ದಿನಾಂಕ :23/10/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.260/2020 ಕಲಂ: 15(A),32(3) ಕೆ.ಇ ಆಕ್ಟ್:-

     ದಿ: 22-10-2020 ರಂದು ಸಂಜೆ 17:15 ಗಂಟೆಗೆ ಪಿ.ಎಸ್.ಐ ರವರು ಮಾಲು, ಮಹಜರ್ ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದುಕೊಂಡಿದ್ದರ ಸಾರಾಂಶ – ದಿನಾಂಕ; 22-10-2020 ಸಂಜೆ 4-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಎನ್.ಹೆಚ್-07 ಹೈವೆಯಲ್ಲಿರುವ ಗ್ರೀನ್ ಪಾರ್ಕ ಡಾಬಾ ಹಿಂಬಾಗ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಯು  ಕಾನೂನು ಬಾಹಿರವಾಗಿ ಮದ್ಯಪಾನ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ  ಶ್ರೀ.ಮುರಳಿ ಹೆಚ್.ಸಿ-14 ಹಾಗೂ ಜೀಪ್ ಚಾಲಕ ಎ.ಹೆಚ್.ಸಿ-34 ಅಲ್ತಾಪ್ ಪಾಷಾ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-537 ವಾಹನದಲ್ಲಿ ಹೊರಟು, ಬಾಗೇಪಲ್ಲಿ ತಾಲ್ಲೂಕು ಕಚೇರಿ ಬಳಿ ಇದ್ದು  ಪಂಚರನ್ನು ಕರೆದು ಮೇಲ್ಕಂಡ ವಿಚಾರವನ್ನು ತಿಳಿಸಿ ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಮೇಲ್ಕಂಡ ಸ್ಥಳಕ್ಕೆ ಸಂಜೆ 4-15 ಗಂಟೆಗೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿಯು ಮದ್ಯಪಾನ ಮಾರಾಟ ಮಾಡುತ್ತಿದ್ದು, ನಮ್ಮನ್ನು ನೋಡಿ, ಓಡಿ ಹೋಗಲು ಪ್ರಯತ್ನಿಸಿದ್ದು, ನಾವು ಪಂಚರ ಸಮಕ್ಷಮ ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಲಕ್ಷ್ಮಿ ನಾರಾಯಣರೆಡ್ಡಿ ಬಿನ್ ಲೇಟ್ ನಂಜರೆಡ್ಡಿ, 50 ವರ್ಷ, ವಕ್ಕಲಿಗರ ಜನಾಂಗ, ಜಿರಾಯ್ತಿ, ವಾಸ ನಿಲಗುಂಬ ಗ್ರಾಮ, ಯಲ್ಲೋಡು ಪಂಚಾಯ್ತಿ, ಗುಡಿಬಂಡೆ ತಾಲ್ಲೂಕು ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 180 ML ನ BAG PIPER DELUXE WHISKY ಯ 08 ಟೆಟ್ರಾ ಪಾಕೇಟ್ ಗಳು , 90 ML ನ HAYWARDS CHEERS WHISKY ಯ 05 ಟೆಟ್ರಾ ಪಾಕೇಟ್ ಗಳು, 90 ML ನ HAYWARDS CHEERS WHISKY ಯ 04 ಟೆಟ್ರಾ ಖಾಲಿ ಪಾಕೇಟ್ ಗಳು, ಮದ್ಯ ಕುಡಿದಿರುವ ಖಾಲಿ 04 ಗ್ಲಾಸ್ ಗಳು ಇರುತ್ತವೆ. ಇವುಗಳು  ಒಟ್ಟು 1890 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ 1023/- ರೂ ಗಳಾಗಿರುತ್ತೆ. ಸದರಿ ಆಸಾಮಿಯನ್ನು ಮದ್ಯ ಮಾರಾಟ ಮಾಡಲು ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗೆ ಇಲ್ಲವೆಂದು ತಿಳಿಸಿದ್ದು, ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಸಂಜೆ 5-15 ಗಂಟೆ ಠಾಣೆಗೆ ಹಾಜರಾಗಿ,  ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ವರದಿಯನ್ನು ನೀಡಿರುತ್ತೇನೆ,ಎಂದು ದೂರು.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.72/2020 ಕಲಂ: 379 ಐ.ಪಿ.ಸಿ:-

     ದಿನಾಂಕ-22/10/2020 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಾಜೇಶ ಬಿನ್ ಹರೀರಾಜು 31 ವರ್ಷ. ರಾಜುಕ್ಷತ್ರೀಯ, ಚಾಲಕ ವೃತ್ತಿ, ವಾರ್ಡ ನಂ-21, 2ನೇ ಕ್ರಾಸ್,ಶಾಂತಿ ನಗರ ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೆನೆಂದರೆ 2012 ನೇ ಸಾಲಿನಲ್ಲಿ ತನ್ನ ಆಣ್ಣನಾದ ರವಿಕುಮಾರ ರವರು ಸ್ವಂತ ಉಪಯೋಗಕ್ಕಾಗಿ HERO HONDA ಕಂಪನಿಯ KA-51-EC-9323 ನಂಬರಿನ PASSION PRO ದ್ವಿ-ಚಕ್ರವಾಹನವನ್ನು ಖರೀದಿಸಿದ್ದು ಸದರಿ ವಾಹನವನ್ನು ಅವರೇ ಚಲಾಯಿಸುತ್ತಿದ್ದು ದಿನಾಂಕ:-10/10/2020 ರಂದು ತನಗೆ ಕೆಲಸದ ನಿಮಿತ್ತ ಓಡಾಡಲು ತಾನು ತನ್ನ ಅಣ್ಣನಿಂದ ಸದರಿ  ದ್ವಿಚಕ್ರ ವಾಹನ ವನ್ನು ತೆಗೆದುಕೊಂಡಿದ್ದು ತಾನು ತನ್ನ ಸ್ವಂತ ಕೆಲಸಕ್ಕೆ ಬಳಸುತ್ತಿದ್ದು ದಿನಾಂಕ-17/10/2020 ರಂದು ತನ್ನ ಕೆಲಸಕ್ಕೆ ಹೋಗಿ ರಾತ್ರಿ 9.30 ಗಂಟೆಯಲ್ಲಿ ವಾಪಸ್ಸು ಮನೆಗೆ ಬಂದು  ನಮ್ಮ ಮನೆಯ ಬಳಿ ನಿಲ್ಲಿಸಿದ್ದು ದಿನಾಂಕ_18/10/2020 ರಂದು ಬೆಳ್ಳಗ್ಗೆ 06 ಗಂಟೆಯಲ್ಲಿ ನೋಡಲಾಗಿ ತನ್ನ ದ್ವಿಚಕ್ರ ವಾಹನ ಕಾಣೆಯಾಗಿರುತ್ತದೆ.ನಂತರ ತಾನು ತನ್ನ ಸ್ನೇಹಿತರು,ಸಂಬಧಿಕರು ಹಾಗೂ ತನ್ನ ಅಣ್ಣನ ಬಳಿ ಚಿಕ್ಕಬಳ್ಳಾಪುರ ನಗರದ ರಸ್ತೆಗಳಲ್ಲಿ ಹುಡುಕಾಡಿದರೂ  ಸಹ ಪತ್ತೇ ಯಾಗಿರುವುದಿಲ್ಲ.ನಮ್ಮ ದ್ವಿಚಕ್ರ ವಾಹನವು ಹೀರೋ ಹೋಂಡಾ ಪ್ಯಾಷನ್ ಪ್ರೋ  ಕೆಂಪು ಮತ್ತು ಕಪ್ಪು ಬಣ್ಣದಿಂದ ಕೂಡಿದ್ದು ಇದರ ಇಂಜಿನ್ ಸಂಖ್ಯೆ-HA10EDCHD29052 ಮತ್ತು ಚಾಸಿಸ್ ಸಂಖ್ಯೆ-MBLHA10EWCHD26469 ಆಗಿರುತ್ತೆ. ದ್ವಿಚಕ್ರ ವಾಹನದ ಅಂದಾಜು ಬೆಲೆ 30.000/- (ಮೂವತ್ತು ಸಾವಿರ) ರೂ ಗಳಾಗಿರುತ್ತದೆ. ಹಾಗೂ ಇದು 2012 ನೇ ಸಾಲಿನ ಮಾಡೆಲ್ ಆಗಿದ್ದು ಸದರಿ ದ್ವಿ-ಚಕ್ರವಾಹನವನ್ನು ಕಳ್ಳತನ ಮಾಡಿರುವ ಯಾರೋ ಕಳ್ಳರನ್ನು ಪತ್ತೇ ಮಾಡಿ  ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದು  ತನ್ನ ದ್ವಿಚಕ್ರ ವಾಹನವನ್ನು ಎಲ್ಲಾ ಕಡೆಗಳಲ್ಲಿ ಹುಡುಕಾಡುತ್ತಿದ್ದರಿಂದ ಈ ದಿನ ದಿನಾಂಕ-22/10/2020 ರಂದು ತಡವಾಗಿ ಠಾಣೆಗೆ ಬಂದು ನೀಡಿದ್ದರ ದೂರಿನ ಮೇರೆಗೆ ಈ ಪ್ರ,ವ.ವರದಿ.

 1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.49/2020 ಕಲಂ: 279,337 ಐ.ಪಿ.ಸಿ:-

     ದಿನಾಂಕ:-22/10/2020 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ ಮುನಿರೆಡ್ಡಿ ನಾಯ್ಕ ಬಿನ್ ನಾಗೇ ನಾಯ್ಕ 24 ವರ್ಷ, ಸುಗಾಲಿ ಜನಾಂಗ, ಎಂ.ಬಿ.ಎ ವಿದ್ಯಾರ್ಥಿ, ಪೆಟ್ಟಿನಲ್ಲ ಕಲ್ಲೂರು ಗ್ರಾಮ, ಟಿ ಸುಂಡಪಲ್ಲಿ ಮಂಡಲಂ, ಕಡಪ ಜಿಲ್ಲೆ, ಆಂದ್ರ ಪ್ರದೇಶ ರಾಜ್ಯ ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ದಿನಾಂಕ:-22/10/2020 ರಂದು ತನಗೆ ಪರಿಚಿತನಿರುವ ಭಾಷಾ ಬಿನ್ ಓಫೂರ್ ಬೇಗ್ 45 ವರ್ಷ, ಹೊಸಕೋಟೆ, ಬೆಂಗಳೂರು ರವರು ತಮ್ಮ KA-03-MF-8869 ರ ಸ್ಕಾರ್ಪಿಯೋ ಕಾರಿನಲ್ಲಿ ರಕ್ತ ಚಂದನದ ತುಂಡುಗಳನ್ನು ತುಂಬಿಕೊಂಡು ಅವುಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲು ದಾರಿ ತೋರಿಸಿದರೆ ತನಗೆ ಹಣ ನೀಡುತ್ತೇನೆ ಎಂತ ಹೇಳಿದ್ದರಿಂದ ತಾನು ಒಪ್ಪಿ ಅವರ ಜೊತೆ KA-03-MF-8869 ರ ಸ್ಕಾರ್ಪಿಯೋ ಕಾರಿನಲ್ಲಿ ಬೆಂಗಳೂರಿಗೆ ಬರಲು ಸುಮಾರು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ಹೈದರಾಬಾದ್ – ಬೆಂಗಳೂರು ಎನ್.ಎಚ್-44 ಹೈವೇ ರಸ್ತೆಯ ಚಿಕ್ಕಬಳ್ಳಾಪುರ ಸಮೀಪ ಬರುತ್ತಿದ್ದಾಗ ಹಿಂದಿನಿಂದ ಬಾಗೇಪಲ್ಲಿ ಕಡೆಯಿಂದ ಬಂದ ಸಿಲ್ವರ್ ಬಣ್ಣದ ಜೀಪಿನ ಚಾಲಕ ವಾಹನವನ್ನು ನಿಲ್ಲಿಸುವಂತೆ ಕೈ-ತೋರಿಸಿ ಸೂಚಿಸಿದ್ದರೂ ಸಹಾ ತಮ್ಮ ಕಾರಿನ ಚಾಲಕ ಬಾಷಾ ರವರು ಅದು ಫಾರೆಸ್ಟ್ ಡಿಪಾರ್ಟ್ಮೆಂಟ್ ನ ಜೀಪು ಎಂತ ಹೇಳಿ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ವಾಹನದ ನಿಯಂತ್ರಣ ತಪ್ಪಿ ಚಿಕ್ಕಬಳ್ಳಾಪುರ ತಾಲ್ಲೂಕಿನ ವಾಪಸಂದ್ರ ಬ್ರಿಡ್ಜ್ ಬಳಿ ಕಾರನ್ನು ರಸ್ತೆಯ ಎಡಭಾಗದಲ್ಲಿ ಪಲ್ಟೀ ಹೊಡೆಸಿದ ಪರಿಣಾಮ ವಾಹನ ಸಮೇತ ರಸ್ತೆತೆಯಲ್ಲಿ ಬಿದ್ದುದ್ದರಿಂದ ತನಗೆ ಬಲ ಮೊಣಕಾಲಿನ ಬಳಿ, ಬಲ ಹಣೆಗೆ, ಬಲ ಕಣ್ಣಿನ ಬಳಿ ಗಾಯಗಳಾಗಿದ್ದು ಸದರಿ ಅಪಘಾತ ಪಡಿಸಿದ ಕಾರಿನ ಚಾಲಕ ಬಾಷಾ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಹಿಂದೆಯೇ ಬರುತ್ತಿದ್ದ ಪಾರೆಸ್ಟ್ ಡಿಪಾರ್ಟ್ಮೆಂಟ್ ನವರಾದ ಅವಿನಾಶ್ ಕೆ ಆರ್ ರವರು ತನ್ನನ್ನು ಉಪಚರಿಸಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಸದರಿ ತನ್ನ ಗಾಯಗಳಿಗೆ ಕಾರಣನಾದ  KA-03-MF-8869 ರ ಸ್ಕಾರ್ಪಿಯೋ ಕಾರಿನ ಚಾಲಕ ಬಾಷಾ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆ ದೂರಿನ ಮೇರೆಗೆ ಸಂಜೆ 7-45 ಗಂಟೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.277/2020 ಕಲಂ: 279,337 ಐ.ಪಿ.ಸಿ:-

     ದಿನಾಂಕ-22/10/2020 ರಂದು ಮದ್ಯಾಹ್ನ 13-00 ಗಂಟೆ ಪಿರ್ಯಾದಿ ಸತೀಶ್ ಬಾಬು ಬಿನ್ ಲೇಟ್ ಜಗನ್ನಾಥಶೆಟ್ಟಿ,45 ವರ್ಷ,ವೈಶ್ಯ ಜನಾಂಗ,ನೇರಳೇಕೆರೆ ಗ್ರಾಮ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ಪಿರ್ಯಾದಿ ರವರು 3 ವರ್ಷಗಳಿಂದ ಹೊಸೂರು ಗ್ರಾಮದಲ್ಲಿ ವಾಸವಿದ್ದು  ದಿನಾಂಕ 27/09/2020 ರಂದು ಬೆಳಿಗ್ಗೆ ಸುಮಾರು 10-15 ಸಮಯದಲ್ಲಿ ಮನೆಯಿಂದ  ಕೊಟಲದಿನ್ನೆ-ಬೈರನಹಳ್ಳಿ ರಸ್ತೆ ಮಾರ್ಗವಾಗಿ ಮಧುಗಿರಿಗೆ ತನ್ನ ಬಾಬ್ತು KA 64 J 2719  ದ್ವಿಚಕ್ರ ವಾಹನದಲ್ಲಿ ಕೊಟಲದಿನ್ನೆ ಗ್ರಾಮ ಬಿಟ್ಟು ನಂಜುಂಡಪ್ಪ ರವರ ಮನೆ ಮುಂಭಾಗ ಹೋಗುತ್ತಿರುವಾಗ ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಗೌರಿಬಿದನೂರು ಕಡೆಗೆ ಬರುತ್ತಿದ್ದ KA 50 Z 5574 ಸಂಖ್ಯೆ ಮರುತಿ  ಸುಜುಕಿ ಕಂಪನಿಯ ಸ್ವಿಪ್ಟ್ ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ ಪರಿಣಾಮ ತನ್ನ ದ್ವಿಚಕ್ರ ವಾಹನ ಸಮೇತ ಕೆಳಗಡೆ ಬಿದ್ದು ತನ್ನ ಎಡಕಾಲು ಮುರಿದು ತಿವ್ರವಾದ ಗಾಯಗಳಾಗಿರುತ್ತವೆ ಮತ್ತು ತನ್ನ ಬೈಕು ಸಹ ಸಂಪೂರ್ಣ ಜಖಂಗೊಂಡಿರುತ್ತೆ ಕಾರಿನ ಚಾಲಕ ಮತ್ತು ಅಲ್ಲಿನ ಸಾರ್ವಜನಿಕರು ಹೊಸೂರುನಲ್ಲಿರು ಖಾಸಗಿ ಮಾನಸ ಅಸ್ವತ್ರೆಗೆ ದಾಖಲಿಸಿದ್ದರು ನಂತರ ಹೆಚ್ಚಿನ ಚಿಕ್ಸಿತೆಗಾಗಿ ಯಲಹಂಕ ಶೂಶ್ರುಷ ಅಸ್ಪತ್ರೆಗೆ ದಾಖಲಾಗಿ ಚಿಕ್ಸಿತೆ ಪಡೆದುಕೊಂಡು ಈ ದಿನ ತಡವಾಗಿ ಬಂದು ದೂರು ನೀಡಿದ್ದು ಈ ಅಪಘಾತ ಪಡಿಸಿದ ಕಾರು ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.173/2020 ಕಲಂ: 87 ಕೆ.ಪಿ ಆಕ್ಟ್:-

     ದಿನಾಂಕ 15/10/2020 ರಂದು ಸಂಜೆ 6:30 ಗಂಟೆಯಲ್ಲಿ ಶ್ರೀ ಪ್ರಸನ್ನ ಕುಮಾರ್ ಪಿ.ಎಸ್.ಐ ರವರು ಠಾಣೆಗೆ ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ: 15/10/2020 ರಂದು ಸಂಜೆ 5:00 ಗಂಟೆಯಲ್ಲಿ ಠಾಣೆಯಲ್ಲಿರುವಾಗ ಗುಪ್ತದಳ ಮಾಹಿತಿ ಸಿಬ್ಬಂದಿ ಲೋಕೇಶ್ HC 214 ರವರು ಬಂದು ನಗರದ ಹನುಮಾನ್ ಮಿಲ್ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಸಮಯದಲ್ಲಿ ಯಾರೋ ಆಸಾಮಿಗಳು ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಇರುವುದಾಗಿ ತಿಳಿಸಿದ್ದು ಕೂಡಲೇ HC-214 ಲೋಕೇಶ್, HC 244 ಗೋಪಿ, PC 318 ದೇವರಾಜು, PC 17 ಲಕ್ಷ್ಮೀನಾರಾಯಣ ಮತ್ತು PC-201 ಸುರೇಶ್ ರವರೊಂದಿಗೆ ಮಾಹಿತಿಯಂತೆ ಸರ್ಕಾರಿ ಜೀಪಿನಲ್ಲಿ ಹನುಮಾನ್ ಮಿಲ್ ಬಳಿ ಹೋಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಹನುಮಾನ್ ಮಿಲ್ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಇಸ್ಪೀಟ್ ಜೂಜಾಟವಾಡುತ್ತಿದ್ದು ಅದರಲ್ಲಿ ಒಬ್ಬ 100 ರೂ ಅಂದರ್ ಹಾಗೂ ಮತ್ತೊಬ್ಬ 100 ರೂ ಬಾಹರ್ ಎಂದು ಕೂಗುತ್ತಿದ್ದರು. ಕೂಡಲೇ ಅವರನ್ನು ಸುತ್ತುವರೆದು ಓಡಿಹೋಗದಂತೆ ಸೂಚನೆಗಳನ್ನು ನೀಡಿ ಸಿಬ್ಬಂದಿ ಸಹಕಾರದಿಂದ ಅವರನ್ನು ಹಿಡಿಯಲು ಹೋದಾಗ ಅಲ್ಲಿಂದ ಕೆಲವರು ಓಡಿಹೋಗಿದ್ದು ಕೆಲವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ನವೀನ್ R ಬಿನ್ ರಾಮಾಂಜಿನಪ್ಪ 26 ವರ್ಷ, ಉಪ್ಪಾರ ಜನಾಂಗ, ಉಪ್ಪಾರ ಕಾಲೋನಿ ಗೌರಿಬಿದನೂರು ನಗರ. 2) ರವಿಕುಮಾರ್ ಬಿನ್ ನಾಗರಾಜು 24 ವರ್ಷ, ಉಪ್ಪಾರ ಜನಾಂಗ ವೈಚಕೂರಹಳ್ಳಿ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಓಡಿಹೋದವರ ಬಗ್ಗೆ ವಿಚಾರಿಸಲಾಗಿ 3) ಮಂಜುನಾಥ ಬಿನ್ ನರಸಿಂಹಪ್ಪ, 4) ಶಂಕರ್ ಉಪ್ಪಾರ ಕಾಲೋನಿ, 5) ಹರೀಶ್ ಬಿನ್ ನಾರಾಯಣಪ್ಪ 24 ವರ್ಷ, ಕೆ.ಇ.ಬಿ ಮುಂಭಾಗ ಗೌರಿಬಿದನೂರು ನಗರ, 6) ಅಶ್ವತ್ಥ ಬಿನ್ ಹನುಮಂತಪ್ಪ, 32 ವರ್ಷ, ಕುರುಬರು ಗೌರಿಬಿದನೂರು ನಗರ, 7) ರಮೇಶ್ ಬಿನ್ ನಾಗರಾಜಪ್ಪ, 32 ವರ್ಷ, ಗೌರಿಬಿದನೂರು ನಗರ ಎಂದು ತಿಳಿಸಿದ್ದು ಸ್ಥಳವನ್ನು ಪರಿಶೀಲನೆ ಮಾಡಲಾಗಿ 100 ರೂ ಗಳ 8 ನೋಟುಗಳು ಇದ್ದು ಒಟ್ಟು 800/- ರೂ ನಗದು ಹಣ  ಹಾಗೂ ಸ್ಥಳದಲ್ಲಿ 52 ಇಸ್ಪೀಟ್ ಎಲೆಗಳು ಇದ್ದವು. ಎಲ್ಲವನ್ನು ಪಂಚರ ಸಮಕ್ಷಮ ಪಂಚನಾಮೆಯ ವಶಕ್ಕೆ ಪಡೆದುಕೊಂಡು ಸಂಜೆ 6:30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ನೀಡಿದ ವರದಿಯ ಮೇರೆಗೆ ಎನ್.ಸಿ ಆರ್ ದಾಖಲಿಸಿರುತ್ತೇನೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.179/2020 ಕಲಂ: 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ:23/10/2020 ರಂದು ಬೆಳಿಗ್ಗೆ8.30 ಗಂಟೆಗೆ ಪಿರ್ಯಾಧಿದಾರರಾದ ಅಬ್ದುಲ್ ರಹಮಾನ್ ಬಿನ್ ದಸ್ತಗಿರ್ ಸಾಬ್ 50 ವರ್ಷ ಮುಸ್ಲಿಂ ಜನಾಂಗ ಕೂಲಿ ವಾಸ ಗೂಳೂರು ಗ್ರಾಮ  ಬಾಗೇಪಲ್ಲಿ ತಾಲ್ಲೂಕು  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನು ತನಗೆ 1 ನೇ ಜಿ.ಎ.ತಬ್ರೇಜ್ ಎಂಬ ಗಂಡು ಮಗ 2ನೇ ಷಾಪೀಯಾ ಎಂಬ ಹೆಣ್ಣು ಮಗಳಿದ್ದು ತನ್ನ ಮಗಳು ಷಾಪೀಯಾ ರವರಿಗೆ ಮದುವೆಯಾಗಿದ್ದು ತನ್ನ ಮಗ ಜಿ.ಎ.ತಬ್ರೇಜ್ ರವರಿಗೆ ಇನ್ನೂ ಮದುವೆಯಾಗದೇ ಇದ್ದು ತನ್ನ ಮಗನಾದ ಜಿ.ಎ.ತಬ್ರೇಜ್ ರವರು ಈಗ್ಗೆ ಸುಮಾರು 02 ತಿಂಗಳನಿಂದ ಬೆಂಗಳೂರಿನ ಕೆ.ಆರ್.ಪುರಂ ನ ಹೆಚ್ಡಿಎಪ್ಸಿ ಬ್ಯಾಂಕ್ ನಲ್ಲಿ ಪಿಲ್ಡ್ ಅಪೀಸರ್ ಆಗಿ ಕೆಲಸ ಮಾಡಿಕೊಂಡು ಬೆಂಗಳೂರನ ಕೆ.ಆರ್.ಪುರಂ ನಲ್ಲಿ ರೂಂ ಮಾಡಿಕೊಂಡಿದ್ದು ವಾರಕ್ಕೆ ಒಂದು ಸಾರಿ ನಮ್ಮ ಊರಿಗೆ ಬಂದು ಹೋಗುತ್ತಿದ್ದ. ದಿನಾಂಕ:22-10-2020 ರಂದು ಮದ್ಯಾಹ್ನ ಸುಮಾರು 01-00 ಗಂಟೆಯಲ್ಲಿ ತನ್ನ ಹೆಂಡತಿಯಾದ ವಹೀದ ರವರು ತನ್ನ ಮಗನಾದ ಜಿ.ಎ.ತಬ್ರೇಜ್ ರವರಿಗೆ ಪೋನ್ ಮಾಡಿ ಗೂಳೂರುಗೆ ಯಾವಗ ಬರುತ್ತಿಯಾ ಎಂದು ಕೇಳಿದ್ದಕ್ಕೆ ತನ್ನ ಮಗನಾದ ಜಿ.ಎ.ತಬ್ರೇಜ್ ರವರು ದಿನಾಂಕ:22-10-2020 ರಂದು ಸಂಜೆ ಗೂಳೂರುಗೆ ಬರುತ್ತೇನೆಂದು ತಿಳಿಸಿದ್ದು ನಂತರ ದಿನಾಂಕ:22-10-2020 ರಂದು ಸಂಜೆ ಸುಮಾರು 7-00 ಗಂಟೆಯಲ್ಲಿ ತನ್ನ ಹೆಂಡತಿಯಾದ ವಹೀದ ರವರು ತನ್ನ ಮಗನಾದ ಜಿ.ಎ.ತಬ್ರೇಜ್ ರವರಿಗೆ ಪೋನ್ ಮಾಡಿದಾಗ ಆತನ ಪೋನ್ ನ್ನು ಯಾರೋ ಬೇರೆಯವರು ರಿಸೀವ್ ಮಾಡಿ ನಿಮ್ಮ ಮಗನಿಗೆ ಗುಡಿಬಂಡೆ ತಾಲ್ಲೂಕು ಚೆಂಡೂರು ಕ್ರಾಸ್ ಹತ್ತಿರ ಬೆಂಗಳೂರಿನಿಂದ ಬಾಗೇಪಲ್ಲಿ ಕಡೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ ಅಪಘಾತವಾಗಿ ಮೃತಪಟ್ಟಿರವುದಾಗಿ ತಿಳಿಸಿದ್ದು ಕೂಡಲೇ ತಾನು ಅಪಘಾತವಾದ ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ತನ್ನ ಮಗನಾದ ಜಿ.ಎ.ತಬ್ರೇಜ್ ರವರು ದಿನಾಂಕ:22-10-2020 ರಂದು ಕೆ.ಎ-53- ಯು-7565 ನೊಂದಣಿ ಸಂಖ್ಯೆಯ  ಹೀರೋ ಹೊಂಡಾ ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನವನ್ನು ಆತನೇ ಚಾಲನೆ ಮಾಡಿಕೊಂಡು ಬೆಂಗಳೂರಿನಿಂದ ತಮ್ಮ ಗ್ರಾಮವಾದ ಗೂಳೂರಿಗೆ ಬರುತ್ತಿದ್ದಾಗ ಸಂಜೆ ಸುಮಾರು 7-00 ಗಂಟೆಯಲ್ಲಿ ಗುಡಿಬಂಡೆ ತಾಲ್ಲೂಕು ಚೆಂಡೂರು ಕ್ರಾಸ್ ಹತ್ತಿರ ಬೆಂಗಳೂರಿನಿಂದ ಬಾಗೇಪಲ್ಲಿ ಕಡೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ತನ್ನ ಮಗನಾದ ಜಿ.ಎ.ತಬ್ರೇಜ್ ರವರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಕೆ.ಎ-53- ಯು-7565 ನೊಂದಣಿ ಸಂಖ್ಯೆಯ  ಹೀರೋ ಹೊಂಡಾ ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ ಪರಿಣಾಮ ಜಿ.ಎ.ತಬ್ರೇಜ್ ರವರು ಚಾಲನೆ ಮಾಡಿಕೊಂಡು ಹೊಗುತ್ತಿದ್ದ ದ್ವಿ ಚಕ್ರವಾಹನ ಜಖಂಗೊಂಡು ಈ ಅಪಘಾತದಲ್ಲಿ ತನ್ನ ಮಗನಾದ ಜಿ.ಎ.ತಬ್ರೇಜ್ ರವರಿಗೆ ತಲೆಗೆ, ಕೈಗಳಿಗೆ. ಕಾಲುಗಳಿಗೆ. ತೀವ್ರವಾದ ರಕ್ತಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿರವುದಾಗಿದ್ದು  ನಂತರ ತನ್ನ ಮಗ ಜಿ.ಎ.ತಬ್ರೇಜ್ ರವರ ಮೃತದೇಹವನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿದ್ದು  ನಿನ್ನೆ ರಾತ್ರಿ ಅ ವೇಳೆಯಾಗಿದ್ದರಿಂದ ಈ ದಿನ ಠಾಣೆಗೆ ದೂರನ್ನು ನೀಡುತ್ತಿದ್ದು ತನ್ನ ಮಗನಾದ ಜಿ.ಎ.ತಬ್ರೇಜ್ 27 ವರ್ಷ ಕೂಲಿ ಕೆಲಸ ವಾಸ ಗೂಳೂರು ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರಿಗೆ ಅಪಘಾತಪಡಿಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ ಚಾಲಕನನ್ನು  ಮತ್ತು ಅಪಘಾತ ಪಡಸಿದ ವಾಹನವನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತದೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.289/2020 ಕಲಂ: 143,147,148,323,324,504,506 ರೆ/ವಿ 149 ಐ.ಪಿ.ಸಿ :-

     ದಿನಾಂಕ:-22/10/2020  ರಂದು ಸಂಜೆ 6-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವಿನೋದ್ ಬಿನ್ ಸುಬ್ರಮಣಿ, 24 ವರ್ಷ, ಗೊಲ್ಲರು, ಜಿರಾಯ್ತಿ, ವಾಸ-ಇಡ್ಲೂಡು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು ಒಂದುವರೆ ವರ್ಷದ ಹಿಂದೆ ತನ್ನ ಗ್ರಾಮದಲ್ಲಿ ವಾಸವಾಗಿರುವ ತನ್ನ ಮಾವನಾದ ಸೀನಪ್ಪ ರವರ ಮಗಳಾದ ಲೀಲಾವತಿ ರವರನ್ನು ಪ್ರೀತಿಸಿ ಮದುವೆ ಮಾಡಿಕೊಂಡು ತಮ್ಮ ಗ್ರಾಮದಲ್ಲಿಯೇ ವಾಸವಾಗಿರುತ್ತೇನೆ. ಹೀಗಿರುವಾಗ ಈ ದಿನ ದಿನಾಂಕ 22/10/2020 ರಂದು ಬೆಳಿಗ್ಗೆ ಸುಮಾರು 10-00 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಮುಂಭಾಗದ ಇದ್ದಾಗ ಆ ಸಮಯದಲ್ಲಿ ತನ್ನ ಮಾವನಾದ ಸೀನಪ್ಪ ಬಿನ್ ವೆಂಕಟರವಣಪ್ಪ, ತನ್ನ ಅತ್ತೆ ಗೀತಮ್ಮ ಕೋಂ ಸೀನಪ್ಪ ಹಾಗು ಇವರ ಮನೆಯವರಾದ ಶೇಖರ್ ಬಿನ್ ದ್ವಾವಪ್ಪ, ಕೇಶವ ಬಿನ್ ದ್ವಾವಪ್ಪ, ಅನಿಲ್ ಬಿನ್ ಸೀನಪ್ಪ ರವರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ತನ್ನ ಬಳಿ ಬಂದು ನನ್ನ ಮಗಳನ್ನು ನೀನು ಮೋಸ ಮಾಡಿ ಮದುವೆ ಮಾಡಿಕೊಂಡಿದ್ದೀಯಾ ಲೋಫರ್ ನನ್ನ ಮಗನೇ, ಸೂಳೆ ನನ್ನ ಮಗನೇ ಎಂದು ತನ್ನ ಮೇಲೆ ಗಲಾಟೆಯನ್ನು ಮಾಡಿ ಕೆಟ್ಟ ಮಾತುಗಳಿಂದ ಬೈದು, ಆ ಪೈಕಿ ಶೇಖರ್ ರವರು ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ತನ್ನ ಬೆನ್ನಿನ ಹಿಂಭಾಗ ಹೊಡೆದು ರಕ್ತಗಾಯ ಪಡಿಸಿದಾಗ ಉಳಿದವರು ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿ, ಮೇಲ್ಕಂಡವರು ತನ್ನನ್ನು ಕುರಿತು ಈ ನನ್ನ ಮಗನನ್ನು ಈ ದಿನ ಬಿಡಬಾರದು ಸಾಯಿಸಿ ಬಿಡ ಬೇಕೆಂದು ಪ್ರಾಣ ಬೆದರಿಕೆಯನ್ನು ಹಾಕಿ ಜಗಳ ಮಾಡುತ್ತಿದ್ದಾಗ ತನ್ನ ತಂದೆ-ತಾಯಿ ಹಾಗು ತಮ್ಮ ಗ್ರಾಮಸ್ಥರಾದ ಗಜೇಂದ್ರ ಬಿನ್ ಮುನಿಯಪ್ಪ, ನಾಗೇಶ್ ಬಿನ್ ರಾಮಕೃಷ್ಣಪ್ಪ ಹಾಗು ಇತರರು ಅಡ್ಡ ಬಂದು ಕುಡುಗೋಲನ್ನು ಕಿತ್ತುಕೊಂಡು ಜಗಳವನ್ನು ಬಿಡಿಸಿರುತ್ತಾರೆ. ನಂತರ ತಮ್ಮ ಮನೆಯವರು ತನ್ನನ್ನು ಯಾವುದೋ ವಾಹನದಲ್ಲಿ ಕರೆದುಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಸಿಕೊಂಡು ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು,  ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.290/2020 ಕಲಂ: 143,147,148,341,324,427,504,506 ರೆ/ವಿ 149 ಐ.ಪಿ.ಸಿ :-

     ದಿನಾಂಕ:-22/10/2020  ರಂದು ಸಂಜೆ 7-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶೇಖರ್ ಬಿನ್ ದ್ವಾವಪ್ಪ, 25 ವರ್ಷ, ಗೊಲ್ಲರು, ಜಿರಾಯ್ತಿ, ವಾಸ-ಇಡ್ಲೂಡು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈಗ್ಗೆ ಸುಮಾರು ಒಂದುವರೆ ವರ್ಷದ ಹಿಂದೆ ತಮ್ಮ ಗ್ರಾಮದ ವಾಸಿ ತಮ್ಮ ಸಂಬಂಧಿಕನಾದ ವಿನೋದ್ ಎಂಬುವನು ತನ್ನ ಮಾವನಾದ ಸೀನಪ್ಪ ರವರ ಮಗಳಾದ ಲೀಲಾವತಿ ರವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದು, ಆ ಸಮಯದಲ್ಲಿ ತಮ್ಮ ಮತ್ತು ವಿನೋದ್ ರವರ ಮನೆಯ ನಡುವೆ ಗಲಾಟೆಗಳಾಗಿ, ತಾವು ಒಬ್ಬರು ಇನ್ನೋಬ್ಬರ ಮನೆಗಳಿಗೆ ಹೋಗುವುದನ್ನು ನಿಲ್ಲಿಸಿರುತ್ತೇವೆ. ಹೀಗಿರುವಾಗ ನಿನ್ನೆ ದಿನ ದಿನಾಂಕ 21/10/2020 ರಂದು ರಾತ್ರಿ ವಿನೋದ್ ರವರ ಚಿಕ್ಕಪ್ಪನಾದ ರಘುಪತಿ ರವರು ತನ್ನ ತಾತನನ್ನು ಮಾತನಾಡಿಸಲು ತಮ್ಮ ಮನೆಗೆ ಬಂದಿದ್ದು, ಆಗ ತಾನು ರಘುಪತಿ ರವರನ್ನು ನೀನು ನಮ್ಮ ಮನೆಗೆ ಯಾಕೇ ಬಂದಿದ್ದೀಯಾ, ನಮ್ಮ ಮನೆಯಿಂದ ಹೋಗು ಎಂದು ಹೇಳಿದಾಗ ರಘುಪತಿ ರವರು ಹೊರಟು ಹೋಗಿರುತ್ತಾರೆ. ಈ ದಿನ ದಿನಾಂಕ 22/10/2020 ರಂದು ಬೆಳಿಗ್ಗೆ ಸುಮಾರು 10-00 ಗಂಟೆ ಸಮಯದಲ್ಲಿ ತಾನು ತಮ್ಮ ಜಮೀನಿನಲ್ಲಿನ ರೇಷ್ಮೇ ಸೊಪ್ಪನ್ನು ಕಟಾವು ಮಾಡಿಕೊಂಡು ಟಿಲ್ಲರ್ ನಲ್ಲಿ ತುಂಬಿಸಿಕೊಂಡು ವಿನೋದ್ ರವರ ಮನೆಯ ಪಕ್ಕದಲ್ಲಿನ ರಸ್ತೆಯಲ್ಲಿ ಬರುತ್ತಿದ್ದಾಗ ಆಗ ವಿನೋದ್ ಬಿನ್ ಸುಬ್ರಮಣಿ, ಈತನ ತಂದೆ ಸುಬ್ರಮಣಿ ಬಿನ್ ಕಿಟ್ಟಪ್ಪ, ವಿನೋದ್ ರವರ ತಮ್ಮನಾದ ವಿನಯ್ ಬಿನ್ ಸುಬ್ರಮಣಿ, ವಿನೋದ್ ರವರ ದೊಡ್ಡಪ್ಪ ಚೆನ್ನಕೇಶವ ಬಿನ್ ಕಿಟ್ಟಪ್ಪ, ಚೆನ್ನಕೇಶವ ರವರ ಮಗ ಕಾರ್ತೀಕ್ ರವರು ಕೈಗಳಲ್ಲಿ ದೊಣ್ಣೆಯನ್ನು ಹಿಡಿದುಕೊಂಡು ಟಿಲ್ಲರ್ ಗೆ ಅಡ್ಡ ಬಂದು ಟಿಲ್ಲರ್ ವಾಹನವನ್ನು ಅಡ್ಡಗಟ್ಟಿ ನೀನು ಯಾವನೋ ಲೋಫರ್ ನನ್ನ ಮಗನೇ ನಮ್ಮ ಮನೆಯವರನ್ನು ನಿನ್ನ ಮನೆಗೆ ಬರಬೇಡ ಎಂದು ಹೇಳುವುದಕ್ಕೆ ಎಂದು ತನಗೆ ಕೆಟ್ಟ ಮಾತುಗಳಿಂದ ಬೈದು, ಆ ಪೈಕಿ ವಿನೋದ್ ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಬೆನ್ನಿನ ಹಿಂಭಾಗ ಹಾಗು ತಲೆಗೆ ಹೊಡೆದು ನೋವುಂಟು ಮಾಡಿದಾಗ ಉಳಿದವರು ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿ, ಮೇಲ್ಕಂಡವರೆಲ್ಲರೂ ಸೇರಿ ನಿನಗೆ ಒಂದು ಗತಿ ಕಾಣಿಸುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆ ಸಮಯದಲ್ಲಿ ತಮ್ಮ ಗ್ರಾಮದ ವಾಸಿಗಳಾದ ಚೆನ್ನರಾಯಪ್ಪ ಬಿನ್ ಮುನಿಶಾಮಪ್ಪ, ವೆಂಕಟೇಶ್ ಬಿನ್ ದೊಡ್ಡ ವೆಂಕಟರಾಯಪ್ಪ ರವರು ಅಡ್ಡ ಬಂದು ವಿನೋದ್ ರವರ ಕೈಯಲ್ಲಿದ್ದ ದೊಣ್ಣೆಯನ್ನು ಕಿತ್ತುಕೊಂಡು ಜಗಳವನ್ನು ಬಿಡಿಸಿರುತ್ತಾರೆ. ನಂತರ ವಿಷಯ ಸ್ಥಳಕ್ಕೆ ಬಂದ ತನ್ನ ಅಣ್ಣ ಚಂದ್ರಶೇಖರ್ ರವರು ತನ್ನನ್ನು ದ್ವಿ ಚಕ್ರ ವಾಹನದಲ್ಲಿ ಕರೆದುಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿರುತ್ತಾನೆ. ತಾನು ಆಸ್ಪತ್ರೆಯಲ್ಲಿದ್ದ ಸಮಯದಲ್ಲಿ ಮೇಲ್ಕಂಡವರು ತಮ್ಮ ಮನೆಯ ಬಳಿ ಹೋಗಿ ತಮ್ಮ ಮನೆಯ ಕಿಟಕಿ ಗಾಜುಗಳನ್ನು ಹೊಡೆದು ಹಾಕಿ ತಮಗೆ ನಷ್ಟವನ್ನುಂಟು ಮಾಡಿರುತ್ತಾರೆ. ಆದ ಕಾರಣ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.291/2020 ಕಲಂ: 279,304(A) ಐ.ಪಿ.ಸಿ :-

     ದಿನಾಂಕ:23.10.2020 ರಂದು ಬೆಳಿಗ್ಗೆ 9.00 ಗಂಟೆಗೆ ಪಿರ್ಯಾದಿದಾರರಾದ ಶ್ರೀಧರಬಾಬು ಎ ಬಿನ್ ಟಿ ಆಂಜಿನಪ್ಪ, 32 ವರ್ಷ, ವಕ್ಕಲಿಗರು, ಕಲ್ಯಾಪುರ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಮ್ಮ ಸಂಬಂದಿಕರಾದ ಚಿಕ್ಕಮುನಿರಾಮಣ್ಣ ರವರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು 1 ನೇ ಮಗನಾದ ಕೆ.ಎಂ ರಮೇಶ(45ವರ್ಷ) ರವರು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿದ್ದು ತೋಟದಲ್ಲಿ ಕೆಲಸ ಮಾಡಲು ಸುತ್ತ ಮುತ್ತ ಗ್ರಾಮಗಳಿಂದ ಕೂಲಿ ಹಾಳುಗಳನ್ನು ಕರೆದುಕೊಂಡು ಬಂದು ತೋಟದಲ್ಲಿ ಕೆಲಸ ಮುಗಿದ ನಂತರ ಕೂಲಿಹಾಳಗಳನ್ನು ಅವರ ಗ್ರಾಮಗಳಲ್ಲಿ ಬಿಟ್ಟು ಬರುತಿದ್ದರು ಹೀಗಿರುವಲ್ಲಿ ತೋಟದಲ್ಲಿ ಕೆಲಸವಿದ್ದ ಕಾರಣ ಗಂಬೀರನಹಳ್ಳಿ ಗ್ರಾಮದಲ್ಲಿ ಕೂಲಿಹಾಳಗಳನ್ನು ಕೆಲಸಕ್ಕೆ ಬರುವಂತೆ ಹೇಳಿ ಬರಲು ದಿನಾಂಕ:22.10.2020 ರಂದು ರಾತ್ರಿ 7.00 ಗಂಟೆ ಸಮಯದಲ್ಲಿ ಅವರ ಬಾಬತ್ತು ಕೆಎ.03.ಎಂಜೆ.2468 ಇನ್ನೋವಾ ಕಾರಿನಲ್ಲಿ ಹೋಗಿದ್ದು ಗಂಬೀರನಹಳ್ಳಿ ಗ್ರಾಮದಲ್ಲಿ ನಾಳೆ ತೋಟದಲ್ಲಿ ಕೆಲಸವಿರುವುದಾಗಿ ಕೂಲಿ ಕೆಲಸಕ್ಕೆ ಬರಬೆಕೆಂದು ಕೂಲಿ ಹಾಳುಗಳಿಗೆ ಹೇಳಿ ವಾಪಸ್ಸು ಗ್ರಾಮಕ್ಕೆ ಬರಲು ರಾತ್ರಿ 9.45 ಗಂಟೆಯಲ್ಲಿ ಮಲ್ಲೇನಹಳ್ಳಿ ಗೇಟ್ ಸಮೀಪ ಅವರ ಬಾಬತ್ತು ಕೆಎ.03.ಎಂಜೆ.2468 ಇನ್ನೋವಾ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡು, ಕೆ.ಎಂ ರಮೇಶ ರವರಿಗೆ ಬಲಕೈ, ಬಲ ಕಾಲು, ಸೊಂಟದ ಕೆಳಬಾಗದಲ್ಲಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುವುದಾಗಿ ಯಾರೋ ನಮಗೆ ಪೋನ್ ಮಾಡಿ ತಿಳಿಸಿದ್ದು ನಂತರ ತಾನು ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ನಂತರ ಕೆ.ಎಂ ರಮೇಶ ರವರ ಮೃತ ದೇಹವನ್ನು ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯ ಶವಗಾರದಲ್ಲಿ ಇಟ್ಟಿರುತ್ತೆ. ರಾತ್ರಿ ಆವೇಳೆಯಾದ ಕಾರಣ ಈಗ ಬಂದು ದೂರು ನೀಡುತಿದ್ದು ಕೆಎ.03.ಎಂಜೆ.2468 ಇನ್ನೋವಾ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ತನ್ನಷ್ಟಕ್ಕೆ ತಾನೇ ಚಾಲನೆ ಮಾಡಿ ಅಪಘಾತವನ್ನುಂಟು ಮಾಡಿದ ಕೆ.ಎಂ ರಮೇಶ ರವರ ವಿರುದ್ದ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.292/2020 ಕಲಂ: 15(A),32(3) ಕೆ.ಇ ಆಕ್ಟ್:-

     ದಿನಾಂಕ:-23.10.2020 ರಂದು ಮದ್ಯಾಹ್ನ 2-15 ಗಂಟೆಗೆ ಪಿಸಿ-14 ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ 23.10.2020 ರಂದು  ಪಿಸಿ 14 ಗೋವಿಂದಪ್ಪ ಆದ ತನ್ನನ್ನು ಗುಪ್ತ ಮಾಹಿತಿ ಸಂಗ್ರ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಠಾಣಾ ಸರಹದ್ದಿನ ಗ್ರಾಮಗಳಾದ ತುಮ್ಮನಹಳ್ಳಿ ಹುಜಗೂರು, ಮಲ್ಲಿಶೆಟ್ಟಿಪುರ,ಕುಪ್ಪೇನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ ಸುಮಾರು 1.30 ಗಂಟೆ ಸಮಯದಲ್ಲಿ ಗೊರಮಡಗು ಗ್ರಾಮದಲ್ಲಿ ಮಾಹಿತಿ ಸಂಗ್ರಹದಲ್ಲಿದ್ದಾಗ ಗ್ರಾಮದ ಬಾತ್ಮೀದಾರರಿಂದ ಗೊರಮಡಗು ಗ್ರಾಮದ ವಾಸಿ ಶಿವರಾಜ್ ಬಿನ್ ಪಾಪಣ್ಣ ಎಂಬಾತನು ತನ್ನ ಹೊಟೇಲ್ ನ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ತಾನು ಶಿವರಾಜ್ ಬಿನ್ ಪಾಪಣ್ಣ ರವರ ಹೊಟೇಲ್ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಹೊಟೇಲ್ ಮುಂಭಾಗ ಯಾರೋ ಇಬ್ಬರು ಆಸಾಮಿಗಳು ಮದ್ಯವನ್ನು ಸೇವನೆ ಮಾಡುತ್ತಾ ಕುಳಿತಿದ್ದ ಒಬ್ಬ ಆಸಾಮಿಯು ತನ್ನ ಬಳಿ ಇದ್ದ ಒಂದು ಕಪ್ಪು ಬಣ್ಣದ ಕವರ್ ನಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯದ ಪಾಕೇಟ್ ಗಳನ್ನು ಮಾರಾಟ ಮಾಡುತ್ತಾ ಕುಡಿಯಲು ಅನುವು ಮಾಡಿಕೊಟ್ಟಿರುವುದು ಖಚಿತವಾದ ಮೇಲೆ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಓಡಿ ಹೋಗಿದ್ದು, ಮದ್ಯವನ್ನು ಹಿಡಿದುಕೊಂಡು ಕುಳಿತಿದ್ದ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಶಿವರಾಜ್ ಬಿನ್ ಪಾಪಣ್ಣ, 30 ವರ್ಷ, ಆದಿಕರ್ನಾಟಕ, ವ್ಯಾಪಾರ, ಗೊರಮಡಗು ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸದರಿ ಆಸಾಮಿಯ ಬಳಿ ಇದ್ದ ಕವರ್ ನಲ್ಲಿ ಪರಿಶೀಲಿಸಲಾಗಿ ಅದರಲ್ಲಿ ಹೈವಾರ್ಡ್ಸ್ ಚೀಯರ್ಸ್ ವಿಸ್ಕಿಯ 7 ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಬೆಲೆ 35.13 ರೂ ಎಂದು ಇದ್ದು ಇವುಗಳ ಒಟ್ಟು ಬೆಲೆ 245.91 ರೂ.ಗಳಾಗಿರುತ್ತೆ, ಸ್ಥಳದಲ್ಲಿ 5 ಪ್ಲಾಸ್ಟಿಕ್ ಗ್ಲಾಸುಗಳು, 5 ಖಾಲಿ ನೀರಿನ ಪಾಕೇಟುಗಳು ಹಾಗು 90 ಎಂ.ಎಲ್ ನ ಹೈವಾರ್ಡ್ಸ್ ಚೀಯರ್ಸ್ ವಿಸ್ಕಿಯ 5 ಖಾಲಿ ಟೆಟ್ರಾ ಪಾಕೇಟ್ ಗಳಿದ್ದು, ಮೇಲ್ಕಂಡ ಆಸಾಮಿ ಶಿವರಾಜ್ ಬಿನ್ ಪಾಪಣ್ಣ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಮಾಲು ಮತ್ತು ಅರೋಪಿಯನ್ನು ವಶಕ್ಕೆ ಪಡೆದುಕೊಂಡು ತಮ್ಮ ವಶಕ್ಕೆ ನೀಡುತ್ತಿರುವುದನ್ನು ಪಡೆದುಕೊಂಡು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ನೀಡಿದ ವರದಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.113/2020 ಕಲಂ: 420,468,471,120B ಐ.ಪಿ.ಸಿ:-

     ದಿನಾಂಕ-22.10.2020 ರಂದು ಸಂಜೆ 6.30 ಗಂಟೆಗೆ ನ್ಯಾಯಾಲಯದ ಪಿ.ಸಿ.20 ಪ್ರಶಾಂತ್ ರವರ ಮೂಲಕ ಘನ ನ್ಯಾಯಾಲಯದ ಮೂಲಕ ಪಿ.ಸಿ.ಆರ್ ನಂ. 03/2020 ರ ದೂರನ್ನು ಪಡೆದಿದ್ದರ ಸಾರಾಂಶವೇನೆಂದರೆ, ಈ ಕೇಸಿನ ಪಿರ್ಯಾದಿ ಕೆ.ಎನ್.ಕೃಷ್ಣಪ್ಪ ಬಿನ್ ಲೇಟ್ ದೊಡ್ಡನಂಜಪ್ಪ, ರವರು ಶಿಡ್ಲಘಟ್ಟ ತಾಲ್ಲೂಕು ಕನಪನಹಳ್ಳಿ ಗ್ರಾಮದ ವಾಸಿಯಾಗಿದ್ದು, ಶಿಡ್ಲಘಟ್ಟ ತಾಲ್ಲೂಕು ಬಶೆಟ್ಟಹಳ್ಳಿ ಹೋಬಳಿ, ತರಬಹಳ್ಳಿ ಗ್ರಾಮದ ಸ.ನಂ.8/2 ರಲ್ಲಿ 4 ಎಕರೆ 12 ಗುಂಟೆ ಜಮೀನು ಈ ಪ್ರಕರಣದ 1ನೇ ಆರೋಪಿ ಕೆ.ಎನ್.ನಾರಾಯಣಸ್ವಾಮಿ, ಪಿರ್ಯಾದಿ ಕೆ.ಎನ್.ಕೃಷ್ಣಪ್ಪ ಮತ್ತು ಪಿರ್ಯಾದಿ ಮತ್ತೊಬ್ಬ ಅಣ್ಣನಾದ ವೆಂಕಟೇಶಪ್ಪ ರವರ ಹೆಸರಿನಲ್ಲಿ ಜಂಟಿ ಖಾತೆ ಇರುತ್ತೆ. ಇದೇ ಗ್ರಾಮದ ಸ.ನಂ.11/1 ರಲ್ಲಿ 1 ಎಕರೆ 35 ಗುಂಟೆ ಜಮೀನು 1ನೇ ಕೆ.ಎನ್.ನಾರಾಯಣಸ್ವಾಮಿ ರವರ ಹೆಸರಿನಲ್ಲಿದ್ದು, ಎರಡೂ ಸ.ನಂ. ಜಮೀನುಗಳು ಒಟ್ಟು ಕುಂಟುಂಬದ 3 ಜನರ ಆಸ್ತಿಯಾಗಿರುತ್ತೆ. ಹೀಗಿರುವಾಗ 1ನೇ ಆರೋಪಿ ಕೆ.ಎನ್.ನಾರಾಯಣಸ್ವಾಮಿ ರವರು ಶಿಡ್ಲಘಟ್ಟ ನಗರದ ಕೆನರಾ ಬ್ಯಾಂಕಿನಲ್ಲಿ ಮೇಲ್ಕಂಡ ಜಮೀನುಗಳ ಮೇಲೆ ಸಾಲ ಪಡೆಯವ ಸಮಯದಲ್ಲಿ ಎರಡೂ ಸ.ನಂ. ಜಮೀನುಗಳಿಗೆ 3 ಜನ ಒಟ್ಟು ಕುಟುಂಬದ ಆಸ್ತಿಯಾಗಿರುವುದಾಗಿ ಬ್ಯಾಂಕ್ ಮ್ಯಾನೇಜರ್ ರವರಿಗೆ ಸಾಲ ಮಂಜೂರು ಮಾಡಲು ತಿಳಿಸಿ, ದಿನಾಂಕ.05.01.2007 ರಲ್ಲಿ ಶಿಡ್ಲಘಟ್ಟ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಮಾರ್ಟಿಗೇಜ್ ಮಾಡಿಸುವ ಸಮಯದಲ್ಲಿ ಆರೋಪಿ-1 ರವರು ಬ್ಯಾಂಕ್ ಮ್ಯಾನೇಜರ್ ಮತ್ತು ಉಪನೊಂದಾಣಾಧಿಕಾರಿಗಳು ಮತ್ತು ಇತರ ಆರೋಪಿಗಳೊಂದಿಗೆ ಒಳಸಂಚು ರೂಪಿಸಿ ಪಿರ್ಯಾದಿ ಕೆ.ಎನ್.ಕೃಷ್ಣಪ್ಪ ರವರ ಗಮನಕ್ಕೆ ತರದೆ ಪಿರ್ಯಾದಿ ಕೆ.ಎನ್.ಕೃಷ್ಣಪ್ಪ ರವರ ಬದಲಿಗೆ ಆರೋಪಿ ಕೆ.ಎನ್.ದೇವರಾಜ ಬಿನ್ ನಲ್ಲನಂಜಪ್ಪ ರವರನ್ನು ತಾನೇ ಕೆ.ಎನ್.ಕೃಷ್ಣಪ್ಪ ಎಂಬುದಾಗಿ ನಟಿಸುವಂತೆ ತಿಳಿಸಿ ಪಿರ್ಯಾದಿ ಕೆ.ಎನ್.ಕೃಷ್ಣಪ್ಪ ರವರ ಸಹಿಯನ್ನು ಮಾಡಿ ಕೆನರಾ ಬ್ಯಾಂಕಿಗೆ ಮಾರ್ಟಗೇಜ್ ಮಾಡಿ ಕೆನರಾ ಬ್ಯಾಂಕಿನಿಂದ ಮೇಲ್ಕಂಡ ಎರಡೂ ಸ.ನಂ. ಜಮೀನುಗಳಿಗೆ 3,00,000/-ರೂ ಸಾಲ ಪಡೆದುಕೊಂಡು ಆರೋಪಿ-1 ರವರು ಉಪಯೋಗಿಸಿಕೊಂಡು ಇದುವರೆಗೂ ಬ್ಯಾಂಕಿಗೆ ಸಾಲ ಪಾವತಿ ಮಾಡದೆ ಮೋಸ ಮಾಡಿರುತ್ತಾರೆ. ಈ ಸಮಯದಲ್ಲಿ ಆರೋಪಿ-2 ರಿಂದ 10 ರವರುಗಳು ಸಹ ಮಾರ್ಟಿಗೇಜ್ ಮಾಡುವ ಸಮಯದಲ್ಲಿ ಆರೋಪಿ-1 ರವರಿಗೆ ಸಹಕಾರ ನೀಡಿ ಮೋಸ ಮಾಡಿರುತ್ತಾರೆಂತ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಘನ ನ್ಯಾಯಾಲಯದ ಮೂಲಕ ಸಲ್ಲಿಸಿಕೊಂಡಿರುವ ದೂರಿನ ಮೇರೆಗೆ ಠಾಣಾ ಮೊ.ಸಂ 113/2020 ಕಲಂ.420.468.471,120(ಬಿ) ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.