ದಿನಾಂಕ :24/01/2021 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.20/2021 ಕಲಂ.379 ಐ.ಪಿ.ಸಿ:-
ದಿನಾಂಕ 23/11/2021 ರಂದು ಸಂಜೆ 18-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ. ಬಂಡಿ ಹರಿ ಬಿನ್ ಬಿ.ವೆಂಕಟರಮಣ, 26 ವರ್ಷ, ಯರುಕುಲ ಜನಾಂಗ, ಜರಪ್ಪಲ್ಲಿ ಕಾಲೋನಿ, ಬಿ ಕೊತ್ತಕೋಟ ಮಂಡಲಂ, ತಬ್ಬಾಳ್ಳಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ, ಆಂದ್ರಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೆನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ:05/12/2020 ರಂದು ನಾನು ನಮ್ಮ ಗ್ರಾಮದಿಂದ ಅನಂತಪುರಂ ಜಿಲ್ಲೆಯ ಎನ್. ಎಸ್ ಗೇಟ್ ಗ್ರಾಮಕ್ಕೆ ನನ್ನ ಬಾವಮೈದುನನ ಮದುವೆಗೆಂದು ನನ್ನ ಬಾಬತ್ತು AP-39AC3192 TVS STARCITY ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಸಂಜೆ ಸುಮಾರು 4:45 ಗಂಟೆ ಸಮಯದಲ್ಲಿ ಟೋಲ್ ಗೇಟ್ ಗಿಂತ ಮುಂದೆ ಕಿ.ಮೀಗಳ ದೊಡ್ಡನಾಮಫಲಕದ ಬಳಿ ಎನ್.ಹೆಚ್ 44 ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಯಿಗಳ ಹಿಂಡು ಅಡ್ಡ ಬಂದಿದ್ದರಿಂದ ಆಕಸ್ಮಿಕವಾಗಿ ನಾನು ರಸ್ತೆಯಲ್ಲಿ ಬಿದ್ದಾಗ, ನನಗೆ ಗಾಯಗಳಾದವು. ಜಖಂಗೊಂಡಿರುವ ನನ್ನ ಬಾಬತ್ತು ವಾಹನವನ್ನು ರಸ್ತೆ ಬದಿಯಲ್ಲಿಯೇ ವಾಹನವನ್ನು ನಿಲ್ಲಿಸಿದ್ದು, ಆಂಬುಲೆನ್ಸಿನಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಆಸ್ಪತ್ರೆಗೆ ಬಂದಿರುತ್ತೇನೆ. ನಂತರ ತಿರುಪತಿ ಇತರೆ ಕಡೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ದಿನಾಂಕ:07/12/2020 ರಂದು ನನ್ನ ಸಂಬಂಧಿಕರನ್ನು ಸ್ಥಳಕ್ಕೆ ಕಳುಹಿಸಿದ್ದು ನೋಡಲಾಗಿ ದ್ವಿಚಕ್ರ ವಾಹನ ಸ್ಥಳದಲ್ಲಿ ಇರಲಿಲ್ಲವೆಂದು ತಿಳಿಸಿದರು. ನಾನು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡು ಈ ದಿನ 23/01/2021 ರಂದು ಸ್ಥಳಕ್ಕೆ ಬಂದು ನೋಡಲಾಗಿ ನಾನು ನಿಲ್ಲಿಸಿದ್ದ ಸ್ಥಳದಲ್ಲಿ ವಾಹನ ಇರಲಿಲ್ಲ. ಯಾರೋ ಕಳ್ಳರು ಅದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಆದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ಸುಮಾರು 35,000/- ರೂ. ಬೆಲೆ ಬಾಳುವ ನನ್ನ ಬಾಬತ್ತು AP-39AC3192 TVS STARCITY ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.
2) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.21/2021 ಕಲಂ.78(3) ಕೆ.ಪಿ ಆಕ್ಟ್:-
ದಿನಾಂಕ:23-01-2021 ರಂದು ಪಿಎಸ್ ಐ ಸುನೀಲ್ ಕುಮಾರ್ ಜಿ ಕೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ಈ ಮೂಲಕ ಸುನೀಲ್ ಕುಮಾರ್ ಜಿ.ಕೆ. ಪಿ.ಎಸ್.ಐ ಬಾಗೇಪಲ್ಲಿ ಪೊಲೀಸ್ ಠಾಣೆ ಆದ ನಾನು ನಿಮಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ 23-01-2021 ರಂದು ರಂದು ಮದ್ಯಾಹ್ನ 12.00 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ ಡಿವಿಜಿ ರಸ್ತೆಯಲ್ಲಿರುವ ಮಟನ್ ಮಾರ್ಕೆಟ್ ವೃತ್ತದ ರಸ್ತೆಯ ಪಕ್ಕದಲ್ಲಿ ಹಣ್ಣಿನ ಅಂಗಡಿಯ ಬಳಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಗಳಾದ ಪಿ.ಸಿ-214 ಅಶೋಕ ದಿನಾಂಕ; 23-01-2021 ರಂದು ಮದ್ಯಾಹ್ನ 1.10 ಗಂಟೆಗೆ ಪಿ ಎಸ್ಐ ಸಾಹೇಬರು ಠಾಣೆಗೆ ಹಾಜರಾಗಿ ತಂದು ಹಾಜರುಪಡಿಸಿದ ರವರೊಂದಿಗೆ, ಸರ್ಕಾರಿ ಜೀಫ್ ಸಂಖ್ಯೆ ಕೆಎ-40 ಜಿ-537 ವಾಹನದಲ್ಲಿ ಜೀಪ್ ಚಾಲಕ ಅಲ್ತಾಫ್ ಪಾಷಾ ಎಹೆಚ್ ಸಿ 34 ರವರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 12.10 ಗಂಟೆಗೆ ಹೋಗಿ, ಮಟನ್ ಮಾರ್ಕೇಟ್ ವೃತ್ತದಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಹೋಗಿ ನೋಡಲಾಗಿ, ಯಾರೋ ಒಬ್ಬ ಆಸಾಮಿ ಹಣ್ಣಿನ ಅಂಗಡಿಯ ಬಳಿ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು ಬರೆಸಿ 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ ಬಳಿ ಪರಿಶೀಲಿಸಲಾಗಿ ವಿವಿಧ ರೂ.ಹಣ ಇದ್ದು, ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಷಫೀಉ್ಲಲ್ಲಾ ಬಿನ್ ಲೇಟ್ ದಸ್ತಗೀರ್ ಸಾಬ್, 33 ವರ್ಷ, ಮುಸ್ಲಿಂ ಜನಾಂಗ, ಹಣ್ಣಿನ ವ್ಯಾಪಾರ, ವಾಸ ಕೊಡಿಕೊಂಡ ರಸ್ತೆ, 19 ನೇ ವಾರ್ಡ, ಬಾಗೇಪಲ್ಲಿ ಪುರ ಎಂತ ಅಂಕಿಗಳು ಬರೆದಿರುವ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 520/-ತಿಳಿಸಿದ್ದು ಸದರಿ ಆಸಾಮಿಗೆ ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಆತನು ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ಪಂಚಾಯ್ತಿದಾರರ ಸಮಕ್ಷಮ ಮದ್ಯಾಹ್ನ 12.15 ಗಂಟೆಯಿಂದ 1.00 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ, ಪಂಚನಾಮೆ, ಮಾಲು ಮತ್ತು ಆಸಾಮಿಯನ್ನು ಮದ್ಯಾಹ್ನ 1.10 ಗಂಟೆಗೆ ಠಾಣೆಯಲ್ಲಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಆಸಾಮಿಯ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಮೇರೆಗೆ ಠಾಣೆಯಲ್ಲಿ ಎನ್.ಸಿ.ಆರ್ 30/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿನಾಂಕ: 24-01-2021 ರಂದು ಬೆಳಿಗ್ಗೆ 8-30 ಗಂಟೆಗೆ ಘನ ನ್ಯಾಯಾಲಯದ ಪಿ.ಸಿ 439 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.
3) ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.04/2021 ಕಲಂ.279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-
ದಿನಾಂಕ:-22/01/2021 ರಂದು ಬೆಳಿಗ್ಗೆ 08-00 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ.ಮುನಿರಾಜು ಬಿನ್ ಮುನಿಕೃಷ್ಣಪ್ಪ 22 ವರ್ಷ, ಲಾರಿ-ಕ್ಲೀನರ್ ಕೆಲಸ, ವಾರ್ಡ್ ನಂ-04, ಕುರುಬರಪೇಟೆ, ಶಿಡ್ಲಘಟ್ಟ ಟೌನ್ ಮತ್ತು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ರವರಿಂದ ಪಡೆದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ತಾನು ದಿನಾಂಕ:-21/01/2021 ರಂದು ಕೆಲಸದ ನಿಮಿತ್ತ ಮನೆಯಿಂದ ಚಿಕ್ಕಬಳ್ಳಾಪುರಕ್ಕೆ ಬರಲು ಯಾವುದೋ ದ್ವಿಚಕ್ರವಾಹನದಲ್ಲಿ ಚಿಕ್ಕಬಳ್ಳಾಪುರದ ಡಿಸಿ ಕಛೇರಿವರೆಗೂ ಬಂದು ಅಲ್ಲಿಂದ ದ್ವಿಚಕ್ರವಾಹನವನ್ನು ಇಳಿದು ಡಿಸಿ ಕಛೇರಿಯಿಂದ ಚಿಕ್ಕಬಳ್ಳಾಪುರಕ್ಕೆ ಕಾಲ್ನಡಿಗೆಯಲ್ಲಿ ಬರಲು ರಾತ್ರಿ ಸುಮಾರು 9-30 ಗಂಟೆಯ ಸಮಯದಲ್ಲಿ ಶಿಡ್ಲಘಟ್ಟ – ಚಿಕ್ಕಬಳ್ಳಾಪುರ ಎನ್.ಎಚ್-234 ರಸ್ತೆಯ ಸರ್.ಎಮ್.ವಿ ಶಾಲೆಯ ಮುಂಭಾಗದ ರಸ್ತೆಯ ಬಳಿ ಬರುತ್ತಿದ್ದಾಗ ಹಿಂದಿನಿಂದ ಶಿಡ್ಲಘಟ್ಟ ಕಡೆಯಿಂದ ಬಂದ ಯಾವುದೋ ದ್ವಿಚಕ್ರವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ತನಗೆ ಡಿಕ್ಕಿ ಹೊಡೆಸಿದ ಪರಿಣಾಮ ತಾನು ಠಾರ್ ರಸ್ತೆಯಲ್ಲಿ ಬಿದ್ದಾಗ ತನಗೆ ತಲೆಯ ಹಿಂಭಾಗ, ಬಲ ಕೆನ್ನೆಗೆ, ಬಲ ಕಣ್ಣಿನ ಬಳಿ, ಎಡ ಮೊಣಕಾಲಿನ ಬಳಿ ರಕ್ತ ಗಾಯಗಳಾಗಿ ಹೊಟ್ಟೆಗೆ ತರಚಿದ ಗಾಯಗಳಾಗಿದ್ದು, ತಕ್ಷಣ ಅಲ್ಲಿನ ಸ್ಥಳೀಯರು ಉಪಚರಿಸಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಸದರಿ ಅಪಘಾತ ಪಡಿಸಿದ ದ್ವಿಚಕ್ರವಾಹನ ಸವಾರ ಅಪಘಾತ ಪಡಿಸಿದ ಸ್ಥಳದಿಂದ ವಾಹನ ಸಮೇತ ಪರಾರಿಯಾಗಿದ್ದು, ಅಪಘಾತ ಪಡಿಸಿ ಸ್ಥಳದಿಂದ ಹೊರಟು ಹೋದ ದ್ವಿಚಕ್ರವಾಹನ ಮತ್ತು ಸವಾರನನ್ನು ಪತ್ತೆಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಠಾಣೆಗೆ ಬಂದು ದಿನಾಂಕ:-22/01/2021 ರಂದು ಬೆಳಿಗ್ಗೆ 09-00 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.
4) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.37/2021 ಕಲಂ.15(ಎ) ಕೆ.ಇ ಆಕ್ಟ್:-
ದಿನಾಂಕ: 24/01/2021 ರಂದು ಮದ್ಯಾಹ್ನ 12.30 ಗಂಟೆಗೆ ಠಾಣೆಯ ಸಿ.ಹೆಚ್.ಸಿ-167 ವಿಜಯಕುಮಾರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 24/01/2021 ರಂದು ಬೆಳಿಗ್ಗೆ ತಾನು ಮತ್ತು ಠಾಣೆಯ ಮ.ಪಿ.ಸಿ-479 ಶ್ರೀಮತಿ ರೇಖಾ ರವರು ಮಾನ್ಯ ಪಿ.ಎಸ್.ಐ ರವರ ಸೂಚನೆಯಂತೆ ಗಸ್ತು ಕರ್ತವ್ಯಕ್ಕೆ ಹೋಗಿದ್ದು, ಠಾಣಾ ವ್ಯಾಪ್ತಿಯ ಕರಿಯಪ್ಪಲ್ಲಿ, ಚೊಕ್ಕರೆಡ್ಡಿಹಳ್ಳಿ ಗ್ರಾಮಗಳ ಕಡೆಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಬೆಳಿಗ್ಗೆ 10.30 ಗಂಟೆಗೆ ಕೃಷ್ಣರಾಜಪುರ ಗ್ರಾಮದ ಬಳಿಗೆ ಹೋದಾಗ ಬಡಗವಾರಹಳ್ಳಿ ಗ್ರಾಮದ ವಾಸಿ ಮುನಿರೆಡ್ಡಿ ಬಿನ್ ನಾರೆಪ್ಪ ಎಂಬುವರು ಬಡಗವಾರಹಳ್ಳಿ ಗೇಟ್ ನಲ್ಲಿರುವ ಅವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮೀದಾರರಿಂದ ತನಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಧಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಹಾಗೂ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಸ್ಥಳದಿಂದ ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ಮುನಿರೆಡ್ಡಿ ಬಿನ್ ನಾರೆಪ್ಪ, 34 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಬಡಗವಾರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ಕಂಪನಿಯ 90 ML ನ 04 ಟೆಟ್ರಾ ಪ್ಯಾಕೆಟ್ ಗಳು, 2) ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 90 ML ನ 02 ಮದ್ಯದ ಟೆಟ್ರಾ ಪಾಕೇಟ್ ಗಳು, 3) ಒಂದು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಒಂದು ಖಾಲಿ ಪ್ಲಾಸ್ಟಿಕ್ ಬಾಟಲ್ 4) 02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಬೆಳಿಗ್ಗೆ 11-00 ಗಂಟೆಯಿಂದ ಮದ್ಯಾಹ್ನ 12-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೇವೆ. ಆದ್ದರಿಂದ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ ಮುನಿರೆಡ್ಡಿ ಬಿನ್ ನಾರೆಪ್ಪ ರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.
5) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.20/2021 ಕಲಂ.15(ಎ),32(3) ಕೆ.ಇ ಆಕ್ಟ್:-
ದಿನಾಂಕ: 17/01/2021 ರಂದು ಮದ್ಯಾಹ್ನ 12-45 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ಗೆದರೆ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಸಿಬ್ಬಂದಿಯಾದ ಹೆಚ್.ಸಿ-224 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-1222 ರಲ್ಲಿ ಗೆದರೆ ಗ್ರಾಮದಲ್ಲಿ ಹೋಗಿ ಅಲ್ಲಿ, ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಮದ್ಯಾಹ್ನ 1-00 ಗಂಟೆಗೆ ಹೋಗಿ ಸಂಜ್ಞೆಯ ಅಪರಾಧವೆಂದು ಪಂಚರನ್ನು ಬರಮಾಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಅದು ಅಸಂಜ್ಞೆ ಅಪರಾಧವಗಿರುತ್ತದೆ. ಆದ್ದರಿಂದ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಳ್ಳವಷ್ಟರಲ್ಲಿ ಆರೋಪಿಯು ಕೃತ್ಯವನ್ನು ಮರೆಮಾಚುವ ಸಾದ್ಯತೆ ಇರುವುದರಿಂದ ಪಂಚರ ಸಮಕ್ಷದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿಯು ತನ್ನ ಅಂಗಡಿಯ ಮುಂದೆ ಸಾವರ್ಜನಿಕ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಅಂಗಡಿ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ‍ಗ್ಲಾಸ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯು ಓಡಿ ಹೋಗಲು ಪ್ರಯತ್ನಿಸಿದಾಗ, ಹೆಚ್.ಸಿ-224 ವೆಂಕಟೇಶ್ ರವರು ಹಿಂಬಾಲಿಸಿ ಹಿಡಿದುಕೊಂಡಿರುತ್ತಾರೆ. ಸದರಿ ಆಸಾಮಿ ಹೆಸರು ವಿಳಾಸ ಕೇಳಲಾಗಿ, ನವೀನ್ ಬಿನ್ ನಾಗರಾಜಪ್ಪ, 33 ವರ್ಷ, ಸಾದರು, ಜಿರಾಯ್ತಿ, ವಾಸ ಗೆದರೆ ಗ್ರಾಮ ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ನವೀನ್ ರವರ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ.ಎಲ್.ಸಾಮರ್ಥ್ಯದHAY WARDS CHEERS WHISKY ಯ 21 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 1 ಲೀಟರ್ 890 ಎಂ.ಎಲ್ ಆಗಿರುತ್ತೆ. ಇವುಗಳ ಒಟ್ಟು ಬೆಲೆ 735 /- ರೂ.ಗಳಾಗಿರುತ್ತೆ. ಸ್ಥಳದಲ್ಲಿ 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 02 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಆಸಾಮಿಗೆ ಸಾರ್ವಜನಿಕ ಸ್ಥಳದಲ್ಲಿ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇದೆಯೇ ಎಂದು ಕೇಳಲಾಗಿ ತಮ್ಮ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾರೆ. ಆದ್ದರಿಂದ ಸ್ಥಳದಲ್ಲಿ ಸಂಜೆ 4-00 ರಿಂದ ಸಂಜೆ 5-00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 21 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS WHISKY ಯ 02 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಮದ್ಯಾಹ್ನ 2-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋ ದೂರಿನೊಂದಿಗೆ ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದು, ಮೇಲ್ಕಂಡ ಆಸಾಮಿ ಮತ್ತು ಮಾಲುಗಳನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಕೈಗೊಳ್ಳಲು ಕೋರಿದ್ದರ ಮೇರೆಗೆ ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಿರುತ್ತೆ. ದಿನಾಂಕ 23/01/2020 ರಂದು ನ್ಯಾಯಾಲಯದ ಆದೇಶದ ವರದಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.
6) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.21/2021 ಕಲಂ. 323,324,504,506 ಐ.ಪಿ.ಸಿ:-
ದಿನಾಂಕ 23/01/2021 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿ ಶ್ರೀಮತಿ ಗಂಗಮ್ಮ ಕೋಂ ಅಹೋ ಬಾಲರಾಜು, 37 ವರ್ಷ, ಪ.ಜಾತಿ, ಗಂಗಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ತಾನು ಮೇಲ್ಕಂಡಂತೆ ವಾಸವಾಗಿರುತ್ತೇನೆ. ತಾನು ಗ್ರಾಮದಲ್ಲಿ ಅಲಾಯಿದೆಯಾಗಿ ವಾಸವಾಗಿರುತ್ತೇನೆ. ನಮ್ಮ ತಂದೆ, ತಾಯಿ ಹಾಗೂ ತನ್ನ ತಮ್ಮ ನರಸಪ್ಪ ಆತನ ಹೆಂಡತಿ ರೂಪ ಒಟ್ಟಿಗೆ ಗ್ರಾಮದಲ್ಲಿ ವಾಸವಾಗಿರುತ್ತಾರೆ. ತನ್ನ ತಮ್ಮ ನರಸಪ್ಪ ಕೂಲಿ ಕೆಲಸ ಮಾಡಿಕೊಂಡಿದ್ದು, ದಿನ ನಿತ್ಯ ಕುಡಿಯುವ ಅಭ್ಯಾಸವಿರುತ್ತೆ. ಆತನು ಪ್ರತಿನಿತ್ಯ ಕುಡಿದು ಬಂದು ತನ್ನ ಹೆಂಡತಿಯ ಮೇಲೆ ವಿನಾ ಕಾರಣ ಗಲಾಟೆ ಮಾಡುತ್ತಿದ್ದನು. ಅದರಂತೆ ದಿನಾಂಕ: 23-01-2021 ರಂದು ರಾತ್ರಿ ಸುಮಾರು 9-15 ಗಂಟೆಯಲ್ಲಿ ನಾನು ನಮ್ಮ ಮನೆಯ ಬಳಿ ಇದ್ದಾಗ ನಮ್ಮ ತಂದೆಯ ಮನೆಯ ಬಳಿ ಗಲಾಟೆಯಾಗುವ ಶಬ್ದ ಕೇಳಿ, ತಾನು ಅಲ್ಲಿಗೆ ಹೋಗಿ ನೋಡಲಾಗಿ ತನ್ನ ತಮ್ಮ ನರಸಪ್ಪ ಕುಡಿದಿದ್ದು, ಆತನ ಹೆಂಡತಿಯ ಮೇಲೆ ಗಲಾಟೆ ಮಾಡುತ್ತಿದ್ದನು. ಆಗ ಅಲ್ಲಿಯೇ ಇದ್ದ ತನ್ನ ತಂದೆ ಆಂಜಿನಪ್ಪ ಮತ್ತು ನರಸಪ್ಪನ ಅತ್ತೆ ನರಸಮ್ಮ ರವರು ನನ್ನ ತಮ್ಮ ನರಸಪ್ಪನಿಗೆ ಬುದ್ದಿವಾದ ಹೇಳಿ ಗಲಾಟೆ ಮಾಡದಂತೆ ಇರಲು ತಿಳಿಸಿದರು. ಆಗ ನರಸಪ್ಪ ಕುಡಿದ ಅಮಲಿನಲ್ಲಿ ನೀವು ಯಾರು ನನಗೆ ಬುದ್ದಿವಾದ ಹೇಳು ಅಂತ ಇವರುಗಳನ್ನು ಕೆಟ್ಟ ಮಾತುಗಳಿಂದ ಬೈದು, ಅಲ್ಲಿಯೇ ಇದ್ದ ನೀಲಗಿರಿ ದೊಣ್ಣೆಯಿಂದ ನಮ್ಮ ತಂದೆ ಆಂಜಿನಪ್ಪನಿಗೆ ಎಡಗೈ, ಎಡಕಿವಿಗೆ ಹೊಡೆದು ರಕ್ತಗಾಯಪಡಿಸಿ ತಳ್ಳಿದ್ದು, ನಮ್ಮ ತಂದೆ ಕೆಳಕ್ಕೆ ಬಿದ್ದಾಗ ಅವರ ಹಣೆಗೆ ತರಚಿದ ರಕ್ತಗಾಯವಾಗಿರುತ್ತೆ. ನಂತರ ನರಸಮ್ಮ ರವರನ್ನು ಸಹ ಅದೆ ದೊಣ್ಣೆಯಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿ, ನೀವುಗಳು ನನ್ನ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ಯಾರೋ ನಮ್ಮ ಗ್ರಾಮದವರು ಸದರಿ ಗಲಾಟೆಯನ್ನು ಬಿಡಿಸಿ, ಗಾಯಗಳಾಗಿರುತ್ತವೆ. ಕೂಡಲೇ ಅಲ್ಲಿದ್ದ ಯಾರೂ ಅಂಬುಲೆನ್ಸ್ ಗೆ ಪೊನ್ ಮಾಡಿದ್ದು, ಅಲ್ಲಿಗೆ ಬಂದು ಆಂಬುಲೆನ್ಸ್ ನಲ್ಲಿ ನಮ್ಮ ತಂದೆ ಆಂಜಿನಪ್ಪ ಹಾಗೂ ನರಸಮ್ಮ ರವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುತ್ತೆ. ನಮ್ಮ ತಂದೆ ಆಂಜಿನಪ್ಪ ಹಾಗೂ ನರಸಮ್ಮ ರವರ ಮೇಲೆ ಹಲ್ಲೆ ಮಾಡಿರುವ ನರಸಪ್ಪ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿದೆ.
7) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.15/2021 ಕಲಂ. 323,324,504,506 ಐ.ಪಿ.ಸಿ:-
ದಿನಾಂಕ: 24/01/2021 ರಂದು ಮದ್ಯಾಹ್ನ 2-15 ಗಂಟೆಗೆ ಪಿರ್ಯಾದಿದಾರರಾದ ಗಂಗಾಧರ ಎಂ ಬಿನ್ ಮೈಲಾರಪ್ಪ, 40 ವರ್ಷ, ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ ಬಿ ಬೊಮ್ಮಸಂದ್ರ ಗ್ರಾಮ, ಡಿಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ: 21/01/2020 ರಂದು ರಾತ್ರಿ ಸುಮಾರು 9-30 ಗಂಟೆಯಲ್ಲಿ ನಮ್ಮ ಗ್ರಾಮದ ನಮ್ಮ ಜನಾಂಗದ ರಾಜೇಶ್ ಬಿನ್ ನರಸಿಂಹಪ್ಪ ರವರು ನಮ್ಮ ಮನೆಯ ಹಿಂಭಾಗದ ಸೊಂದಿನಲ್ಲಿ ನಿಂತಿದ್ದಾಗ ನಾನು ರಾಜೇಶ ರವರಿಗೆ ಏಕೆ ಇಲ್ಲಿದ್ದೀಯಾ ಎಂದು ಕೇಳಿದಾಗ ರಾಜೇಶ ರವರು ನನಗೆ ಈ ಸೊಂದು ಏನೂ ನಿಮ್ಮಪ್ಪನದ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ರಾಜೇಶ್ ರವರು ನನಗೆ ಮೈಮೇಲೆ ಹಾಗೂ ಮೂಗಿನ ಎಡ ಭಾಗ ಹೊಡೆದು ರಕ್ತಗಾಯಪಡಿಸಿ ಕಾಲಿನಿಂದ ಮೈಮೇಲೆ ಒದ್ದು ಅಲ್ಲಿಯೇ ಇದ್ದ ಕಟ್ಟಿಗೆಯ ರಿಪೀಸ್ ನಿಂದ ನನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ನನಗೆ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾನೆ. ಆಗ ಅಲ್ಲಿಯೇ ಇದ್ದ ನಮ್ಮ ಮನೆಯ ಪಕ್ಕದ ವಾಸಿಗಳಾದ ರವಿ ಬಿನ್ ಗೆದೆರೆ ಗಂಗಪ್ಪ ಮತ್ತು ಶಂಕರಪ್ಪ ಬಿನ್ ಗಂಗಾಧರಪ್ಪ ರವರು ಜಗಳವನ್ನು ಬಿಡಿಸಿದರು. ನಂತರ ನಾನು ಯಾವುದೋ ಆಟೋದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿರುತ್ತೇನೆ. ಗ್ರಾಮದ ಹಿರಿಯರು ರಾಜಿ ಮಾಡುತ್ತೇವೆಂದು ತಿಳಿಸಿದ್ದು ರಾಜಿಯಾಗದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಈ ದಿನ ದಿನಾಂಕ: 24/01/2021 ರಂದು ಠಾಣೆಯಲ್ಲಿ ದೂರು ನೀಡುತ್ತಿದ್ದು ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮತ್ತು ಕಟ್ಟಿಗೆಯಿಂದ ಹೊಡೆದು ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿದ ರಾಜೇಶ್ ಬಿನ್ ನರಸಿಂಹಪ್ಪ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ಪ್ರ.ವ.ವರದಿ.
8) ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.08/2021 ಕಲಂ. 87 ಕೆ.ಪಿ ಆಕ್ಟ್:-
ದಿನಾಂಕ:23-01-2021 ರಂದು ಸಂಜೆ 6-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿಯಾದ ಸಿಪಿಸಿ-174 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಪಡೆದು ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ, ದಿನಾಂಕ:23-01-2021 ರಂದು ಮಧ್ಯಾಹ್ನ 2-30 ಗಂಟೆಯ ಸಮಯದಲ್ಲಿ ಪಿ.ಎಸ್.ಐ ಶ್ರೀ ಎನ್.ರತ್ನಯ್ಯರವರು ಗಸ್ತಿನಲ್ಲಿದ್ದಾಗ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ಪಾತಪಾಳ್ಯ ಗ್ರಾಮದ ಬಾಗೇಪಲ್ಲಿ-ಚೇಳೂರು ರಸ್ತೆಯ ಪೂರ್ವ ದಿಕ್ಕಿಗೆ ಇರುವ ಹುಣಸೇ ಮರದ ಕೆಳಗೆ ಸರ್ಕಾರಿ ಜಾಗದಲ್ಲಿರುವ ಹುಣಸೇಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವನ್ನಾಗಿಟ್ಟುಕೊಂಡು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರಾದ ಸಿಪಿಸಿ-148 ದನಂಜಯ, ಪಿಸಿ-234 ಸುರೇಶ ಕೊಂಡಗೂಳಿ, ಪಿಸಿ-119 ಗಿರೀಶ್, ಸಿಪಿಸಿ-281 ಶಂಕರಪ್ಪ ಕಿರವಾಡಿ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-59 ವಾಹನದಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು 100 ರೂ ಅಂದರ್, 100 ರೂ ಬಾಹರ್ ಎಂದು ಕೂಗಿಕೊಂಡು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ನಾವು ದಾಳಿ ಮಾಡಲು ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ಎಲ್ಲಿಯೂ ಕದಲಬೇಡಿ ಎಂದು ಎಚ್ಚರಿಕೆ ನೀಡಿ ವಶಕ್ಕೆ ಪಡೆದು ಹೆಸರು ಮತ್ತು ವಿಳಾಸ ಕೇಳಲಾಗಿ 1) ಕೃಷ್ಣಪ್ಪ ಬಿನ್ ಲೇಟ್ ತಲಾರಿ ಯಾಮನ್ನ, 60ವರ್ಷ, ನಾಯಕರು, ಜಿರಾಯ್ತಿ, ಪಾತಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 2) ಮುಸ್ತಾಪ್ ಬಿನ್ ಖಾಸಿಂ ಪೀರ್, 55ವರ್ಷ, ಮುಸ್ಲಿಂ ಜನಾಂಗ, ಜಿರಾಯ್ತಿ, ಪಾತಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 3) ವೆಂಕಟರವಣ ಬಿನ್ ಕೃಷ್ಣಪ್ಪ, 45ವರ್ಷ, ನಾಯಕರು, ಜಿರಾಯ್ತಿ, ಪಾತಪಾಳ್ಯ ಗ್ರಾಮ ಬಾಗೇಪಲ್ಲಿ ತಾಲ್ಲೂಕು ಮತ್ತು 4) ಭಾಷಾ ಬಿನ್ ಹುಸೇನ್ ಸಾಬ್, 62ವರ್ಷ, ಮುಸ್ಲಿಂ ಜನಾಂಗ, ಜಿರಾಯ್ತಿ, ಪಾತಪಾಳ್ಯ ಗ್ರಾಮ ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಸದರಿಯವರನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ 1,650/- ರೂ ನಗದು ಹಣ, ಒಂದು ಒಂದು ನ್ಯೂಸ್ ಪೇಪರ್ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಮಧ್ಯಾಹ್ನ 3-00 ರಿಂದ 4-00 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿಗಳು, ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿದ್ದು, ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.
9) ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.07/2021 ಕಲಂ. 406,420,465,471,468,34 ಐ.ಪಿ.ಸಿ:-
ದಿನಾಂಕ.23.01.2021 ರಂದು ಸಂಜೆ 5.30 ಗಂಟೆಗೆ ಚಿಕ್ಕಬಳ್ಳಾಪುರ ನಗರ ಠಾಣೆ ಮೊ.ಸಂ.86/2020 ರ ಕೇಸಿನ ಕಡತವನ್ನು ಮಾನ್ಯ ಪೊಲೀಸ್ ಅದೀಕ್ಷಕರ ಕಚೇರಿಯಿಂದ ಟಪಾಲ್ ಮೂಲಕ ಪಡೆದಿದ್ದರ ಸಾರಾಂಶವೇನಂದರೆ, ದಿನಾಂಕ: 10-12-2020 ರಂದು ಈ ಕೇಸಿನ ಪಿರ್ಯಾಧಿಯಾದ ಶ್ರೀ ನರಸಿಂಹಮೂರ್ತಿ ಬಿ.ಎನ್, ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ ತನ್ನ ಮಾಲಿಕತ್ವದ ನಿವೇಶನಗಳ ಸಹಿತ ಜಮೀನು ಶಿಡ್ಲಘಟ್ಟ ತಾಲ್ಲೂಕು ಸಾದಲಿ ಹೋಬಳಿ ಸಾದಲಿ ಗ್ರಾಮದ ಸರ್ವೆ ನಂ:67/1 ರಲ್ಲಿ 2 ಎಕರೆ 10 ಗುಂಟೆ ಜಮೀನು ಇದ್ದು ಸದರಿ ಜಮೀನನನ್ನು ಈ ಕೇಸಿನ ಅರೋಪಿಯಾದ ಅರ್ ಶ್ರೀನಿವಾಸಮೂರ್ತಿ ಬಿನ್ ಲೇಟ್ ರಾಮಯ್ಯ ಎನ್.ಜಿ ಗೊಲ್ಲಹಳ್ಳಿ ಗ್ರಾಮ ಹೊಸಕೋಟೆ ತಾಲ್ಲೂಕು ಎಂಬುವವನು ದಿನಾಂಕ:02-04-2018 ರಂದು ಪಿರ್ಯಾಧಿಯ ಹೆಸರಿನಲ್ಲಿ ಇ- ಸ್ಟಾಂಪ್ ಪೇಪರ್ ಖರೀಧಿ ಮಾಡಿ ಅದರಲ್ಲಿ ‘’ ಜನರಲ್ ಫವರ್ ಅಪ್ ಅಟಾರ್ನಿ’’ ಟೈಪ್ ಮಾಡಿಕೊಂಡು ನನ್ನ ಹೆಸರಿನಲ್ಲಿ ಕನ್ನಡದಲ್ಲಿ ನಕಲಿ ಸಹಿ ಮಾಡಿಕೊಂಡು ಅದರನ್ನು ದಿನಾಂಕ: 20-06-2020 ರಂದು ಶಿಡ್ಲಘಟ್ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಣಿ ಮಾಡಿಕೊಂಡಿದ್ದು ನಂತರ ದಿನಾಂಕ: 06-06-2020 ರಂದು ಪಿರ್ಯಾಧಿ ಶ್ರೀ ನರಸಿಂಹಮೂರ್ತಿ ರವರ ಹೆಸರಿನಲ್ಲಿದ್ದ ಜಮೀನನ್ನು ಅರೋಪಿ ಶ್ರೀನಿವಾಸಮೂರ್ತಿ ರವರು ಶಿಡ್ಲಘಟ್ಟ ಉಪನೊಂದಣಾದಿಕಾರಿಗಳ ಕಛೇರಿಯಲ್ಲಿ ಪರಿಶುದ್ದ ಕ್ರಯ ಪತ್ರವನ್ನು ಮಾಡಿಕೊಂಡಿರುತ್ತಾರೆ. ದಿನಾಂಕ:12-10-2020 ರಂದು 1ನೇ ಅರೋಪಿ ಅರ್ ಶ್ರೀನಿವಾಸ ಮೂರ್ತಿ ರವರು 2 ನೇ ಅರೋಪಿ ನೂರ್ ಅಹ್ಮದ್ ಬಿನ್ ಅಬ್ದುಲ್ ಅಜೀಜ್ ಬೆಂಗಳೂರು ಎಂಬುವವರಿಗೆ ಜಮೀನನ್ನು ಶುದ್ದ ಕ್ರಯ ಪತ್ರವನ್ನು ಮಾಡಿ ಪಿರ್ಯಾಧಿ ಶ್ರಿ.ನರಸಿಂಹಮೂರ್ತಿ ಬಿ.ಎನ್, ರವರಿಗೆ ಮೋಸ ಮಾಡಿರುವುದಾಗಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.