ದಿನಾಂಕ :25/06/2020 ರ ಅಪರಾಧ ಪ್ರಕರಣಗಳು

  1. ಚೇಳೂರು ಪೊಲೀಸ್ ಠಾಣೆ ಮೊ.ಸಂ.37/2020 ಕಲಂ. 304,337 ಐ.ಪಿ.ಸಿ :-

          ದಿನಾಂಕ 24/06/2020 ರಂದು ಬೆಳಗ್ಗೆ 11:00 ಗಂಟೆಗೆ  ಪಿರ್ಯಾಧಿದಾರರಾದ  ರಾಜ್ ಕುಮಾರ್ ಬೇಗ್  ಬಿನ್ ಸಿರಿದವತಾಲ್ ಬೇಗ್ ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ನಾನು  ಈಗ್ಗೆ ಸುಮಾರು 04 ತಿಂಗಳಿಂದ TN-34-T-9349  ಬೋರ್ ವೆಲ್ ಲಾರಿಯಲ್ಲಿ   ಹೆಲ್ಪರ್  ಕೆಲಸ ಮಾಡಿಕೊಂಡು  ಜೀವನ ಮಾಡಿಕೊಂಡಿರುತ್ತೇನೆ.  ನನ್ನ  ಜೊತೆಯಲ್ಲಿ  ನಮ್ಮ  ಗ್ರಾಮದ (1)  ಪುಷ್ಪರಾಜ್  ಬೇಗ್  ಬಿನ್  ಶ್ರೀರಾಮ ಸೂರತ್ ಬೇಗ್, 22 ವರ್ಷ, ಬೈಗಾ ಜನಾಂಗ, ದುವಾರಾ  ಗ್ರಾಮ  ಚಿತ್ರಂಗಿ ತಾಲ್ಲೂಕು, ಸಿಂಗರೌಲಿ ಜಿಲ್ಲೆ ಮಧ್ಯಪ್ರದೇಶ ರಾಜ್ಯ. (2) ಮುಖೇಶ್ ಬಿನ್  ಅಸ್ಮಾನ್ 20ವರ್ಷ  ಬೈಗಾ ಜನಾಂಗ ದುವಾರಾ  ಗ್ರಾಮ ಚಿತ್ರಂಗಿ ತಾಲ್ಲೂಕು, ಸಿಂಗರೌಲಿ ಜಿಲ್ಲೆ, ಮಧ್ಯಪ್ರದೇಶ ರಾಜ್ಯ (3)  ಅವದೇಶ  ಬಿನ್ ಲಕ್ಷ್ಮಣ್, 25ವರ್ಷ, ದುವಾರಾ  ಗ್ರಾಮ, ಚಿತ್ರಂಗಿ  ತಾಲ್ಲೂಕು, ಸಿಂಗರೌಲಿ ಜಿಲ್ಲೆ ,ಮಧ್ಯಪ್ರದೇಶ ರಾಜ್ಯ  (4) ಜಗದೇವ್ ಬಿನ್ ಹರಿಪ್ರಸಾದ, 21ವರ್ಷ, ದುವಾರಾ  ಗ್ರಾಮ, ಚಿತ್ರಂಗಿ ತಾಲ್ಲೂಕು, ಸಿಂಗರೌಲಿ ಜಿಲ್ಲೆ ಮಧ್ಯಪ್ರದೇಶ ರಾಜ್ಯ (5)  ರಾಜಾರಾಮ್   ಬೋಡಹಾರ್, ಗ್ರಾಮ ಚಿತ್ರಂಗಿ  ತಾಲ್ಲೂಕು,  ಸಿಂಗರೌಲಿ  ಜಿಲ್ಲೆ,  ಮದ್ಯಪ್ರದೇಶ  ರಾಜ್ಯ ರವರು TN-34-T-9349 ಬೋರ್ ವೆಲ್ ಲಾರಿಯಲ್ಲಿ  ಈಗ್ಗೆ 04 ತಿಂಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದೆವು. ಈ ಲಾರಿ ವಾಹನಕ್ಕೆ  ತಮಿಳುನಾಡಿನ ತಿರುಚುನ್ ಗೂಡ್ ಸತ್ತಿವೇಲ್ ರವರು  ಚಾಲಕ ಕೆಲಸ ಮಾಡಿಕೊಂಡಿದ್ದನು. ಸುಬ್ರಮಣಿ ರವರು ಮ್ಯಾನೇಜರ್ ಕೆಲಸ ಮಾಡಿ ಕೊಂಡಿದ್ದರು.  ಬೋರ್ ವೆಲ್ ಲಾರಿಯನ್ನು  ಚಿಂತಾಮಣಿ ನಗರದಲ್ಲಿ ನಿಲ್ಲಿಸಿಕೊಂಡಿದ್ದು ಎಲ್ಲಿಯಾದರೂ ಬೋರ್ ವೆಲ್  ಕೊರೆಸಲು ಪಾಯಿಂಟ್ ಇದ್ದರೆ ಅಲ್ಲಿಗೆ ಹೋಗಿ ಬೋರ್ ವೆಲ್ ಕೊರೆಸಿ  ಪುನಃ  ಚಿಂತಾಮಣಿಗೆ  ಬರುತ್ತಿರುತ್ತೇವೆ. ದಿನಾಂಕ: 23/06/2020 ರಂದು  ಬಾಗೇಪಲ್ಲಿ ತಾಲ್ಲೂಕು  ಚೇಳೂರು ಹೋಬಳಿಯ  ಹೊಸಹುಡ್ಯ  ಗ್ರಾಮದ  ವಾಸಿಯಾದ  ಬೈರೆಡ್ಡಿ  ಬಿನ್  ಚೌಡಪ್ಪ ಎಂಬುವವರ  ಜಮೀನಿನಲ್ಲಿ ಬೋರ್ ವೆಲ್ ಹಾಕಿಸಲು  ಏಜೆಂಟ್ ರವಿಕುಮಾರ್  ಬಿನ್ ಕೆ.ಎಲ್.ನಾರಾಯಣಸ್ವಾಮಿ, 36 ವರ್ಷ, ವಕ್ಕಲಿಗರು, ವಾಸ:ಗುರಂಪಲ್ಲಿ  ಗ್ರಾಮ,  ಚಿಂತಾಮಣಿ  ತಾಲ್ಲೂಕು ರವರ ಮುಖಾಂತರ ಆರ್ಡರ್ ಬಂದಿತ್ತು. ಅದರಂತೆ ನಾವು  ಹೊಸಹುಡ್ಯ  ಗ್ರಾಮಕ್ಕೆ ಹೋಗಲು ರಾತ್ರಿ 8-00 ಗಂಟೆಯ ಸಮಯಕ್ಕೆ ಚಿಂತಾಮಣಿಯಲ್ಲಿ ನಾನು  ಮತ್ತು (1)  ಪುಷ್ಪರಾಜ್  ಬೇಗ್  (2) ಮುಖೇಶ್ (3)  ಅವದೇಶ  (4) ಜಗದೇವ್ (5)  ರಾಜಾರಾಮ್ ರವರು ಹಿಂಭಾಗದಲ್ಲಿ ಕುಳಿತುಕೊಂಡಿದ್ದು, ಮ್ಯಾನೇಜರ್ ಸುಬ್ರಮಣಿ ರವರು ಲಾರಿಯ ಕ್ಯಾಬಿನ್ ನಲ್ಲಿ ಕುಳಿತುಕೊಂಡಿದ್ದರು.  ನಮ್ಮ ಲಾರಿಯ ಮುಂದೆ ಮುಂದೆ ಡ್ರಿಲ್ಲಿಂಗ್ ಲಾರಿ ಹೋಗಿದ್ದು, ನಾವು ಆ ಲಾರಿಯನ್ನು  ಹಿಂಬಾಲಿಸಿಕೊಂಡು  ಚಾಲಕ ಸತ್ತಿವೇಲ್ ರವರು  ವಾಹನವನ್ನು  ಚಾಲನೆ ಮಾಡಿಕೊಂಡು  ಬಾಗೇಪಲ್ಲಿ ತಾಲ್ಲೂಕು  ಚೇಳೂರು ಹೋಬಳಿ, ಹೊಸಹುಡ್ಯ  ಗ್ರಾಮದ  ಬೈರೆಡ್ಡಿ  ಬಿನ್  ಚೌಡಪ್ಪರವರ  ಜಮೀನು  ಬಳಿ ಹೋಗಲು ರಾತ್ರಿ ಸುಮಾರು 9-45 ಗಂಟೆಯ ಸಮಯಲ್ಲಿ ಹೊಸಹುಡ್ಯ  ಗ್ರಾಮದ  ವಿಶ್ವನಾಥ  ಬಿನ್ ಸುಬ್ಬರಾಯಪ್ಪ, ವಕ್ಕಲಿಗರು  ಎಂಬುವವರ  ಜಮೀನು ಬಳಿ ಮಣ್ಣುಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದಾಗ   TN-34-T-9349  ಬೋರ್ ವೆಲ್ ಸಪೋರ್ಟ್ ಲಾರಿಯ ಚಾಲಕ ತಿರುಚುನ್ ಗೂಡ್ ಸತ್ತಿವೇಲ್ ರವರು  ಬಲಭಾಗದಲ್ಲಿ ಜಾಗ  ಇದ್ದರೂ ಸಹ  ಚಾಲಕ ಲಾರಿಯನ್ನು ಅಜಾಗರೂಕತೆ ಮತ್ತು  ನಿರ್ಲಕ್ಷ್ಯತೆಯಿಂದ ಎಡಭಾಗದ ಕಡೆ ಚಾಲನೆ ಮಾಡಿದ್ದರಿಂದ ಲಾರಿಯು ಜಮೀನಿನ ಎಡ ಬದಿಯಲ್ಲಿದ್ದ ಕಾಲುವೆಯೊಳಕ್ಕೆ ಉರುಳಿತು. ಲಾರಿಯು ಕಾಲುವೆಯಾಳಕ್ಕೆ ಬಿದ್ದ ದೆಸೆಯಿಂದ ಲಾರಿಯ ಹಿಂಭಾಗದಲ್ಲಿ ಕುಳಿತಿದ್ದ ನಮ್ಮಗಳ ಮೇಲೆ  ಲಾರಿಯಲ್ಲಿದ್ದ  ಪೈಪುಗಳು, ಡ್ರಿಲ್ಲಿಂಗ್ ಬಿಟ್ಟುಗಳು, ಬಿದ್ದಿದ್ದು, ನನಗೆ  ಬೆನ್ನಿನ  ಹಿಂಭಾಗದಲ್ಲಿ  ಮೂಗೇಟುಗಳುಂಟಾಯಿತು, ಮುಖೇಶ್  ಬಿನ್ ಅಸ್ಮಾನ್ ರವರಿಗೆ  ಎಡ ಕಣ್ಣಿನ ಮೇಲೆ  ರಕ್ತ ಗಾಯಗಳಾಯಿತು. ಪುಷ್ಪರಾಜ್ ಬೇಗ್ ರವರಿಗೆ ತಲೆಯ ಹಿಂಭಾಗ, ಎಡ ಮೊಣ ಕೈಗೆ  ಊತಗಾಯಗಳಾಗಿತ್ತು. (1)  ಅವದೇಶ ಬಿನ್  ಲಕ್ಷ್ಮಣ್  (2) ಜಗದೇವ್ ಬಿನ್  ಹರಿಪ್ರಸಾದ (3) ರಾಜಾರಾಮ್ ಬಿನ್ ಮೇವಲಾಲ್ ರವರ  ಮೈ ಮೇಲೆ ಲಾರಿಯಲ್ಲಿದ್ದ ಪೈಪುಗಳು ಬಿದ್ದು ತೀವ್ರ ತರವಾದ ರಕ್ತಗಾಯಗಳು, ಒತ್ತಡದ ಗಾಯಗಳು ಮತ್ತು ಮೂಗೇಟುಗಳುಂಟಾಗಿ ಸ್ಥಳದಲ್ಲಿಯೇ  ಮೃತಪಟ್ಟಿದ್ದರು. ತಕ್ಷಣ ಪಕ್ಕದಲ್ಲಿಯೇ ಇದ್ದ ಹೊಸಹುಡ್ಯ ಗ್ರಾಮದ ಸಾರ್ವಜನಿಕರು ಅಲ್ಲಿಗೆ ಬಂದು  ನಮ್ಮನ್ನು  ಉಪಚರಿಸಿ, ಗಾಯಗಳಾಗಿದ್ದ ನಮ್ಮಗಳನ್ನು 108 ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ  ಕಳುಹಿಸಿಕೊಟ್ಟರು.  ನಾವು  ಚಿಂತಾಮಣಿ  ಸರ್ಕಾರಿ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ  ಪಡಿಸಿಕೊಂಡಿರುತ್ತೇವೆ.  TN-34-T-9349  ಬೋರ್ ವೆಲ್  ಸಪೋರ್ಟ್ ಲಾರಿಯ ಕ್ಯಾಬಿನ್ ನಲ್ಲಿ ಕುಳಿತಿದ್ದ ಮ್ಯಾನೇಜರ್ ಸುಬ್ರಮಣಿ ರವರಿಗೆ  ಹೆಚ್ಚಿನ  ಗಾಯಗಳಾಗಿದ್ದರಿಂದ  ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೋಲಾರಕ್ಕೆ  ಕಳುಹಿಸಿಕೊಟ್ಟರು. TN-34-T-9349  ಬೋರ್ ವೆಲ್  ಸಪೋರ್ಟ್ ಲಾರಿಯ ಚಾಲಕ  ಅಜಾಗರೂಕತೆ ಮತ್ತು ನಿರ್ಲಕ್ಷ್ಯತೆಯಿಂದ  ಚಾಲನೆ  ಮಾಡಿ ವಾಹನವನ್ನು ಓಣಿ ಕಾಲುವೆಯೊಳಕ್ಕೆ  ಉರುಳಿಸಿದ್ದರಿಂದ ನಮಗೆ  ಗಾಯಗಳಾಗಿ ಹಾಗೂ ಮೇಲ್ಕಂಡ  (1) ಅವದೇಶ ಬಿನ್  ಲಕ್ಷ್ಮಣ್  (2) ಜಗದೇವ್ ಬಿನ್  ಹರಿಪ್ರಸಾದ (3) ರಾಜಾರಾಮ್ ಬಿನ್ ಮೇವಲಾಲ್ ರವರ ಸಾವಿಗೆ ಕಾರಣನಾಗಿರುತ್ತಾನೆ. ಮೃತ ದೇಹಗಳನ್ನು ಸಾರ್ವಜನಿಕರ ಸಹಾಯದಿಂದ ಯಾವುದೋ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರ ಬಾಗೇಪಲ್ಲಿ ಗೆ ಸಾಗಿಸಿರುತ್ತೇವೆ. ನಂತರ ನಮಗೆ ಮೂಗೇಟುಗಳಾದ ಕಾರಣ ತಡವಾಗಿ ಚೇಳೂರು ಪೊಲೀಸ್ ಠಾಣೆಗೆ ಹಾಜರಾಗಿ ಸದರಿ  TN-34-T-9349  ಬೋರ್ ವೆಲ್  ಸಪೋರ್ಟ್ ಲಾರಿಯ ಚಾಲಕನ ವಿರುದ್ದ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:37/2020 ಕಲಂ 337,304 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.84/2020 ಕಲಂ. 447,427,504,506,507 ರೆ/ವಿ 34 ಐ.ಪಿ.ಸಿ & 3 PREVENTION OF DESTRUCTION AND LOSS OF PROPERTY ACT :-

          ದಿನಾಂಕ 24/06/2020 ರಂದು ಸಂಜೆ 06 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಚಿಕ್ಕಬಳ್ಳಾಪುರ ತಾಲ್ಲೂಕು ಶ್ರೀ ಜಾಲಾರಿ ನರಸಿಂಹಸ್ವಾಮಿ ದೇವಾಲಯವು  ಮುಜರಾಯಿ ಇಲಾಖೆಗೆ ಸೇರಿರುತ್ತದೆ ದೇವಾಲಯಕ್ಕೆ ಸುಮಾರು 35 ವರ್ಷಗಳಿಂದ ರಸ್ತೆಯ ಎರಡೂ  ಕಡೆಗಳಲ್ಲಿ ಜಂಬು ನೇರಳೆ, ಗೋಣಿ ಮರ, ಆಲದ ಮರ ಇತ್ಯಾದಿ ಮರಗಳಿರುತ್ತವೆ. ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರ ಚಿಕ್ಕಬಳ್ಳಾಪುರ ತಾಲ್ಲೂಕು ದಿನ್ನೆ ಹೊಸಹಳ್ಳಿ ಗ್ರಾಮದಿಂದ ರಸ್ತೆ ಯೋಜನೆ   ಹಂತ 2 ರಲ್ಲಿ ಅಡಿಯಲ್ಲಿ 2014-15 ನೇ ಸಾಲಿನಲ್ಲಿ  ಜಾಲಾರಿ ನರಸಿಂಹಸ್ವಾಮಿ ದೇವಾಲಯ ಬೆಟ್ಟದಿಂದ ಹನುಮಂತಪುರದ ಮೂಲಕ ಚಿಕ್ಕಬಳ್ಳಾಪುರ ನಗರದ ವರೆಗೆ ಪ್ರಧಾನ ಮಂತ್ರಿಗಳ ಗ್ರಾಮ ಸಡಕ್ ಯೋಜನೆಯಡಿ ಜಿಲ್ಲಾ ಪಂಚಾಯ್ತಿ ವತಿಯಿಂದ ಸುಮಾರು 2 ಕೋಟಿಯಷ್ಟು ಡಾಂಬರು ರಸ್ತೆ ನಿರ್ಮಿಸಿ ರಸ್ತೆಯ ಎರಡೂ ಕಡೆ ಚರಂಡಿಯನ್ನು ಕಾಲುವೆ ಮಾಡಿರುತ್ತಾರೆ ಹಾಗೂ ಅರಣ್ಯ ಸಹಾಯಕರಿಂದ  ಸುಮಾರು 10-12 ವರ್ಷಗಳಿಂದ ನೇರಳೆ, ಆಲದ ಮರಗಳನ್ನು ನೆಟ್ಟಿರುತ್ತಾರೆ. ಇತ್ತೀಚೆಗೆ ದಿನಾಂಕ 14/06/2020 ರಂದು ಸಂಜೆ ಸುಮಾರು 06 ಗಂಟೆ ಸಮಯದಲ್ಲಿ ಬೆಂಗಳೂರಿನ ಬಾಗಲೂರು ವಾಸಿಗಳಾದ ಚಂದ್ರಶೇಖರ್ ಮತ್ತು ಅತನ ಹೆಂಡತಿಯಾದ ಶ್ರೀಮತಿ ರೇಣುಕಾ ಬಿ ಕೆ ರವರು  ಜೆಸಿಬಿ ಯಂತ್ರಗಳಿಂದ ರಸ್ತೆಯ ಉತ್ತರಕ್ಕೆ ಸರ್ಕಾರ ನಿರ್ಮಿಸಿರುವ ರಸ್ತೆಯನ್ನು ಅತಿಕ್ರಮ ಪ್ರವೇಶಮಾಡಿ  ಲಕ್ಷಾಂತರ ಬೆಳೆ ಬಾಳುವ ನೇರಳೆ, ಗೋಣಿ ಮತ್ತು ಇತರೆ ಮರಗಳನ್ನು ಹಾಳು ಮಾಡಿ, ರಸ್ತೆ, ಚರಂಡಿಯ ಕೆಲವು ಭಾಗಗಳನ್ನು ಜಕ್ಕಂಗೊಳಿಸಿ ಅರಣ್ಯ ಇಲಾಖೆಯ ಜಮೀನನ್ನು ಆಕ್ರಮಿಸಿಕೊಂಡು ಕೆಲವು ಮರಗಳನ್ನು ಬುಡಸಮೇತ ಕಿತ್ತು ಹಾಕಿ ಬೆಟ್ಟದ ಬಂಡೆಗಳನ್ನು ಕಿತ್ತು ಬೆಟ್ಟದ ಸೌಂದಯ್ಯವನ್ನು ಹಾಳು ಮಾಡಿ ಹಾಗೂ ವಿರೂಪಗೊಳಿಸಿ ಸಾರ್ವಜನಿಕರಿಗೆ ಮತ್ತು ಭಕ್ತಾಧಿಗಳಿಗೆ ಓಡಾಡಲು ತೊಂದರೆಯನ್ನು ಮಾಡಿರುತ್ತಾರೆ. ಇದನ್ನು ನೋಡಿದ 1) ಚನ್ನಕೃಷ್ಣ ಬಿನ್ ನಾರಾಯಣಸ್ವಾಮಿ, 2) ಮೂರ್ತಿ ಬಿನ್ ಪಿಳ್ಳಪ್ಪ, 3) ಮುನಿರಾಜು ಬಿನ್ ಕೆಂಪಣ್ನ, 4) ಚನ್ನಕೃಷ್ಣ ಬಿನ್ ಮುನಿಯಪ್ಪ ಹಾಗೂ ಇತರರು ದೇವಸ್ಥಾನದ ಸುತ್ತಮುತ್ತಲಿನ ಗ್ರಾಮಸ್ಥರು ಸಾರ್ವಜನಿಕರು ಚಂದ್ರಶೇಖರ್ ಮತ್ತು ಶ್ರೀಮತಿ ರೇಣುಕಾ ರವರಲ್ಲಿ ಮನವಿಯನ್ನು ಮಾಡಿದೆವು ಅದಕ್ಕೆ ಅವರು ನಮ್ಮ ತಂಟೆಗೆ ಬಂದರೆ ನಿಮ್ಮೆಲ್ಲರಿಗೂ ಒಂದು ಗತಿ ಕಾಣಿಸುತ್ತೇವೆ ನಿಮ್ಮ ಕೈಕಾಲುಗಳೂ ಇರುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ ನಾವು ಸಂಬಂಧ ಪಟ್ಟ ಇಲಾಖೆಗೆ ದೂರು ಕೊಡುತ್ತೇವೆಂದು ವಾಪಸ್ಸು ಬಂದೆವು. ದಿನಾಂಕ 14/06/2020 ರಂದು ಸಂಜೆ ರೇಣುಕಾ ರವರು ತನ್ನ ಮೊಬೈಲ್ ನಂಬರ್ 9731123415 ನಿಂದ  ಹನುಮಂತಪುರ ಗ್ರಾಮದ ಗಂಗರಾಜು ರವರ ಮೊಬೈಲ್ ನಂಬರ್ 9743434871 ಗೆ ಕರೆಮಾಡಿ ಅಲ್ಲಿಗೆ ಹೋಗಿದ್ದವರ ಮೇಲೆ ಅಟ್ರಾಸಿಟಿ ಕೇಸು ದಾಖಲಿಸುತ್ತೇನೆ 10 ಲಕ್ಷ ದುಡ್ಡು ಕಳೆದುಕೊಂಡು ಕೋರ್ಟಗೆ ಅಲೆಯುವಂತೆ ಮಾಡುತ್ತೇನೆ ನೀವು ಡಿಸ್ಟಿಕ್ ಕೋರ್ಟ ನೋಡಿದ್ದೀರಾ ನಾನು ಸುಪ್ರಿಮ್ ಕೋರ್ಟ ನೋಡಿದ್ದೇನೆ ಎಂಬಿತ್ಯಾದಿಯಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ರಾತ್ರಿ ಗಂಗರಾಜು ರವರು ನನಗೆ ಬಂದು ವಿಚಾರ ತಿಳಿಸಿದ. ಈ ಮೇಲ್ಕಂಡ ಆಸಾಮಿಗಳಾದ ಚಂದ್ರಶೇಖರ್ ಮತ್ತು ರೇಣುಕಾ ರವರು  ಉದ್ದೇಶಪೂರ್ವಕವಾಗಿ ಸರ್ಕಾರದಿಂದ ನಿರ್ಮಿಸಲಾಗಿದ್ದ ರಸ್ತೆ,   ಕಾಲುವೆ ಮತ್ತು ರಸ್ತೆ ಪಕ್ಕದ ವಿವಿಧ ಮರಗಳನ್ನು, ಜೆಸಿಬಿ ಯಂತ್ರಗಳ ಮೂಲಕ ಹಾಳು ಮಾಡಿ ಸರ್ಕಾರದ ಆಸ್ತಿಯನ್ನು ನಷ್ಟ ಪಡಿಸಿ ಸಾರ್ವಜನಿಕರಿಗೆ ತೊಂದರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದ್ದು ಇದಾದ ನಂತರವೂ ಸಹಾ  ಮುಂದುವರೆಸಿ ಈ ದಿನ ದಿನಾಂಕ 24/06/2020 ರಂದು ಸದರಿ ಆಸಾಮಿಗಳು ಜೆಸಿಬಿ ವಾಹನ ತಂದು ಮೇಲ್ಕಂಡ ಕೃತ್ಯವನ್ನು ಮುಂದುವರೆಸಿರುತ್ತಾರೆ.  ಸದರಿಯವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರಿದ ಮೇರೆಗೆ ಈ ಪ್ರ ವ ವರದಿ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.85/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 25/06/2020 ರಂದು ಬೆಳಿಗ್ಗೆ 10.10 ಗಂಟೆಗೆ ಮಾನ್ಯ ಪಿ ಎಸ್ ಐ ರವರು ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ 25/06/2020 ರಂದು ಬೆಳಿಗ್ಗೆ 10 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಚಿಕ್ಕಬಳ್ಳಾಪುರ ತಾಲ್ಲೂಕು ನ್ಯಾಸ್ತಿಮ್ಮನಹಳ್ಳಿ  ಗ್ರಾಮದ ಶ್ರೀ ರಾಮಪ್ಪ ಬಿನ್ ಗಂಗಪ್ಪ, 50 ವರ್ಷ, ದಮರಿಗರು(ಎಸ್ ಸಿ) ಜನಾಂಗ, ನ್ಯಾಸ್ತಿಮ್ಮನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ರವರು, ಅವರ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ, ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.74/2020 ಕಲಂ. 78(3) ಕೆ.ಪಿ ಆಕ್ಟ್:-

          ದಿನಾಂಕ:24-06-2020 ರಂದು ಜೆ.ಎನ್ ಆನಂದಕುಮಾರ್ ಪೊಲೀಸ್ ಇನ್ಸ್ ಪೆಕ್ಟರ್ ಆದ ನಾನು ಮದ್ಯಾಹ್ನ 12-30 ಗಂಟೆಯ ಸಮಯದಲ್ಲಿ ಸಿಬ್ಬಂದಿಯಾದ ಸರ್ವೇಶ್ ಪಿಸಿ 426 ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ: ಕೆ.ಎ 40 ಜಿ 356  ವಾಹನದಲ್ಲಿ ಪ್ಲವರ್ ವೃತ್ತಮ ಚೇಳೂರು ವೃತ್ತ, ಮಾರುತಿ ಸರ್ಕಲ್  ಕಡೆಗಳಲ್ಲಿ ಗಸ್ತು ಮಾಡಿಕೊಂಡು ಆರ್ ಕೆ ನರ್ಸೀಂಗ್ ಹೋಂ ರಸ್ತೆಯಲ್ಲಿರುವ ಟೀ ಅಂಗಡಿಯ ಬಳಿಯ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ನಾವು ಮಾರುತಿ ವೃತ್ತದಲ್ಲಿ  ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ, ಅವರನ್ನು ಜೀಪಿನಲ್ಲಿ ಕರೆದುಕೊಂಡು ಆರ್ ಕೆ ನರ್ಸೀಂಗ್ ಹೋಂ ಬಳಿಗೆ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ, ಪಂಚರನ್ನು ಮತ್ತು ಸಿಬ್ಬಂದಿಯವರನ್ನು  ಕಾಲ್ನಡಿಗೆಯಲ್ಲಿ ಕರೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಟೀ ಅಂಗಡಿ ಮುಂಭಾಗ  ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಅಸಾಮಿ ರಸ್ತೆಯ ಬದಿಯಲ್ಲಿ ನಿಂತುಕೊಂಡು ಜನರನ್ನು ಗುಂಪು ಸೇರಿಸಿಕೊಂಡು 1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಹಣ ಕಟ್ಟುವಂತೆ ಪ್ರೇರೆಪಿಸುತ್ತಾ ಮಟ್ಕಾ ಚೀಟಿ ಬರೆಯುತ್ತಿದ್ದನು. ನಾವು ಪಂಚರೊಂದಿಗೆ ಸುತ್ತುವರೆದು ದಾಳಿ ಮಾಡುವಷ್ಟರಲ್ಲಿ ಅಲ್ಲಿದ್ದ ಜನರೆಲ್ಲಾ ಓಡಿ ಹೋಗಿದ್ದು ಮಟ್ಕಾ ಚೀಟಿ ಬರೆಯುತ್ತಿದ್ದ  ವ್ಯಕ್ತಿಯನ್ನು ಹಿಡಿದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಅಂಜಿ ಬಿನ್ ಶಿವಾನಂದ, 43 ವರ್ಷ, ಕೊರಚರು, ಗಾರೆ ಕೆಲಸ,  ಅಶ್ರಯ ಬಡಾವಣೆ, (ಕುಂಬಾರ ನಾರಾಯಣಪ್ಪ ರವರ ಮನೆ ಬಳಿ) ಚಿಂತಾಮಣಿ ನಗರ ಎಂದು ತಿಳಿಸಿದ್ದು ಆತನನ್ನು ಅಂಗ ಶೋಧನೆ ಮಾಡಲಾಗಿ  930 ರೂ ನಗದು ಹಣ ಇದ್ದು ಸದರಿ ಹಣದ ಬಗ್ಗೆ ಕೇಳಲಾಗಿ ಇದು ಸಾರ್ವಜನಿಕರಿಂದ ಮಟ್ಕಾ ಆಡಿ ಸಂಪಾದಿಸಿರುವ ಹಣವೆಂತ ತಿಳಿಸಿದ್ದು,ಪಂಚಾಯ್ತಿದಾರರ ಸಮಕ್ಷಮದಲ್ಲಿ ಪಂಚನಾಮೆಯ ಮೂಲಕ ಹಣ, ಒಂದು ಪೆನ್ನು, ಮಟ್ಕಾ ಚೀಟಿಯನ್ನು ಅಮಾನತ್ತು ಪಡಿಸಿಕೊಂಡು ಮಾಲು ಆಸಾಮಿ ಪಂಚನಾಮೆಯೊಂದಿಗೆ  ಮಧ್ಯಾಹ್ನ 1-30 ಗಂಟೆಗೆ ಠಾಣೆಗೆ ವಾಪಸ್ಸಾಗಿ ನೀಡಿದ ವರದಿಯನ್ನು ಪಡೆದು ಅಸಂಜ್ಞೇಯ ಅಪರಾಧವಾಗಿದ್ದರಿಂದ ಪ್ರ ವ ವರದಿಯನ್ನು ದಾಖಲಿಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆಯಲು ಠಾಣಾ ಎನ್ ಸಿ ಆರ್ 105/2020 ರಂತೆ ದಾಖಲಿಸಿರುತ್ತೆ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.75/2020 ಕಲಂ. 78(3) ಕೆ.ಪಿ ಆಕ್ಟ್:-

          ದಿನಾಂಕ 24-06-2020 ರಂದು ಸಂಜೆ 4099 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಡಿ.ಸಿ.ಬಿ/ಸಿ.ಇ.ಎನ್ ಪೊಲೀಸ್ ಠಾಣೆಯ ಸಿ.ಹೆಚ್.ಸಿ38 ರವರು ಠಾಣೆಗೆ ಹಾಜರಾಗಿ ಈದಿನ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ರಾಜಣ್ಣ. ಎನ್ ರವರು ನನಗೂ ಮತ್ತು ಸಿ.ಹೆಚ್.ಸಿ 198 ಮಂಜುನಾಥ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳಪತ್ತೆ ಕಾರ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ನಾವು ಚೇಳೈರುವೃತ್ತ, ಚೌಡರೆಡ್ಡಿಪಾಳ್ಯ, ಕಡೆಗಳಲ್ಲಿ ಗಸ್ತು ಮಾಡುತ್ತಿದ್ದಾಗ, ಮಧ್ಯಾಹ್ನ 2.00 ಗಂಟೆ ಸಮಯದಲ್ಲಿ ನಗರದ ಬರ್ಕಿ ಮೈದಾನದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ಭಾತ್ಮಿ ಬಂದಿದ್ದು ಅದರಂತೆ ಪಂಚರೊಂದಿಗೆ ದಾಳಿ ಮಾಡಿ ಚಾಂದ್ ಪಾಷ ಬಿನ್ ಲೇಟ್ ಹುಸೇನ್ ಸಾಬ್ 46 ವರ್ಷ, ವ್ಯಾಪಾರ, ಚೌಡರೆಡ್ಡಿ ಪಾಳ್ಯ, ಚಿಂತಾಮಣಿ ನಗರ ರವರನ್ನುವಶಕ್ಕೆ ಪಡೆದುಕೊಂಡು ಅತನ ಬಳಿ ಪರಿಶೀಲಿಸಲಾಗಿ 1)ವಿವಿಧ ಅಂಕಗಳು ಬರೆದಿರುವ 01 ,ಮಟ್ಕಾ ಚೀಟಿ 2) ಸಾರ್ವಜನಿಕರಿಂದ ಮಟ್ಕಾ ಆಡಲು ಪಡೆದಿರುವ ಒಟ್ಟುಹಣ 2600 ರೂ 3) ಒಂದು ಬಾಲ್ ಪಾಯಿಂಟ್  ಪೆನ್ನು  ಮತ್ತು ವಿವೋ ಮೊಬೈಲ್ ನ್ನು ವಶಕ್ಕೆ ಪಡೆದುಕೊಂಡು ಮಾಲು ಮತ್ತು ಅಸಾಮಿಯೊಂದಿಗೆ ಠಾಣೇಗೆ ಹಾಜರಾಗಿ  ನೀಡಿದ ವರದ ಹಾಗೂ ಪಂಚನಾಮೆಯನ್ನು ಪಡೆದು ಈ ಪ್ರಕರಣವು  ಸಂಜ್ಞೇಯ ಅಪರಾಧವಾಗಿದ್ದರಿಂದ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಪ್ರ ವ ವರದಿಯನ್ನು ದಾಖಲಿಸಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.158/2020 ಕಲಂ. 379 ಐ.ಪಿ.ಸಿ:-

          ದಿನಾಂಕ 24-06-2020 ರಂದು 17-30 ಗಂಟೆಗೆ   ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಹೆಚ್.ಸಿ.-208 ಗಿರೀಶ್ ಕೆ,ಆರ್. ರವರು ಒಂದು ಮರಳು ತುಂಬಿದ  ಟ್ರ್ಯಾಕ್ಟರ್  ಅನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ನಮ್ಮ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ ರಾಜಣ್ಣ ಎನ್. ರವರು ನನಗೆ ಠಾಣಾ ಹಾಜರಾತಿಯಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನು ಬಾಹೀರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ಮಾಡಲು ನೇಮಿಸಿ ಕಳುಹಿಸಿದ್ದು  ಅದರಂತೆ ನಾನು ಈದಿನ ಮದ್ಯಾಹ್ನ 3,30 ಗಂಟೆಗೆ ಡಿ,ಪಾಳ್ಯ ಗ್ರಾಮದ  ಕಡೆ ಗಸ್ತಿನಲ್ಲಿದ್ದಾಗ ತಾಲ್ಲೂಕಿನ ಸಾಗಾನಹಳ್ಳಿ ಗ್ರಾಮದ ಕೆರೆಯಲ್ಲಿ ಯಾವುದೋ ಒಂದು ಟ್ರಾಕ್ಟರ್ ನಲ್ಲಿ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಬರುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಅದರಂತೆ ನಾನು ಸಾಗಾನಹಳ್ಳಿ ಕೆರೆಗೆ ಹೋಗುವಷ್ಟರಲ್ಲಿ ಒಂದು ಮರಳು ತುಂಬಿದ ಟ್ರಾಕ್ಟರ್ ಸಾಗಾನಹಳ್ಳಿ ಕೆರೆಯಿಂದ ಸಾಗಾನಹಳ್ಳಿ ಗ್ರಾಮದ ಕಡೆ ಬರುತ್ತಿದ್ದು ಸದರಿ ಟ್ರಾಕ್ಟರನ್ನು ನಿಲ್ಲಿಸಲು ಸೂಚಿಸಿದಾಗ ಸದರಿ ಟ್ರಾಕ್ಟರ್ ನ ಚಾಲಕ ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಟ್ರಾಕ್ಟರ್ ಅನ್ನು  ಅಲ್ಲಿಯೇ ನಿಲ್ಲಿಸಿ ಸ್ಥಳದಿಂದ ಓಡಿ ಹೋಗಿರುತ್ತಾನೆ, ನಂತರ ಟ್ರಾಕ್ಟರನ್ನು ಪರಿಶೀಲಿಸಲಾಗಿ  ಟ್ರಾಲಿಯಲ್ಲಿ ಮರಳನ್ನು ತುಂಬಿದ್ದು ಟ್ರಾಕ್ಟರ್ ನ  ಇಂಜಿನ್ ನೊಂದಣಿ ಸಂಖ್ಯೆಯನ್ನು ಪರಿಶೀಲಿಸಲಾಗಿ ಎ,ಪಿ-21 ಟಿ,ಎಕ್ಸ್ 1725 ಹಾಗೂ ಟ್ರಾಲಿ ಸಂಖ್ಯೆಯನ್ನು ಪರಿಶೀಲಿಸಲಾಗಿ ಎ,ಪಿ-26 ಎಸಿ 2985/2986 ಎಂತ ಇರುತ್ತೆ, ನಂತರ ಟ್ರಾಕ್ಟರ್ ಅನ್ನು ಬೇರೆ ಚಾಲಕನ ಸಹಾಯದಿಂದ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಿರುತ್ತೆ, ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಟ್ರಾಕ್ಟರ್ ನಲ್ಲಿ ಮರಳನ್ನು ಕಳವು ಮಾಡಿ ಸಾಗಾಣಿಕೆ ಮಾಡುತ್ತಿದ್ದ ಟ್ರಾಕ್ಟರ್ ಅನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಟ್ರಾಕ್ಟರ್ ನ ಚಾಲಕ ಮತ್ತು ಮಾಲೀಕನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.43/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:24/06/2020 ರಂದು ಸಂಜೆ 16:20 ಗಂಟೆ ಸಮಯಲ್ಲಿ ಪಿ.ಎಸ್.ಐ, ಬಿ.ಕೆ ಪಾಟೀಲ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:24/06/2020 ರಂದು ಮದ್ಯಾಹ್ನ 2:00 ಗಂಟೆ ಸಮಯದಲ್ಲಿ ನಾನು ಸಿಬ್ಬಂದಿಯಾದ ಹೆಚ್.ಸಿ-94 ಪ್ರಕಾಶ್, ಪಿಸಿ-240 ಮಧುಸೂಧನ್ ರವರೊಡನೆ ಸರ್ಕಾರಿ ಜೀಪು ಸಂಖ್ಯೆ ಕೆಎ-40-ಜಿ-296 ರಲ್ಲಿ ಚಾಲಕನೊಂದಿಗೆ ಕಣಿವೆ ನಾರಾಯಣಪುರ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಕಂಗಾನಹಳ್ಳಿ ಗ್ರಾಮದ ಸುಬ್ರಮಣಿ ಬಿನ್ ಲೇಟ್ ಕೃಷ್ಣಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ತನ್ನ ಅಂಗಡಿಯ ಮುಂಭಾಗದಲ್ಲಿ ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ನಶಿಕುಂಟೆ ಹೊಸೂರು ಗ್ರಾಮದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಮದ್ಯಾಹ್ನ 2:30 ಗಂಟೆಗೆ ಸುಬ್ರಮಣಿ ಬಿನ್ ಲೇಟ್ ಕೃಷ್ಣಪ್ಪ ರವರು ಸಾರ್ವಜನಿಕರಿಗೆ ಮದ್ಯೆ ಸೇವನೆ  ಮಾಡಲು ಸ್ಥಳವಕಾಶ ಮಾಡಿಕೊಟ್ಟಿದ್ದ  ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಒಂದು ಕಪ್ಪು ಬಣ್ಣದ ಕವರ್ ಇದ್ದು, ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿದ್ದು ಸದರಿ ಕಪ್ಪು ಬಣ್ಣದ ಕವರನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥ್ಯದ HAYWARDS CHEERS  WHISKY ಯ 20 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 20 ಟೆಟ್ರಾ ಪ್ಯಾಕೇಟುಗಳ ಬೆಲೆ 702 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 800 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS  WHISKY ಯ 8 ಖಾಲಿ ಟೆಟ್ರಾ ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ,  ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಯ ಹೆಸರು, ವಿಳಾಸವನ್ನು ಕೇಳಲಾಗಿ ಸುಬ್ರಮಣಿ ಬಿನ್ ಲೇಟ್ ಕೃಷ್ಣಪ್ಪ, 28 ವರ್ಷ, ಗೊಲ್ಲರು, ಅಂಗಡಿ ವ್ಯಾಪಾರ, ವಾಸ: ಕಂಗಾನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಇವುಗಳನ್ನು ತನ್ನ ಅಂಗಡಿಯ ಮುಂದೆ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಮದ್ಯಾಹ್ನ 2:40 ರಿಂದ ಮದ್ಯಾಹ್ನ 3:40 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.44/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:25/06/2020 ರಂದು ಬೆಳಿಗ್ಗೆ 10:40 ಗಂಟೆ ಸಮಯಲ್ಲಿ ಪಿ.ಎಸ್.ಐ, ಬಿ.ಕೆ ಪಾಟೀಲ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:25/06/2020 ರಂದು ಬೆಳಿಗ್ಗೆ 9:00 ಗಂಟೆ ಸಮಯದಲ್ಲಿ ನಾನು ಸಿಬ್ಬಂದಿಯಾದ ಪಿಸಿ-183 ಶಿವಲಿಂಗ, ಪಿಸಿ-269 ನಾಗಪ್ಪ, ಪಿಸಿ-314 ಜವರಪ್ಪ. ಪಿಸಿ-413 ಗುರಿಕಾರ ರವರೊಡನೆ ಸರ್ಕಾರಿ ಜೀಪು ಸಂಖ್ಯೆ ಕೆಎ-40-ಜಿ-296 ರಲ್ಲಿ ಚಾಲಕನೊಂದಿಗೆ ಮುದ್ದೇನಹಳ್ಳಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಸುಬ್ಬರಾಯನಹಳ್ಳಿ ಗ್ರಾಮದ ಸುರೇಶ ಬಿನ್ ರಾಮಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ತನ್ನ ಮನೆಯ ಮುಂಭಾಗದಲ್ಲಿ ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಗೌಚೇನಹಳ್ಳಿ ಗ್ರಾಮದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಬೆಳಿಗ್ಗೆ 09:25 ಗಂಟೆಗೆ ಸುರೇಶ ಬಿನ್ ರಾಮಪ್ಪ ರವರು  ಸಾರ್ವಜನಿಕರಿಗೆ ಮದ್ಯೆ ಸೇವನೆ  ಮಾಡಲು ಸ್ಥಳವಕಾಶ ಮಾಡಿಕೊಟ್ಟಿದ್ದ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಒಂದು ಕಪ್ಪು ಬಣ್ಣದ ಕವರ್ ಇದ್ದು, ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿದ್ದು ಸದರಿ ಕಪ್ಪು ಬಣ್ಣದ ಕವರನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥ್ಯದ HAYWARDS PUNCH  WHISKY ಯ 20 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 20 ಟೆಟ್ರಾ ಪ್ಯಾಕೇಟುಗಳ ಬೆಲೆ 702 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 800 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS PUNCH  WHISKY ಯ 5 ಖಾಲಿ ಟೆಟ್ರಾ  ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಯ ಹೆಸರು, ವಿಳಾಸವನ್ನು ಕೇಳಲಾಗಿ ಸುರೇಶ ಬಿನ್ ರಾಮಪ್ಪ, 32 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ: ಸುಬ್ಬರಾಯನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಇವುಗಳನ್ನು ತನ್ನ ಮನೆಯ ಮುಂದೆ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಬೆಳಿಗ್ಗೆ 09:30 ರಿಂದ ಬೆಳಿಗ್ಗೆ 10:20 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.