ದಿನಾಂಕ : 24/02/2020 ರ ಅಪರಾಧ ಪ್ರಕರಣಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.43/2020 ಕಲಂ. 279-337-304(ಎ) ಐ.ಪಿ.ಸಿ:-
ದಿ: 23-02-2020 ರಂದು ರಾತ್ರಿ 10:15 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ನಂಜುಂಡಪ್ಪ ಬಿನ್ ಲೇಟ್ ಚಿಕ್ಕನಾರಾಯಣಪ್ಪ, 40 ವರ್ಷ, ಬಲಜಿಗರು, ಜಿರಾಯ್ತಿ, ಬುಟ್ಟಿವಾರಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ- ದಿನಾಂಕ:23.02.2020 ರಂದು ಸಂಜೆ 7-00 ಗಂಟೆ ಸಮಯದಲ್ಲಿ ನನ್ನ ತಮ್ಮನಾದ ಈಶ್ವರಪ್ಪ ಬಿನ್ ಲೇಟ್ ಚಿಕ್ಕನಾರಾಯಣಪ್ಪ, 26 ವರ್ಷ ರವರು ಕೆಲಸದ ಪ್ರಯುಕ್ತ ನಮ್ಮ ಬಾಬತ್ತು ಕೆಎ-40.ಇಡಿ- 8641 ನೊಂದಣಿ ಸಂಖ್ಯೆಯ ಟಿ.ವಿ.ಎಸ್. ಎಕ್ಸ್.ಎಲ್-100 ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿಗೆ ಬಂದಿದ್ದು, ಕೆಲಸವನ್ನು ಮುಗಿಸಿಕೊಂಡು ನಮ್ಮ ಗ್ರಾಮಕ್ಕೆ ವಾಪಸ್ಸು ಬರಲು ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ಕಾರುಕೂರು ಕ್ರಾಸ್ನಿಂದ ಸ್ವಲ್ಪ ಮುಂದೆ ಇರುವ ಮೋರಿಯ ಬಳಿ ರಸ್ತೆಯ ಎಡಭಾಗದಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ ಯಲ್ಲಂಪಲ್ಲಿ ಕಡೆಯಿಂದ ಬಾಗೇಪಲ್ಲಿ ಕಡೆಗೆ ಬರುತ್ತಿದ್ದ ಕೆಎ-40. ಇಸಿ-2037 ನೊಂದಣಿ ಸಂಖ್ಯೆಯ ಟಿ.ವಿ.ಎಸ್ ಸ್ಟಾರ್ಸಿಟಿ ದ್ವಿಚಕ್ರ ವಾಹನದ ಸವಾರ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗಿ ನನ್ನ ತಮ್ಮ ಸವಾರಿ ಮಾಡಿಕೊಂಡು ಬರುತ್ತಿದ್ದಂತಹ ಕೆಎ-40.ಇಡಿ- 8641 ನೊಂದಣಿ ಸಂಖ್ಯೆಯ ಟಿ.ವಿ.ಎಸ್. ಎಕ್ಸ್.ಎಲ್-100 ದ್ವಿಚಕ್ರ ವಾಹನದ ಮುಂಭಾಗಕ್ಕೆ ಡಿಕ್ಕಿ ಹೊಡಿಸಿ ಅಪಘಾತ ಪಡಿಸಿದ್ದರ ಪರಿಣಾಮ ಎರಡು ದ್ವಿಚಕ್ರ ವಾಹನಗಳು ಜಖಂಗೊಂಡು ನನ್ನ ತಮ್ಮನಾದ ಈಶ್ವರಪ್ಪ ಬಿನ್ ಲೇಟ್ ಚಿಕ್ಕನಾರಾಯಣಪ್ಪ ರವರಿಗೆ ತಲೆಗೆ ಮುಖಕ್ಕೆ ಮತ್ತು ಮೈಮೇಲೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಸ್ಟಾರ್ಸಿಟಿ ದ್ವಿಚಕ್ರ ವಾಹನದ ಸವಾರ ಪ್ರವೀಣ್ ಬಿನ್ ಗಂಗಾಧರಪ್ಪ ರವರಿಗೆ ಸಹ ತಲೆಗೆ ಮತ್ತು ಮೈಮೇಲೆ ತೀವ್ರ ಸ್ವರೂಪದ ರಕ್ತ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಹಾಗೂ ಸ್ಟಾರ್ಸಿಟಿ ದ್ವಿಚಕ್ರ ವಾಹನದ ಹಿಂಬದಿಯ ಸವಾರ ನವೀನ್ ಬಿನ್ ಲಕ್ಷ್ಮೀ ನರಸಿಂಹಪ್ಪ ರವರಿಗೆ ಮುಖಕ್ಕೆ ಮತ್ತು ಕಾಲುಗಳಿಗೆ ರಕ್ತ ಗಾಯಗಳಾಗಿರುವುದಾಗಿ ನನಗೆ ತೀಮಾಕಲಪಲ್ಲಿ ಗ್ರಾಮದ ನರಸಿಂಹಮೂರ್ತಿ ಬಿನ್ ಆದಿನಾರಾಯಣಪ್ಪ ರವರು ವಿಚಾರ ತಿಳಿಸಿದರು. ತಕ್ಷಣ ನಾನು ಮತ್ತು ನಮ್ಮ ಗ್ರಾಮದ ನಮ್ಮ ಸಂಬಂಧಿಕರಾದ ನಾರಾಯಣಸ್ವಾಮಿ ಬಿನ್ ಲೇಟ್ ಪಾಪಣ್ಣ ರವರು ಮತ್ತು ಇತರೆಯವರು ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ಎರಡು ಮೃತ ದೇಹಗಳನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಗಾಯಾಳು ನವೀನ್ ರವರನ್ನು ಅಂಬುಲೇನ್ಸ್ನಲ್ಲಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತೇವೆ. ಈ ಅಪಘಾತಕ್ಕೆ ಕಾರಣವಾಗಿರುವ ಕೆಎ-40. ಇಸಿ-2037 ನೊಂದಣಿ ಸಂಖ್ಯೆಯ ಟಿ.ವಿ.ಎಸ್ ಸ್ಟಾರ್ಸಿಟಿ ದ್ವಿಚಕ್ರ ವಾಹನದ ಸವಾರನಾದ ಪ್ರವೀಣ್ ಬಿನ್ ಗಂಗಾಧರಪ್ಪ ರವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.
2. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.18/2020 ಕಲಂ. 143-147-323-353-504-506 ರೆ/ವಿ 149 ಐ.ಪಿ.ಸಿ:-
ಈ ದಿನ ದಿನಾಂಕ: 23-02-2020 ರಂದು ಮದ್ಯಾಹ್ನ 01-30 ಗಂಟೆಯಲ್ಲಿ ಪಿರ್ಯಾಧಿ ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ, ದಿನಾಂಕ: 23-02-2020 ರಂದು ಚಿಕ್ಕಬಳ್ಳಾಪುರ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತದ ಸಾಲಗಾರರ ಕ್ಷೇತ್ರ ಮತ್ತು ಸಾಲಗಾರರಲ್ಲದ ಕ್ಷೇತ್ರಕ್ಕೆ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯನ್ನು ಚಿಕ್ಕಬಳ್ಳಾಪುರ ನಗರದ ತಾಲ್ಲೂಕು ಪಂಚಾಯ್ತಿ ಕಛೇರಿಯಲ್ಲಿ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕು ಕಛೇರಿಯಲ್ಲಿ ಚುನಾವಣೆಯನ್ನು ನಿಗದಿಪಡಿಸಲಾಗಿತ್ತು. ಚುನಾವಣೆ ಬಂದೋಬಸ್ತ್ನ ಕರ್ತವ್ಯಕ್ಕಾಗಿ ನನ್ನನ್ನು, ಚಿಕ್ಕಬಳ್ಳಾಪುರ (ಗ್ರಾ) ಪೊಲೀಸ್ ಠಾಣೆಯ ಶ್ರೀ ರಾಜೇಶ್ ಸಿಹೆಚ್.ಸಿ. 33 ರವರನ್ನು ಹಾಗೂ ಇತರೇ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ತಾಲ್ಲೂಕು ಪಂಚಾಯ್ತಿ ಕಛೇರಿಯ ಆವರಣದಲ್ಲಿ ಕರ್ತವ್ಯಕ್ಕಾಗಿ ನೇಮಕ ಮಾಡಿದ್ದರು. ಅದರಂತೆ ನಾನು ಮತ್ತು ರಾಜೇಶ್ ರವರು ನಮಗೆ ನಿಯೋಜಿಸಿದ ತಾಲ್ಲೂಕು ಪಂಚಾಯ್ತಿ ಕಛೇರಿಯ ಗೇಟ್ ಬಳಿಗೆ ಈ ದಿನ ಬೆಳಿಗ್ಗೆ ಸುಮಾರು 07:00 ಗಂಟೆಗೆ ಬಂದು ಕರ್ತವ್ಯಕ್ಕೆ ವರದಿ ಮಾಡಿರುತ್ತೇವೆ. ಬೆಳಿಗ್ಗೆ ಸುಮಾರು 09:00 ಗಂಟೆಗೆ ಮತದಾನ ಪ್ರಾರಂಭವಾಯಿತು. ಮತದಾನ ಮಾಡಲು ಬೇರೆ ಬೇರೆ ಪಕ್ಷದ ಮತದಾರರು ಸಾಕಷ್ಟು ಜನ ಒಟ್ಟಾಗಿ ಜಮಾಯಿಸಲು ಪ್ರಾರಂಭಿಸಿದರು. ನಾವು ಸದರಿ ಸ್ಥಳದಲ್ಲಿ ಅಚ್ಚುಕಟ್ಟಾಗಿ ಬ್ಯಾರಿಕೇಟ್ ವ್ಯವಸ್ಥೆಯನ್ನು ಮಾಡಿಕೊಂಡು ಬಂದೋಬಸ್ತ್ ಕರ್ತವ್ಯವನ್ನು ನಿರ್ವಹಣೆ ಮಾಡುತ್ತಿದ್ದೆವು. ಬೆಳಿಗ್ಗೆ ಸುಮಾರು 11:30 ಗಂಟೆಗೆ ಕಾಂಗ್ರೆಸ್ ಪಕ್ಷದ ಕಡೆಯಿಂದ ನಂದಿ ಆಂಜಿನಪ್ಪ, ವಕೀಲ ನಾರಾಯಣಸ್ವಾಮಿ ರವರೊಂದಿಗೆ ತಾಲ್ಲೂಕು ಪಂಚಾಯ್ತಿಯ ಆವರಣದ ಗೇಟ್ ಬಳಿಗೆ ಸುಮಾರು 8-10 ಜನರು ಗುಂಪು ಕಟ್ಟಿಕೊಂಡು ಬಂದರು. ಅವರು ಬಂದ ಕೂಡಲೇ ಏಕಾ ಏಕಿ ನಮ್ಮನ್ನು ಕುರಿತು ಬಿ.ಜೆ.ಪಿ. ಪಕ್ಷದವರನ್ನು ಒಳಗೆ ಬಿಟ್ಟಿರುತ್ತೀರಿ ನಮ್ಮನ್ನು ಒಳಗೆ ಬಿಡದೇ ತಡೆಯುತ್ತಿದ್ದೀರಿ ಎಂದು ಪ್ರಶ್ನಿಸಿ ಗಲಾಟೆ ಮಾಡುವ ಉದ್ದೇಶದಿಂದ ಅಕ್ರಮ ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡಲು ಪ್ರಾರಂಭಿಸಿದರು. ಅದಕ್ಕೆ ನಾವು ಅವರು ಗುತರ್ಿನ ಚೀಟಿ ತೋರಿಸಿದ್ದು ಗುರುತಿನ ಚೀಟಿ ನೋಡಿ ಅವರು ಮತದಾರರಾಗಿದ್ದರಿಂದ ಮತದಾರರನ್ನು ಮಾತ್ರ ಒಳಗೆ ಬಿಡುತ್ತಿದ್ದೇವೆಂದು ತಿಳಿಸಿದೆವು. ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ನಂದಿ ಆಂಜಿನಪ್ಪ, ವಕೀಲ ನಾರಾಯಣಸ್ವಾಮಿ ಮತ್ತು ಇತರೇ ಸುಮಾರು 8-10 ಜನರು ಗುಂಪು ಕಟ್ಟಿಕೊಂಡು ಚುನಾವಣೆ ನಡೆಯುತ್ತಿರುವ ಆವರಣಕ್ಕೆ ಗೇಟ್ನಲ್ಲಿ ಒಳಗೆ ನುಗ್ಗಲು ಪ್ರಯತ್ನ ಪಟ್ಟರು. ಆಗ ನಾನು ಮತ್ತು ರಾಜೇಶ್ ರವರು ಸೇರಿ ಅವರನ್ನು ಸಮಾಧಾನಪಡಿಸಿ ದೂರ ಹೋಗಿ ಬ್ಯಾರಿಕೇಟ್ ಹೊರಗೆ ಹೋಗುವಂತೆ ಸೂಚಿಸಿದರೂ ನಂದಿ ಆಂಜಿನಪ್ಪ ಮತ್ತು ನಾರಾಯಣಸ್ವಾಮಿ ರವರು ಮತ್ತು ಇನ್ನೂ 6-8 ಜನ ಅವರ ಬೆಂಬಲಿಗರು ನಮ್ಮ ಮಾತನ್ನು ಕೇಳದೇ ನಮ್ಮಗಳನ್ನು ತಳ್ಳುತ್ತಾ ಕರ್ತವ್ಯಕ್ಕೆ ಅಡಚನೆ ಮಾಡಿದರು. ನಂತರ ಗೇಟಿನ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ನಮ್ಮನ್ನು ಆಂಜಿನಪ್ಪ ಮತ್ತು ನಾರಾಯಣಸ್ವಾಮಿ ರೆಡ್ಡಿಗೊಲ್ಲವಾರಹಳ್ಳಿ ವಾಸಿ ರವರು ನಮ್ಮನ್ನು ಅವರ ಕೈಗಳಿಂದ ತಳ್ಳಿ, ಬೆರಳುಗಳನ್ನು ಮಡಚಿ, ಪರಚಿದ್ದು ನನಗೆ ಎರಡೂ ಕೈಗಳಿಗೆ ತರಚಿದ ಗಾಯವಾಗಿದ್ದು ಎದೆಯ ಮೇಲೆ, ಬೆನ್ನಿನ ಮೇಲೆ ಕೈಗಳಿಂದ ಗುದ್ದಿ ಮೂಗೇಟುಗಳನ್ನುಂಟುಪಡಿಸಿ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಈ ಘಟನೆಯನ್ನು ಕಂಡ ಸ್ವಲ್ಪ ದೂರದಲ್ಲಿದ್ದ ಬಿ.ಜೆ.ಪಿ. ಪಕ್ಷದ ಕೆಲವು ಮುಖಂಡರು ಮತ್ತು ಮತದಾರರು ಅಲ್ಲಿಗೆ ಬಂದಿದ್ದನ್ನು ಕಂಡ ನಂದಿ ಆಂಜಿನಪ್ಪ ಮತ್ತು ವಕೀಲ ನಾರಾಯಣಸ್ವಾಮಿ ರವರುಗಳು ಏಕಾ ಏಕಿ ಈ ಸೂಳೆ ಮಕ್ಕಳಿಂದಲೇ ನಾವು ಸೋಲುತಾ ಇರೋದು ಇವರಿಗೆ ಎರಡು ಬಿಟ್ಟು ಒಂದು ಗತಿ ಕಾಣಿಸಬೇಕೆಂದು ಬೆದರಿಕೆ ಹಾಕಿ ಗಲಾಟೆ ಮಾಡಲು ಪ್ರಾರಂಭಿಸಿದ್ದು ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದುದನ್ನು ಕಂಡು ಅಲ್ಲಿಯೇ ಸ್ವಲ್ಪ ದೂರದಲ್ಲಿದ್ದ ನಮ್ಮ ಚಿಕ್ಕಬಳ್ಳಾಪುರ ಉಪ ವಿಭಾಗದ ಡಿವೈ.ಎಸ್.ಪಿ. ಸಾಹೇಬರು, ಚಿಕ್ಕಬಳ್ಳಾಪುರ (ಗ್ರಾ) ಠಾಣೆಯ ಪಿ.ಎಸ್.ಐ. ಚೇತನ್ ಕುಮಾರ್ ಮತ್ತಿತರೇ ಸಿಬ್ಬಂದಿಯವರುಗಳನ್ನು ಕರೆಯಿಸಿಕೊಂಡಿದ್ದು ಅವರುಗಳು ಸ್ಥಳಕ್ಕೆ ಬಂದು ಮೇಲ್ಕಂಡಂತೆ ಅಕ್ರಮ ಗುಂಪು ಕಟ್ಟಿಕೊಂಡು ಮತದಾನ ಕೇಂದ್ರಕ್ಕೆ ಅಕ್ರಮ ಪ್ರವೇಶ ಮಾಡಲು ಗಲಾಟೆ ಮಾಡುತ್ತಿದ್ದ ನಂದಿ ಆಂಜಿನಪ್ಪ, ವಕೀಲ ನಾರಾಯಣಸ್ವಾಮಿ ಮತ್ತಿತರೇಯವರಿಗೆ ಇದು ಚುನಾವಣೆ ಕರ್ತವ್ಯವಾಗಿದ್ದು ಗುರ್ತಿನ ಚೀಟಿ ಇದ್ದವರಿಗೆ ಒಳಗೆ ಹೋಗಲು ಅವಕಾಶ ಮಾಡಿಕೊಡುತ್ತಿದ್ದು ನೀವು ಸಹ ಮತದಾರರಾಗಿದ್ದಲ್ಲಿ ಗುರ್ತಿನ ಚೀಟಿ ತೋರಿಸಿ ಒಳಗೆ ಹೋಗುವಂತೆ ತಿಳಿಸಿದಾಗ ಮೇಲ್ಕಂಡ ನಂದಿ ಆಂಜಿನಪ್ಪ ಮತ್ತು ಅವರ ಗುಂಪಿನಲ್ಲಿದ್ದ 8-10 ಜನರು ಏಕಾ ಏಕಿ ಈ ಪೊಲೀಸ್ ನನ್ನ ಮಕ್ಕಳು ಬಿ.ಜೆ.ಪಿ. ರವರಿಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಡಿವೈ.ಎಸ್.ಪಿ. ಸಾಹೇಬರಿಗೆ ಕೈಗಳಿಂದ ತಳ್ಳಿ ಕೈಗಳ ಮೇಲೆ ಗಾಯವುಂಟುಪಡಿಸಿ ನಂತರ ಕೈಯಿಂದ ಗುದ್ದಿ ಎಡ ಕಣ್ಣಿನ ಕೆಳಭಾಗ ಗಾಯಪಡಿಸಿದ್ದಲ್ಲದೇ ಪಿ.ಎಸ್.ಐ. ಚೇತನ್ ರವರ ಕೈಗೆ ಗಾಯವಾಗಿರುತ್ತದೆ. ಕರ್ತವ್ಯಕ್ಕೆ ಅಡ್ಡಿಪಡಿಸಿ ಗಲಾಟೆ ಮಾಡುತ್ತಿದ್ದಾಗ ಅಲ್ಲೇ ಸ್ಥಳದಲ್ಲಿದ್ದ ಚಿಕ್ಕಬಳ್ಳಾಪುರ ಟೌನ್ ವಾಸಿ ಶಶಿ, ಬಸ್ ನಿಲ್ದಾಣದಲ್ಲಿ ಬಾಳೇಹಣ್ಣು ವ್ಯಾಪಾರಿ ವೆಂಕಟೇಶ್, ಗಂಗರೇಕಾಲುವೆ ವಾಸಿ ಮೂತರ್ಿ, ಸಾರ್ವಜನಿಕರಾದ ಕಸವುಗುಟ್ಟಹಳ್ಳಿ ಗ್ರಾಮದ ಮುನಿಕೃಷ್ಣ, ಸತ್ಯನಾರಾಯಣ, ರಾಮಪಟ್ಟಣ ಗ್ರಾಮದ ಅರವಿಂದ, ಗೊಳ್ಳು ಗ್ರಾಮದ ಚೌಡರೆಡ್ಡಿ, ಪೆರೇಸಂದ್ರದ ಚನ್ನಕೃಷ್ಣರೆಡ್ಡಿ ಮತ್ತಿತರೇಯವರುಗಳು ಹಾಜರಿದ್ದ ಪೊಲೀಸ್ ಸಿಬ್ಬಂದಿ ಗುಂಪನ್ನು ಸಮಾಧಾನಪಡಿಸಿ ಅವರನ್ನು ಕಳುಹಿಸಿಕೊಟ್ಟು ಪರಿಸ್ಥಿತಿಯನ್ನು ಶಾಂತಿಗೊಳಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತೆ.
3. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.99/2020 ಕಲಂ. 15(ಎ) ಕೆ.ಇ ಆಕ್ಟ್:-
ದಿನಾಂಕ:23/02/2020 ರಂದು ಸಂಜೆ 7.00 ಗಂಟಗೆ DCB/CEN ಪೊಲೀಸ್ ಠಾಣೆಗೆ ಶ್ರೀ ಶ್ರೀನಿವಾಸ್, ASI ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:23/02/2020 ರಂದು ಚಿಕ್ಕಬಳ್ಳಾಪುರ DCB/CEN ಪೊಲೀಸ್ ಠಾಣೆಯ PI ಶ್ರೀ ರಾಜಣ್ಣ ರವರು ತನಗೆ, ತಮ್ಮ ಠಾಣೆಯ CHC-198 ಮಂಜುನಾಥ ಹಾಗೂ CHC-239 ಮಲ್ಲಿಕಾರ್ಜುನ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು ಅದರಂತೆ ತಾವು ಈ ದಿನ ಸಂಜೆ 5.30 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದಲ್ಲಿದ್ದಾಗ ಚಿನ್ನಸಂದ್ರ ಗ್ರಾಮದ ರತ್ನಮ್ಮ ಕೋಂ ಶಂಕರಪ್ಪ ರವರ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳದಲ್ಲಿ ದಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಓಡಿ ಹೋಗಿದ್ದು, ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ಶ್ರೀಮತಿ ರತ್ನಮ್ಮ ಕೋಂ ಶಂಕರಪ್ಪ, 35 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) HAYWARDS CHEERS WHISKY ಯ 90 ML ನ ಮದ್ಯ ತುಂಬಿದ 15 ಟೆಟ್ರಾ ಪಾಕೇಟ್ ಗಳು, 2) HAYWARDS CHEERS WHISKY ಯ 90 ML ನ ಎರಡು ಖಾಲಿ ಟೆಟ್ರಾ ಪಾಕೇಟ್ ಗಳು, 3) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು, 4) ಒಂದು ಲೀಟರ್ ನ ಒಂದು ಖಾಲಿ ವಾಟರ್ ಬಾಟೆಲ್ ಗಳಿದ್ದು ಸದರಿಯವರುಗಳನ್ನು ಸಂಜೆ 5.45 ಗಂಟೆಯಿಂದ ಸಂಜೆ 6.30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಶ್ರೀಮತಿ ರತ್ನಮ್ಮ ಕೋಂ ಶಂಕರಪ್ಪ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಸಾರಾಂಶವಾಗಿರುತ್ತೆ.
4. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.31/2020 ಕಲಂ. 120(ಬಿ)-193-197-149-417-420-465-468-471 ಐ.ಪಿ.ಸಿ:-
ದಿನಾಂಕ 23/02/2020 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾಧಿ ಪಿ.ಎನ್. ಚೆನ್ನಕೃಷ್ಣರೆಡ್ಡಿ ಬಿನ್ ಲೇಟ್ ಚಿಕ್ಕ ನಾರಾಯಣರೆಡ್ಡಿ ಪೆರೆಸಂದ್ರ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ತನ್ನ ತಾತ ರೆಡ್ಡಿ ಆವುಲಪ್ಪ ರವರಿಗೆ ಒಟ್ಟು 6 ಜನ ಮಕ್ಕಳು, ಈ ಪೈಕಿ ತನ್ನ ತಂದೆ ಚಿಕ್ಕ ನಾರಾಯಣರೆಡ್ಡಿ 2 ನೇ ಮಗ ಇವರನ್ನು ಹೊರತು ಪಡಿಸಿ ಉಳಿದ ಅಣ್ಣ ತಮ್ಮಂದಿರು ತನ್ನ ತಾತನ ಆಸ್ತಿಯನ್ನು ಪೆರೇಸಂದ್ರ ಗ್ರಾಮ ಸರ್ವೇ ನಂ 283 ರ ಜಮೀನನ್ನು ಹೊರತು ಪಡಿಸಿ ನೊಂದಣಿ ರಿಲೀಸ್ ಡೀಡ್ ಮಾಡಿಸಿಕೊಂಡು ಒಟ್ಟು ಕುಟುಂಬದೊಂದಿಗೆ ಹೊರ ಹೋಗಿದ್ದು, ತನ್ನ ತಂದೆ ಮಾತ್ರ ತನ್ನ ತಾತ ರೆಡ್ಡಿ ಆವಲಪ್ಪ ರವರೊಂದಿಗೆ ಕುಟುಂಬದಲ್ಲಿದ್ದು, ಅಂದಿನಿಂದಲೂ ಇಂದಿನವರೆಗೆ ತನ್ನ ತಂದೆಯ ಮಕ್ಕಳಾದ ತಾವು 3 ಜನರು ಸದರಿ ಸರ್ವೇ ನಂಬರ್ 283 ರ 2 ಎಕೆರೆ 19 ಗುಂಟೆ ಜಮೀನು ಅನುಭವಿಸಿಕೊಂಡು ಬರುತ್ತಿದ್ದು, ಈಗಲೂ ಸಹ ತಮ್ಮ ಅನುಭವದಲ್ಲಿರುತ್ತೆ. ಹೀಗಿರುವಲ್ಲಿ ತಮ್ಮ ದೊಡ್ಡಪ್ಪನ ಮಗನಾದ ಡಿ.ಎನ್. ಅಶ್ವತ್ಥನಾರಾಯಣರೆಡ್ಡಿ ಬಿನ್ ದೊಡ್ಡನಾರಾಯಣರೆಡ್ಡಿ ತಮ್ಮ ಹತ್ತಿರ ಚೆನ್ನಾಗಿಯೇ ಇದ್ದುಕೊಂಡು ತಮಗೆ ಗೊತ್ತಿಲ್ಲದೇ ಸರ್ವೇ ನಂಬರ್ 283 ರ 2 ಎಕೆರೆ 19 ಗುಂಟೆ ಜಮೀನನ್ನು ಅವರ ಹೆಸರಿಗೆ ಕಂದಾಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಖಾತೆ ಮಾಡಿಸಿಕೊಂಡಿರುತ್ತಾರೆ. ಈ ವಿಷಯ ತಮಗೆ ಗೊತ್ತಾಗಬಹುದೆಂದು ತಿಳಿದು ಡಿ.ಎನ್. ಅಶ್ವತ್ಥನಾರಾಯಣರೆಡ್ಡಿ ಬಿನ್ ದೊಡ್ಡನಾರಾಯಣರೆಡ್ಡಿ ರವರು ತಮ್ಮ ಮಕ್ಕಳಾದ ಪಿ.ಎನ್. ಕೇಶವ ಮತ್ತು ಪಿ.ಎನ್. ಕಾರ್ತಿಕ್ ರವರ ಹೆಸರಿಗೆ ತಮ್ಮ ದೊಡ್ಡಪ್ಪ ದೊಡ್ಡ ನಾರಾಯಣರೆಡ್ಡಿ ರವರು ಮಾಡಿದ ಹಾಗೇ ಒಂದು ನಕಲಿ ಮರಣ ಶಾಸನವನ್ನು ಸೃಷ್ಠಿಸಿಕೊಂಡು ಕಂದಾಯ ಅಧಿಕಾರಿಗಳಿಗೆ ಆ ಮರಣ ಶಾಸನದ ಮುಖಾಂತರ ಸದರಿ ಸರ್ವೇ ನಂಬರ್ 283 ರ 2 ಎಕೆರೆ 19 ಗುಂಟೆ ಜಮೀನನ್ನು ಅವರ ಮಕ್ಕಳಿಗೆ ಸೇರಬೇಕೆಂದು ಕೋರಿಕೆಯನ್ನು ಇಟ್ಟಿರುತ್ತಾರೆ. ಹೀಗಿರುವಲ್ಲಿ ತಮಗೆ ಅನುಮಾನ ಬಂದು 18/09/2000 ರಂದು ಮರಣ ಶಾಸನವನ್ನು ಪರೀಕ್ಷೆ ಮಾಡಲಾಗಿ ಆ ಮರಣ ಶಾಸನವನ್ನು ತಮ್ಮ ದೊಡ್ಡಪ್ಪ ಸಾಯುವ ಮುನ್ನ 3 ದಿನಗಳ ಹಿಂದೆ ಮಾಡಿದಂತೆ ಇರುತ್ತೆ. ತಮ್ಮ ದೊಡ್ಡಪ್ಪ ರವರಿಗೆ 84 ವರ್ಷ ವಯ್ಯಸ್ಸಾಗಿದ್ದು, 6 ತಿಂಗಳ ಹಿಂದೆ ಅನೋರೋಗ್ಯ ಪೀಡಿತರಾಗಿದ್ದು, ಅವರು ಓಡಾಡುವ ಸ್ಥತಿಯಲ್ಲಿರುವುದಿಲ್ಲವೆಂದು ಖಾತ್ರಿಯಾಗಿರುತ್ತೆ. ಆದ್ದರಿಂದ ಮರಣ ಶಾಸನದಲ್ಲಿರುವ ಹೆಬ್ಬೆಟ್ಟಿನ ಗುರುತು ಸಹ ನಕಲಿಯಾಗಿರುತ್ತೆ. 1956 ರಲ್ಲೇ ತಮ್ಮ ದೊಡ್ಡಪ್ಪ ರಿಲೀಸ್ ಡೀಡ್ ಮೂಲಕ ಕೆಲವು ಆಸ್ತಿಗಳನ್ನು ಪಡೆದು ಸದರಿ ಸರ್ವೇ ನಂಬರ್ 283 ರ 2 ಎಕೆರೆ 19 ಗುಂಟೆ ಜಮೀನನ್ನು ಬಿಟ್ಟು ಕುಟುಂಬದಿಂದ ಹೊರಬಂದಿದ್ದರಿಂದ ಮರಣ ಶಾಸನ ಬರೆಯುವ ಪ್ರಮೇಯ ಬರುವುದಿಲ್ಲ ಆದ್ದರಿಂದ ಮರಣ ಶಾಸನ ನಕಲಿಯಾಗಿರುತ್ತದೆ. ಆದ್ದರಿಂದ ಆರೋಪಿತರಾದ ಡ.ಎನ್. ಅಶ್ವತ್ಥ ನಾರಾಯಣರೆಡ್ಡಿ , 2) ಪಿ.ಎನ್. ಕೇಶವ, 3) ಪಿ.ಎನ್. ಕಾರ್ತಿಕ್ 4) ಪಿ.ಎನ್. ಭೈರಪ್ಪ. 5) ಪಿ.ಎ. ನಾರಾಯಣಾಸ್ವಾಮಿ 6) ಎನ್ ರಮೇಶ ರವರು ಏಕೋದ್ದೇಶದಿಂದ ಅಪರಾಧಿಕ ಒಳಸಂಚು ಮಾಡಿ ನಕಲಿ ಮರಣ ಶಾಸನವನ್ನು ಸೃಷ್ಠಿಸಿ, ಕಂದಾಯ ದಾಖಲಾತಿಗಳನ್ನು ಮೋಸದಿಂದ ಮಾಡಿಸಿಕೊಂಡು, ಸದರಿ ದಾಖಲಾತಿಗಳನ್ನು ರಾಸ್ಟ್ರೀಯ ಹೆದ್ದಾರಿ ಭೂಸ್ವಾಧೀನ ಅಧಿಕಾರಿಗಳಿಗೆ ನೀಡಿ ಮೋಸದಿಂದ ಲಕ್ಷಾಂತರ ರೂಗಳನ್ನು ಲಪಟಾಯಿಸಿರುತ್ತಾರೆ . ಸದರಿ ಮರಣ ಶಾಸನವನ್ನು ವಿಭಾಗಾಧಿಕಾರಿಗಳು ಚಿಕ್ಕಬಳ್ಳಾಪುರ ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯ ಚಿಕ್ಕಬಳ್ಳಾಪುರಕ್ಕೆ ಈ ಮಧ್ಯ ನೀಡಿದ್ದು, ಈಗ ತಮ್ಮ ಗಮನಕ್ಕೆ ಬಂದಿದ್ದರಿಂದ ಈ ಪಿರ್ಯಾದು ನೀಡಲು ತಡವಾಗಿರುತ್ತೆ. ಆದ್ದರಿಂದ ಆರೋಪಿತರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.
5. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.54/2020 ಕಲಂ. 324-504-506 ಐ.ಪಿ.ಸಿ:-
ದಿನಾಂಕ: 23/02/2020 ರಂದು ಸಂಜೆ 5-20 ಗಂಟೆಯಲ್ಲಿ ಹೆಚ್.ಸಿ 219 ಶ್ರೀನಿವಾಸಮೂರ್ತಿ ರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ಸುಬ್ರಮಣಿ ಬಿನ್ ನಂಜುಂಡಪ್ಪ ರವರ ಹೇಳಿಕೆಯನ್ನು ಪಡೆದುಕೊಂಡು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ: 23/02/2020 ರಂದು ಸುಮಾರು 12-30 ಗಂಟೆ ಸಮಯದಲ್ಲಿ ತಮ್ಮ ಊರಿನ ಕೆರೆಯ ಬಳಿ ತಮ್ಮ ಜಮೀನು ಇದ್ದು ತಾನು ತಮ್ಮ ಜಮೀನಿನ ಕಡೆ ಓಡಾಡಿಕೊಂಡು ಬರಲು ಹೋಗಲಾಗಿ ಅಲ್ಲಿ ತಮ್ಮದೇ ಗ್ರಾಮದವನಾದ ಆನಂದ ಬಿನ್ ಲೇಟ್ ಯಲ್ಲಪ್ಪ ಎಂಬುವರು ತಮ್ಮ ಪಕ್ಕದ ಜಮೀನನ್ನು ಅಳತೆ ಮಾಡಿಸುತ್ತಿದ್ದು ತಾನು ಅವನನ್ನು ಕುರಿತು ತನಗೆ ನೋಟಿಸ್ ನೀಡದೆ ಅಥವಾ ಒಂದು ಮಾತನ್ನು ಸಹಾ ಹೇಳದೆ ಅಳತೆ ಮಾಡಿಸುತ್ತಿದ್ದೀಯಾ ಅಲ್ಲವಾ ಇದು ಸರಿಯೇ ಎಂದು ಕೇಳಲಾಗಿ ಅವನು ನಿನಗೆ ಹೇಳುವ ಅಗತ್ಯ ಏನು ಇಲ್ಲ ಎಂದು ಅವಾಚ್ಯ ಶಬ್ದಗಳಿಂದು ನಿಂದಿಸುತ್ತಾ ಅಲ್ಲಿಯೇ ಇದ್ದ ಹಿಡಿಗಾತ್ರದ ಕಲ್ಲನ್ನು ತೆಗೆದುಕೊಂಡು ತನ್ನ ತಲೆಗೆ ಹೊಡೆದಿದ್ದು ತನಗೆ ತಲೆಯಲ್ಲಿ ರಕ್ತಗಾಯವಾಗಿ ಅಲ್ಲಿಯೇ ಕುಸಿದು ಬಿದಿರುತ್ತೇನೆ ತಮ್ಮ ಪಕ್ಕದ ಹೊಲದವರು ಯಾರೋ ತನ್ನನ್ನು ಯಾವುದೋ ಒಂದು ವಾಹನದಲ್ಲಿ ಕರೆ ತಂದು ಸರ್ಕಾರಿ ಆಸ್ಪತ್ರೆ ಗೌರಿಬಿದನೂರಿನಲ್ಲಿ ದಾಖಲು ಮಾಡಿದ್ದು ಚಿಕಿತ್ಸೆಕೊಡಿಸಿರುತ್ತಾರೆ ಆದ್ದರಿಂದ ವಿನಾಕಾರಣ ತನ್ನನ್ನು ಕಲ್ಲಿನಿಂದ ಹೊಡೆದ ಆನಂದ ಬಿನ್ ಲೇಟ್ ಯಲ್ಲಪ್ಪ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ ಸದರಿ ವ್ಯಕ್ತಿಯು ತನಗೆ ಪ್ರತಿ ದಿನ ಪ್ರಾಣ ಬೆದರಿಕೆ ಸಹಾ ಹಾಕಿರುತ್ತಾನೆ ಎಂದು ಪ್ರ.ವ.ವರದಿ.
6. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.55/2020 ಕಲಂ. 379 ಐ.ಪಿ.ಸಿ:-
ದಿನಾಂಕ:24/02/2020 ರಂದು ಗೌರಿಬಿದನೂರು ಪೊಲೀಸ್ ವೃತ್ತ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಸಿ.220 ರವರು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:22/10/2019 ರಿಂದ ನಾನು ಗೌರಿಬಿದನೂರು ಪೋಲೀಸ್ ವೃತ್ತ ಕಚೇರಿಯಲ್ಲಿ ಅಪರಾಧ ಪತ್ತೆ ಕಾರ್ಯವನ್ನು ನಿರ್ವಹಿಕೊಂಡಿರುತ್ತೇನೆ. ದಿನಾಂಕ :23/02/2020 ರಂದು ತೊಂಡೇಭಾವಿ ಹೊರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಮಾಡಲು ಗೌರಿಬಿದನೂರು ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ರವಿ ಎಸ್ ಸಾಹೇಬರು ನನಗೆ ಮತ್ತು ನವೀನ್ ಕುಮಾರ್ ಪಿ ಸಿ 105 ರವರಿಗೆ ನೇಮಕ ಮಾಡಿದ್ದು, ಅದರಂತೆ ನಾವುಗಳು ನನ್ನ ಸ್ವಂತ ದ್ವಿ ಚಕ್ರ ವಾಹನದಲ್ಲಿ ಇದೇ ದಿನ ರಾತ್ರಿ 8.30 ಗಂಟೆಗೆ ರಾತ್ರಿ ಗಸ್ತನ್ನು ಎ ಸಿ ಸಿ ಸಿಮೆಂಟ್ ಫ್ಯಾಕ್ಟರಿ .ಬೇವಿನಹಳ್ಳಿ ,ತೊಂಡಭಾವಿ, ಇಂದಿರಾನಗರ.ದೊಡ್ಡಮಲ್ಲೇಕೆರೆ, ಚಿಕ್ಕಮಲ್ಲೇಕೆರೆ, ಕಾಮಲಾಪುರ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಬೆಳಗ್ಗೆ ಸುಮಾರು 6.00 ಗಂಟೆಯಲ್ಲಿ ರಾಜ್ಯ ಹೆದ್ದಾರಿ -9 ರಸ್ತೆಯಿಂದ ಪೂರ್ವ ದಿಕ್ಕಿಗೆ , ಅಲಕಾಪುರ ಗ್ರಾಮದ ಕಡೆಗೆ ಹೋಗುವ ಮಣ್ಣಿನ ರಸ್ತೆಯಲ್ಲಿ ಗಸ್ತು ಮಾಡಿಕೊಂಡು ಹೋಗುತ್ತಿದ್ದಾಗ ಮಣ್ಣಿನ ರಸ್ತೆಯಿಂದ ಸುಮಾರು 200 ಮೀಟರ್ ದಕ್ಷಿಣದ ಕಡೆಗೆ ಇರುವ ಅಲಕಾಪುರ ಸರ್ಕಾರಿ ಹಳ್ಳದಲ್ಲಿ ಯಾವುದೋ ಟ್ರಾಕ್ಟರ್ ಗೆ ಮರಳನ್ನು ತುಂಬಿಸುತ್ತಿರುವುದಾಗಿ ಕಂಡು ಬಂದಿದ್ದು ಕೂಡಲೆ ದ್ವಿ ಚಕ್ರ ವಾಹನದಲ್ಲಿ ಸ್ಥಳಕ್ಕೆ ನಾವುಗಳು ಹೋಗುವಷ್ಠರಲ್ಲಿ ಮರಳನ್ನು ತುಂಬಿಸುತ್ತಿದ್ದ ಆಸಾಮಿಗಳು ದ್ವಿ ಚಕ್ರವಾಹನದಲ್ಲಿ ನಾವುಗಳು ಬರುವುದನ್ನು ನೋಡಿ ಮರಳನ್ನು ತುಂಬಿಸುತ್ತಿದ್ದ ಪರಿಕರಗಳೊಂದಿಗೆ ಸ್ಥಳದಿಂದ ಓಡಿ ಹೋಗಿದ್ದು, ನಾವುಗಳು ಬೆನ್ನಟ್ಟಿದರು ಸಿಗದೇ ಪರಾರಿಯಾದರು.ನಂತರ ಮರಳು ತುಂಬಿಸುತ್ತಿದ್ದ ಟ್ರಾಕ್ಟರ್ ಬಳಿ ಬಂದು ಪರಿಶೀಲಿಸಿದಾಗ ಮಹೀಂದ್ರ ಕಂಪನಿಯ ಟ್ರಾಕ್ಟರ್ ಆಗಿದ್ದು, ಸದರಿ ಟ್ರಾಕ್ಟ್ ರ್ ಗೆ ಯಾವುದೇ ರೀತಿಯ ನೊಂದಣಿ ಸಂಖ್ಯೆ ಇರುವುದಿಲ್ಲ. ಇದರ MODEL -575 DI, SR.NO.ZKBT01160 EE ಆಗಿರುತ್ತೆ.ಟ್ರಾಲಿಗೆ ಯಾವುದೇ ರೀತಿಯ ನೊಂದಣಿ ಸಂಖ್ಯೆ ಇರುವುದಿಲ್ಲ.ಟ್ರಾಲಿಯ ಬಾಡಿಯ ತುಂಬಾ ಮರಳು ತುಂಬಿಸಿರುತ್ತೆ. ಮರಳು ತುಂಬಿರುವ ಟ್ರಾಕ್ಟರ್ ಟ್ರಾಲಿಯನ್ನು ವಾಹನವನ್ನು ಬೆಳಗ್ಗೆ 8..00 ಗಂಟೆಗೆ ತೊಂಡೇಭಾವಿ ಹೊರ ಪೊಲೀಸ್ ಠಾಣೆಯ ಬಳಿಗೆ ತಂದು ನಿಲ್ಲಿಸಿ.ಅಲ್ಲಿಂದ ಮಂಚೇನಹಳ್ಳಿ ಪೊಲೀಸ್ ಠಾಣೆಗೆ ಬಂದು ಬೆಳಗ್ಗೆ 8.30 ಗಂಟೆಗೆ ವರದಿಯನ್ನು ನೀಡಿರುತ್ತೇನೆ.ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮರಳು ತುಂಬಿಸಿ ಸಾಗಾಣಿಕೆ,ಮಾರಾಟ ಮಾಡುವುದು ನಿಷೇಧವಿದ್ದರು ಸಹ MODEL -575 DI, SR.NO.ZKBT01160 EE ಹೊಂದಿರುವ ಟ್ರಾಕ್ಟ ರ್ ಟ್ರಾಲಿಯ ಚಾಲಕ ಮತ್ತು ಮಾಲೀಕರು ಮರಳನ್ನು ಕಳ್ಳತನದಿಂದ ತುಂಬಿಸಿ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ವರದಿ.
7. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.13/2020 ಕಲಂ. 279-337 ಐ.ಪಿ.ಸಿ:-
ದಿನಾಂಕ:23/02/2020 ರಂದು ಸಂಜೆ 6:45 ಗಂಟೆಗೆ ದೇವನಹಳ್ಳಿ ಆಕಾಶ್ ಆಸ್ಪತ್ರೆಯಿಂದ ಗಾಯಾಳು ಶ್ರೀ. ನಂದೀಶ್ ಬಿನ್ ಮಂಜುನಾಥ, 21 ವರ್ಷ, ಪ.ಜಾತಿ, ಗಾರೆ ಕೆಲಸ, ವಾಸ: ಬೈಚಾಪುರ ಗ್ರಾಮ, ದೇವನಹಳ್ಳಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡ ಬಂದಿದ್ದರ ಸಾರಾಂಶವೇನೆಂದರೆ ದಿನಾಂಕ:23/02/2020 ರಂದು ಮದ್ಯಾಹ್ನ 2:30 ಗಂಟೆ ಸಮಯದಲ್ಲಿ ನಂದಿ ಜಾತ್ರೆಯ ಪ್ರಯುಕ್ತ ತಾನು, ತನ್ನ ಅಣ್ಣ ಗಿರೀಶ್, ತಮ್ಮ ಚಿಕ್ಕಮ್ಮ ಮುನಿರತ್ನಮ್ಮ, ಮಕ್ಕಳಾದ ದೀಕ್ಷಾ, ಚೈತನ್ಯ ರವರು ತಮ್ಮ ಚಿಕ್ಕಪ್ಪ ಮುನಿಯಲ್ಲಪ್ಪ ರವರ ಆಟೋ ನಂಬರ್ KA-05 AD-1176 ರಲ್ಲಿ ಮುನಿಯಲ್ಲಪ್ಪ ರವರೇ ಚಾಲನೆ ಮಾಡಿಕೊಂಡು ತಾವೆಲ್ಲರು ಆಟೋದಲ್ಲಿ ಮನೆ ಬಿಟ್ಟು ನಂದಿ ಜಾತ್ರೆಗೆ ಹೋಗಿ ಅಲ್ಲಿ ಜಾತ್ರೆ ಮುಗಿಸಿಕೊಂಡು ವಾಪಸ್ಸು ಮನೆಗೆ ಹೋಗಲು ನಂದಿ ಗ್ರಾಮದಿಂದ ಕಾರಹಳ್ಳಿ ಕ್ರಾಸ್ಗೆ ಕಡೆಗೆ ಹೋಗುಲು ಸಂಜೆ 5:15 ಗಂಟೆ ಸಮಯದಲ್ಲಿ ಅಂಗಟ್ಟ ಗ್ರಾಮದ ಕ್ಯೂ.ವಿ.ಸಿ ಬಡಾವಣೆಯ ಮುಂಭಾಗದ ರಸ್ತೆಯಿಂದ ಸ್ವಲ್ಪ ಮುಂದಕ್ಕೆ ಆಟೋ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಸದರಿ ಆಟೋ ಮುಂಭಾಗ ರಸ್ತೆಯಲ್ಲಿ KA-05 MB-486 ಮಾರುತಿ ಸುಜುಕಿ ಕಂಪನಿಯ ಜೆನ್ ಕಾರಿನ ಚಾಲಕ ತನ್ನ ಕಾರನ್ನು ಬ್ರೇಕ್ ಹಾಕಿದಾಗ ಹಿಂದೆ ಬರುತ್ತಿದ್ದ ಆಟೋ ವೇಗವಾಗಿ ಹೋಗಿ ಸದರಿ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ಆಟೋವಿನ ಹಿಂಭಾಗದಲ್ಲಿ ಎಡ ಭಾಗಕ್ಕೆ ಕುಳಿತುಕೊಂಡಿದ್ದ ತನ್ನ ಎಡ ಕಾಲು ಸದರಿ ಕಾರಿನ ಬಲ ಭಾಗಕ್ಕೆ ಸಿಕ್ಕಿ ತನ್ನ ತೊಡೆಯು ಮುರಿದಿರುತ್ತೆ. ನಂತರ ತನ್ನನ್ನು ತನ್ನ ಅಣ್ಣ ಗಿರೀಶ್ ರವರು ಯಾವುದೋ ಕಾರಿನಲ್ಲಿ ಕುಳಿಸಿಕೊಂಡು ದೇವನಹಳ್ಳಿ ನಗರದ ಆಕಾಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿರುತ್ತಾನೆ. ಈ ಅಪಘಾತಕ್ಕೆ ಆಟೋ ಚಾಲಕ ಮುನಿಯಲ್ಲಪ್ಪ ರವರು ಆಟೋವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕಾರಿಗೆ ಡಿಕ್ಕಿ ಹೊಡೆಸಿದ್ದರಿಂದ ಈ ಘಟನೆ ನಡೆದಿರುತ್ತೆ. ಆದ್ದರಿಂದ ಆಟೋ ಚಾಲಕ ಮುನಿಯಲ್ಲಪ್ಪ ಬಿನ್ ಮುನಿಯಪ್ಪ, 34 ವರ್ಷ, ಬೈಚಾಪುರ ಗ್ರಾಮ, ದೇವನಹಳ್ಳಿ ತಾಲ್ಲೂಕು ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ನೀಡಿದ ಹೇಳಿಕೆಯ ಮೇರೆಗೆ ಈ ಪ್ರ.ವ.ವರದಿ.