ದಿನಾಂಕ :24/06/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.144/2020 ಕಲಂ. 15(A),32(3) ಕೆ.ಇ ಆಕ್ಟ್:-

          ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಜಣ್ಣ.ಎನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –  ಈ ದಿನ ದಿ: 23-06-2020 ನಾನು ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-270 ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಬಾಗೇಪಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಗಸ್ತಿನಲ್ಲಿದ್ದಾಗ ಸಂಜೆ 5:30 ಗಂಟೆಗೆ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ತಾಲ್ಲೂಕಿನ ಪುಟ್ಟಪರ್ತಿ ಗ್ರಾಮದ ವಾಸಿ ಲಕ್ಮೀನರಸಮ್ಮ ಕೋಂ ವೆಂಕಟಸ್ವಾಮಿ, 48 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರಿ ರವರು ತನ್ನ ಮನೆಯ ಮುಂಭಾಗದ ಸ್ಥಳದಲ್ಲಿ ಸಾರ್ವಜನಿಕರಿಗೆ ಯಾವುದೇ ಪರವಾನಗಿ ಇಲ್ಲದೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು ಈ ಸಂಬಂಧ ಪಂಚರ ಸಮಕ್ಷಮ ದಾಳಿ ಮಾಡಿ ಸ್ಥಳದಲ್ಲಿದ್ದ 1] ಎರಡು ಮದ್ಯ ಸೇವನೆ ಮಾಡಿರುವ ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 2] ಎರಡು ಖಾಲಿ 90 ಎಂ.ಎಲ್. ನ ಹೈವಾಡ್ಸರ್್ ಚಿಯರ್ಸ್ ವಿಸ್ಕಿ ಕಂಪನಿಯ ಟೆಟ್ರಾ ಪಾಕೆಟ್ಗಳು 3] 23 ಮದ್ಯ ತುಂಬಿರುವ 90 ಎಂ.ಎಲ್. ನ ಹೈವಾಡ್ಸರ್್ ಚಿಯರ್ಸ್ ವಿಸ್ಕಿಯ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡಿರುತ್ತೆ.  ಆರೋಪಿಯು ಮಹಿಳೆಯಾದ್ದರಿಂದ ಜೊತೆಯಲ್ಲಿ ಮಹಿಳಾ ಸಿಬ್ಬಂಧಿ ಇಲ್ಲದ ಕಾರಣ ಅವರನ್ನು ಸ್ಥಳದಲ್ಲಿಯೇ ಬಿಟ್ಟಿರುತ್ತೆ. ವಶಪಡಿಸಿಕೊಂಡಿರುವ, ಮದ್ಯವು ಒಟ್ಟು 02 ಲೀಟರ್ 70 ಎಂ.ಎಲ್ ಇದ್ದು ಅದರ ಒಟ್ಟು ಬೆಲೆ 808/- ರೂಗಳಾಗಿರುತ್ತೆ. ಸ್ಥಳದಲ್ಲಿ ಅಮಾನತ್ತು ಪಡಿಸಿಕೊಂಡಿರುವ ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಆರೋಪಿಯ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದೆ. ಇದರೊಂದಿಗೆ ಅಸಲು ಪಂಚನಾಮೆಯನ್ನು ಲಗತ್ತಿಸಿಕೊಂಡಿರುತ್ತೆ, ಎಂದು ನೀಡಿದ ವರಧಿಗೆ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.145/2020 ಕಲಂ. 15(A),32(3) ಕೆ.ಇ ಆಕ್ಟ್:-

          ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶರತ್ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –  ಈ ದಿನ ದಿ: 23-06-2020 ನಾನು ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-270 ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಬಾಗೇಪಲ್ಲಿ ಪಟ್ಟಣದಲ್ಲಿ ಗಸ್ತಿನಲ್ಲಿದ್ದಾಗ ಸಂಜೆ 7.00 ಗಂಟೆಗೆ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ತಾಲ್ಲೂಕಿನ ಡಿ, ಕೊತ್ತಪಲ್ಲಿ ಗ್ರಾಮದ ವಾಸಿ ಸೋಮು ಬಿನ್ ಪೆದ್ದ ವೆಂಕಟರಾಯಪ್ಪ, 40ವರ್ಷ, ಬೋವಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರಿ ರವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದ ಸ್ಥಳದಲ್ಲಿ ಸಾರ್ವಜನಿಕರಿಗೆ ಯಾವುದೇ ಪರವಾನಗಿ ಇಲ್ಲದೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು ಈ ಸಂಬಂಧ ಪಂಚರ ಸಮಕ್ಷಮ ದಾಳಿ ಮಾಡಿ ಸ್ಥಳದಲ್ಲಿದ್ದ 1] ಎರಡು ಮದ್ಯ ಸೇವನೆ ಮಾಡಿರುವ ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 2] ಎರಡು ಖಾಲಿ 90 ಎಂ.ಎಲ್. ನ ಹೈವಾಡ್ಸರ್್ ಚಿಯರ್ಸ್ ವಿಸ್ಕಿ ಕಂಪನಿಯ ಟೆಟ್ರಾ ಪಾಕೆಟ್ಗಳು 3] 24 ಮದ್ಯ ತುಂಬಿರುವ 90 ಎಂ.ಎಲ್. ನ ಹೈವಾಡ್ಸರ್್ ಚಿಯರ್ಸ್ ವಿಸ್ಕಿಯ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿರುತ್ತೆ, ವಶಪಡಿಸಿಕೊಂಡಿರುವ ಮದ್ಯವು ಒಟ್ಟು 02 ಲೀಟರ್ 160 ಎಂ.ಎಲ್ ಇದ್ದು ಅದರ ಒಟ್ಟು ಬೆಲೆ 844/- ರೂಗಳಾಗಿರುತ್ತೆ. ಸ್ಥಳದಲ್ಲಿ ಅಮಾನತ್ತು ಪಡಿಸಿಕೊಂಡಿರುವ ಮಾಲನ್ನು ಮತ್ತು ಆರೋಪಿಯನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಆರೋಪಿಯ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದೆ. ಇದರೊಂದಿಗೆ ಅಸಲು ಪಂಚನಾಮೆಯನ್ನು ಲಗತ್ತಿಸಿಕೊಂಡಿರುತ್ತೆ, ಎಂದು ನೀಡಿದ ವರಧಿಗೆ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.83/2020 ಕಲಂ. 394 ಐ.ಪಿ.ಸಿ:-

          ದಿನಾಂಕ:23-06-2020 ರಂದು ರಾತ್ರಿ 11.30 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಬಂದ ಪೊಲೀಸ್ ಮಾಹಿತಿಯ ಮೇರೆಗೆ ಗಾಯಾಳು ಶ್ರೀ.ಕೆ.ವೈ, ಬೈರಾರೆಡ್ಡಿ ಬಿನ್ ಕೆ.ಬಿ.ಯರ್ರಪ್ಪ ರವರ ಹೇಳಿಕೆಯನ್ನು ಪಡೆದು ದಿನಾಂಕ 24-06-2020 ರಂದು ಬೆಳಗಿನ ಜಾವ 01 ಗಂಟೆಗೆ ದಾಖಲಿಸಿದ ದೂರಿನ  ಸಾರಾಂಶವೇನೆಂದರೆ,  ತಾನು ವ್ಯವಸಾಯ ಮತ್ತು ಚಿಕ್ಕಬಳ್ಳಾಪುರ ನಗರ  ಎಮ್.ಜಿ ರಸ್ತೆಯ ಪಕ್ಕದಲ್ಲಿರುವ ಸೂರ್ಯ ಲಾಡ್ಜ್ ನ ಮಾಲೀಕನಾಗಿರುತ್ತೇನೆ. ದಿನಾಂಕ:23-06-2020 ರಂದು ತಾನು ಲಾಡ್ಜ್ ನಿಂದ ತನ್ನ ಗ್ರಾಮ ಕಮ್ಮತ್ತನಹಳ್ಳಿ ಹೋಗಲು ಹೊರೆಗೆ ಬಂದಾಗ ಮಳೆ ಬರುತ್ತಿದ್ದು ಆಗ ಸಮಯ ಸುಮಾರು 10.15 ಗಂಟೆ ಯಾಗಿದ್ದು  ಸ್ವಲ್ಪ ಹೊತ್ತು ಹೊರಗಡೆ ನಿಂತು ಮಳೆ ಕಡಿಮೆಯಾಗುತ್ತಿದ್ದಂತೆ ತನ್ನ ಪ್ಯಾಷನ್ ಪ್ರೋ ದ್ವಿಚಕ್ರ ವಾಹನ ನಂಬರ್  KA-40-Y-2212 ರಲ್ಲಿ ಹೊರಟು ಎನ್.ಹೆಚ್-7 ರಸ್ತೆಯಲ್ಲಿ ಹೊನ್ನೇನಹಳ್ಳಿ ಗೇಟ್ ಬಿಟ್ಟು ಹೋಗುವಾಗ ಮಳೆ ಬಂದಿದ್ದು ತಾನು ಚಿತ್ರಾವತಿ Ded  ಕಾಲೇಜು ಮುಂಭಾಗ ಬಸ್ ಶೆಲ್ಟರ್  ಹತ್ತಿರ ನಿಂತುಕೊಂಡೆ. ರಾತ್ರಿ ಸುಮಾರು 10.45 ಗಂಟೆ ಸಮಯದಲ್ಲಿ ಯಾರೋ ಮೂರು ಜನರು ಪಲ್ಸರ್ ದ್ವಿಚಕ್ರ ವಾಹನದಲ್ಲಿ ತನ್ನ ಬಳಿ ಬಂದು ವಾಹನ ನಿಲ್ಲಿಸಿ ಪೆರೆಸಂದ್ರ –ಗುಡಿಬಂಡೆ ರಸ್ತೆ ಯಾವುದು ಎಂದು ಕೇಳಿದರು ಅದಕ್ಕೆನಾನು ಮುಂದಕ್ಕೆ ಹೋಗಿ ಎಂದು  ಹೇಳಿದೆ ಅವರ ಪೈಕಿ ಒಬ್ಬ ಗಾಡಿಯಿಂದ ಇಳಿದು ಬಂದು ಅವರ ಜೊತೆಯಲ್ಲಿದ್ದವರಿಗೆ ನಾನು ಹೀಗೆ  ಹೋಗುತ್ತೇನೆ ನೀವು ಹೋಗಿ ಎಂದು ತನ್ನ ಬಳಿ ಬಂದು ಬೆಂಕಿ ಪೊಟ್ಟಣ ಕೇಳಿದ ಅಷ್ಟರಲ್ಲಿ ಇಬ್ಬರು ಪಲ್ಸರ್ ಗಾಡಿಯನ್ನು ಅಲ್ಲಿಯೆ ನಿಲ್ಲಿಸಿ ಚಾಕುವಿನಿಂದ ನನ್ನ ಎಡ ಕೈ ಭುಜದ ಬಳಿ ಹೊಡೆದರು ಅವರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದು ತನ್ನ ಹತ್ತಿರ ಕನ್ನಡದಲ್ಲಿ ಬೈಯುತ್ತಾ ಇನ್ನೊಬ್ಬ ಕೈ ಯಿಂದ  ಕೆನ್ನೆಗೆ ಹೊಡೆದ ಆಗ ತಾನು ಕುಗಾಡಿಕೊಂಡಾಗ  ಗಾಡಿಗಳನ್ನು ನಿಲ್ಲಿಸಲಿಲ್ಲ ಚಾಕು ಹಿಡಿದುಕೊಂಡಿದ್ದವನು ಇನ್ನೊಂದು ಸಾರಿ ನನ್ನ ಎಡ ಮೊಣ ಕೈ ಹತ್ತಿರ ಎಡ ಕೈ ನ ಮುಷ್ಟಿಯ ಬಳಿ ಚಾಕುವಿನಿಂದ ಹೊಡೆದು ಗಾಯಪಡಿಸಿದ ತಾನು ಅವರನ್ನು ತಳ್ಳುತ್ತಿದ್ದಂತೆ ಏ ನಿನ್ನ ಹತ್ತಿರ ಏನೇನಿದೆ ತೆಗೆ ಎಂದು ಹೇಳಿ ಚಾಕುವಿನಿಂದ ಪ್ಯಾಂಟು ಜೇಬುಗಳನ್ನು ಕೊಯ್ದು ತಾನು ಟಮೋಟ ಮಾರಿದ್ದ 25000/- (ಇಪ್ಪತ್ತೈದು ಸಾವಿರ)ಹಣವನ್ನು ಕಿತ್ತುಕೊಂಡು ನಂತರ ರೆಡ್ ಮೀ ನೋಟ್ -4 ಮೊಬೈಲ್ ಹಾಗೂ ತನ್ನ ದ್ವಿಚಕ್ರ ವಾಹನದ ಲಾಡ್ಜ್ ನ ಕ್ಯಾಶ್ ಕೀ ಯನ್ನು ಕಿತ್ತುಕೊಂಡು ತನ್ನನ್ನು ಕೆಳಕ್ಕೆ ದಬ್ಬಿದರು ಮತ್ತು ಮಳೆ ಆರಂಭವಾಗುತ್ತಿದ್ದಂತೆ ಅವರು ಬಂದಿದ್ದ ಪಲ್ಸರ್ ದ್ವಿಚಕ್ರ ವಾಹನವನ್ನು ಸ್ಟಾರ್ಟ್ ಮಾಡುತ್ತಿದ್ದಾಗ ಯಾರೋ ದ್ವಿಚಕ್ರ ವಾಹನದಲ್ಲಿ ಬಂದು ಅಲ್ಲಿ ನಿಲ್ಲಿಸುತ್ತಿದ್ದಂತೆ ಅವರಿಗೆ ತನ್ನ ಬಳಿ ಇದ್ದ ಹಣ ಮತ್ತು ಮೊಬೈಲ್ ಅನ್ನು ಕಿತ್ತುಕೊಂಡು ತನ್ನನ್ನು ಹೊಡೆದರೆಂದು ಹೇಳುವಷ್ಟರಲ್ಲಿ ಅವರುಗಳು ಅಲ್ಲಿಂದ ಚಿಕ್ಕಬಳ್ಳಾಪುರ ಕಡೆಗೆ  ಹೊರಟು ಹೋದರು ಆ ನಂತರ ಅಲ್ಲಿಗೆ ಬಂದ ಲಕ್ಷ್ಮೀಪತಿ ರವರು ದ್ವಿಚಕ್ರ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ. ತನಗೆ ಹೊಡೆದು ತನ್ನ ಬಳಿ ಇದ್ದ ಹಣವನ್ನು ಮತ್ತು ಕೀಗಳನ್ನು ಕಿತ್ತುಕೊಂಡು ಹೋದವರು ಯಾರು ಎಂತ ಗೊತ್ತಿರುವುದಿಲ್ಲ.ಅವರನ್ನು ನೋಡಿದರೆ ಗುರ್ತಿಸುತ್ತೇನೆ ಅವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದ ಮೇರೆಗೆ ಈ ಪ್ರ.ವ ವರದಿ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.247/2020 ಕಲಂ. 279,337  ಐ.ಪಿ.ಸಿ & 134(A),134(B) ಐ.ಎಂ.ವಿ ಆಕ್ಟ್:-

          ದಿನಾಂಕ: 23/06/2020 ರಂದು ಸಂಜೆ 6.30 ಗಂಟೆಗೆ ಕಾಂತಮೂರ್ತಿ ಬಿನ್ ಮುನಿವೆಂಕಟಪ್ಪ, 48 ವರ್ಷ, ನಾಯಕರು, ಕೂಲಿ ಕೆಲಸ, ತೆರ್ನಹಳ್ಳಿ ಗ್ರಾಮ, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:16/06/2020 ರಂದು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ತನ್ನ ತಮ್ಮನಾದ ಸಂಜೀವಪ್ಪ ಮತ್ತು ತಮ್ಮ ಗ್ರಾಮದ ನಾಗಣ್ಣ ಬಿನ್ ರಾಮಪ್ಪರವರು ಕೆಲಸದ ನಿಮಿತ್ತ ತಮ್ಮ ಗ್ರಾಮದಿಂದ ಚಿಂತಾಮಣಿ ತಾಲ್ಲೂಕು ಆನೂರು ಗ್ರಾಮಕ್ಕೆ ಬರುವ ಸಲುವಾಗಿ ತನ್ನ ಬಾಬತ್ತು ನೊಂದಣಿ ಸಂಖ್ಯೆಯ ಇಲ್ಲದ ಹಿರೋ ಸ್ಪೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಬಂದಿರುತ್ತಾರೆ. ಅದೇ ದಿನ ಸಂಜೆ ಸುಮಾರು 7.45 ಗಂಟೆ ಸಮಯದಲ್ಲಿ ಯಾರೋ ಸಾರ್ವಜನಿಕರು ತನಗೆ ಫೋನ್ ಮಾಡಿ ಕೋಲಾರ-ಚಿಂತಾಮಣಿ ರಸ್ತೆಯ ಸೀಕಲ್ಲು ಗೇಟ್ ಬಳಿ ಸಂಜೀವಪ್ಪ ಮತ್ತು ನಾಗಣ್ಣರವರಿಗೆ ರಸ್ತೆ ಅಪಘಾತವಾಗಿದ್ದು, ಗಾಯಗೊಂಡಿದ್ದವರನ್ನು 108 ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ತಾನು ಮತ್ತು ತನ್ನ ಚಿಕ್ಕಪ್ಪನ ಮಗನಾದ ರಮೇಶ್ ರವರು ತಮ್ಮ ಗ್ರಾಮದಿಂದ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ಅಪಘಾತದ ಬಗ್ಗೆ ಆಸ್ಪತ್ರೆಯಲ್ಲಿದ್ದ ತನ್ನ ತಮ್ಮ ಸಂಜೀವಪ್ಪರವರನ್ನು ವಿಚಾರ ಮಾಡಲಾಗಿ ತಾನು ಮತ್ತು ನಾಗಣ್ಣರವರು ಮೇಲ್ಕಂಡ ನೊಂದಣಿ ಸಂಖ್ಯೆಯ ಇಲ್ಲದ ಹೀರೊ ಸ್ಪೆಂಡರ್ ಪ್ಲಸ್ ದ್ವಿಚಕ್ರವಾಹನದಲ್ಲಿ ಆನೂರು ಗ್ರಾಮದಿಂದ ಸೀಕಲ್ಲು ಗೇಟ್ ಬಳಿ ಬಂದಾಗ ಸಂಜೆ 7.30 ಗಂಟೆಗೆ ಕೋಲಾರ ಕಡೆಯಿಂದ ಅಂದರೆ ಎದುರುಗಡೆ ಬಂದ ಕೆಎ-01 ಜೆಜಿ-9479 ನೋಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ವಿಚಕ್ರ ವಾಹನದ ಸವಾರ ತನ್ನ ದ್ವಿಚಕ್ರವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿ ದ್ವಿಚಕ್ರವಾಹನವನ್ನು ಸ್ಥಳದಲ್ಲಿಯೇ ನಿಲ್ಲಿಸದೇ ಹೊರಟು ಹೋಗಿದ್ದು, ಅದರ ಪರಿಣಾಮ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ನಾಗಣ್ಣ ಮತ್ತು ಹಿಂಬದಿಯಲ್ಲಿ ತಾನು ವಾಹನ ಸಮೇತ ಕೆಳಗೆ ಬಿದ್ದು ಹೋಗಿದ್ದು ತನಗೆ ಬಾಲಕಾಲಿನ ಪಾದಕ್ಕೆ ಮೂಳೆ ಮುರಿತದ ರಕ್ತಗಾಯ, ಸೊಂಟಕ್ಕೆ ರಕ್ತಗಾಯ, ಬಲ ಭುಜಕ್ಕೆ ತರಚಿದ ರಕ್ತಗಾಯಗಳು, ನಾಗಣ್ಣರವರಿಗೆ ಎಡಮೊಣಕಾಲಿಗೆ ತರಚಿದ ರಕ್ತಗಾಯವಾಗಿರುವುದಾಗಿ ತಿಳಿಸಿರುತ್ತಾನೆ. ನಂತರ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಗಾಯಗೊಂಡಿದ್ದ ತನ್ನ ತಮ್ಮನಾದ ಸಂಜೀವಪ್ಪ ಮತ್ತು ನಾಗಣ್ಣರವರನ್ನು ಅಂಬುಲೆನ್ಸ್ ನಲ್ಲಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುತ್ತಾರೆ. ಗಾಯಗೊಂಡಿದ್ದರವರಿಗೆ ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಅಪಘಾತಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ಮೇಲ್ಕಂಡ ಕೆಎ-01 ಜೆಜಿ-9479 ನೋಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ಸವಾರನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.156/2020 ಕಲಂ. 323,324,341,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ 24/06/2020 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀ. ಗಂಗಾಧೃಪ್ಪ ಬಿನ್ ಗಂಗಪ್ಪ, 60 ವರ್ಷ,  ಆದಿ ಕರ್ನಾಟಕ,  ವಾಸ ಮೇಳ್ಯಾ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇಂದರೆ  ತನ್ನ ಮನೆಯ ಪಕ್ಕದಲ್ಲಿ  ಚರಂಡಿ ಇದ್ದು, ಪಕ್ಕದ ಮನೆಯವರಾದ ಪ್ರಕಾಶ ಬಿನ್ ಆಂಜಿನಪ್ಪ ರವರಿಗೆ ಚರಂಡಿಯನ್ನು ಸ್ವಚ್ಚವಾಗಿಟ್ಟುಕೊಳ್ಳಿ ಎಂದು ಹೇಳಿದ್ದು, ಇದನ್ನೆ ಮನಸ್ಸಿನಲ್ಲಿ ಇಟ್ಟುಕೊಂಡು ದಿನಾಂಕ 23/03/2020 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ತನ್ನ  ಮನೆಯ ಸ್ವಲ್ಪ ದೂರದಲ್ಲಿ ಇರುವ ಗಂಗಮ್ಮ ದೇವಸ್ಥಾನದ ಬಳಿ ಇರುವ ಅರಳಿ ಮರದ ಕೆಳಗೆ  ವಿಶ್ರಾಂತಿ ಪಡೆಯಲು  ಹೋಗುತ್ತಿದ್ದಾಗ  ದೇವಸ್ಥಾನದ ಬಳಿ ರಸ್ತೆಯಲ್ಲಿ  ಪ್ರಕಾಶ ಬಿನ್  ಆಂಜಿನಪ್ಪ, ಗೌರಿಬಿದನೂರು ಟೌನಿನ ನೆಹರು ಕಾಲೋನಿಯ ಮೂರ್ತಿ, ಶ್ರೀನಿವಾಸ ಬಿನ್ ಬಂಥಲಪ್ಪ, ಮತ್ತು ಕಡಗೂರಿನ  ಉಗ್ರ ರವರು ಅಡ್ಡಗಟ್ಟಿ ಈ ಪೈಕಿ ಪ್ರಕಾಶ ರವರು ಅಲ್ಲೇ ಇದ್ದ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿದರು. ಇತರರು ತನಗೆ ಮೇಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿದರು. ಆಗ ಗಲಾಟೆ ಬಿಡಿಸಲು ಬಂದ ತನ್ನ ಹೆಂಡತಿ ರತ್ನಮ್ಮ, ಮಗಳು ಆಶಾ ಮತ್ತು ಮಗ ನರಸಿಂಹ ಮೂರ್ತಿ ರವರಿಗೆ  ಪ್ರಕಾಶ ರವರು “ ಬೇವರ್ಸಿ ಮುಂಡೆ , ಬೇವರ್ಸಿ ನನ್ನ ಮಕ್ಕಳು ಎಂದು ಅವಾಚ್ಯ ಶಬ್ದಗಳಿಂದ ಬೈದು ನಿಮ್ಮನ್ನು ಮುಗಿಸುತ್ತೇನೆ ಎಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಪ್ರಜ್ಞೆ ತಪ್ಪಿಬಿದ್ದಿದ್ದ ತನ್ನನ್ನು ತನ್ನ ಮನೆಯ ಪಕ್ಕದವರಾದ ಲಕ್ಷ್ಮಮ್ಮ ಕೊಂ ಬಾಲಪ್ಪ ಮತ್ತು ಸುಕನ್ಯ ಬಿನ್ ಕಿಟ್ಟಪ್ಪ ರವರು ಉಪಚರಿಸಿ ಯಾವುದೋ ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತೇನೆ. ನಂತರ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮಾಃನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿರುತ್ತೇನೆ.  ಗ್ರಾಮದಲ್ಲಿ ಹಿರಿಯರು ರಾಜಿ ಮಾಡುವುದಾಗಿ ಹೇಳಿದ್ದು ರಾಜಿಗೆ ಒಪ್ಪದ ಕಾರಣ ಮತ್ತು ಕೊರೋನಾ ಹಾವಳಿ ಇದ್ದುದ್ದರಿಂದ ದೂರು ನೀಡಲು ತಡವಾಗಿದ್ದು, ಮೇಲ್ಕಂಡ  ಆಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.80/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 23/06/2020 ರಂದು ಸಂಜೆ 6:00 ಗಂಟೆ ಸಮಯದಲ್ಲಿ ನ್ಯಾಯಾಲಯದ ಪಿ.ಸಿ 546 ರವರು ಹಾಜರುಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ 20/6/2020 ರಂದು ಸಂಜೆ 4-30 ಗಂಟೆಗೆ ಹೆಚ್.ಸಿ 214 ಲೋಕೇಶ್ ಆದ ತಾನು ನಗರ ಠಾಣೆ ಗುಪ್ತ ಮಾಹಿತಿ ಕರ್ತವ್ಯದಲ್ಲಿರುವಾಗ ಪುಟ್ಟಾಪುರ್ಲಹಳ್ಳಿಯ ಸರ್ಕಾರಿ ಶಾಲೆಯ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬೀಟ್ ಸಿಬ್ಬಂದಿ ಹೆಚ್.ಸಿ 224 ವೆಂಕಟೇಶ ರವರು ಮಾಹಿತಿ ನೀಡಿದ್ದು, ಕೂಡಲೇ ತಾನು ಪಿ.ಎಸ್.ಐ ರವರಿಗೆ ಮಾಹಿತಿ ನೀಡಿ ನಗರ ಠಾಣೆಯ ಕರ್ತವ್ಯದಲ್ಲಿದ್ದ ಹೆಚ್.ಸಿ 244 ಗೋಪಾಲ, ಹೆಚ್.ಸಿ 235 ರವಿಕುಮಾರ್ , ಪಿ.ಸಿ 17 ಪಿ.ಸಿ 102, ಪಿ.ಸಿ 318 ರವರೊಂದಿಗೆ ಪುಟ್ಟಾಪುರ್ಲಹಳ್ಳಿಗೆ ಹೋಗಿ ಪಂಚಾಯ್ತಿದಾರರನ್ನು ಕರೆದುಕೊಂಡು ಸರ್ಕಾರಿ ಶಾಲೆ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಇಸ್ಪೀಟ್ ಜೂಜಾಟವಾಡುತ್ತಿರುವುದು ಕಂಡುಬಂದಿದ್ದು, ಪಂಚರ ಸಮಕ್ಷಮ ಸಿಬ್ಬಂದಿ ಸಹಕಾರದಿಂದ ಇಸ್ಪೀಟ್ ಜೂಜಾಟದವಾಡುತ್ತಿದ್ದವರನ್ನು ಸುತ್ತುವರೆದು ಯಾರು ಓಡಿ ಹೋಗದಂತೆ ಸೂಚನೆಗಳನ್ನು ನೀಡಿ ಅವರನ್ನು ಹಿಡಿಯಲು ಹೋದಾಗ ಅಲ್ಲಿಂದ ಕೆಲವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿಹೋಗಿದ್ದು ಕೆಲವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಆಂಜನಪ್ಪ ಬಿನ್ ತಿಮ್ಮಣ್ಣ, 35 ವರ್ಷ, ಪರಿಶಿಷ್ಟ ಜಾತಿ ಗೊಟಕನಾಪುರ ಗೌರಿಬಿದನೂರು ನಗರ. 2) ಮಂಜುನಾಥ ಬಿನ್ ನರಸಿಂಹಯ್ಯ, 40 ವರ್ಷ, ನಾಯಕರು, ಪುಟ್ಟಾಪುರ್ಲಹಳ್ಳಿ ಗೌರಿಬಿದನೂರು ನಗರ. 3) ರಾಘವೇಂದ್ರ ಬಿನ್ ನಾರಾಯಣಸ್ವಾಮಿ, 24 ವರ್ಷ, ನಾಯಕರು, ಪುಟ್ಟಾಪುರ್ಲಹಳ್ಳಿ ಗೌರಿಬಿದನೂರು ನಗರ, ಹಾಗೂ 4) ಅಶ್ವತ್ಥಪ್ಪ ಬಿನ್ ನ್ಯಾತಪ್ಪ, 40 ವರ್ಷ, ನಾಯಕರು, ಪುಟ್ಟಾಪುರ್ಲಹಳ್ಳಿ, ಗೌರಿಬಿದನೂರು ನಗರ ಎಂದು ತಿಳಿಸಿದ್ದು ಸಿಬ್ಬಂದಿಯಿಂದ ಆಸಾಮಿಗಳ ಅಂಗಶೋಧನೆ ಮಾಡಿಸಲಾಗಿ 10 ರೂ ನೋಟುಗಳ 31 ನೋಟುಗಳು, 20 ರೂ ನೋಟುಗಳ 13 ನೋಟುಗಳು, 50 ರೂ ಗಳ 14 ನೋಟುಗಳು ಹಾಗೂ 100 ರೂ ಗಳ 4 ನೋಟುಗಳು ಮತ್ತು 200 ರೂ ಗಳ 2 ನೋಟುಗಳು ಮತ್ತು 500 ರೂ ನೋಟುಗಳ 1 ನೋಟು ಇದ್ದು ಒಟ್ಟು 2570/- ರೂ ನಗದು ಹಣ  ಹಾಗೂ ಸ್ಥಳದಲ್ಲಿ 52 ಇಸ್ಪೀಟ್ ಎಲೆಗಳು ಇದ್ದವು. ಎಲ್ಲವನ್ನು ಪಂಚರ ಸಮಕ್ಷಮ ಪಂಚನಾಮೆಯ ವಶಕ್ಕೆ ಪಡೆದುಕೊಂಡು ಸಂಜೆ 6:00  ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ನೀಡಿದ ವರದಿಯನ್ನು ಪಡೆದು ಠಾಣಾ ಎನ್.ಸಿ.ಆರ್ ದಾಖಲಿಸಿರುತ್ತೇನೆ. ಈ ದಿನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೇನೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.64/2020 ಕಲಂ. 15(A),32(3)  ಕೆ.ಇ ಆಕ್ಟ್:-

          ದಿನಾಂಕ:-24/06/2020 ರಂದು ಡಿಸಿಬಿ ಸಿಇಎನ್ ಪೊಲೀಸ್ ಠಾಣೆಯ ಸಿಹೆಚ್ ಸಿ-38 ಮಂಜುನಾಥ ಎಂ.ಕೆ. ರವರು ಠಾಣೆಗೆ ಮಾಲು, ಮಹಜರ್ ನೊಂದಿಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ: ದಿನಾಂಕ:-24/06/2020 ರಂದು ಡಿಸಿಬಿ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ರಾಜಣ್ಣ ರವರು ತನಗೆ ಮತ್ತು ಸಿಹೆಚ್ ಸಿ-198 ಮಂಜುನಾಥ ವಿ ರವರಿಗೆ ಚಿಂತಾಮಣಿ ತಾಲ್ಲೂಕಿನ ಕಾನೂನು ಬಾಹಿರ ಚಟುಟಿಕೆಗಳ ಮಾಹಿತಿ ಸಲುವಾಗಿ ವಿಶೇಷ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ಈ ದಿನ ದಿನಾಂಕ 24/06/2020 ರಂದು ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದು ಕೊರ್ಲಪರ್ತಿ, ಕದಿರೇನಹಳ್ಳಿಕ್ರಾಸ್, ಪಾಪತಿಮ್ಮನಹಳ್ಳಿ ಮೊದಲಾದ ಕಡೇ ಗಸ್ತು ಮಾಡುತ್ತಿದ್ದಾಗ ಬಂದ ಮಾಹಿತಿ ಮೇರೆಗೆ ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಜಂಗಾಲಪಲ್ಲಿ ಗ್ರಾಮದ ಚಿಲ್ಲರೆ ಅಂಗಡಿಯ ಮುಂಭಾಗ ಅದರ ಮಾಲೀಕ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟು ತೊಂದರೆ ಉಂಟು ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ದಾಳಿ ಮಾಡಲು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಜಂಗಾಲಪಲ್ಲಿ ಗ್ರಾಮದ ಅಶ್ವಥರೆಡ್ಡಿ ಬಿನ್ ಲೇಟ್ ಮದ್ದಿರೆಡ್ಡಿ  ರವರ ಚಿಲ್ಲರೆ ಅಂಗಡಿ ಮುಂದೆ ದಾಳಿ ಮಾಡಲಾಗಿ ಅಶ್ವಥರೆಡ್ಡಿ ರವರು ತಮ್ಮ ಚಿಲ್ಲರೆ ಅಂಗಡಿ ಮುಂಭಾಗದಲ್ಲಿ  ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪಂಚರೊಂದಿಗೆ  ತಾವು ಮನೆಯ  ಬಳಿ ಸುತ್ತುವರಿದಾಗ ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಹಾಗೂ ಅಶ್ವಥರೆಡ್ಡಿ ಓಡಿಹೋಗಿದ್ದು,  ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟ  ಅಸಾಮಿಯ  ಹೆಸರು ಮತ್ತು ವಿಳಾಸ ಕೇಳಲಾಗಿ ಅಶ್ವಥರೆಡ್ಡಿ ಬಿನ್ ಲೇಟ್ ಮದ್ದಿರೆಡ್ಡಿ,  48 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಜಂಗಾಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದನು. ಸ್ಥಳದಲ್ಲಿ ಪರಿಶೀಲಿಸಲಾಗಿ ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಇದ್ದು ಪರಿಶೀಲಿಸಲಾಗಿ 90  ಎಂ.ಎಲ್ HAYWARDS CHEERS WHISKEY ಮಧ್ಯದ 18 ಟೆಟ್ರಾ ಪ್ಯಾಕೆಟ್ ಗಳು ಇದ್ದು, 18 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 632.34 ರೂ   ಆಗಿರುತ್ತೆ. ಮದ್ಯ ಒಟ್ಟು ಒಂದು ಲೀಟರ್ ಆರುನೂರ ಇಪ್ಪತ್ತು  ಮೀಲಿ ಆಗಿರುತ್ತೆ. ಆಸಾಮಿಯು ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದೇ ಪರವಾನಗಿ ಇಲ್ಲದೇ ಇರುವುದರಿಂದ ಓಡಿ ಹೋಗಿರುವುದು ಕಂಡು ಬಂದಿರುತ್ತದೆ. ನಂತರ ಸ್ಥಳದಲ್ಲಿ HAYWARDS CHEERS WHISKEY 90 ಎಂ.ಎಲ್ ಮಧ್ಯದ 18 ಟೆಟ್ರಾ ಪ್ಯಾಕೆಟ್ ಗಳನ್ನು ಹಾಗೂ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು, ಒಂದು ಲೀಟರ್ ನ ಒಂದು ಖಾಲಿ ವಾಟರ್ ಬಾಟಲ್, ಖಾಲಿ 2 HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಗಳನ್ನು  ಮಧ್ಯಾಹ್ನ 12-15 ರಿಂದ 13-15 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ.  ಸದರಿ ಮಾಲನ್ನು ಮತ್ತು ಮಹಜರ್ ನ್ನು ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ಅಶ್ವಥರೆಡ್ಡಿ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ವರದಿ ದೂರು.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.141/2020 ಕಲಂ. 143,147,447,323,324,504,506,149 ಐ.ಪಿ.ಸಿ:-

          ದಿನಾಂಕ 23/06/2020 ರಂದು ರಾತ್ರಿ 9-50 ಗಂಟೆಯ ಸಮಯದಲ್ಲಿ ಪಿರ್ಯಾದಿದಾರರಾದ ಗಜೇಂದ್ರರೆಡ್ಡಿ ಬಿನ್ ಶ್ರೀರಾಮುಲುರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ದಿನಾಂಕ 23/06/2020 ರಂದು ಸಂಜೆ 6-40 ಗಂಟೆ ಸಮಯದಲ್ಲಿ ನಾನು ಶೋಭ ಎಂಟರ್ ಪ್ರೈಸಸ್ ನಲ್ಲಿ ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿರುವಾಗ ಪಿ.ನಾಗೇನಹಳ್ಳಿ ಗ್ರಾಮದ ಯಮನ್ ಬಿನ್ ರಾಮಾಂಜಿನಪ್ಪ, ಶ್ರೀಧರ್ ಬಿನ್ ಹನುಮಂತರಾಯಪ್ಪ ಮತ್ತು ಇತರೆ ನಾಲ್ಕು ಜನರು ಗುಂಪು ಕಟ್ಟಿಕೊಂಡು ನಮ್ಮ ಗಣಿಗಾರಿಕೆಯ ಪ್ರದೇಶಕ್ಕೆ  ಅಕ್ರಮ ಪ್ರವೇಶ ಮಾಡಿ ನನ್ನ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ನನಗೆ ದೊಣ್ಣೆಯಿಂದ ಎದೆಗೆ ಮತ್ತು ಕೈಕಾಲುಗಳಿಗೆ ಹೊಡೆದಿದ್ದಾರೆ.ಮತ್ತು ಇತರೆ ನಾಲ್ಕು ಜನರು ಕಲ್ಲುಗಳಿಂದ ನನಗೆ ಹೊಡೆದಿದ್ದಾರೆ. ಅಲ್ಲೆ ಇದ್ದ ನಮ್ಮವರಾದ ವಿಜಯ್ ಭಾಸ್ಕರ್ ರೆಡ್ಡಿ ಬಿನ್ ಅಶ್ವತ್ಥರೆಡ್ಡಿ ಮತ್ತು ಗಂಗರಾಜು ಬಿನ್ ಗಂಗಾಧರಪ್ಪ ಅವರ ಮೇಲೆಯೂ ಸಹಾ  ಜಗಳ ಮಾಡಿ ಮೂಗೇಟುಗಳನ್ನು ಉಂಟು ಮಾಡಿರುತ್ತಾರೆ.ಹಾಗೂ ಪ್ರಾಣ ಬೆದರಿಕೆ ಹಾಕಿರುತ್ತಾರೆ.ಆದ್ದರಿಂದ ಸದರಿ ಮೇಲ್ಕಂಡ ರವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಿ ಕೊಟ್ಟ ಪ್ರ.ವ.ವರದಿ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.42/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:23/06/2020 ರಂದು ಸಂಜೆ 7:00 ಗಂಟೆ ಸಮಯಲ್ಲಿ ಪಿ.ಎಸ್.ಐ, ಬಿ.ಕೆ ಪಾಟೀಲ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:23/06/2020 ರಂದು ಸಂಜೆ 5:00 ಗಂಟೆ ಸಮಯದಲ್ಲಿ ನಾನು ಸಿಬ್ಬಂದಿಯಾದ ಪಿಸಿ-269 ನಾಗಪ್ಪ, ಪಿಸಿ-314 ಜವರಪ್ಪ ರವರೊಡನೆ ಸರ್ಕಾರಿ ಜೀಪು ಸಂಖ್ಯೆ ಕೆಎ-40-ಜಿ-296 ರಲ್ಲಿ ಚಾಲಕನೊಂದಿಗೆ ಮುದ್ದೇನಹಳ್ಳಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಕಣಿವೆ ನಾರಾಯಣಪ್ಪ ಗ್ರಾಮದ ರಾಧಕೃಷ್ಣ @ ರಾಮಚಂದ್ರಪ್ಪ ಬಿನ್ ಲೇಟ್ ಬೈರಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ತನ್ನ ಮನೆಯ ಮುಂಭಾಗದಲ್ಲಿ ಸ್ಥಳವಕಾಶ ಮಾಡಿಕೊಟ್ಟಿರುವಳೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಕಣಿವೆ ನಾರಾಯಣಪುರ ಗ್ರಾಮದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಸಂಜೆ 5:25 ಗಂಟೆಗೆ  ರಾಧಕೃಷ್ಣ @ ರಾಮಚಂದ್ರಪ್ಪ ಬಿನ್ ಲೇಟ್ ಬೈರಪ್ಪ ರವರು ಸಾರ್ವಜನಿಕರಿಗೆ ಮದ್ಯೆ ಸೇವನೆ  ಮಾಡಲು ಸ್ಥಳವಕಾಶ ಮಾಡಿಕೊಟ್ಟಿದ್ದ  ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಒಂದು ಕಪ್ಪು ಬಣ್ಣದ ಕವರ್ ಇದ್ದು, ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿದ್ದು ಸದರಿ ಕಪ್ಪು ಬಣ್ಣದ ಕವರನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥ್ಯದ ORIGINAL CHOICE DELUXE WHISKY ಯ 12 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 12 ಟೆಟ್ರಾ ಪ್ಯಾಕೇಟುಗಳ ಬೆಲೆ 421 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 80 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ ORIGINAL CHOICE DELUXE WHISKY ಯ 5 ಖಾಲಿ ಟೆಟ್ರಾ ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಯ ಹೆಸರು, ವಿಳಾಸವನ್ನು ಕೇಳಲಾಗಿ  ರಾಧಕೃಷ್ಣ @ ರಾಮಚಂದ್ರಪ್ಪ ಬಿನ್ ಲೇಟ್ ಬೈರಪ್ಪ, 62 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ: ಕಣಿವೆನಾರಾಯಣಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಇವುಗಳನ್ನು ತನ್ನ ಮನೆಯ ಮುಂದೆ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 5:30 ರಿಂದ ಸಂಜೆ 6:30 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.168/2020 ಕಲಂ. 143,147,148,323,324,506,149 ಐ.ಪಿ.ಸಿ:-

          ದಿನಾಂಕ:23.06.2020 ರಂದು ರಾತ್ರಿ 11.30 ಗಂಟೆಗೆ ಪಿರ್ಯಾದಾರರಾದ ರಾಮಕೃಷ್ಣಪ್ಪ ಬಿನ್ ಆಂಜಿನಪ್ಪ, 35 ವರ್ಷ, ನಾಯಕ ಜನಾಂಗ, ಕುರುಬಚ್ಚನಪಡೆ ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ದಿನಾಂಕ:23.06.2020 ರಂದು ರಾತ್ರಿ 8.30 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯ ಬಳಿ ಇದ್ದಾಗ ನಮ್ಮ ಗ್ರಾಮದ ದ್ಯಾವಮ್ಮ,್ತ ನವ್ಯಶ್ರೀ, ಚನ್ನರಾಯಪ್ಪ, ಮಂಜಮ್ಮ ಎಂಬುವವರು ನೀರಿನ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಕೂಗಾಡುತಿದ್ದರು. ಆಗ ನಾನು ನಮ್ಮ ಚಿಕ್ಕಪ್ಪನ ಮಗನಾದ ವೆಂಕಟೇಶ ಮತ್ತು ಶ್ರೀನಾಥ್ ರವರುಗಳು ಹೋಗಿ ಗಲಾಟೆ ಮಾಡಿಕೊಳ್ಳಬೇಡಿ ಅಂತ ಗಲಾಟೆಯನ್ನು ಬಿಡಿಸುತಿದ್ದರು ಆ ಸಮಯದಲ್ಲಿ ನಮ್ಮ ಗ್ರಾಮದ ಶ್ರೀನಿವಾಸ ಬಿನ್ ಲಕ್ಷ್ಮಪ್ಪ, ಶ್ಯಾನಂದ ಬಿನ್ ಲಕ್ಷ್ಮಪ್ಪ, ದೊಡ್ಡಕೃಷ್ಣಪ್ಪ ಬಿನ್ ಮುನಿಯಪ್ಪ, ಶ್ರೀನಿವಾಸ ಬಿನ್ ದೊಡ್ಡಕೃಷ್ಣಪ್ಪ, ನರೇಶ ಬಿನ್ ಪಿಳ್ಳಕಿಟ್ಟಪ್ಪ, ನವೀನ್ ಬಿನ್ ನಾರಾಯಣಪ್ಪ ರವರುಗಳು ಏಕಾ ಏಕಿ ಮಚ್ಚು ಮತ್ತು ದೊಣ್ಣೆಗಳನ್ನು ತಂದು ಶ್ರೀನಿವಾಸ ಬಿನ್ ಲಕ್ಷ್ಮಪ್ಪ ರವರು ಮಚ್ಚಿನಿಂದ ನನ್ನ ತಲೆಯ ಎಡಭಾಗಕ್ಕೆ ಹೊಡೆದಿರುತ್ತಾರೆ. ಶ್ಯಾನಂದ ಬಿನ್ ಲಕ್ಷ್ಮಪ್ಪ ಎಂಬುವವರು ದೊಣ್ಣೆಯಿಂದ ನನ್ನ ಎಡಕಣ್ಣಿನ ಪಕ್ಕದಲ್ಲಿ ಹೊಡೆದಿರುತ್ತಾನೆ. ಶ್ರೀನಿವಾಸ ಬಿನ್ ದೊಡ್ಡಕೃಷ್ಣಪ್ಪ ರವರು ನನ್ನ ಎಡಕೈನ ಬೆರಳನ್ನು ಕಚ್ಚಿರುತ್ತಾನೆ. ನನ್ನ ಚಿಕ್ಕಪ್ಪನ ಮಗನಾದ ವೆಂಕಟೇಶ ರವರಿಗೆ ದೊಡ್ಡಕೃಷ್ಣಪ್ಪ ಬಿನ್ ಮುನಿಯಪ್ಪ ರವರು ಎಡಗೈಗೆ ಹೊಡೆದು ಗಾಯವನ್ನುಂಟುಮಾಡಿರುತ್ತಾನೆ. ಮತ್ತು ನಮ್ಮ ಚಿಕ್ಕಪ್ಪನ ಮಗನಾದ ಶ್ರೀನಾಥ ಬಿನ್ ರಾಮಪ್ಪ ಎಂಬುವವರಿಗೆ ದೊಡ್ಡಕೃಷ್ಣಪ್ಪ ರವರು ತನ್ನ ಕೈಯಲ್ಲಿದ್ದ ಮಚ್ಚಿನಿಂದ ತಲೆಯ ಎಡಬಾಗ, ಬಲಬಾಗ, ಹಿಂಭಾಗಕ್ಕೆ ಮಚ್ಚಿನಿಂದ ಹೊಡೆದು ರಕ್ತಗಾಯ ಮಾಡಿರುತ್ತಾರೆ. ನರೇಶ ಮತ್ತು ನವೀನ ರವರು ತಮ್ಮ ಕೈಯಲ್ಲಿದ್ದ ದೊಣ್ಣೆಗಳಿಂದ ತಮ್ಮ ಮೂರು ಜನಕ್ಕೆ ಕೈಗೆ ಮುಖಕ್ಕೆ ಬೆನ್ನಿಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಮತ್ತು ಕೈಗಳಿಂದ, ಕಾಲಿನಿಂದ ಹೊದ್ದು ಬಟ್ಟೆಗಳನ್ನು ಹರಿದು ಹಾಕಿ ಮತ್ತೊಂದು ಬಾರಿ ಈ ರೀತಿ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸಿಬಿಡುತ್ತೆವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ನಮ್ಮ ಗ್ರಾಮದ ಪ್ರಶಾಂತ ಬಿನ್ ಮಾರಪ್ಪ, ಮೂರ್ತಿ ಬಿನ್ ಮುನಿಕೃಷ್ಣಪ್ಪ ಎಂಬವವರು ಗಲಾಟೆಯನ್ನು ಬಿಡಿಸಿ ಯಾವುದೋ ಒಂದು ವಾಹನದಲ್ಲಿ ನಮ್ಮನ್ನು ಕರೆದುಕೊಂಡು ಬಂದು ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ. ನಮ್ಮ ಮೇಲೆ ಹೊಡೆದು ಹಲ್ಲೆ ಮಾಡಿದಂತಹ ಶ್ರೀನಿವಾಸ ಬಿನ್ ಲಕ್ಷ್ಮಪ್ಪ, ಶ್ಯಾನಂದ ಬಿನ್ ಲಕ್ಷ್ಮಪ್ಪ, ದೊಡ್ಡಕೃಷ್ಣಪ್ಪ ಬಿನ್ ಮುನಿಯಪ್ಪ, ಶ್ರೀನಿವಾಸ ಬಿನ್ ದೊಡ್ಡಕೃಷ್ಣಪ್ಪ, ನರೇಶ ಬಿನ್ ಪಿಳ್ಳಕಿಟ್ಟಪ್ಪ, ನವೀನ್ ಬಿನ್ ನಾರಾಯಣಪ್ಪ ರವರಗಳ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.