ದಿನಾಂಕ :25/05/2020 ರ ಅಪರಾಧ ಪ್ರಕರಣಗಳು

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.44/2020 ಕಲಂ. 279,337 ಐ.ಪಿ.ಸಿ :-

          ದಿನಾಂಕ:25/05/2020ರಂದು ಮದ್ಯಾಹ್ನ 14-30 ಗಂಟೆಗೆ ಪಿರ್ಯಾದಿದಾರರಾದ ನಾರಾಯಣಸ್ವಾಮಿ ಬಿನ್ ಪಾಪಣ್ಣ,35 ವರ್ಷ, ನಾಯಕರು, ಕಾರು ಚಾಲಕ ಕೆಲಸ,ವಾಸ: ಯಗವಕೋಟೆ ಗ್ರಾಮ, ಚಿಂತಾಮಣಿ ತಾಲ್ಲೂಕು.ಮೊ ನಂ:7989783324.ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಮ್ಮ ತಂದೆ ಪಾಪಣ್ಣ ತಾಯಿ ಜಯಮ್ಮ ರವರಿಗೆ ಒಟ್ಟು ಇಬ್ಬರು ಮಕ್ಕಳಿದ್ದು, 1 ನೇ ನಾನು ನಾರಾಯಣಸ್ವಾಮಿ, 2 ನೇ ನನ್ನ ತಮ್ಮ ಸುರೇಂದ್ರ 30 ವರ್ಷ ರವರಾಗಿರುತ್ತೇವೆ. ನಾನು ಆಂದ್ರಪ್ರದೆಶದ ಬಿ ಕೊತ್ತಕೋಟ ಪಕ್ಕದ ಚಿಂತಮಾಕಲಪಲ್ಲಿ ಗ್ರಾಮದಲ್ಲಿ ಮದುವೆ ಮಾಡಿಕೊಂಡಿದ್ದು, ನಾನು ಪ್ರತ್ಯೇಕವಾಗಿ ವಾಸವಾಗಿರುತ್ತೇನೆ.  ನನ್ನ ತಮ್ಮ ಸುರೇಂದ್ರ ನಮ್ಮ ತಂದೆ ತಾಯಿಯೊಂದಿಗೆ ವಾಸವಾಗಿರುತ್ತಾನೆ.  ನನ್ನ ತಮ್ಮ ಸುರೇಂದ್ರ ವ್ಯವಸಾಯ ವೃತ್ತಯಿಂದ ಜೀವನ ಮಾಡುತ್ತಿದ್ದು, ನಮ್ಮ ಕುಟುಂಬಕ್ಕೆ ಆಧಾರವಾಗಿದ್ದನು. ದಿನಾಂಕ: 19/05/2020 ರಂದು ಸಂಜೆ ಸುಮಾರು 6-00 ಗಂಟೆಯ ಸಮಯದಲ್ಲಿ ನಮ್ಮ ಗ್ರಾಮದ ನಾಗರಾಜ ಬಿನ್ ಲೇಟ್ ಓಬಳಪ್ಪರವರು ನನಗೆ        ಪೊನ್ ಮಾಡಿ ನಿನ್ನ ತಮ್ಮ ಸುರೇಂದ್ರ ರವರಿಗೆ  ಯಗವಕೋಟೆ ಬಸ್ ನಿಲ್ದಾಣದಲ್ಲಿ ಕೆಎ-67 0053 ನೊಂದಣಿ ಸಂಖ್ಯೆಯ ಬೊಲೆರೋ ಪಿಕಪ್ ವಾಹನದ ಚಾಲಕ ಡಿಕ್ಕಿಹೊಡೆದು ಅಪಘಾತವಾಗಿದೆ ಕೂಡಲೆ ಬಸ್ ನಿಲ್ದಾಣಕ್ಕೆ ಬಾ ಎಂದು ತಿಳಿಸಿದ್ದು, ನಾನು ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ನನ್ನ ತಮ್ಮ ತಲೆಯ ಬಲಭಾಗಕ್ಕೆ, ಬಲ ಕಣ್ಣಿನ ಹುಬ್ಬಿಗೆ , ಹಣೆಗೆ ತೀವ್ರ ರಕ್ತಗಾಯವಾಗಿದ್ದು, ಬಲಕಾಲಿಗೆ, ಬಲ ಮೊಣಕಾಲಿಗೆ ಬಲ ಕೈಗೆ ತರಚಿದ ಗಾಯಗಳಾಗಿದ್ದು, ನೋವಿನಿಂದ ಒದ್ದಾಡುತ್ತಿದ್ದನು. ನನ್ನ ತಮ್ಮನಿಗೆ ಅಪಘಾತಪಡಿಸಿದ ಕೆಎ-67 0053 ನೊಂದಣಿ ಸಂಖ್ಯೆಯ ಬೊಲೆರೋ ಪಿಕಪ್ ವಾಹನ ಮತ್ತು ನನ್ನ ತಮ್ಮ ಸುರೇಂದ್ರ ರವರು ಚಾಲನೆ ಮಾಡುತ್ತಿದ್ದ ಕೆಎ -07 ವೈ 7409 ಹೀರೋ ಪಾಷನ್ ಪ್ರೋ ದ್ವಿಚಕ್ರವಾಹನಗಳು ಸ್ಥಳದಲ್ಲಿಯೇ ಇದ್ದು, ನನ್ನ ತಮ್ಮ ಸುರೇಂದ್ರ ಚಾಲನೆ ಮಾಡುತ್ತಿದ್ದ ಕೆಎ -07 ವೈ 7409 ಹೀರೋ ಪಾಷನ್ ಪ್ರೋ ದ್ವಿಚಕ್ರವಾಹನದ  ಮುಂಭಾಗದ ಡೂಮ್ ಮಾಸ್ಕ್ , ರೀಡಿಂಗ್ಮೀಟರ್, ಮುಂಬಾಗದ ಟೈರ್ ಬಂಪರ್, ಎಡ ಭಾಗದ ಸೇಪ್ಟಿ ಗಾರ್ಡ, ಎಡ ಭಾಗದ ಶಾಕ್ ಅಪ್ ಗಾರ್ಡ, ಎಡ ಭಾಗದ ಪುಟ್ ರೆಸ್ಟ್. ಸಂಪೂರ್ಣ ಜಖಂಗೊಂಡು ಮುಂಭಾಗದ ಚಕ್ರ ಬೆಂಡಾಗಿತ್ತು. ನಂತರ ನನ್ನ ತಮ್ಮ ಸುರೇಂದ್ರ ರವರನ್ನು  ನಾನು, ಮತ್ತು  ಅಲ್ಲಿಯೇ ಸ್ಥಳದಲ್ಲಿದ್ದ ನಮ್ಮ ಗ್ರಾಮದ ನಾಗರಾಜ ಬಿನ್ ಲೇಟ್ ಓಬಳಪ್ಪ, ಹಾಗೂ ನಮ್ಮ ಗ್ರಾಮದ ವೀರನಾರಾಯಣಸ್ವಾಮಿ ಬಿನ್ ವೆಂಕಟರವಣಪ್ಪ ರವರುಗಳು ಉಪಚರಿಸಿ ಚಿಕಿತ್ಸೆಗಾಗಿ ಚಿಂತಾಮಣಿ ಸಕರ್ಾರಿ ಆಸ್ಪತ್ರೆಗೆ ದ್ವಿಚಕ್ರವಾಹನದಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಹೋಗಲು ತಿಳಿಸಿದ್ದು ಅದರಂತೆ ನಾನು ನನ್ನ ತಮ್ಮ ಗಾಯಾಳು ಸರೇಂದ್ರ ರವರನ್ನು ಅದೆ ದಿನ ರಾತ್ರಿ ಅಂಬುಲೆನ್ಸ್ ವಾಹನದಲ್ಲಿ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡಿಸಿದ್ದೆವು. ನಂತರ ವಿಚಾರ ತಿಳಿಯಲಾಗಿ  ದಿನಾಂಕ: 19/05/2020 ರಂದು ಸಂಜೆ ಸುಮಾರು 5-30 ಗಂಟೆಯ ಸಮಯದಲ್ಲಿ ನನ್ನ ತಮ್ಮ ಸುರೇಂದ್ರ ಮನೆಗೆ ಕುಡಿಯುವ ನೀರನ್ನು ತರಲು ಆತನ ಬಾಬತ್ತು ಕೆಎ -07 ವೈ 7409 ಹೀರೋ ಪಾಷನ್ ಪ್ರೋ ದ್ವಿಚಕ್ರವಾಹನದಲ್ಲಿ ಮನೆಯಿಂದ ಭೋವಿ ಕಾಲೋನಿ ಕಡೆಗೆ ಹೋಗುವ ರಸ್ತೆಯಲ್ಲಿರುವ ಜೀವ ಜಲದ ಬಳಿಗೆ  ಹೋಗುತ್ತಿದ್ದಾಗ ಚಿಂತಾಮಣಿ ಕಡೆಯಿಂದ  ಬರುತ್ತಿದ್ದ ಕೆಎ-67 0053 ನೊಂದಣಿ ಸಂಖ್ಯೆಯ ಬೊಲೆರೋ ಪಿಕಪ್ ವಾಹನವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ತಮ್ಮ ಸುರೇಂದ್ರ ರವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿರುತ್ತಾನೆಂದು ತಿಳಿಯಿತು. ನನ್ನ ತಮ್ಮ ಸುರೇಂದ್ರನಿಗೆ ಹಾರೈಕೆ ಮಾಡುವವರು ಯಾರು ಇಲ್ಲದ ಕಾರಣ ನಾನೇ ನನ್ನ ತಮ್ಮ ಸುರೇಂದ್ರ ರವರಿಗೆ ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನಿಡುತ್ತಿದ್ದು, ಮೇಲ್ಕಂಡ ದಿನ ನನ್ನ ತಮ್ಮನಿಗೆ ಅಪಘಾತಪಡಿಸಿದ ಕೆಎ-67 0053 ನೊಂದಣಿ ಸಂಖ್ಯೆಯ ಬೊಲೆರೋ ಪಿಕಪ್ ವಾಹನ ಮತ್ತು  ವಾಹನದ  ಚಾಲಕನ ಮೇಲೆ ಕಾನುನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.214/2020 ಕಲಂ. 323,324,504 ಐ.ಪಿ.ಸಿ :-

          ದಿನಾಂಕ: 24/05/2020 ರಂದು ಸಂಜೆ 7.00 ಗಂಟೆಗೆ ಮಹಮದ್ ಅಲ್ತಮಶ್ ಖಾನ್ ಬಿನ್ ಬೈಲಾಬ್ದೀನ್ ಖಾನ್, 25 ವರ್ಷ, ಮುಸ್ಲಿಂ ಜನಾಂಗ, ಸಾಪ್ಟ್ ವೇರ್ ಟೆಸ್ಟಿಂಗ್, ಅಂಜನಿ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಚಿಂತಾಮಣಿ ನಗರದ ಚೌಡರೆಡ್ಡಿಪಾಳ್ಯ ವಾಸಿಯಾದ ಅಬಿಲಾಷ್ ಬಿನ್ ನಾರಾಯಣಸ್ವಾಮಿ ಎಂಬುವನು ತನ್ನ ಸ್ನೇಹಿತನಾಗಿರುತ್ತಾನೆ. ಆತನು ಚಿಂತಾಮಣಿ ನಗರದಲ್ಲಿ ಒಬ್ಬ ಹುಡುಗಿಯನ್ನು ಪ್ರೀತಿ ಮಾಡುತ್ತಿರುತ್ತಾನೆ. ಅವನು ಮದ್ಯವ್ಯಸನಿಯಾಗಿದ್ದರಿಂದ ಈಗ್ಗೆ ಸುಮಾರು 2 ವರ್ಷಗಳ ಹಿಂದೆ ಆತನು ರೀಹ್ಯಾಬಿಲಿಟೇಷನ್ ಗೆ ಹೋಗಿದ್ದನು. ಆತನು ಪ್ರೀತಿ ಮಾಡುತ್ತಿರುವ ಹುಡುಗಿ ತನಗೆ ಪರಿಚಯವಿದ್ದು, ಆ ಸಮಯದಲ್ಲಿ ಆ ಹುಡುಗಿ ತನಗೆ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಮೆಸೇಜ್ ಮಾಡುತ್ತಿದ್ದಳು. ಸದರಿ ವಿಚಾರ ಇತ್ತೀಚೆಗೆ ಅಬಿಲಾಷ್ ರವರಿಗೆ ಗೊತ್ತಾಗಿದ್ದು ಮೂರು ವಾರಗಳ ಹಿಂದೆ ಆತನು ತನ್ನ ಮೇಲೆ ಗಲಾಟೆ ಮಾಡಿರುತ್ತಾನೆ. ಈ ದಿನ ದಿನಾಂಕ 24/05/2020 ರಂದು ಮದ್ಯಾಹ್ನ 1.00 ಗಂಟೆ ಸಮಯದಲ್ಲಿ ಅಬಿಲಾಷ್ ತನಗೆ ಪೋನ್ ಮಾಡಿ ನೀನು ಎಲ್ಲಿದ್ದೀಯಾ ಎಂದು ಕೇಳಿದಾಗ, ತಾನು ಮನೆಯಲ್ಲಿದ್ದೀನಿ ಎಂದು ತಿಳಿಸಿದ್ದು, ಆತನು ನಾನು ನಿಮ್ಮ ಮನೆಯ ಬಳಿ ಬರುತ್ತಿರುವುದಾಗಿ ತಿಳಿಸಿ ತಮ್ಮ ಮನೆಯ ಬಳಿ ಬಂದಿದ್ದು, ತಾವಿಬ್ಬರೂ ಮದ್ಯಾಹ್ನ 1.10 ಗಂಟೆ ಸಮಯದಲ್ಲಿ ತನ್ನ ದ್ವಿಚಕ್ರ ವಾಹನಗಳಲ್ಲಿ ಕನ್ನಂಪಲ್ಲಿ ಗ್ರಾಮದ ಹೊರವಲಯದಲ್ಲಿರುವ ನೀಲಗಿರಿ ತೋಪಿಗೆ ಹೋಗಿದ್ದು, ಅಬಿಲಾಷ್ ತನ್ನನ್ನು ಕುರಿತು ಏನೋ ಬೋಳಿ ನನ್ನ ಮಗನೇ ನೀನು ನಾನು ಇಲ್ಲದೆ ಇರುವಾಗ ನಾನು ಪ್ರೀತಿ ಮಾಡುತ್ತಿರುವ ಹುಡುಗಿಗೆ ಮೆಸೇಜ್ ಮಾಡಿ ಆಕೆಯೊಂದಿಗೆ ಸಲುಗೆಯಿಂದ ಮಾತನಾಡಿದ್ದೀಯಾ ಎಂದು ಕೆಟ್ಟ ಮಾತುಗಳಿಂದ ಬೈದು ಕೈ ಮುಷ್ಟಿಯಿಂದ ತನ್ನ ಮುಖಕ್ಕೆ ಪಂಚ್ ಮಾಡಿದ್ದರಿಂದ ತನ್ನ ಬಾಯಿಯಿಂದ ರಕ್ತ ಬಂದಿರುತ್ತೆ. ನಂತರ ಆತನು ತನ್ನ ದ್ವಿಚಕ್ರ ವಾಹನದಲ್ಲಿ ತಂದಿದ್ದ ಕಬ್ಬಿಣದ ರಾಡ್ ನ್ನು ತೆಗೆದುಕೊಂಡು ತನ್ನ ದವಡೆಗೆ ಹೊಡೆದಿದ್ದರಿಂದ ತನ್ನ ಬಾಯಿಯಲ್ಲಿನ ಕೆಳಭಾಗದ ಹಲ್ಲುಗಳಿಗೆ ಗಾಯವಾಗಿರುತ್ತೆ. ತಾನು ಕಿರುಚಿಕೊಂಡಾಗ ದಾರಿಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಬಂದು ಗಲಾಟೆಯನ್ನು ಬಿಡಿಸಿರುತ್ತಾರೆ. ನಂತರ ತಾನು ತನ್ನ ಸ್ನೇಹಿತನಾದ ರಾಘವೇಂದ್ರ ರವರಿಗೆ ಪೋನ್ ಮಾಡಿ ವಿಚಾರ ತಿಳಿಸಿದಾಗ ಆತನು ದ್ವಿಚಕ್ರ ವಾಹನದಲ್ಲಿ ಬಂದು ತನ್ನನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆ. ವೈದ್ಯರು ತನಗೆ ಪ್ರಥಮ ಚಿಕಿತ್ಸೆ ನೀಡಿ ಕೊರೋನಾ ವೈರಸ್ ಇರುವುದರಿಂದ ವೈದ್ಯರು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳದ ಕಾರಣ ತಾನು ಠಾಣೆಗೆ ಬಂದು ದೂರು ನೀಡುತ್ತಿದ್ದು, ಮೇಲ್ಕಂಡ ಅಬಿಲಾಷ್ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.79/2020 ಕಲಂ. ಮನುಷ್ಯ ಕಾಣೆ :-

          ದಿನಾಂಕ:25/05/2020 ರಂದು ಮದ್ಯಾಹ್ನ 12-30 ಘಂಟೆ ಸಮಯದಲ್ಲಿ ಪಿರ್ಯಾದಿದರರಾದ ಪವಿತ್ರ ಕೊಂ ಸತೀಸ್, 22 ವರ್ಷ, ಈಡಿಗ ಜನಾಂಗ, ವಾಸ: ಪೆರೇಸಂದ್ರ ಗ್ರಾಮ, ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:19/05/2020 ರಂದು ತನ್ನ ಗಂಡ ಸತೀಶ್,  24 ವರ್ಷ ರವರು ಕುಡಿದ ಮನೆಗೆ ಬಂದು ತನ್ನನ್ನು ಕೆಲಸಕ್ಕೆ ಹೋಗಬಾರದು ಎಂದು ಹೇಳಿದ್ದು ಈ ವಿಚಾರದಲ್ಲಿ ತನಗೆ  ಗಲಾಟೆಯನ್ನು ಮಾಡಿ ಹೊಡೆದಿದ್ದು ಈ ವಿಷಯವನ್ನು ತನ್ನ ಅಕ್ಕ ಮತ್ತು ತನ್ನ ಅತ್ತೆ ರವರಿಗೆ ತಿಳಿಸಿದ್ದು  ತನ್ನ ಅತ್ತೆ ರವರು ತನ್ನ ಗಂಡನಿಗೆ ಪೊನ್ ಮಾಡಿ ಈ ರೀತಿ ಗಲಾಟೆಯನ್ನು ಮಾಡಿಕೊಳ್ಳಬಾರದು ಎಂದು ಬೈದು ಬುದ್ದಿ ಹೇಳಿದ್ದು ತಾನು ತನ್ನ ಅಕ್ಕನ ಮನೆಗೆ ಶುಕ್ರವಾರ ಹೋದಾಗ ತನ್ನ ಅಕ್ಕ ರವರು ತನ್ನ ಗಂಡನಿಗೆ ಬುದ್ದಿಯನ್ನು ಹೇಳಿದ್ದು ನಂತರ ಭಾನುವಾರ ಮನೆಗೆ ಬಂದಿದ್ದು  ಮದ್ಯಾಹ್ನ 3-00 ಗಂಟೆಯಲ್ಲಿ ಹಾಲನ್ನು ತಂದಿದ್ದು ಹಾಲು ಹೊಡೆದುಹೋಗಿದ್ದು ಪುನಃ ಹಾಲು ತರುತ್ತೇನೆಂದು ಹೇಳಿ ಹೋದವನು ಮನೆಗೆ ವಾಪಸ್ಸು ಬಂದಿರುವುದಿಲ್ಲ ತನ್ನ ಗಂಡ ತನ್ನ ಅಕ್ಕ ಗಂಡನಿಗೆ ಪೊನ್ ಮಾಡಿ ತಾನು ಸಾಯುವುದಾಗಿ ಹೇಳಿದ್ದು ತಾನು ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ಎಲ್ಲೀಯೂ ಪತ್ತೆಯಾಗದ ಕಾರಣ ತನ್ನ ಗಂಡನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಾಗಿರುತ್ತೆ. ಕಾಣೆಯಾದ ಸತೀಶ ರವರ ಚಹರೆಗಳು  ಗೋದಿ ಮೈಬಣ್ಣ, 5-5 ಅಡಿಗಳು ಎತ್ತರ, ನೀಲಿ ಬಣ್ಣದ ಟೀ ಶರ್ಟ್, ಬ್ರೌನ್ ಬಣ್ಣದ ಜೀನ್ಸ್ ಪ್ಯಾಂಟ್, ವಿ.ಕೆ.ಸಿ ಕಂಪನಿಯ ಚಪ್ಪಲಿ ಧರಿಸಿದ್ದು, ಎಡಗೈ ಹೆಬ್ಬೆಟ್ಟಿನ ಮೇಲೆ ಗಾಯದ ಗುರುತು ಇದ್ದು, ಪೊನ್ ನಂ:7090804669,9353486880,9164269753 ಮತ್ತು KA-40 EC-6029 TVS ಕಂಪನಿಯ ದ್ವಿ ಚಕ್ರವಾಹವನ್ನು ಉಪಯೋಗಿಸುತ್ತೀರುತ್ತಾನೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.134/2020 ಕಲಂ. 279,337 ಐ.ಪಿ.ಸಿ :-

          ದಿನಾಂಕ:-24/05/2020 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎನ್.ರಾಮಚಂದ್ರ ಬಿನ್ ನಾರಾಯಣಸ್ವಾಮಿ, 38 ವರ್ಷ, ನಾಯಕರು, ಕೂಲಿ ಕೆಲಸ, ವಾಸ-ಸೀತಿ ಹೊಸೂರು ಗ್ರಾಮ, ವೇಮಗಲ್ ಹೋಬಳಿ, ಕೋಲಾರ ತಾ// ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತಂದೆಯವರಾದ ನಾರಾಯಣಸ್ವಾಮಿ ಹಾಗು ತನ್ನ ತಾಯಿಯವರಾದ ಲಕ್ಷ್ಮಮ್ಮ ರವರು ದಿನಾಂಕ 22/05/2020 ರಂದು ಬೆಳಿಗ್ಗೆ ದೇವನಹಳ್ಳಿ ತಾಲ್ಲೂಕು ಹೋಲೇರಹಳ್ಳಿ ಗ್ರಾಮದಲ್ಲಿರುವ ತನ್ನ ತಂಗಿಯಾದ ಶಾಂತಮ್ಮ ರವರ ಮನೆಗೆ ಹೋಗಲು ತಮ್ಮ ಬಾಬತ್ತು ಕೆಎ-07-ಡಬ್ಲೂ-1872 ನೊಂದಣಿ ಸಂಖ್ಯೆಯ ಟಿವಿಎಸ್ ಎಕ್ಸ್ ಎಲ್ ಹೆವಿಡ್ಯೂಟಿ ದ್ವಿ ಚಕ್ರ ವಾಹನದಲ್ಲಿ ತಮ್ಮ ಗ್ರಾಮದಿಂದ ಹೋಗಿರುತ್ತಾರೆ. ದಿನಾಂಕ 23/05/2020 ರಂದು ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ಯಾರೋ ಸಾರ್ವಜನಿಕರು ತನಗೆ ಪೋನ್ ಮಾಡಿ ತನ್ನ ತಂದೆ ಮತ್ತು ತನ್ನ ತಾಯಿಯವರಿಗೆ ತೊಟ್ಟಿಭಾವಿ ಗ್ರಾಮದ ಬಳಿ ಅಪಘಾತವಾಗಿದ್ದು ಚಿಕಿತ್ಸೆಗಾಗಿ ವಿಜಯಪುರದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ವಿಷಯ ತಿಳಿಸಿದ್ದು, ನಂತರ ತಾನು ಕೂಡಲೇ ವಿಜಯಪುರದ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ತನ್ನ ತಂದೆಯವರಾದ ನಾರಾಯಣಸ್ವಾಮಿ ಬಿನ್ ಚಿಕ್ಕ ಬೈರಪ್ಪ ( ಸುಮಾರು 58 ವರ್ಷ) ರವರ ಎರಡು ಕೈಗಳಿಗೆ, ಎರಡೂ ಕಾಲುಗಳಿಗೆ ಹಾಗು ತಲೆಗೆ ರಕ್ತಗಾಯವಾಗಿದ್ದು ತನ್ನ ತಾಯಿಯವರಾದ ಲಕ್ಷ್ಮಮ್ಮ ( ಸುಮಾರು 52 ವರ್ಷ) ರವರಿಗೆ ಬಲಮೊಣ ಕಾಲಿನ ಕೆಳಭಾಗದಲ್ಲಿ, ಸೊಂಟದ ಬಳಿ ರಕ್ತಗಾಯಗಳಾಗಿದ್ದು ಕೈ ಕಾಲುಗಳಿಗೆ ತರಚಿದ ಗಾಯಗಳಾಗಿದ್ದವು. ನಂತರ ತಾನು ಅಲ್ಲಿನ ಆಸ್ಪತ್ರೆಯ ವೈದ್ಯಾಧಿಕಾರಿಗಳ ಸಲಹೆಯ ಮೇರೆಗೆ ತನ್ನ ತಂದೆ ಹಾಗು ತನ್ನ ತಾಯಿಯವರನ್ನು ಇನ್ನು ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಗೌರವ ಆರ್ಥೋಪೆಟಿಕ್ ಖಾಸಗೀ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿದ್ದು, ತಾನು ತನ್ನ ತಂದೆಯವರನ್ನು ವಿಚಾರ ಮಾಡಲಾಗಿ ದಿನಾಂಕ 23/05/2020 ರಂದು ತಾನು ಮತ್ತು ತನ್ನ ತಾಯಿಯವರು ತನ್ನ ತಂಗಿಯ ಮನೆಯಿಂದ ವಾಪಸ್ಸು ತಮ್ಮ ಗ್ರಾಮಕ್ಕೆ ಬರಲು ತಾನು ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ತನ್ನ ತಾಯಿಯವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಹೋಲೇರಹಳ್ಳಿ ಗ್ರಾಮದಿಂದ ಬಂದಿದ್ದು, ಅದೇ ದಿನ ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ ತೊಟ್ಟಿಬಾವಿ ಗ್ರಾಮದ ಬಳಿ ತಾವು ದ್ವಿ ಚಕ್ರ ವಾಹನದಲ್ಲಿ ತಮ್ಮ ಗ್ರಾಮದ ಕಡೆಗೆ ಬರುತ್ತಿದ್ದಾಗ ಈ ಸಮಯದಲ್ಲಿ ತಮ್ಮ ಹಿಂಬದಿಯಿಂದ ಅಂದರೆ ವಿಜಯಪುರದ ಕಡೆಯಿಂದ ಬಂದ ಕೆಎ-06-ಸಿ-8010 ನೊಂದಣಿ ಸಂಖ್ಯೆಯ ಲಾರಿಯನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂಬದಿಯಿಂದ ತಮ್ಮ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿರುವುದಾಗಿ ವಿಷಯ ತಿಳಿಸಿರುತ್ತಾರೆ. ತನ್ನ ತಂದೆ ಹಾಗು ತನ್ನ ತಾಯಿಯವರು ಇನ್ನು ಓಳರೋಗಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಸಿಕೊಂಡಿದ್ದು ತಾನು ಅವರ ಆರೈಕೆಯಲ್ಲಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಸದರಿ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕೆಎ-06-ಸಿ-8010 ನೊಂದಣಿ ಸಂಖ್ಯೆಯ ಲಾರಿಯ ಚಾಲಕನ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.135/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ :-

          ದಿನಾಂಕ 24/05/2020 ರಂದು ಸಂಜೆ 6-15 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ಶಿವಣ್ಣ ಬಿನ್ ಮುನಿಯಪ್ಪ, 49 ವರ್ಷ, ಪ ಜಾತಿ, ವ್ಯಾಪಾರ, ವಾಸ-ಮಳ್ಳೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ಈ ದಿನ ದಿನಾಂಕ 24/05/2020 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ತನ್ನ ಹೆಂಡತಿಯಾದ ಶೋಭಾ ರವರು ತಮ್ಮ ಮನೆಯ ಮುಂದೆ ಇರುವ ಚರಂಡಿಯಲ್ಲಿ ಕೈ ಕಾಲುಗಳನ್ನು ತೊಳೆಯುತ್ತಿದ್ದಾಗ ತಮ್ಮ ಮನೆಯ ಮುಂದೆ ವಾಸವಾಗಿರುವ ತಮ್ಮ ಜನಾಂಗದವರೇ ಆದ ಮುನಿಕದಿರಮ್ಮ ಕೋಂ ಮುನಿಕೃಷ್ಣಪ್ಪ, ಗಾಯಿತ್ರಿ ಕೋಂ ಸದಾನಂದ, ಶೈಲಾ ಕೋಂ ಪ್ರಭಾಕರ ಎಂಬುವರು ತನ್ನ ಹೆಂಡತಿಯನ್ನು ಕುರಿತು ಬೀವರ್ಸಿ ಮುಂಡೆ ನೀವು ಹಾಕುವ ಕೊಳಚೆ ನೀರು ನಮ್ಮ ಮನೆಯ ಕಡೆ ಬರುತ್ತಿದೆ ಎಂದು ಕೆಟ್ಟ ಮಾತುಗಳಿಂದ ಬೈದು ತನ್ನ ಹೆಂಡತಿಯ ಕತ್ತನ್ನು ಹಿಸುಕಿ ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿ ಜಗಳ ಮಾಡುತ್ತಿದ್ದಾಗ ಜಗಳ ಬಿಡಿಸಲು ತಾನು ಅಡ್ಡ ಹೋದಾಗ ಮೇಲ್ಕಂಡ ಶೈಲಾ ರವರ ಗಂಡನಾದ ಪ್ರಭಾಕರ ಬಿನ್ ಮುನಿಕೃಷ್ಣಪ್ಪ ಎಂಬುವನು ಏಕಾಏಕಿ ದೊಣ್ಣೆಯನ್ನು ತಂದು ತನ್ನ ಮೈ ಮೇಲೆ ಹೊಡೆದು ನೋವುಂಟು ಮಾಡಿ ಮೇಲ್ಕಂಡವರು ತಮ್ಮನ್ನು ಕುರಿತು ನಿಮಗೆ ಒಂದು ಗತಿ ಕಾಣಿಸುವವರೆಗೆ ಸುಮ್ಮನಿರುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಜಗಳ ಮಾಡುತ್ತಿದ್ದಾಗ ತಮ್ಮ ಗ್ರಾಮದ ವಾಸಿಗಳಾದ ರಾಮಕೃಷ್ಣ ಬಿನ್ ಮುನಿಯಪ್ಪ, ನರಸಿಂಹಮೂರ್ತಿ ಬಿನ್ ಬಡಿಗಪ್ಪ ಮುಂತಾದವರು ಅಡ್ಡ ಬಂದು ಜಗಳ ಬಿಡಿಸಿರುತ್ತಾರೆ. ನಂತರ ತಾನು ಮತ್ತು ತನ್ನ ಹೆಂಡತಿ ದ್ವಿ ಚಕ್ರ ವಾಹನದಲ್ಲಿ ಬಂದು ಚಿಕಿತ್ಸೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೊಟ್ಟ ಹೇಳಿಕೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.136/2020 ಕಲಂ. 143,147,148,323,324,504,506 ರೆ/ವಿ 149 ಐ.ಪಿ.ಸಿ :-

          ದಿನಾಂಕ 24/05/2020 ರಂದು ರಾತ್ರಿ 8-00 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ರಾಜಕುಮಾರ್ ಬಿನ್ ಲೇಟ್ ಹನುಮಪ್ಪ, 39 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಕಾಕಚಕ್ಕೊಂಡಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಸರ್ವೇ ನಂಬರ್ 49 ರಲ್ಲಿ ಒಂದು ಎಕರೆ ಜಮೀನು ತಮ್ಮ ಬಾಬತ್ತು ಆಗಿದ್ದು, ಈ ಜಮೀನಿನಲ್ಲಿ ತಾನು ಹಿಪ್ಪು ನೇರಳೆ ಸೊಪ್ಪನ್ನು ಬೆಳೆಸಿದ್ದು, ಈ ದಿನ ದಿನಾಂಕ 24/05/2020 ರಂದು ಬೆಳಿಗ್ಗೆಯಿಂದ ತಮ್ಮ ಗ್ರಾಮದ ವಾಸಿ ಮಂಜುನಾಥ ಬಿನ್ ನಾರಾಯಣಸ್ವಾಮಿ ಎಂಬಾತನು ತಮ್ಮ ಜಮೀನಿನ ಪಕ್ಕದಲ್ಲಿರುವ ಸ್ಮಶಾನದಲ್ಲಿನ ಪಾಳು ಬಾವಿಯನ್ನು ಜೆ.ಸಿ.ಬಿ ಮುಖಾಂತರ ಮಣ್ಣನ್ನು ಹಾಕಿ ಬಾವಿ ಮುಚ್ಚುತ್ತಿದ್ದು ಅದರ ಧೂಳು ತಮ್ಮ ಜಮೀನಿನಲ್ಲಿರುವ ಸೊಪ್ಪಿನ ಮೇಲೆ ಬಿದ್ದಿದ್ದು ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ತಾನು ಜಮೀನಿನ ಬಳಿ ಹೋಗಿ ಧೂಳು ಸೊಪ್ಪಿನ ಮೇಲೆ ಬಿದ್ದಿರುವುದನ್ನು ಕಂಡು ಸ್ಮಶಾನದ ಬಳಿ ಹೋಗಿ ಮಂಜುನಾಥ ರವರಿಗೆ ನಾಳೆಯವರೆಗೆ ಕೆಲಸ ಮಾಡಿಸ ಬೇಡ ನಿಲ್ಲಿಸು ನಾನು ಸೊಪ್ಪು ಕೊಯ್ದು ಕೊಳ್ಳುತ್ತೇನೆ, ಧೂಳು ಸೊಪ್ಪಿನ ಮೇಲೆ ಬಿದ್ದರೆ ಹುಳುಗಳಿಗೆ ಹಾಕಲು ಆಗುವುದಿಲ್ಲ ಎಂದು ಹೇಳುತ್ತಿದ್ದಂತೆ ಆತನು ನೀನು ಯಾರೋ ನನ್ನ ಮಗನೇ ಕೆಲಸ ಮಾಡ ಬೇಡ ಎಂದು ಹೇಳುವುದಕ್ಕೆ ಎಂದು ತನ್ನ ಮೇಲೆ ಜಗಳ ತೆಗೆದು ಕೆಟ್ಟ ಮಾತುಗಳಿಂದ ಬೈದು ಆತನ ತಮ್ಮನಾದ ಶ್ರೀನಿವಾಸ್ ರವರಿಗೆ ಪೋನ್ ಮಾಡಿದಾಗ ಶ್ರೀನಿವಾಸ್ ತನ್ನ ಜೊತೆಯಲ್ಲಿ ಆತನ ತಮ್ಮನಾದ ರವಿಕುಮಾರ್, ಮಂಜುನಾಥ ರವರ ಮಗನಾದ ಸುಮೀತ್, ಬಾಮೈದನಾದ ಮೋಹನ್ ಬಿನ್ ಲಕ್ಷ್ಮಣ ರೆಡ್ಡಿ ರವರನ್ನು ಕರೆದುಕೊಂಡು ಬಂದಿದ್ದು, ಆಗ ಎಲ್ಲರೂ ಅಕ್ರಮವಾಗಿ ಗುಂಪು ಕಟ್ಟಿಕೊಂಡು ತನ್ನ ಮೇಲೆ ಜಗಳ ತೆಗೆದು ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿ ಆ ಪೈಕಿ ರವಿಕುಮಾರ್ ಎಂಬುವನು ದೊಣ್ಣೆಯಿಂದ ತನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದಾಗ ತಾನು ಕೆಳಗೆ ಬಿದ್ದು ಹೋಗಿದ್ದು, ಆಗ ಮೇಲ್ಕಂಡವರು ತನ್ನನ್ನು ಕುರಿತು ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿನಗೆ ಸಾಯಿಸಿ ಬಿಡುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ನಂತರ ತಾನು ತನ್ನ ತಮ್ಮ ಶಿವಕುಮಾರ್ ರವರಿಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ತನ್ನ ತಮ್ಮ ಮತ್ತು ತನ್ನ ಮಾವ ರಾಜಣ್ಣ ರವರು ಸ್ಥಳಕ್ಕೆ ಬಂದು ತನ್ನನ್ನು ಉಪಚರಿಸಿ ಯಾವುದೋ ವಾಹನದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಆದ ಕಾರಣ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ಹೇಳಿಕೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.137/2020 ಕಲಂ. 143,323,504,506 ರೆ/ವಿ 149 ಐ.ಪಿ.ಸಿ :-

          ದಿನಾಂಕ 24/05/2020 ರಂದು ರಾತ್ರಿ 10-00 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ಪ್ರಭಾಕರ ಬಿನ್ ಮುನಿಕೃಷ್ಣಪ್ಪ, 38 ವರ್ಷ, ಪ ಜಾತಿ, ವ್ಯಾಪಾರ, ವಾಸ-ಮಳ್ಳೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ಈ ದಿನ ದಿನಾಂಕ 24/05/2020 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ತಮ್ಮ ಮನೆಯ ಮುಂದೆ ವಾಸವಾಗಿರುವ ತಮ್ಮ ಜನಾಂಗದವರೇ ಆದ ಶೋಭಾ ಕೋಂ ಶಿವಪ್ಪ ಎಂಬಾಕೆಯು ಚರಂಡಿಯಲ್ಲಿ ಕೈ ಕಾಲುಗಳನ್ನು ತೊಳೆಯುತ್ತಿದ್ದಾಗ ಆಗ ತಾನು ಶೋಭಾ ರವರನ್ನು ಕುರಿತು ನೀವು ಚರಂಡಿಯಲ್ಲಿ ನೀರು ಹಾಕುವುದರಿಂದ ಆ ನೀರು ನಮ್ಮ ಮನೆಯ ಕಡೆ ಬಂದು ಮನೆಯಲ್ಲಿ ವಾಸನೆ ಬರುತ್ತಿದೆ ಚರಂಡಿಯಲ್ಲಿ ಗಲೀಜು ಮಾಡ ಬೇಡಿ ಎಂದಾಗ ಶೈಲಾ ರವರ ಗಂಡನಾದ ಶಿವಪ್ಪ ಬಿನ್ ಮುನಿಯಪ್ಪ, ಶೋಭಾ ಕೋಂ ಶಿವಪ್ಪ, ಅಖಿಲ್ ಬಿನ್ ಶಿವಪ್ಪ, ಮನೋಹರ್ ಬಿನ್ ಶ್ರೀನಿವಾಸ್, ಪ್ರವೀಣ್ ಬಿನ್ ರಾಘವೇಂದ್ರ, ಚರಣ್ ಬಿನ್ ರಾಘವೇಂದ್ರ, ಸರಸ್ವತಮ್ಮ ಕೋಂ ಶ್ರೀನಿವಾಸ್, ಶ್ರೀನಿವಾಸ್ ಬಿನ್ ಮುನಿಯಪ್ಪ ರವರು ಅಕ್ರಮವಾಗಿ ಗುಂಪುಕಟ್ಟಿಕೊಂಡು ನೀನು ಯಾವನೋ ಲೋಫರ್ ನನ್ನ ಮಗ ನಮಗೆ ಬುದ್ದಿ ಹೇಳಲಿಕ್ಕೆ ಎಂದು ಕೆಟ್ಟ ಕೆಟ್ಟ ಮಾತುಗಳಿಂದ ಬೈದು ಆ ಪೈಕಿ ಶಿವಪ್ಪ, ಶೋಭಾ, ಮನೋಹರ್, ಪ್ರವೀಣ್ ರವರು ಕೈಗಳಿಂದ ತನ್ನ ಎದೆಗೆ , ಬೆನ್ನಿಗೆ, ತಲೆಗೆ ಹೊಡೆದು ನೋವುಂಟು ಮಾಡಿ ಜಗಳ ಮಾಡುತ್ತಿದ್ದಾಗ ತಮ್ಮ ಗ್ರಾಮದ ವಾಸಿಗಳಾದ ಸೂರ್ಯ ನಾರಾಯಣಪ್ಪ, ಮುರಳಿ ಹಾಗು ಇತರರು ಅಡ್ಡ ಬಂದು ಜಗಳವನ್ನು ಬಿಡಿಸಿದಾಗ ಮೇಲ್ಕಂಡವರು ತನ್ನನ್ನು ಕುರಿತು ನಿನಗೆ ಒಂದು ಗತಿ ಕಾಣಿಸುವವರೆಗೆ ಸುಮ್ಮನಿರುವುದಿಲ್ಲ ಎಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ನಂತರ ತಾನು ದ್ವಿ ಚಕ್ರ ವಾಹನದಲ್ಲಿ ಬಂದು ಚಿಕಿತ್ಸೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ಹೇಳಿಕೆ.