ದಿನಾಂಕ :25/01/2021 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 22/2021 ಕಲಂ 279,337 ಐಪಿಸಿ :-

ದಿನಾಂಕ: 25/01/2021 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ನನ್ನ ಅಣ್ಣನಾದ ರಂಗಪ್ಪ ಬಿನ್ ಲೇಟ್ ಸುಬ್ಬಣ್ಣ, 50 ವರ್ಷ ರವರು ಬಾಗೇಪಲ್ಲಿ ಟೌನ್ ನಲ್ಲಿ ವಾಸವಾಗಿರುತ್ತಾರೆ. ದಿನಾಂಕ 24/01/2021 ರಂದು ರಾತ್ರಿ ಸುಮಾರು 7-45 ಗಂಟೆಗೆ ತಮ್ಮ ಮನೆಯಿಂದ ಹೊರಟು, ಬಾಗೇಪಲ್ಲಿ ತಾಲ್ಲೂಕು ಗುಂಟಿಗಾನಹಳ್ಳಿ ಗ್ರಾಮದ ಬಳಿ ಇರುವ ಜಮೀನಿನಲ್ಲಿರುವ ಆಲೂಗೆಡ್ಡೆ ಬೆಳೆಗೆ ನೀರನ್ನು ಕಟ್ಟಿ ಬರುವುದಾಗಿ ತನ್ನ ಬಾಬತ್ತು ಕೆ.ಎ-40-ಡಬ್ಲ್ಯೂ-8490 ದ್ವಿ ಚಕ್ರ ವಾಹನದಲ್ಲಿ  ಹೊರಟಿರುತ್ತಾರೆ. ನಂತರ ರಾತ್ರಿ ಸುಮಾರು 8-15 ಗಂಟೆ ಸಮಯದಲ್ಲಿ ನನ್ನ ಅಣ್ಣನ ಮಗನಾದ ಅಂಬರೀಶ ಬಿನ್ ರಂಗಪ್ಪ ರವರು ನನಗೆ ಪೋನ್ ಮಾಡಿ ರಂಗಪ್ಪನಿಗೆ ಕಾರಕೂರು ಕ್ರಾಸ್ ಬಳಿ ಇರುವ ಪೆಟ್ರೋಲ್ ಬಂಕ್ ಮುಂಭಾಗ ರಸ್ತೆಯಲ್ಲಿ ಅಪಘಾತವಾಗಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ.  ತಕ್ಷಣ ನಾನು ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿತ್ತು, ನಂತರ ವಿಚಾರ ಮಾಡಿ ತಿಳಿಯಲಾಗಿ ನನ್ನ ಅಣ್ಣನಾದ ರಂಗಪ್ಪ ರವರು ದಿನಾಂಕ 24/01/2021 ರಂದು ರಾತ್ರಿ ಸುಮಾರು 8-10 ಗಂಟೆಯಲ್ಲಿ ಗುಂಟಿಗಾನಹಳ್ಳಿ ಬಳಿ ತನ್ನ ಜಮೀನಿಗೆ ಹೋಗಲು  ತನ್ನ ಬಾಬತ್ತು ಕೆ.ಎ-40-ಡಬ್ಲ್ಯೂ-8490 ಹೀರೋ ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನದಲ್ಲಿ ಬಾಗೇಪಲ್ಲಿಯಿಂದ  ಚಿಂತಾಮಣಿಗೆ ಹೋಗುವ ರಸ್ತೆಯಲ್ಲಿ ಕಾರಕೂರು ಕ್ರಾಸ್ ಬಳಿ ಇರುವ ಪೆಟ್ರೋಲ್ ಬಂಕ್ ಮುಂಭಾಗ ಎಡಬದಿಯಲ್ಲಿ ಹೋಗುವಾಗ ಎದುರಿನಿಂದ ಬಂದ ಕೆ.ಎ-04-ಇ.ಡಬ್ಲ್ಯೂ-4563 ದ್ವಿ ಚಕ್ರ ವಾಹನದ ಸವಾರ ತನ್ನ ದ್ವಿ ಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಅಣ್ಣ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಜಖಂ ಗೊಂಡು, ನನ್ನ ಅಣ್ಣ ರಂಗಪ್ಪನಿಗೆ ತಲೆಗೆ, ಮುಖಕ್ಕೆ ಕಾಲುಗಳಿಗೆ ರಕ್ತ ಗಾಯಗಳಾಗಿದ್ದು ಹಾಗೂ ಕಾಲುಗಳಿಗೂ ಸಹ ಗಾಯಗಳಾಗಿದ್ದು, ಬಾಗೇಪಲ್ಲಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಪ್ರೋಲೈಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಿರುತ್ತೇನೆ. ಆದ್ದರಿಂದ ಕೆ.ಎ-04-ಇ.ಡಬ್ಲ್ಯೂ-4563 ದ್ವಿ ಚಕ್ರ ವಾಹನದ ಸವಾರನ ಮೇಲೆ ಕಾನೂನು ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರಾಗಿರುತ್ತೆ.

  1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 05/2021 ಕಲಂ. 279,337 ಐಪಿಸಿ ರೆ/ವಿ 187 ಐಎಂವಿ ಆಕ್ಟ್ :-

ದಿನಾಂಕ:-24/01/2021 ರಂದು ಸಂಜೆ 6-45 ಗಂಟೆಯ ಸಮಯದಲ್ಲಿ ಪಿರ್ಯಾಧಿದಾರರಾದ ಶ್ರೀ. ಪ್ರಕಾಶ್ ಬಿನ್ ವೆಂಕಟರಾಯಪ್ಪ 43 ವರ್ಷ, ಆದಿ ಕರ್ನಾಟಕ ಜನಾಂಗ, ಬಿಲ್ಡಿಂಗ್ ಕಾಂಟ್ರ್ಯಾಕ್ಟ್ ವೃತ್ತಿ, ವಾಸ:-ವಾರ್ಡ್ ನಂ-07, ನಿಮ್ಮಾಕಲಕುಂಟೆ, ಚಿಕ್ಕಬಳ್ಳಾಪುರ ಟೌನ್ ಮತ್ತು ತಾಲ್ಲೂಕು ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ತಮ್ಮ ಮಾವ ಶ್ರೀ. ಕಳಸಪ್ಪ ಬಿನ್ ಲೇಟ್ ಗುರ್ರಪ್ಪ 52 ವರ್ಷ, ಆದಿ ಕರ್ನಾಟಕ ಜನಾಂಗ, ಅಮಾಲಿ ವೃತ್ತಿ, ವಾರ್ಡ್ ನಂ-07, ನಿಮ್ಮಾಕಲಕುಂಟೆ, ಚಿಕ್ಕಬಳ್ಳಾಪುರ ಟೌನ್ ಮತ್ತು ತಾಲ್ಲೂಕು. ರವರು ಎಂದಿನಂತೆ ದಿನಾಂಕ:-24/01/2021 ರಂದು ಚಿಕ್ಕಬಳ್ಳಾಪುರ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಅಮಾಲೀ ಕೆಲಸಕ್ಕೆಂದು ಹೋಗಿ ಎ.ಪಿ.ಎಂ.ಸಿ ಮಾರುಕಟ್ಟೆಯ ಮುಂಭಾಗದಲ್ಲಿದ್ದ ಮಂಜು ಮೆಸ್ ಟಿಫನ್ ಸೆಂಟರ್ ನಲ್ಲಿ ಟಿಫನ್ ಮಾಡಿಕೊಂಡು ವಾಪಸ್ಸು ಎ.ಪಿ.ಎಂ.ಸಿ ಮಾರುಕಟ್ಟೆಗೆ ಹೋಗಲು ಸುಮಾರು ಬೆಳಿಗ್ಗೆ 11-15 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ – ಗೌರಿಬಿದನೂರು ಎನ್.ಎಚ್-234 ಎಂ.ಜಿ ರಸ್ತೆಯ ಎ.ಪಿ.ಎಂ.ಸಿ ಮಾರುಕಟ್ಟೆಯ ಬಳಿ ಇರುವ ಮಂಜು ಮೆಸ್ ಟಿಫನ್ ಸೆಂಟರ್ ಮುಂಭಾಗದ ಠಾರ್ ರಸ್ತೆಯನ್ನು ದಾಟುತ್ತಿದ್ದಾಗ ಚಿಕ್ಕಬಳ್ಳಾಪುರ ಕಡೆಯಿಂದ ಬಂದ KA-40-EF-2093 ರ ರಾಯಲ್ ಎನ್ಫೀಲ್ಡ್ ದ್ವಿಚಕ್ರವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ರಸ್ತೆಯನ್ನು ದಾಟುತ್ತಿದ್ದ ತಮ್ಮ ಮಾವ ಕಳಸಪ್ಪ ರವರಿಗೆ ಡಿಕ್ಕೆ ಹೊಡೆಸಿದ ಪರಿಣಾಮ ತಮ್ಮ ಮಾವ ಕಳಸಪ್ಪ ರವರು ಠಾರ್ ರಸ್ತೆಯಲ್ಲಿ ಬಿದ್ದಾಗ ಮೂಗಿನಲ್ಲಿ ರಕ್ತ ಬಂದು, ತಲೆಯ ಹಿಂಭಾಗ ಹಾಗೂ ಕೈ-ಕಾಲುಗಳಿಗೆ ರಕ್ತ ಗಾಯಗಳಾಗಿ ಅಲ್ಲಿನ ಸ್ಥಳೀಯರ ಸಹಾಯದಿಂದ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸುತ್ತಿರುವುದಾಗಿ ಸ್ಥಳದಲ್ಲಿಯೇ ಇದ್ದ ಶ್ರೀ.ಚಂದ್ರು ಬಿನ್ ಲಕ್ಷ್ಮಯ್ಯ 40 ವರ್ಷ, ನಿಮ್ಮಾಕಲಕುಂಟೆ, ಚಿಕ್ಕಬಳ್ಳಾಪುರ ಟೌನ್ ರವರು ತನಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದು, ತಾನು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ತಮ್ಮ ಮಾವ ಕಳಸಪ್ಪ ರವರಿಗೆ ಹೆಚ್ಚಿನ ಗಾಯಗಳಾಗಿದ್ದರಿಂದ ವೈಧ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬ್ಯೂಲೆನ್ಸ್ ವಾಹನದಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಸದರಿ ಅಪಘಾತ ಪಡಿಸಿದ ದ್ವಿಚಕ್ರವಾಹನ ಸವಾರನ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಸದರಿ ಅಪಘಾತ ಪಡಿಸಿದ ದ್ವಿಚಕ್ರವಾಹನ ಸವಾರ ಅಪಘಾತ ಸ್ಥಳದಿಂದ ವಾಹನ ಸಮೇತ ಪರಾರಿಯಾಗಿದ್ದು, ಸದರಿ ಅಪಘಾತಕ್ಕೆ ಕಾರಣನಾದ KA-40-EF-2093 ರ ರಾಯಲ್ ಎನ್ಫೀಲ್ಡ್ ದ್ವಿಚಕ್ರವಾಹನ ಹಾಗೂ ಸವಾರನನ್ನು ಪತ್ತೇ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಗಣಕೀಕೃತ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 38/2021 ಕಲಂ 15(ಎ) ಕರ್ನಾಟಕ ಅಬಕಾರಿ ಕಾಯ್ದೆ :-

ದಿನಾಂಕ :24/01/2021 ರಂದು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ಸಂದೀಪ್ ಕುಮಾರ್  ಸಿ.ಹೆಚ್.ಸಿ-249  ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ :24/01/2021 ರಂದು ಬೆಳಿಗ್ಗೆ ತಾನು ಮತ್ತು ಠಾಣೆಯ ಸಿ.ಹೆಚ್.ಸಿ 152 ನಾಗರಾಜ್  ಮಾನ್ಯ ಪಿ.ಎಸ್.ಐ ರವರ ಸೂಚನೆಯಂತೆ ಗಸ್ತು ಕರ್ತವ್ಯಕ್ಕೆ ಹೋಗಿದ್ದು, ಠಾಣಾ ವ್ಯಾಪ್ತಿಯ ಹಿರೇಕಟ್ಟಿಗೇನಹಳ್ಳಿ, ಜೀಡರಹಳ್ಳಿ ಗ್ರಾಮಗಳ ಕಡೆಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಮದ್ಯಾಹ್ನ 12-00 ಗಂಟೆಗೆ ಮಾದರಕಲ್ಲು ಗ್ರಾಮದ ಬಳಿಗೆ ಹೋದಾಗ ಮಾದರಕಲ್ಲು ಗ್ರಾಮದ ವಾಸಿ ಮುನಿಯಪ್ಪ ಬಿನ್ ನಾರಾಯಣಪ್ಪ ಎಂಬುವರು ಅವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮೀದಾರರಿಂದ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಧಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಸ್ಥಳದಿಂದ ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ಮುನಿಯಪ್ಪ ಬಿನ್ ನಾರಾಯಣಪ್ಪ 65 ವರ್ಷ, ಗೊಲ್ಲರು,  ಜಿರಾಯ್ತಿ, ವಾಸ ಮಾದರಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1)  ಓಲ್ಡ್ ಟಾವರಿನ್ ವಿಸ್ಕಿ 180 ಎಂ .ಎಲ್ 04 ಟೆಟ್ರಾ ಪ್ಯಾಕೆಟ್ ಗಳು 2)ಹೈವಾಡ್ಡ್ ಚೀಯರ್ಸ್ ವಿಸ್ಕಿ 90 ಎಂ.ಎಲ್  04 ಟೆಟ್ರಾ ಪ್ಯಾಕೆಟ್ ಗಳು 3) ಒಂದು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಒಂದು ಖಾಲಿ ನೀರಿನ ಪ್ಲಾಸ್ಟಿಕ್ ಬಾಟಲ್ 4) 02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಮದ್ಯಾಹ್ನ 12-00 ಗಂಟೆಯಿಂದ ಮದ್ಯಾಹ್ನ 13-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೇವೆ. ಆದ್ದರಿಂದ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ ಮುನಿರೆಡ್ಡಿ ಬಿನ್ ನಾರೆಪ್ಪ ರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿದೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 39/2021 ಕಲಂ 15(ಎ) ಕರ್ನಾಟಕ ಅಬಕಾರಿ ಕಾಯ್ದೆ :-

ದಿನಾಂಕ :24/01/2021 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಸಂದೀಪ್ ಕುಮಾರ್  ಸಿ.ಹೆಚ್.ಸಿ-249  ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:24/01/2021 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ನಾನು, ಸಿ.ಪಿ.ಸಿ-75 ಆಂಜನೇಯರೆಡ್ಡಿ ರವರು ಠಾಣಾ ಸರಹದ್ದಿನ ತಳಗವಾರ, ಟಿ.ಹೊಸಹಳ್ಳಿ, ವೈಜಕೂರು ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 2-00 ಗಂಟೆಯ ಸಮಯದಲ್ಲಿ ಹಿರೇಪಾಳ್ಯ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ವಿಶ್ವನಾಥ ಬಿನ್ ಬಯ್ಯಣ್ಣ ರವರು ತನ್ನ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಹಿರೇಪಾಳ್ಯ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ  ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ವಿಶ್ವನಾಥ ಬಿನ್ ಬಯ್ಯಣ್ಣ, 40 ವರ್ಷ, ಗೊಲ್ಲರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಹಿರೇಪಾಳ್ಯ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 2-15 ರಿಂದ 3-00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ವಿಶ್ವನಾಥ ಬಿನ್ ಬಯ್ಯಣ್ಣರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 40/2021 ಕಲಂ 15(ಎ) ಕರ್ನಾಟಕ ಅಬಕಾರಿ ಕಾಯ್ದೆ :-

ದಿನಾಂಕ: 25/01/2021 ರಂದು ಬೆಳಿಗ್ಗೆ 10.30 ಗಂಟೆಗೆ ಠಾಣೆಯ ಸಿ.ಹೆಚ್.ಸಿ-03 ರಾಜಣ್ಣ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 25/01/2021 ರಂದು ಬೆಳಿಗ್ಗೆ ತಾನು ಮಾನ್ಯ ಪಿ.ಎಸ್.ಐ ರವರ ಸೂಚನೆಯಂತೆ 36-ನೇ ಗ್ರಾಮಗಸ್ತು ವ್ಯಾಪ್ತಿಯಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಗಸ್ತು ಕರ್ತವ್ಯಕ್ಕೆ ಹೋಗಿದ್ದು, 36-ನೇ ಗ್ರಾಮಗಸ್ತು ವ್ಯಾಪ್ತಿಗೆ ಬರುವ ಪೆರಮಾಚನಹಳ್ಳಿ ಗ್ರಾಮದಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಬೆಳಿಗ್ಗೆ 08-30 ಗಂಟೆಗೆ ಕೆಂದನಹಳ್ಳಿ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ವಾಸಿ ರಂಗಪ್ಪ ಬಿನ್ ಪಿಳ್ಳಯ್ಯ ಎಂಬುವರು ಗ್ರಾಮದಲ್ಲಿ ಅವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮೀದಾರರಿಂದ ತನಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಾನು ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಧಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಹಾಗೂ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಸ್ಥಳದಿಂದ ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ರಂಗಪ್ಪ ಬಿನ್ ಪಿಳ್ಳಯ್ಯ, 55 ವರ್ಷ, ನಾಯಕರು, ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ, ಕೆಂದನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ.  ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 90 ML ನ 03 ಟೆಟ್ರಾ ಪ್ಯಾಕೆಟ್ ಗಳು, 2) ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 90 ML ನ 02 ಮದ್ಯದ ಟೆಟ್ರಾ ಪಾಕೇಟ್ ಗಳು, 3) ಒಂದು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಒಂದು ಖಾಲಿ ಪ್ಲಾಸ್ಟಿಕ್ ಬಾಟಲ್ 4) 02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಬೆಳಿಗ್ಗೆ 09-00 ಗಂಟೆಯಿಂದ ಬೆಳಿಗ್ಗೆ 10-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೇವೆ. ಆದ್ದರಿಂದ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ ರಂಗಪ್ಪ ಬಿನ್ ಪಿಳ್ಳಯ್ಯ ರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 41/2021 ಕಲಂ 15(ಎ) ಕರ್ನಾಟಕ ಅಬಕಾರಿ ಕಾಯ್ದೆ :-

ದಿನಾಂಕ: 25/01/2021 ರಂದು ಬೆಳಿಗ್ಗೆ 11.00 ಗಂಟೆಗೆ ಠಾಣೆಯ ಸಿ.ಹೆಚ್.ಸಿ-09 ಅಮರೇಶ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 25/01/2021 ರಂದು ಪಿಎಸ್ಐ ರವರು ಗ್ರಾಮಗಳ ಗಸ್ತಿಗಾಗಿ ಹೆಚ್.ಸಿ 09 ಅಮರೇಶ್  ಆದ ತನ್ನನ್ನು ನೇಮಿಸಿ ಕಳುಸಿದ್ದು, ಅದರಂತೆ ತಾನು ಕಲ್ಲಹಳ್ಳಿ, ಆಲಂಬಗಿರಿ ಕಡೆ ಗಸ್ತು ಮಾಡಿಕೊಂಡು ಬೆಳಿಗ್ಗೆ 9-00  ಗಂಟೆಗೆ ಮುನಗನಹಳ್ಳಿ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ವಾಸಿ ಆಂಜಮ್ಮ ಕೊಂ ಲೇಟ್ ಲಕ್ಷ್ಮಯ್ಯ ಎಂಬುವವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತನಗೆ ಖಚಿತ ಮಾಹಿತಿ ದೊರೆತಿದ್ದು, ಸದರಿ ಅಂಗಡಿಯ ಬಳಿ ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಆಂಜಮ್ಮ ಕೊಂ ಲೇಟ್ ಲಕ್ಷ್ಮಯ್ಯ ರವರ ಅಂಗಡಿಯ ಮುಂಭಾಗ ಹೋಗುವಷ್ಟರಲ್ಲಿ ಸದರಿ ಅಂಗಡಿಯ ಮುಂದೆ ಕುಳಿತಿದ್ದ ವ್ಯಕ್ತಿಗಳು  ಓಡಿ ಹೋಗಿದ್ದು, ಅಂಗಡಿಯ ಮುಂಭಾಗದಲ್ಲಿ ನೋಡಲಾಗಿ 1) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 3 ಟೆಟ್ರಾ ಪಾಕೆಟ್ ಗಳು, 2) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು 3) ಒಂದು ಲೀಟರ್ ನ ಒಂದು ನೀರಿನ ಬಾಟಲಿಗಳಿದ್ದು, 4) ಓಪನ್ ಆಗಿದ್ದ 90 ಎಂ ಎಲ್ ನ ಹೇವಾರ್ಡ್ಸ್ ಕಂಪನಿಯ ಚೀರ್ಸ್ ವಿಸ್ಕಿ 2 ಟೆಟ್ರಾ ಪಾಕೇಟ್ ಗಳಿದ್ದವು. ಅಲ್ಲಿದ್ದ ಸಾರ್ವಜನಿಕರನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ಆಂಜಮ್ಮ ಕೊಂ ಲೇಟ್ ಲಕ್ಷ್ಮಯ್ಯ  65 ವರ್ಷ, ಎಸ್.ಸಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಮುನಗನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು, ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಬೆಳಿಗ್ಗೆ 9-30 ರಿಂದ 10-30 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ಎಲ್ಲಾ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲುಗಳು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ತನ್ನ ಚಿಲ್ಲರೆ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಆಂಜಮ್ಮ ಕೊಂ ಲೇಟ್ ಲಕ್ಷ್ಮಯ್ಯ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 42/2021 ಕಲಂ. 279,337 ಐಪಿಸಿ ರೆ/ವಿ 187 ಐಎಂವಿ ಆಕ್ಟ್ :-

ದಿನಾಂಕ: 25/01/2021 ರಂದು ಬೆಳಿಗ್ಗೆ 11.30 ಗಂಟೆಗೆ ನವೀನ್ ಕುಮಾರ್ ಬಿನ್ ಲೇಟ್ ನಾರಾಯಣಸ್ವಾಮಿ, 31 ವರ್ಷ, ವಕ್ಕಲಿಗರು, ಖಾಸಗಿ ಕಂಪನಿಯಲ್ಲಿ ಕೆಲಸ, ದೊಡ್ಡಗಂಜೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 19/12/2020 ರಂದು ಬೆಳಿಗ್ಗೆ ಸುಮಾರು 10.10 ಗಂಟೆ ಸಮಯದಲ್ಲಿ ತನ್ನ ಮಾವನ ಮಗನಾದ ಚರಣ್ ಬಿನ್ ಶ್ರೀನಿವಾಸರೆಡ್ಡಿ, 16 ವರ್ಷ, ದೊಡ್ಡಗಂಜೂರು ಗ್ರಾಮ ಮತ್ತು ಪೃಥ್ವಿ ಬಿನ್ ನಾಗರಾಜುರವರು ಕೆಲಸದ ನಿಮಿತ್ತ ಮಾಡಿಕೆರೆ ಕ್ರಾಸ್ ಗೆ ಹೋಗಿಬರುವುದಾಗಿ ತನ್ನ ಮಾವ ಶ್ರೀನಿವಾಸರೆಡ್ಡಿರವರ ಬಾಬತ್ತು ಕೆಎ-07 ಜೆ-5519 ನೊಂದಣಿ ಸಂಖ್ಯೆ ಹಿರೋ ಹೊಂಡಾ ಸಿಡಿ-100 ದ್ವಿಚಕ್ರ ವಾಹನದಲ್ಲಿ ಪೃಥ್ವಿರವರು ಸದರಿ ದ್ವಿಚಕ್ರ ವಾಹವನ್ನು ಚಾಲನೆ ಮಾಡಿಕೊಂಡು ಹಿಂಬದಿಯಲ್ಲಿ ಚರಣ್ ರವರು ಕೂರಿಸಿಕೊಂಡು ಹೋಗಿರುತ್ತಾರೆ. ನಂತರ ಅದೇ ದಿನ ಬೆಳಿಗ್ಗೆ 10.40 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ನಾಗಿರೆಡ್ಡಿ ಬಿನ್ ತಮ್ಮರೆಡ್ಡಿರವರು ತನಗೆ ಪೋನ್ ಮಾಡಿ ಶ್ರೀನಿವಾಸಪುರ-ಚಿಂತಾಮಣಿ ಮಾರ್ಗ ಮದ್ಯೆ ರಮೇಶ್ ರವರ ಜಮೀನಿನ ಮುಂದೆ ಚರಣ್ ರವರಿಗೆ ರಸ್ತೆ ಅಪಘಾತವಾಗಿದ್ದು, ಗಾಯಗೊಂಡಿದ್ದವರನ್ನು 108 ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಆರ್.ಕೆ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ನಂತರ ತಾನು ಮತ್ತು ತನ್ನ ತಮ್ಮನಾದ ನರೇಂದ್ರರವರು ತಮ್ಮ ಗ್ರಾಮದಿಂದ ಚಿಂತಾಮಣಿಯ ಆರ್.ಕೆ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ತನ್ನ ಮಾವನ ಮಗನಾದ ಚರಣ್ ರವರು ಮಾತನಾಡದ ಸ್ಥಿತಿಯಲ್ಲಿದ್ದು, ಪೃಥ್ವಿರವರಿಗೆ ಸಣ್ಣ-ಪುಟ್ಟ ಗಾಯಗಳಾಗಿರುತ್ತವೆ. ನಂತರ ಅಪಘಾತದ ಬಗ್ಗೆ ಪೃಥ್ವಿರವರನ್ನು ವಿಚಾರ ಮಾಡಲಾಗಿ ದಿನಾಂಕ: 19/12/2020 ರಂದು ಬೆಳಿಗ್ಗೆ 10.30 ಗಂಟೆ ಸಮಯದಲ್ಲಿ ತಾನು ಮತ್ತು ಚರಣ್ ರವರು ಕೆಲಸದ ನಿಮಿತ್ತ ಕೆಎ-07 ಜೆ-5519 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಸಿಡಿ-100 ದ್ವಿಚಕ್ರ ವಾಹನದಲ್ಲಿ ತಾನು ವಾಹನವನ್ನು ಚಾಲನೆ ಮಾಡಿಕೊಂಡು ಹಿಂಬದಿಯಲ್ಲಿ ಚರಣ್ ರವರು ಕುಳಿತುಕೊಂಡು ಮಾಡಿಕೆರೆ ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯದಲ್ಲಿ ತಮ್ಮ ದ್ವಿಚಕ್ರ ವಾಹನದ ಹಿಂಬದಿಯಿಂದ ಬಂದ ಕೆಎ-07 ಇಡಿ-9891 ನೊಂದಣಿ ಸಂಖ್ಯೆಯ ಯಮಹಾ ಆರ್-15 ದ್ವಿಚಕ್ರ ವಾಹನದ ಸವಾರ ತನ್ನ ದ್ವಿಚಕ್ರವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿ ದ್ವಿಚಕ್ರವಾಹನವನ್ನು ಸ್ಥಳದಲ್ಲಿಯೇ ನಿಲ್ಲಿಸದೇ ಹೊರಟು ಹೋಗಿದ್ದು, ಅದರ ಪರಿಣಾಮ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ತಾನು ಮತ್ತು ಹಿಂಬದಿಯಲ್ಲಿ ಕುಳಿತ್ತಿದ್ದ ಚರಣ್ ರವರು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋಗಿದ್ದ್ದು ಚರಣ್ ರವರ ತಲೆಯ ಹಿಂಬಾಗದಲ್ಲಿ ರಕ್ತಗಾಯವಾಗಿ, ಎಡ ಮೊಣಕಾಲಿಗೆ ತರಚಿದ ರಕ್ತಗಾಯವಾಗಿರುವುಗಾಗಿ ತಿಳಿಸಿರುತ್ತಾರೆ. ನಂತರ ಚಿಂತಾಮಣಿ ಆರ್.ಕೆ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಗಾಯಗೊಂಡಿದ್ದ ತನ್ನ ಮಾವನ ಮಗನಾದ ಚರಣ್ ರವರನ್ನು ನಾವು ಅಂಬುಲೆನ್ಸ್ ನಲ್ಲಿ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ನಂತರ ಅದೇ ದಿನ ಅಲ್ಲಿಂದ ಬೆಂಗಳೂರಿನ ಪ್ರೋ ಲೈಫ್ ಖಾಸಗಿ ಆಸ್ಪತ್ರೆಗೆ ಕೆರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ಗಾಯಗೊಂಡಿದ್ದ ಚರಣ್ ರವರಿಗೆ ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಅಪಘಾತಪಡಿಸಿ ಸ್ಥಳದಲ್ಲಿಯೇ ನಿಲ್ಲಿಸದೇ ಹೊರಟು ಹೋಗಿರುವ ಮೇಲ್ಕಂಡ ಕೆಎ-07 ಇಡಿ-9891 ನೋಂದಣಿ ಸಂಖ್ಯೆಯ ಯಮಹಾ ಆರ್-15 ಸವಾರನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 14/2021 ಕಲಂ. 427,506 ಐಪಿಸಿ :-

ದಿನಾಂಕ 25/01/2021 ರಂದು ಮದ್ಯಾಹ್ನ 1:45 ಗಂಟೆಯಲ್ಲಿ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಸುಮಾರು 20 ವರ್ಷಗಳಿಂದ ಗೊಟಕನಾಪುರ ಗ್ರಾಮದಲ್ಲಿ ವಾಸವಾಗಿದ್ದು ದಿನಾಂಕ 24/01/2021 ರಂದು ಸಂಜೆ 5:10 ಗಂಟೆಯಲ್ಲಿ ತಾನು ಮನೆಯಲ್ಲಿರುವಾಗ ಯಾರೂ ಇಲ್ಲದ ಸಮಯ ನೋಡಿಕೊಂಡು ನಂಜಪ್ಪ ರವರ 3ನೇ ಮಗನಾದ ಗಂಗರಾಜು ರವರು ತಮ್ಮ ಮನೆಗೆ ಏಕಾಏಕಿ ಮನೆ ಬಳಿ ಬಂದು ಈ ಮನೆಯು ನಮಗೆ ಬರಬೇಕಾಗಿರುತ್ತದೆ ನೀವು ಕೂಡಲೇ ಖಾಲಿ ಮಾಡದೇ ಹೋದರೆ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾನೆ. ಆದರೆ ಸದರಿ ಮನೆಯು ಈ ಹಿಂದೆ ಕೂನಿಗಪ್ಪ ರವರ 1ನೇ ಮಗನಾದ ನಂಜುಂಡಪ್ಪ ರವರಿಗೆ ಸರ್ಕಾರದಿಂದ ಮಂಜೂರಾಗಿರುತ್ತದೆ. ನಂಜುಂಡಪ್ಪ ಹಾಗೂ ತಾವು ಜಂಟಿಯಾಗಿ ವಾಸಮಾಡಿಕೊಂಡಿರುತ್ತೇವೆ. ನಂಜುಂಡಪ್ಪ ರವರ ಮರಣದ ನಂತರ ಮನೆಯಲ್ಲಿ ತಾವೇ ವಾಸವಾಗಿರುತ್ತೇವೆ. ನಂಜುಂಡಪ್ಪ ರವರಿಗೆ ಯಾರೂ ವಾರಸುದಾರರಿರುವುದಿಲ್ಲ. ಕೂನಿಗಪ್ಪ ರವರ 4ನೇ ಮಗನಾದ ಅಂದರೆ ತನ್ನ ಪತಿ ನರಸಿಂಹಮೂರ್ತಿ ರವರು 1 ವರ್ಷದ ಹಿಂದೆ ಮೃತಪಟ್ಟಿರುತ್ತಾರೆ. ಇವರು ಮೃತಪಟ್ಟ ನಂತರ ನಂಜಪ್ಪ ರವರ ಮಕ್ಕಳು ಸದರಿ ಮನೆಯನ್ನು ಕಬಳಿಸಲು ಈ ರೀತಿಯ ದೌರ್ಜನ್ಯವೆಸಗಿರುತ್ತಾರೆ. ಆದ್ದರಿಂದ ಗಂಗರಾಜು ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೇನೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 20/2021 ಕಲಂ. 279,304(ಎ) ಐಪಿಸಿ ರೆ/ವಿ 187 ಐಎಂವಿ ಆಕ್ಟ್ :-

ದಿನಾಂಕ:-25/01/2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನಾಗರಾಜ.ವಿ ಬಿನ್ ವೆಂಕಟರಾಯಪ್ಪ, 42 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಮಸ್ತೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆ ವೆಂಕಟರಾಯಪ್ಪ ಬಿನ್ ಮುನಿವೆಂಕಟಪ್ಪ (70 ವರ್ಷ) ರವರಿಗೆ 4 ಜನ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ತನ್ನ ತಂದೆಯವರಾದ ವೆಂಕಟರಾಯಪ್ಪ ರವರು ಕೂಲಿ ಕೆಲಸ ಮಾಡಿಕೊಂಡು ಜೊತೆಗೆ ಬಿಡುವಿನ ವೇಳೆಯಲ್ಲಿ ತಬಲ ಬಾರಿಸುವ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 24/01/2021 ರಂದು ರಾತ್ರಿ ಇದೇ ಶಿಡ್ಲಘಟ್ಟ ತಾಲ್ಲೂಕು ಚೀಮಂಗಲ ಗ್ರಾಮದಲ್ಲಿ ಯಾರದೋ ತಿಥಿ ಕಾರ್ಯಕ್ರಮದಲ್ಲಿ ಭಜನೆ ಇಟ್ಟುಕೊಂಡಿದ್ದು, ಸದರಿ ಭಜನೆ ಕಾರ್ಯಕ್ರಮದಲ್ಲಿ ತಬಲ ಬಾರಿಸಲು ತನ್ನ ತಂದೆಯವರು ತಮ್ಮ ಬಾಬತ್ತು ಇನ್ನು ನೊಂದಣಿ ಸಂಖ್ಯೆ ಇಲ್ಲದ ಟಿವಿಎಸ್ ಎಕ್ಸ್ ಹೆವಿ ಡ್ಯೂಟಿ ದ್ವಿ ಚಕ್ರ ವಾಹನದಲ್ಲಿ ಚೀಮಂಗಲ ಗ್ರಾಮಕ್ಕೆ ಬಂದು ಭಜನೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಈ ದಿನ ದಿನಾಂಕ 25/01/2021 ರಂದು ದಿನ ಬೆಳಿಗ್ಗೆ ಸುಮಾರು 6-00 ಗಂಟೆ ಸಮಯದಲ್ಲಿ ಚೀಮಂಗಲ ಗ್ರಾಮದಿಂದ ತಮ್ಮ ಗ್ರಾಮಕ್ಕೆ ವಾಪಸ್ಸು ಬರಲು ಚೀಮಂಗಲ ಗ್ರಾಮದಿಂದ ಸುಮಾರು 100-200 ಮೀ ಅಂತರದಲ್ಲಿ ಕನ್ನಮಂಗಲ ರಸ್ತೆಯಲ್ಲಿರುವ ಮೋರಿಯ ತಿರುವಿನಲ್ಲಿ ತನ್ನ ತಂದೆಯವರು ತಮ್ಮ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ತಮ್ಮ ಗ್ರಾಮದ ಕಡೆಗೆ ಬರುತ್ತಿದ್ದಾಗ ಆ ಸಮಯದಲ್ಲಿ ಕನ್ನಮಂಗಲ ಗ್ರಾಮದ ಕಡೆಯಿಂದ ಬಂದ ಕೆಎ-40-ಎ-4172 ನೊಂದಣಿ ಸಂಖ್ಯೆಯ ಬೊಲೆರೋ ವಾಹನವನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ತಂದೆಯವರ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ತನ್ನ ತಂದೆಯವರ ಬಲ ಮೊಣಕಾಲಿನ ಮೇಲ್ಭಾಗ ಮತ್ತು ಕೆಳಭಾಗದಲ್ಲಿ, ಎಡ ಮೊಣಕಾಲಿನ ಕೆಳಭಾಗದಲ್ಲಿ ಮೂಳೆ ಮುರಿತದ ರಕ್ತಗಾಯವಾಗಿ, ತಲೆಗೆ ಹಾಗು ಕೈಗಳಿಗೂ ಸಹ ರಕ್ತಗಾಯವಾಗಿ ರಸ್ತೆಯಲ್ಲಿ ಬಿದ್ದಿದ್ದಾಗ ಆ ಸಮಯದಲ್ಲಿ ಅಪಘಾತವನ್ನುಂಟು ಮಾಡಿದ ಬೊಲೆರೋ ವಾಹನದ ಚಾಲಕ ತನ್ನ ವಾಹನದ ಸಮೇತವಾಗಿ ಅಲ್ಲಿಂದ ಹೊರಟು ಹೋಗಿದ್ದು, ಆ ಸಮಯದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ವೆಂಕಟೇಶಪ್ಪ ಹಾಗು ಅಪಘಾತದ ಸ್ಥಳದ ಪಕ್ಕದ ಮನೆಯವರು ತನ್ನ ತಂದೆಯವರನ್ನು ಉಪಚರಿಸಿ 108 ಆಂಬುಲನ್ಸ್ ಅನ್ನು ಸ್ಥಳಕ್ಕೆ ಕರೆಯಿಸಿ ಗಾಯಾಳುವಾಗಿದ್ದ ತನ್ನ ತಂದೆಯವರನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿ ಕೊಟ್ಟು, ಈ ವಿಷಯವನ್ನು ತನಗೆ ಪೋನ್ ಮಾಡಿ ತಿಳಿಸಿದ್ದು, ಕೂಡಲೇ ತಾನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಾಗಿರುತ್ತದೆ. ನಂತರ ತಾನು ಇಲ್ಲಿನ ವೈದ್ಯರ ಸಲಹೆಯ ಮೇರೆಗೆ ತನ್ನ ತಂದೆಯವರನ್ನು ಇನ್ನು ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬುಲನ್ಸ್ ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ, ಅಪಘಾತದಲ್ಲಿ ಆದ ಗಾಯಗಳ ದೆಸೆಯಿಂದ ತನ್ನ ತಂದೆ ವೆಂಕಟರಾಯಪ್ಪ ರವರು ಮಾರ್ಗ ಮದ್ಯೆ ಸತ್ತು ಹೋಗಿರುತ್ತಾರೆ, ತಾನು ಅದೇ ಆಂಬುಲನ್ಸ್ ನಲ್ಲಿ ತನ್ನ ತಂದೆಯವರ ಶವವನ್ನು ತಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತೇನೆ. ಆದ ಕಾರಣ ತಾವು ಸ್ಥಳಕ್ಕೆ ಬೇಟಿಯನ್ನು ನೀಡಿ, ಸದರಿ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕೆಎ-40-ಎ-4172 ನೊಂದಣಿ ಸಂಖ್ಯೆಯ ಬೊಲೆರೋ ವಾಹನದ ಚಾಲಕನ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.