ದಿನಾಂಕ :23/01/2021 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 18/2021 ಕಲಂ. 143,323,324,504,149 ಐಪಿಸಿ :-

     ದಿನಾಂಕ: 22-01-2021 ರಂದು ಮದ್ಯಾಹ್ನ 13:30 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ,ವೆಂಕಟಕೃಷ್ಣಪ್ಪ ಬಿನ್ ಲೇಟ್ ವೆಂಕಟಸ್ವಾಮಿ ,55 ವರ್ಷ, ಆದಿ ದ್ರಾವಿಡ ಜನಾಂಗ , ಜಿರಾಯ್ತಿ ,ವಾಸ  ಬೂರಗಮಡುಗು ಗ್ರಾಮ , ಮಿಟ್ಟೆಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆ ದೂರನ್ನು ಪಡೆದುಕೊಂಡಿದ್ದರ   ಸಾರಾಂಶವೆನೇಂದರೆ, ದಿನಾಂಕ: 21-01-2021 ರಂದು ರಾತ್ರಿ ನಮ್ಮ ಗ್ರಾಮದ ಅಂಜಿನಪ್ಪ  ರವರು ಮನೆ ಮುಂದೆ ನಾನು ನಿಂತಿದ್ದಾಗ, ರಾತ್ರಿ 8-30 ಗಂಟೆ ಸುಮಾರಿಗೆ ನಮ್ಮ ಗ್ರಾಮದ ಮೂರ್ತಿ ಬಿನ್ ಪೆದ್ದಾಯಪ್ಪ, ಸಣ್ಣ ನರಸಿಂಹ ಮೂರ್ತಿ ಬಿನ್ ನರಸಿಂಹಪ್ಪ, ಪಜಾತಿ ಜನಾಂಗ ರವರು ಬಂದು ಏಕಾಏಕಿ ನನ್ನ ಮೇಲೆ ಗಲಾಟೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ನಂತರ ನಮ್ಮ ಗ್ರಾಮದ ಮುನಿಯಪ್ಪ ಬಿನ್ ಲೇಟ್ ಮುನಿಯಪ್ಪ, 50 ವರ್ಷ ಆದಿದ್ರಾವಿಡ ಜನಾಂಗ, ಶಿವಕುಮಾರ್ ಬಿನ್ ನಂದೀಶಪ್ಪ ,35 ವರ್ಷ ಆದಿ ಕರ್ನಾಟಕ ಜನಾಂಗ, ಈಶ್ವರಮ್ಮ  ಕೊಂ ವೆಂಕಟರವಣಪ್ಪ ,30  ವರ್ಷ ಆದಿ ಕರ್ನಾಟಕ ಜನಾಂಗ, ರವರುಗಳು ಸಹ ಆಕ್ರಮ ಗುಂಪು ಕಟ್ಟಿಕೊಂಡು ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಸಣ್ಣ ನರಸಿಂಹಪ್ಪ ಮೂರ್ತಿ ಬಿನ್ ನರಸಿಂಹಪ್ಪ ಮತ್ತು ಮುನಿಯಪ್ಪ ರವರು ಕಲ್ಲುಗಳಿಂದ  ನನ್ನ ಕಾಲು ಮೈಕೈಗೆ  ಹೋಡೆದು ನೋವುಂಟು ಮಾಡಿರುತ್ತಾರೆ. ಶಿವಕುಮಾರ್, ಈಶ್ವರಮ್ಮ, ಮೂರ್ತಿ ರವರು ತಮ್ಮ ಕೈಗಳಿಂದ ನನಗೆ ಮೈಕೈಗೆ ಹೋಡೆದು ಹಾಗೂ ಕಾಲುಗಳಿಂದ ತುಳಿದು ನೋವುಂಟು ಮಾಡಿರುತ್ತಾರೆ. ನಂತರ ನಮ್ಮ ಗ್ರಾಮದ ವೆಂಕಟೆಶ್ ಬಿನ್ ವ್ಯಾಪಾರಪ್ಪ , ಪೆದ್ದನಾಗಪ್ಪ ಬಿನ್ ಲೇಟ್ ಪೆದ್ದನರಸಿಂಹಪ್ಪ , ಕದಿರಪ್ಪ ಬಿನ್ ಲೇಟ್ ಸಿದ್ದಪ್ಪ ರವರುಗಳು ಅಡ್ಡ ಬಂದು ಜಗಳಾವನ್ನು ಬಿಡಿಸಿರುತ್ತಾರೆ. ನನ್ನನ್ನು ಮನೆಗೆ ಕಳುಹಿಸಿಕೊಟ್ಟಿರುತ್ತಾರೆ.  ನಂತರ ನಾವು ಈ ದಿನ ದಿನಾಂಕ: 22-01-2021 ರಂದು ಮದ್ಯಾಹ್ನ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆದಿರುತ್ತೇವೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆಂದು ನೀಡಿದ ಹೇಳಿಕೆಯ ದೂರಿನ ಮೇರೆಗೆ ಠಾಣೆಗೆ ಮದ್ಯಾಹ್ನ 14:30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಪ್ರಕರಣವನ್ನು ದಾಖಲು ಮಾಡಿರುವುದಾಗಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 19/2021 ಕಲಂ.143,323,324,504,149 ಐಪಿಸಿ :-

     ದಿನಾಂಕ:22.01.2021 ರಂದು ಮದ್ಯಾಹ್ನ 14.45 ಗಂಟೆಗೆ ಆಸ್ಪತ್ರೆಯಿಂದ ಮೆಮೋ ಪಡೆದು ಆಸ್ಪತ್ರಗೆ ಭೇಟಿ ನೀಡಿ ಗಾಯಾಳು ಶ್ರೀ ಕೃಷ್ಣಪ್ಪ ಬಿನ್ ಲೇಟ್ ನರಸಿಂಹಪ್ಪ, 51 ವರ್ಷ, ಗೊಲ್ಲ ಜನಾಂಗ, ಆಟೋ ಚಾಲಕ ಮನೆ ನಂಬರ್ 95 ಬಿ, ತುಂಗಾ ಬ್ಲಾಕ್ ಬೆಟ್ಟದಾಸನಪುರ ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು-68, ಸ್ವಂತ ಊರು ಮಾಮಡಿಮಾಕಲಪಲ್ಲಿ ಗ್ರಾಮ(ಮುಮ್ಮಡಿವಾರಪಲ್ಲಿ), ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆಯ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನ್ನ ಸ್ವಂತ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಮಾಮಡಿಕಾಯಲಪಲ್ಲಿ ಗ್ರಾಮವಾಗಿರುತ್ತೆ. ಈಗ್ಗೆ 30 ವರ್ಷಗಳಿಂದ ನಾನು ಬೆಂಗಳೂರಿನಲ್ಲಿ ವಾಸವಾಗಿರುತ್ತೇನೆ. ದಿನಾಂಕ:15.01.2021 ರಂದು ರಾತ್ರಿ ಸುಮಾರು 10.00 ಗಂಟೆಯಲ್ಲಿ ನಮ್ಮ ಊರಿನ ಪಕ್ಕದಲ್ಲಿ ಜಮೀನಿನಲ್ಲಿರುವ ನನ್ನ ಮನೆಯ ಬಳಿ ಹೋಗಿ, ಬಾಗಿಲನ್ನು ತೆಗೆಯಲು ಹೋದಾಗ, ನನ್ನ ತಮ್ಮನಾದ ಆದಿನಾರಾಯಣ ಬಿನ್ ಲೇಟ್ ನರಸಿಂಹಪ್ಪ, 42 ವರ್ಷ, ರವರು ನನ್ನ ಬಳಿಗೆ ಬಂದು ನೀನು ಏಕೆ ಇಲ್ಲಿಗೆ ಬಂದಿದ್ದು, ಎಂದು ಜೋರಾಗಿ ಕೂಗಿಕೊಂಡು ಕೇಳಿದನು. ಅದಕ್ಕೆ ನಾನು ಇದು ನನ್ನ ಮನೆ ನೀನು ಯಾರು ಕೇಳಲು ಎಂಧು ಕೇಳುತ್ತಿದ್ದಾಗ, ನನ್ನ ಅಣ್ಣ ಸೀನಪ್ಪ ಬಿನ್ ಲೇಟ್ ನರಸಿಂಹಪ್ಪ, 58 ವರ್ಷ, ವೀರಬಾಬಪ್ಪ ಬಿನ್ ಲೇಟ್ ಮುನಿಯಪ್ಪ, 50 ವರ್ಷ, ಲೋಕೇಶ ಬಿನ್ ಸೀನಪ್ಪ, 21 ವರ್ಷ, ಶಿವಪ್ಪ ಬಿನ್ ಶ್ರೀರಾಮಪ್ಪ, 40 ವರ್ಷ, ರವರುಗಳು ಗುಂಪುಕಟ್ಟಿಕೊಂಢು ಬಂದು ಅವಾಚ್ಯ ಶಬ್ದಗಳಿಂಧ ಬೈಯ್ಯುತ್ತಿದ್ದಾಗ, ಆದಿನಾರಾಯಣ ಕೋಲಿನಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ನಂತರ ಉಳಿದವರು ಕೈಗಳಿಂದ ಮೈ ಕೈಗೆ ಹೊಡೆದು ನೋವುಂಟುಮಾಡಿರುತ್ತಾರೆ. ಹಾಗೂ ಕೆಳಗೆ ತಳ್ಳಿ ಹೊಡೆದಿರುತ್ತಾರೆ. ನಂತರ ನನ್ನನ್ನು ಎಲ್ಲರೂ ಸೇರಿ ನಮ್ಮ ಮನೆಯ ಒಳಗೆ ಎತ್ತಿ ಬಿಸಾಡಿರುತ್ತಾರೆ. ನಂತರ ನಮ್ಮ ಗ್ರಾಮದ ಸುಧಾಕರ ಬಿನ್ ಚಿನ್ನ ರಂಗಪ್ಪ, ಸುಮಾರು 40 ವರ್ಷ, ನಮ್ಮ ಮನೆಯ ಬಳಿ ಬಂದು ನನಗೆ ಕೊಟ್ಟು ಸುಧಾರಿಸಿರುತ್ತಾರೆ. ನಂತರ ನಾನು ಮನೆಯಲ್ಲಿಯೇ ಇದ್ದೆನು. 2 ದಿನದ ನಂತರ ನನ್ನ ಹೆಂಡತಿಗೆ ಪೋನ್ ಮಾಡಿ ವಿಚಾರವನ್ನು ತಿಳಿಸಿರುತ್ತೇನೆ. ನಮ್ಮ ಗ್ರಾಮದಲ್ಲಿ ಹಿರಿಯರು ರಾಜಿ ಪಂಚಾಯ್ತಿ ಮಾಡುತ್ತಾರೆಂದು ಸುಮ್ಮನಿದ್ದೆನು. ದಿನಾಂಕ:15.01.2021 ರಂಧು ರಾತ್ರಿ ಆದಿನಾರಾಯಣ ಮತ್ತು ಮೇಲ್ಕಂಡ ಇತರರು ಹೊಡೆದಿದ್ದರಿಂದ ನನ್ನ ತಲೆಯಲ್ಲಿ ಮತ್ತು ಮೈಕೈಗೆ ನೋವು ಜಾಸ್ತಿಯಾಗಿದ್ದರಿಂಧ  ಈ ದಿನ ದಿನಾಂಕ:22.01.2021 ರಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುತ್ತೇನೆ. ಆದ್ದರಿಂದ ನನ್ನನ್ನು ಕೋಲಿನಿಂಧ ಹೊಡೆದು ಅವಾಚ್ಯ ಶಬ್ದಗಳಿಂಧ ಬೈಯ್ದು, ಕೈಗಳಿಂಧ ಹೊಡೆದು ಮೈಕೈಗೆ ನೋವುಂಟು ಮಾಡಿರುವ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇನೆಂದು ನೀಡಿದ ಹೇಳಿಕೆಯ ದೂರನ್ನು ಪಡೆದುಕೊಂಡು ಠಾಣೆಗೆ ಮದ್ಯಾಃನ 15.30 ಗಂಟೆಗೆ ವಾಪಸ್ ಬಂದು ಠಾಣಾ ಮೊ.ಸಂ 19/2021 ಕಲಂ 143, 323, 324, 504 ರ/ಜೊ 149 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿರುತ್ತೇನೆ.

 1. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ. 07/2021 ಕಲಂ. 419,420 ಐಪಿಸಿ & 66(ಡಿ) INFORMATION TECHNOLOGY ACT 2000 :-

     ಈ ದಿನ ದಿನಾಂಕ:22/01/2021 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ. ಜೀವನ್ ಹೆಚ್.ವಿ ಬಿನ್ ವೆಂಕಟರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರನ ಸಾರಾಂಶವೇನೆಂದರೆ, ದಿನಾಂಕ:19/01/2021 ರಂದು ನಾನು ಬೆಂಗಳೂರಿನಿಂದ ನಮ್ಮ ಗ್ರಾಮಕ್ಕೆ ಹೋಗಲು ಬಸ್ಸಿನಲ್ಲಿ ದೇವನಹಳ್ಳಿ ಮಾರ್ಗವಾಗಿ ಬರುತ್ತಿರುವಾಗ ನನ್ನ ವಿವೋ ವಿ9 ಆಂಡ್ರಾಯ್ಡ್ ಮೊಬೈಲ್ನಲ್ಲಿ ಓ.ಎಲ್.ಎಕ್ಸ್ ಆಪ್ ನ್ನು ಓಪನ್ ಮಾಡಿ ನೋಡುತ್ತಿದ್ದಾಗ ಹೋಂಡಾ ಆಕ್ಟೀವಾ 5ಜಿ ದ್ವಿಚಕ್ರವಾಹನ ಇದ್ದು ಅದಕ್ಕೆ ನಾನು ಸದರಿ ದ್ವಿಚಕ್ರ ವಾಹನ ಪ್ರಸ್ತುತ ಇದಿಯಾ ಎಂತ ಕೇಳಿದ್ದಕ್ಕೆ ನಿಮಗೆ ಬೇಕಾದಲ್ಲಿ ಮೊ.8822477562 ಗೆ ಪೋನ್ ಮಾಡಿ ಎಂತ ಸಂಖ್ಯೆಯನ್ನು ಕಳುಹಿಸಿಕೊಟ್ಟಿದ್ದು ಅದರಂತೆ ನಾನು ಪೋನ್ ಮಾಡಿದಾಗ ಏರ್ ಪೋರ್ಟ್ ಹತ್ತಿರ ಬನ್ನಿ ವಾಹನ ತೋರಿಸುತ್ತೇನೆ ನಿಮಗೆ ಇಷ್ಟವಾದಲ್ಲಿ ತೆಗೆದುಕೊಳ್ಳಿ ಎಂತ ಹೇಳಿದ ಅದಕ್ಕೆ ನಾನು ಒಪ್ಪಿ ಅಲ್ಲಿಗೆ ಹೋಗೋಣವೆಂತ ಹೋಗುತ್ತಿದ್ದಾಗ ಪುನಃ ಸದರಿ ನಂಬರಿನಿಂದ ನನ್ನ ಮೊ. 7090254840 ಗೆ ಪೋನ್ ಮಾಡಿ 2000/- ರೂಗಳನ್ನು ಗೇಟ್ ನಲ್ಲಿ ಪಾವತಿಸಬೇಕಾಗಿದ್ದು  2000/- ಕಳುಹಿಸುವಂತೆ ತಿಳಿಸಿದ ಅದರಂತೆ ನಾನು ನನ್ನ ಪೋನ್ ಪೇ ಮೊ.8822477562 ನಿಂದ ಅವರು ವಾಟ್ಸ್ಪ್ ನಲ್ಲಿ ನೀಡಿದ ಮತ್ತೊಂದು ಮೊಬೈಲ್ ನಂಬರ್ 9670217023 ಗೆ ಕಳುಹಿಸಿದೆ. ನಂತರ ಪುನಃ ಮೊ.7064979286 ನಿಂದ ಕರೆ ಮಾಡಿ ಅರ್ಧ ಮೊತ್ತವನ್ನು ಪಾವತಿಸಲು ತಿಳಿಸಿದ್ದು ಅದರಂತೆ ನಾನು 4900/-  ರೂಪಾಯಿಗಳನ್ನು ಮತ್ತು 4000/- ರೂಗಳನ್ನು ನನ್ನ ಪೋನ್ ಪೇ ನಿಂದ ಅವರ ಪೋನ್ ಪೇ ನಂ.7879640655 ನಂಬರಿಗೆ ಕಳುಹಿಸಿದೆ. ನಂತರ ಪುನಃ 900/- ರೂಪಾಯಿಗಳನ್ನು 7206295747 ಗೆ ಅವರು ಕೇಳಿದಂತೆ ಪೋನ್ ಪೇ ಮಾಡಿರುತ್ತೇನೆ. ನಂತರ ಪುನಃ ಅವರು ಹೇಳಿದಂತೆ ಸದರಿ ನಂಬರ್ ಗೆ 5000/- ರೂಗಳನ್ನು ಕಳಹಿಸಿಕೊಟ್ಟಿರುತ್ತೇನೆ. ನಂತರ ಪುನಃ ಪುಲ್ ಅಮೌಂಟ್ ಕಟ್ಟಲಿಕ್ಕೆ ತಿಳಿಸಿದ್ದು ಅದರಂತೆ ನಾನು ನನ್ನ ಸ್ನೇಹಿತೆ ಲತಾ ಶ್ರೀ ರವರ ಕ್ರೆಡಿಟ್ ಕಾರ್ಡ್[ನಂ.4844410100168940] ನ ವಿವರಗಳನ್ನು ಕೊಟ್ಟು ಓಟಿಪಿ ತಿಳಿಸಿದ್ದು ಅದರಂತೆ ಸದರಿಯವರು ಒಟ್ಟು 17930/- ರೂಪಾಯಿಗಳನ್ನು ಕಡಿತಮಾಡಿಕೊಂಡಿರುತ್ತಾರೆ. ಹೀಗೆ ಒಟ್ಟು 34730/- ರೂಪಾಯಿಗಳನ್ನು ನನ್ನಿಂದ ಪಡೆದುಕೊಂಡು ಪುನಃ ಅಮೌಂಟ್ ಕಳುಹಿಸಲು ತಿಳಿಸಿದ್ದು ಅದಕ್ಕೆ ನಾನು ನನ್ನ ಹಣವನ್ನು ನನಗೆ ವಾಪಸ್ಸು ಕೊಡಲು ತಿಳಿಸಿದ್ದು ಹಣವನ್ನು ನಿರಾಕರಿಸಿರುತ್ತಾರೆ.  ದಯವಿಟ್ಟು ಓ.ಎಲ್.ಎಕ್ಸ್ ನಲ್ಲಿ ದ್ವಿಚಕ್ರವಾಹನವನ್ನು ಮಾರಾಟಕ್ಕಿಟ್ಟು ಹಣವನ್ನು ಪಡೆದುಕೊಂಡು ವಾಹವನ್ನು ಕೊಡದೇ ಹಣವನ್ನು ವಾಪಸ್ಸು ನೀಡದೇ ವಂಚಿಸಿದ್ದು ಸದರಿಯವರನ್ನು ಪತ್ತೆ ಮಾಡಿ ನನ್ನ ಹಣವನ್ನು ನನಗೆ ವಾಪಸ್ಸು ಕೊಡಿಸಬೇಕೆಂತ ಈದಿನ ತಡವಾಗಿ ಬಂದು ದೂರು ನೀಡುತ್ತಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 33/2021 ಕಲಂ. 323,324,341,504,506,34 ಐಪಿಸಿ :-

          ದಿನಾಂಕ: 23/01/2021 ರಂದು ಮದ್ಯಾಹ್ನ 12.00 ಗಂಟೆಗೆ ವೆಂಕಟರಾಯಪ್ಪ ಬಿನ್ ನಾರಾಯಣಪ್ಪ, 55 ವರ್ಷ, ಕೂಲಿ ಕೆಲಸ, ಆದಿ ಕರ್ನಾಟಕ ಜನಾಂಗ, ಸೂಲದೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ತಮ್ಮ ಜಮೀನು ಮತ್ತು ತಮ್ಮ ಗ್ರಾಮದ ನಾರಾಯಣಸ್ವಾಮಿರವರ ಜಮೀನುಗಳು ಅಕ್ಕ-ಪಕ್ಕದಲ್ಲಿರುತ್ತವೆ. ತಾವು ತಮ್ಮ ಹಸುಗಳನ್ನು ಪ್ರತಿ ದಿನ ತಮ್ಮ ಜಮೀನುಗಳಲ್ಲಿ ಮೇಯಿಸಿಕೊಳ್ಳುತ್ತಿರುತ್ತೇವೆ. ಹೀಗಿರುವಾಗ ದಿನಾಂಕ: 22/01/2021 ರಂದು ರಾತ್ರಿ 7.00 ಗಂಟೆ ಸಮಯದಲ್ಲಿ ತನ್ನ ಮಗನಾದ ರವಿ ರವರು ಹಸುಗಳಿಗೆ ಮೇವನ್ನು ಕೊಯ್ದುಕೊಂಡು ಆತನ ದ್ವಿಚಕ್ರವಾಹನದಲ್ಲಿ ಮನೆಗೆ ಬರುತ್ತಿದ್ದಾಗ ತಮ್ಮ ಗ್ರಾಮದ ಮೇಲ್ಕಂಡ ನಾರಾಯಣಸ್ವಾಮಿ ಮತ್ತು ಆತನ ಮಗನಾದ ನವೀನ್ ರವರು ತಮ್ಮ ಮೇಲಿರುವ ಹಳೆಯ ದ್ವೇಷದಿಂದ ತನ್ನ ಮಗನ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ತನ್ನ ಮಗನನ್ನು ಕುರಿತು  “ಏನೋ ಲೋಫರ್ ನನ್ನ ಮಗನೇ ನಿಮ್ಮ ಹಸುಗಳನ್ನು ನಮ್ಮ ಜಮೀನಿನಲ್ಲಿ ಮೇಯಿಸಲು ಬಿಟ್ಟಿದೀಯಾ” ಎಂದು ಅವಾಚ್ಯ ಶಬ್ದಗಳಿಂದ ಬೈದು ಆ ಪೈಕಿ ನಾರಾಯಣಸ್ವಾಮಿರವರು ಕೈಗಳಿಂದ ಮೈ ಮೇಲೆ ಹೊಡೆದು ಅಲ್ಲಿಯೇ ಬಿದ್ದಿದ್ದ ದೊಣ್ಣೆಯಿಂದ ಹೊಡೆದು ನೋವುಂಟು ಮಾಡಿದ್ದು, ನವೀನ್ ರವರು ತನ್ನ ಕೈಯಲ್ಲಿದ್ದ ಮಚ್ಚಿನಿಂದ ತನ್ನ ಮಗನ ತಲೆಗೆ ಹೊಡೆದು ನೋವುಂಟು ಮಾಡಿರುತ್ತಾನೆ. ಅಷ್ಟರಲ್ಲಿ ತನ್ನ ಎರಡನೇ ಮಗನಾದ ಸೀನಾ ರವರು ಅದೇ ದಾರಿಯಲ್ಲಿ ಹೋಗಿದ್ದು ಮೇಲ್ಕಂಡ ಆರೋಪಿಗಳು “ನೀನು ಇವತ್ತು ಉಳಿದುಕೊಂಡಿದ್ದೀಯಾ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ” ಎಂದು ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಸದರಿ ವಿಚಾರವನ್ನು ತನ್ನ ಎರಡನೇ ಮಗ ಸೀನಾ ರವರು ತನಗೆ ತಿಳಿಸಿದ್ದು ಕೂಡಲೇ ತಾನು ಅಲ್ಲಿಗೆ ಹೋಗಿ ಗಾಯಾಳು ತನ್ನ ಮಗ ರವಿ ರವರನ್ನು ಉಪಚರಿಸಿ ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ನಂತರ ಅಲ್ಲಿಂದ ಬೆಂಗಳೂರಿನ ಎಂ.ವಿ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತೇವೆ. ಆದ್ದರಿಂದ ಮೇಲ್ಕಂಡ ನಾರಾಯಣಸ್ವಾಮಿ ಆತನ ಮಗ ನವೀನ್ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 34/2021 ಕಲಂ. ಮನುಷ್ಯ ಕಾಣೆ :-

     ದಿನಾಂಕ: 23/01/2021 ರಂದು ಮದ್ಯಾಹ್ನ 12.30 ಗಂಟೆಗೆ ಶ್ರೀಮತಿ ಮಂಜಮ್ಮ ಕೋಂ ಲೇಟ್ ಸೋಮಪ್ಪ, 45 ವರ್ಷ, ವಕ್ಕಲಿಗರು, ಗಾರೆ ಕೆಲಸ, ಮಾಡಿಕೆರೆ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ 23 ವರ್ಷ ವಯಸ್ಸಿನ ರಮೇಶ ಎಂಬ ಒಬ್ಬನೇ ಮಗನಿದ್ದು, ಇವರು ಬೆಂಗಳೂರಿನ ಖಾಸಗೀ ಕಂಪನಿಯೊಂದಕ್ಕೆ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಇವರಿಗೆ ಇನ್ನೂ ಮದುವೆಯಾಗಿರುವುದಿಲ್ಲ. ಹೀಗಿರುವಾಗ ದಿನಾಂಕ: 01/01/2021 ರಂದು ಮದ್ಯಾಹ್ನ ಸುಮಾರು 1.00 ಗಂಟೆಯ ಸಮಯದಲ್ಲಿ ತನ್ನ ಮಗ ರಮೇಶ ತನಗೆ ಸ್ವಲ್ಪ ಕೆಲಸವಿರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದವರು ರಾತ್ರಿಯಾದರೂ ಸಹ ಮತ್ತೆ ಮನೆಗೆ ವಾಪಸ್ಸು ಬಂದಿರುವುದಿಲ್ಲ. ನಂತರ ತಾನು ಕಾಣೆಯಾಗಿರುವ ತನ್ನ ಮಗನ ಪತ್ತೆಯ ಬಗ್ಗೆ ತಮ್ಮ ಸಂಬಂಧಿಕರು, ನೆಂಟರಿಷ್ಟರು ಮತ್ತು ತನ್ನ ಮಗನ ಸ್ನೇಹಿತರ ಕಡೆಗಳಲ್ಲಿ ಹುಡುಕಾಡಿ ವಿಚಾರ ಮಾಡಲಾಗಿ ತನ್ನ ಮಗ ಇದುವರೆಗೂ ಎಲ್ಲಿಯೂ ಸಹ ಪತ್ತೆಯಾಗಿರುವುದಿಲ್ಲ. ತನ್ನ ಮಗನ ಮೊಬೈಲ್ ನಂಬರ್ 8088520423 ಆಗಿದ್ದು, ಈ ಮೊಬೈಲನ್ನು ಮನೆಯಲ್ಲಿಯೇ ಬಿಟ್ಟು ಹೋಗಿರುತ್ತಾನೆ. ತಾವು ಇದುವರೆಗೂ ಕಾಣೆಯಾಗಿರುವ ತಮ್ಮ ಮಗನನ್ನು ಹುಡುಕಾಡಿಕೊಂಡಿದ್ದರಿಂದ ಪೊಲೀಸ್ ಠಾಣೆಗೆ ಕಂಪ್ಲೆಂಟ್ ನೀಡಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ತನ್ನ ಮಗ ರಮೇಶ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 35/2021 ಕಲಂ. 341,323,324,34 ಐ.ಪಿ.ಸಿ:-

     ದಿನಾಂಕ: 23/01/2021 ರಂದು ಮದ್ಯಾಹ್ನ 13.00 ಗಂಟೆಗೆ ಮಧುಕುಮಾರ್ ಬಿನ್ ರತ್ನಪ್ಪ, 31 ವರ್ಷ, ಗೊಲ್ಲರು, ಜಿರಾಯ್ತಿ, ನಾಯಿಂದ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಕಳೆದ ವರ್ಷ 2020 ನೇ ಸಾಲಿನ ಜೂನ್ ಮಾಹೆಯಲ್ಲಿ ತನಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಗರದಲ್ಲಿ ವಾಸವಾಗಿರುವ ಸಾಕು ತಂದೆಯಾದ ನಾಗೇಶ್ ರವರ ಮಗಳಾದ ಆಶಾ ರವರೊಂದಿಗೆ ಸಾಂಪ್ರದಾಯಿಕವಾಗಿ ಮದುವೆಯಾಗಿರುತ್ತದೆ. ತಮಗೆ ಸಂಸಾರದಲ್ಲಿ  ಸಣ್ಣಪುಟ್ಟ ಗಲಾಟೆಗಳಾದ ಕಾರಣ  2020 ನೆ ಸಾಲಿನ ಅಕ್ಟೋಬರ್ 27 ರಂದು ತನ್ನ ಹೆಂಡತಿ ಆಶಾ ತಮ್ಮ ಮನೆಯನ್ನು ಬಿಟ್ಟು ತವರು ಮನೆಯಾದ ಹುಲುಗುಮ್ಮನಹಳ್ಳಿಗೆ ಹೋದವಳು ವಾಪಸ್ಸು ಬಂದಿರುವುದಿಲ್ಲ. ಈಗಿರುವಲ್ಲಿ ದಿನಾಂಕ: 17/01/2021 ರಂದು ಚಿಂತಾಮಣಿ ತಾಲ್ಲೂಕು ಹುಲುಗುಮ್ಮನಹಳ್ಳಿ ಯಲ್ಲಿರುವ ತನ್ನ ಹೆಂಡತಿಯ ಸ್ವಂತ ತಂದೆಯಾದ ಮುನಿವೆಂಕಟಪ್ಪ ರವರ ಮನೆಯಲ್ಲಿ ಪಂಚಾಯ್ತಿಗೆಂದು ತಾನು ಮತ್ತು ತಮ್ಮ ಮನೆಯವರು ಹಾಗೂ ಹಿರಿಯರಾದ ನಾಗರಾಜಪ್ಪ ಬಿನ್ ಲೇಟ್ ನಾರಾಯಣಪ್ಪ ಮತ್ತಿತರರು ಹೋಗಿದ್ದೆವು. ಆ ದಿನ ರಾತ್ರಿಯವರೆಗೆ ನ್ಯಾಯ ಮಾಡಿದರೂ ತಮ್ಮ ಮಾವ ಮುನಿವೆಂಕಟಪ್ಪರವರು ಮಗಳನ್ನು ತಮ್ಮ ಮನೆಗೆ ಕಳುಹಿಸಿಕೊಡಲು ಒಪ್ಪಲಿಲ್ಲ.  ನಂತರ ತಮ್ಮ ಕಡೆಯವರೆಲ್ಲರೂ ಊರಿಗೆ ವಾಪಸ್ಸು ಆದರು. ಆದರೆ ತಾನು ಅದೇ ಗ್ರಾಮದಲ್ಲಿ ಪರಿಚಯವಿರುವ ಬಾಬು ರವರ ಮನೆಯಲ್ಲಿ ಟೀ ಕುಡಿಯಲೆಂದು ಹೋಗಿ ತಡವಾಗಿ ಅಲ್ಲಿಂದ ತನ್ನ ಬಾಬತ್ತು ದ್ವಿ ಚಕ್ರ ವಾಹನ ಸಂಖ್ಯೆ ಕೆಎ-40 ವೈ-3671 ರಲ್ಲಿ  ಕೈವಾರ ಮಾರ್ಗವಾಗಿ ಬನಹಳ್ಳಿಯಿಂದ ಮುಂದೆ  ರಾತ್ರಿ ಸುಮಾರು 8.45 ಗಂಟೆಗೆ ತಮ್ಮ ಗ್ರಾಮಕ್ಕೆ ವಾಪಸ್ಸು ಬರುತ್ತಿದ್ದಾಗ ತಮ್ಮ ಮಾವನಾದ ಅಂದರೆ ಮುನಿವೆಂಕಟಪ್ಪ ಮತ್ತು ಅವರ ಮಗ ಅಭಿಲಾಷ (ನನ್ನ ಭಾವಮೈದ), ದೇವನಹಳ್ಳಿಯ ವಾಸಿ ಭಾಗ್ಯಮ್ಮ (ನನ್ನ ಹೆಂಡತಿಯ ಸಾಕು ತಾಯಿ) ಮತ್ತು  ಅವರ ಸಂಬಂಧಿ ಕೃಷ್ಣವೇಣಿ ರವರು ದ್ವಿ ಚಕ್ರ ವಾಹನಗಳಲ್ಲಿ ಬಂದು ತನ್ನನ್ನು ಮುಂದಕ್ಕೆ ಹೋಗದಂತೆ ಗಾಡಿಯನ್ನು ಅಡ್ಡಗಟ್ಟಿ ತಡೆದರು. ಆಗ ತಾನು ವಾಹನದ ಸಮೇತ ಕೆಳಕ್ಕೆ ರಸ್ತೆಯ ಬಲಬದಿಯಲ್ಲಿ ಬಿದ್ದಾಗ ತನ್ನ ಬಲಕಾಲಿನ ಮೊಣಕಾಲಿನ ಕೆಳಭಾಗದಲ್ಲಿ ರಕ್ತಗಾಯವಾಯಿತು. ಮುನಿವೆಂಕಟಪ್ಪ ರವರು ಕೋಲಿನಿಂದ ತನ್ನ ತಲೆಗೆ ಹೊಡೆಯಲು ಬಂದಾಗ ತನ್ನ ಎಡಕೈ ಅಡ್ಡ ಇಟ್ಟಾಗ ಹೆಬ್ಬೆರಳು ಮತ್ತು ತೋರುಬೆರಳಿಗೆ ತಗುಲಿ ರಕ್ತಗಾಯವಾಗಿರುತ್ತೆ. ಉಳಿದ 3 ಜನರು ಕೈಗಳಿಂದ ತನ್ನ ಮೈಮೇಲೆ ಹೊಡೆದು ಮೂಗೇಟು ಮಾಡಿದರು. ತಾನು ಕೂಗಿಕೊಂಡಾಗ ಮುಂದೆ ರಸ್ತೆಯಲ್ಲಿ ಕೈವಾರ ಕ್ರಾಸ್ ಕಡೆಗೆ ಹೋಗುತ್ತಿದ್ದ ತಮ್ಮ ಗ್ರಾಮದ ವಾಸಿ ಚಂದ್ರಶೇಖರ್ ಬಿನ್ ರಾಮಪ್ಪ ಅಂಬರೀಷ್ ಬಿನ್ ಮುನಿವೆಂಕಟಪ್ಪರವರು ಅಲ್ಲಿಗೆ ಬಂದಾಗ ಮೇಲ್ಕಂಡವರೆಲ್ಲರೂ ಅಲ್ಲಿಂದ ಹೊರಟು ಹೋಗಿರುತ್ತಾರೆ. ಗಾಯಗೊಂಡಿದ್ದ ತನ್ನನ್ನು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದು ದಾಖಲಿಸಿದರು. ಇದೂವರೆವಿಗೂ ಹಿರಿಯರು ನ್ಯಾಯಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದರಿಂದ ತಡವಾಗಿ ಈ ದಿನ ಬಂದು ದೂರು ನೀಡುತ್ತಿರುತ್ತೇನೆ. ಆದ್ದರಿಂದ ತನಗೆ ಹೊಡೆದಿರುವ ಮೇಲ್ಕಂಡ 4 ಜನರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 36/2021 ಕಲಂ. 506,341,34,504,323,324 ಐ.ಪಿ.ಸಿ:-

     ದಿನಾಂಕ:23/01/2021 ರಂದು ಮದ್ಯಾಹ್ನ 14.00 ಗಂಟೆಗೆ ಮಂಜುಳ.ಸಿ.ಬಿ ಕೋಂ ಸುಬಾಷ್ ಎಂ, 40 ವರ್ಷ, ಗೃಹಣಿ, ವಕ್ಕಲಿಗರು, ನಂ: 1/1723. ಅಂಜನಿ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಈಗ್ಗೆ 17 ವರ್ಷದ ಹಿಂದೆ ಸುಬಾಷ್.ಎಂ ಬಿನ್ ಮುನಿಸ್ವಾಮಿ ರವರ ಜೊತೆ ಮದುವೆಯಾಗಿರುತ್ತೆ. ತಮಗೆ ಇಬ್ಬರು ಗಂಡು ಮಕ್ಕಳು ಇರುತ್ತಾರೆ. ತಮ್ಮ ಮಾವನಾದ ಮುನಿಸ್ವಾಮಿ ರವರಿಗೆ ಇಬ್ಬರು ಮಕ್ಕಳಿದ್ದು, ಮೊದಲನೆ ತನ್ನ ಗಂಡ ಸುಬಾಷ್ ರವರಾಗಿದ್ದು, ಎರಡನೇ ಸೌಮ್ಯ ರವರಾಗಿರುತ್ತಾರೆ. ತಮ್ಮ ಮಾವನಾದ ಮುನಿಸ್ವಾಮಿ ರವರು ತಮಗೆ ಇರುವ ಆಸ್ತಿಯನ್ನು ಇಬ್ಬರು ಮಕ್ಕಳಿಗೆ ಸಮವಾಗಿ ಹಂಚದೇ ಎಲ್ಲಾ ಆಸ್ತಿಯನ್ನು ಅವರ ಮಗಳಾದ ಸೌಮ್ಯ ರವರಿಗೆ ದಾನವಾಗಿ ಕೊಟ್ಟಿರುತ್ತಾರೆ. ಈ ಹಿನ್ನಲೆಯಲ್ಲಿ ತಾನು ಮತ್ತು ತನ್ನ ಗಂಡ ತಮ್ಮ ಮಾವ ರವರನ್ನು ಕುರಿತು ನೀವು ಎಲ್ಲಾ ಆಸ್ತಿಯನ್ನು ಮಗಳಿಗೆ ಕೊಟ್ಟರೆ ಹೇಗೆ, ನಮಗೂ ಇಬ್ಬರು ಗಂಡು ಮಕ್ಕಳು ಇದ್ದಾರೆ ನಮಗೂ ಆಸ್ತಿಯಲ್ಲಿ ಭಾಗಕೊಡಿ ಎಂದು ಕೇಳಿದ್ದು ಆಗ ಅವರು ಮುಂದೆ ನಿಮಗೂ ಭಾಗಕೊಡುತ್ತೇನೆ ಎಂದು ಹೇಳಿಕೊಂಡು ಬರುತ್ತಿದ್ದರು. ಹೀಗಿರುವಾಗ ಮುನಿಸ್ವಾಮಿ ರವರು ಎಲ್ಲಾ ಆಸ್ತಿಯನ್ನು ಸೌಮ್ಯ ರವರಿಗೆ ವಿಲ್ ಮಾಡಲು ಮುಂದಾಗಿದ್ದು ತಾವು ಈ ಬಗ್ಗೆ ಚಿಂತಾಮಣಿ ಸಿವಿಲ್ ನ್ಯಾಯಾಲಯದಲ್ಲಿ ಓಎಸ್ ನಂ 14/2021 ರಂತೆ ದಾವೆ ದಾಖಲಿಸಿರುತ್ತೇವೆ. ನಂತರ ಸದರಿ ದಾವೆಗೆ ಸಂಬಂದಿಸಿದ ಸರ್ವೇ ನಂ 178 ರಲ್ಲಿ ಜಮೀನು ಇದೇ ಚಿಂತಾಮಣಿ ತಾಲ್ಲೂಕು ಆಲಂಬಗಿರಿ ಗ್ರಾಮದಲ್ಲಿ ಇದ್ದು, ಸದರಿ ಜಮೀನಿನ ಗೇಟ್ ಮೇಲೆ ಸದರಿ ಜಮೀನು ನ್ಯಾಯಾಲಯದಲ್ಲಿದೆ ಎಂದು ತಾವು ಬೋರ್ಡ್ ಹಾಕಿರುತ್ತೇವೆ. ಯಾರೋ ಆಸಾಮಿಗಳು ಸದರಿ ಬೋರ್ಡ್ ಅನ್ನು ಆಳಿಸಿಹಾಕಿದ್ದು, ಸದರಿ ವಿಚಾರ ತಮಗೆ ತಿಳಿದು ತಾವು ದಿನಾಂಕ: 21/01/2021 ರಂದು ಸಂಜೆ 3.30 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಗಂಡ ಸುಬಾಷ್ ರವರು ಮೇಲ್ಕಂಡ ಆಲಂಬಗಿರಿ ಗ್ರಾಮದ ತಮ್ಮ ಜಮೀನಿನ ಬಳಿ ಹೋದಾಗ ತಮ್ಮ ಮಾವ ಮುನಿಸ್ವಾಮಿ ಮತ್ತು ಅವರ ಅಳಿಯ ವಿಶ್ವನಾಥಗೌಡ ರವರು ಬಂದು ತಮ್ಮನ್ನು ಜಮೀನಿನೊಳಗೆ ಹೊಗದಂತೆ ಅಡ್ಡಗಟ್ಟಿ, ತಮ್ಮನ್ನು ಕುರಿತು ನೀವು ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದಿರಾ, ಮತ್ತೆ ಏಕೆ ಇಲ್ಲಿಗೆ ಬಂದಿದ್ದು ಎಂದು ತಮ್ಮ ಮೇಲೆ ಗಲಾಟೆ ಮಾಡಿ, ಅವ್ಯಾಚ್ಚ ಶಬ್ದಗಳಿಂದ ಬೈದಿರುತ್ತಾರೆ. ಮುನಿಸ್ವಾಮಿ ರವರು ಅವರ ಕೈಯಲಿದ್ದ ಯಾವುದೋ ಪಿವಿಸಿ ಡ್ರೀಪ್ ಪೈಪ್ ನಲ್ಲಿ ತನ್ನ ಮೈ ಮೇಲೆ ಹೊಡೆದಿರುತ್ತಾರೆ. ವಿಶ್ವನಾಥ ಗೌಡ ರವರು ಕೈ ಗಳಿಂದ ತನ್ನ ಮೇಲೆ ಹೊಡೆದು, ಅಲ್ಲಿಯೇ ಬಿದ್ದಿದ್ದ ಯಾವುದೋ ದೊಣ್ಣೆಯಿಂದ ತನ್ನ ಬಲ ಕೈ ತೋಳಿಗೆ ಹೊಡೆದು ನೋವುಂಟು ಮಾಡಿದರು. ಅಷ್ಟರಲ್ಲಿ ತನ್ನ ಗಂಡ  ಸುಬಾಷ್ ರವರು ಅಡ್ಡ ಬಂದಿದ್ದು ಆಗ ಅವರಿಗೂ ಸಹ ಮೇಲ್ಕಂಡ ಇಬ್ಬರು ಕೈ ಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದರು. ಅಷ್ಟರಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಚಿಂತಾಮಣಿ ನಗರದ ನಿವಾಸಿಗಳಾದ ಮಂಜುನಾಥ ಬಿನ್ ವೆಂಕಟರಾಮಯ್ಯ ಮತ್ತು ರವೀಂದ್ರನಾಥರೆಡ್ಡಿ ಬಿನ್ ನಾರಾಯಣಸ್ವಾಮಿ ರವರು ಅಡ್ಡಬಂದು ಜಗಳ ಬಿಡಿಸಿದರು. ಮೇಲ್ಕಂಡವರು ಅಲ್ಲಿಂದ ಹೋಗುವಾಗ ಈ ದಿನ ಉಳಿದುಕೊಂಡಿದ್ದಿರಾ ಇನ್ನೊಂದು ಸಾರಿ ಜಮೀನಿನ ತಂಟೆಗೆ ಬಂದರೆ ನಿಮ್ಮನ್ನು ಪ್ರಾಣ ಸಹ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ತಾನು ಮತ್ತು ತನ್ನ ಗಂಡ ಸುಬಾಷ್ ರವರು ತಮ್ಮ ದ್ವಿ ಚಕ್ರ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಬಂದು ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತೇವೆ. ಸದರಿ ಗಲಾಟೆ ಬಗ್ಗೆ ತಮ್ಮ ಕುಟುಂಬದ ಹಿರಿಯರು ನ್ಯಾಯ ಪಂಚಾಯ್ತಿ ಮಾಡೋಣವೆಂದು ಹೇಳಿದ್ದು ಇದುವರೆಗೂ ನ್ಯಾಯ ಪಂಚಾಯ್ತಿ ಮಾಡದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಮೇಲ್ಕಂಡ ಮುನಿಸ್ವಾಮಿ ಮತ್ತು ಆತನ ಅಳಿಯ ವಿಶ್ವನಾಥಗೌಡ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 07/2021 ಕಲಂ. 143,323,324,504,506,149 ಐ.ಪಿ.ಸಿ:-

     ದಿನಾಂಕ: 22/01/2021 ರಂದು ಸಂಜೆ 7:00 ಗಂಟೆಗೆ ಪಿರ್ಯಾದಿದಾರರಾದ ಲಘುಮಕ್ಕ ಕೋಂ ಲೇಟ್ ನರಸಿಂಹಯ್ಯ ರವರಯ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಈಗ್ಗೆ 6 ವರ್ಷಗಳ ಹಿಂದೆ ತನ್ನ ಗಂಡನಾದ ನರಸಿಂಹಯ್ಯ ರವರು ಮರಣ ಹೊಂದಿರುತ್ತಾರೆ. ಸದರಿ ತನ್ನ ಗಂಡನ ಹೆಸರಿನಲ್ಲಿ  ಇದೇ ಚಿಂತಾಮಣಿ ನಗರದ ಎನ್ ಎನ್ ಟಿ  ದೇವಸ್ಥಾನ ಹಿಂಭಾಗದಲ್ಲಿನ ಸರ್ವೆ ನಂ 18 ರಲ್ಲಿ ಈಗ್ಗೆ ತನ್ನ ಮಕ್ಕಳಾದ ಕೃಷ್ಣಪ್ಪ, ಲಕ್ಷ್ಮೀದೇವಮ್ಮ, ಶಾಂತಮ್ಮ , ವರಲಕ್ಷ್ಮೀ ಮತ್ತು ವೆಂಕಟರಮಣ ರವರು ಸೇರಿ ಮನೆಯನ್ನು ನಿರ್ಮಾಣ ಮಾಡಿರುತ್ತಾರೆ. ಸದರಿ ಮನೆಯಲ್ಲಿ ತಾನು ಒಬ್ಬಳೇ ಸಂಸಾರ ಮಾಡಿಕೊಂಡು ವಾಸವಿರುತ್ತೇನೆ, ತಮಗೆ  5 ಜನ ಮಕ್ಕಳಿದ್ದು  ಎಲ್ಲರಿಗೂ ಮದುವೆಗಳಾಗಿ  ಬೇರೆ ಬೇರೆಯಾಗಿ ವಾಸವಿರುತ್ತಾರೆ.  ಹೀಗಿರುವಾಗ ದಿ: 17/01/2021 ರಂದು ಮದ್ಯಾಹ್ನ ಸುಮಾರು 12:30 ಗಂಟೆಯಲ್ಲಿ ತಾನು ಮನೆಯಲ್ಲಿರುವಾಗ ತನ್ನ ಮೊಮ್ಮಕ್ಕಳಾದ ರಘುನಂದನ್, ತುಳಸಿ, ಹೇಮಾ ಮತ್ತು ಸೊಸೆಯಾದ ವೆಂಕಟರತ್ನಮ್ಮ  ಮತ್ತು ಮಗನಾದ ಕೃಷ್ಣಪ್ಪ ರವರು ಒಂದೇ ಉದ್ದೇಶದಿಂದ ಮನೆಯ ಬಳಿ ಬಂದು ಮನೆಯಲ್ಲಿದ್ದ ತನ್ನನ್ನು ಕರೆದು ಏ ಬೇವರಿಸಿ ಮುಂಡೆ ಈ ಮನೆಯಲ್ಲಿ ಸೇರಿಕೊಂಡು ಏನೂ ಮಾಡುತ್ತೀಯಾ  ಹೊರಗೆ ಬಾ ಎಂದು ಕರೆದು ಆ ಪೈಕಿ ತನ್ನ ಮೊಮ್ಮಗನಾದ ರಘುನಂದನ್ ರವರು  ಕೈಗಳಿಂದ ಗುದ್ದಿ ಕತ್ತುನ್ನು ಹಿಸುಕಿ ಕಾಲುಗಳ ಬಳಿ ದೊಣ್ಣೆಯಿಂದ ಹೊಡೆದು ಸಾಯಿಸುತ್ತೇನೆಂತ  ಬೆದರಿಕೆ ಹಾಕಿದಾಗ  ಅದೇ ವೇಳೆಗೆ ನನ್ನ ನೋಡಲು ಅಲ್ಲಿಗೆ  ಬಂದ ತನ್ನ ಮಕ್ಕಳಾದ ವೆಂಕಟರಮಣ, ಲಕ್ಷ್ಮೀದೇವಿ, ಶಾಂತಮ್ಮ, ವರಲಕ್ಷ್ಮೀ  ರವರುಗಳು ಅಡ್ಡ ಬಂದು ತನ್ನನ್ನು ತನ್ನ ಮೊಮ್ಮಗನಿಂದ ಬಿಡಿಸುತ್ತಿದ್ದಾಗ ಅವರ ಮೇಲೆ ಸಹ ಜಗಳ  ಮಾಡಿ ಕೆಟ್ಟ ಮಾತುಗಳಿಂದ ಬೈದು ತನ್ನ ಮಕ್ಕಳಿಗೆ ಸಹ ಹೊಡೆದು ತರಚಿದ ಗಾಯಗಳನ್ನುಂಟು ಮಾಡಿ ಅವರನ್ನು ಸಹ ನಮ್ಮ ತಂಟೆಗೆ ಇನ್ನೂ ಮುಂದೆ ಬಂದರೆ ಸಾಯಿಸುವುದಾಗಿ ಬೆದರಿಕೆ ಹಾಕಿರುತ್ತಾನೆ. ನಂತರ ನಾವುಗಳು ಯಾವುದೋ ಒಂದು ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದು ಚಿಕಿತ್ಸೆ ಪಡೆಯುತ್ತಿರುತ್ತೇವೆ. ಆದರೆ ಸದರಿ ಗಲಾಟೆಯ ವಿಷಯದಲ್ಲಿ ತಮ್ಮ ಹಿರಿಯರು ಸೇರಿ ಪಂಚಾಯ್ತಿ ಮಾಡುವುದಾಗಿ ಹೇಳಿದ್ದರ ಮೇರೆಗೆ ಆದರೆ ಈವರೆಗೂ ಯಾವುದೇ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಬಂದು ದೂರುನ್ನು ನೀಡುತ್ತಿದ್ದು, ಸದರಿ ಮೇಲ್ಕಂಡರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು  ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 19/2021 ಕಲಂ. 78(I),78(3) ಕೆ.ಪಿ ಆಕ್ಟ್:-

     ದಿನಾಂಕ 07/12/2020 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ಗೌರೀಬಿದನೂರು ತಾಲ್ಲೂಕು, ಗೆದರೆ ಗ್ರಾಮದ ಬಸ್ ನಿಲ್ದಾಣದ ಬಳಿ ಯಾರೋ ಇಬ್ಬರು ವ್ಯಕ್ತಿಗಳು ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿಸಿ 512 ರಾಜಶೇಖರ್ , ಪಿಸಿ 80 ಶ್ರೀನಾಥ್ ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.538 ರಲ್ಲಿ ಗೆದರೆ ಗ್ರಾಮಕ್ಕೆ ಬೆಳಿಗ್ಗೆ 10-00 ಗಂಟೆಗೆ ಹೋಗಿ,ಅಲ್ಲಿಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,ಮರೆಯಲ್ಲಿ ನಿಂತು ನೋಡಲಾಗಿ,ಯಾರೋ ಇಬ್ಬರು ವ್ಯಕ್ತಿ ಗೆದರೆ ಗ್ರಾಮದ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಪ್ಪತ್ತುರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು ನಾನು ಮತ್ತು ಪೊಲೀಸ್ ಸಿಬ್ಬಂದಿಯವರು ಸದರಿ ಆಸಾಮಿಗಳನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ,ಅವರು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಗಳನ್ನು ಸುತ್ತುವರೆದು ಹಿಡಿದುಕೊಂಡು,ಅವರ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು A1 ನ್ಯಾಮತ್ ಸಾಬ್ ಬಿನ್ ಶೇಕ್ ಅಬ್ದುಲ್ ,30 ವರ್ಷ, ಜಿರಾಯ್ತಿ, ಮುಸ್ಲಿಂ ಜನಾಂಗ, ಗೆದರೆ ಗ್ರಾಮ, ಗೌರಿಬಿದನೂರು ತಾಲ್ಲೂಕು A2 ಅಶ್ವತ್ಥ್ ಬಿನ್ ನಾರಾಯಣಪ್ಪ, 36 ವರ್ಷ, ನಾಯಕ ಜನಾಂಗ, ಜಿರಾಯ್ತಿ, ವಾಸ ತೋಕಲಹಳ್ಳಿ ಗ್ರಾಮ, ಎಂದು ತಿಳಿಸಿದ್ದು, ಅವರ ಬಳಿ ಪರಿಶೀಲಿಸಲಾಗಿ ನಗದು ಹಣ 620/-ರೂಗಳು,ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಇವರನ್ನು ವಿಚಾರ ಮಾಡಿದಾಗ, ತಾವುಗಳು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾರೆ. ನಂತರ ಸದರಿ ಆರೋಪಿಗಳು ಹಾಗೂ ಅವರ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಮತ್ತು 620/- ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಬೆಳಿಗ್ಗೆ10-00 ಗಂಟೆಯಿಂದ 10-30 ಗಂಟೆ ಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ ಬೆಳಿಗ್ಗೆ 11-00 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ.ದಿನಾಂಕ 23/01/2020 ರಂದು ನ್ಯಾಯಾಲಯದ ಆದೇಶದ ವರದಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 13/2021 ಕಲಂ. 279,337,338 ಐ.ಪಿ.ಸಿ:-

     ದಿನಾಂಕ: 22/01/2021 ರಂದು ಸಂಜೆ 18-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ದೇವರಾಜು ಬಿನ್ ಅಶ್ವತ್ಥಪ್ಪ, 32 ವರ್ಷ, ಬಲಜಿಗರು, ಜಿರಾಯ್ತಿ ಕೆಲಸ, ವಾಸ ಮರಿಮಾಕಲಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ: 04/01/2021 ರಂದು ಬೆಳಿಗ್ಗೆ 12-15 ಗಂಟೆಯಲ್ಲಿ ನಮ್ಮ ತಂದೆ ಅಶ್ವತ್ಥಪ್ಪ ಬಿನ್ ಸುಬ್ಬರಾಯಪ್ಪ, 65 ವರ್ಷ, ಜಿರಾಯ್ತಿ ಕೆಲಸ ರವರು ಹಾಗೂ ನಮ್ಮ ಗ್ರಾಮದ ನಾರಾಯಣಪ್ಪ ಬಿನ್ ಲೇಟ್ ರಂಗಪ್ಪ, 75 ವರ್ಷ, ಆದಿಕರ್ನಾಟಕ ಜನಾಂಗ ರವರು ನಮ್ಮ ಗ್ರಾಮದ ವೆಂಕಟೇಶಪ್ಪ ರವರ ಮನೆಯ ಬಳಿ ರಸ್ತೆಯ ಪಕ್ಕದಲ್ಲಿ ನಾರಾಯಣಪ್ಪ ರವರು ಎತ್ತನ್ನು ಹಿಡಿದುಕೊಂಡು ಅವರ ಜೋತೆ ನಮ್ಮ ತಂದೆ ಅಶ್ವತ್ಥಪ್ಪ ರವರು ಮಾತನಾಡಿಕೊಂಡು ನಿಂತಿದ್ದಾಗ ಕಾಮರೆಡ್ಡಿಹಳ್ಳಿ ಕಡೆಯಿಂದ KA-40-TA-5324 ನೊಂದಣಿ ಸಂಖ್ಯೆಯ ಟ್ರ್ಯಾಕ್ಟರ್ ನ್ನು  ನಮ್ಮ ಗ್ರಾಮದ ಮುನಿಕ್ರಿಷ್ಣ ಬಿನ್ ಲೇಟ್ ಮುನಿಶಾಮಪ್ಪ ರವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ಮಾತನಾಡಿಕೊಂಡು ನಿಂತಿದ್ದ ನಮ್ಮ ತಂದೆ ಅಶ್ವತ್ಥಪ್ಪ ರವರಿಗೆ ಹಾಗೂ ನಾರಾಯಣಪ್ಪ ರವರಿಗೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ್ದರ ಪರಿಣಾಮ ನಮ್ಮ ತಂದೆಗೆ ಬಲಗಾಲು ಸಂಪೂರ್ಣವಾಗಿ ಮುರಿದು ತುಂಡಾಗಿದ್ದು ಎಡಕಾಲು ಮತ್ತು ಬಲಕೈಗೆ ರಕ್ತಗಾಯಗಳಾಗಿದ್ದು ನಾರಾಯಣಪ್ಪ ರವರಿಗೆ ಹಣೆಗೆ ಮತ್ತು ಮೈಮೇಲೆ ಗಾಯಗಳಾಗಿದ್ದು ಅಲ್ಲಿಯೇ ಇದ್ದ ನಮ್ಮ ಗ್ರಾಮದ ಚಿನ್ನೇಗೌಡ ಬಿನ್ ಚಿಕ್ಕ ಮುನಿಶ್ಯಾಮಪ್ಪ ರವರು ನನಗೆ ಪೋನ್ ಮಾಡಿ ನಮ್ಮ ತಂದೆಗೆ ಅಪಘಾತವಾಗಿರುವ ಬಗ್ಗೆ ತಿಳಿಸಿದ್ದು ಕೂಡಲೇ ನಾನು ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ನಾನು ಅಲ್ಲಿದ್ದ ನಮ್ಮ ಗ್ರಾಮದವರು ಗಾಯಗೊಂಡಿದ್ದ ನಮ್ಮ ತಂದೆಯನ್ನು ಹಾಗೂ ನಾರಾಯಣಪ್ಪ ರವರನ್ನು ಉಪಚರಿಸಿ ಚಿಕಿತ್ಸೆಗಾಗಿ 108 ಅಂಬುಲೆನ್ಸ್ ವಾಹನದಲ್ಲಿ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ನಮ್ಮ ತಂದೆಯನ್ನು ಹಾಗೂ ನಾರಾಯಣಪ್ಪ ರವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಅಂಬುಲೆನ್ಸ್ ವಾಹನದಲ್ಲಿ ಕಳುಹಿಸಿಕೊಟ್ಟಿದ್ದು ನಮ್ಮ ತಂದೆ ಹಾಗೂ ನಾರಾಯಣಪ್ಪ ರವರಿಗೆ ಸದರಿ KA-40-TA-5324 ಟ್ರ್ಯಾಕ್ಟರ್ ನ ಕಡೆಯವರಾದ ಗಂಗರಾಜು ಬಿನ್ ಲೇಟ್ ಮುನಿಶ್ಯಾಮಪ್ಪ ರವರು ಚಿಕಿತ್ಸೆಕೊಡಿಸಿದ್ದು ಟ್ರ್ಯಾಕ್ಟರ್ ನ ಕಡೆಯವರು ರಾಜಿ ಮಾಡಿಕೊಳ್ಳುತ್ತೇವೆಂದು ತಿಳಿಸಿದ್ದು ರಾಜಿಗೆ ಬಂದಿರುವುದಿಲ್ಲ ರಾಜಿಯಾಗದ ಕಾರಣ ನಮ್ಮ ತಂದೆಗೆ ಚಿಕಿತ್ಸೆ ಕೊಡಿಸಿ ಈ ದಿನ ದಿನಾಂಕ: 22/01/2021 ರಂದು ತಡವಾಗಿ ದೂರು ನೀಡುತ್ತಿದ್ದು ಈ ಅಪಘಾತಕ್ಕೆ ಕಾರಣನಾದ KA-40-TA-5324 ಟ್ರ್ಯಾಕ್ಟರ್ ನ ಚಾಲಕ ಮುನಿಕ್ರಿಷ್ಣ ಬಿನ್ ಲೇಟ್ ಮುನಿಶ್ಯಾಮಪ್ಪ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ಪ್ರ.ವ.ವರದಿ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 05/2021 ಕಲಂ. 457,380 ಐ.ಪಿ.ಸಿ:-

     ದಿನಾಂಕ:23/01/2021 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿದಾರರಾದ ಸುನೀಮ ಕೋಂ ಜಬೀವುಲ್ಲಾ, ಮೆಹಬೂಬ್ ನಗರ, ಶಿಡ್ಲಘಟ್ಟ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನಮ್ಮದು ಹಳೆ ಮನೆಯಾಗಿದ್ದು, ಅದಕ್ಕೆ ಒಳಗಿನಿಂದ ಮರದ ಚೀಲಕ ಹಾಕುವ ಬಾಗಿಲಾಗಿರುತ್ತೆ. ದಿನಾಂಕ: 16/01/2021 ರಂದು ರಾತ್ರಿ ನಾವು ಮಲಗಿದ್ದಾಗ ಯಾರೋ ನಮ್ಮ ಮನೆ ಬಾಗಿಲು ಚಿಲಕ ಎತ್ತಿ ನಮ್ಮ ಮೊಬೈಲ್ ತೆಗೆದುಕೊಂಡು ಹೋಗಿರುತ್ತಾರೆ, ನಾವು ಯಾರೋ ತೆಗೆದುಕೊಂಡು ಹೋಗಿದ್ದರೆಂದು ದಿನಾಂಕ: 21/01/2021 ರಂದು ನಾವು ಹೊಸ ಐಟೆಲ್ ಮೊಬೈಲ್ 5,700/-ರೂ ಬೆಲೆಯ ಮೊಬೈಲ್ ಫೋನ್ ನ್ನು (ಐಎಂಇಐ ನಂ1 : 351337604260043 ಅದಕ್ಕೆ ನಂ: 9740898790 ಸಿಮ್ ನ್ನು ಸಹ ಯಾರೋ ತೆಗೆದುಕೊಂಡು ಹೋಗಿದ್ದು, ನಾವು ಬೆಳಿಗ್ಗೆ ಎದ್ದು ನೋಡಿದಾಗ ನಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಡಿಯೋ ದ್ವಿ ಚಕ್ರ ವಾಹನದ ಕೀಯನ್ನು ಸಹ ತೆಗೆದುಕೊಂಡು ಹೋಗಿದ್ದು, ನಾವು ಟಿಪ್ಪು ಶಾದಿ  ಮಹಲ್ ಗೆ ಅಳವಡಿಸಿರುವ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ನಮ್ಮ ಮನೆಯ ಬಳಿ ಇರುವ ಶಾಹೀದ್ ಬಿನ್ ನಸರುಲ್ಲಾ ರವರು ನಮ್ಮ ಮನೆಗೆ ರಾತ್ರಿ 12-00 ಗಂಟೆ ಸಮಯದಲ್ಲಿ ಬಂದು ಮನೆ ಬಾಗಿಲು ತೆಗೆದು ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿರುವುದು ಸಿಸಿ ಕ್ಯಾಮಾರದಲ್ಲಿ ರೆಕಾರ್ಡು ಆಗಿರುತ್ತೆ. ಅದ್ದರಿಂದ ಶಾಹೀದ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.