೊಂಡು ಸೇರಿ ಐ.ಪಿ.ಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಏನಿಗದಲೆ ಬಸ್ ನಿಲ್ದಾಣದಲ್ಲಿದ್ದವರಿಗೆ ವಿಚಾರ ತಿಳಿಸಿ  ಪಂಚಾಯ್ತಿದಾರರಾಗಿ ಬರಮಾಡಿಕೊಂಡು ಅವರೊಂದಿಗೆ  ಸರ್ಕಾರಿ ಜೀಪಿನಲ್ಲಿ ಮೋಟಮಾಕಲಹಳ್ಳಿ ಕ್ರಾಸ್ ಬಳಿಗೆ ಹೋಗಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ನೋಡಲಾಗಿ  ಆಂಜನೇಯಸ್ವಾಮಿ ದೇವಸ್ಥಾನ  ಪಕ್ಕದಲ್ಲಿ  ಕಲ್ಲು ಜಗಲಿಯ ಮೇಲೆ  03 ಜನರು  ಕುಳಿತಿದ್ದ ಮೂರು ಜನ ಆಸಾಮಿಗಳ ಪೈಕಿ ಒಬ್ಬ ಆಸಾಮಿ ಕೋಲ್ಕತ್ತಾ ಗೆಲ್ಲುತ್ತೆ 500/- ರೂ ಎಂತಲೂ, ಕೋಲ್ಕಾತ್ತಾ ಸೋತು ಡೆಲ್ಲಿ ಟೀಮ್ ಗೆದ್ದರೆ 1000/- ರೂ ಎಂತಲೂ ಕೂಗಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದುದನ್ನು  ಖಚಿತಪಡೆಸಿಕೊಂಡು ನಾವುಗಳು ಸದರಿಯವರನ್ನು ಸುತ್ತುವರೆದಾಗ ನಮ್ಮನ್ನು ಕಂಡು ಸದರಿ ಆಸಾಮಿಗಳು ಓಡಿಹೋಗಲು ಯತ್ನಿಸಿದ್ದು, ಸದರಿಯವರನ್ನು ಬೆನ್ನಟ್ಟಿ ಹಿಡಿದುಕೊಂಡು ಪಂಚರ ಸಮಕ್ಷಮ ಸದರಿಯವರ ಹೆಸರು ವಿಳಾಸ  ಕೇಳಲಾಗಿ  1) ಎಂ. ಮೂರ್ತಿ ಬಿನ್ ಮುತ್ತಪ್ಪ, 26 ವರ್ಷ, ಬೋವಿ ಜನಾಂಗ, ವಿಧ್ಯಾಬ್ಯಾಸ, ಮೋಟಮಾಕಲಹಳ್ಳಿ ಗ್ರಾಮ, 2) ಎಂ.ಸಿ. ವೆಂಕಟಪ್ರಸಾದ್ ಬಿನ್ ಚಿಕ್ಕರೆಡ್ಡೆಪ್ಪ, 22 ವರ್ಷ, ವಕ್ಕಲಿಗರು, ಹೋಟೆಲ್ ಮ್ಯಾನೇಜ್ ಮೆಂಟ್  ಕೆಲಸ,  ಮೋಟಮಾಕಲಹಳ್ಳಿ ಗ್ರಾಮ, 3) ಎಂ.ಎಲ್. ನಾಗೇಂದ್ರ ಬಿನ್ ಲಕ್ಷ್ಮೀನಾರಾಯಣ,  22 ವರ್ಷ, ನಾಯಕ ಜನಾಂಗ, ಬಿ.ಇ.ವಿಧ್ಯಾಬ್ಯಾಸ, ಮೋಟಮಾಕಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು  ತಿಳಿಸಿದರು.  ನಂತರ ಸದರಿಯವರ  ಬಳಿ ಪರಿಶೀಲಿಸಲಾಗಿ 01) 2500/- ರೂಗಳು ಹಣ, ಮತ್ತು ವಿವಿಧ ಕಂಪನಿಯ ಮೊಬೈಲ್ ಗಳಾದ  2) ಎಂ.ಐ (MI) ಕಂಪನಿಯ ಕಪ್ಪು ಮೊಬೈಲ್,  3)  ರೆಡ್ಮಿ (Redmi) ಕಂಪನಿಯ ಕಪ್ಪು ಮೊಬೈಲ್  4) ವೀವೋ (VIVO) ಕಂಪನಿಯ ಬಿಳಿ ಮೊಬೈಲ್ ಇರುತ್ತೆ, ಸದರಿ ವೀವೋ ಮೊಬೈಲ್ ಜಖಂಗೊಂಡಿರುತ್ತೆ. ಸದರಿ ಮೊಬೈಲ್  ಗಳಲ್ಲಿ  ಪರಿಶೀಲಿಸಲಾಗಿ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಮಾತನಾಡಿರುವ ಧ್ವನಿ ಸುರಳಿ (ರೆಕಾರ್ಡಿಂಗ್) ಕಂಡು ಬಂದಿರುತ್ತೆ.  ಸದರಿಯವರನ್ನು ವಿಚಾರಿಸಲಾಗಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದುದಾಗಿ ಒಪ್ಪಿಕೊಂಡಿರುತ್ತಾರೆ.  ಈ ಕೇಸಿನ ಮುಂದಿನ ನಡಾವಳಿಗಾಗಿ  ರಾತ್ರಿ: 07-45 ಗಂಟೆಯಿಂದ 08-45 ಗಂಟೆಯವರೆಗೆ ಲೈಟಿನ ಬೆಳಕಿನಲ್ಲಿ ಮಹಜರ್ ಮೂಲಕ ಮೇಲ್ಕಂಡ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದು,  ಐ.ಪಿ.ಎಲ್. ಬೆಟ್ಟಿಂಗ್ ಆಡುತ್ತಿದ್ದ ಮೂರು ಜನ ಆಸಾಮಿಗಳನ್ನು, ಮಾಲು ಹಾಗೂ ಹಾಗೂ ಅಸಲು ಮಹಜರ್ ನೊಂದಿಗೆ  ವರದಿ ನೀಡುತ್ತಿದ್ದು  ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ವರದಿ ಸಾರಾಂಶವನ್ನು ಪಡೆದು ಠಾಣಾ ಎನ್.ಸಿ.ಆರ್ 127-2020 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿ ಪಡೆದು ರಾತ್ರಿ 11.50 ಗಂಟೆಗೆ ಠಾಣಾ ಮೊ.ಸಂ 120/2020 ಕಲಂ 78(1)(ಎ),(VI) ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.293/2020 ಕಲಂ: 279,337 ಐ.ಪಿ.ಸಿ:-

     ದಿನಾಂಕ:-24/10/2020 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಮಂಜುಳಮ್ಮ ಕೋಂ ಮುನಿಕೃಷ್ಣಪ್ಪ, 45 ವರ್ಷ, ಪ ಜಾತಿ, ಕೂಲಿ ಕೆಲಸ, ವಾಸ-ಅತ್ತಿಗಾನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಸ್ವಾತಿ ಮತ್ತು ಸಾಗರ್ ಎಂಬ ಮಕ್ಕಳಿದ್ದು, ತನ್ನ ಮಗನಾದ ಸಾಗರ್ (22 ವರ್ಷ) ರವರು ಇದೇ ಶಿಡ್ಲಘಟ್ಟ ತಾಲ್ಲೂಕು ತಿಪ್ಪೇನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಐಟಿಐ ನಲ್ಲಿ ವ್ಯಾಸಂಗ ಮಾಡಿಕೊಂಡಿದ್ದು, ಪ್ರತಿ ದಿನ ತಮ್ಮ ಗ್ರಾಮದಿಂದ ಕಾಲೇಜಿಗೆ ಹೋಗಿ ಬರುತ್ತಿದ್ದು, ಎಂದಿನಂತೆ ದಿನಾಂಕ 23/10/2020 ರಂದು ಬೆಳಿಗ್ಗೆ ಸಹ ಕಾಲೇಜಿಗೆ ಹೋಗಿರುತ್ತಾನೆ. ಅದೇ ದಿನ ಸಂಜೆ ಸುಮಾರು 6-15 ಗಂಟೆ ಸಮಯದಲ್ಲಿ ತನ್ನ ಮಗನ ಪೋನ್ ನಿಂದ ತನಗೆ ಯಾರೋ ಸಾರ್ವಜನಿಕರು ಪೋನ್ ಮಾಡಿ ತಮ್ಮ ಗ್ರಾಮದ ಬಳಿ ಇರುವ ಆಂಜನೇಯ ಸ್ವಾಮಿ ದೇವಾಲಯದ ಬಳಿ ತನ್ನ ಮಗನಿಗೆ ಆಕ್ಸಿಡೆಂಟ್ ಆಗಿದೆ ಎಂದು ತಿಳಿಸಿದ್ದು, ಕೂಡಲೇ ತಾನು ಅಲ್ಲಿಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು, ತನ್ನ ಮಗನಾದ ಸಾಗರ್ ರವರ ಬಲ ಕಾಲಿನ ಹಿಮ್ಮಡಿಯ ಬಳಿ, ಕೈ ಗಳಿಗೆ ರಕ್ತಗಾಯಗಳಾಗಿದ್ದು, ನಂತರ ತಾನು ತನ್ನ ಗಂಡನಿಗೆ ವಿಷಯವನ್ನು ತಿಳಿಸಿದಾಗ ತನ್ನ ಗಂಡ ಯಾವುದೇ ಬಾಡಿಗೆ ಕಾರನ್ನು ತೆಗೆದುಕೊಂಡು ಸ್ಥಳಕ್ಕೆ ಬಂದಿದ್ದು, ನಂತರ ತಾವು ಗಾಯಾಳುವಾಗಿದ್ದ ತನ್ನ ಮಗನನ್ನು ಸದರಿ ಕಾರಿನಲ್ಲಿ ಕರೆದುಕೊಂಡು ಹೋಗಿ ಹೊಸಕೋಟೆಯ ಎಂ.ವಿ.ಜೆ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿರುತ್ತೇವೆ. ನಂತರ ತಾವು ತನ್ನ ಮಗನನ್ನು ವಿಚಾರ ಮಾಡಲಾಗಿ ತಾನು ಕಾಲೇಜು ಮುಗಿಸಿಕೊಂಡು ಚೀಮಂಗಲ ಗ್ರಾಮದವರೆಗೆ ಯಾರದೋ ದ್ವಿ ಚಕ್ರ ವಾಹನದಲ್ಲಿ ಬಂದು ಅಲ್ಲಿಂದ ನಡೆದುಕೊಂಡು ಮನೆಗೆ ಬರುತ್ತಿದ್ದಾಗ, ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಬಳಿ ಇರುವ ಆಂಜನೇಯ ಸ್ವಾಮಿ ದೇವಾಲಯದ ಸಮೀಪ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಆ ಸಮಯದಲ್ಲಿ ತನ್ನ ಹಿಂಭಾಗದಿಂದ ಅಂದರೆ ಚೀಮಂಗಲ ಗ್ರಾಮದ ಕಡೆಯಿಂದ ಚೀಮಂಗಲ ಗ್ರಾಮದ ವಾಸಿ ಚರಣ್ ಎಂಬುವನು ಕೆಎ-40-ಹೆಚ್-1102 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂಬದಿಯಿಂದ ತನಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿರುವುದಾಗಿ ವಿಷಯ ತಿಳಿಸಿರುತ್ತಾನೆ. ತನ್ನ ಮಗನಾದ ಸಾಗರ್ ರವರು ಇನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು, ತಾವು ಆತನ ಆರೈಕೆಯಲ್ಲಿದ್ದ ಕಾರಣ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಸದರಿ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕೆಎ-40-ಹೆಚ್-1102 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದ ಸವಾರನಾದ ಚರಣ್ ರವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.294/2020 ಕಲಂ: 15(A),32(3) ಕೆ.ಇ ಆಕ್ಟ್:-

     ದಿನಾಂಕ:-24.10.2020 ರಂದು ಸಂಜೆ 7-30 ಗಂಟೆಗೆ ಪಿಸಿ-14 ರವರು ಮಾಲು ಮತ್ತು ಆರೋಪಿಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ 24.10.2020 ರಂದು  ಪಿಸಿ 14 ಗೋವಿಂದಪ್ಪ ಆದ ತನ್ನನ್ನು ಗುಪ್ತ ಮಾಹಿತಿ ಸಂಗ್ರ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಠಾಣಾ ಸರಹದ್ದಿನ ಗ್ರಾಮಗಳಾದ ಅನೂರು, ಅನೂರು ಹುಣಸೇನಹಳ್ಳಿ, ತಿಪ್ಪೇನಹಳ್ಳಿ, ದೊಡ್ಡದಾಸರಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ 6.15 ಗಂಟೆ ಸಮಯದಲ್ಲಿ ತುಮ್ಮನಹಳ್ಳಿ ಗ್ರಾಮದಲ್ಲಿ ಮಾಹಿತಿ ಸಂಗ್ರಹದಲ್ಲಿದ್ದಾಗ ಗ್ರಾಮದ ಬಾತ್ಮೀದಾರರಿಂದ ತುಮ್ಮನಹಳ್ಳಿ ಗ್ರಾಮದ ವಾಸಿಗಳಾದ ಸುರೇಶ ಬಿನ್ ನರಸಿಂಹಪ್ಪ, ತಿರುಮಲೇಶ ಬಿನ್ ನಾಮಲ ಮುನಿಯಪ್ಪ ರವರುಗಳು ಸುರೇಶ ಬಿನ್ ನರಸಿಂಹಪ್ಪ ರವರ ವಾಸದ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ತಾನು ಸುರೇಶ ಬಿನ್ ನರಸಿಂಹಪ್ಪ ರವರ ಮನೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಮುಂಭಾಗ ಯಾರೋ ಮೂರು ಆಸಾಮಿಗಳು ಮದ್ಯವನ್ನು ಸೇವನೆ ಮಾಡುತ್ತಾ ಕುಳಿತಿದ್ದ ಇಬ್ಬರು ಆಸಾಮಿಗಳು ತಮ್ಮಗಳ ಬಳಿ ಇದ್ದ ಒಂದು ಕಪ್ಪು ಬಣ್ಣದ ಕವರ್ ನಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯದ ಪಾಕೇಟ್ ಗಳನ್ನು ಮಾರಾಟ ಮಾಡುತ್ತಾ ಕುಡಿಯಲು ಅನುವು ಮಾಡಿಕೊಟ್ಟಿರುವುದು ಖಚಿತವಾದ ಮೇಲೆ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ತನ್ನನ್ನು ಕಂಡು ಓಡಿ ಹೋಗಿದ್ದು, ಮದ್ಯವನ್ನು ಹಿಡಿದುಕೊಂಡು ಕುಳಿತಿದ್ದ ಅಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಆವರ ಹೆಸರು ವಿಳಾಸ ಕೇಳಲಾಗಿ ಸುರೇಶ ಬಿನ್ ನರಸಿಂಹಪ್ಪ, 28 ವರ್ಷ, ಆದಿಕರ್ನಾಟಕ, ಕೂಲಿ ಕೆಲಸ, ತುಮ್ಮನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, ಮತ್ತೊಬ್ಬ ಅಸಾಮಿಯ ಹೆಸರು ವಿಳಾಸ ಕೇಳಲಾಗಿ ತಿರುಮಲೇಶ ಬಿನ್ ನಾಮಲ ಮುನಿಯಪ್ಪ ಎಂದು ತಿಳಿಸಿದ್ದು, ನಂತರ ಸದರಿ ಆಸಾಮಿಗಳ ಬಳಿ ಇದ್ದ ಕವರ್ ನಲ್ಲಿ ಪರಿಶೀಲಿಸಲಾಗಿ ಅದರಲ್ಲಿ ORIGINAL CHOICE DELUXE WHISKY ಯ 15 ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಬೆಲೆ 35.13 ರೂ ಎಂದು ಇದ್ದು ಇವುಗಳ ಒಟ್ಟು ಬೆಲೆ 526.95 ರೂ.ಗಳಾಗಿರುತ್ತೆ, ಸ್ಥಳದಲ್ಲಿ 5 ಪ್ಲಾಸ್ಟಿಕ್ ಗ್ಲಾಸುಗಳು, 6 ಖಾಲಿ ನೀರಿನ ಪಾಕೇಟುಗಳು ಹಾಗು 90 ಎಂ.ಎಲ್ ನ ORIGINAL CHOICE DELUXE WHISKY 6 ಖಾಲಿ ಟೆಟ್ರಾ ಪಾಕೇಟ್ ಗಳಿದ್ದು, ಮೇಲ್ಕಂಡ ಆಸಾಮಿಗಳಾದ ಸುರೇಶ ಬಿನ್ ನರಸಿಂಹಪ್ಪ, ತಿರುಮಲೇಶ ಬಿನ್ ನಾಮಲ ಮುನಿಯಪ್ಪ ರವರುಗಳು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಮಾಲು ಮತ್ತು ಅರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬಂದು ಹಾಜರುಪಡಿಸಿದ್ದು ಮುಂದಿನ ಕ್ರಮ ಕೈಗೊಳ್ಳ ಬೇಕಾಗಿ ಕೊಟ್ಟ ವರದಿ.