ದಿನಾಂಕ :24/10/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.261/2020 ಕಲಂ: 14,15,32,34,38A ಕೆ.ಇ ಆಕ್ಟ್:-

     ದಿ: 23-10-2020 ರಂದು ಸಂಜೆ 6:45 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಮಾಲು ಮತ್ತು ಮಹಜರ್ ನೊಂದಿಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ದಿನಾಂಕ; 23-10-2020 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿದ್ದಾಗ ಯಾರೋ ಆಸಾಮಿಯು ಬಾಗೇಪಲ್ಲಿ ತಾಲ್ಲೂಕು ಸದ್ದಪಲ್ಲಿ ತಾಂಡದಲ್ಲಿ ಕಾನೂನು ಬಾಹಿರವಾಗಿ ಮದ್ಯಪಾನ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ  ಸಿ.ಹೆಚ್.ಸಿ-14 ಕೆ.ಎಂ.ಮುರಳಿ, ಪಿಸಿ-387 ಮೋಹನ್ ಕುಮಾರ  ಹಾಗೂ ಜೀಪ್ ಚಾಲಕ ಎ.ಹೆಚ್.ಸಿ-34 ಅಲ್ತಾಪ್ ಪಾಷಾ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-537 ವಾಹನದಲ್ಲಿ ಹೊರಟು ಗೂಳೂರು ಗ್ರಾಮಕ್ಕೆ ತಲುಪಿ, ಬಸ್ ನಿಲ್ದಾಣದ ಬಳಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಜೀಪಿನಲ್ಲಿ ಹೊರಟು ಸಂಜೆ 5-00 ಗಂಟೆಗೆ ಬಾಗೇಪಲ್ಲಿ ತಾಲ್ಲೂಕು ಸದ್ದಪಲ್ಲಿ ತಾಂಡದ ಗಂಗಮ್ಮ ಗುಡಿ ಬಳಿ ಜೀಪನ್ನು ನಿಲ್ಲಿಸುತ್ತಿದಂತೆ ಪೂರ್ವಕ್ಕೆ ಸ್ವಲ್ಪ ದೂರದಲ್ಲಿ  ಸಿಮೆಂಟ್ ರಸ್ತೆಯ ಪಕ್ಕಕ್ಕೆ ಇರುವ ಪೆಟ್ಟಿಗೆ ಅಂಗಡಿಯ ಪಕ್ಕದಲ್ಲಿ ಮನೆಯ ಮೇಲ್ಭಾಗಕ್ಕೆ ಹೋಗುವ ಮೆಟ್ಟಲಿಗಳ ಕೆಳಗೆ ಸುಮಾರು 2 ಅಡಿ ಅಗಲ, 3 ಅಡಿ ಅಗಲ, 8 ಅಡಿ ಎತ್ತರವಿರುವ ಜಾಗದಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಆಸಾಮಿ ಮತ್ತು ಮದ್ಯವನ್ನು ಕುಡಿಯುತ್ತಿದ್ದವರು  ಸಮವಸ್ತ್ರದಲ್ಲಿದ್ದ ನಮ್ಮ ನೋಡಿ ಪರಾರಿಯಾಗಿರುತ್ತಾರೆ. ನಂತರ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಮದ್ಯದ ಟೆಟ್ರಾ ಪಾಕೇಟ್ ಗಳು ಮತ್ತು ಕುಡಿದು ಬಿಸಾಡಿರುವ ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು ಬಿದ್ದಿರುತ್ತವೆ. ಸದರಿ ಮನೆ ಮತ್ತು ಪೆಟ್ಟಿಗೆ ಅಂಗಡಿಯ ಮಾಲೀಕನ ಬಗ್ಗೆ ವಿಚಾರ ಮಾಡಿ ತಿಳಿಯಲಾಗಿ ರಾಮನಾಯ್ಕ ಬಿನ್ ಲೇಟ್ ಲಕ್ಷ್ಮನಾಯ್ಕ, ಸುಮಾರು 75 ವರ್ಷ, ಲಂಬಾಣಿ ನಾಯ್ಕ ಜನಾಂಗ, ಚಿಲ್ಲರೇ ಅಂಗಡಿ ವ್ಯಾಪಾರ, ವಾಸ ಸದ್ದೆಪಲ್ಲಿ ತಾಂಡ, ಬಾಗೇಪಲ್ಲಿ ತಾಲ್ಲೂಕು ಎಂಬುದಾಗಿ ತಿಳಿಯಿತು, ನಂತರ  ಪಂಚರ ಸಮಕ್ಷಮದಲ್ಲಿ ನಾವುಗಳು ಸ್ಥಳವನ್ನು ಪರಿಶೀಲಿಸಲಾಗಿ  ಒಂದು ಪ್ಲಾಸ್ಟಿಕ್ ಚೀಲದಲ್ಲಿ 2 ಮದ್ಯದ ಕೇಸುಗಳಿದ್ದು, ಹಾಗೂ  ಅಂಗಡಿಯಲ್ಲಿ ಒಂದು ಕೇಸ್ ಇರುತ್ತದೆ. ಅವುಗಳನ್ನು  ಒಂದನ್ನು ತೆಗೆದು ನೋಡಲಾಗಿ 90 ML ಸಾಮರ್ಥ್ಯದ  HAYWARDS CHEERS WHISKY ಯ 80  ಟೆಟ್ರಾ ಪಾಕೇಟ್ ಗಳಿದ್ದು, ಇದು 7 ಲೀಟರ್ 200 ಎಂ.ಎಲ್ ಆಗಿದ್ದು, ಇದರ ಬೆಲೆ 2.810/- ರೂಗಳಾಗಿರುತ್ತೆ,  ಮತ್ತೊಂದು ಕೇಸ್ ಅನ್ನು ತೆಗೆದು ನೋಡಲಾಗಿ  90 ML ಸಾಮಥ್ಯದ  HAYWARDS CHEERS WHISKY ಯ  96 ಟೆಟ್ರಾ ಪಾಕೇಟ್ ಗಳಿದ್ದು, ಇದು 8 ಲೀಟರ್ 640 ಎಂ.ಎಲ್ ಆಗಿರುತ್ತೆ, ಇದರ ಬೆಲೆ 3,372 /- ರೂಗಳಾಗಿರುತ್ತದೆ.  ಮತ್ತೊಂದು ಕೇಸನ್ ಅನ್ನು ಓಪನ್ ಮಾಡಿ ನೋಡಲಾಗಿ 180 ML ಸಾಮರ್ಥ್ಯದ OLD TAVERN WHISKY ಯ  48 ಟೆಟ್ರಾ   ಪಾಕೇಟ್ ಗಳಿದ್ದು, ಇದು 8 ಲೀಟರ್ 640 ಎಂ.ಎಲ್ ಆಗಿರುತ್ತೆ, ಇದರ ಬೆಲೆ 4.164/- ರೂಗಳಾಗಿರುತ್ತದೆ. ಮೇಲ್ಕಂಡ ಮದ್ಯದ ಪಾಕೆಟ್ ಗಳು  ಒಟ್ಟು 24 ಲೀಟರ್ 400 ಎಂ.ಎಲ್ ಆಗಿದ್ದು, ಇವುಗಳ ಒಟ್ಟು ಬೆಲೆ 10.342 /- ಆಗಿರುತ್ತದೆ. ಮೇಲ್ಕಂಡ ಮಾಲುಗಳನ್ನು ಮತ್ತು  ಸ್ಥಳದಲ್ಲಿ ಬಿದ್ದಿದ್ದ 90 ML ಸಾಮಥ್ಯದ  HAYWARDS CHEERS WHISKY ಯ  9 ಖಾಲಿ ಟೆಟ್ರಾ ಪಾಕೆಟ್ ಗಳು ಮತ್ತು  12 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲಿನೊಂದಿಗೆ ಸಂಜೆ 6-45 ಗಂಟೆಗೆ ಠಾಣೆಯಲ್ಲಿ  ಹಾಜರುಪಡಿಸುತ್ತಿದ್ದು, ಕಲಂ 14, 15, 32, 34, 38(ಎ) ಕೆ.ಆಕ್ಟ್ ರೀತ್ಯಾ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲು ಸೂಚಿಸಿದೆ, ಎಂದು ದೂರು.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.152/2020 ಕಲಂ: 279,337 ಐ.ಪಿ.ಸಿ:-

     ದಿ:24.10.2020 ರಂದು ಪಿರ್ಯಾದಿದಾರರಾದ ರಮೇಶ್ ಚಂದ್ರ ಜಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಕೆಎ 50 ಎನ್ 6738 ನೊಂದಣಿ ಸಂಖ್ಯೆಯ ಎಸ್ಕಾರ್ಟ್ ಕಂಪನಿಯ ಕ್ರೇನ್ ಅನ್ನು ಹೊಂದಿದ್ದು, ದಿ:24.10.2020 ರಂದು ಬೆಳಿಗ್ಗೆ 5-00 ಗಂಟೆ ಸಮಯದಲ್ಲಿ ತಮ್ಮ ಕ್ರೇನನ್ನು ತಮ್ಮ ಚಾಲಕ ಮಾಥಪ್ಪನ್ ಬಿನ್ ಪುತ್ತೂರಿ ಗೌಂಡರ್ ರವರು ಚಿಕ್ಕಬಳ್ಳಾಪುರ ತಾಲ್ಲೂಕು ಗುವ್ವಲಖಾನಹಳ್ಳಿ ಬಂಡೆಯಿಂದ ಚಿಕ್ಕಬಳ್ಳಾಪುರ ನಗರಕ್ಕೆ ಬರಲು ಹೈದರಾಬಾದ್ – ಬೆಂಗಳೂರು ರಸ್ತೆಯ ಆರ್.ಟಿ.ಓ ಕಛೇರಿಯ ಸಮೀಪ ಟಾರು ರಸ್ತೆಯಲ್ಲಿ ಬರುತ್ತಿದ್ದಾಗ ಹಿಂದುಗಡೆಯಿಂದ ಬರುತ್ತಿದ್ದ ಎನ್.ಎಲ್ 01 ಬಿ 1741 ನೊಂದಣಿ ಸಂಖ್ಯೆಯ ಸುಗಮ ಟೂರಿಸ್ಟ್ ಬಸ್ಸಿನ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಕ್ರೇನ್ ವಾಹನದ ಹಿಂಭಾಗ ಡಿಕ್ಕಿ ಹೊಡೆಸಿದ್ದರ ಪರಿಣಾಮ ತಮ್ಮ ಕೇನ್ ವಾಹನದ ಕ್ಯಾಬಿನ್ , ಹೌಜಿಂಗ್ , ಟೈರ್ ಮತ್ತು ಕೌಂಟರ್ ವೇಟ್, ಚಾಸಿ ಜಖಂಗೊಂಡಿದ್ದು, ತಮ್ಮ ಕ್ರೇನ್ ವಾಹನಕ್ಕೆ ಡಿಕ್ಕಿ ಹೊಡೆಸಿದ ಬಸ್ಸಿಗೂ ಸಹ ಮುಂಭಾಗ ಪೂರ್ತಿ ಜಖಂಗೊಂಡಿದ್ದು, ತಮ್ಮ ಕ್ರೇನಿನಲ್ಲಿದ್ದ ಕ್ಲೀನರ್ ಚೆಲುವರಾಜ್ ಬಿನ್ ತಂಗರಾಜುರವರಿಗೆ ರಕ್ತಗಾಯಗಳಾಗಿದ್ದು, ಬಸ್ಸಿನಲ್ಲಿದ್ದ ವಿಕ್ರಂರೆಡ್ಡಿ ಬಿನ್ ಕೃಷ್ಣಾರೆಡ್ಡಿ 25 ವರ್ಷ ರೆಡ್ಡಿ ಜನಾಂಗ, ಪೊಲೀಸ್ ಕಾನ್ಸ್ ಟೇಬಲ್ ವಾಸ ಗುಂಜಹಳ್ಳಿ ಗ್ರಾಮ ರಾಯಚೂರು ತಾಲ್ಲೂಕು & ಜಿಲ್ಲೆ ರವರಿಗೆ ಮತ್ತು ಇತರೆ 6-7 ಜನರಿಗೆ ಗಾಯಗಳಾಗಿದ್ದು, ಎಲ್ಲರನ್ನೂ ಅಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟು ತಮ್ಮ ಚಾಲಕ ನನಗೆ ಫೋನ್ ಮಾಡಿ ತಿಳಿಸಿದ್ದು, ತಾನು ಬಂದು ನೋಡಲಾಗಿ ವಿಚಾರ ನಿಜವಾಗಿರುತ್ತೆ. ತಮ್ಮ ಬಾಬತ್ತು ಕೆಎ 50 ಎನ್ 6738 ನೊಂದಣಿ ಸಂಖ್ಯೆಯ ಎಸ್ಕಾರ್ಟ್ ಕಂಪನಿಯ ಕ್ರೇನ್ ವಾಹನಕ್ಕೆ ಹಿಂದುಗಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಎನ್.ಎಲ್ 01 ಬಿ 1741 ನೊಂದಣಿ ಸಂಖ್ಯೆಯ ಸುಗಮ ಟೂರಿಸ್ಟ್ ಬಸ್ಸಿನ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.153/2020 ಕಲಂ: 279,304(ಎ) ಐ.ಪಿ.ಸಿ:-

     ದಿನಾಂಕ: 24/10/2020 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಶ್ರೀಮತಿ ಸುಶೀಲ ಕೋಂ ಮುನಿಕೃಷ್ಣ, 23 ವರ್ಷ, ನಾಯಕರು, ಕೂಲಿಕೆಲಸ, ಹನುಮಂತಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಹಾಲಿ ವಾಸ: ರಾಯನಕಲ್ಲು ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ 5 ವರ್ಷಗಳ ಹಿಂದೆ ಮುನಿಕೃಷ್ಣಪ್ಪ ಬಿನ್ ಬಾಲಪ್ಪ, 35 ವರ್ಷ, ನಾಯಕ ಜನಾಂಗ, ಕೂಲಿಕೆಲಸ, ಹನುಮಂತಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರೊಂದಿಗೆ ಮದುವೆಯಾಗಿರುತ್ತೆ. ಆ ನಂತರ ನನ್ನ ಗಂಡ ಮತ್ತು ನಾನು ಕೂಲಿಕೆಲಸಕ್ಕಾಗಿ ಆಂದ್ರಪ್ರದೇಶದ ಚಿತ್ತೂರು ಜಿಲ್ಲೆ ಪಲನಮೇರು ತಾಲ್ಲೂಕು ಮೊಸಲಮಡಗು ಗ್ರಾಮಕ್ಕೆ ಹೋಗಿ ಕೆಲಸ ಮಾಡಿಕೊಂಡು ವಾಸವಾಗಿದ್ದೆವು. ನನಗೆ 4 ವರ್ಷದ ಒಂದು ಗಂಡು ಮಗುವಿದ್ದು, ಎರಡನೇ ಮಗುವಿನ ಡಿಲ್ವರಿಗಾಗಿ ನಾನು ನನ್ನ ಗಂಡ ಇಬ್ಬರೂ ನಮ್ಮ ತವರು ಮನೆಯಾದ ರಾಯನಕಲ್ಲು ಗ್ರಾಮಕ್ಕೆ ಬಂದಿದ್ದು, ನನ್ನ ಗಂಡ ಇಲ್ಲಿಯೇ ಕೂಲಿಕೆಲಸ ಮಾಡಿಕೊಂಡಿದ್ದರು. ದಿನಾಂಕ: 20/10/2020 ರಂದು ಸಂಜೆ ನಮ್ಮ ಗ್ರಾಮದಲ್ಲಿ ವಾಸವಾಗಿರುವ ನಮ್ಮ ಜನಾಂಗ ಶಂಕರ ಬಿನ್ ರಾಜಪ್ಪರವರೊಂದಿಗೆ ಶಂಕರರವರ ಚಿಕ್ಕಬಳ್ಳಾಪುರ ತಾಲ್ಲೂಕು ಕಾಕಲಚಿಂತ ಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ ನನ್ನ ಗಂಡನ KA-04, EP-6047 ಬಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಹೋದರು. ದಿನಾಂಕ: 21/10/2020 ರಂದು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ಶಂಕರ ನನಗೆ ಪೋನ್ ಮಾಡಿ ಈ ದಿನ ದಿನಾಂಕ: 21/10/2020 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ನಾನು ನಿನ್ನ ಗಂಡ ಮುನಿಕೃಷ್ಣ ಇಬ್ಬರೂ KA-04, EP-6047 ಬಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಮಂಚೇನಹಳ್ಳಿಗೆ ವಾಪಸ್ಸು ಬರಲು ಚಿಕ್ಕಬಳ್ಳಾಪುರ ತಾಲ್ಲೂಕು ತಿಪ್ಪೇನಹಳ್ಳಿ ಗ್ರಾಮ ಬಿಟ್ಟು ಸ್ವಲ್ಪ ಮುಂದೆ ಚಿಕ್ಕಬಳ್ಳಾಪುರ-ಗೌರಿಬಿದನೂರು ರಸ್ತೆಯಲ್ಲಿ ಬರುತ್ತಿದ್ದಾಗ ಮೋರಿ ಬಳಿ ನಮ್ಮ ಗಾಡಿಗೆ ನಾಯಿ ಅಡ್ಡ ಬಂದಿದ್ದು, ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮುನಿಕೃಷ್ಣರವರು ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅತಿವೇಗ ಮತ್ತು ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಾಲನೆ ಮಾಡಿ ಮೋರಿಯ ಗೋಡೆಗೆ ಡಿಕ್ಕಿ ಹೊಡೆಸಿದ ಪರಿಣಾಮ ನಾನು ಮುನಿಕೃಷ್ಣ ಇಬ್ಬರೂ ರಸ್ತೆಯ ಮೇಲೆ ಬಿದ್ದು ಹೋಗಿ ನನಗೆ ಬಲಕಾಲು ಮತ್ತು ಭುಜಕ್ಕೆ ತರಚಿದ ಗಾಯಗಳಾಗಿದ್ದು, ಮುನಿಕೃಷ್ಣನಿಗೆ ತಲೆಗೆ ಪೆಟ್ಟಾಗಿ ಬಾಯಲ್ಲಿ ಮೂಗಲ್ಲಿ ರಕ್ತ ಬಂದಿದ್ದು, ತಕ್ಷಣ ನನ್ನ ಸ್ನೇಹಿತ ಹನುಮಂತಪುರದ ಲೋಕೇಶ್ ನಿಗೆ ಪೋನ್ ಮಾಡಿ ಕರೆಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ವೈದ್ಯರು ಮುನಿಕೃಷ್ಣನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿರುತ್ತಾರೆ. ತಕ್ಷಣ ಬರುವಂತೆ ತಿಳಿಸಿದರು. ನಾನು ನನ್ನ ತಂಗಿ ಆಶಾ ಇಬ್ಬರೂ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಬಂದು ನನ್ನ ಗಂಡ ಮುನಿಕೃಷ್ಣನನ್ನು ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ನನ್ನ ಗಂಡ ಮುನಿಕೃಷ್ಣರವರು ದಿನಾಂಕ: 23/10/2020 ರಂದು ಬೆಳಗಿನ ಜಾವ ಸುಮಾರು 1-00 ಗಂಟೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ನನಗೆ ಸಣ್ಣಮಗುವಿದ್ದು, ನಾನು ಬೆಂಗಳೂರಿನಿಂದ ಬಂದು ದೂರು ಕೊಡಲು ಅನಾನುಕೂಲವಾಗಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.73/2020 ಕಲಂ: 78(3) ಕೆ.ಪಿ ಆಕ್ಟ್:-

     ದಿನಾಂಕ- 24/10/2020 ರಂದು ಬೆಳಿಗ್ಗೆ 10:00 ಗಂಟೆಗೆ ನ್ಯಾಯಾಲಯದ ಪಿ.ಸಿ-332 ರವರು ಎನ್.ಸಿ.ಆರ್ ನಂ-141/2020 ರನ್ನು ಸಂಜ್ಞೇಯ ಪ್ರಕರಣವಾಗಿ ದಾಖಲಿಸಿಕೊಳ್ಳಲು ನ್ಯಾಯಾಲಯದಿಂದ ಅನುಮತಿ ಪತ್ರವನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ ದಿನಾಂಕ; 21-10-2020 ರಂದು ಚಿಕ್ಕಬಳ್ಳಾಪುರ ಉಪವಿಭಾಗ ಡಿವೈಎಸ್.ಪಿ ರವರು ರಾತ್ರಿ 8.30 ಗಂಟೆಗೆ ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆಯೊಂದಿಗೆ ಕೊಟ್ಟ ಮಾಲು, ಆರೋಪಿತ, ಹಾಗೂ ವರದಿಯ ದೂರನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ತಾನು, ಈ ದಿನ ದಿನಾಂಕ; 21-10-2020 ರಂದು ಸಂಜೆ 6.30 ಗಂಟೆ ಸಮಯದಲ್ಲಿ ಕಚೇರಿಯಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ತಾನು ಮತ್ತು ತಮ್ಮ ಸಿಬ್ಬಂದಿಯವರಾದ ಶ್ರೀ ರಮೇಶ್ ಹೆಚ್.ಸಿ-205, ಶ್ರೀ ಗೌತಮ್ ರಾಜು ಪಿ.ಸಿ-286 ಹಾಗೂ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40-ಜಿ-0855 ರ ಚಾಲಕನಾದ ಶ್ರೀ ಅಶೋಕ ಎ.ಪಿ.ಸಿ119 ರವರುಗಳೊಂದಿಗೆ ತಕ್ಷಣ ಹೋಗಿ ಪೊಲೀಸ್ ಸರ್ಕಲ್ ನಲ್ಲಿ ಇಬ್ಬರು ಪಂಚಾಯ್ತಿದಾರರನ್ನು ಬರಮಾಡಿಕೊಂಡು ವಿಚಾರ ತಿಳಿಸಿ ದಾಳಿಗೆ ಸಹಕರಿಸಲು ನಂತರ ನಾವು ಬಂದ ಬಾತ್ಮಿಯಂತೆ ಚಿಕ್ಕಬಳ್ಳಾಪುರ ನಗರದ ಟೌನ್ ಹಾಲ್ ಸಮೀಪ ಇರುವ ಬ್ರಹ್ಮಕುಮಾರಿ ಸಮಾಜ ಮುಂಬಾಗದ ಸಾರ್ವಜನಿಕ ರಸ್ತೆಯಲ್ಲಿ ಕ್ರಿಕೇಟ್ ಬೆಟ್ಟಿಂಗ್ ಅನ್ನು ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ದಾಳಿ ಮಾಡಿ, ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರು ಆಸಾಮಿಗಳ ಪೈಕಿ ನಮ್ಮಗಳನ್ನು ನೋಡಿ ಸ್ಥಳದಿಂದ ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಶಶಿಧರ ಬಿನ್ ನಾಗರಾಜ್, 38 ವರ್ಷ, ಬಲಜಿಗರು, ಆರ್.ಟಿ.ಓ ಕಚೇರಿಯ ಬಳಿ ಏಜೆಂಟ್ ವಾಸ: ಕೋಟೆ ಚಿಕ್ಕಬಳ್ಳಾಪುರ ನಗರ. ಮೊ.ನಂ: 9916156663 ಎಂದು ತಿಳಿಸಿದ್ದು, ಸ್ಥಳದಿಂದ ಓಡಿ ಹೋದ ಆಸಾಮಿಯ ಬಗ್ಗೆ ಶಶಿಧೆರ್ ಬ ಬು ರವರನ್ನು ವಿಚಾರಿಸಲಾಗಿ 2) ಚಿರಂಜೀವಿ ಬಿನ್ ನಾರಾಯಣಸ್ವಾಮಿ, 32 ವರ್ಷ, ಅಗಸರು, ಆರ್.ಟಿ.ಒ ಕಚೇರಿಯ ಬಳಿ ಏಜೆಂಟ್. ವಾಸ: ಕೋಟೆ,ಚಿಕ್ಕಬಳ್ಳಾಪುರ ನಗರ. ಮೊ.ನಂ;9742707206 ಎಂದು ತಿಳಿಸಿದ್ದು, ಹಾಗೂಕ್ರಿಕೇಟ್ ಪ್ರಂದ್ಯಾವಳಿಯಯನ್ನು ನೋಡುತ್ತಿದ್ದ ಮೊಬೈಲ್ ನೊಂದಿಗೆ ಪರಾರಿಯಾಗಿರುತ್ತಾನೆ. ಸ್ಥಳದಲ್ಲಿದ್ದ ಆಸಾಮಿಯನ್ನು ಇಂದಿನ ಐ.ಪಿ.ಎಲ್ ಕ್ರಿಕೇಟ್ ಆರ್.ಸಿ.ಬಿ ಮತ್ತು ಕೆ.ಕೆ.ಆರ್ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಆರ್.ಸಿ.ಬಿ ತಂಡ ಗೆಲ್ಲುತ್ತೆ, ಎಂತ ಒಬ್ಬ ಆಸಾಮಿ 5000/-ರೂ ಇರಲಿ ಎಂತ ಇತನ ಜೊತೆಯಲ್ಲಿದ್ದು ಓಡಿ ಹೋದ ಆಸಾಮಿ ಕೆ.ಕೆ.ಆರ್ ತಂಡ ಗೆಲ್ಲುತ್ತದೆ.5000/- ರೂ ಇರಲಿ ಎಂತ ಹಣಕ್ಕೆ ಹಾಕಿರುವುದಾಗಿ ತಿಳಿಸಿದ್ದು, ಆತನ ಬಳಿ ಇದ್ದ ಕೃತ್ಯಕ್ಕೆ ಉಪಯೋಗಿಸಿದ್ದ 10000/- ರೂಗಳನ್ನು ಪಂನಚಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿ ಶಶಿಧರ್ ರವರನ್ನು ಮುಂದಿನ ಕ್ರನೂನು ಕ್ರಮಕ್ಕಾಗಿ ಪಡೆದುಕೊಂಡಿದ್ದರ ದೂರಾಗಿದ್ದು  ಈ ಬಗ್ಗೆ ಠಾಣಾ ಎನ್.ಸಿ.ಆರ್ ನಂ-141/2020 ರಂತೆ ದಾಖಲಿಸಿಕೊಂಡು ನಂತರ ಸಂಜ್ಞೇಯ ಪ್ರಕರಣವಾಗಿ ದಾಖಲಿಸಿಕೊಳ್ಳಲು ನ್ಯಾಯಾಲಯದಿಂದ ಅನುಮತಿ ಪತ್ರವನ್ನು ಪಡೆದುಕೊಂಡು ಈ ದಿನ ದಿನಾಂಕ-24/10/2020 ರಂದು ತಡವಾಗಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.50/2020 ಕಲಂ: 279,336 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ:-24/10/2020 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿದಾರ ಶ್ರೀ. ವೆಂಕಟರೆಡ್ಡಿ ವಿ ಬಿನ್ ವೆಂಕಟೇಶಪ್ಪ 26 ವರ್ಷ, ಆದಿ ಕರ್ನಾಟಕ ಜನಾಂಗ, ಚಾಲಕ ವೃತ್ತಿ, ಮರಸನಹಳ್ಳಿ ಗ್ರಾಮ, ಗುಂಡ್ಲಗುರ್ಕಿ ಅಂಚೆ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ದೂರಿನ ಸಾರಾಂಶವೇನೆಂದರೆ ತಾನು ಸುಮಾರು 1 ವರ್ಷದಿಂದ ಹೊರ ಗುತ್ತಿಗೆ ಯಾಗಿ ಲೇಬರ್ ಡಿಪಾರ್ಟ್ಮೆಂಟ್ ನ ಕೆಎ-40-ಎ-9445 ರ ಸ್ವಿಫ್ಟ್ ಡಿಸೈರ್ ಕಾರಿಗೆ ಚಾಲಕನಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು ದಿನಾಂಕ:-23/10/2020 ರಂದು ಕೆಲಸದ ನಿಮಿತ್ತ ಕೆಎ-40-ಎ-9445 ರ ಸ್ವಿಫ್ಟ್ ಡಿಸೈರ್ ಕಾರನ್ನು ಚಾಲನೆ ಮಾಡಿಕೊಂಡು ಬೆಂಗಳೂರಿಗೆ ಹೋಗಿ ವಾಪಸ್ಸು ತಮ್ಮ ಗ್ರಾಮಕ್ಕೆ ಬರಲು ದಿನಾಂಕ:-24/10/2020 ರಂದು ಮಧ್ಯರಾತ್ರಿ ಸುಮಾರು 00-00 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಬೆಂಗಳೂರು – ಬಾಗೇಪಲ್ಲಿ ಎನ್.ಎಚ್-44 ಹೈವೇ ರಸ್ತೆಯ ವಾಪಸಂದ್ರ ಬ್ರಿಡ್ಜ್ ಬಳಿ ಬರುತ್ತಿದ್ದಾಗ ಚಿಕ್ಕಬಳ್ಳಾಪುರ ದಿಂದ ಹೊನ್ನೇನಹಳ್ಳಿಗೆ ಹೋಗುವ ಸರ್ವೀಸ್ ರಸ್ತೆಯಲ್ಲಿ ಬಂದ ಯಾವುದೋ ಕ್ಯಾಂಟರ್ ಲಾರಿ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಯಾವುದೇ ಸೂಚನೆಯನ್ನು ನೀಡದೇ ಏಕಾ-ಏಕಿ ಸರ್ವೀಸ್ ರಸ್ತೆಯಿಂದ ಹೈವೇ ರಸ್ತೆಗೆ ವಾಹನವನ್ನು ತಿರುಗಿಸಿದ ಪರಿಣಾಮ ತಾನು ಚಾಲನೆ ಮಾಡುತ್ತಿದ್ದ ಕಾರನ್ನು ಯಾವುದೋ ಕ್ಯಾಂಟರ್ ವಾಹನದ ಹಿಂಭಾಗ ತಗುಲಿಸಿದ ಪರಿಣಾಮ ತನಗೆ ಯಾವುದೇ ಗಾಯಗಳಾಗದೇ ವಾಹನ ಮುಂಭಾಗದ ಛಾಸಿ, ಇಂಜೀನ್, ಮುಂಭಾಗದ ಗ್ಲಾಸ್, ಬಾನೆಟ್, ಮುಂಭಾಗದ ಹೆಡ್ ಲೈಟ್ ಜಕಂಗೊಂಡಿದ್ದು, ಸದರಿ ಯಾವುದೋ ಕ್ಯಾಂಟರ್ ವಾಹನದ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದು ಸದರಿ ಅಪಘಾತ ಪಡಿಸಿ ವಾಹನ ಸಮೇತ ಹೊರಟು ಹೋಗಿರುವ ಯಾವುದೋ ಕ್ಯಾಂಟರ್ ಲಾರಿ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಗಣಕೀಕೃತ ದೂರಿನ ಮೇರೆಗೆ ದಿನಾಂಕ:-24/10/2020 ರಂದು ಬೆಳಿಗ್ಗೆ 10-00 ಗಂಟೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.390/2020 ಕಲಂ: 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ 24/10/2020 ರಂದು ಗಂಟೆಗೆ 11.00 ಕೃಷ್ಣಪ್ಪ ಜಿ.ಎನ್ ಬಿನ್ ಲೇಟ್ ನಾರಾಯಣಪ್ಪ, 62 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ಗಡದಾಸನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 22/10/2020 ರಂದು ಸಂಜೆ 04.00 ಗಂಟೆ ಸಮಯದಲ್ಲಿ ತನ್ನ ಅಣ್ಣನ ಮಗನಾದ ಶಿವಪ್ಪ ಜಿ.ಸಿ ಬಿನ್ ಚಿಕ್ಕ ಮುನಿವೆಂಕಟಪ್ಪ, 43 ವರ್ಷ, ಜಿರಾಯ್ತಿ ರವರು ಅವರ ಬಾಬತ್ತು ಕೆಎ-40 ಯು-2913 ಸ್ಪ್ಲೆಂಡರ್ ಪ್ರೋ ದ್ವಿಚಕ್ರ ವಾಹನದಲ್ಲಿ ರಾಗಿಯನ್ನು ಮಿಷನ್ ಗೆ ಹಾಕಿಸಿಕೊಂಡು ಬರುವ ಸಲುವಾಗಿ ತಮ್ಮ ಗ್ರಾಮದಿಂದ ಕಾಚಹಳ್ಳಿ ಗ್ರಾಮಕ್ಕೆ ಹೋಗಿರುತ್ತಾನೆ. ನಂತರ ಅದೇ ದಿನ ಸಂಜೆ ಸುಮಾರು 7.30 ಗಂಟೆ ಸಮಯದಲ್ಲಿ ಕಾಚಹಳ್ಳಿ ಗ್ರಾಮದ ವಾಸಿ ದೇವರಾಜ ಬಿನ್ ದೊಡ್ಡಗೌಡಪ್ಪ ರವರು ತನಗೆ ಪೋನ್ ಮಾಡಿ ನಿಮ್ಮ ಅಣ್ಣನ ಮಗನಾದ ಶಿವಪ್ಪ ಜಿ.ಸಿ ರವರಿಗೆ ಕೋಲಾರ-ಚಿಂತಾಮಣಿ ಮುಖ್ಯ ರಸ್ತೆಯ ಬ್ರಾಹ್ಮಣರ ದಿನ್ನೆ ಗೇಟ್ ಬಳಿ ಅಪಘಾತವಾಗಿದ್ದು, ಶಿವಪ್ಪ ರವರನ್ನು ದಾರಿಯಲ್ಲಿ ಬಂದ ಯಾವುದೋ ಕಾರಿನಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ಕೂಡಲೇ ತಾನು ಮತ್ತು ಶಿವಪ್ಪ ರವರ ಹೆಂಡತಿ ಲಕ್ಷ್ಮೀದೇವಮ್ಮ ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ಶಿವಪ್ಪ ರವರಿಗೆ ಬಲ ಬಾಗದ ತಲೆಗೆ, ಬಲ ಕಿವಿಗೆ ಮತ್ತು ಬಲ ಬಾಗದ ಸೊಂಟಕ್ಕೆ ರಕ್ತ ಗಾಯಗಳಾಗಿರುತ್ತೆ. ಶಿವಪ್ಪ ರವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು, ತಮಗೆ ಸದರಿ ಅಫಘಾತದ ಬಗ್ಗೆ ಮಾಹಿತಿ ನೀಡಿದ ಮೇಲ್ಕಂಡ ಕಾಚಹಳ್ಳಿ ಗ್ರಾಮದ ವಾಸಿ ದೇವರಾಜ ರವರನ್ನು ಈ ಬಗ್ಗೆ ವಿಚಾರಿಸಲಾಗಿ ಈ ದಿನ ದಿನಾಂಕ 22/10/2020 ರಂದು ಸಂಜೆ ಸುಮಾರು 7.15 ಗಂಟೆ ಸಮಯದಲ್ಲಿ ಶಿವಪ್ಪ ಜಿ.ಸಿ ರವರು ಅವರ ಬಾಬತ್ತು ಕೆಎ-40 ಯು-2913 ಸ್ಪ್ಲೆಂಡರ್ ಪ್ರೋ ದ್ವಿಚಕ್ರ ವಾಹನದಲ್ಲಿ ಕಾಚಹಳ್ಳಿಯಿಂದ ಗಡದಾಸನಹಳ್ಳಿ ಗ್ರಾಮಕ್ಕೆ ಹೋಗಲು ಕೋಲಾರ-ಚಿಂತಾಮಣಿ ಮುಖ್ಯ ರಸ್ತೆಯ ಬ್ರಾಹ್ಮಣರ ದಿನ್ನೆ ಗೇಟ್ ಬಳಿ ಹೋಗುತ್ತಿದ್ದಾಗ ಎದರುಗಡೆಯಿಂದ ಅಂದರೆ ಕೋಲಾರದ ಕಡೆಯಿಂದ ಬಂದ ಕೆಎ-05 ಎನ್-6295 ನೊಂದಣಿ ಸಂಖ್ಯೆಯ ಮಾರುತಿ ಸುಜುಕಿ 800 ಕಾರಿನ ಚಾಲಕ ತನ್ನ ಕಾರ್ ಅನ್ನು ಅತಿವೇಗ ಮತ್ತು ಅಜಾಗರೂಕತೆ ಚಾಲನೆ ಮಾಡಿಕೊಂಡು ಬಂದು ಶಿವಪ್ಪ ಜಿ.ಸಿ ರವರ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿ ಸ್ಥಳದಲ್ಲಿ ಕಾರ್ ಅನ್ನು ನಿಲ್ಲಿಸದೇ ಹೊರಟು ಹೋಗಿದ್ದು ತಾನು ಶಿವಪ್ಪ ಜಿ.ಸಿ ರವರನ್ನು ಉಪಚರಿಸಿ ದಾರಿಯಲ್ಲಿ ಬಂದ ಯಾವುದೋ ಕಾರಿನಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ನಂತರ ವೈದ್ಯರು ಶಿವಪ್ಪ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿಯಿಂದ ಬೆಂಗಳೂರಿನ ನಿಮ್ಹಾನ್ಸ್ ಗೆ ಕಳುಹಿಸಿಕೊಟ್ಟಿದ್ದು, ಅಲ್ಲಿ ಚಿಕಿತ್ಸೆಯನ್ನು ಕೊಡಿಸಿ ನಂತರ ಸೆಂಟ್ ಜಾನ್ಸ್ ಆಸ್ವತ್ರೆಗೆ ಕರೆದುಕೊಂಡು ಬಂದಿರುತ್ತೇವೆ. ಹಾಲಿ ಶಿವಪ್ಪ ಜಿ.ಸಿ ರವರು ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ವತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುತ್ತಾರೆ. ತಾನು ಇದುವರೆಗೂ ತನ್ನ ಅಣ್ಣನ ಮಗನಿಗೆ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ತನ್ನ ಅಣ್ಣನ ಮಗನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ ಮೇಲ್ಕಂಡ ಕೆಎ-05 ಎನ್-6295 ನೊಂದಣಿ ಸಂಖ್ಯೆಯ ಮಾರುತಿ ಸುಜುಕಿ 800 ಕಾರ್ ನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.180/2020 ಕಲಂ: 506,34,504,323,324 ಐ.ಪಿ.ಸಿ:-

     ದಿನಾಂಕ 24/10/2020 ರಂದು ಸಂಜೆ 4-00 ಗಂಟೆಗೆ ಪಿರ್ಯಾಧಿ ಕೊಂಡರೆಡ್ಡಿಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 21/10/2020 ರಂದು ಸಂಜೆ ಸುಮಾರು 6-00 ಗಂಟೆಯ ಸಮಯದಲ್ಲಿ ತಾನು ತಮ್ಮ ಮನೆಯ ಹಿಂಬಾಗ ತನ್ನ ಟ್ರ್ಯಾಕ್ಟರನ್ನು ನಿಲ್ಲಿಸಿಕೊಂಡು ಮನೆಯ  ಮೇಲೆ ಕಡಲೆಕಾಯಿ ಮೂಟೆಗಳನ್ನು ಹಾಕುತ್ತಿದ್ದಾಗ ಆರೋಪಿತ ಗಂಗರೆಡ್ಡಿ ಬಂದು ನೋಡಿಕೊಂಡು ಹೋಗಿ ಪುನಃ ಆರೋಪಿತರೊಂದಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಹಿಂದೆಯೂ ಸಹ ಈಗೆ ಗಲಾಟೆ ಮಾಡುತ್ತೀರಿ ಎಂದು ಹೇಳಿ ಎದೆಗೆ ಕಾಲಿನಿಂದ ಒದ್ದು, ಬಟ್ಟೆಗಳನ್ನು ಹರಿದು, ಮೂಗೇಟು ಉಂಟು ಮಾಡಿದ್ದು, ಕಲ್ಲಿನಿಂದ ತೊಡೆಗೆ ಹೊಡೆದು ತನ್ನ ಮಗನಿಗೆ ಬಾಯಿಯಿಂದ ಕಚ್ಚಿ ಎಡಕೈ ತೋರು ಬೆರಳಿಗೆ ಕಚ್ಚಿ ಕೆಳಗಡೆ ತಳ್ಳಿ ಮೂಗೇಟು ಉಂಟು ಮಾಡಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.118/2020 ಕಲಂ: 279,337,304(A) ಐ.ಪಿ.ಸಿ:-

     ದಿನಾಂಕ 24/10/2020 ರಂದು ಚಿಂತಾಮಣಿ ತಾಲ್ಲೂಕು ಗೋಪಲ್ಲಿ ಗ್ರಾಮದ ಸುಜಾತ ಕೋಂ ಶಿವಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ: ತಾನು ಮೇಲ್ಕಂಡಂತೆ ವಾಸವಾಗಿದ್ದು, ಕೂಲಿ ಕೆಲಸದಿಂದ ಜೀವನ ಮಾಡಿಕೊಂಡಿರುತ್ತೇನೆ. ತನಗೆ ಈಗ್ಗೆ ಸುಮಾರು 13 ವರ್ಷದ ಹಿಂದೆ ನಂಜುಂಡಪ್ಪ ಮಗನಾದ ಶಿವಪ್ಪ ಜೊತೆ ಮದುವೆಯಾಗಿ ತಮಗೆ  12 ವರ್ಷದ ವಯಸ್ಸಿನ ಸಂಧ್ಯಾ 6 ವರ್ಷ ವಯಸ್ಸಿನ ಶ್ರಾವಣಿ ಎಂಬ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ತನ್ನ ಗಂಡನಾದ 36 ವರ್ಷ ವಯಸ್ಸಿನ ಶಿವಪ್ಪ ರವರಿಗೆ ಮೈಮೇಲೆ ಗುಳ್ಳೆ ಎದ್ದಿದ್ದರಿಂದ   ದಿನಾಂಕ 24/10/2020 ರಂದು ಬೆಳಿಗ್ಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಸ್ ನಲ್ಲಿ ಹೋಗಲು ತಮ್ಮೂರಿನ ಕ್ರಾಸ್ ಗೆ ಹೋದರು. ಅವರು ಹೋದ ಹದಿನೈದು ನಿಮಿಷದಲ್ಲಿ ತಮ್ಮ ಗ್ರಾಮದ ನರಸಮ್ಮ ರವರು ತನಗೆ ಕರೆ ಮಾಡಿ ಗೋಪಲ್ಲಿ ಕ್ರಾಸ್ ನಲ್ಲಿ ಅಪಘಾತವಾಗಿ ತನ್ನ ಗಂಡನಾದ ಶಿವಪ್ಪ ಹಾಗೂ ತಮ್ಮ ಗ್ರಾಮದ ನಾರಾಯಣಸ್ವಾಮಿ, ವರುಣ್ ಕುಮಾರ್ ರವರಿಗೆ ಗಾಯಗಳಾಗಿರುವುದಾಗಿ ತಿಳಿಸಿದಾಗ ಕೂಡಲೇ ತಾನು ಕ್ರಾಸ್ ಗೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿರುತ್ತೆ. ಬೆಳಿಗ್ಗೆ  11-00 ಗಂಟೆ ಸಮಯದಲ್ಲಿ ತನ್ನ ಗಂಡ ಕ್ರಾಸ್ ನಲ್ಲಿನ ವರುಣ್ ಕುಮಾರ್ ರವರ ಚಿಲ್ಲರೆ ಅಂಗಡಿ ಬಳಿ ನಾರಾಯಣಸ್ವಾಮಿ ರವರೊಂದಿಗೆ ಕುಳಿತಿದ್ದಾಗ ಕೆಎ-03 ಎನ್ ಹೆಚ್-1318 ನೋಂದಣಿ ಸಂಖ್ಯೆಯ ಮಾರುತಿ ಬಲೆನೋ  ಕಾರು ಚಾಲಕ  ಮದನಪಲ್ಲಿ ರಸ್ತೆ ಕಡೆಯಿಂದ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ವಿರುದ್ದ ದಿಕ್ಕಿನ ಗೋಪಲ್ಲಿ ಕ್ರಾಸ್ ನ ಪುಟ್ ಪಾತ್ ರಸ್ತೆಯಲ್ಲಿನ ಚಿಲ್ಲರೆ ಅಂಗಡಿ ಬಳಿ ಕುಳಿತಿದ್ದ ನಾರಾಯಣಸ್ವಾಮಿ, ವರುಣ್ ಕುಮಾರ್ ಹಾಗೂ ತನ್ನ ಗಂಡನಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ತನ್ನ ಗಂಡ ಶಿವಪ್ಪನಿಗೆ ಮೂಗು ಮತ್ತು ಕಿವಿಯಲ್ಲಿ ತೀವ್ರ ರಕ್ತಸ್ರಾವವಾಗಿ ಬಿದ್ದಿದ್ದು, ನಾರಾಯಣಸ್ವಾಮಿ ಕಾಲಿಗೆ ಗಾಯವಾಗಿರುತ್ತದೆ. ವರುಣ್ ಕುಮಾರ್ ಗೆ ಎರಡೂ ಕಾಲುಗಳಿಗೆ ಗಾಯವಾಗಿರುತ್ತದೆ. ಆಗ ಅಲ್ಲಿಯೇ ಇದ್ದ ತಮ್ಮ ಗ್ರಾಮದ ಮಂಜುನಾಥ ಬಿನ್ ವಾಲೆಪ್ಪ, ನಾಗರತ್ನ ಕೋಂ ರವಿ  ರವರು ಗಾಯಗೊಂಡವರನ್ನು ಉಪಚರಿಸಿರುತ್ತಾರೆ. ತಾನು ಯಾವುದೋ ಕಾರಿನಲ್ಲಿ ತನ್ನ ಗಂಡ ಮತ್ತು ಗಾಯಾಳುಗಳನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಬೆಳಿಗ್ಗೆ ಸುಮಾರು 11-30 ಗಂಟೆ ಸಮಯದಲ್ಲಿ ತನ್ನ ಗಂಡನಾದ ಶಿವಪ್ಪ ರವರ ಕಿವಿ ಮತ್ತು ಮೂಗಿನಲ್ಲಿನ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುತ್ತಾರೆ. ಮೃತ ತನ್ನ ಗಂಡನನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಟ್ಟಿರುತ್ತೆ.  ಗಾಯಾಳುಗಳಾದ ನಾರಾಯಣಸ್ವಾಮಿ, ವರುಣ್ ಕುಮಾರ್ ರವರು ಹೆಚ್ಚಿನ ಚಿಕಿತ್ಸೆಗಾಗಿ ಹೋಗಿರುತ್ತಾರೆ. ಅಪಘಾತವಾದ ಸ್ಥಳದಲ್ಲಿ ಮೇಲ್ಕಂಡ ಜಖಂಗೊಂಡ ಕಾರು ಇದ್ದು,  ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿಕೊಂಡು ಬಂದು ಅಪಘಾತಪಡಿಸಿ ತನ್ನ ಗಂಡನ ಸಾವಿಗೆ ಕಾರಣನಾದ ಕೆಎ-03 ಎನ್ ಹೆಚ್-1318 ನೋಂದಣಿ ಸಂಖ್ಯೆಯ ಮಾರುತಿ ಬಲೆನೋ  ಕಾರು ಚಾಲಕನ ಮೇಲೆ  ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಪಿರ್ಯಾದು.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.119/2020 ಕಲಂ: 457,380 ಐ.ಪಿ.ಸಿ:-

     ದಿನಾಂಕ 24/10/2020  ರಂದು ಮದ್ಯಾಹ್ನ 2-30 ಗಂಟೆಗೆ ದ್ಯಾವಪ್ಪ.ಜಿ.ಕೆ, ಅಡಳಿತಾಧಿಕಾರಿಗಳು, ಏನಿಗದಲೆ ಗ್ರಾಮ ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ: ತಾನು ಚಿಂತಾಮಣಿ ತಾಲ್ಲೂಕು ಏನಿಗದಲೆ ಗ್ರಾಮ ಪಂಚಾಯ್ತಿಯಲ್ಲಿ ಅಡಳಿತಾಧಿಕಾರಿಯಾಗಿ 2020 ನೇ ಸಾಲಿನ ಜುಲೈ ತಿಂಗಳಿನಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿರುತ್ತೇನೆ. ದಿನಾಂಕ 24/10/2020 ರಂದು ಬೆಳಿಗ್ಗೆ ವಾಟರ್ ಮ್ಯಾನ್ ನಾರಾಯಣಪ್ಪ ಹಾಗೂ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಪಿ.ಸಿ ಚೌಡರೆಡ್ಡಿ ರವರು ಪಂಚಾಯ್ತಿ ಕಛೇರಿಯ ಬೀಗಗಳನ್ನು ಯಾರೋ ಓಡೆದುಹಾಕಿ ಕಳ್ಳತನ ಮಾಡಿರುವುದನ್ನು ನೋಡಿ ತನಗೆ ಮಾಹಿತಿ ನೀಡಿದ್ದು, ಅದರಂತೆ ತಾನು ಮತ್ತು ಗ್ರಾಮ ಪಂಚಾಯ್ತಿ ಪಿಡಿಓ ದೇವರಾಜ ರವರು ಹೋಗಿ ನೋಡಲಾಗಿ ಕಳ್ಳತನ ಮಾಡಿರುವುದು ನಿಜವಾಗಿದ್ದು, ದಿನಾಂಕ 23/10/2020 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಏನಿಗದಲೆ ಗ್ರಾಮ ಪಂಚಾಯ್ತಿ ಕಟ್ಟಡದ ಮುಂಬಾಗಿಲಿನ ಬೀಗವನ್ನು ಯಾವುದೋ ಬಲವಾದ ಅಯುಧದಿಂದ ಮೀಟಿ ಬೀಗ ಒಡೆದುಹಾಕಿ ಒಳಗೆ ಪ್ರವೇಶ ಮಾಡಿ ಹಾಲ್ ನಲ್ಲಿದ್ದ ಸಿಸಿ ಕ್ಯಾಮರಾ ವನ್ನು ಒಡೆದು ಹಾಕಿ ಕಂಪ್ಯೂಟರ್ ಕೊಠಡಿಯ ಬೀಗವನ್ನು ಮೀಟಿ ಸದರಿ ರೂಂ ನಲ್ಲಿನ 27000/- ರೂ ಮೌಲ್ಯದ ಚಾಲ್ತಿಯಲ್ಲಿದ್ದ ಹೊಸದಾದ ಎರಡು ಬ್ಯಾಟರಿ ಗಳು, 5000/- ರೂ ಮೌಲ್ಯದ ಸಿಸಿ ಕ್ಯಾಮರಾ ದತ್ತಾಂಶ ಸಂಗ್ರಹದ ಬಾಕ್ಸ್ ನ್ನು ಕಳವು ಮಾಡಿದ್ದು, ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ಕೊಠಡಿ, ದಾಸ್ತಾನು ಕೊಠಡಿ ಮಿಟಿಂಗ್ ಹಾಲ್ ಹಾಗೂ ಬಿಲ್ ಕಲೆಕ್ಟರ್ ಕೊಠಡಿಗಳ ಬೀಗಗಳನ್ನು ಮೀಟಿ ದಾಸ್ತಾನು ಕೊಠಡಿಯಲ್ಲಿ 6000/- ರೂ ಮೌಲ್ಯದ ಒಂದು ಬಾಕ್ಸ್ ಬಲ್ಪ್, 840 ರೂ ಮೌಲ್ಯದ 3 ಪೇಸ್ ಕಟೌಟ್, 12.500/- ರೂ ಮೌಲ್ಯದ ಹಳೇ ಕೇಬಲ್, 5600/- ಮೌಲ್ಯದ ಕಾಲರ್ಸ್, 4000/- ರೂ ಮೌಲ್ಯದ ಎರಡು ಹಳೇ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳವು ಆಗಿರುವ ಮಾಲುಗಳ ಒಟ್ಟು ಅಂದಾಜು ಮೌಲ್ಯ  60940/- ರೂ ಆಗಿರುತ್ತದೆ.  ಪಂಚಾಯ್ತಿಯ ಬೀಗಗಳನ್ನು ಮುರಿದು ಕಳವು ಮಾಡಿದ ಆರೋಪಿತರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಪಿರ್ಯಾದು.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.119/2020 ಕಲಂ: 279,337,304(A) ಐ.ಪಿ.ಸಿ:-

     ದಿನಾಂಕ: 24/10/2020 ರಂದು ಬೆಳಿಗ್ಗೆ 8-30 ಗಂಟೆಗೆ ಪಿರ್ಯಾದಿದಾರರಾದ ಸೈಯದ್ ಅಲಿ ನವಾಜ್ ಬಿನ್ ಲೇಟ್ ಕಂಬರ್ ಅಲಿ, 65 ವರ್ಷ, ಮುಸ್ಲಿಂ ಜನಾಂಗ, ವಾಸ ಪೊತೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನನ್ನ ಮಗಳಾದ ಹುಸೇನಿಬೇಗಂ ರವರಿಗೆ ಸುಮಾರು 15 ವರ್ಷಗಳ ಹಿಂದೆ ಮಧುವೆ ಮಾಡಿಕೊಟ್ಟಿದ್ದು ನನ್ನ ಮಗಳ ಗಂಡನಾದ ಮಿರ್ಜಾ ಅಬ್ಬಾಸ್ ರವರು ಸುಮಾರು ಈಗ್ಗೆ 6 ವರ್ಷಗಳ ಹಿಂದೆ ಎಲ್ಲಿಯೋ ಹೊರಟು ಹೋಗಿದ್ದು ಅಂದಿನಿಂದ ನನ್ನ ಮಗಳು ನಮ್ಮ ಮನೆಯಲ್ಲಿಯೇ ವಾಸವಾಗಿದ್ದು ಹಿಗೀರುವಾಗ ದಿನಾಂಕ: 23/10/2020 ರಂದು ಸಂಜೆ 6-30 ಗಂಟೆಯ ಸಮಯದಲ್ಲಿ ನಮ್ಮ ಮನೆಯಿಂದ ನಮ್ಮ  ಗ್ರಾಮದ ಸೈಯದ್ ಅಲಿ ಜವಾದ್ ರವರ ಮನೆಗೆ ಹೋಗಿ ಮತ್ತೆ ವಾಪಸ್ ನಮ್ಮ ಮನೆಗೆ ಬರಲು ನಮ್ಮ ಗ್ರಾಮದಲ್ಲಿರುವ ಎಸ್.ಎಚ್ 9 ರಸ್ತೆಯನ್ನು ದಾಟುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ KA-40-W-4326 ದ್ವಿ ಚಕ್ರ ವಾಹನದ ಸವಾರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನ್ನ ಮಗಳಿಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ ನನ್ನ ಮಗಳು ರಸ್ತೆ ಮೇಲೆ ಬಿದ್ದು ತಲೆಗೆ, ಎದೆಗೆ ಮತ್ತು ಸೊಂಟಕ್ಕೆ ಗಾಯಗಳಾಗಿದ್ದು ಅಷ್ಟರಲ್ಲಿ ನಮ್ಮ ಗ್ರಾಮದ ಕೌನೇನ್ ರಜ ಬಿನ್ ಯೂಸೂಫ್ ಅಲಿ ಮತ್ತು ಹೈದರ್ ಅಲಿ ಬಿನ್ ಅಲಿ ಜವಾದ್ ರವರು ನನ್ನ ಮಗಳನ್ನು ಉಪಚರಿಸಿ ಯಾವುದೋ ಒಂದು ಆಟೋದಲ್ಲಿ ಗೌರಿಬಿದನೂರಿನ ಮಾನಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಶುಶೃಶ ಆಸ್ಪತ್ರೆಗೆ ಕರೆದುಕೊಂಡು ಹೋಗುವಾದ ದಾರಿ ಮಧ್ಯೆ ಮೃತಪಟ್ಟಿದ್ದು ಮೃತದೇಹವನ್ನು ವಾಪಸ್ ನಮ್ಮ ಗ್ರಾಮಕ್ಕೆ ತೆಗೆದುಕೊಂಡು ಬಂದಿದ್ದು ದ್ವಿ ಚಕ್ರ ವಾಹನದ ಸವಾರನ ಹೆಸರು ವಿಳಾಸ ತಿಳಿಯಲಾಗಿ ನವೀನ್ ಕುಮಾರ್ ಬಿನ್ ಸೋಮಶೇಖರ್ ನಂದಿಗಾನಹಳ್ಳಿ ಗ್ರಾಮವೆಂದು ತಿಳಿದು ಬಂದಿದ್ದು ಅವರಿಗೂ ಸಹಾ ಅಪಘಾತದಿಂದ ಗಾಯಗಳಾಗಿದ್ದು ಆದ್ದರಿಂದ ಸದರಿ ಅಪಘಾತಪಡಿಸಿದ KA-40-W-4326 ದ್ವಿ ಚಕ್ರ ವಾಹನ ಸವಾರನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ಪ್ರ.ವ.ವರದಿ.

 1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.76/2020 ಕಲಂ: 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ:23/10/2020 ರಂದು ರಾತ್ರಿ 09-30 ಗಂಟೆಗೆ ಠಾಣೆಯ ಹೆಚ್.ಸಿ-180 ರವರು ಆರ್,ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ರವಣಪ್ಪರವರ  ಹೇಳಿಕೆಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ.ನಾನು ಚಾಲಕ ವೃತ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ ನಾನು ಪಾತಪಾಳ್ಯ ಹೋಬಳಿ ಕಲ್ಲಿಪಲ್ಲಿ ಗ್ರಾಮದಲ್ಲಿ ಓಬಳಪ್ಪ ರವರ ಮಗಳಾದ ಶೋಭ ರವರನ್ನು ಮದುವೆಯಾಗಿದ್ದು ನಮಗೆ ಒಂದು ಗಂಡು ಮಗು ಒಂದು ಹೆಣ್ಣು ಮಗು ಇರುತ್ತೆ, ನಾನು ನಮ್ಮ ಮಾವನವರಾದ ಓಬಳಪ್ಪ ರವರನ್ನು ನೋಡಿಕೊಂಡು ಬರಲು ಕಲ್ಲಿಪಲ್ಲಿ ಗ್ರಾಮಕ್ಕೆ ದಿನಾಂಕ:22/10/2020 ರಂದು ಸಂಜೆ ಹೋಗಿ ನೋಡಿಕೊಂಡು ಸಂಜೆ 07-15 ಗಂಟೆಯ ಸಮಯದಲ್ಲಿ ಕಲ್ಲಿಪಲ್ಲಿ ಗ್ರಾಮದಿಂದ ಚೇಳೂರಿಗೆ ಬರಲು ವಾಪಸ್ಸು ಯರ್ರಪೆಂಟ್ಲ ಗ್ರಾಮದ ಬಳಿ ತಿರುವಿನಲ್ಲಿ ಬರುತ್ತಿದ್ದಾಗ ನಾನು ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿ ಚಕ್ರ ವಾಹನ ಸಂಖ್ಯೆ ಎ.ಪಿ-04 ಎ.ಹೆಚ್-2120 ಸ್ಪೆಂಡರ್ ಪ್ಲಸ್ ವಾಹನದಲ್ಲಿ ಬರುತ್ತಿದ್ದಾಗ ಎದರುಗಡೆಯಿಂದ ಬಂದ ಟಾಟಾ ಏಸಿ ವಾಹನದ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿಪಡಿಸಿದರ ಪರಿಣಾಮ ನಾನು ದ್ವಿ ಚಕ್ರ ವಾಹನದ ಸಮೇತ ಕೆಳಗೆ ಬಿದ್ದು ದ್ವಿ ಚಕ್ರ ವಾಹನ ಜಖಂಗೊಂಡು ನನಗೆ ಬಲಗಾಲು ಪಾದದ ಬಳಿ ರಕ್ತ ಗಾಯವಾಗಿದ್ದು ಸದರಿ ಅಪಘಾತ ಪಡಿಸಿದ ಟಾಟಾ ಏಸಿ ವಾಹನ ಸಂಖ್ಯೆ ಮತ್ತು ಚಾಲಕನ ಹೆಸರು ತಿಳಿದಿರುವುದಿಲ್ಲ, ನಂತರ ವಿಷಯ ತಿಳಿದ ಕಲ್ಲಿಪಲ್ಲಿ ಗ್ರಾಮದ ಮಂಜು ಮತ್ತು ಸೀನಾ ರವರು ನನ್ನನ್ನು ಆಂಬುಲೆನ್ಸ್ ನಲ್ಲಿ ಚೇಳೂರು ಚಿಂತಾಮಣಿ ಮಾರ್ಗವಾಗಿ ಕೋಲಾರದ ಟಮಕ ಬಳಿ ಇರುವ ಆರ್,ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿರುತ್ತಾರೆ ನನಗೆ ಅಪಘಾತಪಡಿಸಿದ ವಾಹನ ಮತ್ತು ಚಾಲಕನ ಮೆಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ,ಸಂ 76/2020 ಕಲಂ 279,337 ಐ,ಪಿ,ಸಿ ಮತ್ತು 187 ಐ.ಎಮ್.ವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.77/2020 ಕಲಂ: 380,457 ಐ.ಪಿ.ಸಿ :-

     ದಿನಾಂಕ:24/10/2020 ರಂದು ಮದ್ಯಾಹ್ನ 12-10 ಗಂಟೆಗೆ ಪಿರ್ಯಾದುದಾರರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು ಗ್ರಾಮ ಪಂಚಾಯ್ತಿಯ ಗೊರವಾಂಡ್ಲಪಲ್ಲಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ, ದಿನಾಂಕ:12/10/2020 ರಿಂದ 30/10/2020 ರವರೆಗೆ ದಸಾರಾ ರಜೆ ನೀಡಲಾಗಿದ್ದು ಈ ದಿನ ದಿನಾಂಕ:24/10/2020 ರಂದು ಬೆಳಗ್ಗೆ ಸುಮಾರು 08-00 ಗಂಟೆ ಸಮಯದಲ್ಲಿ ಮುಖ್ಯ ಅಡುಗೆಯವರು ಹಾಗೂ ಎಸ್.ಡಿ.ಎಮ್.ಸಿ ಅದ್ಯಕ್ಷರಾದ ನಾಗರಾಜುರವರು ಹೊಲದ ಕಡೆ ಹೋಗುವಾಗ ನಮ್ಮ ಶಾಲೆಯ ಅಡುಗೆ ಕೋಣೆಯ ಬಾಗಿಲು ತೆರೆದಿರುವುದು ಗಮನಿಸಿದ್ದು ಹತ್ತಿರಕ್ಕೆ ಹೋಗಿ ನೋಡಿದಾಗ ಅಡುಗೆ ಕೋಣೆಯ ಬೀಗವನ್ನು ಒಡೆದು ಹಾಕಿರುವುದು ಕಂಡು ಬಂದಿದ್ದು ಅಡುಗೆ ಕೋಣೆಯಲ್ಲಿದ್ದ 02 ಹೆಚ್.ಪಿ ಗ್ಯಾಸ್ ಸಿಲಿಂಡರ್ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರವಣಿ ಮುಖಾಂತರ ನಾಗರಾಜು ರವರು ನನಗೆ ಕರೆ ಮಾಡಿ ತಿಳಿಸಿದು,್ದ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನಿಜವಾಗಿರುತ್ತೆ. ಸದರಿ ಕೃತ್ಯವು ದಿನಾಂಕ:23/10/2020 ರಂದು ರಾತ್ರಿಯಲ್ಲಿ ನಡೆದಿರುತ್ತೆ, ಸದರಿ 02 ಗ್ಯಾಸ್ ಸಿಲಿಂಡರ್ ಗಳ ಬೆಲೆ ಸುಮಾರು 5000/- ಸಾವಿರ ರೂ ಬೆಲೆ ಬಾಳುವುದಾಗಿರುತ್ತೆ, ಸದರಿ ವಿಚಾರವನ್ನು ನಮ್ಮ ಮೇಲಾಧಿಕರಿಗಳಿಗೆ ದೂರವಾಣಿ ಮುಖಾಂತರ ತಿಳಿಸಿರುತ್ತೇನೆ, ಆದ್ದರಿಂದ ಕಳವು ಮಾಡಿರುವ ಕಳ್ಳರನ್ನು ಮತ್ತು ಸಿಲಿಂಡರ್ ಗಳನ್ನು ಪತ್ತೆಮಾಡಿ ಕಳ್ಳರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ,ಸಂ 77/2020 ಕಲಂ 457.380 ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ,