ದಿನಾಂಕ : 25/06/2019ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 149/2019 ಕಲಂ: 323-324-504-506 ರೆ/ವಿ 34 ಐ.ಪಿ.ಸಿ:-

          ದಿ: 24-06-2019 ರಂದು ಪಿರ್ಯಾಧಿದಾರರಾದ ಶ್ರೀಮತಿ ಭವ್ಯ ಕೋಂ ನಾರಾಯಣಸ್ವಾಮಿ, 29 ವರ್ಷ, ಬಲಜಿಗರು, ಗೃಹಿಣಿ, ವಾಸ: ಹೊಸಹುಡ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –   ದಿನಾಂಕ:18.06.2019 ರಂದು  ಬೆಳಿಗ್ಗೆ  ಸುಮಾರು 10-3 ಗಂಟೆ ಸಮಯದಲ್ಲಿ ನಮ್ಮ ಬಾಬತ್ತು  ಸರ್ವೇ ನಂಬರ್ 183/2 ರ ಜಮೀನಿನ ಮುಂಭಾಗ ರಸ್ತೆಯಲ್ಲಿ  ನಿಂತಿದ್ದಾಗ ನಮ್ಮ ಗ್ರಾಮದ  ವಾಸಿಯಾದ ಗಂಗರತ್ನಮ್ಮ ಕೋಂ  ವೆಂಕಟರಾಯಪ್ಪ, ಮತ್ತು ಪೆನಗೊಂಡ ನಾರಾಯಣಸ್ವಾಮಿ ಬಿನ್  ವೆಂಕಟಪ್ಪ, ರವರುಗಳು ರಸ್ತೆಯಲ್ಲಿ ನಿಂತಿದ್ದ ನನ್ನನ್ನು ಮತ್ತು ನನ್ನ ಗಂಡ ನಾರಾಯಣಸ್ವಾಮಿ ರವರನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈಯುತ್ತಾ   ಏಕಾಏಕಿ ನಮ್ಮ ಮೇಲೆ ಗಲಾಟೆಗೆ ಬಂದಿದ್ದು.  ಆಗ ನಾನು  ವಿನಾ ಕಾರಣ ನಮ್ಮ ಮೇಲೆ ಏಕೆ ಗಲಾಟೆಗೆ  ಬರುತ್ತಿದ್ದಿರಾ ಎಂದು ಗಂಗರತ್ನಮ್ಮ ರವರನ್ನು  ಕೇಳಿದ್ದಕ್ಕೆ ನನ್ನ ಸೈಟಿನ ವಿಚಾರಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲವೆಂದು ಹೇಳಿ ಗಂಗರತ್ನಮ್ಮ ರವರು ನನ್ನನ್ನು ಹಿಡಿದುಕೊಂಡು ಕೈಗಳಿಂದ ನನ್ನ ಮೈಮೇಲೆ ಹೊಡೆದು ಮೈಕೈನೋವುಂಟು ಮಾಡಿರುತ್ತಾರೆ. ನಾರಾಯಣಸ್ವಾಮಿ ರವರು ನನ್ನ ಗಂಡನಿಗೆ ಕಲ್ಲಿನಿಂದ ಮೈಮೇಲೆ ಹೊಡೆದು ಮೂಗೇಟು ಉಂಟು ಮಾಡಿರುತ್ತಾರೆ.ಹಾಗೂ ಇನ್ನೊಮ್ಮೆ ನಮ್ಮ ಸೈಟಿನ ವಿಚಾರಕ್ಕೆ ಬಂದರೆ ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಹಾಗೂ ಸದರಿ ಗಲಾಟೆಯಲ್ಲಿ ನನ್ನ  ಕತ್ತಿಲ್ಲಿದ್ದ ಮಾಂಗಲ್ಯ ಸರ ಸಹ ಬಿದ್ದು ಹೋಗಿರುತ್ತದೆ. ಈ ಬಗ್ಗೆ  ಗ್ರಾಮದಲ್ಲಿ  ಹಿರಿಯರು  ನ್ಯಾಯ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು  ಸದರಿಯವರು ಇದುವರೆಗೂ ನ್ಯಾಯಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 150/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿ: 24-06-2019 ರಂದು ಸಂಜೆ 4:00 ಗಂಟೆಯಲ್ಲಿ ಪಿ.ಎಸ್.ಐ ಸಾಹೇಬರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶ -ದಿನಾಂಕ:24.06.2019 ಮದ್ಯಾಹ್ನ 2-00 ಗಂಟೆ ಸಮಯದಲ್ಲಿ  ಠಾಣೆಯಲ್ಲಿ ಬಾಗೇಪಲ್ಲಿ  ತಾಲ್ಲೂಕು ದೇವರಗುಡಿಪಲ್ಲಿ ಗ್ರಾಮದ ವಾಸಿಯಾದ ಶ್ರೀ ರವಿಚಂದ್ರ ಬಿನ್ ಬೈಯಪ್ಪ ರವರ ಬಾಬತ್ತು ಚಿಲ್ಲರೆ ಅಂಗಡಿಯ ಮುಂಭಾಗ ಖಾಲಿಜಾದಲ್ಲಿ ಯಾರೋ ಕೆಲವರು ಕುಳಿತು ಕೊಂಡು  ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವುದಾಗಿ  ಬಂದ ಖಚಿತ ವರ್ತಮಾನದ ಮೇರೆಗೆ  ನಾನು ಮತ್ತು ಸಿಬ್ಬಂದಿಗಳಾದ ಹೆಚ್.ಸಿ-34 ರಾಮಚಂದ್ರಪ್ಪ ರವರು ಹಾಗೂ ಜೀಫ್ ಚಾಲಕ ಎ.ಹೆಚ್.ಸಿ-34 ಅಲ್ತಾಫ್ ಪಾಷಾ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ-ಕೆಎ-40,ಜಿ-537  ವಾಹನದಲ್ಲಿ  ಹೋಗಿ  ಗೂಳೂರು  ವೃತ್ತ ಬಳಿ ಇದ್ದ ಪಂಚರನ್ನು ಕರೆದು ವಿಚಾರವನ್ನು  ತಿಳಿಸಿ  ಮೇಲ್ಕಂಡ ಸ್ಥಳದಲ್ಲಿ ದಾಳಿಮಾಡಲು  ಪಂಚರಾಗಿ ಬಂದು  ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು.  ಅದರಂತೆ ಅದರಂತೆ  ಪಂಚರೊಂದಿಗೆ   ಮೇಲ್ಕಂಡ ಸ್ಥಳಕ್ಕೆ   ಮದ್ಯಾಹ್ನ  2-40 ಗಂಟೆಗೆ ಹೋಗಿ ನೋಡಲಾಗಿ  ಯಾರೋ ಕೆಲವರು  ಕಾನೂನು ಬಾಹಿರವಾಗಿ ಕುಳಿತುಕೊಂಡು  ಮದ್ಯಪಾನ ಮಾಡುತ್ತಿದ್ದವರು  ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ  ಓಡಿ ಹೋದರು.  ನಂತರ  ಪಂಚರ ಸಮಕ್ಷಮ  ನಾವುಗಳು ಪರಿಶೀಲಿಸಲಾಗಿ  90 ಎಂ.ಎಲ್. ನ Haywards Cheers Whisky  ಯ  04 ಖಾಲಿ ಟೆಟ್ರಾ ಪ್ಯಾಕೇಟ್ ಗಳು ಮತ್ತು  2 ಖಾಲಿ ವಾಟರ್ ಬಾಟಲ್ ಮತ್ತು ಮದ್ಯಸೇವನೆ ಮಾಡಿರುವ  5 ಖಾಲಿ ಗ್ಲಾಸ್ ಗಳು  ಮದ್ಯ ತುಂಬಿರುವ 90 ಎಂ.ಎಲ್. ನ Haywards Cheers Whisk 22   ಟೆಟ್ರಾ ಪ್ಯಾಕೇಟ್ ಗಳು ಇದ್ದು, ಒಟ್ಟು 1.980 ಲೀಟರ್ ಮದ್ಯವಿದ್ದು ಸದರಿ ಮದ್ಯದ ಅಂದಾಜು ಮೌಲ್ಯ 770/- ರೂಪಾಯಿಗಳಾಗಿರುತ್ತದೆ. ಸದರಿ ಸ್ಥಳದ ಮಾಲೀಕರಾದ ರವಿಚಂದ್ರ ಬಿನ್ ಬೈಯಪ್ಪ, 35 ವರ್ಷ, ಭೋವಿ ಜನಾಂಗ, ದೇವರಗುಡಿಪಲ್ಲಿ ಗ್ರಾಮ  ಬಾಗೇಪಲ್ಲಿ ತಾಲ್ಲೂಕು  ರವರಿಗೆ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸ್ಥಳಾವಕಾಶ ನೀಡಿರುವುದಕ್ಕೆ  ಯಾವುದಾದರು ಪರವಾನಿಗೆ ಇದೇಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು  ಮೇಲ್ಕಂಡ  ಮಾಲುಗಳನ್ನು   ಪಂಚರ ಸಮಕ್ಷಮ  ಪಂಚನಾಮೆ ಮೂಲಕ   ಅಮಾನತ್ತು ಪಡಿಸಿಕೊಂಡು ಮಾಲು ಮತ್ತು  ಆರೋಪಿಯೊಂದಿಗೆ  ಸಂಜೆ 4-00 ಗಂಟೆಗೆ ಠಾಣೆಗೆ ಹಾಜರಾಗಿ  ಮುಂದಿನ ಕ್ರಮಕ್ಕಾಗಿ  ಠಾಣಾಧಿಕಾರಿಗಳಿಗೆ  ವರಧಿಯನ್ನು  ನೀಡಿರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 151/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿ: 24-06-2019 ರಂದು ಸಂಜೆ 5:30 ಗಂಟೆಯಲ್ಲಿ ಪಿ.ಎಸ್.ಐ ಸಾಹೇಬರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶ ದಿನಾಂಕ:24.06.2019 ಸಂಜೆ 4-10 ಗಂಟೆ ಸಮಯದಲ್ಲಿ  ಠಾಣೆಯಲ್ಲಿ ಬಾಗೇಪಲ್ಲಿ  ತಾಲ್ಲೂಕು ಆದಿಗಾನಹಳ್ಳಿ ಗ್ರಾಮದ ವಾಸಿಯಾದ ವೆಂಕಟರಾಮಪ್ಪ ಬಿನ್  ಲೇಟ್  ಪಾಪಣ್ಣ ಬಾಬತ್ತು ಚಿಲ್ಲರೆ ಅಂಗಡಿಯ ಮುಂಭಾಗ ಖಾಲಿಜಾದಲ್ಲಿ ಯಾರೋ ಕೆಲವರು ಕುಳಿತು ಕೊಂಡು  ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವುದಾಗಿ  ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಗಳಾದ ಹೆಚ್.ಸಿ-34 ರಾಮಚಂದ್ರಪ್ಪ ರವರು ಹಾಗೂ  ಜೀಫ್ ಚಾಲಕ ಎ.ಹೆಚ್.ಸಿ-34 ಅಲ್ತಾಫ್ ಪಾಷಾ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ-ಕೆಎ-40,ಜಿ-537  ವಾಹನದಲ್ಲಿ ಹೋಗಿ ಬಾಗೇಪಲ್ಲಿ  ಬಸ್ ನಿಲ್ದಾಣದ  ಬಳಿ ಇದ್ದ ನಮ್ಮನ್ನು ಕರೆದು ವಿಚಾರವನ್ನು  ತಿಳಿಸಿ  ಮೇಲ್ಕಂಡ ಸ್ಥಳದಲ್ಲಿ ದಾಳಿಮಾಡಲು  ಪಂಚರಾಗಿ ಬಂದು  ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ಅದರಂತೆ  ಪಂಚರು ಮತ್ತು ನಾವುಗಳು  ಸ್ಥಳಕ್ಕೆ  ಸಂಜೆ 4-25  ಗಂಟೆಗೆ ಹೋಗಿ ನೋಡಲಾಗಿ  ಯಾರೋ ಕೆಲವರು  ಕಾನೂನು ಬಾಹಿರವಾಗಿ ಕುಳಿತುಕೊಂಡು  ಮದ್ಯಪಾನ ಮಾಡುತ್ತಿದ್ದವರು  ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ  ಓಡಿ ಹೋದರು.  ನಂತರ  ಪಂಚರಾದ ನಮ್ಮಗಳ ಸಮಕ್ಷಮ  ಪೊಲೀಸರು ಪರಿಶೀಲಿಸಲಾಗಿ  90 ಎಂ.ಎಲ್. ನ Haywards Cheers Whisky  ಯ  06 ಖಾಲಿ ಟೆಟ್ರಾ ಪ್ಯಾಕೇಟ್ ಗಳು ಮತ್ತು  1 ಖಾಲಿ ವಾಟರ್ ಬಾಟಲ್ ಮತ್ತು ಮದ್ಯಸೇವನೆ ಮಾಡಿರುವ  4 ಖಾಲಿ ಗ್ಲಾಸ್ ಗಳು  ಮದ್ಯ ತುಂಬಿರುವ 90 ಎಂ.ಎಲ್. ನ Haywards Cheers Whisk 15 ಟೆಟ್ರಾ ಪ್ಯಾಕೇಟ್ ಗಳು ಇದ್ದು, ಒಟ್ಟು 1.350 ಲೀಟರ್ ಮದ್ಯವಿದ್ದು ಸದರಿ ಮದ್ಯದ ಅಂದಾಜು ಮೌಲ್ಯ 525/- ರೂಪಾಯಿಗಳಾಗಿರುತ್ತದೆ. ಸದರಿ ಸ್ಥಳದ ಮಾಲೀಕರಾದ ವೆಂಕಟರಾಮಪ್ಪ ಬಿನ್ ಲೇಟ್ ಪಾಪಣ್ಣ, 70 ವರ್ಷ, ಭೋವಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಆದಿಗಾನಹಳ್ಳಿ ಗ್ರಾಮ  ಬಾಗೇಪಲ್ಲಿ ತಾಲ್ಲೂಕು  ರವರಿಗೆ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸ್ಥಳಾವಕಾಶ ನೀಡಿರುವುದಕ್ಕೆ ಯಾವುದಾದರು ಪರವಾನಿಗೆ ಇದೇಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇದೇಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು  ಮೇಲ್ಕಂಡ  ಮಾಲುಗಳನ್ನು   ಪಂಚರ ಸಮಕ್ಷಮ  ಪಂಚನಾಮೆ ಮೂಲಕ   ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಸಂಜೆ 5-30 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ  ಠಾಣಾಧಿಕಾರಿಗಳಿಗೆ  ವರಧಿಯನ್ನು  ನೀಡಿರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 152/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿ: 25-06-2019 ರಂದು ಬೆಳಗ್ಗೆ 11:00 ಗಂಟೆಗೆ ಪಿ.ಎಸ್.ಐ ಸಾಹೇಬರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶ –   ಈ ದಿನ  ದಿನಾಂಕ:25.06.2019 ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ  ಠಾಣೆಯಲ್ಲಿ ಬಾಗೇಪಲ್ಲಿ  ತಾಲ್ಲೂಕು ಅಭಕವಾರಿಪಲ್ಲಿ ಗ್ರಾಮದ ವಾಸಿಯಾದ ರಾಮಪ್ಪ ಬಿನ್ ಲೇಟ್ ನಂಜಪ್ಪ ರವರ ಬಾಬತ್ತು ಚಿಲ್ಲರೆ ಅಂಗಡಿಯ ಮುಂಭಾಗ ಖಾಲಿಜಾದಲ್ಲಿ ಯಾರೋ ಕೆಲವರು ಕುಳಿತು ಕೊಂಡು  ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಗಳಾದ ಹೆಚ್.ಸಿ-14 ಮುರಳಿ ರವರು ಹಾಗೂ  ಜೀಫ್ ಚಾಲಕ ಎ.ಹೆಚ್.ಸಿ-34 ಅಲ್ತಾಫ್ ಪಾಷಾ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ-ಕೆಎ-40,ಜಿ-537  ವಾಹನದಲ್ಲಿ ಹೋಗಿ ಬಾಗೇಪಲ್ಲಿ  ತಾಲ್ಲೂಕು ಕಛೇರಿಯ ಬಳಿ ಇದ್ದ ಪಂಚನ್ನು ಕರೆದು ವಿಚಾರವನ್ನು  ತಿಳಿಸಿ  ಮೇಲ್ಕಂಡ ಸ್ಥಳದಲ್ಲಿ ದಾಳಿಮಾಡಲು  ಪಂಚರಾಗಿ ಬಂದು  ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ಅದರಂತೆ  ಪಂಚರೊಂದಿಗೆ ಸ್ಥಳಕ್ಕೆ  ಬೆಳಿಗ್ಗೆ 9-50  ಗಂಟೆಗೆ ಹೋಗಿ ನೋಡಲಾಗಿ  ಯಾರೋ ಕೆಲವರು  ಕಾನೂನು ಬಾಹಿರವಾಗಿ ಕುಳಿತುಕೊಂಡು  ಮದ್ಯಪಾನ ಮಾಡುತ್ತಿದ್ದವರು  ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ  ಓಡಿ ಹೋದರು.  ನಂತರ  ಪಂಚರ  ಸಮಕ್ಷಮ  ನಾವು ಸ್ಥಳದಲ್ಲಿ ಪರಿಶೀಲಿಸಲಾಗಿ  90 ಎಂ.ಎಲ್. ನ Haywards Cheers Whisky  ಯ  05 ಖಾಲಿ ಟೆಟ್ರಾ ಪ್ಯಾಕೇಟ್ ಗಳು ಮತ್ತು 2 ಖಾಲಿ ವಾಟರ್ ಬಾಟಲ್ ಮತ್ತು ಮದ್ಯಸೇವನೆ ಮಾಡಿರುವ  6 ಖಾಲಿ ಗ್ಲಾಸ್ ಗಳು  ಮದ್ಯ ತುಂಬಿರುವ 90 ಎಂ.ಎಲ್. ನ Haywards Cheers Whisk 12 ಟೆಟ್ರಾ ಪ್ಯಾಕೇಟ್ ಗಳು ಇದ್ದು, ಒಟ್ಟು 1.080 ಲೀಟರ್ ಮದ್ಯವಿದ್ದು ಸದರಿ ಮದ್ಯದ ಅಂದಾಜು ಮೌಲ್ಯ 420/- ರೂಪಾಯಿಗಳಾಗಿರುತ್ತದೆ. ಸದರಿ ಸ್ಥಳದ ಮಾಲೀಕರಾದ ರಾಮಪ್ಪ ಬಿನ್  ಲೇಟ್ ನಂಜಪ್ಪ,50 ವರ್ಷ, ಭೋವಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಅಭಕವಾರಿಪಲ್ಲಿ ಗ್ರಾಮ  ಬಾಗೇಪಲ್ಲಿ ತಾಲ್ಲೂಕು ರವರಿಗೆ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸ್ಥಳಾವಕಾಶ ನೀಡಿರುವುದಕ್ಕೆ  ಯಾವುದಾದರು ಪರವಾನಿಗೆ ಇದೇಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು  ಮೇಲ್ಕಂಡ  ಮಾಲುಗಳನ್ನು   ಪಂಚರ ಸಮಕ್ಷಮ  ಪಂಚನಾಮೆ ಮೂಲಕ   ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಬೆಳಿಗ್ಗೆ 11-00 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ  ಠಾಣಾಧಿಕಾರಿಗಳಿಗೆ  ವರಧಿಯನ್ನು  ನೀಡಿರುತ್ತೇನೆ, ಎಂದು ಇದ್ದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 222/2019 ಕಲಂ: 323-504-506 ರೆ/ವಿ 34 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act:-

          ದಿನಾಂಕ 24-06-2019 ರಂದು ಸಂಜೆ 6-00 ಗಂಟೆಗೆ ಶಂಕರಪ್ಪ ಬಿನ್ ನಾಗರಾಜಪ್ಪ, 39 ವರ್ಷ, ಕೊರಚರು,  ಕೂಲಿ ಕೆಲಸ, ಮುನಗನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಮಗೆ ತಮ್ಮ ಗ್ರಾಮದಲ್ಲಿ ತಮ್ಮ ಹಿರಿಯರ ಪಿತ್ರಾರ್ಜಿತ ಆಸ್ತಿ ಇದ್ದು  ಸದರಿ ಜಾಗದಲ್ಲಿ ನಾವೇ  ಸ್ವಾದೀನದಲ್ಲಿರುತ್ತೇವೆ. ಸದರಿ ಜಾಗದಲ್ಲಿ ತಮ್ಮ ಹಳೆ ಮನೆ ಮತ್ತು ವಠಾರ  ಇದ್ದು ಅದು ಶಿಥಲಗೊಂಡಿದ್ದು ಸದರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುವ ಉದ್ದೇಶದಿಂದ  ತಮ್ಮ ಗ್ರಾಮದ  ವಕ್ಕಲಿಗ ಜನಾಂಗದವರಾದ ರೆಡ್ಡಪ್ಪ ಬಿನ್ ಲೇಟ್ ನಲ್ಲಪ್ಪರೆಡ್ಡಿ, ಶ್ರೀಕಾಂತ್ ರೆಡ್ಡಿ ಬಿನ್ ರೆಡ್ಡಪ್ಪ, ಕೃಷ್ಣಾರೆಡ್ಡಿ ಬಿನ್ ಲೇಟ್ ಸಾಥಪ್ಪ ರವರು ದಿನಾಂಕ 19-06-2019 ರಂದು ಬೆಳಗ್ಗೆ ಸುಮಾರು 7 ರಿಂದ 8 ಗಂಟೆ ಸಮಯದಲ್ಲಿ ಚನಿಕೆ, ಗರಾಡೆ ಮತ್ತು ಇತರೆ ಮಾರುಕಾಯಿದೆಗಳಿಂದ ಬಂದು ಏಕಾಏಕಿ ಕಾಂಪೌಂಡ್ ನಿರ್ಮಿಸಲು ಪ್ರಯತ್ನಿಸಿದ್ದು ಆಗ ತಾನು ಕೇಳಿದ್ದಕ್ಕೆ ಮೇಲ್ಕಂಡವರು ತನ್ನ ಕತ್ತು ಪಟ್ಟಿ ಹಿಡಿದುಕೊಂಡು ಹೊಡೆದು, ತನ್ನ ತಾಯಿ ನಾರೆಮ್ಮ ರವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ ನೋವುಂಟು ಮಾಡಿ ತಮ್ಮನ್ನು ಕಾಲುಗಳಿಂದ ಒದ್ದು ಕೊಲೆ ಬೆದರಿಕೆ ಹಾಕಿ ತನ್ನನ್ನು ಕುರಿತು ಕೊರಚಿ ನನ್ನ ಮಗನೇ ಎಂದು ಹೀನಾಮಾನ ಜಾತಿ ಬಗ್ಗೆ ಬೈದು ಇನ್ನೊಂದು ಸಾರಿ ಮೇಲ್ಕಂಡ ಜಾಗದ ಬಗ್ಗೆ ತಂಟೆಗೆ ಬಂದರೆ ಚೆನ್ನಾಗಿರುವುದಿಲ್ಲ  ಎಂದು ಬೆದರಿಕೆ ಹಾಕಿರುತ್ತಾರೆ. ಸದರಿ ಗಲಾಟೆ ಬಗ್ಗೆ ತಮ್ಮ ಗ್ರಾಮದ ಹಿರಿಯರು ರಾಜಿ ಪಂಚಾಯ್ತಿ ಮಾಡೋಣವೆಂದು ತಿಳಿಸಿದ್ದು ಇದುವರೆಗೂ ನ್ಯಾಯ ಪಂಚಾಯ್ತಿಗೆ ಬಾರದೇ ಇದ್ದರಿಂದ  ಈ ದಿನ ತಡವಾಗಿ ದೂರನ್ನು ನೀಡುತ್ತಿದ್ದು ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು  ಕೋರಿದೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ. ಮೊ.ಸಂ: 145/2019 ಕಲಂ: 78(ಎ)(4) ಕೆ.ಪಿ.ಆಕ್ಟ್:-

          ದಿನಾಂಕ:24/06/2019 ರಂದು ಸಂಜೆ 3-45 ಗಂಟೆಗೆ ಪಿ.ಐ ಸಾಹೇಬರು ಆರೋಪಿ, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ಮಧ್ಯಾಹ್ನ 02-45 ಗಂಟೆಯ ಸಮಯದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಸಿಪಿಸಿ-524 ಕೃಷ್ಣಪ್ಪ ಮತ್ತು ರವೀಂದ್ರ ಸಿಪಿಸಿ-539 ರವರೊಂದಿಗೆ ಚಿಂತಾಮಣಿ ನಗರದ  ಕೆ.ಆರ್.ಬಡಾವಣೆಯಲ್ಲಿ ಸರ್ಕಾರಿ ಜೀಪಿನ ಸಂಖ್ಯೆ ಕೆಎ-40, ಜಿ-356 ಜೀಪಿನಲ್ಲಿ ಗಸ್ತಿನಲ್ಲಿದ್ದಾಗ  ಚಿಂತಾಮಣಿ ನಗರದ ಗಜಾನನ ವೃತ್ತದ ಬಳಿ ಇರುವ ಇಂಪೀರಿಯಲ್ ಹೋಟೆಲ್ ಮುಂಭಾಗದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಕಾನೂನು ಬಾಹಿರವಾಗಿ ವಿಶ್ವಕಪ್ ಐಸಿಸಿ  ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು ಅದರಂತೆ ನಾನು ಮತ್ತು ಸಿಬ್ಬಂದಿಯವರೊಧಿಗೆ ಮಾರುತಿ ಸರ್ಕಲ್ ನಲ್ಲಿದ್ದ ಪಂಚರನ್ನು ಕರೆದುಕೊಂಡು ಜೀಪಿನ್ಲಲಿ ಮಾರುತಿ ಸರ್ಕಲ್ ಮೂಲಕ ಗಜಾನನ ವೃತ್ತದ ಮಾರ್ಗಾವಾಗಿ ಇಂಪೀರಿಯಲ್ ಹೋಟೆಲ್ ನ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಇಂಪೀರಿಯಲ್ ಹೋಟೆಲ್ ನ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಹೋಟೆಲ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ ಆಸಾಮಿಯು ಹೋಟೆಲ್ ನಲ್ಲಿದ್ದ ಟಿವಿ ನೋಡಿಕೊಂಡು ಅಲ್ಲಿದ್ದ ಸಾರ್ವಜನಿಕರಿಗೆ ಪಾಕಿಸ್ಥಾನ ಗೆಲ್ಲುತ್ತೆ, 200 ರೂ ಎಂದು ಬಾಗ್ಲದೇಶ ಸೋಲುತ್ತೆ 300 ರೂ ಎಂದು ಕೂಗುತ್ತಾ ಈ ದಿನ ನಡೆಯುತ್ತಿರುವ ಪಾಕಿಸ್ಥಾನ ಮತ್ತು ಬಾಗ್ಲದೇಶ ತಂಡಗಳ ನಡುವೆ ವಿಶ್ವಕಪ್ ಐಸಿಸಿ ಕ್ರಿಕೆಟ್ ಪಂದ್ಯವನ್ನು ನೋಡಿಕೊಂಡು ಎರಡು ಚೀಟಿಗಳಲ್ಲಿ ಬೆಟ್ಟಿಂಗ್ ಮಾಡುವ ಸಲುವಾಗಿ ಬರೆದು ಬೆಟ್ಟಿಂಗ್ ಆಡುತ್ತಿದ್ದು,ಪಂಚರೊಂದಿಗೆ ದಾಳಿ ಮಾಡಿ ಸದರಿ ಆಸಾಮಿಯನ್ನು ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ತನ್ನ ಹೆಸರು ಅಂಬರೀಶ ಬಿನ್ ಲೇಟ್ ವೆಂಕಟೇಶಪ್ಪ, 28 ವರ್ಷ, ಕುರುಬರು, ಗಾರೆ ಕೆಲಸ, ವಾಸ: ಶಾಂತಿ ನಗರ, ಚಿಂತಾಮಣಿ ನಗರ ಎಂದು ತಿಳಿಸಿರುತ್ತಾನೆ. ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ಬೆಟ್ಟಿಂಗ್ ನಲ್ಲಿ ತೊಡಗಿಸಿದ್ದ 1700/- ರೂ ಹಣ, ಬೆಟ್ಟಿಂಗ್ ಆಡಲು ಬರೆದಿರುವ ಎರಡು ಚೀಟಿ ಮತ್ತು ಒಂದು ಪೆನ್ ನ್ನು ಮುಂದಿನ ಕ್ರಮದ ಬಗ್ಗೆ ಮಹಜರ್ ಮುಖಾಂತರ ಅಮಾನತ್ತುಪಡಿಸಿಕೊಂಡು ಆರೋಪಿ,ಮಾಲು ಮತ್ತು ಪಂಚನಾಮೆಯೊಂದಿಗೆ ಸಂಜೆ 3-40 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ನೀಡಿದ  ವರದಿಯ ಮೇರೆಗೆ ಠಾಣಾ ಮೊ.ಸಂಖ್ಯೆ: 145/2019 ಕಲಂ: 78(3)(vi) ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 84/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ಈ ದಿನ ದಿನಾಂಕ 24/06/2019 ರಂದು ಸಂಜೆ  4-00 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕನಹಳ್ಳಿ ಗ್ರಾಮದ  ವೆಂಕಟೇಶ್ ಬಿನ್ ನರಸಿಂಹಪ್ಪ ರವರು ಅವರ ಪೆಟ್ಟಿಗೆ ಅಂಗಡಿಯ ಬಳಿ ಅಕ್ರಮವಾಗಿ ಮದ್ಯಮಾರಾಟಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ನಮ್ಮ ಠಾಣೆಯ ಪಿ..ಸಿ 446 ಕರಿಬಾಬು ಮತ್ತು ಪಂಚಾಯ್ತಿದಾರರೊಂದಿಗೆ ದಾಳಿಮಾಡಿ ಸ್ಥಳದಲ್ಲಿ ಇದ್ದ 90 ಎಂ.ಎಲ್ ನ 9 ಹೈವಾರ್ಡ್ಸ್ ಚೀರ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳನ್ನು, ಓಪನ್ ಮಾಡಿರುವ 1 ಹೈವಾರ್ಡ್ಸ್ ಚೀರ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳನ್ನು  ಹಾಗೂ 2 ಪ್ಲಾಸ್ಟಿಕ್ ಲೋಟಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು  ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ನೀಡಿರುವ ಮೆಮೋ ಆಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 233/2019 ಕಲಂ: 87 ಕೆ.ಪಿ. ಆಕ್ಟ್:-

          ದಿನಾಂಕ 24/06/2019 ರಂದು ಮಧ್ಯಾಹ್ನ 12-00 ಗಂಟೆಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಅವಿನಾಶ್  ವಿ. ಪಿ.ಎಸ್.ಐ . ಆದ ನಾನು ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ;23/06/2019 ರಂದು ಸಂಜೆ ಸುಮಾರು 4-00 ಗಂಟೆಯಲ್ಲಿ  ಗೌರೀಬಿದನೂರು ತಾಲ್ಲೂಕು ಕೆಂಕರೆ ಗ್ರಾಮದ ಹೊರವಲಯದಲ್ಲಿರುವ ಕೆರೆ ಬಳಿ ಇರುವ ಹುಣಸೆ ಮರದ ಕೆಳಗೆ ಯಾರೋ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ  ಪೊಲೀಸ್ ಸಿಬ್ಬಂದಿಯವರನ್ನು ಕರೆದುಕೊಂಡು ಕೆ.ಎ.40.ಜಿ.281 ಸರ್ಕಾರಿ ಜೀಪಿನಲ್ಲಿ ಕೆಂಕರೆ ಗ್ರಾಮಕ್ಕೆ ಹೋಗಿ,  ಅಲ್ಲಿ ಪಂಚರನ್ನು ಕರೆದುಕೊಂಡು,  ಮಾಹಿತಿ ಇದ್ದ ಸ್ಥಳವಾದ ಕೆಂಕರೆ ಹೊರವಲಯದಲ್ಲಿರುವ , ಕೆರೆ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ,  ಹುಣಸೆ ಮರದ ಕೆಳಗೆ  9 ಜನರು   ಇದ್ದು,  ಇವರಲ್ಲಿ  ಕೆಲವರು ಅಂದರ್ ಗೆ  ನೂರು  ರುಪಾಯಿ   ಬಾಹರ್ ಗೆ ನೂರು  ರುಪಾಯಿ   ಎಂದು ಹಣವನ್ನು ಜೂಜಾಟಕ್ಕೆ ಕಟ್ಟಿ, ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿವುದನ್ನು ಖಚಿತ ಪಡಿಸಿಕೊಂಡು, ನಾವುಗಳು ಅವರನ್ನು ಸುತ್ತುವರಿದು ಹಿಡಿದುಕೊಂಡಿದ್ದು,  ಅವರ ಹೆಸರು ವಿಳಾಸಗಳನ್ನು ಕೇಳಲಾಗಿ, 1) ನಂಜುಂಡಪ್ಪ ಬಿನ್ ಅಪ್ಪಣ್ಣ, 65 ವರ್ಷ, ವಕ್ಕಲಿಗರು,  ಜಿರಾಯ್ತಿ, ವಾಸ ಕೆಂಕರೆ ಗ್ರಾಮ, ಗೌರೀಬಿದನೂರು ತಾಲ್ಲೂಕು  2) ಸಂಜೀವರೆಡ್ಡಿ ಬಿನ್ ನಾರಾಯಣಪ್ಪ, 54 ವರ್ಷ, ವಕ್ಕಲಿಗರು, ಜಿರಾಯ್ತಿ,  ಕೆಂಕರೆ ಗ್ರಾಮ, ಗೌರೀಬಿದನೂರು ತಾಲ್ಲೂಕು  3) ನರಸರೆಡ್ಡಿ ಬಿನ್ ನಾರಾಯಣಪ್ಪ , 44 ವರ್ಷ, ವಕ್ಕಲಿಗರು, ಜಿರಾಯ್ತಿ,  ಕೆಂಕರೆ ಗ್ರಾಮ, ಗೌರೀಬಿದನೂರು ತಾಲ್ಲೂಕು  4) ನಂಜುಂಡಪ್ಪ ಬಿನ್ ಗೋವಿಂದಪ್ಪ,  50 ವರ್ಷ, ವಕ್ಕಲಿಗರು, ಕೂಲಿ ಕೆಲಸ,   ಕೆಂಕರೆ ಗ್ರಾಮ, ಗೌರೀಬಿದನೂರು ತಾಲ್ಲೂಕು  5) ಮಲ್ಲಿಕಾರ್ಜುನ ಬಿನ್ ಗಂಗಾಧರಪ್ಪ , 38 ವರ್ಷ, ಲಿಂಗಾಯಿತರು,  ಜಿರಾಯ್ತಿ, ಕೆಂಕರೆ ಗ್ರಾಮ, ಗೌರೀಬಿದನೂರು ತಾಲ್ಲೂಕು  6) ಅಶ್ವತ್ಥಪ್ಪ ಬಿನ್ ನರಸಪ್ಪ, 42 ವರ್ಷ, ಜಿರಾಯ್ತಿ,  ವಕ್ಕಲಿಗರು, ಜಿರಾಯ್ತಿ,  ಕೆಂಕರೆ ಗ್ರಾಮ, ಗೌರೀಬಿದನೂರು ತಾಲ್ಲೂಕು    7) ವೆಂಕಟೇಶ್ ಬಿನ್ ವೆಂಕಟಶಾಮಪ್ಪ, 40 ವರ್ಷ,  ಜಿರಾಯ್ತಿ,  ಕುರುಬ ಜನಾಂಗ,ಚಿನ್ನೇನಹಳ್ಳಿ ಗ್ರಾಮ,  ಗೌರಿಬಿದನೂರು ತಾಲ್ಲೂಕು. 8) ಸುಬ್ರಮಣ್ಯ ಬಿನ್ ನಂಜುಂಡಪ್ಪ, 36 ವರ್ಷ,  ಕುರುಬ ಜನಾಂಗ,  ಗಾರೆ ಕೆಲಸ, ಕೆಂಕರೆ ಗ್ರಾಮ, ಗೌರೀಬಿದನೂರು ತಾಲ್ಲೂಕು    9) ಅಶ್ವತ್ಥರೆಡ್ಡಿ ಬಿನ್ ನಂಜಪ್ಪ, 45 ವರ್ಷ, ಜಿರಾಯ್ತಿ,  ವಕ್ಕಲಿಗರು, ಜಿರಾಯ್ತಿ,  ಕೆಂಕರೆ ಗ್ರಾಮ, ಗೌರೀಬಿದನೂರು ತಾಲ್ಲೂಕು ಎಂದು  ತಿಳಿಸಿರುತ್ತಾರೆ. ಸ್ಥಳದಲ್ಲಿ ಪರಿಶೀಲಿಸಲಾಗಿ, ಜೂಜಾಟವಾಡಲು ಬಳಸುತ್ತಿದ್ದ  ಇಸ್ಟೀಟ್ ಎಲೆಗಳು, ಮತ್ತು  ಜೂಜಾಟಕ್ಕೆ ಕಟ್ಟಿದ್ದ ನಗದು ಹಣ ಚೆಲ್ಲಾಪಿಲ್ಲಿಯಾಗಿ  ಬಿದ್ದಿದ್ದು, ಹಣವನ್ನು ಎಣಿಸಲಾಗಿ 2250/- ರೂ ನಗದು ಹಣ ಹಾಗು 52 ಇಸ್ಪೀಟ್ ಎಲೆಗಳು ಇರುತ್ತವೆ. ಇವುಗಳನ್ನು  ಪಂಚರ ಸಮಕ್ಷಮದಲ್ಲಿ ಸಂಜೆ 4-30 ರಿಂದ 5-30 ಗಂಟೆಯವರೆಗೆ  ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ತೆಗೆದುಕೊಂಡಿರುತ್ತೆ.  ಸಂಜೆ 6-15 ಗಂಟೆಗೆ ಠಾಣೆಗೆ ವಾಪಸ್ಸು ಬಂದು, ಮಾಲನ್ನು ನಗದು ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ಸೂಚನೆಯ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 234/2019 ಕಲಂ: 78(1),78(3) ಕೆ.ಪಿ. ಆಕ್ಟ್:-

          ದಿನಾಂಕ :24/06/2019 ರಂದು   ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ ಎಸ್ ಐ ರವರಾದ ವಿ.ಅವಿನಾಶ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರೇನೆಂದರೆ  ಈದಿನ ದಿನಾಂಕ :24/06/2019 ರಂದು   ಮದ್ಯಾಹ್ನ ಸುಮಾರು 3.00 ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ವಾಟದ ಹೊಸಹಳ್ಳಿ ಕ್ರಾಸ್  ಬಳಿ ಇರುವ  ಅಂಗಡಿಗಳ ಮುಂಭಾಗ ಗುಡಿಬಂಡೆ ಕಡೆಗೆ ಸಂಚಾರ ಮಾಡುವ  ಸಾರ್ವಜನಿಕ ರಸ್ತೆಯ ಬಳಿ ಯಾರೋ ಒಬ್ಬ ಆಸಾಮಿಯು ಮಟಕಾ ಅಂಕಿಗಳ ಬರೆದು ಜುಜಾಟವಾಡುತ್ತಿರುವುದಾಗಿ  ನನಗೆ ಬಂದ  ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಸಿಬ್ಬಂದಿ ಮತ್ತು  ಪಂಚರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆ ಎ 40-ಜಿ-281 ರಲ್ಲಿ ಠಾಣೆಯಿಂದ ಹೊರಟು ವಾಟದ ಹೊಸಹಳ್ಳಿ ಕ್ರಾಸ್ ಬಳಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಗುಡಿಬಂಡೆ ಕಡೆಗೆ ಸಂಚಾರ ಮಾಡುವ ರಸ್ತೆಯ ಬಳಿ ಇರುವ ಅಂಗಡಿಗಳ ಮರೆಯಲ್ಲಿ ನಿಂತು ನೋಡಿದಾಗ ಟಾರು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಒಬ್ಬ ಆಸಾಮಿ ಬನ್ನಿ ಬನ್ನಿ  ಒಂದು ರೂಗೆ 60 ರೂ ಕೊಡುತ್ತೇನೆ.ಎಂತ ಕೂಗುತ್ತಾ  ಮಟ್ಕಾ ಅಂಕಿಗಳನ್ನು ಬರೆಸಿಕೊಂಡು ಜೂಜಾಡುತ್ತಿದ್ದವನನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಆತನನ್ನು  ಸುತ್ತುವರೆದು ಹಿಡಿದುಕೊಂಡು  ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಅಶ್ವತ್ಥಪ್ಪ @ ಕೋಡಿ  ಬಿನ್ ಲೇಟ್ ಪೆದ್ದನ್ನ  40 ವರ್ಷ ನಾಯಕ ಜನಾಂಗ ವಾಸ:ವಾಟದ ಹೊಸಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲುಕು ಅಂತ ತಿಳಿಸಿದ್ದು, ಆತನ ಬಳಿ ಇದ್ದ ಒಂದು ಮಟಕಾ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು ,ಹಾಗು ಮಟ್ಕಾ ಜುಜಾಟವಾಡಿ ಸಂಗ್ರಹಿಸಿದ್ದ  2460/ ರೂ ನಗದು ಹಣವನ್ನು ಮದ್ಯಾಹ್ನ 3.30 ಗಂಟೆಯಿಂದ 4.00 ಗಂಟೆಯವರೆವಿಗು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಠಾಣಾಧಿಕಾರಿಗಳ ವಶಕ್ಕೆ ನೀಡಿದ್ದು,ಮುಂದಿನ ರೀತ್ಯಾ ಕ್ರಮ ಜರುಗಿಸಿ ವರದಿ ಮಾಡಲು ಸೂಚಿಸಿದ ಮೇರೆಗೆ ಠಾಣಾ ಎನ್.ಸಿ.ಆರ್ 408/2019 ರಂತೆ ದಾಖಲಿಸಿರುತ್ತೆ ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 235/2019 ಕಲಂ: 78(1),78(3) ಕೆ.ಪಿ. ಆಕ್ಟ್:-

          ದಿನಾಂಕ :24/06/2019 ರಂದು   ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ ಎಸ್ ಐ ರವರಾದ ವಿ.ಅವಿನಾಶ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರೇನೆಂದರೆ,  ಈದಿನ ದಿನಾಂಕ :24/06/2019 ರಂದು  ಸಂಜೆ ಸುಮಾರು  4.00  ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ವಾಟದ ಹೊಸಹಳ್ಳಿಯ ಬಸ್ಸು ನಿಲ್ದಾಣದ ಬಳಿ ಇರುವ ರಸ್ತೆಯಲ್ಲಿ  ಯಾರೋ ಒಬ್ಬ ಆಸಾಮಿಯು  ಮಟಕಾ ಅಂಕಿಗಳ ಬರೆದು ಜುಜಾಟವಾಡುತ್ತಿರುವುದಾಗಿ  ನನಗೆ ಬಂದ  ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಸಿಬ್ಬಂದಿ ಮತ್ತು  ಪಂಚರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆ ಎ 40-ಜಿ-281 ರಲ್ಲಿ ವಾಟದ ಹೊಸಹಳ್ಳಿ ಬಸ್ಸು ನಿಲ್ದಾಣದ ಬಳಿಗೆ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಬಸ್ಸು ನಿಲ್ದಾಣದ ಬಳಿ ಇರುವ  ಅಂಗಡಿಗಳ ಮರೆಯಲ್ಲಿ  ನಿಂತು ನೋಡಿದಾಗ  ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಒಬ್ಬ ಆಸಾಮಿ ಬನ್ನಿ ಬನ್ನಿ  ಒಂದು ರೂಗೆ 70 ರೂ ಕೊಡುತ್ತೇನೆ.ಎಂತ ಕೂಗುತ್ತಾ  ಮಟ್ಕಾ ಅಂಕಿಗಳನ್ನು ಬರೆಸಿಕೊಂಡು ಜೂಜಾಡುತ್ತಿದ್ದವನನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಆತನನ್ನು  ಸುತ್ತುವರೆದು ಹಿಡಿದುಕೊಂಡು  ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು  ಅಶ್ವತ್ಥಪ್ಪ  ಬಿನ್ ಲೇಟ್ ಯರ್ರಪ್ಪ 56 ವರ್ಷ ನಾಯಕ ಜನಾಂಗ ವಾಸ;ತೊಕಲಹಳ್ಳಿ ಗ್ರಾಮ ನಗರಗೆರೆ ಹೋಬಳಿ ಗೌರಿಬಿದನೂರು ತಾಲ್ಲುಕು ಅಂತ ತಿಳಿಸಿದ್ದು, ಆತನ ಬಳಿ ಇದ್ದ ಒಂದು ಮಟಕಾ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು ,ಹಾಗು ಮಟ್ಕಾ ಜುಜಾಟವಾಡಿ ಸಂಗ್ರಹಿಸಿದ್ದ  2540/ ರೂ ನಗದು ಹಣವನ್ನು ಸಂಜೆ 4.15 ಗಂಟೆಯಿಂದ 4.45  ಗಂಟೆಯವರೆವಿಗು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಠಾಣಾಧಿಕಾರಿಗಳ ವಶಕ್ಕೆ ನೀಡಿದ್ದು,ಮುಂದಿನ ರೀತ್ಯಾ ಕ್ರಮ ಜರುಗಿಸಿ ವರದಿ ಮಾಡಲು ಸೂಚಿಸಿದ ಮೇರೆಗೆ ಠಾಣಾ ಎನ್.ಸಿ.ಆರ್ 409/2019 ರಂತೆ ದಾಖಲಿಸಿರುತ್ತೆ ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 236/2019 ಕಲಂ: 78(1),78(3) ಕೆ.ಪಿ. ಆಕ್ಟ್:-

          ದಿನಾಂಕ :24/06/2019 ರಂದು   ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ ಎಸ್ ಐ ರವರಾದ ವಿ.ಅವಿನಾಶ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರೇನೆಂದರೆ,, ಈದಿನ ದಿನಾಂಕ :24/06/2019 ರಂದು  ಸಂಜೆ ಸುಮಾರು  4.30  ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು ಮಲ್ಲೇನಹಳ್ಳಿ ಗ್ರಾಮದ ಬಸ್ಸು ನಿಲ್ದಾಣದ ಬಳಿ ಇರುವ ಸಾರ್ವಜನಿಕ ರಸ್ತೆಯಲ್ಲಿ  ಯಾರೋ ಒಬ್ಬ ಆಸಾಮಿಯು  ಮಟಕಾ ಅಂಕಿಗಳ ಬರೆದು ಜುಜಾಟವಾಡುತ್ತಿರುವುದಾಗಿ  ನನಗೆ ಬಂದ  ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಸಿಬ್ಬಂದಿ ಮತ್ತು ಪಂಚರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆ ಎ 40-ಜಿ-281 ರಲ್ಲಿ ಮಲ್ಲೇನಹಳ್ಳಿ ಗ್ರಾಮಕ್ಕೆ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಬಸ್ಸು  ನಿಲ್ದಾಣದ ಬಳಿಗೆ ಹೋಗಿ  ಮರೆಯಲ್ಲಿ  ನಿಂತು ನೋಡಿದಾಗ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಒಬ್ಬ ಆಸಾಮಿ ಬನ್ನಿ ಬನ್ನಿ  ಒಂದು ರೂಗೆ 60 ರೂ ಕೊಡುತ್ತೇನೆ.ಎಂತ ಕೂಗುತ್ತಾ  ಮಟ್ಕಾ ಅಂಕಿಗಳನ್ನು ಬರೆಸಿಕೊಂಡು ಜೂಜಾಡುತ್ತಿದ್ದವನನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಆತನನ್ನು  ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು  ಅಶ್ವತ್ಥಪ್ಪ  ಬಿನ್  ವೆಂಕಟರೆಡ್ಡಿ  44 ವರ್ಷ ಬಲಜಿಗ ಜನಾಂಗ ವಾಸ: ಮಲ್ಲೇನಹಳ್ಳಿ ಗ್ರಾಮ ನಗರಗೆರೆ ಹೋಬಳಿ  ಗೌರಿಬಿದನೂರು ತಾಲ್ಲುಕು ಅಂತ ತಿಳಿಸಿದ್ದು, ಆತನ ಬಳಿ ಇದ್ದ ಒಂದು ಮಟಕಾ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು ,ಹಾಗು ಮಟ್ಕಾ ಜುಜಾಟವಾಡಿ ಸಂಗ್ರಹಿಸಿದ್ದ 3560/ ರೂ ನಗದು ಹಣವನ್ನು ಸಂಜೆ 5.15 ಗಂಟೆಯಿಂದ 5.45 ಗಂಟೆಯವರೆವಿಗು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಠಾಣಾಧಿಕಾರಿಗಳ ವಶಕ್ಕೆ ನೀಡಿದ್ದು,ಮುಂದಿನ ರೀತ್ಯಾ ಕ್ರಮ ಜರುಗಿಸಿ ವರದಿ ಮಾಡಲು ಸೂಚಿಸಿದ ಮೇರೆಗೆ ಠಾಣಾ ಎನ್.ಸಿ.ಆರ್ 410/2019 ರಂತೆ ದಾಖಲಿಸಿರುತ್ತೆ ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 237/2019 ಕಲಂ: 78(1),78(3) ಕೆ.ಪಿ. ಆಕ್ಟ್:-

          ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ ಎಸ್ ಐ ಠಾಣೆಗೆ ಹಾರಾಗಿ ನೀಡಿದ ದೂರೇನೆಂದರೆ, ಈದಿನ ದಿನಾಂಕ :24/06/2019 ರಂದು  ಸಂಜೆ ಸುಮಾರು  5.30  ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ನಗರಗೆರೆ ಗ್ರಾಮದ ಬಸ್ಸು ನಿಲ್ದಾಣ ಬಳಿ ಇರುವ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು ಮಟಕಾ ಅಂಕಿಗಳ ಬರೆದು ಜುಜಾಟವಾಡುತ್ತಿರುವುದಾಗಿ  ನನಗೆ ಬಂದ  ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಸಿಬ್ಬಂದಿ ಮತ್ತು  ಪಂಚರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆ ಎ 40-ಜಿ-281 ರಲ್ಲಿ ನಗರಗೆರೆ ಗ್ರಾಮಕ್ಕೆ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಬಸ್ಸು  ನಿಲ್ದಾಣದ ಬಳಿಗೆ ಹೋಗಿ  ಮರೆಯಲ್ಲಿ  ನಿಂತು ನೋಡಿದಾಗ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಒಬ್ಬ ಆಸಾಮಿ ಬನ್ನಿ ಬನ್ನಿ  ಒಂದು ರೂಗೆ 40 ರೂ ಕೊಡುತ್ತೇನೆ.ಎಂತ ಕೂಗುತ್ತಾ  ಮಟ್ಕಾ ಅಂಕಿಗಳನ್ನು ಬರೆಸಿಕೊಂಡು ಜೂಜಾಡುತ್ತಿದ್ದವನನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಆತನನ್ನು  ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು  ಮೂರ್ತಿ @ ಮೈದಗೋಳಂಮೂರ್ತಿ ಬಿನ್ ಆದಿನಾರಾಯಣಪ್ಪ  38 ವರ್ಷ ನಾಯಕ ಜನಾಂಗ ವಾಸ: ನಗರಗೆರೆ ಗ್ರಾಮ ಗೌರಿಬಿದನೂರು ತಾಲ್ಲೂಕು ಅಂತ ತಿಳಿಸಿದ್ದು, ಆತನ ಮೈ ಜಪ್ತಿ ಮಾಡಿದಾಗ  ಒಂದು ಮಟಕಾ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು ,ಹಾಗು ಮಟ್ಕಾ ಜುಜಾಟವಾಡಿ ಸಂಗ್ರಹಿಸಿದ್ದ 3120/ ರೂ ನಗದು ಹಣವನ್ನು ಸಂಜೆ 6.15  ಗಂಟೆಯಿಂದ 6..45 ಗಂಟೆಯವರೆವಿಗು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಠಾಣಾಧಿಕಾರಿಗಳ ವಶಕ್ಕೆ ನೀಡಿದ್ದು,ಮುಂದಿನ ರೀತ್ಯಾ ಕ್ರಮ ಜರುಗಿಸಿ ವರದಿ ಮಾಡಲು ಸೂಚಿಸಿದ ಮೇರೆಗೆ ಠಾಣಾ ಎನ್.ಸಿ.ಆರ್ 411/2019 ರಂತೆ ದಾಖಲಿಸಿರುತ್ತೇನೆ.

 1. ಗೌರಿಬಿದನೂರು ನಗರ ಪೊಲೀಸ್ ಠಾಣೆ. ಮೊ.ಸಂ: 104/2019 ಕಲಂ: 279-338 ಐ.ಪಿ.ಸಿ:-

          ದಿನಾಂಕ:24.06.2019 ರಂದು 1900 ಗಂಟೆಗೆ ಪಿರ್ಯಾದಿದಾರರಾದ ಗಿರೀಶ್ ಬಿನ್ ರಂಗಧಾಮಯ್ಯ, 27 ವರ್ಷ, ನಾಯಕರು, ಕೂಲಿ ಕೆಲಸ, ದ್ವಾರಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:24/06/2019 ರಂದು ಮದ್ಯಾಹ್ನ 3-30 ಗಂಟೆಗೆ ನಾನು ಮತ್ತು ನನ್ನ ಸ್ನೇಹಿತ ಸುರೇಂದ್ರ ರಾಜು ಗೌರಿಬಿದನೂರು ಮಾರ್ಕೆಟ್ ಗೆ ಹೋಗುವ ಸಲುವಾಗಿ ನನ್ನ ಅಣ್ಣನ ಬಾಬತ್ತು ಕೆಎ-40-ಇಬಿ-6484 ಹೊಂಡಾ ಆಟ್ಕೀವಾ ದ್ವಿಚಕ್ರವಾಹನವನ್ನು ತೆಗೆದುಕೊಂಡು ನಮ್ಮೂರು ದ್ವಾರಗಾನಹಳ್ಳಿಯಿಂದ ನನ್ನ ಸ್ನೇಹಿತ ಸುರೇಂದ್ರರವರು ಮುಂದೆ ಕುಳಿತುಕೊಂಡು ದ್ವಿಚಕ್ರವಾಹನವನ್ನು ಓಡಿಸುತ್ತಿದ್ದರು.  ನಾನು ಹಿಂದೆ ಕುಳಿತಿದ್ದೆ.  ದಿನಾಂಕ: 24/06/2019 ರಂದು  04-10 ಗಂಟೆಗೆ ಮಾಸದಮ್ಮ ದರ್ಗಾ ಬಳಿ ಬರುತ್ತಿದ್ದಾಗ ಎದುರುಗಡೆಯಿಂದ  KA-22-A-5969 ಶ್ರೀ ಮಂಜುನಾಥ ಸ್ವಾಮಿ ಪ್ರಸನ್ನ ಲಾರಿಯ ಚಾಲಕ  ಗೌರಿಬಿದನೂರು ಕಡೆಯಿಂದ ತನ್ನ ,ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ನಾವು ಹೋಗುತ್ತಿರುವ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾನು ಮತ್ತು ಸುರೇಂದ್ರ ಕೆಳಗೆ ಬಿದ್ದು ಹೋದೆವು. ಸುರೇಂದ್ರನಿಗೆ ಬಲಕಾಲು ಮುರಿದಿದ್ದು, ನನಗೆ ಹಣೆಗೆ ರಕ್ತಗಾಯವಾಗಿರುತ್ತೆ.  ಅಲ್ಲಿದ್ದ ಸಾರ್ವಜನಿಕರು ನಮ್ಮನ್ನು ಉಪಚರಿಸಿ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು.   ನಂತರ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸುರೇಂದ್ರನನ್ನು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.  ನಮಗೆ ಅಪಘಾತವುಂಟು ಮಾಡಿದ  KA-22-A-5969 ಶ್ರೀ ಮಂಜುನಾಥ ಸ್ವಾಮಿ ಪ್ರಸನ್ನ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು  ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊ.ಸಂ.104/2019 ಕಲಂ:279,338 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ. ಮೊ.ಸಂ: 156/2019 ಕಲಂ: 279 ಐ.ಪಿ.ಸಿ:-

          ದಿನಾಂಕ:24-06-2019 ರಂದು ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ 2 ವರ್ಷಗಳಿಂದ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,, ತಮ್ಮ ಆಸ್ಪತ್ರೆಯ ಎ,ಎಮ್,ಓ ರವರು ಆಂಬುಲೆನ್ಸ್ ವಾಹನಗಳ ಮೇಲ್ವಿಚಾರಣೆ ನೋಡಿಕೊಳ್ಳಲು ತನಗೆ ಸೂಚಿಸಿದ್ದು, ಅದರಂತೆ ತಾನು ಆಸ್ಪತ್ರೆಯಲ್ಲಿದ್ದ ಮೂರು ಆಂಬುಲೆನ್ಸ್ ವಾಹನಗಳಿಗೆ ಚಾಲಕರನ್ನು ಕಳುಹಿಸುವುದು, ಡ್ಯೂಟಿ ರೋಸ್ಟರ್ & ವಾಹನಗಳ ರಿಪೇರಿ ನೊಡಿಕೊಳ್ಳುತ್ತಿದ್ದು, ಈ ದಿನ ದಿನಾಂಕ:24-06-2019 ರಂದು ಬೆಳಿಗ್ಗೆ 8-00 ಗಂಟೆಯಲ್ಲಿ ಕೆ,ಎ-40 ಜಿ-374 ನೊಂದಣಿಯ ವಾಹನಕ್ಕೆ ಚಾಲಕನಾಗಿ ಎಮ್,ಎ ಮಂಜುನಾಥ ಬಿನ್ ಆದಿನಾರಾಯಣಪ್ಪ 24 ವರ್ಷ, ಕುರುಬ, ವಾಸ-ಮೇಡಿಮಾಕಲಹಳ್ಳಿ ಗ್ರಾಮ, ಗುಡಿಬಂಡೆ ತಾಲೂಕು, ರವರು ನೇಮಕ ಆಗಿರುತ್ತಾರೆ, ಈ ದಿನ ಬೆಳಿಗ್ಗೆ ಕರ್ತವ್ಯ ನಿರತ ವೈಧ್ಯರು ಗುಡಿಬಂಡೆ ಪಟ್ಟಣದ ಮನ್ವಿತ 5 ವರ್ಷ ರವರಿಗೆ ಪಿಡ್ಸ್ ಕಾಯಿಲೆ ಜಾಸ್ತಿಯಿದ್ದು, ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಬೇಕೆಂದು ತಿಳಿಸಿದ್ದು, ಆಗ ಮೇಲ್ಕಂಡ ಆಂಬುಲೆನ್ಸನಲ್ಲಿ ಮಂಜುನಾಥ  ರವರ ಮುಖಾಂತರ ಬೆಳಿಗ್ಗೆ 8-45 ಗಂಟೆಯಲ್ಲಿ ಆಸ್ಪತ್ರೆಯಿಂದ ಕಳುಹಿಸಿಕೊಟ್ಟಿದ್ದು, ಅದರಂತೆ ಮಂಜುನಾಥನು ಹೋಗಿದ್ದು ಬೆಳಿಗ್ಗೆ 9-00 ಗಂಟೆಯಲ್ಲಿ ಮಂಜುನಾಥನು ಪಿರ್ಯಾಧಿಗೆ ಪೋನ್ ಮಾಡಿ ಗುಡಿಬಂಡೆ-ಪೆರೇಸಂದ್ರ ಮಾರ್ಗದ ಹೀರೆನಾಗವಲ್ಲಿ ಕ್ರಾಸ್ ಹಿಂಭಾಗ ಸುಮಾರು 200 ಮೀಟರ್ ಪಶ್ಚಿಮ ಕಡೆಯ ತಿರುವಿನಲ್ಲಿ ಹೋಗುವಾಗ, ಯಾವುದೋ ಆಟೋ ವಾಹನವು ಎದುರುಗಡೆಯಿಂದ ಬಂದಾಗ ತಾನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಬಲಬದಿಗೆ ಉರುಳಿಸಿದ್ದು, ಆಂಬುಲೆನ್ಸ್ ವಾಹನದಲ್ಲಿದ್ದ ಚಾಲಕನಿಗೂ & ರೋಗಿ ಹಾಗೂ ಅವರೊಂದಿಗಿದ್ದ ಮನ್ವಿತ ರವರ ತಾಯಿಗೆ ಯಾವುದೇ ಗಾಯಗಳು ಆಗಿರುವುದಿಲ್ಲವೆಂದು ತಿಳಿಸಿದ್ದು, ಪಿರ್ಯಾಧಿ ಸ್ಥಳಕ್ಕೆ ಹೋಗಿ ನೋಡಲಾಗಿ ಆಂಬುಲೆನ್ಸ್ ವಾಹನವು ರಸ್ತೆಯ ಬಲಬದಿ ಹಳ್ಳದಲ್ಲಿ ಬಿದ್ದು ಜಖಂಗೊಂಡಿದ್ದು, ಆದರೆ ಚಾಲಕ ಮಂಜುನಾಥನಿಗೆ & ರೋಗಿ ಮನ್ವಿತ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲವೆಂದು, ನಂತರ ಮನ್ವಿತ ರವರನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟೇನು.ಮೇಲ್ಕಂಡಂತೆ ಕೆ,ಎ-40 ಜಿ-374 ನೊಂದಣಿಯ ಆಂಬುಲೆನ್ಸ್ ವಾಹನವನ್ನು ಚಾಲಕ ಎಮ್,ಎ ಮಂಜುನಾಥ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತ ಪಡಿಸಿದ ಪರಿಣಾಮ ಆಂಬುಲೆನ್ಸ್ ವಾಹನವು ಜಖಂಗೊಂಡಿರುತ್ತೆಂದು ಆದ್ದರಿಂದ ಸದರಿ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು ಆಗಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 140/2019 ಕಲಂ: 87 ಕೆ.ಪಿ. ಆಕ್ಟ್:-

          ದಿನಾಂಕ:23/06/2019 ರಂದು  ಮಾನ್ಯ ಸಿ.ಪಿ.ಐ ಗೌರಿಬಿದನೂರು ವೃತ್ತ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ :23/06/2019 ರಂದು ಮದ್ಯಾಹ್ನ 2-00 ಗಂಟೆಯ ಸಮಯದಲ್ಲಿ ಸಿ.ಪಿ.ಐ ರವರು ಕಛೇರಿಯಲ್ಲಿರುವಾಗ ಮಂಚೇನಹಳ್ಳಿ ಠಾಣಾ ಸರಹದ್ದಿನ ಹೊನ್ನಪ್ಪನಹಳ್ಳಿ ಗ್ರಾಮದ ಸರ್ಕಾರಿ ಕೆರೆಯಲ್ಲಿ ಯಾರೋ ಕೆಲವರು ಅಂದರ್ ಬಾಹಾರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಠಾಣೆಗೆ ಬಂದು ಠಾಣೆಯ ಪಿ.ಎಸ್.ಐ ಸಿ.ಭಾಸ್ಕರ್, ಮತ್ತು ಸಿಬ್ಬಂದಿಯವರಾದ ಪಿ.ಸಿ.530 ಮಾದೇಶ, ಪಿ.ಸಿ.392 ಬಾಬು, ಪಿ.ಸಿ.532 ಚಿಕ್ಕಣ್ಣ, ಪಿ.ಸಿ.111 ಲೋಕೇಶ್. ಪಿ.ಸಿ. 211, ಶೇಖರಪ್ಪ ರವರು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40, ಜಿ-222 ರಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ  ಹೋಗಿ  ಹೊನ್ನಪ್ಪನಹಳ್ಳಿ  ಗ್ರಾಮದ ಸರ್ಕಾರಿ ಕೆರೆಯ ಬಳಿ ಹೋಗಿ ದಾಳಿ ಮಾಡಲಾಗಿ ಮೇಲ್ಕಂಡ ಆರೋಪಿತರು ಹಣವನ್ನು ಪಣವನ್ನಾಗಿ ಕಟ್ಟಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದವರ ಮೇಲೆ ದಾಳಿ ಮಾಡಿ ನಗದು ಹಣ 3470/- ರೂಗಳು, 52 ಇಸ್ಪೀಟ್ ಎಲೆಗಳು ಮತ್ತು ಒಂದು ಪ್ಲಾಸ್ಟಿಕ್ ಚೀಲವನ್ನು ಪಂಚನಾಮೆಯೊಂದಿಗೆ ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ನಂ 286/2019 ರಂತೆ ಪ್ರಕರಣ ದಾಖಲಿಸಿಕೊಂಡು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು .ಕಲಂ 87 ಕೆ.ಪಿ.ಆಕ್ಟ್ ರೀತ್ಯ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 141/2019 ಕಲಂ: 87 ಕೆ.ಪಿ. ಆಕ್ಟ್:-

          ದಿನಾಂಕ:23/06/2019 ರಂದು ಹೆಚ್.ಸಿ. 76 ಹನುಮಂತರಾಯಪ್ಪ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ :23/06/2019 ರಂದು ಹೆಚ್.ಸಿ. 76 ಹನುಮಂತರಾಯಪ್ಪ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಹೆಚ್.ಸಿ. 76 ಹನುಮಂತರಾಯಪ್ಪ ಮತ್ತು ಸಿಬ್ಬಂದಿಯವರಾದ ಪಿ.ಸಿ.530 ಮಾದೇಶ, ಪಿ.ಸಿ.100 ಮಹೇಶ, ಪಿ.ಸಿ.111 ಲೋಕೇಶ, ಪಿ.ಸಿ. 311 ಗೂಳಪ್ಪ ನಿಂಗನೂರು ರವರು ಹಾಗೂ ಪಂಚರೊಂದಿಗೆ ದ್ವಿಚಕ್ರ ವಾಹನಗಳಲ್ಲಿ  ಹೋಗಿ  ಬರ್ಜಾನುಕುಂಟೆ ಗ್ರಾಮದ ಸರ್ಕಾರಿ ಕೆರೆಯ ಬಳಿ ಹೋಗಿ ದಾಳಿ ಮಾಡಲಾಗಿ ಮೇಲ್ಕಂಡ ಆರೋಪಿತರು ಹಣವನ್ನು ಪಣವನ್ನಾಗಿ ಕಟ್ಟಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದವರ ಮೇಲೆ ದಾಳಿ ಮಾಡಿ ನಗದು ಹಣ 2230/- ರೂಗಳು, 52 ಇಸ್ಪೀಟ್ ಎಲೆಗಳು ಮತ್ತು ಒಂದು ಪ್ಲಾಸ್ಟಿಕ್ ಚೀಲವನ್ನು ಪಂಚನಾಮೆಯೊಂದಿಗೆ ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ನಂ 287/2019 ರಂತೆ ಪ್ರಕರಣ ದಾಖಲಿಸಿ ಈ ದಿನ ದಿನಾಂಕ:25/06/2019 ರಂದು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಕಲಂ 87 ಕೆ.ಪಿ.ಆಕ್ಟ್ ರೀತ್ಯ ಪ್ರರಕಣ ದಾಖಲಿಸಿಕೊಂಡಿರುತ್ತದೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 142/2019 ಕಲಂ: 87 ಕೆ.ಪಿ. ಆಕ್ಟ್:-

          ದಿನಾಂಕ:23/06/2019 ರಂದು ಹೆಚ್.ಸಿ. 59  ಶ್ರೀನಿವಾಸಪ್ಪ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ :23/06/2019 ರಂದು ಹೆಚ್.ಸಿ. 59  ಶ್ರೀನಿವಾಸಪ್ಪ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಹೆಚ್.ಸಿ. 59  ಶ್ರೀನಿವಾಸಪ್ಪ  ಮತ್ತು ಸಿಬ್ಬಂದಿಯವರಾದ ಪಿ.ಸಿ.392 ಬಾಬು, ಪಿ.ಸಿ.532 ಚಿಕ್ಕಣ್ಣ, ಪಿ.ಸಿ.211 ಶೇಖರಪ್ಪ, ಪಿ.ಸಿ. 237 ಆನಂದ್ ಕುಮಾರ್ ರವರು ಹಾಗೂ ಪಂಚರೊಂದಿಗೆ ದ್ವಿಚಕ್ರ ವಾಹನಗಳಲ್ಲಿ  ಹೋಗಿ  ಬರ್ಜಾನುಕುಂಟೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿ ಶಾಲೆಯ ಮುಂಭಾಗ  ಹೋಗಿ ದಾಳಿ ಮಾಡಲಾಗಿ ಮೇಲ್ಕಂಡ ಆರೋಪಿತರು ಹಣವನ್ನು ಪಣವನ್ನಾಗಿ ಕಟ್ಟಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದವರ ಮೇಲೆ ದಾಳಿ ಮಾಡಿ ನಗದು ಹಣ 2400/- ರೂಗಳು, 52 ಇಸ್ಪೀಟ್ ಎಲೆಗಳು ಮತ್ತು ಒಂದು ಪ್ಲಾಸ್ಟಿಕ್ ಚೀಲವನ್ನು ಪಂಚನಾಮೆಯೊಂದಿಗೆ ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ನಂ 288/2019 ರಂತೆ ಪ್ರಕರಣ ದಾಖಲಿಸಿ ಈ ದಿನ ದಿನಾಂಕ:25/06/2019 ರಂದು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಕಲಂ 87 ಕೆ.ಪಿ.ಆಕ್ಟ್ ರೀತ್ಯ ಪ್ರರಕಣ ದಾಖಲಿಸಿಕೊಂಡಿರುತ್ತದೆ.

 1. ನಂದಿಗಿರಿಧಾಮ ಪೊಲೀಸ್ ಠಾಣೆ. ಮೊ.ಸಂ: 80/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ:24/06/2019 ರಂದು ರಾತ್ರಿ 7:50 ಗಂಟೆ ಸಮಯಲ್ಲಿ ಪಿ.ಎಸ್.ಐ ಕ್ರೈಂ ನಾರಾಯಣಸ್ವಾಮಿ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:24-06-2019 ರಂದು ಸಂಜೆ 6:00 ಗಂಟೆ ಸಮಯದಲ್ಲಿ ನಾನು ಮತ್ತು ಠಾಣೆಯ ಸಿಬ್ಬಂದಿಯಾದ ಪಿಸಿ-436, ಪಿಸಿ-240 ಮಧುಸೂಧನ್ ರವರೊಂಧಿಗೆ ನಂದಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಎನೆಂದರೆ ಅಂಗಟ್ಟ ಗೇಟಿನಲ್ಲಿರುವ ಚಂದ್ರಪ್ಪ @ ಚಂದ್ರು ಬಿನ್ ಮುನಿಶಾಮಪ್ಪ ರವರು ಚಿಲ್ಲರೆ ಅಂಗಡಿಯಲ್ಲಿ ಮದ್ಯೆ ಸೇವಿಸಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದೂ ಬಂದ ಮಾಹಿತಿಯ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾಗಿ ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆ,ಎ-40 ಜಿ-296 ವಾಹನದಲ್ಲಿ ನಂದಿ ಗ್ರಾಮದ ಬಸ್ ನಿಲ್ದಾಣದ ಬಳಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಸಂಜೆ 6:20 ಗಂಟೆ ಸಮಯಕ್ಕೆ ಮೇಲ್ಕಂಡ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಗಿರಾಕಿಗಳು ಓಡಿ ಹೋಗಿದ್ದು ನಂತರ ಮದ್ಯೆ ಸೇವನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಅಂಗಡಿಯ ಬಳಿ ಹೋಗಿ ಪರಿಶೀಲಿಸಿದಾಗ ಅಂಗಡಿಯ ಮುಂಭಾಗದಲ್ಲಿ ಖಾಲಿ ಟೆಟ್ರಾ ಪಾಕೆಟುಗಳು, ಖಾಲಿ ಲೋಟಗಳು ಇರುವುದು ಕಂಡು ಬಂದಿದ್ದು, ಅಂಗಡಿಯ ಮುಂಭಾಗದ ಜಗಲಿ ಕಲ್ಲಿನ ಕೆಳಭಾಗದಲ್ಲಿ ಖಾಲಿ ಕವರಿನಲ್ಲಿ ಮದ್ಯದ ಟೆಟ್ರಾ ಪಾಕೆಟುಗಳು ಇರುವುದು ಕಂಡು ಬಂದಿರುತ್ತೆ ಅಂಗಡಿಯಲ್ಲಿದ್ದ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಚಂದ್ರು ಬಿನ್ ಮುನಿಶಾಮಪ್ಪ, 48 ವರ್ಷ, ಒಕ್ಕಲಿಗರು, ಅಂಗಡಿಯ ವ್ಯಾಪಾರಿ, ವಾಸ: ಅಂಗಟ್ಟ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ, ನಂತರ ಅಂಗಡಿಯ ಚಂದ್ರು ರವರನ್ನು ಗಿರಾಕಿಗಳಿಗೆ, ಮದ್ಯವನ್ನು  ಪೂರೈಸಲು ಮತ್ತು ಮದ್ಯೆ ಸೇವಿಸಲು ಸ್ಥಳವಕಾಶ ಮಾಡಿಕೊಡಲು ನಿನ್ನ ಬಳಿ ಪರವಾನಿಗೆ, ಲೈಸನ್ಸ್ ದಾಖಲೆಗಳು ಇದೆಯೇ? ಇದ್ದರೆ ಹಾಜರುಪಡಿಸಲು ಕೋರಿದಾಗ  ಸದರಿ ಅಸಾಮಿ ತನ್ನ ಬಳಿ ಯಾವುದೂ ಇಲ್ಲವೆಂದು ಹೇಳಿದ. ಸದರಿ ಅಸಾಮಿ ತಾನೇ ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ತಪ್ಪೊಪ್ಪಿಕೊಂಡನು. ನಂತರ ಸದರಿ ಮದ್ಯದ ಟೆಟ್ರಾ ಪಾಕೆಟುಗಳನ್ನು ಮತ್ತು ಖಾಲಿ ಟೆಟ್ರಾ ಪಾಕೇಟುಗಳನ್ನು ಹಾಗೂ ಪ್ಲಾಸ್ಟಿಕ್ ಲೋಟಗಳನ್ನು ಪರಿಶೀಲಿಸಿದಾಗ 1) 90 ML ನ RAJA WHISKY  ಯ 7 ಟೆಟ್ರಾ ಪ್ಯಾಕೇಟುಗಳು, ಪ್ರತಿ ಟೆಟ್ರಾ ಪಾಕೇಟಿನ ಬೆಲೆ 30.32 ಪೈಸೆ, ಓಟ್ಟು ಬೆಲೆ 212.24 ಪೈಸೆಯಾಗಿರುತ್ತೆ. ಓಟ್ಟು ಸಾಮಾರ್ಥ್ಯ 630 ಮಿಲಿ ಆಗಿರುತ್ತೆ. 2) 90 ML ನ RAJA WHISKY  ಯ 10 ಖಾಲಿ ಟೆಟ್ರಾ ಪ್ಯಾಕೇಟುಗಳು, 3) 5 ಪ್ಲಾಸ್ಟಿಕ್ ಲೋಟಗಳನ್ನು ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮದಲ್ಲಿ ಸಂಜೆ 6:30 ಗಂಟೆಯಿಂದ ಸಂಜೆ 7:30 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಅಂಗಡಿಯ ಮಾಲಿಕ ಚಂದ್ರು ರವರನ್ನು ನಮ್ಮ ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ,ವರದಿ.

 1. ನಂದಿಗಿರಿಧಾಮ ಪೊಲೀಸ್ ಠಾಣೆ. ಮೊ.ಸಂ: 81/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ:25/06/2019 ರಂದು ಬೆಳಿಗ್ಗೆ 10:00 ಗಂಟೆ ಸಮಯಲ್ಲಿ ಎ.ಎಸ್.ಐ ಗೋಪಾಲ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:25-06-2019 ರಂದು ಬೆಳಿಗ್ಗೆ 08:20 ಗಂಟೆ ಸಮಯದಲ್ಲಿ ನಾನು ಮತ್ತು ಠಾಣೆಯ ಸಿಬ್ಬಂದಿಯಾದ ಪಿಸಿ-436 ಬಾಲಕೃಷ್ಣ, ಪಿಸಿ-240 ಮಧುಸೂಧನ್ ರವರೊಂಧಿಗೆ ಕುಪ್ಪಹಳ್ಳಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಎನೆಂದರೆ ನಂದಿ ಗ್ರಾಮದ ಚಿಕ್ಕಬಳ್ಳಾಪುರ ರಸ್ತೆಯ ತಿರುಮಲಾ ಬಾರ್ ಕಡೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಅಂಗಡಿಯ ಮುಂಭಾಗದಲ್ಲಿ ಪ್ರಕಾಶ್ ಬಿನ್ ತಿಪ್ಪೇಸ್ವಾಮಿ ಎಂಬುವರು ಮದ್ಯೆ ಸೇವಿಸಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದೂ ಬಂದ ಮಾಹಿತಿಯ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾಗಿ ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆ,ಎ-40 ಜಿ-296 ವಾಹನದಲ್ಲಿ ನಂದಿ ಗ್ರಾಮದ ಬಸ್ ನಿಲ್ದಾಣದ ಬಳಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಬೆಳಿಗ್ಗೆ 08:40 ಸಮಯಕ್ಕೆ ಮೇಲ್ಕಂಡ ಅಂಗಡಿಯ ಮುಂಭಾಗದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಗಿರಾಕಿಗಳು ಓಡಿ ಹೋಗಿದ್ದು ನಂತರ ಮದ್ಯೆ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಂಗಡಿಯ ಬಳಿ ಪರಿಶೀಲಿಸಿದಾಗ ಅಂಗಡಿಯ ಮುಂಭಾಗದಲ್ಲಿ ಖಾಲಿ ಟೆಟ್ರಾ ಪಾಕೆಟುಗಳು, ಖಾಲಿ ಲೋಟಗಳು ಇರುವುದು ಕಂಡು ಬಂದಿದ್ದು, ಅಂಗಡಿಯ ಮುಂಭಾಗದ ಗೊಡೆಯ ಬಳಿ ಒಂದು ಕಪ್ಪು ಕವರಿನಲ್ಲಿ ಮದ್ಯದ ಟೆಟ್ರಾ ಪಾಕೆಟುಗಳು ಇರುವುದು ಕಂಡು ಬಂದಿರುತ್ತೆ ಮದ್ಯೆ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಯು ಸ್ಥಳದಲ್ಲಿಯೇ ಇದ್ದು ಸದರಿ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಪ್ರಕಾಶ ಬಿನ್ ಲೇಟ್ ತಿಪ್ಪೇಸ್ವಾಮಿ, 38 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ನಂದಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ, ನಂತರ ಸದರಿ ಅಸಾಮಿ ಪ್ರಕಾಶ್ ರವರನ್ನು ಗಿರಾಕಿಗಳಿಗೆ ಮದ್ಯೆ ಸೇವಿಸಲು ಸ್ಥಳವಕಾಶ ಮಾಡಿಕೊಡಲು ನಿನ್ನ ಬಳಿ ಪರವಾನಿಗೆ, ಲೈಸನ್ಸ್ ದಾಖಲೆಗಳು ಇದೆಯೇ? ಇದ್ದರೆ ಹಾಜರುಪಡಿಸಲು ಕೋರಿದಾಗ ಸದರಿ ಅಸಾಮಿ ತನ್ನ ಬಳಿ ಯಾವುದೂ ಇಲ್ಲವೆಂದು ಹೇಳಿದ. ಸದರಿ ಅಸಾಮಿ ತಾನೇ ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ತಪ್ಪೊಪ್ಪಿಕೊಂಡನು. ನಂತರ ಸದರಿ ಮದ್ಯದ ಟೆಟ್ರಾ ಪಾಕೆಟುಗಳನ್ನು ಮತ್ತು ಖಾಲಿ ಟೆಟ್ರಾ ಪಾಕೇಟುಗಳನ್ನು ಹಾಗೂ ಪ್ಲಾಸ್ಟಿಕ್ ಲೋಟಗಳನ್ನು ಪರಿಶೀಲಿಸಿದಾಗ 1) 90 ML ನ HAYWARD CHEERS WHISKY  ಯ 21 ಟೆಟ್ರಾ ಪ್ಯಾಕೇಟುಗಳು, ಪ್ರತಿ ಟೆಟ್ರಾ ಪಾಕೇಟಿನ ಬೆಲೆ 30.32 ಪೈಸೆ, ಓಟ್ಟು ಬೆಲೆ 636.72 ಪೈಸೆಯಾಗಿರುತ್ತೆ. ಓಟ್ಟು ಸಾಮಾರ್ಥ್ಯ 1 ಲೀಟರ್ 890 ಮಿಲಿ ಆಗಿರುತ್ತೆ. 2) 90 ML ನ RAJA WHISKY  ಯ 8 ಖಾಲಿ ಟೆಟ್ರಾ ಪ್ಯಾಕೇಟುಗಳು, 3) 5 ಪ್ಲಾಸ್ಟಿಕ್ ಲೋಟಗಳನ್ನು ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮದಲ್ಲಿ ಬೆಳಿಗ್ಗೆ 8:50 ಗಂಟೆಯಿಂದ ಬೆಳಿಗ್ಗೆ 09:40 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ ಪ್ರಕಾಶ್ ರವರನ್ನು ನಮ್ಮ ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ,ವರದಿ.

 1. ನಂದಿಗಿರಿಧಾಮ ಪೊಲೀಸ್ ಠಾಣೆ. ಮೊ.ಸಂ: 82/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ:25/06/2019  ರಂದು ಬೆಳಿಗ್ಗೆ 11:45 ಗಂಟೆ ಸಮಯಲ್ಲಿ ಪಿ.ಎಸ್.ಐ ಕ್ರೈಂ ನಾರಾಯಣಸ್ವಾಮಿ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:25-06-2019 ರಂದು ಬೆಳಿಗ್ಗೆ 10:30  ಗಂಟೆ ಸಮಯದಲ್ಲಿ ನಾನು ಮತ್ತು ಠಾಣೆಯ ಸಿಬ್ಬಂದಿಯಾದ ಪಿಸಿ-436, ಪಿಸಿ-240 ಮಧುಸೂಧನ್ ರವರೊಂಧಿಗೆ ನಂದಿ ಕ್ರಾಸಿನ ಕಡೆ ಗಸ್ತಿನಲ್ಲಿದ್ದಾಗ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಎನೆಂದರೆ ಬೀಡಿಗಾನಹಳ್ಳಿ ಗ್ರಾಮದ ಜಯರಾಮ್ ಬಿನ್ ಲೇಟ್ ಆಂಜಿನಪ್ಪ ರವರ ಚಿಲ್ಲರೆ ಅಂಗಡಿಯಲ್ಲಿ ಮದ್ಯೆ ಸೇವಿಸಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದೂ ಬಂದ ಮಾಹಿತಿಯ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾಗಿ ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆ,ಎ-40 ಜಿ-296 ವಾಹನದಲ್ಲಿ ನಂದಿ ನಂದಿ ಕ್ರಾಸಿನಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಬೆಳಿಗ್ಗೆ 10:45 ಗಂಟೆ ಸಮಯಕ್ಕೆ ಮೇಲ್ಕಂಡ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಗಿರಾಕಿಗಳು ಓಡಿ ಹೋಗಿದ್ದು ನಂತರ ಮದ್ಯೆ ಸೇವನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಅಂಗಡಿಯ ಬಳಿ ಹೋಗಿ ಪರಿಶೀಲಿಸಿದಾಗ ಅಂಗಡಿಯ ಮುಂಭಾಗದಲ್ಲಿ ಖಾಲಿ ಟೆಟ್ರಾ ಪಾಕೆಟುಗಳು, ಖಾಲಿ ಲೋಟಗಳು ಇರುವುದು ಕಂಡು ಬಂದಿದ್ದು, ಅಂಗಡಿಯ ಮುಂಭಾಗದ ಜಗಲಿ ಕಲ್ಲಿನ ಕೆಳಭಾಗದಲ್ಲಿ ಒಂದು ಕವರಿನಲ್ಲಿ ಮದ್ಯದ ಟೆಟ್ರಾ ಪಾಕೆಟುಗಳು ಇರುವುದು ಕಂಡು ಬಂದಿರುತ್ತೆ ಅಂಗಡಿಯಲ್ಲಿದ್ದ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಜಯರಾಮ್ ಬಿನ್ ಲೇಟ್ ಆಂಜಿನಪ್ಪ, 53 ವರ್ಷ,  ಒಕ್ಕಲಿಗರು, ಅಂಗಡಿಯ ವ್ಯಾಪಾರಿ, ವಾಸ: ಬೀಡಿಗಾನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ, ನಂತರ ಅಂಗಡಿಯ ಮಾಲಿಕ ಜಯರಾಮ್ ರವರನ್ನು ಗಿರಾಕಿಗಳಿಗೆ, ಮದ್ಯವನ್ನು  ಪೂರೈಸಲು ಮತ್ತು ಮದ್ಯೆ ಸೇವಿಸಲು ಸ್ಥಳವಕಾಶ ಮಾಡಿಕೊಡಲು ನಿನ್ನ ಬಳಿ ಪರವಾನಿಗೆ, ಲೈಸನ್ಸ್ ದಾಖಲೆಗಳು ಇದೆಯೇ? ಇದ್ದರೆ ಹಾಜರುಪಡಿಸಲು ಕೋರಿದಾಗ  ಸದರಿ ಅಸಾಮಿ ತನ್ನ ಬಳಿ ಯಾವುದೂ ಇಲ್ಲವೆಂದು ಹೇಳಿದ. ಸದರಿ ಅಸಾಮಿ ತಾನೇ ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ತಪ್ಪೊಪ್ಪಿಕೊಂಡನು. ನಂತರ ಸದರಿ ಮದ್ಯದ ಟೆಟ್ರಾ ಪಾಕೆಟುಗಳನ್ನು ಮತ್ತು ಖಾಲಿ ಟೆಟ್ರಾ ಪಾಕೇಟುಗಳನ್ನು ಹಾಗೂ ಪ್ಲಾಸ್ಟಿಕ್ ಲೋಟಗಳನ್ನು ಪರಿಶೀಲಿಸಿದಾಗ 1) 90 ML ನ HYAWARDS CHEERS WHISKY  ಯ 16 ಟೆಟ್ರಾ ಪ್ಯಾಕೇಟುಗಳು, ಪ್ರತಿ ಟೆಟ್ರಾ ಪಾಕೇಟಿನ ಬೆಲೆ 30.32 ಪೈಸೆ, ಓಟ್ಟು ಬೆಲೆ 485.12 ಪೈಸೆಯಾಗಿರುತ್ತೆ. ಓಟ್ಟು ಸಾಮಾರ್ಥ್ಯ 1 ಲೀಟರ್ 440 ಮಿಲಿ ಆಗಿರುತ್ತೆ. 2) 90 ML ನ HYAWARDS CHEERS WHISKY  ಯ 7 ಖಾಲಿ ಟೆಟ್ರಾ ಪ್ಯಾಕೇಟುಗಳು, 3) 7 ಪ್ಲಾಸ್ಟಿಕ್  ಲೋಟಗಳನ್ನು ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮದಲ್ಲಿ ಬೆಳಿಗ್ಗೆ 10:50 ಗಂಟೆಯಿಂದ ಬೆಳಿಗ್ಗೆ 11:30 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಅಂಗಡಿಯ ಮಾಲಿಕ ಜಯರಾಮ್ ರವರನ್ನು ನಮ್ಮ ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ,ವರದಿ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 152/2019 ಕಲಂ: 279-304(ಎ) ಐ.ಪಿ.ಸಿ:-

          ದಿನಾಂಕ:25.06.2019 ರಂದು ಬೆಳಿಗ್ಗೆ 9.00 ಗಂಟೆ ಪಿರ್ಯಾಧಿ ಮುನಿಯಪ್ಪ ಬಿನ್ ಲೇಟ್ ವೆಂಕಟ್ರಾಯಪ್ಪ, 49 ವರ್ಷ, ಹರಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ:12.06.2019 ರಂದು ನಮ್ಮ ಸಂಬಂದಿಕರಾದ ಚಿಕ್ಕಬಳ್ಳಾಪುರ ತಾಲ್ಲೂಕು ಕುರ್ಲಹಳ್ಳಿ ಗ್ರಾಮದ ಮುನಿಯಪ್ಪ ಬಿನ್ ಲೇಟ್ ಕೊಂಡಪ್ಪ, 30 ವರ್ಷ ರವರು ನಮ್ಮನ್ನು ನೋಡಿಕೊಂಡು ಹೋಗಲು ತನ್ನ ಗ್ರಾಮವಾದ ಕುರ್ಲಹಳ್ಳಿ ಗ್ರಾಮದಿಂದ ಶಿಡ್ಲಘಟ್ಟಕ್ಕೆ ಬಂದು ಶಿಡ್ಲಘಟ್ಟದಿಂದ ದಿಬ್ಬೂರಹಳ್ಳಿಗೆ ಹೋಗುವ KA.40.2409 ಸಪ್ತಗಿರಿ ಖಾಸಗಿ ಬಸ್ ನಲ್ಲಿ ಹತ್ತಿ ರಾತ್ರಿ 7.30 ಗಂಟೆ ಸಮಯದಲ್ಲಿ ಸದರಿ ಖಾಸಗಿ ಬಸ್ ವರದನಾಯಕನಹಳ್ಳಿ ಗೇಟ್ ಬಳಿ ಬಂದಿದ್ದು ವರದನಾಯಕನಹಳ್ಳಿ ಗೇಟ್ ಬಳಿ ಮುನಿಯಪ್ಪ ಬಿನ್ ಲೇಟ್ ಕೊಂಡಪ್ಪ ರವರು ಬಸ್ ಇಳಿಯಲು ಬಸ್ಸಿನ ಬಾಗಿಲು ಬಳಿ ಬಂದಿದ್ದು ಹಲವು ಪ್ರಯಾಣಿಕರು ಇಳಿದಿದ್ದು ಮುನಿಯಪ್ಪ ರವರು ಇಳಿಯುವ ವೇಳೆಗೆ ಬಸ್ಸಿನ ಚಾಲಕ ಪ್ರಯಾಣಿಕರಿಗೆ ಯಾವುದೇ ಮುನ್ಸೂಚನೆ ನೀಡದೇ KA.40.2409 ಸಪ್ತಗಿರಿ ಖಾಸಗಿ ಬಸ್ ಅನ್ನು ಚಾಲಕನು ಏಕಾಏಕಿ ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಮುನಿಯಪ್ಪ ರವರು ಬಸ್ಸಿನಿಂದ ಕೆಳಗಡೆ ಬಿದ್ದು ಹೋಗಿ ತಲೆಗೆ ಮುಖದ ಗಡ್ಡಕ್ಕೆ ರಕ್ತಗಾಯವಾಗಿದ್ದು ಸದರಿ ಖಾಸಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಾಳು ಮುನಿಯಪ್ಪ ರವರನ್ನು ಉಪಚರಿಸಿ 108 ಅಂಬ್ಯೂಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿ ಈ ವಿಚಾರ ನನಗೆ ತಿಳಿಸಿರುತ್ತಾರೆ. ನಂತರ ನಾನು ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಾಗಿರುತ್ತೆ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಮುನಿಯಪ್ಪ ರವರನ್ನು ಬೆಂಗಳೂರಿನ ನಿಮ್ಹಾನ್ಸ್ ಅಸ್ಪತ್ರೆಗೆ ದಾಖಲಿಸಿದ್ದು ದಿನಾಂಕ:24.06.2019 ರಂದು ರಾತ್ರಿ 1.00 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ನಾನು ಗಾಯಾಳು ಮುನಿಯಪ್ಪ ರವರಿಗೆ ಬೆಂಗಳೂರಿನ ನಿಮ್ಹಾನ್ಸ್ ಅಸ್ಪತ್ರೆಯಲ್ಲಿ ಉಪಚರಿಸುತ್ತಿದ್ದ ಕಾರಣ ಈ ದಿನ ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದು KA.40.2409 ಸಪ್ತಗಿರಿ ಖಾಸಗಿ ಬಸ್ ನ ಚಾಲಕನ ಮೇಲೆ ಕಾನೂನು ರೀತಿಯ ಕ್ರಮಕೈಗೊಳ್ಳಲು  ನೀಡಿದ ದೂರನ್ನು ಪಡೆದು ಠಾಣಾ ಮೊ.ಸಂ 152/2019 ಕಲಂ 279,304(A) ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ. ಮೊ.ಸಂ: 84/2019 ಕಲಂ: 87 ಕೆ.ಪಿ. ಆಕ್ಟ್:-

          ದಿನಾಂಕ.24.06.2019 ರಂದು ಸಂಜೆ 6.00 ಗಂಟೆಗೆ ಚಿಂತಾಮಣಿ ಉಪ ವಿಭಾಗದ ಆರಕ್ಷಕ ಉಪಾದೀಕ್ಷರಾದ ಶ್ರೀ. ಬಿ.ಎಸ್. ಶ್ರೀನಿವಾಸ ರವರು ಆರೋಪಿಗಳು ಮತ್ತು ಮಾಲು ಸಮೇತ ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ಈ ದಿನ ದಿನಾಂಕ.24/06/2019 ರಂದು ಸಂಜೆ 4-00 ಗಂಟೆಗೆ ತಾನು ಕರ್ತವ್ಯದ ನಿಮಿತ್ತ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಗೆ ಬೇಟಿ ನೀಡಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ಗಾಂದೀನಗರದ ಸಮೀಪ ರೈಲ್ವೆ ಬ್ರಿಡ್ಜ್ ಪಕ್ಕದಲ್ಲಿ ಮರದ ಕೆಳಗೆ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಇವರನ್ನು ದಾಳಿ ಸಮಯದಲ್ಲಿ ಪಂಚರಾಗಿ ಸಹಕರಿಸಲು ತಿಳಿಸಿ ಪಂಚರು ಹಾಗೂ ಶಿಡ್ಲಘಟ್ಟ ಆರಕ್ಷಕ ವೃತ್ತ ನಿರೀಕ್ಷಕರಾದ ಜೆ.ಎನ್.ಆನಂದ ಕುಮಾರ್ ರವರಿಗೆ ತಿಳಿಸಿ ಇವರನ್ನು ಬರಮಾಡಿಕೊಂಡು ಇವರು ಹಾಗೂ ಸದರಿ ಠಾಣೆಯ ಸಿಬ್ಬಂದಿಯವರಾದ ಪಿ.ಸಿ 134 ಧನಂಜಯ್ ಕುಮಾರ್, ಪಿ.ಸಿ.131 ರಾಜಪ್ಪ, ಪಿ.ಸಿ.126 ವೆಂಕಟೇಶ್, ಪಿ.ಸಿ.320 ಮಸೂದ್ ರವರನ್ನು ದ್ವಿಚಕ್ರ ವಾಹನಗಳಲ್ಲಿ ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಸಂಜೆ 4-30 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ 3 ಜನ ಆಸಾಮಿಗಳು ರೈಲ್ವೆ ರಸ್ತೆ ಪಕ್ಕದಲ್ಲಿ ಮರದ ಕೆಳಗೆ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಸಿಬ್ಬಂದಿಯವರು ಹಿಂಬಾಲಿಸಿ 03 ಜನರನ್ನು ಹಿಡಿದುಕೊಂಡು ಬಂದಿದ್ದು ಅವರ ಹೆಸರು ವಿಳಾಸ ಕೇಳಲಾಗಿ 1] ಹುಸ್ಮಾನ್ ಷರೀಪ್ ಬಿನ್ ಇನಾಯತುಲ್ಲಾ ಷರೀಪ್,    ಗಾಂದೀನಗರ, ಶಿಡ್ಲಘಟ್ಟ ನಗರ 2] ನವೀದ್ ಪಾಷ ಬಿನ್ ಅತಾವುಲ್ಲಾ, ರೇಷ್ಮೇ ವ್ಯಾಪಾರ, ಗಾಂದೀನಗರ, ಶಿಡ್ಲಘಟ್ಟ ಟೌನ್ 3] ಮೌಲ ಬಿನ್ ಅಲ್ಲಾಬಕಾಶ್, ಗಾಂದೀನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದುಕೊಂಡು ಎಣಿಕೆ ಮಾಡಲಾಗಿ ಒಟ್ಟು 4560/-ರೂ ನಗದು ಹಣ ಇರುತ್ತೆ. ಸ್ಥಳದಲ್ಲಿ ಜೂಜಾಟಕ್ಕೆ ಬಳಸಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದ ಇಸ್ಟೀಟ್ ಎಲೆಗಳನ್ನು ಎಣಿಕೆ ಮಾಡಲಾಗಿ ಒಟ್ಟು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು ಇವುಗಳನ್ನು ಸಂಜೆ 4-45 ಗಂಟೆಯಿಂದ 5-30 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡು 03 ಜನ ಆಸಾಮಿಗಳು ಮತ್ತು ಮಾಲು ಸಮೇತ ಮಹಜರ್ ನೊಂದಿಗೆ ಶಿಡ್ಲಘಟ್ಟ ನಗರ ಠಾಣೆಗೆ ಬಂದಿದ್ದು, ಅಕ್ರಮವಾಗಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.