ದಿನಾಂಕ :24/11/2020 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ  ಪೊಲೀಸ್ ಠಾಣೆ ಮೊ.ಸಂ.281/2020 ಕಲಂ. 279,304(A) ಐ.ಪಿ.ಸಿ:-

     ದಿ: 24-11-2020 ರಂದು ಬೆಳಗ್ಗೆ 10:45 ಗಂಟೆಗೆ ಪಿರ್ಯಾಧಿದಾರರಾದ ದೇವರಾಜ ಬಿನ್ ರಾಮಚಂದ್ರಪ್ಪ, 37 ವರ್ಷ, ಜಲಜಿಗರು, ಜಿರಾಯ್ತಿ, ವಾಸ ಪೂಲವಾರಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ದಿನಾಂಕ 24/11/2020 ರಂದು ಬೆಳಿಗ್ಗೆ ನಾನು ಮತ್ತು ನನ್ನ ತಂದೆ ನಮ್ಮ ಜಮೀನಿನಲ್ಲಿ ಆಲೂಗೆಡ್ಡೆ ಮೂಟೆಯನ್ನು ತುಂಬುತ್ತಿದ್ದೆವು. ಬೆಳಿಗ್ಗೆ ಸುಮಾರು 9-30 ಗಂಟೆಗೆ ಕೊಲಿಯವರಿಗೆ ತಿಂಡಿಯನ್ನು ತೆಗೆದುಕೊಂಡು ಬರುವುದಾಗಿ ತಿಳಿಸಿ ನಮ್ಮ ಬಾಬತ್ತು ಕೆ.ಎ-04-ಹೆಚ್.ಎಂ-7622 ಟಿ.ವಿ.ಎಸ್ ಸ್ಟಾರ್ ಸಿಟಿ ದ್ವಿ ಚಕ್ರ ವಾಹನದಲ್ಲಿ ಬಾಗೇಪಲ್ಲಿ ಟಿ.ಬಿ. ಕ್ರಾಸ್ ಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿರುತ್ತಾರೆ. ನಂತರ ಸುಮಾರು 10-00 ಗಂಟೆಗೆ ನ್ಯೂ ಗೋಲ್ಡಾನ್ ಡಾಬಾ ಮಾಲೀಕರಾದ ರಾಮಚಂದ್ರ  ರವರು ನನಗೆ ಪೋನ್ ಮಾಡಿ ನಮ್ಮ ಡಾಬಾದ ಮುಂಭಾಗದಲ್ಲಿ ಎಸ್ ಹೆಚ್ 44 ರಸ್ತೆಯಲ್ಲಿ ನಿಮ್ಮ ತಂದೆಗೆ ಅಪಘಾತವಾಗಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.       ತಕ್ಷಣ ನಾನು ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ತಂದೆ ರಾಮಚಂದ್ರಪ್ಪರವರ ಮೃತದೇಹವು ಎನ್ ಹೆಚ್ 44 ರಸ್ತೆಯ ಎಡಬಾಗದಲ್ಲಿ ಪುಟ್ ಬಾತ್ ಮೇಲೆ ಬಿದ್ದಿರುತ್ತೆ. ನಂತರ ವಿಚಾರ ಮಾಡಿ ತಿಳಿಯಲಾಗಿ ನಮ್ಮ ತಂದೆ ರಾಮಚಂದ್ರಪ್ಪ ರವರು ಬೆಳಿಗ್ಗೆ ಸುಮಾರು 9-45 ಗಂಟೆ ಸಮಯದಲ್ಲಿ  ಪೂಲವಾರಪಲ್ಲಿ ಕಡೆಯಿಂದ ಬಾಗೇಪಲಿಯ ಟಿ.ಬಿ ಕ್ರಾಸ್ ಗೆ ಹೋಗಲು, ಎನ್ ಹೆಚ್ 44 ರಸ್ತೆಯಲ್ಲಿ ಎಡಗಡೆಯಲ್ಲಿ ಹೋಗುವಾಗ, ಬೆಂಗಳೂರು ಕಡೆಯಿಂದ ಬಂದ ಎ.ಪಿ-03-ಟಿ.ಆರ್ ನೊಂದಣಿ ಸಂಖ್ಯೆಯ ಹೊಸ ಕಿಯಾ ಕಾರಿನ ಚಾಲಕ, ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ನನ್ನ ತಂದೆ ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ ಪರಿಣಾಮ ನಮ್ಮ ತಂದೆಗೆ ತಲೆಗೆ, ಮೈಕೈಗೆ ರಕ್ತ ಗಾಯಗಳಾಗಿ , ಎಡಕೈ ನೇತಾಡುತ್ತಿದ್ದು, ಎಡಕಾಲು ಪೂರ್ತಿ ಕಟ್ ಆಗಿರುತ್ತದೆ. ನಂತರ ಅಂಬುಲೆನ್ಸ್ ನಲ್ಲಿ  ಮೃತದೇಹವನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತೆಯ ಶವಗಾರಕ್ಕೆ ಸಾಗಿಸಿರುತ್ತದೆ.      ಆದ್ದರಿಂದ ನನ್ನ ತಂದೆ ಚಾಲನೆ ಮಾಡುತ್ತಿದ್ದ ಕೆ.ಎ-04-ಹೆಚ್.ಎಂ-7622 ದ್ವಿ ಚಕ್ರ ವಾಹನಕ್ಕೆ, ಎ.ಪಿ-03-ಟಿ.ಆರ್. ನೊಂದಣಿ ಸಂಖ್ಯೆಯ ಹೊಸ ಕಿಯಾ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ಅಪಘಾತವನ್ನುಂಟು ಮಾಡಿ ನನ್ನ ತಂದೆಯವರಾದ ರಾಮಚಂದ್ರಪ್ಪರವರು ಮೃತಪಡಲು ಕಾರಣವಾದ ಮೇಲ್ಕಂಡ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ. ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.