ದಿನಾಂಕ :24/05/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.104/2020 ಕಲಂ. 323,324,504  ಐ.ಪಿ.ಸಿ :-

          ದಿ: 23-05-2020 ರಂದು ರಾತ್ರಿ 10:15 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಅನಿತಮ್ಮ ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶ – ದಿ: 23-05-2020 ರಂದು ರಾತ್ರಿ 8:30 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ನಿವಾಸಿಗಳಾದ ಶ್ರೀನಿವಾಸ್ ಬಿನ್ ಲೇಟ್ ವೆಂಕಟಪ್ಪ ಹಾಗೂ ಹೆಂಡತಿ ಶಿವಲಿಂಗಮ್ಮ ಕೋಂ ಶ್ರೀನಿವಾಸ್ ರವರು ನಮ್ಮ ಮನೆಯ ಎದುರುಗಡೆ ಯಾವುದೋ ವಿಚಾರಕ್ಕೆ  ಜಗಳ ಮಾಡಿಕೊಂಡು ಬೈಯ್ದುಕೊಂಡು ಇರುತ್ತಾರೆ.  ಇದೇ ಸಮಯದಲ್ಲಿ ನಾನು ನಮ್ಮ ಮನೆಯ ಎದುರುಗಡೆ ಸಮಯ 8:30 ಗಂಟೆಯಲ್ಲಿ ಮಲಗಿರುತ್ತೇನೆ.  ಶ್ರೀನಿವಾಸ್ ಹೆಂಡತಿ ಜಗಳ ಮಾಡಿಕೊಂಡು ತನ್ನ ಗಂಡನಿಂದ ತಪ್ಪಿಸಿಕೊಂಡು ನಮ್ಮ ಮನೆಯ ಬಳಿ ಹೋಗುತ್ತಿರುವಾಗ, ಶ್ರೀನಿವಾಸ್ ಬಿನ್ ಲೇಟ್ ವೆಂಕಟಪ್ಪ ಎಂಬುವವರು ಕುಡುಕೋಲಿನಿಂದ ಅವನ ಹೆಂಡತಿಗೆ ಎಸೆದಿರುತ್ತಾನೆ.  ಆಗ ಮುಂದೆ ಮಲಗಿದ್ದ ನನ್ನ ತಲೆಯ ಎಡಭಾಗದಲ್ಲಿ ಬಂದು ಬಿದ್ದು ರಕ್ತಗಾಯವಾಗಿರುತ್ತದೆ.   ಈ ವಿಚಾರವಾಗಿ ನನ್ನ ಗಂಡ ಶ್ರೀನಿವಾಸ ಬಿನ್ ಏಟಿಗಂಗಪ್ಪ ರವರು ಅವರನ್ನು ಪ್ರಶ್ನಿಸಿಸದಾಗ, ಸದರಿಯವರು ನನ್ನ ಗಂಡನಿಗೆ ಕೈಗಳಿಂದ ಹೊಡೆದಿರುತ್ತಾರೆ, ಹಾಗೂ ಅವಾಚ್ಯ ಶಬ್ದಗಳಿಂದ ಬೈಯ್ದಿರುತ್ತಾರೆ.  ನನ್ನ ಗಂಡ ಯಾವುದೋ ಆಟೋದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದು, ಮೇಲ್ಕಂಡ ಶ್ರೀನಿವಾಸನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.61/2020 ಕಲಂ. 15(A),32(3) ಕೆ.ಇ ಆಕ್ಟ್ :-

          ದಿ:24.05.2020 ರಂದು ಬೆಳಿಗ್ಗೆ 10-05 ಗಂಟೆಗೆ ಪಿ ಎಸ್ ಐ ಸಾಹೇಬರು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ;24.05.2020 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ತಾನು ಠಾಣೆ ಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ದೊಡ್ಡೇಗಾನಹಳ್ಳಿ ಗ್ರಾಮದ ವಾಸಿ ಮುನಿಯಪ್ಪ ಬಿನ್ ನರಸಿಂಹಪ್ಪ 48 ವರ್ಷ , ಪ.ಜಾತಿ , ಕೂಲಿ ಕೆಲಸ ರವರು ತನ್ನ ಅಂಗಡಿಯ ಬಳಿ ಯಾವುದೇ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಮೇಲ್ಕಂಡ ಅಸಾಮಿಯ ವಿರುದ್ದ ಕಲಂ;15(ಎ) 32(3) ಕೆ,ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ ವ ವರಧಿ.

  1. ಚಿಂತಾಮಣಿ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.212/2020 ಕಲಂ.143,147,269,270,271,332,353,504,506 ರೆ/ವಿ 149 ಐ.ಪಿ.ಸಿ & 51 THE DISASTER MANAGEMENT ACT:-

          ದಿನಾಂಕ: 23/05/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ವೆಂಕಟಲಕ್ಷ್ಮಮ್ಮ ಕೋಂ ಶ್ರೀನಿವಾಸ, 31 ವರ್ಷ, ಆದಿ ಕರ್ನಾಟಕ, ಆಶಾ ಕಾರ್ಯಕರ್ತೆ, ಐಮರೆಡ್ಡಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 1.50 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ, ತನಗೆ ಮುರುಗಮಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಊಲವಾಡಿ ಗ್ರಾಮ ಪಂಚಾಯ್ತಿ ವತಿಯಿಂದ ತಮ್ಮ ಗ್ರಾಮದಲ್ಲಿ ಕೋವಿದ್-19(ಕರೋನಾ) ವೈರೆಸ್ ಬಗ್ಗೆ ಮನೆ ಮನೆಗೆ ತೆರಳಿ ಮಾಹಿತಿಯನ್ನು ಪಡೆದುಕೊಂಡು ಅವರಿಗೆ ಜಾಗೃತಿ ಮೂಡಿಸಲು ಕರ್ತವ್ಯಕ್ಕೆ ನೇಮಕ ಮಾಡಿರುತ್ತಾರೆ. ಅದರಂತೆ ತಾನು ಪ್ರತಿ ದಿನ ತಮ್ಮ ಗ್ರಾಮದಲ್ಲಿ ಸಾರ್ವಜನಿಕರಿಗೆ ಕರೋನಾ ವೈರಸ್ ಬಗ್ಗೆ ಅರಿವು ಮೂಡಿಸಿ ಅವರಿಂದ ಆಗಿಂದಾಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿರುತ್ತಾರೆ. ಹೀಗಿರುವಾಗ ದಿನಾಂಕ: 22/05/2020 ರಂದು ಸಂಜೆ 6.30 ಗಂಟೆ ಸಮಯದಲ್ಲಿ ತಾನು ಗ್ರಾಮದಲ್ಲಿದ್ದಾಗ ತಮ್ಮ ಗ್ರಾಮದ ಮುನಿವೆಂಕಟಪ್ಪರವರ ಮನೆಗೆ ಸುಮಾರು 2 ವರ್ಷಗಳಿಂದ ಅವರ ಮನೆಯಲ್ಲಿ ವಾಸವಾಗಿರುವ ಲಾರಿ ಚಾಲಕನಾದ ದಂಡುಪಾಳ್ಯದ ಮುನಿರಾಜು ಎಂಬುವವರು ಮಹಾರಾಷ್ಟ್ರಕ್ಕೆ ಲಾರಿಯಲ್ಲಿ ಹೋಗಿ ಬಂದಿರುವುದಾಗಿ ಮಾಹಿತಿ ತಿಳುದುಬಂದಿದ್ದು, ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚಾಗಿರುವುದರಿಂದ ಆತನಿಗೆ ಸೊಂಕು ಹರಡಿರುವ ಬಗ್ಗೆ ಅನುಮಾನ ಬಂದಿದ್ದು, ತಾನು ಸದರಿ ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿಸಿದಾಗ ಅವರು ಸದರಿ ಮುನಿರಾಜುರವರನ್ನು ಕ್ವಾರೆಂಟೈನ್ ಗೆ ಒಳಪಡಿಸಬೇಕೆಂದು ತಿಳಿಸಿದ್ದರಿಂದ ತಾನು ಮುನಿವೆಂಕಟಪ್ಪರವರ ಮನೆಯ ಬಳಿ ಹೋಗಿದ್ದು, ಮನೆಯ ಬಳಿ ಇದ್ದ ಲಕ್ಷ್ಮಿದೇವಮ್ಮ ಕೋಂ ಮುನಿವೆಂಕಟಪ್ಪ ರವರನ್ನು ಕುರಿತು ಮುನಿರಾಜು ಮಹಾರಾಷ್ಟ್ರಕ್ಕೆ ಲಾರಿಯಲ್ಲಿ ಹೋಗಿ ಬಂದಿರುವುದಾಗಿ ಮಾಹಿತಿ ಬಂದಿದ್ದು, ಹಾಲಿ ಆ ರಾಜ್ಯದಲ್ಲಿ ಕೋವಿದ್-19 ಕೊರೋನಾ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ಸದರಿ ಸಾಂಕ್ರಾಮಿಕ ರೋಗ ಮುನಿರಾಜುರವರಿಗೂ ಸಹ ಹರಡಿರುವ ಸಾಧ್ಯತೆ ಇದ್ದು, ಆತನನ್ನು ವಿಚಾರಣೆ ಮಾಡಿ ಕ್ವಾರೆಂಟೈನ್ ಗೆ ಒಳಪಡಿಸಬೇಕಾಗಿದೆ, ಇಲ್ಲದಿದ್ದರೆ ಗ್ರಾಮಸ್ಥರ ಪ್ರಾಣಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದಾಗಿ ತಿಳಿಸಿದಾಗ ಆಕೆ ತನ್ನನ್ನು ಕುರಿತು ಲೇ ಬೇವರ್ಸಿ ಮುಂಡೆ ನಮ್ಮ ಮನೆಗೆ ನೆಂಟರು ಬರಬಾರದ ಎಂದು ಅವಾಚ್ಯಶಬ್ದಗಳಿಂದ ಬೈದು, ತಾನು ನಿರ್ವಹಿಸುತ್ತಿದ್ದ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಅಷ್ಟರಲ್ಲಿ ಅವರ ಕಡೆಯವರಾದ ನಾಗರಾಜು, ಸುಶೀಲಮ್ಮ, ಸಂತೋಷ್ ಮತ್ತು ಮಂಜುಳ ರವರು ಅಕ್ರಮ ಗುಂಪುಕಟ್ಟಿಕೊಂಡು ಬಂದು ಆಪೈಕಿ ನಾಗರಾಜು ಇಟ್ಟಿಗೆಯಿಂದ ತನ್ನ ಎಡಭುಜದ ಮೇಲೆ ಹೊಡೆದು ಗಾಯವನ್ನುಂಟು ಮಾಡಿರುತ್ತಾನೆ. ಉಳಿದ ಸಂತೋಷ್, ಸುಶೀಲಮ್ಮ ಮತ್ತು ಮಂಜುಳ ರವರು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿ, ಇನ್ನೊಂದು ಸಲ ನಮ್ಮ ಮನೆಯ ಬಳಿ ಬಂದರೆ ನಿನ್ನನ್ನು ಸಾಯಿಸಿ ಬಿಡುವುದಾಗಿ ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ತನಗೆ ವಾಹನದ ಸೌಲಭ್ಯವಿಲ್ಲದ ಕಾರಣ ಈ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿ ತನ್ನ ಹೇಳಿಕೆಯನ್ನು ನೀಡುತ್ತಿದ್ದು, ತಾನು ನಿರ್ವಹಿಸುತ್ತಿದ್ದ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ತನ್ನ ಮೇಲೆ ಹಲ್ಲೆ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.62/2020 ಕಲಂ. 324,504,506 ರೆ/ವಿ 34 ಐ.ಪಿ.ಸಿ & 3(1)(r),3(1)(s) The Scheduled Castes and the Scheduled Tribes (Prevention of Atrocities) Amendment Bill :-

          ಚಿಂತಾಮಣಿ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಾದ ಶ್ರೀನಿವಾಸ ಬಿನ್ ಲೇಟ್ ಮೇಲೂರಪ್ಪ, 42 ವರ್ಷ, ಕೂಲಿ ಕೆಲಸ, ಆದಿ ಕರ್ನಾಟಕ ಜನಾಂಗ, ಗಂಗಾ ನಗರ, ವಾರ್ಡ ನಂ: 21, ಚಿಂತಾಮಣಿ ನಗರ ರವರು ನೀಡಿದ ಹೇಳಿಕೆಯ ಸಾರಾಂಶವೆನೆಂದರೆ. ನಾನು ಚಿಂತಾಮಣಿ ನಗರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೆನೆ . ಹೀಗಿರುವಾಗ ದಿನಾಂಕ: 23.05.2020 ರಂದು ರಾತ್ರಿ 8.30 ಗಂಟೆ ಸಮಯದಲ್ಲಿ ನಾನು ಮತ್ತು ಶಂಕರಪ್ಪ ಬಿನ್ ಮುನಿನಾರಾಯಣಪ್ಪ, 35 ವರ್ಷ, ವೆಂಕಟಗಿರಿಕೋಟೆ, ಚಿಂತಾಮಣಿ ನಗರ ರವರು ಮತ್ತು ನನ್ನ ತಮ್ಮನಾದ ರಾಮಾಂಜಿ ಬಿನ್ ಮುನಿಸ್ವಾಮಿ, 36 ವರ್ಷ, ಆದಿ ಕರ್ನಾಟಕ, ಗಂಗಾನಗರ, ಚಿಂತಾಮಣಿ ನಗರ ರವರು ಒಟ್ಟಿಗೆ ವೆಂಕಟಗಿರಿಕೋಟೆಯಿಂದ ನಾವು ಮೂರು ಜನ ಕಷ್ಟ-ಸುಖ ಮಾತನಾಡಿಕೊಂಡು ನಡೆದುಕೊಂಡು ಗಂಗಾನಗರದಲ್ಲಿರುವ ನನ್ನ ತಮ್ಮನ ಮನೆಗೆ ಹೋಗಿರುತ್ತೆನೆ ನಾವು ಮೂರು ಜನ ಮನೆಯಲ್ಲಿ ಕುಳಿತುಕೊಂಡು ಟೀ ಕುಡಿಯುತ್ತಿದ್ದಾಗ ಮನೆಯ ಹೊರಗೆ ಯಾರೋ ಜೋರಾಗಿ ಕಿರುಚಾಡುತ್ತಿದ್ದು ನಾನು ಮನೆಯಿಂದ ಹೊರಗೆ ಬಂದು ಯಾಕೆ ನೀನು ಈಗೆ ಕಿರುಚಾಡುತ್ತಿಯಾ ಎಂದು ಕೇಳಿದಕ್ಕೆ ನಿನ್ನ ತಮ್ಮನಾದ ರಾಮಾಂಜಿ ರವರು ಗಂಗಾನಗರದಲ್ಲಿರುವ ಆಂಜನೇಯಸ್ವಾಮಿ ದೇವಸ್ತಾನದಲ್ಲಿ ಧ್ವನಿವರ್ಧಕ ಆಳವಡಿಸಿ ಶಬ್ದ ಜೋರಾಗಿಟ್ಟಿದೆವೆಂದು ಪೊಲೀಸ್ ಠಾಣೆಯಲ್ಲಿ ಹೋಗಿ ಹೇಳಿರುತ್ತಾನೆಂದು ಹೇಳಿ ಆ ಲೋಪರ್ ನನ್ನ ಮಗನನ್ನು ಹೊರಗೆ ಕಳುಹಿಸಿ ಎಂದು ಕಿರುಚಾಡಿದಾಗ ರಾಮಾಂಜಿ ರವರು ಮನೆಯಿಂದ ಹೊರಗೆ ಬಂದಾಗ ರಾಮಾಂಜಿ ರವರ ಮೇಲೆ ಹಲ್ಲೆ ಮಾಡಲು ಮುಂದಾದಾಗ ನಾನು ಅಡ್ಡ ಹೋದಾಗ ಕೃಷ್ಣ ರವರು ಏಕಾಏಕಿ ಜೇಬಿನಿಂದ ರೇಸರ್ ನನ್ನು ತೆಗೆದು ನನ್ನ ಬಲಭಾಗದ ಹೊಟ್ಟೆಗೆ ಹಾಕಿ ರಕ್ತಗಾಯವನ್ನುಂಟು ಮಾಡಿರುತ್ತಾನೆ ನಂತರ ಅಲ್ಲೇ ಇದ್ದ ಮುನಿರಾಜು ಬಿನ್ ವೆಂಕಟಪತಿ, ಭಜಂತ್ರಿ ಜನಾಂಗ, ಗಂಗಾನಗರ, ಚಿಂತಾಮಣಿ ನಗರ ಮತ್ತು ಮತ್ತು ವೆಂಕಟೇಶ್ ಬಿನ್ ವೆಂಕಟಪತಿ, ಮತ್ತು ವೆಂಕಟಪತಿರವರು ಲೋಪರ್ ನನ್ನ ಮಕ್ಕಳೆ, ಮಾದಿಗ ನನ್ನ ಮಕ್ಕಳೆ ಎಂದು ಜಾತಿ ನಿಂದನೆ ಮಾಡಿ ನಿಮ್ಮನ್ನು ಬೀಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ ನಂತರ ಅಲ್ಲೆ ಇದ್ದ ಶಂಕರ ರವರು ಬಂದು ಗಲಾಟೆಯನ್ನು ಬೀಡಿಸಿರುತ್ತಾರೆ ನಂತರ ರಾಮಾಂಜಿ  ರವರು ನನ್ನನ್ನು ಚಿಕಿತ್ಸೆಗಾಗಿ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಆದ್ದರಿಂದ ನಮ್ಮ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯಾಗಿರುತ್ತೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.47/2020 ಕಲಂ. 87 ಕೆ.ಇ ಆಕ್ಟ್:-

          ದಿನಾಂಕ 23/05/2020 ರಂದು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯ ಪ್ರಭಾರ ಪಿ.ಎಸ್.ಐ ನಾರಾಯಣಸ್ವಾಮಿ ಕೆ ರವರು ಠಾಣೆಗೆ ಹಾಜರಾಗಿ ಆರೋಪಿತರು, ಮಾಲು ಮತ್ತು ಮಹಜರ್ ನ್ನು ಹಾಜರುಪಡಿಸಿ ನೀಡಿದ ವರದಿ ಸಾರಾಂಶವೇನೆಂದರೆ, ದಿನಾಂಕ 23/05/2020 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದು ಅಮಿಟಹಳ್ಳ್ಳಿ ಗ್ರಾಮದ ಅಶ್ವತ್ಥಕಟ್ಟೆ ಬಳಿ ಯಾರೋ ಕೆಲವರು ಕಾನೂನು ಬಾಹಿರವಾಗಿ ಇಸ್ಟೀಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನ ಮೇರೆಗೆ ದಾಳಿ ಮಾಡುವ ಸಲುವಾಗಿ ಖಾಸಗಿ ವಾಹನದಲ್ಲಿ ಠಾಣಾ ಸಿಬ್ಬಂದಿಯವರಾದ ಸಿ.ಹೆಚ್.ಸಿ-161 ಕೃಷ್ಣಪ್ಪ, ಸಿ.ಹೆಚ್.ಸಿ-216 ಶ್ರೀರಾಮಪ್ಪ, ಸಿಪಿಸಿ-101 ಶ್ರೀನಿವಾಸ ರವರೊಂದಿಗೆ ಅಮಿಟಹಳ್ಳಿ ಗ್ರಾಮದ ಬಳಿ ಹೋಗಿ ಅಲ್ಲಿದ್ದವರನ್ನು ಪಂಚಾಯ್ತಿದಾರರಾಗಿ ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಅವರೊಂದಿಗೆ ಗ್ರಾಮದ ದಕ್ಷಿಣ ದಿಕ್ಕಿಗೆ ಬರುವ ಅಶ್ವತ್ಥಕಟ್ಟೆಯ  ಬಳಿ ಹೋದಾಗ ಸದರಿ ಅಶ್ವತ್ಥಕಟ್ಟೆಯ ಮೇಲೆ ಯಾರೋ ನಾಲ್ಕು ಜನ ಆಸಾಮಿಗಳು ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಇಸ್ಟೀಟು ಜೂಜಾಟವಾಡುತ್ತಿದ್ದು ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಜೂಜಾಡುತ್ತಿದ್ದ ಸದರಿಯವರು ಇಸ್ಟೀಟ್ ಎಲೆ  ಹಾಗೂ ಹಣವನ್ನು ಅಲ್ಲಿಯೇ ಬಿಸಾಡಿ ಓಡಲು ಪ್ರಯತ್ನಿಸಿದ್ದು, ಅವರನ್ನು ಬೆನ್ನಟ್ಟಿ ವಶಕ್ಕೆ ಪಡೆದು  ಹೆಸರು ಮತ್ತು ವಿಳಾಸ ಕೇಳಲಾಗಿ 1) ಶ್ರೀನಿವಾಸ ಬಿನ್ ಚಿಕ್ಕಸುಬ್ಬಣ್ಣ, 50 ವರ್ಷ, ವಕ್ಕಲಿಗರು, ಜಿರಾಯ್ತಿ, 2) ಕೋನಪ್ಪ ಬಿನ್ ಲೇಟ್ ತಿಪ್ಪಣ್ಣ, 50 ವರ್ಷ, ಬೋವಿ ಜನಾಂಗ, ಜಿರಾಯ್ತಿ, 3) ಅಜಿತ್ ಕುಮಾರ್ ಬಿನ್ ಅಂಜಿನೇಯರೆಡ್ಡಿ, 20 ವರ್ಷ, ವಕ್ಕಲಿಗರು, ಜಿರಾಯ್ತಿ, 4) ವೆಂಕಟರಾಯಪ್ಪ ಬಿನ್ ಲೇಟ್ ವೆಂಕಟರಾಯಪ್ಪ, 65 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಎಲ್ಲರೂ ಅಮಿಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದರು. ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ ಸದರಿಯವರು ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ ಇದ್ದು, ಪಂಚರ ಸಮಕ್ಷಮ ಪರಿಶೀಲಿಸಲಾಗಿ 750/- ರೂ ನಗದು ಹಣ ಇದ್ದು, ಸದರಿ ನಗದು ಹಣ, 52 ಇಸ್ಟೀಟ್ ಎಲೆಗಳನ್ನು ಈ ಕೇಸಿನ ಮುಂದಿನ ನಡಾವಳಿಗಾಗಿ ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿಯೇ ಸಂಜೆ 3-30 ರಿಂದ 4.30 ಗಂಟೆ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಆರೋಪಿತರು, ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿದ್ದು, ಆರೋಪಿತರು, ಮಾಲು ಹಾಗೂ ಮಹಜರ್ ನ್ನು ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ಸಂಖ್ಯೆ: 56/2020 ರಂತೆ ದಾಖಲು ಮಾಡಿರುತ್ತೆ. ಈ ಎನ್.ಸಿ.ಆರ್ ಸಂಖ್ಯೆ: 56/2020 ಪ್ರಕರಣದಲ್ಲಿ ಅಕ್ರಮವಾಗಿ ಇಸ್ಟೀಟು ಜೂಜಾಟ ಆಡುತ್ತಿದ್ದ ಆರೋಪಿಗಳ ವಿರುದ್ದ ಸಂಜ್ನೇಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿಯನ್ನು ನೀಡಬೇಕಾಗಿ ಘನ ನ್ಯಾಯಾಲಯದಲ್ಲಿ ಮನವಿ ಮಾಡಿ ಅನುಮತಿ ಪಡೆದುಕೊಂಡು ರಾತ್ರಿ 08-30      ಗಂಟೆಗೆ ಠಾಣಾ ಮೊ.ಸಂ 47/2020 ಕಲಂ 87 ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.132/2020 ಕಲಂ. 323,324,504 ರೆ/ವಿ 34 ಐ.ಪಿ.ಸಿ:-

          ದಿನಾಂಕ 23/05/2020 ರಂದು ಬೆಳಿಗ್ಗೆ 11-15 ಗಂಟೆಗೆ ಪಿರ್ಯಾದಿದಾರರಾದ ರಾಮಾಂಜಿ ಬಿನ್ ಮುನಿಯಪ್ಪ, 24 ವರ್ಷ, ಪ ಜಾತಿ, ವಾಸ-ನಾರಾಯಣದಾಸರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 22/05/2020 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ತಾನು ರಾಜಕಲ್ಲಹಳ್ಳಿಯಿಂದ ಮನೆಗೆ ಬರುವಷ್ಟರಲ್ಲಿ ಮುನಿರಾಜು, ಆತನ ಹೆಂಡತಿ ಮಂಜುಳಾ ಹಾಗು ಮುನಿರಾಜು ರವರ ಅಳಿಯ ರಾಜೇಶ ರವರು ಸೇರಿ ತಮ್ಮ ತಾಯಿ ನಾರಾಯಣಮ್ಮ ಹಾಗು ತನ್ನ ಅಣ್ಣ ಶಂಕರಪ್ಪ ರವರುಗಳು ಸೇರಿ ಒಬ್ಬರಿಗೊಬ್ಬರು ಬೈದಾಡಿಕೊಂಡು ತಳ್ಳಾಡಿಕೊಳ್ಳುತ್ತಿದ್ದರು. ತಾನು ಮುನಿರಾಜು ರವರನ್ನು ಏಕೆ ಕೆಟ್ಟ ಮಾತುಗಳಿಂದ ಬೈಯ್ಯುತ್ತಿದ್ದೀರಾ ಎಂದು ಕೇಳುತ್ತಿದ್ದಂತೆ ಮುನಿರಾಜು ಪಕ್ಕದಲ್ಲಿದ್ದ ಕೋಲನ್ನು ಎತ್ತಿಕೊಂಡು ಇಷ್ಟೋತ್ತು ಇವರದೆಲ್ಲಾ ಆಯಿತು ನನ್ನ ಮಗನೇ ಈಗ ನೀನು ಬಂದೆಯಾ ಎಂತ ಕೋಲಿನಿಂದ ತನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಬಿಡಿಸಲು ಬಂದ ತನ್ನ ತಾಯಿಯನ್ನು ಮಂಜುಳಮ್ಮ ತಮ್ಮ ತಾಯಿಯ ಜುಟ್ಟನ್ನು ಹಿಡಿದು ಎಳೆದಾಡಿ ಕಾಲಿನಿಂದ ಸೊಂಟಕ್ಕೆ ಒದ್ದು ಮೂಗೇಟುವುಂಟು ಮಾಡಿರುತ್ತಾಳೆ. ಮತ್ತು ರಾಜೇಶ್ ಎಂಬುವನು ಈ ನನ್ನ ಮಕ್ಕಳನ್ನು ಹೀಗೆ ಬಿಟ್ಟರೆ ಜಾಸ್ತಿ ಆಗುತ್ತೆ ಅಂತ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದನು. ಶಿವಪ್ಪ ಬಿನ್ ಕುಟಮಪ್ಪ ಹಾಗು ತಮ್ಮ ತಂದೆ ಮುನಿಯಪ್ಪ ರವರು ಗಲಾಟೆಯಿಂದ ಬಿಡಿಸಿರುತ್ತಾರೆ. ನಂತರ ತಾವು ಯಾವುದೋ ವಾಹನದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಸಿಕೊಂಡಿರುತ್ತೇವೆ. ಆದ ಕಾರಣ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.133/2020 ಕಲಂ. 143,147,148,323,324,504,506 ರೆ/ವಿ 149 ಐ.ಪಿ.ಸಿ:-

          ದಿನಾಂಕ 23/05/2020 ರಂದು ಮದ್ಯಾಹ್ನ 1-30 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ಮುನಿರಾಜು ಬಿನ್ ಮುನಿಯಪ್ಪ, 35 ವರ್ಷ, ಎ.ಕೆ ಜನಾಂಗ, ಕೂಲಿ ಕೆಲಸ, ವಾಸ-ನಾರಾಯಣದಾಸರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ದಿನಾಂಕ 22/05/2020 ರಂದು ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ತನ್ನ ಹೆಂಡತಿಯಾದ ಮಂಜುಳಮ್ಮ ರವರು ತಮ್ಮ ಮನೆಯ ಮುಂದೆಯಲ್ಲಿನ ರಸ್ತೆಗೆ ಹೋದಾಗ ತಮ್ಮ ಪಕ್ಕದ ಮನೆಯ ವಾಸಿ ಮುನಿಯಪ್ಪ ರವರ ಸಾಕು ನಾಯಿ ತನ್ನ ಹೆಂಡತಿಗೆ ಕಚ್ಚಲು ಹೋದಾಗ ತನ್ನ ಹೆಂಡತಿ ಕಲ್ಲನ್ನು ಎತ್ತಿಕೊಂಡು ನಾಯಿಯನ್ನು ಓಡಿಸಿ ವಾಪಸ್ಸು ಮನೆಗೆ ಬಂದಿದ್ದು, ರಾತ್ರಿ ಸುಮಾರು 8-15 ಗಂಟೆ ಸಮಯದಲ್ಲಿ ತಾವು ತಮ್ಮ ಮನೆಯ ಬಳಿ ಇದ್ದಾಗ ತಮ್ಮ ಪಕ್ಕದ ಮನೆಯವರು ಹಾಗು ತಮ್ಮ ಜನಾಂಗದವರೇ ಆದ ಮೇಲ್ಕಂಡ ಮುನಿಯಪ್ಪ ಬಿನ್ ಕುಂಟಿ ಮುನಿಯಪ್ಪ ಹಾಗು ಈತನ ಮನೆಯವರಾದ ಶಂಕರಪ್ಪ ಬಿನ್ ಮುನಿಯಪ್ಪ, ರಾಮಾಂಜಿ ಬಿನ್ ಮುನಿಯಪ್ಪ, ರವಿ ಬಿನ್ ಗುಂಡಪ್ಪ, ನಾರಾಯಣಮ್ಮ ಕೋಂ ಮುನಿಯಪ್ಪ ರವರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ತಮ್ಮ ಮನೆಯ ಬಳಿ ಬಂದು ತನ್ನ ಹೆಂಡತಿಯನ್ನು ಕುರಿತು ಬಾರೇ ಬೇವರ್ಸಿ ಮುಂಡೆ ನಮ್ಮ ನಾಯಿಗೆ ಹೊಡಿತೀಯಾ ನಿನಗೆ ಎಷ್ಟು ದೈರ್ಯ ಎಂದು ಅವಾಚ್ಯ ಶಬ್ದಗಳಿಂದ ಬೈದಾಡುತ್ತಿದ್ದಾಗ ತಾನು ಮನೆಯಿಂದ ಆಚೆ ಬಂದು ತಮ್ಮ ಮನೆ ಹತ್ತಿರದಿಂದ ಹೋಗಿ ಇಲ್ಲ ಗಲಾಟೆ ಮಾಡ ಬೇಡಿ ಎಂದು ಹೇಳುತ್ತಿದ್ದಂತೆ ಮುನಿಯಪ್ಪ ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಏಕಾಏಕಿ ತನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದಾಗ ತಾನು ಕೆಳಗೆ ಬಿದ್ದು ಹೋದಾಗ ಕೂಡಲೇ ತನ್ನ ಅಳಿಯನಾದ ಮುನಿರಾಜು ರವರು ಜಗಳ ಬಿಡಿಸಲು ಅಡ್ಡ ಬಂದಾಗ ಶಂಕರಪ್ಪ ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಅಳಿಯನ ಬಲಭುಜದ ಕೆಳಭಾಗ ಹೊಡೆದಾಗ ತರಚಿದ ರಕ್ತಗಾಯವಾದಾಗ ರಾಮಾಂಜಿ ಎಂಬುವನು ತನಗೆ ಮತ್ತು ರವಿ ಎಂಬುವನು ತನ್ನ ಅಳಿಯನಿಗೆ ಕೈಗಳಿಂದ ಮೈ ಮೇಲೆ ಹೊಡೆದಿದ್ದು, ಜಗಳ ಬಿಡಿಸಲು ಅಡ್ಡ ಬಂದ ತನ್ನ ಹೆಂಡತಿ ಮಂಜುಳಮ್ಮ ಹಾಗು ತನ್ನ ಮಗಳಾದ ವರಲಕ್ಷ್ಮೀ ರವರಿಗೆ ನಾರಾಯಣಮ್ಮ ಎಂಬಾಕೆ ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿ ಜಗಳ ಮಾಡುತ್ತಿದ್ದಾಗ ತಮ್ಮ ಪಕ್ಕದ ಮನೆಯವರಾದ ಆಂಜಿನಮ್ಮ ಕೋಂ ವೆಂಕಟೇಶಪ್ಪ, ರತ್ನಮ್ಮ ಕೋಂ ಬೆಟ್ಟ ಕೊಟಪ್ಪ ಹಾಗು ಇತರರು ಅಡ್ಡ ಬಂದು ಜಗಳವನ್ನು ಬಿಡಿಸಿದಾಗ ಮೇಲ್ಕಂಡವರು ತಮ್ಮನ್ನು ಕುರಿತು ನಮಗೆ ಒಂದು ಗತಿ ಕಾಣಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ಗಾಯಾಳುಗಳಾದ ತಾವು ಯಾವುದೋ ವಾಹನದಲ್ಲಿ ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಸಿಕೊಂಡು ಇಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಸಿಕೊಂಡು ಈ ದಿನ ವಾಪಸ್ಸು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಮೇಲ್ಕಂಡವರ ವಿರುದ್ದ ಮುಂದಿ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ಹೇಳಿಕೆ.