ದಿನಾಂಕ :23/05/2020 ರ ಅಪರಾಧ ಪ್ರಕರಣಗಳು

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.76/2020 ಕಲಂ. 279,337,304(A) ಐ.ಪಿ.ಸಿ :-

          ದಿನಾಂಕ:23-05-2020 ರಂದು ಬೆಳಗ್ಗೆ:10-15 ಗಂಟೆಗೆ ಪಿರ್ಯಾದಿದಾರರಾದ ರಾಜೇಶ ಬಿನ್ ಮುನಿರಾಜು 21 ವರ್ಷ, ಬಲಜಿಗರು,ಬಿ.ಕಾಂ ವಿದ್ಯಾರ್ಥಿ  ವಾಸ:ಕಾಕಲಚಿಂತೆ ಗ್ರಾಮ, ಮಂಡಿಕಲ್ಲುಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ:ತಮ್ಮ ತಂದೆ-ತಾಯಿಯವರಿಗೆ ಇಬ್ಬರು ಮಕ್ಕಳಿದ್ದು 1 ನೇ ಹರೀಶ 2 ನೇ ನಾನು ಆಗಿದ್ದು ತಮ್ಮ ತಂದೆ ಮುನಿರಾಜು ರವರು ಪೆರೇಸಂದ್ರ ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಪ್ರತಿ ದಿನ ಹೋಗುತ್ತಿದ್ದು ದಿನಾಂಕ:22/05/2020 ರಂದು ಬೆಳಿಗ್ಗೆ 7.00 ಗಂಟೆ ಸಮಯದಲ್ಲಿ ಪೆರೇಸಂದ್ರ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದು ನಂತರ ದಿನಾಂಕ:22/05/2020 ರಂದು ರಾತ್ರಿ ಸುಮಾರು 8-15 ಗಂಟೆ ಸಮಯದಲ್ಲಿ ತಮ್ಮ ಚಿಕ್ಕಪ್ಪ ಮುನೇಂದ್ರ ರವರು ತನಗೆ ಕರೆ ಮಾಡಿ ದಿನಾಂಕ:22/05/2020 ರಂದು ರಾತ್ರಿ ಸುಮಾರು 8.00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಆದೇಗಾರಹಳ್ಳಿ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ನಿಮ್ಮ ತಂದೆ ಮುನಿರಾಜು ರವರಿಗೆ ರಸ್ತೆ ಅಪಘಾತವಾಗಿರವುದಾಗಿ ತಿಳಿಸಿದ್ದು ಕೂಡಲೆ ತಾನು ಮತ್ತು ತಮ್ಮ ಅಣ್ಣ ಹರೀಶ್ ರವರು ಅಪಘಾತ ನಡೆದ ಸ್ಥಳಕ್ಕೆ ಹೋಗಿ ನೋಡಲಾಗಿ ತಮ್ಮ ತಂದೆ ಮುನಿರಾಜು ರವರಿಗೆ ಅಪಘಾತವಾಗಿದ್ದು ನಿಜವಾಗಿದ್ದು ಅಪಘಾತ ನಡೆದ ಸ್ಥಳದಲ್ಲಿ ತನ್ನ ತಂದೆ ರಕ್ತಗಾಯಗಳಾಗಿ ಬಿದ್ದಿದ್ದು ಅವರ ಪಕ್ಕದಲ್ಲಿ ಒಬ್ಬ ವ್ಯಕ್ತಿಯು ಸಹ ರಕ್ತಗಾಯಗಳಾಗಿ ಬಿದ್ದಿದ್ದು ಆತನನ್ನು ತಾನು ವಿಚಾರ ಮಾಡಲಾಗಿ ಆತನ ಹೆಸರು ಗೋಪಾಲ ಬಿನ್ ವೆಂಕಟಪ್ಪ ಸುಮಾರು 46 ವರ್ಷ ಆದಿಕರ್ನಾಟಕ ಜನಾಂಗ ಗುಡಿಬಂಡೆ ಟೌನ್ ಎಂತ ತಿಳಿಸಿ ಗೋಪಾಲ ರವರು ತನಗೆ ತಿಳಿಸಿದ್ದನೆಂದರೆ ತಾನು ತನ್ನ ಬಾಬ್ತು ಕೆ.ಎ-40 ಆರ್-2892 ನೊಂದಣಿ ಸಂಖ್ಯೆಯ ಹೀರೋ ಹೊಂಡಾ ಸ್ಪ್ಲೇಂಡರ್ ಪ್ಲಸ್ ದ್ವಿಚಕ್ರವಾಹನದಲ್ಲಿ ಪೆರೇಸಂದ್ರ ದಿಂದ ಗುಡಿಬಂಡೆಗೆ ಬರುತ್ತಿದ್ದಾಗ ಪೆರೇಸಂದ್ರದಲ್ಲಿ ತಮ್ಮ ಊರಿಗೆ ಬರಲು ಕಾಯುತ್ತಿದ್ದ ತನ್ನ ತಂದೆ ಮುನಿರಾಜು ರವರನ್ನು ತನ್ನ ದ್ವಿ ಚಕ್ರವಾಹನದಲ್ಲಿ ಹಿಂದೆ ಕುಳ್ಳಿರಿಸಿಕೊಂಡು ಗೋಪಾಲ ರವರು ದ್ವಿ ಚಕ್ರವಾಹನವನ್ನು ಚಾಲನೆ ಮಾಡಿಕೊಂಡು  ಗುಡಿಬಂಡೆ ಕಡೆಗೆ  ಬರುತ್ತಿದ್ದಾಗ ಗುಡಿಬಂಡೆ -ಪೆರೇಸಂದ್ರ ಮುಖ್ಯ ರಸ್ತೆಯಲ್ಲಿ ಆದೇಗಾರಹಳ್ಳಿ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ಪೆರೇಸಂದ್ರ ಕಡೆಯಿಂದ ಬರುತ್ತಿದ್ದಾಗ ಹಿಂದುಗಡೆ ಅದೇ ರಸ್ತೆಯಲ್ಲಿ ಪೆರೇಸಂದ್ರ ಕಡೆಯಿಂದ ಕೆ.ಎ-43  3374 ನೊಂದಣಿ ಸಂಖ್ಯೆಯ ಬುಲೇರೋ ವಾಹನದ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುಂದೆ ಹೋಗುತ್ತಿದ್ದ ಕೆ.ಎ-40 ಆರ್-2892 ನೊಂದಣಿ ಸಂಖ್ಯೆಯ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ ಪರಿಣಾಮ ದ್ವಿ ಚಕ್ರವಾಹನದಲ್ಲಿದ್ದ ಇಬ್ಬರು ಕೆಳಗೆ ಬಿದ್ದ ಪರಿಣಾಮ ತಮ್ಮ ತಂದೆ ಮುನಿರಾಜು ರವರಿಗೆ ತಲೆಗೆ ತೀವ್ರವಾದ ರಕ್ತಗಾಯವಾಗಿ ಕೈ ಕಾಲುಗಳಿಗೆ ತರಿಚಿದ ಗಾಯಗಳಾಗಿರುವುದಾಗಿ ತನಗೆ ಸಹ ರಕ್ತಗಾಯಗಳಾಗಿರವುದಾಗಿ ತಿಳಿಸಿದರು ನಂತರ ನಮ್ಮ ತಂದೆಯವರನ್ನು ಅಂಬುಲೆನ್ಸ ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಸರ್ಕಾರಿ ಆಸ್ಪತ್ರೆ ಕರೆದುಕೊಂಡು ಹೋಗಿದ್ದು ಗಾಯಗೊಂಡಿದ್ದ ಗೋಪಾಲ ರವರನ್ನು ಯಾವುದೋ ವಾಹನದಲ್ಲಿ ಚಿಕತ್ಸೆಗಾಗಿ ಪರೇಸಂದ್ರ ಆಸ್ಪತ್ಸೆಗೆ ಕರೆದುಕೊಂಡು ಹೋಗಿದ್ದು ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ತಮ್ಮ ತಂದೆ ಮುನಿರಾಜು ರವರನ್ನು ಪರೀಕ್ಷೀಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು  ತಮ್ಮ ತಂದೆ ಮುನಿರಾಜು ಬಿನ್ ಲೇಟ್ ದೊಡ್ಡಮುನಿಯಪ್ಪ 45 ವರ್ಷ ರವರ ಮೃತ ದೇಹವು ಚಿಕ್ಕಬಳ್ಳಾಪುರ ಆಸ್ಪತ್ರೆಯ ಶವಗಾರದಲ್ಲಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.115/2020 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ:22/05/2020 ರಂದು ನ್ಯಾಯಾಲಯ ಹೆಚ್.ಸಿ.137 ಶ್ರೀ ಮಂಜುನಾಥ ರವರು ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ದಿನಾಂಕ:21/05/2020 ರಂದು ಪಿ.ಎಸ್.ಐ ಶ್ರೀ ಪ್ರತಾಪ್ ಕೆ.ಆರ್. ರವರು ಮಾಲು, ಆರೋಪಿತರು ಹಾಗೂ ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಢಿದ ದೂರಿನ ಸಾರಾಂಶವೇನೆಂದರೆ ನಾನು ದಿನಾಂಕ: 21-05-2020 ರಂದು ಮದ್ಯಾಹ್ನ 2-30 ಗಂಟೆಯ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿರುವಾಗ ಪುರ ಗ್ರಾಮದ ಬಳಿ ಇರುವ ಹಳ್ಳದ ಚೆಕ್ ಡ್ಯಾಂನ ಬಳಿಯ ಮರದ ಕೆಳಗೆ ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಎಲೆಗಳ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಮಾನ್ಯ ಗೌರೀಬಿದನೂರು ವೃತ್ತ ನಿರೀಕ್ಷಕರವರ ಮಾರ್ಗದರ್ಶನದಲ್ಲಿ ದಾಳಿ ಮಾಡಲು ಠಾಣೆಯಲ್ಲಿದ್ದ ಪಿ.ಸಿ 537 ಆನಂದ ಕುಮಾರ್ ಪಿ.ಸಿ 311 ಗೂಳಪ್ಪ .ಪಿ.ಸಿ 530 ಮಾದೇಶ, ಪಿ.ಸಿ, 336 ಉಮೇಶ ಶಿರಶ್ಯಾಡ, ಪಿ.ಸಿ 175 ನವೀನ್ ಕುಮಾರ್, ಪಿ.ಸಿ.-283 ಅರವಿಂದ. ಪಿ.ಸಿ 238 ದಿಲೀಪ್ ಕುಮಾರ್ ಜೀಪ್ ಚಾಲಕನಾದ ಎ.ಪಿ.ಸಿ 120  ನಟೇಶ ರವರು ಮತ್ತು ಪಂಚರೊಂದಿಗೆ ದ್ವಿ ಚಕ್ರ ವಾಹನಗಳಲ್ಲಿ ಮತ್ತು ಸರ್ಕಾರಿ ಜೀಪ್ ನಂ-ಕೆ.ಎ-40 ಜಿ. 395 ರಲ್ಲಿ  ಪುರ  ಗ್ರಾಮದ ಚೆಕ್ ಡ್ಯಾಂ ಬಳಿ ಇರುವ  ಮರದ ಬಳಿ ಹೋಗಿ ಸ್ವಲ್ಪ ದೂರದಲ್ಲಿ ಜೀಪು ಮತ್ತು ದ್ವಿ ಚಕ್ರವಾಹಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಗುಂಪಾಗಿ ಕುಳಿತು ಕೆಳಕ್ಕೆ ಪ್ಲಾಸ್ಟಿಕ್ ಚೀಲ ಹಾಕಿಕೊಂಡು ಅದರ ಮೇಲೆ ಹಣವನ್ನು ಪಣವಾಗಿಟ್ಟು ಅಂದರ್ ಗೆ  50/-ರೂ. ಬಾಹರ್ ಗೆ 50/-ರೂ.ಗಳು ಎಂದು ಕೂಗುತ್ತಾ ಜೂಜಾಟ ವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ನಾವು ಸದರಿಯವರ ಮೇಲೆ ದಾಳಿ ಮಾಡಿ ಜೂಜಾಟ ವಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಸುತ್ತುವರದು ಅಲ್ಲಿದ್ದವರನ್ನು ಹಿಡಿದುಕೊಂಡು ಅವರುಗಳ ಹೆಸರು ಮತ್ತು ವಿಳಾಸಗಳನ್ನು  ಕೇಳಲಾಗಿ 1).ದೇವರಾಜ ಬಿನ್ ಲೇಟ್ ಕೃಷ್ಣಪ್ಪ 45 ವರ್ಷ ಸಾದರ ಗೌಡರು ಜಿರಾಯ್ತಿ ಪುರ ಗ್ರಾಮ ಗೌರೀಬಿದನೂರು ತಾಲ್ಲೂಕು, 2.)ಬಾಲಕೃಷ್ಣ ಬಿನ್ ಗಂಗಪ್ಪ 33 ವರ್ಷ ಪ.ಜಾತಿ ಅಟೋ ಚಾಲಕ ಪುರ ಗ್ರಾಮ ಗೌರೀಬಿದನೂರು ತಾಲ್ಲೂಕು, 3.) ಅಶ್ವತ್ಥಪ್ಪ ಬಿನ್ ಲೇಟ್ ಎಳಪ್ಪಯ್ಯ 45 ವರ್ಷ ಸಾದರ ಗೌಡ ಜನಾಂಗ ಜಿರಾಯ್ತಿ ಪುರ ಗ್ರಾಮ ಗೌರೀಬಿದನೂರು ತಾಲ್ಲೂಕು, 4.) ಶೇಖರ್ ಬಿನ್ ಕೃಷ್ಣಪ್ಪ 49 ವರ್ಷ ಸಾದರ ಗೌಡರು ಜಿರಾಯ್ತಿ ಪುರ ಗ್ರಾಮ ಗೌರೀಬಿದನೂರು ತಾಲ್ಲೂಕು, 5.) ಆನಂದ ಬಿನ್ ಎಲ್ಲಪ್ಪ 35 ವರ್ಷ ಬೋವಿ ಜನಾಂಗ ಜಿರಾಯ್ತಿ ಪಿ.ನಾಗೇನಹಳ್ಳಿ ಗ್ರಾಮ ಗೌರೀಬಿದನೂರು ತಾಲ್ಲೂಕು, 6.) ಅಲ್ಲಾಬಕಾಶ್ ಬಿನ್ ಲೇಟ್ ಹುಸೇನ್ ಸಾಬ್ 50 ವರ್ಷ ಮುಸ್ಲಿಂ ಜನಾಂಗ ಜಿರಾಯ್ತಿ ಪುರ ಗ್ರಾಮ ಗೌರೀಬಿದನೂರು ತಾಲ್ಲೂಕು, 7.)ಗಂಗಾಧರಪ್ಪ ಬಿನ್ ಲೇಟ್ ಚಂದ್ರಪ್ಪ 60 ವರ್ಷ ಕುರುಬರು ಜಿರಾಯ್ತಿ ಆರ್ಕುಂದ ಗ್ರಾಮ ಗೌರೀಬಿದನೂರು ತಾಲ್ಲೂಕು. 8.)ಮಂಜುನಾಥ ಬಿನ್ ಲೇ ಸುಬ್ಬರಾಯಪ್ಪ 42 ವರ್ಷ ನಾಯಕರು ಜಿರಾಯ್ತಿ ಪುರ ಗ್ರಾಮ ಗೌರೀಬಿದನೂರು ತಾಲ್ಲೂಕು, 9.)ಚಾಂದ್ ಪಾಷಾ ಬಿನ್ ಲೇಟ್ ಮಹಮದ್ ಹನೀಪ್ 40 ವರ್ಷ ಕೂಲಿ ಕೆಲಸ ಪುರ ಗ್ರಾಮ ಗೌರೀಬಿದನೂರು ತಾಲ್ಲೂಕು, ಎಂದು ತಿಳಿಸಿದ್ದು, ಸದರಿ ಯವರುಗಳನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಸೇರಿಕೊಂಡು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಸದರಿ ಸ್ಥಳದಲ್ಲಿ ಪಂಚರ ಸಮಕ್ಷಮ ಪಂಚನಾಮೆಯ ಕ್ರಮದ  ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 3600/- (ಮೂರು ಸಾವಿರದ ಆರುನೂರು ರೂ ಮಾತ್ರ ) 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು ಮದ್ಯಾಹ್ನ 3-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಕ್ಕೆ ಪಡೆದುಕೊಂಡು ಬಂದು  ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ವರದಿಯ ಮೇರೆಗೆ ಠಾಣಾ ಎನ್.ಸಿ.ಆರ್ ನಂಬರ್ 125/2020 ರಂತೆ ದಾಖಲಿಸಿ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.35/2020 ಕಲಂ. 379 ಐ.ಪಿ.ಸಿ :-

          ದಿನಾಂಕ:22/05/2020 ರಂದು ಬೆಳಿಗ್ಗೆ 11:20 ಗಂಟೆಗೆ ಪಿರ್ಯಾದಿ ಮಂಜುನಾಥ ಬಿನ್ ನಾರಾಯಣಸ್ವಾಮಿ, 49 ವರ್ಷ, ಒಕ್ಕಲಿಗರು, ಜಿರಾಯ್ತಿ,ವಾಸ: ನಂದಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಬಾಬತ್ತು 65,000 ರೂಗಳ ಬೆಲೆ ಬಾಳುವ ಹೆಚ್.ಆಫ್ ಸೀಮೆ ಹಸುವನ್ನು ವಾಸವಾಗಿರುವ ಮನೆಯ ಪಕ್ಕದ ಖಾಲಿಕಜಾಗದಲ್ಲಿಕಟ್ಟುತ್ತಿದ್ದೇವು ಎಂದಿನಂತೆ ದಿನಾಂಕ:21/05/2020 ರಂದು ರಾತ್ರಿ 9:30 ಗಂಟೆಗೆ ಮೇವು ಹಾಕಿಮಲಗಿಕೊಂಡೇವು ಈ ದಿನ ದಿ:22/05/2020 ರಂದು ಬೆಳಿಗ್ಗೆ ಸುಮಾರು 06:00 ಗಂಟೆಗೆ ಎದ್ದು ನೋಡಲಾಗಿ ಹಸು ಕಾಣಿಸಲಿಲ್ಲ ನಂತರ ತಾವು ಗ್ರಾಮದಲ್ಲಿ ಮತ್ತು ಅಕ್ಕಪಕ್ಕದ ಗ್ರಾಮಗಳಲ್ಲಿ ಹುಡುಕಾಡಿದರು ಸಹ ಸಿಕ್ಕಿರುವುದಿಲ್ಲ  ಯಾರೋ ಕಳ್ಳರು ನೆನ್ನೆ ರಾತ್ರಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ನಂತರ ಹುಡುಕಾಡಿಕೊಂಡು ಬೆಳಿಗ್ಗೆ 09:45 ಗಂಟೆಗೆ ಮನೆಗೆ ಹೋದೆ ಬೆಳಿಗ್ಗೆ 10:00 ಗಂಟೆ ಸಮಯದಲ್ಲಿ ಪೊಲೀಸ್ ಜೀಪ್ ತಮ್ಮ ಮನೆಯ ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ್ದರು ಜೀಪಿನಿಂದ ಒಬ್ಬ ಅಸಾಮಿ ಕೆಳಗಿಳಿದು ತಾನು ಸೀಮೆಹಸುಕಟ್ಟಿದ್ದ ಸ್ಥಳಕ್ಕೆ ಬಂದು ಇದೇ ಸ್ಥಳದಲ್ಲಿ ಕಟ್ಟಿದ್ದ ಸೀಮೆ ಹಸುವನ್ನು ನಾನು ಮತ್ತು ನನ್ನ ಸ್ನೇಹಿತರಾದ ಶಿಡ್ಲಘಟ್ಟ ನಗರದ ರೆಹಮತ್ ನಗರದ ವಾಸಿ ಶಹಿನ್ ಷಾ ಮತ್ತು ನಿಜಾಂ ರವರು ಸೇರಿ ದಿ:21/05/2020 ರಂದು ರಾತ್ರಿ ಸುಮಾರು 1:00 ಗಂಟೆಗೆ ಕಳವು ಮಾಡಿ ಕೆ.ಎ-67 0387 ನಂಬರಿನ ಟಾಟಾ ಎಸಿ ವಾಹನದಲ್ಲಿ ಹತ್ತಿಸಿ ಸಾಗಿಸಿದ್ದೇವು ಎಂದು ನುಡಿದು ಸ್ಥಳವನ್ನು ತೋರಿಸಿದ ಪೊಲೀಸರಿಗೆ ತಮ್ಮ ಹಸುವಿನ ಬಗ್ಗೆ ವಿಚಾರ ಮಾಡಲಾಗಿ ಹಸುವನ್ನು ಅಮಾನತ್ತು ಪಡಿಸಿ ನಂದಿ ಗಿರಿಧಾಮ ಪೊಲೀಸ್ ಠಾಣೆಯ ಬಳಿಬಿಟ್ಟಿರುವುದಾಗಿ ಹೇಳಿದರು, ತಾನು ಬಂದು ನೋಡಲಾಗಿ ಕಳುವಾದ ತನ್ನ ಬಾಬತ್ತು ಸೀಮೆ ಹಸು ಆಗಿರುತ್ತೆ. ದಿ:21/05/2020 ರಂದು ರಾತ್ರಿ  ತನ್ನ ಬಾಬತ್ತು ಸೀಮೆ ಹಸುವನ್ನು ಶಿಡ್ಲಘಟ್ಟದ ರೆಹಮತ್ ನಗರದ ವಾಸಿಗಳಾದ ಚೋಟು ಬೇಗ್, ಶಹಿನ್ ಷಾ ಮತ್ತು ನಿಜಾಂ ರವರು ಕಳವು ಮಾಡಿದ್ದು ಅವರ ವಿರುದ್ದ ಕಾನೂನು ರೀತ್ಯಕ್ರಮ ಜರುಗಿಸಲು ಕೋರುತ್ತೇನೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.130/2020 ಕಲಂ. 143,306,504,506,149 ಐ.ಪಿ.ಸಿ :-

          ದಿನಾಂಕ:-22/05/2020 ರಂದು ಮದ್ಯಾಹ್ನ 2-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎಲ್ ಮುನಿರಾಜು ಬಿನ್ ಲೇಟ್ ಲಿಂಗಪ್ಪ, 42 ವರ್ಷ, ಆದಿ ಕರ್ನಾಟಕ, ಜಿರಾಯ್ತಿ, ವಾಸ-ಜಂಗಮಕೋಟೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಅಣ್ಣನಾದ ನಾರಾಯಣಸ್ವಾಮಿ (54 ವರ್ಷ) ರವರು ತಮ್ಮ ಮನೆಯ ಪಕ್ಕದಲ್ಲಿಯೇ ತನ್ನ ಸಂಸಾರದ ಸಮೇತವಾಗಿ ಜಿರಾಯ್ತಿ ಮಾಡಿಕೊಂಡು ವಾಸವಾಗಿರುತ್ತಾನೆ. ತನ್ನ ಅಣ್ಣನಾದ ನಾರಾಯಣಸ್ವಾಮಿ ರವರು ತನ್ನ ಮನೆಯ ಮುಂಭಾಗದಲ್ಲಿ ಮಳೆಯ ನೀರು ಹಾಗು ಬಿಸಲು ಬೀಳದಂತೆ ತಡೆಯಲು ದಿನಾಂಕ 16/05/2020 ರಂದು ಶೀಟ್ ಗಳನ್ನು ಹಾಕಿಕೊಂಡಿರುತ್ತಾನೆ. ಇದನ್ನು ಕಂಡ ತಮ್ಮ ಕಾಲೋನಿಯ ತಮ್ಮ ಜನಾಂಗದ ವಾಸಿಗಳಾದ ಮುನೇಗೌಡ ಬಿನ್ ಲೇಟ್ ಮೈಲಾರಪ್ಪ ಹಾಗು ಇತರರು ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೆ ದೂರನ್ನು ನೀಡಿದ್ದು ಆಗ ಪಿಡಿಓ ರವರು ದಿನಾಂಕ 20/05/2020 ರಂದು ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಿದ್ದಾಗ ಮೇಲ್ಕಂಡ ಮುನೇಗೌಡ ಬಿನ್ ಲೇಟ್ ಮೈಲಾರಪ್ಪ, ನಲ್ಲರಾಜು ಬಿನ್ ಗ್ಯಾಂಗ್ ನಾರಾಯಣಪ್ಪ, ಮೈಲಾರಪ್ಪ @ ಸುಬ್ಬಾ ಬಿನ್ ಮುನಿಯಪ್ಪ, ಮನೋಜ್ ಬಿನ್ ಮೈಲಾರಪ್ಪ @ ಸುಬ್ಬಾ, ವೆಂಕಟೇಶ್ ಬಿನ್ ಜೆ.ನಾರಾಯಣಸ್ವಾಮಿ ರವರು ತನ್ನ ಅಣ್ಣನಾದ ನಾರಾಯಣಸ್ವಾಮಿ ರವರ ಮೇಲೆ ವಿನಾ ಕಾರಣ ಜಗಳ ಮಾಡಿ ಇಬ್ಬರು ಮಾತಿಗೆ ಮಾತು ಬೆಳೆಸಿಕೊಂಡು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿರುತ್ತಾರೆ. ಆಗ ಪಿಡಿಓ ರವರು ಮನೆಯ ದಾಖಲೆಗಳನ್ನು ತಂದು ಹಾಜರು ಪಡಿಸುವಂತೆ ಸೂಚಿಸಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಈ ಗಲಾಟೆಯ ಬಗ್ಗೆ ತನ್ನ ಅಣ್ಣ ತಮ್ಮ ಗ್ರಾಮದ ಮುಖಂಡರುಗಳಿಗೆ ತಿಳಿಸಿದಾಗ ಅವರು ನ್ಯಾಯ ಪಂಚಾಯ್ತಿ ಮಾಡಿ ಬಗೆಹರಿಸೋವೆಂದು ಹೇಳಿದ್ದು ಆದ ಕಾರಣ ತನ್ನ ಅಣ್ಣ ಠಾಣೆಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ಹೀಗಿರುವಾಗ ದಿನಾಂಕ 21/05/2020 ರಂದು ಸಂಜೆ ಸುಮಾರು 7-00 ಗಂಟೆ ಸಮಯದಲ್ಲಿ ಮೇಲ್ಕಂಡ ಮುನೇಗೌಡ ಬಿನ್ ಲೇಟ್ ಮೈಲಾರಪ್ಪ, ನಲ್ಲರಾಜು ಬಿನ್ ಗ್ಯಾಂಗ್ ನಾರಾಯಣಪ್ಪ, ಮೈಲಾರಪ್ಪ @ ಸುಬ್ಬಾ ಬಿನ್ ಮುನಿಯಪ್ಪ, ಮನೋಜ್ ಬಿನ್ ಮೈಲಾರಪ್ಪ @ ಸುಬ್ಬಾ, ವೆಂಕಟೇಶ್ ಬಿನ್ ಜೆ.ನಾರಾಯಣಸ್ವಾಮಿ ರವರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ತನ್ನ ಅಣ್ಣನ ಮನೆಯ ಬಳಿ ಬಂದು ಗಲಾಟೆಯನ್ನು ಮಾಡುತ್ತಿದ್ದಾಗ ತಾನು ಸಹ ಅಲ್ಲಿಗೆ ಹೋಗಿದ್ದು ಆಗ ಮೇಲ್ಕಂಡವರು ತನ್ನ ಅಣ್ಣನಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿ, ನೀನು ಭೂಮಿ ಇರುವುದೇ ಭಾರ ನೀನು ಬದುಕಿರುವುದಕ್ಕಿಂತ ವಿಷ ಕುಡಿದು ಸತ್ತು ಹೋಗು ಎಂದು ತನ್ನ ಅಣ್ಣನಿಗೆ ಸಾಯಲು ಪ್ರಚೋದನೆ ನೀಡಿದಾಗ ತನ್ನ ಅಣ್ಣ ಇವರ ಮಾತಿಗೆ ನೊಂದು ತನ್ನ ಕೈಗಳಿಂದ ಎದೆಯ ಭಾಗಕ್ಕೆ ಜೋರಾಗಿ ಹೊಡೆದುಕೊಂಡು ಅಸ್ವಸ್ಥನಾಗಿ ಕುಸಿದು ಅಲ್ಲಿಯೇ ಬಿದ್ದು ಹೋಗಿರುತ್ತಾನೆ. ಆಗ ಅಲ್ಲಿಯೇ ಇದ್ದ ತಾನು, ತನ್ನ ಅಣ್ಣನ ಮಗ ಮಧು ಹಾಗು ಪಕ್ಕದ ಮನೆಯ ವಾಸಿಗಳಾದ ನಾಗರಾಜ್ ಬಿನ್ ಲೇಟ್ ಮಾಳಪ್ಪ, ಪೂಜಪ್ಪ ಬಿನ್ ಪಾತಪ್ಪ ಹಾಗು ಇತರರು ಕೂಡಲೇ ತನ್ನ ಅಣ್ಣನನ್ನು ಉಪಚರಿಸಿ ತನ್ನ ಅಕ್ಕನ ಮಗನ ಕಾರಿನಲ್ಲಿ ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮಾರ್ಗ ಮದ್ಯೆ ತನ್ನ ಅಣ್ಣ ಸತ್ತು ಹೋಗಿರುತ್ತಾನೆ. ನಂತರ ತಾವು ತನ್ನ ಅಣ್ಣನ ಶವವನ್ನು ವಾಪಸ್ಸು ಮನೆಯ ಬಳಿ ತೆಗೆದುಕೊಂಡು ಹೋಗಿರುತ್ತೇವೆ. ಈ ದಿನ ತನ್ನ ಅಣ್ಣನ ಶವವನ್ನು ಸಾಗಿಸಿಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯ ಶವಗಾರದಲ್ಲಿಟ್ಟು ಈ ವಿಷಯವನ್ನು ತಾವು ತಮ್ಮ ಗ್ರಾಮದ ಹಿರಿಯರಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತಿದ್ದು ತನ್ನ ಅಣ್ಣನಾದ ನಾರಾಯಣಸ್ವಾಮಿ ರವರಿಗೆ ಸಾಯಲು ಪ್ರಚೋದನೆ ಮಾಡಿದ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.