ದಿನಾಂಕ :24/07/2020 ರ ಅಪರಾಧ ಪ್ರಕರಣಗಳು

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 275/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ: 23/07/2020 ರಂದು ರಾತ್ರಿ 8.55 ಗಂಟೆಗೆ ಮಾನ್ಯ ನ್ಯಾಯಾಧೀಶರು ಇ-ಮೇಲ್ ಮುಖಾಂತರ ನೀಡಿದ ಅನುಮತಿಯನ್ನು ಪಡೆದು ದಾಖಲಿಸಿಕೊಂಡ ಪ್ರರಕಣದ ಸಾರಾಂಶವೇನೆಂದರೆ, ಈ ದಿನ ದಿನಾಂಕ:23-07-2020 ರಂದು ಸಂಜೆ 4-00 ಗಂಟೆಯಲ್ಲಿ ಠಾಣೆಯ ಪಿ.ಎಸ್.ಐ ರವರಾದ ನರೇಶ್ ನಾಯ್ಕ್ ಎಸ್ ರವರು ಠಾಣೆಯಲ್ಲಿದ್ದಾಗ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಸಂತೇಕಲ್ಲಹಳ್ಳಿ ಗ್ರಾಮದ ಸಮೀಪವಿರುವ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಯಾರೋ ಕೆಲವರು ಗುಂಪುಕಟ್ಟಿಕೊಂಡು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪಿಟ್ ಜೂಜಾಟ ಆಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಸದರಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಠಾಣೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಸಿ.ಹೆಚ್.ಸಿ-41 ಜಗದೀಶ, ಸಿ.ಹೆಚ್.ಸಿ-249 ಸಂದೀಪ್ ಕುಮಾರ್,  ಸಿಪಿಸಿ-516 ವಿಶ್ವನಾಥ, ಸಿಪಿಸಿ-504 ಸತೀಶ, ಪಿಸಿ-197 ಅಂಬರೀಶ, ಸಿಪಿಸಿ-339 ಕರಿಯಪ್ಪ, ಚಾಲಕ ಎ.ಹೆಚ್.ಸಿ-08 ಮುಖೇಶ್ ರವರೊಂದಿಗೆ KA-40 G-326 ನೋಂದಣಿ ಸಂಖ್ಯೆಯ ಸರ್ಕಾರಿ ಜೀಪ್ ನಲ್ಲಿ ಸಂತೇಕಲ್ಲಹಳ್ಳಿ ಗ್ರಾಮದ ಸಮೀಪವಿರುವ ಸರ್ಕಾರಿ ಅರಣ್ಯ ಪ್ರದೇಶಕ್ಕೆ ಹೋಗಿ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಕೆಲವರು ಗುಂಪು ಕಟ್ಟಿಕೊಂಡು 100 ರೂ ಅಂದರ್ 100 ರೂ ಬಾಹರ್ ಎಂದು ಕೂಗಾಡುತ್ತಾ ಇಸ್ಪಿಟ್ ಜೂಜಾಟ ಆಡುತ್ತಿದ್ದು ಸದರಿಯವರನ್ನು ಸುತ್ತುವರೆದು ಓಡಿಹೋಗದಂತೆ ಎಚ್ಚರಿಕೆ ನೀಡಿದರೂ ಕೆಲವರು ಓಡಿ ಹೋಗಿದ್ದು, ಸ್ಥಳದಲ್ಲಿ ಇಬ್ಬರು ಆಸಾಮಿಗಳು ಸಿಕ್ಕಿ ಬಿದ್ದಿದ್ದು, ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1)ಆನಂದ ಬಿನ್ ನಾರಾಯಣಸ್ವಾಮಿ, 32ವರ್ಷ, ವಕ್ಕಲಿಗರು, ಜಿರಾಯ್ತಿ, ಚನ್ನಸಂದ್ರ ಗ್ರಾಮ, ವೇಮಗಲ್ ಹೋಬಳಿ, ಕೋಲಾರ ತಾಲ್ಲೂಕು ಮತ್ತು ಜಿಲ್ಲೆ, 2)ಮಧುಕರ್ ಬಿನ್ ಲೇಟ್ ಗೋವಿಂದಪ್ಪ, 32ವರ್ಷ, ಚಾಲಕ ವೃತ್ತಿ, ವಕ್ಕಲಿಗರು, ಚನ್ನಸಂದ್ರ ಗ್ರಾಮ, ವೇಮಗಲ್ ಹೋಬಳಿ, ಕೋಲಾರ ತಾಲ್ಲೂಕು ಮತ್ತು ಜಿಲ್ಲೆ ಎಂದು ತಿಳಿಸಿರುತ್ತಾರೆ. ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ 52 ಇಸ್ಪಿಟ್ ಎಲೆಗಳು, ಪಣಕ್ಕಿಟ್ಟಿದ್ದ 6,160/- ರೂ ನಗದು ಹಣ ಇರುತ್ತದೆ. ಸದರಿ ಮಾಲುಗಳನ್ನು ಸಂಜೆ 4-30 ರಿಂದ 5-30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಮಾಲು, ಆರೋಪಿ ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿದ್ದು, ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪಿಟ್ ಜೂಜಾಟವಾಡುತ್ತಿದ್ದ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದರ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ನಂತರ ಪ್ರಕರಣವನ್ನು ದಾಖಲು ಮಾಡಲು ಇ-ಮೇಲ್ ಮುಖಾಂತರ ಘನ ನ್ಯಾಯಾಲಯದ ಅನುಮತಿಗಾಗಿ ನಿವೇದಿಸಿಕೊಂಡಿದ್ದು, ಘನ ನ್ಯಾಯಾಲಯವು ನಿವೇದನೆಯನ್ನು ಪುರಸ್ಕರಿಸಿ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 187/2020 ಕಲಂ. 307,332,353 ಐ.ಪಿ.ಸಿ:-

          ದಿನಾಂಕ 23-07-2020 ರಂದು ಮಧ್ಯಾಹ್ನ 12-45 ಗಂಟೆಗೆ  ಗೌರಿಬಿದನೂರು ಸರ್ಕಾರಿ  ಅಸ್ಪತ್ರೆಯಿಂದ ಬಂದ ಮೆಮೋ ಪಡೆದುಕೊಂಡು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪಿರ್ಯಾದಿ ಮಧುಕುಮಾರ್ ಬಿನ್ ಡಿ. ವೆಂಕಟೇಶಪ್ಪ, 25 ವರ್ಷ, ಸಿ.ಪಿ.ಸಿ.-317 ಗೌರಿಬಿದನೂರು ಗ್ರಾಮಾಂತರ ಠಾಣೆರವರ ಹೇಳಿಕೆಯನ್ನು 13-00 ಗಂಟೆಯಿಂದ 14-00 ಗಂಟೆಯವರೆಗೆ ದಾಖಲಿಸಿಕೊಂಡಿದ್ದರ ಸಾರಾಂಶವೇನೆಂದರೆ ತಾನು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ವರ್ಷ, 2 ತಿಂಗಳಿಂದ ಕರ್ತವ್ಯ ನಿರ್ವಹಿಸುತಿದ್ದು, ಈಗ್ಗೆ 6 ತಿಂಗಳಿಂದ ಹೊಸೂರು ಹೊರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿನಾಂಕ:23/07/2020 ರಂದು ಬೆಳಿಗ್ಗೆ ಗೌರಿಬಿದನೂರು ಪಿ.ಎಸ್.ಐ ಶ್ರೀ ಮೋಹನ್ ರವರು ಮತ್ತು ಪಿ.ಸಿ-433 ಬಾಬಾಜಾನ್ ರವರೊಂದಿಗೆ ಕೆ.ಎ-40-ಜಿ-282 ರ ಸರ್ಕಾರಿ ಜೀಪ್ ನಲ್ಲಿ ಹೊರಠಾಣೆಗೆ ಬಂದು ಠಾಣಾ ಮೊ.ಸ.186/2020 ರ ಕೊಲೆ ಕೇಸಿನಲ್ಲಿ ಅರೋಪಿಗಳ ಪತ್ತೆಮಾಡಬೇಕಾಗಿದ್ದು, ಆರೋಪಿಗಳ ಪೈಕಿ ಅಂಬರೀಶ್ ಮತ್ತು ನರೇಂದ್ರ ರವರು ಹಳೆ ಉಪ್ಪಾರಹಳ್ಳಿ ಗ್ರಾಮದಲ್ಲಿ ಇರುವುದಾಗಿ ಮಾಹಿತಿ ಬಂದಿದ್ದರಿಂದ ನಾನು ಪಿ.ಎಸ್.ಐ ಮೊಃಹನ್ ಸಾಹೇಬರು, ಪಿ.ಸಿ-413 ಬಾಬಾಜಾನ್ ರವರು ಸುಮಾರು 10-00 ಗಂಟೆಗೆ ಸದರಿ ಗ್ರಾಮಕ್ಕೆ ಹೋಗಿ ಅವರುಗಳನ್ನು ನಾವುಗಳು ವಶಕ್ಕೆ ಪಡೆದು ಹೊಸೂರು ಹೊರಠಾಣೆಗೆ ಕರೆದುಕೊಂಡು ಬಂದೆವು. ಪಿ.ಎಸ್.ಐ ಹಾಗೂ ನಾವು ಸದರಿ ಪ್ರಕರಣದಲ್ಲಿ ನೆನ್ನೆ ಕೊಲೆಯಾದ ಬಗ್ಗೆ ಮಾಹಿತಿ ಮತ್ತು ಹಾಲೀ ಬಂದಿಸಿರುವ ಆರೋಪಿಗಳಾದ ಜಂಗಾಲರೆಡ್ಡಿ @ ವೆಂಕಟರೆಡ್ಡಿ, ಅಜಯ್, ಮತ್ತು ವೆಂಕಟೇಶ್ ರವರುಗಳಿಗೆ ಕೊಲೆ ಮಾಡಿದ ನಂತರ ಆಶ್ರಯ ಕೊಟ್ಟು ಊಟ ಮದ್ಯಪಾನದ ವ್ಯವಸ್ಥೆ ಮಾಡಿಸಿ ಕೊಲೆ ಮಾಡಲು ಉಪಯೋಗಿಸಿದ ಆಯುಧಗಳನ್ನು ಬಿಸಾಡಿಸಲು ಪ್ಲಾನ್ ಕೊಟ್ಟಿದ್ದ ಬಗ್ಗೆ ಪಿ.ಎಸ್.ಐ ರವರು ಮತ್ತು ನಾವು ಪ್ರಶ್ನೆ ಮಾಡುತ್ತಿದ್ದೆವು. ಅದಕ್ಕೆ ಅಂಬರೀಶ್ ರವರು ನನಗೆ ಯಾವುದೇ ಮಾಹಿತಿ ಗೊತ್ತಿಲ್ಲ, ನಮ್ಮನ್ನೇಕೆ ಕರೆದುಕೊಂಡು ಬಂದಿದ್ದು, ನಮಗೆ ಗೊತ್ತಿದೆ ಏನು ಮಾಡುವುದು ಎಂದು ಉಡಾಫೆಯಿಂದ ಮಾತನಾಡುತ್ತ ನಾವು ಕೇಳಿದ ಮಾಹಿಗಳಿಗೆ ಸರಿಯಾದ ಮಾಹಿತಿಗಳನ್ನು ಕೊಡುತ್ತಿರಲಿಲ್ಲ. ನಂತರ ನರೇಂದ್ರ ರವರನ್ನು ಪ್ರತ್ಯೇಕವಾಗಿ ವಿಚಾರಿಸಿದಾಗ ನೆನ್ನೆ ಸಂಜೆ ಮೇಲೆ ತಿಳಿಸಿರುವ ಮೂರು ಜನ ಆರೋಪಿಗಳಿಗೆ ಕೊಲೆ ಮಾಡಲು ಸೂಚಿಸಿದ ಬಗ್ಗೆ, ಕೊಲೆಯಾದ ನಂತರ ಹಳೇ ಉಪ್ಪಾರಹಳ್ಳಿ ಅರಣ್ಯ ಪ್ರದೇಶದಲ್ಲಿ ಊಟ ಮದ್ಯಪಾನ ಕೊಟ್ಟು ಆಯುಧಗಳನ್ನು ಒಂದು ಕಡೆ ಬಿಸಾಡಿಸಲು ನೆರವು ಕೊಟ್ಟ ಇತ್ಯಾದಿ ಮಾಹಿತಿಯನ್ನು ತಿಳಿಸಿದನು. ಮತ್ತೆ ಅಂಬರೀಶ್ ರವರನ್ನು ಇದರ ಬಗ್ಗೆ ಮರುಪ್ರಶ್ನಿಸಿದಾಗ ಅಯ್ತು ನೋಡೋಣ ಬನ್ನಿ ಅಲ್ಲಿ ಯೋಚನೆ ಮಾಡಿ ತಿಳಿಸುತ್ತೇನೆಂದು ತಿಳಿಸಿದನು. ಅಷ್ಟರಲ್ಲಿ ತನಿಖಾ ತಂಡದಲ್ಲಿರುವ ಇನ್ಸ್ ಪೆಕ್ಟರ್ ಶ್ರೀ ನಯಾಜ್ ಬೇಗ್ ರವರು ಬಂದು ಪ್ರಶ್ನೆಗಳನ್ನು ಕೇಳಿದರೂ ಅವರಿಗೂ ಇದೇ ಉತ್ತರಗಳನ್ನು ತಿಳಿಸಿದರು. ನಂತರ ಮೇಲ್ಕಂಡ ವಿಚಾರಗಳನ್ನು ಖಚಿತಪಡಿಸಿಕೊಳ್ಳಲು ತನಿಖಾಧಿಕಾರಿಗಳೊಂದಿಗೆ ಸಮಾಲೋಚಿಸಿ, ಅಂಬರೀಶ್ ಮತ್ತು ನರೇಂದ್ರ ರವರು ತಿಳಿಸಿರುವ ವಿಚಾರಗಳು ಮತ್ತು ಕೇಸಿನ ಸಾಕ್ಷ್ಯದಾರಗಳನ್ನು ಪರಿಶೀಲಿಸಲು ಅಂಬರೀಶ್ ಮತ್ತು ನರೇಂದ್ರ ರವರನ್ನು ಸಿ.ಪಿ.ಐ ಬಾಗೇಪಲ್ಲಿ ಮತ್ತು ಪಿ.ಎಸ್.ಐ ಸರ್ ರವರು ಪ್ರತ್ಯೇಕವಾಗಿ ಅವರುಗಳು ಹೇಳಿದ ಸ್ಥಳವಾದ ಹಳೇ ಉಪ್ಪಾರಹಳ್ಳಿ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋದೆವು. ಅಂಬರೀಶ್ ರವರನ್ನು ಪಿ.ಎಸ್.ಐ ಮೋಹನ್ ಹಾಗೂ ನಾನು ನಮ್ಮ ಠಾಣೆಯ ಕೆ.ಎ-40-ಜಿ-282 ರ ಜೀಪಿನಲ್ಲಿ ಹಾಗೂ ನರೇಂದ್ರ ರವರನ್ನು ಸಿಪಿಐ ನಯಾಜ್ ಬೇಗ್ ರವರು ಕೆ.ಎ-40-ಜಿ-1777 ರ ಜೀಪಿನಲ್ಲಿ ಕರೆದುಕೊಂಡು ಹೋದೆವು. ಆಗ ಸಮಯ ಸುಮಾರು 11-00 ಗಂಟೆಯಾಗಿರುತ್ತದೆ. ಹಳೇ ಉಪ್ಪಾರಹಳ್ಳಿ ಅರಣ್ಯ ಪ್ರದೇಶದಲ್ಲಿ ನರೇಂದ್ರ ರವರು ತೋರಿಸಿದ ಜಾಗದಲ್ಲಿ ಎರಡು ವಾಹನಗಳನ್ನು ನಿಲ್ಲಿಸಿದೆವು, ಸಿ.ಪಿ.ಐ, ಪಿ.ಸಿ-433 ಬಾಬಾಜಾನ್ ರವರು ನರೇಂದ್ರ ರವರನ್ನು ಹಾಗೂ ಪಿ.ಎಸ್.ಐ ಹಾಗೂ ನಾನು ಅಂಬರೀಶ್ ರವರನ್ನು ಪ್ರತ್ಯೇಕವಾಗಿ ಅವರು ತಿಳಿಸಿದಂತೆ ಪರಿಶೀಲನೆಗಾಗಿ ಹೋದೆವು. ಅಂಬರೀಶ್ ರವರು ನನ್ನನ್ನು ಮತ್ತು ಪಿ.ಎಸ್.ಐ ರವರನ್ನು  ಕೃಷಿ ಹೊಂಡದ ಬಳಿ ಕರೆದುಕೊಂಡು ಹೋಗಿದ್ದು, ಅಲ್ಲಿ ಅನಾವಶ್ಯಕವಾಗಿ ಮೇಲೆ-ಕೆಳಗೆ ನೋಡುತ್ತಾ ನಿಂತಿದ್ದನು. ಇದ್ದಕ್ಕಿದ್ದಂತೆ ಓಡಿಹೋಗಲು ಪ್ರಯತ್ನಿಸಿದ್ದು, ನಾನು ಹಿಡಿದುಕೊಂಡಾಗ ನನ್ನಮಕ್ಕಳಾ ನನ್ನ ತಂಟೆಗೆ ಬರುತ್ತೀರಾ ಎಂದು ನನ್ನನ್ನು ತಳ್ಳಿ ಬೀಳಿಸಿದನು. ತಕ್ಷಣ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಪಕ್ಕದ್ದಲ್ಲಿದ್ದ ಬಾರಿ ಗಾತ್ರದ ಕಲ್ಲನ್ನು ಎತ್ತಿಕೊಂಡು ನನ್ನ ಮೇಲೆ ಹಾಕಲು ಕಲ್ಲನ್ನು ಎತ್ತಿದ್ದನು. ಅಷ್ಟರಲ್ಲಿ ಹತ್ತಿರದಲ್ಲಿದ್ದ ಪಿ.ಎಸ್.ಐ ರವರು ಯಾಕೆ ಈ ರೀತಿ ಮಾಡುತ್ತಿಯಾ ಕಲ್ಲನ್ನು ಬಿಸಾಕು ಎಂದು ಎಚ್ಚರಿಕೆ ನೀಡಿದರು. ಆತನು ಕಲ್ಲನ್ನು ಬಿಸಾಡದೇ ಇದ್ದಾಗ ಪಿ.ಎಸ್.ಐ ರವರ ಬಳಿಯಿದ್ದ ಸವರ್ೀಸ್ ಪಿಸ್ತೂಲ್ ನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡನ್ನು ಹಾರಿಸಿ ಎಚ್ಚರಿಕೆ ನೀಡಿದರೂ ಸಹ ಕಲ್ಲನ್ನು ನನ್ನ ಮೇಲೆ ಹಾಕುವುದಕ್ಕೆ ಮುಂದುವರೆಸಿದಾಗ ನನ್ನ ಜೀವ ರಕ್ಷಣೆಗಾಗಿ ಪಿ.ಎಸ್.ಐ ಸಾಹೇಬರು ಆತನ ಕಾಲಿಗೆ ಗುಂಡು ಹೊಡೆದಾಗ ಆತನು  ಕಲ್ಲು ಸಮೇತ ಸ್ಥಳದಲ್ಲಿ ಕುಸಿದು ಬಿದ್ದನು. ಆಗ ಸಮಯ ಸುಮಾರು 11-20 ಗಂಟೆಯಾಗಿತ್ತು. ನನ್ನನ್ನು ಜೋರಾಗಿ ತಳ್ಳಿದಾಗ ಕೆಳಕ್ಕೆ ಬಿದ್ದ ನನಗೆ ಎರಡು ಕೈಗಳಿಗೆ ಮತ್ತು ತಲೆಗೆ ಗಾಯವಾಯಿತು. ನಂತರ ಈ ಘಟನೆಯನ್ನು ಅರಿತ ಸಿ.ಪಿ.ಐ ರವರು ಅವರ ಚಾಲಕ ನರಸಿಂಹಮೂರ್ತಿರವರ ಜೊತೆ ಅಂಬರೀಶ್ ನನ್ನು ತಮ್ಮ ವಾಹನದಲ್ಲಿ ಗೌರಿಬಿದನೂರು ಸಕರ್ಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ನನ್ನನ್ನು ಪಿ.ಎಸ್.ಐ ಸಾಹೇಬರು 108 ಆಂಬ್ಯುಲೆನ್ಸ್ ವಾಹನದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುತ್ತೇನೆ. ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಕಲ್ಲನ್ನು ಮೇಲೆ ಹಾಕಲು ಪ್ರಯತ್ನಿಸಿದ ಮೇಲ್ಕಂಡ ಅಂಬರೀಶನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 121/2020 ಕಲಂ. 143,324,506 ರೆ/ವಿ 149 ಐ.ಪಿ.ಸಿ:-

          ದಿನಾಂಕ:23/07/2020 ರಂದು ಸಂಜೆ17-45 ಗಂಟೆಗೆ ಪಿರ್ಯಾದಿದಾರರಾದ ಕೆ.ಎನ್. ಮಮತಶ್ರೀ ಬಿನ್ ಕೆ.ಹೆಚ್. ನಾಗರಾಜ್, 23 ವರ್ಷ, ಹಂದಿಜೋಗಿ ಜನಾಂಗ, ಕೆ.ಇ.ಬಿ. ಗುತ್ತಿಗೆದಾರರು, ಕಾಕಲಚಿಂತೆ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಸಾರಾಂಶವೆನೆಂದರೆ ದಿನಾಂಕ:22/07/2020 ರಂದು ಮದ್ಯಾಹ್ನ ಸುಮಾರು 3-00 ಗಂಟೆಯಲ್ಲಿ ಜಮೀನಿನ ವಿಷಯ ಮಾತಾಡಬೇಕು ಬಾ ಎಂದು ತಮ್ಮ ತಂದೆಯವರನ್ನು ಕಾಕಲಚಿಂತೆ ಜಮೀನಿನ ಹತ್ತಿರಕ್ಕೆ ಕರೆಸಿಕೊಂಡು ತಮ್ಮ  ದೊಡ್ಡಪ್ಪನಾದ ಸೀತಾರಾಮ ತಮ್ಮ ತಂದೆಯವರಿಗೆ ಕಲ್ಲಿನಿಂದ ಮುಖಕ್ಕೆ ಹೊಡೆದಿರುವುದರಿಂದ ತುಟಿ ಹೊಡೆದು ರಕ್ತಗಾಯವಾಗಿದ್ದು, ಅವರಿಗೆ ಸಾತ್ ನೀಡಿದ ಅವರ ಮಗ ಅಂಬರೀಶ, ರಾಮಕೃಷ್ಣಪ್ಪ, ಹಾಗೂ ಅವರ ಮಕ್ಕಳಾದ ಹರೀಶ ಆಶೋಕ, ಇದಕ್ಕೆ ಮೂಲ ಕಾರಣ ಲೇಟ್ ಶ್ರೀರಾಮಪ್ಪ ರವರು ಮಗನಾದ ಅನಿಲ್ ರವರು ಸೇರಿಕೊಂಡು ತನ್ನ ತಂದೆ ಮೇಲೆ ಹಲ್ಲೆ ನಡೆಸಿಹೊಡೆದಿದ್ದಾರೆ. ಸೀತಾರಾಮ ಇದರ ಹಿಂದೆ ಜೀವ ಬೆದರಿಕೆ ಹಾಕಿದ್ದು ನಿನ್ನನ್ನು ಕಾರಿನಲ್ಲಿ ಎತ್ತಿ ಹಾಕಿಕೊಂಡು ಹೋಗಿ ನಿನ್ನ ಪ್ರಾಣ ತೆಗೆಯುತ್ತೇನೆಂದು ಹೇಳಿದ್ದು, ಈ ವಿಷಯ ತಮ್ಮ ತಂದೆಯವರು ತಮಗೆ ತಿಳಿಸಿದಿರು. ಈಗ ತಮ್ಮ ತಂದೆ ಅಸ್ಪತ್ರೆಯಲ್ಲಿ ದಾಖಲಾಗಿದ್ದು. ಅದ್ದರಿಂದ ಮೇಲ್ಕಂಡರವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಾಗಿರುತ್ತೆ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 48/2020 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ 24-07-2020 ರಂದು ಸಂಜೆ 16-00 ಗಂಟೆಗೆ ನಕ್ಕನಹಳ್ಳಿ  ಗ್ರಾಮದ ವಾಸಿಯಾದ   ಆನಂದ ಬಿನ್ ಮುನಿಅಜ್ಜಪ್ಪ  ನಕ್ಕನಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ತನ್ನ ತಂದೆ ಮುನಿಅಜ್ಜಪ್ಪ ಬಿನ್ ಲೇಟ್ ಗಂಗಪ್ಪ ರವರು ದಿನಾಂಕ 22-07-2020 ಮಳೆ ಬಿದ್ದಿರುವ ಕಾರಣ  ತಮ್ಮ ಜಮೀನಿನಲ್ಲಿ  ರಾಗಿಯನ್ನು ಬಿತ್ತಲು ಜಮೀನಿನಲ್ಲಿದ್ದ ಪಾರ್ಥೇನಿಯಂ ಗಿಡಗಳನ್ನು ಕಿತ್ತು ಮನಗೆ ರಾತ್ರಿ 8-00 ಗಂಟೆಯ ಸಮಯದಲ್ಲಿ ನಮ್ಮೂರಿನ ನಾರಾಯಣಸ್ವಾಮಿ ರವರ ಮನೆಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ  ಕತ್ತಲಿನಲ್ಲಿ ಕಣಿತಹಳ್ಳಿ ಗ್ರಾಮದ ಕಡೆಯಿಂದ  ಯಾರೋ ದ್ವಿಚಕ್ರ ವಾಹನದ ಸವಾರ  ತನ್ನ ವಾಹನವನ್ನು ಅತಿವೇಗ ಮತ್ತು ಅಜಗರೂಕತೆಯಿಂದ ಚಾಲನೆ  ಮಾಡಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ನಮ್ಮ ತಂದೆಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ ತನ್ನ ತಂದೆ ರಸ್ತಯೆ ಮೇಲೆ ಬಿದ್ದು ಹೋಗಿ ಬಲಗಾಳಿನ ತೊಡೆಯ ಬಳಿ ಮೂಗೇಟಾಗಿ ಊದಿಕೊಂಡು ನಡೆಯಲಾರದೆ ಬಿದ್ದಿದನ್ನು ನಮ್ಮೂರಿನ ಮಂಜುನಾಥಬಿನ್ ಚಿಕ್ಕಮುನಿಯಪ್ಪನು ನೋಡಿ ಬಂದು ಮನೆಯ ಬಳಿ ನನಗೆ ವಿಚಾರ ತಿಳಿಸಿದ್ದು ನಾನು ತಕ್ಷಣ ಹೋಗಿ ನೋಡಲಾಗಿ ನಮ್ಮ ತಂದೆಯವರಿಗೆ ನಾರಾಯಣಸ್ವಾಮಿ ಬಿನ್ ಲೇಟ್ ಗಂಗಪ್ಪರವರು ನೀರು ಕುಡಿಸುತ್ತಿದ್ದರು, ಸ್ಥಳದಲ್ಲಿ ದ್ವಿಚಕ್ರ ವಾಹನದ ಸವಾರನ ಚಪ್ಪಲಿಗಳು ಹಾಗೂ ದ್ವಿಚಕ್ರ ವಾಹನದ ಪುಟೆ ರಸ್ಟ್ ಬಿದ್ದಿದ್ದು ತನ್ನ ತಂದೆಯನ್ನು ತಕ್ಷಣ ಕಾರಿನಲ್ಲಿ ಸರ್ಕಾರಿ ಆಸ್ಪತ್ರಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ಅಲ್ಲಿಂದ ಜೀವನ್ ಆಸ್ಪತ್ರಗೆ ಸಾಗಿಸಿ ಅಲ್ಲಿ  ಬಲಗಾಲಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿದ್ದು ಚಿಕಿತ್ಸೆ ಕೊಡಿಸಿಕೊಂಡಿದ್ದರಿಂದ ದೂರು ಕೊಡುವುದು ತಡವಾಗಿದ್ದು ತನ್ನ ತಂದೆಗೆ ಅಪಘಾತ ಪಡಿಸಿ ಸ್ಥಳದಿಂದ ಹೊರಟುಹೋಗಿರುವ  ದ್ವಿಚಕ್ರ ವಾಹನ ಮತ್ತು ಸವಾರನನ್ನು ಪತ್ತೆ ಮಾಡಿ ಅವನ ವಿರುದ್ದ  ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ,

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 191/2020 ಕಲಂ. 143,447,504,506 ರೆ/ವಿ 149 ಐ.ಪಿ.ಸಿ :-

          ದಿನಾಂಕ:23.07.2020 ರಂದ ಮದ್ಯಾಹ್ನ 2.30 ಗಂಟೆಗೆ ಪಿರ್ಯಾದಿದಾರರಾದ ಮಂಜುನಾಥ ಬಿನ್ ಮೂಗಪ್ಪ, ಕ್ಯಾಲಸನಹಳ್ಳಿ ಗ್ರಾಮ ಕೊತ್ತನೂರು ಅಂಚೆ ಕೆ.ಆರ್ ಪುರಂ ತಾಲ್ಲೂಕು ಬೆಂಗಳೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತನ್ನ ಬಾಬತ್ತು ಇದೇ ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಹೋಬಳಿ ಅತ್ತಿಗಾನಹಳ್ಳಿ ಗ್ರಾಮದ ಸರ್ವೆ ನಂ 98/1,98/2,98/3,98/4 ನೇ ನಂಬರ್ ಗಳಲ್ಲಿ ಒಟ್ಟು 3-20 ಗುಂಟೆ ಜಮೀನಿದ್ದು ಸದರಿ ಜಮೀನುಗಳನ್ನು ತಾನು ಕ್ರಯಕ್ಕೆ ಪಡೆದುಕೊಂಡಿರುವ ಜಮೀನುಗಳಾಗಿದ್ದು ಸದರಿ ಜಮೀನುಗಳನ್ನು ಕ್ರಯಕ್ಕೆ ಪಡೆದುಕೊಂಡ ಲಾಗಾಯ್ತಿನಿಂದ ತಾನೇ ಅನುಭವದಲ್ಲಿರುತ್ತೇನೆ. ಸದರಿ ಜಮೀನಿಗೆ 0-20 ಗುಂಟೆ ಸರ್ಕಾರಿ ಖರಾಬ್ ಜಮೀನಿದ್ದು ಸದರಿ ಜಮೀನಿನ ಅನುಭವದಲ್ಲಿಯೂ ಸಹ ನಾವೇ ಇದ್ದು ಸಾಗುವಳಿ ಮಾಡಿಕೊಳ್ಳುತ್ತಿರುತ್ತೇನೆ. ಹಾಗೇ ಸದರಿ ಜಮೀನಿಗೆ ಒಟ್ಟಾಗಿ ಕಾಂಪೌಂಡನ್ನು ಸಹಾ ನಿರ್ಮಾಣ ಮಾಡಿರುತ್ತೇನೆ ಈಗಿರುವಾಗ ವೆಂಕಟೇಶ ಬಿನ್ ಲೇಟ್ ಕೃಷ್ಣಪ್ಪ, ನಾಗರಾಜು ಬಿನ್ ಲೇಟ್ ಕೃಷ್ಣಪ್ಪ ಹಾಗೂ ಇವರ ಕುಟುಂಬದವರು ಅಕ್ರಮವಾಗಿ ನನ್ನ ಮೇಲೆ ಗಲಾಟೆಗೆ ಬಂದು ಅಕ್ರಮವಾಗಿ ತನ್ನ ಅನುಭವದಲ್ಲಿರುವ ಹಾಗೂ ಜಮೀನನ್ನು ಟ್ರಾಕ್ಟರ್ ನಿಂದ ಉಳಿಮೆ ಮಾಡಿರುತ್ತಾರೆ. ಹಾಗೂ ಇದನ್ನು ಪ್ರಶ್ನಿಸಲಾಗಿ ಇವರುಗಳು ಏಕಾಏಕಿ ಗುಂಪು ಕಟ್ಟಿಕೊಂಡು ಬಂದು ನನ್ನನ್ನು ಕೊಲೆ ಮಾಡಲು ಯತ್ನಿಸಿ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಾಗೂ ಜಾತಿ ನಿಂದನೆ ಮಾಡಿ ಸದರಿ ಜಮೀನಿನಲ್ಲಿ ನೀನು ಬಂದರೆ ನಿನ್ನನು ಉಳಿಸುವುದಿಲ್ಲ ಹಾಗೂ ನಿನ್ನ ಕುಟುಂಬದವರನ್ನು ಉಳಿಸುವುದಿಲ್ಲ ಎಂದು ನಮಗೆ ಪ್ರಾಣ ಬೆದರಿಕೆಯನ್ನು ಹಾಕಿ ಇಲ್ಲೇ ನಿಮ್ಮನ್ನು ಸಾಯಿಸಿ ಸದರಿ ಜಮೀನಿನಲ್ಲಿಯೇ ಸ್ಮಶಾನ ಮಾಡುತ್ತೇವೆ ಎಂದು ಹೇಳುತ್ತಾ ತನಗೆ ಮತ್ತು ನನ್ನ ಕುಟುಂಬದರವರಿಗೆ ತುಂಬಾ ತೊಂದರೆ ಮಾಡಿರುತ್ತಾರೆ. ಅದ್ದರಿಂದ ಮೇಲ್ಕಂಡವರುಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೆಕೆಂದು ನೀಡಿದ ದೂರನ್ನ ಪಡೆದು ಪ್ರಕರಣ ದಾಖಲಿಸಿರುತ್ತೆ.