ದಿನಾಂಕ : 24/06/2019ರ ಅಪರಾಧ ಪ್ರಕರಣಗಳು

 1. ಬಟ್ಲಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 58/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ:23/06/2019 ರಂದು ಸಂಜೆ 16-00 ಗಂಟೆಗೆ ಠಾಣೆಯ ಪ್ರಬಾರ ಪಿ ಎಸ್ ಐ ಶ್ರೀ ನಾರಾಯಣಸ್ವಾಮಿ ಸಾಹೆಬರವರು ಮಾಲು ಮತ್ತು ಆರೋಪಿಯನ್ನು ಠಾಣೆಯಲ್ಲಿ ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:23/06/2019 ರಂದು ಮದ್ಯಾಹ್ನ 01-00 ಗಂಟೆಯಲ್ಲಿ ಶ್ರೀ ನಾರಾಯಣಸ್ವಾಮಿ ಪ್ರಭಾರ ಪಿ ಎಸ್ ಐ ಬಟ್ಲಹಳ್ಳಿ ಪೊಲೀಸ್ ಠಾಣೆ ಆದ ನಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ, ಠಾಣೆಯ ಸರಹದ್ದಿನ ಕಡದನಮರಿ  ಗ್ರಾಮದ ವಾಸಿ ಮಲ್ಲೇಶ್ ,ಜಿ ಬಿನ್ ಗಂಗುಲಪ್ಪ ರವರು ತನ್ನ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಸಿ.ಪಿ.ಸಿ 374 ವಿಜಯಕುಮಾರ್ ಹಾಗೂ ಸಿಪಿಸಿ 349  ಪೈರೋಜ್ ಆಲಿ ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ನಲ್ಲಿ ಕಡದನಮರಿ ಗ್ರಾಮದ ಮಲ್ಲೇಶ್ ರವರ ಅಂಗಡಿಯ ಬಳಿಗೆ ಮದ್ಯಾಹ್ನ 1-30 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಅಂಗಡಿಯ  ಬಳಿಗೆ ಹೋಗಿ ನೋಡುವಷ್ಟರಲ್ಲಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದವರು ಪೊಲೀಸ್ ಜೀಪ್ನನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಖಾಲಿ ಪ್ಯಾಕೇಟ್ಗಳು ಸ್ಥಳದಲ್ಲಿ ಬಿದ್ದಿದ್ದು, ಅಂಗಡಿಯಲ್ಲಿದ್ದ  ಆಸಾಮಿಯ ಹೆಸರು ಮತ್ತು ವಿಳಾಸ ತಿಳಿಯಲಾಗಿ  ಮಲ್ಲೇಶ್ , ಜಿ ಬಿನ್ ಗಂಗುಲಪ್ಪ, 22 ವರ್ಷ,  ಆದಿ ಕರ್ನಾಟಕ, ಚಿಲ್ಲರೆ ಅಂಗಡಿ ಮಾಲೀಕ  ಎಂದು ತಿಳಿಸಿದ್ದು, ಮದ್ಯದ ಪ್ಯಾಕೇಟ್ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ  ಪರವಾನಗಿಯ ಬಗ್ಗೆ ವಿಚಾರಿಸಲಾಗಿ  ಯಾವುದೇ ಪರವಾನಗಿ ಇಲ್ಲವೆಂತ ತಿಳಿಸಿರುತ್ತಾರೆ. ಪಂಚರ ಸಮಕ್ಷಮ ಮದ್ಯಾಹ್ನ 1-30 ಗಂಟೆಯಿಂದ 2-15 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 1 ಲೀಟರ್ 80 ಎಂ.ಎಲ್ ನ ಬೆಲೆ: 363 ರೂಗಳ ಬೆಲೆ ಬಾಳುವ 90 ಎಂ.ಎಲ್ ನ ಹೈವಾಡ್ಸ್ ವಿಸ್ಕಿ ನ 12 ಟೆಟ್ರಾ ಪ್ಯಾಕೇಟ್ಗಳನ್ನು ಮತ್ತು 2 ಖಾಲಿ 90 ಎಂ.ಎಲ್ ನ ಹೈವಾಡ್ಸ್ ವಿಸ್ಕಿ ನ ಟೆಟ್ರಾ ಪ್ಯಾಕೇಟ್ಗಳನ್ನು , 4 ಪ್ಲಾಸ್ಟೀಕ್ ಲೋಟಗಳು ಹಾಗೂ 4 ವಾಟರ್ ಪ್ಯಾಕೆಟ್ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ಮೇಲ್ಕಂಡ ಮಲ್ಲೇಶ್  ರವರ ವಿರುದ್ದ ಕಾನೂನು  ಕ್ರಮ ಜರುಗಿಸಲು ಸೂಚಿಸಿ ನೀಡಿದ ವರದಿಯ ಸಾರಾಂಶವಾಗಿರುತ್ತೆ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 59/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ:23/06/2019 ರಂದು ಸಂಜೆ 16-20 ಗಂಟೆಗೆ ಠಾಣೆಯ ಪ್ರಬಾರ ಪಿ ಎಸ್ ಐ ಶ್ರೀ ನಾರಾಯಣಸ್ವಾಮಿ ಸಾಹೆಬರವರು ಮಾಲನ್ನು ಠಾಣೆಯಲ್ಲಿ ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:23/06/2019 ರಂದು ಮದ್ಯಾಹ್ನ 2-30 ಗಂಟೆಯಲ್ಲಿ ಶ್ರೀ ನಾರಾಯಣಸ್ವಾಮಿ ಪ್ರಭಾರ ಪಿ ಎಸ್ ಐ ಬಟ್ಲಹಳ್ಳಿ ಪೊಲೀಸ್ ಠಾಣೆ ಆದ ನಾನು ಕಡದನಮರಿ ಗ್ರಾಮದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ, ಠಾಣೆಯ ಸರಹದ್ದಿನ ಕೋಟಗಲ್  ಗ್ರಾಮದ ವಾಸಿ ಶ್ರೀನಿವಾಸರೆಡ್ಡಿ ಬಿನ್ ಪಾಪರೆಡ್ಡಿ ರವರು ತನ್ನ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಸಿ.ಪಿ.ಸಿ 374 ವಿಜಯಕುಮಾರ್ ಹಾಗೂ ಸಿಪಿಸಿ 349  ಪೈರೋಜ್ ಆಲಿ ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ನಲ್ಲಿ ಕೋಟಗಲ್  ಗ್ರಾಮದ ಶ್ರೀನಿವಾಸರೆಡ್ಡಿ ರವರ ಅಂಗಡಿಯ ಬಳಿಗೆ ಮದ್ಯಾಹ್ನ 2-45 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಅಂಗಡಿಯ  ಬಳಿಗೆ ಹೋಗಿ ನೋಡುವಷ್ಟರಲ್ಲಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದವರು ಹಾಗೂ ಅಂಗಡಿಯಲ್ಲಿದ್ದ ಆಸಾಮಿಯು ಪೊಲೀಸ್ ಜೀಪ್ನನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಖಾಲಿ ಪ್ಯಾಕೇಟ್ಗಳು ಸ್ಥಳದಲ್ಲಿ ಬಿದ್ದಿದ್ದು, ಅಂಗಡಿ ಪಕ್ಕದಲ್ಲಿ ನಿಂತಿದ್ದ  ಶ್ರೀರಾಮ ರವರನ್ನು ಅಂಗಡಿಯಿಂದ ಪರಾರಿಯಾದ  ಮಾಲೀಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ  ಶ್ರೀನಿವಾಸರೆಡ್ಡಿ ಬಿನ್ ಪಾಪರೆಡ್ಡಿ, 40 ವರ್ಷ,  ವಕ್ಕಲಿಗರು, ಚಿಲ್ಲರೆ ಅಂಗಡಿ ಮಾಲೀಕ ಕೋಡಿಗಲ್ ಗ್ರಾಮ ಎಂದು ತಿಳಿಸಿದ್ದು, ಈತನು  ಮದ್ಯದ ಪ್ಯಾಕೇಟ್ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ  ಪರವಾನಗಿಯನ್ನು ಹೊಂದಿದ್ದಾನೇಯೇ ಎಂಬುದರ  ಬಗ್ಗೆ ವಿಚಾರಿಸಲಾಗಿ  ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾರೆ. ನಂತರ ಪಂಚರ ಸಮಕ್ಷಮ ಮದ್ಯಾಹ್ನ 02-45  ಗಂಟೆಯಿಂದ 03-30 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 1 ಲೀಟರ್ 170 ಎಂ.ಎಲ್ ನ ಬೆಲೆ: 394 ರೂಗಳ ಬೆಲೆ ಬಾಳುವ 90 ಎಂ.ಎಲ್ ನ ಹೈವಾಡ್ಸ್ ವಿಸ್ಕಿ ನ 13 ಟೆಟ್ರಾ ಪ್ಯಾಕೇಟ್ಗಳನ್ನು ಮತ್ತು 3 ಖಾಲಿ 90 ಎಂ.ಎಲ್ ನ ಹೈವಾಡ್ಸ್ ವಿಸ್ಕಿ ನ ಟೆಟ್ರಾ ಪ್ಯಾಕೇಟ್ಗಳನ್ನು , 4 ಪ್ಲಾಸ್ಟೀಕ್ ಲೋಟಗಳು ಹಾಗೂ 4 ವಾಟರ್ ಪ್ಯಾಕೆಟ್ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ಮೇಲ್ಕಂಡ ಶ್ರೀನಿವಾಸರೆಡ್ಡಿ  ರವರ ವಿರುದ್ದ ಕಾನೂನು  ಕ್ರಮ ಜರುಗಿಸಲು ಸೂಚಿಸಿ ನೀಡಿದ ವರದಿಯ ಸಾರಾಂಶವಾಗಿರುತ್ತೆ.

 1. ಚೇಳೂರು ಪೊಲೀಸ್ ಠಾಣೆ. ಮೊ.ಸಂ: 40/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ:- 22-06-2019 ರಂದು  ಸಂಜೆ 4-15 ಗಂಟೆಗೆ ಪಿ.ಎಸ್.ಐ ರವರಾದ ಚಂದ್ರಕಲಾ ರವರ ಠಾಣೆಗೆ ಹಾಜರಾಗಿ ನೀಡಿದ  ವರದಿಯ ಸಾರಾಂಶವೆನೇಂದರೆ , ಮಧ್ಯಾಹ್ನ 2-15 ಗಂಟೆಯಲ್ಲಿ ಜೀಪ್ ಸಂಖ್ಯೆ: ಕೆ.ಎ 42 ಜಿ 61 ನಲ್ಲಿ ಪಿ.ಎಸ್.ಐ  ಚಂದ್ರಕಲಾ. ಎನ್  ಆದ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಹೆಚ್ ಸಿ 129 ರವಣಪ್ಪ ,ಸಿ.ಪಿ.ಸಿ 07 ವಿಧ್ಯಾಧರ ಮತ್ತು CPC 540 ಶಿವ ಕುಮಾರ್  ರವರೊಂದಿಗೆ ಠಾಣಾ ಸರಹದ್ದು  ಉದವಾರಪಲ್ಲಿ ಗ್ರಾಮ ಕಡೆ ಗಸ್ತು ಮಾಡುತ್ತಿದ್ದಾಗ ಉದವಾರಪಲ್ಲಿ ಗ್ರಾಮದಲ್ಲಿ  ಯಾರೋ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶವನ್ನು ನೀಡಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ನಾವು ಊದುವಾರಪಲ್ಲಿ ಗ್ರಾಮದಲ್ಲಿ  ಪಂಚರನ್ನು ಬರಮಾಡಿಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಗಂಗರಾಜು ರವರ ಮನೆಯ ಮುಂಭಾಗ ಯಾರೋ ಕೇಲವರು ಮಧ್ಯಪಾನವನ್ನು ಮಾಡುತ್ತಿದ್ದು ನಮ್ಮನ್ನು ಸಮವಸ್ತ್ರದಲ್ಲಿ ನೋಡಿ ಅಲ್ಲಿಂದ ಓಡಿ ಹೋಗಿರುತ್ತಾರೆ. ಸದರಿ ಸ್ಥಳದ ಬಗ್ಗೆ ವಿಚಾರಿಸಲಾಗಿ ಸದರಿ ಸ್ಥಳವು ಗಂಗರಾಜು ರವರ ಮನೆಯ ಮುಂಭಾಗ ಸಾರ್ವಜನಿಕ  ಸ್ಥಳವಾಗಿದ್ದು, ಅಲ್ಲಿ ಮಧ್ಯದ ಪ್ಯಾಕೇಟ್ ಗಳು ಮತ್ತು  2-3 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು  ಮತ್ತು ಮಧ್ಯಪಾನ  ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಯಾವುದಾರೂ ಪರವಾನಿಗೆ ಇದೆಯೇ ಎಂದು  ಅಲ್ಲಿದ್ದ ಗಂಗರಾಜು ರವರನ್ನು ಕೇಳಲಾಗಿ ಸದರಿಯವರು ನನ್ನ ಬಳಿ ಯಾವುದೇ ಪರವಾನಿಗೆ ಇಲ್ಲಾ ಎಂದು ಹೇಳಿದ್ದು ,  ಸದರಿಯವರ  ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಗಂಗರಾಜು ಬಿನ್ ಕಿಟ್ಟಣ್ಣ, 32 ವರ್ಷ, ಬೋವಿ ಜನಾಂಗ, ಜಿರಾಯ್ತಿ, ವಾಸ: ಉದುವಾರಪಲ್ಲಿ  ಗ್ರಾಮ , ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಮಧ್ಯ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 180 ಎಂ.ಎಲ್ ನ OLD TAVERAN WHISKY 6 ಟೆಟ್ರಾ ಪ್ಯಾಕೇಟ್ ಗಳು ವುಗಳು ಒಟ್ಟು 1080 ಎಂ.ಎಲ್ ಪ್ರತಿ ಪ್ಯಾಕೇಟ್ ನ ಬೆಲೆ 74.13 ಎಂದು ನಮೂದಿಸಿದ್ದು ಇವುಗಳು ಒಟ್ಟು 444.78 ರೂಗಳಾಗಿರುತ್ತೆ ಹಾಗೂ  90 ಎಂ.ಎಲ್ HAYWARDS CHEERS WHISKY 10 ಪ್ಯಾಕೇಟ್ ಗಳಿದ್ದು ಪ್ರತಿ ಪ್ಯಾಕೇಟ್ ನ ಮೇಲೆ 30.32 ರೂ ಎಂದು ನಮೂದಿಸಿದ್ದು ಇವುಗಳ  ಒಟ್ಟು  ಬೆಲೆ 303.3 ರೂಗಳು  ಬೆಲೆ ಬಾಳುವ  ಮಧ್ಯದ ಟೆಟ್ರಾ ಪ್ಯಾಕೇಟ್ ಗಳನ್ನು  ಮತ್ತು  2 ಪ್ಲಾಸ್ಟಿಕ್  ಗ್ಲಾಸ್ ಗಳನ್ನು  ಮಧ್ಯಾಹ್ನ 2-45 ಗಂಟೆಯಿಂದ 3-45 ಗಂಟೆಯವರೆಗೆ ದಾಳಿ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯನ್ನು  ಪಡೆದು ಠಾಣೆ ಮೊ.ಸಂಖ್ಯೆ:40/2019 ಕಲಂ:15(ಎ),32(3) ಕೆ.ಎ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 1. ಚೇಳೂರು ಪೊಲೀಸ್ ಠಾಣೆ. ಮೊ.ಸಂ: 41/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ:- 24-06-2019 ರಂದು ಬೆಳಿಗ್ಗೆ 11-30 ಗಂಟೆಗೆ ಪಿ.ಎಸ್.ಐ ರವರು ಚಂದ್ರಕಲಾ.ಎನ್ ರವರ ಮಾಲು, ಆಸಾಮಿ , ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೇಂದರೆ ,   ತಾನೂ 9-30 ಗಂಟೆಯಲ್ಲಿ ಜೀಪ್ ಸಂಖ್ಯೆ: ಕೆ.ಎ 42 ಜಿ 61 ನಲ್ಲಿ  ಠಾಣೆಯ ಸಿಬ್ಬಂದಿಯವರಾದ ಹೆಚ್ ಸಿ 129 ರವಣಪ್ಪ , ಸಿ.ಪಿ.ಸಿ 07 ವಿಧ್ಯಾಧರ ಮತ್ತು ಸಿ.ಪಿ.ಸಿ 96 ಹರೀಶ್ ರವರೊಂದಿಗೆ ಠಾಣಾ ಸರಹದ್ದು  ಸಜ್ಜಲವಾರಪಲ್ಲಿ  ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ ಸಜ್ಜಲವಾರಪಲ್ಲಿ ಗ್ರಾಮದಲ್ಲಿ  ಯಾರೋ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶವನ್ನು ನೀಡಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ನಾವು ಅದೇ ಗ್ರಾಮದಲ್ಲಿ  ಪಂಚರನ್ನು ಬರಮಾಡಿಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ರಂಗಣ್ಣ ರವರ ಮನೆಯ ಮುಂಭಾಗ ಯಾರೋ ಕೆಲವರು ಮಧ್ಯಪಾನವನ್ನು ಮಾಡುತ್ತಿದ್ದು ನಮ್ಮನ್ನು ಸಮವಸ್ತ್ರದಲ್ಲಿ ನೋಡಿ ಅಲ್ಲಿಂದ ಓಡಿ ಹೋಗಿರುತ್ತಾರೆ. ಸದರಿ ಸ್ಥಳದ ಬಗ್ಗೆ ವಿಚಾರಿಸಲಾಗಿ ಸದರಿ ಸ್ಥಳವು ರಂಗಣ್ಣ ರವರ ಮನೆಯ ಮುಂಭಾಗ ಸಾರ್ವಜನಿಕ  ಸ್ಥಳವಾಗಿದ್ದು, ಅಲ್ಲಿ ಮಧ್ಯದ ಪ್ಯಾಕೇಟ್ ಗಳು ಮತ್ತು  2-3 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು  ಮತ್ತು ಮಧ್ಯಪಾನ  ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಯಾವುದಾರೂ ಪರವಾನಿಗೆ ಇದೆಯೇ ಎಂದು  ಅಲ್ಲಿದ್ದ ರಂಗಣ್ಣ ರವರನ್ನು ಕೇಳಲಾಗಿ ಸದರಿಯವರು ನನ್ನ ಬಳಿ ಯಾವುದೇ ಪರವಾನಿಗೆ ಇಲ್ಲಾ ಎಂದು ಹೇಳಿದ್ದು ,  ಸದರಿ  ಆಸಾಮಿಯ ಹೆಸರು , ವಿಳಾಸ ಕೇಳಲಾಗಿ ತನ್ನ ಹೆಸರು ರಂಗಣ್ಣ ಬಿನ್ ರಂಗಪ್ಪ, 54 ವರ್ಷ, ಭಜಂತ್ರಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಸಜ್ಜಲವಾರಪಲ್ಲಿ  ಗ್ರಾಮ , ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಸ್ಥಳದಲ್ಲಿದ್ದ ಮಧ್ಯ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 180 ಎಂ.ಎಲ್ ನ BAGPIPER WHISKY 4 ಟೆಟ್ರಾ ಪ್ಯಾಕೇಟ್ ಗಳು ಇವುಗಳು ಒಟ್ಟು 720 ಎಂ.ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಬೆಲೆ 90.21 ಎಂದು ನಮೂದಿಸಿದ್ದು ಇವುಗಳು ಒಟ್ಟು 360.84 ರೂಗಳಾಗಿರುತ್ತೆ ಹಾಗೂ  90 ಎಂ.ಎಲ್ HAYWARDS CHEERS WHISKY 10 ಪ್ಯಾಕೇಟ್ ಗಳಿದ್ದು ಪ್ರತಿ ಪ್ಯಾಕೇಟ್ ನ ಮೇಲೆ 30.32 ರೂ ಎಂದು ನಮೂದಿಸಿದ್ದು ಇವುಗಳ  ಒಟ್ಟು  ಬೆಲೆ 303.3 ರೂಗಳು  ಬೆಲೆ ಬಾಳುವ  ಮಧ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು 2 ಪ್ಲಾಸ್ಟಿಕ್  ಗ್ಲಾಸ್ ಗಳನ್ನು   ಬೆಳಿಗ್ಗೆ 10-00 ಗಂಟೆಯಿಂದ 11-00 ಗಂಟೆಯವರೆಗೆ ದಾಳಿ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂಖ್ಯೆ:41/2019 ಕಲಂ:15(ಎ)32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 149/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ 23/06/2019 ರಂದು ರಾತ್ರಿ 09.00 ಗಂಟೆಗೆ ಡಿಸಿಬಿ ಪಿಎಸ್ಐ ಪಾಪಣ್ಣ ಟಿ ಎನ್ ರವರು ಠಾಣೆಗೆ ಹಾಜರಾಗಿ ಮಾಲು ಪಂಚನಾಮೆ ಮತ್ತು ಆರೋಪಿಯೊಂದಿಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಸಿಬ್ಬಂದಿಯೊಂದಿಗೆ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರದ ಗುಂಡ್ಲಗುರ್ಕಿ ಗ್ರಾಮದ ವಾಸಿ ಗೋಪಾಲರತ್ನಂ ಬಿನ್ ಲೇಟ್ ದೊಡ್ಡ ನರಸಿಂಹಯ್ಯ, 58 ವರ್ಷ, ಜಿರಾಯ್ತಿ ರವರು ಅವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಪಡೆಯದೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು ಈ ಸಂಬಂದ ಪಂಚರನ್ನು ಬರಮಾಡಿಕೊಂಡು ದಾಳಿ ಮಾಡಿದ್ದು ಸ್ಥಳದಲ್ಲಿ 1) ಹೈವಾಡ್ಸ್ ಚೀರ್ ವಿಸ್ಕಿ 90 ಎಂಎಲ್ ನ 7 ಮಧ್ಯದ ಟೆಟ್ರಾ ಪಾಕೇಟ್ಗಳು 2) ಓಲ್ಡ್ ಟೆವರನ್ ವಿಸ್ಕಿ ಕಂಪನಿಯ ಮಧ್ಯ ತುಂಬಿರುವ 8 ಟೆಟ್ರಾ ಪಾಕೇಟ್ಗಳು 3) ಎರಡು ಖಾಲಿ ಹೈವಾಡ್ಸ್ ಚೀರ್ ವಿಸ್ಕಿ 90 ಎಂಎಲ್  ಟೆಟ್ರಾ ಪಾಕೇಟ್ಗಳು 4) ಎರಡು ಖಾಲಿ ಪ್ಲಾಸ್ಟಿಕ್ ಗ್ಲಾಸ್ಗಳು 5) ಒಂದು ಲೀಟರ್ ನ ಒಂದು ಖಾಲಿ ನೀರಿನ ಪ್ಲಾಸ್ಟಿಕ್ ಬಾಟೆಲ್ ಒಟ್ಟು 2.070 ಲೀಟರ್ ಇದ್ದು ಇದರ ಅಂದಾಜು ಬೆಲೆ 817/- ರೂಗಳು ಇದನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು,  ಮಾಲಿಕ ಗೋಪಾಲರತ್ನಂ ರವರನ್ನು  ಮಾಲನ್ನು ವಶಕ್ಕೆ ನೀಡಿ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ. ಮೊ.ಸಂ: 143/2019 ಕಲಂ: 143, 447, 448, 323, 324 ರೆ/ವಿ 34 ಐ.ಪಿ.ಸಿ:-

          ದಿನಾಂಕ 23-06-2019 ರಂದು ಮಧ್ಯಾಹ್ನಾ 13.30 ಗಂಟೆಯಲ್ಲಿ ನ್ಯಾಯಾಲಯದ ಪೇದೆ 509 ರವರು  ನ್ಯಾಯಾಲಯದಿಂದ ಹಾಜರುಪಡಿಸಿದ ಪಿ.ಸಿ.ಆರ್ ನಂ.355/2019 ರಂತೆ ಸಲ್ಲಿಸಿಕೊಂಡಿರು ದೂರಿನಲ್ಲಿ ಈ ಪ್ರಕರಣದಲ್ಲಿ ಸೂಚಿಸಿರುವ ಆರೋಪಿಗಳು ಪಿರ್ಯಾದಿ ಬಾಬತ್ತು ಸ್ವತ್ತುಗಳಲ್ಲಿ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿಗೆ ಹಲ್ಲೆ ಮಾಡಿರುವುದಾಗಿ ದೂರಿನ ಸಾರಾಂಶವಾಗಿರುತ್ತದೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ. ಮೊ.ಸಂ: 144/2019 ಕಲಂ: 78 (A)(vi) ಕೆ.ಪಿ. ಆಕ್ಟ್:-

          ದಿನಾಂಕ 23-06-2019 ರಂದು ಸಂಜೆ 5-15 ಗಂಟೆಯಲ್ಲಿ ಪಿ ಐ ಸಾಹೇಬರು ಮಾಲು, ಪಂಚನಾಮೆ ಮತ್ತು ಆರೋಪಿ ಸಮೇತ  ನೀಡಿದ ದೂರಿನ ಸಾರಾಂಶದಂತೆ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ನಾರಾಯಣಸ್ವಾಮಿ ಜಿ.ಸಿ. ಆದ ನಾನು ಈ ದಿನ ದಿನಾಂಕ:23/06/2019 ರಂದು  ಮಧ್ಯಾಹ್ನ 04-00 ಗಂಟೆಯ ಸಮಯದಲ್ಲಿ ಚಿಂತಾಮಣಿ ನಗರದ  ಕೆ.ಆರ್.ಬಡಾವಣೆ, ಮಾರುತಿ ವೃತ್ತ, ಟ್ಯಾಂಕ್ ಬಂಡ್ ರಸ್ತೆ  ಮುಂತಾದ ಕಡೆ ನಾನು ಮತ್ತು ಠಾಣೆಯ ಶ್ರೀ.ಕೃಷ್ಣಪ್ಪ, ಸಿಪಿಸಿ-524 ರವರೊಂದಿಗೆ ಕೆಎ-40, ಜಿ-356 ಸಂಖ್ಯೆ ಸರ್ಕಾರಿ ಜೀಪಿನಲ್ಲಿ ಗಸ್ತಿನಲ್ಲಿದ್ದಾಗ  ಚಿಂತಾಮಣಿ ನಗರ ಟ್ಯಾಂಕ್ ಬಂಡ್ ರಸ್ತೆಯ ವೆಂಕಟರಾಯಪ್ಪ ಮಟನ್ ಹೋಟೆಲ್ ಮುಂಭಾಗ  ಸದರಿ ಆಸಾಮಿಯು ಹಣವನ್ನು ಪಣಕ್ಕಿಟ್ಟು ಕಾನೂನು ಬಾಹಿರವಾಗಿ ವಿಶ್ವಕಪ್ ಐಸಿಸಿ  ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ನಾನು ಸದರಿ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-356 ರಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಸುತ್ತಿರುವ ಸಿಬ್ಬಂದಿಯಾದ ಸಿ.ಹೆಚ್.ಸಿ-245 ಸೋಮಶೇಖರಾಚಾರಿ,   ಸಿಪಿಸಿ-524, ಕೃಷ್ಣಪ್ಪ ರವರೊಂದಿಗೆ  ಸಂಜೆ 04-15 ಗಂಟೆಗೆ ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ರಸ್ತೆಯ ಬಳಿ ಹೋಗಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ವಿಚಾರವನ್ನು ತಿಳಿಸಿ ದಾಳಿ ಸಮಯದಲ್ಲಿ ಪಂಚರಾಗಿ ಸಹಕರಿಸಬೇಕೆಂದು ಕೋರಿದ್ದರ ಮೇರೆಗೆ ಅವರು ಒಪ್ಪಿಕೊಂಡಿದ್ದು, ನಂತರ ಟ್ಯಾಂಕ್ ಬಂಡ್ ರಸ್ತೆಯ ವೆಂಕಟರಾಯಪ್ಪ ಮಟನ್ ಹೋಟೆಲ್  ಗೆ ಸ್ವಲ್ವ ದೂರದಲ್ಲಿ ಜೀಪು ನಿಲ್ಲಿಸಿ ಪಂಚರೊಂದಿಗೆ ಮರೆಯಲ್ಲಿ ನಿಂತುಕೊಂಡು ಹೋಟೆಲ್ ಕಡೆ ನೋಡಲಾಗಿ ಹೋಟೆಲ್ ಮುಂಭಾಗ ರಸ್ತೆಯಲ್ಲಿ  ಒಬ್ಬ ಆಸಾಮಿಯು ಹೋಟೆಲ್ ನಲ್ಲಿದ್ದ ಟಿವಿ ನೋಡಿಕೊಂಡು ಅಲ್ಲಿದ್ದ ಸಾರ್ವಜನಿಕರಿಗೆ ಆಫ್ರಿಕಾ ಗೆಲ್ಲುತ್ತೆ, 200 ರೂ ಎಂದು ಪಾಕಿಸ್ತಾನ ಗೆಲ್ಲುತ್ತೆ 300 ರೂ ಎಂದು ಕೂಗುತ್ತಾ ಈ ದಿನ ನಡೆಯುತ್ತಿರುವ ಸೌತ್ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ವಿಶ್ವಕಪ್ ಐಸಿಸಿ ಕ್ರಿಕೆಟ್ ಪಂದ್ಯವನ್ನು ನೋಡಿಕೊಂಡು ಎರಡು ಚೀಟಿಗಳಲ್ಲಿ ಬೆಟ್ಟಿಂಗ್ ಮಾಡುವ ಸಲುವಾಗಿ ಬರೆದು ಬೆಟ್ಟಿಂಗ್ ಆಡುತ್ತಿದ್ದು,ಪಂಚರೊಂದಿಗೆ ದಾಳಿ ಮಾಡಿ ಸದರಿ ಆಸಾಮಿಯನ್ನು ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ತನ್ನ ಹೆಸರು ರಾಮಚಂದ್ರ ಬಿನ್ ಚೆಲುವರಾಜು, 45ವರ್ಷ, ಬಲಜಿಗರು, ವ್ಯಾಪಾರ,ಕೆ.ಆರ್. ಬಡಾವಣೆ, ಚಿಂತಾಮಣಿ ನಗರ ಎಂದು ತಿಳಿಸಿರುತ್ತಾನೆ. ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ಬೆಟ್ಟಿಂಗ್ ನಲ್ಲಿ ತೊಡಗಿಸಿದ್ದ 1700/- ರೂ ಹಣ, ಬೆಟ್ಟಿಂಗ್ ಆಡಲು ಬರೆದಿರುವ ಎರಡು ಚೀಟಿ ಮತ್ತು ಒಂದು ಪೆನ್ ನ್ನು ಮುಂದಿನ ಕ್ರಮದ ಬಗ್ಗೆ ಮಹಜರ್ ಮುಖಾಂತರ ಅಮಾನತ್ತುಪಡಿಸಿಕೊಂಡು ಆರೋಪಿ ಮತ್ತು ಮಾಲಿನೊಂದಿಗೆ ಸಂಜೆ 05-00 ಗಂಟೆಗೆ ಠಾಣೆಗೆ ಬಂದು ಆರೋಪಿ ಮತ್ತು ಮಾಲನ್ನು ಹಾಜರುಪಡಿಸುತ್ತಿದ್ದು, ಆರೋಪಿ ರಾಮಚಂದ್ರ ಬಿನ್ ಚೆಲುವರಾಜು  ರವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 227/2019 ಕಲಂ: 78(I), 78(III) ಕೆ.ಪಿ. ಆಕ್ಟ್:-

          ದಿನಾಂಕ: 23/06/2019 ರಂದು ಬೆಳಿಗ್ಗೆ 11:00 ಗಂಟೆಗೆ ಗುಡಿಬಂಡೆ ನ್ಯಾಯಾಲಯ ಕರ್ತವ್ಯದ ಪಿ.ಸಿ-208 ರವರು ಎನ್.ಸಿ.ಆರ್ ನಂ-401/19 ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ: 22/06/2019 ರಂದು ಸಂಜೆ 4-50 ಗಂಟೆಯಲ್ಲಿ ಪಿರ್ಯಾದಿದಾರರಾದ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಅವಿನಾಶ್.ವಿ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 22/06/2019 ರಂದು ಮಧ್ಯಾಹ್ನ 3-00 ಗಂಟೆಯಲ್ಲಿ ಗೌರೀಬಿದನೂರು ತಾಲ್ಲೂಕು, ನಗರಗೆರೆ ಹೋಬಳಿ, ವಾಟದಹೊಸಹಳ್ಳಿ ಗ್ರಾಮದಲ್ಲಿ ಶಿವಶಕ್ತಿ ಬಾರ್ ಬಳಿ ಯಾರೋ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗೂ ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ.80 ಶ್ರೀನಾಥ್ ಹಾಗು ಪಿ.ಸಿ. 170 ಶಿವಶೇಖರ್ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ನಂ.ಕೆ.ಎ.40-ಜಿ.281 ರಲ್ಲಿ ಗ್ರಾಮಕ್ಕೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ, ಮರೆಯಲ್ಲಿ ನಿಂತು ನೋಡಲಾಗಿ, ಯೋರೋ ಒಬ್ಬ ಆಸಾಮಿಯು  ವಾಟದಹೊಸನಹಳ್ಳಿಯ ಶಿವಶಕ್ತಿ ಬಾರ್ ಬಳಿ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಪ್ರದೀಪ.ಆರ್ ಬಿನ್ ಲೇಟ್ ರಾಮಪ್ಪ, 24 ವರ್ಷ, ನಾಯಕ ಜನಾಂಗ, ಅಡುಗೆ ಭಟ್ಟ ಕೆಲಸ, ವಾಸ: ಸುಬ್ಬರಾಯನಹಳ್ಳಿ ಮಜರಾ ವಾಟದಹೊಸಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 2500/- ರೂಗಳು, ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ಪ್ರದೀಪ.ಆರ್ ಬಿನ್ ಲೇಟ್ ರಾಮಪ್ಪ ಹಾಗೂ ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 2500/- ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 3-30 ರಿಂದ 4-15 ಗಂಟಯವರೆಗೆ ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ ಸಂಜೆ  4-45  ಗಂಟೆಗೆ  ಬಂದು  ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ 401/2019 ರಂತೆ ಪ್ರಕರಣ ದಾಖಲು ಮಾಡಿಕೊಂಡು ಸದರಿ ಪ್ರಕರಣವು ಅಸಂಜ್ಞೇಯ ಪ್ರಕರಣವಾಗಿದ್ದರಿಂದ ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಈ ದಿನ ಆರೋಪಿಯ ವಿರುದ್ಧ  ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 229/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ 23/06/2019 ರಂದು ಸಂಜೆ 8.45 ಗಂಟೆಯಲ್ಲಿ  ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ  ಅವಿನಾಶ್ .ವಿ. ಆದ  ನಾನು ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ  ಸೂಚಿಸುವುದೇನೆಂದರೆ ಈ ದಿನ  ದಿನಾಂಕ: 23-06-2019 ರಂದು 19-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ,   ಎಂ.ಗೊಲ್ಲಹಳ್ಳಿ ಗ್ರಾಮದಲ್ಲಿ ಜಗರೆಡ್ಡಿಹಳ್ಳಿ-ಮರಿಪಡುಗು ರಸ್ತೆಯಲ್ಲಿರುವ  ಚಿಲ್ಲರೆ ಅಂಗಡಿಯ ಮುಂಭಾಗ  ಸಾರ್ವಜನಿಕ ರಸ್ತೆಯಲ್ಲಿ ಯಾರೋ ತನ್ನ ಮನೆಯಲ್ಲಿರುವ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ  ನಾನು ಮತ್ತು  ಸಿಬ್ಬಂದಿಯವರಾದ ಪಿ.ಸಿ. 80 ಶ್ರೀನಾಥ್  ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ  ಎಂ.ಗೊಲ್ಲಹಳ್ಳಿ ಗ್ರಾಮಕ್ಕೆ ಹೋಗಿ,  ಗ್ರಾಮದಲ್ಲಿ  ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ , ಎಂ.ಗೊಲ್ಲಹಳ್ಳಿ ಗ್ರಾಮದಲ್ಲಿ ಜಗರೆಡ್ಡಿಹಳ್ಳಿ-ಮರಿಪಡುಗು  ರಸ್ತೆಯಲ್ಲಿರುವ   ಚಿಲ್ಲರೆ ಅಂಗಡಿಯ ಮುಂಭಾಗ  ಯಾರೋ ಒಬ್ಬ ವ್ಯಕ್ತಿ  ಅಂಗಡಿಯ ಮುಂದೆ ಪ್ಲಾಸ್ಟಿಕ್ ಚೀಲವನ್ನು  ಹಿಡಿದುಕೊಂಡು ನಿಂತಿದ್ದು,  ಅಂಗಡಿಯ ಮುಂದೆ  ಇತರೇ ಇಬ್ಬರು  ಜನರು ಕುಳಿತಿದ್ದು, ಅವರಿಗೆ ಪ್ಲಾಸ್ಟಿಕ್ ಚೀಲವನ್ನು  ಹಿಡಿದಿದ್ದ ವ್ಯಕ್ತಿ  ಪ್ಲಾಸ್ಟಿಕ್ ಚೀಲದಿಂದ  ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಆ ನಾಲ್ಕೂ ಜನರು  ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ  ಜನ ವ್ಯಕ್ತಿಗಳು ಓಡಿಹೋಗಿದ್ದು,  ಚೀಲವನ್ನು ಹಿಡಿದು ನಿಂತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು  ಹೆಸರು ವಿಳಾಸ ಕೇಳಲಾಗಿ  ಚೀಲ ಹಿಡಿದು ಮಧ್ಯದ ಪಾಕೆಟ್ ಗಳನ್ನು ಕೊಟ್ಟು, ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ವ್ಯಕ್ತಿಯ ಹೆಸರು ವಿಳಾಸ ತಿಳಿಯಲಾಗಿ, ಆತನ ಹೆಸರು ಸೋಮಶೇಖರ ರೆಡ್ಡಿ  ಬಿನ್ ನಾರಾಯಣರೆಡ್ಡಿ, 36 ವರ್ಷ, ಒಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ   ಜಗರೆಡ್ಡಿಹಳ್ಳಿ-  ಮರಿಪಡುಗು  ರಸ್ತೆ, ಎಂ. ಗೊಲ್ಲಹಳ್ಳಿ  ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದನು. ನಂತರ    ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ,  ಅದರಲ್ಲಿ   90  ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 13 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 1 ಲೀ 170  ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 390/- ರೂ.ಗಳಾಗಿರುತ್ತೆ. ಅಂಗಡಿಯೂ ಸಹ ಆತನದೇ ಎಂದು  ತಿಳಿಸಿದನು.   ಸ್ಥಳದಲ್ಲಿ   02  ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 02  ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಆಸಾಮಿಗೆ ಇವುಗಳನ್ನು ಮಾರಾಟ ಮಾಡಲು, ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ದಾಖಲೆಯನ್ನು ಕೇಳಲಾಗಿ ತನ್ನ ಬಳಿ  ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು.  ನಂತರ   ಸ್ಥಳದಲ್ಲಿ  19-30 ಗಂಟೆಯಿಂದ 20-15 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಸ್ಥಳದಲ್ಲಿ ದೊರೆತ  1) 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 13  ಟೆಟ್ರಾ ಪಾಕೆಟ್ ಗಳು, 2) ಪ್ಲಾಸ್ಟಿಕ್ ಚೀಲ,3)ಸ್ಥಳದಲ್ಲಿ ಬಿದ್ದಿದ್ದ  02 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 4) HAY WARDS CHEERS  WHISKY ಯ  2 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ವಶಪಡಿಸಿಕೊಂಡು, ಠಾಣೆಗೆ 20-45  ಗಂಟೆಗೆ ವಾಪಸ್ಸು ಬಂದಿದ್ದು,  ಆರೋಪಿ,  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 230/2019 ಕಲಂ: 323, 324, 341, 504, 506 ರೆ/ವಿ 34 ಐ.ಪಿ.ಸಿ:-

          ದಿನಾಂಕ 23-06-2019 ರಂದು ರಾತ್ರಿ 21:00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ  ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಹರೀಶ ಕುಮಾರ್ ಆರ್.ಎ ಬಿನ್ ಅಶ್ವತ್ಥಪ್ಪ, 24 ವರ್ಷ, ವಕ್ಕಲಿಗರು, ಖಾಸಗಿ ಕೆಲಸ, ವಾಸ ರಮಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ದಿನಾಂಕ: 23-06-219 ರಂದು ಬೆಳಗ್ಗೆ 09:30 ರಿಂದ 10:30 ಗಂಟೆ ಸುಮಾರಿನಲ್ಲಿ ಕೋಟಾಲದಿನ್ನೆ ಗ್ರಾಮದಲ್ಲಿನ ಹೂವಿನ ಮಂಡಿಗೆ ಹೂವುಗಳನ್ನು ಹಾಕಲು ಬಂದಿದ್ದಾಗ ಹಳೆಉಪ್ಪಾರಹಳ್ಳಿ ಗ್ರಾಮದ ರಮೇಶ ಮತ್ತು ಆತನ ಸ್ನೇಹಿತರಾದ ಲಕ್ಷ್ಮಿನಾರಾಯಣ, ಶ್ರೀಧರ, ಚೀಗಟಗೆರೆ, ಪ್ರವೀಣ ರವರುಗಳು ತನ್ನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ನಾಗಪ್ಪ ರವರ ಅಂಗಡಿಯ ಬಳಿಗೆ ತನ್ನನ್ನು ಎಳೆದುಕೊಂಡು ಹೋಗಿ, ತನ್ನ ಕೆನ್ನೆಗೆ ಹೊಡೆದು ತನ್ನ ಮೊಬೈಲನ್ನು ಜೇಬಿನಿಂದ ಕಸಿದುಕೊಂಡು, ಶ್ರೀಧರನು ತನ್ನ ಹಾಗೂ ರಮೇಶನ ಪೋಟೊ ತೆಗೆದು ಪೇಸ್ ಬುಕ್ ಗೆ ಹಾಕಿದನು. ನಂತರ ಪೋಟೊವನ್ನು  ಪೇಸ್ ಬುಕ್ ನಿಂದ ಡಿಲೀಟ್ ಮಾಡಿದರೆ ನಿನ್ನನ್ನು ಸಾಯಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ನಂತರ ತಾನು ಸದರಿ ಪೋಟೊವನ್ನು ಡಿಲಿಟ್ ಮಾಡಿ, ಹೂವಿನ ಹಣವನ್ನು ಪಡೆಯಲು ಕಾಯುತ್ತಿದ್ದಾಗ, ಅಲ್ಲಿಗೆ ಬಂದ ರಮೇಶ್ ತನ್ನ ಕೊರಳಪಟ್ಟಿಯನ್ನು ಹಿಡಿದುಕೊಂಡು ನಾಗಪ್ಪನ ಮಟನ್ ಅಂಗಡಿಯೊಳಕ್ಕೆ ಎಳೆದುಕೊಂಡು ಹೋಗಿ, ಹೊಟ್ಟೆಗೆ ಕೈಯಿಂದ ಗುದ್ದಿ, ಸಿಗರೇಟ್ ನಿಂದ ತನ್ನ ಮುಂಗೈ ಮೇಲೆ ಸುಟ್ಟ ಗಾಯ ಮಾಡಿ ಹಿಂಸೆ ನೀಡುತ್ತಾ ಮೂಲೆಗೆ ನೂಕಿದನು. ನಂತರ ಲಕ್ಷ್ಮಿನಾರಾಯಣ ಅಲ್ಲೆ ಇದ್ದ ತೂಕದ ಕಲ್ಲನ್ನು ತೆಗೆದುಕೊಂಡು ತನ್ನ ಮೊಣಕಾಲಿಗೆ ಜೂರಾಗಿ ಹೋಡೆದನು. ನಂತರ ರಮೇಶ, ಪ್ರವೀಣ ತನ್ನನ್ನು ಹಿಡಿದುಕೊಂಡು ಪೊಲೀಸರಿಗೆ ದೂರು ನೀಡಿದರೆ ತಮ್ಮ ಮನೆಯ ಹೆಂಗಸರನ್ನು ಸುಟ್ಟು ಹಾಕುತ್ತೇವೆಂದು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಮೇಲ್ಕಂಡ ನಾಲ್ಕು ಜನ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 231/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ 23/06/2019 ರಂದು ಸಂಜೆ. 21:15 ಗಂಟೆಯಲ್ಲಿ  DCBCEN ಪೊಲೀಸ್ ಠಾಣೆಯ PI ಶ್ರೀ ಚಿನ್ನಪ್ಪ  ಆದ  ನಾನು ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ  ಸೂಚಿಸುವುದೇನೆಂದರೆ   ಈ ದಿನ  ದಿನಾಂಕ: 23-06-2019 ರಂದು ಸಂಜೆ 6-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಹೊಸುರು ಹೋಬಳಿ ಕಾಚಮಾಚೇನಹಳ್ಳಿ ಗ್ರಾಮದಲ್ಲಿ ಚಿಲ್ಲರೆ ಅಂಗಡಿಯ ಮುಂಭಾಗ  ಸಾರ್ವಜನಿಕ ರಸ್ತೆಯಲ್ಲಿ ಯಾರೋ ತನ್ನ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ  ನಾನು ಮತ್ತು  ಸಿಬ್ಬಂದಿ ಹಾಗೂ ಪಂಚರೊಂದಿಗೆ ಕಾಚಮಾಚೇನಹಳ್ಳಿ ಗ್ರಾಮಕ್ಕೆ ಹೋಗಿ,  ಗ್ರಾಮದಲ್ಲಿ  ಸ್ವಲ್ಪ ದೂರದಲ್ಲಿ   ಸರ್ಕಾರಿ ವಾಹನವನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ, ಕಾಚಮಾಚೇನಹಳ್ಳಿ ಗ್ರಾಮದಲ್ಲಿ ಚಿಲ್ಲರೆ ಅಂಗಡಿಯ ಮುಂಭಾಗ  ಯಾರೋ ಒಬ್ಬ ವ್ಯಕ್ತಿ  ಅಂಗಡಿಯ ಮುಂದೆ   ಪ್ಲಾಸ್ಟಿಕ್ ಚೀಲವನ್ನು  ಹಿಡಿದುಕೊಂಡು ನಿಂತಿದ್ದು,  ಅಂಗಡಿಯ ಮುಂದೆ  ಇತರೇ ಇಬ್ಬರು  ಜನರು ಕುಳಿತಿದ್ದು, ಅವರಿಗೆ ಪ್ಲಾಸ್ಟಿಕ್ ಚೀಲವನ್ನು  ಹಿಡಿದಿದ್ದ ವ್ಯಕ್ತಿ  ಪ್ಲಾಸ್ಟಿಕ್ ಚೀಲದಿಂದ  ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಆ 2 ಜನರು  ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು   ಮಧ್ಯಪಾನ ಮಾಡುತ್ತಿದ್ದ  ವ್ಯಕ್ತಿಗಳು ಓಡಿಹೋಗಿದ್ದು,  ಚೀಲವನ್ನು ಹಿಡಿದು ನಿಂತಿದ್ದ ವ್ಯಕ್ತಿಯೋ ಸದರಿ ಓಡಿ ಹೋಗಿರುತ್ತನೆ ನಂತರ ಅಂಗಡಿಯಲ್ಲಿದ್ದ ಮಾಲೀಕನ ಹೆಂಡತಿ ಮಂಜುಳಮ್ಮ ರವರನ್ನು ಸದರಿ ಮದ್ಯ ಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿವರ ಅಂಗಡಿ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ಲಿಂಗನ್ನ ಬಿನ್ ಕೆ ಎಸ್ ಲಿಂಗಪ್ಪ 41 ವರ್ಷ ಕುರುಬರು ಚಿಲ್ಲರೆ ಅಂಗಡಿ ವ್ಯಾಪಾರ ಕಾಚಮಾಚೇನಹಳ್ಳಿ ಗ್ರಾಮ ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿರುತ್ತಾರೆ ನಂತರ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ,  ಅದರಲ್ಲಿ   90  ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 17 ಟೆಟ್ರಾ ಪಾಕೆಟ್ ಗಳು,03 OLD TAVERN ಕಂಪನಿಯ 180 ML ನ ಮದ್ಯ ತುಂಬಿದ ಟೆಟ್ರಾ ಪಾಕೆಟ್ ಗಳು , ಇವುಗಳ ಒಟ್ಟು ಸಾಮರ್ಥ್ಯ 2ಲೀ 70  ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 738/- ರೂ.ಗಳಾಗಿರುತ್ತೆ. ಅಂಗಡಿಯೂ ಸಹ ಆತನದೇ ಎಂದು  ತಿಳಿಸಿದರು.   ಸ್ಥಳದಲ್ಲಿ   02  ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 02  ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಆಸಾಮಿಗೆ ಇವುಗಳನ್ನು ಮಾರಾಟ ಮಾಡಲು, ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ದಾಖಲೆಯನ್ನು ಕೇಳಲಾಗಿ ತನ್ನ ಬಳಿ  ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು.  ನಂತರ ಸ್ಥಳದಲ್ಲಿ  ಸಂಜೆ 6-30 ಗಂಟೆಯಿಂದ 7-15 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಸ್ಥಳದಲ್ಲಿ ದೊರೆತ  1) 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 17  ಟೆಟ್ರಾ ಪಾಕೆಟ್ ಗಳು,2) 03 OLD TAVERN ಕಂಪನಿಯ 180 ML ನ ಮದ್ಯ ತುಂಬಿದ ಟೆಟ್ರಾ ಪಾಕೆಟ್ ಗಳು 3) ಪ್ಲಾಸ್ಟಿಕ್ ಚೀಲ,4)ಸ್ಥಳದಲ್ಲಿ ಬಿದ್ದಿದ್ದ  02 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 5) HAY WARDS CHEERS  WHISKY ಯ  2 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ವಶಪಡಿಸಿಕೊಂಡು, ಠಾಣೆಗೆ 21-15  ಗಂಟೆಗೆ  ವಾಪಸ್ಸು ಬಂದಿದ್ದು, ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 232/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ 23/06/2019 ರಂದು ರಾತ್ರಿ 21-30 ಗಂಟೆಗೆ ಶ್ರೀ ಚಿನ್ನಪ್ಪ DCB-CEN ಪೊಲೀಸ್ PI ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ- ದಿನಾಂಕ 23/06/2019 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಬಾತ್ಮಿದಾರ ರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಕಾಚಮಾಚೇನಹಳ್ಳಿ ಗ್ರಾಮದ ಬಸ್ ನಿಲ್ದಾಣಕ್ಕೆ ಸಿಬ್ಬಂದಿಯೊಂದಿಗೆ ಬಂದು ಪಂಚರನ್ನು ಬರಮಾಡಿಕೊಂಡು ಇದೇ ಗ್ರಾಮದ ಜಾಗದಲ್ಲಿ ಯಾವುದೇ ಪರವಾನಗೆ ಇಲ್ಲದೆ ಸಾರ್ವಾಜನಿಕರಿಗೆ ಮಧ್ಯೆ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಸ್ಥಳವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಸ್ಥಳದಲ್ಲಿ ಮಾಲುಗಳಾದ 1) ಬ್ಯಾಗ್ ಪ್ಯಿಪರ್ ಡಿಲಕ್ಸ್ ವಿಸ್ಕಿಯ  180 ಎಂ.ಎಲ್ನ 3 ಟೆಟ್ರಾ ಪಾಕೇಟ್ ಗಳು 2) ಓಲ್ಡ್ ಟವರಿನ ವಿಸ್ಕಿಯ 180 ಎಂ ,ಎಲ್ನ  ಒಂದು  ಟೆಟ್ರಾ ಪಾಕೇಟ್ 3)ಹೈವಾಡ್ಸ್ ಚೀರ್ ವಿಸ್ಕಿಯ 90 ,ಎಂ ಎಲ್ ನ 10 ಟೆಟ್ರಾ ಪಾಕೇಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಒಂದು ಖಾಲಿ ನೀರಿನ ಬಾಟಲ್ ಈ ಎಲ್ಲಾ ಮಾಲುಗಳ ಒಟ್ಟು ಬೆಲೆ ರೂ 647/- ರೂಗಳು ಇದರ ಪ್ರಮಾಣ ಒಂದು ಲೀಟರ್ 620 ಎಂ ಎಲ್ ನಷ್ಟು ಮಾಲುಗಳು ಮತ್ತು ಚಿಲ್ಲರೆ ಅಂಗಡಿಯ ಮುಂದೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟ ಕೆ.ಟಿ ಹನುಮಂತಪ್ಪ ಬಿನ್ ಲೇಟ್ ತಿಮ್ಮಯ್ಯ ರವರನ್ನು ರಾತ್ರಿ 7-30 ಗಂಟೆಯಿಂದ ರಾತ್ರಿ 8-30 ಗಂಟೆಯ ವರೆಗೆ ಪಂಚನಾಮೆ ಮಾಡಿ ನಂತರ ಠಾಣೆಗೆ ಬಂದು ಮಾಲುಗಳನ್ನು ಮತ್ತು ಹನುಮಂತಪ್ಪ ರವರನ್ನು  ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ  ಕಾನೂನು ರೀತಿಯಾ  ಕ್ರಮ ಜರುಗಿಸಲು ಕೋರಿದೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ. ಮೊ.ಸಂ: 103/2019 ಕಲಂ: ಮನುಷ್ಯ ಕಾಣೆ:-

          ದಿನಾಂಕ:24.06.2019 ರಂದು 13:00 ಗಂಟೆಗೆ ಪಿರ್ಯಾದಿದಾರರಾದ, ಜಾಕೀರ್ ಖಾನ್ ಬಿನ್ ಖಾನ್ ಸಾಬ್, 48 ವರ್ಷ, ಮುಸ್ಲಿಂರು, ವೆಲ್ಡಿಂಗ್ ಕೆಲಸ, ಸುಮಂಗಲಿ ಬಡಾವಣೆ, ಗೌರಿಬಿದನೂರು ಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನಗೆ ಮೂವರು ಮಕ್ಕಳಿದ್ದು, ಮೊದಲನೇಯವರು ಸುಫಿಯಾನ್ ಖಾನ್, 18 ವರ್ಷ, ಇಂಜಿನಿಯರಿಂಗ್ ವಿದ್ಯಾಭ್ಯಾಸ, ಎರಡನೇಯವರು ಷಯಾನ್ ಖಾನ್, 12 ವರ್ಷ, 8ನೇ ತರಗತಿ ವಿದ್ಯಾಭ್ಯಾಸ, ಮೂರನೆಯವರು ಸುಫಿಯಾನ್ ಖಾನ್ ರವರು ಚಿಕ್ಕಬಳ್ಳಾಪುರದ ಎಸ್.ಜೆ.ಸಿ.ಐ.ಟಿ. ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು, ಕಾಲೇಜಿಗೆ ರಜೆ ನೀಡಿದ್ದರು. ನಾನು ಇಂಜಿನಿಯರಿಂಗ್ ಪ್ರಥಮ ವರ್ಷದ ಫಲಿತಾಂಶ ಏನಾಯಿತೆಂದು ಆಗಾಗ ಕೇಳುತ್ತಿದ್ದು, ನನ್ನ ಮಗ ಸುಫಿಯಾನ್ ಖಾನ್ ರವರು  ದ್ವಿತೀಯ ವರ್ಷ ಕಾಲೇಜ್ ಪ್ರಾರಂಭವಾದ ಮೇಲೆ ಪ್ರಥಮ ವರ್ಷದ ಫಲಿತಾಂಶ ಬರುವುದಾಗಿ ತಿಳಿಸಿದ್ದನು. ನಂತರ ದಿನಾಂಕ:22.06.2019 ರಂದು ಬೆಳಿಗ್ಗೆ 11.00 ಗಂಟೆಗೆ ನಾನು ಕೆಲಸಕ್ಕೆ ಹೋಗಿದ್ದಾಗ ನನ್ನ ಮಗ ಸುಫಿಯಾನ್ ಖಾನ್ ನನ್ನ ಹೆಂಡತಿ ಕುಷ್ನುದಾ ಖಾನಂ ರವರಿಗೆ ಕಾಲೇಜಿಗೆ ಹೋಗಿ ಫಲಿತಾಂಶ ನೋಡಿಕೊಂಡು ಬರುವುದಾಗಿ ತಿಳಿಸಿ ಮನೆಯಿಂದ ಹೋದವನು ಇದುವರೆವಿಗೂ ವಾಪಸ್ಸು ಮನೆಗೆ ಬಂದಿರುವುದಿಲ್ಲ. ನೆಂಟರಿಷ್ಟರ ಮತ್ತು ಸಂಬಂಧಿಕರ ಮನೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಈ ದಿನ ತಡವಾಗಿ ಠಾಣೆಗ ಬಂದು ದೂರನ್ನು ನೀಡುತ್ತಿದ್ದು ತಾವುಗಳು ದಯಮಾಡಿ ನನ್ನ ಮಗನಾದ ಸುಫಿಯಾನ್ ಖಾನ್ ರವರನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರನ್ನು ಪಡೆದು ಠಾಣಾ ಮೊ.ಸಂ.103/2019 ಕಲಂ:ಮನುಷ್ಯ ಕಾಣೆ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ. ಮೊ.ಸಂ: 154/2019 ಕಲಂ: 78(I), 78(III) ಕೆ.ಪಿ. ಆಕ್ಟ್:-

          ದಿನಾಂಕ:23-06-2019 ರಂದು ಸಂಜೆ 5-00 ಘಂಟೆಯಲ್ಲಿ ಠಾಣಾ NCR NO.184/2019 ರಲ್ಲಿ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ದಾಖಲಿಸಿದ  ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ:23-06-2019 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ಗುಡಿಬಂಡೆ ಟೌನ್ ನ ಮಸೀದಿ ಮುಂಭಾಗ  ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಮಟ್ಕಾ ಜೂಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿಯಂತೆ ನಾನು ಸಿಬ್ಬಂದಿಯವರಾದ ಪಿ.ಸಿ 88 ರಮೇಶ, ಪಿ.ಸಿ-188 ಪಿ.ರಾಥೋಡ್ ಜೀಪ್ ಚಾಲಕ ಚಲಪತಿ ರವರೊಂದಿಗೆ ಕೆಎ-40-ಜಿ-1888 ಸರ್ಕಾರಿ ಜೀಪಿನಲ್ಲಿ ಗುಡಿಬಂಡೆ ತಾಲ್ಲೂಕು ಕಚೇರಿಯ ಬಳಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರು & ಸಿಬ್ಬಂದಿಯೊಂದಿಗೆ ಗುಡಿಬಂಡೆ ಟೌನ್ ನ ಮಸೀದಿ ಮುಂಭಾಗ ಸಾರ್ವಜನಿಕ ರಸ್ತೆಯಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು 1/- ರೂ 70/- ರೂಗಳನ್ನು ನೀಡುವುದಾಗಿ ಮಟ್ಕಾ ಚೀಟಿ ಬರೆಯುತ್ತಾ ಹಣವನ್ನು ಪಣವನ್ನಾಗಿ ಇಡಲು ಸಾರ್ವಜನಿಕರಿಗೆ ಪ್ರೇರೇಪಿಸುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆಯುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿ ಆಸಾಮಿಯನ್ನು ಸುತ್ತುವರೆದು ಆತನನ್ನು ವಶಕ್ಕೆ ಪಡೆದು ಹೆಸರು ಮತ್ತು ವಿಳಾಸ ತಿಳಿಯಲಾಗಿ, ಗಂಗಾಧರ ಬಿನ್ ದೊಡ್ಡಹನುಮಯ್ಯ, 35 ವರ್ಷ, ಆದಿ ಕನರ್ಾಟಕ ಜನಾಂಗ, ಎಲೆಕ್ಟ್ರಾನಿಕ್ ಕೆಲಸ ವಾಸ: ಪಾತೂರು ಗ್ರಾಮ, ಮಂಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ಹಾಗೂ ಮಟ್ಟಕಾ ಜೂಜಾಟದಿಂದ ಬಂದ ಹಣವನ್ನು ಅಶ್ವತ್ಥನಾರಾಯಣ@ಕೋಡಿ ಬಿನ್ ಪೆದ್ದಣ್ಣ 45 ವರ್ಷ, ನಾಯಕ ಜನಾಂಗ, ವಾಟದ ಹೊಸಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು ರವರಿಗೆ ಕೊಡುತ್ತೇನೆಂದು ತಳಿಸಿದನು. ಸದರಿ ಆಸಾಮಿಯ ಅಂಗಶೋಧನೆ ಮಾಡಿ ನೋಡಲಾಗಿ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪೆನ್, 450/- ರೂಗಳು ನಗದು ಹಣ ಇತ್ತು. ಸದರಿ ಸ್ಥಳದಲ್ಲಿ ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 3-15 ಘಂಟೆಯಿಂದ ಸಂಜೆ 4-15 ಘಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು, ಆರೋಪಿಯನ್ನು ವಶಕ್ಕೆ ಪಡೆದು ಅಸಲು ಪಂಚನಾಮೆ, ಮಾಲುಗಳು ಹಾಗೂ ಆರೋಪಿಯೊಂದಿಗೆ ಠಾಣೆಗೆ ಬಂದು ಸಂಜೆ 4-30 ಘಂಟೆಗೆ ಠಾಣೆಯಲ್ಲಿ ಹಾಜರಾಗಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ ದೂರು ಆಗಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ. ಮೊ.ಸಂ: 155/2019 ಕಲಂ: 87 ಕೆ.ಪಿ. ಆಕ್ಟ್:-

          ಗುಡಿಬಂಡೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುನೀಲ್ ಕುಮಾರ್ ಪಿ,ಐ ರವರು ಈ ದಿನ ದಿನಾಂಕ:23-06-2019 ರಂದು ಸಂಜೆ 5-10 ಗಂಟೆಯಲ್ಲಿ ಗಸ್ತುನಲ್ಲಿದ್ದಾಗ, ಠಾಣಾ 26 ನೇ ಬೀಟ್ ಸಿಬ್ಬಂದಿ ಸಿ,ಪಿ,ಸಿ-85 ಸುನೀಲ್ ಕುಮಾರ್ ರವರು ತಮಗೆ ಪೋನ್ ಮಾಡಿ ತನ್ನ ಬೀಟ್ ವ್ಯಾಪ್ತಿಯ ನಲ್ಲರಾಳ್ಳಹಳ್ಳಿ ಗ್ರಾಮದ ಕೆರೆಯಲ್ಲಿ ಒಂದು ಹೊಂಗೆ ಮರದ ಕೆಳಗೆ ಯಾರೋ ಕೆಲವರು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂದು ಭಾತ್ಮಿದಾರರಿಂದ ಮಾಹಿತಿ ಬಂದಿದೆಂದು ನೀಡಿದ ಮಾಹಿತಿ ಮೇರೆಗೆ ನಾನು ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕನಾಗಿ ಸಿ,ಪಿ,ಸಿ-89 ಮಂಜುನಾಥ ರವರೊಂದಿಗೆ ಸಿಬ್ಬಂದಿಯಾದ ಸಿ,ಪಿ,ಸಿ-88 ರಮೇಶ & ಸಿ,ಪಿ,ಸಿ-188 ರಾಥೋಡ್, ಸಿ,ಪಿ,ಸಿ-378 ಶ್ರೀನಿವಾಸ ಹಾಗೂ ಬೀಟ್ ಸಿಬ್ಬಂದಿ ಸುನೀಲ್ ಕುಮಾರ್ ರವರನ್ನು ಕರೆದುಕೊಂಡು ನಲ್ಲರಾಳ್ಳಹಳ್ಳಿ ಗ್ರಾಮಕ್ಕೆ ಸಂಜೆ 5-30 ಗಂಟೆಯಲ್ಲಿ ಹೋಗಿ ಪಂಚರನ್ನು ಬರಮಾಡಿಕೊಂಡು ಸದರಿ ಜೂಜಾಟ ಆಡುವ ಸ್ಥಳದಿಂದ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ, ಯಾರೋ ಆರು ಜನರು ಗುಂಪಾಗಿ ಕುಳಿತುಕೊಂಡು ಅಂದರ್-500 ಬಾಹರ್-500 ಎಂದು ಜೂಜಾಟ ಆಡುವದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆಟದ ಮೇಲೆ ಧಾಳಿ ಮಾಡಿದಾಗ, ಕೆಲವರು ಓಡಿ ಹೋಗುತ್ತಿದ್ದು, ಎಲ್ಲರನ್ನು ಸಿಬ್ಬಂದಿಯು ಹಿಮ್ಮೆಟ್ಟಿಸಿ ಹಿಡಿದುಕೊಂಡು ಸದರಿ ಜೂಜಾಡುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಬಂದು ಹೆಸರು & ವಿಳಾಸ ಕೇಳಲಾಗಿ 1)ನಾಗರಾಜ ಬಿನ್ ಅಶ್ವಥಪ್ಪ 40 ವರ್ಷ, ಬಲಿಜಿಗರು, ವಾಸ-ಕಮ್ಮಗಾನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲೂಕು 2)ರಾಮಪ್ಪ ಬಿನ್ ಲೆಟ್ ವೆಂಕಟರಾಯಪ್ಪ 42 ವರ್ಷ, ಆದಿ ಕನರ್ಾಟಕ, ವಾಸ-ಕೊರೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲೂಕು 3) ಶ್ರೀನಿವಾಸ ಬಿನ್ ರಾಯಪ್ಪ 30 ವರ್ಷ, ಜಿರಾಯ್ತಿ, ಅಗಸರು, ಹಳೇ ಪೆರೇಸಂದ್ರ ಗ್ರಾಮ, ಚಿಕ್ಕಬಳ್ಳಾಪುರ ತಾಲೂಕು 4)ನರಸಿಂಹಮೂತರ್ಿ ಬಿನ್ ನರಸಪ್ಪ 35 ವರ್ಷ, ಆದಿ ಕನರ್ಾಟಕ, ವಾಸ-ಶೆಟ್ಟಿವಾರಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲೂಕು 5)ಶಂಕರ ಬಿನ್ ವೆಂಕಟರಾಯಪ್ಪ 27 ವರ್ಷ, ದೊಂಬರ ಜನಾಂಗ, ವಾಸ-ದೊಂಬರಪಾಳ್ಯ ಗ್ರಾಮ, ಚಿಕ್ಕಬಳ್ಳಾಪುರ ತಾಲೂಕು 6)ವೆಂಕಟೇಶ ಬಿನ್ ವೆಂಕಟರಾಯಪ್ಪ 38 *ಪುಟ-02* ವರ್ಷ, ಬಲಿಜಿಗ, ವಾಸ-ಶೆಟ್ಟಿವಾರಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪಿಟ್ ಎಲೆಗಳಿದ್ದು, ಸ್ಥಳದಲ್ಲಿ ಪಣವಾಗಿಟ್ಟಿದ್ದ 4570/- ರೂ ನಗದು ಹಣವನ್ನು ಪಂಚರ ಸಮಕ್ಷಮ ಸಂಜೆ 5-45 ಘಂಟೆಯಿಂದ 6-30 ಘಂಟೆಯವರೆಗೆ ಪಂಚನಾಮೆ ಜರುಗಿಸಿ ಅಮಾನತ್ತುಪಡಿಸಿಕೊಂಡಿರುತ್ತೆ, ವಶದಲ್ಲಿದ್ದವರನ್ನು & ಮಾಲನ್ನು ಸಂಜೆ: 7-00 ಗಂಟೆಯಲ್ಲಿ ಠಾಣೆಯಲ್ಲಿ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರಿನ ಮೇರೆಗೆ ಠಾಣಾ ಎನ್.ಸಿ. ಆರ್ 185/2019 ರಂತೆ ದಾಖಲು ಮಾಡಿಕೊಂಡು ಈ ದಿನ ದಿನಾಂಕ 24/06/2019 ರಂದು ಬೆಳಿಗ್ಗೆ 11-30 ಗಂಟೆಗೆ ಘನ ನ್ಯಾಯಾಲಯದಲ್ಲಿ ಅನುಮತ್ತಿಯನ್ನು ಪಡೆದು ಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 69/2019 ಕಲಂ: 32(3), 15(A) ಕೆ.ಇ. ಆಕ್ಟ್:-

          ದಿನಾಂಕ 23/06/2019 ರಂದು ಮದ್ಯಾಹ್ನ 2-30 ಗಂಟೆಗೆ ಠಾಣೆಯ ಎ.ಎಸ್.ಐ ವೆಂಕಟರವಣಪ್ಪ ರವರು ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:-23/06/2019 ರಂದು ಮದ್ಯಾಹ್ನ 12-30 ಗಂಟೆಗೆ  ತಾನು ಠಾಣೆಯಲ್ಲಿದ್ದಾಗ 19 ನೇ  ಗ್ರಾಮ ಗಸ್ತಿನ  ಮ.ಪಿ.ಸಿ 495 ಗಾಯಿತ್ರಿ ರವರು ತನಗೆ ಕರೆ ಮಾಡಿ  ನಾನು ಹಾಗೂ ಪಿಸಿ 484 ಶಿವಣ್ಣ ರವರು  ಕೋಡೇಗಂಡ್ಲು ಗ್ರಾಮದಲ್ಲಿ ಗಸ್ತು ಮಾಡುತ್ತಿದಾಗ ಕೋಡೇಗಂಡ್ಲು ಗ್ರಾಮದ ವೆಂಕಟರೆಡ್ಡಿ  ರವರ ಚಿಲ್ಲರೆ ಅಂಗಡಿಯ ಮುಂಬಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟು ತೊಂದರೆ ಉಂಟು ಮಾಡುತ್ತಿರುವುದಾಗಿ ಮಾಹಿತಿ ಬಂದಿದೆ ದಾಳಿ ಮಾಡಲು ಬರಬೇಕೆಂದು ತಿಳಿಸಿದಾಗ  ದಾಳಿ ಮಾಡಲು ಸರ್ಕಾರಿ ವಾಹನ ಸಂಖ್ಯೆ ಕೆಎ 40 ಜಿ 140 ಜೀಪ್ ನಲ್ಲಿ ಚಾಲಕ ಮುರುಳಿಧರ ರವರೊಂದಿಗೆ ಕೋಡೇಗಂಡ್ಲು ಗ್ರಾಮಕ್ಕೆ ಹೋಗಿ ಜೊತೆಯಲ್ಲಿ ಮ.ಪಿ.ಸಿ 495 ಗಾಯಿತ್ರಿ  ಹಾಗೂ ಪಿಸಿ 484 ಶಿವಣ್ಣರವರನ್ನು ಕರೆದುಕೊಂಡು ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ಅಸಾಮಿ ಚಿಲ್ಲರೆ ಅಂಗಡಿ ಮುಂಬಾಗದಲ್ಲಿ  ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು ನಾನು ಹಾಗೂ ಸಿಬ್ಬಂದಿಗಳು ಸುತ್ತುವರಿದಾಗ ಮದ್ಯಪಾನ ಸೇವನೆ ಮಾಡುತ್ತಿದ್ದ ಅಸಾಮಿಗಳು ಓಡಿ ಹೋಗಿದ್ದು, ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟ  ಅಸಾಮಿಯು ಓಡಿ ಹೋಗಿರುತ್ತಾನೆ.  ನಂತರ ಆತನ ಹೆಸರು ವಿಳಾಸ ತಿಳಿಯಲಾಗಿ ವೆಂಕಟರೆಡ್ಡಿ ಬಿನ್ ಲೇಟ್ ನಾಗಪ್ಪ, 48 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಕೋಡೇಗಂಡ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದನು. ಅಂಗಡಿಯ ಮುಂಬಾಗದ ಜಗಲಿಯ ಮೇಲೆ  ಪ್ಲಾಸ್ಟಿಕ್ ಕವರ್ ನಲ್ಲಿ ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಇದ್ದು ಪರಿಶೀಲಿಸಲಾಗಿ ಹೈವಾಡ್ರ್ಸ ಚೀರ್ಸ್ ವಿಸ್ಕಿ 90 ಎಂ.ಎಲ್ ಮಧ್ಯದ 11 ಟೆಟ್ರಾ ಪ್ಯಾಕೆಟ್ ಗಳು ಇದ್ದು ಒಂದರ ಬೆಲೆೆ 30.32 ರೂ ಆಗಿದ್ದು 11 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 333.52/- ರೂ ಆಗಿರುತ್ತೆ. ಮದ್ಯ ಒಟ್ಟು 990 ಮೀಲಿ ಆಗಿರುತ್ತೆ. ಮಧ್ಯವನ್ನು  ಯಾವುದೇ ಪರವಾನಿಗೆ ಇಲ್ಲದೆ ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವುದಾಗಿ ತಿಳಿದು ಬಂದಿರುತ್ತೆ. ನಂತರ ಹೈವಾರ್ಡ್ಸ್  ಚೀರ್ಸ್ ವಿಸ್ಕಿ 90 ಎಂ.ಎಲ್ ಮಧ್ಯದ 11 ಟೆಟ್ರಾ ಪ್ಯಾಕೆಟ್ ಗಳನ್ನು ಹಾಗೂ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಲೋಟಗಳನ್ನು ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು ನಿಮ್ಮ ಮುಂದೆ ಈ ನನ್ನ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ವೆಂಕಟರೆಡ್ಡಿ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 1. ಮಂಚೇನಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 138/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ:23/06/2019 ರಂದು ಠಾಣಾ ಹೆಚ್.ಸಿ.252 ಶ್ರೀ ಮುರಳಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 23/06/2019 ರಂದು ಮದ್ಯಾಹ್ನ 2-30 ಗಂಟೆಯ ಸಮಯದಲ್ಲಿ ನಾನು ಪಿ.ಸಿ. 345 ಚಂದ್ರಶೇಖರ್ ರವರು ಗಸ್ತು ಕರ್ತವ್ಯದಲ್ಲಿದ್ದಾಗ ನನಗೆ ಬಂದ ಮಾಹಿತಿ ಏನೆಂದರೆ ಪಿಡಚಲಹಳ್ಳಿ ಗ್ರಾಮದ ಸುರೇಶ ಬಿನ್ ಚಿಕ್ಕಪ್ಪಯ್ಯ ಎಂಬುವರು ಪಿಡಚಲಹಳ್ಳಿ ಗ್ರಾಮದ ತಮ್ಮ ಮನೆಯ ಮುಂಭಾಗ ಸಾರ್ವಜನಿಕ ರಸ್ತೆಯ ಬಳಿ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಜೊತೆಯಲ್ಲಿದ್ದ ಪಿ.ಸಿ. 345 ಚಂದ್ರಶೇಖರ್ ರವರೊಂದಿಗೆ ಮದ್ಯಾಹ್ನ 3-00 ಗಂಟೆಯ ಸಮಯಕ್ಕೆ ಪಿಡಚಲಹಳ್ಳಿ ಗ್ರಾಮದ ಆರೋಪಿಯ ಮನೆಯ ಮುಂಭಾಗದ ರಸ್ತೆಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದು ಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಸುರೇಶ ಬಿನ್ ಚಿಕ್ಕಪ್ಪಯ್ಯ, 28ವರ್ಷ, ಆದಿಕರ್ನಾಟಕ, ಜಿರಾಯ್ತಿ, ವಾಸ ಪಿಡಚಲಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರೀಬಿನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 20 ಮದ್ಯದ ಟೆಟ್ರಾ ಪ್ಯಾಕೇಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 4 ಟೆಟ್ರಾ ಪ್ಯಾಕೇಟ್ ಗಳು ಮತ್ತು 4 ಪ್ಲಾಸ್ಟಿಕ್  ಕಪ್ ಗಳನ್ನು ಪಂಚನಾಮೆಯ ಮೂಲಕ ಮದ್ಯಾಹ್ನ 3-15 ಗಂಟೆಯಿಂದ 4-15 ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 640/- ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಸುರೇಶ ಬಿನ್ ಚಿಕ್ಕಪ್ಪಯ್ಯ,ರವರನ್ನು  ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 1. ಮಂಚೇನಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 139/2019 ಕಲಂ: 454, 457, 380 ಐ.ಪಿ.ಸಿ:-

          ದಿನಾಂಕ:24/06/2019 ರಂದು ಪಿರ್ಯಾದಿದಾರರಾದ ಶ್ರೀ ಬಸವರಾಜ ವೀರಪ್ಪ ಬೆಳ್ಳುಟ್ಟಿಗೆ ಪಿ.ಡಿ.ಓ ಮಂಚೇನಹಳ್ಳಿ ಗ್ರಾಮ ಪಂಚಾಯ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:22/06/2019 ರಿಂದ ದಿನಾಂಕ:23/06/2019 ರವರೆಗೆ 2 ದಿನಗಳ ಕಾಲ ಗ್ರಾಮ ಪಂಚಾಯ್ತಿ ಕಾರ್ಯಾಲಯಕ್ಕೆ ರಜೆ ಇದ್ದುದ್ದರಿಂದ ಈ ಎರಡು ರಜಾ ದಿನಗಳ ಅವಧಿಯಲ್ಲಿ ಗ್ರಾಮ ಪಂಚಾಯ್ತಿಗೆ ಅಳವಡಿಸಿದ್ದ ಸಿಸಿ ಕ್ಯಾಮಾರ ವೀಕ್ಷಣೆಗಾಗಿ ಇದ್ದಂತಹ 2 ಕಂಪ್ಯೂಟರ್  ಮಾನಿಟರ್ ಅನ್ನು ಹಾಗೂ ಅದಕ್ಕೆ DVR Box ನ್ನು ಮತ್ತು ಗ್ರಾಮ ಪಂಚಾಯ್ತಿ ನಿತ್ಯ ಬಳಕೆ ಮಾಡುತ್ತಿದ್ದ ಕಂಪ್ಯೂಟರ್ ಮಾನಿಟರನ್ನು ಕಳ್ಳತನ ಮಾಡಿ ಅದರ ಸಿಪಿಯು ಯಾವುದೇ ಉಪಯೋಗಕ್ಕೆ ಬಾರದಂತೆ ಕಲ್ಲು ಅಥವಾ  ಕಬ್ಬಿಣದ ರಾಡಿನಿಂದ ದ್ವಂಸಗೊಳಿಸಿರುತ್ತಾರೆ ಅದರಂತೆ ಪಿಡಿಓ ರವರ ಬಳಸುವ ಕೊಠಡಿಯ ಬಾಗಿಲು ಮತ್ತು ಕಿಟಕಿಗೆ ಅಳವಡಿಸಿರುವ ಗ್ಲಾಸನ್ನು ಒಡೆದು ಕಿಟಕಿಯ ಮುಖಾಂತರ ಪಿಡಿಓ ಕೊಠಡಿಯಲ್ಲಿರುವ ಪಿಠೋಪಕರಣಗಳನ್ನು ಕೂಡ ದ್ವಂಸ ಮಾಡಿದ್ದು, ಇದರ ಅಂದಾಜು ಬೆಲೆ ಸುಮಾರು 20000/- ರೂಗಳು ಆಗಿದ್ದು, ಕಛೇರಿಗೆ ಸಂಬಂದಿಸಿದ ಕೆಲವು ದಾಖಲೆಗಳು ಕೂಡ ನಾಶವಾಗಿರುತ್ತದೆ. ಅದ್ದರಿಂದ ಗ್ರಾಮ ಪಂಚಾಯ್ತಿಯಲ್ಲಿ ಈ ರೀತಿ ಕೃತ್ಯ ಮಾಡಿದವರನ್ನು ಪತ್ತೆಮಾಡಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 1. ನಂದಿಗಿರಿಧಾಮ ಪೊಲೀಸ್ ಠಾಣೆ. ಮೊ.ಸಂ: 79/2019 ಕಲಂ: 87 ಕೆ.ಪಿ. ಆಕ್ಟ್:-

          ದಿನಾಂಕ:23/06/2019 ರಂದು ರಾತ್ರಿ 9:00 ಗಂಟೆಗೆ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕರಾದ ಶ್ರೀ. ಸುದರ್ಶನ್ ರವರು 17 ಆರೋಪಿತರನ್ನು, ಮಾಲನ್ನು ಮತ್ತು ದಾಳಿ ಪಂಚನಾಮೆಯೊಂದಿಗೆ ನೀಡಿದ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:23/06/2019 ರಂದು ಸಂಜೆ 5:30 ಗಂಟೆ ಸಮಯದಲ್ಲಿ ಯಾರೋ ಆಸಾಮಿಗಳು ಚಿಕ್ಕಬಳ್ಳಾಪುರ ಜಿಲ್ಲೆ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿಯ ಕಣಿತಹಳ್ಳಿ ಗ್ರಾಮದ ಸಮೀಪವಿರುವ ಸರ್ಕಾರಿ ಅರಣ್ಯಪ್ರದೇಶದಲ್ಲಿ  ಕಾನೂನು ಬಾಹಿರ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ನನಗೆ ಬಂದ ಬಾತ್ಮಿ ಮೇರೆಗೆ ನಾನು ದಾಳಿ ನಡೆಸಲು ಚಿಕ್ಕಬಳ್ಳಾಪುರ ಘನ 2ನೇ ಅಡಿಷಿನಲ್ ಸಿ.ಜೆ&ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ಅನುಮತಿ ಪಡೆದು ನಾನು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಚೇತನ್, ಸಿಬ್ಬಂದಿಯವರಾದ ಹೆಚ್.ಸಿ-114 ರವಿಕುಮಾರ್, ಹೆಚ್.ಸಿ-141 ರಮಣರೆಡ್ಡಿ, ಪಿಸಿ-191 ಶಿವರಾಜ ಕುಮಾರ್, ಪಿಸಿ-181 ಪ್ರಸಾದ್, ಪಿಸಿ-189 ಲಕ್ಷ್ಮಿಪತಿ, ಪಿಸಿ-203 ಮಂಜು ನಾಯ್ಕ್, ಪಿಸಿ-292 ಸಲೀಂಖಾನ್ ವುಲಾ ಪಿಸಿ-255 ದಾನಿಂಗ್ ಶಂಭು, ಹೆಚ್.ಸಿ-169 ಸೋಮಶೇಖರ, ಪಿಸಿ-118 ಬಲಾಜಿ, ಪಿಸಿ-262 ಅಂಬರೀಶ, ಹೆಚ್.ಸಿ-241 ಮಂಜುನಾಥ, ಪಿಸಿ-86 ಮುರಳಿ, ಪಿಸಿ-483 ರಮೇಶ, ಪಿಸಿ-277 ಲಕ್ಷಿಕಾಂತ, ಪಿಸಿ-246 ಮುಲ್ಲಾ ಸಿಕಂದರ್, ಪಿಸಿ-275 ಬೀರಪ್ಪ, ಪಿಸಿ-140 ಪ್ರಕಾಶ್, ಪಿಸಿ-245 ವಿಜಯ ಕುಮಾರ್, ಪಿಸಿ-244 ಶಶಿಕುಮಾರ್, ಪಿಸಿ-260 ಮುತ್ತಪ್ಪ, ಸರ್ಕಾರಿ ಜೀಪ್ ಚಾಲಕ ಎಹೆಚ್ಸಿ-54 ಅಂಬರೀಶ ಹಾಗೂ ಪಂಚರೊಂದಿಗೆ ಸಂಜೆ 6:45 ಗಂಟೆಗೆ ಒಂದು ಖಾಸಗಿ ಕ್ಯಾಂಟರಿನಲ್ಲಿ ಕಣಿತಹಳ್ಳಿ ಗ್ರಾಮದ ಸಮೀಪವಿರುವ ಸರ್ಕಾರಿ ಅರಣ್ಯಪ್ರದೇಶದಲ್ಲಿ ಸುತ್ತುವರೆದು ಮರೆಗಳಲ್ಲಿ ನಿಂತು ನೊಡಲಾಗಿ  ಅಂದರ್ಗೆ 50,000/-ರೂ ಗಳೆಂದು, ಬಾಹರ್ 50,000/- ರೂಗಳೆಂದು ಕೂಗುತ್ತ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತಿದ್ದರವರ ಮೇಲೆ ಏಕ ಕಾಲಕ್ಕೆ ದಾಳಿಮಾಡಿದಾಗ ಸ್ಥಳದಲ್ಲಿ ಹಣ, ಮತ್ತು ಇಸ್ಪೀಟ್ ಎಲೆಗಳನ್ನು, ಮೋಬೈಲ್ಗಳನ್ನು ಮತ್ತು ದ್ವಿಚಕ್ರ ವಾಹನಗಳನ್ನು ಬಿಟ್ಟು ಓಡಿ ಪರಾರಿಯಾಗಲು ಪ್ರಯತ್ನಿಸಿದ 17 ಜನರನ್ನು ಹಿಡಿದು, ವಶಕ್ಕೆ ಪಡೆದುಕೊಂಡವರ ಹೆಸರು ವಿಳಾಸ ಕೇಳಲಾಗಿ 1} ವರದ ಕಿಶೋರ್ ಬಿನ್ ಲೇಟ್ ವರದಾರೆಡ್ಡಿ, 32 ವರ್ಷ, ರೆಡ್ಡಿ ಜನಾಂಗ, ಮುದ್ದನೂರು ಗ್ರಾಮ(ಮಂಡಲಂ) ಜಮ್ಮಲಮಡಗು ತಾಲ್ಲೂಕು, ಕಡಪ ಜಿಲ್ಲೆ, ಆಂದ್ರಪ್ರದೇಶ ರಾಜ್ಯ,

2} ಮನೋಹರ ರೆಡ್ಡಿ ಬಿನ್ ಲೇಟ್ ಸಾಂಭಶಿವಾ ರೆಡ್ಡಿ, 46 ವರ್ಷ, ರೆಡ್ಡಿ ಜನಾಂಗ, ಕಂಟ್ರಾಕ್ಟ್ರ್ ಕೆಲಸ, ವೈಎಂಆರ್ ಕಾಲೋನಿ, ಪ್ರೋದ್ದಟೂರು ನಗರ, ಕಡಪ ಜಿಲ್ಲೆ ಆಂದ್ರಪ್ರದೇಶ ರಾಜ್ಯ,

3} ವಿ. ಶಂಕರ್ ರೆಡ್ಡಿ ಬಿನ್ ಗಂಗಿರೆಡ್ಡಿ, 52 ವರ್ಷ, ರೆಡ್ಡಿ ಜನಾಂಗ, ಎಂ.ಪಿ.ಟಿ.ಸಿ ಲೀಟರ್, ಜಿರಾಯ್ತಿ, ವಾಸ: ರಾಮೇಶ್ವರಂ, ಪ್ರೋದ್ದಟೂರು ಮಂಡಲಂ, ಕಡಪ ಜಿಲ್ಲೆ ಆಂದ್ರಪ್ರದೇಶ ರಾಜ್ಯ,

4} ಬಿ.ಡಿ ಬಾಸ್ಕರ್ ಬಿನ್ ಲೇಟ್ ಧಾಮೋದರಂ, 43 ವರ್ಷ, ಮೊದಲಿಯಾರ್ ಜನಾಂಗ, ವ್ಯಾಪಾರ, ನಂ: 10-4-136, ನ್ಯೂ ತಲಾರಿ ಸ್ಟ್ರೀಟ್ ನಗರಿ(ಮುನಿಸಿಪಲ್) ಚಿತ್ತೂರು ಜಿಲ್ಲೆ. ಆಂದ್ರಪ್ರದೇಶ,

5} ಅಜಮತ್ತುಲ್ಲಾ ಬಿನ್ ಸಿ ಲೇಟ್ ಲತೀಫ್ ಸಾಬ್, 72 ವರ್ಷ, ಮುಸ್ಲಿಂರು, ಭೋಯ ವೀದಿ, ಮಡಕ ಶೀರ ನಗರ, ತಾಲ್ಲೂಕು. ಅನಂತಪುರಂ ಜಿಲ್ಲೆ

6} ಜಿ.ಎನ್ ರೆಡ್ಡಿ ಬಿನ್ ಲೇಟ್ ರಾಮಸುಬ್ಬಾರೆಡ್ಡಿ, 52 ವರ್ಷ, ರೆಡ್ಡಿ ಜನಾಂಗ, ಪಿ.ಡ್ಯೂ.ಡಿ ಕಂಟ್ರಾಕ್ಟ್ರ್, ನಂ. 2- 212 ಅಂಜಯ್ಯ ನಗರ, ಹೈದ್ರಾಬಾದ್-53,

7} ರಾಮಮೋಹನ ರೆಡ್ಡಿ ಬಿನ್ ಲೇಟ್ ಲಕ್ಷ್ಮಣ್ ರೆಡ್ಡಿ, 48 ವರ್ಷ, ರೆಡ್ಡಿ ಜನಾಂಗ, ಬಿ.ಜಿ.ಆರ್ ರೈಸ್ ಮೀಲ್ನಲ್ಲಿ ಗುಮಾಸ್ತ, ನಂ:26-420(ಎ) ಆಟ್ಸ್ ಕಾಲೇಜು ರಸ್ತೆ, ಪೆದ್ದಟೂರು ಕಡಪ ಜಿಲ್ಲೆ, ಆಂದ್ರಪ್ರದೇಶ

8} ಜಿ. ವೆಂಕಟರಂಗಯ್ಯ ಬಿನ್ ಲೇಟ್ ಗುಣಶೆಟ್ಟಿ ರಂಗಡು, 60 ವರ್ಷ, ಪದ್ಮಸಾಲಿ ಜನಾಂಗ, ಟೈಲರ್, ದೊರೆಸಾನಿಪಲ್ಲಿ ರಸ್ತೆ, ಪೆದ್ದಟೂರು ನಗರ, ಕಡಪ ಜಿಲ್ಲೆ.

9} ಲೋಕೇಶ್ ಬಿನ್ ಲೇಟ್ ಮುನಿನಾರಾಯಣಪ್ಪ, 49 ವರ್ಷ, ಒಕ್ಕಲಿಗರು, ಜಿರಾಯ್ತಿ, ಗ್ರಾಮ, ಪಂಚಾಯ್ತಿ ಕಛೇರಿ ರಸ್ತೆ, ವೆಂಕಟಗಿರಿಕೋಟೆ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಜಿಲ್ಲೆ, 10} ಪ್ರದೀಫ್ ಬಿನ್ ವೆಂಕಟಸ್ವಾಮಿ, 29 ವರ್ಷ, ಕುರುಬರು, ಕುರಿಕಾಯುವಿಕೆ. ಸೊಣ್ಣಹಳ್ಳಿಪುರ ಗ್ರಾಮ, ಲಕ್ಕೋಂಡಹಳ್ಳಿ ಪಂಚಾಯ್ತಿ, ಹೊಸಕೋಟೆ ತಾಲ್ಲೂಕು, ಬೆಂಗಳೂರು ಜಿಲ್ಲೆ,

11} ಚೌಡರೆಡ್ಡಿ ಬಿನ್ ಪಾಪರೆಡ್ಡಿ, 59 ವರ್ಷ, ಜಿರಾಯ್ತಿ, ಒಕ್ಕಲಿಗರು, ಮಂಡಿ ಮಚರ್ೆಂಟ್ ನಾಗಪ್ಪ ಮನೆಯ ಬಳಿ, ಮುನ್ಸಪಲ್ ಬಡಾವಣೆ, ನಿಮ್ಮಾಕಲಕುಂಟೆ, ಅಂಕಣಗೊಂದಿ ರಸ್ತೆ, ಚಿಕ್ಕಬಳ್ಳಾಪುರ ನಗರ.

12} ಮುನಿವೆಂಕಟಪ್ಪ ಬಿನ್ ಲೇಟ್ ದೊಡ್ಡಪ್ಪಯ್ಯ, 37 ವರ್ಷ, ಪ.ಜಾತಿ, ಕೂಲಿ ಕೆಲಸ, ವೆಂಕಟಗಿರಿಕೋಟೆ  ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಜಿಲ್ಲೆ, 13} ರಾಜು ಎಸ್ ಬಿನ್ ಲೇಟ್ ಬಸಪ್ಪ, 43 ವರ್ಷ, ಕುರುಬರು, ಜಿರಾಯ್ತಿ, ಸೊಣ್ಣಹಳ್ಳಿಪುರ ಗ್ರಾಮ, ಲಕ್ಕೋಂಡಹಳ್ಳಿ ಪಂಚಾಯ್ತಿ, ಹೊಸಕೋಟೆ ತಾಲ್ಲೂಕು, ಬೆಂಗಳೂರು ಜಿಲ್ಲೆ,

14} ಮೆಹಬೂಬ್ ಬಿನ್ ನವೀದ್, 23 ವರ್ಷ, ಮುಸ್ಲಿಮರು, ಅಂತಿಮ ಬಿ.ಕಾಂ ವಿದ್ಯಾಥರ್ಿ, ಸಕರ್ಾರಿ ಕಾಲೇಜು, ಯಲಹಂಕ, ವಾಸ: ನಂ.30, 18 ನೇ ಕ್ರಾಸ್, ಹಳೇ ಪೊಲೀಸ್ ಠಾಣೆಯ ಬಳಿ, ಅಮೃತಹಳ್ಳಿ ಬೆಂಗಳೂರು ನಗರ.

15} ಮಹೇಶ್ ಬಿನ್ ಲೇಟ್ ರಾಮರೆಡ್ಡಿ, 29 ವರ್ಷ, ರೆಡ್ಡಿ ಜನಾಂಗ, ರಿಯಲ್ ಎಸ್ಟೇಟ್ ಕೆಲಸ, ವಾಸ: 1/18, ರಾಚನಪಲ್ಲಿ ಗ್ರಾಮ, ರಾಪ್ತಾಡು ಮಂಡಲಂ, ಅನಂತಪುರ ಜಿಲ್ಲೆ, 9000464126

16} ವೆಂಕಟನಾರಾಯಣ ಬಿನ್ ಲೇಟ್ ಕೃಷ್ಣಯ್ಯ, 45 ವರ್ಷ, ಕಮ್ಮನಾಯ್ಡು ಜನಾಂಗ, ಜಿರಾಯ್ತಿ, ವಾಸ:ರಾಮನಗರ, ಸಬ್ ರಿಜಿಸ್ಟರ್ ಕಛೇರಿಯ ಸಮೀಪ, ಅನಂತಪುರ ನಗರ,

17} ಸುಧಾಕರ ರೆಡ್ಡಿ ಬಿನ್ ಲೇಟ್ ಜಯರಾಮರೆಡ್ಡಿ, 49 ವರ್ಷ, ರೆಡ್ಡಿ ಜನಾಂಗ, ಜಿರಾಯ್ತಿ, ವಾಸ:

    ಮಾಯನಗೊಂಡ್ಲಪಲ್ಲಿ ಗ್ರಾಮ, ತವಣಂಪಲ್ಲಿ ಮಂಡಲಂ, ಚಿತ್ತೂರು ಜಿಲ್ಲೆ,

 ಎಂದು ತಿಳಿಸಿದರು ಇವರುಗಳ ಮೇಲೆ ದಾಳಿ ಮಾಡಿದಾಗ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಪ್ಲಾಸ್ಟಿಕ್ ಟಾರ್ಪಲ್ ಮೇಲೆ ಬಿದ್ದಿದ್ದ 52 ಇಸ್ಪೀಟ್ ಎಲೆಗಳು ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ 24,73,000 ನಗದು ಹಣ,( ಇಪತ್ತುನಾಲ್ಕು ಲಕ್ಷ ಎಪತ್ತ್ಮೂರು ಸಾವಿರ ರೂಗಳು) ವಿವಿದ ಕಂಪನಿಯ 21 ಮೋಬೈಲ್ ಪೋನ್ಗಳು 1} SAMSUNG HAND SET WHITE COLOUR, 2} NOKIA-1190 HAND SET BLOCK COLOUR. 3} SAMSUNG DOUS KEY PAD GOLD COLOUR. 4} SAMSUNG DOUS KEY PAD WHITE COLOUR., 5} SAMSUNG 4G DOUS GOLD COLOUR. 6} MI REDMI NOTE-3 GILD COLOUR., 7} MI REDMI NOTE-4 WHITE COLOUR. 8} ONE PLUS BLOCK COLOUR. 9} SAMSUNG J-2 GOLD COLOUR. 10} NOKIA C2 KEY PAD WHITE COLOUR. 11} VIVO-71 WHITE COLOUR. 12} SAMSUNG DUOS KEYPAD BLOCK COLOUR., 13} NOKIA TA1034 KEYPAD BLOCK COLOUR., 14} NOKIA TM 1110 KEYPAD BLOCK COLOUR. 15} VIVO BLOCK COLOUR. 16} OPPO A371W BLOCK COLOUR. 17} APPLE I PHONE WHITE COLOUR. 18} SAMSUNG DUOS KEYPAD BLOCK COLOUR. 19} SAMSUNG  S8 BLOCK COLOUR. 20} OPPO MOBILE RED COLOUR.21} SAMSUNG MOBILE GOLD COLOUR., ಮತ್ತು 17 ದ್ವಿಚಕ್ರ ವಾಹನಗಳು. 1} KA-53 HB-3646 HONDA DIO WHITE COLOUR.2} KA-50 EA-6730 HONDA DIO RED COLOUR. 3} KA-02 JY-6665 HONDA DIO GREY COLOUR. 4} KA-03 JW-6378 HONDA DIO BLOCK COLOUR. 5} KA-43 V-4919 MAESTRO EDGE WHITE COLOUR SCOOTY. 6} KA-40 EB-9099 DUET ERO SILVER BIKE. 7} KA-43 R-201 HERO SPLENDER RED COLOUR. 8} KA-43 J-9512 HERO HONDA SUPER SPLENDER. 9} KA-43 L-2560 HERO HONDA PASSION PRO BLOCK 10} KA-43 R-1426 TVS STAR CITY RED COLOUR.11} GJ-1 FE-5936 YAMAHA LIBIRO RED COLOUR. 12} KA-43 R-1531 HERO HONDS SPLENDER 13} KA-02 ET-3070 TVS VICTOR RED & WHITE COLOUR. 14} KA-05 EV-7611 BAJAJ CT 100. 15} KA-40 S-1679 HERO PASSION PRO RED COLOUR. 16} KA-03 ET-3518 TVS VICTOR BLOCK & RED COLOUR. 17} KA-03 ET-1770 YAMAHA BIKE RED COLOUR. ದ್ವಿಚಕ್ರ ವಾಹನಗಳನ್ನು ಹಾಗೂ ಒಂದು ಪ್ಲಾಸ್ಟಿಕ್ ಟಾರ್ಪಲ್ನ್ನು ಸಂಜೆ 6:50 ಗಂಟೆಯಿಂದ ರಾತ್ರಿ 8:20 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ರಾತ್ರಿ 9:00 ಗಂಟೆಗೆ ಠಾಣೆಗೆ ಬಂದಿರುತ್ತೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ:79/2019 ಕಲಂ:87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ. ಮೊ.ಸಂ: 82/2019 ಕಲಂ: 87 ಕೆ.ಪಿ. ಆಕ್ಟ್:-

          ದಿನಾಂಕ.23.06.2019 ರಂದು ಸಂಜೆ 4.30 ಗಂಟೆಗೆ ಹೆಚ್.ಸಿ.115 ರವರು ಸಿಬ್ಬಂದಿಯವರೊಂದಿಗೆ ಆರೋಪಿಗಳು ಮತ್ತು ಅಮಾನತ್ತು ಪಡಿಸಿದ ಮಾಲುಗಳನ್ನು ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಶ್ರೀ. ಲಿಯಾಕತ್ ಉಲ್ಲಾ ಪಿ.ಎಸ್.ಐ (ಕಾ&ಸು) ರವರಿಗೆ ದಿನಾಂಕ.23/06/2019 ರಂದು ಮದ್ಯಾಹ್ನ 2-15 ಗಂಟೆಯಲ್ಲಿ ಶಿಡ್ಲಘಟ್ಟ ನಗರದಲ್ಲಿ ವಿಶೇಷ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ಸಂತೋಷನಗರದ ಕೋರ್ಟು ಹಿಂಭಾಗದಲ್ಲಿರುವ ಹಾಳು ಬಿದ್ದಿರುವ ಇಟ್ಟಿಗೆ ಪ್ಯಾಕ್ಟರಿ ಗಿಡಗಳ ಮದ್ಯೆ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಪಂಚಾಯ್ತಿದಾರರು ಮತ್ತು ಸಿಬ್ಬಂದಿಯವರೊಂದಿಗೆ ದ್ವಿಚಕ್ರ ವಾಹನಗಳಲ್ಲಿ ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 2-40 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ 3 ಜನ ಆಸಾಮಿಗಳು ಇಟ್ಟಿಗೆ ಪ್ಯಾಕ್ಟರಿ ಬಳಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಹಿಂಬಾಲಿಸಿ 03 ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಗೋಪಾಲಕೃಷ್ಣ @ ಗೋಪಿ ಬಿನ್ ಲೇಟ್ ನಾಗಪ್ಪ, ಇಲಾಹಿನಗರ, ಶಿಡ್ಲಘಟ್ಟ ನಗರ ಸ್ವಂತ ಊರು ಹನುಮಂತಪುರ. 2] ಶೌಕತ್ ಪಾಷ ಬಿನ್ ಚಾಂದಪಾಷ, ರಾಜೀವ್ ಗಾಂದೀ ಲೇಔಟ್, ಶಿಡ್ಲಘಟ್ಟ ಟೌನ್ 3] ಇಮ್ರಾನ್ ಬಿನ್ ಚಾಂದಪಾಷ,  ರಾಜೀವ್ ಗಾಂದೀ ಲೇಔಟ್, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು ಇವರುಗಳು ಜೂಜಾಟಕ್ಕೆ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ಎಣಿಕೆ ಮಾಡಲಾಗಿ ಒಟ್ಟು 1360/-ರೂ ನಗದು ಹಣ ಇರುತ್ತೆ. ಸ್ಥಳದಲ್ಲಿ ಜೂಜಾಟಕ್ಕೆ ಬಳಸಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದ ಇಸ್ಟೀಟ್ ಎಲೆಗಳನ್ನು ಎಣಿಕೆ ಮಾಡಲಾಗಿ ಒಟ್ಟು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು ಇವುಗಳನ್ನು ಮದ್ಯಾಹ್ನ 2-50 ಗಂಟೆಯಿಂದ 3-30 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡು 03 ಜನ ಆಸಾಮಿಗಳು ಮತ್ತು ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸಿ ಪಿ.ಎಸ್.ಐ ರವರು ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ಒಪ್ಪಿಸಿ ವರದಿ ಮಾಡಲು ಸೂಚಿಸಿದ್ದರ ಮೇರೆಗೆ ನೀಡಿದ ದೂರನ್ನು ಪಡೆದು ಈ ಪ್ರಕರಣ ದಾಖಲಿಸಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ. ಮೊ.ಸಂ: 83/2019 ಕಲಂ: 87 ಕೆ.ಪಿ. ಆಕ್ಟ್:-

          ದಿನಾಂಕ.23.06.2019 ರಂದು ಸಂಜೆ 6.15 ಗಂಟೆಗೆ ಹೆಚ್.ಸಿ.16 ರವರು ಸಿಬ್ಬಂದಿಯವರು ಆರೋಪಿಗಳು ಮತ್ತು ಅಮಾನತ್ತು ಪಡಿಸಿದ ಮಾಲುಗಳನ್ನು ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಶ್ರೀ. ಲಿಯಾಕತ್ ಉಲ್ಲಾ ಪಿ.ಎಸ್.ಐ (ಕಾ&ಸು) ರವರಿಗೆ ದಿನಾಂಕ.23/06/2019 ರಂದು ಸಂಜೆ 4-15 ಗಂಟೆಯಲ್ಲಿ ಶಿಡ್ಲಘಟ್ಟ ನಗರದಲ್ಲಿ ಠಾಣೆಯಲ್ಲಿ ವರದಿಯಾದ ಕಳುವು ಪ್ರಕರಣದ ವಿಶೇಷ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ರಾಜೀವ್ ಗಾಂದೀ ಲೇಔಟ್ ಗೆ ಹೋಗುವ ದಾರಿ ಪಕ್ಕದಲ್ಲಿ ಬೈಲ್ ಅನ್ವರ್ ರವರ ಮಾವಿನ ತೋಪಿನ ಪಕ್ಕದ ಮೈದಾನದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಪಂಚಾಯ್ತಿದಾರರು ಸಿಬ್ಬಂದಿಯವರೊಂದಿಗೆ ದ್ವಿಚಕ್ರ ವಾಹನಗಳಲ್ಲಿ ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಸಂಜೆ 4-45 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ 3 ಜನ ಆಸಾಮಿಗಳು ಮಾವಿನ ತೋಪಿನ ಪಕ್ಕದ ಮೈದಾನದಲ್ಲಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಹಿಂಬಾಲಿಸಿ 03 ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಅಜಯ್ ಬಿನ್ ವೆಂಕಟೇಶಪ್ಪ, ರಾಜೀವ್ ಗಾಂದೀ ಲೇಔಟ್, ಶಿಡ್ಲಘಟ್ಟ ನಗರ 2] ಸರ್ವರ್ ಬಿನ್ ಉಸ್ಮಾನ್, ರಾಜೀವ್ ಗಾಂದೀ ಲೇಔಟ್, ಶಿಡ್ಲಘಟ್ಟ ಟೌನ್ 3] ಮಹೇಂದ್ರ ಬಿನ್ ಶ್ರೀನಿವಾಸ, ಸಿದ್ದಾರ್ಥನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ಎಣಿಕೆ ಮಾಡಲಾಗಿ ಒಟ್ಟು 1550/-ರೂ ನಗದು ಹಣ ಇರುತ್ತೆ. ಸ್ಥಳದಲ್ಲಿ ಜೂಜಾಟಕ್ಕೆ ಬಳಸಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದ ಇಸ್ಟೀಟ್ ಎಲೆಗಳನ್ನು ಎಣಿಕೆ ಮಾಡಲಾಗಿ ಒಟ್ಟು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು ಇವುಗಳನ್ನು ಸಂಜೆ 5-00 ಗಂಟೆಯಿಂದ 5-40 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡು 03 ಜನ ಆಸಾಮಿಗಳು ಮತ್ತು ಮಾಲು ಸಮೇತ ಮಹಜರ್ ನೊಂದಿಗೆ ನನಗೆ ಒಪ್ಪಿಸಿ ಪಿ.ಎಸ್.ಐ ರವರು ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಲ್ಲಿ ಒಪ್ಪಿಸಿ ವರದಿ ಮಾಡಲು ಸೂಚಿಸಿದ್ದರ ಮೇರೆಗೆ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ.83/2019 ಕಲಂ.87 ಕೆ.ಪಿ. ಆಕ್ಟ್ ರೀತ್ಯ ಕೇಸು ದಾಖಲಿಸಿರುತ್ತೆ.