ದಿನಾಂಕ :23/06/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.142/2020 ಕಲಂ. 379 ಐ.ಪಿ.ಸಿ:-

          ದಿ: 22-06-2020 ರಂದು ಮದ್ಯಾಹ್ನ 1:15 ಗಂಟೆಗೆ ಪಿ.ಎಸ್.ಐ ಸಾಹೇಬರವರು ಠಾಣೆಯಲ್ಲಿ ಮಾಲು, ಪಂಚನಾಮೆ ಮತ್ತು ವರಧಿಯನ್ನು ನೀಡಿದ್ದರ ಸಾರಾಂಶ – ದಿನಾಂಕ: 22-06-2020 ರಂದು  ಬೆಳಿಗ್ಗೆ  11:30  ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ, ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ,  ಯಲ್ಲಂಪಲ್ಲಿ ಗ್ರಾಮದ ಕೆರೆಯಲ್ಲಿ ಯಾರೋ ವ್ಯಕ್ತಿಗಳು ಆಕ್ರಮವಾಗಿ ಮರಳನ್ನು ಕಳವು ಮಾಡುತ್ತಿದ್ದಾರೆಂದು ಬಂದ ಮಾಹಿತಿಯ ಮೇರೆಗೆ ನಾನು ಠಾಣೆಯ ಜೀಪ್ ಸಂಖ್ಯೆ ಕೆಎ-40-ಜಿ-537 ರಲ್ಲಿ ನಾನು ಮತ್ತು ಜೀಪ್ ಚಾಲಕ ಎ.ಹೆಚ್.ಸಿ-34- ಅಲ್ತಾಫ್ ಫಾಷ , ಸಿಬ್ಬಂದಿಯಾದ ಸಿ.ಪಿ.ಸಿ- 103 ಬೆಯ್ಯಾರೆಡ್ಡಿ ರವರೊಂದಿಗೆ, ಗೂಳೂರು ವೃತ್ತದ ಬಳಿ ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಬಂದ  ಯಲ್ಲಂಪಲ್ಲಿ ಗ್ರಾಮದ ಕೆರೆಯ ಬಳಿಗೆ ಸುಮಾರು 12:00 ಗಂಟೆಗೆ ಹೋಗಿ ನೋಡಲಾಗಿ, ಸ್ಥಳದಲ್ಲಿ  ಆಟೋದಲ್ಲಿ ಯಾರೋ ಆಸಾಮಿಗಳು ಮರಳು ತುಂಬುತ್ತಿದ್ದು, ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು  ನೋಡಿ ಓಡಿ ಹೋದರು. ಸ್ಥಳದಲ್ಲಿ ಪರಿಶೀಲಿಸಲಾಗಿ ಕೆ.ಎ-40 ಎ-9905 ಬಜಾಜ್ ಕಂಪನಿಯ ಹಳದಿ ಬಣ್ಣದ ಆಟೋದಲ್ಲಿ  ಮರಳನ್ನು ಕರೆಯಲ್ಲಿ ಕಳವು ಮಾಡಿ  ಆಟೋದಲ್ಲಿ  ಬಾಡಿ ಲೆವೆಲಿಗೆ  ತುಂಬಿಸಿಕೊಂಡು ಸದರಿ ಆಟೋದಲ್ಲಿ  ಸರ್ಕಾರಿ ಸ್ವತ್ತಾದ ಮರಳನ್ನು ಯಾವುದೇ ಪರವಾನಗಿ ಇಲ್ಲದೆ  ಕಳ್ಳತನ ಮಾಡಿಕೊಂಡು ಹೋಗುತ್ತಿರುವುದು ಕಂಡು ಬಂದಿರುತ್ತದೆ.  ಸ್ಥಳದಲ್ಲಿ  ಮದ್ಯಾಹ್ನ 12:00 ಗಂಟೆಯಿಂದ 12:45 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಆಟೋವನ್ನು ವಶಕ್ಕೆ ತೆಗೆದುಕೊಂಡು ಮದ್ಯಾಹ್ನ 01:15 ಗಂಟೆಗೆ ಠಾಣೆಗೆ ಬಂದು ಸದರಿ ಮರಳು ತುಂಬಿರುವ ಆಟೋವನ್ನು ತಮ್ಮ ವಶಕ್ಕೆ ನೀಡುತ್ತಿದ್ದು, ಮರಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಕೆ.ಎ-40 ಎ-9905 ಆಟೋ ಚಾಲಕ ಮತ್ತು ಮಾಲೀಕರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಸೂಚಿಸಿದೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.143/2020 ಕಲಂ. 15(ಎ) ಕೆ.ಇ ಆಕ್ಟ್:-

          ದಿ: 22-06-2020 ರಂದು ಮದ್ಯಾಹ್ನ 3:00 ಗಂಟೆಗೆ ಪಿ.ಎಸ್.ಐ ಸಾಹೇಬರವರು ಠಾಣೆಯಲ್ಲಿ ಮಾಲು, ಪಂಚನಾಮೆ ಮತ್ತು ವರಧಿಯನ್ನು ನೀಡಿದ್ದರ ಸಾರಾಂಶ  – ದಿ: 22-06-2020 ರಂದು ಬೆಳಗ್ಗೆ ಪಿ.ಎಸ್.ಐ ಸಾಹೇಬರವರು ಮಾಲು, ಮಹಜರ್ ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ದಿನಾಂಕ; 22-06-2020 ಮದ್ಯಾಹ್ನ 1.30 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಬಾಗೇಪಲ್ಲಿ ತಾಲ್ಲೂಕು, ಪುಟ್ಟಪರ್ತಿ ಗ್ರಾಮದಿಂದ ಆದಿಗಾನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ  ಪಕ್ಕದಲ್ಲಿ ಸುರೇಶ್ ರೆಡ್ಡಿ ಎಸ್ಟೇಟ್ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ಕುಳಿತುಕೊಂಡು ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ  ಶ್ರೀ ಆನಂದ ಸಿಪಿಸಿ-81  ಹಾಗೂ ಜೀಪ್ ಚಾಲಕ ಎ.ಹೆಚ್.ಸಿ-34 ಅಲ್ತಾಪ್ ಪಾಷಾ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-537 ವಾಹನದಲ್ಲಿ ಬಂದು ಬಾಗೇಪಲ್ಲಿ ಬಸ್ ನಿಲ್ದಾಣದ್ದ ಪಂಚರನ್ನು ಕರೆದು ಮೇಲ್ಕಂಡ ವಿಚಾರವನ್ನು ತಿಳಿಸಿ ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 1.45 ಗಂಟೆಗೆ ಹೋಗಿ ನೋಡಲಾಗಿ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದು, ಅವನನ್ನು ಓಡಿ ಹೋಗದಂತೆ ನಾವು ಪಂಚರ ಸಮಕ್ಷಮ ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಕೆ. ಶಂಕರ ಬಿನ್ ಲೇಟ್ ರಾಮಚಂದ್ರಪ್ಪ, 29 ವರ್ಷ, ವಾಲ್ಮೀಕಿ ಜನಾಂಗ, ಗಾರೆ ಕೆಲಸ, ವಾಸ ಗುಂತಪಲ್ಲಿ  ಗ್ರಾಮ, ಮಂದಲಪಲ್ಲಿ ಪಂಚಾಯ್ತಿ, ಗೋರಂಟ್ಲ ಮಂಡಲಂ, ಹಿಂದೂಪುರ  ತಾಲ್ಲೂಕು ಅನಂತಪುರ ಜಿಲ್ಲೆ, ಆಂದ್ರಪ್ರದೇಶ ರಾಜ್ಯ  ಎಂತ ತಿಳಿಸಿದರು. ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 180 ML ನ HAYWARDS CHEERS WHISKY ಯ 02 ಖಾಲಿ ಟೆಟ್ರಾ ಪಾಕೇಟ್ ಗಳು, 01 ಖಾಲಿ ವಾಟರ್ ಬಾಟಲ್, ಮದ್ಯಸೇವನೆ ಮಾಡಿರುವ 02 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 180 ಎಂ.ಎಲ್. HAYWARDS CHEERS WHISKY 10 ಟೆಟ್ರಾ ಪಾಕೇಟ್ ಇದ್ದು, ಒಟ್ಟು 1,800 ಎಂ.ಎಲ್. ಮದ್ಯವಿದ್ದು ಇವುಗಳ ಒಟ್ಟು ಬೆಲೆ 702/- ರೂ.ಗಳಾಗಿರುತ್ತೆ. ಸದರಿ ಆಸಾಮಿಗಳಿಗೆ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಮದ್ಯಾಹ್ನ 2.45 ಗಂಟೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ವರದಿಯನ್ನು ನೀಡಿರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಮದ್ಯಾಹ್ನ 3:00 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.80/2020 ಕಲಂ. 353,506 ಐ.ಪಿ.ಸಿ:-

          ದಿನಾಂಕ 22/06/2020 ರಂದು ಸಂಜೆ 07.40 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀ ವಿಕ್ರಮ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಚಿಕ್ಕಬಳ್ಳಾಪುರ ತಾಲ್ಲೂಕು ಆವಲಗುರ್ಕಿ ಗ್ರಾಮದ ಸರ್ವೆ ನಂ 201 ರ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ವಿದ್ಯುತ್ ಕಂಬಗಳನ್ನು ಶ್ರೀಮತಿ ರೇಣುಕಾ ಕೋಮ್ ಚಂದ್ರಶೇಖರ್ ಬಾಗಲೂರು, ಬೆಂಗಳೂರು ರವರು ಹಾಕಿಸಿದ್ದು ಇವರ ಮೇಲೆ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಅರಣ್ಯ ಅಪರಾಧ ಪ್ರಕರಣ ಸಂಖ್ಯೆ 8/2020-21 ದಿನಾಂಕ 17/06/2020 ರಂತೆ ಪ್ರಕರಣ ದಾಖಲಿಸಲಾಗಿದೆ ತದ ನಂತರ ಸದರಿ ಗ್ರಾಮದ ಸರ್ವೆ ನಂ 201 ರ ಮೀಸಲು ಅರಣ್ಯದ ಗಡಿ ರೇಖೆಯನ್ನು ಹಾಳು ಮಾಡಿ ಒತ್ತುವರಿ ಮಾಡಿರುವ ಕಾರಣ ಇವರ ಮೇಲೆ ಅರಣ್ಯ ಸಂರಕ್ಷಣಾ ಕಾಯಿದೆ ಪ್ರಕಾರ ಅರಣ್ಯ ಅಪರಾಧ ಪ್ರಕರಣ ಸಂಖ್ಯೆ 9/2020-21 ದಿನಾಂಕ 20/06/2020 ರಂತೆ 2ನೇ ಪ್ರಕರಣ ದಾಖಲಿಸಲಾಗಿದೆ ಆದ್ದರಿಂದ ಶ್ರೀಮತಿ ರೇಣುಕಾ ಕೋಂ ಚಂದ್ರಶೇಖರ್ ರವರು ತಮ್ಮ ಸಿಬ್ಬಂದಿಯವರಾದ ರಮೇಶ ಬಾಬು ವಿ ವಲಯ ಅರಣ್ಯ ಅಧಿಕಾರಿಗಳು ಮಂಡಿಕಲ್ ಶಾಖೆ ರವರಿಗೆ ದೂರವಾಣಿ ಮೂಲಕ ಸಂರ್ಪಕ ಪಡೆದು ಜೀವ ಬೆದರಿಕೆ ಹಾಕುತ್ತಿದ್ದು ಇಲ್ಲಸಲ್ಲದ ಆರೋಪ ಮಾಡಿ ಅನಾಮತ್ತು ಪಡಿಸುತ್ತೇನೆಂದು ಬೆದರಿಕೆ ಹಾಕಿ ಸದರಿ ಪ್ರಕರಣಗಳನ್ನು ರದ್ದು ಪಡಿಸಬೇಕೆಂದು ಆಗಾಗ ದೂರುತ್ತಿದ್ದು ಕೆಲಸದಲ್ಲಿ ಓಡಾಡುವಾಗ ಜೀವ ತೆಗೆಯುತ್ತೇನೆಂದು ಹೆದರುಸಿದ್ದಾರೆಂದು ಹಾಗು ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆಂದು ಮಾನಸಿಕವಾಗಿ ಹಾಗೂ ಭಯದಿಂದ ಕೆಲಸ ನಿರ್ವಹಿಸುತ್ತಿರುವ ಪರಿಸ್ಥಿತಿ ಇರುವುದರಿಂದ ತಮಗೆ ರಕ್ಷಣೆ ನೀಡಬೇಕೆಂದು ಶ್ರೀಮತಿ ರೇಣುಕಾರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ್ದ ಮೇರೆಗೆ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.81/2020 ಕಲಂ. 87 ಕೆ.ಪಿ ಆಕ್ಟ್:-

          ದಿ:22.06.2020 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶರತ್ ಕುಮಾರ್ ಪಿ.ಎಸ್.ಐ ಡಿಸಿಬಿ ಸಿ.ಇ.ಎನ್ ವಿಶೇಷ ಪೊಲೀಸ್ ಠಾಣೆರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ ಈ ದಿನ ದಿ:22.06.2020 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಸೇಟ್ ದಿನ್ನೆ ಬಳಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ತಾಲ್ಲೂಕು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ರಾಮಗಾನಪರ್ತಿ ಗ್ರಾಮದ ನಾಗಿರೆಡ್ಡಿ ಲೇ ಔಟ್ ಪಕ್ಕದ ಸರ್ಕಾರಿ ಹಳ್ಳದಲ್ಲಿರುವ ಒಂದು ಹೊಂಗೆ ಮರದ ಕೆಳಗೆ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟುಕೊಂಡು ನಿಷೇದಿತ ಅಂದರ್ – ಬಾಹರ್ ಜೂಜಾಟವಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯೊಂದಿಗೆ ದಾಳಿ ಮಾಡಿ 03 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಒಬ್ಬ ಆಸಾಮಿ ಸ್ಥಳದಿಂದ ಪರಾರಿಯಾಗಿದ್ದು, ಜೂಜಾಟಕ್ಕೆ ಬಳಸಿದ್ದ ಒಂದು ಪ್ಲಾಸ್ಟಿಕ್ ಚೀಲ , 52 ಸ್ಪೀಟ್ ಎಲೆಗಳು , ಪಣಕ್ಕೆ ಇಟ್ಟಿದ್ದ ಟ್ಟು 4430/- ರೂ ನಗದು ಹಣವನ್ನು ಪಂಚರ ಸಮಕ್ಷಮ  ಅಮಾನತ್ತು ಪಡಿಸಿಕೊಂಡು  ಆರೋಪಿತರ ವಿರುದ್ದ ಮುಂದಿನ ಕ್ರಮಕ್ಕಾಗಿ ನೀಡಿದ ವರದಿ ಮೇರೆಗೆ ಈ ಪ್ರ ವ ವರಧಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.82/2020 ಕಲಂ. 15(ಎ), 32(3) ಕೆ.ಇ ಆಕ್ಟ್:-

          ದಿ:23.06.2020 ರಂದು ಬೆಳಿಗ್ಗೆ 10-10 ಗಂಟೆಗೆ ಪಿ ಎಸ್ ಐ ಸಾಹೇಬರು ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ಬೆಳಿಗ್ಗೆ 10-00 ಗಂಟೆಗೆ ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಬಾಲಕುಂಟಹಳ್ಳಿ ಗ್ರಾಮದ ವಾಸಿ ಪಾಪಯ್ಯ ಬಿನ್ ಚಿಕ್ಕನರಸಿಂಹಪ್ಪ 70 ವರ್ಷ ಪ.ಜಾತಿ ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಸದರಿ ಆಸಾಮಿಯ ವಿರುದ್ದ ಕಲಂ 15[ಎ] 32[3] ಕೆ ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ ವ ವರಧಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.243/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ: 22/06/2020 ರಂದು ಸಂಜೆ 6.30 ಗಂಟೆಗೆ ವೆಂಕಟೇಶ್ ಬಿನ್ ಮುನಿಯಪ್ಪ, 26 ವರ್ಷ, ಆದಿ ಕರ್ನಾಟಕ, ಖಾಸಗಿ ಕಂಪನಿಯಲ್ಲಿ ಕೆಲಸ, ಭಕ್ತರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:20-06-2020 ರಂದು ಬೆಳಿಗ್ಗೆ 09-45 ಗಂಟೆ ಸಮಯದಲ್ಲಿ ತನ್ನ ತಮ್ಮನಾದ ವೆಂಕಟರಮಣ ಮತ್ತು ತನ್ನ ಚಿಕ್ಕಪ್ಪನ ಮಗನಾದ ವಿನೋದ್ ರವರು ಕೆಲಸದ ನಿಮಿತ್ತ ಚಿಂತಾಮಣಿಗೆ ಬರುವ ಸಲುವಾಗಿ ತನ್ನ ಬಾಬತ್ತು ಕೆಎ 40 ಎಕ್ಸ್-8992 ನೊಂದಣಿ ಸಂಖ್ಯೆಯ ಟಿ.ವಿ.ಎಸ್. ಸ್ಟಾರ್ ಸಿಟಿ ದ್ವಿಚಕ್ರ ವಾಹನದಲ್ಲಿ ಬಂದಿರುತ್ತಾರೆ. ಅದೇ ದಿನ ಬೆಳಿಗ್ಗೆ ಸುಮಾರು 10-40 ಗಂಟೆ ಸಮಯದಲ್ಲಿ ಯಾರೋ ಸಾರ್ವಜನಿಕರು ತನಗೆ ಫೋನ್ ಮಾಡಿ ಚಿಕ್ಕಬಳ್ಳಾಪುರ-ಚಿಂತಾಮಣಿ ರಸ್ತೆಯಲ್ಲಿ ತಿಮ್ಮಸಂದ್ರ ಗ್ರಾಮದ ಸಮೀಪ ಕೃಷ್ಣ ಸಿಲ್ಕ್ ಮುಂದೆ ವೆಂಕಟರಮಣ ಮತ್ತು ವಿನೋದ್ ರವರಿಗೆ ರಸ್ತೆ ಅಪಘಾತವಾಗಿದ್ದು, ಗಾಯಗೊಂಡಿದ್ದವರನ್ನು 108 ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ತಾನು ಮತ್ತು ವಿನೋದ್ ರವರ ತಂದೆಯಾದ ಮುನಿರಾಜುರವರು ತಮ್ಮ ಗ್ರಾಮದಿಂದ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ಅಪಘಾತದ ಬಗ್ಗೆ ಆಸ್ಪತ್ರೆಯಲ್ಲಿದ್ದ ತನ್ನ ತಮ್ಮ ವೆಂಕಟರಮಣ ರವರನ್ನು ವಿಚಾರ ಮಾಡಲಾಗಿ ತಾನು ಮತ್ತು ವಿನೋದ್ ರವರು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಮೇಲ್ಕಂಡ ಕೆಎ 40 ಎಕ್ಸ್ 8992 ನೊಂದಣಿ ಸಂಖ್ಯೆಯ ಟಿ.ವಿ.ಎಸ್. ಸ್ಟಾರ್ ಸಿಟಿ ದ್ವಿಚಕ್ರವಾಹನದಲ್ಲಿ ಚಿಂತಾಮಣಿ ಕಡೆಗೆ ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-05 ಎಬಿ-3934 ನೋಂದಣಿ ಸಂಖ್ಯೆಯ ಬಜಾಜ್ ಆಟೋ ಚಾಲಕ ಆಟೋವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎದುರುಗಡೆಯಿಂದ ತಮ್ಮ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ್ದು ಅದರ ಪರಿಣಾಮ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ತಾನು ಮತ್ತು ಹಿಂಬದಿಯಲ್ಲಿ ವಿನೋದ್ ಕುಮಾರ್ ವಾಹನ ಸಮೇತ ಕೆಳಗೆ ಬಿದ್ದು ಹೋಗಿದ್ದು ತನಗೆ ಎಡತಲೆಗೆ ರಕ್ತಗಾಯ, ಎಡ ಕೈಗೆ, ಎಡಗಡ್ಡಕ್ಕೆ ತರಚಿದ ರಕ್ತಗಾಯಗಳು, ವಿನೋದ್ ರವರಿಗೆ ಎಡಮೊಣಕಾಲಿಗೆ ಮೂಳೆಮುರಿತದ ರಕ್ತಗಾಯವಾಗಿರುವುದಾಗಿ ತಿಳಿಸಿರುತ್ತಾನೆ. ನಂತರ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಗಾಯಗೊಂಡಿದ್ದ ತನ್ನ ತಮ್ಮನಾದ ವೆಂಕಟರಮಣ ಮತ್ತು ವಿನೋದ್ ರವರನ್ನು ಅಂಬುಲೆನ್ಸ್ ನಲ್ಲಿ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಕೋಲಾರದ ಆಕ್ಸಿಡೆಂಟ್ ಅಂಡ್ ಟ್ರಾಮಾ ಕೇರ್ ಸೆಂಟರ್ ಆಸ್ಪತ್ರೆಗೆ ತಾವು ಕರೆದುಕೊಂಡು ಹೋಗಿ ದಾಖಲಿಸಿದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುತ್ತಾರೆ. ಗಾಯಗೊಂಡಿದ್ದರವರಿಗೆ ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಅಪಘಾತಪಡಿಸಿದ ಮೇಲ್ಕಂಡ ಕೆಎ-05 ಎಬಿ-3934 ನೋಂದಣಿ ಸಂಖ್ಯೆಯ ಬಜಾಜ್ ಆಟೋ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.245/2020 ಕಲಂ. 143,147,148,323,324,504,506 ರೆ/ವಿ 149 ಐ.ಪಿ.ಸಿ:-

          ದಿನಾಂಕ: 22/06/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಲಕ್ಷ್ಮಮ್ಮ ಕೋಂ ನಾರಾಯಣಸ್ವಾಮಿ, 50 ವರ್ಷ, ಆದಿ ಕರ್ನಾಟಕ, ಕೂಲಿಕೆಲಸ, ಕೊಂಗನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೆಳಿಕೆಯನ್ನು ಪಡೆದುಕೊಂಡು ರಾತ್ರಿ 8.15 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ತಮ್ಮ ಮನೆ ಮತ್ತು ತಮ್ಮ ಗ್ರಾಮದ ತಮ್ಮ ಜನಾಂಗದ ಹನುಮಂತರಾಯಪ್ಪ ಬಿನ್ ನಾರಾಯಣಪ್ಪ ರವರ ಮನೆಗಳು ಅಕ್ಕ ಪಕ್ಕದಲ್ಲಿದ್ದು, ಎರಡೂ ಮನೆಗಳ ನಡುವೆ ಇಬ್ಬರಿಗೂ ಸೇರಿದ ಖಾಲಿ ಜಾಗ ಇರುತ್ತೆ. ಸದರಿ ಜಾಗದ ಬಗ್ಗೆ ಹನುಮಂತರಾಯಪ್ಪ ರವರು ಈ ಜಾಗ ತಮಗೆ ಸೇರುತ್ತದೆಂದು ಆಗಾಗ ತಕರಾರು ಮಾಡುತ್ತಿರುತ್ತಾರೆ. ಈಗಿರುವಾಗ ಈ ದಿನ ದಿನಾಂಕ: 22/06/2020 ರಂದು ಮದ್ಯಾಹ್ನ 2.30 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಮಗನಾದ ನಾಗೇಶ್ ರವರು ತಮ್ಮ ಮನೆಯ ಬಳಿ ಇದ್ದಾಗ ಹನುಮಂತರಾಯಪ್ಪ ರವರ ಕಡೆಯವರಾದ ಬಿಂಧು ಎಂಬುವವಳು ಬಂದು ತಮ್ಮ ಜಾಗದಲ್ಲಿ ಕಟ್ಟಿಗೆಯನ್ನು ನೆಡುತ್ತಿದ್ದಳು, ಆಗ ತಾವು ಸ್ಥಳಕ್ಕೆ ಹೋಗಿ ಏಕೆ ನಮ್ಮ ಜಾಗದಲ್ಲಿ ಕಟ್ಟಿಗೆಗಳನ್ನು ನೆಡುತ್ತಿರುವುದು ಎಂದು ಕೇಳುತ್ತಿದ್ದಂತೆ ಅಷ್ಠರಲ್ಲಿ ಹನುಮಂತರಾಯಪ್ಪ, ಹನುಮಂತಪ್ಪ, ಸುಮಿತ್ರಮ್ಮ ಕೋಂ ಹನುಮಂತರಾಯಪ್ಪ, ಶ್ರೀರಾಮಪ್ಪ ಬಿನ್ ನಾನೆಪ್ಪ, ಸರೋಜಮ್ಮ, ಲಕ್ಷ್ಮಮ್ಮ, ವಿಜಯಮ್ಮ, ಸವಿತ, ಬಿಂಧು, ನವೀನ್, ರಾಜ, ಹೇಮ, ಪವಿತ್ರ, ಮಂಜಮ್ಮ ಮತ್ತು ಭವಾನಿ ರವರು ಅಕ್ರಮ ಗುಂಪುಕಟ್ಟಿಕೊಂಡು ಬಂದು, ಅವಾಚ್ಯಶಬ್ದಗಳಿಂದ ಬೈದು, ಆ ಪೈಕಿ ಲಕ್ಷ್ಮಮ್ಮ ರವರು ತನ್ನ ಕೈಯಲ್ಲಿದ್ದ ಕಲ್ಲಿನಿಂದ ತನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿದಳು. ಶ್ರೀರಾಮಪ್ಪ ಮತ್ತು ವಿಜಯಮ್ಮ ರವರು ತಮ್ಮ ಕೈಗಳಿಲ್ಲಿದ್ದ ಕಲ್ಲುಗಳಿಂದ ತನ್ನ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಉಳಿದವರು ತನ್ನನ್ನು ಕೈಗಳಿಂದ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಅಷ್ಟರಲ್ಲಿ ತನ್ನ ಮಗ ನಾಗೇಶ್ ಮತ್ತು ತನ್ನ ಮಗಳಾದ ನಾಗಮಣಿ ರವರು ಮೇಲ್ಕಂಡವರಿಂದ ತನ್ನನ್ನು ಬಿಡಿಸಿರುತ್ತಾರೆ. ಅವರು ಅಲ್ಲಿಂದ ಹೋಗುವಾಗ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸಿ ಬಿಡುತ್ತೇವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.246/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ 22-06-2020 ರಂದು  ರಾತ್ರಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಶ್ರೀರಾಮಪ್ಪ ಬಿನ್ ನಾರಾಯಣಪ್ಪ, 58 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ಕೊಂಗನಹಳ್ಳಿ ಗ್ರಾಮ ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು 8-45 ಗಂಟೆಗೆ ಠಾಣೆಗೆ ವಾಪಸ್ಸಾಗಿದ್ದು ಸದರಿ ಹೇಳಿಕಯ ಸಾರಾಂಶವೇನೆಂದರೆ  ತಮ್ಮ  ಗ್ರಾಮದಲ್ಲಿ  ತಮ್ಮ ಮನೆ ಮತ್ತು ಲಕ್ಷ್ಮಮ್ಮ ಕೊಂ  ನಾರಾಯಣಸ್ವಾಮಿ ರವರ ಮನೆ  ಅಕ್ಕ ಪಕ್ಕ ಇರುತ್ತೆ.  ಈ ದಿನ ದಿನಾಂಕ 22-06-2020 ರಂದು  ಮದ್ಯಾಹ್ನ 1-30  ಗಂಟೆ ಸಮಯದಲ್ಲಿ ತನ್ನ ತಂಗಿ ವಿಜಿಯಮ್ಮ ಮತ್ತು ಅವರ ಮಗಳು ಬಿಂದು ರವರು ತಮ್ಮ ಮನೆಯ ಬಳಿ ಇರುವ ಖಾಲಿ ಜಾಗದಲ್ಲಿ  ಗಿಡಗಳನ್ನು ನೆಡಲು  ಗುಣಿಯನ್ನು ಅಗೆಯುತ್ತಿದ್ದಾಗ  ಮೇಲ್ಕಂಡ ಲಕ್ಷ್ಮಮ್ಮ, ಆಕೆಯ ಮಗ ನಾಗೇಶ್, ಮಗಳು ನಾಗಮಣಿ ಮತ್ತು ನಾಗಮಣಿಯ ಗಂಡ ಶ್ರೀನಾಥ ರವರು ಸಮಾನ ಉದ್ದೇಶದಿಂದ ವಿಜಿಯಮ್ಮ ಮತ್ತು ಬಿಂದು ರವರ ಮೇಲೆ ಜಗಳ ತೆಗೆದು   ಅವಾಶ್ಚ ಶಬ್ದಗಳಿಂದ ಬೈದು  ಆ ಪೈಕಿ ಲಕ್ಷ್ಮಮ್ಮ ರವರು  ವಿಜಿಯಮ್ಮ ರವರನ್ನು  ಕೈಗಳಿಂದ ಎಳೆದಾಡಿ  ಮೈ ಕೈ ನೋವುಂಟು ಮಾಡಿರುತ್ತಾರೆ. ಅಷ್ಟರಲ್ಲಿ ಗಲಾಟೆ ಶಬ್ದ ಕೇಳಿ ತಾನು ಅಲ್ಲಿಗೆ ಹೋದಾಗ ನಾಗೇಶ ಮತ್ತು  ಶ್ರೀನಾಥ ರವರು  ತಮ್ಮ ಕೈಗಳಿದ್ದ ಕಲ್ಲುಗಳಿಂದ ತನ್ನ ಎಡ ಕೆನ್ನೆಗೆ ಹೊಡೆದು  ರಕ್ತಗಾಯವನ್ನುಂಟು ಮಾಡಿದರು. ನಾಗಮಣಿ ರವರು ವಿಜಿಯಮ್ಮ ರವರಿಗೆ ಕೈಗಳಿಂದ  ಮೈ ಕೈ ಹೊಡೆದು ನೋವುಂಟು ಮಾಡಿರುತ್ತಾರೆ. ಮೇಲ್ಕಂಡವರು ಅಲ್ಲಿದ್ದ ಹೋಗುವಾಗ  ಇನ್ನೋಂದು ಸಲ ತಮ್ಮ ತಂಟೆಗೆ ಬಂದರೆ  ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲ  ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.  ಆದ್ದರಿಂದ ಮೇಲ್ಕಂಡವರ ಮೇಲೆ  ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.154/2020 ಕಲಂ. 78(I),78(III) ಕೆ.ಪಿ. ಆಕ್ಟ್:-

          ದಿನಾಂಕ 22/06/2020 ರಂದು ಸಂಜೆ 6-30 ಗಂಟೆಗೆ ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು  ದಿನಾಂಕ:15/06/2019 ರಂದು ಮದ್ಯಾಹ್ನ 2-00   ಗಂಟೆಯಲ್ಲಿ ಶ್ರೀ.ಮೋಹನ್ ಎನ್.  ಪಿಎಸ್ಐ, ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ರವರು ಠಾಣೆಯಲ್ಲಿ  ನೀಡಿದ ದೂರಿನ ಸಾರಾಂಶವೇನೆಂದರೆ,  ಇವರಿಗೆ ಬೆಳಿಗ್ಗೆ 9-30 ಗಂಟೆಯಲ್ಲಿ ಬಂದ ಮಾಹಿತಿ ಮೇರೆಗೆ, ಪೊಲೀಸ್ ಸಿಬ್ಬಂದಿ ಹಾಗು ಪಂಚಾಯ್ತಿದಾರರರೊಂದಿಗೆ ಗೌರೀಬಿದನೂರು ತಾಲ್ಲೂಕು, ನಗರಗೆರೆ ಹೋಬಳಿ, ಸಾದಾರ್ಲಹಳ್ಳಿ  ಗ್ರಾಮದ ಬಸ್ ನಿಲ್ದಾಣದ ಬಳಿ   ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪ್ರೊಬೆಷನರಿ ಪಿ.ಎಸ್.ಐ  ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ. – 512  ಆನಂದ , ಪಿ.ಸಿ-80 ಶ್ರೀನಾಥ್  ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.281 ರಲ್ಲಿ ಗ್ರಾಮಕ್ಕೆ ಬೆಳಿಗ್ಗೆ 10-00 ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ಸಾದಾರ್ಲಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ   ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಚಂದ್ರಶೇಖರ ಬಿನ್ ರಾಮಪ್ಪ, 30  ವರ್ಷ, ಉಪ್ಪಾರರು,  ಗಾರ್ಮೆಂಟ್ಸ್ ನಲ್ಲಿ ಕೆಲ,   ವಾಸ ಸಾದಾರ್ಲಹಳ್ಳಿ  ಗ್ರಾಮ , ನಗರಗೆರೆ ಹೋಬಳಿ,  ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 460-00 ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ . ಚಂದ್ರಶೇಖರ ಬಿನ್ ರಾಮಪ್ಪ, ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 460-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಬೆಳಿಗ್ಗೆ 10-00 ಗಂಟೆಗೆ ಗಂಟೆಯಿಂದ 11-00 ಗಂಟಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ಮದ್ಯಾಹ್ನ 2-00  ಗಂಟೆಗೆ    ಠಾಣೆಗೆ ಬಂದು    ಇವುಗಳನ್ನು ಮುಂದಿನ ಕ್ರಮಕ್ಕಾಗಿ ನನ್ನ ವಶಕ್ಕೆ ನೀಡಿ, ದೂರಿನ ಮೂಲಕ  ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.155/2020 ಕಲಂ. 78(I),78(III) ಕೆ.ಪಿ. ಆಕ್ಟ್:-

          ದಿನಾಂಕ 22/06/2020 ರಂದು ಸಂಜೆ 6-45 ಗಂಟೆಗೆ ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು  ದಿನಾಂಕ 15/06/2020 ರಂದು ಮದ್ಯಾಹ್ನ 2-15  ಗಂಟೆಯಲ್ಲಿ ಶ್ರೀ.ಮೋಹನ್ ಎನ್.  ಪಿಎಸ್ಐ, ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ರವರು ಠಾಣೆಯಲ್ಲಿ  ನೀಡಿದ ದೂರಿನ ಸಾರಾಂಶವೇನೆಂದರೆ,  ಇವರಿಗೆ ಮದ್ಯಾಹ್ನ 12-00 ಗಂಟೆಯಲ್ಲಿ ಬಂದ ಮಾಹಿತಿ ಮೇರೆಗೆ, ಪೊಲೀಸ್ ಸಿಬ್ಬಂದಿ ಹಾಗು ಪಂಚಾಯ್ತಿದಾರರರೊಂದಿಗೆ ಗೌರೀಬಿದನೂರು ತಾಲ್ಲೂಕು, ನಗರಗೆರೆ ಹೋಬಳಿ, ವಾಟದಹೊಸಹಳ್ಳಿ  ಗ್ರಾಮದ ಬಸ್ ನಿಲ್ದಾಣದ ಬಳಿ   ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ತಾನು ಮತ್ತು ಪ್ರೊಬೆಷನರಿ ಪಿ.ಎಸ್.ಐ  ಸಂಗಮೇಷ್  ಮೇಟಿ ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ. – 518  ಆನಂದ , ಪಿ.ಸಿ-208  ತಿಪ್ಪೆಸ್ವಾಮಿ  ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.281 ರಲ್ಲಿ ಗ್ರಾಮಕ್ಕೆ ಮದ್ಯಾಹ್ನ 12-30 ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ವಾಟದಹೊಸಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ   ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಭಾನು ಪ್ರಕಾಶ್  ಬಿ ಕೇಶವಪ್ಪ,  28 ವರ್ಷ, ನಾಯಕರು,   ಕೂಲಿ ಕೆಲಸ,   ವಾಸ ವಾಟದಹೊಸಹಳ್ಳಿ ಗ್ರಾಮ , ನಗರಗೆರೆ ಹೋಬಳಿ,  ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 600-00 ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ . ಭಾನು ಪ್ರಕಾಶ್  ಬಿ ಕೇಶವಪ್ಪ, ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 600-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 12-30 ಗಂಟೆಗೆ ಗಂಟೆಯಿಂದ 1-30 ಗಂಟಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ಮದ್ಯಾಹ್ನ 2-15  ಗಂಟೆಗೆ       ಇವುಗಳನ್ನು ಮುಂದಿನ ಕ್ರಮಕ್ಕಾಗಿ ನನ್ನ ವಶಕ್ಕೆ ನೀಡಿ, ದೂರಿನ ಮೂಲಕ  ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.100/2020 ಕಲಂ. 15(A),32(3) ಕೆ.ಇ. ಆಕ್ಟ್:-

          ದಿನಾಂಕ;22/06/2020 ರಮದು ಮದ್ಯಾಹ್ನ 2-15 ಗಂಟೆಯ;ಲ್ಲಿ ನ್ಯಾಯಾಲಯದ ಪಿಸಿ-89 ಮಂಜುನಾಥ ರವರು ಠಾಣಾ ಎನ್.ಸಿ.ಆರ್;225/2020 ರಲ್ಲಿ ಕ್ರಿಮಿನಿಲ್ ಪ್ರಕರಣವನ್ನು ದಾಖಲಿಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ:21-06-2020 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ, 17 ನೇ ಬೀಟ್ ಸಿಬ್ಬಂದಿ ಹೆಚ್,ಸಿ-28 ದಕ್ಷಿಣಮೂತರ್ಿ ರವರು ಗಸ್ತಿನಲ್ಲಿದ್ದಾಗ ಗುಡಿಬಂಡೆ ತಾಲೂಕು ಹಂಪಸಂದ್ರ  ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ  ಸೂರ್ಯನಾರಾಯಣ ಬಿನ್ ನಾರಾಯಣಪ್ಪ ರವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನನಗೆ ಪೋನ್ ಮಾಡಿ ನೀಡಿದ  ಮಾಹಿತಿ ಮೇರೆಗೆ ನಾನು ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎಚ್,ಸಿ-43 ವೆಂಕಟಾಚಲ  ರವರೊಂದಿಗೆ ಸಿಬ್ಬಂದಿಯಾದ ಹೆಚ್,ಸಿ-29 ಶ್ರೀನಿವಾಸ  ರವರನ್ನು ಕರೆದುಕೊಂಡು ಸದರಿ ಗ್ರಾಮಕ್ಕೆ ಬೆಳಿಗ್ಗೆ 10-30 ಗಂಟೆಯಲ್ಲಿ ಸ್ಥಳಕ್ಕೆ ಹೋಗಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ನಾವು ಮರೆಯಲ್ಲಿ ನೋಡಲಾಗಿ, ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಬೆಳಿಗ್ಗೆ 10-45 ಗಂಟೆಗೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ, ಸೂರ್ಯನಾರಾಯಣ ಬಿನ್ ನಾರಾಯಣಪ.್ಪ 50 ವರ್ಷ, ಈಡಿಗರು. , ಜಿರಾಯ್ತಿ   ವಾಸ- ಹಂಪಸಂದ್ರ ಗ್ರಾಮ  ಗುಡಿಬಂಡೆ ತಾಲೂಕು ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುವ ಬಗ್ಗೆ ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1)ಓಲ್ಟ್ ಟವರನ್ 180 ಎಮ್,ಎಲ್, ಅಳತೆಯ ಮದ್ಯೆವಿರುವ  5 ಟೆಟ್ರಾ ಪಾಕೆಟ್ ಗಳು 2) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 5 ಟೆಟ್ರಾ ಪಾಕೆಟ್ಗಳು ಇದ್ದು, 3) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಒಐ, ಅಳತೆಯ 4 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 3 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಒಂದು ಲೀಟರ್ ಸಾಮಥ್ರ್ಯದ 1 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 350 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟುಒಲ್ಡ್ ಟವರನ್ ವಿಸ್ಕಿ180 ಎಮ್,ಎಲ್  86*5=430 ಮತ್ತು  ಹೈವಾರ್ಡ್ಸ್ ವಿಯರ್ಸ್ ವಿಸ್ಕಿ ಕಂಪನಿ 90 ಎಮ್.ಎಲ್ 36*5=180 ಒಟ್ಟು ಮೊತ್ತ 610 ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆೆ 10-45 ಗಂಟೆಯಿಂದ 11-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಆರೋಪಿ & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಬೆಳಿಗ್ಗೆ 11-50 ಗಂಟೆಗೆ ಠಾಣೆಗೆ ಬಂದು ವರಧಿಯನ್ನು ಸಿದ್ದಪಡಿಸಿ ಮಧ್ಯಾಹ್ನ 12-15 ಗಂಟೆಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.101/2020 ಕಲಂ. 15(A),32(3) ಕೆ.ಇ. ಆಕ್ಟ್:-

          ದಿನಾಂಕ;22/06/2020 ರಂದು ಮದ್ಯಾಹ್ನ 2-30 ಗಂಟೆಯ;ಲ್ಲಿ ನ್ಯಾಯಾಲಯದ ಪಿಸಿ-89 ಮಂಜುನಾಥ ರವರು ಠಾಣಾ ಎನ್.ಸಿ.ಆರ್;226/2020 ರಲ್ಲಿ ಕ್ರಿಮಿನಿಲ್ ಪ್ರಕರಣವನ್ನು ದಾಖಲಿಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ:21-06-2020 ರಂದು ಮದ್ಯಾಹ್ನ 2-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ, 17 ನೇ ಬೀಟ್ ಸಿಬ್ಬಂದಿ ಹೆಚ್,ಸಿ-28 ದಕ್ಷಿಣಮೂತರ್ಿ ರವರು ಗಸ್ತಿನಲ್ಲಿದ್ದಾಗ ಗುಡಿಬಂಡೆ ತಾಲೂಕು ಬೆಣ್ಣೇಪರ್ತಿ  ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ  ಆದಿನಾರಾಯಣ ಬಿನ್ಲೇಟ್ ನೆಡಿಪನ್ನ ರವರ ಚಿಲ್ಲರೇ ಅಂಗಡಿ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನನಗೆ ಪೋನ್ ಮಾಡಿ ನೀಡಿದ  ಮಾಹಿತಿ ಮೇರೆಗೆ ನಾನು ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-58 ರಲ್ಲಿ ಚಾಲಕ ಎಚ್,ಸಿ-60 ಸಿರಾಜುಲ್ಲಾ  ರವರೊಂದಿಗೆ ಸಿಬ್ಬಂದಿಯಾದ ಹೆಚ್,ಸಿ-29 ಶ್ರೀನಿವಾಸ  ರವರನ್ನು ಕರೆದುಕೊಂಡು ಸದರಿ ಗ್ರಾಮಕ್ಕೆ ಮದ್ಯಾಹ್ನ 03-30 ಗಂಟೆಯಲ್ಲಿ ಸ್ಥಳಕ್ಕೆ ಹೋಗಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ನಾವು ಮರೆಯಲ್ಲಿ ನೋಡಲಾಗಿ, ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಮದ್ಯಾಹ್ನ 3-45 ಗಂಟೆಗೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ, ಆದಿನಾರಾಯಣ ಬಿನ್ ಲೆಟ್ ನೆಡಿಪನ್ನ  55 ವರ್ಷ, ಬೋವಿ ಜನಾಂಗ  ಜಿರಾಯ್ತಿ   ವಾಸ- ಬೆಣ್ಣೇಪತರ್ಿ  ಗ್ರಾಮ  ಗುಡಿಬಂಡೆ ತಾಲೂಕು ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುವ ಬಗ್ಗೆ ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1)ಓಲ್ಟ್ ಟವರನ್ 180 ಎಮ್,ಎಲ್, ಅಳತೆಯ ಮದ್ಯೆವಿರುವ  6 ಟೆಟ್ರಾ ಪಾಕೆಟ್ ಗಳು 2) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ 6 ಮಧ್ಯವಿರುವಂತಹ  ಟೆಟ್ರಾ ಪಾಕೆಟ್ಗಳು ಇದ್ದು, 3) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಒಐ, ಅಳತೆಯ 4 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 3 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಒಂದು ಲೀಟರ್ ಸಾಮಥ್ರ್ಯದ 1 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 620 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟುಒಲ್ಡ್ ಟವರನ್ ವಿಸ್ಕಿ 180 ಎಮ್,ಎಲ್  86*6=516 ಮತ್ತು  ಹೈವಾರ್ಡ್ಸ್ ವಿಯರ್ಸ್ ವಿಸ್ಕಿ ಕಂಪನಿ 90 ಎಮ್.ಎಲ್ 36*=216 ಒಟ್ಟು 732 ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 03-45 ಗಂಟೆಯಿಂದ 04-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಆರೋಪಿ & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಬೆಳಿಗ್ಗೆ 05-00 ಗಂಟೆಯಲ್ಲಿ ಠಾಣೆಯಲ್ಲಿ ಹಾಜರುಪಡಿಸಿ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡದ ದೂರಾಗಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.102/2020 ಕಲಂ. 15(A),32(3) ಕೆ.ಇ. ಆಕ್ಟ್:-

          ದಿನಾಂಕ;22/06/2020 ರಂದು ಮದ್ಯಾಹ್ನ;2-45 ಗಂಟೆಗೆ ನ್ಯಾಯಾಲಯದ ಪಿಸಿ -89 ಮಂಜುನಾಥ ರವರು ಠಾಣಾ ಎನ್.ಸಿ.ಆರ್ 227/2020 ರಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ಗುಡಿಬಂಡೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ ಎಂ.ಎನ್.  ಆದ ತಾನು ಈ ಮೂಲಕ ನಿಮಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ:21-06-2020 ರಂದು ಸಂಜೆ 3.30 ಗಂಟೆ ಸಮಯದಲ್ಲಿ ಪೆರೇಸಂದ್ರ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ 26 ನೇ ಬೀಟ್ ಸಿಬ್ಬಂದಿ ಪಿ,ಸಿ-85 ಸುನೀಲ್ ಕುಮಾರ್ ರವರು ಚಿಕ್ಕಬಳ್ಳಾಪುರ ತಾಲ್ಲೂಕು ನಲ್ಲರಾಳ್ಳಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ರವಿಕುಮಾರ್ ಬಿನ್ ಲೇಟ್ ಶ್ರೀರಾಮಪ್ಪ ರವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ತನಗೆ ಪೋನ್ ಮಾಡಿ ನೀಡಿದ  ಮಾಹಿತಿ ಮೇರೆಗೆ ನಾನು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎಚ್,ಸಿ-43 ವೆಂಕಟಾಚಲ ರವರೊಂದಿಗೆ ನಲ್ಲರಾಳ್ಳಹಳ್ಳಿ ಗ್ರಾಮಕ್ಕೆ ಬಂದು ಸ್ಥಳದಲ್ಲಿದ್ದ ಬೀಟ್ ಸಿಬ್ಬಂದಿ ಪಿ,ಸಿ 85 ಸುನೀಲ್ ಕುಮಾರ್ ರವರನ್ನು ಕರೆದುಕೊಂಡು ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅಕ್ರಮವಾಗಿ ಮದ್ಯ ಸೇವನೆ ಮಾಡಲು ಅವಕಾಶ ನೀಡಿರುವವರ ಮೇಲೆ ದಾಳಿ ಮಾಡಲು ಪಂಚರಿಗೆ ನೋಟೀಸ್ ನೀಡಿ ಪಂಚರೊಂದಿಗೆ ತಾವು ಮರೆಯಲ್ಲಿ ನಿಂತು ನೋಡಲಾಗಿ, ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳವಾದ ರಸ್ತೆಯಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಪಂಚರೊಂದಿಗೆ ತಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಸಂಜೆ 3-50 ಗಂಟೆಗೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಮತ್ತು ಮದ್ಯವನ್ನು ಸರಬರಾಜು ಮಾಡುವ ಆಸಾಮಿಯು ಸಹ ಓಡಿ ಹೋಗಿದ್ದು, ಗ್ರಾಮದಲ್ಲಿ ಮದ್ಯವನ್ನು ಸರಬರಾಜು ಮಾಡುತ್ತಿದ್ದವನ ಹೆಸರು & ವಿಳಾಸ ಕೇಳಲಾಗಿ, ರವಿಕುಮಾರ್ ಬಿನ್ ಲೇಟ್ ಶ್ರೀರಾಮಪ್ಪ 43 ವರ್ಷ, ವಕ್ಕಲಿರು, ಕೂಲಿ ಕೆಲಸ ವಾಸ – ನಲ್ಲರಾಳ್ಳಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಲೈಸನ್ಸ್ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿದ್ದು ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲನೆ ಮಾಡಲಾಗಿ ಸ್ಥಳದಲ್ಲಿ 1) ಓಲ್ಡ್ ಟವರನ್ 180 ಎಮ್,ಎಲ್, ಅಳತೆಯ ಮದ್ಯೆವಿರುವ 5 ಟೆಟ್ರಾ ಪಾಕೆಟ್ ಗಳು 2) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 10 ಟೆಟ್ರಾ ಪಾಕೆಟ್ಗಳು ಇದ್ದು, 3) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಒಐ, ಅಳತೆಯ 4 ಖಾಲಿ ಟೆಟ್ರಾ ಪಾಕೆಟ್ಗಳು 4) ಮದ್ಯವನ್ನು ಕುಡಿದು ಬಿಸಾಕಿದಂತಹ 4 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 5) ಒಂದು ಲೀಟರ್ ಸಾಮಥ್ರ್ಯದ 2 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 800 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು ಒಲ್ಡ್ ಟವರನ್ ವಿಸ್ಕಿ 180 ಎಮ್,ಎಲ್ 86*5=430 ಮತ್ತು ಹೈವಾರ್ಡ್ಸ್ ವಿಯರ್ಸ್ ವಿಸ್ಕಿ ಕಂಪನಿ 90 ಎಮ್.ಎಲ್ 36*10= 360 ಒಟ್ಟು 790 ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 4-00  ಗಂಟೆಯಿಂದ 5-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಮತ್ತು ಅಸಲು ಪಂಚನಾಮೆಯೊಂದಿಗೆ ಸಂಜೆ 5-30 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 6:15 ಗಂಟೆಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದುಕೊಂಡು ಠಾಣಾ ಎನ್.ಸಿ.ಆರ್. ನಂ:227/2020 ರೀತ್ಯಾ ದಾಖಲು ಮಾಡಿಕೋಂಡಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.103/2020 ಕಲಂ. 269,270,353,504 ಐ.ಪಿ.ಸಿ:-

          ದಿನಾಂಕ 22/06/2020 ರಂದು ರಾತ್ರಿ 9-00 ಗಂಟೆಗೆ ಪಿರ್ಯಾಧಿ ಆರೋಗ್ಯ ಇಲಾಖೆಯ ಸುರೇಶ ಬಿನ್ ನರಸಿಂಹಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತನಗೆ ದಿನಾಂಕ 22/06/2020 ರಂದು ಬೆಳಿಗ್ಗೆ 8-00 ಗಂಟೆಯಿಂದ ರಾತ್ರಿ 8-00 ಗಂಟೆಯ ವರೆಗೆ ಗುಡಿಬಂಡೆ ತಾಲ್ಲೂಕಿನ ಎಲ್ಲೋಡು ಚೆಕ್ ಪೋಸ್ಟ್ ನಲ್ಲಿ ಕೋವಿಡ್ -19 ಸಂಕ್ರಾಮಿಕ ರೋಗ ಹರಡುವುದನ್ನು ಹಾಗೂ ಅನಾವಶ್ಯಕವಾಗಿ ಓಡಾಡುವವರನ್ನು ನಿಯಂತ್ರಿಸುವ  ಹಾಗೂ ಆಂದ್ರ ಪ್ರದೇಶದಿಂದ ಬರುವ ವಾಹನಗಳನ್ನು ಹಾಗೂ ಸಾರ್ವಜನಿಕರನ್ನು ಪರಿಶೀಲಿಸಿ ಗುಡಿಬಂಡೆ ತಾಲ್ಲೂಕು ಒಳಗೆ ಕಳುಹಿಸಿಕೊಡುವ ಸಲುವಾಗಿ ತನಗೆ ಮತ್ತು ತನ್ನೊಂದಿಗೆ  ಆರೋಗ್ಯ ಸಿಬ್ಬಂದಿಯಾದ ಮಾರುತಿ, ಲಕ್ಷ್ಮೀಪತಿ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಯಾದ ಪಿಸಿ ರಮೇಶ್ ರವರಿಗೆ ನೇಮಿಸಿದ್ದು, ಅದರಂತೆ ದಿನಾಂಕ 22/06/2020 ರಂದು ರಾತ್ರಿ ಸುಮಾರು 8-00 ಗಂಟೆಯ ಸಮಯದಲ್ಲಿ ಗುಡಿಬಂಡೆ ಕಡೆಯಿಂದ ಎಲ್ಲೋಡ ಗ್ರಾಮದ ಕಡೆ ಹೋಗಲು ದ್ವಿಚಕ್ರವಾಹನದಲ್ಲಿ ಬಂದ ಆರೋಪಿತನನ್ನು ತಡೆದು ನಿಲ್ಲಿಸಿ ಸ್ಕ್ರೀನಿಂಗ್ ಮಾಡಲು ಮುಂದಾದಾಗ ತಮಗೆ ಸಹಕರಿಸದೇ ನಿನ್ನಮ್ಮನ್ಯಾಕೇಯಾ ಲೋಪರ್ ನನ್ನ ಮಗನೇ ನೀನೇನೋ ನನ್ನ ಚೆಕ್ ಮಾಡೋದು ಎಂದು ಕೆಟ್ಟ ಮಾತುಗಳಿಂದ ಬೈದು, ಸಾರ್ವಜನಿಕ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿ ತನ್ನ ದ್ವಿಚಕ್ರವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುತ್ತಾನೆ, ಕೋವೀಡ್ -19 ಸಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ಸಲುವಾಗಿ ಮಾಸ್ಕ್ ಧರಿಸದೇ ನಿರ್ಲಕ್ಷದಿಂದ ಬಂದು ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸದವನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.62/2020 ಕಲಂ. 143,323,324,504 ರೆ/ವಿ 149 ಐ.ಪಿ.ಸಿ:-

          ದಿನಾಂಕ 22-06-2020 ರಂದು ಹೆಚ್.ಸಿ-110 ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ನಾರಾಯಣಸ್ವಾಮಿ ಬಿನ್ ಪೆದ್ದನ್ನ, 45 ವರ್ಷ, ಬಲಜಿಗರು, ಜಿರಾಯ್ತಿ, ವಾಸ ಮರವಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ಮಧ್ಯಾಹ್ನ 01.15 ಗಂಟೆಗೆ ಠಾಣಾಗೆ ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ, ದಿನಾಂಕ 22-06-2020 ರಂದು ಬೆಳಗ್ಗೆ 06.00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಾಸಿಯಾದ ವೆಂಕಟರವಣಪ್ಪ ರವರ ಹುಲ್ಲಿನ ಮೇದೆ ಬಳಿ ಸಲ್ಲಮುದ್ದ ಇಟ್ಟು ಬೈದುಕೊಳ್ಳುತ್ತಿದ್ದರು, ಆಗ ತನ್ನ ಮಗ ನವೀನ್ ರವರು ಹೋಗಿ ಏಕೆ ನೀವು ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದೀರಿ ಎಂದು ಕೇಳಿದಾಗ ವೆಂಕಟರವಣಪ್ಪ ರವರ ಮಗನಾದ ಪ್ರಕಾಶ್ ರವರು ಬಂದು “ನಿನ್ನಮ್ಮನ್ನೇ ಕ್ಯೇಯಾ” ಎಂದು ಕೈಗಳಿಂದ ಹೊಡೆಯುತ್ತಿದ್ದು ತಾನು ಹೋಗಿ ಏಕೆ ತನ್ನ ಮಗನನ್ನು ಹೊಡೆಯುತ್ತಿದ್ದೀರಿ ಎಂದು ಕೇಳುತ್ತಿದ್ದಂತೆ ವೆಂಕಟರವಣಪ್ಪ ತನ್ನ ಕೈಯಲ್ಲಿದ್ದ ಕಲ್ಲಿನಿಂದ ತನ್ನ ಎಡಭಾಗದ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಪಕ್ಕದಲ್ಲಿದ್ದ ಲಕ್ಷ್ಮೀ ದೇವಮ್ಮ, ಪ್ರಮೀಳಮ್ಮ, ಸುಜಾತಮ್ಮ, ಸುಧಾ ರವರುಗಳು ಬಂದು ತಮ್ಮನ್ನು ಕೈಗಳಿಂದ ಹೊಡೆದು ಕೆಳಗೆ ಬೀಳಿಸಿದರು. ಆಗ ನಾವು ಕೂಗಿಕೊಂಡಾಗ ತಮ್ಮ ಗ್ರಾಮದ ವೆಂಕಟರೋಣಪ್ಪ, ನಾರಾಯಣಸ್ವಾಮಿ ರವರು ಬಂದು ಜಗಳ ಬಿಡಿಸಿ ತಮ್ಮನ್ನು ಉಪಚರಿಸಿದ್ದು, ನಂತರ ನೋವು ಜಾಸ್ತಿಯಾದ್ದರಿಂದ ನಾವುಗಳು ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತೇವೆ. ತಮ್ಮ ಮೇಲೆ ಹಲ್ಲೆ ಮಾಡಿದ  ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಹೇಳಿಕೆಯ ಸಾರಾಂಶವಾಗಿರುತ್ತೆ.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.63/2020 ಕಲಂ. 323,324,504 ರೆ/ವಿ 34 ಐ.ಪಿ.ಸಿ:-

          ದಿನಾಂಕ 22-06-2020 ರಂದು ಹೆಚ್.ಸಿ-110 ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಶ್ರೀಮತಿ ರಾಮಲಕ್ಷ್ಮಮ್ಮ ಕೋಂ ಕೃಷ್ಣಪ್ಪ, 66 ವರ್ಷ, ದೋಬಿ ಜನಾಂಗ, ಗೃಹಿಣಿ, ವಾಸ ಮರವಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಹೆಳೀಕೆಯನ್ನು ಪಡೆದು ಮಧ್ಯಾಹ್ನ 01.45 ಗಂಟೆಗೆ ಠಾಣೆಗೆ ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ,  ದಿನಾಂಕ 21-06-2020 ರಂದು ಸಂಜೆ 06.00 ಗಂಟೆ ಸಮಯದಲ್ಲಿ ತಮ್ಮ ಮನೆ ಮುಂದೆ ಓಡಾಡುವ ರಸ್ತೆಯಲ್ಲಿ ಮೂಳೆ, ನಿಂಬೆಹಣ್ಣು, ಹರಿಶಿನ, ಕುಂಕುಮ ಇತ್ಯಾದಿಗಳನ್ನು ಇಟ್ಟಿದ್ದು ತಾನು ತನ್ನ ಮಗನಿಗೆ ಹೇಳಿ ಅದನ್ನು ತೆಗಿಸಿ ತಾನು ಬೈದುಕೊಂಡು ಮನೆ ಒಳಗೆ ಹೋಗಿರುತ್ತೇನೆ. ದಿನಾಂಕ 22-06-2020 ರಂದು ಬೆಳಗ್ಗೆ ಸುಮಾರು 06.00 ಗಂಟೆ ಸಮಯದಲ್ಲಿ ತಾನು ಮನೆಯಿಂದ ಹೊರಗಡೆ ಬಂದು ನೋಡಲಾಗಿ ಹುಲ್ಲಿನ ಮೇಲೆ ಸಲ್ಲಮುದ್ದ ಇಟ್ಟು ಪೂಜೆ ಮಾಡಿದ್ದು ತಾನು ಬೈದುಕೊಳ್ಳುತ್ತಿದ್ದಾಗ ತಮ್ಮ ಗ್ರಾಮದ ವಾಸಿಯಾದ ನಾರಾಯಣಸ್ವಾಮಿ ಮಗನಾದ ನವೀನ್ ರವರು ಬಂದು ಏಕಾಏಕಿ “ಏನೇ ನಿನ್ನಮ್ಮನೇ ಕ್ಯೇಯಾ ನಮ್ಮನ್ನೇ ಬೈಯುತ್ತಿದ್ದೀಯಾ” ನಾನೇ ಇಟ್ಟಿದ್ದು ಏನು ಮಾಡಿಕೊಳ್ಳುತ್ತೀಯಾ ಎಂದು ತನ್ನ ಕೈಯಲ್ಲಿದ್ದ ರೋಲು ಹೊಡೆಯುವ ಕೋಲಿನಿಂದ ತನ್ನ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯಪಡಿಸಿ ಕಾಲಿನಿಂದ ಒದ್ದು ಕೆಳಕ್ಕೆ ಬೀಳಿಸಿದ್ದು ಆಗ ತಾನು ಜೋರಾಗಿ ಕೂಗಿಕೊಂಡಾಗ ತನ್ನ ಮಗಳಾದ ಸುಜಾತಮ್ಮ ಬಂದು ಉಪಚರಿಸುತ್ತಿದ್ದಾಗ ನವೀನ್ ರವರ ತಂದೆ ನಾರಾಯಣಸ್ವಾಮಿ ರವರು ಬಂದು ತನ್ನನ್ನು ತಳ್ಳಿ ಕಬ್ಬಿಣದ ಕಂಬಿಯಿಂದ ತನ್ನ ತಲೆಯ ಹಣೆಯ ಮೇಲೆ ಹೊಡೆದು ರಕ್ತಗಾಯಪಡಿಸಿದ, ನಮ್ಮಿಬ್ಬರನ್ನು ಹೊಡೆಯುತ್ತಿದ್ದನ್ನು ನೋಡಿ ತನ್ನ ಸೊಸೆಯಾದ ಲಕ್ಷ್ಮೀದೇವಮ್ಮ ಬಿಡಿಸಲು ಬಂದಾಗ ನಾರಾಯಣಸ್ವಾಮಿ ಮಗಳಾದ ವರಲಕ್ಷ್ಮೀ, ಶಾಂತಮ್ಮ ರವರುಗಳು ಬಂದು ತನ್ನ ಸೊಸೆಯ ಜುಟ್ಟು ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ಕಲ್ಲಿನಿಂದ ಎಡಕೈಗೆ ಹೊಡೆದು ಮೂಗೇಟು ಉಂಟು ಮಾಡಿದ್ದು, ಅಲ್ಲಿಗೆ ಬಂದ ತನ್ನ ಮಗನನ್ನು  ನಾರಾಯಣಸ್ವಾಮಿ ಕಲ್ಲಿನಿಂದ ಎಡಭುಜ ಮತ್ತು ಕತ್ತಿನ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು, ಅಷ್ಟರಲ್ಲಿ ಅಲ್ಲಿಗೆ ಬಂದ ತಮ್ಮ ಗ್ರಾಮದ ವಾಸಿಗಳಾದ ಪ್ರಭಾಕರ, ರಾಜೇಶ ರವರು ಬಂದು ಜಗಳ ಬಿಡಿಸಿ ತಮ್ಮನ್ನು ಉಪಚರಿಸಿದ್ದು ನೋವು ಜಾಸ್ತಿಯಾದ್ದರಿಂದ ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಹೇಳಿಕೆಯ ಸಾರಾಂಶವಾಗಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.139/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:22/06/2020 ರಂದು ಠಾಣಾ ಸಿಬ್ಬಂದಿಯಾದ ಪಿ.ಸಿ.175 ನವೀನ್ ಕುಮಾರ್ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:22/06/2020 ರಂದು  ಮದ್ಯಾಹ್ನ 3- 30 ಗಂಟೆಯ ಸಮಯದಲ್ಲಿ ನಾನು ಪುರ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ, ನನಗೆ ಬಂದ ಮಾಹಿತಿ ಏನೇಂದರೆ  ಆರ್ಕುಂದ ಗ್ರಾಮದ ನರಸಪ್ಪ ಬಿನ್ ಗೋವಿಂದಪ್ಪ ಎಂಬುವರು ಆರ್ಕುಂದ  ಗ್ರಾಮದ ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಪಂಚರೊಂದಿಗೆ  ಮದ್ಯಾಹ್ನ 4-00  ಗಂಟೆಯ ಸಮಯಕ್ಕೆ ಆರ್ಕುಂದ ಗ್ರಾಮದ ನರಸಪ್ಪ ಬಿನ್ ಗೋವಿಂದಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋಗಿದ್ದು, ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ನರಸಪ್ಪ ಬಿನ್ ಗೋವಿಂದಪ್ಪ, 38 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ ವಾಸ ಆರ್ಕುಂದ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್.ಸಾಮರ್ಥ್ಯದ ಮಧ್ಯ ತುಂಬಿರುವ ಹೈವಾಡ್ಸ್ ಚಿಯರ್ಸ್ ವಿಸ್ಕಿಯ 10  ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು 2 ಪ್ಲಾಸ್ಟಿಕ್  ಕಪ್ ಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಬ್ಯಾಗನ್ನು  ಪಂಚನಾಮೆಯ ಮೂಲಕ  ಸಂಜೆ 4-30 ಗಂಟೆಯಿಂದ 5-30 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 350/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು  ಅನುವು ಮಾಡಿಕೊಟ್ಟಿದ್ದ ನರಸಪ್ಪ ಬಿನ್ ಗೋವಿಂದಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.140/2020 ಕಲಂ. 379 ಐ.ಪಿ.ಸಿ:-

          ದಿನಾಂಕ:22/06/2020 ರಂದು ಪಿ.ಎಸ್.ಐ ಶ್ರೀ ಪ್ರತಾಪ್.ಕೆ.ಆರ್ ರವರು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:22/06/2020 ರಂದು ಸಂಜೆ 7-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯಂತೆ ಗೌರಿಬಿದನೂರು ತಾಲ್ಲೂಕು ಮರಿಮಾಕಲಹಳ್ಳಿ ಗ್ರಾಮದ ಸರ್ಕಾರಿ ಕೆರೆಯಲ್ಲಿ ಯಾರೋ ಆಸಾಮಿಗಳು ಟ್ರಾಕ್ಟರನ್ನು ನಿಲ್ಲಿಸಿಕೊಂಡು ಕೆರೆಯನ್ನು ಅಗೆದು ವಿರೂಪಗೊಳಿಸಿ ಸರ್ಕಾರಿ ಖನಿಜ ಸಂಪತ್ತಾದ ಮರಳನ್ನು ಕಳ್ಳತನ ಮಾಡಿ ಟ್ರಾಕ್ಟರಿನ ಟ್ರಾಲಿಗೆ ತುಂಬಿಸುತ್ತಿರುವುದಾಗಿ ಬಾತ್ಮಿದಾರರಿಂದ ಮಾಹಿತಿ ಬಂದಿದ್ದು, ಕೂಡಲೇ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಪಿಸಿ 537 ಆನಂದ್ ಕುಮಾರ್, ಪಿ.ಸಿ.175 ನವೀನ್ ಕುಮಾರ್ ರವರೊಂದಿಗೆ ದ್ವಿಚಕ್ರ ವಾಹನಗಳಲ್ಲಿ ಸಂಜೆ 7-30 ಗಂಟೆಯ ಸಮಯದಲ್ಲಿ ಮರಿಮಾಕಲಹಳ್ಳಿ ಗ್ರಾಮದ ಸರ್ಕಾರಿ ಕೆರೆಯ ಬಳಿ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಸ್ವಲ್ಪ ದೂರದಿಂದಲೇ ಗಮನಿಸಿ ಟ್ರಾಕ್ಟರ್ ಚಾಲಕ ಮತ್ತು ಮಾಲೀಕ ಕೂಲಿಯವರೊಂದಿಗೆ ಮರಳು ತುಂಬುತ್ತಿದ್ದ ಟ್ರಾಕ್ಟರ್ ಮತ್ತು ಟ್ರಾಲಿಯನ್ನು ಕೆರೆಯ ಅಂಗಳದಲ್ಲೇ ಬಿಟ್ಟು ಮರಳು ತುಂಬಲು ತಂದಿದ್ದ ಚನಿಕೆ ಮತ್ತು ಬುಟ್ಟಿಗಳನ್ನು ಎತ್ತಿಕೊಂಡು ಓಡಿ ಹೋಗಿದ್ದು, ನಾವು ಸ್ಥಳವನ್ನು ಪರಿಶಿಲಿಸಿದ್ದು, ಇದು ಅಕ್ರಮ ಮರಳು ಸಾಗಾಣಿಕೆಯಾಗಿದ್ದು, ಸ್ಥಳದಲ್ಲಿದ್ದ ಟ್ರಾಕ್ಟರ್ ಮತ್ತು ಟ್ರಾಲಿಯನ್ನು ಪರಿಶೀಲಿಸಲಾಗಿ ಕೆಂಪು ಬಣ್ಣದ Mahindra 575DI ಆಗಿದ್ದು, ಇದರ ಆರ್.ಟಿ.ಓ ನೊಂದಣಿ ಸಂಖ್ಯೆಯನ್ನು ಪರಿಶೀಲಿಸಲಾಗಿ ಕೆ.ಎ-40, ಟಿ.ಎ-8095 ಆಗಿದ್ದು, ಟ್ರಾಲಿಯನ್ನು ಪರಿಶೀಲಿಸಲಾಗಿ ಹಸಿರು ಬಣ್ಣದ ಟ್ರಾಲಿಯಾಗಿದ್ದು, ಇದರ ಮೇಲೆ ಆರ್.ಟಿ.ಓ ನೊಂದಣಿ ಸಂಖ್ಯೆಯನ್ನು ಪರಿಶೀಲಿಸಲಾಗಿ ಕೆ.ಎ-40, ಯು-8284 ಆಗಿರುತ್ತದೆ. ಸದರಿ ಟ್ರಾಕ್ಟರಿನ ಟ್ರಾಲಿಯಲ್ಲಿ ಮರಳನ್ನು ಕಳವು ಮಾಡಿ ಟ್ರಾಲಿಯ ತುಂಬ ತುಂಬಿಸಿರುತ್ತದೆ. ಸದರಿ ಮರಳು ತುಂಬಿದ ಮೇಲ್ಕಂಡ ಟ್ರಾಕ್ಟರ್ ಮತ್ತು ಟ್ರಾಲಿಯನ್ನು ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದುಕೊಂಡು ಸಾರ್ವಜನಿಕರ ಸಹಾಯದಿಂದ ಮಂಚೇನಹಳ್ಳಿ ಪೊಲೀಸ್ ಠಾಣೆಯ ಬಳಿ ತಂದಿದ್ದು, ಅದ್ದರಿಂದ ಮರಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಸದರಿ ಟ್ರಾಕ್ಟರ್ ಮತ್ತು ಟ್ರಾಲಿಯ ಚಾಲಕ ಮತ್ತು ಮಾಲೀಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.167/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 22/06/2020 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ನಾನು ಕರ್ತವ್ಯದಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ನಾಗಮಂಗಲ ಗ್ರಾಮದ ಪಕ್ಕದಲ್ಲಿರುವ ಬ್ಯಾಟಪ್ಪ ರವರ ನೀಲಗಿರಿ ತೋಪಿನಲ್ಲಿ ಯಾರೋ ಆಸಾಮಿಗಳು ಗುಂಪು ಕಟ್ಟಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಾತ್ಮೀ ಬಂದಿದ್ದು, ಸದರಿ ಆಸಾಮಿಗಳ ವಿರುದ್ದ ಪ್ರ ವ ವರದಿಯನ್ನು ದಾಖಲಿಸಿಕೊಂಡು, ಸದರಿ ಸ್ಥಳದ ಮೇಲೆ ದಾಳಿ ಕೈಗೊಳ್ಳಲು ಅನುಮತಿ ನೀಡ ಬೇಕಾಗಿ ಘನ ನ್ಯಾಯಾಲಯದಲ್ಲಿ ಪ್ರಾರ್ಥಿಸಿ ಘನ ನ್ಯಾಯಾಲಯದ ಕರ್ತವ್ಯದ ಪಿಸಿ-90 ರವರ ಮೂಲಕ ಮನವಿಯನ್ನು ಸಲ್ಲಿಸಿಕೊಂಡಿದ್ದು, ಪಿಸಿ-90 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಠಾಣೆಗೆ ಸಂಜೆ 5-00 ಗಂಟೆಗೆ ವಾಪಸ್ಸಾಗಿ ಹಾಜರು ಪಡಿಸಿದ ಅನುಮತಿ ಆದೇಶದ ಪ್ರತಿಯನ್ನು ಪಡೆದುಕೊಂಡು ಆರೋಪಿಗಳ ವಿರುದ್ದ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.