ದಿನಾಂಕ :25/07/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 174/2020 ಕಲಂ. 302, ರೆ/ವಿ 34 ಐ.ಪಿ.ಸಿ:-

          ದಿ: 25-07-2020 ರಂದು ಬೆಳಗ್ಗೆ 6:30 ಗಂಟೆಗೆ ಪಿರ್ಯಾಧಿದಾರರಾದ ನಾಗರಾಜ ಬಿನ್ ನಾರಾಯಣಪ್ಪ, 35 ವರ್ಷ. ನಾಯಕ ಜನಾಂಗ, ಜಿರಾಯ್ತಿ ಕೆಲಸ, ಯಗವಮದ್ದಲಖಾನ ಗ್ರಾಮ ಗೂಳೂರು ಹೋಬಳಿ ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ನನಗೆ ಮೂರು ಜನ ಮಕ್ಕಳಿದ್ದು ಒಂದನೇ ಹರೀಶ 20 ವರ್ಷ, ಎರಡನೇ ಅಮೃತ 18 ವರ್ಷ, ಮೂರನೇ ಅಭಿಷೇಕ್ 12 ವರ್ಷ, ರವರಾಗಿರುತ್ತಾರೆ. ನಾನು ಜಿರಾಯ್ತಿ ಕೆಲಸವನ್ನು ಮಾಡಿಕೊಂಡಿದ್ದು ಒಂದನೇ ಮಗನಾದ ಹರೀಶ್ ರವರು ಪೈಟಿಂಗ್ ಕೆಲಸವನ್ನು ಮಾಡುತ್ತಿದ್ದನು, ಇನ್ನೂ ಇಬ್ಬರು ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿರುತ್ತಾರೆ. ಈಗಿರುವಾಗ ನನ್ನ ಮಗನಾದ ಹರೀಶ್ ರವರು ನಮ್ಮ ಗ್ರಾಮದ ನಮ್ಮ ಜನಾಂಗದ  ವೆಂಕಟೇಶಪ್ಪ ಬಿನ್ ನಾರಾಯಣಪ್ಪ ರವರ ಎರಡನೇ ಮಗಳಾದ ಶಿರೀಷ ರವರನ್ನು ಪ್ರೀತಿ ಮಾಡುತ್ತಿದ್ದು, ಶಿರೀಷ ರವರು ಕೂಡ ಆಗಾಗ ನಮ್ಮ ಮನೆಗೆ  ಬಂದು ಹೋಗುತ್ತಿದ್ದು, ನನ್ನ ಮಗನನ್ನು ಆಕೆಯು ಕೂಡ ಪ್ರೀತಿಸುತ್ತಿದ್ದ ಈ ವಿಚಾರ  ನಮಗೆ ತಿಳಿದು, ನಾನು ಶಿರೀಷ ರವರನ್ನು ನನ್ನ ಮಗನಿಗೆ ಕೊಡುವಂತೆ ವೆಂಕಟೇಶಪ್ಪ ರವರಿಗೆ ಕೇಳಿದ್ದು, ಅವರು ಒಪ್ಪಲಿಲ್ಲ.   ನಂತರ ಈಗ್ಗೆ ಸುಮಾರು ಹತ್ತು ತಿಂಗಳ ಹಿಂದೆ ಆಕೆಯು ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿದ್ದಾಗಿ ನನಗೆ ತಿಳಿಯಿತು.

    ಆಕೆ ಮೃತ ಪಟ್ಟ ನಂತರ ನನ್ನ ಮಗ ಹರೀಶ ಗ್ರಾಮದಲ್ಲಿ ಇಲ್ಲದೆ ಬೆಂಗಳೂರಿಗೆ ಹೊರಟು ಹೋಗಿ  ಅಲ್ಲಿಯೇ ಪೈಟಿಂಗ್ ಕೆಲಸವನ್ನು ಮಾಡಿಕೊಂಡು ಬಾಗಲೂರಿನಲ್ಲಿ ರೂಂ ಮಾಡಿಕೊಂಡು ವಾಸವಾಗಿದ್ದನು. ನನಗೆ ವೆಂಕಟೇಶಪ್ಪ ಮತ್ತು ಗಣೇಶ ರವರು ನಮ್ಮ ಮಗುವನ್ನು ನಮ್ಮಿಂದ  ದೂರ ಮಾಡಿರುವ ನಿನ್ನ ಮಗನನ್ನು ನಿನ್ನಿಂದ ದೂರ ಮಾಡುತ್ತೇವೆ, ಆವಾಗ ಕಷ್ಟ ನಿನಗೆ ಗೊತ್ತಾಗುತ್ತದೆ ಎಂದು ಬೈಯುತ್ತಿದ್ದರು, ನಾನು ಅವರು ಮಗಳು ಸತ್ತು ಹೋಗಿರುವುದರಿಂದ ನೋವಿನಲ್ಲಿ  ಬೈದಾಡಿಕೊಳ್ಳುತ್ತಾರೆ  ಬಿಡು ಎಂದು ಸುಮ್ಮನಿದ್ದೆನು. ಈಗ್ಗೆ ಸುಮಾರು  ಮೂರು ತಿಂಗಳ ಹಿಂದೆ  ಕರೋನಾ ಪ್ರಯುಕ್ತ ಲಾಕ್ ಡೌನ್ ಆಗಿದ್ದರಿಂದ  ನನ್ನ ಮಗ ಹರೀಶ ಬೆಂಗಳೂರುನಿಂದ ಊರಿಗೆ ಬಂದು ಒಡಾಡಿಕೊಂಡು ಮನೆಯಲ್ಲಿಯೇ ಇದ್ದನು. ದಿನಾಂಕ:24-07-2020 ರಂದು ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ವೆಂಕಟೇಶಪ್ಪ ಮತ್ತು ಗಣೇಶ ರವರು ನಮ್ಮ ಮನೆಯ ಬಳಿ ಬಂದು ನಿನ್ನ ಮಗನನ್ನು  ಬದಕಲು ಬಿಡುವುದಿಲ್ಲ ಅವನನ್ನು ತಿವಿದು ಸಾಯಿಸುತ್ತೆವೆಂದು ನನಗೆ ಹೇಳಿದರು. ನನ್ನ ಮಗ ಹರೀಶ ರವರು ಕೆಲಸದ ಪ್ರಯುಕ್ತ ಗೂಳೂರಿಗೆ ಹೋಗಿದ್ದನು ನಾನು ನನ್ನ ಮಗ ಬರುತ್ತಾನೆಂದು ಇವರು ಯಾವಾಗಲೂ ಬೈದಾಡಿಕೊಳ್ಳುತ್ತಿರುತ್ತಾರೆ ಬಿಡು ಎಂದು ಸುಮ್ಮನಿದ್ದೆನು,  ನನ್ನ ಮಗ ರಾತ್ರಿ 10-30 ಗಂಟೆಯಾದರು ಸಹ ಮನೆಗೆ ಬರಲಿಲ್ಲ.  ನಾನು ನನ್ನ ಮಗನಿಗೆ ಫೋನ್ ಮಾಡಿದರೇ ಸ್ವೀಚ್ ಬರುತ್ತಿತ್ತು. ದಿನಾಂಕ:24-07-2020 ರಂದು ಮಧ್ಯ ರಾತ್ರಿ  ಸುಮಾರು 1-00 ಗಂಟೆ ಸಮಯದಲ್ಲಿ ಬೊಮ್ಮಯ್ಯಗಾರಿಪಲ್ಲಿ ಗ್ರಾಮದ ಆಟೋ ಚಾಲಕ ಸುರೇಶ್ ರವರು ನನ್ನ ಮಗ ಹರೀಶ ರವರು ನಮ್ಮ ಗ್ರಾಮದ ಬಳಿ ಇರುವ ರಸ್ತೆಯ ಪೆದ್ದವಂಕ ಮೋರಿಯ ಬಳಿ ಸತ್ತು ಬಿದ್ದಿರುವುದಾಗಿ, ನಮ್ಮ ಸಂಬಂಧಿಯಾದ  ನಾಗಮಲ್ಲಪ್ಪ ಬಿನ್ ಕದಿರನ್ನ ರವರಿಗೆ ತಿಳಿಸಿದ್ದು ಆತನು ಬಂದು ನನಗೆ ತಿಳಿಸಿದನು. ನಂತರ ನಾನು ನಮ್ಮ ಸಂಬಂಧಿಕರು ನಮ್ಮ ಗ್ರಾಮಸ್ಥರು ಬಂದು ನೋಡಲಾಗಿ, ಪೆದ್ದವಂಕ ರಸ್ತೆಯ ಬಳಿ ಎಡ ಭಾಗದಲ್ಲಿ ಕೆ.ಎ-04 ಹೆಚ್.ಸಿ 1893 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನ ನಿಂತಿದ್ದು, ನನ್ನ ಮಗನಾದ ಹರೀಶ ರಸ್ತೆಯಲ್ಲಿ ಬಿದಿದ್ದನು. ನೋಡಲಾಗಿ,  ತಲೆಯ ಬಲಭಾಗದಲ್ಲಿ ರಕ್ತ ಗಾಯವಾಗಿದ್ದು, ಎದೆಯ ಮೇಲೆ ಸುಮಾರು 19 ಕಡೆಗಳಲ್ಲಿ  ತಿವಿದಿರುವಂತಹ ತೀವ್ರ ಸ್ವರೂಪದ ಗಾಯಗಳಾಗಿ  ಸ್ಥಳದಲ್ಲಿಯೇ ಮೃತಪಟ್ಟಿದ್ದನು.  ನನ್ನ ಮಗನಾದ ಹರೀಶ ರವರನ್ನು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ನಮ್ಮ ಗ್ರಾಮದ  ವೆಂಕಟೇಶಪ್ಪ ಮತ್ತು ಗಣೇಶ ರವರು ದಿನಾಂಕ:24-07-2020 ರಂದು ರಾತ್ರಿ ಸುಮಾರು 10-00 ಗಂಟೆಯ ಸಮಯದಲ್ಲಿ ಯಾವುದೋ ಮಾರಕ ಆಯುಧಗಳಿಂದ ಹೊಡೆದು ತಿವಿದು ಕೊಲೆ ಮಾಡಿರುತ್ತಾರೆ. ಆಷ್ಟೆ ಹೊರತು ಬೇರೆ ಯಾವುದೇ ಅನುಮಾನವಿರುವುದಿಲ್ಲ ಅವರ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ, ಎಂದು ನೀಡಿದ ದೂರು.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 276/2020 ಕಲಂ. 15(ಎ) ಕೆ.ಇ ಆಕ್ಟ್:-

          ದಿನಾಂಕ: 24/07/2020 ರಂದು ಮದ್ಯಾಹ್ನ 14-30  ಗಂಟಗೆ DCB/CEN ಪೊಲೀಸ್ ಠಾಣೆಗೆ CHC-198  ಮಂಜುನಾಥ ರವರು ಆರೋಪಿ, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:24/07/2020 ರಂದು ಚಿಕ್ಕಬಳ್ಳಾಪುರ DCB/CEN ಪೊಲೀಸ್ ಠಾಣೆಯ PI  ಶ್ರೀ ರಾಜಣ್ಣ ರವರು ತನಗೆ ಹಾಗೂ CHC-239 ಮಲ್ಲಿಕಾರ್ಜುನ  ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು ಅದರಂತೆ ತಾವು ಈ ದಿನ ಮದ್ಯಾಹ್ನ 12-15  ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕಿನ ಚೊಕ್ಕರೆಡ್ಡಿಹಳ್ಳಿ ಗ್ರಾಮದಲ್ಲಿದ್ದಾಗ ಗ್ರಾಮದ  ಚಂದ್ರೇಗೌಡ ಬಿನ್ ನಾರಾಯಣಸ್ವಾಮಿ ರವರ ಮನೆಯ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳದಲ್ಲಿ ದಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಓಡಿ ಹೋಗಿದ್ದು ಸ್ಥಳದಲ್ಲಿ1) HAYWARDS CHEERS WHISKY ಯ 90 ML ನ ಮದ್ಯ ತುಂಬಿದ 15 ಟೆಟ್ರಾ ಪಾಕೇಟ್ ಗಳು 2) OLD TAVERN WHISKY  ಯ 180 ML ನ ಮದ್ಯ ತುಂಬಿದ 03 ಟೆಟ್ರಾ ಪಾಕೇಟ್ ಗಳು 3) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು, 4) ಒಂದು ಲೀಟರ್ ನ ಒಂದು ಖಾಲಿ ವಾಟರ್ ಬಾಟೆಲ್ 5) HAYWARDS CHEERS WHISKY ಯ 90 ML ನ ಎರಡು ಖಾಲಿ ಟೆಟ್ರಾ ಪಾಕೇಟ್ ಗಳಿದ್ದು ಸದರಿಯವುಗಳನ್ನು  ಮದ್ಯಾಹ್ನ 12-30 ಗಂಟೆಯಿಂದ ಸಂಜೆ 1.15 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು, ಸ್ಥಳದಲ್ಲಿದ್ದ ಆರೋಪಿ ಚಂದ್ರೇಗೌಡ ಬಿನ್ ನಾರಾಯಣಸ್ವಾಮಿ  46 ವರ್ಷ, ವ್ಯಾಪಾರ, ಕುರುಬರು, ಚೊಕ್ಕರೆಡ್ಡಿಹಳ್ಳಿ ಗ್ರಾಮ ರವರುನ್ನು ವಶಕ್ಕೆ ಪಡೆದು ಠಾಣೆಗೆ ಬಂದು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಚಂದ್ರೇಗೌಡ ಬಿನ್ ನಾರಾಯಣಸ್ವಾಮಿ  ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಸಾರಾಂಶವಾಗಿರುತ್ತೆ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 83/2020 ಕಲಂ. 379 ಐ.ಪಿ.ಸಿ:-

          ದಿನಾಂಕ: 24/07/2020 ರಂದು ರಾತ್ರಿ 20:15 ಗಂಟೆಗೆ ಪಿರ್ಯಾದಿದಾರರಾದ ಎಸ್. ಶಿವಕುಮಾರ್ ಬಿನ್ ಲೇಟ್ ಸುಬ್ಬಣ್ಣ, ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ದಿನಾಂಕ: 24/07/2020 ರಂದು ಮದ್ಯಾಹ್ನ 2:30 ಗಂಟೆ ಸಮಯದಲ್ಲಿ ಕೆಲಸದ ನಿಮಿತ್ತ ತಾನು ತನ್ನ ಬಾಬತ್ತು ಕೆಎ 40 ಆರ್ 0200 ನೊಂದಣಿ ಸಂಖ್ಯೆ ಹಿರೋ ಹೋಂಡಾ ಸ್ಲೇಂಡರ್ ಪ್ರೋ  ದ್ವಿ ಚಕ್ರ ವಾಹನದಲ್ಲಿ ಚಿಂತಾಮಣಿ ನಗರದ ನ್ಯಾಯಾಲಯದ ಬಳಿ ಬಂದು ಮುಂಭಾಗದಲ್ಲಿ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ಒಳಗಡೆ ಹೋಗಿ ನಂತರ ಕೆಲಸ ಮುಗಿಸಿಕೊಂಡು ವಾಪಸ್ಸು ಸಂಜೆ 5:00 ಗಂಟೆಗೆ ಬಂದು ನೋಡಲಾಗಿ ತನ್ನ ಬಾಬತ್ತು ದ್ವಿ ಚಕ್ರ ವಾಹನ ಕಾಣಿಸದೆ ಇದ್ದು ಗಾಬರಿಯಾಗಿ ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಗದೆ ಇದ್ದು, ತನ್ನ ದ್ವಿ ಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ತನ್ನ ದ್ವಿ ಚಕ್ರ  ವಾಹನದ ಬೆಲೆ ಅಂದಾಜು 19,500 ರೂ ಗಳಾಗಿದ್ದು, ಇಂಜಿನ್ ನಂ  HA10EHB9H16708 & ಚಾಸ್ಸಿ ನಂ :  MBLHA10ADB9H13828  ಆಗಿದ್ದು, ಸದರಿ ತನ್ನ ದ್ವಿ ಚಕ್ರ ವಾಹನವನ್ನು ಮತ್ತು ಕಳ್ಳತನ ಮಾಡಿರುವವರನ್ನು ಪತ್ತೆಮಾಡಿ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 169/2020 ಕಲಂ. 143,147,148,323,324,506 ರೆ/ವಿ 149 ಐ.ಪಿ.ಸಿ:-

          ದಿನಾಂಕ: 24/07/2020 ರಂದು ಸಂಜೆ 6-00 ಗಂಟೆಯಲ್ಲಿ ಪಿರ್ಯಾದಿದಾರರಾದ ವೆಂಕಟರಣಪ್ಪ ಬಿನ್ ಆವಲಕೊಂಡರಾಯಪ್ಪ, 45 ವರ್ಷ, ನಾಯಕ ಜನಾಂಗ, ದೊಡ್ಡಮಲ್ಲೇಕೆರೆ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಾನು ದಿನಾಂಕ: 22/07/2020 ರಂದು ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ನಮ್ಮ ಜಮೀನಿನ ಸರ್ವೆ ನಂಬರ್ 102 ರಲ್ಲಿ ಇದ್ದಾಗ ನಮ್ಮ ಗ್ರಾಮದ ವಾಸಿಗಳಾದ ವೆಂಕಟೇಶಪ್ಪ ಬಿನ್ ವೆಂಕಟಪ್ಪ ಮಂಜುನಾಥ ಬಿನ್ ವೆಂಕಟೇಶಪ್ಪ ರವರು ಜಮೀನಿನ ಬಳಿ ಟ್ರ್ಯಾಕ್ಟರ್ ನ್ನು ತಂದು ಉಳುಮೆ ಮಾಡಲು ಬಂದರು ಆಗ ನಾನು ಈ ಜಮೀನಿನ ಮೇಲೆ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದೆ ಇಲ್ಲಿ ಉಳುಮೆ ಮಾಡಬೇಡಿ ಎಂತ ಕೇಳಿದಕ್ಕೆ ವೆಂಕಟೇಶಪ್ಪ ರವರು ಬೋಳಿ ಮಗನೇ ನಿನ್ನದಾ ಜಮೀನು ಕೋರ್ಟ್ ನಲ್ಲಿ ನಡೆಯುತ್ತಿದೆ ಎಂದು ಮಚ್ಚನ್ನು ತೆಗೆದುಕೊಂಡು ಈ ಮಚ್ಚಿನಿಂದ ಹೊಡೆಯುತ್ತೇನೆಂದು ಪ್ರಾಣ ಬೆದರಿಕೆ ಹಾಕಿ ಮಚ್ಚಿನಿಂದ ಬಲಕೈಗೆ ಮತ್ತು ತಲೆಯ ಮೇಲೆ ಹೊಡೆದು ಗಾಯಪಡಿಸಿದ ಅಲ್ಲಿಯೇ ಇದ್ದ ಮಂಜುನಾಥ ಒಂದು ದೊಣ್ಣೆಯಿಂದ ಬಲಕಾಲಿಗೆ ಮತ್ತು ಬೆನ್ನಿನ ಮೇಲೆ ಹೊಡೆದು ಗಾಯಪಡಿಸಿದ ನಾನು ಕೆಳಗೆ ಬಿದ್ದಾಗ ಅಲ್ಲಿಯೇ ಇದ್ದ ವೆಂಕಟರಾಜು ಬಿನ್ ವೆಂಕಟೇಶಪ್ಪ, ರಾಮಕ್ಕ ಬಿನ್ ವೆಂಕಟೇಶಪ್ಪ, ಸತೀಶ ವೆಂಕಟೇಶಪ್ಪನ ಅಳಿಯ ದೀಪ ಕೋಂ ಸತೀಶ ರವರುಗಳು ಬಂದು ಇವನನ್ನು ಸಾಯಿಸದೇ ಬಿಡುವುದಿಲ್ಲ ಎಂದು ಕೈಗಳಿಂದ ಮತ್ತು ಕಾಲುಗಳಿಂದ ಒದ್ದು ಮೂಗೇಟುಗಳನ್ನುಂಟು ಮಾಡಿದರು. ಗಲಾಟೆ ಶಬ್ದವನ್ನು ಕೇಳಿ ನಮ್ಮ ಗ್ರಾಮದ ರಾಜು ಬಿನ್ ಲಿಂಗಪ್ಪ ಮತ್ತು ನಾರಾಯಣಸ್ವಾಮಿ ಬಿನ್ ಬಾಲಪ್ಪ ರವರುಗಳು ಬಂದು ಗಲಾಟೆಯನ್ನು ಬಿಡಿಸಿ ನನ್ನನ್ನು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ನಮ್ಮ ಗ್ರಾಮದವರು ಇಬ್ಬರೂ ಸಹಾ ದೊಡ್ಡಪ್ಪ ಚಿಕ್ಕಪ್ಪ ಮಕ್ಕಳಾಗಿರುವುದರಿಂದ ನ್ಯಾಯಾ ಮಾಡುವುದಾಗಿ ತಿಳಿಸಿದ್ದು ಅವರು ನ್ಯಾಯಕ್ಕೆ ಬಾರದೇ ನೀನು ಏನಾದರೂ ಮಾಡಿಕೋ ಎಂದು ತಿಳಿಸಿದ್ದರಿಂದ ನನ್ನನ್ನು ಹೊಡೆದು ಪ್ರಾಣ ಬೆದರಿಕೆ ಹಾಕಿದವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ನೀಡಿದ ಪ್ರ.ವ.ವರದಿ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 170/2020 ಕಲಂ. 143,147,148,323,324,447,506 ರೆ/ವಿ 149 ಐ.ಪಿ.ಸಿ:-

          ದಿನಾಂಕ: 24/07/2020 ರಂದು ಸಂಜೆ 7-00 ಗಂಟೆಯಲ್ಲಿ ಪಿರ್ಯಾದಿದಾರರಾದ ವೆಂಕಟೇಶಪ್ಪ ಬಿನ್ ಲೇಟ್ ವೆಂಕಟಪ್ಪ, 55 ವರ್ಷ, ನಾಯಕ ಜನಾಂಗ, ದೊಡ್ಡಮಲ್ಲೇಕೆರೆ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ,  ನನಗೆ ಇದೇ ಗ್ರಾಮ ದೊಡ್ಡಮಲ್ಲೇಕೆರೆ ಸರ್ವೆ ನಂ: 102/2 ರಲ್ಲಿ 6 ಎಕರೆ 28 ಗುಂಟೆ ಜಮೀನನ್ನು ನನ್ನ ಹೆಸರಿನಲ್ಲಿ ಖಾತೆ ಪಹಣಿ ಇದ್ದು ಪೂರಾ ಜಮೀನನ್ನು ನನ್ನ ಸ್ವಾದೀನ ಅನುಭವದಲ್ಲಿರುತ್ತದೆ ನಾನು ಸದರಿ ಜಮೀನನ್ನು ದಿನಾಂಕ: 22/07/2020 ರಂದು ಉಳುಮೆ ಮಾಡುತ್ತಿದ್ದು ಸಮಯ ಸುಮಾರು ಸಂಜೆ 5-00 ಗಂಟೆಯಲ್ಲಿ ಇದೇ ಗ್ರಾಮದ ನಾಯಕ ಜನಾಂಗದ ಆವುಲಕೊಂಡರಾಯಪ್ಪ ನವರ ಮಕ್ಕಳಾದ 1ನೇ ಮಗ ಲಕ್ಷ್ಮಯ್ಯ, 2 ನೇ ವೆಂಕಟವಣಪ್ಪ, 3 ನೇ ಶ್ರೀನಿವಾಸ ಮತ್ತು ಲಕ್ಷ್ಮಯ್ಯ ನವರ ಮಗ ಮಣಿಕಂಠ ಹಾಗ ವೆಂಕಟರಣಪ್ಪನ ಹೆಂಡತಿ ನರಸಮ್ಮ ಇವರುಗಳು ಗುಂಪುಕಟ್ಟಿಕೊಂಡು ಒಬ್ಬಂಟಿಯಾದ ನನ್ನ ಮೇಲೆ ಹಲ್ಲೆ ಮಾಡಿ ಗಲಾಟೆಯನ್ನು ಮಾಡಿರುತ್ತಾರೆ ಸುಮಾರು 45 ವರ್ಷ ವಯಸುಳ್ಳ ವೆಂಕಟರವಣಪ್ಪ ಮತ್ತು ಸುಮಾರು 40 ವರ್ಷ ವಯಸುಳ್ಳ ಶ್ರೀನಿವಾಸ ನನ್ನ ಗಲ್ಲುಪಟ್ಟಿಯನ್ನು ಹಿಡಿದುಕೊಂಡು ಜಮೀನಿನಲ್ಲಿ ಹೊರಳಾಡಿಕೊಂಡು ಮೂಗೇಟು ಆಗುವಂತೆ ಹೊಡೆದು ಕೊಲೆ ಬೆದರಿಕೆಯನ್ನು ಸಹಾ ಹಾಕಿರುತ್ತಾರೆ ಹಾಗೂ ಸುಮಾರು 57 ವರ್ಷ ವಯಸುಳ್ಳ ಲಕ್ಷ್ಮಯ್ಯ ಈತನ ಮಗ ಸುಮಾರು 26 ವರ್ಷ ವಯಸುಳ್ಳ ಮಣಿಕಂಠ ಉಳುಮೆ ಮಾಡುವುದಕ್ಕೆ ಅಡ್ಡಿಪಡಿಸಿ ಅವರು ತಂದಿರುವ ದೊಣ್ಣೆ ಹಾಗೂ ಮಚ್ಚಿನಿಂದ ಬೆದರಿಕೆ ಹಾಕಿ ಕಾಲುಗಳಿಂದ ಒದ್ದು ಕತ್ತು ಹಿಸುಕಿ ಕಣ್ಣಿಗೆ ಗಾಯ ಆಗುವಂತೆ ಹೊಡೆದಿರುತ್ತಾರೆ ಮತ್ತು ವೆಂಕಟರವಣಪ್ಪನ ಹೆಂಡತಿ ಸುಮಾರು 36 ವರ್ಷ ವಯಸುಳ್ಳ ನರಸಮ್ಮ ಹಿಂದಿನಿಂದ ಕಲ್ಲುಗಳಿಂದ ಬೆನ್ನಿಗೆ ಹೊಡೆದಿರುತ್ತಾರೆ ಇವರೆಲ್ಲರೂ ಸೇರಿಕೊಂಡು ಸದರಿ ಜಮೀನಿನಲ್ಲಿ ನಿನಾಗಲೀ ನಿಮ್ಮ ಸಂಬಂದೀಕರಾಗಲಳಿ ಬಂದು ಉಳುಮೆ ಮಾಡಿದರೆ ಎಲ್ಲರನ್ನೂ ಸಾಯಿಸಿ ಇಲ್ಲೇ ಸಮಾದಿ ಮಾಡುತ್ತೇವೆಂದು ಈ ಮೇಲಿನವರು ತಂದಿರುವ ಯುಧಗಳು ಮಚ್ಚಿನಿಂದ ಕೊಲೆ ಬೆದರಿಕೆ ಹಾಕಿ ಜಮೀನಿನನ್ನು ಅಟ್ಟಾಡಿಸಿಕೊಂಡು ಹೊಡಿದು ಓಡಾಡಿಸಿರುತ್ತಾರೆ ಸದರಿ ಜಮೀನಿನ ಬಗ್ಗೆ ಸಿವಿಲ್ ನ್ಯಾಯಾಲಯದಲ್ಲಿ ನನ್ನ ಪರವಾಗಿ ಆದೇಶವಾಗಿರುತ್ತದೆ, ಆದುದರಿಂದ ಮೇಲಿನ ಆರೋಪಿಗಳಿಂದ ನನಗೂ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಗೂ ಪ್ರಾಣಕ್ಕೆ ಅಪಾಯವಿದ್ದು ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ನಾನು ಚಿಕಿತ್ಸೆಪಡೆದುಕೊಂಡು ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿ ನೀಡಿದ ಪ್ರ.ವ.ವರದಿ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 193/2020 ಕಲಂ. 143,447,427 ರೆ/ವಿ 149 ಐ.ಪಿ.ಸಿ:-

          ದಿನಾಂಕ 24/07/2020 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿದಾರರಾದ ಮೂಗಪ್ಪ ಬಿನ್ ಲೇಟ್ ಮುನಿಹನುಮಯ್ಯ, ವಾಸ-ಕ್ಯಾಲಸನಹಳ್ಳಿ ಗ್ರಾಮ, ಕೊತ್ತನೂರು ಅಂಚೆ, ಕೆ.ಆರ್.ಪುರಂ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಮಗನಾದ ಮಂಜುನಾಥ ಕೆ.ಎಂ ರವರ ಹೆಸರಿನಲ್ಲಿರುವ ತಮ್ಮ ಬಾಬತ್ತು ಇದೇ ಶಿಡ್ಲಘಟ್ಟ ತಾಲ್ಲೂಕು ಅತ್ತಿಗಾನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೇ ನಂಬರ್ 98/1, 98/2, 98/3, 98/4 ನಂಬರುಗಳಿಂದಾಗುವ ಒಟ್ಟು 3 ಎಕರೆ 20 ಗುಂಟೆ ಜಮೀನಿದ್ದು, ಸದರಿ ಜಮೀನುಗಳನ್ನು ತಾವು ಕ್ರಯಕ್ಕೆ ಪಡೆದುಕೊಂಡಿರುವ ಜಮೀನುಗಳಾಗಿದ್ದು ತಾವೇ ಅನುಭವದಲ್ಲಿರುತ್ತೇವೆ. ಸದರಿ ಜಮೀನಿಗೆ ಒಟ್ಟಾಗಿ ಕಾಂಪೌಂಡ್ ಅನ್ನು ನಿರ್ಮಾಣ ಮಾಡಿರುತ್ತೇವೆ. ಹೀಗಿರುವಾಗ ದಿನಾಂಕ 24/07/2020 ರಂದು ಸುಮಾರು ಸಮಯ ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ತಾವು ಇಲ್ಲದೇ ಇರುವ ಸಮಯದಲ್ಲಿ ಅತ್ತಿಗಾನಹಳ್ಳಿ ಗ್ರಾಮದ ವಾಸಿಗಳಾದ ನಾಗೇಶ್ ಬಿನ್ ಕೃಷ್ಣಪ್ಪ, ನಾಗರಾಜ್ ಬಿನ್ ಲೇಟ್ ಕೃಷ್ಣಪ್ಪ, ಸುರೇಶ್ ಬಿನ್ ನಾರಾಯಣಪ್ಪ, ರವಿ ಬಿನ್ ಈರಪ್ಪ ಮತ್ತು ಕ್ಯಾಲಸನಹಳ್ಳಿ ಗ್ರಾಮದ ತಿಮ್ಮರಾಯಪ್ಪ ಬಿನ್ ಲೇಟ್ ಚಿನ್ನಪ್ಪ ಆದ ಇವರುಗಳು ಸೇರಿ ಈ ದಿನ ಟ್ರಾಕ್ಟರ್ ನಂಬರ್ ಕೆಎ-40-ಟಿಎ-8716 ಅನ್ನು ತೆಗೆದುಕೊಂಡು ಬಂದು ತಮ್ಮ ಜಮೀನಿನ ಕಾಂಪೌಂಡ್ ಗೋಡೆ (ಚಪ್ಪಡಿ ಗೋಡೆ) ಮತ್ತು 2 ಗೇಟ್ ಗಳನ್ನು ಧ್ವಂಸ ಮಾಡಿರುತ್ತಾರೆ. ಹಾಗು ತಮ್ಮ ಜಮೀನಿನ ಒಳಗಡೆ ಅತಿಕ್ರಮಣ ಮಾಡಿ ಉಳುಮೆ ಮಾಡಿರುತ್ತಾರೆ. ನಂತರ ತಾನು ನೋಡಿ ಪ್ರಶ್ನಿಸಿದಾಗ ಕ್ಯಾಲಸನಹಳ್ಳಿ ಗ್ರಾಮದ ತಿಮ್ಮರಾಯಪ್ಪ ಬಿನ್ ಲೇಟ್ ಚಿನ್ನಪ್ಪ ರವರು ತಾನೇ ಧ್ವಂಸ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಆತನನ್ನು ಕೇಳಿದಾಗ ಇನ್ನು ಉಳಿದವರು ನಾಗೇಶ್, ನಾಗರಾಜ, ಸುರೇಶ್, ರವಿ ಸೇರಿದಂತೆ ಮೇಲ್ಕಂಡವರು ಸಹ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ತಿಳಿಸಿರುತ್ತಾರೆ. ಆದ ಕಾರಣ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.