ದಿನಾಂಕ :23/07/2020 ರ ಅಪರಾಧ ಪ್ರಕರಣಗಳು

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 59/2020 ಕಲಂ. 506,504,143,144,147,148,149,323,324  ಐ.ಪಿ.ಸಿ :-

          ದಿನಾಂಕ: 23/07/2020 ರಂದು ಬೆಳಿಗ್ಗೆ 11-00 ಗಂಟೆಗೆ  ಸಿ ಹೆಚ್ ಸಿ – 176 ಮುನಿರಾಜು  ರವರು   ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಗಾಯಾಳು  ಶ್ರೀನಾಥ  ಕೆ ಎಂ ಬಿನ್ ಮುನಿವೆಂಕಟರೆಡ್ಡಿ,  25 ವರ್ಷ,  ನಾಯಕರು, ವ್ಯಾಪಾರ, ಕೊಂಡವೆನಕಪಲ್ಲಿ  ಗ್ರಾಮ, ಚಿಂತಾಮಣಿ  ತಾಲ್ಲೂಕು 7259574932 ರವರು  ನೀಡಿದ ಹೇಳಿಕೆಯ ದೂರನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ನಾನು ಮೇಲ್ಕಂಡ  ವಿಳಾಸದಾರನಾಗಿದ್ದು ವೆಟರ್ನರಿ ಔಷಧಿಗಳ ವ್ಯಾಪಾರ ಮಾಡಿಕೊಂಡು ಜೀವನಮಾಡಿಕೊಂಡಿರುತ್ತೇನೆ. ಹೀಗಿರುವಲ್ಲಿ  ನಿನ್ನೆ ದಿನ ದಿನಾಂಕ: 22/07/2020  ರಂದು ಸಂಜೆ  ಸುಮಾರು  5-30 ಗಂಟೆ ಸಮಯದಲ್ಲಿ ನಾನು ನಮ್ಮ ಗ್ರಾಮದ ಕೆರೆಯ ಪಕ್ಕದಲ್ಲಿ  ವಾಲಿಬಾಲ್ ಆಟವಾಡಲು ಹೋದಾಗ  ಅಲ್ಲಿ ನಮ್ಮ  ಗ್ರಾಮದ ವಾಸಿಗಳಾದ ಶೇಖರ ಮತ್ತು  ಶ್ರೀನಾಥ  ಬಿನ್ ಲೇಟ್  ವೆಂಕಟರವಣಪ್ಪ  ರವರು ಏನೋ ಜಗಳಮಾಡಿಕೊಳ್ಳುತ್ತಿದ್ದನ್ನು  ನೋಡಿ  ನಾನು ಅಲ್ಲಿಗೆ  ಹೋಗದೆ ದೂರದಲ್ಲಿಯೇ ನಿಂತುಕೊಂಡು ನೋಡುತ್ತಿದ್ದೆ.  ಆಗ  ನಮ್ಮ ಗ್ರಾಮದ  ವಾಸಿಗಳಾದ ಶ್ರೀನಾಥ ಬಿನ್ ಲೇಟ್  ವೆಂಕಟರವಣಪ್ಪ,  ರಾಮು ಬಿನ್ ಮುನಿಶಾಮಿ,  ರಾಜೇಶ್ ಬಿನ್ ಲೇಟ್  ಚಿನ್ನಪ್ಪಯ್ಯ, ಕಾರ್ತೀಕ್  ಬಿನ್ ಶ್ರೀರಾಮಪ್ಪ,  ಗಂಗುಲಪ್ಪ ಬಿನ್ ಮುನಿವೆಂಕಟಪ್ಪ, ರವರು ಅಕ್ರಮ ಗುಂಪು ಕಟ್ಟಿಕೊಂಡು ನನ್ನ  ಬಳಿಗೆ  ಬಂದು  ಗಂಗುಲಪ್ಪ ರವರು  ನನ್ನನ್ನು  ಕುರಿತು ಲೋಪರ್ ನನ್ನ ಮಗನೆ ನಿನ್ನಮ್ಮನೇ ಕೇಯ ನೀನು  ನನ್ನ ಮರಳು ಟ್ರ್ಯಾಕ್ಟ್ ರನ್ನು  ಪೊಲೀಸರಿಗೆ   ಹಿಡಿದುಕೊಡುತ್ತೀಯ  ಎಂದು   ಅವಾಚ್ಯವಾಗಿ ಬೈದು  ನನ್ನ ಗಲ್ಲಪಟ್ಟಿಯನ್ನು  ಹಿಡಿದು  ಎಳೆದಾಡಿದನು  ಶ್ರೀನಾಥ ಬಿನ್ ವೆಂಕಟರವಣಪ್ಪ  ಅಲ್ಲಿಯೇ ಬಿದ್ದಿದ  ಕಲ್ಲನ್ನು  ತೆಗೆದುಕೊಂಡು   ನನ್ನ ಬಲಗಾಲಿನ  ಹಿಮ್ಮಡಿಯ ಮೇಲೆ  ಹೊಡೆದು   ರಕ್ತ ಗಾಯವನ್ನು ಉಂಟುಮಾಡಿದನು.   ರಾಮುರವರು  ಅಲ್ಲಿಯೇ ಬಿದ್ದಿದ  ಕೋಲನ್ನು ತೆಗೆದುಕೊಂಡು ನನ್ನ ಮೈಮೇಲೆ ಹೊಡೆದು   ಊತದ ಗಾಯಗಳನ್ನು ಉಂಟುಮಾಡಿರುತ್ತಾನೆ.  ಕಾರ್ತೀಕ್   ರವರು ಆತನ ಕೈ ಮುಷ್ಠಿ ಮಾಡಿಕೊಂಡು   ನನ್ನ ಎಡ ಕಣ್ಣಿನ ಕೆಳಭಾಗದಲ್ಲಿ  ಗುದ್ದಿ  ಉಗುರುಗಳಿಂದ  ಪರಚಿದನು.  ರಾಜೇಶ ರವರು  ನನ್ನ  ಟೀ ಶರ್ಟನ್ನು  ಹಿಡಿದು ಎಳೆದಾಡಿ  ಟೀಶರ್ಟನ್ನು ಹರಿದು ಹಾಕಿ  ನನ್ನನ್ನು  ಕಾಲಿನಿಂದ ಒದ್ದನು.  ನಂತರ ಮೇಲ್ಕಂಡವರು  ಎಲ್ಲರೂ ಸೇರಿ  ನನ್ನ ಕುರಿತು   ಇನ್ನೋಂದು ಸಾರಿ  ನಮ್ಮ ತಂಟೆಗೆ ಬಂದರೆ  ಸಾಯಿಸಿಬಿಡುತ್ತೇವೆ ಎಂದು   ಪ್ರಾಣ ಬೆದರಿಕೆಯನ್ನು  ಹಾಕಿದರು.  ಅಷ್ಟರಲ್ಲಿ  ಅಲ್ಲಿಯೇ  ಇದ್ದ  ನಮ್ಮ ಗ್ರಾಮದ  ವಾಸಿಗಳಾದ  ಶೇಖರ್ ಬಿನ್ ನರಸಪ್ಪ  ನರೇಶ ಬಿನ್ ಕದಿರಪ್ಪ  ರವರು ಅಡ್ಡ ಬಂದು  ಜಗಳ ಬಿಡಿಸಿದರು  ನಂತರ ಗಾಯಾಗೊಂಡಿದ್ದ ನಾನು,  ನನ್ನ ಸ್ನೇಹಿತನ  ದ್ವಿಚಕ್ರವಾಹನದಲ್ಲಿ  ಚಿಂತಾಮಣಿ ಸರ್ಕಾರಿ  ಆಸ್ಪತ್ರೆಗೆ ಬಂದು   ಚಿಕಿತ್ಸೆಗೆ ದಾಖಲಾಗಿರುತ್ತೇನೆ.  ಆದ್ದರಿಂದ  ನನ್ನ  ಮೇಲೆ   ಗಲಾಟೆ ಮಾಡಿ   ಹಲ್ಲೆ ಮಾಡಿದ ಮೇಲ್ಕಂಢವರ ಮೇಲೆ  ಕಾನೂನು ರೀತ್ಯ  ಕ್ರಮಕೈಗೊಳ್ಳಬೇಕಾಗಿ ಕೋರಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.100/2020 ಕಲಂ. 279,427 ಐ.ಪಿ.ಸಿ :-

          ದಿನಾಂಕ: 23/07/2020 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಚಿಕ್ಕಬಳ್ಳಾಪುರ ನಗರ ಉಪವಿಭಾಗದ ಕಾರ್ಯ ಮತ್ತು ಪಾಲನಾ ಘಟಕ-04 ರ ಪ್ರಭಾರ ಸಹಾಯಕ ಇಂಜಿನಿಯರ್ ಆದ ಮಂಜುನಾಥ ಬಿನ್ ಅಂಜಿನಪ್ಪರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ: 14/07/2020 ರಂದು ಬೆಳಿಗ್ಗೆ ಚಿಕ್ಕಬಳ್ಳಾಪುರ ತಾಲ್ಲೂಕು ರೆಡ್ಡಿಗೊಲ್ಲವಾರಹಳ್ಳಿ ಗ್ರಾಮದ ಲೈನ್ ಮ್ಯಾನ್ ಎಂ.ಎನ್.ಮಂಜುನಾಥ್ ಬಿನ್ ಲೇಟ್ ನಾರಾಯಣಸ್ವಾಮಿ ರವರು ನನಗೆ ಪೋನ್ ಮಾಡಿ ಈ ದಿನ ದಿನಾಂಕ: 14/07/2020 ರಂದು ಬೆಳಗಿನ ಜಾವ ಸುಮಾರು 5-00 ಗಂಟೆ ಸಮಯದಲ್ಲಿ ರೆಡ್ಡಿಗೊಲ್ಲವಾರಹಳ್ಳಿ ಗ್ರಾಮದ ಗೇಟ್ ಬಳಿ ಎನ್.ಹೆಚ್-07 ರಸ್ತೆಯ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಚಿಕ್ಕಬಳ್ಳಾಪುರದ ಕಡೆಯಿಂದ ಬರುತ್ತಿದ್ದ KA-04, AA-7286 TATA ACE ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಪಕ್ಕದಲ್ಲಿರುವ ಹೆಚ್.ಟಿ ಮತ್ತು ಎಲ್.ಟಿ ಎರಡು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಎರಡೂ ವಿದ್ಯುತ್ ಕಂಬಗಳು ಮುರಿದು ಬಿದ್ದಿರುತ್ತವೆ ಎಂದು ತಿಳಿಸಿದರು. ಈ ಬಗ್ಗೆ ನಾವು ಮೇಲ್ಕಂಡ KA-04, AA-7286 TATA ACE ವಾಹನ ಚಾಲಕ ರಂಗನಾಥ ಬಿನ್ ಬಿಳಿಗಿರಿಯಪ್ಪ, ಸಿ.ಹೆಚ್.ಪಾಳ್ಯ, ನಿಡಗಲ್ ಗ್ರಾಮ, ಪಾವಗಡ ತಾಲ್ಲೂಕು ರವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾದಾಗ ರಂಗನಾಥರವರು ತಾನು ಜಖಂಗೊಳಿಸಿರುವ ವಿದ್ಯುತ್ ಕಂಬಗಳಿಗೆ ತಗಲುವ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದರು. ಆದರೆ ರಂಗನಾಥರವರು ಇದುವರೆವಿಗೂ ಜಖಂಗೊಳಿಸಿರುವ ವಿದ್ಯುತ್ ಕಂಬಗಳಿಗೆ ತಗಲುವ ವೆಚ್ಚವನ್ನು ಭರಿಸಿರುವುದಿಲ್ಲ. ಇದರಿಂದ ನಮ್ಮ ಬೆ.ವಿ.ಕಂಪನಿಗೆ ಸುಮಾರು 20,000/- ರೂ.ಗಳು ನಷ್ಟವುಂಟಾಗಿರುತ್ತೆ. ಈ ಬಗ್ಗೆ ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ಈ ದಿನ ತಡವಾಗಿ ಠಾಣೆಯಲ್ಲಿ ದೂರು ನೀಡುತ್ತಿದ್ದು, ನಮ್ಮ ಬೆ.ವಿ.ಕಂಪನಿಯ ಹೆಚ್.ಟಿ ಮತ್ತು ಎಲ್.ಟಿ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆಸಿ ಜಖಂಗೊಳಿಸಿರುವ KA-04, AA-7286 TATA ACE ವಾಹನದ ಚಾಲಕ ರಂಗನಾಥರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.274/2020 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ: 22/07/2020 ರಂದು ಸಂಜೆ 7.20 ಗಂಟೆಗೆ ಮಾನ್ಯ ನ್ಯಾಯಾಧೀಶರು ಇ-ಮೇಲ್ ಮುಖಾಂತರ ನೀಡಿದ ಅನುಮತಿಯನ್ನು ಪಡೆದು ದಾಖಲಿಸಿಕೊಂಡ ಪ್ರರಕಣದ ಸಾರಾಂಶವೇನೆಂದರೆ, ಈ ದಿನ ದಿನಾಂಕ:22/07/2020 ರಂದು ಸಂಜೆ 4:00 ಗಂಟೆಯ ಸಮಯದಲ್ಲಿ ಚಿಂತಾಮಣಿ ಗ್ರಾಮಾಂತರ ಠಾಣೆಯ ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ, ಠಾಣಾ ಸರಹದ್ದಿಗೆ ಸೇರಿದ ಸೀಕಲ್ಲು ಗ್ರಾಮದ ಬಳಿಯಿರುವ ಮಾವಿನ ಗಿಡಗಳ ತೋಪೊಂದರಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ದೊರೆತಿದ್ದು, ಸದರಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಠಾಣೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿ ಮತ್ತು ಪಂಚರೊಂದಿಗೆ KA-40-G-326 ನಂಬರಿನ ಠಾಣೆಯ ಇಲಾಖಾ ಜೀಪಿನಲ್ಲಿ ಸೀಕಲ್ಲು ಗ್ರಾಮದ ಬಳಿಯಿರುವ ಮಾವಿನ ಗಿಡಗಳ ತೋಪಿನ ಬಳಿ ಹೋಗಿ ಜೀಪನ್ನು ನಿಲ್ಲಿಸಿ ನೋಡಲಾಗಿ ಅಲ್ಲಿ ಮಾವಿನ ಗಿಡಗಳ ತೋಪಿನಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದು ಸದರಿಯವರನ್ನು ಸುತ್ತುವರಿದು ಓಡಿಹೋಗದಂತೆ ಎಚ್ಚರಿಕೆ ನೀಡಿದರೂ ಸಹ ಆ ಪೈಕಿ ಇಬ್ಬರು ವ್ಯಕ್ತಿಗಳು ಓಡಿ ಹೋಗಿದ್ದು, ಉಳಿದಂತೆ ಸ್ಥಳದಲ್ಲಿದ್ದ 07 ಜನ ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರುಗಳ ಹೆಸರು, ವಿಳಾಸ ಕೇಳಲಾಗಿ 1) ಕೃಷ್ಣಮೂರ್ತಿ ಬಿನ್ ಶ್ರೀರಾಮಪ್ಪ, 32 ವರ್ಷ, ಗಾಣಿಗರು, ಜಿರಾಯ್ತಿ, 2) ವೆಂಕಟೇಶ ಬಿನ್ ನಾರಾಯಣಪ್ಪ, 42 ವರ್ಷ, ಪರಿಶಿಷ್ಟ ಜಾತಿ, ಜಿರಾಯ್ತಿ, 3) ಕೃಷ್ಣಮೂರ್ತಿ ಬಿನ್ ವೆಂಕಟರಾಮಪ್ಪ, 36 ವರ್ಷ, ನಾಯಕ ಜನಾಂಗ, ಜಿರಾಯ್ತಿ, 4) ವೆಂಕಟೇಶ ಬಿನ್ ಮುನಿಶಾಮಪ್ಪ, 38 ವರ್ಷ, ನಾಯಕ ಜನಾಂಗ, ಜಿರಾಯ್ತಿ, 5) ಶಿವಣ್ಣ ಬಿನ್ ನಾರೆಪ್ಪ, 45 ವರ್ಷ, ಪರಿಶಿಷ್ಟ ಜಾತಿ, ಜಿರಾಯ್ತಿ, 6) ದೊಡ್ಡನರಸಿಂಹಪ್ಪ ಬಿನ್ ಲೇಟ್ ಪೂಜಪ್ಪ, 45 ವರ್ಷ, ಪರಿಶಿಷ್ಟ ಜಾತಿ, ಜಿರಾಯ್ತಿ, ಮತ್ತು 7) ಶಿವಣ್ಣ ಬಿನ್ ವೆಂಕಟೇಶಪ್ಪ, 55 ವರ್ಷ, ಗಾಣಿಗರು, ಜಿರಾಯ್ತಿ, ಎಲ್ಲರೂ ವಾಸ ಸೀಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ನಂತರ ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ 1) 52 ಇಸ್ಪೀಟ್ ಕಾರ್ಡುಗಳು, 2) 28,160/- ರೂ ನಗದು ಹಣ, 3) 07 ಮೊಬೈಲ್ ಪೋನುಗಳು ಮತ್ತು 4) ಆರೋಪಿಗಳು ಜೂಜಾಟವಾಡಲು ತಂದಿದ್ದ ಕೆಎ-40 ಆರ್-6836 ನೋಂದಣಿ ಸಂಖ್ಯೆಯ ಸೂಪರ್ ಎಕ್ಸೆಲ್ ಹೆವಿ ಡ್ಯೂಟಿ ಮತ್ತು ಕೆಎ-67 ಇ-8070 ನೋಂದಣಿ ಸಂಖ್ಯೆಯ ಹೀರೋಹೋಂಡಾ ಪ್ಯಾಷನ್ ಪ್ರೋ ದ್ವಿಚಕ್ರವಾಹನಗಳು ಸ್ಥಳದಲ್ಲಿದ್ದು, ಸದರಿ ಮಾಲುಗಳನ್ನು ಸಂಜೆ 5-00 ರಿಂದ ಸಂಜೆ 6-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿದ್ದು, ಸಂಜೆ 6.30 ಗಂಟೆಗೆ ಪಿ.ಎಸ್.ಐ ರವರು ಮಾಲು, ಅಮಾನತ್ತು ಪಂಚನಾಮೆ ಹಾಗೂ ಆರೋಪಿಗಳೊಂದಿಗೆ ಠಾಣೆಗೆ ಹಾಜರಾಗಿ ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಜೂಜಾಟವಾಡುತ್ತಿದ್ದ ಮೇಲ್ಕಂಡ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದರ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ನಂತರ ಪ್ರಕರಣವನ್ನು ದಾಖಲು ಮಾಡಲು ಇ-ಮೇಲ್ ಮುಖಾಂತರ ಘನ ನ್ಯಾಯಾಲಯದ ಅನುಮತಿಗಾಗಿ ನಿವೇದಿಸಿಕೊಂಡಿದ್ದು, ಘನ ನ್ಯಾಯಾಲಯವು ನಿವೇದನೆಯನ್ನು ಪುರಸ್ಕರಿಸಿ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.184/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ:22/07/2020 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದಿ ನಂದಿನಿ ಕೋಂ ಅಶ್ವತ್ಥಯ್ಯ, 26 ವರ್ಷ, ಕುರುಬರು ದ್ರೋಣಕುಂಟೆ ಗ್ರಾಮ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಗಂಡನಿಗೆ ಚಿಕ್ಕಪ್ಪ ಹಾಗೂ ಪಿರ್ಯಾದಿಗೆ ಮಾವನಾದ ಡಿ.ಜಿ.ನಾಗರಾಜಪ್ಪ, ಶಿವರಾಜ್, ರಾಜಶೇಖರ್ ರವರು ದ್ರೋಣಕುಂಟೆ ಗ್ರಾಮದ ಸರ್ವೆ ನಂ.13/24 ರಲ್ಲಿ 7 ಗುಂಟೆ, ಸರ್ವೆ ನಂ.16/3 ರಲ್ಲಿ 10 ಗುಂಟೆ, ಜಮೀನುಗಳು ಜಂಟಿಯಾಗಿದ್ದು, ಇವುಗಳಲ್ಲಿ ಸರ್ವೆ ನಂ.13/24 ಹಾಗೂ 16/3 ರಲ್ಲಿನ ಜಮೀನುಗಳನ್ನು ಪಿರ್ಯಾದಿದಾರರ ಮಾವ ರಾಮಲಿಂಗಯ್ಯ ಬಿನ್ ಜಟ್ಟಿರಂಗಪ್ಪ ಹೆಸರಿಗೆ ಮಾಡಿಸಿಕೊಳ್ಳಬೇಕಾಗಿದ್ದರಿಂದ ಈ ದಿನ ದಿನಾಂಕ:22/07/2020 ರಂದು ಬೆಳಿಗ್ಗೆ ಸುಮಾರು 11-00 ಗಂಟೆ ಸಮಯದಲ್ಲಿ ಸಹಿ ಮಾಡಿಕೊಡುವಂತೆ ಶಿವರಾಜ್ ಹಾಗೂ ರಾಜಶೇಖರ ರವರನ್ನು ಕೇಳಲು ಹೋದಾಗ ಶಿವರಾಜ್ ಬಿನ್ ಜಟ್ಟಿರಂಗಪ್ಪ, ರಾಜಶೇಖರ್ ಬಿನ್ ಜಟ್ಟಿರಂಗಪ್ಪ, ಕಿರಣ್ ಕುಮಾರ್ ಬಿನ್ ಶಿವರಾಜ್ ಹಾಗೂ ನರಸಮ್ಮ ಕೋಂ ಶಿವರಾಜ್ ರವರು ಗುಂಪುಕಟ್ಟಿಕೊಂಡು ಕೋಲು ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿ ಗಂಡ ಅಶ್ವತ್ಥಯ್ಯ ಮತ್ತು ಮಾವ ರಾಮಲಿಂಗಯ್ಯನಿಗೆ ಕೋಲು ಹಾಗೂ ಕಲ್ಲಿನಿಂದ ಹೊಡೆದು ರಕ್ತಗಾಯಗಳನ್ನು ಮಾಡಿದ್ದು, ಕದಿರನಹಳ್ಳಿ ಗ್ರಾಮದ ರವಿ ಬಿನ್ ಭೂತಪ್ಪ, ಪುಟ್ಟ ಬಿನ್ ನಂಜುಂಡಪ್ಪ ರವರು ಜಗಳವನ್ನು ಬಿಡಿಸಿರುತ್ತಾರೆ. ಈ ವಿಚಾರಕ್ಕೆ ಪುನಃ ಬಂದರೆ ಪ್ರಾಣ ಸಹಿತ ಉಳಿಸುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿದ್ದು ಸದರಿ ಮೇಲ್ಕಂಡವರ  ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.185/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ:22/07/2020 ರಂದು ಮದ್ಯಾಹ್ನ 12-15 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕಿರಣ್ ಬಿನ್ ಶಿವರಾಜು, 25 ವರ್ಷ, ಕುರುಬರು, ದ್ರೋಣಕುಂಟೆ ಗ್ರಾಮ ರವರು ನೀಡಿರುವ ಹೇಳಿಕೆಯ ಸಾರಾಂಶವೇನೆಂದರೆ, ಪಿರ್ಯಾದಿದಾರರ ತಂದೆಯವರು 7 ಜನ ಅಣ್ಣತಮ್ಮಂದಿರಾಗಿದ್ದು, ಆ ಪೈಕಿ ಮೊದಲನೇ ರಾಮಲಿಂಗಯ್ಯ ಹಾಗೂ 4ನೇ ಪಿರ್ಯಾದಿದಾರರ ತಂದೆ ಶಿವರಾಜಪ್ಪ ಆಗಿದ್ದು,ಪಿರ್ಯಾದಿದಾರರ ತಂದೆಯ 3ನೇ ಅಣ್ಣನಾದ ಡಿ.ಜಿ ನಾಗರಾಜ ರವರ ಭಾಗಕ್ಕೆ ಬಂದಿರುವ ಪಾಪಗಾರಹಳ್ಳಿ ಗ್ರಾಮದ ಸರ್ವೆ ನಂ.130 ರ ಜಮೀನನ್ನು ಸುಮಾರು 20 ವರ್ಷಗಳಿಂದ ಪಿರ್ಯಾದಿದಾರರ ತಂದೆಯೇ ಉಳುಮೆಮಾಡುತ್ತಿದ್ದು, ಸದರಿ ಜಮೀನು ವಿಚಾರದಲ್ಲಿ ಪಿರ್ಯಾದಿದಾರರ ತಂದೆಗೂ ಪಿರ್ಯಾದಿದಾರರ ದೊಡ್ಡಪ್ಪ ರಾಮಲಿಂಗಯ್ಯನಿಗೂ ಆಗಾಗ್ಗೆ ಗಲಾಟೆಗಳು ಆಗುತ್ತಿದ್ದು, ಈ ದಿನ ದಿನಾಂಕ:22/02/2020 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಪಿರ್ಯಾದಿ ಅವರ ತಂದೆ ಶಿವರಾಜಪ್ಪ, ಮತ್ತು ತಾಯಿ ನರಸಮ್ಮ ರವರು ಸದರಿ ಜಮೀನಿನಲ್ಲಿ ಉಳುಮೆಮಾಡುತ್ತಿದ್ದಾಗ ಪಿರ್ಯಾದಿದಾರರ ದೊಡ್ಡಪ್ಪ ರಾಮಲಿಂಗಯ್ಯ, ಅವರ ಮಗ ಅಶ್ವತ್ಥಯ್ಯ,ಮತ್ತು ಹೆಂಡತಿ ಲಕ್ಷ್ಮೀನರಸಮ್ಮ ಏಕಾ ಏಕಿ ಪಿರ್ಯಾದಿದಾರರ ಜಮೀನಿನ ಬಳಿ ಬಂದು ಉಳುಮೆ ಮಾಡಬಾರದು ಎಂದು ತಡೆದರು ಸ್ಥಳದಲ್ಲಿ ಇದ್ದ ನಮ್ಮ ತಾಯಿ ನರಸಮ್ಮ ಮತ್ತು ನಮ್ಮ ತಂದೆ ಶಿವರಾಜಪ್ಪನಿಗೆ ರಾಮಲಿಂಗಯ್ಯ ಮತ್ತು ಅತನ ಮಗ ಅಶ್ವತ್ಥಯ್ಯ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಲಕ್ಷ್ಮೀನರಸಮ್ಮ ನಮ್ಮ ತಾಯಿಯನ್ನು ಸೂಳೆ ಮುಂಡೆ ಎಂದು ತಳ್ಳಿದರು ಈ ಜಮೀನು ತಂಟ್ಟೆಗೆ ಬರಬಾರದು ಎಂದು ಅವಾಚ್ಯ ಶಬ್ದಗಳಿಂದ ಬೈದುಳು ನನಗೆ ರಾಮಲಿಂಗಯ್ಯ ಮತ್ತು ಅವರ ಮಗ ಅಶ್ವತ್ಥಯ್ಯ ಕುಡುಗೂಲಿನಿಂದ ಒಡೆಯಲು ಬಂದಗ ನನ್ನ ಕೈ ಅಡ್ಡ ಇಟ್ಟಿದಾಗ ಬಲ ಗೈನ ಮದ್ಯದ ಬೆರಳಿಗೆ ರಕ್ತಗಾಯಮಾಡಿದ್ದರು ರಾಮಲಿಂಗಯ್ಯ ನನ್ನ ಬಲಗೈಗೆ ಬಾಯಿಂದ ಕಚ್ಚಿರುತ್ತಾರೆ ನಮ್ಮ ಮೇಲೆ ಗಲಾಟೆ ಮಾಡಿರುವ ಈ ಮೇಲ್ಕಂಡವರ  ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.186/2020 ಕಲಂ. 143,147,148,114,120B,302 ರೆ/ವಿ 149 ಐ.ಪಿ.ಸಿ:-

          ದಿನಾಂಕ 22-07-2020 ರಂದು 20-30 ಗಂಟೆಗೆ  ಪಿರ್ಯಾದಿದಾರರಾದ  ಸಿದ್ದೇಶ್ವರ ಬಿನ್  ಗಂಗಪ್ಪ, 45 ವರ್ಷ, ಒಕ್ಕಲಿಗರು, ವ್ಯವಸಾಯ. ವಾಸ ಹಳೇ ಉಪ್ಪಾರಹಳ್ಳಿ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆ ತಾಯಿಗೆ  ಮೂರು ಜನ ಗಂಡು ಮಕ್ಕಳು  ಮೂರು ಜನ ಗಂಡು ಮಕ್ಕಳಿರುತ್ತೇವೆ.  ಎಲ್ಲರಿಗೂ ಮಧುವೆಗಳಾಗಿರುತ್ತೆ.   ತನ್ನ ಕಿರಿಯ ತಮ್ಮ ರಮೇಶ ಬಿನ್ ಗಂಗಪ್ಪ, 32 ವರ್ಷ, ಕೋಟಾಲದಿನ್ನೆ ಕ್ರಾಸ್ ನ ಆಟೋ ಸ್ಟ್ಯಾಂಡ್ ನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು.  ಈತ ಗುಂಡಾಪುರ ಬಳಿ ಇರುವ ಸಾಬೀರಾ ಎಂಬುವವರನ್ನು ಪ್ರೀತಿಸಿ ಮಧುವೆಯಾಗಿದ್ದು, ಗುಂಡಾಪುರದಲ್ಲಿರುವ ತನ್ನ ಹೆಂಡತಿ ಮನೆಯಲ್ಲೇ ವಾಸವಾಗಿದ್ದನು.   ಕೊರೋನ ಖಾಯಿಲೆ ಪ್ರಾರಂಬವಾದಾಗಿನಿಂದ ತನ್ನ ಹೆಂಡತಿ ಮನೆಯಲ್ಲೇ ಇರುತ್ತಿದ್ದನು. ಹಾಗು ಆಗಾಗ ಕೋಟಾಲದಿನ್ನೆಗೆ ಬಂದು ತನ್ನ ಸ್ನೇಹಿತರನ್ನು ಮಾತನಾಡಿಕೊಂಡು ಬರುತ್ತಿದ್ದನು. 2014 ರಲ್ಲಿ  ಯುಗಾದಿ ಹಬ್ಬದಲ್ಲಿ ನಮ್ಮ ಗ್ರಾಮದ ಬಲರಾಂ ಎಂಬುವವನು ನರೇಂದ್ರ ಎಂಬುವನನ್ನು ಎತ್ತಿಕಟ್ಟಿ ಗಲಾಟೆ ಮಾಡಿಸಿದ್ದನು.  ಈ ಬಗ್ಗೆ  ಬಲರಾಂನ ಮೇಲೆ  ನನ್ನ ತಮ್ಮ ಕೇಸು ದಾಖಲಿಸಿದ್ದ.  ಈ ವಿಚಾರದಲ್ಲಿ ರಮೇಶನ ಮೇಲೆ ದ್ವೇಷ ಸಾಧಿಸುತ್ತಿದ್ದ. ಈಗ್ಗೆ  2 ವರ್ಷಗಳ ಹಿಂದೆ ನಮ್ಮ ಗ್ರಾಮದ ರಾಮರೆಡ್ಡಿ ಎಂಬುವವರನ್ನು ಬೊಮ್ಮಶೆಟ್ಟಿಹಳ್ಳಿ  ಬಾರ್ ಬಳಿ ಕೊಲೆ ಮಾಡಲಾಗಿತ್ತು. ಹಾಗು ನರೇಂದ್ರನ ಮೇಲೂ ಸಹ ಹಲ್ಲೆ ಮಾಡಿದ್ದು, ನರೇಂದ್ರ ಬದುಕುಳಿದಿದ್ದ.  ಈ ಬಗ್ಗೆ   ನನ್ನ ತಮ್ಮನ ಮೇಲೂ ಸಹ ಕೇಸು ದಾಖಲಾಗಿತ್ತು.   ಈ ವಿಚಾರದಲ್ಲಿ  ಬಲರಾಂ, ನರೇಂದ್ರ, ಗಿರೀಶ, ಅಂಬರೀಶ  ಇವರು ನನ್ನ ತಮ್ಮ ರಮೇಶನ ಮೇಲೆ ದೇಷ ಸಾಧಿಸುತ್ತಿದ್ದರು. ಈ ದಿನ ದಿನಾಂಕ:22/07/2020 ರಂದು  ಸಂಜೆ ಸುಮಾರು 6-00 ಗಂಟೆಯಲ್ಲಿ ನಾನು ಮತ್ತು ನಮ್ಮ ಗ್ರಾಮದ ಶ್ರೀಧರ ಬಿನ್ ನಂಜುಂಡಪ್ಪ ಎಂಬುವರೊಂದಿಗೆ ಕೋಟಾಲದಿನ್ನೆ ಕ್ರಾಸ್ ನಲ್ಲಿ ನಮ್ಮ ಗ್ರಾಮಕ್ಕೆ ಹೋಗಲು ಆಟೋಗಾಗಿ ಕಾಯುತ್ತಿದ್ದಾಗ, ನನ್ನ ತಮ್ಮ ರಮೇಶ ಹಾಗು ಆತನ ಸ್ನೇಹಿತ ಶಿವಕುಮಾರನೊಂದಿಗೆ   ಕೋಟಾಲದಿನ್ನೆ ಕ್ರಾಸ್ ನಲ್ಲಿ  ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದರು.  ನಾನು ಮತ್ತು  ಶ್ರೀಧರ ನನ್ನ ತಮ್ಮನನ್ನು  ಮಾತನಾಡಿಸುತ್ತಿದ್ದಾಗ,  ರಸ್ತೆಯ ಮತ್ತೊಂದು ಬದಿಯಲ್ಲಿ   ನನ್ನ ತಮ್ಮ ರಮೇಶನ ವಿರೋಧಿಗಳಾದ  ವೆಂಕಟರೆಡ್ಡಿ @ ಜಂಗ್ಲೀರೆಡ್ಡಿ, ಈತನೊಂದಿಗೆ  ಅರ್ಜುನ್, ವೆಂಕಟೇಶ್ ರವರುಗಳು ಉಪ್ಪಾರಹಳ್ಳಿ  ಹರೀಶನ ಕಪ್ಪು ಬಣ್ಣದ ಪಲ್ಸರ್ ಬೈಕ್ ನಲ್ಲಿ  ಇದ್ದರು ,  ಇವರಿಂದ  ಸ್ವಲ್ಪ ದೂರದಲ್ಲಿ  ಬಲರಾಂ, ಅಂಬರೀಶ  ನರೇಂದ್ರ , ಗಿರೀಶ,  ಮತ್ತು ರಾಮರೆಡ್ಡಿ, ನಿಂತಿದ್ದು, ಪಲ್ಸರ್ ಬೈಕ್ ನಲ್ಲಿದ್ದವರಿಗೆ ಏನೋ ಸನ್ನೆ ಮಾಡುತ್ತಿದ್ದರು. ಇದನ್ನು ನೋಡಿ,  ನನ್ನ ತಮ್ಮ  ನನಗೆ ಆಗದವರು ಎಲ್ಲಾ ಇಲ್ಲೇ ಏನೋ ಸನ್ನೆ ಮಾಡುತ್ತಿದ್ದಾರೆ  ಏನೋ ನನಗೆ ತೊಂದರೆ ಮಾಡಲು ಬಂದಿರಬಹುದು ಇಲ್ಲಿಂದ ಬೇಗ ಗುಂಡಾಪುರಕ್ಕೆ ಹೋಗುತ್ತೇನೆ ಎಂದು ಹೇಳಿ, ನನ್ನ ತಮ್ಮನ ಜೊತೆಗಿದ್ದ ಶಿವಕುಮಾರನ ಜೊತೆ  ಟಿ.ವಿ.ಎಸ್ ದ್ವಿಚಕ್ರ ವಾಹನದಲ್ಲಿ ಹೋದರು. ಅರ್ಧ ಗಂಟೆ ನಂತರ  ಬೆಂಗಳೂರಿನಲ್ಲಿರುವ ನಮ್ಮ ಬಾವನಾದ ರವಿಕುಮಾರ್ ರವರು ನನಗೆ ಮೋಬೈಲ್ ಗೆ ಕರೆ ಮಾಡಿ,  ಕಾದಲವೇಣಿಯಲ್ಲಿ ರಮೇಶನ ಮೇಲೆ ಯಾರೋ ಗಲಾಟೆ  ಮಾಡುತ್ತಿರುತ್ತಾರೆಂದು  ನನಗೆ ಫೋನ್ ಬಂದಿದೆ  ಅಲ್ಲಿಗೆ ಹೋಗಿ ನೋಡಿ  ಎಂದರು.   ನಾನು ರಾತ್ರಿ 7-00 ಗಂಟೆಗೆ ಬಂದು ನೋಡಲಾಗಿ,  ನನ್ನ ತಮ್ಮ ಕಾದಲವೇಣಿಯಲ್ಲಿ  ಗೊಲ್ಲರ ನರಸಿಂಹಪ್ಪ ಎಂಬುವವರ ಮನೆಯಲ್ಲಿ ಕೊಲೆಯಾಗಿದ್ದನು. ಅಲ್ಲಿಯೇ ಇದ್ದ ಶಿವಕುಮಾರ್ ನನ್ನು ವಿಚಾರಿಸಿದಾಗ, ಇವರಿಬ್ಬರೂ ಟಿವಿಎಸ್.ನಲ್ಲಿ ಕೋಟಾಲದಿನ್ನೆಯಿಂದ ಗುಂಡಾಪುರಕ್ಕೆ ಹೋಗಲು ಸಂಜೆ ಸುಮಾರು 6-15 ಗಂಟೆ ಸಮಯದಲ್ಲಿ ಕಾದಲವೇಣಿ ಸಮೀಪ ಬರುತ್ತಿದ್ದಂತೆ ಕೋಟಾಲದಿನ್ನೆಯಿಂದ  ವೆಂಕಟರೆಡ್ಡಿ  ಅಲಿಯಾಸ್ ಜಂಗ್ಲಿರೆಡ್ಡಿ, ಅರ್ಜುನ್, ವೆಂಕಟೇಶ್ ರವರುಗಳು  ಪಲ್ಸರ್ ದ್ವಿಚಕ್ರ ವಾಹನದಲ್ಲಿ  ಲಾಂಗ್ ಗಳನ್ನು ಹಿಡಿದುಕೊಂಡು  ಹಿಂದೆಯೇ ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಟಿವಿಎಸ್ ಗಾಡಿಯ ಮಿರರ್ ನಲ್ಲಿ ಕಂಡು ರಮೇಶನಿಗೆ ಹೇಳಿ, ಕಾದಲವೇಣಿಯಲ್ಲಿ ರಸ್ತೆ ಬದಿಗೆ ಟಿವಿಎಸ್ ನಿಲ್ಲಿಸಿ, ರಮೇಶ ಅಲ್ಲಿಯೇ ಇದ್ದ ಮನೆಯೊಳಕ್ಕೆ ಓಡಿ  ಹೋದಾಗ, ಪಲ್ಸರ್ ಬೈಕ್ ನಲ್ಲಿ ಬರುತ್ತಿದ್ದವರು  ರಮೇಶನನ್ನು ಹಿಂಬಾಲಿಸಿಕೊಂಡು ಹೋಗಿ, ಮೂರೂ ಜನರು ರಮೇಶನಿಗೆ ಲಾಂಗ್ ಗಳಿಂದ ಹೊಡೆದು ಕೊಚ್ಚಿ  ಕೊಲೆ ಮಾಡಿ,  ನಂತರ ಅವರು ಬಂದಿದ್ದ ಪಲ್ಸರ್ ಬೈಕ್ ನಲ್ಲಿ  ಮೂರು ಜನರು ಪರಾರಿಯಾಗಿರುತ್ತಾರೆಂದು ತಿಳಿಯಿತು. ನನ್ನ ತಮ್ಮನ ಮೇಲಿನ ದ್ವೇಷದಿಂದ ಮೇಲ್ಕಂಡವರು ಕೊಲೆ ಮಾಡುವ ಒಳಸಂಚು ನಡೆಸಿ, ಕುಮ್ಮಕ್ಕು ನೀಡಿ ಈ ದಿನ ಅಕ್ರಮ ಗುಂಪು ಸೇರಿ, ನನ್ನ ತಮ್ಮನನ್ನು ಲಾಂಗ್ ಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿರುತ್ತಾರೆ.  ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.120/2020 ಕಲಂ. 78(3) ಕೆ.ಪಿ ಆಕ್ಟ್:-

          ದಿನಾಂಕ;22/07/2020 ರಂದು ಮದ್ಯಾಹ್ನ 2-15 ಗಂಟೆಗೆ ನ್ಯಾಯಾಲಯದ ಪಿಸಿ-89 ಮಂಜುನಾಥ ರವರು ಠಾಣಾ ಎನ್.ಸಿ.ಆರ್ ಸಂಖ್ಯೆ;292/2020 ರಲ್ಲಿ ಕ್ರಮಿನಲ್ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದು ಠಾಣೆಗೆ ಎಂ,ಟಿ,ನಂಬರ್ 249/2020 ರಂತೆ ಆದೇಶವನ್ನು ತಂದು ಹಾಜರುಪಡಿಸಿದ ದೂರಿನ ಸಾರಾಂಶವೇನೆಂದರೆ ದಿನಾಂಕ:21/07/2020 ರಂದು ಮದ್ಯಾಹ್ನ 3.30 ಗಂಟೆ ಸಮುದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಡಿ,ಸಿ,ಬಿ/ ಸಿ,ಇ,ಎನ್ ಪೊಲೀಸ್ ಠಾಣೆಯ ಎಚ್,ಸಿ -208 ಗೀರಿಶ್ ಕೆ,ಆರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಠಾಣೆಯ ಪೊಲೀಸ್ ಇನ್ಸಪೆಕ್ಟರ್  ಶ್ರೀ ರಾಜಣ್ಣ ನ್ ರವರು ತನಗೆ ಮತ್ತು ತಮ್ಮ ಠಾಣೆಯ ಎಚ್,ಸಿ-71 ಸುಬ್ರಮಣಿ, ಪಿ,ಸಿ-535 ಶ್ರೀನಿವಾಸ ರವರಿಗೆ ಗುಡಿಬಂಡೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ಮಾಡಲು ನೇಮಿಸಿ ಕಳುಹಿಸಿಕೊಟ್ಟಿದ್ದು ಅದರಂತೆ ತಾವುಗಳು  ಮದ್ಯಾಹ್ನ 1.00 ಗಂಟೆಗೆ ಸಾದಲಿ ಕ್ರಾಸ್ ನಲ್ಲಿ ಗಸ್ತು ಮಾಡುತ್ತಿದ್ದಾಗ ಭಾತ್ಮಿಧಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಪೆರೇಸಂದ್ರ ಗ್ರಾಮದ ರಾಜರಾಜೇಶ್ವರಿ ದೇವಸ್ಥಾನದ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಮಟ್ಕಾ ಅಂಕಿಗಳನ್ನು ಬರೆಯುತ್ತಿದ್ದ ರಾಮಕೃಷ್ಣಪ್ಪ @ ಸ್ವಾಮಿ ಬಿನ್ ಲೇಟ್ ಮುನಿಕೃಷ್ಣಪ್ಪ 63 ವರ್ಷ, ಬಲಜಿಗರು, ಜಿರಾಯ್ತಿ ವಾಸ:ಪೆರೇಸಂದ್ರ ಗ್ರಾಮರವರನ್ನು ವಶಕ್ಕೆ ಪಡೆದು ಮಟ್ಕಾ ಜೂಜಾಟಕ್ಕೆ ಬಳಸಿದ್ದ 1) ಒಂದು ಮಟ್ಕಾ ಚೀಟಿ, 2) ಒಂದು ಬಾಲ್ ಪಾಯಿಂಟ್ ಪೆನ್ 3) 1340/-ರೂಪಾಯಿಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಆರೋಪಿ ರಾಮಕೃಷ್ಣಪ್ಪ ಮತ್ತು ಜೂಜಾಟಕ್ಕೆ ಬಳಸಿದ ಮೇಲ್ಕಂಡ ಮಾಲುಗಳನ್ನು ಹಾಗೂ ಅಸಲು ಪಂಚನಾಮೆಯನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ದೂರಾಗಿರುತ್ತೆ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.83/2020 ಕಲಂ. ಮನುಷ್ಯ ಕಾಣೆ :-

          ದಿನಾಂಕ.23.07.2020 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿ ಶ್ರೀಮತಿ. ಸುಧಾ ಕೊಂ ಚನ್ನಕೃಷ್ಣ, 1ನೇ ವಾಡರ್ು, ಕೆ.ಕೆ.ಪೇಟೆ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ತಾನು ಸುಮಾರು 3 ವರ್ಷಗಳ ಹಿಂದೆ ಕೆ.ಕೆ.ಪೇಟೆಯಲ್ಲಿ ವಾಸವಾಗಿರುವ ನಾರಾಯಣಸ್ವಾಮಿ ರವರ ಮಗನಾದ 36 ವರ್ಷ ವಯಸ್ಸಿನ ಚನ್ನಕೃಷ್ಣ ರವರನ್ನು ಮದುವೆ ಮಾಡಿಕೊಂಡಿದ್ದು, ತನ್ನ ಗಂಡನ ಹೆಸರಿಗೆ ಶಿಡ್ಲಘಟ್ಟ ತಾಲ್ಲೂಕು ಗೌಡನಕೆರೆ ಬಳಿ 3 ಗುಂಟೆ ಜಮೀನು ಇದ್ದು, ಸದರಿ ಜಮೀನು ಮಾರಾಟ ಮಾಡಲು ಪ್ರಯತ್ನಿಸಿರುತ್ತಾನೆ. ಈಗ ಸದರಿ ಜಮಣಿಗೆ ಅಕ್ಕಪಕ್ಕದ ಜಮೀನಿದಾರರು ಮಾರಾಟ ಮಾಡಲು ತೊಂದರೆ ಮಾಡುತ್ತಿದ್ದರು. ಹೀಗಿರುವಾಗ ತನ್ನ ಗಂಡ ದಿನಾಂಕ.22.07.2020 ರಂದು ಬೆಳಿಗ್ಗೆ ಸುಮಾರು 8.30 ಗಂಟೆಯಲ್ಲಿ ಮನೆಯಿಂದ ಹೋದವರು ಪುನಃ ಮನೆಗೆ ವಾಪಸ್ಸು ಬಂದಿರುವುದಿಲ್ಲ. ಗಂಡನ ಪೋನ್ ನಂ.9880679808 ಗೆ ಕರೆ ಮಾಡಿದರೆ ಸ್ವೀಚ್ ಆಪ್ ಆಗಿರುತ್ತೆ. ಹುಡುಕಡಿದರೂ ಸಿಕ್ಕಿರುವುದಿಲ್ಲ. ಆದ್ದರಿಂದ ಕಾಣೆಯಾದ ಗಂಡನನ್ನು ಪತ್ತೆ ಮಾಡಿಕೊಡಲು ಕೊಟ್ಟ ದೂರಿನ ಮೇರೆಗೆ ಠಾಣಾ ಮೊ.ಸಂ.83/2020 ಕಲಂ. ಮನುಷ್ಯ ಕಾಣೆಯಾಗಿರುತ್ತಾರೆ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.